ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹದಿಹರಯ

ರೇಷ್ಮಾ ಕಂದಕೂರ

UFUNK.net | Art, Art drawings, Art painting

ಭಾವನೆಗಳಿಗೆ ಹುಚ್ಚು ಹಿಡಿದಿದೆ
ಮರ್ಕಟನಂತೆ ಹುಚ್ಚು ಕುಣಿದಿದೆ
ಮದವೆತ್ತ ಕರಿ ಘೀಳಿಟ್ಟಿದೆ
ಬಾಲಸುಟ್ಟ ಬೆಕ್ಕಿನ ತಿರುಗಾಟ.

ತುಮುಲುಗಳ ತಡೆ ಹಿಡಿಯಲಾರದೆ
ಆಸೆಗಳಿಗೆ ಮಣೆ ಹಾಕುತಿದೆ
ಸಾಧನೆಗೆ ಭಂಗ ಗೊಳಿಸಿ
ಆಂಗಿಕತೆಯ ಮೋಹಿಸಿ.

ಇಲ್ಲ ಸಲ್ಲದ ನೆವದ ಹಿಂದೆ ಓಟ
ಹಗಲುಗನಸಿನ ತಾಕಲಾಟ
ಜೀವನದ ಉತ್ಥಾನಕೆ ಇಲ್ಲದ ಗಮನ
ತಿರುವುಗಳ ರಸ್ತೆಗಳಲಿ ಸಾಗುತಿದೆ.

ಜೀವವೊಂದು ಅಮೃತವು
ಸವಿಯೋಣ ಆಹ್ಲಾದವ
ಮುದವ ನೀಡೋ ಹೂವು
ಸುಗಂಧ ಬೀರೋಣ ಸಂತಸದಿ.

ಬಾಡುವ ಮುನ್ನ ಎಚ್ಚರಿಕೆ
ಜಾರಿಹೋದೀತುಈ ಗಳಿಗೆ
ಮರಳೀ ಬಾರದು ಮತ್ತೆ
ಆಳಿಯುವ ಮುನ್ನ ಸುಂದರವಾಗಲಿ ಬದುಕಿನ ಆವರಣ.

*****************************************

About The Author

1 thought on “ಹದಿಹರಯ”

Leave a Reply

You cannot copy content of this page

Scroll to Top