ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಶಿಶಿರ

ಎಂ.ಆರ್. ಅನಸೂಯ

selective focus photo of frozen round red fruits

ನೆನಪಿಸುತ್ತಿಲ್ಲ
ಶಿಶಿರದ
ಇಬ್ಬನಿ ಹನಿ
ಮುತ್ತಿನ ಮಣಿಯ
ಕಾಡುತ್ತಿದೆಯಲ್ಲ
ಇಬ್ಬನಿಯ
ಹಿಮ ಕೊರೆವ ಚಳಿಯಲ್ಲೇ
ರಾಜಧಾನಿಯ ಬಯಲಲ್ಲೇ
ಕೂತ ರೈತನ ಪಾಡು !
ಜತೆಯಲ್ಲೇ
ಕಲ್ಲು ಮನದ ರಾಜನೂ !

ನೆನಪಿಸುತ್ತವೆ
ಶಿಶಿರದ
ಬೋಳು ಮರಗಳು
ಭರವಸೆ ಕಾಣದ
ಕೃಷಿಕನ ಬವಣೆಯ ಬದುಕು
ಲಾಠಿ ಎತ್ತಿದ ಕೈಗೂ
ರೊಟ್ಟಿಯಿತ್ತ ಅನ್ನದಾತನ ಕೂಗು
ಕೇಳಿಸದು
ಜಾಣ ಕಿವುಡಿನ ದೊರೆಗೆ

************************

About The Author

Leave a Reply

You cannot copy content of this page

Scroll to Top