ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಾಂತಿ ಕಾವ್ಯ ಸುಗ್ಗಿ

ಬಂಜರು ತೊರೆಯಲಿ

ರೇಶ್ಮಾಗುಳೇದಗುಡ್ಡಾಕರ್

Sankranthi SAMBARALU 2018

ಮತ್ತೆ ಮತ್ತೆ ನೋಡಲು
ಏನಿದೆ ಇಲ್ಲಿ ಸಾಕಷ್ಟು ಬಂಜರು
ನೆಲದ ಬರಿದಾಗದೆ
ಜೀವನದ ಭಾಗವೇ ಆಗುತ್ತಿದೆ …???
ಹೊಸ ಹೊಸ ಮುಖವಾಡಗಳು
ಎದುರಾಗಿವೆ ತಮ್ಮ ಸ್ವರೂಪ ಬದಲಿಸಿ
ಸ್ನೇಹ ಬೇಡುತ್ತವೆ ಕಳ್ಳ ಮನಸ್ಸಿನೊಂದಿಗೆ ..!

ಮಾಡಿ ಗುಡ್ಡಹಾಕುವಷ್ಟು ವಾಸ್ತವ ಇದ್ದರು
ಕಾಣದ ಭವಿಷ್ಯದ ಕನಸು ಬೇಡ ಎಂದರು
ಕಾಡುವದು …..
ಇರುವದೆಲ್ಲವ ಬಿಟ್ಟು ….. ನಡೆದಂತೆ
ಆದರೆ ಸಾದ್ಯವಿಲ್ಲ ಅಲ್ಲವೇ ?
ತಟ್ಟನೆ ಎಳೆಯುವದು ಸಾಂಧರ್ಭಿಕ ಬದುಕು
ಸಾಕು ನಿಲ್ಲಿಸು ನಿನ್ನ ತಲ್ಲಣವ ಎಂದು …

ನೀರಿನಲ್ಲಿ‌ ಬಣ್ಣಬಿಡುವ ಬಟ್ಟೆಯಂತೆ
ಬಂಧ ಬದಲಾದಾಗ
ಹುಡುಕಾಟ ಏತಕ್ಕೆ ? ಬಣ್ಣಕ್ಕೊ‌
ಬಂಧಕ್ಕೊ ?
ಮತ್ತದೆ ನೆನಪು , ಆಗಾಗ ಈ
ಬದುಕಿಗೆ ಬೇಕು ಸುಂದರ ಮರೆವು !
ಮಿಥ್ಯ ಅರಿಯಲು
ಮನವ ಗಟ್ಟಿ ಮಾಡಲು ….

ದಿನಗಳು ಉರುಳುವವು ರಭಸವಾಗಿ
ಹರಿದು ನದಿಯಂತೆ
ಮತ್ತೆ ನೋಡ ನೊಡುತ್ತಲೆ ಹೊಸ
ವಸಂತನ ಆಗಮನ ಆತ್ಮೀಯತೆ
ಇದ್ದರೆ ವರ್ಷಗಳು ಕಾಪಿಡುತ್ತವೆ
ಎದೆಯೊಳಗೆ ಬೆಚ್ಚಗೆ …..
ಹೃದಯ ಕಲ್ಲಾಗಿ ಉಳಿದರೆ
ದಿನದರ್ಶಿಕೆ ತೆಪ್ಪಗೆ ಒಂದೊಂದೆ
ಮೂಲೆ ಸೇರುತ್ತದೆ ನಗುತ್ತಾ …..!
ಮಾನವನ ಬರಗಾಲಕ್ಕೆ .

********************************************************

About The Author

1 thought on “”

  1. ಇರುವುದೆಲ್ಲವ ಬಿಟ್ಟು ಇಲ್ಲದಿರುವುದೆಡೆಗಿನ ತುಡಿತವೇ ಮಾನವನ ವಿನಾಶಕ್ಕೆ ಕಾರಣ..
    ಚಂದದ ಕವನ

Leave a Reply

You cannot copy content of this page

Scroll to Top