ಕರೋನಾ ಮತ್ತು ಭಯ ಜ್ಯೋತಿ ಡಿ.ಬೊಮ್ಮಾ ಭಯ ಬೇಡ ಎಚ್ಚರಿಕೆ ಇರಲಿ ಎಂದು ಹೇಳುತ್ತಲೆ ಈಗ ಪ್ರತಿಯೊಬ್ಬರ ಮನದಲ್ಲೂ ಕರೋನಾ ಬಗ್ಗೆ ಭಯ ಮನೆಮಾಡಿದೆ. ಮೇಲೆ ಇದೊಂದು ಸಾಮಾನ್ಯ ಕಾಯಿಲೆ ಎಂದುಕೊಂಡರೂ ಒಳಗೋಳಗೆ ಆತಂಕ ಪಡದವರಿಲ್ಲ.ರೋಗಕ್ಕಿಂತಲೂ ಅದರ ಸುತ್ತಲೂ ಇರುವ ಕ್ಲಿಷ್ಟಕರ ಕಾನೂನುಗಳು ಭಯವನ್ನು ಹೆಚ್ಚಿಸುತ್ತಿವೆ. ಸದ್ಯ ಕರೋನಾ ದಿಂದಾಗುವ ಸಾವಿನ ಪ್ರಮಾಣದಲ್ಲಿ ವಯಸ್ಸಾದವರೆ ಹೆಚ್ಚು. ಅವರಿಗೆ ಮತ್ತೆ ಬೇರೆ ಆರೋಗ್ಯ ಸಮಸ್ಯಗಳು ಇರಬಹುದು.ಬಹಳಷ್ಟು ಸಾವು ಆಸ್ಪತ್ರೆಯಲ್ಲಿ ಅಡ್ಮೀಟ್ ಆದ ಮೇಲೆ ಸಂಭವಿಸುತ್ತಿವೆ. ಅಡ್ಮಿಟ್ ಆದ ಮೇಲೆ ರೋಗಿ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಕರೋನಾ ರೋಗದ ಹೆಸರಿನಿಂದಲೇ ಮನೊಸೈರ್ಯ ಕುಸಿಯುತ್ತಿದೆ. ಹೊರಗೆ ರಾಜಾರೋಷವಾಗಿ ಓಡಾಡುವವರು ಕರೋನಾ ಬಂದ ತಕ್ಷಣ ಭಯಭೀತರಾಗುತ್ತಿದ್ದಾರೆ.Quarantine ಭಯದಿಂದ ಎಷ್ಟೋ ಜನರು ರೋಗ ಲಕ್ಷಣಗಳಿದ್ದರು ಪರಿಕ್ಷೆ ಮಾಡಿಸಿಕೊಳ್ಳದೆ, ರೋಗ ಉಲ್ಫಣಗೊಂಡಮೇಲೆ ಆಸ್ಪತ್ರೆಗೆ ದೌಡಾಯಿಸುತ್ತಾರೆ.ಅಷ್ಟರಲ್ಲಿ ಸೋಂಕು ವ್ಯಾಪಿಸಿ ಮರಣ ಸಂಭವಿಸಬಹುದು. ಭಯಕ್ಕೆ ಮತ್ತೊಂದು ಕಾರಣ ರೋಗದ ಸಂದರ್ಬದಲ್ಲಿ ತಮ್ಮವರಾರು ತಮ್ಮ ಬಳಿ ಇರದೆ ಒಬ್ಬಂಟಿಯಾಗಿ ಆಸ್ಪತ್ರೆಯಲ್ಲಿ ಇರಬೇಕಾದ ಸಂದರ್ಭ ಬಂದಾಗ ರೋಗಿ ತನ್ನ ಆತ್ಮಸೈರ್ಯ ಕಳೆದುಕೊಳ್ಳುತ್ತಾನೆ. ಅನಾಥ ಪ್ರಜ್ಞೆ ಯಿಂದ ಖಿನ್ನತೆಗೊಂಡು ರೋಗ ನೀರೋಧಕ ಶಕ್ತಿ ಕುಂಠಿತಗೊಂಡು ಚಿಕಿತ್ಸೆ ದೇಹಕ್ಕೆ ಪ್ರತಿಕ್ರಿಯಿಸಲಾರದು.ಇನ್ನೊಂದು ಭಯ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ದೂರದಿಂದಲೇ (ತುರ್ತು ಸಂದರ್ಬ ಹೊರತು ಪಡಿಸಿ) ರೋಗಿಗಳೊಂದಿಗೆ ಸ್ಪಂದಿಸುವದರಿಂದ ರೋಗಿ ಕುಗ್ಗುತ್ತಾನೆ.ರೋಗ ಬೃಹದಾಕಾರವಾಗಿ ಕಾಡತೋಡಗುತ್ತದೆ. ಇನ್ನೂ ಕರೋನಾ ರೋಗಿಗಳು ಮನೆಯಲ್ಲಿದ್ದುಕೊಂಡೆ ಆರೈಕೆ ಮಾಡಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿರುವದು ಸಮಧಾನಕರವೆ. ಆದರೆ ಮನೆಯವರು ರೋಗಿಯೊಂದಿಗೆ ಪ್ರೀತಿಯಿಂದ ಕಾಳಜಿಯಿಂದ ನೊಇಡಿಕೊಳ್ಳಬೇಕು.ಅವರಿಂದ ನಮಗೆಲ್ಲಿ ಹರಡುವದೊ ಎಂದು ರೋಗಿಯನ್ನು ಅನಾದರ ಮಾಡಿದರೆ ರೋಗಿ ನಿರಾಶೆಯಿಂದ ಕುಗ್ಗಬಹುದು.ರೋಗಿಯೊಂದಿಗೆ ಕೆಲದಿನ ದೈಹಿಕ ಅಂತರವಿಟ್ಟುಕೊಂಡು ಅವರನ್ನು ಆರೈಕೆ ಮಾಡಬಹುದು. ತಮ್ಮವರ ಪ್ರೀತಿ ಅಂತಃಕರಣ ದಿಂದಲೇ ರೋಗ ಗುಣಮುಖವಾಗಬಹುದು. ಹಾಗಾದರೆ ಈ ಭಯದ ಮೂಲ ಶುರುವಾದದ್ದು ಎಲ್ಲಿಂದ..? ರೋಗ ಬಂದರೆ ಸಾವು ಖಚಿತ ಎಂದು ನಂಬಿದ್ದರಿಂದ ,ಅಥವಾ ತಾವೇ ಅಂತಹ ಸಂದರ್ಬ ನೋಡಿದ್ದರಿಂದ ಇರಬಹುದು.ಇನ್ನೊಂದು ಈ ರೋಗ ತಮ್ಮವರಿಂದ ಪ್ರತ್ಯಕಗೊಳಿಸುತ್ತದೆ ಎಂಬ ದುಗಡ ..ಆಸ್ಪತ್ರೆಯಲ್ಲಿ ವೈದ್ಯರು ದೂರದಿಂದಲೆ ತಮ್ಮ ಕರ್ತವ್ಯ ನಿರ್ವಹಿಸುವ ರೀತಿಯಿಂದ..ರೋಗ ಬಂದಮೇಲೆ ಗುಣಮುಖ ವಾಗುವದೋ ಇಲ್ವೋ ಎಂಬ ಆತಂಕ..ರೋಗ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ಮಾಡಿಸಬೇಕೋ ಬೇಡವೂ ಎಂಬ ಇಬ್ಬಂದಿತನ..ರೋಗ ದೃಢ ಪಟ್ಟರೆ ಅಕ್ಕಪಕ್ಕದ ಮನೆಯವರ ನಿರಾದರ..ಇಂತಹ ಎಲ್ಲಾ ಸಂದರ್ಬಗಳು ಭಯ ಹೆಚ್ಚಾಗಲು ಕಾರಣವಾಗುತ್ತಿವೆ. ಉದ್ಯೋಗಸ್ಥರು ಭಯಮುಕ್ತರಾಗಿ ನಿರಾಂತಕವಾಗಿ ಕಾರ್ಯನಿರ್ವಹಿಸದಂತಾಗಿದೆ.ಹೋರಗೆ ಹೋದರೆ ಎಲ್ಲಿ ಸೋಂಕು ತಗಲುವದೋ ಎಂಬ ದುಗುಡದಲ್ಲೆ ಕಾರ್ಯೋನ್ಮುಖರಾಗಬೇಕಾಗಿರುವದು ಅನಿವಾರ್ಯ. ಮಕ್ಕಳಂತೂ ಶಾಲೆಯೆ ಮರೆತಂತಾಗಿದ್ದರೆ.ಎಲ್ಲಿ ನೋಡಿದ್ದರು ರೋಗ ಮತ್ತು ಭಯದ್ದೆ ವಿಜೃಂಬಣೆ.ಎಲ್ಲವೂ ಅಯೋಮಯ. ಒಂದಂತೂ ಸತ್ಯ ,ರೋಗ ಗೆಲ್ಲಬೇಕಾದರೆ ಆತ್ಮಸೈರ್ಯ ಅತ್ಯಂತ ಮುಖ್ಯ.ಆದರೆ ಈ ಸಂದರ್ಬದಲ್ಲಿ ಬಹುತೇಕ ಜನ ಅದನ್ನೇ ಕಳೆದುಕೊಳ್ಳುತ್ತಿದ್ದಾರೆ.ಕರೋನಾ ಬಂದು ಗುಣಮುಖರಾದವರು ಉತ್ಸಾಹ ಭರಿತರಾಗಿರದೆ ಯಾವದೇ ಖಿನ್ನತೆಯಿಂದ ಬಳಲುವರಂತೆ ಕಾಣುತಿದ್ದಾರೆ.ಎಕೆಂದರೆ ರೋಗದ ಭಯ ಅಷ್ಟೊಂದು ಆವರಿಸಿಕೊಂಡಿದೆ. ಈಗ ಇದರೊಂದಿಗೆ ಬದುಕುವದು ಅನಿವಾರ್ಯ. ಯಾವಾಗಾದರೂ ಒಮ್ಮೆ ಬರುತ್ತದೆ ಎಂದಿಟ್ಟುಕೊಳ್ಳೊಣ.ಭಯ ಪಡದೆ ಹಿಂದೆ ಅನೇಕ ಸಲ ಬಂದು ಹೋದ ನೆಗಡಿ ಕೆಮ್ಮನ್ನೆ ನೆನಸಿಕೊಂಡು ಹಗುರವಾಗಿ ತೆಗೆ್ಉಕೊಳ್ಳಬೇಕು.ಭಯ ಪಟ್ಟಷ್ಟು ರೋಗದ ತೀವ್ರತೆ ಹೆಚ್ಚುತ್ತದೆ.ಈಗ ನಮ್ಮ ಮುಂದಿರುವ ದೊಡ್ಡ ಸವಾಲೆಂದರೆ ಕರೋನಾ ರೋಗಕ್ಕೆ ಭಯಪಡದೆ ಇರುವದು.ಆತ್ಮವಿಶ್ವಾಸ ಗಟ್ಟಿಗೋಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಆಲೋಚನೆಗಳು ಮತ್ತು ಸ್ವಲ್ಪ ಮಟ್ಟಿನ ಯೋಗ ಮತ್ತು ದ್ಯಾನಗಳು ಅತ್ಯವಶ್ಯಕ. ****************************** .
ಸಹಜ ನಡಿಗೆಯ ರುದ್ರ ನರ್ತನದ ಭಾವಗಳಂತೆ ಕುಮಾರ್ ಹೊನ್ನೇನಹಳ್ಳಿ ಪದ್ಯಗಳು . ಕುಮಾರ್ ಹೊನ್ನೇನಹಳ್ಳಿ ವೃತ್ತಿಯಿಂದ ಶಿಕ್ಷಕ ಮತ್ತು ಶಿಕ್ಷಕರ ತರಬೇತುದಾರ ಅಂದರೆ ರಿಸೋರ್ಸ್ ಪರ್ಸನ್. ಅವರ ವೃತ್ತಿಯ ಕಾರಣ ಅಂದರೆ ಸಂಪನ್ಮೂಲ ವ್ಯಕ್ತಿಯಾಗಿರುವ ಕಾರಣ ಜಗತ್ತಿನ ಸಮಸ್ತ ಆಗು ಹೋಗುಗಳ ಅರಿವು ಮತ್ತು ಅಂಥ ಸಂಗತಿಗಳು ಒಟ್ಟೂ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಪ್ರಮಾಣಗಳನ್ನೂ ಆನುಷಂಗಿಕವಾಗಿ ಅವರು ಪ್ರಸ್ತಾಪಿಸದೇ ಅನ್ಯ ಮಾರ್ಗಗಳು ಇರುವುದಿಲ್ಲ. ಹಾಗಾಗಿಯೇ ಏನೋ ಇವರ ಕವಿತೆಗಳಲ್ಲಿ ಐತಿಹಾಸಿಕ ವ್ಯಕ್ತಿಗಳೂ ವರ್ತಮಾನದ ಸಂಗತಿಗಳೂ ಆಗೀಗ ಬೇರೆ ಬೇರೆಯದೇ ರೂಪದಲ್ಲಿ ಭೇಟಿಯಾಗುತ್ತಲೇ ಇರುತ್ತವೆ. ಇವರ ಎಫ್ಬಿ ಖಾತೆಯಲ್ಲಿ Kumara h c holenarsipur ಎಂದಿದೆ. ಎಫ್ಬಿಯ ಅಸಂಖ್ಯಾತ ಪೋಸ್ಟುಗಳ ನಡುವೆ ದಿನಕ್ಕೊಮ್ಮೆಯಾದರೂ ಹಣಕುವ ಲೈಕೋ ಕಮೇಂಟೋ ಅಥವ ತಮ್ಮದೇ ಪಟಗಳನ್ನೇ ತೇಲಿ ಬಿಡುವವರ ನಡುವೆ ಸ್ವಲ್ಪ ಸೀರಿಯಸ್ ಆಗಿಯೇ ಪ್ರತಿಕ್ರಯಿಸುವ ಕುಮಾರ್ ತಮ್ಮ ಕವಿತೆಗಳಿಂದಲೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಕಳೆದ ಆರೇಳು ವರ್ಷಗಳಿಂದ ಕವನ ಕೃಷಿಗೆ ಕೈ ಹಾಕಿರುವ ಕುಮಾರ್ ಸದ್ಯ ಹುಣಸೂರಿನ ವಾಸಿ. “ಬೆಳಕಿನೆಡೆಗೆ” ಸಂಘಟನೆಯ ಮೂಲಕ ಹುಣಸೂರಿನಲ್ಲಿ ಸಾಹಿತ್ಯಾಸಕ್ತರ ಗುಂಪಿನ ಜೊತೆ ಒಡನಾಟ ಇಟ್ಟುಕೊಂಡಿರುವ ಇವರು ಶ್ರೀ ಅರವಿಂದ ಚೊಕ್ಕಾಡಿಯವರ ಮಧ್ಯಮಪಂಥದ ಬೆಂಬಲಿಗ. ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಲೇಖನಗಳನ್ನು ಡಯಟ್ ಮೈಸೂರಿನ ಮೂಲಕ ಪ್ರಕಟಿಸಿರುವ ಇವರುಯಾವುದೇ ಲೇಖನ ಕವನಗಳನ್ನು ಉಳಿದಂತೆ ಯಾವುದೇ ಪತ್ರಿಕೆಗೂ ಕಳುಹಿಸಿಲ್ಲ ಎಂದು ಹೇಳಿದಾಗ ಆಶ್ಚರ್ಯವಾಗದೇ ಇರದು. ಆದರೂ ಕವನ ಸಂಕಲನ “ಪ್ರಳಯವಾಗುತ್ತಿರಲಿ..” ಪ್ರಕಟಿಸಿದ್ದಾರೆ. ಯಾವ ಪತ್ರಿಕೆಗೂ ಬರೆಯದೆ ಬರಿಯ ಫೇಸ್ಬುಕ್ಕಿನ ಮೂಲಕವೇ ಕವಿತೆ ಪ್ರಕಟಿಸುವ ಶ್ರೀಯುತರ ಸಂಕಲನ ನಾನು ನೋಡದೇ ಇದ್ದರೂ ಅವರ ಫೇಸ್ಬುಕ್ ಕವಿತೆಗಳ ಮೂಲಕವೇ ಅವರೊಳಗಿನ ಕವಿಯ ಭಾವವನ್ನು ಆ ಕವಿಯು ಸಮಾಜದ ನಡವಳಿಕೆಗಳ ಮೇಲೆ ಇರಿಸಿ ಕೊಂಡಿರುವ ನೈತಿಕ ಸಿಟ್ಟನ್ನೂ ಅರಿಯಬಹುದು. ಶ್ರೀ ಕುಮಾರ್ ಅರವಿಂದ ಚೊಕ್ಕಾಡಿಯವರ ಮಧ್ಯಮ ಪಂಥದ ಸಹವರ್ತಿಯೂ ಆಗಿರುವ ಕಾರಣ ಅವರ ನಿಲುವು ಎಡವೂ ಅಲ್ಲದ ಬಲಕ್ಕೂ ವಾಲದ ಆದರೆ ಸಾಮಾಜಿಕ ಸನ್ನಿವೇಶಗಳಿಗೆ ಆಯಾ ಸಂದರ್ಭಗಳ ಅಗತ್ಯತೆಗೆ ತಕ್ಕಂತೆ ಬಾಗುವುದನ್ನೂ ಬಳುಕುವುದನ್ನೂ ಹಾಗೆಯೇ ಬಗ್ಗದೇ ಸೆಟೆಯುವದನ್ನೂ ಈ ಕವಿತೆಗಳ ಅಧ್ಯಯನದಿಂದಲೇ ಅರಿಯಬಹುದು. ನಿಜದ ಕವಿಯು ನಿಜಕ್ಕೂ ಇಟ್ಟುಕೊಳ್ಳಲೇ ಬೇಕಾದ ನೈತಿಕತೆ ಇದುವೇ ಆಗಿದೆ. ಏಕೆಂದರೆ ಕವಿಯೂ ಮೂಲತಃ ಒಬ್ಬ ಮನುಷ್ಯ. ಅವನಿಗೂ ಎಲ್ಲರ ಹಾಗೆ ಬದುಕಿನ ಸವಾಲುಗಳು, ಸಾಲ ಸೋಲಗಳು, ಸೋಲು ಗೆಲವುಗಳು, ನೈತಿಕತೆಯನ್ನು ಪ್ರಶ್ನಿಸುತ್ತಲೇ ಅನೈತಿಕತೆಗೆ ಎಳೆಸುವ ಪ್ರಲೋಭನೆಗಳು ಈ ಎಲ್ಲವನ್ನೂ ಕವಿಯೂ ಅನುಭವಿಸುತ್ತಲೇ ಇರುತ್ತಾನೆ ಮತ್ತು ಆ ಅಂಥ ಸಂದರ್ಭಗಳಲ್ಲಿ ಎಲ್ಲ ಸಾಮಾನ್ಯರೂ ವರ್ತಿಸುವಂತೆಯೇ ವರ್ತಿಸಿರುತ್ತಾನೆ. ಆದರೆ ಕವಿಯಾದವನು ಆ ಅಂಥ ಅನುಭವವನ್ನು ತನ್ನದೇ ರೀತಿಯಲ್ಲಿ ಅಭಿವ್ಯಕ್ತಿಸಲು ಕವಿತೆಗೆ ಮೊರೆ ಹೋಗುತ್ತಾನೆ. ಮತ್ತು ತನ್ನ ಮುಂದಣ ಸವಾಲುಗಳಿಗೆ ಕವಿತೆಯ ಮೂಲಕವೇ ಉತ್ತರ ಕಂಡು ಕೊಳ್ಳುತ್ತಾನೆ. ಇದನ್ನು ಅವರ “ಸರದಿ” ಅನ್ನುವ ಕವಿತೆಯಲ್ಲಿ ನೀವೇನೋ ಬಿಡಿ ಆ ಕಡೆ ಆದರೂ ಸರಿ ಈ ಕಡೆ ಆದರೂ ಸರಿ ನಿಂತು ಬಿಡುವಿರಿ ಏನೂ ಮಾಡಲಾಗದ ಆ ಒಂದು ಗಳಿಗೆ ನೀವೂ ದಾಟಲೇಬೇಕು ಆಳ ಎಷ್ಟಿದ್ದರೂ ಹರವು ಹರವಿದ್ದರೂ ಕತ್ತಲಲಿ ಹೊರಟರೂ ಬೆಳಕಿನಲಿ ಹೊರಟರೂ ಒಪ್ಪಿ ನಡೆದರೂ ಒಪ್ಪದೆ ಇದ್ದರೂ…… (ಸರದಿ) ಈ ದ್ವಂದ್ವಗಳ ನಡುವೆಯೂ ಪಯಣವನು ಮುಂದಕ್ಕೆ ಸಾಗಿಸಬೇಕಲ್ಲ ಅನ್ನುವ ವ್ಯಥೆಯ ನಡುವೆಯೇ ಸರದಿಯಲ್ಲಿರುವ ನಾವು ನಮ್ಮಾಚೆ ಇನ್ನೂ ಯಾರೋ ಕಾಯುತ್ತಲೇ ಇದ್ದಾರೆ ಅನ್ನುವ ಅರಿವು ಇಲ್ಲಿ ಮುಖ್ಯ. ಮತ್ತು ಆ ಅದೇ ಭಾವವೇ ಈ ಕವಿತೆಯು ದ್ವಂದ್ವವನ್ನು ಗೆಲ್ಲುವ ಉಪಾಯ ಕಂಡುಕೊಂಡದ್ದು! ಈ ಕವಿ ವೃತ್ತಿಯಿಂದ ಶಿಕ್ಷಕ. ಹಾಗಾಗಿ ಪ್ರತಿ ವರ್ಷ ಫಲಿತಾಂಶದತ್ತಲೇ ದಿಟ್ಟಿ. ಅವರು ಹೇಳುತ್ತಾರೆ; ಉದುರಿದ ಎಲೆಗಳ ಗುಡಿಸದೆ ಕಳಿಯಲು ಬಿಟ್ಟಿದ್ದರೆ ತನ್ನದೇ ಬುಡದಲಿ? (ಉದುರಿದ ಎಲೆಗಳ ಗುಡಿಸಿ) ವರ್ತಮಾನದ ಶಿಕ್ಷಣ ವ್ಯವಸ್ಥೆಯನ್ನೂ ಅದು ಅಮೂಲಾಗ್ರವಾಗಿ ಬದಲಾಗಬೇಕಾದ ಅನಿವಾರ್ಯವನ್ನೂ ಹೇಳುತ್ತಿದ್ದಾರೆ ಅನ್ನಿಸಿತು. ಉದುರಿದ ಎಲೆಗಳನ್ನು ಗುಡಿಸಿ ಬಿಸಾಕುವ ಅಂದರೆ ಈಗಾಗಲೇ ಘಟಿಸಿದ ಐತಿಹಾಸಿಕ ಸಾಮಾಜಿಕ ಸನ್ನಿವೇಶಗಳನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳದೇ ಕಡ ತಂದ ರಸ ಗೊಬ್ಬರ ಚಲ್ಲಿದರೆ ಅಂದರೆ ಆಧುನಿಕ ವಿದ್ಯಾಭ್ಯಾಸ ಕ್ರಮ(?) ನೆಲವನ್ನು ಬಂಜರು ಮಾಡುತ್ತಿದೆ ಅನ್ನುವ ಅರಿವು ಸ್ವತಃ ಅನುಭವದಿಂದಲೇ ಕಂಡು ಕೊಂಡ ಕಾಣ್ಕೆ. ” ಕಳೆದ ಆ ನನ್ನ ಮೊಗ” ಕವಿತೆಯು ಧೇನಿಸುವುದು ಸಾಮಾನ್ಯ ಸಂಗತಿಯನ್ನೇ ಆದರೂ ಅದು ಪಡೆಯುವ ನಿಲುವು ಸಾರ್ವತ್ರಿಕವಾಗಿ ಸತ್ಯವಾದುದೂ ಸತ್ವವಾಗಿಯೂ ಇರುವಂಥದು. ಮುಖವಾಡಗಳೊಳಗೇ ಏಗಬೇಕಿರುವ ನಮ್ಮೆಲ್ಲರ ಬದುಕನ್ನೂ ಈ ಕವಿ ಅತ್ಯಂತ ಯಶಸ್ವಿಯಾಗಿ ಹೀಗೆ ಅಭಿವ್ಯಕ್ತಿಸುತ್ತಾರೆ; ಅದೆಷ್ಟು ವರುಷಗಳಾದವು ಕನ್ನಡಿಯಲಿ ಅದೆಷ್ಟು ಮುಖಗಳು ಕಂಡವು ಅದು ನನ್ನದು ಅನ್ನುವ ಯಾವುದೋ ಏನೋ ಎಲ್ಲಾ ಅಯೋಮಯ ಮುಂದುವರೆದ ಪದ್ಯ ಕಡೆಯಲ್ಲಿ ಕಂಡುಕೊಳ್ಳುವ ಸತ್ಯ ಹೀಗೆ; ಅಲ್ಲಿಯವರೆಗೆ ಹೀಗೆ ಅನಿವಾರ್ಯ ಕನ್ನಡಿಯೊಳಗೆ ಕಾಣುವ ಸಾವಿರಾರು ಮುಖಗಳಲಿ ಸಿಕ್ಕ ಒಂದನು ಕಿತ್ತು ಭುಜಗಳ ಮೇಲೆ ಸಿಕ್ಕಿಸಿಕೊಂಡು … ಅಂದ ಮಾತ್ರಕ್ಕೆ ಇವರ ಎಲ್ಲ ಕವಿತೆಗಳೂ ಹೀಗೆ ಅನೂಹ್ಯಕ್ಕೆ ಸಲ್ಲುತ್ತವೆ ಎಂದೇನಲ್ಲ. ನಿಜಕ್ಕೂ ಅದ್ಭುತವಾಗಬಹುದಾಗಿದ್ದ “ನಾನು ಮತ್ತು ನನ್ನಂಥವರು” ಕವಿತೆ ಆರಂಭದಲ್ಲಿ ಹುಟ್ಟಿಸಿದ ಭರವಸೆಯನ್ನೂ (ಶೀರ್ಷಿಕೆ ಗಮನಿಸಿ) ಸಾಮಾನ್ಯ ಸಂಗತಿಯನ್ನೂ ಕವಿತೆಯ ವಸ್ತುವನಾಗಿಸುವ ಕ್ರಮವನ್ನೂ ಉದ್ದೀಪಿಸುತ್ತಲೇ ಅಂತ್ಯವಾಗುವ ವೇಳೆಗೆ ತೀರ ಸಾಮಾನ್ಯ ಹೇಳಿಕೆಯಾಗಿಬಿಡುವುದು ನಿರಾಶೆಯ ಸಂಗತಿ. ಇಂಥ ಹಲವು ಪಲಕುಗಳ ನಡುವೆಯೂ ಕವಿ ಅರಳಿ ಮತ್ತೆ ಹೊರಳುವುದು, ಅನೂಹ್ಯಕ್ಕೆ ತಡಕುವುದು ಕಾವ್ಯ ಕೃಷಿಯ ಪರಂಪರೆಯನ್ನು ಅರಿತವರಿಗೆ ತಿಳಿದ ಸಾಮಾನ್ಯ ಅಂಶ. ಏಕೆಂದರೆ ಇಂಥ ಪದ್ಯಗಳ ನಡುವೆ ಅಬ್ಬ ಎನ್ನುವ ಪ್ರತಿಮೆ ರೂಪಕಗಳನ್ನೂ ಈ ಕವಿ ನೀಡಬಲ್ಲರು. ಉದಾಹರಣೆಗೆ “ಪ್ರಶ್ನೆಗಳು” ಕವಿತೆಯ ಈ ಸಾಲು ನೋಡಿ; ಬಲಹೀನ ನಿಜ ಬಲಹೀನ ಸುಳ್ಳು ಎರಡನ್ನೂ ಹೇಳುವುದಿಲ್ಲ ನಿನ್ನೆದುರು ಹೇಳು ಗೆಳೆಯ ‘ನಿಜ’ವೆಂದರೆ ಏನು? ‘ಸುಳ್ಳು’ ಅದರ ವಿರುದ್ಧ ಪದವೆ? ಓಡುವ ಕಾಲದ ಜತೆಜತೆಗೆ ಓಡುವಾಗ ಯಾವುದು ನಿನ್ನ ಮುಂದಿನ ಕಾಲು ಹಿಂದಿನ ಕಾಲು? ಹೀಗೆ ಪ್ರಶ್ನೆಗಳಿಗೆ ಉತ್ತರವನ್ನು ತಡಕದೆಯೇ ಇದ್ದರೆ ಆ ಕವಿ ಬರಿಯ ಹೇಳಿಕೆ ಕೊಟ್ಟಾನು. ಹೇಳಿಕೆ ಮತ್ತು ಘೋಷಣೆಗಳನ್ನು ಬಿಟ್ಟುಕೊಟ್ಟ ಅನುಭವಗಳ ಸಹಜ ಅಭಿವ್ಯಕ್ತಿ ಮಾತ್ರ ಕವಿತೆಯಾಗಿ ಅರಳುತ್ತದೆ ಮತ್ತು ಬಹುಕಾಲ ಓದುಗನ ಮನಸ್ಸಿನಲ್ಲಿ ನಿಲ್ಲುತ್ತದೆ. ಈಗ ಈವರೆಗೂ ಈ ಕವಿ ಪ್ರಕಟಿಸಿರುವ ಕವಿತೆಗಳಲ್ಲೆಲ್ಲ ಬಹುವಾಗಿ ನನ್ನನ್ನು ಕಾಡಿದ ಮತ್ತು ಎಲ್ಲ ಸಹೃದಯರ ಮನಸ್ಸಿನಲ್ಲೂ ಉಳಿಯಬಹುದಾದ ರಚನೆಯೆಂದರೆ ಸದ್ಯದ ರಿಯಲ್ ವರ್ಲ್ದ್ ಮತ್ತು ವರ್ಚುಯಲ್ ವರ್ಲ್ದ್ ಗಳ ನಡುವಣ ಅಘೋಷಿತ ಯುದ್ಧದ ಪರಿಣಾಮ. ಆ ಪದ್ಯದ ಶೀರ್ಷಿಕೆ “ಹುಚ್ಚು ಹುಚ್ಚಾಗಿ”. ಸರಕು ಇರದ ಸಂತೆಯಲಿ ಬರೀ ಮಾತು ಮಾಹಿತಿ….. ಎಂಥ ವಿಪರ್ಯಾಸದ ಮಾತಿದು? ಸರಕೇ ಇಲ್ಲದ ಸಂತೆಯಲಿ ಮಾರಲೇನಿದೆ? ಕೊಳ್ಳಲೇನಿದೆ? ಇಂಥ ಅದ್ಭುತ ರೂಪಕಗಳನ್ನು ನಿಜ ಕವಿಯು ಮಾತ್ರ ಸೃಷ್ಟಿಸಬಲ್ಲ. ಈ ಮೊದಲೇ ಹೇಳಿದಂತೆ ಫೇಸ್ಬುಕ್ ಕವಿಗಳು ತಮ್ಮ ಪಟಗಳ ಲೈಕು ಕಮೆಂಟುಗಳಲ್ಲಿ ಕಳೆದು ಹೋಗುತ್ತಿರುವಾಗ ನಿಜಕ್ಕೂ ಹೌದೆನ್ನಿಸುವ ಈ ರೂಪಕ ಸೃಷ್ಟಿಸಿದ ಕುಮಾರ್ ಕವಿತೆಯನ್ನು ಮೆಚ್ಚದೇ ಇರುವುದು ಅಸಾಧ್ಯ. ಪದ್ಯದ ಕೊನೆ ಹೀಗಿದೆ; ಸುಮ್ಮನಿರಬೇಕು ಎಂದುಕೊಂಡರೂ ಹೆಂಡತಿ ಬಿಡುವುದಿಲ್ಲ ಮಗ ಕೇಳುತ್ತಾನೆ “ಅಪ್ಪಾ, ಕುಪ್ಪಳಿಸಿದರೆ ತಪ್ಪೇನು?” ಕುಪ್ಪಳಿಸುವುದ ನೋಡುತ್ತ ನಾನೂ ಕುಪ್ಪಳಿಸುತ್ತ ಅವಳ ಕರೆಗೆ ಓಗೊಟ್ಟು… ಹಿಮಾಲಯಕ್ಕೆ ಹೋಗುವುದು ಕನಸು ಬಿಡಿ. ವಾಹ್, ವಾಸ್ತವದ ಉರುಳಲ್ಲಿ ನರಳುತ್ತಿರುವ ಮತ್ತು ಮತ್ತೇನೋ ಕನಸುವ ಎಲ್ಲರಲ್ಲೂ ಈ ಭಾವನೆ ಇರದೇ ಉಂಟೇ? ಕುಮಾರ್ ಅವರ “ಪ್ರಳಯವಾಗಲಿ” ಸಂಕಲನ ನಾನು ಓದಿಲ್ಲ. ಪ್ರಾಯಶಃ ಅವರ ಇಂಥ ಪದ್ಯಗಳು ಆ ಸಂಕಲನದಲ್ಲಿ ಇರಲಾರವು. ಹತ್ತು ಹೆರುವುದಕ್ಕಿಂತ ಮುತ್ತ ಹೆರಬೇಕು ಎನ್ನುವುದು ಆಡುಮಾತು. ಅಂತೆಯೇ ಈ ಕವಿ ಹತ್ತು ಜಾಳು ಪದ್ಯ ಹಿಸೆಯುವ ಬದಲು ಒಂದು ರೂಪಕ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಲಿ ಎರಡನೆಯ ಸಂಕಲನ ತರುವ ಮನಸ್ಸು ಮಾಡಲಿ ಎನ್ನುವ ಹಾರೈಕೆಯೊಂದಿಗೆ ಅವರ ಐದು ಕವಿತೆಗಳನ್ನು ನಿಮ್ಮೆಲ್ಲರ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ಕುಮಾರ್ ಹೊನ್ನೇನಹಳ್ಳಿಯವರ ಕವಿತೆಗಳು ೧. ಸರದಿ ನೀವೇನೋ ಬಿಡಿ ಆ ಕಡೆ ಆದರೂ ಸರಿ ಈ ಕಡೆ ಆದರೂ ಸರಿ ನಿಂತು ಬಿಡುವಿರಿ ಏನೂ ಮಾಡಲಾಗದ ಆ ಒಂದು ಗಳಿಗೆ ನೀವೂ ದಾಟಲೇಬೇಕು ಆಳ ಎಷ್ಟಿದ್ದರೂ ಹರವು ಹರವಿದ್ದರೂ ಕತ್ತಲಲಿ ಹೊರಟರೂ ಬೆಳಕಿನಲಿ ಹೊರಟರೂ ಒಪ್ಪಿ ನಡೆದರೂ ಒಪ್ಪದೆ ಇದ್ದರೂ ಇವೆ ಕೆಲವು ನಿಮ್ಮಾತಿನ ವ್ಯಂಗ್ಯದಂತೆ ದಾಟುವ ಹೆಜ್ಜೆಗಳಿಗೆ ತಮ್ಮೆದೆಯನೇ ಹಾಸುವ ಕಡುಮೂರ್ಖ ಶಿಖಾಮಣಿಗಳು ಗೊತ್ತಿದೆ ಮಾತು ಮತ್ತು ಹೆಜ್ಜೆಗಳು ಸಿಗವು ಗಳಿಗೆ ದಾಟಿದ ಯಾವ ನಿಯಮಗಳಿಗೂ ಆದರೂ ನಿಮ್ಮಗಳ ವಜ್ಜೆ ಪಾದಗಳಿಗೆ ತಮ್ಮೆದೆಯನೇ ಹಾಸಿರುವ ಇವರುಗಳು ಹಾಗೆಯೆ, ತಡಮಾಡಬೇಡಿ ಯಾರಾದರೇನು ನೀವು, ದಾಟಿರಿ. ನಡೆದು ಬಂದ ಹಾದಿಯ ನೋಡಿದರೆ ಹಿಂದಿರುಗಿ ದಾಟಿರುವೆವು ನಾವೂ ನಮ್ಮ ಕನಸ ನನಸಿಗೆ ತಮ್ಮ ಕನಸುಗಳ ನಮ್ಮ ಕಾಲಡಿಗೆ ಹಾಸಿದ್ದವರ ಎದೆಗಳ ತುಳಿದು ಮುಗಿಯದ ಹಾದಿಯಲಿ ಮುಗಿಯಬಾರದು ಪಯಣವೂ ಬೇಕಾಗಿವೆ ಇನ್ನೂ ಸೇತುವೆಗಳು ಇದ್ದಾರೆ ಪಯಣಿಗರೂ ಈಗಲಾದರೂ ನುಡಿಯಬೇಕಲ್ಲವೆ ಮುಂಚೂಣಿಯಲಿ ನಿಂತಿರುವ ನಿಮ್ಮೆದೆ, ನಮ್ಮೆದೆ ‘ ಇನ್ನಾದರೋ ಸರದಿ ನಮ್ಮದೆ ‘. ೨. ಉದುರಿದ ಎಲೆಗಳ ಗುಡಿಸಿ ಮಾಗಿ ಕಾಲದಲ್ಲಿ ಮರ ಎಲೆ ಉದುರಿಸುವಂತೆ ಮಾತು, ಈ ಮಕ್ಕಳದ್ದು. ತಾಕೀತು ಮಾಡಿದ್ದೆ ” ಕೈ ಕಟ್ ಬಾಯ್ ಮುಚ್ “ ಮರದ ಬುಡದ ಸುತ್ತ ಉದುರಿದ್ದ ಎಲೆಗಳ ಗುಡಿಸಿ ಎಸೆದು ಪಾತಿ ಮತ್ತೊಮ್ಮೆ ಅಗೆದು ಸುರಿದೆ ರಸಗೊಬ್ಬರ, ಇನ್ನೇನಿದ್ದರೂ ಕೈತುಂಬಾ ಹಣ ಎಣಿಸುವ ಕನಸು. ಕೂಡಿ ಕೂರಿಸಿದ ಕೋಣೆಯೊಳಗೆ ಪಿಳಿಪಿಳಿ ನೋಡುವ ಮಕ್ಕಳು ಎಲ್ಲವ ನಾನೇ ಹೇಳುತ್ತಿರುವೆ ಸುಮ್ಮನೆ ಕೇಳುತ್ತಾ ಕಲಿಯಲು ಏನು ದಾಡಿ? ಯಾರು ಕೊಡುತ್ತಾರೆ ಇಷ್ಟು ಚನ್ನಾಗಿ ರಸಗೊಬ್ಬರ? ಕೇಳಿದಾಗ, ಹೇಳಿಕೊಟ್ಟಂತೆ ಉಲಿದಿದ್ದ ಈ ಗಿಳಿಗಳು ‘ ಹಾರಿ ತೋರಿ ‘ ಎಂದಾಗ ನಿಂತಿವೆ ಹಾಗೆ ಗೊಂದಲದಲಿ. ಸಾಕಲ್ಲವೆ ಕಾಲುಗಳು ಎಂದೇ ಕಟ್ಟಿ ಹಾಕಿದ್ದೆ ರೆಕ್ಕೆಗಳ. ರಸಗೊಬ್ಬರ ಉಂಡುಂಡ ಮಣ್ಣು ಈಗೀಗ ಬಂಜರು ಇಳುವರಿ ಇರಲಿ ಫಲ ಕಚ್ಚಿದರೆ ಸಾಕಾಗಿದೆ. ಉದುರಿದ ಎಲೆಗಳ ಗುಡಿಸದೆ ಕಳಿಯಲು ಬಿಟ್ಟಿದ್ದರೆ ತನ್ನದೇ ಬುಡದಲಿ? ೩. ಹೂವು ಮತ್ತು ಕಲ್ಲು ಹೂವಿಗೂ ಕಲ್ಲಿಗೂ ಮದುವೆ ಕರಗಿಸಿ ಮೃದು ಮಾಡಲು ಒದ್ದಾಡಿತು ಹೂವು ಕಲ್ಲು ಕಲ್ಲೇ ಮಿಸುಕಲಿಲ್ಲ ದಿನ ಕಳೆದ ಹಾಗೆ ಹೊಂದಿಕೊಂಡರೂ ನಲುಗಿ ನಲುಗಿ ಬಾಡಿ ಮಣ್ಣಾಯಿತು ಕಲ್ಲಿಗೇನು, ಗುಂಡಗೆ ನಿಂತಲ್ಲಿ ನಿಂತು ಕುಂತಲ್ಲಿ ಕುಂತು ಚಳಿ ಬಿಸಿಲಿಗೇ ಅಲುಗದವನು ಇನ್ನು ಈ ಹುಲು ಹೂವಿಗೆ ನಿಮಗೂ ಗೊತ್ತಿದೆ ನಮ್ಮಲ್ಲಿ ವಿಧುರನ ಲಗ್ನ ಸುಲಭ ಉಳಿಗೂ ಕಲ್ಲಿಗೂ ಮದುವೆ ಉಳಿಯ ಮುಂದೆ ಕಲ್ಲೇ ಮಿದು! ಉಳಿಯ ಒಂದೊಂದು ಪೆಟ್ಟಿಗೂ ನೋವಾದರೂ ಕಲ್ಲು ಕಲ್ಲೇ. ಈಗೇನೋ ಅದು ವಿಗ್ರಹವಂತೆ ನೀಡಿ ಉಳಿಗೆ ವಿಚ್ಛೇದನ ಪಡೆದು ದೀಕ್ಷೆ ನೆಲೆಸಿದೆಯಂತೆ ಗುಡಿಯೊಳಗೆ ಈ ಜನ ನೋಡಿ ಮತ್ತೆ ಮತ್ತೆ ಗುಡಿಗೆ ಹೂವುಗಳ ಹೊರುವುದು “ಕಲ್ಲಿಗೂ ಹೂವಿಗೂ”… ಕ್ಷಮಿಸಿ “ವಿಗ್ರಹಕೂ ಹೂವಿಗೂ”… ಅಲ್ಲಲ್ಲ “ದೇವರಿಗೂ
ಏಕಾಗ್ರತೆಯ ಬೆನ್ನೇರಿ ಗೆಲುವಿನ ನಗೆ ಬೀರಿ ಅಯ್ಯೋ! ನನ್ನ ಎಲ್ಲ ಕೆಲಸಗಳು ಅರ್ಧಂಬರ್ಧ. ಯಾವುದೂ ಪೂರ್ಣ ಮಾಡೋಕೆ ಆಗುತ್ತಿಲ್ಲ ಏಕಾಗ್ರತೆ ಇಲ್ಲದೇ ನನಗೆ ಅಡಚಣೆ ಆಗ್ತಿದೆ.ಇದನ್ನು ಸಾಧಿಸೋದು ಹೇಗೆ ತಿಳಿಯುತ್ತಿಲ್ಲ? ಎನ್ನುವುದು ಇತ್ತೀಚಿನ ಅನೇಕ ವಿದ್ಯಾರ್ಥಿಗಳ ಮತ್ತು ದಾವಂತದ ಬದುಕಿನಲ್ಲಿ ಕಾಲು ಹಾಕುತ್ತಿರುವ ಬಹುತೇಕ ಜನರ ದೊಡ್ಡ ದೂರು. ಏಕಾಗ್ರತೆಯಿಲ್ಲದೇ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ಎಲ್ಲದರಲ್ಲೂ ವೈಫಲ್ಯತೆಯ ನೋವು ಕಾಡುತ್ತದೆ. ಒತ್ತಡದ ಕೂಪದಲ್ಲಿ ಬಿದ್ದವರೆಲ್ಲ ಸುಲಭವಾಗಿ ಏಕಾಗ್ರತೆಯನ್ನು ಕಳೆದುಕೊಂಡು ನರಳುತ್ತಾರೆ. ಯಾವುದೇ ಒಂದು ನಿರ್ದಿüಷ್ಟ ಕೆಲಸದಲ್ಲಿ ತೀಕ್ಷ÷್ಣ ದೃಷ್ಟಿ ಹರಿಸಿ ಮುಂದುವರೆಯಬೇಕೆAದರೆ ಬೇಡವಾದ ನೂರಾರು ಆಲೋಚನೆಗಳು ಹರಿದಾಡಿ ಮನಸ್ಸನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗಿ ಬಿಡುತ್ತವೆ. ನೆಪೋಲಿಯನ್ ಹೇಳಿದಂತೆ ಏಕಾಗ್ರತೆಯಿಂದ ಯಾವನು ಪ್ರಯತ್ನಿಸುವುದಿಲ್ಲವೋ, ಅವನು ಎಂದೂ ಯಶಸ್ಸು ಗಳಿಸಲಾರನು. ಇದು ಸರ್ವಕಾಲಿಕ ಸತ್ಯ. ಏಕಾಗ್ರತೆ ಸಾಧಿಸುವುದೆಂದರೆ ತನ್ನ ಕೆಲಸದಲ್ಲಿ ತನಗೆ ತಾನೇ ಸಹಾಯ ಮಾಡಿಕೊಳ್ಳುವುದು. ತನಗೆ ತಾನು ಸಹಾಯ ಮಾಡಿಕೊಳ್ಳದೆ ಯವುದೇ ವ್ಯಕ್ತಿ ಪ್ರಾಮಾಣಿಕವಾಗಿ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸಲು ಸಾಧ್ಯವಿಲ್ಲ. ಎಂಬುದು ಈ ಜೀವನದ ಅತ್ಯಂತ ಸುಂದರ ಪರಿಹಾರಗಳಲ್ಲಿ ಒಂದು.ಏಕಾಗ್ರತೆ ಎಂದರೆ.. . . ?ದೈನಂದಿನ ಗಜಿಬಿಜಿ ಕೆಲಸಗಳು ನಮ್ಮ ಗಮನವನ್ನು ಅತಿ ಸುಲಭವಾಗಿ ಸೆಳೆಯುತ್ತಿರುವಾಗ ನಮ್ಮ ಆದ್ಯತೆಗಳತ್ತ ಗಮನ ಹರಿಸುವಂತೆ ಮಾಡುವುದೇ ಏಕಾಗ್ರತೆ. ಯಾವುದಾದರೂ ಒಂದು ಗುರಿಗೆ ಸಂಪೂರ್ಣ ದೃಷ್ಟಿ ನೆಡುವುದೇ ಏಕಾಗ್ರತೆ. .ಏಕಾಗ್ರತೆ ಸಾಧಿಸಲು ಈ ಸೂತ್ರಗಳನ್ನು ಅನುಸರಿಸಿ.ಒಂದು ಸಮಯಕ್ಕೆ ಒಂದೇ ಕೆಲಸಗುರಿಯ ಸಾಧನೆಗೆ ಮಾಡಲೇಬೇಕಾದ ಕೆಲಸಗಳು ಸಾಕಷ್ಟಿವೆ ಅವುಗಳಲ್ಲಿ ಯಾವುದನ್ನು ಮೊದಲು ಮಾಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ಹೀಗಾಗಿ ಆದ್ಯತೆಯ ಪ್ರಕಾರ ಕೆಲಸದ ಪಟ್ಟಿ ಮಾಡಿ ಮಹತ್ವದ ಕೆಲಸ ಅನಿವಾರ್ಯ ಕೆಲಸ ಪಟ್ಟಿಗಳನ್ನು ಮಾಡಿ ಅದರಲ್ಲಿ ನಿರ್ಧಿಷ್ಟ ಕೆಲಸವನ್ನು ಕೈಗೆತ್ತಿಕೊಳ್ಳಿ. ಎತ್ತಿಕೊಂಡಿರುವ ಕೆಲಸದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿ. ಹೀಗೆ ತದೇಕ ಚಿತ್ತದಿಂದ ತಲ್ಲೀನರಾಗಿ ಮಾಡಿದ ಕೆಲಸದ ಫಲಿತಾಂಶ ಅತ್ಯದ್ಭುತವಾಗಿರುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಅತ್ತುತ್ತಮ ಗುಣಮಟ್ಟದ ಕಾರ್ಯ ಬೇರೆಯವರು ನಿಮ್ಮೆಡೆ ಹುಬ್ಬೇರಿಸುವಂತೆ ಮಾಡುವುದರಲ್ಲಿ ಸಂಶಯವಿಲ್ಲ. ಧ್ಯಾನಬೆಂಕಿಯಿAದ ಕಬ್ಬಿಣ ಮೃದುವಾಗುವಂತೆ ಧ್ಯಾನದಿಂದ ಏಕಾಗ್ರತೆ ಹದಕ್ಕೆ ಬರುತ್ತದೆ. ಮನುಷ್ಯನಿಗೆ ಉಸಿರಾಡಲು ಹೇಗೆ ಆಮ್ಲಜನಕವೋ ಹಾಗೆ ಗುರಿಯ ಸಾಧನೆಗೆ ಏಕಾಗ್ರತೆ ಅವಶ್ಯಕ. ಪ್ರತಿದಿನ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನುವುದು ಈಗಾಗಲೇ ಸಂಶೋಧನೆಗಳಿAದ ಸಾಬೀತಾದ ಸಂಗತಿ. ಕ್ಷಣ ಕ್ಷಣಕ್ಕೂ ಹೊಯ್ದಾಡುವ ಮನಸ್ಸನ್ನು ಒಂದೆಡೆ ಹಿಡಿದಿಡಲು ಧ್ಯಾನ ಸಹಕಾರಿ. ದ್ಯಾನ ನಮ್ಮ ಧಾರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಎಂಥ ಚಂಚಲ ಸ್ವಭಾವದವರಾದರೂ ಸರಿ ಜಾಗರೂಕರಾಗಿ ಮೈ ಕೊಡವಿಕೊಂಡು ನಿಲ್ಲುವಂತೆ ಮಾಡಲು ಧ್ಯಾನ ಸಹಾಯಕ ಬದುಕು ಒಂದು ಸುಂದರ ಗೆಲುವುಗಳ ಮುತ್ತಿನ ಹಾರ. ವಿವಿಧ ಬಣ್ಣಗಳ ಮುತ್ತಿನ ಹಾರ ಪಡೆಯಬೇಕೆಂದು ಬಯಸುವುದಾದರೆ ಧ್ಯಾನ ಅವಶ್ಯಕ. ನೆಪ ಬೇಡನಾನೂ ಏಕಾಗ್ರತೆಯಿಂದ ಚೆನ್ನಾಗಿ ಕೆಲಸ ನಿರ್ವಹಿಸಬೇಕು, ಅಧ್ಯಯನ ನಡೆಸಬೇಕು ಅಂತಿದ್ದೇನೆ ಆದರೆ ನನ್ನ ಮನೆಯ ವಾತಾವರಣ ಸರಿ ಇಲ್ಲ. ಗದ್ದಲಮಯ ಪ್ರದೇಶದಲ್ಲಿ ಚಿತ್ತವನ್ನು ಒಂದೆಡೆ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ. ಎಂಬ ನೂರಾರು ನೆಪಗಳನ್ನು ಹೇಳದಿರಿ. ಕಷ್ಟಪಟ್ಟವನಿಗೆ ಸುಖ ಏನೆನ್ನುವುದು ತಿಳಿಯುತ್ತದೆ.ಮೊದಲು ಐದಾರು ನಿಮಿಷ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟವೆನಿಸುತ್ತದೆ. ಮುಂದಿನ ಐದು ನಿಮಿಷ ಮನಸ್ಸನ್ನು ಸ್ವಾಧೀನದಲ್ಲಿರಿಸಿ ಗುರಿಯತ್ತ ನೆಟ್ಟರೆ ಸಾಕು. ಏಕಾಗ್ರತೆ ತಾನೇ ತಾನಾಗಿ ಹೊಂದಿಕೊಳ್ಳುತ್ತದೆ. ಏಕಾಗ್ರತೆಯ ಬಲದಿಂದ ಮಹಾನ್ ಕಾರ್ಯಗಳು ಸಂಭವಿಸಿವೆ. ಜೀವನದಲ್ಲಿ ನೀವು ಈಗ ಹೆಮ್ಮೆಯಿಂದ ಹೇಳಿಕೊಳ್ಳುವ ಅನೇಕ ಮಹತ್ಕಾರ್ಯಗಳು ಏಕಾಗ್ರತೆಯಿಂದಲೇ ಸಾಧಿಸಲ್ಪಟ್ಟಿವೆ ಸಂಕೀರ್ಣಮಯ ಜೀವನವನ್ನು ಸರಳಗೊಳಿಸಿ, ಶ್ರೇಷ್ಠ ಕೆಲಸಗಳಿಗೆ ಏಕಾಗ್ರತೆ ಮುನ್ನುಡಿಯಾಗುತ್ತದೆ. ಬದ್ಧತೆ ಬೆಳೆಸಿಕೊಳ್ಳಿನಮ್ಮ ಮೆದುಳು ಅದ್ಭುತ ಕಾರ್ಖಾನೆಯಿದ್ದಂತಿದೆ. ಒಂದು ಕೆಲಸ ಮಾಡುವಾಗಲೇ ಬೇರೆಲ್ಲ ಕೆಲಸಗಳ ಬಗೆಗೂ ಯೋಚಿಸಬಲ್ಲುದು ತರಕಾರಿ ಹೆಚ್ಚುತ್ತಿರುವ ತಾಯಿ ಹಾಲು ಉಕ್ಕದಂತೆ ನೋಡುತ್ತಾಳೆ. ಹೊರಗೆ ಯಾರೋ ಯಾವುದೇ ವಸ್ತು ಎಲ್ಲಿದೆ ಎಂದು ಕೇಳಿದರೂ ಸರಿಯಾಗಿ ಉತ್ತರಿಸುತ್ತಾಳೆ.ಮೆದುಳಿನ ಕಾರ್ಯದ ಬಗೆಗೆ ಅಚ್ಚರಿಯೆನಿಸುತ್ತದಲ್ಲವೇ? ಇಷ್ಟೆಲ್ಲ ಶಕ್ತಿ ಹೊಂದಿದ ಮೆದುಳಿಗೆ ಒಂದೇ ಕೆಲಸ ಕೊಟ್ಟರೆ ಇನ್ನೂ ಅಚ್ಚುಕಟ್ಟುತನದಿಂದ ಮಾಡಬಲ್ಲದು. ಸೂರ್ಯನ ಕಿರಣಗಳು ಕಾಗದವೊಮದನ್ನು ಸುಡಬಲ್ಲವು. ಆಶ್ಚರ್ಯವೇ! ಸೂರ್ಯನ ಕಿರಣಗಳನ್ನು ಒಂದೆಡೆ ಭೂತಗನ್ನಡಿಯಲ್ಲಿ ಕೇಂದ್ರೀಕರಿಸಿದಾಗ ಮಾತ್ರ ಸಾಧ್ಯ. ಚದುರಿದ ಕಿರಣಗಳಿಂದ ಅಸಾಧ್ಯ. ಮೆದುಳಿನ ಒಟ್ಟು ಶಕ್ತಿಯನ್ನುೆÆಂದು ಸಮಯದಲ್ಲಿ ಒಂದೇ ಕೆಲಸಕ್ಕೆ ಉಪಯೋಗಿಸುವ ಬದ್ಧತೆ ಬೆಳೆಸಿಕೊಳ್ಳಿ. ದಿನಚರಿ ಬರೆಯಿರಿನೀವು ಏನಾಗಬೇಕೆಂಬುದನ್ನು ಬೇರೆಯವರು ನಿರ್ಧರಿಸುವದಕ್ಕಿಂತ ನೀವೇ ನಿರ್ಧರಿಸಿಕೊಳ್ಳಿ.ದಿನಚರಿ ಬರೆಯುವುದನ್ನು ರೂಢಿಸಿಕೊಂಡರೆ ನಿಮ್ಮ ಆಸಕ್ತಿ ಒಲವು ಅಭಿರುಚಿಗಳು ನಿಮಗೇ ಗೊತ್ತಾಗುತ್ತವೆ. ಆಸಕ್ತಿಯಿದ್ದಲ್ಲಿ ಮನಸ್ಸನ್ನು ಹಿಡಿದಿಡುವುದು ಅವಶ್ಯವಿಲ್ಲ.ಮನಸ್ಸು ತಾನೇ ಆಸಕ್ತಿಯಿಂದ ತೊಡಗಿಕೊಂಡು ಬಿಡುತ್ತದೆ. ಇದರಿಂದ ಏಕಾಗ್ರತೆ ಸುಲಭ ಸಾಧ್ಯವಾಗುವುದು. ಮಾಡುವ ಕೆಲಸವನ್ನು ವಿಭಿನ್ನ ರೀತಿಯಲ್ಲಿ ಮಾಡಬಹುದೇ? ಎಂಬ ಸೃಜನಶೀಲತೆನ್ನು ಅಳವಡಿಸಿಕೊಳ್ಳಲು ದಿನಚರಿ ಉಪಯುಕ್ತ.ಟನಲ್ ವಿಷನ್ ಬಳಸಿಎರಡೂ ಅಂಗೈಗಳಿAದ ಕಣ್ಣುಗಳನ್ನು ಮುಚ್ಚಿಕೊಳ್ಳಿ. ನಂತರ ಅಂಗೈಗಳನ್ನು ಕಣ್ಣುಗಳ ಮೇಲಿಂದ ತೆಗೆಯುತ್ತ ಮುಚ್ಚುತ್ತ ಬ್ಲಿಂರ‍್ಸ್ (ಮಿಣುಕು) ತರ ಉಪಯೋಗಿಸಿ.ನಂತರ ನಿಮ್ಮ ದೃಷ್ಟಿಯನ್ನು ನಿಮ್ಮ ಮುಂದಿರುವ ಗುರಿಯತ್ತ ಹೊರಳಿಸಿ. ಕ್ರಮೇಣವಾಗಿ ಮೆದುಳು ಪೂರ್ತಿ ಏಕಾಗ್ರತೆಯನ್ನು ಪಡೆಯುತ್ತದೆ. ನಿಮ್ಮ ಗುರಿಯತ್ತ ದೃಷ್ಟಿ ಕೇಂದ್ರೀಕರಿಸುವ ಈ ಟನಲ್ ವಿಷನ್ ಪ್ರಕ್ರಿಯೆಯನ್ನು ಬಳಸಿ. ತಾಜಾ ಹಣ್ಣು ಸಮತೋಲಿತ ಆಹಾರ ಸೇವಿಸಿಆದರ್ಶ ಕಣ್ಮುಂದಿರಲಿಬರೀ ಅಧ್ಯಯನ ಮತ್ತು ಕೆಲಸ ಎಂದು ಸಮಯ ಕಳೆದರೆ ನೆಚ್ಚಿನ ಆಟ ಆಡುವುದು ಯಾವಾಗ? ಎಂದು ಯೋಚಿಸದಿರಿ. ಆಡುವಾಗ ಮನಸ್ಸು ಆಟದಲ್ಲಿರಲಿ ಅಧ್ಯಯನದಲ್ಲಿರುವಾಗ ಪುಸ್ತಕದಲ್ಲಿರಲಿ.ಆಡುವಾಗ ಅಭ್ಯಾಸದ ಕುರಿತು ಚಿಂತಿಸಿ ಕಿರಕಿರಿಗೊಳಗಾಗದಿರಿ. ಒಂದೇ ಮಾತಿನಲ್ಲಿ ಸ್ಪಷ್ಟಗೊಳಿಸಬೇಕೆಂದರೆ ಟಿವಿ ನೊಡಿ ಕಪಿ ಛೇಷ್ಟೆ ಮಾಡಿ. ಕಂಪ್ಯೂಟರ್ ಗೇಮ್ ಆಡಿ ಇಷ್ಟವಾದ ಸಂಗೀತ ಆಲಿಸಿ ಕುಣಿಯಿರಿ. ಇವು ನಿಮ್ಮನ್ನು ಪುನಃಶ್ಚೇತನಗೊಳಿಸುತ್ತವೆ. ಆದರೆ ಏನೋ ಮಾಡುವಾಗ ಏನೋ ಯೋಚಿಸುತ್ತ ನಿತ್ರಾಣಗೊಳ್ಳದಿರಿ.. ನೀವು ಎಲ್ಲಿದ್ದಿರೋ ಅಲ್ಲಿಯೇ ನಿಮ್ಮ ಮನಸ್ಸು ಇರಲಿ.ಮಾಡುವ ಕೆಲಸ ಬಿಟ್ಟು ಮನಸ್ಸು ಬೇರೆಲ್ಲೂ ಕದಲದಿರಲಿ. ಏಕಾಗ್ರತೆಯಿಂದಲೇ ಇಡಿ ಜಗತ್ತು ಫಲವತ್ತತೆಯನ್ನು ಪಡೆದಿದೆ ಎನ್ನುವುದು ನೆನಪಿರಲಿ. ಏಕಾಗ್ರತೆಗೆ ಅತ್ಯುತ್ತಮ ಉದಾಹರಣೆಯೆಂದರೆ ಸ್ವಾಮಿ ವಿವೇಕಾನಂದರು. ದೊಡ್ಡ ದೊಡ್ಡ ಗ್ರಂಥಗಳಲ್ಲಿ ಇಷ್ಟನೇ ಪುಟದಲ್ಲಿ ಹೀಗೇ ಹೇಳಲಾಗಿದೆ ಎಂದು ಹೇಳುವಷ್ಟು ಏಕಾಗ್ರಚಿತ್ತರಾಗಿ ಅಧ್ಯಯನ ನಡೆಸುತ್ತಿದ್ದರು. ಅಂಥ ಆದರ್ಶ ಸಾಧಕರು ಕಣ್ಮುಂದಿರಲಿ.ಪ್ರಯತ್ನಿಸಿ -ಸಾಧಿಸಿಕೆಲಸದ ಒತ್ತಡದಲ್ಲಿ ಕೆಲಸಗಳ ತರಾತುರಿಯಲ್ಲಿ ನಾನೇನು ಮಾಡುತ್ತಿದ್ದೇನೆ ಎಂಬುದರ ಪರಿವೆ ಇರಬೇಕಾದುದು ಅನಿವಾರ್ಯ. ಗುರಿಯೆಡೆಗೆ ಗುರಿಯಿಟ್ಟು ಅತ್ಯುನ್ನತ ಸಾಮರ್ಥ್ಯಕ್ಕೆ ಏರಲು ಏಕಾಗ್ರತೆ ಬೇಕೇ ಬೇಕು. ಅಸಾಧಾರಣವಾದುದನ್ನು ಸಾಧಿಸಲು ಸಾಧಾರಣ ಗುಣಮಟ್ಟದ ಏಕಾಗ್ರತೆ ಸಾಕಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಏಕಾಗ್ರತೆ ಸಾಧಿಸಿದಷ್ಟು ದೊರೆಯುತ್ತದೆ.ನಿಮ್ಮ ಬದುಕನ್ನು ವಿಶೇಷ ಮತ್ತು ಮರೆಯಲಾಗದ್ದನ್ನಾಗಿ ಮಾಡಲು ಏಕಾಗ್ರತೆಯ ಹೆಜ್ಜೆಯು ಕಾಲಾಂತರದಲ್ಲಿ ದೊಡ್ಡ ಪರಿಣಾಮ ಬೀರಬಲ್ಲದು. ಏಕಾಗ್ರತೆ ಇಲ್ಲ ಎಂಬ ಬಲಹೀನತೆಯನ್ನು ಅತಿಕ್ರಮಿಸಲು ಪ್ರಯತ್ನಿಸಿ. ಬರೀ ಗುರಿ ಇಟ್ಟರೆ ಸಾಲದು ಹೊಡೆಯಲೂ ಬೇಕು. ಏಕಾಗ್ರತೆಯ ಬೆನ್ನೇರಿ ಗೆಲುವಿನ ನಗೆ ಬೀರಿ ಏಕಾಗ್ರತೆಯನ್ನು ಸಾಧಿಸಿದರೆ ಗೆಲುವು ಕಟ್ಟಿಟ್ಟ ಬುತ್ತಿ. ಸಾಧನೆಯ ಮೈಲಿಗಲ್ಲು ಸ್ಥಾಪಿಸಲು ಸಾಧ್ಯವಾಗುವುದು. **************************** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಹೇ ರಾಮ್
ಕವಿತೆ ಹೇ ರಾಮ್ ನೂತನ ದೋಶೆಟ್ಟಿ ಸುತ್ತ ಕ್ಲಿಕ್ಕಿಸುವ ಕ್ಯಾಮರಾ ಕಣ್ಣುಗಳುಚಿತ್ರಪಟದಲ್ಲಿ ಸೆರೆಯಾದದ್ದೇನೋ ಹೌದು ಇದು ಯಾರ ಸಮಾಧಿ?ಪ್ರಶ್ನೆಗೆ ಅಪ್ಪನ ಮೆದು ಉತ್ತರಪೋಸು ಕೊಡುವವರ ಪಕ್ಕದಲ್ಲಿಹಿಡಿಯಾದ ನಾನು ಘೋಡ್ಸೆಯನು ಬಣ್ಣಿಸುವವರ ಮಾತುಎದೆ ಹಿಂಡಲಿಲ್ಲಇತಿಹಾಸ ಹೇಳಿತ್ತು ನಿನ್ನೆಗೆ ಮರುಗಬೇಡ ಗುಂಡಿಗೆ ಎದೆಯೊಡ್ಡಿದವಗೆಕಾವಲು ಬಂದೂಕುಗಳುವಿಪರ್ಯಾಸಕ್ಕೂ ಮಿತಿ ಇರಬೇಕು ತತ್ವಗಳೋ ಹೊದಿಕೆ ಹೊದ್ದ ಪುಸ್ತಕಗಳುಬಾಕ್ಸ್ ಆಫೀಸಿನಲ್ಲಿ ಗಾಂಧೀಗಿರಿಯ ಲೂಟಿಖಾದಿಯ ಫ್ಯಾಷನ್ ಮೇಳಸ್ವದೇಶಿ ಬೇಲಿಗೆ ವಿದೇಶಿ ಗೂಟನಾನೊಬ್ಬನೇ ‘ ನಗ್ನ ಫಕೀರ’ **********************************************************
ಮನುಷ್ಯತ್ವ, ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆ’ ಎಂ.ಟಿ.ನಾಯ್ಕ ಶಿಕ್ಷಕ, ಕವಿ ಎಂ.ಟಿ.ನಾಯ್ಕ ಕುಮಟಾ ತಾಲ್ಲೂಕಿನ ಹೆಗಡೆ. ಹೈಸ್ಕೂಲ್ ಹಂತದಿಂದಲೇ ಬರವಣಿಗೆ ಪ್ರಾರಂಭಿಸಿದವರು. ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ವಾಚನ, ಆಕಾಶವಾಣಿ ಧಾರವಾಡ ಮತ್ತು ಕಾರವಾರ ಕೇಂದ್ರಗಳಲ್ಲಿ ಸುಮಾರು ಐದು ಬಾರಿ ಕಾವ್ಯವಾಚನ ಮಾಡಿದ್ದಾರೆ. ಕ್ರೈಸ್ಟ್ ಕಾಲೇಜು ಬೆಂಗಳೂರು , ಜೆ ಎಸ್. ಎಸ್ ಕಾಲೇಜು ಧಾರವಾಡ ಗಳಲ್ಲಿ ನಡೆದ ಬೇಂದ್ರೆ ಸ್ಮೃತಿ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿವೆ. ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ ` ಸಂಚಯ ‘ ಪತ್ರಿಕೆಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಸಂದಿವೆ. ಸಂಯುಕ್ತ ಕರ್ನಾಟಕ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ದೊರೆತಿದೆ. ಪತ್ರಿಕೆಗಳಲ್ಲಿ ಕವನಗಳು, ಅಂಕಣ ಬರಹಗಳು ಪ್ರಕಟಗೊಂಡಿವೆ . ಕೆಲವು ಕಥಾಸಂಕಲನ ಹಾಗೂ ಕವನ ಸಂಕಲನಗಳ ಕುರಿತು ಬರೆದ ವಿಮರ್ಶೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾಲೇಜು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮತ್ತು ಎಂ . ಎ. ಮುಗಿಸಿ ಬಂದನಂತರ ಬೇರೆ ಬೇರ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಕಾಲ ಕೆಲಸ ಮಾಡಿದ್ದಾರೆ. ಹಾಲಿ ಶಿಕ್ಷಕನಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾವಿಕೊಡ್ಲ ನಂ ೨ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ` ನೇಪಥ್ಯ ‘ ( ಕವನ ಸಂಕಲನ) ‘ ನನ್ನೊಳಗೆ ನಾನು ‘ ( ಕಥಾಸಂಕಲನ ) ‘ ಸಿಂಧುವಿನಿಂದ ಬಿಂದು ‘ ( ವಿಮರ್ಶಾ ಸಂಕಲ) ಪ್ರಕಟಣೆಯ ಹಾದಿಯಲ್ಲಿದೆ . ………………. ಕಥೆ , ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ನಾನು ಕವಿ ಅಥವಾ ಕತೆಗಾರನಾಗಬೆಕೆಂಬ ತೆವಲಿಗೆ ಎಂದೂ ಒಳಗಾಗಿಲ್ಲ. ಬೇರೆ ಬೇರೆ ಹಿರಯ ಕವಿ ಕಥೆಗಾರರನ್ನು ಓದಿದ ಹಿನ್ನೆಲೆಯಲ್ಲಿ ಸುತ್ತಲಿನ ಸಮುದಾಯದ ನೋವು – ನನ್ನ ನೋವು ,ನಲಿವುಗಳೊಂದಿಗೆ ತಾದಾತ್ಮ್ಯ ಹೊಂದಿದಾಗ ನನ್ನೊಳಗಿನ ಸಹಜವಾದ ಕವಿತ್ವದ ಪ್ರಜ್ಞೆ ಜಾಗ್ರತ ಗೊಂಡು ಅದು ಭಾಷೆಯ ನೆಲೆಯಲ್ಲಿ ಅಕ್ಷರ ರೂಪ ಪಡೆದಾಗ ಅದು ಕವನವಾಗಬಹುದು , ಅಥವಾ ಅದು ಸಂಭಾಷಣೆ, ವಿವರಣೆ ,ವಿಶ್ಲೇಷಣೆ , ನೀರೂಪಣೆಗಳನ್ನೊಳಗೊಂಡ ಪಾತ್ರಗಳ ರೂಪವನ್ನು ಪಡೆದಾಗ ಅದು ಕಥೆ ಕೂಡಾ ಆಗಬಹುದು. ಆದರೆ ಕಥೆ ಅಥವಾ ಕವಿತೆಗಳಿಗೆ ಸಂಬಂಧಿಸಿದ ಸಂಗತಿಗಳು ಒಮ್ಮೆ ಹುಟ್ಟಿ , ಹಲವಾರು ದಿನಗಳವರೆಗೆ ಮತ್ತೆ ಮತ್ತೆ ಕಾಡಿದಾಗ ಅದು ಆಯಾ ರೂಪದಲ್ಲಿ, ಅನಾವರಣಗೊಂಡು ಸಫಲ ಪ್ರಸವದ ಆನಂದಾನುಭೂತಿಯನ್ನು ಆ ಕ್ಷಣಕ್ಕೆ ನೀಡುತ್ತದೆಯಷ್ಟೆ . ಕಥೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ? ನನ್ನ ದೃಷ್ಟಿಯಲ್ಲಿ ಅದಕ್ಕೆ ಇಂತಹುದೇ ಕ್ಷಣ ಅಂತೇನೂ ಇಲ್ಲ. ನಾನು ಕ.ವಿ.ವಿ ಧಾರವಾಡದಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ ಎಂ. ಎ. ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಗುರುಗಳಾದ ದಿ. ಡಾ. ಎಂ. ಎಂ.ಕಲ್ಬುರ್ಗಿ ಸರ್ ರವರು ಒಮ್ಮೆ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಮಾತನಾಡುತ್ತಾ ‘ ಜೀವನಾನುಭವವೇ ಸಾಹಿತ್ಯದ ಮೂಲ ದ್ರವ್ಯ ‘ ಎಂದಿದ್ದು ಈಗಲೂ ನೆನಪಿದೆ. ಅಂತಹ ಅನುಭವಗಳು ಕಥೆ ಅಥವಾ ಕವನವಾಗಬಲ್ಲ ಸಾಹಿತ್ಯಕ ಅನುಭೂತಿಯನ್ನು ಹೊಂದಿ ಗಾಢವಾಗಿ ಕಾಡಿದಾಗ ಅದು ಕತೆ ಅಥವಾ ಕವಿತೆಯಾಗಿ ರೂಪು ತಳೆಯುತ್ತದೆ ಅಷ್ಟೇ. ನಿಮ್ಮ ಕಥೆಗಳ ವಸ್ತು , ವ್ಯಾಪ್ತಿ ಹೆಚ್ಚಾಗಿ ? ಪದೇ ಪದೇ ಕಾಡುವ ವಿಷಯ ಯಾವುದು ?. ಬದುಕು ..! ಎಲ್ಲಾ ಲೇಖಕರ ಹಾಗೆಯೇ ನನ್ನ ಕಥೆಗಳ ವಸ್ತು ಮತ್ತು ವ್ಯಾಪ್ತಿ ಬದುಕಿಗೆ ಸಂಬಂಧಿಸಿದ ಸಂಗತಿಗಳೇ ಆಗಿವ. ಈ ಬದುಕಿನಲ್ಲಿ ಪ್ರೀತಿ ಯಿದೆ,ಪ್ರೇಮವಿದೆ,ನಂಬಿಕೆ – ವಿಶ್ವಾಸಗಳಿವೆ, ಅಲ್ಲಿ ವಂಚನೆ , ಮೋಸ , ದ್ರೋಹ , ಹಿಂಸೆ , ದೌರ್ಜನ್ಯಗಳಿವೆ .ಹಾಗೆನೆ ಪ್ರಾಮಾಣಿಕತೆ ಕೂಡ ಇವೆ . ಇವೆಲ್ಲವೂ ಸಂದರ್ಭಾನುಸಾರ ಕಥೆಯ ವಸ್ತುಗಳಾಗುತ್ತವೆ . ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಟ್ರೆಂಡ್ ಸುರುವಾಗಿದೆ. ಅದೆಂದರೆ ಹೇಗಾದರೂ ಸರಿಯೆ ಹಣಮಾಡಬೇಕು . ಅದರಿಂದ ನಮ್ಮ ಸಮಾಜ ಅದರಲ್ಲೂ ನಮ್ಮ ಯುವ ಜನಾಂಗ ಹಣದ ಹಿಂದೆ ಬಿದ್ದಿದೆ . ಮನುಷ್ಯತ್ವ, ಮಾನವೀಯತೆ , ಪ್ರೀತಿ ,ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆಯೆಂದರೆ ತಪ್ಪಾಗದು . ಮಾನವೀಯ ಮೌಲ್ಯಗಳ ಕುರಿತು ಮಾತನಾಡುವವರು ಎಂದರೆ ಒಂಥರಾ ಹುಚ್ಚರಹಾಗೆ ಅನ್ನುವ ಹಂತಕ್ಕೆ ನಮ್ಮ ಸಾಮಾಜಿಕ ಬದುಕು ತಲುಪಿದೆ . ಇದು ನಮ್ಮ ಒಟ್ಟಾರೆ ವ್ಯವಸ್ಥೆಯ ದುರಂತವೇ ಸರಿ . ತಮ್ಮ ಮಕ್ಕಳ ಬದುಕನ್ನು ಗಟ್ಟಿಗೊಳಿಸಲು ಬದುಕಿನುದ್ದಕ್ಕೂ ಹೆಣಗಾಡುವ ತಂದೆತಾಯಿಗಳು , ಅದರೆ ಅದೇ ಮಕ್ಕಳು ವಯಸ್ಸಿಗೆ ಬಂದಾಗ ತಂದೆತಾಯಿಗಳನ್ನು ತಿರಸ್ಕರಿಸುವುದು ಒಂದುಕಡೆಯಾದರೆ , ವಯಸ್ಸಿಗೆ ಬಂದ ಮಗ ತನ್ನ ತಂದೆತಾಯಿ , ಸಹೋದರ, ಸಹೋದರಿಯರ ಬದುಕಿಗಾಗಿ ತನ್ನ ವಯಕ್ತಿಕ ಬದುಕನ್ನು ಮರೆತು ರಕ್ತವನ್ನು ಬೆವರಿನರೂಪದಲ್ಲಿ ಚೆಲ್ಲಿ ಜವಾಬ್ದಾರಿಯಿಂದ ನಿರ್ವಹಿಸುವ ಸಂದರ್ಭದಲ್ಲೂ ಅಂತವರಿಗೆ ಕುಟುಂಬದ ಎಲ್ಲರಿಂದಲೂ ಆಗುವ ವಂಚನೆ ನೀಡುವ ನೋವುಗಳು ಗಾಢವಾಗಿ ಕಾಡಿದಾಗ ಅವುಗಳು ಕಥೆಗಳಿಗೆ ಗಟ್ಟಿ ವಸ್ತುಗಳಾಗುತ್ತವೆ . ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರಾಮಾಣಿಕತೆ, ಪ್ರೀತಿ , ಪ್ರೇಮ, ವಿಶ್ವಾಸ, ನಂಬಿಕೆಗಳಿಗೆ ವಿರುದ್ಧವಾಗಿ ಎಸಗುವ ದ್ರೋಹ, ವಂಚನೆ , ಮೋಸ ಇದೆಯಲ್ಲಾ ..ಇವುಗಳು ಯಾವುದೇ ರೀತಿಯ ಹಿಂಸೆ, ದೌರ್ಜನ್ಯಗಳಿಗಿಂತಲೂ ಭೀಕರ ಎನಿಸುತ್ತವೆ . ಈ ಮುಂತಾದ ಸಂಗತಿಗಳೆಲ್ಲವೂ ನನ್ನ ಕಥೆಗಳಿಗೆ ವಸ್ತುವಾಗುತ್ತವೆ . ಹಾಗೇನೇ ಅತಿಯಾದ ಮದ್ಯಪಾನ ಮುಂತಾದ ದುಶ್ಚಟಗಳು , ಅವುಗಳಿಂದ ಬದುಕಿಗಾಗುವ ಹಾನಿ ಇವೆಲ್ಲವೂ ಕೆಲವು ಸಂದರ್ಭಗಳಲ್ಲಿ ವಸ್ತುವಾಗಿವೆ . ಕಥೆ , ಕವಿತೆಗಳಲ್ಲಿ ಬಾಲ್ಯ , ಹರೆಯ ಇಣುಕಿದೆಯೇ ? ಯಾಕಿಲ್ಲ ..? ಪ್ರತಿಯೊಬ್ಬ ಬರಹಗಾರನ ಬರವಣಿಗೆಯಲ್ಲೂ ಕೂಡ ಅವನ ಬಾಲ್ಯ ಮತ್ತು ಹರಯದ ಅನುಭವಗಳು ಇಣುಕಿನೋಡುತ್ತವೆ . ನನ್ನ ಬರವಣಿಗೆಯೂ ಕೂಡ ಅದಕ್ಕೆ ಹೊರತಾಗಿಲ್ಲ . ನಾನು ಬರೆದ ಪ್ರೇಮ ಕವನವೊಂದನ್ನು ಓದಿದ ಬಿಜಾಪುರ ಜಿಲ್ಲೆಯ ನನ್ನ ಎಂ. ಎ. ಸಹಪಾಠಿಯೊಬ್ಬರು ಇದು ನನ್ನ ಬದುಕಿನ ಸಂದರ್ಭಕ್ಕೆ ಸಂಬಂಧಿಸಿದಂತೆ ಇದೆ , ಎಂದಾಗ ನಾನು ಆಶ್ಚರ್ಯಗೊಂಡಿದ್ದೆ. ನನ್ನ ಬಾಲ್ಲದ ದಿನಗಂಳಿದ ಹಿಡಿದು ನಾನು ಶಿಕ್ಷಣ ಪಡೆದು ವ್ರತ್ತಿ ಜೀವನಕ್ಕೆ ಬರುವಲ್ಲಿಯವರೆಗೆ ನನ್ನನ್ನು ,ನಮ್ಮ ಕುಟುಂಬವನ್ನು ಕಾಡಿದ ಅತ್ಯಂತ ನಿಕ್ರಷ್ಟ ಎನ್ನಬಹುದಾದ ಬಡತನ , ನಾನು ಶಿಕ್ಷಣ ಪಡೆಯುವುದಕ್ಕಾಗಿ ನಡೆಸಿದ ಹೋರಾಟ , ಆ ಸಂದರ್ಭಗಳಲ್ಲಿ ಮಹಾತ್ಮರೊಬ್ಬರು ನನ್ನನ್ನು ಕೈಹಿಡಿದು ನಡೆಸಿದ್ದು ಇನ್ನೂ ಮುಂತಾದ ಸಂಗತಿಗಳು, ಅಭವಗಳು , ನನ್ನ ಬರವಣಿಗೆಯಲ್ಲಿ ಇಣುಕಿಹಾಕಲೆಬೇಕಲ್ಲ. ಧರ್ಮ , ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಇದು ತೀರಾ ಕ್ಲಿಷ್ಟಕರ ಪ್ರಶ್ನೆ ಎನ್ನಬೇಕಾಗುತ್ತದೆ . ಯಾಕೆಂದರೆ ಧರ್ಮದ ಕುರಿತು ಮಾತನಾಡುವಷ್ಟು ಧರ್ಮ ಸೂಕ್ಷ್ಮವನ್ನರಿತ ಧರ್ಮಜ್ಞ ನಾನಲ್ಲ. ಹಾಗೆ ನೋಡಿದರೆ ಧರ್ಮಕ್ಕಿಂತಲೂ ಮೊದಲು ಹುಟ್ಟಿದವ ಮನುಷ್ಯ . ಅವನ ನಂತರ ಅವನಿಂದಲೇ ಅಂದರೆ ಮನುಷ್ಯನಿಂದ ಹುಟ್ಟಿದ್ದು ಧರ್ಮ. ಕಾಡಿನಿಂದ ನಾಡಿನೆಡೆಗೆ , ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಮಾನವ ಹೆಜ್ಜೆಯಿಟ್ಟು ಅಲ್ಲಿ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಮೇಲೆ ಹುಟ್ಟಿಕೊಂಡದ್ದು ಧರ್ಮ. ಮನುಷ್ಯ ತನ್ನ ವಯಕ್ತಿಕ ಹಾಗೂ ಸಾಮುದಾಯಿಕ ಜೀವನವನ್ನು ಹೆಚ್ಚು ಸುಂದರಗೊಳಿಸಿಕೊಳ್ಳುವುದಕ್ಕಾಗಿ , ಹೆಚ್ಚು ಮೌಲ್ಯಯುತಗೊಳಿಸಿಕೊಳ್ಳುವುದಕ್ಕಾಗಿ ಒಂದರ್ಥದಲ್ಲಿ ಹೆಚ್ಚು ಅರ್ಥಪೂರ್ಣ ಗೊಳಿಸಿಕೊಳ್ಳುವುದಕ್ಕಾಗಿ ಆ ಕಾಲದಲ್ಲಿ ಅವನು ಕಂಡುಕೊಂಡ ಸುಲಭ ಸಾಧನ ಧರ್ಮ. ಆದರೆ ಇಂದು ಏನಾಗುತ್ತಿದೆ ? ಧರ್ಮ ಮನುಷ್ಯನ ಜೀವನದಮೇಲೆ ಸವಾರಿಮಾಡುವಷ್ಟು ಪ್ರಭಲವಾಗಿ ಬೆಳೆದುನಿಂತಿದೆ . ಇದು ಕೇವಲ ನಮ್ಮ ದೇಶದ ವಿದ್ಯಮಾನವಷ್ಟೆ ಅಲ್ಲ. ಇದು ಜಾಗತಿಕ ವಿದ್ಯಮಾನವಾಗಿದೆ . ಇಂದು ಧರ್ಮದ ಕಾರಣದಿಂದಾಗಿ ನಮ್ಮ ವಯಕ್ತಿಕ ಹಾಗೂ ಸಾಮಾಜಿಕ ಬದುಕು ವಿಕ್ರತಗೊಳ್ಳುತ್ತಿವೆ …ಸಂದಿಗ್ಧತೆಗೆ ಒಳಗಾಗಿದೆ . ಇಂತಹ ಬೆಳವಣಿಗೆ ನಮ್ಮ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನಕ್ಕೆ ತಕ್ಕುದಾದ ಬೆಳವಣಿಗೆಯಂತೂ ಅಲ್ಲ. ಸ್ವಾಮಿ ವಿವೇಕಾನಂದರು ಧರ್ಮ ಮತ್ತು ದೇವರ ಕುರಿತು ಹೇಳುವಾಗ ..’ ವಿಧವೆಯರ ಕಣ್ಣೀರು ಒರೆಸದ , ಹಸಿದವನಿಗೆ ತುತ್ತು ಅನ್ನವ ನೀಡದ ದೇವರು ಮತ್ತು ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ ಎಂದಿದ್ದಾರೆ. ಯಾವುದು ನಮ್ಮಲ್ಲಿಯ ಮಾನವೀಯ ಪ್ರಜ್ಞೆ ಯನ್ನು ಜಾಗ್ರತಗೊಳಿಸಲು ಶಕ್ತವಾಗುತ್ತದೆಯೋ ಅದು ಧರ್ಮ. ಪರಸ್ಪರ ಪ್ರೀತಿ , ವಿಶ್ವಾಸ , ನಂಬಿಕೆ , ಪ್ರಾಮಾಣಿಕತೆ ಇವೇ ಅದರ ತಳಹದಿ . ಇವುಗಳಿಗೆ ಧಕ್ಕೆತರುವಂತ ಸಂಗತಿಗಳೆ ಅಧರ್ಮ. ನಾನು ಬದುಕುತ್ತಾ ನನ್ನೊಂದಿಗೆ ಇನ್ನುಳಿದ ಎಲ್ಲರನ್ನೂ ಬದುಕಲು ಬಿಡುವುದೇ ಧರ್ಮ .ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಾರೆ. ಇನ್ನು ‘ ದೇವರು ‘ ಕುರಿತು ಹೇಳುವುದಾದರೆ ‘ ದೇವರು ‘ ಇದ್ದಾನೆ ಎಂಬ ನಂಬಿಕೆ ಹೊಂದಿದವರೆಲ್ಲಾ ಆಸ್ತಿಕ ಗುಂಪಿಗೆ ಸೇರಿದರೆ ‘ ದೇವರ ‘ ಅಸ್ತಿತ್ವದ ಕುರಿತು ಸಂಶಯಪಡುವವರೆಲ್ಲಾ ನಾಸ್ತಿಕ ಗುಂಪಿಗೆ ಸೇರಿಬಿಡುತ್ತಾರೆ . ಇದು ಪ್ರಪಂಚ ಇರುವತನಕ ಮತ್ತು ಈ ಪ್ರಪಂಚದಲ್ಲಿ ಕಟ್ಟಕಡೆಯ ಮನುಷ್ಯ ಇರುವಲ್ಲಿಯ ತನಕ ಮುಂದುವರೆಯುವ ಚರ್ಚೆಯಾಗಿದೆ . ‘ ದೇವರು ‘ ಇದ್ದಾನೆಯೇ ಎನ್ನುವುದು ಅವರವರ ಸ್ವಯಂ ಅನುಭವವೇದ್ಯವಾದ ಸಂಗತಿಯಾಗಿದೆ . ಇನ್ನು ನನ್ನ ದ್ರಷ್ಟಿಯಲ್ಲಿ ನಾನು ಕಷ್ಟದಲ್ಲಿದ್ದಾಗ ಯಾರು ನನ್ನನ್ನು ಕೈಹಿಡಿದು ನಡೆಸಲು ಪ್ರಯತ್ನಿಸುತ್ತಾರೋ , ನಾನು ಸಾವು ಬದುಕುಗಳನಡುವೆ ಹೋರಾಡುತ್ತಿರುವಾಗ ಕಾಳಜಿಯಿಂದ ನನ್ನನ್ನು ಉಳಿಸಲು ಪ್ರಾಮಾಣಿಕವಾಗಿ ಹೆಣಗಾಡುತ್ತಾರೆಯೋ ಅವರೇ ನನ್ನ ಪಾಲಿಗೆ ದೇವರು . ಯಾಕೆಂದರೆ ಅವರು ಮಾತ್ರ ನಾನು ಕಾಣಲು ಸಾಧ್ಯವಾಗುವ ಸತ್ಯದ ದೇವರಾಗಿರುತ್ತಾರೆ . ಇದಕ್ಕೆ ಹೊರತಾದ ಅನ್ಯ ವಿಚಾರ ‘ ದೇವರ ‘ ಕುರಿತಂತೆ ನನ್ನಲ್ಲಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ನಿಮ್ಮ ಈ ಪ್ರಶ್ನೆ ನನ್ನ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ. ಆದರೂ ಈ ದೇಶದ ಪ್ರಜೆಯಾಗಿ , ಪ್ರಜಾಪ್ರಭುತ್ವದ ನಿಯಮಾವಳಿಗಳಿಗೆ ಒಳಪಟ್ಟ ಒಬ್ಬ ಜವಾಬ್ದಾರಿಯುತ ಮತದಾರನಾಗಿ ನಿಮ್ಮ ಪ್ರಶ್ನೆಗೆ ಕೆಲವು ಮಿತಿಗೆ ಒಳಪಟ್ಟು ಪ್ರತಿಕ್ರಿಯಿಸಬಹುದು ಎಂದುಕೊಳ್ಳುತ್ತೇನೆ . ಇತ್ತೀಚಿನ ದಿನಗಳಲ್ಲಿ ಬದುಕಿನ ಎಲ್ಲಾ ಸ್ತರಗಳಲ್ಲೂ ಮೌಲ್ಯಗಳು ಕುಸಿಯುತ್ತಿವೆ ಎಂದು ಹೇಳಲಾಗುತ್ತಿವೆ . ಅದು ರಾಜಕೀಯ ಕ್ಷೇತ್ರಕ್ಕೂ ಹೊರತಾಗಿಲ್ಲ. ಮಹಾನ್ ರಾಷ್ಟ್ರೀಯ ಚಿಂತಕರನ್ನು ,ಯಾವುದೇ ವಿಧದ ಧಾರ್ಮಿಕ, ಸಾಮಾಜಿಕ ತಾರತಮ್ಯವಿಲ್ಲದ ಸರ್ವಜನಾಂಗದ ಹಿತಚಿಂತಕರುಗಳನ್ನು ರಾಷ್ಟ್ರದ ರಾಜಕೀಯ ನೇತಾರರುಗಳನ್ನಾಗಿ ಪಡೆದ ದೇಶ ಇದು . ಆದರೆ ಇಂದು ಈ ದೇಶದ ರಾಜಕೀಯ, ಸಾಮಾಜಿಕ ಜೀವನ ಹಾಗಿದೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲು ಶಕ್ತರಾದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ . ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ ರಾಜಕೀಯದ ಮೂಲಕ ರಾಷ್ಟ್ರ ಸೇವೆ , ಸಮಾಜ ಸೇವೆ ಎನ್ನುವ ಮಾತು ಕೇವಲ ಸವಕಲು ನಾಣ್ಯಗಳಾಗಿವೆ ಎನಿಸುವುದಿಲ್ಲವೆ ? ಅವರು ಅಷ್ಟು ಹಾಳುಗೆಡವಿದ್ದಾರೆ , ಅಕ್ಕಾಗಿ ಇವರು ಇಷ್ಟು ಕುಲಗೆಡಿಸುತ್ತಾರೆ …ಅದನ್ನೆಲ್ಲಾ ಪ್ರಶ್ನಿಸಲು ನೀವುಗಳು ಯಾರು ? ಎಂಬ ಪ್ರಶ್ನೆಗಳು ಹೊರಬೀಳುತ್ತಿರುವುದನ್ನು ನಾವು ಕೇಳುತ್ತಿದ್ದೇವೆ . ಹಾಗೆ ನೋಡಿದರೆ ನಮಗೆ ತೀರಾ ಪುಕ್ಕಟೆಯಾಗಿ ದೊರೆತ ಮತದಾನದ ಹಕ್ಕೂ ಕೂಡ ಇಂದಿನ ವಿದ್ಯಮಾನಗಳಿಗೆ ಕೆಲಮಟ್ಟಿಗೆ ಕಾರಣವಾಗಬಹುದೇನೊ ? ಯಾಕೆಂದರೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಲ್ಲಿಯ ಪ್ರಜೆಗಳು ರಾಜಕೀಯ ಹಕ್ಕಿಗಾಗಿ ಹೋರಾಟ ನಡೆಸಿದ ಇತಿಹಾಸವನ್ನು ನಾವು ಓದುತ್ತೇವೆ. ಆದರೆ ನಮ್ಮಲ್ಲಿ ಪ್ರಜಾಪ್ರಭುತ್ವದ ನೆಲೆಯಲ್ಲಿ ರಾಜಕೀಯ ( ಮತದಾನದ ) ಹಕ್ಕು ,
ಗಝಲ್
ಗಝಲ್ ಎ. ಹೇಮಗಂಗಾ ಬೆರಳುಗಳು ಯಾಂತ್ರಿಕವಾಗಿ ಹೂ ಕಟ್ಟುತ್ತಿವೆ ಮನಸೆಲ್ಲೋ ಕಳೆದುಹೋಗಿದೆಕಂಗಳು ಬರುವಿಕೆಯನ್ನೇ ನಿರೀಕ್ಷಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಪ್ರೀತಿ, ಪ್ರೇಮದಲ್ಲಿನ ಸುಖವೇನೆಂದು ತೋರಿಸಿಕೊಟ್ಟವನು ನೀನುಸವಿನೆನಪಲಿ ಅಧರಗಳು ಬಿರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ನಿನಗಾಗೇ ಮಿಡಿಯುವ ಹೃದಯದಲಿ ನೂರೆಂಟು ತವಕ, ತಲ್ಲಣಗಳುಧಮನಿಗಳು ನಿನ್ನ ಹೆಸರನ್ನೇ ಜಪಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಕಣ್ರೆಪ್ಪೆಯೊಳು ಅವಿತಿಹ ಕನಸು ನನಸಾಗಲು ಕಾಯುವ ಕಾಯಕವಿದುಕಾಲದ ಘಳಿಗೆಗಳು ತಮ್ಮಂತೆ ಸರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ವರ್ಷಗಳು ಉರುಳಿದರೇನು ಹೇಮ ಳ ಒಲವಿಗೆಂದೂ ಮುಪ್ಪು ಬಾರದುತನುವಿನ ಕಣಕಣಗಳೂ ಹಂಬಲಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ *****************************
ಎದೆ ಮಾತು
ಕವಿತೆ ಎದೆ ಮಾತು ನೀ.ಶ್ರೀಶೈಲ ಹುಲ್ಲೂರು ಕಣ್ಣ ಕೊಳದಲದೋನಮ್ಮೊಲವ ಬಾತುಅವುಗಳೇ ಹೇಳುತಿವೆನನ್ನೆದೆಯ ಮಾತು ಬಾನ ಸಾಗರದಲ್ಲಿನೀ ಹೊಳೆವ ತಾರೆಬೆಳದಿಂಗಳಮಲಿನಲಿನಿರುಕಿಸುವೆ ಬಾರೆ ಸೊಂಪಾದ ತಣ್ಣೆಳಲುನಿನ್ನ ಎದೆ ಬನದಿಬಿರುಬಿಸಿಲು ಅಲ್ಲಿರಲಿವಿರಹ ಕಾನನದಿ ಮಿರುಗುವಾ ಚಂದ್ರನನಗೆಯಾಟ ನೋಡುಮೋಡಗಳ ಹಿಗ್ಗಿನಲಿನಮ್ಮೊಲವ ಹಾಡು ನದಿ ದಡದಿ ಸೊಗಸುನವಿಲ ನಲಿದಾಟಹಕ್ಕಿಗಳ ಕಲರವವುಅದು ರಮ್ಯ ನೋಟ ಒಂಟಿ ಪಯಣ ಸಾಕಿನ್ನುಜೊತೆಯಾಗಿ ಇರುವವರುಷದಿ ಕಂದನ ಕೇಕೆಮಡಿಲಲ್ಲೆ ತರುವ **************************************
ಮಧುವಣಗಿತ್ತಿ
ಕವಿತೆ ಮಧುವಣಗಿತ್ತಿ ಎಚ್ ಕೆ ನಟರಾಜ ಆಕೆಗೆ ದಿನವೂಸಿಂಗರೀಸುವುದೇ ಕೆಲಸಅಕ್ಷರಗಳಿಗೆ ಉಡುಗೆ ತೊಡಿಸಿಅಲಂಕರಿಸಿ ಬಿಳಿ ಹಾಳೆಯ ಮೇಲೇ ಚಿತ್ತಾರಬಿಡಿಸಿ ಶಾಯಿಯ ರಂಗೋಲಿಸೂರ್ಯ ಚಂದ್ರನ ಹೂ ಮಾಲೆ ಮಾಡಿ..ನಕ್ಷತ್ರಗಳನ್ನು ಕೆನ್ನೆ ರಂಗಾಗಿಸಿಭಾವನೆಗಳಿಗೆ ಬಣ್ಣದುಡುಗೆ ತೊಡಿಸಿಕಾಮವನ್ನು.. ಕಾಮವಿಲ್ಲದ ಹೃದಯಭತ್ತಳಿಕೆಯ ಬಾಣವಾಗಿಸಿಪದಪುಂಜದರಮನೆಗೆ ಲಗ್ಗೆಹೀಗೆ ಈ ಮಧುವಣಗಿತ್ತಿ.. ಅಲ್ಲಿಂದ ಇಲ್ಲಿಇಲ್ಲಿಂದ ಅಲ್ಲಿ ಶಭ್ಧಗಳ ನರ್ತನ. ಆಡಂಭರದಾಟಕೂ ಅಂಕುಶ ತೊಡಿಸಿಪ್ರೇಮನಿವೇದನೆ.ಕನಸುಗಳ ಬಗೆದು ಅಲ್ಲೊಂದಷ್ಟು ಹೆಕ್ಕಿಮನದಾಳದಿ ಕುಕ್ಕಿ…. ದುಃಖದಲ್ಲಿ ಬಿಕ್ಕಿ..ನಗುವಿನಾಳದಲಿ ಒಲವ ಬಿತ್ತಿ.. ನಾಚಿನೀರಾದ ರಂಗಿನೋಕುಳಿಯಲಿ..ಮತ್ತೊಂದಷ್ಟು ಪದಗಳ ಮಾಲೆಕಟ್ಟಿ..ಜೋಡಿಸಿ.. ಕಾಡಿಸೀ.. ಕೂಡಿಸಿ.. ತೊಡಿಸಿಅಂತೂ.. ಒಂದು ಅಂತಿಮ ಸ್ಪರ್ಶ..ಭಾವದೊಲುಮೆಗೆ ಆಕರ್ಷಕ..ತೂರಲಿ ಕಣ್ಣೋಳೊಗೆ.. ಕವಿಭಾವಕೆಕವನದ ದೃಶ್ಯಹೀಗೆ ಮಧುವಣಗಿತ್ತಿ ಮೆರವಣಿಗೆಯಲಿಅಕ್ಷರ ಸೃಷ್ಟಿಯ ಭಾಷ್ಯ ****************************
ನಾವು ಆಧುನಿಕ ಗಾಂಧಾರಿಯರು
ಕವಿತೆ ನಾವು ಆಧುನಿಕ ಗಾಂಧಾರಿಯರು ಲಕ್ಷ್ಮೀ ಪಾಟೀಲ್ ನೀನು ಅಪಾರವಾದ ಆತ್ಮವಿಶ್ವಾಸತುಂಬಿ ತುಳುಕುವಹೆಣ್ಣೆಂದುಆಗಾಗ ಹೇಳಿನನ್ನನ್ನು ಬಲೂನಿನಂತೆಉಬ್ಬಿಸಿದಾತಖರೇಖರೇಆತ್ಮವಿಶ್ವಾಸದಲ್ಲೇಬದುಕಲು ನಿಂತಾಗ ಬಲೂನಿನ ಹವಾ ತೆಗೆದುಇನ್ನೆಂದೂಉಬ್ಬದಂತೆ ಮಾಡಿ ಎಸೆದು ಬಿಟ್ಟ ಹೆಣ್ಣನ್ನು ಒರೆಗೆ ಹಚ್ಚಿ ಆತಹೀಗೆಯೇ ಉಬ್ಬಿಬದುಕುತ್ತತನಗೊಂದು ಸ್ವಚ್ಛಂದ ಇತಿಹಾಸ ಕಟ್ಟಿಕೊಂಡಆತ್ಮವಿಶ್ವಾಸದಿಂದಹೆಜ್ಜೆ ಹಾಕುವಹೆಣ್ಣನ್ನು ತುಳಿಯುತ್ತಲೇಬಂದ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳದಿದ್ದರೂಇವರೆಲ್ಲಕರಾಮತ್ತುಗಳನ್ನುಕಣ್ಣಲ್ಲಿ ಹಿಂಗಿಸಿಕೊಂಡುಒಡಲಲ್ಲಿ ಅರಗಿಸಿಕೊಂಡುಕಂಡು ಕಾಣದಂತೆ ಉಂಡು ಉಗುಳದಂತೆಒಡಲದಾವಾಗ್ನಿಗಳನ್ನುಒಳಗೇಒತ್ತಿಕೊಳ್ಳುವನಾವು ಆಧುನಿಕ ಗಾಂಧಾರಿಯರಾಗಿದ್ದೇವೆ ಅಕ್ಷರಲೋಕಕ್ಕೆತೆರೆದುಕೊಂಡಿದ್ದುಪ್ರಜಾಪ್ರಭುತ್ವದಲ್ಲಿಸಂಖ್ಯೆ ಮುಖ್ಯವಾದದ್ದೇಪವಾಡವೆಂಬಂತೆಈಗಲೂ ಮೀಸಲಾತಿ ಆದ್ಯತೆಗೆಧನ್ಯರಾಗಲುಕುರುಡು ಪುರುಷನ ಮುಂದೆ ಬೇಡಿಕೆ ಇಟ್ಟುಕಣ್ಣಿದ್ದೂಕುರುಡರಂತೆಅವನ ನೆರಳಹಿಂಬಾಲಿಸುವನಾವು ಆಧುನಿಕ ಗಾಂಧಾರಿಯರಾಗಿದ್ದೇವೆ **************************************
ನಾವು ಆಧುನಿಕ ಗಾಂಧಾರಿಯರು Read Post »
ಚಂಸು ಪಾಟೀಲ ಎಂಬ ‘ರೈತಕವಿ’
ಚಂಸು ಪಾಟೀಲ ಎಂಬ ‘ರೈತಕವಿ’ ಚಂಸು ಪಾಟೀಲ ಎಂಬ ‘ಪತ್ರಕರ್ತ’, ‘ರೈತಕವಿ’ಯೂ..!ಮತ್ತವನ ‘ಬೇಸಾಯದ ಕತಿ’ಯೂ.!! ನನ್ನ ಪ್ರೀತಿಯ ಗೆಳೆಯ ಚಂಸು ಪಾಟೀಲ ಮೊನ್ನೆ ಭೇಟಿಯಾಗಿದ್ದ ಹಾವೇರಿಯಲ್ಲಿ. ಚಂಸು ತನ್ನ ಇತ್ತೀಚಿನ ಪುಸ್ತಕವಾದ ‘ಬೇಸಾಯದ ಕತೆ’ ಓದಲು ನನಗೆ ಕೊಟ್ಟ. ನನಗೆ ಈ ‘ಬೇಸಾಯದ ಕತಿ’ ಓದುತ್ತಿದಂತೆ ಇದರ ಬಗೆಗೇನೆ ಒಂದು ಬರಹ ಮಾಡೋಣವೆನಿಸಿ ಒಂದು ಈ ಬರಹವನ್ನು ಮಾಡಿದೆ.ಈ ಚಂಸು ‘ರೈತಕವಿ’ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.ಅಷ್ಟೇ ಅಲ್ಲ ಈ ಚಂಸು ಪತ್ರಕರ್ತನೂ ಹೌದು. ಈ ಇವನ ಬಗೆಗಿನ ಮಾಹಿತಿ ಮತ್ತು ಬರಹ ಇಲ್ಲಿದೆ ನೋಡಿ… ಈ ಚಂಸುನು ಬೇಸಾಯದ ಬಗೆಗೆ ಲೇಖಕನಾಗಿ ದೂರದಿಂದ ಕಂಡು ಬರೆದಿಲ್ಲ. ಅದರ ಒಂದು ಭಾಗವಾಗಿಯೇ ಬರೆಯುತ್ತಾ ಹೋಗುತ್ತಾನೆ. ಸ್ವಯಂ ಕೃಷಿಗಿಳಿದಿರುವ ಈ ಚಂಸು ಬೇಸಾಯದ ಲಾಭ-ನಷ್ಟಗಳನ್ನು ಒಂದೆಡೆ ಹೇಳುತ್ತಾನೆ. ಹಾಗೆಯೇ ಕೃಷಿ ಬದುಕಿನ ಜೊತೆಗೆ ಸುತ್ತಿಕೊಂಡಿರುವ ಬೇರೆ ಬೇರೆ ಹಬ್ಬ, ಉತ್ಸವ ಇತ್ಯಾದಿಗಳನ್ನು ವಿವರಿಸುತ್ತಾನೆ. ಹಾಗೆಯೇ ಕೃಷಿಯ ಜೊತೆಗೆ ಅಂಟಿಕೊಂಡ ಸಂಬಂಧಗಳನ್ನೂ ತೆರದಿಡುವ ಪ್ರಯತ್ನ ಮಾಡುತ್ತಾನೆ. ಅಂದರೆ ಬೇಸಾಯದ ಬೇರೆ ಬೇರೆ ಮಗ್ಗುಲುಗಳು ಈ ಲೇಖಕನಿಂದ ಪರಿಚಯವಾಗುತ್ತಾ ಹೋಗುತ್ತದೆ. ಇದೇ ಸಂದರ್ಭದಲ್ಲಿ ನಾವಿಂದು ಯಾವ ಹಬ್ಬ ಹರಿದಿನ, ಉತ್ಸವಗಳನ್ನು ಆಚರಿಸುತ್ತಿದ್ದೇವೆಯೋ ಅವೆಲ್ಲವೂ ಬೇಸಾಯದಿಂದ ತನ್ನ ನಂಟನ್ನು ಕಳೆದುಕೊಂಡು ಸ್ವತಂತ್ರವಾಗುತ್ತಿರುವುದು, ಮತ್ತು ಕೃತಕ ಆಚರಣೆಯಾಗಿ ಮುಂದುವರಿಯುತ್ತಿರುವುದನ್ನೂ ಈ ‘ಬೇಸಾಯದ ಕತಿ’ ಕೃತಿಯು ಚರ್ಚಿಸುತ್ತದೆ.ಶ್ರಾವಣದಿಂದ ಮಹಾನವಮಿಯವರೆಗಿನ ಹಬ್ಬಗಳಲ್ಲಿ ಮಣ್ಣನ್ನು ಪೂಜಿಸುವಂಥವೇ. ಮಣ್ಣೆತ್ತಿನ ಅಮವಾಸೆಗೆ ಮಣ್ಣೆತ್ತು ಮಾಡಿ ಪೂಜಿಸುವುದು. ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆಯುವುದು. ಗಣಪ ಕೂಡ ಮಣ್ಣೆ. ನಮ್ಮ ಅಡುಗೆ, ಉಡುಗೆ, ತೊಡುಗೆಗಳಿಗೆ ಬೇಕಾದ ಮೂಲ ಪದಾರ್ಥ, ಪರಿಕರಗಳನ್ನು ಒದಗಿಸುವ ಮಣ್ಣನ್ನು ಪೂಜಿಸುವ, ಮಣ್ಣಿನ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಅರ್ಥಪೂರ್ಣ ಆಚರಣೆ. ಇಂತಹ ಹಲವು ಚಿಂತನೆಗಳು ಈ ಕೃತಿಯಲ್ಲಿದೆ… ಚಂಸು ಪಾಟೀಲ ಕೃಷಿಯನ್ನೇ ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ. ಚಂಸು ಪಾಟೀಲನು (ಚಂದ್ರಶೇಖರ ಸುಭಾಶಗೌಡ) ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವನು. ಬಿ.ಎ. ಪದವೀಧರನು. ಕೆಲವು ಕಾಲ ನಾನು ಮೊದಲೇ ಹೇಳಿದಂತೆ ‘ಸಂಯುಕ್ತ ಕರ್ನಾಟಕ, ‘ಕ್ರಾಂತಿ’ ದಿನಪತ್ರಿಕೆಯಲ್ಲಿ ಹಾಗೂ ‘ನೋಟ’ ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದವನು. ಕೃಷಿ ಸಮಸ್ಯೆ ಕುರಿತು ಬರೆದ ಕೃತಿಯಾದ ‘ಬೇಸಾಯದ ಕತಿ’ಯು ನನ್ನ ತೀರಾ ಮನಮುಟ್ಟಿದ ಕೃತಿಯಾಗಿದೆ. ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018 ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿಯೂ ಲಭಿಸಿದೆ. ಇತನ ಇನ್ನುಳಿದ ಕೃತಿಗಳಾದ ‘ಗೆಳೆಯನಿಗೆ’ (1995), ‘ಕೆಂಪುಕಂಗಳ ಹಕ್ಕಿ ಮತ್ತದರ ಹಾಡು’ (2004), ‘ಅದಕ್ಕೇ ಇರಬೇಕು’ (2009) ಅಲ್ಲದೇ ಇವನ ಕವನ ಸಂಕಲನಗಳೂ ಓದಿಸಿಕೊಂಡು ಹೋಗುವ ಕೃತಿಗಳಾಗಿವೆ.ಪ್ರಸ್ತುತವಾಗಿ ಸದ್ಯ ತನ್ನ ಕುನಬೇವ ಗ್ರಾಮದಲ್ಲೇ ಕೃಷಿಕರಾಗಿನಾಗಿದ್ದಾನೆ. ಸ್ವಯಂ ರೈತಕವಿಯಾಗಿ ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾನೆ. ಇರಲಿ ಈಗ ಇವನ ಅತ್ಯುತ್ತಮ ಕೃತಿಯಾದ ಅಲ್ಲದೇ ನನಗೆ ತೀರಾ ಹಿಡಿಸಿದ ಕೃತಿಯಾದ ‘ಬೇಸಾಯದ ಕತಿ’ ಬಗೆಗೆ ನೋಡೋಣ… ‘ಬೇಸಾಯದ ಕತಿ’… ಚಂಸು ಪಾಟೀಲ ಎಂಬ ಯುವ ಲೇಖಕನ ತವಕ ತಲ್ಲಣಗಳ ಲೇಖನ ಸಂಗ್ರಹವಿದು ‘ಬೇಸಾಯದ ಕತಿ’. ಬಾಲಕನಾಗಿದ್ದಾಗ ಶಾಲೆಯಲ್ಲಿ ಇದ್ದಾಗಲೇ ಕವಿತೆ ಬರೆದ ಪಾಟೀಲ ಎಂಬತ್ತು-ತೊಂಬತ್ತರ ದಶಕದಲ್ಲಿ ಕನ್ನಡದ ಪ್ರಮುಖ ಬರಹಗಾರರನ್ನು ಓದಿ ಕೊಂಡಿದ್ದ ಕವಿ ಹೃದಯಿಗೆ ತಮ್ಮ ತಂದೆ ಆಧುನಿಕ ಕೃಷಿ ಪದ್ದತಿಯಿಂದ ಸಾಲದ ಸುಳಿಯಲ್ಲಿ ಬಿದ್ದು ವಿಲವಿಲ ಒದ್ದಾಡುವುದು ಕಂಡು ತಲ್ಲಣಿಸಿ ಹೋಗುತ್ತಾನೆ. ತನ್ನಜ್ಜನ ಪಾರಂಪರಿಕ(ಕೃಷಿ) ಕಮತದಿಂದ ನಿರುಮ್ಮಳವಾಗಿದ್ದು ಕಂಡ ಈ ತರುಣನಿಗೆ ತಾನು ಪಾರಂಪರಿಕ ಕಮತಕ್ಕೆ ಇಳಿದು ತನ್ನಪ್ಪನನ್ನು ಸಾಲದ ಸುಳಿಯಿಂದ ಹೊರತರಲು ಯತ್ನಿಸುತ್ತಾನೆ. ಇನ್ನು ಓದು ಓದಿಸುವೆ ಯಾವುದಾದರೂ ಕೆಲಸ ಹಿಡಿದು ಸುಖವಾಗಿರು ಎನ್ನುವ ತಂದೆ..!ಆದರೆ ನಿರಂತರ ಪರಿಶ್ರಮ, ಪ್ರಯತ್ನ ಮತ್ತು ಅಚಲವಾದ ಆತ್ಮವಿಶ್ವಾಸವೇ ಕೃಷಿ, ಇಂಥ ಕೃಷಿಯಿಂದಲೇ ಮೊದಲಾದದ್ದು ನಾಗರೀಕತೆ, ಸಂಸ್ಕೃತಿ ಇತ್ಯಾದಿ, ಹಾಗಾಗಿಯೇ ಕೃಷಿಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆವೆನ್ನುವ ಚಂಸು. ಕೃಷಿ ಹೊರತುಪಡಿಸಿದ ಸಂಸ್ಕೃತಿ ಪ್ರೇತವೆನ್ನುವ ಚಂಸುನು ಕೃಷಿಯಲ್ಲೇ ಉಜ್ವಲ ಮತ್ತು ಅರ್ಥಪೂರ್ಣ ಬದುಕು ಕಾಣಲು ಹಂಬಲಿಸಿ ಆ ಪ್ರಯತ್ನದಲ್ಲಿ ಸಫಲನೂ ಆಗುತ್ತಾನೆ..! ಸಂಸ್ಕೃತಿಯನ್ನು ಹೊರತುಪಡಿಸಿದ ಕೃಷಿ ಹೆಣಭಾರವೆನ್ನುವ ರೈತಕವಿ ಚಂಸು..! ಅಂದಂತೆಯೇಈಗ ಆಗಿರುವುದು ಹೀಗೆಯೇ.ಇಪ್ಪತ್ತು ವರ್ಷಗಳ ಹಿಂದೆ ಹೋದರೆ ಆಗ ಕೃಷಿ ಮತ್ತು ಸಂಸ್ಕೃತಿ ಯ ಸಂಬಂಧ ಅವಿನಾಭಾವ ಬಂಧವಿತ್ತು. ಅಲ್ಲಿಂದೀಚೆಗೆ ಇವೆರಡೂ ಪರಸ್ಪರ ವಿರುದ್ಧ ದಿಕ್ಕಿನತ್ತಲೇ ಸಾಗಿವೆ, ಈ ವೈರುಧ್ಯದ ಬದುಕೆ ಇವತ್ತು ನಮ್ಮ ರೈತರನ್ನು ಅಸಹಾಯಕರನ್ನಾಗಿಸಿದೆ. ಇನ್ನಿಲ್ಲದಷ್ಟು ಹತಾಶರನ್ನಾಗಿಸಿದೆ. ಶ್ರಾವಣದಿಂದ ಮಹಾನವಮಿವರಿಗಿನ ಹಬ್ಬಗಳೆಲ್ಲ ಮಣ್ಣನ್ನು ಪೂಜಿಸುವಂಥವೇ. ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣೆತ್ತು ಮಾಡಿ ಪೂಜಿಸುವುದು. ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆಯುವುದು. ಗಣಪ ಕೂಡಾ ಮಣ್ಣೆ..! ಇದು ಉಂಡುಟ್ಟು ಸಂಭ್ರಮಿಸಲಿಕ್ಕೇ ಮಾತ್ರ ಬೆಳೆದುಬಂದ ಪರಂಪರೆಯಲ್ಲ. ನಮ್ಮ ಅಡುಗೆ, ಉಡುಗೆ, ತೊಡುಗೆಗಳಿಗೆ ಬೇಕಾದ ಮೂಲ ಪದಾರ್ಥ..! ಪರಿಕರಗಳನ್ನು ಒದಗಿಸುವ ಮಣ್ಣನ್ನು ಪೂಜಿಸುವ, ಮಣ್ಣಿನ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಅರ್ಥಪೂರ್ಣ ಆಚರಣೆ. ಈ ಆಚರಣೆಗಳನ್ನು ಬಿಟ್ಟಿಲ್ಲ. ಆದರೆ, ಇಂದು ನಂಬಿಕೆಗಳಿಗೆ ಮಣ್ಣು ಕೊಟ್ಟಿದ್ದವೆಂದು ‘ಬೇಸಾಯದ ಕತಿ’ಯಲ್ಲಿ ಹೇಳುವ ಚಂಸು ಒಬ್ಬ ಮಣ್ಣಿನ ಆರಾಧಕ, ರೈತಕವಿ ಅಂತಲೇ ನನ್ನ ಅಭಿಪ್ರಾಯ ಮಾತ್ರವಲ್ಲ ಈತನನ್ನು ತೀರ ಹತ್ತಿರದಿಂದ ಕಂಡ ಬಹು ಜನರ ಅನುಭವವೂ ಆಗಿದೆ. ಇನ್ನು ಮಣ್ಣಿನ ಸಂಸ್ಕೃತಿಯಿಂದ ದೂರ ಹೋಗಿರುವ ನಗರ ಪಟ್ಟಣಗಳಲ್ಲಿ ಈ ಹಬ್ಬಗಳು ಇನ್ನೂ ವಿಜೃಂಭಣೆಯಿಂದ, ವೈಭವದಿಂದ ಜರಗುವುದನ್ನು ನೋಡಿದರೆ ಇದೆಲ್ಲ ಹಾಸ್ಯಾಸ್ಪದ ಎನ್ನಿಸುತ್ತದೆ. ನಾವು ಇವತ್ತು ಮಾಡುವುದು ಸರಿ ಎಂದಿಟ್ಟುಕೊಳ್ಳೋಣ. ಮತ್ತೇಕೆ ಬೇಕು ನಮ್ಮೀ ಮಣ್ಣಿನ ದೇವರಿಗೆ ಹೋಳಿಗೆ. ಕಡುಬು ಪಾಯಸ..? ಎಂದು ಕೇಳುವ ಚಂಸು ಅವರಿಗೂ ಮೊನೋಕ್ರೋಟೋಫಾಸೋ, ಇಮಿಡಾಕ್ಲೋರಿಫೈಡೋ, ಯೂರಿಯಾವನ್ನೊ, ಡಿಎಪಿಯನ್ನೋ ನೈವೇದ್ಯವಾಗಿ ಅರ್ಪಸಬಹುದಲ್ಲವೆಂದು ಕೇಳುತ್ತಾನೆ..! ಹೀಗೆ ಕೇಳುವ ಈತನ ಪ್ರಶ್ನೆ ನಿಜಕ್ಕೂ ವಾಸ್ತವವಾದ ಪ್ರಾಕೃತಿಕ ಬದುಕಿನ ಪ್ರಶ್ನೆಯೇ ಆಗಿದೆ. ಇಷ್ಟೆಲ್ಲಾ ತಿಳುವಳಿಕೆ ಇರುವ ವ್ಯಕ್ತಿಗೇ ದಳ್ಳಾಳಿಗಳು ಮೋಸ ಮಾಡುತ್ತಾರೆ ಅಂದರೆ ನೀವು ನಂಬಲಿಕ್ಕಿಲ್ಲ!ಆ ಮೋಸಗಾರನಿಗೆ ಮೆಟ್ಟಿನಲ್ಲಿ ಹೊಡೆದು. ಪಟ್ಟಭದ್ರ ಹಿತಾಸಕ್ತಿಗಳ ನ್ಯಾಯ ಪಂಚಾಯಿತಿಯಲ್ಲಿ ಚಂಸು ಪಾಟೀಲನು ಗೆದ್ದು ಎದ್ದು ಬಂದಿದ್ದ ರೋಮಾಂಚಮಕಾರಿ ಅಧ್ಯಾಯವನ್ನು ನೀವು ಈ ‘ಬೇಸಾಯದ ಕತಿ’ ಕೃತಿಯನ್ನು ಓದಿಯೇ ತಿಳಿಯಬೇಕು. ಹಸಿರು ಕ್ರಾಂತಿ ನಮ್ಮ ಕೃಷಿಯನ್ನು ಮಾತ್ರ ಬದಲಿಸಿಲ್ಲ. ನಮ್ಮ ಆಚಾರ-ವಿಚಾರಗಳನ್ನು ಬದಲಿಸಿದೆ. ನಮ್ಮ ಬದುಕಿನ ನಂಬಿಕೆಗಳನ್ನು ನಮಗರಿವಿಲ್ಲದಂತೆಯೇ ಬುಡಮೇಲು ಮಾಡಿದೆ. ಈ ದ್ವಂದ್ವದ ಬದುಕು. ಆಧುನಿಕತೆಯ ಅತೀ ವ್ಯಾಮೋಹವೇಯಾಗಿದೆ. ಲಾಭ ಬಡುಕರ ಲಗಾಮಿನಲ್ಲಿ ಓಡುತ್ತಿರುವ ತಂತ್ರಜ್ಞಾನದ ಸುಳಿಯಲ್ಲಿ ನಾವು ನಮ್ಮತನವನ್ನು ಕಳೆದುಕೊಂಡಿದ್ದೆವೆಂದು ಪರಿತಪಿಸುವ ಚಂಸು ನಾವು ಹಬ್ಬಕ್ಕೆ ತಂದ ಹರಿಕೆಯ ಕುರಿಗಳಾಗಿದ್ದೆವೆಂದೇ ಪರಿತಪಿಸುತ್ತಾನೆ.ಮತ್ತೆ ಮತ್ತೆ ಮಾರ್ಕೆಟ್ ನ ತಳಿರಿಗೆ ಹಾತೊರೆಯುತ್ತಲೇ ಇದ್ದವೆಂದು ಗೋಳಿಡುತ್ತಾನೆ. ರೋಹಿಣಿ ಅಥವಾ ಮೃಗಶಿರಾ ಮಳೆ ಆಯಿತೆಂದರೆ ಮೆಣಸಿನ ಅಗಿ ಹಚ್ಚುವ ಹೊಲಕ್ಕೆ ಈರುಳ್ಳಿ ಚೆಲ್ಲಿ ಎರಡು ಎರಡೂವರೆ ಅಡಿ ಅಂತರದಲಿ ಸಾಲು ಎಬ್ಬಿಸುತ್ತಿದ್ದರು. ಅರಿದ್ರಾ ಮಳೆ ಬರುವಷ್ಟರಲ್ಲಿ ಎರಡು ದೊಡ್ಡ ಮಳೆ ಬಂದಿರೋದು ಭೂಮಿಯೂ ತಂಪಾಗಿ ವಾತಾವರಣದಲ್ಲಿ ತಂಪು ಸೂಸುತ್ತಿರುವ ಸಮಯವದು. ಜುಲೈ ತಿಂಗಳಿಗೆ ಆಗಲೇ ಮುಂಗಾರು ಆರಂಭವಾಗಿ ಪೂರ್ವಾಭಿಮುಖವಾಗಿ ಚಲಿಸುವ ನೈರುತ್ಯ ಮಾರುತದ ಮೋಡಗಳ ಪರಿಣಾಮ ದಿನಗಳಲ್ಲಿ ಆಗಾಗ ಮಳೆ ಸೆಳಕುಗಳು ಓಡಾಡುತ್ತಲೇ ಇರುತ್ತಿದ್ದವು. ಗಿಡ ಹಚ್ಚಲು ಇದು ಸೂಕ್ತ ಕಾಲ. ‘ಆದ್ರಿ ಮಳೆಗೆ ಹಚ್ಚಿದರೆ ಆರು ಕಾಯಿ ಹೆಚ್ಚು’ ಎಂಬ ಗಾದೇನೇ ಇದೆ .ಅರಿದ್ರಾ ಮಳೆ ಶುರುವಾಗುತ್ತಲೆ ಈರುಳ್ಳಿ ಚೆಲ್ಲಿದ ಹೊಲಕ್ಕೆ ಮೆಣಸಿನ ಕಾಯಿ ಅಗಿ ಹಚ್ಚುತ್ತಿದ್ದರು ಆಗ ಮತ್ತೇ ಆ ಹೊಲಕ್ಕೆ ಹುಬ್ಬಿ ಮಳೆ ಬಂದಾಗ ಸಣ್ಣ ಹತ್ತಿ ಅಂದರೆ ನಮ್ಮ ದೇಸಿ ಜೈಧರ ಹತ್ತಿ ಬೀಜ ಊರುತ್ತಿದ್ದರು. ಹೀಗೆ ಒಂದೇ ಹೊಲದಲ್ಲಿ ಬೇರೆ ಬೇರೆ ಕಾಲಮಾನಕ್ಕೆ ಮತ್ತು ಹವಾಮಾನಕ್ಕೆ ಬೆಳೆವ ಪ್ರಮುಖ ಮೂರು ಬೆಳೆಗಳನ್ನು ಅವರು ಅಂದರೆ ನಮ್ಮ ಹಿರಿಕರು ಬೆಳೆಯುತ್ತಿದ್ದರು. ಈಗ ಹೈಬ್ರಿಡ್ ಬಂದು ಮಿಶ್ರ ಬೆಳೆ ಹಾಳಾಯಿತು. ಹೈಬ್ರಿಡ್ ಹಾಗೂ ಬಿಟಿ ಬಂದ ಮೇಲೆ ಈ ಅಪೂರ್ವವಾದಂತಹ ಮಿಶ್ರ ಬೆಳೆ ಪದ್ದತಿಯೇ ಮೂಲೆಗುಂಪಾಯಿತು. ಏಕಬೆಳೆ ಪದ್ದತಿಯೇ ಸಾರ್ವಭೌಮವಾಯಿತು. ಬಂದರೆ ಸರಿ ಇಲ್ಲದಿದ್ದರೆ ಬರೆ ಬೀಳುವುದೂ ಸಾಮಾನ್ಯವಾಯಿತು ಎಂದು ರೈತಕವಿ ಚಂಸು ಪರಿತಪಿಸುತ್ತಾನೆ. ನಲವತ್ತು ವರ್ಷಗಳ ಹಿಂದೆ ಸುರುವಾದ ಬಾವಿ ನೀರಾವರಿಯ ಸಂದರ್ಭದಲ್ಲಿಯೇ ಹಸಿರು ಕ್ರಾಂತಿಯ ಘೋಷಣೆ ಮೊಳಗಿತು. ಆಗ ನನ್ನೂರಲ್ಲಿ ಸುಮಾರು ಇಪ್ಪತ್ತು-ಇಪ್ಪತ್ತೈದು ಬಾವಿಗಳಿದ್ದವು. ಆರಂಭದಲ್ಲಿ ಬಾವಿ ತುಂಬ ನೀರು ಇರುತ್ತಿತ್ತು. ಹಗಲಿಡೀ ವಿದ್ಯುತ್ ಇರುತ್ತಿತ್ತು. ಹೊಲಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತಿದ್ದವು. ಸಂಜೆಗೆ ಬಾವಿ ಖಾಲಿಯಾದರೂ ಬೆಳಕು ಹರಿಯುವಷ್ಟರಲ್ಲಿ ಬಾವಿಗಳು ತುಂಬಿಕೊಳ್ಳುತ್ತಿದ್ದವುವೆನ್ನುವ ಚಂಸುನ ಈ ಮಾತು ಬರೀ ಚಂಸು ಊರಿಗೆ ಮಾತ್ರ ಸೀಮಿತವಾಗಿಲ್ಲ. ಕೃಷಿವೆನ್ನುದು ಎಲ್ಲಿದೆಯೋ ಅಲ್ಲಲ್ಲಿಲ್ಲೆಲ್ಲಾ ಸಂಬಂಧಿಸಿದ್ದೇಯಾಗಿದೆ. ಹಸಿರು ಕ್ರಾಂತಿ ಅಥವಾ ಆಧುನಿಕ ಕೃಷಿ ಅಮೇರಿಕೆಯ ಕುರುಡು ಅನುಕರಣೆಯೇ ಹೊರತು ಅದರಲ್ಲಿ ಬೇರೆ ಹುರುಳಿಲ್ಲ ಎಂಬುವುದ್ದಕ್ಕೆ ಇವತ್ತು ಪ್ರತಿ ದಿನವೂ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗಳೇ ಸಾಕ್ಷಿ. ಹಸಿರು ಕ್ರಾಂತಿಯನ್ನು ಜಾರಿಗೊಳಿಸುವಾಗ ಆದನ್ನು ಕನಿಷ್ಟ ನಮ್ಮತನಕ್ಕೆ ಹಾಗೂ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹೇಗೆ ಕಾರ್ಯಗತಗೊಳಿಸಬಹುದೆಂಬ ಕುರಿತು ಯೋಚಿಸಿ ಬೇಕಿತ್ತು.ಸಾವಿರ ಶತಮಾನಗಳ ಕೃಷಿ ಪರಂಪರೆಯ ನಾಡು ನಮ್ಮದು ಎಂಬ ಸಂಗತಿಯಾದರೂ ನೆನಪಿಗೆ ಬರಬೇಕಿತ್ತು. ಪರಿಸರ ನೈರ್ಮಲ್ಯ. ಜಲ ಸಂರಕ್ಷಣೆ. ಅರಣ್ಯ ರಕ್ಷಣೆಯ ಜೊತೆ ಜೊತೆಗೇನೇ ಕೃಷಿಯಲ್ಲಿ ಹೆಚ್ಚು ಇಳುವರಿಯ ಪಡೆಯುವ ಸಾದ್ಯತೆಗಳನ್ನು ಕಂಡುಕೊಳ್ಳಬಹುದಿತ್ತು. ಇವತ್ತು ದೇಶಕ್ಕೆ ಆಹಾರಭದ್ರತೆ ಇದೆ, ಆದರೆ ಅದನ್ನು ಬೆಳೆದು ಕೊಟ್ಟ ಕೃಷಿಕರ ಜೀವಕ್ಕೆ, ಜೀವನಕ್ಕೆ ಬೆಲೆ ಇಲ್ಲ ಅಂದ್ರೆ ಏನು ಅರ್ಥ? ಒಂದು ದೇಶ. ಅಲ್ಲಿನ ಸರ್ಕಾರ ಮತ್ತು ಆ ಸಮುದಾಯದ ಕೃತಘ್ನತೆಯ ವಿರಾಟ್ ಸ್ವರೂಪವಲ್ಲದೇ ಇದು ಮತ್ತೇನು..? ಎಂದು ಚಂಸು ಪಶ್ನಿಸುತ್ತಿರುವುದು ಸಕಾಲಿಕ ಸತ್ಯವೇ ಆಗಿದೆ. ಫುಕುವೋಕಾರ ‘ಒಂದು ಹುಲ್ಲಿನ ಕ್ರಾಂತಿ’ ಪ್ರಕಟವಾಗಿದ್ದು 1975ರಲ್ಲಿ. ಅದು ಕನ್ನಡಕ್ಕೆ ಬಂದಿದ್ದು 1988ರಲ್ಲಿ. ಫುಕುವೋಕಾ ಸಹಜ ಕೃಷಿಯ ಬಗ್ಗೆ ಮಾತಾಡಿ ೪೦ ವರ್ಷಗಳಾದವು. ಈ ನಲವತ್ತು ವರ್ಷಗಳ ನಂತರವೂ ನಾವು ಆಧುನಿಕ ಕೃಷಿಯನ್ನೇ ಅನಿವಾರ್ಯ ಎಂದುಕೊಂಡು, ಪ್ರಕೃತಿಗೆ ಮಾರಕವಾದ ಅದನ್ನೇ ಮುಂದುವರಿಸಿಕೊಂಡು ಹೊರಟಿದ್ದೇವೆ. ಇದು ಇರುಳು ಕಂಡ ಬಾವಿಗೆ ಹಗಲು ಬಿದ್ದರೆಂಬ ಗಾದೆಯನ್ನು ನೆನಪಿಸುವಂತದಾಗಿದೆ. ಇವತ್ತಿನ ಕೃಷಿಯಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಬಹುಶಃ ಸರ್ಕಾರದ ಉದ್ದೇಶವೂ ಇದೆ ಎಂದು ಹೇಳಲಾಗುತ್ತಿದೆ. ಕಾರ್ಪೊರೇಟ್ ವಲಯದ ನಿಯಂತ್ರಣಕ್ಕೆ ಬರುವ ರೀತಿಯಲ್ಲಿ ಕೃಷಿಯನ್ನು ಬಗ್ಗಿಸಲಾಗುತ್ತಿದೆ. ಅಥವಾ ಹಿಗ್ಗಿಸಲಾಗುತ್ತಿದೆ. ಸಂಪೂರ್ಣ ಯಾಂತ್ರೀಕರಣದ ನಂತರ ಕೃಷಿಯಲ್ಲಿ ಪಾಲ್ಗೊಳ್ಳುವ ಜನಸಂಖ್ಯೆಯನ್ನು ಶೇ 25 ರೊಳಗೆ ತರುವ ಪ್ರಯತ್ನಗಳ ಕುರಿತ ವರದಿಗಳಿವೆ. ಕೃಷಿಯಿಂದ ಹೊರಬಂದ ಶೇ 40ಕ್ಕೂ ಹೆಚ್ಚು ಜನರಿಗೆ ಬೇರೆ ಬೇರೆ ವಲಯಗಳಲ್ಲಿ ಸ್ಥಿರವಾದ ಉದ್ಯೋಗಗಳ ಲಭ್ಯತೆ ಸಾದ್ಯವೆ..? ಎಂದು ಚಂಸು ಪ್ರಶ್ನಿಸುತ್ತಾನೆ. ಆಗ ಊಟದ ವೇಳೆ ಎಂದರೆ ಹಿಂದಿ ವಾರ್ತಾ ಸುರುವಾಗುವ ಸಮಯ. ಅಲ್ಲಿಗೆ ರೇಡಿಯೋ ಬಂದ್ ಮಾಡಿ ಉಂಡು ಮಲಗಿಬಿಡುತ್ತಿದ್ದೆವು.ಟಿವಿ ಬಂದ ಮೇಲೆ ಅಪ್ಪ ಅವರಿವರ ಮನೆಗೆ ಹೋಗುವುದನ್ನು ನಿಲ್ಲಿಸಿಬಿಟ್ಟ. ಯಾರಾದರೂ ಮನೆಗೆ ಬಂದರೆ ಹಾಂ ಹೂಂ ಅಷ್ಟೇ ಮಾತುಕತೆ. ಎಲ್ಲರ ಕಣ್ಣು, ಮನಸು ಟಿವಿ
ಚಂಸು ಪಾಟೀಲ ಎಂಬ ‘ರೈತಕವಿ’ Read Post »









