ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1) ವಾತ್ಸಲ್ಯ ತಾಯಿ ಸೆರಗುಅಂಬರವು ನಾಚಿತುವಾತ್ಸಲ್ಯ ಸಿರಿ. 2) ವಿಸ್ಮಿತ ಸುಖ ಕನಸು :ಕಂದಮ್ಮನ ಮೊಗದಿ :ದೇವ ವಿಸ್ಮಿತ. 3) ಚೆಲವು ಇಳೆ ಚೆಲವು :ಹಸಿರಿನ ಸಿರಿಯು,ನೆಮ್ಮದಿ ಬಿಡು. 4) ಮಧು ಮುತ್ತಿನ ಮಧು :ಮತ್ತೇರಿತು ದುಂಬಿಗೆ,ಶೃಂಗಾರ ಮಾಸ 5) ಹೃದಯ ಖಾಲಿ ಆಗಿತ್ತು :ಕನಸಿಲ್ಲದ ಮನ,ಬೆಂದ ಹೃದಯ. 6) ಸೀಮಂತ ಧರೆ ಸೀಮಂತ :ಹಕ್ಕಿಯ ಗಾನ ಸಭೆ,ನಾಚಿದ ಪ್ರಭೆ. 7) ಹೊಂಬಿಸಿಲು ಕಿರುನಗೆಯು :ಹೊಂಬಿಸಿಲು ಬಾಳಿಗೆ,ಸ್ವರ್ಗವು ಇಲ್ಲೇ. 8) ಹೂ ಬನ ಕಾವ್ಯದ ಬೀಜ :ಕವಿ ಬಿತ್ತಿ ಮನದಿ,ಹೂ ಬನ ಹಾಗೆ. 9) ಪ್ರೇಮದ ರಾಗ ಒಲವ ರಂಗು :ಮೊಗ್ಗೊಂದು ಅರಳಿತುಪ್ರೇಮದ ರಾಗ. 10) ಬಂಗಾರ ಜೀವನ ಪಾಠ :ಅರಿತು ನಡೆದಲ್ಲಿಬಾಳು ಬಂಗಾರ. *********************************

ಹಾಯ್ಕುಗಳು Read Post »

ಪುಸ್ತಕ ಸಂಗಾತಿ

ಡಾ.ಅಂಬೇಡ್ಕರ್ ವಾದದ ಆಚರಣೆ

ಪುಸ್ತಕ ಸಂಗಾತಿ ಡಾ.ಅಂಬೇಡ್ಕರ್ ವಾದದ ಆಚರಣೆ ಡಾ.ಅಂಬೇಡ್ಕರ್ ವಾದದ ಆಚರಣೆಲೇಖಕರು– ಡಾ.ಸಿ.ಜಿ.ಲಕ್ಷ್ಮೀಪತಿಪುಟಗಳು– 104ಪುಸ್ತಕದ ಬೆಲೆ– 68 ರೂಪಾಯಿಗಳುಪ್ರಕಾಶನ– ಚಾರು ಪ್ರಕಾಶನಅಡ್ರೆಸ್– # 83, ಪ್ರೈಡ್ ಪ್ಲಾಜಾ ಕಾಂಪ್ಲೆಕ್ಸ್, ಆದರ್ಶ ಕಾಲೇಜ್ ಹತ್ತಿರ, 5 ನೇ ಮುಖ್ಯ ರಸ್ತೆ. ಬೆಂಗಳೂರು. ‘ಡಾ.ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕವು,  ಮತ್ತು ಆ ಪುಸ್ತಕ ಬರೆದ ಡಾ.ಸಿ.ಜಿ.ಲಕ್ಷೀಪತಿ ಅವರ ಬಗೆಗೆ ಒಂದಿಷ್ಟು..! ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ವಿ.ಎಚ್.ಸಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು. ಕನಕಪುರದ ರೂರಲ್ ಕಾಲೇಜು, ಕನ್ನಡ ವಿಶ್ವವಿದ್ಯಾಲಯ ಹಾಗೂ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನಾನುಭವವಿದೆ. ತುಮಕೂರು ಜಿಲ್ಲೆಯ ಮಧುಗಿರಿಯ ಟಿ.ವಿ.ವಿ. ಕಾಲೇಜಿನಲ್ಲಿ ಪದವಿ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಂತರ್ ಶಿಸ್ತೀಯ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಮುಗಿಸಿದರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ‌ ಪಡೆದರು. ಅವರ ಕೃತಿಗಳೆಂದರೆ ಕ್ಯಾಸ್ಟ್ ಕೆಮಿಸ್ಟ್ರಿ, ಚಿತ್ರಲೆ ವೃಕ್ಷ (ಭಾರತದ ಲೈಂಗಿಕತೆಯ ಸಾಂಸ್ಕೃತಿಕ ಕಥನ), ಥಾಯ್  ಲ್ಯಾಂಡ್ ಎಂಬ ಮುಗುಳ್ನಗೆ (ಪ್ರವಾಸ ಕಥನ), ನಿಜ ಭ್ರಮೆಗಳ ರೂಪಕ (ಲೇಖನಗಳ ಸಂಗ್ರಹ), ಮತಾಂತರ ಸತ್ಯಾನ್ವೇಷಣೆ  (ಸಂಪಾದನೆ), ಕರ್ನಾಟಕದ ಸಮಾಜಶಾಸ್ತ್ರ (ಪಿಎಚ್ ಡಿ ಮಹಾಪ್ರಬಂಧದ ಪುಸ್ತಕ ರೂಪ), ಅಂಬೇಡ್ಕರ್ ವಾದದ ಆಚರಣೆ, ಆಧುನಿಕೋತ್ತರ ಮತ್ತು ಮಾರ್ಕ್ಸ್ ವಾದೋತ್ತರ. ಹೀಗೆಯೇ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಸಾಹಿತ್ಯದ ಕೆಲಸದ ಜೊತೆಗೇಗೆನೇ ಜೀವನ ಹೋರಾಟ ಸಾಗಿದೆ..! # ಈಗ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಕುರಿತು ಚರ್ಚಿಸೋಣ…– ದಮನಿತರ ಬಿಡುಗಡೆ ಮಾರ್ಗ ಈ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’..! ಪಾರಂಪರಿಕ ಸಮಾಜಶಾಸ್ತ್ರಜ್ಞರಿಗಿಂತ ವಿಭಿನ್ನವಾದ ಲೋಕದೃಷ್ಟಿಯಲ್ಲಿ ಆಲೋಚಿಸುವ ಚಿಂತಕರಲ್ಲಿ ಒಬ್ಬರಾದ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕ. ಮೊದಲಿಗೇ ವಿಶಿಷ್ಟವಾದ ಕೃತಿ ನೀಡುತ್ತಿರುವ ಡಾ.ಸಿ.ಜಿ.ಲಕ್ಷ್ಮೀಪತಿಯವರು ಮೊದಲಿಗೆ ಪ್ರಸಂಸಾರ್ಹರು. ಚರಿತ್ರೆಯುದ್ದಕ್ಕೂ ಮತ್ತು ಪ್ರಸ್ತುತ ಸಂದರ್ಭದಲ್ಲೂ ಶೋಷಕರ ಕಬಂಧ ಬಾಹುವಿನಲ್ಲಿ ಸಿಲುಕಿ ನಲಗುತ್ತಿರುವ ದಲಿತರು ಒಂದು ಕಡೆ. ಇನ್ನೊಂದು ಕಡೆ ಹಿಂದುಳಿದ ವರ್ಗದವರು. ಅಲ್ಲದೇ ಮಹಿಳೆಯರು, ದಮನಿತರನ್ನು ಬಿಡುಗಡೆಗೊಳಿಸಲು ಇರುವ ಏಕೈಕ ಮಾರ್ಗ ‘ಅಂಬೇಡ್ಕರ್ ವಾದದ ಕ್ರಿಯಾಚರಣೆ’ಯಾಗಿದೆ. ************************************** ಆದರೆ ಅಂಬೇಡ್ಕರ್ ವಾದದ ಆಚರಣೆಯನ್ನು ಜನರು ತಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಅನುಸರಿಸಬೇಕು ಎನ್ನುವುದಕ್ಕೆ ವಾರ್ಗಸೂಚಿಯಾಗಿಯೂ ಆಗಿದೆ ಈ ಪುಸ್ತಕ. ಅಂಬೇಡ್ಕರ್ ವಾದವು ತಾಂತ್ರಿಕವಾಗಿ ಪಠಣದ ಆಚರಣೆ ಮಾತ್ರವಾಗದೇ ಶೋಷಕರ ಅಂದರೆ ಬ್ರಾಮಣ್ಯ ಪ್ರಜ್ಞೆಯ ವಿರುದ್ಧ ಸತತವಾಗಿ ಸೆಣಸಾಡುವ ಮೂಲಕ ದಮನಿತರ ಪರವಾದ ಆಶಯಗಳನ್ನು ಈಡೇರಿಸುವಲ್ಲಿ ಮತ್ತು ಶೋಷಣೆಯಿಂದ ಬಿಡುಗಡೆಗೊಳಿಸುವಲ್ಲಿ ಅಂಬೇಡ್ಕರ್ ವಾದದ ತಿಳಿವು ಈ ಪುಸ್ತಕದಲಿದೆ ಅದರ ತಿಳುವು. ಅರವು ಮತ್ತು ಕ್ರಿಯಾಶೀಲತೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುವ ಪ್ರಣಾಳಿಕೆಯಂತಿದೆ ಈ ಅಂಬೇಡ್ಕರ್ ವಾದದ ಪುಸ್ತಕವು. ಕಿರಿದರಲ್ಲಿ ಹಿರಿದನ್ನು ಹೇಳುವ ಈ ಹೊತ್ತಿಗೆಯನ್ನು ಪ್ರತಿಯೊಬ್ಬರೂ ಓದಲೇಬೇಕಾದ ಮಹತ್ವದ ಸಂಗತಿಗಳನ್ನು ಒಳಗೊಂಡಿದೆ ಈ ಪುಸ್ತಕ. ಮನುವಾದ ಸಂಸ್ಕೃತಿಯ ಪ್ರಣೀತ ಬ್ರಾಹ್ಮಣ್ಯಶಾಹಿಯ ಆಕ್ರಮಣಕಾರಿತನವನ್ನು ಹಿಮ್ಮೆಟ್ಟಿಸುವ, ಅದರಿಂದ ಬಿಡುಗಡೆಗೊಳ್ಳುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಾದ ಒಂದು ಅಸ್ತ್ರವಾಗಬಲ್ಲದು ಎನ್ನುವುದು ಇಲ್ಲಿನ ಬರಹಗಳೆಲ್ಲವೂ ವಿವರಿಸುತ್ತವೆ. ಅಷ್ಟೇ ಅಲ್ಲದೇ ಡಾ.ಸಿ.ಜಿ.ಲಕ್ಷ್ಮೀಪತಿಯವರು ‘ಅಂಬೇಡ್ಕರ್ ವಾದದ ಆಚರಣೆ’ಯು ಮಾರ್ಷಲ್ ಆರ್ಟ್ಸ್ ಇದ್ದಹಾಗೆ. ಎದುರಾಳಿಯನ್ನು ಮಣಿಸುವಾಗ ಒಂದೇ ಒಂದು ತಂತ್ರ ಬಳಸುದಿಲ್ಲ ಅಂಬೇಡ್ಕರ್ ವಾದವು ಎಂದು ವಿವರಿಸುತ್ತಾರೆ ಡಾ.ಸಿ.ಜಿ.ಲಕ್ಷ್ಮೀಪತಿ ಅವರು. ಮೂರು ಭಾಗಗಳಲ್ಲಿ ಹರಡಿಕೊಂಡಿರುವ ಈ ಕೃತಿಯ ಮೂದಲ ಭಾಗದಲ್ಲಿ ಅಂಬೇಡ್ಕರ್ ವಾದದ ವಿವರಣೆ. ಸೈದ್ಧಾಂತಿಕತೆಯನ್ನು ವಿವರಿಸಿದರೆ ಎರಡನೇ ಭಾಗದಲ್ಲಿ ಹೆಸರಾಂತ ಚಿಂತಕರಾದ ಪಾರ್ವತೀಶ್ ಬಿಳಿದಾಳೆ ಅವರ ಹಿನ್ನುಡಿ ಇದೆ. ಸುದೀರ್ಘವಾದ ಹಿನ್ನುಡಿಯು ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಈ ಬರಹದ ಆಳ-ಅಗಲ ಮತ್ತು ವೈಶಿಷ್ಟ್ಯವನ್ನು ಬಹಳ ಗಂಭೀರವಾಗಿ ಬರೆದ ಭಾಷ್ಯವಾಗಿದೆ. ಮತ್ತೂ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಆಲೋಚನೆಯ ಮುಂದುವರಿಕೆಯೂ ಆಗಿದೆ. ಹಾಗಾಗಿ ಕೃತಿಯನ್ನು ಪ್ರತಿಯೊಬ್ಬರೂ, ಅದರಲ್ಲೂ ಯುವಜನತೆ ಓದಲೇಬೇಕಾದ ಕೃತಿಯಾಗಿದೆ. ಮೂರನೇ ಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಆಕಾಶದೆತ್ತರಕ್ಕೆ ಬೆಳೆದ, ಆಲದ ಮರದಂತೆ ಆವರಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಭವ, ಅಧ್ಯಯನದ ಅಘಾದತೆ, ಗಂಭೀರತೆ, ವಿಸ್ತಾರ, ಓದಿನ ವ್ಯಾಪಕತೆಯ ಹರವು ಎಂಥದ್ದು ಎನ್ನುವುದನ್ನು ತಿಳಿಯಪಡಿಸುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ತಮ್ಮ ಬರಹದಲ್ಲಿ ದಾಖಲಿಸಿದ ಉಲ್ಲೇಖಗಳ ಮಾಹಿತಿಯನ್ನು ನೀಡಿರುವುದು ಅವರ ಘನತೆಯನ್ನೂ ಮತ್ತಷ್ಟೂ ಹೆಚ್ಚಿಸುತ್ತದೆ..! ಎಲ್ಲರೂ ಕೊಂಡು ಓದಿ ಕ್ರಿಯಾಶೀಲ ಆಚರಣೆಗೆ ಕಿಂಚಿತ್ತಾದರೂ ತೊಡಗಿಸಿಕೊಂಡರೆ ಆ ಮೂಲಕ ಮೂಲಕ ಅಂಬೇಡ್ಕರ್ ಅವರ ತಿಳಿವಿಗೂ, ಕೃತಿಕಾರರ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಬರಹಕ್ಕೂ ಗೌರವ ತಂದಂತಾಗುತ್ತದೆ ಅಂತ ಹೇಳುತ್ತಾ ಈ ವಿಮರ್ಶಾ ಬರಹ ಮುಗಿಸುತ್ತೇನೆ… ****************************** ಕೆ.ಶಿವು.ಲಕ್ಕಣ್ಣವರ

ಡಾ.ಅಂಬೇಡ್ಕರ್ ವಾದದ ಆಚರಣೆ Read Post »

ಕಾವ್ಯಯಾನ

ಕಾಡುವ ಹಕ್ಕಿ.

ಕಾಡುವ ಹಕ್ಕಿ ಅಬ್ಳಿ,ಹೆಗಡೆ ಹಾಡು ಹಕ್ಕಿಯೊಂದು  ನಿತ್ಯಕಾಡುತಿದೆ  ‘ಹಾಡು ನೀನು’ಎಂದು.          ಗಂಟಲೊಣಗಿದರೆ         ಕಂಠನುಲಿಯದದು         ಹಾಡಲೇಗೆ ಇಂದು..?    ಮರ್ಮವರಿಯದೆ   ಧರ್ಮ,ಕರ್ಮಗಳ   ನಡುವೆ ಬಂಧಿ ನಾನು.          ಹಾರಲಾಗದಿದೆ         ಭಾರ ರೆಕ್ಕೆಯಿದೆ         ಹೊರಗೆ ಬಂದರೂನು.    ನೋವು,ಹಿಂಸೆಗಳು   ಸುತ್ತ ಕುಣಿಯುತಿವೆ   ಕೊಳ್ಳಿ ದೆವ್ವದಂತೆ.           ಹಸಿರು ಪ್ರಕ್ರತಿಯಾ          ತಂಪು,ಸೊಂಪುಗಳು          ಒಡಲ ಬೆಂಕಿಯಂತೆ.    ಹರಿವನದಿಯಂತೆ   ಬದುಕು ಸರಿಯುತಿದೆ   ಸೆಳವು ಈಜಲಾರೆ.            ಖುಷಿಯ ಬಾನಿನಲಿ           ಹಾಡಿ,ತೇಲುವದು           ಎಂತೋ…?ಹೇಳಲಾರೆ.    ಭಾವ ಬತ್ತಿಹುದುಖುಷಿಯು ಸತ್ತಿಹುದು   ಬರದು ಮಧುರಗೀತೆ.            ದುಃಖ ಉಮ್ಮಳಿಸಿ           ಬಿಕ್ಕುತ್ತ ಹಾಡಿದರೆ           ಅದುವೆ ಚರಮಗೀತೆ.     ಹಾಡುಹಕ್ಕಿಯೆ ನಿನ್ನ    ಸ್ವಚ್ಛಂಧ ಬಂಧ    ನನ್ನ ಬದುಕಿಗಿಲ್ಲ.            ಬುವಿಯಂದ ಹೀರಿ           ಬಾನಗಲ ಹಾರಿ      .    ಹಾಡೆ ಖುಷಿಯ ಸೊಲ್ಲ. ***********   

ಕಾಡುವ ಹಕ್ಕಿ. Read Post »

ಇತರೆ

ಪ್ರೇಮಪತ್ರ

ಪ್ರೇಮಪತ್ರ ಕಂಡಕ್ಟರ್ ಸೋಮು. ಕಿರುಬೆರಳಿನಂತವಳೇ,      ಅಲ್ಲಿ ಗಿಳಿಯೊಂದು ಮಾತನಾಡುತ್ತದೆ, ಆ ಮಾತು ಎಷ್ಟು ಅರ್ಥಗರ್ಭಿತವೆಂದರೆ ಮನುಷ್ಯರ ಮಾತೂ ಕೂಡ ಅಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಕಾರಣ ಅದು ಕಾಡಿನಲ್ಲಿದೆ; ನೀನು ನಾಡಿನಲ್ಲಿ ಇರುವೆ!?        ನನ್ನ ಪತ್ರದ ಪ್ರತಿ ಒಕ್ಕಣೆಯಲ್ಲೂ ಹೀಗೆ ನಿನ್ನ ಕಾಲು ಎಳೆಯದಿದ್ದರೆ ನಮ್ಮ ಪ್ರೇಮಕ್ಕೆ ಲವಲವಿಕೆಯಿರುವುದಿಲ್ಲ. ನಿನ್ನ ಮರೆತು ಗಿಳಿಯ ಸಂಗತಿ ಏಕೆ ಹೇಳಿದೆ ಎಂದು ಮುನಿಸೆ? ನಿನ್ನ ಮುನಿಸಿನಲ್ಲೂ ಒಂದು ಚೆಲುವಿದೆ. ಗಿಳಿ ಮುನಿಸಿಕೊಳ್ಳ್ದದಿದ್ದರೂ ಕೊಕ್ಕು ಮಾತ್ರ ಕೆಂಪಗಿದೆ, ನಿನಗೆ ಮುನಿಸು ಬಂದರೆ ದೇಹ ಪೂರ್ತಿ ಕೆಂಪು, ಥೇಟ್ ಬ್ಯಾಡಗಿ ಮೆಣಸಿನಕಾಯಿ ಥರ! ಆ ಖಾರದ ರುಚಿಯ ಸವಿಯಲು ನಾನು ಕಾತರನಾಗಿರುವೆ. ಅದು ಸರಿ, ಮೊನ್ನೆ ದೇವಸ್ಥಾನದಲ್ಲಿ ಕಂಡ ನೀನು ಇದ್ದಕ್ಕಿದ್ದ ಹಾಗೆ ಎಲ್ಲಿ ಮಾಯವಾಗಿ ಹೋದೆ ಹುಡುಗಿ, ನಾನಂತೂ ಎಲ್ಲಾ ಕಂಬಗಳ ಸುತ್ತೀ ಸುತ್ತೀ ಸಾಕಾಯ್ತು. ಜೊತೆಗೆ ಬಂದವನು ನನ್ನ ಅಳಿಯ ಇರಬೇಕು ನನ್ನನ್ನೇ ದುರುಗುಟ್ಟಿಕೊಂಡು ನೋಡ್ತಾ ಇದ್ದ. ನಿನ್ನ ಲಂಗ ದಾವಣಿ ಮೇಲಾಣೆ ಅವನು ಕೈಗೆ ಸಿಕ್ಕಿದ್ದಿದ್ದರೆ ದೇವರಿಗೆ ನೈವೇದ್ಯ ಮಾಡಿಬಿಡುತ್ತಿದ್ದೆ. ಅವನೇ ಅಲ್ಲವೇ ನಾನು ನಿನಗೆ ಬರೆದ ಮೊದಲ ಪತ್ರವನ್ನು ನಿನ್ನ ಅಪ್ಪನಿಗೆ ಕೊಟ್ಟದ್ದು, ಐಸ್ ಕ್ರೀಮ್ ಪಾರ್ಲರ್ ನಲ್ಲಿ ನಾವಿಬ್ಬರೇ ಇದ್ದದ್ದನ್ನ ಕದ್ದು ನೋಡಿ ನಿಮ್ಮ ಅಮ್ಮನಿಗೆ ಹೇಳಿದ್ದು. ಆ ಶನಿಯೊಂದು ಇಲ್ಲ ಅಂದಿದ್ದರೆ ಇಷ್ಟು ಹೊತ್ತಿಗೆ ನಾನು ಎರಡು ಮಕ್ಕಳ ತಂದೆಯಾಗಿರುತ್ತಿದ್ದೆ. ನೀನು ಸಾಕ್ಷಾತ್ ಸತಿ ಸಾವಿತ್ರಿ ಯಾಗಿರುತ್ತಿದ್ದೆ. ಹನಿಮೂನ್ ಹಾಳಾಗಿ ಹೋಗಲಿ ಆದರ್ಶ ದಂಪತಿಗಳು ಸ್ಪರ್ಧೆಗಾದರೂ ಹೋಗಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ ನೀನು ‘ಹ್ಞೂ…’ ಅನ್ನು ನಿಮ್ಮ ಅಪ್ಪನಿಗೊಂದು ಟ್ವೀಟ್ ಬಿಸಾಕಿ ಟಾಟಾ ಮಾಡೋಣ.  ಶಾಸ್ತ್ರೋಕ್ತವಾಗಿ ಮೂರು ಗಂಟು ಹಾಕ್ತೀನಿ. ಹನಿಮೂನ್ ಗೆ ಕೆಮ್ಮಣ್ಣು ಗುಂಡಿಗೆ ಹೋಗೋಣ, ಅಲ್ಲಿಂದ ಬರುವ ಹೊತ್ತಿಗೆ ಕೆಮ್ಮಣ್ಣು ತಿನ್ನುವ ಆಸೆ ಹುಟ್ಟುವಂತೆ ಮಾಡಿರ್ತೀನಿ! ನಮ್ಮ ಲವ್ ಶುರುವಾಗಿದ್ದು ಫೇಸ್‌ಬುಕ್‌ ನಲ್ಲಿ ಹಾಗಾಗಿ ಹುಟ್ಟೋ ಮಕ್ಕಳಿಗೆ ಒಂದಕ್ಕೆ ‘ಫೇಸ್’ ಎಂದೂ, ಮತ್ತೊಂದಕ್ಕೆ’ಬುಕ್’  ಎಂದೂ ಹೆಸರಿಡೋಣ ಏನಂತೀ?! ಅವಳಿ-ಜವಳಿ ಆದವು ಅಂತ ಇಟ್ಕೋ ‘ವೈ-ಫೈ’ ಅಂತ ಹೆಸರಿಡೋಣ!        ನಿನ್ನ ಪ್ರೀತಿಯ ಕಣಕಣದಲ್ಲೂ ಅಕ್ಷರಶಃ ನಾನಿದ್ದೇನೆ ಎಂದು ನನಗೆ ಗೊತ್ತು. ನನ್ನೆಲ್ಲಾ ತಲೆಹರಟೆಗಳನ್ನು ಸಹಿಸಿಕೊಂಡು ಬಂದಿರುವ ನಿನಗೆ ಜೀ ಕನ್ನಡ ದವರಿಗೆ ಹೇಳಿ  ಕುಟುಂಬ ಅವಾರ್ಡ್ ಕೊಡಿಸ್ತೀನಿ. ನೀನು ಇತ್ತೀಚೆಗೆ ಫೇರ್ ನೆಸ್  ಕ್ರೀಮು ಬದಲಿಸಿದಂತೆ ಕಾಣುತ್ತೆ. ನಿನ್ನ ತ್ವಚೆ ಮೊದಲಿಗಿಂತಲೂ ಕೋಮಲ ಮತ್ತು ಮೃದು ; ಕಳೆದ ವೀಕೆಂಡ್ನಲ್ಲಿ ಈ ಸೌಂದರ್ಯ ರಹಸ್ಯ ನನ್ನ ಅನುಭವಕ್ಕೆ ಬಂತು ಒಂದು ಕಿಸ್ನ ಮೂಲಕ. ನೆನಪಿರಲಿ ಆ ಕ್ರೀಮಿನಲ್ಲಿ ನಾನಿದ್ದೇನೆ. ನಿನ್ನ ಮುಖದ ಕಾಂತಿಗೆ ಕಾರಣ ನಾನೆ. ಈ ಗುಟ್ಟನ್ನು ನಿನ್ನ ತಂಗಿಗೆ ಹೇಳಬೇಡ, ಹೇಳಿದರೆ ಆಗುವ ಅನಾಹುತಕ್ಕೆ ನಾನು ಕಾರಣನಲ್ಲ.        ನಿನ್ನ ಚೆಲುವು ನನ್ನಲ್ಲಿ ಕನಸುಗಳನ್ನು ಬಿತ್ತಿದೆ, ಹೊಸ ಹೊಸ ಆಸೆಗಳನ್ನು ಚಿಗುರಿಸಿದೆ, ನನ್ನನ್ನು ನಾನೇ ಮರೆಯುವಂತೆ ಮಾಡಿದೆ. ಈ ಮರೆಯುವಿಕೆಯಿಂದ  ಎಂಥಾ ಅಪಘಾತವಾಗುತ್ತಿತ್ತೆಂದರೆ, ಒಮ್ಮೆ ಬಚ್ಚಲು ಮನೆಯಿಂದ ನೇರ ರಸ್ತೆಗೆ ಬಂದು ನಿಂತ್ತಿದ್ದೇನೆ;ಟವಲ್ ಮರೆತಿರಲಿಲ್ಲ ನಿನ್ನ (?) ಪುಣ್ಯ.  ಈ ಪ್ರೀತಿಯ ಆಟದಲ್ಲಿ ಅಂತ್ಯ ಬೇಡವೇಬೇಡ, ಸೋಲು ಗೆಲುವು ಯಾವನಿಗೆ ಬೇಕು, ಇಬ್ಬರೂ ಉಸಿರಿರುವ ವರೆಗೆ ಸೆಣಸುತ್ತಿರೋಣ. ಪ್ರೀತಿಯ ಪರಾಕಾಷ್ಠೆ ಮಿಲನದಲ್ಲಿ ಅಂತ್ಯವಾಗಬಾರದು. ಬದುಕಿನ ಅನಂತ ನಡಿಗೆಯಲ್ಲಿ ಸದಾ ಜತೆಗಿರೋಣ. ಹೆಗಲಿಗೆ ಹೆಗಲು ತಾಕಿಸುತ್ತಾ ನಡೆಯೋಣ, ಕ್ಷಿತಿಜದಂಚಿನತ್ತ ಸಾಗೋಣ.      ಮತ್ತದೇ ಬಸವನಗುಡಿಯ ರಾಕ್ ಗಾರ್ಡನ್ ನ ಕಪ್ಪು ಕಲ್ಲಿನ ಮೇಲೆ ನಿನಗಾಗಿ ಕಾಯುತ್ತಿರುತ್ತೇನೆ, ಉಪ್ಪು-ಖಾರ-ಉಳಿ ಬೆರೆತ ಹುರಿಗಡಲೆಯೊಂದಿಗಿನ ನಿನ್ನ ಹಾಜರಿಗೆ ಕಾಯುತ್ತಿರುತ್ತೇನೆ, ತೆಳ್ಳಗಿನ, ಕುಳ್ಳಗಿನ ಹುಡುಗಿಗೊಂದು ಉಮ್ಮಾ… *************************************************

ಪ್ರೇಮಪತ್ರ Read Post »

ಕಾವ್ಯಯಾನ

ಕನ್ನಡಾಂಬೆ

ಕವಿತೆ ಕನ್ನಡಾಂಬೆ ಚಂದ್ರಮತಿ ಪುರುಷೋತ್ತಮ್ ಭಟ್ ಕರುನಾಡ ತಾಯೆ ಭುವನೇಶ್ವರೀ ಅಮ್ಮಾ ಕರುಣೇಶ್ವರೀಕರವ ಮುಗಿದು ಕೇಳುವೆನು ಕರುಣಿಸು ಬಾ ಕರುಣಾಮಯೀ ಬಲಗೈಯಲ್ಲಿ ದೀಪ ಹಿಡಿದ ಜ್ಞಾನದಾತೆ ಅಮ್ಮಾ ನೀನುಎಡಗೈಯಲ್ಲಿ ಪತಾಕೆ ಹಿಡಿದ ನ್ಯಾಯದೇವಿ ಅಮ್ಮಾ ನೀನು ಫಲಪುಷ್ಪ ಭರಿತಳಾಗಿ ಗಿರಿಯನೇರಿ ನಿಂತ ಅಮ್ಮಾ ನೀನುನಮ್ಮೆಲ್ಲರ ಪೊರೆಯುತಿರುವ ಅನ್ನದಾತೆ ಅಮ್ಮಾ ನೀನು ಅದೆಂಥ ಸ್ವರ್ಗ ಸುಖವು ಅಮ್ಮಾ ಜನ್ಮ ಕೊಟ್ಟ ನಿನ್ನ ಮಡಿಲುಮೇಲುಕೀಳು ಎಣಿಸದೆ ದಯಾಮಯಿಯಾದ ಅಮ್ಮಾ ನೀನು ಅದೆಷ್ಟು ಅಂದ ಚೆಂದ ನನಗೆ ನಿನ್ನ ಅಮ್ಮಾ ಎಂದು ಕೂಗಲುತನು ಮನದಲ್ಲೂ ಕನ್ನಡ ಮಿಡಿಸಿದ ಕನ್ನಡಾಂಬೆ ಅಮ್ಮಾನೀನು ದುಷ್ಟರಿಗೆ ಶಿಕ್ಷಿಸಿ ಶಿಷ್ಟರಿಗೆ ರಕ್ಷಿಸುವ ಮಹಾಮಾಯೆ ಅಮ್ಮಾ ನೀನುಹಸಿರು ಸಿರಿಯ ಸುಧೆಯ ಕೊಟ್ಪ ಶಾಂತಿದೂತೆ ಅಮ್ಮಾ ನೀನು ಮಕ್ಕಳಿಗೆ ಅಕ್ಷರದಾಹ ನೀಗಿಸುವ ಶಾರದಾಂಬೆ ಅಮ್ಮಾ ನೀನುಜಾತಿ ಕುಲ ತೊಲಗಿಸಿ ಕಣ್ತಣಿಸಿದ ಕಣ್ಮಣಿ ಕನ್ನಡಮ್ಮಾ ನೀನು ದೂಷಣೆಗೂ ಮೌನವಾಗಿ ಸಹನಶೀಲಳಾಗಿರುವೆ ಅಮ್ಮಾನೀನುಎಲ್ಲೆಡೆ ಏಕತೆಯ ಮಂತ್ರ ಬೀರಿ ಜಗನ್ಮಾತೆಯಾದೆ ಅಮ್ಮಾ ನೀನು *****************************

ಕನ್ನಡಾಂಬೆ Read Post »

ಕಾವ್ಯಯಾನ, ಗಝಲ್

ಗಜಲ್‌

ಗಜಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿ ಧಿಕ್ಕರಿಸಿದವನಿಗಾಗಿ‌ ನೆನೆಯುತ್ತಿರುವೆ ನಾನೇಕೆ ಹೀಗೆಒಂದು ನುಡಿ ಆಡದವನಿಗಾಗಿ ಕೂಗುತ್ತಿರುವೆ ನಾನೇಕೆ ಹೀಗೆ ಬರುವನೆಂದು ಪಾರಿಜಾತ ಹೂಗಳನ್ನು ಹಾಸಿದ್ದೆ ಹಾದಿಗುಂಟಒಳಗೆ ಹೆಜ್ಜೆ ಇಡದವನಿಗಾಗಿ ಕಾಯುತ್ತಿರುವೆ ನಾನೇಕೆ ಹೀಗೆ ಹೊಂಗೆ ಮರದಲ್ಲಿ ದುಂಬಿಗಳ ಚಲ್ಲಾಟ ಕಂಡು ಉದ್ವೇಗಗೊಂಡೆಇರುಳೆಲ್ಲಾ ಅವನಿಗಾಗಿ ಕನವರಿಸುತ್ತಿರುವೆ ನಾನೇಕೆ ಹೀಗೆ ಹಂದರದ ಬಳ್ಳಿಯಲಿ ತುಂಬಿ ನಲಿಯುತಿದೆ ಸಿಹಿ ಬಂಡು ಹೀರುತ್ತಾತುಟಿಗೆ ಮಧು ಹಚ್ಚದವನಿಗಾಗಿ ಭಜಿಸುತ್ತಿರುವೆ ನಾನೇಕೆ ಹೀಗೆ ಒಂಟಿ ಕೋಗಿಲೆ ವಸಂತಾಗಮಕೆ ಸಂತಸದಲಿ ಹಾಡುತಿದೆ” ಪ್ರಭೆ “ಮಿಡಿಯದ ಹೃದಯ ಮಿಲನಕ್ಕಾಗಿ ಬಯಸುತ್ತಿರುವೆ ನಾನೇಕೆ ಹೀಗೆ *************************************

ಗಜಲ್‌ Read Post »

ವಾರದ ಕವಿತೆ

ವಾರದ ಕವಿತೆ

ಹೊಸ್ತಿನ ಹಗಲು ಫಾಲ್ಗುಣ ಗೌಡ ಅಚವೆ ಬಯಲು ಗದ್ದೆಯ ಹೊಸ ಭತ್ತದ ಕದರುರೈತರ ಬೆವರ ಬಸಿಯುವ ಕಯಿಲುಕಂಬಳಕಿಂಪಿನ ಪಾಂಗಿನ ಅಮಲುಹೊಡತಲೆ ಹಗಣದ ಕವಳದ ಸಾಲುಆಚರಿಸುತಿದೆ ಹೊಸ್ತಿನ ಹಗಲು. ನೇಗಿಲ ಮೊನೆಯಲಿ ಸಸಿಬುಡ ಬೇರುಕದರಿನ ನಡುವಲಿ ಗಂಧದ ಹೂವುಮಣ್ಣಲಿ ಹುದುಗಿದ ಎರೆಹುಳ ಪಾಡುಹರಡಿದ ಗಿಣಿಗಳ ಹಾಡಿನ ಜಾಡುಆಚರಿಸುತಿದೆ ಹೊಸ್ತಿನ ಹಗಲು. ಮಣ್ಣಿನ ಬಣ್ಣದ ಮನಸಿನ ತೆವಲುಕೆಂದರಕಿ ಹೂವಿನ ಕಮಾನು ಹೊಸಿಲುಹೂಡುವ ಎತ್ತಿನ ಅಡಸಲ ಕವಲುಹೂನೀರಾಡಿದ ಹೊಸ ಭತ್ತದ ತೆನೆಗಳುಆಚರಿಸುತಿದೆ ಹೊಸ್ತಿನ ಹಗಲು. ಒಳಗಿನ ಅಕ್ಕಿಯ ಮಡಕೆಯ ಕೊರಳುಅಂಗಳದಲ್ಲಿನ ಒನಕೆಯ ಒರಳುತುಂಬಿದ ದನಗಳ ಹಟ್ಟಿಯ ಬಾಗಿಲುಮಿರಿ ಮಿರಿ ಮಿಂಚುವ ಮೋಡದ ಮುಗಿಲುಆಚರಿಸುತಿದೆ ಹೊಸ್ತಿನ ಹಗಲು. ತೆನೆಗಳ ರಾಶಿಯ ಸುಗ್ಗಿಯ ಗೊಂಡೆಮನೆ ಮನೆ ಹಿಗ್ಗುವ ಹೊಸ್ತಿನ ದಂಡೆಹೊರಟಿದೆ ದೇವರ ಪಾಲ್ಕಿಯ ಹಿಂದೆಹೊಸ ಅಕ್ಕಿಯ ಮಡಕೆಯ ಹೊತ್ತಿಹ ಮಂದೆನಿಕ್ಕಿಯಾಗಿದೆ ಹೊಸ್ತಿನ ಹಗಲು. ಭತ್ತದ ಕುತ್ರಿಯ ಸಾಲಿನ ಕನಸುಕಣಜವ ತುಂಬುವ ಸಾವಿರ ನನಸುಬಡತನ ಬಾರದ ಅನ್ನದ ಉಣಿಸುದೇವರಿಗೊಪ್ಪಿಸೋ ಧನ್ಯತೆ ಸೊಗಸುಆಚರಿಸುತ್ತಿದೆ ಹೊಸ್ತಿನ ಹಗಲು. ಬೆವರಿನ ನೆತ್ತರ ಚೆಲ್ಲಿದ ದಿನಗಳುಹಿಡಿ ಅನ್ನಕೆ ದುಡಿದಿಹ ಗೇಣಿಯ ಕೈಗಳುಮೂಲಗೇಣಿಗೆ ಕೋರ್ಟಿನ ಕರೆಗಳುಒಡೆದೀರ್ ಮನೆಗಳ ಬಿಟ್ಟಿ ಕೆಲಸದ ಅಗಳುಕಳೆದಾಚರಿಸುತಿದೆ ಹೊಸ್ತಿನ ಹಗಲು. ಆಲದ ಬಯಲಲಿ ಸೇರಿದ ಜನಗಳುದೇವಿಗೆ ಅರ್ಪಿಸಿರನ್ನದ ಅಗಳುಹೃನ್ಮನ ತುಂಬಿದ ಕೈಯನು ಮುಗಿದುಆಚರಿಸಿದರು ಹೊಸ್ತಿನ ಹಗಲು. ಉಪಾರ ಹಂಚುವ ಹೈಲಿನ ಹಿರಿಯಎಲ್ಲರೂ ಕೂಡಿಯೇ ಉಂಬರು ಬೆಳೆಯಮುಂದೆಯೂ ಬದುಕನು ಕಾಯಲು ಬೇಡುತಆಚರಿಸಿದರು ಹೊಸ್ತಿನ ಹಗಲು. ಸುಗ್ಗಿಯ ಕಾಲದ ಸಂಭ್ರಮ ನೆನಪುಕರಿಯಕ್ಕಿಯ ಹಂಚಲು ಕೂಡಿಡೋ ಮನಸುಹಬ್ಬದಿ ಬಡವರ ಹಸಿವನು ನೀಗಿಸೋಆಚರಿಸುತಿದೆ ಹೊಸ್ತಿನ ಹಗಲು ಕರಿದೇವರ ಪೂಜಿಸೋ ಧನ್ಯತೆ ಸೊಗಸುಕುಲದೇವರ ನೆನೆಯುವ ಭಕ್ತಿಯನಿಂಪುಗ್ರಾಮ ದೇವರಲಿ ಪುಡಿ ಕೇಳುವ ಹುರುಪುಆಚರಿಸುತಿದೆ ಹೊಸ್ತಿನ ಹಗಲು. ಹತ್ತರದಲ್ಲಿದೆ ಹಸುಗಳ ಬಿಚ್ಚುವ ಹಬ್ಬಹುಲಿದೇವನ ನೆನೆದು ಕಾಯುವ ಕಬ್ಬವರುಷಕೆ ಒಂದೇ ಕಚ್ಚೆ ರುಮಾಲುಆಚರಿಸುತಿದೆ ಹೊಸ್ತಿನ ಹಗಲು. ಹುಲ್ಲಿನ ಮನೆಗಳ ಹೊದಿಕೆಯ ಸಾಲುಕಂಬಳ ಮಾಡುವ ಪಾಯಸ ಗಮಲುಮನೆ ಮನೆಗೊಬ್ಬನ ಕರೆಯುವ ಕರೆಯುಆಚರಿಸುತಿದೆ ಹೊಸ್ತಿನ ಹಗಲು. ಸುಗ್ಗಿಯ ತುರಾಯಿ ಭತ್ತದ ಕದರುಒಣಗಿದ ಕೆಯ್ಯಿನ ಹುರುಪಿನ ಕೊಯ್ಲುಬಡತನ ಬದುಕಿನ ಕಷ್ಟದ ಬಯಲುಆಚರಿಸುತಿದೆ ಹೊಸ್ತಿನ ಹಗಲು. ಅಂಬಲಿ ಮಡಕೆಯ ಅಮೃತದಸಿವುಬೆಣ್ಣೆ ದೊಸೆಯ ಕಡುರುಚಿದುಸಿರುವರುಷಕೆ ಒಂದೇ ಕಚ್ಚೆ ಅರಬಿಯ ಹಾಡುದುಡಿತದ ಮೈಕಪ್ಪಿನ ಅರೆಬರೆ ಪಾಡುಮರೆಸುವ ಸಿರಿ ಹೊಸ್ತಿನ ಹಗಲು. ******************************

ವಾರದ ಕವಿತೆ Read Post »

ಕಾವ್ಯಯಾನ

ಕೊನೆ ಆಗುವ ಮೊದಲು

ಕವಿತೆ ಕೊನೆ ಆಗುವ ಮೊದಲು ಅಕ್ಷತಾ‌ ಜಗದೀಶ ಬಿಸಿಲು‌‌ ಕುದುರೆ ಬೆನ್ನತ್ತಿಓಡಿದೆ ಮನವು ಕಾಲ್ಕಿತ್ತಿಬಯಸಿದ್ದು‌ ಎಲ್ಲಿಯು ಸಿಗದೆ ಹೋಯ್ತುಕಾದ ಜೀವಕೆ ಈಗ ಸುಸ್ತಾಯ್ತು… ಕಾಲವದು‌ ಕಣ್ಮುಂದೆ ಕರಗುತಿದೆಕೈಗೆ ಸಿಲುಕದೆ ಮರೆಯಾಗುತಿದೆಎಲ್ಲವೂ ‌ಬಹುಬೇಗ ಸಾಗುತಿದೆನಾನೇಕೋ ನಿಧಾನವಾದೆನೋ ಎನಿಸುತಿದೆ……. ಎಲ್ಲೋ ಒಂದು ಸಣ್ಣ ‌ಹೊಳಪುಪದೇ ಪದೇ ಅದೇ ಹಳೆ ನೆನಪುಬಾಡಿ ಹೊಗುವ ಮೊದಲೆ ಹೂ..ಮುಡಿ ಸೇರಲಾರದ ನೋವು.. ಮರುಭೂಮಿಯಲ್ಲಿ ಕಾಣಬಹುದೇ ಒರತೆ…ಸಣ್ಣ ಆಸೆ ಇಟ್ಟು‌ ಬರೆದೆ ಈ ಕವಿತೆಕಳಿಸಿ‌ಕೊಡುವೆ ದೇವ ಈ ಬರಹ‌ ನಿನಗೆಹೊಸ‌ ಚಿಲುಮೆ ‌ಉಕ್ಕಲಿ‌ಬಾಳಿಗೆ‌ ಪೂರ್ಣವಿರಾಮ ಇಡುವ ಮೊದಲು……… *********************************************

ಕೊನೆ ಆಗುವ ಮೊದಲು Read Post »

ಕಾವ್ಯಯಾನ

ನಾನು ದೀಪ ಹಚ್ಚುತ್ತೇನೆ

ಕವಿತೆ ನಾನು ದೀಪ ಹಚ್ಚುತ್ತೇನೆ ಕಾಡಜ್ಜಿ ಮಂಜುನಾಥ ನಾನು ದೀಪ ಹಚ್ಚುತ್ತೇನೆಮನದ ಕಹಿಗಳು ದಹಿಸಿಹೋಗಲೆಂದು ನಾನು ದೀಪ ಹಚ್ಚುತ್ತೇನೆದ್ವೇಷದ ಯೋಚನೆಗಳುಸುಟ್ಟು ಹೋಗಲೆಂದು ನಾನು ದೀಪ ಹಚ್ಚುತ್ತೇನೆಪ್ರೀತಿಸುವ ಮನಗಳುಹೆಚ್ಚಾಗಲೆಂದು ನಾನು ದೀಪ ಹಚ್ಚುತ್ತೇನೆಜಾತೀಯತೆಯ ಬೀಜಗಳುನಾಶವಾಗಲೆಂದು ನಾನು ದೀಪ ಹಚ್ಚುತ್ತೇನೆಧರ್ಮದ ಹೆಸರಿನಲ್ಲಿ ನಡೆಯುವದೌರ್ಜನ್ಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಬಡವರ ಮನೆಮಗಳ ಮೇಲೆ‌ಅತ್ಯಾಚಾರ ನಿಲ್ಲಲೆಂದು‌ ನಾನು ದೀಪ ಹಚ್ಚುತ್ತೇನೆಧನಿಕರ ದುಡ್ಡಿನ ದರ್ಪಹೊಗೆಯಾಗಿ ಕರಗಲೆಂದು ನಾನು ದೀಪ ಹಚ್ಚುತ್ತೇನೆಉನ್ನತ ಶಿಕ್ಷಣ ಪಡೆದವರು ಮಾಡುವಗುಲಾಮಗಿರಿಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆನೊಂದವರಿಗೆ ನ್ಯಾಯಸಿಗಲೆಂದು ನಾನು ದೀಪ ಹಚ್ಚುತ್ತೇನೆಅತ್ಯಾಚಾರಿಗಳಿಗೆ ‌ ಶೀಘ್ರಶಿಕ್ಷೆಯಾಗಲೆಂದು ನಾನು ದೀಪ ಹಚ್ಚುತ್ತೇನೆವಿಶ್ವವಿದ್ಯಾಲಯಗಳಲ್ಲಿ ಜಾತಿಬೇರುಗಳು ನಶಿಸಿ ಹೋಗಲೆಂದು ನಾನು ದೀಪ ಹಚ್ಚುತ್ತೇನೆಶಿಕ್ಷಣವಂತರ ಭ್ರಷ್ಟಾಚಾರನಿರ್ಮೂಲನೆಯಾಗಲೆಂದು ನಾನು ದೀಪ ಹಚ್ಚುತ್ತೇನೆಧ್ವನಿ ಇಲ್ಲದವರಿಗೆಧ್ವನಿಯಾಗಲೆಂದು ನಾನು ದೀಪ ಹಚ್ಚುತ್ತೇನೆತಾಯ್ನಾಡಿಗೆ ದ್ರೋಹಬಗೆದವರುಅನಲನಿಗೆ ಆಹಾರವಾಗಲೆಂದು ನಾನು ದೀಪ ಹಚ್ಚುತ್ತೇನೆದೇಶದ ಸಂವಿಧಾನವನ್ನುಗೌರವಿಸುವವರು ಹೆಚ್ಚಾಗಲೆಂದು ನಾನು ದೀಪ ಹಚ್ಚುತ್ತೇನೆಅಜ್ಞಾನದ ಕತ್ತಲಲ್ಲಿರುವ ಜನರುಜ್ಞಾನದ ಬೆಳಕಿಗೆ ಬರಲೆಂದು ನಾನು ದೀಪ ಹಚ್ಚುತ್ತೇನೆದೀಪದ ಹೆಸರಲಿ ಮೋಸಗೈವಭ್ರಷ್ಟಾಚಾರಿಗಳು ಮಣ್ಣಾಗಲೆಂದು ನಾನು ದೀಪ ಹಚ್ಚುತ್ತೇನೆಕಾಯದ ನೋವಿನ ಗಾಯಕೆಉಪ್ಪು ಹಾಕುವರು ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಹೆಣ್ಣನ್ನು ಗೌರವಿಸುವಮನೆಗಳು ಮನಗಳು ಬೆಳಗಲೆಂದು ನಾನು ದೀಪ ಹಚ್ಚುತ್ತೇನೆಕರೋನಾ ವೈರಸ್ಜಗತ್ತಿನಿಂದ ದಹನವಾಗಲೆಂದು ********************************** .

ನಾನು ದೀಪ ಹಚ್ಚುತ್ತೇನೆ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ನೆಲದವ್ವನ ಒಡಲ ಜೀವಜಲ ಆ ಬಾವಿ ನೀರಿಗೆ ಅಷ್ಟೊಂದು ರುಚಿ. ಆಸರಾದ ಗಂಟಲಿಗರ ಆಸರೆಯೇ ಆ ಬಾವಿ. ನಮ್ಮ ಮನೆಯಿಂದ ಶಾಲೆ ತಲಪಲು ನಾಲ್ಕುಮೈಲಿಯ ಹೆಜ್ಜೆ. ನಡುದಾರಿಯಲ್ಲಿ ದೇವಸ್ಥಾನ. ಅದರ ಪಕ್ಕದಲ್ಲಿ ಈ ಬಾವಿ. ನಾನು ತುಂಬಾ ಚಿಕ್ಕವನಿದ್ದಾಗ, ನನ್ನ ಅಕ್ಕನ ಜತೆಗೆ ಶಾಲೆಗೆ ನಡೆದು ಬಾಯಾರಿದರೆ ಈ ಬಾವಿಯಿಂದ ಅಕ್ಕ ನೀರು ಸೇದುತ್ತಿದ್ದಳು. ಬಾವಿಯಾಳಕ್ಕೆ ಹಳೆಯ ಅಲ್ಯುಮಿನಿಯಮ್ ಬಿಂದಿಗೆ ಇಳಿಸಿ ನೀರು ನಿಧಾನವಾಗಿ ತುಂಬುವಾಗ ಗುಳು ಗುಳು ಶಬ್ಧ ಬಾವಿಯ ಪಾತ್ರದೊಳಗಿಂದ ಅನುರಣಿಸುವ ಶಬ್ಧ, ಬಾವಿಯ ಜತೆಗೆ ಬಿಂದಿಗೆ ಪಿಸುಮಾತಲ್ಲಿ ಸಲ್ಲಪಿಸುವಂತೆ ಆಪ್ತವೂ ನೈಜವೂ ಆಗಿತ್ತು. ತೆಂಗಿನ ಹುರಿಹಗ್ಗ ಹಿಡಿದು ಒಂದೊಂದೇ ಉಸಿರಿನ ಜತೆಗೆ ಒಂದೊಂದೇ ಕೈಯಳತೆಯಷ್ಟು ಎಳೆಯುತ್ತಾ ಬಾವಿಯ ಆಕರ್ಷಣೆಗೆ ವಿರುದ್ಧವಾಗಿ ಕೊರಳಿಗೆ ಉರುಳು ಸಿಕ್ಕಿಸಿದ ಬಿಂದಿಗೆ ಮೇಲೇರುತ್ತಿತ್ತು. ಅಕ್ಕ ಕೊಡ ಬಗ್ಗಿಸಿ ನನ್ನ ಪುಟ್ಟ ಬೊಗಸೆ ತುಂಬಾ ನೀರು ಸುರಿದಾಗ ಅವಳ ಸ್ತ್ರೀ ಸಹಜ ಪ್ರೀತಿಯೇ ಬೊಗಸೆ ತುಂಬಾ. ನೀರೂ ಅಷ್ಟೇ, ನೆಲದವ್ವನ ಒಡಲ ಜೀವ ಜಲವದು. ವೃತ್ತಾಕಾರದ ಕಟ್ಟೆ, ಬಾವಿಯ ಮುಖಪರಿಚಯ. ಬಾವಿಯೊಳಗೆ ಇಣುಕಿದರೆ, ನಿಶ್ಚಲವಾಗಿ ಶಾಂತವಾಗಿ ನೀರು, ಆಗಸಕ್ಕೂ, ಬಾವಿಯ ಒಳ ಅಂಚಿಗೂ ಕನ್ನಡಿಯಾಗುತ್ತೆ.  ಬಾವಿಯೊಳಗೆ ಇಣುಕಿದರೆ ಅದು ನಿಮಗೆ ನಿಮ್ಮದೇ ಮುಖವನ್ನು ತೋರಿಸುತ್ತದೆ, ಗಗನದ ಬಿಂಬದ ಹಿನ್ನೆಲೆಯಲ್ಲಿ. ತಿಳಿನೀರಿಗೆ ಕಡಲೇ ಗಾತ್ರದ ಕಲ್ಲೆಸೆದರೆ, ಅಷ್ಟೂ ಬಿಂಬಗಳು ವಕ್ರ ವಕ್ರವಾಗಿ, ಅಲೆಗಳ ಹಿಂದೆ ಅಲೆಯತ್ತವೆ. ಬಾವಿಯ ಇನ್ನೊಂದು ವಿಶೇಷತೆ, ಶಬ್ಧದ ಪುನರಾವರ್ತನೆ( ಇಖೋ) ಮತ್ತು ತತ್ಪರಿಣಾಮವಾಗಿ ಸ್ವರವರ್ಧನೆ. ಮಕ್ಕಳು ಬಾವಿಯ ಮುಖಕ್ಕೆ ಮುಖ ಹಚ್ಚಿ, ಹೂಂ.. ಅಂದರೆ, ಬಾವಿಯೊಳಗಿಂದ ಯಾರೋ ಹೂಂ…ಹೂಂ.. ಅಂತ ಸ್ವರಾನುಕರಣೆ ಮಾಡಿದಂತೆ, ಮಕ್ಕಳಿಗೆ ಬಾವಿಯೊಳಗೆ ರಾಕ್ಷಸ ಇದ್ದಾನೋ ಎಂಬ ಕಲ್ಪನೆ ಮೂಡಿ, ಬಾವಿಯೊಳಗಿಂದ ಕಥೆಯ ಕವಲುಗಳು ಚಿಗುರುತ್ತವೆ. ಬಾವಿಯೊಳಗೆ ನೀವು ಇಳಿದು ಮೇಲೆ ನೋಡಿದರೆ, ನಿಮಗೆ ಕಾಣಿಸುವುದು ಆಗಸದ ಒಂದು ಚಿಕ್ಕ ತುಂಡು ಮಾತ್ರ.  ಬಾವಿ ಆಳವಾಗಿದ್ದರೆ, ಬಾವಿಯೊಳಗಿಂದ ಹೊರಜಗತ್ತಿನತ್ತ ನೋಟದ ವ್ಯಾಪ್ತಿ, ನಿಮ್ಮ ಕಣ್ಣಿನ ಕ್ಷಮತೆಗಿಂತ ಹೆಚ್ಚು, ಬಾವಿಯ ಹೊರಬಾಯಿಯ ಅಳತೆಯ ಮೇಲೆಯೇ ಅವಲಂಬಿಸಿರುತ್ತೆ. ಬಾವಿಯ ಅಂಚಿನಲ್ಲಿಯೂ  ಜರಿಗಿಡಗಳಂಥಹಾ ಹತ್ತು ಹಲವು ಸಸ್ಯ ಪ್ರಬೇಧಗಳು ಬೇರಿಳಿಸಿ ಜೀವನೋತ್ಸಾಹದ ದ್ಯೋತಕವಾಗಿ ತೊನೆಯುತ್ತವೆ.  ನೀರ ಸೆಲೆಯೇ ಜೀವಸಂಕುಲದ ನೆಲೆ ಎನ್ನುವ ಪ್ರಪಂಚವದು. ಬಾವಿಯೊಳಗೆ ಅಂಚುಗಳಲ್ಲಿ ಪಾಚಿಯೂ ಬೆಳೆಯುತ್ತೆ.  ಬಾವಿಯೊಳಗೆ ಕಪ್ಪೆ, ಅದರ ಮಕ್ಕಳು ಮರಿಗಳು ಎಲ್ಲಾ ಸೇರಿ ಸುಖೀ ಸಂಸಾರ ಕಟ್ಟುತ್ತವೆ. ಬಾವಿಯಲ್ಲಿ ಜೀವಜಲದ ಒರತೆಯಿದೆಯಷ್ಟೇ. ಅದರ ಜತೆಗೇ ಬಾವಿಯಿಂದ ನೀರು ಯಾವುದೋ ಸೆರೆಯಲ್ಲಿ ಹೊರ ಹರಿಯುವ ದಾರಿಯೂ ಇದೆ. ಈ ಒಳಹರಿವು ಮತ್ತು ಹೊರ ಹರಿವಿನ ಚಲನಶೀಲತೆಯಿಂದಾಗಿ ಬಾವಿಯ ಜಲಜ್ಞಾನಸಂಗ್ರಹ ಒಂದು ಮಟ್ಟದಲ್ಲಿರುತ್ತೆ ಮತ್ತು, ನೀರು ಸದಾ ಸ್ವಚ್ಛ ನೂತನವಾಗಿರುತ್ತೆ. ಬಾವಿ ನೀರು ನೆಲದಮ್ಮನ ಮೊಲೆಹಾಲಿನಂತೆ. ಮಣ್ಣಿನ ಖನಿಜ ಸಾರಗಳು, ಅದರ ವಿಶಿಷ್ಠವಾದ ಪರಿಮಳ ನೀರಿಗೆ ರುಚಿ ಆರೋಪಿಸುತ್ತೆ. ಬಾವಿನೀರು ನಮ್ಮ ನೋಟಕ್ಕೆ ಸಿಗದ ಲಕ್ಷಾಂತರ ಜೀವಾಣುಗಳ  ಸಾಮ್ರಾಜ್ಯವೂ ಹೌದು. ಲಂಗದಾವಣಿ ತೊಟ್ಟ  ಹುಡುಗಿಯರು ಬಿಂದಿಗೆ ಹಿಡಿದು ಬಾವಿಯ ನೀರು ಕೊಂಡೊಯ್ಯಲು ಬಂದರೆ ಅದನ್ನು ನೋಡಿ ಹಳ್ಳಿಗೆ ಹಳ್ಳಿಯೇ ಗಜಲ್ ಬರೆಯುತ್ತೆ. ಬಾವಿ ಕಟ್ಟೆಯ ಸುತ್ತಮುತ್ತ, ಪ್ರಣಯಗೀತೆಗಳ ಗುಂಜಾರವ ಗುನುಗುನಿಸುತ್ತೆ. ಜತೆ ಜತೆಗೆ ಬಾವಿಯ ನೀರು ಕೊಂಡೊಯ್ಯಲು ಬಂದ ಗೃಹಿಣಿಯರು ಬಾವಿಯೊಳಗಿನ ದರ್ಪಣದಲ್ಲಿ, ಪರಸ್ಪರ ತಮ್ಮ ಭಾವವನ್ನೂ ಬಿಂಬಿಸಿ ಹಂಚಿಕೊಳ್ಳುವಾಗ ಕೆಲವೊಮ್ಮೆ ಕಣ್ಣೀರ ಬಿಂದುಗಳು, ಆನಂದ ಭಾಷ್ಪಗಳು ಬಾವಿ ನೀರಿನಲ್ಲಿ ತಂಪು ಕಾಣುತ್ತವೆ. ಬೇಂದ್ರೆಯವರ ಪುಟ್ಟ ಮಗಳು ಒಂದು ಸಂಜೆ ಬಿಂದಿಗೆ ಹಿಡಿದು, ಬಾವಿಯತ್ತ ಹೆಜ್ಜೆ ಹಾಕುವ ದೃಶ್ಯ ನೋಡಿದ ನಡಿಗೆಯ ಹೆಜ್ಜೆಯ ಗೆಜದಜೆಯ ಲಯದಂತಹಾ ” ಸಂಜೆಯ ಜಾವಿಗೆ ಹೊರಟಾಳ ಬಾವಿಗೆ” ಅಂತ ಬರೆಯುತ್ತಾರೆ!. “ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ || ಕಿರಗೀಯ ನೀರಿಗೆ | ಒದೆಯೂತ ದಾರಿಗೆ || ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ || ಏನಾರ ನಡಿಗೆ | ಯಾವೂರ ಹುಡಿಗೆ || ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||” ಬೇಂದ್ರೆಯವರ ಪದಗಳು ನಾಟ್ಯಾಂಗನೆಯ ಪದಗಳು. ಹುಡುಗಿ, ಪುಟ್ಟ ಸೀರೆಯುಟ್ಟು, ನಡೆಯೋದಲ್ಲ, ಹಾದಿಗೆ ಪುಟ್ಟ ಪಾದಗಳಿಂದ ಹಾದಿಯನ್ನು ಒದಿಯೂತ ನಡೆಯುವಾಗ, ಆಕೆಯ ಗೆಜ್ಜೆ, ಹೆಜ್ಜೆ ಮತ್ತು ನಡಿಗೆಯಲ್ಲಿ ಸಂಭ್ರಮ ಪದ್ಯವಾಗಿದೆ.  ಆಕೆ ಬಿಂದಿಗೆಯಲ್ಲಿ ಜಲತುಂಬಿ ಹಿಂತಿರುಗಿ ನಡೆಯುವ ಭಂಗಿ ಈ ಕೆಳಗಿನ ಸಾಲುಗಳು.  “ಮೂಗಿನ ನೇರಿಗೆ | ಹೊರಳೀದೆ ಊರಿಗೆ || ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ || ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ || ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ || ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ” ಪು.ತಿ.ನರಸಿಂಹಾಚಾರ್ ಅವರು ಬಾವಿಯ ಮೂಲಕ ತತ್ವದರ್ಶನ ಮಾಡುತ್ತಾರೆ. ” ಬಾಯಾರಿಕೆಯೊಳು ಬೇಯುತ ಬಂದಿತು ಬುದ್ಧಿ ಎದೆಯ ಬಾವಿಯ ಬಳಿಗೆ ಹೇರಾಳದ ಕಗ್ಗತ್ತಲ ತಳದೊಳು ಅಮೃತ ರುಚಿಯ ತಿಳಿನೀರೆಡೆಗೆ “ ತರ್ಕಿಸುವ ಮನಸ್ಸು ಚಿಂತನೆಯ ಬೆಂಕಿಯಲ್ಲಿ ಕಾದು, ಬಾಯಾರಿ ಬರುವುದು ಎದೆಯ ಬಾವಿಯ ಬಳಿಗೆ. ಕಾವ್ಯದ ಭಾಷೆಯಲ್ಲಿ, ಎದೆ ಎಂದರೆ ಭಾವ, ಕಲ್ಪನ , ಪ್ರೀತಿ. ಆ ಬಾವಿಯ ತಳದಲ್ಲಿದೆ ತಿಳಿಯಾದ ನೀರು, ತಿಳಿವಿನ ನೀರು. ಆ ಅರಿವಿಗೆ ಅಮೃತದ ರುಚಿಯಿದೆ, ಬುದ್ಧಿ ಕೆತ್ತುವ ಲಾಜಿಕ್ ನ ವಾಸ್ತುಶಿಲ್ಪಕ್ಕೆ ಆ ರುಚಿಯಿಲ್ಲ. ಗೋಪಾಲಕೃಷ್ಣ ಅಡಿಗರ ಕವನ, ‘ ಭೂತ’ ಎಂಬ ಕವನದಲ್ಲೂ ಬಾವಿ ಪ್ರತಿಮೆಯ ಅಪೂರ್ವ ಪ್ರಯೋಗವಿದೆ. “ಬಾವಿಯೊಳಗಡೆ ಕೊಳವೆ ನೀರು ; ಮೇಲಕ್ಕಾವಿ ; ಆಕಾಶದುದ್ದವೂ ಅದರ ಕಾರಣ ಬೀದಿ ; ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು ನವಮಾಸವೂ ಕಾವ ಭ್ರೂಣರೂಪಿ— ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ— ಭೂತರೂಪಕ್ಕೆ ಮಳೆ ವರ್ತಮಾನ ; ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ; ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ, ಗುಡಿಗೋಪುರಗಳ ಬಂಗಾರ ಶಿಖರ.” ಬಾವಿಯೊಳಗೆ ಭೂತಕಾಲದ ನೀರೊರತೆ, ವರ್ತಮಾನದಲ್ಲಿ ಆವಿ, ಮೋಡವಾಗಿ ಮಳೆ ಸುರಿಯುತ್ತೆ. ಕಾಲಾಂತರ ಮತ್ತು ರೂಪಾಂತರಗಳು ಸಮಾನಾಂತರವಾಗಿ ಸಂಭವಿಸುವ ಪ್ರಕ್ರಿಯೆ ಶುರುವಾಗುವುದು ಬಾವಿಯಿಂದ. ಬಾವಿಯ ಬಗ್ಗ  ಲಂಕೇಶ್ ಅವರು ಬರೆಯುವ ಈ ಸಾಲನ್ನು ಗಮನಿಸಿ! ” ಕವಿಯ ಊರಿಗೆ ಹೋದಾಗ ಅಲ್ಲಿಯ ಬಾವಿಯಲ್ಲಿ ಪಾಚಿಗಟ್ಟಿತ್ತು” ಶಿವರುದ್ರಪ್ಪನವರು ಬಾವಿಯನ್ನು ಭಾವದ ಬಾವಿಯಾಗಿ ಕಾಣುತ್ತಾರೆ. ” ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ. ದಾರಿ ನೂರಾರಿವೆ ಬೆಳಕಿನರಮನೆಗೆ! ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ; ನನಗಿಲ್ಲ, ಇದೇ ಸರಿ ಇಷ್ಟೇ ಸರಿ ಎನುವ ಪಂತ. ನಾ ಬಲ್ಲೆ, ಇವು ಎಲ್ಲ ಏರುವೆಯ ಒಂದೊಂದು ಹಂತ. ನೂರಾರು ಭಾವದ ಬಾವಿ; ಎತ್ತಿಕೋ ನಿನಗೆ ಬೇಕಾದಷ್ಟು ಸಿಹಿನೀರ. ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ? ನಮಗೆ ಬೇಕಾದದ್ದು ದಾಹ ಪರಿಹಾರ.” ನೂರಾರು ಭಾವದ ಬಾವಿಯಿಂದ ಬೇಕಾದಷ್ಟು ಸಿಹಿನೇರನ್ನು ಎತ್ತಿಕೋ. ಯಾವ ಪಾತ್ರೆಯಲ್ಲಿ ನೀರು ತುಂಬುತ್ತೇವೋ ಆ ಪಾತ್ರೆಯ ಆಕಾರ ನೀರಿನದ್ದು!. ಸಿದ್ಧಾಂತದ ಬಂಧ ಮತ್ತು ಪೂರ್ವನಿರ್ಧಾರಿತ ಆಕಾರ, ಅಂಚುಗಳು, ಚೂಪುಗಳು ಅಗತ್ಯವೇ?. ಬಾವಿಯ ನೂರು ಭಾವಗಳ ಸಿಗಿನೀರಿನ ಮೂಲ ಉದ್ದೇಶ ಆಕಾರ ಪಡೆಯುವುದೇ? ಅಥವಾ ದಾಹ ತಣಿಸುವುದೇ?. ಹೀಗೆ ಹಲವು ಪ್ರತಿಮೆಗಳಿಗೆ ಆಕಾರ ಕೊಡುವ ಬಾವಿಯನ್ನು ವರ್ತಮಾನದ ಕವಯಿತ್ರಿ ಸ್ಮಿತಾ ಅಮೃತರಾಜ್ ಸಂಪಾಜೆ ಅವರು ತುಂಬಾ ವಿಭಿನ್ನವಾಗಿ ಕವಿತೆಗಿಳಿಸಿದ್ದಾರೆ. **   **    **   **  ಬಾವಿ ಕಟ್ಟೆ “ಗುದ್ದಿ ಗುದ್ದಿ ಆಳಕ್ಕೆ ಅಗೆದು ಸಿಕ್ಕ ಜೀವ ಜಲಕ್ಕೆ ಅತ್ತ ಇತ್ತ ಮಿಸುಕಾಡದಂತೆ ಕಟ್ಟಿದ್ದು ಕಟ್ಟೆ. ನೆಟ್ಟ ದಿಟ್ಟಿಗೆ ಒಂದು ಹಿಡಿ ಆಗಸ ಬಿಟ್ಟರೆ ಆಕೆ ತರುವ ಕೊಡದೊಂದಿಗಷ್ಟೇ ಹೇಗೋ ಬೆಳೆದದ್ದು ನಂಟು. ಅದೆಂತಹ ಆತುರ ಬಿಂದಿಗೆಗೆ ಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾ ಹಾಗೇ ಇಳಿಬಿಡುವ ಹೊತ್ತಿಗೆ ಕೈಯ ಹಿಡಿತವನ್ನೇ ಸಡಿಲಿಸಿ ರೊಯ್ಯನೆ ಡುಬುಕಿ ಹೊಡೆದಾಗ ಕೊಡ ಸೇರಿ ಜಗತ್ತು ನೋಡುವ ಕಾತರಕ್ಕೆ ಬಾವಿಯ ಮೈ ತುಂಬಾ ಅಲೆ. ಅನ್ನಕ್ಕೆ ಸಾಂಬಾರಿಗೆ ಕಾಫಿಗೆ ಚಹಕ್ಕೆ ನೀರು ಸದ್ದಿಲ್ಲದೇ ಕಲಬೆರಕೆಯಾಗುವ ಸಂಕಟಕ್ಕೆ ಕುದಿ ಮತ್ತಷ್ಟು ಹೆಚ್ಚುತ್ತಿದೆ. ಖಾಲಿಯಾಗುವ ಖುಷಿಗೆ ಕೊಡ ಇಂಚಿಂಚೇ ಮೈ ಅಲಗಿಸಿ ಕೊಳ್ಳುತ್ತಿದೆ ಇತ್ತ ಬಾವಿ ಹೆಜ್ಜೆ ಸಪ್ಪಳಕ್ಕೆ ಕಿವಿ ತಾಗಿಸಿ ಕುಳಿತಿದೆ. ಈ ಕೊಡದ ನೀರು ಗಿಡದ ಬುಡಕ್ಕೋ ಅಡುಗೆ ಮನೆಯ ವ್ಯಂಜನಕ್ಕೋ? ಕುತೂಹಲ ತಣಿದ ದಿನ ಕಣ್ಣು ಹೊಳಪು ಕಳೆದುಕೊಂಡು ಬಿಡುತ್ತದೆ. ಮತ್ತೆ ಕೊಡ ತುಂಬಿಕೊಳ್ಳುತ್ತಿದೆ ಡುಬು ಡುಬು ಎದೆಬಡಿಯುವ ಒಡಲಾಳದ ಸದ್ದು ಎಲ್ಲಿಯದ್ದು .? ಬಿಂದಿಗೆಯದ್ದಾ..? ಬಾವಿಯದ್ದಾ..? ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ ಈ ಹೊತ್ತು .” **  **     **  ** ಬಾವಿ ತೋಡುವ ಕಠಿಣ ಕೆಲಸ ಮಾಡಿ,ಸಿಕ್ಕಿದ ನೀರು ಹೊರಗೆ ಹರಿಯಬಾರದಲ್ಲಾ. ಅದನ್ನು ಹರಿಯದಂತೆ ಬಂಧಿಸಲು ಬಾವಿಗೆ ಕಟ್ಟೆ ಕಟ್ಟಬೇಕು. ಬಾವಿ, ನೀರು, ಕಟ್ಟೆ ಇವುಗಳು ಏನನ್ನು ಪ್ರತಿನಿಧಿಸುತ್ತವೆ? ಓದುಗರಿಗೆ ಬಿಡುವೆ. ಈ ಕವಿತೆಯಲ್ಲಿ, ಬಾವಿ ಮತ್ತು ಬಿಂದಿಗೆ ಎರಡು ಪ್ರಮುಖ ಪಾತ್ರಗಳು. ಅವುಗಳು ಪರಸ್ಪರ ಸಂವಾದಿಸುತ್ತಾ ಕವಿತೆ ಸಾಗುತ್ತೆ. ಬಾವಿ ಆಗಸದತ್ತ ಕಣ್ಣು ನೆಟ್ಟರೆ ಅದಕ್ಕೆ ಕಾಣಸಿಗುವುದು ತುಂಡು ಆಗಸ ಮಾತ್ರ. ಬಾಹ್ಯಪ್ರಪಂಚಕ್ಕೆ ಅದರ ಸಂಬಂಧ ಹೊಂದಿಸುವುದು ಬಿಂದಿಗೆಯೇ. ಅಷ್ಟೇ ಪ್ರೀತಿ, ಆತುರ ಬಿಂದಿಗೆಗೆ. ಬಾವಿಯನ್ನು ಹೇಗೆ ಕಟ್ಟೆ ಬಂದಿಯಾಗಿಸಿದೆಯೋ, ಹಾಗೆಯೇ ಬಿಂದಿಗೆಯ ಕೊರಳಿಗೆ ಹಗ್ಗ ಬಿಗಿದಿದೆ. ಬಾವಿಯ ನೀರಿನ ಜತೆಗೆ ಬಿಂದಿಗೆಯ ಸಮಾಗಮ, ಪ್ರೇಮಜಲ ಸಿಂಚನ, ಸ್ಪರ್ಶದ ಪುಳಕ, ಅಲೆ ಎಲ್ಲವೂ ಇದೆ.  ಹಾಗೆ ತುಂಬಿದ ಕೊಡ, ಬಾವಿಯಿಂದ ಹೊರಬಂದ ನಂತರವೂ ಸ್ವತಂತ್ರವಲ್ಲ, ಅದರೊಳಗಿನ ನೀರು, ಅನ್ನಕ್ಕೆ, ಸಾಂಬಾರಿಗೆ ಉಪಯೋಗವಾಗುತ್ತೆ. ಇಲ್ಲಿ ಕವಯಿತ್ರಿ ‘ಕಲಬೆರಕೆ’ ಪದ ಪ್ರಯೋಗ ಮಾಡಿದ್ದಾರೆ. ನೀರಿನ ಇಚ್ಛೆ ಸಾಂಬಾರು ಆಗುವುದು ಅಂತಿಲ್ಲ. ತಿಳಿಯಾದ ನೀರು ಸಾಂಬಾರ್ ಆದಾಗ ಅದೂ ಕಲಬೆರಕೆಯೇ. ರುಚಿಹಿಡಿದ ಆಸ್ವಾದಕನಿಗೆ ಸಾಂಬಾರ್ ರುಚಿ, ತಿಳಿಯಾಗಿದ್ದ ನೀರಿನ, ಬಾವಿಯ ಫ್ರೇಮ್ ಆಫ್ ರೆಫರೆನ್ಸ್ ನಲ್ಲಿ ಅದು ಕಲಬೆರಕೆ. ಬಿಂದಿಗೆ ತುಂಬಿದ್ದ ನೀರನ್ನು ಹೊಯ್ದಂತೆ, ಖಾಲಿಯಾಗುವ ಅನುಭವ ಕೂಡಾ ಒಂದು ಅನೂಹ್ಯ  ಪ್ರಕ್ರಿಯೆಯ ಪ್ರತಿಮೆಯೇ. ಕವಿತೆಯ ಕೆಳಗಿನ ಸಾಲುಗಳು ಖಂಡಿತಾ ಹಿಂದಿ ಶಾಯರಿಗಳಲ್ಲಿ ಕಾಣಸಿಗುವ ಪಂಚ್ ಲೈನ್ ಗಳು. ” ಮತ್ತೆ ಕೊಡ ತುಂಬಿಕೊಳ್ಳುತ್ತಿದೆ ಡುಬು ಡುಬು ಎದೆಬಡಿಯುವ ಒಡಲಾಳದ ಸದ್ದು ಎಲ್ಲಿಯದ್ದು .? ಬಿಂದಿಗೆಯದ್ದಾ..? ಬಾವಿಯದ್ದಾ..? ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ ಈ ಹೊತ್ತು .” ಅಂದರೆ ಬಾವಿ, ಕೊಡ, ಬಾವಿಯೊಳಗಿನ ನೀರು, ಸಮಾನಾಂತರವಾಗಿ ನಡೆಯುವ  ಒಡಲಾಳದ ಸದ್ದು ಮತ್ತು ಎದೆ ಬಡಿತ, ಕವಿತೆಯ ಮೇಲಿನ ಅಷ್ಟೂ ಸಾಲುಗಳಿಗೆ ಒಂದು ಇತ್ಯಾತ್ಮಕ ಅರ್ಥದತ್ತ ಮಾರ್ಗ ಸೂಚಿಯಾಗುತ್ತವೆ. ಸದಾ ಹೊರಜಗತ್ತಿನತ್ತ ಸಂಬಂಧ ಬೆಳೆಸುವ ಹಂಬಲ, ಕಾತರ,ಹಸಿವು ಬಾವಿಗಿದೆ. ತಿಳಿಯಾದ ಸ್ವಂತಿಕೆ ಸಮಾಜದ ಅಳವಡಿಕೆಯಲ್ಲಿ ಕಲಬೆರಕೆಯಾಗುವ ನೋವಿದೆ. ಅದು ತನ್ನ ಇಚ್ಛೆಗೆ ವಿರುದ್ಧವಾಗಿ ನಡೆಯುವ ಅಸಹನೆಯೂ ಇದೆ. ಒಡಲಾಳದ ಪ್ರೀತಿಯನ್ನು ಬಿಂದಿಗೆಯಲ್ಲಿ ಮೊಗೆ ಮೊಗೆದು ಕೊಡುವಾಗ ತುಂಬುವ ಖುಷಿಯೂ, ಹಂಚುವಾಗಿನ ಖಾಲಿಯಾಗುವ ಸಂತೃಪ್ತಿಯೂ ಕವಿತೆಯಲ್ಲಿ ಕಾಣಿಸುತ್ತೆ.

Read Post »

You cannot copy content of this page

Scroll to Top