ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮಳೆಹಾಡು-2 ಆಶಾ ಜಗದೀಶ್ ಚಿಟಪಟ ಸದ್ದಿಗೆ ಸೋಲದ ಗುಂಡಿಗೆಇದೆಯೇ ಹೇಳು ಮಳೆ ಹನಿಯೇ… ಗೂಡಿನೊಳಗೆ ಬಚ್ಚಿಟ್ಟುಕೊಂಡಗುಬ್ಬಿ ಕಣ್ಣ ಬೆರಗು ನೀನುನೆಂದ ಗರಿಗಳ ಹರವಿ ಒಣಗಿಸಿಕೊಳ್ಳುವಾಗಕಾಡಿದ ಕಾಡುವ ನೆನಪು ನೀನುಶಂಕು ಹೊತ್ತ ಹುಳುವಿನಕೋಡು ನೀನು ಅಂಜಿಕೆ ನೀನುನಾಚಿಕೆ ನೀನು ಮೈಯ್ಯ ಪಸೆಯೂ ನೀನು ನೂರು ವರ್ಷವನ್ನೇ ಕ್ಷಣಿಕ ಎಂದುಕೊಳ್ಳುವನಮ್ಮೆದುರು ಮಳೆಗೆ ಹುಟ್ಟಿ ಸಾಯುವಹುಳುಗಳೆಷ್ಟೋ ಎಷ್ಟೊಂದು ಪಾಠಗಳಬಿಟ್ಟು ಹೋಗುತ್ತವೆ!ಮಳೆಯೇ.. ನಿನ್ನದೊಂದು ಸ್ಪರ್ಷಕ್ಕೆಬಲಿಯಾಗಲೇಂದೇ ಹುಟ್ಟು ಪಡೆಯುತ್ತವೆಮತ್ತೆ ಮತ್ತೆ ಹುಟ್ಟಿ ಸಾಯುತ್ತವೆ ನಾವು ಮಳೆಯೊಂದರ ಹನಿಯನ್ನೂಒಳಗಿಟ್ಟುಕೊಳ್ಳಲಾಗದೆ ಕುಡಿದುಹೊರ ಚೆಲ್ಲುತ್ತೇವೆ…ಆರದ ದಾಹವನ್ನು ಪೊರೆಯುತ್ತಾಮಳೆಯ ಕರೆಯುವ ವಿಧಾನವನ್ನುಮರೆಯುತ್ತೇವೆ ಮಳೆಯೇ ಈಗೊಂದು ಹಾಡನ್ನುಗುನುಗಬೇಕೆನಿಸುತ್ತಿದೆನಿನ್ನದೇ ಪಲ್ಲವಗಳ ಹಾಡೊಂದನ್ನು ಕಟ್ಟಿನಿನ್ನನ್ನು ಮುಚ್ಚಟೆಯಿಂದಕರೆಯಬೇಕೆನಿಸುತ್ತಿದೆಸೋ….. ಗುಟ್ಟುತ್ತಾ…ರಿಮಝಿಮ ತಾಳಕ್ಕೆ ಸರಿಗಟ್ಟಿ…. **********

ಕಾವ್ಯಯಾನ Read Post »

ಕಾವ್ಯಯಾನ

ನಾವು ಪ್ರಜ್ವಲಿಸಬೇಕು’

 ‘ ವಸುಂಧರಾ ಕದಲೂರು ಸೂರ್ಯನನ್ನು ನಮ್ಮಿಂದ ಬಚ್ಚಿಟ್ಟಿದ್ದಾರೆ.ನಾವಂತೂ ಕತ್ತಲಲ್ಲಿ ಕೂರುವಜಾಯಮಾನದವರಲ್ಲ, ಹುಡುಕುತ್ತೇವೆಬೆಳಕಿನ ನಾನಾಮೂಲಗಳನ್ನುನಮ್ಮ ಹಾದಿಗಳಲಿ. ನಮಗೆ ಬೆಳಕು ಬೇಕಿದೆ. ಅವರು ಬಂದೂಕು ತೋರುತ್ತಾರೆಉಸಿರು ಬಿಡಬಾರದೆಂದು ನಮಗೆಭಯವೆಂಬುದು ನಿರ್ಧಾರಕವಲ್ಲ ಕಡೆಗೆನಿರ್ಣಾಯಕವೂ ಅಲ್ಲ. ನಮಗೆ ಉತ್ತರ ಬೇಕಿದೆ. ಹಸಿದ ಬದುಕಿಗೆ ಹಳಸಿದ ಮೇಲೋಗರವೇಮೃಷ್ಟಾನ್ನ ಎಂಬ ಆಸೆಹುಟ್ಟಿಸುವಕನ್ನಕೋರರು ನಮ್ಮ ಕನಸಿನ ತಿಜೋರಿಗೆಹುಡುಕಾಡುತ್ತಾರೆ ಸದಾ ಎಚ್ಚರಿರುವನಾವು ಮಲಗುವುದಿಲ್ಲ. ನಮಗೆ ಜಾಗೃತಿ ಬೇಕಿದೆ ನಿಡುಗಾಲದ ಮೌನಕ್ಕೆ ದನಿಯ ತುಂಬುತ್ತಾ, ಅನುಗಾಲದ ನೋವಿಗೆ ಮುಲಾಮು ಹಚ್ಚುತ್ತಾಸಂತೈಸುವ ನಮ್ಮದೇ ಕೈಗಳನ್ನು ನಾವೀಗಬಲಪಡಿಸಬೇಕಿದೆ, ನಮಗೆ ನಿಯತ್ತಿನ ಹೆಗಲು ಬೇಕಿದೆ. ಮಣಭಾರದ ದುಃಖ ಮರೆತು ತೆರೆದುಕೊಳ್ಳಲುನಾವು ನಿರುಮ್ಮಳಾಗಬೇಕು. ನಮಗೆ ನ್ಯಾಯ ಬೇಕು ನಮ್ಮ ದನಿಗೆ ಕಿವಿ ಬೇಕು, ನಮಗೆ ಶಕ್ತಿ ಬೇಕು.ಸ್ವಯಂ ಪ್ರಜ್ವಲಿಸಲು ನಾವೇ ಉರಿಯಬೇಕು.ನಮಗೆ ಹೊಳೆವ ಯುಕ್ತಿ ಬೇಕಿದೆ. ********* .

ನಾವು ಪ್ರಜ್ವಲಿಸಬೇಕು’ Read Post »

ಅನುವಾದ

ಅನುವಾದ ಸಂಗಾತಿ

.ಕಠೋರ ಕಣ್ಣುಗಳು ಮೂಲ:ವಿಲಿಯಂ ಬ್ಲೇಕ್ ವಿ.ಗಣೇಶ್ ಕರಾಳ ರಾತ್ರಿಯಲಂದು ಕಾನನದ ಗರ್ಭದಲಿ ಉರಿಯುತಿಹ ನಿನ್ನ ಆ ಕಣ್ಣುಗಳ ಕಂಡು ಗಡಗಡ ನಡುಗುತ್ತ ನಿನ್ನ ಎದುರಿಸಲಾಗದೆ ಬೆದರುತ್ತ ನಾ ತೆವಳಿದೆ ಅಡಗು ತಾಣಕೆ ಆ ಉರಿಗಣ್ಣುಗಳ ಕ್ರೌರ್ಯವನು ನೋಡುತ ಕಾರ್ಗತ್ತಲಲಿ ನಾನಂದು ಕಳೆದು ಹೋಗಿದ್ದೆ. ನಿನ್ನ ಆ ಕಠೋರ ಕಣ್ಣುಗಳ ಕೆತ್ತಿದವರಾರು? ನಿನ್ನ  ವಿವಿಧಾಂಗಗಳ ಸೃಷ್ಟಿಸಿದವರಾರು? ತಾರೆಗಳ ನಾಚಿಸುವ  ತಾರಾಮಂಡಳದ ಕಳೆಯ ಕುಲುಮೆಯನೆ ತುಂಬಿಹನೆ ನಿನ್ನ ಕಣ್ಣುಗಳಲಿ? ಈ ಪರಿಯ ಉರಿಯನ್ನು ಬಡಿಬಡಿದು ಕೆತ್ತಲು ಆ ಧೈರ್ಯವೆಂತಹದು? ಅ ಶಕ್ತಿಯೆಂತಹದು? ಎಂಥ ಸಲಿಕೆ ಅದು? ಎಂಥ ಸರಪಳಿ ಅದು? ಆ ಮೆದುಳ ಕಡೆದ ಕುಲುಮೆ ಅದಾವುದು? ಎಂಥ ಅಡಿಗಲ್ಲು? ಎಂಥ ಬಿಗಿ ಹಿಡಿತವದು? ಎಂಥ ಎದೆಗಾರಿಕೆಯದು, ನಿನ್ನ ಸೃಷ್ಟಿಸಲು? ತಾರೆಗಳೆಲ್ಲವೂ ತಮ್ಮ  ಗುರಾಣಿಗಳನೆಸೆದು ತಮಗಾಗುತಿರುವ ನೋವನು ಹತ್ತಿಕ್ಕಲಾರದೆ ಸ್ವರ್ಗಕ್ಕೆ ಮುತ್ತಿಡಲು ಕಣ್ಣೀರ ಸುರಿಸುತಲಿ ನಸುನಗುತ ನಿಂತಿಹನೆ ತನ್ನ ಸೃಷ್ಟಿಯ ನೋಡಿ? ಕುರಿಮರಿಯ ಸೃಷ್ಟಿಸಿದ ಆ ಅವನ ಕೈಗಳು ನಿನ್ನನೂ ಸೃಷ್ಟಿಸಿ ಮುದದಿ ಬೀಗುತಲಿಹವೆ? Tiger Tiger Burning Bright By:William Blake

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ನೆಲ ಮುಗಿಲು ಫಾಲ್ಗುಣ ಗೌಡ ಅಚವೆ. ಗುಡ್ಡಗಳ ಮಲೆಯನ್ನು ತಬ್ಬಿ ಮಲಗಿದೆ ಬಾನುಮುಸುಕಿ ಮುದ್ದಾಡುತಿದೆ ಮಂಜು ತಾನು ಚಂದಿರನ ರಮಿಸುವ ಅಬ್ಬರದ ಕಡಲಂತೆಹಿಮ ಹೊದಿಕೆ ಹೊದೆಯುತಿದೆ ಇಳೆಯು ತಾನು ಸಂಗೀತದಾಲಾಪ ಅನುರಣಿಸುತಿದೆ ಇಲ್ಲಿಕಲೆಯ ಸಾಕ್ಷಾತ್ಕಾರ ಸಾಕಾರವಿಲ್ಲಿ ದಿಗಂತದಾಚೆಯೂ ವ್ಯಾಪಿಸಿದೆ ಅಗಸವುಅಲೆವ ನದಗಳನೇರಿ ತಾನು ಸೂರ್ಯನನು ಮರೆಸುತ್ತ ಏಕಾಂತವ ಸರಿಸಿಲೋಕಾಂತ ಸಾರಿತಿದೆ ಮರವು ತಾನು ಸಾಲು ಬೆಟ್ಟಗಳೆಲ್ಲ ನಿನ್ನಂತೆ ಕಾಣುತಿವೆಪ್ರಕೃತಿಯಂತಿಹ ನಿನ್ನ ತಬ್ಬಿ ಹಿಡಿದುಹೂಮಳೆಯ ದನಿಯಂತ ಹೂನಗೆಯು ನಿನ್ನದುಮಳೆಯುಂಟು ನಿನ್ನ ಹೆಸರಿನೊಳಗು! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬರೆಯುವ ನಿತ್ರಾಣದ ತಾಣ ನೂರುಲ್ಲಾ ತ್ಯಾಮಗೊಂಡ್ಲು ಬರೆಯುವುದೆಂದರೆ ಬಿಳಿಯಾದ ಪರ್ವತಗಳ ಮೇಲೆಹಾರುವ ಹಕ್ಕಿಗಳ ರುಜುವಲ್ಲಕೊರಳೆತ್ತಿ ಕೂಗುವ ಕೋಗಿಲೆಯ ರೆಕ್ಕೆ ಪುಕ್ಕಗಳೊಳಗಿನ ಹೇನಿನ ಕಡಿತದ ಕುರಿತು ದಾಖಲಿಸುವುದು ಪಾಡು ಹಾಡಾಗುವ ಮಣ್ಣು ಬೀಜ ಗರ್ಭದ ತಪ್ತತೆ ಆವಾಹಿಸುವುದುಹೂವು ಹಣ್ಣು ಪತ್ರ ಮಾಗಿ ಬಾಗಿ ಶಿಶಿರದಲಿ ನಡುಗಿ ಕೊರಗಿಕೊನೆಗೆ ಪತ್ಝಡ್ ನಲಿ ಉದುರುವಅದರ ಕೊನೆಯುಸಿರ ನಾದವನು ಎದೆಗಿಳಿಸುವುದು ಬರಿ ಬೆಳಗು ಬಣ್ಣಗಳ ಪದಗಳೇ ಬೇಕಿಲ್ಲಸೂರ್ಯ ಚಂದ್ರರ ಕವಿತೆಯ ಬನಿಗೆಕರುಳು ಕತ್ತರಿಸುವ ಕರಾಳ ಇರುಳ ಇಳೆಯಲಿನೆಲ-ನೊಸಲು ಪದಗಳ ನಿಟ್ಟುಸಿರುದುಮುಗುಡಬೇಕು ಕಸುಬುದಾರಿಕೆಯಲಿ ಜನಮನದ ಪ್ರಭುತ್ವದ ಮೋಹ, ದೈವಪರತೆರಂಗಸ್ಥಳದ ಪರದೆ ಹಿಂದಿನ ಗುಲಾಮಿತನವಿದ್ದಂತೆಕಲೆಗೆ ಜೀವಸೆಲೆ ,ಕೃತಜ್ಞತೆ ಇಲ್ಲವೆಂದ ಮೇಲೆಯಾವ ಕಸುಬಿನ ನೆಲೆಯೂ ಕೊಲೆಯ ತಾಣವೇ. **********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ದರ್ಪಣ ನನಗೆ ಸಾಮಾನ್ಯವಾಗಿ ಆತ್ಮಚರಿತ್ರೆ, ವೈಚಾರಿಕ ಲೇಖನ, ಚರ್ಚೆ ಇಂತಹವುಗಳನ್ನು ಓದುವುದೆಂದರೆನೇ ಬಲು ಇಷ್ಟ. ಕೆಲವೂಮ್ಮೆ ಕವಿತೆಗಳನ್ನು ಓದಿದರೂ ಅದನ್ನು ಒಂದೇ ಬಾರಿಗೆ ಓದಲಾರೆ. ಅಂದರೆ ಕವನ ಸಂಕಲನದಲ್ಲಿ ಇರುವ ಎಲ್ಲಾ ಕವಿತೆಗಳನ್ನು ಒಂದೇ ಉಸಿರಿಗೆ ಓದಲಾರೆ. ಇವನ್ನೆಲ್ಲ ಬಿಟ್ಟು ಕತೆಗಳ ವಿಷಯಕ್ಕೆ ಬಂದರೆ ನನಗೆ ಕಾದಂಬರಿಗಳಿಗಿಂತ ಸಣ್ಣ, ಸಣ್ಣ ಕತೆಗಳನ್ನು ಓದುವುದೆಂದರೆ ಬಹಳ ಇಷ್ಟ.ಅದ್ದರಿಂದ ನನ್ನಲ್ಲಿ ಬಹಳಷ್ಟು ಕಥಾಸಂಕಲನಗಳ ಸಂಗ್ರಹವೇ ಇದೆ. ಹಾಗೆ ಕಥಾಸಂಕಲನಗಳು ಇಷ್ಟವಾಗಲು ಕಾರಣ ಒಂದೇ ಓದಿನಲ್ಲಿ ನಾವು ನಮ್ಮನ್ನು ಭಿನ್ನ, ಭಿನ್ನ ಪಾತ್ರದ ಒಳಗೆ ಹೊಕ್ಕು ಹೊರ ಬರಬಹುದು ಎಂಬ ಆಶಯವೇ ಇರಬಹುದೆನೊ?  ಇಂತಹ ಒಂದು ಕಥಾಸಂಕಲನವೇ ಎನ್. ಶೈಲಜಾ ಹಾಸನ್ ಅವರ ” ದರ್ಪಣ” . ಇದರಲ್ಲಿ ಒಟ್ಟು ಹದಿನೆಂಟು ಸಣ್ಣ, ಸಣ್ಣ ಕತೆಗಳಿದ್ದು ಎಲ್ಲವೂ‌ ನಮ್ಮ ಸುತ್ತ ಮುತ್ತ ನಡೆದ ಅಥವಾ ನಡೆಯ ಬಹುದಾದ ಘಟನೆಗಳಂತೆಯೆ ಭಾಸವಾಗುತ್ತದೆ. ಈ ಕಥಾಸಂಕಲನ ಇಷ್ಟವಾಗಲು ಇರುವ‌ ಪ್ರಮುಖ ಕಾರಣ ಬರಹ ಲೋಕದಲ್ಲಿ ಸ್ತ್ರೀಯರು  ಸ್ತ್ರೀ ಶೋಷಣೆಯ ಬಗ್ಗೆಯೆ ಬರೆಯುತ್ತಾರೆ, ಅವರಿಗೆ ಪುರುಷರ ವೇದನೆ , ಅವರ ಶೋಷಣೆ ಕಣ್ಣಿಗೆ ಕಾಣುವುದಿಲ್ಲ ಎಂಬ ಅಪಾವಾದವನ್ನು ಸುಳ್ಳಾಗಿಸುವಂತೆ ಕತೆ ನಿರೂಪಿಸಿದ್ದಾರೆ. ಇವರ ಎಲ್ಲಾ ಕತೆಗಳು ಮಾನವಿಯತೆಯಾ ನೆಲೆಗಟ್ಟಿನಲ್ಲಿಯೆ ಇದೆ. ಇವರ ಕತೆಯಾ ಇನ್ನೊಂದು ವಿಶೇಷವೆಂದರೆ ಪ್ರತಿ ಕತೆಯನ್ನು ಓದುಗರ ತೀರ್ಮಾನಕ್ಕೆ ಬಿಡುತ್ತಾರೆಯೇ ಹೊರತು, ಎಲ್ಲಿಯೂ ತಾವು ತಮ್ಮ ನಿರ್ಧಾರವನ್ನು ಓದುಗರ ಮೇಲೆ ಹೇರುವುದಿಲ್ಲ. ಅಥವಾ ಇದು ಸರಿ, ಇದು ತಪ್ಪು ಎಂದು ಬೆರಳು ಮಾಡಿ ತೋರಿಸುವುದಿಲ್ಲ. ಈಗೊಂದು ಘಟನೆ ನಮ್ಮ ಸುತ್ತಮುತ್ತಲಿನಲ್ಲಿಯೆ ನೆಡೆದಿರಬಹುದೇ ಎಂಬಂತೆ ಬರೆಯುತ್ತಾರೆ. ಹಾಗಂತ ಅದು ವರದಿಯಾ ರೂಪದಲ್ಲಿ ಇರುತ್ತದೆ ಎಂದು ಕೊಂಡರೆ ನಿಮ್ಮ ಗ್ರಹಿಕೆ ತಪ್ಪಾಗುತ್ತದೆ. ಈ ಕತೆಯನ್ನು ಓದುವ ಓದುಗ ,ಓದುವುದರ ಜೊತೆಗೆ ತನ್ನ ಭಾವನೆಗಳ ಹರವಿನಲ್ಲಿಯೇ ಸಾಗುವಂತೆ ಮಾಡುವುದರಿಂದ,ಕಥಾ ಪಾತ್ರಗಳನ್ನು ನಾವು ಸ್ವತಃ ಅನುಭವಿಸಿದಂತೆಯೆ ಇರುತ್ತದೆ. ಹಾಗಂತ ಯಾವುದೇ ಉತ್ಪ್ರೇಕ್ಷೆ, ಆಶ್ಲೀಲತೆಯಾ ಬಳಕೆ ಮಾಡುವುದಿಲ್ಲ. “ತಾಯಿಯ ಕರೆ” ಎಂಬ ಕತೆಯು ಹಣದ ಹಿಂದೆ ಓಡುತ್ತಿರುವ‌ ಇಂದಿನ ಯುವ ಪೀಳಿಗೆಯವರನ್ನು ಎದುರಿಗೆ ಕೂರಿಸಿಕೊಂಡು ಬುದ್ದಿಮಾತು ಹೇಳಿದಂತೆ ಇದ್ದರೆ, ” ಬದುಕ ಪಯಣದಲ್ಲೊಂದು ಆಕಸ್ಮಿಕ” ಕತೆಯು ಇಂದಿನ ದಿನಮಾನದಲ್ಲಿದಲ್ಲಿ ನೈತಿಕ ಅಧಃಪತನಕ್ಕೆ ಒಳಗಾಗುತ್ತಿರುವ ಯುವಕರ ಮನಸ್ಸಿನ ಕೈಗನ್ನಡಿಯಂತೆಯೂ, ಜೊತೆಗೆ ಸ್ವೇಚ್ಛಾಚಾರಕ್ಕೆ ತೆತ್ತಾ ಬೆಲೆಯಂತೆ ನಿರೂಪಿಸಲಾಗಿದೆ. ಆದರೆ ಇಲ್ಲಿ ಲೇಖಕಿ ತಾವು ಒಬ್ಬ ನ್ಯಾಯದೀಶೆಯಾ ಸ್ಥಾನದಲ್ಲಿ ನಿಲ್ಲದೇ, ಕೇವಲ ಕತೆಯಾ ನಿರುಪಕಿಯಾಗಿ ಓದುಗರ ಮನ ಸೆಳೆಯುತ್ತಾರೆ. ಅತ್ಯಾಚಾರಕ್ಕೊಳಗಾದ ಮನುಜ ಎಂಬ ಹೆಣ್ಣುಮಗಳಾ ಬಾಯಲ್ಲಿ ಸಮಾಜದ ಮುಂದೆನೆ‌ ಬದುಕಿ ತೋರಿಸುತ್ತೇನೆ ಎಂದು ಹೇಳಿಸುವ ಮಾತು ನಿಜ ಜೀವನದಲ್ಲಿ ಈ ರೀತಿಯ ಆಕಸ್ಮಿಕ ಘಟನೆಯಿಂದ ವಿಚಲಿತರಾದವರಿಗೆ ಹೇಳುವ ಮಾನಸಿಕ ಸ್ಥೈರ್ಯದ ಮಾತಿನಂತೆಯೂ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಮಾತಿನಂತೆಯೂ ಇದೇ. ಇದೆ ಕತೆಯಾ ಇನ್ನೊಂದು ರೂಪದಂತಿರುವ ” ನಿಗೂಢ” ಕತೆಯು ಸ್ವೇಚ್ಛಾಚಾರಕ್ಕೆ ತೆತ್ತ ಬೆಲೆಯಂತೆ ವಿವರಿಸಲಾಗಿದೆ.  ಅಸಾಮಾನ್ಯ ತಿರುವನ್ನು ನೀಡುವಾ ” ಪಸರಿಸಿದ ಗಂಧ” ಕತೆಯಲ್ಲಿ ಲೇಖಕಿ ಕೇಳುವ ಪ್ರಶ್ನೆ ಈ ಸಮಾಜ ಗಂಡು ತಪ್ಪು ಮಾಡಿದಾಗ ಹೆಣ್ಣು ಕ್ಷಮಿಸಿ ಅವನೊಂದಿಗೆ ಬಾಳಲಿ ಎಂದು ಹೇಳುತ್ತದೆ, ಅದೇ ಹೆಣ್ಣು ತಪ್ಪು ಮಾಡಿದ್ರೆ ಗಂಡು ಕ್ಷಮಿಸಲಿ ಅಂತ ಏಕೆ ಹೇಳೊಲ್ಲಾ? ಎಡವಿದ ಕಾಲನ್ನು ತುಂಡರಿಸಿ ಬದುಕೊದು ನ್ಯಾಯವೇ? ಎಂದು ಕೇಳುವ ಪ್ರಶ್ನೆ ಎಂತಹ ಪ್ರಜ್ಞಾವಂತಿಕೆಯ ಪ್ರಶ್ನೆಯ ಜೊತೆಗೆ ಸಮಾಜದ ಮಾನೊಭಾವದಲ್ಲಿ ಆಗಬೇಕಾದ ಬದಲಾವಣೆಯಾ ಧಿಕ್ಸೂಚಿಯಂತೆ ಇದೇ. ” ಅವನು ಅವಳುಮತ್ತು ಬದುಕು” ಎಂಬ ಕತೆಯಲ್ಲಿ ಪ್ರೇಮಿಗಳಾಗಿದ್ದವರು ಮದುವೆಯಾದ ಮೇಲೆ ಹೇಗೆ ಬದಲಾಗುತ್ತಾರೆ ಎಂಬುದರ ಬಹಳ ಸೂಕ್ಷ್ಮವಾದ ವಿಶ್ಲೇಷಣೆಯಂತೆ ಇದೆ. ” ದರ್ಪಣ” ಎಂಬ ಕತೆಯು ಇಂದು ನಮಗೆ ಹೆಚ್ಚಾಗಿ ಕಾಣಸಿಗುವ ಅತ್ತೆ ಸೊಸೆ ಕಲಹಕ್ಕೆ ಬಹಳ ಸುಲಭವಾಗಿ ಪರಿಹಾರವನ್ನು ಸೂಚಿಸಿದ್ದಾರೆ. ” ತಾಯಿಯ ಕರೆ” ಕತೆಯ ಮುಂದುವರಿದ ಭಾಗದಂತಿರುವಾ ” ನಿರಾಳ” ಎಂಬ ಕತೆಯು ಆಧುನಿಕತೆ ಎಂಬ ಹೆಸರಿನಲ್ಲಿ ಹೆತ್ತಾ ಮಕ್ಕಳನ್ನೆ ಸಣ್ಣ ವಯಸ್ಸಿನಲ್ಲೇ ದೂರ ಮಾಡಿದರೆ ಅದರ ಪರಿಣಾಮವೇ ನಾವು ನಮ್ಮ ವೃದ್ಧಾಪ್ಯದಲ್ಲಿ ವೃದ್ಧಾಶ್ರಮ ಸೇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಂಬ ಆಶಯವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತಾರೆ. ಇದನ್ನು ಓದಿ ಒಂದಷ್ಟು ಜನ ಎಚ್ಚೆತ್ತು ಕೊಂಡರೆ ಅಷ್ಟು ವೃದ್ಧಾಶ್ರಮದಲ್ಲಿ ಇರುವವರ ಸಂಖ್ಯೆ ಕಡಿಮೆ ಆಗಬಹುದು. ” ಹೀಗೊಬ್ಬ ತಾಯಿ” ಎಂಬ ಕತೆಯಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುವ ಮಗನಾ ಆರೈಕೆಗೆ ಒಬ್ಬ ಒಂಟಿ ತಾಯಿ ಪಡುವ ಕಷ್ಟಗಳು ಮತ್ತು ಅಂತಹ ಮಗನನ್ನು ತಾನೆ ತನ್ನ ಕೈಯಾರೆ ಕೊಲ್ಲುವ ಪರಿಸ್ಥಿತಿಗೆ ಸಿಲುಕುವ ವಿಧಿಯಾಟದ ಚಿತ್ರಣ ಎಂತಹ ಕಲ್ಲು ಹೃದಯದವರ ಮನ ಕಲಕುವಂತೆ ಇದೇ. ಇನ್ನು ” ಚೈತ್ರ ಪಲ್ಲವಿ ಚಿಗುರಿತು” ಕತೆಯಲ್ಲಿ ಲೇಖಕಿ ‘ ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ಗಾದೆ ಮಾತು ಸುಳ್ಳು ಎಂಬುದರ ಜೊತೆ ಜೊತೆಗೆ ಸಮಾಜದ ಗೊಡ್ಡು ಸಂಪ್ರದಾಯದ ಕಟ್ಟುಪಾಡುಗಳನ್ನು ಬಿಟ್ಟು ಜೀವನಲ್ಲಿ ನವ ಚೈತ್ರ ಪಲ್ಲವಿ ಚಿಗುರಿಸಿಕ್ಕೊಳ್ಳಲು ಬೇಕಾದ ನೈತಿಕ ಬೆಂಬಲ ಮತ್ತು ಅದಕ್ಕಾಗಿ ಮಾಡುವ ಸಹಾಯ ಎರಡೂ ಅನುಕರಣಿಯಾ ಎಂಬುದನ್ನು ಒಪ್ಪುವಂತಹ ಮಾತಾಗಿದೆ.  ಇವಿಷ್ಟೇ ಅಲ್ಲದೇ ಕಥಾ ಸಂಕಲನದಲ್ಲಿ ಇರುವ ಎಲ್ಲಾ ಕತೆಗಳು ಮನೋಜ್ಞವಾಗಿರುವುದಲ್ಲದೇ ಮಾನವಿಯಾ ಮೌಲ್ಯಗಳನ್ನು ಯಾವುದೇ ಹೇರಿಕೆಯಿಲ್ಲದಂತೆ ಓದುಗರರಿಗೆ ಮಾಡಿಕೊಡುತ್ತದೆ ” ದರ್ಪಣ” ಎಂಬ ಪದದ ಅರ್ಥವೇ ಕನ್ನಡಿ . ಅಂತೆಯೇ ಈ ಕಥಾಸಂಕಲನವೂ ನಮ್ಮನಿಮ್ಮಲ್ಲರ ಜೀವನವನ್ನು ಕನ್ನಡಿಯಲ್ಲಿ ಮತ್ತೊಮ್ಮೆ ನೋಡಿಕೊಂಡಂತೆ ಭಾಸವಾಗುತ್ತದೆ. ಇದನ್ನು ಓದುವ ಖುಷಿ ನಿಮ್ಮದಾಗಲಿ.. ************ ಸಂಗೀತ ಶ್ರೀಕಾಂತ್.

ಪುಸ್ತಕ ಸಂಗಾತಿ Read Post »

ಇತರೆ

ಕಾವ್ಯ ಕುರಿತು

ಕಬ್ಬಿಗರ ಅಬ್ಬಿ-೧ ಮಹಾದೇವ ಕಾನತ್ತಿಲ ಹ್ಞಾ, ಹೀಗೆ ಬನ್ನಿ!, ತೋಟದ ಮಧ್ಯೆ ನಡೆಯೋಣ, ನೋಡಿದಿರಾ, ಎಷ್ಟೊಂದು ಹೂವು ಹಣ್ಣುಗಳು,ಈ ತೋಟದಲ್ಲಿ!. ಅಲ್ನೋಡಿ, ಗುಡ್ಡದಿಂದ ಹರಿದು ಬರುವ ನೀರ ಧಾರೆ! ತೋಟದ ಬದಿಯಲ್ಲಿ ಎತ್ತರದ ಕಲ್ಲು ಬಂಡೆಯ ತುದಿಯಿಂದ ಜಾರಿ ಧಾರೆ ಧಾರೆಯಾಗಿ ಬೀಳುತ್ತಿದೆಯಲ್ಲ, ಅದೇ ಅಬ್ಬಿ! ಇದೇನು ಸಾಧಾರಣ ಅಬ್ಬಿ ಅಂದುಕೊಂಡಿರಾ! ಇದು ಕಬ್ಬಿಗರ ಅಬ್ಬಿ..ಈ ಅಬ್ಬಿಯ ಧಾರೆಗೆ ತಲೆ ಕೊಟ್ಟು, ಎದೆ ಬಿಚ್ಚಿ ನಿಂತು ನೋಡಿ!. ನೀವೂ ಕಾವ್ಯವಾಗುತ್ತೀರಿ, ಕಾವ್ಯ ನಿಮ್ಮಿಂದ ಹರಿಯುತ್ತೆ. ‌ನೀವು ಯಾವುದು, ಕಾವ್ಯ ಯಾವುದು ಅಂತ ಬೇರ್ಪಡಿಸಲಾಗದಷ್ಟು ನೀವು ಡಿಸ್ಸಾಲ್ವ್ ಆಗುತ್ತೀರಿ.ಬೇಂದ್ರೆಅಜ್ಜ ,ಈ ಅಬ್ಬಿ ಜಲಪಾತಕ್ಕೆ ಮೈಯೊಡ್ಡಿ, “ಕುಣಿಯೋಣು ಬಾರಾ” ಅಂತ ಕುಣಿದೂ ಕುಣಿದೂ ಕವಿತೆಯಾದರು!. ಪಂಪ,ಕುಮಾರವ್ಯಾಸ, ಬಸವಣ್ಣ, ಮುದ್ದಣ, ಕುವೆಂಪು,ಅಡಿಗರೆಲ್ಲಾ,ಇದರಲ್ಲಿ ತಣ್ಣಗೆ ಮಿಂದು ಕವಿತೆಯಾದವರು. .ಹಾಗೆ ಮೀಯುತ್ತಾ, ನೀವು ಕವಿತೆಯಾಗಿ ಹರಿಯ ಬಹುದು, ಅಥವಾ, ಮಿಂದು ಬಂದು ಈ ತೋಟದಲ್ಲಿ ನಿಮಗಿಷ್ಟದ ಹಣ್ಣಿನ ಗಿಡ, ಹೂವಿನ ಬಳ್ಳಿ ನಡಬಹುದು.. ಒಮ್ಮೆ ಅಬ್ಬಿಯಲ್ಲಿ ಮಿಂದಿರಾ!, ನೀರು ಆರುವ ತನಕ ನೀವು ನೆಟ್ಟ ಗಿಡಗಳಿಂದ ಸಾಹಿತ್ಯ, ಹೂ ಹಣ್ಣಾಗಿ ಬೆಳೆಯುತ್ತೆ. ಹಲೋ! ಎಲ್ಲಿದ್ದೀರಿ, ಸರ್, ಸುಮ್ನೆ ಫಾನ್ಟಸೈಜ್ ಮಾಡಬೇಡಿ, ಮೊದಲು ಕಾವ್ಯ ಅಂದರೇನು?, ತಿಳಿಸಿ!! ಸ್ವಲ್ಪ ಇಂಗ್ಲಿಷ್ ಮಾತಾಡಿ ಮಾರ್ರೆ.. ಸರಿ, ವರ್ಡ್ಸ್‌ವರ್ತ್ ಹೀಗೆ ಹೇಳ್ತಾನೆ ನೋಡಿ ಕವಿತೆಯೆಂದರೆ.. “The spontaneous overflow of powerful feelings: it takes its origin from emotion recollected in tranquility“ ಅಂದ್ರೆ, ಸ್ವಯಂಪ್ರೇರಿತವಾಗಿ ಉಕ್ಕಿ ಹರಿದ ಭಾವನೆಗಳನ್ನು,  ಪಾಕಬರಿಸಿ, ಧ್ಯಾನಸ್ಥ ಮೌನದಲ್ಲಿ  ನೆನೆನೆನೆದು ಭಾವಪರವಶತೆಯ ಕೇಂದ್ರದಿಂದ ಸಂಗ್ರಹಿಸಿದ ಕೆನೆ!, ಅದು ಕವಿತೆ ಅಂತ. ಕವಿತೆ ಬಗ್ಗೆ Britannica ದಲ್ಲಿ ಹೀಗೆ ಬರೆದಿದ್ದಾರೆ “Poetry, literature that evokes a concentrated imaginative awareness of experience or a specific emotional response through language chosen and arranged for its meaning, sound, and rhythm”. ಕವಿತೆಯ ಮೂಲದ್ರವ್ಯ,  ಘಟನಾ ವಿಶೇಷಕ್ಕೆ , ಸೃಜನಶೀಲ ಮನಸ್ಸಿನ ಸ್ಪಂದನೆ. ನಿಜಜೀವನದಲ್ಲಿ ಸೃಜನಶೀಲ, ಸೂಕ್ಷ್ಮ ಮನಸ್ಸು ಪ್ರತಿಯೊಂದು ಘಟನೆಗೆ ಸ್ಪಂದಿಸುತ್ತೆ. ನಿಮ್ಮ ಮನಸ್ಸಲ್ಲಿ ಭಾವನಾತ್ಮಕ, ತಾತ್ವಿಕವಾದ, ರಚನಾತ್ಮಕವಾದ ಐಡಿಯಾ ಹೊಳೆದರೆ ಅದು ಕವಿತೆಯ ಬೆನ್ನೆಲುಬು. ಆ ಐಡಿಯಾವನ್ನು ನೀವು ನೇರವಾಗಿ ಹೇಳಿದರೆ ಅದು ಮಾತು,ಸಂಭಾಷಣೆ. ಅದನ್ನೇ ಒಂದು ಉಪಮೆಯ ಮೂಲಕವೋ, ಪ್ರತಿಮೆಯ ಮೂಲಕವೋ, ರೂಪಕದ ಮೂಲಕವೋ,ಸೂಕ್ಷ್ಮವಾಗಿ ಹೇಳುವುದು, ಕಾವ್ಯದ ಭಾಷೆ. ಹೀಗೆ ರೂಪುಗೊಂಡ ರಸಪಾಕವನ್ನು ಅಚ್ಚೆರೆಯಲು ಬಳಸುವ ಹಂದರ ಪದಪುಂಜಗಳು. ಪದಪುಷ್ಪದ ಹಾರವನ್ನು ಐಡಿಯಾದ ದಾರದಲ್ಲಿ ಹೆಣೆಯಬೇಕು. ಸೂಕ್ತವಾಗಿ ನವಿರಾಗಿ ಅಭಿವ್ಯಕ್ತಿಸುವ ಕುಸುರಿಯೂ ಬೇಕು. ಪದಗಳನ್ನು ಉಪಯೋಗಿಸುವಾಗ ಪದಗಳು ರಿಪೀಟ್ ಆಗದ ಹಾಗೆ ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಹಾಡಿ ಹಾಡಿ ಸಂಗೀತ, ಕುಣಿದು ಕುಣಿದು ನಾಟ್ಯ ಅಂತ ನಿಮಗೆ ತಿಳಿದದ್ದೇ. ಹಾಗೆಯೇ ಬರೆದು ಬರೆದು ಹೆಣೆದು ಹೆಣೆದು ಕಾವ್ಯ. ” _ಪದಗಳು ಸಾಲಾಗಿ ಶಿಸ್ತಲ್ಲಿ ನಿಂತರೆ ಗದ್ಯ ಗೆಜ್ಜೆ ಕಟ್ಟಿ ಹುಚ್ಚೆದ್ದು ಕುಣಿದರದು ಪದ್ಯ ವಾಚ್ಯವಾದರೆ ಗದ್ಯ ಸೂಚ್ಯವಾದರೆ ಪದ್ಯ ತೆರೆದು ಹೇಳಿ ಮುಗಿಸಿದರೆ ಗದ್ಯ ಮುಚ್ಚಿಟ್ಟು ಹೇಳಿ ಉಳಿದುದು ಪದ್ಯ ಶಬ್ದಗಳ ನಡುವಿನ ನಿಶ್ಶಬ್ದ ಪದ್ಯ” ( ಸುಮತಿ ನಿರಂಜನ, ಯಕ್ಷಲೋಕಕ್ಕೆ ಏಣಿ ಪುಸ್ತಕದಲ್ಲಿ) ಸುಮತೀಂದ್ರ ನಾಡಿಗ್ ಅವರು, ತಮ್ಮ ‘ ಕಾವ್ಯವೆಂದರೇನು’ ಎಂಬ ಪುಸ್ತಕದಲ್ಲಿ ಕವಿತೆಯ ಆತ್ಮಕಥೆ ಬರೆದಿದ್ದಾರೆ. ಕವಿತೆಗೆ ಅಗತ್ಯವಾದ, ಭಾವನೆ, ಲಯ, ಧಾಟಿ,ಧೋರಣೆ, ವ್ಯುತ್ಪತ್ತಿ, ವಸ್ತು ಪ್ರತಿರೂಪ, ಪ್ರತಿಮೆ, ಕ್ರಮಬದ್ಧತೆ ಮತ್ತು ಸೌಂದರ್ಯ, ಭಾವೋತ್ಕರ್ಷ, ರಸಾವಿಷ್ಕಾರ, ಇತ್ಯಾದಿ ಕಾವ್ಯಾಂಗಗಳಿಗೆ ಸಂವಿಧಾನ ಅದು. ಕೊನೆಗೆ ಒಂದು ಅಗತ್ಯ ಮಾತು. ರುಚಿಯಾದ ಹಲ್ವಾ ಜಗಿಯುವಾಗ, ನಾಲಿಗೆ ಹೇಗೆ ತಿರುಗುತ್ತೆ, ದವಡೆಯ ಹಲ್ಲುಗಳು ಯಾವಾಗ ದೂರ ಮತ್ತು ಯಾವಾಗ ಹತ್ತಿರ ಇತ್ಯಾದಿ ,machanism ನ್ನು ಯೋಚಿಸುತ್ತಾ ಹಲ್ವ ತಿಂದರೆ, ನಾಲಿಗೆಯನ್ನು ಹಲ್ಲು ಕಡಿಯುತ್ತೆ!. ಅದಕ್ಕೇ, ಕವಿತೆಯ ಮೂಲ ಸ್ವಭಾವ ಮತ್ತು ಸಂರಚನೆಯ ಹೋಲಿಸ್ಟಿಕ್ ಅರ್ಥ ಮನಸ್ಸಿಗಾದ ಮೇಲೆ, ಬಿಂದಾಸ್ ಆಗಿ ಕವಿತೆ ಬರೆಯಿರಿ. ಕವಿತೆಗೆ ತನ್ನನ್ನು ತಾನೇ ಬರೆಯುವಾಗ ಗೈಡ್ ಮಾಡುವ ಶಕ್ತಿಯಿದೆ. ನಿಮ್ಮ ಮನಸ್ಸಿಗೆ ಕನ್ನಡಿಯಾಗಿ ಬಿಂಬವನ್ನು ಗರ್ಭಿಸುವ ಶಕ್ತಿ ಕವಿತೆಗೆ ಸ್ವಯಂ ಇದೆ. ಬೇಕಾದದ್ದು ನಿಮ್ಮ ಅನ್-ಕಂಡಿಶನಲ್ ಸಮರ್ಪಣಾ ಭಾವ ಮಾತ್ರ. ಹಾಗಿದ್ದರೆ, ನಾವೆಲ್ಲಾ ಈ ಕಾವ್ಯದ ಅಬ್ಬಿಯಲ್ಲಿ ಸ್ವಚ್ಛಂದವಾಗಿ ಮೀಯೋಣವೇ!! **************

ಕಾವ್ಯ ಕುರಿತು Read Post »

ಕಾವ್ಯಯಾನ

ಕಾವ್ಯಯಾನ

ನೀ ಬದಲಾದರೆ ನಾಗರಾಜ್ ಹರಪನಹಳ್ಳಿ ಆಕೆ ಎದುರಾದಾಗ ಹೀಗೆಒಂದು ಪ್ರಶ್ನೆ‌ ಎಸೆದಳುನೀ ಬದಲಾದರೆ…. ನಾ‌ ಸ್ವಲ್ಪ ಹೊತ್ತು ಮಾತಾಡಲಿಲ್ಲ ಆಕೆ ಒತ್ತಾಯಿಸಿದಳುತುಟಿಗೆ ಮುತ್ತಿಟ್ಟು ಮತ್ತೆ ಕೇಳಿದಳುನೀ ಬದಲಾದರೆ ?? ದೀರ್ಘ ನಿಟ್ಟುಸಿರು ಬಿಟ್ಟೆಹಾಗೂ ಹೇಳಿದೆ ;ಕನ್ನಡಿಯ ಎದುರು ನಿಂತು ಪ್ರಶ್ನಿಸಿಕೊ ಎಂದೆ ಮತ್ತೆ ಅವಳೆಡೆಗೆ ಹೊರಳಿಕತ್ತು ಬಳಸಿ ,ಹೆರಳಿನ ಹಿಂಬಾಗಕೆ ಮುತ್ತಿಟ್ಟು ಹೇಳಿದೆ;ಸೂರ್ಯನ ಗಮನಿಸುಆಕಾಶ ಗಮನಿಸುಬಯಲ ಓದುವುದ ಕಲಿಸಮುದ್ರದ ಎದುರು ನಿಂತುಅದರ ರೋಧನವ ಅರಿ ಮನುಷ್ಯರ ಬದುಕಿನ‌‌ ದೇಹದ‌ ನಶ್ವರತೆಯ ಅವಲೋಕಿಸು ಹಾಗೂ ….ಹಾಗೂನನ್ನ ಕಣ್ಣುಗಳ ದಿಟ್ಟಿಸುನನ್ನ ತೋಳಿನಲ್ಲಿ ಸುಮ್ಮನೆ ಕರಗಿ‌ಹೋಗು….. ಚಾಡಿಗಳ ಜಾಡಿಸಿ ಒದೆಕಿವಿ ಕಚ್ಚುವವರ ಕುಡಗೋಲಿನಿಂದ‌ ಕೊಚ್ಚಿಹಾಕುಹಾಳು ಹಡಬೆ ರಂಡೆಯರಮಾತಿಗೆ ಅಡುಗೆ ಮನೆಯ ಲಟ್ಟಣಿಗೆಯಿಂದ ತಿವಿ ನಾನು ಉರಿವ ಕೆಂಡದಂಡೆ ದಿಗ್ಭ್ರಮೆಗೊಳ್ಳುವಂತೆ ಹರಿವ ನದಿ…ಜಗದ ಮೌನ ಗರ್ಭೀಕರಿಸಿಕೊಂಡ ಕಣಿವೆಸುಮ್ಮನೆ ನನ್ನೆದುರು ಕುಳಿತು ಅಪ್ಪಿ ಆಲಂಗಿಸು … ನೀ ಬದಲಾದರೆ ಎಂಬ ಪ್ರಶ್ನೆಗಳ ಹುಟ್ಟಿದಲ್ಲಿ ನೇತು ಹಾಕು ಬಿಮ್ಮನೆ ಘಮ್ಮನೆ ಮಘ ಮಘಿಸುವ ಮಲ್ಲಿಗೆಯಂತೆ ಪ್ರೀತಿಸು, ಪ್ರೀತಿಸು…; ಅಪ್ಪಟವಾಗಿ ಪ್ರೀತಿಸು…ಪ್ರೀತಿ ಬೆಳಕೆಂಬ ಬೆಳಕಿನ ಬೆನ್ನು ಹತ್ತು…. *********************

ಕಾವ್ಯಯಾನ Read Post »

ಇತರೆ, ಜೀವನ

ಪ್ರಸ್ತುತ

ಗುರು-ಶಿಷ್ಯ ಸಂಬಂದ ಪ್ರಜ್ಞಾ ಮತ್ತಿಹಳ್ಳಿ ಕೇವಲ ತರಗತಿಯ ನಾಕು ಗೋಡೆಗಳ ನಡುವೆ ವೇಳಾಪಟ್ಟಿಯ ಚೌಕಗಳ ಮಧ್ಯದಲ್ಲಿ ಸಿಲೆಬಸ್ ಎಂಬ ಅಕ್ಷರದ ಅಂಗಡಿ ಇಟ್ಟುಕೊಂಡ ಇವತ್ತಿನ ಗುರು, ಅಕ್ವೇರಿಯಂನ ಮೀನಿನಂತೆ ಅಸಹಾಯಕನಾಗಿದ್ದಾನೆ. ಅವನಿಗೆ ಸಮಯಮಿತಿ ಹಾಗೂ ವಿಷಯಮಿತಿ. ದಿನಕ್ಕೊಂದೊಂದೇ ಗುಳಿಗೆ ಆಹಾರ ನುಂಗಿ ಗಾಜಿನ ಗೋಡೆಗೆ ಮೂತಿ ಗುದ್ದುತ್ತ ಬುಳುಕ್ ಬುಳುಕ್ ಮುಳುಗುತ್ತಿದ್ದಾನೆ.  ಗುರು-ಶಿಷ್ಯರು ಈ ಚರಾಚರದ ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯಬಲ್ಲ ಸಂಬಂಧವನ್ನು ಹೊಂದಿರುತ್ತಾರೆ. ತರಗತಿಯ ಕರಿಹಲಗೆಯ ಮೇಲೆ ಬಿಳಿ ಸೀಮೆ ಸುಣ್ಣಕ್ಕೆ ನೋವಾಗದಂತೆ ಭೂಮಿಯ ಚಿತ್ರ ತೆಗೆಯುವವನು ಗುರುವೇ. ತನ್ನ ಜ್ಞಾನದ ಕಿರಣಗಳಿಂದ ಶಿಷ್ಯನ ಚಿತ್ತಬಿತ್ತಿಯ ಮೇಲೆ ಆಕಾಶಗಂಗೆಯ ಹಾಲುಹಾದಿ ತೆರೆಯುವವನೂ ಗುರುವೇ. ಹಾಗಾಗಿ ಗುರು-ಶಿಷ್ಯರ ಸಂಬಂಧ ಎನ್ನುವುದು ಯಾವುದೇ ಗೋಡೆ,ಛಾವಣಿಗಳ ಹಂಗಿಲ್ಲದ ಮಂದಿರದಂತೆ. ಕೊಡುವ ಗುರುವಿನ ಅಂತ:ಸತ್ವದ ಅಗಾಧತೆ ಹಾಗೂ ತೆಗೆದುಕೊಳ್ಳುವ ಶಿಷ್ಯನ ಧಾರಣ ಶಕ್ತಿಗಳನ್ನು ಅವಲಂಬಿಸಿ ಈ ಸಂಬಂಧದ ವ್ಯಾಖ್ಯೆ ಬದಲಾಗುತ್ತದೆ. ಮಮತೆ ಕರುಣೆಗಳ ವಾರಿಧಿಯಂಥ ಗುರು ಸಾಕ್ಷಾತ ಅಮ್ಮನಾಗುತ್ತಾನೆ. ಅವನ ಮಡಿಲಲ್ಲಿ ಶಿಶುವಾಗುವ ಶಿಷ್ಯ ವಾತ್ಸಲ್ಯದ ಗುಟುಕು ಗುಟುಕರಿಸಿ ಅಮೃತಂಗಮಯನಾಗುತ್ತಾನೆ. ಜ್ಞಾನದ ದಾಹದ ಶಿಷ್ಯ ರೋಗಿಯಂತೆ ನರಳುವಾಗ ಗುರು ವೈದ್ಯನಾಗಿ ಸಲಹುತ್ತಾನೆ. ಸಮಾನ ಮನಸ್ಕ-ಸಮಾನ ಆಸಕ್ತ ವಿಷಯಗಳಲ್ಲಿ ಅವರಿಬ್ಬರೂ ಸ್ನೇಹಿತರೇ ಆಗಿಬಿಡುತ್ತಾರೆ. ಆಧ್ಯಾತ್ಮ ಹಾಗೂ ಸಂಗೀತಗಳಲ್ಲಿ ಗುರು ಶಿಷ್ಯರು ಪರಸ್ಪರರಿಗೆ ಕೊಟ್ಟು ಕೊಳ್ಳುವ ಸಂಗತಿಗಳಿಗೆ ಎಣೆಯಾಗಲೀ, ಎಣಿಕೆಯಾಗಲಿ, ಎಲ್ಲೆಯಾಗಲೀ ಇಲ್ಲವೇ ಇಲ್ಲ. ರಾಗದ ದಾರಿಯಲ್ಲಿ ಸಾಗುತ್ತ ಸಾಗುತ್ತ ಅವರು ಅಮರರಾಗುತ್ತಾರೆ ನಾದದ ಸಾಧನೆಯಲ್ಲಿ ಲೀನವಾಗುತ್ತ, ಲೀನವಾಗುತ್ತ ಈ ಲೋಕದ ಸೀಮೆಗಳನ್ನು ದಾಟುತ್ತಾರೆ. ಅಲೌಕಿಕವನ್ನು ಅರಸುತ್ತ, ಅರಸುತ್ತ ಪರಸ್ಪರರಿಗೆ ದಾರಿಯಾಗಿ ತೆರೆದುಕೊಳ್ಳುತ್ತಾರೆ.  ಗುರು-ಶಿಷ್ಯಂದಿರು ಪರಸ್ಪರರನ್ನು ಬೆಳೆಸಬಲ್ಲರು. ಶಿಷ್ಯನ ಇಲ್ಲಗಳನ್ನು ತುಂಬುವುದಕ್ಕಾಗಿ ಗುರು ತಾನು ಮೊದಲು ತುಂಬಿಕೊಳ್ಳುತ್ತಾನೆ. ಹೀಗೆ ಇಬ್ಬರೂ ಬೆಳೆಯುತ್ತಾರೆ. ನಿಜವಾದ ಗುರು “ಮಲಗಿ ಪರಮಾದರದಿ ಕೇಳಲು ಕುಳಿತು ಕಲಿಸುವ, ಕುಳಿತು ಕೇಳಲು ನಿಲುವ, ನಿಂತು ಕೇಳಿದರೆ ನಲಿದು ಕಲಿಸುವ” ಉತ್ಸಾಹಿಯಾಗಿರುತ್ತಾನೆ. ಗುರು-ಶಿಷ್ಯರ ನಡುವೆ ಜಾತಿ-ಲಿಂಗ-ವಯಸ್ಸು-ಹಣ ಗಳ ಅಂತರ ಬರುವುದಿಲ್ಲ. ಆಸಕ್ತಿ ಶ್ರದ್ದೆ ಅರಿವಿನ ಎಚ್ಚರಗಳು ಮಾತ್ರ ಪರಿಗಣಿಸಲ್ಪಡುತ್ತವೆ. ಗುರು-ಶಿಷ್ಯರ ಸಂಬಂಧ ಮನುಕುಲದ ಎಲ್ಲ ಸಂಬಂಧಗಳಿಂದಲೂ ಒಂದೊಂದು ರಂಗು ಪಡೆದು ಅರಳುವ ಕಾಮನಬಿಲ್ಲಿನ ಹಾಗೆ. ಅರಳುತ್ತರಳುತ್ತಲೇ ಹಗುರಾಗಿ ಹಂಗು ಕಳಚಿ ಮೇಲೆ ಹಾರುವ ಸ್ವರ್ಗೀಯ ಕುಸುಮದ ಹಾಗೆ. ಅಲ್ಲಮ-ಗುಹೇಶ್ವರ, ಸಂತ ಶಿಶುನಾಳ ಶರೀಫ-ಗೋವಿಂದಭಟ್ಟರು ವಿವೇಕಾನಂದ-ಪರಮಹಂಸರು, ಬುದ್ದ ಮತ್ತವನ ಅಸಂಖ್ಯಾತ ಶಿಷ್ಯರು ಸಾವಿರ ಸಾವಿರ ಮಾದರಿಗಳನ್ನು ಬಿಟ್ಟು ಹೋಗಿದ್ದಾರೆ. ಭಾರತೀಯ ಗುರು ಏನೂ ಆಗಬಲ್ಲ ಎಂದು ಜಗತ್ತಿಗೆ ತೋರಿಸಿದ್ದೇವೆ. ಆದರೂ ಕಲ್ಲು ಗೋಡೆಯ ಪಡಕಿನಲ್ಲಿ ಘಿಲ್ಲನೆ ಅರಳುವ ಗರಿಕೆಯ ಹಾಗೆ ಅಲ್ಲೊಂದು ಇಲ್ಲೊಂದು ಪುಟಾಣಿ ಅನುಬಂಧಗಳು ಪಿಳಿ ಪಿಳಿ ನಗುತ್ತವೆ. ಕ್ರೀಡಾ ಜಗತ್ತಿನಲ್ಲಿ ಅನೇಕ ಗುರುಗಳುತಮ್ಮ ಶಿಷ್ಯರನ್ನು ತಾರೆಗಳಾಗಿ ಬೆಳೆಸಿದ ಉದಾಹರಣೆಗಳಿವೆ. ಅನೇಕ ತಾರೆಗಳು ಬಾನೇರಿ ಜಗಮಗಿಸುವಾಗ ಗುರು ನೇಪಥ್ಯದ ಕತ್ತಲಲ್ಲೇ ಮುಳುಗಿರಲೂಬಹುದು. ಪತ್ರಿಕಾರಂಗದಲ್ಲೂ ಅನೇಕರು ಉತ್ತಮ ಶಿಷ್ಯರನ್ನು ಬೆಳೆಸಿದ್ದಾರೆ. ಕೆಲವರು ತಾವು ತಮ್ಮನ್ನು ಗುರುವಾಗಿ ಗುರುತಿಸದಿದ್ದರೂ ಅವರ ಬದುಕನ್ನು ಸಮೀಪದಿಂದ ಕಂಡವರು ಆಂತರ್ಯದ  ಶಿಷ್ಯತ್ವದಿಂದ ಅವರಿಂದ ಕಲಿತು ಬೆಳೆದಿದ್ದಾರೆ.  ಕಲಿಯುವ ಹಂಬಲವುಳ್ಳ ಮನುಜನಿಗೆ ಕಲಿಸುವ ಸಂಗತಿಗಳೆಲ್ಲ ಗುರುವೇ. ನದಿ-ನದ-ಬಾನು-ಬಯಲು-ಹೂ-ದುಂಬಿ-ಸಾಗರ-ಚುಕ್ಕಿ-ಚಂದ್ರಮರೆಲ್ಲ ಹಲವು ಸಂಗತಿಗಳನ್ನು ಕಲಿಸುತ್ತಲೇ ಇದ್ದಾವೆ. ಪ್ರಕ್ರತಿಯಂತಹ ದೊಡ್ಡ ಗುರು ಇನ್ನೊಂದಿಲ್ಲ. ಬಡವನಿಗೆ ಅವನ ಹಸಿವೇ ಗುರು. ದರಿದ್ರನಿಗೆ ಅವನ ಕೊರತೆಯೇ ಗುರು. ದೀನನಿಗೆ ಅವನ ನೋವೇ ಗುರು. ಹುಟ್ಟಿನಿಂದ ಚಟ್ಟದ ತನಕ ನಾವು ಕಾಣುವ ಸಂಗತಿಗಳೆಲ್ಲ ನಮಗೆ ಗುರುವಾಗಬಲ್ಲವು. ಕಲಿಯುವ ವಿಧೇಯತೆ ನಮಗಿದ್ದರೆ ಮಾತ್ರ.  ತರಣಿ ದರ್ಶನಕ್ಕಿಂತ ಕಿರಣಾನುಭವ ಸುಲಭ  ಪರಮ ಶಾಸ್ತ್ರಕ್ಕಿಂತ ಸರಿಯುದಾಹರಣೆ  ಪರಮ ತತ್ವವ ಕಂಡ ಗುರುವನರಸುವುದೆಲ್ಲಿ?  ದೊರೆತಂದು ನೀಂ ಧನ್ಯ-ಮಂಕುತಿಮ್ಮ  ಸೂರ್ಯನನ್ನು ನೋಡುವುದಕ್ಕಿಂತ ಅವನ ಕಿರಣಗಳನ್ನು ಅನುಭವಿಸುವುದು ಸುಲಭವಾದದ್ದು. ಶ್ರೇಷ್ಠ ಶಾಸ್ತ್ರಗಳನ್ನು ತಿಳಿದುಕೊಳ್ಳುವುದಕ್ಕಿಂತ ಒ೦ದು ಉದಾಹರಣೆಯನ್ನು ಅರಿಯುವುದು ಸುಲಭ. ಆದರೆ ಪರಮ ತತ್ವವನ್ನು ಕಂಡಿರುವ ಗುರುವನ್ನು ಹುಡುಕುವುದು ಕಷ್ಟ. ಅಂತಹ ಗುರು ಸಿಕ್ಕ ದಿನ ನೀನು-ನಾವು ಎಲ್ಲರೂ ಧನ್ಯರು. ಹೀಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಅಸತ್ಯದಿಂದ ಸತ್ಯದ ಕಡೆಗೆ ಸಾಗುತ್ತಿರುವ ಈ ಪ್ರಯಾಣ ಕೇವಲ ಒಬ್ಬ ಗುರುವಿನಿಂದ ಮುಗಿಯುವುದಿಲ್ಲ. ನಾವೆಲ್ಲರೂ ನಮಗೆಲ್ಲರಿಗೂ ಕಲಿಸುತ್ತ ಕಲಿಯುತ್ತ ಸಾಗುವುದೇ ಬದುಕು. *****************************  

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಸೋಲೆಂಬ ಸಂತೆಯಲಿ ದೀಪ್ತಿ ಭದ್ರಾವತಿ ಹೀಗೇಕೆ ಬೆನ್ನು ಬಿದ್ದಿದೆ ಸೋಲು ರಚ್ಚೆ ಹಿಡಿದ ಮಗುವಿನಂತೆ ಹೆಜ್ಜೆ ಇಟ್ಟೆಡೆಗೆ ಕಣ್ಣು ನೆಟ್ಟಿದೆ ತಾಳಬಲ್ಲೆನೇ ಸವಾರಿ? ಕಣ್ಣಂಚಲಿ ಮುತ್ತಿಕ್ಕುತ್ತಿದೆ ಸೋನೆ ಸುಡುವ ಹರಳಿನಂತೆ ಒರೆಸಿಕೊಳ್ಳಲೇ ಸುಮ್ಮನೆ? ಎಷ್ಟೊಂದು ಸಂಕಟದ ಸಾಲಿದೆ ಸೋಲೆಂಬ ಮೂಟೆಯೊಳಗೆ ನಟ್ಟ ನಡು ಬಯಲಿನಲಿ ಒಂಟಿ ಮತ್ತು ಒಂಟಿ ಮಾತ್ರ ಹರಿಯಬಲ್ಲದೇ ಹರಿದಾರಿ? ನಡೆಯುತ್ತದೆಯೇ ದಿಕ್ಕು ಮರೆತ ನೌಕೆ? ಸುತ್ತ ಹತ್ತೂರಿಂದ ಬಂದ ಪುಂಡ ಗಾಳಿ ಹೊತ್ತೊಯ್ದು ಬಿಡುವುದೇ ನೆಟ್ಟ ಹಗಲಿನ ಕಂಪು? ಯಾವ ದಾರಿಯ ಕೈ ಮರವೂ ಕೈ ತೋರುತ್ತಿಲ್ಲ ಮರೆತು ಹೋಗಿದೆ ದಿಕ್ಸೂಚಿಗೂ ಗುರುತು ಕಗ್ಗತ್ತಲ ಕರ‍್ತಿಕದಲಿ ಹಚ್ಚುವ ಹಣತೆಯೂ ನಂಟು ಕಳಚಿದೆ ಮುಖ ಮುಚ್ಚಿಕೊಂಡೀತೆ ಬೆಳಕು ಬಯಲ ಬೆತ್ತಲೆಗೆ? ಮುಗ್ಗರಿಸಿದ ಮಧ್ಯಹಾದಿಯ ಮಗ್ಗಲು ಬದಲಿಸಲೇ? ನೂರೆಂಟು ನವಿಲುಗರಿಗಳ ನಡುವೆ ಹಾರಿದ ಮುಳ್ಳು ಎದೆ ಚುಚ್ಚಿದೆ, ಕಣ್ಣು ನೆಟ್ಟಿದೆ ಮತ್ತು ನೆತ್ತಿಯನ್ನೂ ಕೂಡ ಸೋಲು ಭಾಷೆ ಬದಲಿಸುವುದಿಲ್ಲ ನನಗೋ ಭಾಷೆಗಳು ಬರುವುದೇ ಇಲ್ಲ..   ***********

ಕಾವ್ಯಯಾನ Read Post »

You cannot copy content of this page

Scroll to Top