ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ವಿರಾಗಿ ತ್ಯಾಗಿ

ಡಾಲಿ ಕೊಡನವಳ್ಳಿ

Gomateshwara Bahubali: The largest monolithic statue - Soul Esplanade

ಚಕ್ರವರ್ತಿ ಭರತ…
ನಿನಗಿಂತ
ವಿರಾಗಿ ತ್ಯಾಗಿ ಬಾಹುಬಲಿಗೆ
ಈ ಕನ್ನಡ ನೆಲ ತಲೆಬಾಗಿ
ತಲೆ ಎತ್ತಿ ನೋಡಿದರೂ ನಿಲುಕದ ಪ್ರತಿಮೆಯನ್ನೇ
ಕಡೆದು ನಿಲ್ಲಿಸಿದ್ದು

ಯುದ್ದ ಗೆದ್ದು ಸೋತವನ
ಏನಿಲ್ಲವೆಂದು ಹೊರಟವನ
ಕೈಬೀಸಿ ಕರೆದು
ಗಿರಿನೆತ್ತಿಯ ಮೇಲಿರಿಸಿ
ಮಸ್ತಕಕೆ ಬೆಳ್ಮುಗಿಲ ಮುಕುಟವಿರಿಸಿ
ತಾರೆಗಳ ನೇವಣಿಯನೇರಿಸಿ
ಅಂಬರಕೆ ಚುಂಬಿಸಿದವನನ್ನೇ
ಕರುನಾಡು
ದೊರೆಯಾಗಿ ಸ್ವೀಕರಿಸಿತು

ಮುರಿದು ಬೀಳುವ ಮಹಲಿನ
ಹಂಗು ತೊರೆದವಗೆ
ಗಿರಿಶಿಖರಗಳೇ ಕಂಬವಾಗಿ
ಮೋಡಗಳೇ ಮೇಲ್ಛಾವಣಿಯಾಗಿ
ನಾಡ ಗರ್ಭಗುಡಿಯಲ್ಲಿ
ಸದ್ಗತಿ ಸಂದವನ
ಪ್ರಾಪಂಚಿಕ ಸುಖ ಗೆದ್ದವನ
ಪ್ರಕೃತಿಯ ಕಣಕಣವೂ
ಪಾಲಿಸಿತಿಲ್ಲಿ

ಬೆಳಗುಳ ನಂದನ
ಪ್ರತಿದಿನ ನಿನ್ನದೇ
ಪ್ರತೀಕ್ಷೆ ಪೃಥ್ವಿಗೆ.
ಎಳೆಸಂತೆ ಕಂಗೊಳಿಸುವ ನಿನ್ನೀ
ನವಿರು ಭಾವ ಹೊತ್ತ ಕುಸುಮ.
ಗಂಧವತಿ ವಸುಧೆಯ ಗಂಧ ಘಮ
ಹೊನ್ನ ಹಣತೆಯಲಿ
ಜ್ಯೊತಿ ಬೆಳಗುವ ಶಶಿ ಸೂರ್ಯ
ಆದಿ ನಾಥ ಸುತನನ್ನೇ ಅರಸಿದಂತಿದೆ
ಪ್ರತಿ ಕ್ಷಣದ ಆರಂಭಕೆ

**************************

About The Author

Leave a Reply

You cannot copy content of this page

Scroll to Top