ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಶುಭಲಕ್ಷ್ಮಿ ಆರ್ ನಾಯಕ

hands formed together with red heart paint

ಇತರರ ಅಲ್ಲ ಸಲ್ಲದ ನುಡಿಗೆ ನೋಯದಿರು ಗೆಳತಿ
ಪರರು ಆಡುವ ಬಿರುನುಡಿಗಳಿಗೆ ಅಂಜದಿರು ಗೆಳತಿ

ನಿನ್ನಾತ್ಮ ಸಾಕ್ಷಿಯದು ನಿಜವನ್ನೇ ನುಡಿಯುವಾಗ
ಕುಹಕಿಗಳ ಕುಹಕಕ್ಕೆ ಮನಕೆಡಿಸಿಕೊಳದಿರು ಗೆಳತಿ

ಧರಣಿಯ ಮನುಜರಲ್ಲಿ ಮಾನವೀಯತೆಯ ತುಂಬಲು
ವ್ಯರ್ಥವಾಗಿ ಎಂದಿಗೂ ನೀನು ಹೆಣಗದಿರು ಗೆಳತಿ

ಕೊಡುವ ದಾನ ಧರ್ಮಗಳಲಿ ಪುಣ್ಯವಿದೆ ಎಂದರಿತು
ಅಪಾತ್ರರಿಗೆ ದಾನ ಧರ್ಮವನು ಮಾಡದಿರು ಗೆಳತಿ

ಸಾಂತ್ವನವ ನಯದಿ ಹೇಳುತ ಧೈರ್ಯ ನೀಡುವೆಯೆಂದು
ಸಂಕುಚಿತಮನದವರಿಗೆ ಉಪದೇಶಿಸದಿರು ಗೆಳತಿ

ನಂಬಿಕೆ ವಿಶ್ವಾಸದಲಿ ಧೈರ್ಯ ತುಂಬುವ ಜನರನು
ನಿನ್ನ ಕಠೋರತೆಯಿಂದ ದೂರ ತಳ್ಳದಿರು ಗೆಳತಿ

ಎಲ್ಲರೂ ಎಲ್ಲರ ಒಳಿತನೆ ಬಯಸುತ್ತಿರುವಾಗ
ಜೀವನದಲಿ ಜಂಜಾಟದಿಂದ ಕುಗ್ಗದಿರು ಗೆಳತಿ

ಅರಿತು ಬಾಳಿದರೆ ಜಗದಲಿ ಮುಳ್ಳು ಹೂವಾಗುವುದು
ಸಹನೆಯಿಂದ ಬಾಳ ನೂಕುವುದ ಮರೆಯದಿರು ಗೆಳತಿ

ಆತ್ಮಸಾಕ್ಷಿಯಿಂದ ಒಳಿತ ಬಯಸಿದೆ ಶುಭಳ ಮನವು
ಅರಿಯದೇ ಅದನು ನೀ ಸುಮ್ಮನೆ ರೇಗದಿರು ಗೆಳತಿ

********************************

About The Author

3 thoughts on “ಗಜಲ್”

  1. ಶುಭಲಕ್ಷ್ಮಿ ಆರ್ ನಾಯಕ

    ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಗಾತಿ ಪತ್ರಿಕೆಗೆ ಧನ್ಯವಾದಗಳು

  2. ಸಕಾರತ್ಮಕ ಭಾವ ತುಂಬುವ ಸುಂದರ ಕವನ.ಆತ್ಮವಿಶ್ವಾಸ ಎಷ್ಟು ಮಹತ್ವಎನ್ನುವುದನ್ನು ಕವಾಯಿತ್ರಿಚೆನ್ನಾಗಿ ಬಿಡಿಸಿಟ್ಟಿದ್ದಾರೆ. ಅಭಿನಂದನೆಗಳು.
    ಮಾಲತಿಶ್ರೀನಿವಾಸನ್

Leave a Reply

You cannot copy content of this page

Scroll to Top