ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಶಾಲಿನಿ ಆರ್.

couple sitting on the field facing the city

ಅನುರಾಗ ಆರಾಧನೆಯಿದೆ ಕಣ್ಣಂಚಿನ ಕೊನೆಯಲಿ ಮಿಂಚು ಸುಳಿದಿದೆ ನಾ ನಿನ್ನೆನೆವಾಗ/
ಮನದಾಳದ ಮಾತಲ್ಲಿ ನವಿರಾದ ಭಾವೋತ್ಕರ್ಷ ಸಂಚು ಅಡಗಿದೆ ನಾ ನಿನ್ನ ನೆನೆವಾಗ//

ನೆನೆದಷ್ಟು ಮನ ಮೃದುಲತೆಯ ತವರು,ಪೇಮ ಫಲದ ಗೊಂಚಲು/
ರಾಗದೊಲವ ಎಲರು ಹಾದಿಗುಂಟ ತೂಗುತಿದೆ  ನಾ ನಿನ್ನ ನೆನೆವಾಗ//.

ಬಾನಲಿ ಹೊಳೆವ ತಾರೆಗಳ ಕಾಂತಿಗೆ ನಿನ್ನ ವದನ ಚಂದಿರನ ಪ್ರತಿಫಲನವು/
ಆಹಾ! ಮನವದು ನಿಲುಕದೆ ಒಲವಿನಂಕಣಕ ಬರೆಯುತಿದೆ, ನಾ ನಿನ್ನ ನೆನೆವಾಗ//

ತಂಪೆಲರ ಒಲವಿಗೆ ಮನವು ಆರ್ದ್ರಗೊಂಡು  ಕರಗುತಿದೆ/
ತನುವದು ಮುದದಿ ತಣಿದುಚರ್ವಿತ ಒಲವು ಹೊನಲಾಗಿದೆ, ನಾ ನಿನ್ನ ನೆನೆವಾಗ//

ಭಾವಲೋಕದೀ ಸರಿತ ಸಲ್ಲಲಿತ ಕವನ ಮರುಳಿರಿಸಿ ಹರಿಯುತಿದೆ /
ಶಾಲಿನಿಯ ಬಂಧದಲೀ ಒಲವ ಸಿಂಚನ ಕಚಗುಳಿಯಿಡುತಿದೆ ನಾ ನಿನ್ನ ನೆನೆವಾಗ//

********************************************************

About The Author

Leave a Reply

You cannot copy content of this page

Scroll to Top