ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಗಜಲ್

ಗಜಲ್ ಸ್ಮಿತಾ ಭಟ್ ಬೇಕೋ ಬೇಡವೋ ಈ ಬದುಕನ್ನು ನಡೆದೇ ಮುಗಿಸಬೇಕಿದೆ.ಕಾಲದ ಕಡುದಾರಿಯ ಕಳವಳಿಸದೇ ಮುಗಿಸಬೇಕಿದೆ ಉಯ್ಯಾಲೆ ಕಟ್ಟಿದ ರೆಂಬೆಯ ಮೇಲೆ ಅದೆಷ್ಟು ನಂಬಿಕೆಎರಗುವ ನಸೀಬನ್ನು ಎದೆಗುಂದದೇ ಮುಗಿಸಬೇಕಿದೆ. ಸುತ್ತಿ ಬಳಸುವ ದಾರಿಯಲಿ ಕಾಲಕಸುವು ಕಳೆಯದೇ ಇರದುಸಿಗದ ನೂರು ಬಯಕೆ ಕನಸನು ಕೊರಗದೇ ಮುಗಿಸಬೇಕಿದೆ. ಮೋಡ ಎಲ್ಲವನ್ನೂ ಶೂನ್ಯಗೊಳಿಸುವುದು ಕೆಲವೊಮ್ಮೆಮೆತ್ತಿಕೊಳ್ಳುವ ನೋವನು ಅಳುಕದೇ ಮುಗಿಸಬೇಕಿದೆ. ಹಿಂತಿರುಗಿದಾಗ ಎಷ್ಟೊಂದು ಏರಿಳಿತಗಳು ಬದುಕಿಗೆಯಾವ ಕಹಿಯನೂ ಉಳಿಸಿಕೊಳ್ಳದೇ ಮುಗಿಸಬೇಕಿದೆ. ರೆಕ್ಕೆ ಕಟ್ಟಿಕೊಂಡಾಗ ಜಗವದೆಷ್ಟು ಸೋಜಿಗ “ಮಾಧವ”ಈ ಖುಷಿಗೆ ಯಾರ ಹಂಗು,ವಿಷಾದವಿರದೇ ಮುಗಿಸಬೇಕಿದೆ *******************************

ಗಜಲ್ Read Post »

ಕಾವ್ಯಯಾನ

ದೂರ ದೂರದತೀರ

ಕವಿತೆ ದೂರ ದೂರದತೀರ ಶಾಂತಲಾ ಮಧು ದೂರ ದೂರದ ತೀರತೀರದೀದೂರಹಾಲ ಬೆಳದಿಂಗಳುನಕ್ಷತ್ರದಾ ಸರತಬ್ಬಿಮುದ್ದಾಡಿದಾ ನೆಲಬರ ಸಿಡಿಲು ಗುಡುಗುಮಳೆ ಅಪ್ಪಳಸಿ ಆಲಂಗಿಸಿ…ನಲಿದು ಹರಿದಾಡಿ ನೆಲ ದೂರ ದೂರದ ತೀರತೀರದೀ ದೂರ ತೆಂಗು ಅಡಕೆ ಮರತಬ್ಬಿದಾ ಬಳ್ಳಿಗಳುಹೂವಾಗಿ ಹಣ್ಣು ಕಾಯಾಗಿಮಣ್ಣಿನವಾಸನೆಗೆಮರುಳಾಗಿ ಸುಕಿಸಿದಾ ನೆಲ ದೂರ ದೂರದ ತೀರತೀರದೀ ದೂರ ಹಸಿರಿನಂಗಳಕೆ ಅದೆಕನಸಿನ ಚಾವಡಿ ಹೊದೆಸಿಲಕ್ಷಣ ವಿತ್ತ ಮೂರ್ತಿಕೆತ್ತಿಟ್ಟು ಜೀವದಾಳದಪ್ರಿತಿ ಸಂಸ್ಕೃುತಿಯಬೆೇರನಾಳದಲಿಹೂತ್ತಿಟ್ಟ ಆ ನೆಲ ದೂರ ದೂರದ ತೀರತೀರದೀ ದೂರ ಗುಡ್ಡ ಬೆಟ್ಟದಸಾಲುಪಶು ಪಕ್ಷಿ ಇಂಚರಒಡನಾಟ, .ಹಳ್ಳ ಕೊಳ್ಳದ ಸ್ಪರ್ಷಜೀವ ಚೇತನವಾಗಿಪಾಠ ಕಲಿಸಿದ ನೆಲ ದೂರ ದೂರದ ತೀರತೀರದೀ ದೂರ ಹಸುಳೆಯಾಗಿಸಿಮತ್ತೆ ಸಿಹಿ ಕಹಿಯನೆನಪಿಸುತ ಜೀವ ನಾಡಿಯಮೀಟಿ ಮಯ್ ಮರೆಸುತಕತ್ತಲ ಕವಡೆ ಯಾಟದಲಿಸೋಲು ಗೆಲುವಲಿಮಿಂದೆಂದಾ ನೆಲ ದೂರ ದೂರದ ತೀರತೀರದೀ ದೂರ ಕಾನನದ ಕಪ್ಪೆಯಾಟದಕೊಳದಲ್ಲಿನೀರ ನೆರಿಗೆಯಲಿಪ್ರತಿಬಿಂಬ ಹೆಣೆದುದಿನಒಂದು ಕ್ಷಣವಾಗಿಕ್ಷಣಿಕತೆಯನೆ ಮರೆತ ನೆಲ ದೂರ ದೂರದ ತೀರತೀರದೀ ದೂರ ಸಂಭ್ರಮದ ಕಡಲಲ್ಲಿನೆನಪ ದೋಣಿಯ ನಡೆಸಿಅಲೆಯ ಏರಿಳಿತಕೆಚೀರಿ ಚೀತ್ಕರಿಸಿನೀರ ದಾರಿಯಲಲ್ಲಲ್ಲಿಪ್ರತಿಬಿಂಬ ಹುಡುಕಿತಡಕಾಡಿ ದಾ ನೆಲ ದೂರ ದೂರದ ತೀರತೀರದೀ ದೂರ ಅವಳ ಮಾಸಿದಸೆರಗುಬಿದ್ದಿಹುದು ನೆಲದಲ್ಲಿಕೆಂಪು ಮಣ್ಣನು ತಬ್ಬಿಅಲ್ಲಿ ಮಾಗಿದ ಪ್ರೀತಿಹಸಿರಿನ ಹುಲ್ಲುಅವಳುಸಿರ ಬಸಿರನಲೆಯನೆಲ ದೂರ ದೂರದ ತೀರತೀರದೀ ದೂರ ***********************

ದೂರ ದೂರದತೀರ Read Post »

ಇತರೆ, ಲಹರಿ

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು”

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” ರಶ್ಮಿ ಎಸ್. ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ ಡಿ. 6,7,8 ಬಾಬರಿ ಮಸೀದಿ ಪ್ರಕರಣ ಆದಾಗ ಇಡೀ ದೇಶ ಕೋಮು ದಳ್ಳುರಿಯೊಳಗ ಧಗಧಗಿಸುತ್ತಿತ್ತು… ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ … ಮುಗಲ ಮಾರಿಯೊಳಗ ದೇವರ ನಗಿ ನೋಡ್ಕೊಂತ… ನನ್ನ ತಾಯಾ, (ದೊಡ್ಡಪ್ಪ) ಅಂಗಳದೊಳಗ ಅರಾಮ ಕುರ್ಚಿ ಹಾಕ್ಕೊಂಡು ಆಕಾಶ ನೋಡ್ಕೊಂತ ಕುಂತಾರ ಅಂದ್ರ ಏನೋ ಚಿಂತಿ ಕಾಡ್ತದ ಅಂತನೇ ಅರ್ಥ. ಅವಾಗ ನಾವು ಯಾರೂ ಅವರೊಟ್ಟಿಗೆ ಮಾತಾಡ್ತಿರಲಿಲ್ಲ. ಬೇವಿನ ಮರದ ನೆರಳಾಗ ಕುಂತು ನೀಲಿ ಆಕಾಶದೊಳಗ ಹಾದು ಹೋಗುವ ಬಿಳೀ ಮುಗಿಲು ನೋಡ್ಕೊಂತ ಅವರ ಕೈ ಲೆಕ್ಕಾ ಹಾಕ್ತಿದ್ವು. ಅವರ ಹೆಂಡತಿ ಜಿಯಾ, ಮೊಮ್ಮಾ ಅಂತ ಕರೀತಿದ್ವಿ. ಕುರ್ಚಿಯಿಂದ ‘ಜಿಯಾ… ಚಾಯ್‌.. ಪಿಲಾತೆ’ ಅಂತ ಕೇಳಿದ್ರ ಸಾಕು, (ಉತ್ತರ ಸಿಕ್ತು ಅಂತನೇ ಅರ್ಥ.) ಛಾ ತರೂತನಾನೂ ಅವರ ಗುಡಾಣದಂಥ ಹೊಟ್ಟಿ ಮ್ಯಾಲೆ ನನ್ನ ಕೂಸಿನ್ಹಂಗ ಮಲಗಿಸಿಕೊಂಡು ಗುಳುಗುಳು ಮಾಡೋರು. ನನ್ನ ನಗಿ ಅಲಿಅಲಿಯಾಗಿ ಹರಡ್ತಿತ್ತು. ಏಳುವರಿ ಅಡಿ ಎತ್ತರದ ಅಜಾನುಬಾಹು ನನ್ನ ತಾಯಾ. ಅವರ ಕರಡಿ ಅಪ್ಪುಗೆಯೊಳಗ ನಾನು ಮಾತ್ರ ಯಾವತ್ತಿಗೂ ಕೂಸೇ. ಯಾರಿಗೂ ಇರಲಾರದ ಸಲಗಿ ನನಗ ಇತ್ತು. ‘ಆಸ್‌ಮಾನ್‌ಸೆ ಕ್ಯಾ ಆಪ್‌ಕೊ ಅಲ್ಲಾತಾಲಾ ನೆ ಜವಾಬ್‌ ದಿಯಾ?’ (ಆಕಾಶದಿಂದ ಆ ದೇವರು ನಿಮಗ ಉತ್ತರ ಕೊಟ್ರೇನು?) ಅಂತ ಕೇಳಿದ್ರ ಅದಕ್ಕೂ ಗುಳುಗುಳು ಮಾಡೂದೆ ಉತ್ತರ ಆಗಿರ್ತಿತ್ತು. ನಾವೆಷ್ಟೇ ದೊಡ್ಡವರು ಆಗಿದ್ರೂ ಈ ಕರಡಿ ಅಪ್ಪುಗೆ, ಈ ಗುಳುಗುಳು ಮತ್ತು ಅವರ ಮಡಿಲೊಳಗ ಮಗುವಾಗಿ ಮಲಗುವ ವಾತ್ಸಲ್ಯದಿಂದ ಮಾತ್ರ ಯಾವತ್ತೂ ವಂಚಿತರಾಗಿರಲಿಲ್ಲ. ಆದ್ರ ನಾವು ಬೆಳದ್ಹಂಗ ನಮ್ಮ ಪ್ರಶ್ನೆಗಳು ಭಿನ್ನ ಆಗಿರ್ತಿದ್ದವು. ಬ್ಯಾಸಗಿ ರಾತ್ರಿ ಅದು. ಸ್ವಚ್ಛ ಆಕಾಶ. ಚುಕ್ಕಿ ಅಲ್ಲಲ್ಲೇ ಮಿಣಮಿಣ ಅಂತಿದ್ವು. ದೊಡ್ಡ ಅಂಗಳ. ಬೇವಿನ ಮರ, ತೆಂಗಿನ ಮರ, ಬದಾಮಿ ಮರದ ನೆರಳನಾಗ ನಾವೆಲ್ಲ ಕುಂತು ಆಕಾಶ ನೋಡ್ತಿದ್ವಿ. ಹೋಳಿ ಹುಣ್ಣಿವಿ ಸಮೀಪ ಇತ್ತು. ಒಂದೆರಡೇ ಮೋಡದ ತುಂಡುಗಳು ದುಡುದುಡು ಓಡಿ ಹೊಂಟಿದ್ವು. ಅದೇ ಆಗ ಕಾಲು ಬಂದ ಉಡಾಳ ಕೂಸಿನ್ಹಂಗ. ಅವಾಗ ತಾಯಾನ ಮಡಿಲೊಳಗ ಕುಂತು ದ್ರಾಕ್ಷಿ ತಿನ್ಕೊಂತ.. ‘ಖರೇನೆ ನಿಮಗ ದೇವ್ರು ಉತ್ರಾ ಕೊಡ್ತಾನ? ಖರೇನೆ ದೇವರ ಮನಿ ಆಕಾಶದೊಳಗ ಐತೇನು? ನನಗೂ ಒಮ್ಮೆ ತೋರಸ್ರಿ…’ ಎಲ್ಲಾ ಪ್ರಶ್ನೆಗೂ ಉತ್ತರ ಕೊಡೂಕಿಂತ ಮೊದಲು ಉದ್ದಾನುದ್ದ ದ್ರಾಕ್ಷಿ ಆರಸಿ ಬಾಯಿಗೆ ಹಾಕ್ತಿದ್ರು. ಆಮೇಲೆ ತಾಯಾ ಮಾತಾಡಾಕ ಸುರು ಮಾಡಿದ್ರು. ‘ದೇವರು ಆಕಾಶದೊಳಗ ಇರೂದಿಲ್ಲ. ದೇವರು ನಮ್ಮೊಳಗ ಇರ್ತಾನ. ನಮ್ಮ ಮನಸಿನಾಗ ಇರ್ತಾನ. ಮನಸನ್ನು ಆಕಾಶದಷ್ಟು ವಿಷಾಲ ಮಾಡಿಕೊಂಡು ಅವನಿಗೆ ನಮ್ಮೊಳಗೇ ಹುಡುಕಬೇಕು. ಅವಾಗ ಮನಸ ಮ್ಯಾಲೆ ಕವಿದಿರುವ ಮೋಡಗಳೆಲ್ಲ ಚದುರಿ ಹೋಗ್ತಾವ. ನಮ್ಮ ಚಿಂತಿನೂ ಹಂಗೆ. ನಮ್ಮನ್ನೇ ನಾವು ನೋಡ್ಕೋಬೇಕು. ನಮ್ಮನ್ನ ಆವರಿಸಿರುವ ಮೋಡಗಳು ಚದರುವ ಹಂಗ ಮಾಡಬೇಕು. ಆಗ ಪರಿಹಾರದ ಚುಕ್ಕಿಯ ಹೊಳಹು ನಮಗೇ ಹೊಳೀತಾವ’ ನಮ್ಮೊಳಗಿನ ದೇವರನ್ನು ಹುಡುಕುವ ಪರಿ ಮಾತ್ರ ನಾವೇ ಕಂಡುಕೋಬೇಕು. ನಮ್ಮ ದೇವರನ್ನು ನಾವೇ ಕಾಣಬೇಕು ಅಂದ್ರು. ‘ಅಂದ್ರ, ನಿಮ್ಮ ದೇವರು ಬ್ಯಾರೆ, ನನ್ನ ದೇವರು ಬ್ಯಾರೆ ಏನು’ ಅಂದೆ. ‘ದೇವರು ಅಂದ್ರ ಅದೊಂದು ಸತ್ಯ. ನಿನ್ನ ಸತ್ಯವೇ ಬೇರೆ, ನನ್ನ ಸತ್ಯವೇ ಬೇರೆ. ಒಂದು ಪರಿಪೂರ್ಣ ಸತ್ಯವಾಗಿರೂದು ಸಾಧ್ಯವೇ ಇಲ್ಲ. ಒಂದು ಸತ್ಯಕ್ಕೆ ನಾಲ್ಕಲ್ಲ ಹದಿನಾರು ಆಯಾಮ ಇರ್ತಾವ. ಒಂದು ಇನ್ನೊಂದಕ್ಕ ಸತ್ಯ ಅಲ್ಲ ಅಂತ ಅನ್ನಸಬಹುದು’. ‘ಹಂಗಾದ್ರ ಎಲ್ಲಾನೂ ಸತ್ಯ ಅಲ್ಲ, ಎಲ್ಲಾನೂ ಸುಳ್ಳಲ್ಲ ಅಂತ ಅಂತೀರೇನು? ಯಾರಿಗೂ ಕೆಡುಕಾಗದೇ ಇರೂದು ಸತ್ಯ. ನಮ್ಮೊಳಗಿನ ಸತ್ಯವನ್ನು ನಾವೇ ಹುಡುಕಬೇಕು.’ ಹಿಂಗೇ ಸೂಫಿ ಸಂತನಹಂಗ ಮಾತಾಡತಿದ್ದ ತಾಯಾಗ ಸಿಟ್ಟು ಬಂದ್ರ ಮಾತ್ರ ಅವರೇ ಹೇಳೂಹಂಗ ಹೈವಾನ್‌ ಆಗ್ತಿದ್ರು. ಸಿಕ್ಕಿದ್ದು ತೊಗೊಂಡು ಆಳಮಕ್ಕಳಿಗೆ ಹೊಡೀತಿದ್ರು. ಅವರ ಆ ಅವತಾರ ಮಾತ್ರ ದಿಗಿಲು ಹುಟ್ಟಸ್ತಿತ್ತು. ಯಾಕ ಅವಾಗ ಅವರೊಳಗಿನ ದೇವರು ಮಲಗಿರ್ತಿದ್ದ? ಅಥವಾ ಅವರೇ ಹೇಳುಹಂಗ ಆ ದೇವರೇ ಇಲ್ಲವಾಗ್ತಿದ್ದನಾ? ಗೊತ್ತಿಲ್ಲ. ಈಗ ಹೇಳಾಕ ಅವರಿಲ್ಲ. ಆದ್ರ ಅವರು ತೋರಿದ ಆ ದಾರಿ ಈಗಲೂ ಭಾಳಷ್ಟು ಸಲೆ ಖರೆ ಅನ್ನಸ್ತದ. ನಮ್ಮ ಜೀವನದಾಗ ಒಂದು ಹಂತ ಎಂಥಾದ್ದು ಬರ್ತದ ಅಂದ್ರ, ‘ಎಲ್ಲಾರಿಗೆ ನಾವು ಬ್ಯಾಡಾಗೇವಿ. ನಾವಿರಲಿಲ್ಲಂದ್ರೂ ಎಲ್ಲಾನೂ ನಡದು ಹೋಗ್ತದ. ನಾವು ಎಲ್ಲಿಯೂ ಅನಿವಾರ್ಯ ಅಲ್ಲ. ನಾವಿರಲಿಲ್ಲ ಅಂದ್ರ ನಮಗಿರುವ ಕಷ್ಟಗಳು ನಮಗಷ್ಟೇ ಇರೂದಿಲ್ಲ. ಆದ್ರ ಉಳದೋರು ಆರಾಮ ಇರ್ತಾರ’ ಅನ್ನೂದೊಂದು ಭಾವ ಗಟ್ಟಿಯಾಗಾಕ ಸುರುಮಾಡ್ತದ. ಇದೊಂಥರ ನಮ್ಮ ಜೀವನಾಸಕ್ತಿ, ಆಸ್ಥೆಯನ್ನೇ ಕೊಂದು ಬಿಡ್ತದ. ಏನು ಮಾಡಿದ್ರೂ ಅಷ್ಟೆ, ಎಷ್ಟು ಮಾಡಿದ್ರೂ ಅಷ್ಟೆ… ಯಾರಿಗರೆ ಯಾಕ ಮಾಡಬೇಕು?’ ಇಂಥವೇ ಅಸಮಾಧಾನಗಳು ಗೂಡು ಕಟ್ತಾವ. ಈ ಗೂಡಿನೊಳಗ ಸಾವನ್ನು ಪ್ರೀತಿಸುವ ಸೈತಾನ ವಾಸಸ್ತಾನ. ಜೀವದ ಹಕ್ಕಿಯನ್ನ ತನ್ನ ಗೂಡಿನೊಳಗ ಮೆತ್ತನೆಯ ಹಾಸು ಮಾಡಿಕೊಂಡು ಮಲಗಿ ಬಿಡ್ತಾನ. ಅದು ಕೊಸರಾಡ್ತದ. ಒದ್ದಾಡ್ತದ. ಉಸಿರುಗಟ್ಕೊಂಡು, ಬದುಕಾಕ ಒಂದು ಸಣ್ಣ ಎಳಿ ಸಿಕ್ರೂ ಸಾಕು ಅಂತ ಪಿಳಿಪಿಳಿ ಕಣ್ಣು ಬಿಟ್ಕೊಂಡು ಕುಂತಿರ್ತದ. ನಿದ್ದಿ ಅನ್ನೂದು ಅದಕ್ಕ ಬಂಗಾರದ್ಹಂಗ ಭಾಳ ತುಟ್ಟಿ. ಹಿಂಗಾದಾಗಲೆಲ್ಲ ಎಲ್ಲಾರು ಮಲಕ್ಕೊಂಡ ಮ್ಯಾಲೆ ಬಾಲ್ಕನಿಗೆ ಬಂದು ನಿಂದರ್ತೀನಿ. ಸ್ವಚ್ಛ ಮುಗಲನಾಗ ಮೋಡಗಳೂ ಓಡತಿರ್ತಾವ. ಕೆಲವೊಮ್ಮೆ ಮಂದ. ಕೆಲವೊಮ್ಮೆ ಅಗ್ದಿ ಚುರುಕಾಗಿ. ನಮ್ಮ ಪರಿಸ್ಥಿತಿಗೆ ಕಾರಣ ಹುಡುಕೂದೇ ಆಕಾಶ ನೋಡ್ಕೋಂತ ಮನಸಿನೊಳಗ ಹಣಕಿ ಹಾಕ್ತೀವಿ. ಯಾರಿಗೂ ನಾವು ಅನಿವಾರ್ಯವಿಲ್ಲ ಅಂತ ಅಂದ್ಕೊಂಡ ಕ್ಷಣದ್ಹಂಗೇ ಒಂದರೆ ನಿಮಿಷ ಮರುದಿನದ ಬೆಳಗು ನಾನಿಲ್ಲದೆ, ನನ್ನ ಗಂಡ, ಮಕ್ಕಳಿಗೆ ಹೆಂಗಿರಬಹುದು, ನಾನಿಲ್ಲದ ಸತ್ಯವನ್ನು ನನ್ನ ಹೆತ್ತವರು ಹೆಂಗ ಒಪ್ಕೊಬಹುದು ಅನ್ನೂ ಪ್ರಶ್ನೆಗಳು ಈ ಮೋಡದೊಂದಿಗೆ ಹಾದು ಹೋಗ್ತಾವ. ಮತ್ತ ಹಂಗೇ ಆಕಾಶ ಸ್ವಚ್ಛ ಆಗ್ತದ. ಮನಸೂ. ಕೆಲವೊಮ್ಮೆ ಆಕಾಶದೊಳಗ ಎಲ್ಲೊ ಚುಕ್ಕಿಯಾಗಿ ನನ್ನನ್ನ ನೋಡ್ತಿರುವ ತಾಯಾ, ಮೊಮ್ಮಾ ನೆನಪಾಗ್ತಾರ. ಎಂಥ ಸಂದಿಗ್ಧ ಪರಿಸ್ಥಿತಿಯೊಳಗೂ ನಮ್ಮ ಇರುವಿಕೆಗೊಂದು ಅರ್ಥ ಅದ. ಆ ಪರಿಸ್ಥಿತಿಯೂ ನಮ್ಮ ಜೀವಕ್ಕ, ಜೀವನಕ್ಕ ಒಂದು ಅರ್ಥ ನೀಡ್ತದ. ಈ ಅರ್ಥದ ಹೊಳಹು ಹೊಳದಾಗ ಆಕಾಶದಾಗ ಬೂದು ಬಣ್ಣ ಹೋಗಿ, ತಿಳಿ ಗುಲಾಬಿ ಬಣ್ಣ ಮೂಡ್ತಿರ್ತದ. ಜೊತಿಗೆ ಸೂರ್ಯನೂ ಹುಟ್ಟತಿರ್ತಾನ. ಅದರೊಟ್ಟಿಗೆ ನಾವೂ ಮತ್ತ ಹುಟ್ಟಿ ಬರಬೇಕು. ಆ ಹೊಸ ಹೊಳಹಿನೊಂದಿಗೆ. ನಮ್ಮ ಸತ್ಯದ ದೇವರು ನಮಗ ಕಾಣುವ ಹೊತ್ತದು. ಮುಗಿಲಮಾರಿಯೊಳಗ ದೇವರು ನಕ್ಕು ಮುಂದ ಸಾಗೂ ಹೊತ್ತದು. ನೋಡುವ ಕಣ್ಣುಬೇಕು. ಹುಡುಕುವ ಮನಸು ಬೇಕು. ತಾಯಾನ್ಹಂಗ..! …*******************************************************

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಕರುಳು ಹಿಂಡುವ ಬಡಪಾಯಿಯೊಬ್ಬನ ಕರುಣ ಕಥೆ ‘ಆಡು ಜೀವನ’ ‘ಆಡು ಜೀವನ’ಮೂಲ : ಬೆನ್ಯಾಮಿನ್ಕನ್ನಡಕ್ಕೆ : ಡಾ.ಅಶೋಕ ಕುಮಾರ್ಪ್ರಕಾಶಕರು : ಹೇಮಂತ ಸಾಹಿತ್ಯಪ್ರಕಟಣೆಯ ವರ್ಷ: ೨೦೧೨ಬೆಲೆ : ರೂ.೧೦೦ಪುಟಗಳು : ೧೮೪ ಬಡತನದ ಬೇಗೆಯನ್ನು ತಾಳಲಾರದೆ ಉತ್ತಮ ಭವಿಷ್ಯದ ಕನಸು ಕಾಣುತ್ತ ಕೊಲ್ಲಿ ರಾಷ್ಟçಕ್ಕೆ ಹೋಗಿ ಅಲ್ಲೂ  ದುರಾದೃಷ್ಟದ ಅನಿರೀಕ್ಷಿತ ಹೊಡೆತದಿಂದ ಅಸಹನೀಯ ವೇದನೆಯನ್ನನುಭವಿಸಿದ ಬಡಪಾಯಿಯ ಕರುಣ ಕತೆ ‘ಆಡು ಜೀವನ’. ಅಶಿಕ್ಷಿತನಾದ ಆತನ ಬಾಯಿಯಿಂದ ಕೇಳಿದ ಕತೆಗೆ ಲೇಖಕ ಬೆನ್ಯಾಮಿನ್ ಅವರು ಕಾದಂಬರಿಯ ರೂಪ ಕೊಟ್ಟಿದ್ದಾರೆ. ಈ ಕಾದಂಬರಿಯು ಬೆನ್ಯಾಮಿನ್ ಅವರಿಗೆ ಅಪಾರ ಜನಪ್ರಿಯತೆ – ಕೀರ್ತಿಗಳನ್ನು ತಂದು ಕೊಟ್ಟಿದೆ.  ಕೇರಳದಲ್ಲಿ ಮರಳುಗಾರಿಕೆಯ ಕಾರ‍್ಮಿಕನಾಗಿ ದುಡಿಯುತ್ತಿದ್ದ ನಜೀಬ್ ಎಂಬ ಬಡ ಯುವಕ, ತನ್ನ ಸ್ನೇಹಿತನ ಸಂಬಂಧಿಯ ಮೂಲಕ ಸಿಕ್ಕಿದ ವೀಸಾದ ಸಹಾಯದಿಂದ ಸಂಪಾದನೆ ಮಾಡುವ ಕನಸು ಕಾಣುತ್ತ ಸೌದಿ ಅರೇಬಿಯಕ್ಕೆ ಹೊಗುತ್ತಾನೆ.  ಅವನ ಜತೆಗೆ ಅಲ್ಲಿಗೆ ಹೋಗಲು ಆಗಲೇ ವೀಸಾ ಪಡೆದುಕೊಂಡಿದ್ದ ಹಕೀಮ್ ಎಂಬ ಜತೆಗಾರನೂ ಸಿಗುತ್ತಾನೆ.  ರಿಯಾದ್‌ನಲ್ಲಿ ವಿಮಾನದಿಂದಿಳಿದ ಅವರಿಬ್ಬರೂ ವಿಮಾನ ನಿಲ್ದಾಣದಲ್ಲಿ ಯಾರಿಗಾಗಿಯೋ ಕಾಯುತ್ತಿರುವಂತೆ ಕಂಡ ಅರಬಿಯನ್ನು ಕಂಡು ಆತನೇ ತಮ್ಮನ್ನು ಸ್ಪಾನ್ಸರ್ ಮಾಡಿದ ವ್ಯಕ್ತಿಯೆಂದು ತಪ್ಪಾಗಿ ತಿಳಿಯುತ್ತಾರೆ. ಭಾಷೆ ಗೊತ್ತಿಲ್ಲದ್ದರಿಂದ ಸಂವಹನ ಮಾಡಲಾಗದೆ ಇಬ್ಬರೂ ಆ ಅರಾಬ್ ( ಸಾಹುಕಾರ) ಜತೆಗೆ ಹೋಗಿಯೇ ಬಿಡುತ್ತಾರೆ. ಆದರೆ ಅವರು ಹೋಗಿ ತಲುಪಿದ್ದು ಎರಡು ಭಿನ್ನ ‘ಮಸ್ರಾ’( ತೋಟ) ಗಳಿಗಾಗಿತ್ತು.  ತೀರಾ ದುರ್ಗಂಧಗಳಿಂದ ತುಂಬಿದ್ದ ಕೊಳಕು ಪರಿಸರದಲ್ಲಿ ಅವರಿಬ್ಬರೂ ಬೇರೆ ಬೇರೆ ಪ್ರದೇಶಗಳಲ್ಲಿ ಆಡುಗಳನ್ನೂ ಒಂಟೆಗಳನ್ನೂ ನೋಡಿಕೊಳ್ಳುವ ಕೆಲಸ ಮಾಡ ಬೇಕಾಗಿತ್ತು. ಕ್ರೂರ ಅರಬಾಬ್ ಅವರನ್ನು ಕತ್ತೆಗಳಂತೆ ದುಡಿಸಿಕೊಂಡು, ವಿರೋಧಿಸಿದರೆ ಹೊಡೆದು ಬಡಿದು ಮಾಡಿ ಶೋಷಿಸುತ್ತಾನೆ. ನಜೀಬ್ ಅಲ್ಲಿಗೆ ಹೋದಾಗ ಅಲ್ಲಿ ಇನ್ನೊಬ್ಬ ಕೆಲಸಗಾರನೂ ಇದ್ದ.  ವರ್ಷಗಟ್ಟಲೆ ಧೀರ್ಘ ಕಾಲದ ಗುಲಾಮಗಿರಿಯು ಅವನನ್ನು ಒಂದು ಭೀಕರ ರೂಪಿಯನ್ನಾಗಿ ಮಾಡಿತ್ತು.  ನಜೀಬ್ ಬಂದು ಕೆಲವು ಕಾಲವಾದ ನಂತರ  ಅವನು ಕಾಣದಾದ.  ಮುಂದೆ ಮಸ್ರಾದ ಎಲ್ಲ ಕೆಲಸಗಳೂ ನಜೀಬ್‌ನ ಮೇಲೆ ಬಿದ್ದವು. ಭಾಷೆಯೂ ಗೊತ್ತಿಲ್ಲದೆ ಅವನು ಏಕಾಂಗಿಯಾಗಿ ದಿನಗಳನ್ನು ಕಷ್ಟದಿಂದ ಕಳೆಯುತ್ತಾನೆ.  ಹಸಿಹಾಲು ಮತ್ತು ಕುಬೂಸ್ ಅನ್ನುವ ಅರಬಿ ರೊಟ್ಟಿಯೂ ಸ್ವಲ್ಪವೇ ಸ್ವಲ್ಪ ನೀರೂ ಆಗಿದ್ದವು ಅವನಿಗೆ ಸಿಕ್ಕುತ್ತಿದ್ದ ಆಹಾರ.. ವಾಸಿಸಲು ಕೋಣೆಯಾಗಲಿ, ಸ್ನಾನಕ್ಕಾಗಲಿ, ಬದಲಿಸಲು ಬಟ್ಟೆಯಾಗಲಿ ಏನೂ ಸಿಗದ ಪರಿಸ್ಥಿತಿಯಲ್ಲಿ ಅವನ ಸ್ಥಿತಿ ಮೃಗಗಳಿಗಿಂತ ಕಡೆಯಾಗಿತ್ತು.  ಹೆಚ್ಚು ದೂರವಿಲ್ಲದ ಇನ್ನೊಂದು ಮಸ್ರಾದಲ್ಲಿ  ಅಂಥದೇ ಸ್ಥಿತಿಯಲ್ಲಿದ್ದ ಹಕೀಮನನ್ನು ನಜೀಬ್ ಕೆಲವೊಮ್ಮೆ ಭೇಟಿಯಾಗಲು ಹೋಗುವುದನ್ನು ಅರಬಾಬ್ ಯಾವಾಗಲೂ ತಡೆಯುತ್ತಿದ್ದ.   ಆಡುಗಳಿಗೆ ಊರಿನ ಕಥಾಪಾತ್ರಗಳನ್ನೂ ತನ್ನವರ ಹೆಸರುಗಳನ್ನೂ ಇಟ್ಟು ಅವುಗಳೊಂದಿಗೆ ಮಾತನಾಡುತ್ತ ನಜೀಬ್ ತನ್ನ ಒಂಟಿತನದ ನೋವಿಗೆ ಸಮಾಧಾನ ಹೇಳಿಕೊಳ್ಳುತ್ತಾನೆ.  ಈ ನಡುವೆ ಹಕೀಮ್ ಕೆಲಸ ಮಾಡುತ್ತಿದ್ದ ಮಸ್ರಾದಲ್ಲಿ ಇಬ್ರಾಹಿಮ್ ಖಾದರಿ ಎಂಬ ಸೋಮಾಲಿಯದ ಒಬ್ಬ ಪ್ರಜೆ ಕೂಡಾ ಕೆಲಸಕ್ಕೆ ಸೇರುತ್ತಾನೆ.  ಹೇಗಾದರೂ ತಪ್ಪಿಸಿಕೊಂಡು ಹೋಗಬೇಕೆಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದ  ಹಕೀಮ್ , ಖಾದರಿ ಮತ್ತು ನಜೀಬರಿಗೆ ಒಂದು ಸಣ್ಣ ಸಂಧರ‍್ಭವೊದಗಿ ಬರುತ್ತದೆ. ಮಸ್ರಾದ ಅರಬಾಬ್ ತನ್ನ ಸಂಬಂಧಿಕರ ಮಗಳ ಮದುವೆಯ ಕೆಲಸಗಳಿಗೆ ಹೋಗುತ್ತಿದ್ದ ಅವಕಾಶವನ್ನು ಬಳಸಿಕೊಂಡು ಅವರು ತಪ್ಪಿಸಿಕೊಂಡು ಓಡತೊಡಗುತ್ತಾರೆ.  ಮರುಭೂಮಿಯಲ್ಲಿ ಧೀರ್ಘ ದೂರದ ತನಕ ಓಡಿ ಓಡಿ, ಹಸಿವು ನೀರಡಿಕೆಗಳಿಂದ ಹೈರಾಣಾದ ಅವರಿಗೆ ಒಂದೆಡೆ  ದಾರಿಯೂ ತಪ್ಪಿ ಹೋಗುತ್ತದೆ.   ಓಟದ ನಡುವೆ ಹಕೀಮ್ ದಾಹ ತಡೆಯಲಾರದೆ ಸಾಯುತ್ತಾನೆ. ಮುಂದೆ ಖಾದರ್-ನಜೀಬರಿಗೆ ಒಂದು ಓಯಸಿಸ್ ಕಾಣಸಿಕ್ಕಿ  ಅಲ್ಲಿ ದಾಹ ತೀರಿಸಿಕೊಂಡು ಅವರು ಓಟ ಮುಂದುವರೆಸುತ್ತಾರೆ.  ಕೊನೆಗೆ ಒಂದು ಹೈವೇಗೆ ಬಂದು ತಲುಪುವಷ್ಟರಲ್ಲಿ ಇಬ್ರಾಹಿಮ್ ಕೂಡಾ ಕಾಣೆಯಾಗಿರುತ್ತಾನೆ. ಹೈವೇಯಲ್ಲಿ ಒಬ್ಬ ಸಭ್ಯ ಅರಬಿ ನಜೀಬ್‌ನನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಮುಂದಿನ ಪಟ್ಟಣವಾದ ರಿಯಾದ್‌ನ ಬತ್‌ಹಕ್ಕೆ ತಲುಪಿಸುತ್ತಾನೆ.  ಬತ್‌ಹ ತಲುಪಿದ ನಜೀಬ್ ಕುಞಕ್ಕ ಎಂಬವನಲ್ಲಿ  ಚಾಕರಿಗೆ ನಿಂತು ಧೀರ್ಘ ಕಾಲದ ಬಳಿಕ ತನ್ನ ಹಿಂದಿನ ಮನುಷ್ಯರೂಪ ಮತ್ತು ಆರೋಗ್ಯವನ್ನು ಮರಳಿ ಪಡೆಯುತ್ತಾನೆ. ಊರಿಗೆ ಹಿಂದಿರುಗಲು ಪೋಲಿಸರಿಗೆ ವಿಷಯ ತಿಳಿಸಲಾಗುತ್ತದೆ. ಹಾಗೆ ಷುಮೇಸಿಯ ಸೆರೆಮನೆಯಲ್ಲಿ ಕೆಲವು ತಿಂಗಳುಗಳು ಕಳೆದ ನಂತರ ಒಂದು ದಿನ ನಜೀಬನ ಅರಬಾಬ್ ಕಳೆದು  ಹೋದ ತನ್ನ ಗುಲಾಮರನ್ನು ಅರಸಿಕೊಂಡು ಬರುತ್ತಾನಾದರೂ ನಜೀಬನನ್ನು ಹಿಡಿದೊಯ್ಯುವುದಿಲ್ಲ, ಯಾಕೆಂದರೆ ಅವನ ವೀಸಾದಲ್ಲಿದ್ದ ವ್ಯಕ್ತಿ ನಜೀಬ್ ಆಗಿರಲಿಲ್ಲ. ಮುಂದೆ ಭಾರತೀಯ ದೂತಾವಾಸವು ಕೊಟ್ಟ ಔಟ್ ಪಾಸಿನ ಮೂಲಕ ನಜೀಬ ಊರಿಗೆ ತಲುಪುತ್ತಾನೆ. ವ್ಯಕ್ತಿಯೊಬ್ಬನ ನಿಜ ಅನುಭವವನ್ನು ಆಧರಿಸಿ ಬರೆದದ್ದಾದರೂ ಇದು ಬರೇ ಒಂದು ಜೀವನ ಕಥೆಯಲ್ಲ. ಕಾದಂಬರಿಯ ನಜೀಬ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕನ್ನು ಮುಂದುವರಿಸಬೇಕೆಂಬ ಇಚ್ಛಾಶಕ್ತಿ ಇದ್ದವನಾಗಿದ್ದರೆ  ನಿಜ ಬದುಕಿನ ನಜೀಬ್ ಮರುಭೂಮಿಯಲ್ಲಿದ್ದಾಗ  ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದವನೇ ಆಗಿದ್ದ.   ಬದುಕಿನ ಬಗ್ಗೆ ಜುಗುಪ್ಸೆ ಹೊಂದಿದ್ದ. ರಿಯಾದಿನಲ್ಲಿ ಕಾಲೂರಿದ ದಿವಸದಿಂದ ಕಾದಂಬರಿಯಲ್ಲಿ ನಮೂದಿಸಿರುವ ೧೯೯೨ ಏಪ್ರಿಲ್ ೪ರಂದೇ ತಾನು ಅಲ್ಲಿಗೆ ಹೋಗಿ ತನ್ನ ವಲಸೆ ಬದುಕನ್ನು ಆರಂಭಿಸಿದ್ದೆಂದೂ ಲೇಖಕರು ಹೇಳುತ್ತಾರೆ. ಸೊಗಸಾದ ನಿರೂಪಣೆ,  ಓದುಗರ ಕಣ್ಣುಗಳನ್ನು ಹನಿಗೂಡಿಸುವ ಸಂಕಟ ಮತ್ತು ಸಂಕಷ್ಟಗಳ ವಿವರಗಳು, ಅನುಭವ ಸಾಂದ್ರವಾದ ಕಥಾವಸ್ತು, ತನಿಮಲೆಯಾಳದ ಸೊಗಡುಗಳು ಮೇಳೈಸಿ ನಿಂತ ಕಾದಂಬರಿ ಇದು. ಡಾ.ಅಶೋಕ ಕುಮಾರ್ ಅವರ ಅನುವಾದ ಮೂಲಕ್ಕೆ ನಿಷ್ಠವಾಗಿದೆ. ******************************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ವಾರದ ಕವಿತೆ

ಅಡುಗೆಮನೆ ಜಗತ್ತು

ವಾರದ ಕವಿತೆ ಅಡುಗೆಮನೆ ಜಗತ್ತು ಉಮಾ ಮುಕುಂದ್ ಕಬ್ಬಿಣದ ತವದ ಮೇಲೆರೆದದೋಸೆಯ ರುಚಿ ಮತ್ತು ಗರಿನಾನ್ ಸ್ಟಿಕ್ ತವದ ದೋಸೆಗೆ ಬಂದೀತು ಹೇಗೆ?ಅಂಟಿಸಿಕೊಳ್ಳದ್ದು ಆಪ್ತವಾದೀತು ಹೇಗೆ? ಉಪ್ಪಿನಕಾಯಿ ಜಾಡಿಗೆ ತುಂಬಿಸಿಮುಚ್ವಿಟ್ಟರೆ ಮುಗಿಯಲಿಲ್ಲಆಗಾಗ್ಗೆ ಕೈಯಾಡಿಸಬೇಕು ತೆಗೆದುಕೆಡದಂತಿರಿಸಿಕೊಳ್ಳಲು. ಅಡುಗೆಮನೆ ಕೈಒರೆಸುಅನಿವಾರ್ಯವಾದರೂಮನೆಯವರಿಗೆ ಸಸಾರಕೆಲಕೆಲವು ಜನರ ಹಾಗೆ. ಬೇಕಾದ್ದು, ಬೇಡದ್ದು ತುಂಬಿಮುಚ್ಚಿಬಿಡುವ ಕಪಾಟಿನಡುಗೆಮನೆಗಿಂತಾಇಟ್ಟಿದ್ದು, ಕೆಟ್ಟದ್ದು ಕಾಣುವ ಅಡುಗೆಮನೆಯಾದರೆಆಗಾಗ ಶುಚಿಗೊಳಿಸಿಕೊಂಡೇವು. ತರಕಾರಿ ಸಹಜ ಬಣ್ಣ ಉಳಿಸಿಕೊಳ್ಳಲುಬೇಯುವಾಗಿಷ್ಟು ಉಪ್ಪು ಉದುರಿಸಿದರಾಯ್ತುಮನುಷ್ಯರ ನಿಜಬಣ್ಣ ತಿಳಿಯಲುಉಪಾಯವೇನಾದರೂ ಇದ್ದಿದ್ದರೆ… ಮೊಂಡಾದ ಚಾಕು, ಈಳಿಗೆಗೆಸಾಣೆ ಹಿಡಿಯಬೇಕು ಆಗಾಗ್ಗೆಮೊನಚು ಕಳಕೊಂಡ ಸಂಬಂಧಗಳಿಗೂ ಹಾಗೇ… ಕೊನೆ ಗುಟುಕಿನವರೆಗೂ ಬಿಸಿಆರದಹಾಗೆ ಕಾಫಿ ಬೆರೆಸುವುದೂಕೊನೆವರೆಗೂ ಬಿಸುಪು ಕಾಯ್ದುಕೊಂಡುಬದುಕುವುದೂ ಎಲ್ಲರಿಗೂ ಸಿದ್ಧಿಸುವುದಲ್ಲ. ಸಿಟ್ಟು, ಅಸಹನೆ, ಅತೃಪ್ತಿ ಎಲ್ಲವನ್ನೂಹಿಟ್ಟಿನೊಂದಿಗೆ ಮಿದ್ದು ಮಿದ್ದುಲಟ್ಟಿಸಿ ಬೇಯಿಸಿದ ಚಪಾತಿತಿನ್ನಲು ಬಲು ಮೃದು, ಮಧುರ. ಜ಼ೊರೋ ಎಂದು ನಲ್ಲಿ ತಿರುಗಿಸಿಇನ್ನೆರಡು ತೊಳೆದರೆ ಮುಗಿಯಿತುಎನ್ನುವಷ್ಟರಲ್ಲೇ ನಿಂತ ನೀರು!ಇದ್ದಾಗ ತಿಳಿಯದ ಬೆಲೆ, ಹೋದಾಗ ಹಳಹಳಿಕೆ. ************************************* ಪ್ರೇರಣೆ: ಬಿ.ವಿ.ಭಾರತಿಯವರ ಕವಿತೆಯಿಂದ

ಅಡುಗೆಮನೆ ಜಗತ್ತು Read Post »

ಇತರೆ, ವರ್ತಮಾನ

ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..!

ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಕೆ.ಶಿವು.ಲಕ್ಕಣ್ಣವರ ‘ಮಹಾನಾಯಕ’ ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಡಿ. 6 ದೇಶದ ಮಹಾನಾಯಕ ಅಂಬೇಡ್ಕರ್ ಅವರನ್ನು ಕಳೆದುಕೊಂಡ ದಿನ. ಅವರ ಕೊನೆಯ ಸಂದೇಶವನ್ನು ಪ್ರತಿಯೊಬ್ಬರು ತಿಳಿಯಬೇಕು ಅಂದು ಡಿಸೆಂಬರ್  6, 1956. ಇಡೀ ಭಾರತದಲ್ಲಿ ಕಣ್ಣೀರ ಕೋಡಿ ಹರಿದ ದಿನ. ಕತ್ತಲಲ್ಲಿದ್ದ ಭಾರತಕ್ಕೆ ಬೆಳಕಿನ ಕಿರಣ ನೀಡಿ, ವಿಶ್ವವೇ ಬೆರಗಾಗುವಂತೆ ಮಾಡಿದ್ದ, ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಬ್ಬಾಣ ಹೊಂದಿದ ದಿನ. ಭಾರತದ ಕಣ್ತೆರೆಸಿ, ಸಮಾನತೆಯ ಬೀಜ ಬಿತ್ತಿ ಹೋದ ಆ ಮಹಾನಾಯಕನ ಹೋರಾಟದ ಫಲವನ್ನು ಇಡೀ ಭಾರತವೇ ಇಂದು ಉಣ್ಣುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಈ ದೇಶವನ್ನು ಉತ್ತಮ ದಾರಿಗೆ ಕೊಂಡೊಯ್ಯಲೆಂದೇ ಅವರು ಈ ಭಾರತದಲ್ಲಿ ಜನಿಸಿದರು ಎಂದೇ ಹೇಳಬಹುದು. ಅಂಬೇಡ್ಕರ್ ಅವರು  ಭಾರತದಲ್ಲಿ ಜನಿಸದೇ ಇರುತ್ತಿದ್ದರೆ, ಇಂದು ಭಾರತದ ಪರಿಸ್ಥಿತಿ ಏನಾಗಿರುತ್ತಿತ್ತು ಎನ್ನುವುದನ್ನು ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ಭಾರತದ ಬೀದಿಗಳಲ್ಲಿ ಚಿನ್ನ, ರತ್ನ, ವಜ್ರ ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವ ಇತಿಹಾತಿಹಾಸವನ್ನು ನಾವು ಓದಿದ್ದೇವೆ. ಆದರೆ, ಅದೇ ಭಾರತದಲ್ಲಿ ಮನುಷ್ಯನನ್ನು ಮನುಷ್ಯನಂತೆ ಕಾಣಲಾಗುತ್ತಿರಲಿಲ್ಲ ಎನ್ನುವ ಸತ್ಯವನ್ನೂ ನಾವು ಒಪ್ಪಿಕೊಂಡಿದ್ದೇವೆ. ಇಂದು ಭಾರತದಲ್ಲಿ ಇಷ್ಟರ ಮಟ್ಟಿಗೆ ಸಮಾನತೆ, ನೆಮ್ಮದಿ ಇದೆ ಎಂದರೆ, ಅಂಬೇಡ್ಕರ್ ಅವರು ನೀಡಿದ ಪವಿತ್ರ ಸಂವಿಧಾನದಿಂದ ಮಾತ್ರವೇ ಅದು ಸಾಧ್ಯವಾಗಿದೆ. ಎಲ್ಲ ನಾಯಕರು ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ಸಿಗಬೇಕೆಂದು ಹೋರಾಟ ಮಾಡಿದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದೊಳಗೆ ಜನರು ಸ್ವತಂತ್ರವಾಗಿ ಬದುಕಬೇಕು ಎಂದು ಕನಸು ಕಂಡರು ಅದಕ್ಕಾಗಿ ಹೋರಾಟ ಮಾಡಿದರು. ಜಾತಿವಾದಿಗಳು, ಮನುವಾದಿಗಳ ನೂರಾರು ಸಂಚನ್ನು ಮುರಿದು, ಪವಿತ್ರವಾದ ಸಂವಿಧಾನವನ್ನು ಈ ದೇಶಕ್ಕೆ ಅರ್ಪಿಸಿದರು. ಭಾರತವು ಎರಡು ಹೋಳಾಗಿ ಭಾರತ-ಪಾಕಿಸ್ತಾನವಾದಾಗ ಅಂಬೇಡ್ಕರ್ ಅವರು ಕೂಡ, ನಮಗೂ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಹೋರಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಯಾಕೆಂದರೆ, ಅಂಬೇಡ್ಕರ್ ಅವರಂತಹ ರಾಷ್ಟ್ರವಾದಿ ಇಂದಿಗೂ ಯಾರೂ ಇಲ್ಲ. ಮುಂದೆಯೂ ಬರಲು ಸಾಧ್ಯವಿಲ್ಲ ಅಂಬೇಡ್ಕರ್ ಅವರು ಅಪ್ಪಟ ದೇಶಪ್ರೇಮಿಯಾಗಿದ್ದರು. ಅವರು ರಾಷ್ಟ್ರದ ಬಗ್ಗೆ ಏನು ಹೇಳುತ್ತಿದ್ದರೆಂದರೆ, “ನಾನು ಮೊದಲನೆಯದಾಗಿ ಮತ್ತು ಕೊನೆಯದಾಗಿಯೂ ಇಂಡಿಯನ್”(ಭಾರತೀಯ). ಡಿಸೆಂಬರ್ 6 ಭಾರತ ದೇಶಕ್ಕೆ ದುಃಖದ ದಿನ. ಇಡೀ ಜಗ್ಗತ್ತು ಕಂಡಿರದ ಮಹಾಮಾನವತಾವಾದಿ, ಹೋರಾಟಗಾರ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ದಿನಗಳ ಬಗ್ಗೆ Last few years of Dr. Ambedkar  ಎಂಬ ಕೃತಿಯಲ್ಲಿ ಅವರ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತು ಅವರು ಬರೆದಿದ್ದಾರೆ. ನಾನಕ್ ಚಂದ್ ರತ್ತು ಅವರಿಗೆ ಆ ದಿನ ಎಂದೂ ಮರೆಯದ ದಿನವಾಗಿತ್ತು. ಅಂದು 1956ರ ಜುಲೈ 31ರ ಮಂಗಳವಾರ. ಸಮಯ 5:30ರ ವೇಳೆಗೆ ನಾನಕ್ ಚಂದ್ ಕೆಲವು ಪತ್ರಗಳನ್ನು ಹೊಂದಿಸಿಡುತ್ತಿದ್ದರು.  ಆ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸ್ವಸ್ಥರಾದರು. ಅದನ್ನು ಗಮನಿಸಿದ ರತ್ತು, ಅಂಬೇಡ್ಕರ್ ಅವರನ್ನು ವಿಚಾರಿಸಿದ ಬಳಿಕ, ಹೀಗೆ ಕೇಳಿದರು. “ ಸರ್…  ನೀವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಖಿನ್ನತೆಗೆ ಒಳಗಾಗುತ್ತಿದ್ದೀರಿ, ಅದು ಯಾಕೆ ಎಂದು ನನಗೆ ತಿಳಿಯಬೇಕು ಎಂದು ಕೇಳುತ್ತಾರೆ.  ಅಂದು ಬಾಬಾ ಸಾಹೇಬರು ನೀಡಿರುವ ಉತ್ತರವನ್ನು ಇಂದು ಅವರ ಸಮುದಾಯ ಗಂಭೀರವಾಗಿ ತೆಗೆದುಕೊಂಡಿದ್ದರೆ, ಬಹುಶಃ ಇಂದಿಗೂ ದಲಿತ ಸಮುದಾಯ ಹಿಂದಿನ ಅದೇ ಸ್ಥಿತಿಯಲ್ಲಿ ಇರುತ್ತಿರಲಿಲ್ಲವೋ ಏನೋ… ನಾನಕ್ ಚಂದ್ ರತ್ತು ಅವರ ಪ್ರಶ್ನೆಗೆ ಉತ್ತರಿಸಲು ಆರಂಭಿಸಿದ ಅಂಬೇಡ್ಕರರು, ನಾನು ಬದುಕಿರುವಾಗಲೇ ನನ್ನ ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ನನ್ನ ಜನರು ದೇಶದ ಆಳುವ ವರ್ಗವಾಗಬೇಕು ಎಂದು ನಾನು ಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದಲ್ಲಿ ಹಂಚಿಕೊಳ್ಳಬೇಕು ಎಂದು ನಾನು ಬಯಸಿದ್ದೆ. ಆದರೆ ಅದರ ಸಾಧ್ಯತೆಗಳು ನನಗೆ ಗೋಚರಿಸುತ್ತಿಲ್ಲ. ನಾನೇ ಏನಾದರೂ ಮಾಡುತ್ತೇನೆ ಎಂದು ಮುಂದುವರಿಯ ಬೇಕೆಂದುಕೊಂಡರೆ, ನನ್ನನ್ನು ಅನಾರೋಗ್ಯ ಬಾಧಿಸುತ್ತಿದೆ. ಈ ಅನಾರೋಗ್ಯದ ಕಾರಣದಿಂದಾಗಿ ನಾನು ನಿಶ್ಯಕ್ತನಾಗಿದ್ದೇನೆ.  ನಾನು ಈವರೆಗೆ ಏನೆಲ್ಲ ಸಾಧಿಸಿದ್ದೇನೋ ಅದರ ಫಲವನ್ನು ಪಡೆದ ನನ್ನವರು ಕೆಲವೇ ಮಂದಿ ಅನುಭವಿಸುತ್ತಿದ್ದಾರೆ. ಶಿಕ್ಷಣ ಪಡೆದವರು  ವಂಚನೆ ಮಾಡಿಕೊಂಡು ಅಯೋಗ್ಯರಾಗಿದ್ದಾರೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೇ ಸಾಧಿಸಿಕೊಂಡ ಇವರು ನನ್ನ ನಿರೀಕ್ಷೆಗಳನ್ನು ಸುಳ್ಳು ಮಾಡಿದ್ದಾರೆ. ಮೀಸಲಾತಿ ಪಡೆದುಕೊಂಡು ಸರ್ಕಾರಿ ಕೆಲಸ ಪಡೆದವರು ತಮ್ಮ ಸ್ವಾರ್ಥ ಸಾಧನೆಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಮುದಾಯದ ಸೇವೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ.  ಹಳ್ಳಿಗಳಲ್ಲಿ ಇನ್ನೂ ಜನರು ಶೋಷಣೆಯನ್ನು ಅನುಭವಿಸುತ್ತಿದ್ದಾರೆ.  ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದಾರೆ.  ಈ ರೀತಿಯಾಗಿರುವ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನಹರಿಸಬೇಕು ಎಂದು ನಾನು ಯೋಚಿಸುತ್ತಿದೆ. ಆದರೆ, ನನಗೆ ಇರುವುದು ಇನ್ನು ಕೆಲವೇ ದಿನಗಳು ಎಂದು ಬಾಬಾ ಸಾಹೇಬರು ನೋವು ಪಟ್ಟರು. ಅಂಬೇಡ್ಕರ್ ಅವರ ನೋವು ಇಂದಿಗೂ ನಿಜವೇ ಆಗಿದೆ ಅಲ್ಲವೇ? ಬಹಳಷ್ಟು ದಲಿತರು ಇಂದಿಗೂ ಉತ್ತಮ ಸ್ಥಿತಿವಂತರಾಗಿ ತಾವು, ತಮ್ಮ ಸಂಬಂಧಿಕರು ಎಂದೇ ನೋಡುತ್ತಿದ್ದಾರೆ. ತಮ್ಮ ಸಮುದಾಯದ ಒಂದಿಷ್ಟು ಮಕ್ಕಳನ್ನು ದತ್ತುಪಡೆದು ಅವರ ಶಿಕ್ಷಣಕ್ಕೆ ನೆರವು ನೀಡುವ ನೌಕರರು ಎಂದು ಎಷ್ಟು ಜನ ಇದ್ದಾರೆ ಎಂದು ಕೇಳಿದರೆ, ಕೇವಲ ಬೆರಳೆಣಿಕೆಯ ನೌಕರರು ಮಾತ್ರವೇ ಸಿಗುತ್ತಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸಹಾಯ ಮಾಡುವ ನೌಕರರು ಎಷ್ಟು ಜನರಿದ್ದಾರೆ ಎಂದು ಯೋಚಿಸಿದರೆ, ಅಲ್ಲಿಯೂ ಕೇವಲ ಬೆರಳೆಣಿಕೆಯ ಜನರು ಸಿಗುತ್ತಾರೆ. ಸಮರ್ಥರು ಕೈಕಟ್ಟಿ ಕುಳಿತಿದ್ದರೆ, ಸಾಧಾರಣ ಸ್ಥಿತಿವಂತರು ಇಂದು ಸಮಾಜ ಸುಧಾರಣೆ ಮಾಡಬೇಕು ಎಂದು ಹೊರಟಿದ್ದಾರೆ.  ಆದರೆ ಅವರಲ್ಲಿ ಶಕ್ತಿ ಇಲ್ಲ. ಇಂತಹ ಸ್ಥಿತಿಯಲ್ಲಿ ಇಂದು ಸಮುದಾಯ ಅಧೋಗತಿಯತ್ತ ಪ್ರಯಾಣಿಸುತ್ತಿದೆ. ಅಂಬೇಡ್ಕರ್ ಅವರು ಇಂತಹ ದುಸ್ಥಿತಿಯನ್ನು ನೆನೆದು ಅಂದು ಕಣ್ಣೀರು ಹಾಕಿದ್ದರು. ತನ್ನ ಸಮುದಾಯ ಆಳುವ ವರ್ಗವಾಗಬೇಕು. ಎಷ್ಟೋ ವರ್ಷಗಳಿಂದ ಭಾರತದಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಲಾಗಿದ್ದ ಅಸ್ಪೃಶ್ಯ ಸಮುದಾಯವನ್ನು  ಮೇಲೆತ್ತಬೇಕು, ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕು. ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕಾದರೆ ಅವರು ಆಳುವ ವರ್ಗವಾಗಬೇಕು ಎಂದು ಅವರು ನಿರೀಕ್ಷಿಸಿದ್ದರು. ಆದರೆ, ಸಮುದಾಯದಲ್ಲಿ ಅಭಿವೃದ್ಧಿ ಹೊಂದಿದವರು ಅವರ ಸ್ವಾರ್ಥವನ್ನು ಇಂದಿಗೂ ನೋಡುತ್ತಿದ್ದಾರೆಯೇ ಹೊರತು, ಸಮುದಾಯದ ಅಭಿವೃದ್ಧಿಗೆ ಅವರಿಂದ ಯಾವುದೇ ಸಹಾಯವೂ ಸಿಗುತ್ತಿಲ್ಲ. ಹೀಗಾಗಿಯೇ ಇಂದಿಗೂ  ಈ ಸಮುದಾಯದ ಬಡವರು  ಶೈಕ್ಷಣಿಕ ರಾಜಕೀಯವಾಗಿ ಮೇಲೆ ಬರಲಾಗದೇ ತನ್ನ ಸಮುದಾಯದ ಒಳಗೆಯೇ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಅಂಬೇಡ್ಕರ್ ಅವರು ತಮ್ಮ ಮನಸ್ಸಿನಲ್ಲಿದ್ದ ನೋವನ್ನು ರತ್ತು ಬಳಿಯಲ್ಲಿ ಹೇಳುತ್ತಾ,  “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್”, “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ”, ಹಿಂದೂ ಧರ್ಮದ ಒಗಟುಗಳು ಎನ್ನುವ ನನ್ನ ಎಲ್ಲಾ ಕೃತಿಗಳನ್ನು ಜೀವಿತಾವಧಿಯಲ್ಲಿಯೇ ಪ್ರಕಟಿಸಬೇಕು ಎಂದು ನಾನು ಬಯಸಿದ್ದೆ. ಆದರೆ ಅವುಗಳನ್ನು ಹೊರತರಲೂ ನನ್ನಿಂದ ಸಾಧ್ಯವಾಗುತ್ತಿಲ್ಲವಲ್ಲ, ಅದು ಮುಂದೆಂದಾದರೂ ಪ್ರಕಟವಾಗಬಹುದು ಎಂದು ನಾನು ಅಂದುಕೊಂಡರೂ ಆ ಸಾಧ್ಯತೆಗಳು ನನಗೆ ಕಾಣುತ್ತಿಲ್ಲ.  ನನ್ನ ಚಳುವಳಿಯನ್ನು ಶೋಷಿತ ಸಮುದಾಯದಿಂದ ಬಂದು ಯಾರಾದರೂ ಮುನ್ನಡೆಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಅಂತಹವರು ಯಾರೂ ನನಗೆ ಈ ಸಂದರ್ಭದಲ್ಲಿ ಕಾಣುತ್ತಿಲ್ಲ. ನಾನು ಯಾರ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆನೋ, ಅವರು ಈ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ.  ಅವರು ನಾಯಕತ್ವಕ್ಕಾಗಿ, ಅಧಿಕಾರಕ್ಕಾಗಿ ತಮ್ಮಲೇ ಹೋರಾಡುತ್ತಿದ್ದಾರೆ. ನನ್ನ ದೇಶದ ಜನತೆಗೆ ಸೇವೆ ಸಲ್ಲಿಸುವ ಆಸೆ ನನಗೆ ಇನ್ನೂ ಇದೆ. ಪೂರ್ವಾಗ್ರಹ ಪೀಡಿತ ಜಾತಿ ಎಂಬ ರೋಗವನ್ನು ಅಂಟಿಸಿಕೊಂಡಿರುವ ಜನರೇ ಇಲ್ಲಿ ತುಂಬಿದ್ದಾರೆ. ಈ ದೇಶದಲ್ಲಿ ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಂಧಪಟ್ಟಂತೆ ಯಾರಾದರೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ. ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ ಎಂದು ಅವರು ಸಂಕಟ ಅನುಭವಿಸುತ್ತಾರೆ. ಅಂಬೇಡ್ಕರ್ ಅವರ ಧ್ವನಿಯಲ್ಲಿ ಕಂಪನ ಆರಂಭವಾಗುತ್ತದೆ  “ಧೈರ್ಯ ತಂದುಕೋ ರತ್ತು, ನೀನು ಎದೆಗುಂದ ಬೇಡ, ಜೀವನ ಯಾವಗಲಾದರೂ ಕೊನೆಗೊಳ್ಳಲೇ ಬೇಕು.  ನನ್ನ ಜನರಿಗೆ ಹೇಳು ನಾನು ಇಲ್ಲಿಯವರೆಗೆ ಏನನ್ನು ಸಾಧಿಸಿದ್ದೇನೋ, ಅದನ್ನು ನನ್ನ ಶತ್ರುಗಳ ವಿರುದ್ಧ ಹೋರಾಡುತ್ತಾ, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರವಾಗಿ ನೋವುಗಳ ಸರಮಾಲೆಯನ್ನೇ ಅನುಭವಿಸುತ್ತಾ ಸಾಧಿಸಿದ್ದೇನೆ. ಈ ವಿಮೋಚನ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ  ಆದರೂ  ಈ ರಥ ಮುನ್ನಡೆಯಲೇ ಬೇಕು. ರಥವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ. ಅದು ಎಲ್ಲಿದೆಯೋ ಅಲ್ಲಿಯೇ ಇರಲು ಬಿಡಿ. ಯಾವುದೇ ಕಾರಣಕ್ಕೂ ಅದನ್ನು ಹಿಂದಕ್ಕೆ ಸರಿಯಲು ಬಿಡಬೇಡಿ ಇದು ನನ್ನ ಕೊನೆಯ ಸಂದೇಶ, ಇದನ್ನು ನನ್ನ ಜನರಿಗೆ ತಲುಪಿಸು ಎಂದು ಹೇಳುತ್ತಾರೆ.  ಇದು ಅಂಬೇಡ್ಕರರ ಕೊನೆಯ ಮಾತುಗಳು. ಅಂದು ರತ್ತು ಜೊತೆಗೆ ಇಷ್ಟೆಲ್ಲ ಮಾತುಗಳನ್ನಾಡಿದ್ದ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಿದ್ದೆಗೆ ಜಾರಿದ್ದರು. ಮರುದಿನ ಅಂಬೇಡ್ಕರ್ ಅವರು ಎದ್ದೇಳಲೇ ಇಲ್ಲ. ಅಂಬೇಡ್ಕರ್ ಅವರು ನಿಧನರಾಗಿದ್ದರು. ಇಡೀ ದೇಶವೇ ಸ್ತಬ್ಧವಾಗಿತ್ತು. ಅಂಬೇಡ್ಕರ್ ಅವರ ಕಾಲಿಗೆ ಅಡ್ಡವಾಗುತ್ತ, ಪ್ರತಿನಿತ್ಯ ತೊಂದರೆ ಕೊಡುತ್ತಿದ್ದ ದೊಡ್ಡ ದೊಡ್ಡ ನಾಯಕರು ಎನಿಸಿಕೊಂಡಿದ್ದವರೆಲ್ಲರೂ ಆ ದಿನ ಕಣ್ಣೀರು ಹಾಕಿದರು. ಅಂಬೇಡ್ಕರ್ ಎಂದರೆ ಅವರೊಂದು ವ್ಯಕ್ತಿಯಾಗಿರಲಿಲ್ಲ, ಅವರು ಈ ದೇಶದ  ಶಕ್ತಿಯಾಗಿದ್ದರು. ಅದು ಅಂದಿಗೂ ಇಂದಿಗೂ ಎಂದೆಂದಿಗೂ…. # ಈ ಕೃತಿಯನ್ನು ನಾನಕ್ ಚಂದ್ ರತ್ತು ಅವರು ಬರೆದಿದ್ದಾರೆ… *********************************************************

ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಕೆ.ಸುನಂದಾ ಗೆಳತಿ ನಿನ್ನಸೌಂದರ್ಯ ಯಾವ ಶಿಲ್ಪಿಕೈ ಚಳಕವೊ ?** ವಿದ್ಯೆ ದುಡಿಮೆತಾಳ್ಮೆ ; ಇದ್ರೆ ಎಲ್ಲವೂಜಯಶೀಲವು** ಮನತಟ್ಟದೆಹುಟ್ಟೀತೇನು ; ಸ್ವಂತಿಕೆಮರೆತ ಕಾವ್ಯ** ಕಾವ್ಯ ಲಹರಿಬಸಿರಲ್ಲಿ ಪಳಗಿಜನ್ಮಿಸಬೇಕು** ಪಕ್ಟವಾಗದೇಕಿತ್ತರೆ ರುಚಿಸದುಸಾಹಿತ್ಯ ರಸ ** ತಾಳದು ಮನಬರೆದೆ ಕಾವ್ಯ ; ಉಕ್ಕಿಹೊರಹೊಮ್ಮಿತು** ಭವ್ಯತೆಯಲಿಹುಟ್ಟಿದ್ದು ಶಾಸ್ವತದಮಧುರ ಗೀತೆ** ಪಲ್ಲವಿಸಿತುಆತ್ಮದಿಂದ ; ಕಾವ್ಯದಸತ್ವ ಶಕ್ತಿಯು** ಭಾವ ಗರ್ಭದಿಕಾವ್ಯ ಕಟ್ಟಿ ; ಹುಟ್ಟಿದ್ದುರಸ ಭರಿತ**************************************

ಹಾಯ್ಕುಗಳು Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಅಂಕಣ ಬರಹ ಒಂದು ಸಲ, ರೈತರ ಕಮ್ಮಟದಲ್ಲಿ ಮಾತಾಡುವ ಅವಕಾಶ ಒದಗಿತು. ನನ್ನ ಮಾತಿನ ಸಾರವನ್ನು ಹೀಗೆ ಹಿಡಿದಿಡಬಹುದು: “ಯಾವುದೇ ಚಳುವಳಿಗೆ ರಾಜಕೀಯ, ಆರ್ಥಿಕ ಸಾಂಸ್ಕೃತಿಕ ಆಯಾಮಗಳಿರುತ್ತವೆ. ಸದ್ಯದ ಮಾರುಕಟ್ಟೆ ಆರ್ಥಿಕತೆಯ ಸನ್ನಿವೇಶವು ರೈತರನ್ನು ದಲಿತರ ಹಾಗೂ ಮಹಿಳೆಯರ ಹಾಗೆ ದಮನಿತ ವರ್ಗಕ್ಕೆ ಇಳಿಸಿದೆ. ಇದಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸಂಭವಿಸಿರುವ ಅವರ ಸಾವುಗಳೇ ಸಾಕ್ಷಿ. ರೈತರ ಮುಖ್ಯ ಬೇಡಿಕೆಗಳೆಂದರೆ, ಜಮೀನನ್ನು ತಮ್ಮಿಚ್ಛೆಗೆ ವಿರುದ್ಧವಾಗಿ ಕಿತ್ತು ಉದ್ಯಮಿಗಳಿಗೆ ಕೊಡುವುದರಿಂದ ರಕ್ಷಿಸಿಕೊಳ್ಳುವುದು; ಬೀಜ ಗೊಬ್ಬರ ಕೊಳ್ಳಲು ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯುವುದು, ಬೆಳೆದ ಫಸಲಿಗೆ ಸೂಕ್ತಬೆಲೆ ಪಡೆಯುವುದು. ಆದರೆ ಮಾರುಕಟ್ಟೆ ಮತ್ತು ಹಣಕಾಸು ಅವರ ನಿಯಂತ್ರಣದಲ್ಲಿಲ್ಲ. ಆ ಸಮಸ್ಯೆಗೆ ಕಾರಣವಾಗಿರುವುದು ಪ್ರಭುತ್ವಗಳು ಅನುಸರಿಸುತ್ತಿರುವ ಮಾರುಕಟ್ಟೆಪರ ನೀತಿ. ಜನರಿಂದ ಆಯ್ಕೆಯಾದ ಪ್ರಭುತ್ವಗಳನ್ನು ನಿಯಂತ್ರಿಸುತ್ತಿರುವುದು ಮಾರುಕಟ್ಟೆ ಶಕ್ತಿಗಳು ಅರ್ಥಾತ್ ಉದ್ಯಮಪತಿಗಳು. ಆದ್ದರಿಂದ ಪ್ರಭುತ್ವದ ನೀತಿಗಳನ್ನು ಟೀಕಿಸುವ, ತಿದ್ದುವ, ಚುನಾವಣೆಗಳಲ್ಲಿ ಬದಲಿಸುವ ಕೆಲಸವನ್ನೂ ರೈತಚಳುವಳಿ ಮಾಡಬೇಕಿದೆ. ಸಾಧ್ಯವಾದರೆ ತಾನೇ ಅಧಿಕಾರ ಹಿಡಿಯುವತ್ತ ಚಲಿಸಬೇಕಿದೆ. ಚಳುವಳಿಯ ಈ ರಾಜಕೀಯ-ಆರ್ಥಿಕ ಆಯಾಮದ ಬಗ್ಗೆ ಚಿಂತಕರು ಈಗಾಗಲೇ ಸಾಕಷ್ಟು ಚರ್ಚಿಸಿದ್ದಾರೆ. ಲೇಖಕನಾಗಿ ನಾನು ಅದರ ಬಗ್ಗೆ ಹೇಳಲಾರೆ. ಯಾವುದೇ ಆರ್ಥಿಕ ರಾಜಕೀಯ ಚಳುವಳಿಗಳಿಗೆ ಇರಬೇಕಾದ ಸಾಂಸ್ಕೃತಿಕ ಆಯಾಮದ ಬಗ್ಗೆ ನನ್ನ ಆಲೋಚನೆ ಹಂಚಿಕೊಳ್ಳುತ್ತೇನೆ. ಸಾಂಸ್ಕೃತಿಕ ಆಯಾಮವು ನಮ್ಮ ಆಲೋಚನ ಕ್ರಮಕ್ಕೆ ಸಂಬಂಧಿಸಿದ್ದು; ಸಮಾಜದ ಮೌಲ್ಯಾದರ್ಶಗಳಿಗೆ, ನಾವು ನಿತ್ಯ ಬಳಸುವ ಭಾಷೆಗೆ ಸಂಬಂಧಿಸಿದ್ದು. ವ್ಯವಸ್ಥೆಯನ್ನು ಆರೋಗ್ಯಕರ ದಿಸೆಯಲ್ಲಿ ಬದಲಿಸಲು ತೊಡಗಿರುವ ಚಳುವಳಿಗಾರರು, ವೈಯಕ್ತಿಕ ಜೀವನದಲ್ಲಿ ಹೇಗೆ ಚಿಂತಿಸುತ್ತಾರೆ ಮತ್ತು ಬದುಕುತ್ತಾರೆ ಎನ್ನುವುದಕ್ಕೂ ಸಂಬಂಧಿಸಿದ್ದು. ಅನೇಕ ಚಳುವಳಿಗಾರರು, ಪುರುಷವಾದ, ಕೋಮುವಾದ, ಜಾತಿವಾದ, ನೈತಿಕ ಭ್ರಷ್ಟತೆಗೆ ಒಳಗಾಗಿರುವುದುಂಟು. ಮನೆಯಲ್ಲಿ, ಅಥವಾ ಸಾರ್ವಜನಿಕ ಪರಿಸರದಲ್ಲಿ, ಅಪ್ರಜಾಪ್ರಭುತ್ವವಾದಿ ಆಗಿರಬಹುದು. ಆದ್ದರಿಂದ ಚಳುವಳಿಗೆ ದೃಷ್ಟಿಕೋನವನ್ನು ಪ್ರಭಾವಿಸುವ ಸಾಂಸ್ಕøತಿಕ ನೀತಿಯೂ ಮುಖ್ಯವಾದುದು. ಈ ಹೊತ್ತಲ್ಲಿ ನೆನಪಾಗುವುದು ಪ್ರೊ. ನಂಜುಂಡಸ್ವಾಮಿ ಹಾಗು ಕಡಿದಾಳು ಶಾಮಣ್ಣ. ಇಬ್ಬರೂ ಕೇವಲ ರೈತರ ಆರ್ಥಿಕ ಬೇಡಿಕೆಗಾಗಿ ಚಳುವಳಿ ಕಟ್ಟಿದವರಲ್ಲ. ಸಮಾಜದ ಮೌಲ್ಯಗಳ ಬದಲಾವಣೆಗೂ ಯತ್ನಿಸಿದವರು. ಇಬ್ಬರೂ ಮಾರ್ಕ್ಸ್ ಕುವೆಂಪು ಲೋಹಿಯಾ ಓದಿಕೊಂಡಿದ್ದವರು. ಶಾಮಣ್ಣನವರು ಸರೋದ್ವಾದನ, ಫೋಟೊಗ್ರಫಿ, ರೈತಚಳುವಳಿ, ಕನ್ನಡ ಚಳುವಳಿ ನಡುವೆ ವ್ಯತ್ಯಾಸವನ್ನೇ ಮಾಡಿದವರಲ್ಲ. ಲೋಹಿಯಾ ಸಮಾಜವಾದಿ ಹಿನ್ನೆಲೆಯಿಂದ ಬಂದ ರೈತಸಂಘಟನೆಯ ಮೊದಲ ತಲೆಮಾರಿನ ನಾಯಕರ ರಾಜಕೀಯ ಕ್ರಿಯೆಗೆ ಆಳವಾದ ಸಾಂಸ್ಕೃತಿಕ ಬೇರುಗಳಿದ್ದವು. ಅವರು ಕನ್ನಡದ ವಿಚಾರ ಸಾಹಿತ್ಯದಿಂದ ಪ್ರೇರಣೆ ಪಡೆಯುತ್ತಿದ್ದವರು. ಕುವೆಂಪು ಅವರ `ಸಾಲದಮಗು’ `ಧನ್ವಂತರಿಯ ಚಿಕಿತ್ಸೆ’ `ನೇಗಿಲಯೋಗಿ’ ಮುಂತಾದ ಕೃತಿಗಳು ರೈತಚಳುವಳಿಗೆ ಇಂಬಾಗಿದ್ದುದನ್ನು ಬಲ್ಲವರು. ಆದರೆ ಹೊಸತಲೆಮಾರಿನ ಎಷ್ಟು ರೈತ ಕಾರ್ಯಕರ್ತರು ಕುವೆಂಪು ಸಾಹಿತ್ಯವನ್ನು ಎಷ್ಟು ಓದಿದ್ದಾರೆಯೊ ತಿಳಿಯದು. ಕುವೆಂಪು ಮಾತ್ರವಲ್ಲ, ತೇಜಸ್ವಿ ಲಂಕೇಶ್ ಅನಂತಮೂರ್ತಿ ಬೆಸಗರಹಳ್ಳಿ ದೇವನೂರು ಅವರ ಕತೆ ಕಾದಂಬರಿ ಲೇಖನಗಳೂ ರೈತ ಕಾರ್ಯಕರ್ತರ ಪಠ್ಯಗಳೇ. ಯಾಕೆಂದರೆ, ಇವರ ಸಾಹಿತ್ಯದಲ್ಲಿ ರೈತಾಪಿ ಹಳ್ಳಿಗಳ ಸಂಭ್ರಮ ಮತ್ತು ಕ್ರೌರ್ಯಗಳ ಚಿತ್ರಣವಿದೆ; ಗೋವಿನ ರಾಜಕಾರಣ ಮತ್ತು ಹಸುವಿನ ವಾಸ್ತವತೆಯ ಬಗ್ಗೆ ಚಿಂತನೆಯಿದೆ. ಕೋಮುವಾದ ಕೇವಲ ಮುಸ್ಲಿಮರ ಹಗೆಯಲ್ಲ, ರೈತರ ವಿರೋಧಿ ಕೂಡ ಎಂಬ ತಿಳುವಳಿಕೆಯಿದೆ. ಪ್ರತಿ ಜನಪರ ಚಳುವಳಿಗಳಿಗೂ ಅದರದ್ದೇ ಆದ ಅಜೆಂಡಾ ಇರುತ್ತದೆ, ಇರಬೇಕು ಕೂಡ. ಇದರ ಜತೆಗೆ ಅದು ನಾಡಿನ ಉಳಿದ ಸಮಸ್ಯೆಗಳ ಬಗ್ಗೆ ಯಾವ ದೃಷ್ಟಿಕೋನ ಇರಿಸಿಕೊಂಡಿದೆ ಎಂಬ ಅಂಶವೂ ಮುಖ್ಯ. ಇದಕ್ಕಾಗಿ ಪ್ರತಿ ಚಳುವಳಿಗೂ ಇನ್ನೊಂದು ಜನಪರ ಚಳುವಳಿಯ ಜತೆ ಬೆರೆಯುವ ಕೊಂಡಿ ಇರಬೇಕು. ನಂಜುಂಡಸ್ವಾಮಿ, ಶಾಮಣ್ಣ ಅವರಿಗೆ ನಾಡಿನ ಪ್ರಜಾಪ್ರಭುತ್ವವಾದಿ ವಿಚಾರವಾದಿ ದಲಿತ ಮತ್ತು ಭಾಷಾ ಚಳುವಳಿಗಳ ಜತೆ ನಂಟಿತ್ತು. ಮಹಿಳಾ ಚಳುವಳಿಗಳ ಜತೆ ಅಷ್ಟು ಸಕೀಲ ಸಂಬಂಧವಿರಲಿಲ್ಲ. ಹೊಸತಲೆಮಾರಿನ ರೈತಚಳುವಳಿಗಾರರಿಗೆ ಕರ್ನಾಟಕವನ್ನು ಆರೋಗ್ಯಕರವಾಗಿ ಕಟ್ಟಬೇಕೆಂದು ಯತ್ನಿಸುತ್ತಿರುವ ಎಲ್ಲ ಜನಪರ ಚಳುವಳಿಗಳ ಸಹವಾಸ ಬೇಕಾಗಿದೆ. ಚಳುವಳಿಯ ಸಭೆಗಳಲ್ಲಿ ರೈತನೊಬ್ಬ ಗಂಡಸು ಎಂಬ ಗ್ರಹಿಕೆಯಲ್ಲೇ ಚರ್ಚೆ ನಡೆಯುತ್ತಿರುತ್ತದೆ. `ರೈತ’ ಶಬ್ದದಲ್ಲಿ ರೈತಮಹಿಳೆಯೇ ಇದ್ದಂತಿಲ್ಲ. ಇದು ಕೇವಲ ಪದರಚನೆಗೆ ಸಂಬಂಧಿಸಿದ ಮಾತಲ್ಲ. ಆಲೋಚನೆಗೂ ಕ್ರಿಯೆಗೂ ಸಂಬಂಧಿಸಿದ್ದು. ರೈತಸಂಘಟನೆಯಲ್ಲಿ ರೈತಾಪಿ ಚಟುವಟಿಕೆಯ ಬೆನ್ನುಲುಬಾದ ಮಹಿಳೆಯರ ಸಂಖ್ಯೆ ಯಾಕಿಷ್ಟು ಕಡಿಮೆ? ರೈತ ಸಂಘಟನೆಗಳಲ್ಲಿ ದಲಿತರು ಯಾಕೆ ಕಡಿಮೆ? ಇದಕ್ಕೆ ನಮ್ಮ ಸಮಾಜದಲ್ಲೇ ಸಾಮಾಜಿಕ ಆರ್ಥಿಕ ಕಾರಣಗಳಿರಬಹುದು. ಮಹಿಳೆಯರನ್ನು ದಲಿತರನ್ನು ರೈತಕೂಲಿಗಳನ್ನು ಒಳಗೊಳ್ಳದ ತನಕ ರೈತ ಚಳುವಳಿ ಪೂರ್ಣಗೊಳ್ಳುವುದು ಸಾಧ್ಯವೇ? ದಲಿತರ ಸಮಸ್ಯೆಗೆ ರೈತರು ತುಡಿಯದೆ ಹೋದರೆ, ರೈತರ ಸಮಸ್ಯೆಗೆ ದಲಿತರು ಮಿಡಿಯದೆ ಹೋದರೆ, ಹೊಸ ಸಂಚಲನ ಸಾಧ್ಯವಿಲ್ಲ. ಮಹಿಳೆಯರ ಮತ್ತು ದಲಿತರ ಭಾಗವಹಿಸುವಿಕೆ, ರೈತ ಚಳುವಳಿಗೆ ಬೇರೊಂದೇ ಸಂವೇದನೆಯನ್ನು ಹಾಯಿಸಬಲ್ಲದು. ಚಳುವಳಿಗಳಿಗೆ ಲೇಖಕರ ಬುದ್ಧಿಜೀವಿಗಳ ಜತೆ ಒಡನಾಟವಿದ್ದರೆ ಹೊಸ ವಿಚಾರಗಳು ಹಾಯುತ್ತವೆ. ಬುದ್ಧಿಜೀವಿಗಳಿಗೆ ಜನಪರ ಚಳುವಳಿಗಳ ಲಗತ್ತಿಲ್ಲದೆ ಹೋದರೆ, ಚಿಂತನೆಗೆ ಸಿಗಬೇಕಾದ ತೀಕ್ಷ್ಣತೆ ಮತ್ತು ನೈತಿಕತೆ ಸಿಗದೆ ಹೋಗುತ್ತದೆ. ರಾಜಕೀಯ-ಆರ್ಥಿಕ ಚಳುವಳಿಗಳಿಗೆ ಸಾಂಸ್ಕೃತಿಕ ವಿವೇಕ ಒದಗಿಸುವ ಕೆಲಸವನ್ನು ಉದ್ದಕ್ಕೂ ಕಲೆ ಮತ್ತು ಸಾಹಿತ್ಯಲೋಕಗಳು ಮಾಡಿಕೊಂಡು ಬಂದಿವೆ.ಕನ್ನಡ ಲೇಖಕರಿಂದ ಆಧುನಿಕ ಕಾಲದ ಚಳುವಳಿಗಳು ಶಕ್ತಿ ಪಡೆದಿವೆ. ಕನ್ನಡದಲ್ಲಿ ದಲಿತರನ್ನು ಮಾಂಸಾಹಾರಿಗಳನ್ನು ಮಹಿಳೆಯರನ್ನು ಹೀಯಾಳಿಸುವ ನುಡಿಗಟ್ಟು ಗಾದೆಗಳಿವೆ. ಈ ವಿಷಯದಲ್ಲಿ ರೈತ ಚಳುವಳಿ ಎಷ್ಟು ಸೂಕ್ಷ್ಮವಾಗಿದೆಯೊ ಕಾಣೆ. ಕರ್ನಾಟದಲ್ಲಿ ಮಾಂಸಾಹಾರದ ಮೇಲೆ ನಿರಂತರ ಹಲ್ಲೆಗಳಾದವು. ಉಚ್ಚಜಾತಿಗಳ ಆಹಾರಕ್ರಮವನ್ನು ಎಲ್ಲರ ಮೇಲೆ ಹೇರಲು ಯತ್ನಿಸಲಾಯಿತು. ಮಧ್ಯಾಹ್ನ ಶಾಲಾಮಕ್ಕಳಿಗೆ ಮೊಟ್ಟೆಕೊಡುವ ಯೋಜನೆಗೆ ಕೆಲವರು ವಿರೋಧಿಸಿದರು. ಇದೆಲ್ಲ ರೈತ ಚಳುವಳಿಯ ವಿಷಯಗಳಲ್ಲವೆ? ವಾಸ್ತವವಾಗಿ ಕೋಳಿ ಆಹಾರದಲ್ಲಿ ಬಳಕೆಯಾಗುವ ಮೆಕ್ಕೆಜೋಳವು ಕೋಳಿಸಾಕಣೆಯ ಹಿಂದಿದೆ. ಮೊಟ್ಟೆ ಮಾಂಸ ಮೀನು ಹಾಲು ಒಳಗೊಂಡಂತೆ ಎಲ್ಲ ಆಹಾರದ ಹಿಂದೆ ರೈತಾಪಿತನವಿದೆ. ಆಹಾರ ಸಂಸ್ಕøತಿ ಮೇಲಿನ ಹಲ್ಲೆಗಳು ರೈತಚಳುವಳಿಯ ಭಾಗವಾಗದೆ ಹೋದರೆ, ಅದಕ್ಕೆ ಹೊಸವಿಸ್ತರಣೆ ಹೇಗೆ ಸಿಗುತ್ತದೆ? ಅಧಿಕಾರಿಗಳು ರಾಜಕಾರಣಿಗಳು ಬುದ್ಧಿಜೀವಿಗಳು ಪೋಲೀಸರು ಜನಸಾಮಾನ್ಯರ ಆಶೋತ್ತರಕ್ಕೆ ಮಿಡಿಯುವಂತೆ ಸಂವೇದನಶೀಲರಾಗಬೇಕು ಎಂದು ಚಳುವಳಿಗಳು ಅಪೇಕ್ಷಿಸುತ್ತವೆ. ಆದರೆ ಹೀಗೆ ಅಪೇಕ್ಷಿಸುವ ಚಳುವಳಿಗಳಿಗೂ ಇತರರ ನೋವಿಗೆ ಮಿಡಿಯುವ ಸಂವೇದನಶೀಲತೆಯ ಅಗತ್ಯವಿದೆಯಲ್ಲವೇ? ಸಾಂಸ್ಕøತಿಕ ಎಚ್ಚರ ಮತ್ತು ವಿವೇಕಗಳು ವ್ಯಕ್ತಿಗೆ, ಸಮಾಜಕ್ಕೆ ಮಾತ್ರವಲ್ಲ, ಸಮಾಜ ಬದಲಿಸಬೇಕೆನ್ನುವ ಚಳುವಳಿಗಳಿಗೂ ತೀಕ್ಷ್ಣತೆಯನ್ನು ಒದಗಿಸುತ್ತವೆ. ಪ್ರಜಾಪ್ರಭುತ್ವೀಯ ವಿಸ್ತರಣೆ ನೀಡುತ್ತವೆ. ಒಮ್ಮೆ ಕೇರಳ ಪ್ರವಾಸದಲ್ಲಿದ್ದಾಗ ಕಲ್ಲಿಕೋಟೆಯ ಹತ್ತಿರ, ಎಳೆಯ ತೆಂಗಿನಗರಿಗಳಿಂದ ಮಾಡಿದ ದೊಡ್ಡದೊಡ್ಡ ಕೋಳಿಯ ಪ್ರತಿಕೃತಿಗಳನ್ನು ಹೊತ್ತುಕೊಂಡು ಕುಣಿವ ಕೋಳಿಯಾಟ್ಟಂ ಮೆರವಣಿಗೆಯನ್ನು ನೋಡುವ ಅವಕಾಶವೊದಗಿತು. ಕೇರಳದ ಜನಪರ ಚಳುವಳಿಗಾರರು ಈ ಆಚರಣೆಗಳಲ್ಲಿ ತಮ್ಮದೇ `ಕೋಳಿ’ಗಳ ಜತೆ ಭಾಗವಹಿಸಿದ್ದರು. ಅವರ ಕೋಳಿಪ್ರತಿಮೆಗಳ ಮೇಲೆ ಎಲ್ಲ ಧರ್ಮಗಳ ಚಿಹ್ನೆಗಳೂ ಇದ್ದವು. ಇದು ಚಳುವಳಿಗಳು ಜನರ ಭಾವನಾತ್ಮಕ ಲೋಕದೊಳಗೆ ವೈಚಾರಿಕತೆ ಬಿಟ್ಟುಕೊಡದೆಯೂ ಸಂಬಂಧ ಇರಿಸಿಕೊಳ್ಳುವ ಸೂಕ್ಷ್ಮವಾದ ಪರಿ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರೈತಚಳುವಳಿಯ ಸಾಂಸ್ಕøತಿಕ ಸಂಬಂಧಗಳು ಕ್ಷೀಣವೆನಿಸುತ್ತವೆ. ಕುಟ್ಟುವ ಬೀಸುವ ಹಂತಿಯ ರಾಶಿಪೂಜೆಯ ಹಾಡುಗಳ ಹಿಂದೆ ರೈತಾಪಿಗಳಿದ್ದಾರೆ. ರೈತರೇ ರಿವಾಯತ್ ಹಾಡುಗಳನ್ನು ಹಾಡುವುದು; ಸಂತರ ಉರುಸು ಇಲ್ಲವೇ ಆರೂಢರ ಜಾತ್ರೆ ಮಾಡುವುದು. ರೈತ ಚಳುವಳಿಗೆ ಈ ಸಾಂಸ್ಕøತಿಕ ಲೋಕದ ಜತೆಗೆ ಯಾವ ಬಗೆಯ ನಂಟಿದೆಯೊ ನಾನರಿಯೆ. ಚಳುವಳಿಗಳ ಕಾರ್ಯಕರ್ತರು ಕರೆ ಬಂದಾಗ ಮುಷ್ಕರ ಮಾಡುವ ಸೈನಿಕರಾಗಿ ಮಾತ್ರ ಇರುವುದು ಯಾಂತ್ರಿಕ ಸಂವೇದನೆ ಅನಿಸುತ್ತದೆ. ಸಿದ್ಧಾಂತಗಳ ಪಕ್ಷಗಳ ಸಂಘಟನೆಗಳ ಜತೆ ಯಾಂತ್ರಿಕ ಮತ್ತು ಗುಲಾಮೀ ಸಂಬಂಧ ಇರಿಸಿಕೊಂಡ ಎಲ್ಲರೂ ಕುಬ್ಜರಾಗುವುದು ಮಾತ್ರವಲ್ಲ, ತಮ್ಮ ಸಿದ್ಧಾಂತ ಸಂಘಟನೆಗಳನ್ನೂ ಕುಬ್ಚಗೊಳಿಸುವರು. ಸಂಸ್ಕøತಿ ಧರ್ಮಗಳ ರಕ್ಷಣೆ ಮಾಡುವುದಕ್ಕೆಂದೇ ತಯಾರಿಸಲಾಗಿರುವ ಮತಾಭಿಮಾನಿಗಳನ್ನು ಗಮನಿಸಿ. ಅವರ ವ್ಯಕ್ತಿತ್ವವನ್ನು ಒಳ್ಳೆಯ ಸಂಗೀತ ಆಸ್ವಾದಿಸುವ, ಅತ್ಯುತ್ತಮ ಸಾಹಿತ್ಯ ಓದುವ, ಸಿನಿಮಾ ನೋಡುವ-ಒಟ್ಟಿನಲ್ಲಿ ವ್ಯಕ್ತಿತ್ವ ವಿಸ್ತರಣೆ ಮಾಡಬಲ್ಲ ಯಾವ ಹವ್ಯಾಸಗಳೂ ಇರದಂತೆ ಬಿರುಸಾಗಿ ರೂಪಿಸಲಾಗಿರುತ್ತದೆ. ನಾಯಕರು ಹೇಳಿದ್ದನ್ನು ಪಾಲಿಸುವಂತೆ ಗುಲಾಮೀಕರಣ ಅಲ್ಲಿರುತ್ತದೆ. ಅವರಲ್ಲಿ ಕೆಲವು ಓದುಗ ಹವ್ಯಾಸವುಳ್ಳವರು ಇರಬಹುದು. ಆದರೆ ಅವರನ್ನು ಪಕ್ಷದ ಸಿದ್ಧಾಂತಕ್ಕೆ ಪೂರಕವಾಗಿರುವ ಲೇಖಕರನ್ನು ಬಿಟ್ಟು ಬೇರೆಯವರು ಬರೆದದ್ದರ ಕಡೆ ಕಣ್ಣುಹಾಯಿಸದಂತೆ ಮಾಡಲಾಗಿರುತ್ತದೆ. ಸಂವೇದನೆಯನ್ನು ಹೀಗೆ ಒಣಗಿಸಿದ ನೆಲದ ಮೇಲೆ ಕ್ರೌರ್ಯ ಅಸಹನೆ ಅಸೂಕ್ಷ್ಮತೆಗಳು ಸುಲಭವಾಗಿ ಹುಟ್ಟುತ್ತವೆ. ಚಳುವಳಿಗಳು ತಮ್ಮನ್ನು ಸಾಂಸ್ಕೃತಿಕ ಅಭಿರುಚಿಗಳಿಂದ ಸಮೃದ್ಧಗೊಳಿಸಿಕೊಳ್ಳದೆ ಹೋದರೆ, ಅವುಗಳ ಆರ್ಥಿಕ ಸಾಮಾಜಿಕ ರಾಜಕೀಯ ಚಿಂತನೆ ಮತ್ತು ಕ್ರಿಯೆಗಳು ಮುಕ್ಕಾಗಬಹುದು; ಏಕಮುಖಿಯಾಗಿ ಬೇಗನೆ ದಣಿಯಬಹುದು. ಅವಕ್ಕೆ ರಾಜಕೀಯ ಸ್ಪಷ್ಟತೆಯಷ್ಟೆ ಮುಖ್ಯವಾಗಿ ಮನಸ್ಸನ್ನು ಆರ್ದ್ರವಾಗಿಡುವ ಸಾಂಸ್ಕೃತಿಕ ಅಭಿರುಚಿಗಳೂ ಇರಬೇಕು. ರೈತರು ಕಾರ್ಮಿಕ ದಲಿತರು ಆಸ್ಥೆ ತೋರುವುದರಿಂದ ಮಧ್ಯಮವರ್ಗದ ಚಟುವಟಿಕೆಗಳಾಗಿ ಮಾರ್ಪಟ್ಟಿರುವ ಸಾಂಸ್ಕೃತಿಕ ಲೋಕಗಳಿಗೂ ಮರುಜೀವ ಬರುತ್ತದೆ. ಇದು ಜೀವಂತಿಕೆಯನ್ನು ಕೊಟ್ಟು ಪಡೆಯುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಎಂಬ ಭೇದಗಳು ಅಂತಿಮವಾಗಿ ಇಲ್ಲವಾಗುತ್ತವೆ; ಶಿಷ್ಟ-ಜಾನಪದಗಳು ಏಕೀಭವಿಸುತ್ತವೆ. ಅಂತಹ ಚಳುವಳಿಯ ಸಂಗ ಮಾಡಿದ ಲೇಖಕರು-ಕಲಾವಿದರು ತಮ್ಮ ಮಂಕುತನ ಕಳೆದುಕೊಂಡು ಹೊಸಹುಟ್ಟನ್ನು ಪಡೆಯಬಲ್ಲರು. ಇದು ಚಿಂತಕರು ಹಾಗೂ ಚಳುವಳಿಗಳು ಪರಸ್ಪರರನ್ನು ಕೊಂದುಕೊಂಡು ಬದುಕಿಕೊಳ್ಳುವ ಸೃಜನಶೀಲ ಉಪಾಯ.’’ ***************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಕಾವ್ಯಯಾನ

ಅನ್ನ ಕೊಟ್ಟವರು ನಾವು.

ಕವಿತೆ ಅನ್ನ ಕೊಟ್ಟವರು ನಾವು. ಅಲ್ಲಾಗಿರಿರಾಜ್ ಕನಕಗಿರಿ ನೆನಪಿರಲಿ ನಿಮಗೆ.ನೀವು ದೆಲ್ಲಿಯ ರಸ್ತೆ ಮುಚ್ಚಿಕೊಂಡರೆ,ನಾಳೆ ನಾವು ಹಳ್ಳಿ ಹಳ್ಳಿಯರಸ್ತೆ ಮುಚ್ಚುತ್ತೇವೆ. ಆಗ ಶುರುವಾಗುತ್ತದೆ ನೋಡಿ ಅಸಲಿ ಯುದ್ಧ. ಸರ್ಕಾರ ಎಂದರೆ ಸೇವಕ ಎನ್ನುವುದು ಮರೆತ್ತಿದ್ದಿರಿ ನೀವು.ಸಾಕುಮಾಡಿ ನೇತಾರರ ಹೆಸರಲ್ಲಿ ಬೂಟಾಟಿಕೆಯ ಕೆಲಸ. ಇಂದಲ್ಲ ನಾಳೆ ಪಾರ್ಲಿಮೆಂಟ್ ನಲ್ಲಿ,ಮನುಷ್ಯ ಪ್ರೀತಿಯ ಬೀಜ ಬಿತ್ತುತ್ತೇವೆ ನಾವು.ಮೊದಲು ಧರ್ಮದ ಅಮಲಿನಿಂದ ಹೊರ ಬನ್ನಿ ನೀವು. ಹೋರಾಟದ ನದಿ ಕೆಂಪಾಗುವ ಕಾಲ ಬಂತು.ನಿಮ್ಮ ಮುಖವಾಡ ಕಳಚಿ ಬಿಡಿನೇಗಿಲ ಯೋಗಿ ಮುಂದೆ…….. ನೆನಪಿರಲಿ ಅನ್ನ ಕೊಟ್ಟವರು ನಾವು.ವಿಷ ಬೀಜ ಬಿತ್ತಬೇಡಿ ನೀವು. ******************************************

ಅನ್ನ ಕೊಟ್ಟವರು ನಾವು. Read Post »

ಕಥಾಗುಚ್ಛ

ನಂಬಿಕೆ : ಮರು ಪ್ರಶ್ನೆ

ಸಣ್ಣ ಕಥೆ  ನಂಬಿಕೆ : ಮರು ಪ್ರಶ್ನೆ ರೇಷ್ಮಾ ನಾಯ್ಕ, ಶಿರಸಿ ಯಾರು ಒಳ್ಳೆ ಕೆಲ್ಸ ಮಾಡ್ತಾರೋ ಅವ್ರ ಪರ ದೇವ್ರು ನಿಂತಿರ್ತಾನೆ ಯಾವುದೇ ರೀತಿಲಿ ಸಮಸ್ಯೆಗಳಿಗೆ ಪರಿಹಾರಾನೂ ಸೂಚಿಸುತ್ತಾನೆ ಎಂದ ಮಾತಿಗೆ;  ಮಗಳು , ” ಹಾಗಾದ್ರೆ ಜಗತ್ತಿಗೆ ಕರೋನ ಬಂದಿದೆ ಇಷ್ಟೆಲ್ಲ ಕಷ್ಟ ಪಡ್ತಿದೀವಿ ಶಾಲೆಗೂ ಹೋಗೋಕಾಗ್ತಿಲ್ಲ  ಯಾಕಮ್ಮ ದೇವ್ರು ಪರಿಹಾರಾನೇ ಸೂಚಿಸ್ತಿಲ್ಲ?”  ಎಂದಳು. ಕಂದಾ, ” ದೇವ್ರು ಅನ್ನೋದು ಒಂದು ನಂಬಿಕೆ , ಧೈರ್ಯ. “ ನಿಂಗೆ ಜ್ವರ ಬಂದಾಗ ಹೆದ್ರಬೇಡ ನಾವ್ ನಿಂಜೊತೆಗೆ ಇರ್ತೀವಿ. ಹಾಸ್ಪಿಟಲ್ ಗೂ ಹೋಗ್ಬಂದಿವಿ. ನಿಂಗೇನು ಆಗಲ್ಲ ಅಂದಾಗ ;  ನಿಂಗೆ ಬಂದಿರೋ ಜ್ವರ ಸ್ವಲ್ಪ ಕಡಿಮೆ ಆದ ಹಾಗೆ ಅನ್ನಿಸುತ್ತಲ್ಲ….  ಹಾಗೆ, ಮತ್ತೂ ಇಲ್ಲಿ ”  ಜ್ವರ ಕಡಿಮೆ ಯಾಗದಿದ್ರೂ ನಾವ್ ಕೊಡೊ ಭದ್ರತೆ ಕೆಲ್ಸ ಮಾಡುತ್ತೆ ” ಎಂದೆ ಹಾಗಾದ್ರೆ , ಒಂದ್ ಕೆಲ್ಸ ಮಾಡ್ತಿನಮ್ಮ ;  ” ದೇವಸ್ಥಾನಕ್ಕೆ ನಾವಿಬ್ಬರೂ ಹೋದ ಹಾಗೆ.. ಚಿತ್ರ ಬಿಡಿಸ್ತಿನಮ್ಮ … ಆಗ ನಾವು ಅಲ್ಲಿಗೆ ಹೋದ ಹಾಗೆ …. ಯಾಕಂದ್ರೆ ದೇವ್ರು ಮನಸಿನ ನಂಬಿಕೆ ಅಲ್ವಾ ”  ಅಂದಳು ಈಗ ಉತ್ತರಿಸಲಾಗದೆ ತಡವರಿಸುವ ಸರದಿ ನನ್ನದಾಯ್ತು.. *******************************************

ನಂಬಿಕೆ : ಮರು ಪ್ರಶ್ನೆ Read Post »

You cannot copy content of this page

Scroll to Top