ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪ್ರಬಂದ

ಬಸ್ ಪಯಣ

ಬಸ್ ಪಯಣ ಬಸ್ ಪಯಣ ಎಂ. ಆರ್. ಅನಸೂಯ ನನಗೆ ಬಸ್ ಪ್ರಯಣ ಅಂದ್ರೆ ಇಷ್ಟವೇ ಆಗುತ್ತದೆ . ಅಲ್ಲಿ ನಮಗೆದುರಾಗುವ ವೈವಿಧ್ಯಮಯ ಪ್ರಸಂಗಗಳು ಬಹು ಸ್ವಾರಸ್ಯಕರವಾಗಿದ್ದು ಒಂಥರಾ ನಮ್ಮ ಲೋಕಾನುಭವ  ಹೆಚ್ಚಿಸುತ್ತವೆ.ಕಾರಣ ವಿವಿಧ ರೀತಿಯ ಜನರೊಡನಾಟ !  ಬಹುಶಃ ವೈವಿಧ್ಯತೆ ಕೊಡುವಷ್ಟು ಅನುಭವವನ್ನು ಬೇರೆ ಯಾವುದೂ ಕೊಡಲಾರದು. ಆದ್ದರಿಂದಲೆ ನಾವು ಅಂದ್ರೆ ಭಾರತೀಯರಿಗೆ ಸಿಗುವಷ್ಟು ಅನುಭವ ಇನ್ಯಾವ ದೇಶದ ಪ್ರಜೆಗಳಿಗೆ ಸಿಕ್ಕಲಾರದು. ಬಸ್ ಪಯಣವೆಂದರೆ ಒಂಥರ ಜನ ಧ್ವನಿಯೇ ಸರಿ. ಜನರ ನಾಡಿ ಮಿಡಿತ ! ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಘಟನೆ. ಒಮ್ಮೆ ಬಸ್ ನಲ್ಲಿ   ಪ್ರಯಾಣಿಸುತ್ತಿದ್ದೆ‌. ಸಾಮಾನ್ಯವಾಗಿ ನಾನು ಪ್ರಯಾಣ ಮಾಡುವಾಗ ನಿದ್ದೆ ಮಾಡುವುದಿಲ್ಲ. ಅದು ಹಳ್ಳಿಗಳನ್ನು ಸುತ್ತಿಕೊಂಡು ಹೋಗುವಂಥ ಖಾಸಗಿ ಬಸ್.ಬಸ್ ನಲ್ಲಿ ಎಲ್ಲಾಆಸನಗಳು ಭರ್ತಿಯಾಗಿದ್ದವು ಎನ್ನುವುದಕ್ಕಿಂತ ಬಸ್ನಲ್ಲಿ ಜನರನ್ನು ತುಂಬಿದ್ದರು ಎಂಬ ಹೇಳಿಕೆಯೇ ಸೂಕ್ತ.  ತುಂಬಿದ ಬಸುರಿ ಹೆಣ್ಣಿನಂತೆ ಗಜ ಗಮನೆಯಂತೆ ಬಸ್ ಚಲಿಸತೊಡಗಿತು. ದಾರಿ ಸಾಗುತ್ತ ಹಳ್ಳಿಗಳು ಬಂದಾಗ ಜನರಿಳಿದಂತೆ ಬಸ್ಸಲ್ಲಿದ್ದವರೆಲ್ಲಾ ಸಾವಕಾಶವಾಗಿ ಕುಳಿತರು. ಇದ್ದಕ್ಕಿದ್ದಂತೆಯೇ ” ಅಣ್ಣಾ ಡ್ರೈವರಣ್ಣ ಬಸ್ ನಿಲ್ಲಿಸಣ್ಣ” ಎಂದು ಮಹಿಳೆಯೊಬ್ಬರು ಜೋರಾಗಿ ಕೂಗಿಕೊಂಡಳು. ಡ್ರೈವರ್ ನೊಂದಿಗೆ ಮಾತು ಕತೆಯಲ್ಲಿ ಮಗ್ನನಾಗಿದ್ದ  ಬಸ್ ಕಂಡಕ್ಟರ್ “ಯಾಕೆ, ಏನು ಏನಾಯ್ತು “ಎಂದು ಗಾಬರಿಯಾಗಿ  ಕೇಳಿದ. ಎಲ್ಲರೂ ಆ ಧ್ವನಿ ಬಂದ ಕಡೆಗೆ ತಿರುಗಿದರು. ಆ ಹೆಣ್ಣುಮಗಳೊಬ್ಬಳು   ಡ್ರೈವರ್ ಹತ್ತಿರ ಬಂದು,”ಅಣ್ಣ,ಬಸ್ ನಿಲ್ಲಿಸಣ್ಣ ನನ್ನ ಈ ಕಿವಿದು ವಾಲೆ( ಓಲೆ)ಕಳೆದು ಹೋಗೈತೆ. ಹುಡುಕ್ತೀನಣ್ಣ”  ಕೈಮುಗಿಯುತ್ತ ಅವಳು ಅಂಗಲಾಚಿ ಬೇಡಿಕೊಂಡಳು. ತಕ್ಷಣವೆ ಬಸ್ ನಿಂತಿತು. ಅವಳು ಹಾಕಿಕೊಂಡಿದ್ದ ಎರಡು ಕಿವಿಯೋಲೆಯಗಳಲ್ಲಿ ಒಂದು ವಾಲೆಯು ಎಲ್ಲೋ ಬಿದ್ದು ಹೋಗಿದ್ದು ಈಗ ಅದು ಅವಳ ಅರಿವಿಗೆ ಬಂದಿತ್ತು.ತಕ್ಷಣ ಗಾಬರಿಯಿಂದ  ಕೂಗಿಕೊಂಡಿದ್ದಳು. ಆ ಹೆಣ್ಣು ಮಗಳು ಕಣ್ಣೀರು ಹಾಕುತ್ತಲೇ ಡ್ರೈವರ್ ಕಡೆ ಬಂದಳು.ಸುಮಾರು ನಲವತ್ತರ ವಯೋಮಾನ. ಆಗ ಕಂಡಕ್ಟರ್ “ಎಲ್ಲಿ ಬಿತ್ತೊ ಏನು ಕತೆನೋ ನೀನು ಮನೆಯಿಂದ ಬರುವಾಗ ಕಿವಿಲೇ  ಇತ್ತೇನಮ್ಮ ಎಲ್ಲಿ ಅಂತ ಹುಡುಕ್ತೀಯ ಎಂದಾಗ  “ಅಣ್ಣ ನಾನು ಕುಂತಿರ  ಸೀಟ್  ಹಿಂದೆ ಮುಂದೆಲ್ಲ ಹುಡುಕ್ತೀನಿ” ಎಂದು ಹೇಳಿದಳು. ಬಸ್ ನಲ್ಲಿದ್ದವರು ಅವಳ ಮನವಿಗೆ ಸ್ಪಂದಿಸಿ ಬೇಗನೆ ಕೆಳಗಿಳಿದು ಸಹಕರಿಸಿದರು “ಬೇಗ ಬೇಗ ನೋಡ್ಬೇಕಮ್ಮ” ಕಂಡಕ್ಟರ್ ಹೇಳಿದಾಗ “ಅಣ್ಣ ನಾನಿವತ್ತು  ವಾಲೆ ಕಳ್ಕೊಂಡು ಮನೆಗೆ ಹೋದ್ರೆ ನನ್ನ ಗಂಡ ಹೊಡೆದು ಸಾಯಿಸಿಬಿಡ್ತಾನೆ” ಎಂದು ಹೇಳಿದಾಗ  ಎಲ್ಲರು ಅಯ್ಯೋ  ಪಾಪ ಎಂದು ಮರುಗುತ್ತ ಕೆಲವರು ಅವಳೊಡನೆ  ತಾವು ಸಹಾ ಹುಡುಕಿದರು.ಅದು ಬಸ್ನಲ್ಲೆ  ಬಿತ್ತೋ ಅಥವ ಬಸ್  ಹತ್ತುವ ಮೊದಲೇ ಬಿದ್ದಿತ್ತೊಎಂಬ ಬಗ್ಗೆ ಅವಳಿಗೂ ಸಹ ಖಾತ್ರಿಯಿರಲಿಲ್ಲ  ಒಂದು ಇಪ್ಪತ್ತು ನಿಮಿಷ ಹುಡುಕಿದ್ರೂ ಸಿಗಲಿಲ್ಲ.ಆಗ ಕಂಡಕ್ಟರ್ “ಅದೆಲ್ಲಿ ಬಿದ್ದೋಯ್ತೋ ಏನೋ ಸಿಗಲ್ಲ. ಬಸ್ ಬಹಳ ಹೊತ್ತು ನಿಲ್ಲಿಸಕ್ಕಾಗಲ್ಲಮ್ಮ. ಎಲ್ಲರು ಬನ್ರಿ. ಕುಳಿತ್ಕಳಿರಿ” ಎಂದಾಗ ಎಲ್ಲರೂಬಸ್ ನಲ್ಲಿ ಬಂದು ಕೂತರು. ನಿಲ್ಲದ ಆ ಹೆಂಗಸಿನ ಅಳುವನ್ನು ಕಂಡು ಎಲ್ಲರ ಮನ ಕರಗಿತ್ತು. ಅವಳ ದು:ಖ  ನೋಡಲಾಗದೇ ಹಿರಿಯ ವ್ಯಕ್ತಿಯೊಬ್ಬರು “ಹೋಗ್ಲಿ ಬಿಡಮ್ಮ ಆಗಿದ್ದು ಆಗೋಯ್ತು ಸಮಾಧಾನ ಮಾಡ್ಕಳಮ್ಮ”ಎಂದು  ಹೇಳಿದಾಗ ಅವಳು “ನನ್ನ ಗಂಡನ ಬುದ್ಧಿ ನಿನಗೆ ಗೊತ್ತಿಲ್ಲಪ್ಪ. ನನ್ನ ಹೊಡೆದು ಸಾಯಿಸಿಬಿಡ್ತಾನೆ” ಎನ್ನುತ್ತ ಕಣ್ಣೀರು ಹಾಕಿದಳು. ವಾಲೆ ಕಳೆದುಕೊಂಡ ದುಃಖಕ್ಕಿಂತ ಹೆಚ್ಚಾಗಿ ತನಗೆ ಬೀಳಲಿರುವ ಗಂಡನ ಬಡಿತಗಳಿಗೆ ಬೆಚ್ಚಿ ಬಿದ್ದಂತೆ ಕಂಡಳು. ಸುಮ್ಮನೇ ಮೌನವಾಗಿ ತನ್ನ ಸೀಟ್ ನಲ್ಲಿ ಕುಳಿತು ಬಿಟ್ಟಳು.ಏನಾದ್ರು ಆಗಲಿ ಎಲ್ಲದಕ್ಕೂ ತಾನೂ ಸಿದ್ದವಾಗಿದ್ದೇನೆಂಬಂತಿದ್ದ ಆ ಹೆಣ್ಣುಮಗಳು ಅಸಹಾಯಕತೆಯ ಪರಮಾವಧಿಯಂತೆ ಕಂಡಳು.ಆಕೆ ಬಸ್ ಇಳಿದು ಹೋಗುವಾಗ “ಏನು ಆಗಲ್ಲ ಧೈರ್ಯವಾಗಿರಕ್ಕ. ದೇವರ ಮೇಲೆ ಭಾರ ಹಾಕಕ್ಕ’ ಎಂದು ಕಂಡಕ್ಟರ್ ಧೈರ್ಯ ಹೇಳಿದನು.ಅವಳ ಸಿಡುಕ ಗಂಡನಿಗೆ  ಕೆಟ್ಟಸಿಟ್ಟು ಬಾರದಂತೆ ಮಾಡಪ್ಪ ದೇವರೇ ಎನ್ನುವುದನ್ನು  ಬಿಟ್ಟರೆ ಮತ್ತೇನನ್ನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದು. ಅವಳ ಮನೆಯಲ್ಲಿ ಮಂದೆ ನಡೆಯಲಿರುವ ಎಲ್ಲಾ ಸನ್ನಿವೇಶಗಳನ್ನು ನನ್ನದೇ ಆದ ರೀತಿಯಲ್ಲಿ ಕಲ್ಪನೆ  ಮಾಡಿಕೊಂಡು ಮನೆ ಸೇರಿ ಆ ಗುಂಗಿನಲ್ಲೇ ಎರಡು ದಿನ ಕಳೆದಿದ್ದೆ. ಉದ್ದೇಶಪೂರ್ವಕವಾಗಿ ತಾನು ಮಾಡದಿದ್ದರೂ ತನಗರಿವಿಲ್ಲದೆ ಆಕಸ್ಮಿಕವಾಗಿ ಆದ ತಪ್ಪಿನಿಂದ ಆ ಹೆಣ್ಣು ಮಗಳು ಎಂಥಾ ಶಿಕ್ಷೆ ಅನುಭವಿಸಿದಳೋ ಆ ದೇವರಿಗೇ ಗೊತ್ತು! ಅಷ್ಟೊಂದು ಭಯ ಬಿದ್ದ ಅವಳಿಗೆ ಅವಳ ಕೆಟ್ಟ ಗಂಡನ ಹೊಡೆತಗಳು ಅದೆಷ್ಟು ನೋವು ಕೊಟ್ಟಿರಬೇಕು !  ನಮ್ಮ ಹೆಣ್ಣುಮಕ್ಕಳ ಮೇಲಿನ ಕೊನೆಯಿಲ್ಲದ ಕ್ರೌರ್ಯದ ಶೋಷಣೆಯ ನಾನಾ ರೂಪಗಳು! ಆದೆಷ್ಟು ವರ್ಷಗಳು  ಕಳೆದರೂ ಆ ಘಟನೆ ಮಾತ್ರ ನನ್ನ ಚಿತ್ತದಲ್ಲಿ ಹಾಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ ! ಇಂತಿಪ್ಪ ಬಸ್ ಪಯಣದಲ್ಲೇ,ಒಮ್ಮೆ ನಾನೂ ಸಹ  ನನ್ನ ರಿಸ್ಟ್ ವಾಚ್ ಕಳೆದುಕೊಂಡಿದ್ದೆ. ಅದು ನನ್ನ ಮಗ ನನಗೆ ತನ್ನ ಮೊದಲ ಸಂಬಳದಲ್ಲೇ ಕೊಡಿಸಿದ್ದ ಬೆಲೆ ಬಾಳುವ ವಾಚು.ಕಳೆದುಕೊಂಡ ಬೇಸರದಲ್ಲಿ ಬೇಸರದಲ್ಲೆ ನಾನು ವಿಷಯವನ್ನು ಮಗನಿಗೆ ತಿಳಿಸಿದೆ. ಇದನ್ನು ಕೇಳಿಧ ನನ್ನ ಮಗನು ಒಂದಿಷ್ಟೂ ಬೇಸರ ಪಡದೆ “ಹೋಗ್ಲಿ ಬಿಡಮ್ಮ” ಎಂದು ಸಲೀಸಾಗಿ ಹೇಳಿದ್ದಲ್ಲದೆ ಅಂತಹದೆ ಮತ್ತೊಂದು ವಾಚ್ ಕೊಡಿಸಿದ್ದನು.ಎಲ್ಲವು ಅಷ್ಟೆ ಅವರವರ ಭಾವಕ್ಕೆ! ನಾನು ಬಿ.ಇಡಿ. ಓದುವಾಗ ಪ್ರತಿದಿನ ಬಸನಲ್ಲಿ ದುರ್ಗಕ್ಕೆ ಪಯಣ ಮಾಡುತ್ತಿದ್ದೆ. ಒಂದು ರೀತಿಯಲ್ಲಿ ಆ  ಸರ್ಕಾರಿ ಬಸ್ ವಿದ್ಯಾರ್ಥಿಗಳಿಗೆಂದೇ ಮೀಸಲಾದಂತಿತ್ತು. ಆ ದಿನ ನಮಗೆ ಪ್ರಾಕ್ಟಿಕಲ್ ಎಕ್ಸಾಂ ಇತ್ತು. ನಿಯೋಜಿಸಲ್ಪಟ್ಟಿದ್ದ ಶಾಲೆಗೆ ನಾವು ಸರಿಯಾದ ವೇಳೆಗೆ ತಲುಪಬೇಕಾಗಿತ್ತು.  ರೋಡ್ ಬ್ಲಾಕ್ ಆದ ಕಾರಣ ಬಸ್ ಇದ್ದಕ್ಕಿದ್ದಂತೆ ನಿಂತು ಬಿಟ್ಟಿತು. ಕಾರಣ ಕೆಲವೇ  ಕ್ಷಣಗಳ ಹಿಂದೆ ಅಲ್ಲೊಂದು ಅಪಘಾತವಾಗಿತ್ತು. ರಾಷ್ಟೀಯ ಹೆದ್ದಾರಿ ಬೇರೆ ನಮಗೆ ಆತಂಕ ಶುರು ಆಯಿತು. ಸಮಯಕ್ಕೆ  ಸರಿಯಾಗಿ ಶಾಲೆ ತಲುಪಲು ಸಾಧ್ಯವೇ ಎಂದು. ನಾವು ಡ್ರೈವರ್ ಅವರನ್ನ  ಕೇಳಿದೆವು. ಹತ್ತಿರದ ಇನ್ನೊಂದು ದಾರಿಯಲ್ಲಿ ಹೋಗಿರಿ  ನಮಗೆ ಎಕ್ಸಾಂ ಇದೆ. ಅವರು ಇಲ್ಲ ಅದು ಸಾಧ್ಯವಾಗಲ್ಲ ಎಂದರು. ಆಗ ನಾವು ಪೆಚ್ಚು ಮೋರೆ ಹಾಕಿಕೊಂಡೆವು. ಆಗ ಅವರು ಸಾವಧಾನವಾಗಿ ಅವರದೇ ಆದ ಕೆಲವು  ಸಮಸ್ಯೆಗಳನ್ನು ಹೇಳಿಕೊಂಡರು. ಜನರ ಒತ್ತಾಯಕ್ಕೆ  ಮಣಿದು ಅವರು ಬೇರೆ ರೂಟ್ ನಲ್ಲಿ ಹೋದಾಗ ಅಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದರೂ ಅವನ ತಪ್ಪೆಂದು ಪರಿಗಣಿಸಿ ಅವನನ್ನು  ಕರ್ತವ್ಯದಿಂದ ಸಸ್ಪೆಂಡ್ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದರು. ಯಾವುದೇ ಕ್ಷೇತ್ರ ಇರಬಹುದು, ಅಲ್ಲಿನ ಒಳ ಹೊರಗು  ಅಲ್ಲಿ ಇರುವವರಿಗೆ ತಿಳಿದಿರುವುದೆ ಹೊರತು ದೂರದಲ್ಲಿ ನಿಂತು ಮಾತನಾಡುವವರಿಗಲ್ಲ. ಇದು ಎಲ್ಲಕ್ಕು ಅನ್ವಯ ಆಗುತ್ತದೆಯಲ್ಲವೇ ? ನಾವು ತರಗತಿಗಳನ್ನು ತೆಗೆದುಕೊಳ್ಳಲು ನಿಯೋಜಿಸಿದ ಶಾಲೆಗೆ ನಾವು ಹೋಗಬೇಕಿತ್ತು. ಅಂತಹ ದಿನಗಳಲ್ಲಿಯೇ ಅನಿವಾರ್ಯ ಕಾರಣಗಳಿಂದ ನಮಗೆ ಬಸ್ ಸಿಗುವುದು ತಡವಾಗುತ್ತಿತ್ತು.ಮಾಗಿ ಕಾಲದ ದಿನಗಳಾಗಿದ್ದರೆ ಬೇಗನೆ ಕತ್ತಲು ಕವಿದು ಬಿಡುತ್ತಿತ್ತು  ಕೆಲವು ಬಸ್ ನಿರ್ವಾಹಕರು ಪಾಸ್ ಸೌಲಭ್ಯ ಹೊಂದಿದ ನಮ್ಮ ಮೇಲೆ ಸಿಡುಕುತ್ತಾ ಸಹನೆಯಿಲ್ಲದೆ ನೀವೆಲ್ಲಾ ಮ್ಯಾಟ್ನಿ ( ಮಧ್ಯಾನ್ಹದ ಚಲನ ಚಿತ್ರ ಪ್ರದರ್ಶನ )ಸಿನಿಮಾ ನೋಡಿಕೊಂಡು ಬರ್ತಿರಾ ಎಂದು ಗೊಣಗುತ್ತಾ ಪೂರ್ವಾಗ್ರಹ ಪೀಡಿತ ತೀರ್ಪನ್ನು ಕೊಟ್ಟೇ ಬಿಡುತ್ತಿದ್ದರು.ಆಗ ನಾವು ನಮಗೇನೂ ಕೇಳಿಸೇ ಇಲ್ಲವೆಂಬಂತೆ ಇರುತ್ತಿದ್ದೆವು.ಒಮ್ಮೆ ಹೀಗೆ ತಡವಾಗಿ ಬಸ್ ಹತ್ತಿ ಕೂತು ಅಂದಿನ ತರಗತಿ ಹಾಗೂ ವಿಷಯದ ಬಗ್ಗೆ ಮಾತನಾಡುತ್ತಾ ಅಂದಿನ ಬಸ್ ಕಂಡಕ್ಟರ್ ಗೆ ಪಾಸ್ ತೋರಿಸಿದಾಗ”ನೀವೆಲ್ಲಾ ಬಿ.ಇಡಿ. ಓದುತ್ತಿದ್ದೀರಾ?ನೀವು ಸ್ಕೂಲ್ ಗಳಿಗೆ ಹೋಗಿ ಪಾಠ ಮಾಡಬೇಕು ಅಲ್ವೇನ್ರಮ್ಮ. ನನ್ನ ಮಗಳೂ ಬಿ. ಇಡಿ. ಮಾಡ್ತಾ ಇದಾಳೆ ‘ ಎಂದವರು ಹೇಳಿದಾಗ ಒಬ್ಬ ಸಹೃದಯ ಸಜ್ಜನರಂತೆ ಕಂಡುಬಂದರು ಕಾಲೇಜು ವಿದ್ಯಾರ್ಥಿಗಳಿದ್ದ ಆ ಬಸ್ನಲ್ಲಿ ಜೋರು ಮಾತು ಕತೆ, ವಿನಾಕಾರಣ ನಗು,ಸಿನಿಮಾ,ರಾಜಕೀಯ,ಕಾಲೇಜ್  ಟೀಕೆ ಟಿಪ್ಪಣಿ, ತರಲೆ ತುಂಟಾಟಗಳ ಲವಲವಿಕೆ ತುಂಬಿದ ಉತ್ಸಾಹ ಪುಟಿಯುತ್ತಿತ್ತು ! ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಗೆ ಪ್ರತಿದಿನ ನಾವು ಬಸ್ ನಲ್ಲಿ ಹೋಗಬೇಕಿತ್ತು. ಹದಿನೈದುನಿಮಿಷದ ಅಲ್ಲಿನ ಪ್ರಯಾಣಕ್ಕೆ ಅರ್ಧಗಂಟೆಗೂ ಹೆಚ್ಚಿನ ಸಮಯವೆ ಬೇಕು ಪ್ರತಿಯೊಂದು ಹಳ್ಳಿಯಲ್ಲೂ ಹತ್ತಿ ಇಳಿಯುವವರಿಂದಾಗಿ ಅದು ಅನಿವಾರ್ಯ ಸಹ. ಒಮ್ಮೆಬಸ್ನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆಯೇ ಗದ್ದಲ ಎದ್ದಿತು. ಏನೋ ದುರ್ವಾಸನೆ ಬರುತ್ತಿದೆ ಎಂದು ಎಲ್ಲರು ಜೋರಾಗಿ ಹೇಳತೊಡಗಿದರು  ದುರ್ವಾಸನೆ ಬೀರುವ ವಸ್ತುವನ್ನು ಬಸ್ಸಲ್ಲಿ ಇಡಲಾಗಿದೆ  ಎಂದು ಜನರು ಗುಮಾನಿ ಪಟ್ಟರು.ಆಗ ಬಸ್ ಕಂಡಕ್ವರ್ ( ಖಾಸಗಿ ಬಸ್) ಅಂತಹುದೇನೂ ಇಟ್ಟಿಲ್ಲ ಎಂಬುದಾಗಿ ಸ್ವಷ್ಟಪಡಿಸಿದನು. ಆಗ ಬಸ್ ನಲ್ಲಿದ್ದ ಯಾರೋ ಒಬ್ಬರು   ಮತ್ತೊಬ್ಬನ ಕಡೆ ಕೈ ತೋರಿಸುತ್ತ “ಅಗೋ ಅವನಿಂದಲೇ ಆ ಕೆಟ್ಟ ದುರ್ವಾಸನೆ ಬರ್ತಾ ಇರೋದು ಅವನ ಕಾಲಿಗೆ ಕೊಳಕು ಮಂಡಲ(ಒಂದು ರೀತಿಯಹಾವು) ಕಚ್ಚಿಬಿಟ್ಟಿದೆ ಅದಕ್ಕೆ ಈ ವಾಸನೆ”ಎಂದರು ಬಹಳಷ್ಟು ಜನರು ವಾಸನೆ  ತಡಯಕಾಗ್ತಿಲ್ಲ ಅವನನ್ನು ಕೆಳಗಿಳಿಸಿ ಎಂದಾಗ ಅವನು ತಾನೇ ತಾನಾಗಿ ಮುಖಕ್ಕೆ ಟವಲ್ ಮುಚ್ಚಿಕೊಂಡು ಕೆಳಗೆಇಳಿದು ಬಿಟ್ಟ. ಅಬ್ಬಾ! ಎಷ್ಟೊಂದು ಅವಮಾನ ! ಎಷ್ಟು ತಿರಸ್ಕಾರ ! ನನಗಂತು ಆ ರೀತಿಯ ಹಾವಿನ ಕಡಿತದ ಬಗ್ಗೆ ಅದರ ಪರಿಣಾಮ ಏನೂ ಗೊತ್ತಿಲ್ಲ ಎಲ್ಲವೂ ಹೊಸದೇ  ಅದು ನಿಜ ಅಥವ ಸುಳ್ಳೇಎಂಬುದು ಸಹ ತಿಳಿದಿರಲಿಲ್ಲ  ಅವನಿಗೆ ಅಂಥ ಅವಮಾನ ಮಾಡಿ ನಿರ್ದಯಿಗಳಾದ ಕಟುಕರಂತೆ ಕೆಳಗೆ ಇಳಿಸಿದ್ದು ಮಾತ್ರ ಅಮಾನುಷ ಕೃತ್ಯ ಎನಿಸಿತು. ಅಂತಹದೊಂದು ಹೀನಾಯ ಕ್ರಿಯೆಗೆ ನಾನು ಮೂಕ ಪ್ರೇಕ್ಷಕಳಂತೆ ಇದ್ದದ್ದು ತುಂಬಾನೇ ಕೆಡುಕೆನಿಸಿತು. ಕೆಲವೊಮ್ಮೆ ಜನರು ಸಮೂಹ  ಸನ್ನಿಗೊಳಗಾದವರಂತೆ ವರ್ತಿಸುತ್ತಾರೆ ಅನಿಸಿತು.  ನಾನು ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮ ಶಾಲೆಗೆ ಅಕ್ಕಪಕ್ಕ ಅಕ್ಕಪಕ್ಕದ ಗ್ರಾಮಗಳಿಂದ ಬರುವ  ವಿದ್ಯಾರ್ಥಿಗಳಿದ್ದರು. ಆಗ ಸರ್ಕಾರಿ ಬಸ್ ಗಳ ಸ್ಟಾಪ್ ಇರಲಿಲ್ಲ.ಖಾಸಗಿ ಬಸ್ಗಳೆ ನಮ್ಮಆಪತ್ಬಾಂಧವರು ಹತ್ತು ಗಂಟೆಗೆ ಸರಿಯಾಗಿ ನಾವು ಶಾಲೆಯಲ್ಲಿರ ಬೇಕಿತ್ತು. ಒಂಭತ್ತು ಗಂಟೆಗೆ ಹೊರಡುತ್ತಿದ್ದ  ಏಕೈಕ ಬಸ್ “ರಾಘವೇಂದ್ರ’ ನಮ್ಮನ್ನು ಹಾಲಲ್ಲಾದರೂ ಹಾಕು ನೀರಲ್ಲಾದರು ಹಾಕು ರಾಘವೇಂದ್ರ !  ಎಂಬಂತೆ ನಾವು ಅದನ್ನೇ ನಂಬಿದ್ದೆವು. ಪ್ರತಿಯೊಂದು ಸ್ಟಾಪನಲ್ಲೂ ನಮ್ಮವಿದ್ಯಾರ್ಥಿಗಳು ಹತ್ತುತ್ತಿದ್ದರು. ವಿದ್ಯಾರ್ಥಿನಿಯರು ಮಾತ್ರ ನಿಲ್ಲುವಷ್ಟು ಜಾಗ ಸಿಕ್ರೆ ಸಾಕು ಎಂದು ಬಸ ನಲ್ಲಿ  ತೂರಿ ಬಿಡುತ್ತಿದ್ದರು.ಆದ್ರೆ ನಮ್ಮ ಹುಡುಗ್ರು ಮಾತ್ರ ಬಸ್ ನಿಂತಾಕ್ಷಣ ಚಕ್ಕನೆ ಬಸ್ ಮೇಲೆ ಹತ್ತಿ ಕೂತುಬಿಡುತ್ತಿದ್ದರು  ಜಾಗ ಇಲ್ಲದಿದ್ದರೆ ಅವರು ತಾನೇ ಏನು ಮಾಡಿಯಾರು! ಆ ಬಸ್ ಬಿಟ್ಟರೇ ನಮಗೆ ಬೇರೆ ಬಸ್ ಇಲ್ಲ. ಹುಡುಗರು ಬಸ್ ಮೇಲೆ ಹತ್ತುವಾಗ ಸುಮ್ಮನಿರುತ್ತಿದ್ದ ಕಂಡಕ್ಟರಪ್ನ ಅವರೆಲ್ಲ ಇಳಿಯುವಾಗ ಅವರನ್ನು ಬೈಯುತ್ತಾ”ಇದೇ ಏನ್ರೋ ನೀವು ಸ್ಕೂಲಲ್ಲಿ ಕಲಿಯೋದು?” ಪರೋಕ್ಷವಾಗಿ ನಮ್ಮ ಮೇಲೆ ಆರೋಪ ಹೊರಿಸಿ ಕೂಗಾಡುತ್ತಿದ್ದ. ಆಗೆಲ್ಲ ಬೇಸರವಾದರೂ ಸಹ ನಮ್ಮ ಮಕ್ಕಳದೇ ತಪ್ಪಾಗಿರುತ್ತಿದ್ದ ಕಾರಣ ನಾವೂ ಸುಮ್ಮನಿರುತ್ತಿದ್ದೆವು. ದಿನಾ ಅದೇ ರಾಗ ಆಗಿದ್ದರಿಂದ ನಾವು ನಮ್ಮ ಮಕ್ಕಳು ಮೊಂಡು ಬಿದ್ದಿದ್ದೆವು ದಿನದಲ್ಲಿ ಎಂಟು ಗಂಟೆ ಮಾತ್ರ ಮಕ್ಕಳು ಶಿಕ್ಷಕರೊಂದಿಗೆ ಇರುತ್ತಾರೆ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರವೂ ಹಿರಿದೆಂಬುದರಲ್ಲಿ ಎರಡು ಮಾತಿಲ್ಲ. ಅದರೂ  ಮಕ್ಕಳ ಬದುಕಿನಲ್ಲಿ ತಂದೆತಾಯಿಗಳ ಪಾತ್ರವೇನೂ ಇಲ್ಲ ಎಂಬಂತೆ ಆಡುವ ಮಾತುಗಳನ್ನು ಕೇಳಿದಾಗ  ಶಿಕ್ಷಕರಿಗೆ ಬೇಸರವಾಗುವುದು ಸಹಜವೇ ಆಗಿದೆ. ಒಮ್ಮೊಮ್ಮೆ ವಿಚಿತ್ರವಾದರೂ ನಿಜವೆನಿಸುವಂಥ ಅನೇಕ ಪ್ರಸಂಗಗಳಿಗೆ ಪ್ರತ್ಯಕ್ಷದರ್ಶಿಗಳಾಗುತ್ತೇವೆ. ಶಿಕ್ಷಕರೆ ಹೆಚ್ಚು ಹೋಗುವ

ಬಸ್ ಪಯಣ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ನಾ ನಿನ್ನ ಎಷ್ಟು ಪ್ರೇಮಿಸುತ್ತಿರುವೆನೆಂದು ನನಗೆ ಸರಿ ಗೊತ್ತಿಲ್ಲನೀ ಇಲ್ಲದೇ ನಾ ಬದುಕಿರಲಾರೆನೆಂದಿಗೂ ಅನ್ನೋದು ಸುಳ್ಳಲ್ಲ ನಿನ್ನನ್ನು ಬೇರೆಯವರು ಒಲಿಸಿಯಾರೆಂದು ಸದಾ ಭಯವಿದೆ ಈ ಹೃದಯಕೆಬಹು ಕಷ್ಟದಿ ಮತ್ತೆ ಮತ್ತೆ ಸಮಾಧಾನಿಸುವೆ ಹಾಗೇನು ಆಗಲಿಕ್ಕಿಲ್ಲ ಏನೇನು ಕಾಳಜಿ ಮಾಡಿ ಸಂಭಾಳಿಸಿಕೊಳ್ಳುವೆ ಅಂತ ನಿನಗೇನು ಗೊತ್ತುಈ ಮನಸ್ಸು ತಕರಾರಿಲ್ಲದೆ ಒಳಗೆ ನೊಯ್ಯುತ್ತಿದೆ ನಿನಗೆ ಅರಿವಿಲ್ಲ ಬೇಡವೆ ಮುಗಿಸು ಈ ಕಣ್ಣುಮುಚ್ಚಾಲೆಯಾಟ ಕಳೆಯಲಿ ಮಧು ಬಟ್ಟಲಲ್ಲಿಎಷ್ಟು ಸಲ ಮನದ ಮಾತು ಹೇಳಿದರೂ ನಿನ್ನ ಮನದ ಹಾಡೇ ನೀ ಹಾಡುತ್ತಿಲ್ಲ ಇಷ್ಟು ಗೊತ್ತಿರಲಿ ನೀನಿಲ್ಲದೆ ಬದುಕಿರಲಾರದು ಈ ಜೀವ ಇನ್ನೆಂದಿಗೂ‘ಹೊನ್ನು’ಪ್ರೀತಿಯಲ್ಲಿ ಬಿದ್ದಾಗಿದೆ ನೀ ತಬ್ಬದೆ ಗತಿಯಿಲ್ಲ ಮತಿಯಿಲ್ಲ ಸಿದ್ಧರಾಮ ಹೊನ್ಕಲ್ (ಹಿಂದಿ ಗೀತೆಯೊಂದರ ಪ್ರಭಾವದಿಂದ (ಹಿಂದಿ ಗೀತೆಯೊಂದರ ಪ್ರಭಾವದಿಂದ) *********************************************

ಗಜಲ್ Read Post »

ಕಾವ್ಯಯಾನ

ಅರಿವೇ ಗುರು

ಕವಿತೆ ಅರಿವೇ ಗುರು ವಸುಂಧರಾ ಕದಲೂರು ದೀಪ ಆರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ- ಕತ್ತಲೀಗಒಳಹೊರಗೂ.. ಮೌನಕ್ಕೆ ಶರಣಾದೆ, ಕಿವುಡುತನದಲಿ.ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ.. ಇತಿಮಿತಿಗಳ ಅರಿವಾಯ್ತು,ನನ್ನದೂ ಮತ್ತವರಿವರದು.ಜಾಗರೆಂದರೆ ಜಾಗರೂಕಳೀಗ.ಒಳಹೊರಗೂ.. ಮಮತೆಯ ಕಣ್ತೆರೆದು, ಒಲವಿನಲಿನೋಡಿ ನುಡಿದೆ. ಹರುಷವೆಂದರೆಹರುಷವೀಗ. ಒಳಹೊರಗೂ.. ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದುಬಂದ. ಬೆಳಕೆಂದರೆ ಬೆಳಕೀಗಒಳಹೊರಗೂ.. **************************************

ಅರಿವೇ ಗುರು Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಗಾನ್ ವಿತ್ ದ ವಿಂಡ್ ಗಾನ್ ವಿತ್ ದ ವಿಂಡ್ಮೂಲ ಇಂಗ್ಲಿಷ್ : ಮಾರ್ಗರೆಟ್ ಮಿಶೆಲ್ ಕನ್ನಡಕ್ಕೆ : ಶ್ಯಾಮಲಾ ಮಾಧವಪ್ರ : ಅಂಕಿತ ಪುಸ್ತಕಪ್ರಕಟನೆಯ ವರ್ಷ : ೨೦೦೪ : ಎಂದಿನಂತೆ ಶ್ಯಾಮಲಾ ಮಾಧವ ತಮ್ಮ ಅನುವಾದಕ್ಕಾಗಿ ಒಂದು ಕ್ಲಾಸಿಕ್  ಕಾದಂಬರಿಯನ್ನು ಎತ್ತಿಕೊಂಡಿದ್ದಾರೆ. ೧೮೬೧ರಲ್ಲಿ ಅಮೆರಿಕಾದಲ್ಲಿ ನಡೆದ ಅಂತರ್ಯುದ್ಧದ ಸಂದರ್ಭದ ಒಂದು ಕಥೆ ಇಲ್ಲಿದೆ. ಆದ್ದರಿಂದ ಕಥೆಯ ಜತೆಜತೆಗೇ ಯುದ್ಧದ ವರ್ಣನೆಯೂ, ಅದರಿಂದಾಗುವ ಅನಾಹುತಗಳ ವರ್ಣನೆಯೂ ಸಾಗುತ್ತದೆ. ದಕ್ಷಿಣ ಅಮೇರಿಕಾದ ಜಾರ್ಜಿಯಾದ ಟಾರಾ ಎಂಬಲ್ಲಿನ ಒಂದು ಪ್ಲಾಂಟೇಷನ್ ಮಾಲೀಕರ ಮುದ್ದಿನ ಮಗಳು ಸ್ಕಾರ್ಲೆಟ್ ಓಹರಾ.  ಅವಳು ತನ್ನನ್ನು ಮದುವೆಯಾಗಲು ಬಂದ ಅನೇಕ ಯುವಕರನ್ನು ನಿರಾಕರಿಸಿ ಆಶ್ಲೆ ವಿಲ್ಕಿಸ್ ಎಂಬವನನ್ನು ಇಷ್ಟಪಟ್ಟು ಮದುವೆಯಾಗ ಬಯಸುತ್ತಾಳೆ. ಆದರೆ ಆಶ್ಲೆ ಆಗಲೇ ಸಾಮಾನ್ಯ ರೂಪಿನ ಕೃಶಕಾಯದ ಹುಡುಗಿ ಮೆಲಾನಿ ಹ್ಯಾಮಿಲ್ಟನ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆAದು ತಿಳಿದಾಗ ಅವಳು ನಿರಾಶಳಾಗುತ್ತಾಳೆ. ಆದರೂ ಆಶ್ಲೆ ಮೇಲಿನ ಅವಳ ಪ್ರೀತಿ ಕಡಿಮೆಯಾಗುವುದಿಲ್ಲ. ಆ್ಲಶ್ಲೆ ಅವಳನ್ನು ತಿರಸ್ಕರಿಸುವುದನ್ನು ಸಾಹಸಪ್ರಿಯ ಮತ್ತು ಒರಟು ಸ್ವಭಾವದ ರ‍್ಹೆಟ್ ಬಟ್ಲರ್ ಎಂಬವನು ನೋಡುತ್ತಾನೆ. ಅವನಿಗೆ ಸ್ಕಾರ್ಲೆಟ್ ಮೇಲೆ ಮನಸ್ಸಿರುತ್ತದೆ. ಆಶ್ಲೆಯ ಮೇಲೆ ಸೇಡು ತೀರಿಸುವುದಕ್ಕೋಸ್ಕರವೋ ಎಂಬAತೆ ಸ್ಕಾರ್ಲೆಟ್ ಭೋಳೆ ಸ್ವಭಾವದ ಮೆಲಾನಿಯ ಅಣ್ಣ ಚಾರ್ಲ್ಸ್ ಹ್ಯಾಮಿಲ್ಟನ್‌ನನ್ನು ವಿವಾಹವಾಗುತ್ತಾಳೆ. ಆದರೆ ಚಾರ್ಲ್ಸ್ ಯುದ್ಧಕ್ಕೆ ಹೋದವನು ಅಲ್ಲೇ ಸಾಯುತ್ತಾನೆ. ಸ್ಕಾರ್ಲೆಟ್‌ಗೆ ತಾನು ಗರ್ಭಿಣಿಯೆಂದು ಗೊತ್ತಾಗುತ್ತದೆ. ಟಾರಾದಲ್ಲಿ ವೈರಿಗಳ ದಾಳಿಯ ಕಾರಣದಿಂದ ಅನ್ನಾಹಾರಕ್ಕೆ ಕಷ್ಟವಾಗಿ ಸ್ಕಾರ್ಲೆಟ್ ಮೆಲಾನಿಯ ಜತೆಗೂಡಿ ಅಟ್ಲಾಂಟಾಕ್ಕೆ ಹೋಗಿ ವಾಸಿಸುತ್ತಾಳೆ. ಅಲ್ಲಿ ಅವಳು ಪುನಃ ರ‍್ಹೆಟ್ ನನ್ನು ಭೇಟಿಯಾಗುತ್ತಾಳೆ. ಅವನು ಅವಳನ್ನು ತನ್ನ ಒರಟು ಮಾತುಗಳಿಂದ ನೋಯಿಸುತ್ತಾನಾದರೂ ಟಾರಾದ ಸಾಮಾಜಿಕ ಅಗತ್ಯಗಳಿಗೆ ಅವಳು ಸ್ಪಂದಿಸಬೇಕೆಂದು ಪ್ರೋತ್ಸಾಹಿಸುತ್ತಾನೆ. ಮೆಲಾನಿ ಹೆರಿಗೆಯ ನೋವಿನಲ್ಲಿದ್ದಾಗ ವೈರಿಗಳಾದ ಯಾಂಕಿಗಳು ಅಟ್ಲಾಂಟಕ್ಕೂ ಮುತ್ತಿಗೆ ಹಾಕುತ್ತಾರೆ. ಆಗ ಸ್ಕಾರ್ಲೆಟ್ ಮೆಲಾನಿಯನ್ನೂ ಅವಳ ಮಗುವನ್ನೂ ತನ್ನ ಮಗುವನ್ನೂ ಕರೆದುಕೊಂಡು ಟಾರಾಕ್ಕೆ ಬರುತ್ತಾಳೆ. ಟಾರಾದಲ್ಲೂ  ಯಾಂಕಿಗಳ ಆಕ್ರಮಣದ ಪರಿಣಾಮವಾಗಿ ಸಾಕಷ್ಟು ಅನಾಹುತಗಳಾಗಿವೆ.  ಸ್ಕಾರ್ಲೆಟ್‌ಳ ತಾಯಿ ತೀರಿಹೋಗಿ ತಂದೆಗೆ ಬುದ್ಧಿಭ್ರಮಣೆಯಾಗಿದೆ. ಪ್ಲಾಂಟೇಷನ್ ಪೂರ್ತಿಯಾಗಿ ಆಕ್ರಮಣಕಾರರಿಂದ ಹಾಳಾಗಿ ಹೋಗಿದೆ. ಅಲ್ಲದೆ ಆಸ್ತಿಯ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆಂದೂ ಅವಳ ಆಸ್ತಿಯನ್ನು ಲಪಟಾಯಿಸುವುದು ಅವರ ಉದ್ದೇಶವೆಂದೂ ಸ್ಕಾರ್ಲೆಟ್ಳಿಗೆ ಸುದ್ದಿ ಸಿಗುತ್ತದೆ. ತನ್ನ ಆಸ್ತಿಯನ್ನು ತಾನು ಉಳಿಸಲೇ ಬೇಕೆಂದು ಅವಳು ತೆರಿಗೆಯ ಹಣವನ್ನು ಸಂಪಾದಿಸಲು ಅಟ್ಲಾಂಟಕ್ಕೆ ಬರುತ್ತಾಳೆ. ಟಾರಾದ ಪ್ಲಾಂಟೇಷನನ್ನು ಮೊದಲ ಸ್ಥಿತಿಗೆ ತಂದೇ ತೀರುವೆನೆಂದು ಹಠ ತೊಡುತ್ತಾಳೆ. ಆದರೆ ಹಣ ಸಂಪಾದಿಸುವ ವಿಚಾರದಲ್ಲಿ ಅವಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಒಂದು ಹಂತದಲ್ಲಿ ರ‍್ಹೆಟ್‌ನನ್ನು ಮದುವೆಯಾಗುತ್ತಾಳೆ. ಅವನಿಂದ ಒಂದು ಮಗುವನ್ನೂ ಪಡೆಯುತ್ತಾಳೆ. ಆದರೆ ಸ್ವಲ್ಪ ಕಾಲದ ನಂತರ ರ‍್ಹೆಟ್ ಅವಳನ್ನು ತಿರಸ್ಕರಿಸುತ್ತಾನೆ. ಆಗ ಸ್ಕಾರ್ಲೆಟ್‌ಗೆ ತಾನು ಅವನನ್ನು ಪ್ರೀತಿಸುತ್ತಿದ್ದೇನೆಂದು ಅರಿವಾಗುತ್ತದೆ, ಅವನ ಪ್ರೀತಿಯನ್ನು ಹೇಗಾದರೂ ಮಾಡಿ ಸಂಪಾದಿಸಲೇ ಬೇಕೆಂದು ಅವಳು ನಿರ್ಧರಿಸುವುದರೊಂದಿಗೆ ಕಾದಂಬರಿ ಮುಗಿಯುತ್ತದೆ.  ಸ್ಕಾರ್ಲೆಟ್‌ಳ ದಿಟ್ಟತನದ ಚಿತ್ರಣವಷ್ಟೇ ಕಾದಂಬರಿಯ ಪ್ರಮುಖ ಅಂಶವಲ್ಲ. ಪುರುಷಾಹಂಕಾರ, ಹಠ, ಪ್ರತೀಕಾರ, ಅಧಿಕಾರ ದಾಹಗಳ ಕಾರಣದಿಂದ ನಡೆಯುವ ಯುದ್ಧವು ಸ್ತ್ರೀಯರ ಬದುಕನ್ನು ಯಾವ ರೀತಿ ಮೂರಾಬಟ್ಟೆ ಮಾಡುತ್ತದೆ ಅನ್ನುವುದನ್ನು ಚಿತ್ರಿಸುವುದು ಕಾದಂಬರಿಯ ಉದ್ದೇಶವಾಗಿದೆ. ಎಲ್ಲರ ಬದುಕೂ ಯುದ್ಧವು ಉಂಟು  ಮಾಡುವ ಅನಾಹುತಗಳಿಂದಾಗಿ ಗಾಳಿಯ ಹೊಡೆತಕ್ಕೆ ಸಿಕ್ಕಿ ಸೂತ್ರ ಕಿತ್ತ ಗಾಳಿಪಟದಂತಾಗುತ್ತದೆ ಅನ್ನುವುದು ಶೀರ್ಷಿಕೆಯ ಅರ್ಥ. ಶ್ಯಾಮಲಾ ಮಾಧವ ಅವರ ಅನುವಾದವು ಎಂದಿನಂತೆ ಹೃದ್ಯವಾಗಿದೆ ********************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top