ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರತ್ನರಾಯ ಮಲ್ಲ

Tamil Nadu farmer protest: 9 antics used to grab attention of PM Modi and  the media - FYI News

ಇಲ್ಲಿ ಚುನಾವಣೆಯ ಹಸಿವು ಹೆಚ್ಚಾಗುತಿದೆ
ಮುಖಂಡರುಗಳ ಓಡಾಟವು ಹೆಚ್ಚಾಗುತಿದೆ

ಗಲ್ಲಿ-ಗಲ್ಲಿಗಳಲ್ಲಿ ಓಟು-ನೋಟಿನದ್ದೆ ಮಾತು
ಮನೆ-ಮನಗಳಲ್ಲಿ ಮತ್ಸರವು ಹೆಚ್ಚಾಗುತಿದೆ

ಶಾಂತಿಗಾಗಿ ಅವಿರೋಧವೆ ಚಂದ ಎನ್ನುವರು
ಕೋಟಿ ಕಬಳಿಸುವ ದಾಹವು ಹೆಚ್ಚಾಗುತಿದೆ

ಊರು ಉದ್ಧಾರದ ಮಾತುಗಳು ಕೇಳುತಿವೆ
ದೊಡ್ಡವರಲ್ಲಿ ತಿನ್ನುವ ಗುಣವು ಹೆಚ್ಚಾಗುತ್ತಿದೆ

ಬೇಲಿಯೇ ಎದ್ದು ಹೊಲ ಮೇಯುತಿದೆ ‘ಮಲ್ಲಿ’
ಜನರ ಮನಸುಗಳಲ್ಲಿ ಕ್ರೋಧವು ಹೆಚ್ಚಾಗುತಿದೆ

******************************

About The Author

Leave a Reply

You cannot copy content of this page

Scroll to Top