ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಸುಜಾತಾ ರವೀಶ್

Friends, Kameraden, Camaraderie, Good

ಅಕ್ಷರದ ಪಯಣಕ್ಕೆ ಒಂದಾಗಿ ಹೊರಡೋಣ  ಬರುವೆಯಾ ಸಂಗಾತಿ 
ಅಕ್ಷಯದ ಒಲವಿನ ಸುಗಮ ಸಂಪ್ರೀತಿಯನು ತರುವೆಯಾ ಸಂಗಾತಿ 

ಶಬ್ದಗಳ ಮಾಲೆಯನ್ನು ಕಟ್ಟುತಾ ಹಾಕೋಣವೇ ಕನ್ನಡಮ್ಮನಿಗೆ ಹಾರ?  
ಪದಗಳ ಅಡಿಪಾಯ ನೆಡಲು ಶ್ರಮದಕಲ್ಲ ಹೊರುವೆಯಾ ಸಂಗಾತಿ

ಸಾಹಿತ್ಯದ ತೇರನೆಳೆಯುತ ಮುಂದಡಿ ಇಡುತಲಿ ಸಾಗೋಣವೇ?  
ಸಾಂಗತ್ಯದ ಭರವಸೆ ಕೊಡುತ ಬಾಳಗಮ್ಯ ಸೇರುವೆಯಾ ಸಂಗಾತಿ   

ಕುಶಲ ಕರ್ಮಿಯಂತೆ ಮಾಡೋಣ ಚಿತ್ತಾರದ  ಕುಸುರಿ ಕೆಲಸ 
ವಿಶಾಲ ಪುಸ್ತಕಗಳ ಆಗಸದಿ ನನ್ನೊಡನೆಯೇ  ಹಾರುವೆಯಾ ಸಂಗಾತಿ 

ಅನನ್ಯವು ಕಾವ್ಯಪ್ರಪಂಚ ವಿಸ್ಮಯ ವಿನೂತನ ವಿಹಾರವಿದು 
ಅಮೂಲ್ಯವು ಸುಜಿಗೆ ಓದುವಿಕೆ ಕಡೆವರೆಗೂ ಇರುವೆಯಾ ಸಂಗಾತಿ 

*****************************

About The Author

1 thought on “ಗಝಲ್”

  1. ಧನ್ಯವಾದಗಳು ಸಂಪಾದಕ ವರ್ಗಕ್ಕೆ ಪ್ರಕಟಿಸಿದ್ದಕ್ಕಾಗಿ

Leave a Reply

You cannot copy content of this page

Scroll to Top