ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೆರಳಿಲ್ಲದ ಜೀವ

ಕವಿತೆ ನೆರಳಿಲ್ಲದ ಜೀವ  ಆನಂದ ಆರ್ ಗೌಡ ಬಿರುಕು ಬಿಟ್ಟ ಅದೇ ಗೋಡೆಯೊಳಗೆಹಸಿದ ಕಣ್ಣುಗಳು ಇಣುಕಿನೋಡುತ್ತಿದ್ದವುಅವ್ವನ ಹೆಜ್ಜೆ ಗುರುತುಗಳನು ಒಡಲೊಳಗಿನ ಬಸಿರಲಿಪಿಸುಮಾತು ಮೇಯ್ದ ಕರುಳ ಕುಡಿಗಳಿಗೆನೊಂದ ಬೇಗೆಯಲಿ ಗಳಿಸಿದ ತುತ್ತುಜೋಗುಳವ ಹಾಡುತ್ತಿತ್ತು ! ಮಾಂಗಲ್ಯ ತೊಡಿಸಿದ ಕೈಯ ಅಗ್ನಿಯಲಿಸುಟ್ಟ ಸೀರೆ ಇನ್ನೂ ಅವಳ ಬಿಟ್ಟಿಲ್ಲತವರು ಅರಸಿ ಬಂದ ಕಣ್ಣವೆಗಳುಹಸುಳೆಗಳ ಪಿಡುಗು ಇಂಗಿಸಿಲ್ಲ ಅನ್ನ ಅರಸಿದ ಪಾದ ಮಾಸದ ಗಾಯಕರುಣೆ ಕನಿಕರ ಕಾಣದ ತನ್ಹಸಿವುಹೊದ್ದು ಮಲಗಿದ ಪರಿಯುಎಲ್ಲವ ಮರೆಸಿ ನಿಶ್ಯಬ್ಧವಾಗಿಸಿದೆ ಘಾಸಿಗೊಂಡ ಮನಸುಹೊನ್ನು ಮಣ್ಣು ಮೋಹಿಸಿಲ್ಲನೆರಳಿಲ್ಲದ ಜೀವ ಕನಸುಗಳನು ಹೊತ್ತುಮತ್ತೆ ಹೆಜ್ಜೆಯಿಟ್ಟಿದೆ ಹೊಟ್ಟೆ ತುಂಬಲು !! ******************************

ನೆರಳಿಲ್ಲದ ಜೀವ Read Post »

ಕಾವ್ಯಯಾನ

ಕನಸುಗಳ ದೊಂಬರಾಟ

ಕವಿತೆ ಕನಸುಗಳ ದೊಂಬರಾಟ ಸುಮನಸ್ವಿನಿ. ಎಂ ನೀ ಮರಳುವೆಯೆಂಬಪವಾಡವೊಂದು ಘಟಿಸಿಯೇತೀರುತ್ತದೆಂದು ನನ್ನ ನಂಬಿಸಲುಹರಸಾಹಸ ಪಡುವಕನಸುಗಳ ದೊಂಬರಾಟಕ್ಕೆನಕ್ಕುಬಿಡುತ್ತೇನೆ ಈಗೀಗ..ಹೊರಳಿ ನೋಡಿದರೂ ಸಹಕಾಣದಷ್ಟು ದೂರದಲ್ಲಿ ನೀನನ್ನಿರಿಸಿಬಿಟ್ಟಿರುವುದರಿಂದ! ದಿನಕ್ಕೆರಡು ಬಾರಿಯಾದರೂಕಣ್ತುಂಬಿ ತುಳುಕಿ ಉರುಳಿಹೋಗಲು ನಿನ್ನ ನೆನಪುಗಳುನನ್ನೊಂದಿಗೆ ಜಿದ್ದಿಗೆ ಬೀಳುತ್ತವೆ..ಎದೆಯೊಳಗೆ ಹನಿಯೊಡೆದುಹರಡಿಕೊಂಡಂತೆಲ್ಲಾ ಜಾಗಸಾಲದಾದಾಗ, ಪಾಪ!ಅಮಾಯಕ ನೆನಪುಗಳುತಾನೇ ಏನು ಮಾಡಿಯಾವು? ಏಳುಸಮುದ್ರಗಳಾಚೆಗಿನಏಳುಸುತ್ತಿನ ಏಕಾಂತ ಕೋಟೆಯತುತ್ತತುದಿಯ ಕೋಣೆಗೂ ನುಗ್ಗಿ‘ರಾಜ’ಕುಮಾರನೊಬ್ಬ ಬರುತ್ತಾನೆಂಬನಿರೀಕ್ಷೆಯ ಅದಮ್ಯ ನಂಬಿಕೆಗೆಬೆರಗಾಗುತ್ತೇನೆ ಬಹಳವೇ,ಮುಗಿದ ದಾರಿಯ ಕಡೆಯಲ್ಲೊಂದುಹೊಸ ತಿರುವು ಸೃಷ್ಟಿಯಾಗುವಭ್ರಮೆಯ ‘ಬಗೆ’ಗೆ ಸೋಜಿಗಪಡುತ್ತಾ! *************************************

ಕನಸುಗಳ ದೊಂಬರಾಟ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ವಿ.ಹರಿನಾಥ ಬಾಬು ಒಲೆಯ ಮುಂದೆಕರುಳ ಸುಟ್ಟ ಅಮ್ಮತಾಯ ಮಮತೆ* ಕುದಿ ಎಸರುತಾಯಿಯ ಎದೆಹಾಲುಕಟ್ಟಿದ ಬಾಯಿ* ಅಳುವ ಮಗುನಿಷ್ಕರುಣಿ ಜಗತ್ತುತಬ್ಬಲಿ ತಾಯಿ* ಕರುಳ‌ ಕುಡಿಭಯ ಭೀತಗೊಂಡಿದೆಕತ್ತಲ ರಾಜ್ಯ* ರಸ್ತೆಯ ಮೇಲೆಎಳೆದು ನಿಂತ ತೇರುಜೀವನ ಮುಕ್ತಿ* ಕಡಲ ನೀರುಸವಿಯಲೊಲ್ಲೆ ಉಪ್ಪುಸಪ್ಪೆ ಬದುಕು* ಓಡಿದ ನದಿಸೇರಿತು ಕಡಲನುಬದುಕು ಅಂತ್ಯ* ಮೇಲೆ ಚಂದಿರಈಕೆ ಬೆಳದಿಂಗಳುಬಾಳು ಹುಣ್ಣಿಮೆ* ಬೀಸುವ ಗಾಳಿಉದುರಿದವು ಎಲೆಅಪ್ಪಿತು ಮುಪ್ಪು* ಗುಡಿಯ ಮುಂದೆಭಿಕ್ಷುಕರದೇ ಸಾಲುಭಕ್ತಿ ಕುರುಡು* ದೇವನಿರದಗುಡಿಯೊಳಗೆ ನಾನುಅನಾಥ ಪ್ರಜ್ಞೆ* ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ* ಉರಿವ ಬೆಂಕಿಒಲೆಯ ಮೇಲೆ ಅನ್ನಹಸಿದ ಕಂದ* ಸಿಟ್ಟಾದ ಸೂರ್ಯಭೂಮಿ ಬಳಲಿ ಬೆಂಡುಹಾಳಾದ ರೈತ* ಜೋರಾದ ಮಳೆಕೊಚ್ಚಿಹೋದ ಫಸಲುಹತಾಷ ರೈತ* ತುಂತುರು ಹನಿಪುಲಕಗೊಂಡ ಭೂಮಿಪ್ರಸನ್ನ ಜನ* ಮೌನದ ಕಾಡುಅಲ್ಲಿ‌ ಮನುಷ್ಯರಿಲ್ಲಸುಂದರ‌ ಲೋಕ* ಕಣ್ಣ ಕಂಬನಿಅವಳ ಖಾಲಿ ನೋಟಎದೆಯ ಗಾಯ* ಅವಳ ಅಳುಆಕಾಶದ ಕಾರ್ಮೋಡನನ್ನೆದೆ ನೋವು* ನಕ್ಕಳು ನಲ್ಲೆಅರಳಿದವು ಹೂವುಮನಸು ತೋಟ**********************

ಹಾಯ್ಕುಗಳು Read Post »

ಕಾವ್ಯಯಾನ

ಆಧುನಿಕ ವಚನಗಳು

ಆಧುನಿಕ ವಚನಗಳು ರತ್ನಾ ಕಾಳೇಗೌಡ ಅರಮನೆಯ ರಾಜನಾದರೇನು?ಬಡವ ಭಿಕ್ಷುಕನಾದರೇನು?ಇಬ್ಬರಿಗೂ ಒಂದೇ ರೀತಿಯ ಹಸಿವುಅನ್ನವೇ ಇಬ್ಬರ ಹೊಟ್ಟೆ ತುಂಬಿಸುವುದುಅರಮನೆಯಲ್ಲಿ ಮಲಗುವುದಕ್ಕೆ ಮಂಚಭಿಕ್ಷುಕರಿಗೆ ಪಾರ್ಕಿನ ಕಲ್ಲು ಬೆಂಚೇಮಂಚ:ಇಬ್ಬರೂ ಮಾಡುವುದು ನಿದ್ದೆ ಎಂಬುದತಿಳಿದು ಬಾಳಯ್ಯ — ರತ್ನದೀಪ ನಿರ್ಗತಿಕ ಮಾಡಿ ಬಂಧುಗಳ ಮನೆಗೆಹೋದಾಗ ಗುರುತಿಲ್ಲದವರಂತೆ ಮುಖತಿರುಗಿಸಿಕೊಂಡು ಸೋದರತ್ತೆಧನಿಕಳೆಂದು ತಿಳಿದಾಗ ಮುಗಿ ಬಿದ್ದುಬಂದಿರಯ್ಯಎತ್ತೆತ್ತಲೂ ನನ್ನದೆ ಗುಣಗಾನಮಾಡುತಿಹರಯ್ಯಗುಣ ನಡೆ ನುಡಿಯಿಂದಲೇ ಸಮಾಜದಲ್ಲಿಸ್ಥಾನ ಮಾನ ದೊರೆಯುವುದೆಂದುತಿಳಿಯರಯ್ಯಗುಣ ನಡತೆಯನ್ನು ಮೂಲೆಗೆ ತಳ್ಳಿ ಹಣಕ್ಕೆಬೆಲೆ ಕೊಡುವ ದಾನ ದಾಹಿಗಳನು ಮನೆಗೆಹೇಗೆ ಸೇರಿಸಲಯ್ಯ –ರತ್ನದೀಪ ಗಜನ ಮಣಿಸಿ ದಂತ ಪಡೆಯಬಹುದುವ್ಯಾಘ್ರನ ಒಲಿಸಿ ಉಗುರು ಹಲ್ಲುಪಡೆಯಬಹುದುಮೊಸಳೆಯ ಮರ್ದಿಸಿ ಪಾರಾಗಬಹುದುಉರುಗ ಕಚ್ಚಿದರೆ ಬದುಕಿಸಬಹುದುನೆರೆ ಉಕ್ಕಿದರೆ ಈಜಿ ದಡ ಸೇರಬಹುದುಮನೆಗೆ ಬೆಂಕಿ ಬಿದ್ದರೆ ನುಸುಳಿಬರಬಹುದುಕಾಲು ಕೆರೆದು ನಿಂತ ಗೂಳಿಯನುಬಗ್ಗಿಸಬಹುದುಜ್ಞಾನದ ಬಡತನವಿರಲು ಎಲ್ಲದರಲ್ಲೂಬೋರಯ್ಯ —ರತ್ನದೀಪ ಒಪ್ಪಿ ಭಜಿಸುವ ಮನಸ್ಸಿರಬೇಕುಒಪ್ಪದಿಂದ ಅರಿವ ಗುಣ ಸಂಪತ್ತುಇರಬೇಕುನಿತ್ಯ ಪೂಜೆಗೈಯಲು ನಿರ್ಮಲಚಿತ್ತವಿರಬೇಕುಭಕ್ತನ ಮನಸು ಏಕಾಗ್ರತೆಯಿಂದಿರಬೇಕುಭಕ್ತಿ ತಾನೆಂದು ಹುಂಬಿನಲಿ ಪೂಜೆಗೈಯಲುಒಲಿಯುವನೆ ಶಿವನು ಮುನಿದೋಡುನಾನಯ್ಯ –ರತ್ನದೀಪ ಕನ್ನಡಿಯೊಳಗಿನ ಬಿಂಬ ಕಂಡುಬೀಗದಿರು ತರುಣಿಅಮೂಲ್ಯ ವೇಳೆಯನ್ನು ಕಬಳಿಸುವುದುಕನ್ನಡಿಯೊಳಗಿನ ಬಿಂಬನಿನ್ನ ಗುರಿಯನ್ನು ನುಂಗಿಸೌಂದರ್ಯದ ಹುಚ್ಚು ಹಿಡಿಸಿ.ಅಲಂಕಾರದ ಅಮಲೇರಿಸಿನಿತ್ಯ ಕಾಯಕದ ಕರ್ತವ್ಯ ಮರೆಸಿದುಃಖದ ಮೂಲಕ್ಕೆ ಹೊಯ್ಯುವುದುಎಚ್ಚರವಿರಲಿ —ರತ್ನದೀಪ ಕಾಮ ಕಿಡಿಯಾಗಬಹುದುಕೋಟಿ ಕುರಿತಾಗಿ ಬಹುದುಹರಿಯಬಿಟ್ಟು ಮನಸು ಹಾವಾಗಬಹುದುಮೋಹ ಮನದ ಪರದೆ ಮುಚ್ಚಬಹುದುಕಾಮ ದಾಹಕ್ಕೆ ಕುರುಡಾಗದಿರುವಂದಿಸಿದವಳನುಳಿದು ಉಳಿದವರುತಾಯಂದಿರು ಸೋದರಿಯರೆಂದೆಣಿಸುನಿನ್ನ ಕಣ್ತೆರೆಯುವುದು —ರತ್ನದೀಪ ಅಗಸನಿಗೆ ಯಾರು ಬಟ್ಟೆಯಾದರೇನು?ಒಗೆಯುವುದು ಅವನ ಕಾಯಕಕತ್ತೆಗೆ ಯಾವ ಹೊರೆಯಾದರೇನುಹೊರುವುದು ಅದರ ಕಾಯಕಅಗಸನಿಗಿಲ್ಲ ಅದರ ಚಿಂತೆ ಮೌಢ್ಯ ತುಂಬಿದ ಮನಕೆಜ್ಞಾನ ನೀಡಯ್ಯಕತ್ತಲು ತುಂಬಿದ ಮನಕೆಅರಿವಿನ ಬೆಳಕು ನೀಡಯ್ಯಕತ್ತಲಲ್ಲಿ ಹುದುಗಿರುವ ಭಾವನೆಗಳಿಗೆಬೆಳಕು ನೀಡಯ್ಯಬೆತ್ತಲಾದ ಮನಕೆವಚನದ ಬಟ್ಟೆ ತೊಡಿಸಯ್ಯಬೆತ್ತಲಾದ ಮನದಲ್ಲಿ ವಚನಗಳುಅರಳುವಂತೆ ಮಾಡಯ್ಯ – ರತ್ನದೀಪ ಕಾಯಕ ಮಾಡಿದೆಕೈಲಾಸಂ ಬೇಡಿದರೆಂತಯ್ಯ?ಮೋಹ ತೊರೆಯದೆಮೋಕ್ಷ ಬೇಡಿದರೆಂತಯ್ಯ?ಸೌಹಾರ್ದತೆ ಇಲ್ಲದೆಸಂಭ್ರಮ ಬೇಡಿದರೆಂತಯ್ಯ?ಸಂಬಂಧದ ಮೌಲ್ಯವನರಿಯದೆಸ್ನೇಹ ಬೇಡಿದರೆಂತಯ್ಯ?ಎಲ್ಲರೊಳಗೆ ಒಂದಾಗಿ ಬೆರೆಯದಿರಲುಏನಿದ್ದರೂ ಫಲವಿಲ್ಲಯ್ಯ – ರತ್ನದೀಪ ಅರಗಿನ ಮನೆಯೊಳಗಿದ್ದುಅಗ್ನಿಗೆ ಅಂಜಿದೊಡೆಂತಯ್ಯ?ಅಂದರೆ ಮಡದಿಯನು ಕೂಡಿನಿಂದನೆಗೆ ಅಂಜಿದೊಡೆಂತಯ್ಯ?ಸಾಕುವ ಶಕ್ತಿಯಿಲ್ಲದೆ ಕಂದನ ಪಡೆದುನಾಡಿನ ಮೇಲೆ ಬಿಸುಟರೆಂತಯ್ಯ ?ಕೈಯಲ್ಲಿ ಖಡ್ಗವಿದ್ದರೂ ರಕ್ಷಿಸಿಕೊಳ್ಳಲುಹಿಂಜರಿದರೆಂತಯ್ಯ? – ರತ್ನದೀಪ************************

ಆಧುನಿಕ ವಚನಗಳು Read Post »

ಕಾವ್ಯಯಾನ

ಮುಂಜಾವಿನ ಬೆರಗು

ಕವಿತೆ ಮುಂಜಾವಿನ ಬೆರಗು ಡಾ.ಪ್ರೀತಿ ಕೆ.ಎ. ಅದೊಂದು ತಿಳಿ ಮುಂಜಾವುಎದ್ದಿದ್ದೆ ನಿನ್ನ ನೆನಪುಗಳಿಂದಕಣ್ಣ ಮೇಲಿನ ಮುಂಗುರುಳನ್ನುಹಗೂರಕ್ಕೆ ಹಿಂದೆ ಸರಿಸಿಬೆಚ್ಚಗಿನ ಚಹಾವನ್ನು ಇಷ್ಟಿಷ್ಟೇಹೀರುತ್ತಾ ಬಾಲ್ಕನಿಯಲ್ಲಿ ನಿಂತಿದ್ದೆ ನಿನ್ನೆವರೆಗೆ ಮೊಗ್ಗಾಗಿದ್ದಕೆಲವೇ ಕೆಲವು ಗಳಿಗೆಗಳಹಿಂದಷ್ಟೇ ಹೂವಾಗಿ ಬಿರಿದಆ ಸೇವಂತಿಗೆಯ ಮೃದು ಪಕಳೆಗಳಿಗೆನಿನ್ನದೇ ಮೈಯ ಘಮ ಚೀವ್ ಚೀವ್ ಗುಬ್ಬಿಮರಿಗಳಜೊತೆ ಸೇರಿದ ಹೊಸ ಹಕ್ಕಿಗಳಸಂಗೀತ ಸುಧೆಯಲ್ಲಿನಿನ್ನದೇ ನಾದ ಮೆಲ್ಲನೇ ಬೀಸುತ್ತಿರುವತಂಗಾಳಿಗೆ ಸಾಥ್ ಕೊಡುವಂತೆಅತ್ತಿಂದಿತ್ತ ಓಲಾಡುತ್ತಿರುವಆ ಎಳೇ ಸಂಪಿಗೆ ಗಿಡಕ್ಕೆನಿನ್ನದೇ ಲಯ ನೀಲಾಕಾಶದಲ್ಲಿ ತುಸುವೇಮೊಗವನ್ನು ತೋರುತ್ತಿದ್ದಇದೀಗ ಬಂಗಾರದ ಬಣ್ಣದಿಂದಮಿರಿ ಮಿರಿ ಹೊಳೆಯುತ್ತಿರುವ ಸೂರ್ಯನಿಗೆನಿನ್ನ ಕಣ್ಣುಗಳಲ್ಲಿದ್ದಷ್ಟೇ ಪ್ರಖರತೆ ಅರೇ ! ಇದೇನಿದುನಿನ್ನ ನೆನಪುಗಳ ಬಂಧದಿಂದಬಿಡಿಸಿಕೊಂಡೆ ಎಂಬುವುದುಬರೆಯ ಭ್ರಮೆಯಲ್ಲವಷ್ಟೇ? ನನ್ನನ್ನು ನೀನು ಆವರಿಸಿಕೊಂಡಪರಿಗೆ ಬೆರಗಾಗುತ್ತಿರುವಾಗಹಿತವಾಗಿ ತಬ್ಬಿ ನಿಂತೆಇದು ಕನಸಲ್ಲವೆಂದುಸಾಬೀತು ಪಡಿಸುವನಂತೆ…! **********************

ಮುಂಜಾವಿನ ಬೆರಗು Read Post »

ಕಾವ್ಯಯಾನ

ದ್ವಿಪದಿಗಳು

ದ್ವಿಪದಿಗಳು ಸಿದ್ಧರಾಮ ಕೂಡ್ಲಿಗಿ ಖಾಲಿಯಾದ ಕಣ್ಣುಗಳಲಿ ತೇಲುತ್ತವೆ ಕಂಬನಿದುಂಬಿದ ಮೋಡಗಳು ಒಮ್ಮೊಮ್ಮೆ ಭೋರ್ಗರೆಯುತ್ತವೆ ಒಮ್ಮೊಮ್ಮೆ ಕಣ್ಣಂಚಿನಲೇ ನಿಲ್ಲುತ್ತವೆ – ಬಂಜೆ ನೆಲಕೂ ಆಗಾಗ ಕನವರಿಕೆ ಒಡಲು ತುಂಬುವ ಸರದಾರ ಬರಬಹುದೆಂದು – ಬರಿದಾದ ತಲೆಯಲಿ ಚಿಂತೆಯ ಹದ್ದುಗಳದೇ ಗಲಾಟೆ ಬೇಟೆ ಸಿಕ್ಕರೆ ಭೂರಿ ಭೋಜನ ಇಲ್ಲದಿರೆ ಬರೀ ಗಾನ ಬಜಾನ – ಮತ್ತೊಬ್ಬರ ಬೂಟಿನಲಿ ಮೂಗು ತೂರಿಸುವ ಹೆಜ್ಜೆಗಳು ತಮಗೊಂದು ಅಸ್ತಿತ್ವವಿದೆಯೆಂದು ಎಂದೂ ಯೋಚಿಸವು – ಮುಗುಳ್ನಗೆಗಳು ಹಾರಾಡುತ್ತವೆ ಚಿಟ್ಟೆಯಂತೆ ಪ್ರೀತಿ ಇದ್ದಲ್ಲಿ ಕೂರುತ್ತವೆ ಇಲ್ಲದಿದ್ದಲ್ಲಿ ಮುಂದೆ ಸಾಗುತ್ತವೆ – ಏನು ಪುಣ್ಯವೋ ಹೆಜ್ಜೆಗಳಿಗೆ ಮಾತು ಬರದಿರುವುದು ಇಲ್ಲವಾದರೆ ಅವುಗಳಲ್ಲಿಯೂ ಪ್ರೀತಿ ಜಗಳಗಳಿರುತ್ತಿದ್ದವು – ಕಣ್ಣೊಳಗಿನ ಆಸೆಯೆಂಬ ಧೂಳು ತೊಳೆದರೆ ಎಲ್ಲವೂ ಸ್ಪಷ್ಟ, ದಿಟ್ಟ, ನೇರ, ನಿರಂತರ ***************************************** –

ದ್ವಿಪದಿಗಳು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಕ್ಷತಾ ಜಗದೀಶ ಬಾಳಲ್ಲಿ ಆನಂದದ ಹೊಳೆ ಹರಿಸಿದೆ ನೀ ಕಂದಸಾಗರದ ಆಳದಲಿ ದೊರಕಿದ ಮುತ್ತಿನಂತೆ ಆನಂದ ನೀ ಅತ್ತರು ಅದು ಸಂಗೀತದ ನಾದ ಕಂದನಕ್ಕಾಗ ಅದುವೇ ಮಾತ್ರ ಸ್ವರ್ಗದಾನಂದ ತೊದಲು ನುಡಿಯಲಿ ನುಡಿವೆ ನೀ ಕಂದನಿನ್ನೊಡನಾಟವದುವೇ ಎನಗೆ ಚಂದ ಬಾಳಲ್ಲಿ ನಂದಾದೀಪವಾದೇ ನೀ ಕಂದಸಂತೋಷದ ಅಲೆಯಾಗಲಿ‌ ಈ‌ ಅನುಬಂಧ ಪುಟ್ಟ ಪುಟ್ಟ ಹೆಜ್ಜೆ ನೀ ಇಡುವಾಗ‌ ಕಂದಮನೆ ಆಗಿದೆ ಮಂತ್ರಾಲಯದಂತೆ ಮಹದಾನಂದ. ************************

ಗಜಲ್ Read Post »

ಕಾವ್ಯಯಾನ

ಕ್ಷಮಿಸಿ ಬಿಡು ಬಸವಣ್ಣ

ಕವಿತೆ ಕ್ಷಮಿಸಿ ಬಿಡು ಬಸವಣ್ಣ ಡಾ.ಶಿವಕುಮಾರ್ ಮಾಲಿಪಾಟೀಲ ನೀ ಹಾಕಿದ ಸಮಾನತೆಯಭದ್ರ ಬುನಾದಿ ಮೇಲೊಂದುಅಸಮಾನತೆಯ ಸೋರುವ ಗುಡಿಸಲು ಹಾಕಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನೀನು ಗಳಿಸಿದ ನೈತಿಕಆಸ್ತಿಯ ಮಾರಿಮಹಾಮನೆಯ ಜಂತಿಮುರಿದು ಉರುವಲಾಗಿಬಳಸುತ್ತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನಿನ್ನ ಜನ್ಮದಿನದಂದೆಆಸ್ತಿ, ಬಂಗಾರ ಖರೀದಿಸಿಅಕ್ಷಯ ನಿಧಿ ತುಂಬಿಸಿಕೃತಕ ಜಗತ್ತು ಕಟ್ಟುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ ದೇಶ ವಿದೇಶಗಳಲಿ ನಿನ್ನ ಮೂರುತಿ ಸ್ಥಾಪಿಸಿ,ನಿನ್ನ ವಚನಗಳನ್ನುಎಲ್ಲಾ ಭಾಷೆಗಿಳಿಸಿ,ಕಲ್ಯಾಣ ನಾಡನ್ನೆಕಟ್ಟುವುದ ಮರೆತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ ನಿನ್ನ ವಚನಗಳನ್ನು ಹೇಳುತ್ತ ಕೇಳುತ್ತ ವಚನ ಭ್ರಷ್ಟರಾಗಿ,ಕಾಯಕವೇ ಕಷ್ಟವೆಂದುನಿನ್ನನ್ನು ಕೂಡಲಸಂಗಮದಲ್ಲಿ ದಿನವೂ ಮುಳುಗಿಸುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ ಜಾತಿ ಅಳಿಸಲು ನೀನು ಚಳುವಳಿ ರೂಪಿಸಿದಿಜಾತಿ ಉಳಿಸಲು ನಾವು ಪೀಠಗಳನ್ನು ಸ್ಥಾಪಿಸಿಜಾತಿ ಸಮಾವೇಶಗಳ ಧೂಳಿನಲ್ಲಿ ನಿನ್ನನ್ನುಹುಡುಕಲು ಹೊರಟಿದ್ದೇವೆ— ಕ್ಷಮಿಸಿಬಿಡು ಬಸವಣ್ಣ ನಿನ್ನ ಕ್ರಾಂತಿಯ ಕಣಗಳುನಮ್ಮ ರಕ್ತದಲ್ಲಿಂದು ಮಾಯವಾಗಿವೆ“ಬಸವಾ ಮತ್ತೆ ಹುಟ್ಟಿ ಬಾ” ಎಂದ್ಹೇಳಲು ನಾವು ಅರ್ಹತೆ ಕಳೆದುಕೊಂಡಿದ್ದೇವೆ–ಕ್ಷಮಿಸಿಬಿಡು ಬಸವಣ್ಣ.ಕ್ಷಮಿಸಿ ಬಿಡು ….************************

ಕ್ಷಮಿಸಿ ಬಿಡು ಬಸವಣ್ಣ Read Post »

ಇತರೆ

ಯುವ ಗಜಲ್ ಕವಿ ಚೇತನ್ ನಾಗರಾಳ ಹೆಸರು : ಚೇತನ್ ನಾಗರಾಳ.ವಯಸ್ಸು : ೨೫ಶಿಕ್ಷಣ : ಬಿ‌.ಕಾಮ್ವೃತ್ತಿ : ಖಾಸಗಿ ಬ್ಯಾಂಕ್ ಉದ್ಯೋಗಿಪ್ರಕಟಿತ ಕೃತಿಗಳು: ೧) ಹೀಗೊಂದು ಯುದ್ಧ ಬುದ್ಧನೊಂದಿಗೆ (ಕವನ ಸಂಕಲನ)೨) ಖಾಲಿ ಕೋಣೆಯ ಹಾಡು (ಗಜಲ್ ಸಂಕಲನ) ವಿಳಾಸ :ಚೇತನ್ ನಾಗರಾಳ204 , ವಾರ್ಡ್ ನಂ 1ಬಸವ ವೃತ್ತದ ಹತ್ತಿರಬೀಳಗಿ – 587116ಜಿಲ್ಲೆ : ಬಾಗಲಕೋಟಮೊ :8861888130 —————————– ಸಂಗಾತಿಯ ಓದುಗರಿಗೆ ಇವರದೊಂದು ಗಜಲ್ ಒಮ್ಮೆ ಉಳಿಸಿಕೊ ನೀನು ಈ ರಾತ್ರಿ ಮತ್ತೆ ಬರುವುದಿಲ್ಲನೆನಪಿರಲಿ ಈ ಘಳಿಗೆಯೇ ಮಧುರ ನಮಗೆ ನಾಳೆಗಳು ಇರುವುದಿಲ್ಲ.. ನಿನ್ನದೋ ಸ್ವರ ನನ್ನದೋ ಯಾವುದಾದರೇನಂತೆಇಲ್ಲಿ ಯಾರೂ ನಮ್ಮ ದುಃಖಗಳನ್ನು ಹಾಡುವುದಿಲ್ಲ.. ನಿನ್ನ ಕೋಣೆಯ ಮಂದ ಬೆಳಕಿನ ದೀಪ ನಾನುಹೌದು, ಪ್ರೀತಿ ಯಾರನ್ನೂ ಸುಮ್ಮನೇ ಸುಡುವುದಿಲ್ಲ.. ಈ ಗಾಳಿಯಲ್ಲಿ ಅಂತಹ ಹಿತವೇನೂ ಇಲ್ಲತೇಯಲಾರದೆ ಗಂಧ ಸೂಸುವುದಿಲ್ಲ.. ಅಲೆಗಳೆಂದೂ ಭಾರವಲ್ಲ ಕಡಲಿಗೆ ಚೇತನಗಳವುಕೇಳಿಲ್ಲಿ, ಬದುಕು ನಮ್ಮಿಂದ ಏನನ್ನೂ ಬಯಸುವುದಿಲ್ಲ.. ******************************************* ************************************************************************

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ “ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ…” ಆಗಾಗ ಕೆಲವರು ಬರಹವನ್ನೂ ಮತ್ತು ಬರೆದ ಬರಹಗಾರನನ್ನೂ ಒಂದೆನ್ನುವಂತೆ ಭಾವಿಸಿ ಅನುಮಾನದಿಂದ ನೋಡುವುದನ್ನು ನೋಡುತ್ತಿರುತ್ತೇವೆ. ಗೆಳೆಯರು ಇದನ್ನು ಬಾರಿ ಬಾರಿ ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ ಇದು ಪ್ರತಿಯೊಬ್ಬ ಬರಹಗಾರನಿಗೂ ಒಂದಲ್ಲಾ ಒಂದು ಬಾರಿ ಎದುರಿಸಬೇಕಾಗಿ ಬರುವ ಸಾಮಾನ್ಯ ಸನ್ನಿವೇಶವೂ ಆಗಿರುತ್ತದೆ. ಆದರೆ ಓದುಗರು ಒಂದು ಮಾತನ್ನು ನೆನಪಿನಲ್ಲಿಡಬೇಕು. ಅವನು ಬರಹಗಾರ… ತನಗೆ ಕಂಡ, ಅನುಭವಿಸಿದ, ಇರರ ಅನುಭವದಿಂದ ಅರಿತ ಎಲ್ಲವನ್ನೂ ಒಂದಾಗಿಸಿ ಬರಹದ ಮೂಲತತ್ವದ ಅಚ್ಚಿಗೆ ಸುರಿದು ಓದುಗರಿಗೆ ಮೆಚ್ಚುಗೆಯಾಗುವಂತೆ ಉಣಬಡಿಸುತ್ತಾನೆ. ಸದಾ ತನ್ನದೇ ವ್ಯಯಕ್ತಿಕ ಅನುಭವವನ್ನು ಬರೆಯುವುದಾದರೆ ಅದು ಅವನ ಆತ್ಮಚರಿತ್ರೆ ಆಗುತ್ತದೆ ಹೊರತು ಸಾಹಿತ್ಯ ನಿಸಿಕೊಳ್ಳುವುದಿಲ್ಲ. ಹೆಣ್ಣೊಬ್ಬಳು ಲೈಂಗಿಕ ವಿವರಗಳನ್ನು ತನ್ನ ಬರಹಗಳಲ್ಲಿ ಬಳಸಿದಾಕ್ಷಣ ಅವಳ ಚಾರಿತ್ರ್ಯವಧೆಗೆ ನಿಂತುಬಿಡುವುದು ಎಷ್ಟು ಸಮಂಜಸ. ಹಾಗಂತ ಪುರುಷ ಲೇಖಕರ ಸ್ಥಿತಿಯೂ ಚನ್ನಾಗೇನೂ ಇಲ್ಲ. ಆದರೆ ಸಮಾಜ ಅವರಿಗೆ ಒಂದು ಸಣ್ಣ ಮಾರ್ಜೀನನ್ನು ಕೊಡುತ್ತದೆ ಅಷ್ಟೇ. ಇವತ್ತಿಗೆ ಪರಿಸ್ಥಿತಿ ಒಂಚೂರು ಸುಧಾರಿಸಿಕೊಂಡಿದೆ ಆದರೂ ಕುಹಕದ ನಗು ಮತ್ತು ಅನುಮಾನದ ದೃಷ್ಟಿ ಸಂಪೂರ್ಣ ಮರೆಯಾಗಿಲ್ಲ. ನವರಸ ಎಂದರೆ ಶೃಂಗಾರ, ಹಾಸ್ಯ, ವೀರ, ಅದ್ಭುತ, ಭಯಾನಕ, ಶಾಂತ, ಕರುಣಾ, ರೌದ್ರ, ಭೀಭತ್ಸ… ಎಲ್ಲವೂ ಸೇರಬೇಕು. ಅದೇ ರೀತಿ ಪ್ರತಿ ಕಲೆಯೂ ನವರಸಗಳಿಂದಲೇ ತುಂಬಿ ಪರಿಪೂರ್ಣವಾಗಬೇಕು. ಅದಕ್ಕೆ ಸಾಹಿತ್ಯವೂ ಹೊರತಲ್ಲ. ಹೀಗಿರುವಾಗ ಅದರಲ್ಲಿನ ಒಂದು ಭಾವವನ್ನೇ ನಿರಾಕರಿಸಿಬಿಡುವುದು ಪರಿಪೂರ್ಣತೆಗೆ ಧಕ್ಕೆಯಾದಂತಲ್ಲವೇ… ಒಮ್ಮೆ ನನ್ನ ಒಂದು ಕತೆಯನ್ನು ಓದಿದ ಗೆಳತಿಯೊಬ್ಬಳು “ಅವನು ಯಾರು, ಈಗ ಎಲ್ಲಿದ್ದಾನೆ” ಎಂದೆಲ್ಲಾ ಕೇಳಲು ಶುರುಮಾಡಿದಳು. “ಇಲ್ಲ ಮಾರಾಯ್ತಿ, ಹಾಗೆಲ್ಲ ಎಂತದ್ದೂ ಇಲ್ಲ. ಯಾರದ್ದೋ ಕತೆ ಅದಕ್ಕೆ ಸ್ಫೂರ್ತಿ ಅಷ್ಟೇ… ಮತ್ತೆ ಉಳಿದದ್ದೆಲ್ಲ ಕಟ್ಟುಕತೆ ಅದು…” ಎಂದು ಎಷ್ಟು ಹೇಳಿದರೂ ಅವಳು ನಂಬಲು ಸಿದ್ಧಳಾಗಲೇ ಇಲ್ಲ! ಇರಲಿ, ನಮ್ಮ ಸುತ್ತಮುತ್ತಲ ಬದುಕು, ಸಮಾಜ ನಮ್ಮನ್ನು ಬಹಳಷ್ಟು ಪ್ರಭಾವಿಸುತ್ತವೆ. ಆ ಪ್ರಭಾವವೇ ನಮ್ಮನ್ನು ಬೆಳೆಸುತ್ತವೆ. ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕೆಲವೊಮ್ಮೆ ತೀರಾ ಹತ್ತಿರದ ಸಂಬಂಧಿಗಳೇ ನಮ್ಮ ಕತೆ ಅಥವಾ ಕವಿತೆಯ ನಾಯಕರೂ ಆಗಿಬಿಡುತ್ತಾರೆ. ಅದು ಇನ್ನೊಂಥರದ ಬಿಸಿತುಪ್ಪ. ಅದು ಅವರು ಇಷ್ಟಪಡುವಂತಹ ರೀತಿಯಲ್ಲಿದ್ದರೆ ಸರಿ, ಇಲ್ಲವಾದರೆ ಅವರ ವಿರಸವನ್ನೂ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ. ಇದೆಲ್ಲವನ್ನೂ ಮೀರಿ ಬರಹಗಾರ ಬರಹವನ್ನು ಉಳಿಸಬೇಕಿರುತ್ತದೆ. ಮನುಷ್ಯರು ಅಳಿಯುತ್ತಾರೆ. ಪಾತ್ರಗಳು ಉಳಿಯುತ್ತವೆ. ಬರಹಗಾರ ಅಳಿಯುತ್ತಾನೆ ಪುಸ್ತಕಗಳಷ್ಟೇ ಉಳಿಯುತ್ತವೆ. ಬರಹ ಒಂದಿಡೀ ಕಾಲಮಾನದ ಧ್ಯೋತಕವಾಗಿರುತ್ತದೆ. ಒಬ್ಬ ವ್ಯಕ್ತಿಯ ವಿವರ ಬರಹದ ಮೂಲಕ ಸಾಮಾನ್ಯೀಕಣಗೊಳ್ಳುತ್ತದೆ. ಇಲ್ಲವಾದರೆ ಓದುವ ಬಹಳಷ್ಟು ಮಂದಿ ಇದು ನನ್ನದೇ ಮಾತು, ಇದು ನನ್ನದೇ ವಿವರ, ಇದು ನನ್ನದೇ ಪರಿಸ್ಥಿತಿ ಎನ್ನುವಂತೆ ಓದಿಕೊಳ್ಳುವರಲ್ಲ ಹೇಗೆ… ಮತ್ತೆ ಬರಹಗಾರನಿಗೂ ತಾನು ಕಂಡುಂಡ ವಿಚಾರವನ್ನು ಕತೆ ಅಥವಾ ಕವಿತೆಗೆ ಬ್ಲೆಂಡ್ ಮಾಡುವ ಕಲೆ ತಿಳಿದಿರಬೇಕಿರುತ್ತದೆ.  ಆದರೆ ಒಂದು ಭಾವತೀವ್ರತೆಯಲ್ಲಿ ಬರೆಯ ಹೊರಟ ಹುಮ್ಮಸ್ಸಿನಿಂದಾಗಿ ಬರಹ ವಾಚ್ಯವಾಗುವುದನ್ನು ತಪ್ಪಿಸುವುದು ಕಷ್ಟವಾಗಿಬಿಡುತ್ತದೆ. ಆಗ ಪು.ತಿ.ನ.ರು ಹೇಳಿದ ಭವನಿಮಜ್ಜನ ಮತ್ತು ಲಘಿಮಾ ಕೌಶಲ ನೆನಪಾಗಬೇಕು ಮತ್ತು ಈ ಕಷ್ಟದಿಂದ ಪಾರಾಗುವುದನ್ನು ಪ್ರತಿಯೊಬ್ಬ ಬರಹಗಾರನೂ ಕಲಿಯಬೇಕು. ಎಲ್ಲವನ್ನೂ ವಾಚ್ಯವಾಗಿ ಹೇಳುವುದಾದರೆ ಕತೆ, ಕವಿತೆ, ಪ್ರಬಂಧ… ಎನ್ನುವ ಯಾವ ಸಾಹಿತ್ಯ ಪ್ರಕಾರಗಳ ಅವಶ್ಯಕತೆಯೂ ಇರುವುದಿಲ್ಲ. ಯಾವುದೇ ಬರಹ ವಾಚ್ಯವಾಗುತ್ತಾ ಹೋದಂತೆ ಓದುಗರ ಚಿಂತನೆಗೆ, ವಿಚಾರಕ್ಕೆ ಅವಕಾಶವೇ ಇಲ್ಲದಂತೆ ಆಗಿಬಿಡುತ್ತದೆ. ಎಲ್ಲವನ್ನೂ ಬರಹಗಾರನೇ ಹೇಳಿಬಿಟ್ಟ ಮೇಲೆ ವಿಚಾರ ಮಾಡಲಿಕ್ಕೆ ಇನ್ನೇನುಳಿಯುತ್ತದೆ?! ವಾಚ್ಯತೆ ಬರಹಗಾರನ ಬಹು ದೊಡ್ಡ ಶತ್ರು. ಅದನ್ನು ಮೀರುವುದೆಂದರೆ, ಮೊಸರನ್ನಕ್ಕೆ ಬಿದ್ದ ಕಲ್ಲನ್ನು ಎತ್ತಿ ಪಕ್ಕಕ್ಕಿಟ್ಟು ಸೇವಿಸುವಷ್ಟೇ ನಾಜೂಕಾಗಿ ಮಾಡಬೇಕಾದ ಕೆಲಸ. ಆ ನಾಜೂಕುತನ ಅಭ್ಯಾಸ ಮತ್ತು ಅಧ್ಯಯನ ಬಲದಿಂದ ಸಾಧ್ಯ. ಅವಸರದಿಂದ ಬರೆಯಲು ಹೊರಡುವ ಇಂದಿನ ಬರಹಗಾರರಿಗೆ ಸಾಹಿತ್ಯದ ಇತಿಹಾಸ ಬೇಕಿಲ್ಲ. ಹಿರಿಯರನ್ನು ಓದುವುದು ಬೇಡವಾಗುತ್ತಿದೆ. ಒಂದಷ್ಟು ಬರಹಗಳು ಪ್ರಕಟವಾದ ಕೂಡಲೇ ಅಹಮ್ಮಿಗೆ ಗುರಿಯಾಗಿಬಿಡುತ್ತೇವೆ. ಅದು ನಮ್ಮ ವಯಸ್ಸಿಗೆ ಸಹಜವಾದ ಕಾರಣ ಅದನ್ನು ಮೀರುವುದು ಸುಲಭವಲ್ಲ. ಆದರೆ ಹೆಚ್ಚು ಹೆಚ್ಚು ಓದುತ್ತಾ ಹೋದಂತೆ ಆ ಪೊರೆ ತನ್ನಿಂತಾನೆ ತನ್ನ ಅಸ್ತಿತ್ವವನ್ನು ಕಳಚಿಕೊಳ್ಳುತ್ತದೆ. ಯಾವುದೇ ಕಲೆಯಿರಲಿ ಅದು ಮನಸ್ಸನ್ನು ತಟ್ಟುವಂತಹ ಶಕ್ತಿಯನ್ನು ಹೊಂದಿರುತ್ತದೆ. ಅದು ಮೊದಲು ಕಲಾವಿದನನ್ನೇ ತನ್ನ ಹತೋಟಿಗೆ ತೆಗೆದುಕೊಳ್ಳುತ್ತದೆ. ನಂತರವೇ ಅದು ಅದರ ಆರಾಧಕನನ್ನು ತಲುಪುವುದು. ಒಮ್ಮೆ ಅದು ತನ್ನ ಹಿಡಿತಕ್ಕೆ ಯಾರನ್ನಾದರೂ ಸಿಲುಕಿಸಿಕೊಂಡುಬಿಟ್ಟಿತೆಂದರೆ ಅದು ಆ ವ್ಯಕ್ತಿಯನ್ನು ವಿನೀತನನ್ನಾಗಿಸಿಬಿಡುತ್ತದೆ. ಅಹಂಕಾರ ಇನ್ನಿಲ್ಲ ಅವನಲ್ಲಿ! ಸಾಹಿತ್ಯದ ಅಂತಿಮ ಪ್ರಭಾವವೂ ಅದೇ ಆಗಬೇಕಿದೆ. ಸಾಹಿತ್ಯ ಒಟ್ಟಾರೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸಬೇಕು, ಮತ್ತದು ಧನಾತ್ಮಕವಾಗಿಯೇ… ಅದೇ ಅದರ ನಿಜವಾದ ಶಕ್ತಿ. ಹೀಗೆ ಇಷ್ಟೆಲ್ಲಾ ಸಾಹಿತ್ಯದ ಧ್ಯಾನ, ಗುಣಗಾನ… ಮಾಡಿಯಾದ ನಂತರವೂ ಅದರ ನಾಡಿ ಮಿಡಿತ ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ… ************************************************************ –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

You cannot copy content of this page

Scroll to Top