ಅಂಕಣ ಬರಹ ಹೂಕೊಂಡ ಹೂಕೊಂಡತಮಿಳು ಮೂಲ : ಪೆರುಮಾಳ್ ಮುರುಗನ್ಅನುವಾದ : ನಲ್ಲತಂಬಿಪ್ರ : ಲಂಕೇಶ್ ಪ್ರಕಾಶನಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೨೫ಪುಟಗಳು : ೧೪೪ ಪುರುಷ ಪ್ರಧಾನ ಸಮಾಜದಲ್ಲಿ ಸ್ತಿçಯು ಶೋಷಣೆಗೊಳಗಾಗುವ ದುರಂತ ಕಥಾವಸ್ತುವನ್ನು ಹೊಂದಿದ ಕಾದಂಬರಿ ಇದು. ಜಾತಿ ಸಮಸ್ಯೆಯೂ ಇದರ ವಿನ್ಯಾಸದ ಇನ್ನೊಂದು ಮುಖ. ಅಲ್ಲದೆ ಸರಳ ಸ್ವಭಾವದ ಮಂದಿ ಎಂದು ಎಲ್ಲರೂ ಭಾವಿಸುವ ಗ್ರಾಮೀಣರಲ್ಲೂ ಎಂಥ ಕ್ರೌರ್ಯವಿರಬಹುದು ಎನ್ನುವ ಕಹಿ ಸತ್ಯವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಮದುವೆಯಾಗಿ ಕೇವಲ ಎರಡು ವರ್ಷಗಳಲ್ಲೇ ಗಂಡನನ್ನು ಕಳೆದುಕೊಂಡ ಮಾರಾಯಿ ಕಡು ದಾರಿದ್ರö್ಯದ ಕಷ್ಟಗಳನ್ನೆದುರಿಸುತ್ತಲೇ ಮಗ ಕುಮರೇಶನನ್ನು ಬೆಳೆೆಸಿ ದೊಡ್ಡವನನ್ನಾಗಿಸುತ್ತಾಳೆ. ಉದ್ಯೋಗವನ್ನರಸಿ ಪಕ್ಕದ ತೋಲೂರಿಗೆ ಹೋಗುವ ಕುಮರೇಶ ಅಲ್ಲಿ ಸೋಡಾ ಉತ್ಪಾದನೆಯ ಕೆಲಸದಲ್ಲಿ ತೊಡಗುತ್ತಾನೆ. ಆ ಊರಿನಲ್ಲಿ ಪರಿಚಯವಾದ ಸರೋಜಳನ್ನು ಪ್ರೀತಿಸಿ ತನ್ನ ತಾಯಿಗಾಗಲಿ, ಅವಳ ಅಪ್ಪ-ಅಣ್ಣನಿಗಾಗಲಿ ತಿಳಿಸದೆ ದೇವಸ್ಥಾನದಲ್ಲಿ ಸರಳ ವಿವಾಹವಾಗಿ ಅವಳನ್ನು ಊರಿಗೆ ಕರೆತರುತ್ತಾನೆ. ಆದರೆ ಅಲ್ಲಿ ಕುಮರೇಶನ ತಾಯಿ ಸೊಸೆಯನ್ನು ಸ್ವೀಕರಿಸಲು ಸುತರಾಂ ಒಪ್ಪುವುದಿಲ್ಲ. ಹುಡುಗಿ ಸುಂದರಿಯಾದರೂ ಯಾವ ಜಾತಿಯವಳೋ ಎಂಬುದು ಅವಳ ಆತಂಕ. ಆದ್ದರಿಂದ ದಿನವಿಡೀ ಸೊಸೆಯನ್ನು ಬಾಯಿಗೆ ಬಂದAತೆ ಬೈಯುತ್ತ ಮನ ನೋಯಿಸುತ್ತ ಇರುತ್ತಾಳೆ. ಸರೋಜಳಿಗೆ ಹೊಸ ವಾತಾವರಣ ಭಯಾನಕವೆನ್ನಿಸುತ್ತದೆ. ಊರಿನ ಹೆಂಗಸರೆಲ್ಲರೂ ಆಗಾಗ ಬಂದು ಅವಳ ಕುಲ-ಗೋತ್ರಗಳನ್ನು ವಿಚಾರಿಸುತ್ತ, ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಇರುತ್ತಾರೆ. ತೋಲೂರಿನ ಪಟ್ಟಣದ ಜೀವನಕ್ಕೆ ಒಗ್ಗಿಕೊಂಡಿದ್ದ ಸರೋಜಳಿಗೆ ಹಳ್ಳಿಯ ಬಡ ಮನೆಯ ಸರಳ ಜೀವನಕ್ಕೆ ಹೊಂದಿಕೊಳ್ಳುವುದು ಮತ್ತು ಅವರೆಲ್ಲರ ನಿಂದನೆಗಳನ್ನು ಸಹಿಸಿಕೊಳ್ಳುವ ನರಕ ಯಾತ£ಗಳುÉ ಅಸಹನೀಯವೆನ್ನಿಸುತ್ತದೆ. ಅವಳು ಕುಮರೇಶನನ್ನು ವಶೀಕರಿಸಿಕೊಂಡ ಮಾಟಗಾತಿಯೆಂದು ಎಲ್ಲರೂ ವ್ಯಂಗ್ಯ ಮಾತನಾಡಿದಾಗ ಅಲ್ಲಿಂದ ಎಲ್ಲಾದರೂ ಓಡಿ ಹೋಗಬೇಕು ಅನ್ನಿಸುತ್ತದೆ. ಒಮ್ಮೆ ಕುಮರೇಶ್ ಹೊಸದಾಗಿ ಸೋಡಾ ಫ್ಯಾಕ್ಟರಿ ಆರಂಭಿಸುವ ಬಗ್ಗೆ ಮಾತನಾಡಲು ಪಕ್ಕದ ಊರಿಗೆ ಹೋಗಿರುತ್ತಾನೆ. ಅವನು ಆ ರಾತ್ರಿ ಮನೆಗೆ ಬರುವುದಿಲ್ಲವೆಂದು ತಿಳಿದ ಅವನ ತಾಯಿ ಮಾರಾಯಿ ಊರಿನ ಕೆಲವು ಮಂದಿಯನ್ನು ಕೂಡಿಕೊಂಡು ಸರೋಜಳನ್ನು ಕೊಲ್ಲುವ ಯೋಜನೆ ಹಾಕುತ್ತಾಳೆ. ಆದರೆ ಆ ಸಂಚನ್ನು ಅಡಗಿ ಕೇಳಿದ ಸರೋಜ ಅಲ್ಲಿಂದೆದ್ದು ಮುಳ್ಳು ಪೊದೆಗಳ ಹಿಂದೆ ಅಡಗಲು ಹೋಗುತ್ತಾಳೆ. ಅಪಾಯಕಾರಿಯೂ ಭಯಾನಕವೂ ಆದ ಆ ಜಾಗದಲ್ಲಿ ಒಳಗೊಳಗೆ ಜಾರುವ ಸರೋಜಾಳ ಮೈಕೈಗಳಿಗೆ ಗಂಭೀರ ಗಾಯಗಳಾಗುತ್ತವೆ. ಕೊಲೆ ಪಾತಕಿಗಳು ಅವಳನ್ನು ಹೇಗಾದರೂ ಮಾಡಿ ಅಲ್ಲಿಂದ ಹೊರಗೆಳೆದು ಕೊಲ್ಲಲು ಪ್ರಯತ್ನಿಸುತ್ತಾರೆ. ಆದರೆ ಅವರ ಪ್ರಯತ್ನ ಫಲಕಾರಿಯಾಗುವುದಿಲ್ಲ. ಸರೋಜಾ ಭಯದಿಂದ ತತ್ತರಿಸುತ್ತಿದ್ದಂತೆ ಕಿವಿಯ ಮೇಲೆ ಬಿದ್ದ ಕುಮರೇಶನ ಸೈಕಲ್ ಬೆಲ್ಲಿನ ಶಬ್ದ ಅವಳಿಗೆ ಮರುಜೀವ ಕೊಡುತ್ತದೆ. ಹೆಣ್ಣನ್ನು ವಿನಾಕಾರಣ ಪೀಡಿಸುವ ನಮ್ಮ ಸಮಾಜ ಎಂದು ಬದಲಾಗುತ್ತದೋ ಎಂಬ ಆತಂಕವನ್ನು ಈ ಕಾದಂಬರಿ ನಮ್ಮಲ್ಲಿ ಹುಟ್ಟಿಸುತ್ತದೆ. ನಲ್ಲತಂಬಿಯವರ ಅನುವಾದ ಆಡುಭಾಷೆಯ ಬಳಕೆಯಿಂದ ಆಪ್ತವಾಗುತ್ತದೆ. ************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ
ಪ್ರವಾಸ ಕಥನ ಸಿದ್ಧಿಸಿತೆನಗೆ -ಸಿದ್ಧರ ಬೆಟ್ಟ ಯಾನ ಚಂದ್ರಮತಿ ಪುರುಷೋತ್ತಮ್ ಭಟ್ ಬಹುದಿನದ ಬಯಕೆ, ನೋಡಲೇ ಬೇಕೆಂಬ ತುಡಿತದ ಜೊತೆಗೆ ನಲವತ್ತರ ಹರೆಯ ದಾಟಾಯ್ತು ಈಗಲೂ ನೋಡದಿದ್ದರೆ ಇನ್ನು ಯಾವಾಗ ನೋಡೋದು ಅನ್ನೋ ಅನಿಸಿಕೆ. ನನ್ನ ಮಗಳು ಹಾಗೂ ಅವಳ ಗೆಳೆಯರು ಬರ್ತೀರ ಆಂಟಿ ಸಿದ್ಧರ ಬೆಟ್ಟಕ್ಕೆ ಅಂದಾಕ್ಷಣ ವೈ ನಾಟ್ ! ಎಂದು ‘ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ‘ ಅಂತ ಹುಂ ಎಂದು ಹೊರಟೇ ಬಿಟ್ಟೆ. ತುಂಬಾ ದಿನದಿಂದ ಅಂದು ಕೊಂಡ ಈ ಬೆಟ್ಟ ನೋಡುವ ಭಾಗ್ಯಬಂದೊದಗಿಯೇ ಬಿಟ್ಟಿತು. ಸೂರ್ಯೋದಯಕ್ಕೂ ಮುಂಚೆ ಸುಮಾರು 4.45 ರ ಸಮಯಕ್ಕೆ ಶುರುವಾಯ್ತು ನಮ್ಮ ಪಯಣ. ಜನಸಂದಣಿ ಇರದ ಈ ಸಮಯದಲ್ಲಿ ನಮ್ಮ ಬೆಂದಕಾಳೂ ಕೂಡ ಸುಂದರ ಹಾಗೂ ಸುಖಕರವೆನಿಸುವುದು. ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಸಿದ್ದರ ಬೆಟ್ಟಕ್ಕೆ ಐದು ಮಂದಿಯನ್ನು ಹೊತ್ತು ಡಸ್ಟರ್ ಶರವೇಗದಲ್ಲಿ ನಗರವನ್ನು ದಾಟಿ ಇನ್ನೇನು ಸಿದ್ಧರ ಬೆಟ್ಟದ ದಾರಿ ತಲುಪಿದ್ದಂತೆಯೆ ನಮ್ಮನ್ನು ಸೆಳೆದದ್ದು ಆ ಊರಿನ ರುಚಿಕರವಾದ ತಟ್ಟೆ ಇಡ್ಲಿ . ಅಲ್ಲಿಂದ 8 ರಿಂದ 10 ಕಿ.ಮೀ ದೂರದಲ್ಲಿ ಈ ಬೆಟ್ಟ . ತಲುಪಿದಾಗ ಸುಮಾರು ಮುಂಜಾನೆ 6.30 ಸಮಯ. ಸದ್ದು ಗದ್ದಲ ಇಲ್ಲದ ನಿರ್ಜನ ಪ್ರಶಾಂತ ತಾಣ. ಸಿಲಿಕಾನ್ ಸಿಟಿಯಿಂದ ಬರುವ ಯಾತ್ರಿಕರಿಗೆ ಒಮ್ಮೆ ಯಾದರೂ ಹಾಯ್ ಎನಿಸದೇ ಇರದು.ಈ ಬೆಟ್ಟವು ಸುಮಾರು 6 ಕಿಲೋಮೀಟರ್ ಚಾರಣ. 1700ಅಡಿ ಎತ್ತರದಲ್ಲಿರುವ ಈ ಬೆಟ್ಟವು ಔಷಧೀಯ ಸಸ್ಯಗಳ ಬೀಡು. ೨೦೦೦ ಕ್ಕೂ ಹೆಚ್ಚು ಸಸ್ಯಗಳಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಕೆ.ಫ್.ಡಿ ಗೆ ಧನ್ಯವಾದ ಹೇಳಲೇ ಬೇಕು ಶುರುವಾಯ್ತು ಸೆಲ್ಫಿಯಿಂದಲೇ ನಮ್ಮ ಉತ್ಸಾಹದ ಆರೋಹಣ ಚಾರಣ. ಹಸಿರಿನ ಔಷಧೀಯ ಮರಗಿಡಗಳ ನಡುವೆ ಹಕ್ಕಿಗಳ ಕಲರವ ಹಾಗೂ ತುಂತುರು ಮಳೆಯಲ್ಲಿ ಹತ್ತಿದ ಕ್ಷಣ ಅದ್ಬುತ ! ನೂರಾರು ಮೆಟ್ಟಿಲುಗಳ ನಂತರ ಕಡಿದಾದ ಬೆಟ್ಟದಲ್ಲಿ ಮುಂದಕ್ಕೆ ಹತ್ತಲು ಗಟ್ಟಿ ಕಲ್ಲುಗಳೇ ನಮಗೆ ಆಸರೆಯಾದವು. ಅಂತು ಇಂತೂ ಅಸಾಧ್ಯ ಎನಿಸಿದರೂ ಅಲ್ಲಲ್ಲಿ ತಂಗುದಾಣ ನಮ್ಮನ್ನು ಪ್ರೋತ್ಸಾಹಿಸಿತು. ಕ್ಷಣಕಾಲ ನಿಬ್ಬೆರಗಾದೆವು ! ನೋಡಿದರೆ ದೊಡ್ಡ ಕಲ್ಲು ಬಂಡೆಯನ್ನೇ ಕೊರೆದು ಮಾಡಿದ ಕಿರಿದಾದ ಮೆಟ್ಟಿಲುಗಳು. ಜಿನುಜಿನುಗುವ ಮಳೆಯಲ್ಲಿ ಹತ್ತುತ್ತಾ ಕಾಲು ಜಾರಿದರೆ ಎನ್ನುವ ಆತಂಕದಲ್ಲಿ ಮುಂದೆ ಮುಂದೆ ಹೆಜ್ಜೆ ಇಟ್ಟೆವು. ಹತ್ತಿದಾಕ್ಷಣ ಜಯಶಾಲಿಯದೆವಾ ? ಅನ್ನೋ ಅನಿಸಿಕೆಯ ಜೊತೆ ಜೊತೆಗೆಮಂಜು ಮುಸುಕಿದ ತುದಿಬೆಟ್ಟವು ‘ ಮಾನವ ನೀನೆಷ್ಟು ಅಲ್ಪ ! ಎಂದು ನಗುವುದೇನೋ ಎನ್ನಿಸಿತು. ಸೌಂದರ್ಯ , ಪ್ರಶಾಂತತೆ ನಮ್ಮನ್ನು ಮೂಖವಿಸ್ಮಿತಗೊಳಿಸಿತು. ಅಚ್ಚರಿ ! ಆ ತುತ್ತತುದಿಯಲ್ಲಿ ಕಲ್ಲು ಬಂಡೆಯಲ್ಲೂ ಸದಾಕಾಲ ಎಳಿನೀರಿನಂತಹ ತಣ್ಣೀರು ಕಾಣಸಿಗುವುದು. ಸಿದ್ಧರು ಸಿದ್ಧಿ ಫಡೆದಂತಹ ಸ್ಥಳ ಆಗಿರೋದರಿಂದ ಆಸ್ತಿಕರಿಗೆ ಹೇಳಿಸಿದ ಸ್ಥಳ ಕೂಡ . ಅಲ್ಲಿ ಈಗಲೂ ಬಂದವರೆಲ್ಲರಿಗೂ ಆಶೀರ್ವದಿಸಲು ಒಬ್ಬರು ಸಿದ್ಧರು ದೊಡ್ಡ ಕಲ್ಲು ಬಂಡೆಯ ಒಳಗಡೆ ತಪಸ್ಸು ಮಾಡುತ್ತಾ ಕುಳಿತಿರುತ್ತಾರೆ. ಆಶೀರ್ವಾದ ಪಡೆದ ನಾವು ಕೊಂಚ ಹೊತ್ತು ಅಲ್ಲೇ ಧ್ಯಾನ ಮಗ್ನರಾದೆವು. ಇನ್ನೂ ಬೆಟ್ಟದ ತುದಿ ನೋಡುವ ಬಯಕೆ ಹೊತ್ತು ಬಂದ ನಾವು ತುಸು ವಿಶ್ರಮಿಸಿ ಮುಂದಿನ ಹೆಜ್ಜೆ ಬೆಳೆಸಿದೆವು. ಅಲ್ಲಿಂದ ಮುಂದೆ ದೊಡ್ಡ ಬಂಡೆಯೊಳಗಿಂದ ಹತ್ತುತ್ತಾ ಹತ್ತುತ್ತಾ ಹೊರಬಂದು ನೋಡಿದರೆ ಅಲ್ಲಿರುವ ಮನಮೋಹಕ ಪ್ರಕೃತಿಯ ವೈಚಿತ್ರ್ಯ ! ಮಂಜಿನ ಸಹಿತ ಬೀಸುತ್ತಿರುವ ಶೀತಗಾಳಿಯು ಹಾಗೂ ಮುಂಜಾನೆಯ ಹೊಂಗಿರಣದಿಂದ ಫಳ ಫಳಿಸುತ್ತಿರುವ ಆ ಬೆಟ್ಟವು ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ದು ಬಿಟ್ಟಿತು. ಹನ್ನೆರೆಡು ಗಂಟೆಯವರೆಗೂ ಹಿಮಾವೃತ ಬೆಟ್ಟವನ್ನು ನೋಡಿದನುಭವ ಅವರ್ಣನೀಯ ! ನಮ್ಮ ಕರ್ನಾಟಕ ಆಹಾ ಎಷ್ಟು ಅದ್ಭುತ ! ಎಂದೆನಿಸಿತು. ವಾರೆ ವಾವ್ ! ಈ ಸಿದ್ಧರ ಬೆಟ್ಟ ನೋಡುವಾವಕಾಶ ಎಲ್ಲರಿಗೂ ಸಿದ್ಧಿಸಲಿ ಸಿದ್ಧರ ಆಶೀರ್ವಾದ ಪಡೆಯಲಿ . ಎನ್ನುತ್ತಾಮತ್ತೊಂದಿಷ್ಟು ಸೆಲ್ಫಿ ಒಂದಿಷ್ಟು ಮಸ್ತಿ ಮಾಡುತ್ತಾ ಬೆಟ್ಟದಿಂದ ನಿಧಾನವಾಗಿ ಅವರೋಹಣ ಮಾಡಿದೆವು. ಏರಿಳಿತಗಳ ರೋಚಕ ಅನುಭವವನ್ನು ಮೆಲುಕು ಹಾಕುತ್ತಾ ನಗರಿಗೆ ಹಿಂತಿರುಗಿ ಪ್ರಯಾಣ ಬೆಳೆಸಿದೆವು. ——— ಮಾರ್ಗ :ಬೆಂಗಳೂರು – ತುಮಕೂರು -ತೋವಿನಕೆರೆ – ತುಂಬಾಡಿ – ಸಿದ್ಧರಬೆಟ್ಟಸರಿಯಾದ ಸಮಯ : ಜೂನ್-ಜುಲೈ-ಆಗಸ್ಟ್ಚಾರಣದ ಸಮಯ : ಒಂದು ಗಂಟೆಸಾಧ್ಯ : ಚಾರಣಾಸಕ್ತರು ಹಾಗೂ ಪ್ರಕೃತಿ ಪ್ರಿಯರಿಗೆ ಮಾತ್ರ ನಿಷೇಧ : ಪ್ಲಾಸ್ಟಿಕ್ಸಲಹೆ : ಒಂಟಿ ಪಯಣ ಬೇಡ. ಗುಂಪಿನ ಜೊತೆ ಯೋಗ್ಯ “ಪ್ರಕೃತಿಯನ್ನು ಉಳಿಸಿ ಪ್ರೀತಿಸಿ ಆದರಿಸಿ ಆನಂದಿಸಿ “ *********************************
ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ Read Post »
ಹಾಯ್ಕುಗಳು
ಹಾಯ್ಕುಗಳು ಭಾರತಿ ರವೀಂದ್ರ 1) ವಾತ್ಸಲ್ಯ ತಾಯಿ ಸೆರಗುಅಂಬರವು ನಾಚಿತುವಾತ್ಸಲ್ಯ ಸಿರಿ. 2) ವಿಸ್ಮಿತ ಸುಖ ಕನಸು :ಕಂದಮ್ಮನ ಮೊಗದಿ :ದೇವ ವಿಸ್ಮಿತ. 3) ಚೆಲವು ಇಳೆ ಚೆಲವು :ಹಸಿರಿನ ಸಿರಿಯು,ನೆಮ್ಮದಿ ಬಿಡು. 4) ಮಧು ಮುತ್ತಿನ ಮಧು :ಮತ್ತೇರಿತು ದುಂಬಿಗೆ,ಶೃಂಗಾರ ಮಾಸ 5) ಹೃದಯ ಖಾಲಿ ಆಗಿತ್ತು :ಕನಸಿಲ್ಲದ ಮನ,ಬೆಂದ ಹೃದಯ. 6) ಸೀಮಂತ ಧರೆ ಸೀಮಂತ :ಹಕ್ಕಿಯ ಗಾನ ಸಭೆ,ನಾಚಿದ ಪ್ರಭೆ. 7) ಹೊಂಬಿಸಿಲು ಕಿರುನಗೆಯು :ಹೊಂಬಿಸಿಲು ಬಾಳಿಗೆ,ಸ್ವರ್ಗವು ಇಲ್ಲೇ. 8) ಹೂ ಬನ ಕಾವ್ಯದ ಬೀಜ :ಕವಿ ಬಿತ್ತಿ ಮನದಿ,ಹೂ ಬನ ಹಾಗೆ. 9) ಪ್ರೇಮದ ರಾಗ ಒಲವ ರಂಗು :ಮೊಗ್ಗೊಂದು ಅರಳಿತುಪ್ರೇಮದ ರಾಗ. 10) ಬಂಗಾರ ಜೀವನ ಪಾಠ :ಅರಿತು ನಡೆದಲ್ಲಿಬಾಳು ಬಂಗಾರ. *********************************
ಡಾ.ಅಂಬೇಡ್ಕರ್ ವಾದದ ಆಚರಣೆ
ಪುಸ್ತಕ ಸಂಗಾತಿ ಡಾ.ಅಂಬೇಡ್ಕರ್ ವಾದದ ಆಚರಣೆ ಡಾ.ಅಂಬೇಡ್ಕರ್ ವಾದದ ಆಚರಣೆಲೇಖಕರು– ಡಾ.ಸಿ.ಜಿ.ಲಕ್ಷ್ಮೀಪತಿಪುಟಗಳು– 104ಪುಸ್ತಕದ ಬೆಲೆ– 68 ರೂಪಾಯಿಗಳುಪ್ರಕಾಶನ– ಚಾರು ಪ್ರಕಾಶನಅಡ್ರೆಸ್– # 83, ಪ್ರೈಡ್ ಪ್ಲಾಜಾ ಕಾಂಪ್ಲೆಕ್ಸ್, ಆದರ್ಶ ಕಾಲೇಜ್ ಹತ್ತಿರ, 5 ನೇ ಮುಖ್ಯ ರಸ್ತೆ. ಬೆಂಗಳೂರು. ‘ಡಾ.ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕವು, ಮತ್ತು ಆ ಪುಸ್ತಕ ಬರೆದ ಡಾ.ಸಿ.ಜಿ.ಲಕ್ಷೀಪತಿ ಅವರ ಬಗೆಗೆ ಒಂದಿಷ್ಟು..! ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ವಿ.ಎಚ್.ಸಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು. ಕನಕಪುರದ ರೂರಲ್ ಕಾಲೇಜು, ಕನ್ನಡ ವಿಶ್ವವಿದ್ಯಾಲಯ ಹಾಗೂ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನಾನುಭವವಿದೆ. ತುಮಕೂರು ಜಿಲ್ಲೆಯ ಮಧುಗಿರಿಯ ಟಿ.ವಿ.ವಿ. ಕಾಲೇಜಿನಲ್ಲಿ ಪದವಿ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಂತರ್ ಶಿಸ್ತೀಯ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಮುಗಿಸಿದರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದರು. ಅವರ ಕೃತಿಗಳೆಂದರೆ ಕ್ಯಾಸ್ಟ್ ಕೆಮಿಸ್ಟ್ರಿ, ಚಿತ್ರಲೆ ವೃಕ್ಷ (ಭಾರತದ ಲೈಂಗಿಕತೆಯ ಸಾಂಸ್ಕೃತಿಕ ಕಥನ), ಥಾಯ್ ಲ್ಯಾಂಡ್ ಎಂಬ ಮುಗುಳ್ನಗೆ (ಪ್ರವಾಸ ಕಥನ), ನಿಜ ಭ್ರಮೆಗಳ ರೂಪಕ (ಲೇಖನಗಳ ಸಂಗ್ರಹ), ಮತಾಂತರ ಸತ್ಯಾನ್ವೇಷಣೆ (ಸಂಪಾದನೆ), ಕರ್ನಾಟಕದ ಸಮಾಜಶಾಸ್ತ್ರ (ಪಿಎಚ್ ಡಿ ಮಹಾಪ್ರಬಂಧದ ಪುಸ್ತಕ ರೂಪ), ಅಂಬೇಡ್ಕರ್ ವಾದದ ಆಚರಣೆ, ಆಧುನಿಕೋತ್ತರ ಮತ್ತು ಮಾರ್ಕ್ಸ್ ವಾದೋತ್ತರ. ಹೀಗೆಯೇ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಸಾಹಿತ್ಯದ ಕೆಲಸದ ಜೊತೆಗೇಗೆನೇ ಜೀವನ ಹೋರಾಟ ಸಾಗಿದೆ..! # ಈಗ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಕುರಿತು ಚರ್ಚಿಸೋಣ…– ದಮನಿತರ ಬಿಡುಗಡೆ ಮಾರ್ಗ ಈ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’..! ಪಾರಂಪರಿಕ ಸಮಾಜಶಾಸ್ತ್ರಜ್ಞರಿಗಿಂತ ವಿಭಿನ್ನವಾದ ಲೋಕದೃಷ್ಟಿಯಲ್ಲಿ ಆಲೋಚಿಸುವ ಚಿಂತಕರಲ್ಲಿ ಒಬ್ಬರಾದ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕ. ಮೊದಲಿಗೇ ವಿಶಿಷ್ಟವಾದ ಕೃತಿ ನೀಡುತ್ತಿರುವ ಡಾ.ಸಿ.ಜಿ.ಲಕ್ಷ್ಮೀಪತಿಯವರು ಮೊದಲಿಗೆ ಪ್ರಸಂಸಾರ್ಹರು. ಚರಿತ್ರೆಯುದ್ದಕ್ಕೂ ಮತ್ತು ಪ್ರಸ್ತುತ ಸಂದರ್ಭದಲ್ಲೂ ಶೋಷಕರ ಕಬಂಧ ಬಾಹುವಿನಲ್ಲಿ ಸಿಲುಕಿ ನಲಗುತ್ತಿರುವ ದಲಿತರು ಒಂದು ಕಡೆ. ಇನ್ನೊಂದು ಕಡೆ ಹಿಂದುಳಿದ ವರ್ಗದವರು. ಅಲ್ಲದೇ ಮಹಿಳೆಯರು, ದಮನಿತರನ್ನು ಬಿಡುಗಡೆಗೊಳಿಸಲು ಇರುವ ಏಕೈಕ ಮಾರ್ಗ ‘ಅಂಬೇಡ್ಕರ್ ವಾದದ ಕ್ರಿಯಾಚರಣೆ’ಯಾಗಿದೆ. ************************************** ಆದರೆ ಅಂಬೇಡ್ಕರ್ ವಾದದ ಆಚರಣೆಯನ್ನು ಜನರು ತಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಅನುಸರಿಸಬೇಕು ಎನ್ನುವುದಕ್ಕೆ ವಾರ್ಗಸೂಚಿಯಾಗಿಯೂ ಆಗಿದೆ ಈ ಪುಸ್ತಕ. ಅಂಬೇಡ್ಕರ್ ವಾದವು ತಾಂತ್ರಿಕವಾಗಿ ಪಠಣದ ಆಚರಣೆ ಮಾತ್ರವಾಗದೇ ಶೋಷಕರ ಅಂದರೆ ಬ್ರಾಮಣ್ಯ ಪ್ರಜ್ಞೆಯ ವಿರುದ್ಧ ಸತತವಾಗಿ ಸೆಣಸಾಡುವ ಮೂಲಕ ದಮನಿತರ ಪರವಾದ ಆಶಯಗಳನ್ನು ಈಡೇರಿಸುವಲ್ಲಿ ಮತ್ತು ಶೋಷಣೆಯಿಂದ ಬಿಡುಗಡೆಗೊಳಿಸುವಲ್ಲಿ ಅಂಬೇಡ್ಕರ್ ವಾದದ ತಿಳಿವು ಈ ಪುಸ್ತಕದಲಿದೆ ಅದರ ತಿಳುವು. ಅರವು ಮತ್ತು ಕ್ರಿಯಾಶೀಲತೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುವ ಪ್ರಣಾಳಿಕೆಯಂತಿದೆ ಈ ಅಂಬೇಡ್ಕರ್ ವಾದದ ಪುಸ್ತಕವು. ಕಿರಿದರಲ್ಲಿ ಹಿರಿದನ್ನು ಹೇಳುವ ಈ ಹೊತ್ತಿಗೆಯನ್ನು ಪ್ರತಿಯೊಬ್ಬರೂ ಓದಲೇಬೇಕಾದ ಮಹತ್ವದ ಸಂಗತಿಗಳನ್ನು ಒಳಗೊಂಡಿದೆ ಈ ಪುಸ್ತಕ. ಮನುವಾದ ಸಂಸ್ಕೃತಿಯ ಪ್ರಣೀತ ಬ್ರಾಹ್ಮಣ್ಯಶಾಹಿಯ ಆಕ್ರಮಣಕಾರಿತನವನ್ನು ಹಿಮ್ಮೆಟ್ಟಿಸುವ, ಅದರಿಂದ ಬಿಡುಗಡೆಗೊಳ್ಳುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಾದ ಒಂದು ಅಸ್ತ್ರವಾಗಬಲ್ಲದು ಎನ್ನುವುದು ಇಲ್ಲಿನ ಬರಹಗಳೆಲ್ಲವೂ ವಿವರಿಸುತ್ತವೆ. ಅಷ್ಟೇ ಅಲ್ಲದೇ ಡಾ.ಸಿ.ಜಿ.ಲಕ್ಷ್ಮೀಪತಿಯವರು ‘ಅಂಬೇಡ್ಕರ್ ವಾದದ ಆಚರಣೆ’ಯು ಮಾರ್ಷಲ್ ಆರ್ಟ್ಸ್ ಇದ್ದಹಾಗೆ. ಎದುರಾಳಿಯನ್ನು ಮಣಿಸುವಾಗ ಒಂದೇ ಒಂದು ತಂತ್ರ ಬಳಸುದಿಲ್ಲ ಅಂಬೇಡ್ಕರ್ ವಾದವು ಎಂದು ವಿವರಿಸುತ್ತಾರೆ ಡಾ.ಸಿ.ಜಿ.ಲಕ್ಷ್ಮೀಪತಿ ಅವರು. ಮೂರು ಭಾಗಗಳಲ್ಲಿ ಹರಡಿಕೊಂಡಿರುವ ಈ ಕೃತಿಯ ಮೂದಲ ಭಾಗದಲ್ಲಿ ಅಂಬೇಡ್ಕರ್ ವಾದದ ವಿವರಣೆ. ಸೈದ್ಧಾಂತಿಕತೆಯನ್ನು ವಿವರಿಸಿದರೆ ಎರಡನೇ ಭಾಗದಲ್ಲಿ ಹೆಸರಾಂತ ಚಿಂತಕರಾದ ಪಾರ್ವತೀಶ್ ಬಿಳಿದಾಳೆ ಅವರ ಹಿನ್ನುಡಿ ಇದೆ. ಸುದೀರ್ಘವಾದ ಹಿನ್ನುಡಿಯು ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಈ ಬರಹದ ಆಳ-ಅಗಲ ಮತ್ತು ವೈಶಿಷ್ಟ್ಯವನ್ನು ಬಹಳ ಗಂಭೀರವಾಗಿ ಬರೆದ ಭಾಷ್ಯವಾಗಿದೆ. ಮತ್ತೂ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಆಲೋಚನೆಯ ಮುಂದುವರಿಕೆಯೂ ಆಗಿದೆ. ಹಾಗಾಗಿ ಕೃತಿಯನ್ನು ಪ್ರತಿಯೊಬ್ಬರೂ, ಅದರಲ್ಲೂ ಯುವಜನತೆ ಓದಲೇಬೇಕಾದ ಕೃತಿಯಾಗಿದೆ. ಮೂರನೇ ಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಆಕಾಶದೆತ್ತರಕ್ಕೆ ಬೆಳೆದ, ಆಲದ ಮರದಂತೆ ಆವರಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಭವ, ಅಧ್ಯಯನದ ಅಘಾದತೆ, ಗಂಭೀರತೆ, ವಿಸ್ತಾರ, ಓದಿನ ವ್ಯಾಪಕತೆಯ ಹರವು ಎಂಥದ್ದು ಎನ್ನುವುದನ್ನು ತಿಳಿಯಪಡಿಸುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ತಮ್ಮ ಬರಹದಲ್ಲಿ ದಾಖಲಿಸಿದ ಉಲ್ಲೇಖಗಳ ಮಾಹಿತಿಯನ್ನು ನೀಡಿರುವುದು ಅವರ ಘನತೆಯನ್ನೂ ಮತ್ತಷ್ಟೂ ಹೆಚ್ಚಿಸುತ್ತದೆ..! ಎಲ್ಲರೂ ಕೊಂಡು ಓದಿ ಕ್ರಿಯಾಶೀಲ ಆಚರಣೆಗೆ ಕಿಂಚಿತ್ತಾದರೂ ತೊಡಗಿಸಿಕೊಂಡರೆ ಆ ಮೂಲಕ ಮೂಲಕ ಅಂಬೇಡ್ಕರ್ ಅವರ ತಿಳಿವಿಗೂ, ಕೃತಿಕಾರರ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಬರಹಕ್ಕೂ ಗೌರವ ತಂದಂತಾಗುತ್ತದೆ ಅಂತ ಹೇಳುತ್ತಾ ಈ ವಿಮರ್ಶಾ ಬರಹ ಮುಗಿಸುತ್ತೇನೆ… ****************************** ಕೆ.ಶಿವು.ಲಕ್ಕಣ್ಣವರ
ಡಾ.ಅಂಬೇಡ್ಕರ್ ವಾದದ ಆಚರಣೆ Read Post »
ಕಾಡುವ ಹಕ್ಕಿ.
ಕಾಡುವ ಹಕ್ಕಿ ಅಬ್ಳಿ,ಹೆಗಡೆ ಹಾಡು ಹಕ್ಕಿಯೊಂದು ನಿತ್ಯಕಾಡುತಿದೆ ‘ಹಾಡು ನೀನು’ಎಂದು. ಗಂಟಲೊಣಗಿದರೆ ಕಂಠನುಲಿಯದದು ಹಾಡಲೇಗೆ ಇಂದು..? ಮರ್ಮವರಿಯದೆ ಧರ್ಮ,ಕರ್ಮಗಳ ನಡುವೆ ಬಂಧಿ ನಾನು. ಹಾರಲಾಗದಿದೆ ಭಾರ ರೆಕ್ಕೆಯಿದೆ ಹೊರಗೆ ಬಂದರೂನು. ನೋವು,ಹಿಂಸೆಗಳು ಸುತ್ತ ಕುಣಿಯುತಿವೆ ಕೊಳ್ಳಿ ದೆವ್ವದಂತೆ. ಹಸಿರು ಪ್ರಕ್ರತಿಯಾ ತಂಪು,ಸೊಂಪುಗಳು ಒಡಲ ಬೆಂಕಿಯಂತೆ. ಹರಿವನದಿಯಂತೆ ಬದುಕು ಸರಿಯುತಿದೆ ಸೆಳವು ಈಜಲಾರೆ. ಖುಷಿಯ ಬಾನಿನಲಿ ಹಾಡಿ,ತೇಲುವದು ಎಂತೋ…?ಹೇಳಲಾರೆ. ಭಾವ ಬತ್ತಿಹುದುಖುಷಿಯು ಸತ್ತಿಹುದು ಬರದು ಮಧುರಗೀತೆ. ದುಃಖ ಉಮ್ಮಳಿಸಿ ಬಿಕ್ಕುತ್ತ ಹಾಡಿದರೆ ಅದುವೆ ಚರಮಗೀತೆ. ಹಾಡುಹಕ್ಕಿಯೆ ನಿನ್ನ ಸ್ವಚ್ಛಂಧ ಬಂಧ ನನ್ನ ಬದುಕಿಗಿಲ್ಲ. ಬುವಿಯಂದ ಹೀರಿ ಬಾನಗಲ ಹಾರಿ . ಹಾಡೆ ಖುಷಿಯ ಸೊಲ್ಲ. ***********




