ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹನಿಗಳು

ಹನಿಗಳು ಭಾರತಿ ರವೀಂದ್ರ ಕೆಂಪಿನ ಮುತ್ತು ಬೆಳಗಿನಿಂದ ಕೆಂಪಾದಕೆನ್ನೆಯೊಂದಿಗೆ ನನ್ನವರಿಗೆ ಖುಷಿಯೇಖುಷಿ, ಬಿಡಿಸಿ ಹೇಳಲಿಹೇಗೆ? ಆ ಕೆಂಪಿಗೆಕಾರಣ ನಾನಲ್ಲಇಡೀ ರಾತ್ರಿ ಸೊಳ್ಳೆ ಕೊಟ್ಟ ಮುತ್ತಿನ ಪ್ರಭಾವ ಅಂತಾ ನೆನಪು ನಸು ನಾಚುತ ನಲ್ಲೆಕೇಳಿದಳು. ನೆನಪಿದೆಯಾ ನಿಮಗೆನಾ ಮೊದಲ ಬಾರಿಮಾಡಿದ ಹಲ್ವಾ…ಮೊಗದಿ ನಗು ಸೂಸಿಮನದಲ್ಲಿ ಅಂದು ಕೊಂಡೆ ಹೇಗೆ ಕಣೆಮರೆಯಲು ಸಾಧ್ಯಕಾಗದ ಅಂಟಿಸೋಅಂಟಿನ ಹಾಗೆ ಬಳಸಿದ್ದೆಅಂತಾ… ಮುಡಿದ ಮಲ್ಲಿಗೆ ಮದುವೆ ಮನೆಯಲ್ಲಿಮುಡಿ ತುಂಬಾ ಮಲ್ಲಿಗೆದಂಡೆ ಮುಡಿದವಳ ನಡೆ ಬಲು ಸೊಕ್ಕಿನದು,ಪಾಪ ಅದೇನಾಯಿತೋ ಗದ್ದಲದಿ ಅವಸರದಿಓಡಿ ಬರೋ ಹುಡುಗನಕೈಲಿ ದಂಡೆ ಸಮೇತಕೃತಕ ಮುಡಿ… ಅವಳದು. ***********************

ಹನಿಗಳು Read Post »

ಇತರೆ

ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ

ಲೇಖನ ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ    – ಡಾ. ಎಸ್.ಬಿ. ಬಸೆಟ್ಟಿ ಬಹುಶಃ ಭಾರತಕ್ಕಿಂತ ಹೆಚ್ಚು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವ ಹೊಸ ರಾಷ್ಟ್ರವೂ ಎದುರಿಸಿರಲಿಕ್ಕಿಲ್ಲ. ಬ್ರಿಟಿಷರು ಆಖ್ಯೇರಾಗಿ ಉಪಖಂಡದ ಮೇಲಿನ ಹತೋಟಿಯನ್ನು ತ್ಯಜಿಸಿದಾಗ ಅವರು ತಮ್ಮ ಬೆನ್ನಿಗೆ ಒಂದಲ್ಲ ಎರಡು ರಾಷ್ಟ್ರಗಳನ್ನು ಬಿಟ್ಟು ಹೋಗಿದ್ದರು. ಒಂದು ಹೊಸ ರಾಷ್ಟ್ರವಲ್ಲ   ಎರಡು, ಭಾರತ ಮತ್ತು ಪಾಕಿಸ್ತಾನ. ಅಲ್ಪಸಂಖ್ಯಾತರಾದ ಮುಸ್ಲಿಮರ ಸ್ವದೇಶವಾಗಿ ಪಾಕಿಸ್ತಾನವನ್ನು ಸೃಷ್ಠಿಸಲಾಯಿತು. ಈ ಕೋಮುಗಲಭೆಗಳು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡವು. ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳ ಗಡಿದಾಟಿ ಬಂದಿದ್ದು ಸುಮಾರು ಎಂಬತ್ತು ಲಕ್ಷ ನಿರಾಶ್ರಿತರನ್ನು ಸಲಹಬೇಕಾದ ಕೋಪ ಹತಾಶೆಗಳಲ್ಲಿ ಭಾರತ ಸರ್ಕಾರ ತೃಪ್ತಿ ಪಟ್ಟು ಕೊಳ್ಳಬೇಕಾಯಿತು. ಇದರ ಜೊತೆಗೆ ಹಿಂಸಾಚಾರದ ಹೊಸ ಅಲೆ. ಒಂದು ಕಡೆ ಹಿಂದೂಗಳು ಮತ್ತು ಸಿಖ್ಖರ ನಡುವೆ ಮತ್ತೊಂದು ಕಡೆ ಭಾರತದಲ್ಲೇ ಉಳಿಯಲು ನಿಶ್ಚಯಿಸಿದ ಮುಸಲ್ಮಾನರುಗಳು ಮತ್ತು ಹಿಂದೂಗಳ ನಡುವೆ ಹಿಂಸಾಚಾರ ಭುಗಿಲೆದ್ದಿತು.ಇಂಥದ್ದೇ ಇನ್ನೊಂದು ಅನಿಷ್ಟಕಾರಿ ಸಮಸ್ಯೆಯೆಂದರೆ ರಾಜಮಹಾರಾಜರ ಆಳ್ವಿಕೆಯ ಸಂಸ್ಥಾನಗಳು ಬ್ರಿಟಿಷರು ಉಪಖಂಡದ ಮೂರನೇ ಎರಡರಷ್ಟು ಭಾಗದ ಮೇಲೆ ನೇರ ಹತೋಟಿ ಹೊಂದಿದ್ದರು. ಸ್ವಾತಂತ್ರ್ಯ ಬಂದ ನಂತರ ಹೊಸ ರಾಷ್ಟ್ರಗಳೊಂದಿಗೆ ವಿಲೀನ ಹೊಂದುವಂತೆ ಸಂಸ್ಥಾನಗಳ ರಾಜರುಗಳ ಮನ ಒಲಿಸಬೇಕಾಯಿತು. ಆಗ್ರಹ ಪಡಿಸಬೇಕಾಗಿ ಬಂತು. ಈ ಪ್ರಕ್ರಿಯೆ ಎರಡು ವರ್ಷಗಳಿಗಳೂ ಹೆಚ್ಚು ಕಾಲ ನಡೆಯಿತು. ನಿರಾಶ್ರಿತರನ್ನು ಸಂತೈಸಬೇಕಾಗಿತ್ತು. ರಾಜರ ಸಂಸ್ಥಾನಗಳನ್ನು ವಿಲೀನ ಗೊಳಿಸಿಕೊಳ್ಳಬೇಕಿತ್ತು. ಇವೆರಡು ತತ್‌ಕ್ಷಣದ ಸಮಸ್ಯೆಗಳಾಗಿದ್ದವು. ಇದರ ಜೊತೆಗೆ ಹೊಸ ರಾಷ್ಟ್ರ ದ ಭವ್ಯ ಭವಿಷ್ಯವನ್ನು ರೂಪಿಸಬೇಕಾಗಿತ್ತು. ಗಾಂಧೀಜಿಯವರು ಹಿಂದೂ-ಮುಸ್ಲಿಮರ ನಡುವೆ ಐಕ್ಯತೆ ಸಾಧಿಸುವ ನಿಟ್ಟಿನಲ್ಲಿ ವಹಿಸಿದ ಪಾತ್ರ ಅತ್ಯಂತ ಪ್ರಶಂಸನೀಯವಾದುದಾಗಿದೆ. ಗಾಂಧೀಜಿಯವರು ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಈ ಬಗ್ಗೆ ಪ್ರಯೋಗ ಕೈಗೊಂಡಿದ್ದು, ಭಾರತದಲ್ಲಿ ಹಿಂದೂ ಮುಸ್ಲಿಂರ ಐಕ್ಯತೆ ಸಾಧಿಸಲು ಅವರಿಗೆ ಪ್ರೇರಣೆ ದೊರಕಿದಂತಾಯಿತು. ಅಂತೆಯೇ ಲಕ್ನೋ ಒಪ್ಪಂದವು ಸಹ ಇವರಿಗೆ ಒಂದು ರೀತಿ ಸಹಕಾರಿಯಾಯಿತು. ಭಾರತೀಯ ರಾಷ್ಟ್ರೀ ಯ ಕಾಂಗ್ರೆಸ್‌ನಲ್ಲಿದ್ದ ಅನೇಕ ಮುಸ್ಲಿಂರು ಇವರಿಗೆ ಹತ್ತಿರವಾಗತೊಡಗಿದರು.  ಇವರು ೧೯೦೯ರ ತರುವಾಯ ಈ ಎರಡೂ ಸಮುದಾಯಗಳ ನಡುವಿನ ಐಕ್ಯತೆಯ ಮೂಲಕ ದೇಶದ ಪ್ರಗತಿ ಬಗ್ಗೆ ಚಿಂತನೆ ನಡೆಸಲಾರಂಭಿಸಿದರು.  ಇವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಗಾಂಧೀಜಿಯವರು ಹಿಂದೂ-ಮುಸ್ಲಿಮರ ನಡುವಿನ ಐಕ್ಯತೆಯನ್ನು ಸಾಧಿಸುವ ಪರಿಸ್ಥಿತಿಯನ್ನು ಗಮನಿಸಿದಾಗ ಅವರು ಈ ರೀತಿ ಹೇಳಿರುವರು “ತೊಂದರೆಗಳಲ್ಲಿ ತೊಂದರೆ” ಹಾಗೂ ಇದರಿಂದ ತೀವ್ರ ಅಸಮಾಧಾನಗೊಂಡರು. ಗಾಂಧೀಜಿಯವರ ಪ್ರಯತ್ನದ ಫಲವಾಗಿ ೧೯೧೯ ರಿಂದ ೧೯೨೨ರ ವರೆಗೆ ಈ ಎರಡೂ ಕೋಮುಗಳ ನಡುವೆ ಐಕ್ಯತೆ ಸಾಧಿಸಲಾಗಿತ್ತು. ಈ ದೇಶದ ಸ್ವಾತಂತ್ರ್ಯ ಕ್ಕೆ ಹಿಂದೂ ಮುಸ್ಲಿಂರ ಐಕ್ಯತೆ ಅನಿವಾರ್ಯವೆಂದು ಅವರು ಸಾರಿದರು. ೧೫ನೇ ಆಗಸ್ಟ್ ೧೯೪೭ ರಂದು ಭಾರತ ಬ್ರಿಟಿಷ್ ಕಾಮನ್‌ವೆಲ್ತ್ಗೆ ಸೇರಿದ ಸ್ವತಂತ್ರ ರಾಷ್ಟ್ರ ದ ಸ್ಥಾನಮಾನವನ್ನು ಪಡೆಯಿತು. ೨೬ನೇ ಜನೇವರಿ ೧೯೫೦ ರಂದು ಸಂವಿಧಾನದತ್ತವಾಗಿ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಈ ಅವಧಿಯಲ್ಲಿ ಹೊಸ ರಾಷ್ಟ್ರದ ಏಕತೆ ದಾರುಣವಾದ ಪರೀಕ್ಷೆಗಳಿಗೊಳಪಟ್ಟಿತು. ನಿರಾಶ್ರಿತರ ಸಮಸ್ಯೆ, ರಾಜರ ಸಂಸ್ಥಾನಗಳ ಸಮಸ್ಯೆ ಹೀಗೆ ಹಲವಾರು ಗಂಭೀರ ಸಮಸ್ಯೆಗಳ ಅಗ್ನಿ ದಿವ್ಯವನ್ನು ಹೊಸ ರಾಷ್ಟ್ರ ಎದುರಿಸಬೇಕಾಗಿ ಬಂತು. ೧೯೪೭ರ ಸೆಪ್ಟೆಂಬರ್‌ನಲ್ಲಿ ಕಾಶ್ಮೀರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗೆ ಸಶಸ್ತ್ರ ಹೋರಾಟ ನಡೆಸಬೇಕಾಯಿತು. ೧೯೪೮ ರ ಮಾರ್ಚ್ನಲ್ಲಿ ಕಮ್ಯುನಿಷ್ಟ್ ಪಕ್ಷ ಚೀನಾದ ಮಾದರಿಯಲ್ಲಿ ಏಕಪಕ್ಷ ಸರ್ಕಾರದ ವ್ಯವಸ್ಥೆಯನ್ನು ಜಾರಿಗೆ ತರುವ ನಿರೀಕ್ಷೆಯಿಂದ ದಂಗೆ ಎದ್ದಿತು. ನಾಗಾಗಳಲ್ಲಿ ಬಹುಸಂಖ್ಯಾತ ಜನರು ಹಾಗೂ ಮಣಿಪುರಿ ಜನರು ಭಾರತ ಒಕ್ಕೂಟಕ್ಕೆ ಸೇರಲೊಪ್ಪದೆ ತಕರಾರು ತೆಗೆದಿದ್ದರು. ಇದರಿಂದ ಈಶಾನ್ಯ ಗಡಿ ಪ್ರದೇಶಗಳಲ್ಲಿ ಅಸಮಾಧಾನ ಭುಗಿಲೆದ್ದಿತು. ೧೨ನೇ ನವೆಂಬರ್ ೧೯೪೭ ರಂದು ಮಹಾತ್ಮ ಗಾಂಧಿಯವರು ನಡೆಸಿದ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು. ಇದು ಸ್ವತಂತ್ರ ಭಾರತದ ಮೊದಲ ದೀಪಾವಳಿ. ಸಹೋದರರು ಮತ್ತು ಸಹೋದರಿಯರು. ಇಂದು ದೀಪಾವಳಿ ಮತ್ತು ಈ ಸಂದರ್ಭದಲ್ಲಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಇದು ಹಿಂದೂ ಕ್ಯಾಲೆಂಡರ್ನಲ್ಲಿ ಉತ್ತಮ ದಿನವಾಗಿದೆ. ವಿಕ್ರಮ್ ಸಂವತ್ಸರ ಪ್ರಕಾರ, ನಾಳೆ ಗುರುವಾರದಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಪ್ರತಿವರ್ಷ ದೀಪಾವಳಿಯನ್ನು ಏಕೆ ಪ್ರಕಾಶದೊಂದಿಗೆ ಆಚರಿಸಲಾಗುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ರಾಮ ಮತ್ತು ರಾವಣನ ನಡುವಿನ ಮಹಾ ಯುದ್ಧದಲ್ಲಿ, ರಾಮನು ಒಳ್ಳೆಯ ಶಕ್ತಿಗಳನ್ನು ಮತ್ತು ರಾವಣನು ದುಷ್ಟ ಶಕ್ತಿಗಳನ್ನು ಸಂಕೇತಿಸಿದನು. ರಾಮನು ರಾವಣನನ್ನು ಗೆದ್ದನು ಮತ್ತು ಈ ಗೆಲುವು ಭಾರತದಲ್ಲಿ ರಾಮರಾಜ್ಯವನ್ನು ಸ್ಥಾಪಿಸಿತು. ಆದರೆ ಅಯ್ಯೋ! ಇಂದು ಭಾರತದಲ್ಲಿ ರಾಮರಾಜ್ಯ ಇಲ್ಲ. ಹಾಗಾದರೆ ನಾವು ದೀಪಾವಳಿಯನ್ನು ಹೇಗೆ ಆಚರಿಸಬಹುದು? ಒಳಗೆ ರಾಮನಿರುವವರು ಮಾತ್ರ ಈ ವಿಜಯವನ್ನು ಆಚರಿಸಬಹುದು. ಏಕೆಂದರೆ, ದೇವರು ಮಾತ್ರ ನಮ್ಮ ಆತ್ಮಗಳನ್ನು ಬೆಳಗಿಸಬಲ್ಲನು ಮತ್ತು ಆ ಬೆಳಕು ಮಾತ್ರ ನಿಜವಾದ ಬೆಳಕು. ಇಂದು ಹಾಡಿದ ಭಜನೆಯು ದೇವರನ್ನು ನೋಡುವ ಕವಿಯ ಬಯಕೆಯನ್ನು ಒತ್ತಿಹೇಳುತ್ತದೆ. ಜನಸಂದಣಿಯು ಕೃತಕ ಬೆಳಕನ್ನು ನೋಡಲು ಹೋಗುತ್ತದೆ ಆದರೆ ಇಂದು ನಮಗೆ ಬೇಕಾಗಿರುವುದು ನಮ್ಮ ಹೃದಯದಲ್ಲಿ ಪ್ರೀತಿಯ ಬೆಳಕು. ನಾವು ಪ್ರೀತಿಯ ಬೆಳಕನ್ನು ಒಳಗೆ ಬೆಳಗಿಸಬೇಕು. ಆಗ ನಾವು ಅಭಿನಂದನೆಗಳಿಗೆ ಅರ್ಹರು. ಇಂದು ಸಾವಿರಾರು ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಿಂದೂ, ಸಿಖ್ ಅಥವಾ ಮುಸ್ಲಿಂ ಆಗಿರುವ ಪ್ರತಿಯೊಬ್ಬ ರೋಗಿಯೂ ನಿಮ್ಮ ಸ್ವಂತ ಸಹೋದರ ಅಥವಾ ಸಹೋದರಿ ಎಂದು ನೀವು, ನಿಮ್ಮ ಹೃದಯದ ಮೇಲೆ ಕೈ ಹಾಕಿ ಹೇಳಬಹುದೇ? ಇದು ನಿಮಗಾಗಿ ಪರೀಕ್ಷೆ. ರಾಮ ಮತ್ತು ರಾವಣ ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ನಡುವಿನ ನಿರಂತರ ಹೋರಾಟದ ಸಂಕೇತಗಳಾಗಿವೆ. ನಿಜವಾದ ಬೆಳಕು ಒಳಗಿನಿಂದ ಬರುತ್ತದೆ. ಗಾಯಗೊಂಡ ಕಾಶ್ಮೀರವನ್ನು ನೋಡಿದ ಪಂಡಿತ್ ಜವಾಹರಲಾಲ್ ನೆಹರು ಎಷ್ಟು ದುಃಖದ ಹೃದಯದಿಂದ ಮರಳಿದ್ದಾರೆ! ನಿನ್ನೆ ಮತ್ತು ಇಂದು ಮಧ್ಯಾಹ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ನನಗೆ ಬಾರಾಮುಲಾದಿಂದ ಕೆಲವು ಹೂವುಗಳನ್ನು ತಂದಿದ್ದಾರೆ. ಪ್ರಕೃತಿಯ ಅಂತಹ ಉಡುಗೊರೆಗಳನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಆದರೆ ಇಂದು ಲೂಟಿ, ಅಗ್ನಿಸ್ಪರ್ಶ ಮತ್ತು ರಕ್ತಪಾತವು ಆ ಸುಂದರ ಭೂಮಿಯ ಸೌಂದರ್ಯವನ್ನು ಹಾಳು ಮಾಡಿದೆ. ಜವಾಹರಲಾಲ್ ಜಮ್ಮುವಿಗೂ ಹೋಗಿದ್ದರು. ಅಲ್ಲಿಯೂ ಎಲ್ಲವೂ ಸರಿಯಾಗಿಲ್ಲ. ಅವರ ಸಲಹೆಯನ್ನು ಕೋರಿದ ಶ್ರೀ ಶಮಲ್ದಾಸ್ ಗಾಂಧಿ ಮತ್ತು ಧೇಬರ್ಭಾಯ್ ಅವರ ಕೋರಿಕೆಯ ಮೇರೆಗೆ ಸರ್ದಾರ್ ಪಟೇಲ್ ಜುನಗಡಗೆ ಹೋಗಬೇಕಾಗಿತ್ತು. ಜಿನ್ನಾ ಮತ್ತು ಭುಟ್ಟೋ ಇಬ್ಬರೂ ಕೋಪಗೊಂಡಿದ್ದಾರೆ ಏಕೆಂದರೆ ಭಾರತ ಸರ್ಕಾರ ತಮ್ಮನ್ನು ಮೋಸ ಮಾಡಿದೆ ಎಂದು ಭಾವಿಸಿ ಜುನಗಡವನ್ನು ಒಕ್ಕೂಟಕ್ಕೆ ಸೇರಿಸಲು ಒತ್ತಾಯಿಸುತ್ತಿದೆ. ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸುವ ಸಲುವಾಗಿ ಅವನ ಹೃದಯದಿಂದ ದ್ವೇಷ ಮತ್ತು ಅನುಮಾನವನ್ನು ಹೊರಹಾಕುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಿಮ್ಮೊಳಗಿನ ದೇವರ ಉಪಸ್ಥಿತಿಯನ್ನು ನೀವು ಅನುಭವಿಸದಿದ್ದರೆ ಮತ್ತು ನಿಮ್ಮ ಸಣ್ಣ ಆಂತರಿಕ ಜಗಳಗಳನ್ನು ಮರೆಯದಿದ್ದರೆ, ಕಾಶ್ಮೀರ ಅಥವಾ ಜುನಗಡದ ಯಶಸ್ಸು ನಿರರ್ಥಕವೆಂದು ಸಾಬೀತುಪಡಿಸುತ್ತದೆ. ಭಯದಿಂದ ಪಲಾಯನ ಮಾಡಿದ ಎಲ್ಲ ಮುಸ್ಲಿಮರನ್ನು ನೀವು ಮರಳಿ ಕರೆತರುವವರೆಗೂ ದೀಪಾವಳಿ ಆಚರಿಸಲಾಗುವುದಿಲ್ಲ. ಅಲ್ಲಿಂದ ಓಡಿಹೋದ ಹಿಂದೂಗಳು ಮತ್ತು ಸಿಖ್ಖರ ಜೊತೆ ಹಾಗೆ ಮಾಡದಿದ್ದರೆ ಪಾಕಿಸ್ತಾನವೂ ಬದುಕುಳಿಯುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಬಗ್ಗೆ ನಾನು ಏನು ಮಾಡಬಹುದೆಂದು ನಾಳೆ ಹೇಳುತ್ತೇನೆ. ಗುರುವಾರದಿಂದ ಪ್ರಾರಂಭವಾಗುವ ಹೊಸ ವರ್ಷದಲ್ಲಿ ನೀವು ಮತ್ತು ಅಖಿಲ ಭಾರತ ಸಂತೋಷವಾಗಿರಲಿ. ದೇವರು ನಿಮ್ಮ ಹೃದಯವನ್ನು ಬೆಳಗಿಸಲಿ ಇದರಿಂದ ನೀವು ಪರಸ್ಪರ ಅಥವಾ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಸೇವೆ ಸಲ್ಲಿಸಬಹುದು. ಜೈ ಹಿಂದ್ ಎಂದರೆ ಹಿಂದೂಗಳಿಗೆ ಜಯ ಮತ್ತು ಮುಸ್ಲಿಮರಿಗೆ ಸೋಲು ಎಂದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರು ಅದನ್ನು ಆ ಬೆಳಕಿನಲ್ಲಿ ತೆಗೆದುಕೊಳ್ಳುತ್ತಾರೆ ಏಕೆಂದರೆ ನಾವು ಅದನ್ನು ತಪ್ಪು ಬಳಕೆಗೆ ತಂದಿದ್ದೇವೆ ಮತ್ತು ಅವರಿಗೆ ಬೆದರಿಕೆ ಹಾಕಿದ್ದೇವೆ. ಇನ್ನೊಬ್ಬ ವ್ಯಕ್ತಿಯು ಕೂಗಿದ ಘೋಷಣೆಗಳನ್ನು ನಾವು ಕೇಳಿದಾಗ, ಇತರ ಸಹವರ್ತಿ ಜಗಳಕ್ಕೆ ಸಿದ್ಧರಾಗುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ, ಮತ್ತು ನಾವು ಸಹ ಅದಕ್ಕೆ ತಯಾರಾಗಲು ಪ್ರಾರಂಭಿಸುತ್ತೇವೆ. ನಾವು ಈ ರೀತಿ ಹೋರಾಡುತ್ತಿದ್ದರೆ ಮತ್ತು ಒಂದು ಸ್ಥಳಕ್ಕೆ ಮತ್ತೊಂದು ಸ್ಥಳಕ್ಕೆ ಪ್ರತೀಕಾರ ತೀರಿಸಿದರೆ, ರಕ್ತದ ನದಿಗಳು ಭಾರತದಾದ್ಯಂತ ಹರಿಯುತ್ತವೆ ಮತ್ತು ಇನ್ನೂ ಪ್ರತೀಕಾರದ ಮನೋಭಾವ ಕಡಿಮೆಯಾಗುವುದಿಲ್ಲ. ಹಿಂದೂಗಳು ಎಷ್ಟು ಪ್ರೀತಿಯಿಂದ ವರ್ತಿಸಬೇಕು ಎಂದರೆ ಒಬ್ಬ ಮುಸ್ಲಿಂ ಮಗು ಅವರ ಮಧ್ಯೆ ಬಂದರೂ ಸಹ, ಅವನನ್ನು ತೊಳೆದು ಸ್ವಚ್ಛಗೊಳಿಸಬೇಕು, ಅವನನ್ನು ಚೆನ್ನಾಗಿ ಧರಿಸಿ ಮತ್ತು ಅಂತಹ ಪ್ರೀತಿಯಿಂದ ಶವರ್ ಮಾಡಬೇಕು. ಇದು ಸಂಭವಿಸಿದಾಗ ಮಾತ್ರ ಮುಸ್ಲಿಮರು ಹಿಂದೂಗಳು ತಮ್ಮ ಸ್ನೇಹಿತರಾಗಿದ್ದಾರೆಂದು ಅರಿತುಕೊಳ್ಳುತ್ತಾರೆ. ಗಾಂಧೀಜಿಯವರು ಹಿಂದೂ ಮುಸ್ಲಿಂರಿಬ್ಬರೂ ಒಳಗೊಂಡ ಸಮಾನ ವೇದಿಕೆಯೊಂದನ್ನು ರೂಪಿಸಲು ಪ್ರಯತ್ನಿಸಿ ವಿಫಲರಾದರು. ಪಾಕಿಸ್ತಾನ ಸೃಷ್ಠಿಯಲ್ಲಿ ಮುಸ್ಲಿಂಲೀಗ್ ಸಫಲವಾಯಿತು. ಆದರೆ ಉತ್ತರ ಭಾರತ ಮತ್ತು ಪೂರ್ವ ಭಾರತದ ಬಹುತೇಕ ಪ್ರದೇಶಗಳಲ್ಲಿ ಸಂಭವಿಸಿದ ಹಿಂದೂ-ಮುಸ್ಲಿಮರ ರಕ್ತಸಿಕ್ತ ಗಲಭೆಗಳ ಫಲ ಈ ಪಾಕಿಸ್ತಾನ ವಿಭಜನೆ ನಂತರ ಲಕ್ಷಾಂತರ ಮಂದಿ ಮುಸ್ಲಿಂರು ಭಾರತದಲ್ಲೇ ಉಳಿಯಲು ನಿರ್ಧರಿಸಿದರು. ೧೫ನೇ ನವೆಂಬರ್ ೧೯೪೭ ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನುದ್ದೇಶಿಸಿ ಮಾಡಿದ ಈ ಭಾಷಣದಲ್ಲಿ ಭಾರತದಲ್ಲಿನ ಮುಸ್ಲಿಮರಿಗೆ ಸಮಾನ ಪೌರತ್ವ ಮತ್ತು ಹಕ್ಕುಗಳನ್ನು ನೀಡುವಂತೆ ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ಗಾಂಧೀಜಿ ಆಗ್ರಹಪಡಿಸಿದ್ದಾರೆ.              ರಾಜಕೀಯ ಅಧಿಕಾರ ಎಲ್ಲಾ ಅಸಮಾಧಾನ ಸಂಶಯಗಳಿಗೂ ಮೂಲ ಸ್ಥಾನ. ಭಾರತದಲ್ಲಿ ಅನೇಕ ಜಾತಿಗಳಿವೆ, ಧರ್ಮಗಳಿವೆ. ಒಂದು ಧರ್ಮ ಅಥವಾ ಜಾತಿ ಮತ್ತೊಂದು ಜಾತಿಯ ಮೇಲೆ ಆಳಲು ಪ್ರಯತ್ನಿಸಿದರೆ ಇಲ್ಲಿ ಶಾಂತಿ ಅಭಿವೃದ್ಧಿಗಳು ಕಣ್ಮರೆಯಾಗುವುವು. ಇದರಿಂದ ಕೋಮು ಸೌಹಾರ್ದವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಆದ್ದರಿಂದ ನ್ಯಾಯವು ಔದಾರ‍್ಯವೂ ಒಂದಕ್ಕೊಂದು ವಿರೋಧವಾಗಬೇಕಾದುದಿಲ್ಲ. ಸಂಶಯವನ್ನು ದ್ವೇಷವನ್ನು ಹೋಗಲಾಡಿಸಲು ಒಂದು ಔದಾರ‍್ಯ ಮುಖ್ಯ ಅಸ್ತ್ರವಾಗಬೇಕು. ಸಮಾಜದಲ್ಲಿ ಕೋಮು ಸೌಹಾರ್ದತೆ ಗಾಂಧೀಜಿಯವರ ಮನದಾಳದ ಆಸೆಯಾಗಿತ್ತು. ಅಂತೆಯೇ ತಮ್ಮ ಜೀವನಪೂರ್ತಿ ಅವರು ಮತೀಯ ಸಾಮರಸ್ಯಕ್ಕಾಗಿ ಹೋರಾಡಿದರು. ಗಾಂಧೀಜಿ ತಾವೊಬ್ಬ ಹಿಂದುವಾಗಿರುವೆನೆಂಬುದನ್ನು ಅಭಿಮಾನದಿಂದ ಹೇಳುತ್ತಿದ್ದರೂ ಅದೇ ಕಾರಣದಿಂದ ಎಲ್ಲಾ ಮತೀಯರನ್ನೂ ಸಮಾನವಾಗಿ ಕಾಣುತ್ತಾ ಸಹೋದರ-ಸಹೋದರಿಯರಂತೆ ಪ್ರೀತಿಸಬಲ್ಲೆನೆನ್ನುತ್ತಿದ್ದರು. ವಿವಿಧ ಮತ-ಧರ್ಮಗಳಿಗೆ ಸೇರಿದ ಜನರು ಭಾರತದಲ್ಲಿ ಒಟ್ಟಿಗೆ ಜೀವಿಸಬೇಕಾದ್ದರಿಂದ ಮತೀಯ ಸಾಮರಸ್ಯ ತೀರಾ ಅಗತ್ಯವೆಂದು ಅವರು ಒತ್ತಿ ಹೇಳುತ್ತಿದ್ದರು. ಭ್ರಾತೃತ್ವ ತತ್ವವನ್ನು ಮಾನ್ಯ ಮಾಡದೇ ಇರುವುದು ನಮ್ಮಲ್ಲಿರುವ ದೊಡ್ಡ ನ್ಯೂನತೆ, ಭ್ರಾತೃತ್ವ ಎಂದರೇನು? ಭ್ರಾತೃತ್ವ ಎಂದರೆ ಭಾರತೀಯರೆಲ್ಲ ಸಹೋದರರು ಎನ್ನುವ ಒಂದು ಸಮಾನತೆ, ಸಹೋದರತೆ ಸಮಾನ ಮನೋಭಾವ, ಭಾರತೀಯರೆಲ್ಲ ಒಂದು ಎನ್ನುವ ಮನೋಭಾವ. ಈ ತತ್ವ ಸಾಮಾಜಿಕ ಜೀವನದಲ್ಲಿ ಏಕತೆ ಮತ್ತು ಒಗ್ಗಟ್ಟನ್ನು ಮೂಡಿಸುತ್ತದೆ. ಕೋಮು ಸೌಹಾರ್ದವು  ರಾಜಕೀಯ ಐಕ್ಯತೆಗಿಂತ ಹೆಚ್ಚಿನ ಮಹತ್ವದಾಗಿದೆ. ಇದು ಪರಸ್ಪರ ಪ್ರೀತಿ, ವಿಶ್ವಾಸಗಳಾಧಾರಿತವಾಗಿರಬೇಕು. ಸಮಾಜ ಕಾರ್ಯಕರ್ತರು ಹಿಂದೂ ಮುಸ್ಲಿಂರಲ್ಲಿ ಪ್ರೀತಿ ವಿಶ್ವಾಸದ ಸಂಬಂಧ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಹೀಗೆ ಪ್ರೀತಿ ವಿಶ್ವಾಸದ ಐಕ್ಯತೆ ಮುರಿಯಲಾರದ್ದು. **************************

ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ Read Post »

ಕಾವ್ಯಯಾನ

ದೀಪಾವಳಿ

ಕವಿತೆ ದೀಪಾವಳಿ ವಿದ್ಯಾಶ್ರೀ ಅಡೂರ್ ಮನಗಳ ನಡುವಿನ ತಮಗಳ ಕಳೆಯಲಿಬೆಳಕಿನ ಹಬ್ಬ ದೀಪಾವಳಿನೀಗದ ಬೆಳಕು ತುಂಬುತ ಬದುಕಲಿಕಳೆಯಲಿ ಕತ್ತಲ ಅಸುರನ ಧಾಳಿ ಬಗೆಬಗೆ ಖಾದ್ಯದ ಚಪಲವ ಮನದಲಿಹುಟ್ಟಿಸುವಂತ ಖಾನಾವಳಿಸುಡುಮದ್ದಿನಲಿ ಪರಿಸರ ಕೆಡಿಸದೆಮಾಡದೆ ಇರೋಣ ಹಾವಳಿ ಹಿಂದಿನ ದಿನಗಳ ಹಬ್ಬದ ನೆನಪುಬಿಟ್ಟಿದೆ ಮನದಲಿ ಕಚಗುಳಿಹಿಂದೆಗೂ ಮುಂದೆಗೂ ಕೊಂಡಿಗಳಾಗುತಹರಡುವ ಹಬ್ಬದ ಬಳುವಳಿ. ****************************

ದೀಪಾವಳಿ Read Post »

ಕಥಾಗುಚ್ಛ

ಶ್ರೀಗಂಧದ ಕೊರಡು

ಕಥೆ ಶ್ರೀಗಂಧದ ಕೊರಡು  ಸುಧಾ ಭಂಡಾರಿ‌ ಪಾರು ಎಂದಿನಂತೆ ಊಟದ ನಂತರ ಒಬ್ಬಳೆ ಟಿವಿ ಹಚ್ಗಂಡು ಕೂತಿದ್ಲು.ತುಂಬಾ ದಿನಗಳ ನಂತ್ರ ರಾಜ್ ಕುಮಾರ ನ ‘ ಜೀವನ ಚೈತ್ರ’ ತಾಗಿತ್ತು.ಪಾರುಗೆ ರಾಜ್ ಕುಮಾರ ಸಿನಿಮಾ ಅಂದ್ರೆ ಪಂಚಪ್ರಾಣ. ಸಿನಿಮಾದಲ್ಲಿ ರಾಜ್‍ಕುಮಾರ್ ಹೆಂಡತಿ ಬಸುರಿ ಎಂದು ಗೊತ್ತಾದಾಗ ಅವಳನ್ನ ಎತ್ಗಂಡು ‘ ಲೇ ನೀನು ನನ್ ಮಗೂನ ತಾಯಿ ಆಗ್ತಿದ್ದೀಯಾ’ ಅಂತ ಮುದ್ದಾಡಿ ಒಂದು ಹಾಡು ಇರೋ ಸೀನ್ ಬರ್ತದೆ..ನೋಡ್ತಾ ನೋಡ್ತಾ ಪಾರೂನ ಅಂತರಂಗದ ಆಸೆ ಮತ್ತೆ ಧುಸ್ಸೆಂದು ಹೆಡೆ ಎತ್ತಿ ಆಕ್ರೋಶ,ಅಸಹಾಯಕತೆಯಿಂದ ಕಣ್ಣೀರು ಕನ್ನೆ ತೊಳೆಸಿತ್ತು..ಎಷ್ಟು ಹೊತ್ರು ಹಾಗೆ ಕುಳಿತಿದ್ದಳೊ ಏನೊ; ಅತ್ಯಮ್ಮ ಮಲಗೆದ್ದು ‘ ಏ ಪಾರೂ ಎಲ್ಲಿದ್ಯೆ? ಇವತ್ತು ಚಾಯಿ ಮಾಡುದಿಲ್ವೇನೆ’ ಎಂದು ಕರೆಯುತ್ತಲೆ ಎಚ್ಚೆತ್ತ ಅವಳು ‘ ಮಾಡ್ಕಂಡು ಕುಡೀರಿ: ಎನ್ನುತ್ತ ಕಿವಿ ಕೇಳದ ಅತ್ಯಮ್ಮನಿಗೆ ಕೇಳಿಯೂ ಕೇಳದಿರುವ ಹಾಗೆ ಗೊಣಗುತ್ತ ಅಡುಗೆ ಮನೆಗೆ ಹೋಗಿ ತನ್ನ ಅಸಹಾಯಕತೆಯನ್ನೆಲ್ಲ ಪಾತ್ರೆಗಳ ಮೇಲೆ ತೋರಿಸಿದಳು.          ಪಾರು ಘಟ್ಟದ ಮೇಲಿನ  ಗಟ್ಟುಮಟ್ಟಾ ಗಂಡಾಳಿನಂತ  ಹೆಣ್ಣು ಮಗಳು. ಒಡಿದೀರ ಮನೆಯ ದನ ಮೇಯ್ಸಗಂಡು ಹಾಯಾಗಿ ಗುಂಡ್ಕಲ್ಲ ಹಾಗೆ ಬೆಳೆದವಳು. ಗಂಡನ ಕಳಕಂಡ ನಾಗಿ ಒಡಿದೀರ ಮನೆ ಕೆಲ್ಸ ಮಾಡ್ಕಂಡು ಅವರಿವರ ಕೃಪೆಯಿಂದ ಇಬ್ಬರು ಹೆಣ್ಮಕ್ಕಳ ಮದ್ವಿ ಮಾಡಿ ಕಿರಿಯ ಮಗಳು ಪಾರೂನ ಮದ್ವಿ ಮಾಡಿ ಮುಗಿಸಿ ಸಿವ್ನ ಪಾದ ಸೇರ್ಕಂಡ್ರೆ ಜಲ್ಮ ಸಾರ್ಥಕ ಅಂದ್ಕಂಡಿದ್ಲು.ಇದೇ ಹೊತ್ತಿಗೆ ನಾಗರಪಂಚಮಿಗೆ ಘಟ್ಟದ ಕೆಳ್ಗೆ ಮದ್ವಿ ಮಾಡಿಕೊಟ್ಟಿದ್ದ ತಂಗಿ ಶಾರ್ದೆ ಅಕ್ಕನ‌ ಮನೆಗೆ ಬಂದವ್ಳು ಒಂದ್ ವಿಸ್ಯ ಅಕ್ಕನ ಕಿವೀಲಿಟ್ಲು. ‘ ಅಲ್ವೆ ಅಕ್ಕಾ, ಹೆಂಗೂ ಪಾರೂ ಮದ್ವಿ ಮಾಡ್ಬೇಕು ಅಂತಿವಿ ಅಲ್ವೆ? ನಮ್ ಸುರೇಸ ಎಂತಾಗನೆ. ಚೆಂದಾಗಿ ದುಡಿತಿವ, ಪೈಟಾಗಿ ಮನಿ ಕಟ್ಗಂಡು ಅವ್ವಿ ಜೊತೀಲಿ ಅವ್ನೆ.ನೋಡುಕೂ ದಾಟ್ನೀಟ್ ಇವ. ನಾ ಒಂದ್ ಮಾತ್ ಹೇಳಿರೆ ಅಲ್ಲಾ ಅಂಬುದಿಲ್ಲ.ಪಾರೂಗೆ ಸರಿ ಹೋಯ್ತದೆ ಜೋಡಿ.ಯಾವ್ದುಕೂ ಕೇಳ್ನೋಡು’ ಅಂದಿದ್ಲು. ಈ ವಿಸ್ಯ  ಕಿವಿಗೆ ಬಿದ್ದಿದ್ದೆ  ಪಾರೂಗೆ ಸ್ವರ್ಗಕ್ಕೆ ಮೂರೇ ಗೇಣು! ಅವ್ಳ ಜೀಂವ್ ಮಾನ್ದಾಗೆ ಒಡಿದೀರ್ ಮನಿ ಬಿಟ್ರೆ ಎಲ್ಲೂ ಇರದಿದ್ದ ಫ್ಯಾನು- ಪೋನು ಎಲ್ಲಾ ಅವರ ಮನೀಲಿ ಚಿಕ್ಕಿ ಮನಿಗೆ ಬಂದಾಗ ನೋಡಿದ್ಲು.ಪಾರು ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಳು.ಅಂತೂ ನಾಗಿ  ದಿಬ್ಣ ತಗಂಬಂದು ಸುರೇಸನ ಕೈನಾಗೆ ಇಟ್ಟು ಧಾರಿ ನೀರು ಬಿಟ್ಟು ನಿರುಮ್ಮಳನಾದ್ಲು. ಮದುವಿ ಏನೋ ಮುಗೀತು.ರಾತ್ರಿ ಸೋಬ್ನದ ಸಾಸ್ತ್ರ  ಮುಗಿಸಲು ಅವ್ವಿ, ದೊಡ್ಡ ಅಕ್ಕ  ಉಳ್ಕಂಡಿರು.ಅಕ್ಕ ಚೆಂದಾಗಿ ಸೀರಿ ಉಡ್ಸಿ , ಮಲ್ಗಿ ಹೂವು ಮುಡಿಸಿದಳು.ಮುತೈದೆಯರು ಸೋಬ್ನದ ಹಾಡೇಳಿ , ಪಾರೂ ಕೈಲಿ ಹಾಲು ಕೊಟ್ಟು ಒಳ್ಗೆ ಕಳ್ಸಿರು. ಪಾರು ನಾಚುತ್ತ, ಬೆಳ್ಗಿಂದ ಒಂದ್ ಕಿತಾನೂ ನನ್ ಮೊಕ ನೋಡಿ ನಗ್ದಿರು ಈ ಆಸಾಮಿ ಹೆಂಗೋ ಏನೊ ಅಂತ ಢವಗುಟ್ತಿರು ಎದೆ ಬಡಿತನ ಹಿಡಿತದಲ್ಲಿಟ್ಗಂಡು ಒಳ್ಗ್ ಬಂದು ಚಿಲ್ಕ ಹಾಕಿ ತಲೆ ಬಗ್ಸಿ ಹಾಲಿನ ಲೋಟ ಮುಂದೆ ಹಿಡಿದ್ಲು.ಗಂಡ ಅನ್ನು ಪ್ರಾಣಿ ಲೋಟ ತಗಂಡು ಹಾಲ್ ಒಟ್ಟೂ ಕಡಿದ; ಸಿನಮಾದಲ್ಲೆಲ್ಲ ನೋಡು ಹಂಗೆ ತಂಗೂ ಒಂಚೂರು ಉಳಿಸಿ ಕೈ ಹಿಡಿದು ಎಳ್ಕಂಡು ತೊಡಿ ಮೇಗೆ ಕೂರ್ಸಗಂಡು ಕುಡಿಸ್ತಾನೆ ಅಂತ ಆಸೆಗಣ್ಣಿಂದ ನೋಡುತ್ರಿದ್ದವ್ಳಿಗೆ ಮೊದಲ ನಿರಾಸೆ. ಹಂಗೆ ಕುಡಿದವ್ನೆ ಹೆಂಡತಿಯ ಮೊಕ ನೋಡದೆ ಎಲ್ಲೆಲ್ಲೂ ನೋಡ್ತಾ ‘ ನೋಡು ಪಾರ್ವತಿ ನೀನು ಈ ಮಂಚದ ಮೇಗೆ ಮನಿಕ; ನಾ ಕೆಳ್ಗೆ ಚಾಪಿ ಹಾಕ್ಕಂಡು ಮನಿಕಂತಿ ‘ ಎಂದ.ಪಾರು ಏನೊಂದು ತಿಳಿಯದೆ’ ಯಂತಕ್ರ ಹಿಂಗಂತಿರಿ.ಮೈ ಹುಸಾರ್ ಇಲ್ವಾ? ನೀವು ಕೆಳ್ಗೆ ಮನಿಕಂಬುದು ಬ್ಯಾಡ.ಒಟ್ಗೆ ಮನಿಕಂಬ’ ಎನ್ನಲು ‘ ಬ್ತಾಡ, ನೀ ಮೇಗೆ ಮನಿಕ ‘ ಎಂದವನೆ ಮೂಲೆಲಿ ಚಾಪಿ ಹಾಕ್ಕಂಡು ಸುರುಟಿಕೊಂಡ.ಪಾರುಗೆ ಏನ್ ಮಾಡ್ಬೇಕು ತಿಳಿಲಿಲ್ಲ.ನಿರಾಸೆಯಿಂದ ಹಾಗೆ ಮಂಚದ ಮ್ಯಾಗೆ ಕುಳಿತಿದ್ದವ್ಳಿಗೆ’ ಲೈಟ್ ತೆಗಿ, ಮನಿಕ.ನಂಗೆ ನಿದ್ದಿ ಬರುದಿಲ್ಲ’ ಎಂದು ಮಗ್ಗಲು ಬದಲಿಸಿದ.ಪಾರೂಗೆ  ಉಟ್ಡಿದ್ದ ಸೀರಿ, ಮಲ್ಗಿ ದಂಡಿ ಸಾವಿರ ವಿಷದ ಹಾವು ಕಡಿದಂತಾಗಿ ಅಳು ಒತ್ತರಿಸಿ ಬಂದು ಹಾಗೇ ಮಂಚದ ಮ್ಯಾಗೆ ಬಿದ್ದುಕೊಂಡಳು.        ದಿನವೂ ಬಯಕೆಯ ಭಾರದಿಂದ ಕೋಣೆ ಸೇರುವ ಪಾರೂಗೆ ದಿನವೂ ನಿರಾಸೆ.ಅವನಲ್ಲಿ ಅನು ಇಲ್ಲ ಮುನು ಇಲ್ಲ.ತಿಂಗಳು ಎರಡು ಮೂರು ಕಳೀತು.ಒಂದಿನ ಪಾರೂನ ಬಯಕೆ, ಆಕ್ರೋಶ ಎಲ್ಲಾ ಮೇಳೈಸಿ ಒಂದ್ ನಿಕ್ಕಿ ಮಾಡುದೇಯ ಅಂಬು ಗಟ್ಟಿ ಮನ್ಸ್ ಮಾಡಿ ಚಿಲ್ಕ ಹಾಕಿದವ್ಳೆ ಗಂಡನ ಕೊರಳಿಗೆ ಜೋತು ಬಿದ್ದಳು. ಗಟ್ಟಿಯಾಗಿ ತಬ್ಬಿಕೊಂಡು ಮಂಚಕ್ಕೆ ಎಳೆದಳು.ಅಷ್ಟೇ ಶಾಂತವಾಗಿ ಹೆಂಡತಿಯ ಕೈ ಸರಿಸಿ ದೂರ ಸರಿದ. ಒತ್ತರಿಸಿ ಬಂದ ಆವೇಶ,ಅವಮಾನದಿಂದ ‘ ಹೇಳಿ, ಎಂತಕೆ ನನ್ ಕಿತ ಮನಿಕಂಬುದಿಲ್ಲ.ನೋಡುಕೆ ದಾಂಡಿಗನ‌ ಹಾಂಗಿವ್ರಿ. ನಾ ಎಂತಕ್ ಬ್ಯಾಡ? ನಂಗ್ ಯಾವ್ದು ಉತ್ತರ ಹೇಳಿ.ಮೂರ್ ತಿಂಗ್ಳಾಯ್ತೆ ಬಂತು.ಒಂದ್ ಕಿತ ಮುಟ್ಲಿಲ್ಲ ಕಿಟ್ಲಿಲ್ಲ.ಹಿಂಗೆ ಇರುದಾಗಿರೆ ಎಂತ ಸುಡುಕೆ ನನ್ ಮದ್ವಿ ಮಾಡಕಂಡಿರಿ ಹೇಳಿ’ ಎಂದು ಗಂಡನ ಹೆಗಲು ಹಿಡಿದು ಜಗ್ಗಿದಳು. ‘ ನೋಡು, ನಂಗೆ ದಾಡಿ ಆಗದೆ.ನಾ ನಿನ್ ಕಿತ ಮನಿಕಂಬುಕಾಗುದಿಲ್ಲ. ನೀ ಹಿಂಗೆ ಗೌಜು, ಗಲಾಟಿ ಮಾಡುದಾರೆ ನಾ ಎಲ್ಲಾರೂ ಮನಿ ಬಿಟ್ಟು ಹೋಯ್ತೆ; ನೀ ಅವ್ವಿ ನೋಡ್ಕಂಡು ಮನಿಲಿರು. ನಿಂಗೆ ಇಲ್ಲಿ ಇರುಕೆ ಮನ್ಸಿಲ್ಲ ಅಂದ್ರೆ ನಿನ್ ಅವ್ವಿ ಮನಿಗೆ ಬೇಕಾರೆ ಹೋಗು.ನಾ ಬ್ಯಾಡ ಅಂಬುದಿಲ್ಲ.ಮತ್ತ್ ಈ ವಿಸ್ಯದಾಗೆ ಮಾತಾಡ್ ಬ್ಯಾಡ’ ಹೀಗಂದವ್ನೆ ಕೆಳ್ಗೆ ಚಾಪಿ ಮೇಲೆ ಬಿದ್ಗಂಡು ಚಾದ್ರ ಮುಚ್ಗಂಡ. ಪಾರೂನ ಕನಸು, ಆಸಿ ಎಲ್ಲಾ ಮಣ್ ಪಾಲಾಗಿ ಮಂಚದ ಮ್ಯಾಗೆ ಬಿದ್ಗಂಡು ಬಿಕ್ಕಳಿಸುತ್ತಲೆ ಇದ್ಲು.ಬೆಳ್ಗುಂಸರಿಗೆ ಐದ್ ಗಂಟಿಗೆ ಎದ್ ಸಪ್ಪಿಗ್ ಹೋಗ್ವವ ಒಂದ್ ಕಿತ ಹೆಂಡತಿ ಕಡಿಗೆ ನೋಡ್ದ. ಒಂದ್ ಮೂಲೆಲಿ ಮುರುಟುಕೊಂಡಿದ್ದ ಹೆಂಡತಿನ ಎತ್ತಿ ಸರಿಯಾಗಿ ಮಲಗ್ಸಿ ತಲಿ ಕೂದ್ಲ ಸರಿ ಮಾಡಿ ಚಾದ್ರ ಹೊದಿಸ್ದ.ಪಾರು ಕಣ್ ಬಿಟ್ಲು.ಕೆನ್ನೆ ಸವರಿ ಹೊರಟ. ದಿನ ಉರುಳ್ತಾ ಇತ್ತು. ಈಗ ಪಾರೂಗೆ ಪಕ್ಕಾ ತನ್ನ ಗಂಡಗೆ ಏನೊ ತೊಂದರಿ ಅದೆ,ಅದ್ಕೆ ನನ್ ಮುಟ್ಟುದಿಲ್ಲ ಅನ್ನುದು ಗೊತ್ತಾಗಿದು. ಹಾಂಗೂ ಕೊನಿ ಆಸೆ ಅಂಬು ಹಂಗೆ ಯಾವ್ದಾದ್ರೂ ಡಾಕ್ಟರ್ ಹತ್ರ ತೋರಿಸ್ಕಂಬ, ನಾನೂ ಬತ್ತಿ ಎಂದ್ಲು.ಊಹುಂ, ಏನೂ ಪ್ರಯೋಜನ ಆಗ್ಲಿಲ್ಲ.ವಿಸ್ಯ ಚಿಕ್ಕಿ ಶಾರ್ದೆ ಕೆಮಿಗೂ ಬಿತ್ತು.ಅವ್ರೂ ಹೇಳಿ – ಕೇಳಿ ನೋಡಿದ್ರು. ಏನೂ ಹೆಚ್ಚು ಕಮ್ಮಿ ಆಗ್ಲಿಲ್ಲ.ದಿನ ,ವರ್ಸ  ಉರುಳ್ರಾ ಇತ್ತು. ಪಾರು ಎದೆಯಲ್ಲಿ ಬಯಕೆ ದಿನ ದಿನವೂ ಹೆಡೆ ಎತ್ತಿ  ಬುಸುಗುಡುತ್ತಿತ್ತು. ದೇಹ ನಿರಾಸೆಯಿಂದ ಕೃಶವಾಗುತ್ತಿತ್ತು.             ಈ ನಡುವೆ ವರ್ಷದ ದೀಪಾವಳಿ ಬಂತು.ಸುರೇಸ ಹೆಂಡತಿಗೆ ಕಾಲಿಗೆ ಗೆಜ್ಜೆ, ಎರ್ಡ್ ಸೀರಿ ತಂದ್ಕೊಟ್ಟ. ಮೊದಲ ಹಬ್ಬಕೆ ಅವ್ವಿ ಮನಿಗೂ ಕರ್ಕೊಂಡೋಗಿ ಬಂದ.ಆ ದಿನ ರಾಜ್ ಕುಮಾರ್ ಸಿನಿಮಾ ನೋಡಿ ಅಶಾಂತಿಯಿಂದ ಕೂತಿದ್ದವ್ಳಿಗೆ ಸಂಜಿನಪ್ಪಗೆ ಬರ್ಬೇಕರೆ ಒಂದು ಪೊಟ್ಲೆ ಕೈಗಿತ್ತು’ ಏ ಪಾರು, ಇದ್ರಲ್ಲಿ ಬಿಸಿ ಬಿಸಿ ನೀರುಳ್ಳಿ ಬಜ್ಜಿ ಅದೆ.ಅವ್ವಿಗೆ ಕೊಟ್ಗಂಡು ತಿನ್ನು.ನಾ ಮಿಂದ್ಕ ಬತ್ತೆ.ಒಂದ್ ಕಪ್ ಖಡಕ್ ಚಾಯಿ ಮಾಡು’ ಎಂದ.ಪಾರೂನ ಮನಸ್ಸು ಮತ್ತೆ  ಮೆದುವಾಯ್ತು.ಇಂತ ಗಂಡನ್ನ ಬಿಟ್ಟು ಎಲ್ ಹೋಗ್ತಾಳೆ.ವಯಸ್ಸಾದ ಅವ್ವಿ,ಅಕ್ಕಂದಿರಿಗೆ ಹೆಂಗ್, ಏನ್ ಹೇಳ್ತಾಳೆ ಪಾಪ! ಇಲ್ಲ ಪಾರೂ ಗಟ್ಟಿ ನಿರ್ಧಾರ ಮಾಡಿ ಆಗಿದೆ. ಇರು ಕಿತಾ ಇಲ್ಲೆ , ಹಿಂಗೆ ಇರೂದು ಅಂತ. ಗಂಡನ್ ಮೇಲೆ ಕನಿಕರ ತೋರ್ತಾಳೆ.ಅತ್ಯಮ್ಮನ ಸೇವೆ ಮಾಡ್ತಾಳೆ. ಅಕ್ಕಂದಿರ ಇಬ್ರು ಮಕ್ಕಳ ಓದ್ಸುಕೆ ಮನಿಲಿಟ್ಕಂಡಳೆ.ನೋಡೋರ ಕಣ್ಣಗೆ ಚೆಂದದ ಜೋಡಿ; ಒಳಗಿನ ಗುಟ್ಟು ಸಿವ್ನೆ ಬಲ್ಲ.ಪಾರೂ ಶ್ರೀಗಂಧದ ಕೊರಡಿನ ಹಾಗೆ ಜೀವ ತೇಯ್ತಿದ್ದಾಳೆ; ಒಳಗೊಳಗೆ ಬಾಡಿ ಬಸವಳಿತಿದ್ದಾಳೆ. ****************************

ಶ್ರೀಗಂಧದ ಕೊರಡು Read Post »

ನಿಮ್ಮೊಂದಿಗೆ

ಆರದಿರಲೀ ದೀಪ

ಕವಿತೆ ಆರದಿರಲೀ ದೀಪ ಶಾಂತಲಾ ಮಧು ಆರದಿರಲೀ ದೀಪಉತ್ಸಾಹದೀ ದೀಪಆರದಿರಲಿ ಕ್ಷಣಿಕ ಬದುಕಿನಸುಡುವ ಗಾಳಿಯಕನಸ ಮಾತಿನಭ್ರಮೆಯ ಬೆಂಕಿಗೆಆರದಿರಲಿ ದೀಪ ಮುಗಿಲ ಮೋಡದನಡುವೆ ಇಣುಕುವತಮವ ಕಳೆಯುವರವಿಯ ತೆರದಲಿ ಸ್ನೇಹ ಸಿಂಚನ ರಕ್ಷೆ ಇರಲಿಹರಿವ ನದಿಯ ಹರಿತವಿರಲಿಆರದಿರಲಿ ಉತ್ಸಾಹದೀ ದೀಪಆರದಿರಲಿ ಪ್ರೀತಿಉಸಿರ ಹಸಿರು ಉಳಿಯಲಿಮನಸು ಮನಸಿಗೆದೀಪವಾಗಲಿಆರದಿರಲಿ ದೀಪಉತ್ಸಾಹದೀ ದೀಪಆರದಿರಲಿ *******************

ಆರದಿರಲೀ ದೀಪ Read Post »

ಕಾವ್ಯಯಾನ

ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ

ಕವಿತೆ ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ನಾಗರಾಜ್ ಹರಪನಹಳ್ಳಿ ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ; ಅದಕೆ ನಾಮಗುವಿನಂತೆ ‌ನಿನ್ನ ಎದೆಗೊತ್ತಿಕೊಂಡೇ ಇರುವೆ ಜಗದ ತುಂಬಾ ಮುಗಿಲ ಬೆಳಕ ಯಾಕೆ ತುಂಬಿದೆ ಒಲವೇಅದಕೆ ನಾಅವಳ ಜಗದ ಕತ್ತಲೆಯಲ್ಲೂ ದೂರ ಇರುವ ಅವಳಹುಡುಕುತಿರುವೆ ನೂರಾರು ಬಣ್ಣಬಣ್ಣದ ಹೂಗಳ ಯಾಕೆ ಈ ಭೂಮಿಗೆ ಕಳಿಸಿದೆ ಒಲವೇಅದಕೆ ನಾ ; ಅವಳ ಕನಸುಗಳಿಗೆ ಬಣ್ಣ ತುಂಬಿದೆ ಯಾಕೆ ಪ್ರತಿ ಉಸಿರಿಗೂ ನಿನ್ನ ಹೆಸರ ಬರೆದೆ ಒಲವೇಅದಕೆ ನಾನಿನ್ನ ಧ್ಯಾನಿಸುವೆ ಯಾಕೆ ದನಿಗೆ ದನಿ ಸೇರಿಸಿ ತಕರಾರು ತೆಗೆದು ಮುದ್ದಿಸಿ ಪ್ರೀತಿಸಿದೆ ಒಲವೇಅದಕೆ ನಾಪ್ರೀತಿಯ ಪ್ರೀತಿಯಾಗುರುವೆ ಒಲವು ಬಿತ್ತಿದ ಮೇಲೆ ಒಲವನ್ನೇ ಬೆಳೆಯುವುದುಎಲ್ಲಿಂದ ಕಡ ತರಲಿ ದ್ವೇಷವಅದನಿಡಲು ಎದೆಯಲ್ಲಿ ಜಾಗವೇ ಇಲ್ಲಹಾಗಾಗಿ ವೈರಿ ಕೈಗೂ ಪ್ರೀತಿ ಇಟ್ಟು ಬಂದೆ ಒಲವೇ*********************

ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ Read Post »

ಕಾವ್ಯಯಾನ

ಶುಭ ದೀಪಾವಳಿ

ಕವಿತೆ ಶುಭ ದೀಪಾವಳಿ ಮುರಳಿ ಹತ್ವಾರ್ ಒಣಗುವ ಮುನ್ನವೇ ಉದುರಿದ ಹಸಿ-ಹಸಿಯ ಎಲೆಗಳ ರಾಶಿ ಇಬ್ಬನಿಯ ತಬ್ಬಿದ ನೆಲವ ತುಂಬಿದೆ ಯಾವ ಹಸಿವಿನ ಹೊಟ್ಟೆಯ ಹೊಂಚೋ? ನಡುಗುತ ಸೊರಗಿವೆ ಬೋಳು ಮರಗಳು ಆಳದ ಬೇರಿಗೂ ಕರಗಿ ಹೋಗುವ ಚಿಂತೆಯಾವ ಕಾರಿರುಳ ರಕ್ಕಸ ಸಂಚೋ ? ಹಣತೆ ಹಣತೆಗಳ ಕಿರಣಗಳ ಬಾಣ ಬಂಧಿಸಲಿ ಭಯದ ಎಲ್ಲ ನೆರಳುಗಳ, ಹೊಸೆದ ಬೆಳಕಿನ ಶರ ಪಂಜರದಲಿ  ಒಲುಮೆಯ ಅಭಯದ ಆ ಬಯಲಲಿ ಮತ್ತೆ ಚಿಗುರಲಿ ಬಯಕೆಯ ಹಸಿರು ಹೊಸ ನಗೆಯ ತುಂಬಿ ಮುಖ ಪಂಕಜದಲಿ *******************

ಶುಭ ದೀಪಾವಳಿ Read Post »

ಕಾವ್ಯಯಾನ

ವಿರಹ ತಾಪ

ಕವಿತೆ ವಿರಹ ತಾಪ ನಿ.ಶ್ರೀಶೈಲ ಹುಲ್ಲೂರು ತಿರುತಿರುಗಿ ಒರಗುತಿದೆಭಾವಲಹರಿಯ ಬುಗುರಿನಲಿವಿನಲು ಹಸಿಗಾಯಹೀಗೇಕೆ ಎದೆ ನಗರಿ ? ಎನಿತೆನಿತೊ ಆಸೆಗಳಹೊತ್ತ ಒಡಲಿನ ತುಡಿತನಿನ್ನೊಲವಿನಮಲಿನಲೆತೊಪ್ಪೆಯಾಗಿದೆ ಮಿಡಿತ ಬಾನು ರಂಗೇರಿದರುಬಿಡದು ಕಡಲಿನ ಮೊರೆತಕತ್ತಲೆಯನಪ್ಪಿದ ಕಣ್ಬೆಳಕಲು ನೆನಪಿನದೆ ಇರಿತ ಹಿಡಿದಷ್ಟು ಉಕ್ಕುವುದುಹಾಲ ನೊರೆಯಂತೆನೀನಿರದ ಈ ಬದುಕುನೀರಿರದ ಕೆರೆಯಂತೆ ಬಳಲಿದರು ತೆವಳುತಿದೆನಿನ್ನೆಡೆಗೆ ಈ ದೇಹಅದಾವ ಪರಿ ಸೆಳೆದೆ ನೀನರಳುತಿದೆ ಮೋಹ ಸುಖದ ಸುಗ್ಗಿಯನೆಲ್ಲಮಾಡುತಿಹೆ ಕನಸಿನಲಿಹುರಿದು ಮುಕ್ಕುವೆ ಏಕೆಸೊಗಸಿರದ ಮನಸಿನಲಿ ಕಂಕಣಬಲವಿಲ್ಲೆನಗೆ ನೀನೋಡಿ ಬಂದು ಬಿಡುಬರದಿದ್ದರೆ ಬೇಗ ಕೈಯಾರೆ ಕೊಂದು ಬಿಡು **********************************

ವಿರಹ ತಾಪ Read Post »

You cannot copy content of this page

Scroll to Top