ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಪ್ರತಿಮಾ ಕೋಮಾರ ಈರಾಪುರ

person holding sparkler

ಬದುಕು ಬಯಲಾಗಿದೆ  ಭರವಸೆ ಮೂಡಿಸುವವರು ಕಾಣುವುದಿಲ್ಲ ಏಕೆ?
ಕಾಲ ಹಂಗಿಸುತ್ತಿದೆ ಕಾರಣ ಹುಡುಕುವವರು ತೋಚುವುದಿಲ್ಲ ಏಕೆ?

ತನ್ನ ಅಸ್ತಿತ್ವಕ್ಕಾಗಿ ಹೋರಾಟ ಬಡಿದಾಟ ಸರಿಬಿಡು
ತನ್ನವರ ಬೆಳಕಿಗಾಗಿ ಹಣತೆ ಹೊತ್ತಿಸುವವರು ಸಿಗುವುದಿಲ್ಲ ಏಕೆ?

ಕೆಂಡದುಂಡೆ  ಉರುಳುವಾಗ ಸುತ್ತಲೆಲ್ಲ ಸುಡುತ್ತಲೇ ಉರುಳುವುದು
ತುಪ್ಪ ಸುರಿಯುವವರ ಬಿಟ್ಟು ಬೆಂಕಿ ಆರಿಸುವವರು ಗೋಚರಿಸುವುದಿಲ್ಲ ಏಕೆ?

ತನ್ನ ಅಂಗೈ ಹುಣ್ಣು ನೋಡಲು ಕನ್ನಡಿಯನ್ನು  ಹುಡುಕುತ್ತಿದ್ದಾರೆ ಇಲ್ಲಿ
ಪರರ ಹುಣ್ಣಿಗೆ  ಯಾರು ಮುಲಾಮು ಹಚ್ಚುವವರು? ಅಥ೯ವಾಗುವುದಿಲ್ಲ  ಏಕೆ?

“ಪ್ರತಿ “ಉರುಳುವ ದಿನದ ಲೆಕ್ಕಾಚಾರ ಯಾರು ಹಾಕುವರು
ಕಳೆವ ಘಳಿಗೆಯಲಿ ಕೆಲವರು ಬದುಕ ಪಾಠ ಕಲಿಸುವವರು ಮರೆಯಲಾಗುವುದಿಲ್ಲ ಏಕೆ?

*******************************

About The Author

Leave a Reply

You cannot copy content of this page

Scroll to Top