ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ದುಃಖ

ಕವಿತೆ ದುಃಖ ಚಂದ್ರಿಕಾ ನಾಗರಾಜ್ ಹಿರಿಯಡಕ ಅಯ್ಯೋಒಡೆದು ಬಿಡುಹೆಪ್ಪು ಗಟ್ಟಿರುವ ದುಃಖವ ಎಷ್ಟುಹೊತ್ತು ಹೊರಲಿಉಬ್ಬಿರುವ ಗಂಟಲ ಎಷ್ಟೆಂದು ಸಮಾಧಾನಿಸಲಿಅಡರಿರುವ ಕತ್ತಲಬೆಳಕೆಂದು ಕಂಗಳಿಗೆಷ್ಟು ನಂಬಿಸಲಿಹರಿದು, ಒಡೆದುಕಡಲಾಗಿಸುಹರಿಯಲಿಕಪ್ಪು ನೆತ್ತರುಹಾಳು ನೆತ್ತರುಬಸಿದಿಟ್ಟ ಒಲವಸುಡು ಸುಡುವಆಟದಲಿಕೈ ಸುಟ್ಟಿದ್ದಲ್ಲಕರಟಿ ಹೋಗಿದೆಬದುಕುಒಂದಷ್ಟು ಬವಣೆಗಳ ರಾಶಿಇನ್ನೊಂದಷ್ಟು ಖುಷಿಸತ್ತು ಸತ್ತು ನರಳುತಿದೆಎದೆ ಎತ್ತರಕ್ಕೆ ಬೆಳೆದು ನಿಂತಿದೆಇಲ್ಲ ಭಾವಗಳೆತ್ತರವ ಮೀರುತಿದೆಅಪನಂಬಿಕೆಯೆಂಬೋ ಅರ್ಥಹೀನತೆಗೆ‘ನೀನು’ ಎಂಬನಾಮಕರಣ ಮಾಡಿಸಿಹಿ ಹಂಚುವುದಿಲ್ಲಅಯ್ಯೋಒಡೆದು ಬಿಡುಹಂಚಿ ಹೋಗಲಿಕಹಿಯ ಒಗರೆಲ್ಲಾಆತ್ಮೋದ್ಧಾರದ ಸಣ್ಣ ಬೆಳಕೊಂದುಹಾಯಲಿಕದವಿಕ್ಕದಎದೆಯಂಗಳದ ತುಂಬೆಲ್ಲಾ ************************

ದುಃಖ Read Post »

ಕಥಾಗುಚ್ಛ

ಸಂದಣಿ

ವಿಶೇಷ ಕಥೆ ಸಂದಣಿ ಅಶ್ವಥ್ ಬೆಳಗಿನ ಆಮೆವೇಗದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು ಕಾಯುತ್ತಾ ಸಂಯಮ ಸಮಾಧಾನಗಳನ್ನೊಂದಿಷ್ಟು ಅಭ್ಯಾಸ ಮಾಡಿ ಆಫೀಸು ತಲುಪುವುದು ಸತೀಶನಿಗೆ ನಿತ್ಯಕರ್ಮವಾಗಿತ್ತು. ಅಕಸ್ಮಾತಾಗಿ ಬೆಳಗಿನ ಜಾವ ಮೂರು ನಾಲ್ಕುಗಂಟೆಯಲ್ಲೋ ಅಥವಾ ಅರ್ಧದಿನ ರಜಾಹಾಕಿ ಮನೆಗೆ ಮರಳುವಾಗಲೋ ಟ್ರಾಫಿಕ್ನಲ್ಲಿ ಸಿಕ್ಕಿಕೊಳ್ಳದೇ ಮನೆ ತಲುಪಿದ ದಿನ ತನ್ನ ಬೈಕಿಗೆ ರೆಕ್ಕೆ ಬಂದಿವೆಯೇನೋ ಅನಿಸುವಷ್ಟರ ಮಟ್ಟಿಗೆ ಹದಿನೈದು ನಿಮಿಷದ ಕಿರು ಪ್ರಯಾಣವಾಗಿರುತ್ತಿತ್ತು. ಬೆಂಗಳೂರಿನಲ್ಲಿರುವ ಹತ್ತು ವರ್ಷಗಳಲ್ಲಿ ‍ಮೂರು ಕಂಪನಿಗಳನ್ನು ಬದಲಾಯಿಸಿದರೂ ಎಲ್ಲೂ ಈಗಿನಷ್ಟು ಹತ್ತಿರವಾಗಿರಲಿಲ್ಲ. ಮೊದಲೆಲ್ಲಾ ೩ ಪ ಗಂಟೆಗಳವರೆಗಿನ ಆಫೀಸ್ ಪ್ರಯಾಣವಾಗಿದ್ದುದು ಈಗ ಎರಡು ಗಂಟೆಗೆ ಬಂದಿರುವುದು ನಿರಾಳವಾಗಿತ್ತು. ಬೆಳಗಿನ ಒಂಭತ್ತರ ಆಫೀಸ್ ಕೆಲಸಕ್ಕೆ ಆರೂವರೆ -ಏಳರ ಹೊತ್ತಿಗೆ ಬೈಕನ್ನು ಹೊಸ್ತಿಲಿನಾಚೆ ಎಳೆದು ರಸ್ತೆಯಲ್ಲಿ ಜಾಗ ಹಿಡಿದುಬಿಡಬೇಕಿತ್ತು. ರಸ್ತೆ ಸೇರುವಾಗ ಹಿಡಿದ ಜಾಗದಿಂದ ಪಟ್ಟುಬಿಡದೇ ಮುಂದೆ ಮುಂದೆ ಹೋಗಿಸಿಲ್ಕ್ಬೋರ್ಡ್ಸರ್ಕಲ್ಲಿನಾಚೆಫ್ಲೈಓವರ್ ಸೇರುವ ಹೊತ್ತಿಗೆ ಆತುರದಲ್ಲಿ ಆದ ಕಾಫಿ, ತಿಂಡಿಯೆಲ್ಲ ಈಗ ಜೀರ್ಣ ಆಗಬಹುದಾ! ಅನ್ನುತ್ತಲೇ ಅನ್ನಚೀಲದೊಳಗೆ ಕುಲುಕುತ್ತಾ ಇರುತ್ತಿತ್ತು. ದಾರಿಮಧ್ಯೆ ಅದೇ ಕೆಲವು ಹಳೆಮುಖಗಳು, ಮತ್ತ್ಯಾವುದೋ ಲಗ್ಗೇಜುಗಾಡಿ, ಕೆಲವೊಮ್ಮೆ ಬಿಎಂಟಿಸಿಯ ಬಸ್ಸುಗಳು, ಟ್ರಾಫಿಕ್ಕುಗಳನ್ನು ಆಗ್ಗಾಗ್ಗೆ ಕೆದಕುತ್ತಾ ಮುಂದೆ ತಳ್ಳುವುದಕ್ಕೆ ಹಾವಿನಾಕಾರದಲ್ಲಿ ಹೊರಳಿಕೊಂಡು ಹೋಗುವ ಸ್ಕೂಟಿಗಳು. ಆಟೋ, ಟ್ಯಾಕ್ಸಿಗಳು. ಹೀಗೆಆವಾಹನದಟ್ಟಣೆಯದೀರ್ಘನೋಟ ಒಂದು ರೀತಿಯ ಹಲಬಗೆಯ ವಾಹನಗಳ ಸೂಪರ್ಮಾರ್ಕೆಟ್ಟಿನ ಹಾಗೆ ಕಾಣುತ್ತಿತ್ತು. ತರಹೇವಾರಿ ಹೊಗೆಪೈಪುಗಳಲ್ಲಿ ಪೆಟ್ರೋಲ್ & ಡೀಸೆಲ್ ಉರಿದುಗುಳುವ ದಟ್ಟಹೊಗೆ ಆ ಓಪನ್ಮಾರ್ಕೆಟ್ನಿಂದ ಸೂಸುವ ಘಾಟಿನಂತಿರುತ್ತಿತ್ತು. ಅದೊಂದು ದಿನ ಮೋಡ ಕವಿದ ವಾತಾವರಣ, ಇನ್ಯಾವ ಕ್ಷಣದಲ್ಲಾದರೂ ಮಳೆ ಬಂದು ಬಿಡಬಹುದು ಅನಿಸುತ್ತಿದ್ದರಿಂದ ರೈನ್ಕೋಟ್ಹಿಡಿದೇ ಬೈಕ್ ಏರಿದ ಸತೀಶ. ನಿಧಾನವಾಗಿ ದಾರಿ ಮಧ್ಯದಲ್ಲಿ ಟ್ರಾಫಿಕ್ಕಿನಲ್ಲಿ ತನ್ನೆರಡೂ ಕಾಲುಗಳನ್ನು ಬೈಕಿನ ಹೆಚ್ಚುವರಿ ಚಕ್ರಗಳ ಹಾಗೆ ಉಜ್ಜುತ್ತಾ ಎಳೆಯುತ್ತಾ ಕೆಲವೊಮ್ಮೆನಾಲ್ಕು ಚಕ್ರ ಕೆಲವೊಮ್ಮೆ ಮೂರು ಮತ್ತೆ ಎರಡು ಹೀಗೆ ಚಕ್ರಗಳ ಬಹುಕೃತ ವೇಷವನ್ನು ಬದಲಾಯಿಸುತ್ತಿರುವಾಗ ಪಕ್ಕದಲ್ಲೇ ಬಂದು ಬೈಕ್ನ ಮುಂದೆ ಮುದ್ದಾದ ಹಾಲುಗಲ್ಲದ ಮಗು, ಅದಕ್ಕೆ ತಕ್ಕನಾದ ಪುಟ್ಟ ಹೆಲ್ಮೆಟ್ಟು ಹೊದ್ದು ಇನ್ನೇನು ನಿದ್ರೆ ಹತ್ತೀತೇನೋ ಅನ್ನುವಂತೆ ತಲೆತೂಗುತ್ತಿತ್ತು. “ಸಾರ್, ಮಗು ತೂಕಡಿಸೋ ತರ ಕಾಣ್ತಿದೆ ಎಚ್ಚರ ಮಾಡಿ” ಅಂದ ಸತೀಶ. “ನೋ! ಐ ಆಮ್ಜಸ್ಟ್ಟಯರ್ಡ್” ಅನ್ನುತ್ತಾ ತೊದಲುವ ಮುಖ ನೋಡಿ, ಚೆಂದದ ನಗೆ ಬೀರಿ ಬಲಗೈ ಹೆಬ್ಬೆರಳಿನ ಲೈಕ್ ಒತ್ತುತ್ತಾ ಹಾಗೇ ನೋಡುತ್ತಾ ನಿಂತ. “ಏನ್ಮಾಡೋದುಸಾರ್… ಈ ಹಾಳಾದ್ಟ್ರಾಫಿಕ್ಕಲ್ಲಿ ನಾನು ಬೇಯೋದಲ್ಲದೇ ದಿನಾವಇವನ್ನೂ ಬೇಯಿಸ್ಕೊಂಡೇ ಹೋಗ್ಬೇಕು. ಬೇರೆ ದಾರಿ ಇಲ್ಲ. ಪಾಪ, ದಿನಾ ಇದೇ ನೋಡಿ ನೋಡಿ ಇದಕ್ಕೇ ಹೊಂದ್ಕೊಂಡಿದ್ದಾನೆ” ಮಗು ಎಡಕ್ಕೆ ಓರೆಯಾಗುತ್ತ “ಯೆಸ್ಸ್” ಅನ್ನುತ್ತಾ ಕಣ್ಣುಗುಡ್ಡೆ ಮೇಲು ಮಾಡಿ ಬೇಸರಿಸಿಕೊಂಡಿದ್ದರೂ, ಕೈಬೆರಳುಗಳನ್ನು ಪಾರ್ಲೆ ಬಿಸ್ಕೆಟ್ಪ್ಯಾಕ್ನ ಬೇಬಿಯ ಹಾಗೆ ಕಾಣಿಸಿ ಮತ್ತಷ್ಟು ಮುಗ್ಧತೆಯನ್ನು ಹೊರಸೂಸಿತು. “ಅಯ್ಯೋ ಕಂದಾ! ಕನ್ನಡ ಅರ್ಥಆಗ್ತದೇನೋ? ಎಷ್ಟು ರಿಯಾಕ್ಟ್ ಮಾಡ್ತಾನೆ ನೋಡಿ ! ಎಷ್ಟ್ವಯಸ್ಸು ಸಾರ್?ಎನ್ನುತ್ತಾ ಮುಂದೆ ಸರಿಯುತ್ತಿದ್ದ ಟ್ರಾಫಿಕ್ಕಿಗೆ ಎರಡೂ ಬೈಕುಗಳು ನಿಧಾನವಾಗಿ ಹೊಂದಿಕೊಂಡು ಸಂಭಾಷಣೆ ಮುಂದುವರಿದೇ ಇತ್ತು. “ನಾವು ಮೈಸೂರ್ನವರು ಕನ್ನಡ ಅರ್ಥ ಆಗತ್ತೆ. ಬಾಡಿಗೆಮನೆ ನೈಬರ್ಸು, ಡೇಕೇರು ಎಲ್ಲಾ ಸೇರಿ ಇಂಗ್ಲೀಷ್ಮಯ ಆಗಿದೆ. ಅಲ್ಲದೇ ನಾವೂ ಏನು ಕಡಿಮೆಯಾ? ಬೆಳಿಗ್ಗೆ ಬರೋ ಪೇಪರಿಂದ ಹಿಡಿದು ಆಫೀಸ್ಕೆಲಸದಲ್ಲೆಲ್ಲ ಇಂಗ್ಲೀಷಿನವರೇ ಆಗಿ ಹೋಗಿದ್ದೀವಿ, ಎಳೆವಯಸ್ಸಿನಲ್ಲಿ ಹೀಗೇನೇ ಅಲ್ವಾ ಕಲಿಯೋದು”? ಅನ್ನುತ್ತಾ ಬೇಸರದ ಬೆಳಗಿಗೊಂದಿಷ್ಟು ತಿಳಿಯೆನಿಸುವ ಆಪ್ತತೆಯನ್ನು ತೋರಿದರು ತಂದೆ. ಅಷ್ಟೂ ಹೊತ್ತು ಚಿಂತಾಕ್ರಾಂತನಾಗಿದ್ದ ಪುಟ್ಟಮಗು ಅಚಾನಕ್ಕಾಗಿ ಸಿಕ್ಕ ಸತೀಶನತ್ತ ಹೊರಳಿದ್ದೇ ಅವನ ನವಿರಾದ ಮಾತಿಗೆ ಕಿವಿಗೊಡುತ್ತಾ ಕಣ್ಣು ಹೊರಳಿಸುತ್ತಾ ಪರಿಚಯ ಬೇಕು ಅನ್ನುವಂತೆ “ನೀಯಾರು” ಅಂತು. ” ನಾನೂ ನಿಮ್ಮ ಅಪ್ಪನ ಹಾಗೇ, ನಿತ್ಯ ಟ್ರಾಫಿಕ್ಕಿನೊಳಗೆ ಬೇಯೋವ್ನು” ನಮ್ಮೂರು ಹಳೆಬೀಡು ಹತ್ರ ಹಳ್ಳಿ. ನಿನ್ನಂಗಿದ್ದಾಗ ನಮ್ಮ ಹಳ್ಳಿಯಲ್ಲಿ ಹೇಗಿತ್ತು ಗೊತ್ತಾ ಪುಟ್ಟಾ?” ಅನ್ನುವಷ್ಟರಲ್ಲಿ “ನೈಸ್ ಟಾಕಿಂಗ್ಟುಯೂ ರೀ ನೆಕ್ಸ್ಟ್ಟರ್ನಲ್ಲಿ ಡೇಕೇರ್ಗೆ ಬಿಟ್ಟು ಮತ್ತೆ ಈ ರೋಡ್ನೇ ಸೇರ್ಕೊಬೇಕು” ಅನ್ನುತ್ತಾ ಅಪ್ಪ ಗಾಡಿಯನ್ನು ಬಲಕ್ಕೆ ಹೊರಳಿಸುವುದಕ್ಕೆ ನೋಡುತ್ತಿದ್ದಂತೆ, ಮಗುವಿಗೆ ಮತ್ತೆ ಬೇಸರ ಮಡುಗಟ್ಟಿ “ಐ ವಾಂಟು ಟಾಕ್ಮೋರ್” ಅನ್ನುತ್ತಾ ಗೊಣಗಿದ. ನಿದ್ರೆ ಬಂದೇ ಬಿಟ್ಟಿತು ಅನ್ನುವಂತೆ ತೂಗುತ್ತಲಿದ್ದವನು ಇದ್ದಕ್ಕಿದ್ದ ಹಾಗೆ ಚುರುಕಾಗಿದ್ದು ಕಂಡು, “ನೋಡಿ, ಏನೋ ಪರಿಚಯಕ್ಕೆ ಸಿಕ್ಕರೆ ಸಾಕು, ತಲೆತಿಂತಾನೆ! ಈಗ ನಿದ್ರೆಮಾಡಿಯಾನು ನೋಡಿ ಅಂದಿದ್ದು ನಿಮ್ಮದೇ ತ ಪ್ಪೇನೋ ಅನ್ನೋ ಹಾಗೆ ಮಾಡಿಬಿಟ್ಟಾನು”. ಅನ್ನುತ್ತಾ ಅಪ್ಪ ತಮಾಷೆ ಮಾಡಿದ. ಇರಲಿ ಬಿಡಿ ಸಾರ್.ಅರ್ಥ ಆಗತ್ತೆ. ಮಕ್ಕಳನ್ನು ಬೆಳೆಸೋಕೆ ಜಾಗ ಅಲ್ಲ ಇದು. ಏನ್ಮಾಡೋದು, ಲೈಫ್ಸ್ಟೈಲೇ ಹಾಗಾಗಿದೆ. ನಮ್ಮ ಕಾಲ ನಮ್ಮ ಮಕ್ಕಳಿಗೆ ಇಲ್ಲ. ಇನ್ನು ಮುಂದೆ ಹೇಗೋ ಎನ್ನುತ್ತಾ ಕಣ್ಣು ಮೇಲು ಮಾಡುವ ಸರದಿ ಈಗ ಸತೀಶನದ್ದಾಗಿತ್ತು. ರೈಟ್ .ಯಾಕಾದ್ರೂ ಈ ಎಂಜಿನಿಯರಿಂಗ್ ಮಾಡಿದೆನೋ ಅನ್ಸುತ್ತೆ ರೀ ಒಂದೊಂದ್ಸಾರ್ತಿ. ಅಂದ್ಹಾಗೆ ನನ್ನ ಹೆಸರು ಅವಿನಾಶ್, ಇಲ್ಲೇ ವಿಪ್ರೋದಲ್ಲಿರೋದು ಅನ್ನುತ್ತಾ ಬಲಗೈ ಚಾಚಿದರು. ನಾನು ಸತೀಶ್, ಹನಿವೆಲ್ಲು ಬಟ್ನಾಟ್ಸೋವೆಲ್ಲ್ . ಊರು ನೆನಪಾದ್ರೆ ಎಲ್ಲಾ ಬಿಟ್ಹಾಕಿ ಹೊರಟ್ಹೋಗೋಣ ಅನ್ಸುತ್ತೆ ಏನ್ಮಾಡೋದೇಳಿ ಫಜೀತಿ. ಈಗ ಅಲ್ಲೂ ಏನೂ ಸುಲಭ ಅಲ್ಲ. ಕರೆಕ್ಟ್.ನಮ್ಮದೂ ಮೈಸೂರ್ಹತ್ರ ಸ್ವಲ್ಪ ಜಮೀನಿದೆ. ನಮ್ಮ ತಾತ ಮಾಡಿಸ್ತಿದ್ರು. ನಾವೆಲ್ಲ ಹುಟ್ಟಿ ಬೆಳೆದಿದ್ದು ಮೈಸೂರಲ್ಲೇ. ಹಳ್ಳಿ ಅಲ್ಲದಿದ್ರೂ, ಇಷ್ಟು ಕೆಟ್ಟ ಪಟ್ಟಣ ಆಗಿರ್ಲಿಲ್ಲ ಬಿಡಿ. ಅನ್ನುತ್ತಾ ಹಳೆಯ ಮೈಸೂರಿನ ನೆನಪಿಗಿಳಿದ ಅವಿನಾಶ್, ನಮ್ಮ ಪುಟ್ಟಂಗೆ ಇವತ್ತು ನಿಮ್ಮ ಜೊತೆ ಮಾತಾಡೋ ಮನಸಾಗಿದೆ. ನೆಕ್ಸ್ಟ್ಕ್ರಾಸ್ತೊಗೊಳ್ತೀನಿ. ಅರ್ಧಗಂಟೆ ಆಗತ್ತೆ ಮಿನಿಮಮ್. ಅಷ್ಟರಲ್ಲೆಲ್ಲ ತೊಂದ್ರೆ ಕೊಟ್ಬಿಡಪ್ಪಾ ಸತೀಶ್ ಅವ್ರಿಗೆ” ಅಂದು ಮತ್ತೆನ ಕ್ಕರು. ಮಗು ಹಿಗ್ಗಿದ. ” ಇರಲಿ ಬಿಡಿ ಸಾರ್.ಇದರಲ್ಲಿ ತೊಂದ್ರೆ ಏನಿದೆ. ಆದರೆ ರಸ್ತೆಯಲ್ಲಿ ಹೀಗೆ ಟೈಮ್ಪಾಸ್ಮಾಡೋದಕ್ಕೆ ನಗೋದೋ ಅಳೋದೋ ಗೊತ್ತಾಗಲ್ಲ” ಅನ್ನುತ್ತಾ ಮಗುವಿನ ಮುಗ್ಧಮುಖ ನೋಡುತ್ತಾ ಟ್ರಾಫಿಕ್ಕಿನ ಧಾರುಣತೆಯನ್ನೆಲ್ಲವನ್ನು ಇಲ್ಲವಾಗಿಸಿ ಮಗುವಿನೊಂದಿಗೆ ಸಂಭಾಷಣೆಗಿಳಿದ. ಸಮರ್ಥ್. ಏನ್ಮಾಡ್ತೀಯಾ ಡೇಕೇರಲ್ಲಿ? ತಿಂಡಿ ಆಯ್ತಾ? ಲಂಚ್ಬಾಕ್ಸ್ನಲ್ಲಿ ಏನಿದೆ? ಓಯೆಸ್.ಇಡ್ಲಿವಿತ್ಸಕ್ರೆ ಚಟ್ನಿ. ಲಂಚ್ಬಾಕ್ಸ್ನಲ್ಲೂ ಅದೇ. ನಂಗ್ಬೇಕಿತ್ತಲ್ಲ. ನನ್ನಲಂಚ್ಬಾಕ್ಸ್ತಂದಿಲ್ಲ. ತೊಗೊಳ್ಳಲಾ ಅನ್ನುತ್ತಾ ಕೈಚಾಚಿದ. “ಹ್ಹಿಹಿ…. ಇದುಸ್ಮಾಲ್ಬಾಕ್ಸ್….” ಅನ್ನುತ್ತಾ ಬ್ಯಾಗನ್ನು ಗಟ್ಟಿಯಾಗಿ ಹಿಡಿದು, ಸಮಾಧಾನಕ್ಕೆನ್ನುವಂತೆ “ಡ್ಯಾಡಿದೂ ಇಲ್ಲ”. ಅಂದ. ಮಾತು ಹಾಗೇ ಮುಂದುವರಿದು ಹೆಚ್ಚಿನವಪರಿಚಯ ಹೇಳಿಕೊಳ್ಳುತ್ತಾ, ಹಳೆಬೀಡಿನ ನೆನಪುಗಳನ್ನೆಲ್ಲ ಹೊಸದೆನ್ನುವಂತೆ ಮಾಡಿಕೊಂಡು ತನ್ನ ಬಾಲ್ಯದ ಕೆಲವು ತುಣುಕುಗಳನ್ನೆಲ್ಲ ಮಗುವಿನೊಂದಿಗೆ ಹಂಚಿಕೊಳ್ಳುತ್ತಾ, ತನ್ನ ಹಳೆಯ ಗೋಲಿಯಾಟ, ಮರಕೋತಿಆಟ, ಹಳ್ಳಿ, ಹೊಸ, ಮರ, ಹಸು ಹಕ್ಕಿ ಇತ್ಯಾದಿ ಹೊಸಲೋಕವನ್ನೇ ಅವಸರವಸರವಾಗಿ ತೆರೆದಿಡುತ್ತಾ ಸರಿಯುತ್ತಿದ್ದ. ಪರಿಚಯ ಆಗಿದ್ದು ಖುಷಿಯಾಯ್ತು ಸಾರ್.ನಾನು ಜೆಪಿನಗರದಿಂದ ಹೊರಡೋದು ದಿನಾ… ಮತ್ತೆ ಯಾವಾಗಲಾದರೂ ಸಿಗೋಣ. ಮುಂದಿನ ಕ್ರಾಸ್ಬಂದೇ ಬಿಡ್ತು. ಇಫ್ಯುಡೋಂಟ್ಮೈಂಡ್, ಫೋನ್ನಂಬರ್ಶೇರ್ಮಾಡಿ. ನನ್ನದು ನೈನ್ಡಬಲ್ಎಂಟ್ ಎನ್ನುತ್ತಾ ಒಂದರ ಮಗ್ಗಿ ಶುರು ಮಾಡಿದ. ‘ಶ್ಯೂರ್ಶ್ಯೂರ್ʼ ನಮ್ರೂಮ್ಕೂಡ ಅಲ್ಲೇ ಜೆಪಿನಗರ. ಖಂಡಿತಾ ಸಿಗೋಣ. ಬಾ ಇಂಟರೆಸ್ಟಿಂಗ್ ಇದಾನೆ ಮಗ ಅಂದು ತನ್ನ ಮೊಬೈಲ್ತೆಗೆದು ಅವಿನಾಶ್ಹೇಳಿದ ಒಂದರವಮಗ್ಗಿ ಒತ್ತಿಟ್ಟುಕೊಳ್ಳುತ್ತಾ, ಒಂದುರಿಂಗ್ಮಾಡಿ, ಮಿಸ್ಡ್ಕಾಲ್ ಇದೆ ನೋಡಿ ನಂದು ಅನ್ನುತ್ತಾ ಮಗುವಿಗೆ “ಬಾಯ್!” ಅನ್ನುತ್ತಲೇ… ಅವನನ್ನು ಅಣಕಿಸುವಂತೆ ಮಗು “ಅಂಕಲ್!” ಅಂದ. ಎಲಾ ಇವನಾ? ಒಂದರ್ಧ ಗಂಟೆ ಮಾತಿಗೆ ಎಷ್ಟು ಪರಿಚಯದವನ ಹಾಗೆ ಆಗಿಬಿಟ್ಟ ಅಂದುಕೊಳ್ಳುತ್ತಲೇ ಸತೀಶ ಟ್ರಾಫಿಕ್ಕಿನ ಉದ್ದನೆಯ ಸಾಲಿನತ್ತ ದೃಷ್ಟಿ ನೆಟ್ಟ. ಆ ದಿನ ಸಂಜೆ ಮನೆಗೆ ಬರುವಾಗಲೂ ಮತ್ತೆ ಅದೇ ಸಾಲುಗಟ್ಟಿದ ವಾಹನಗಳ ನಡುವೆ ಬೇಯುತ್ತಾ ಬರುವ ದಾರಿಯಲ್ಲಿ ಸಿಕ್ಕ ಪುಟ್ಟ ಗೆಳೆಯನ ನೆನಪು ಮಾಡಿಕೊಳ್ಳುತ್ತಾ ಇನ್ನಷ್ಟು ಬೇಸರವಾದ. ಆ ರಾತ್ರಿ ಆ ಮಗುವಿನ ನೆನಪಾಗಿ ತಾನು ಮೊದಲು ಕಂಡ ಆ ತೂಕಡಿಸುವಂತಹ ಮುಗ್ದ ಮುಖ ಮತ್ತೆ ದಿಟ್ಟಿಸಿದ ಹಾಗನಿಸಿ ಕಸಿವಿಸಿಗೊಂಡು ದೀರ್ಘವಾಗಿ ಯೋಚನೆಗಿಳಿದ. ನನ್ನ ಬಾಲ್ಯದ ದಿನಗಳಿಗೂ, ಈ ಮಗುವಿನ ಈ ದಿನಗಳಿಗೂ ಎಷ್ಟೊಂದು ವ್ಯತ್ಯಾಸ… ನಮಗೆ ನಿದ್ರೆ ಮಾಡಿಸುವುದಕ್ಕೆ ಮನೆಯಲ್ಲಿ ಹರಸಾಹಸ ಪಡಬೇಕಾಗುತ್ತಿತ್ತು. ಮನೆಯಲ್ಲಿ ಇರಿಸಿಕೊಳ್ಳುವುದೇ ಕಷ್ಟವಾಗಿರುತ್ತಿದ್ದು ಸದಾ ಅಂಗಳ ಬೀದಿ ಹೊಲಗದ್ದೆಗಳ ಕಡೆಯೇ ಆಟವಾಡುತ್ತಾ, ಇದ್ದ ಆ ಹಳ್ಳಿಗೂ, ಬೆಳಗಾದರೆ ಟ್ರಾಫಿಕ್ಕಿನ ಸುಪ್ರಭಾತ, ಮತ್ತೆ ಸಂಜೆ ಅದೇ ಟ್ರಾಫಿಕ್ಕಿನ ಮಂಗಳಾರತಿಯ ನಡುವೆ ಈ ಹೊಸ ತಲೆಮಾರಿನ ಬದುಕು ಎಷ್ಟೊಂದು ವಿಚಿತ್ರವಾಯಿತಲ್ಲ, ಇದಕ್ಕೆ ತಾನೂ ಒಬ್ಬ ಕಾರಣನಾದನಲ್ಲ ಅನಿಸುವಂತಾಯಿತು. ಟ್ರಾಫಿಕ್ಕು , ಜನಜಂಗುಳಿ ನಗರದ ದಟ್ಟಣೆಗಳೆಲ್ಲವೂ ನಾವೇ ಜನರೇ ಮಾಡಿಕೊಂಡಿರುವ ಸ್ವಯಂಕೃತ ಸಮಸ್ಯೆಗಳಲ್ಲವೇ? ಎಲ್ಲರಿಗೂ ಚಂದದ ಬಾಲ್ಯಬೇಕು ಅನ್ನುತ್ತಾ ಇನ್ನೂ ಹಳ್ಳಿ ಯನ್ನೇ ಅವಲಂಬಿಸಿದರೆ ಊರಿನಲ್ಲಿ ಸವಲತ್ತುಗಳೇನೇನೂ ಇಲ್ಲ. ಸವಲತ್ತುಗಳನ್ನು ಸೃಷ್ಟಿಸಿಕೊಳ್ಳುವ ಧಾವಂತದಲ್ಲಿ ಚದುರಿಹೋಗಿದ್ದ ಸಣ್ಣಊರುಗಳನ್ನೆಲ್ಲ ಕಲೆಹಾಕಿ ಮಹಾನಗರಗಳನ್ನಾಗಿ ಬೆಳೆಸಿಕೊಂಡು, ಅಲ್ಲಿ ಒಂದಿಷ್ಟು ಆಸ್ತಿ, ಸೈಟು, ಅಪಾರ್ಟ್ಮೆಂಟುಗಳನ್ನೆಲ್ಲ ಮಾಡಿಕೊಂಡು, ಹಣದ ಒಟ್ಟು ಮೊತ್ತವನ್ನು ಮನಸ್ಸಿನಲ್ಲೇ ಲೆಕ್ಕಮಾಡಿಕೊಂಡು ಪ್ರತಿವರ್ಷ ಐಟಿ ಟ್ಯಾಕ್ಸ್ಕಟ್ಟುವಾಗ ಆ ಲೆಕ್ಕ ಮರುಪರಿಶೀಲನೆಯನ್ನೂ ಮಾಡಿಕೊಂಡು ವಿಚಿತ್ರ ಅಂಕಿಸಂಖ್ಯೆಯ ಲೆಕ್ಕದಲ್ಲಿ ಸಿರಿವಂತಿಕೆಯ ನೆಮ್ಮದಿಯೊಳಗೆ ಮುಳುಗಿ ನಿಜದ ನೆಮ್ಮದಿಯ ನೆನಪೂ ಇಲ್ಲದ ಹಾಗಾಗಿದೆ. ಎಷ್ಟು ಹೊತ್ತು ಯೋಚಿಸಿದರೂ ನಿದ್ರೆ ಹತ್ತದೆ ಹಾಗೇ ಕೂತಲ್ಲೇ ಕೂತಿದ್ದವನಿಗೆ ಊಟ ಮಾಡಿಲ್ಲವೆನ್ನುವುದು ಗೊತ್ತಾಗಿ, ಈಗ ಒಲೆ ಹೊತ್ತಿಸುವ ಮನಸ್ಸಿಲ್ಲದ್ದಕ್ಕೆ ಮನೆಯ ಪಕ್ಕದ ಬೀದಿಯ ಬೇಕರಿ ಬಾಗಿಲು ಮುಚ್ಚುವ ಮೊದಲೇ ಏನಾದರೂ ಸಿಕ್ಕೀತು ಅಂದುಕೊಂಡು ದಾಪುಗಾಲಿಡುತ್ತಾ ಗೇಟು ದಾಟಿದ. ರಾತ್ರಿ ಒಂದರ ನಂತರವೂ ನಿದ್ರೆ ಬಾರದವನಾಗಿ ತನ್ನ ಬಾಲ್ಯವನ್ನೇ ಮತ್ತೆ ಮೆಲುಕು ಹಾಕಿಕೊಂಡು ಒಂದಿಷ್ಟು ಸಂತೊಷಪಟ್ಟುಕೊಳ್ಳುತ್ತಾ, ಬೆಳಗಿನ ಟ್ರಾಫಿಕ್ಕಿನ ಬಗ್ಗೆ ಮಾಮೂಲಿನಂತೆ ಅಲ್ಲದೇ ಏನೋ ವಿಚಿತ್ರ ಆಯಾಸದ ಭಾವನೆ ಮೂಡಿ ಬೆಳಗಿನ ಆ ಮುಗ್ದ ಮಗುವಿನ ತೂಕಡಿಕೆಗೆ ಪ್ರತಿಕ್ರಯಿಸುವವನಂತೆ ತಾನೂ ತೂಕಡಿಸುತ್ತಾ ಕೂತ. ಮಾರನೆಯ ದಿನ ಟ್ರಾಫಿಕ್ಕಿನೊಳಗೆ ಬೈಕನ್ನು ಈಜಿಸಿಕೊಂಡು ಆಫೀಸೆಂಬೋ ದಡ ಮುಟ್ಟಿದರೂ ಈ ನೆನಪಿನ ಗುಂಗಿನಿಂದ ಸತೀಶ ಹೊರಬಂದಿರಲಿಲ್ಲ. ಹಿನ್ನೆಲೆಯಲ್ಲಿ ಯೋಚನೆ ಮುಂದುವರಿದೇ ಇತ್ತು. ಸಮಸ್ಯೆ ಎಲ್ಲಾಗ್ತಾ ಇದೆ? ನಾವೆಲ್ಲ ವ್ಯವಸ್ಥೆಯನ್ನ ಬೆನ್ನುಹತ್ತಿ ವ್ಯವಸ್ಥೆಯೂ ಇಲ್ಲ, ಕಡೆಗೆ ಹಳ್ಳಿಯ ಸಮೃದ್ಧತೆಯೂ ಇಲ್ಲ ಅನಿಸುವಂತೆ ಎಲ್ಲರೂ ಒಬ್ಬರಿಗೊಬ್ಬರು ಪೈಪೋಟಿಯಲ್ಲಿ ಹಣಜಮಾವಣೆಯ ವ್ಯಾಪಾರಕ್ಕಿಳಿದು ಬಿಟ್ಟೆವೇ? ಪುಟ್ಟಪಟ್ಟಣಗಳನ್ನು, ನಗರಗಳನ್ನು ಮಹಾನಗರಗಳನ್ನಾಗಿ ದೈತ್ಯಾಕಾರಕ್ಕೆ ಬೆಳೆಸಿದ ಆ ಆಸಕ್ತಿ ಹಳ್ಳಿಗಳನ್ನೂ, ಅಲ್ಲಿನ ಸುತ್ತಲಿನ ಸಣ್ಣಪಟ್ಟಣಗಳನ್ನೂ ವ್ಯವಸ್ಥಿತಗೊಳಿಸಿಕೊಳ್ಳುವುದು ಅಷ್ಟೊಂದುಕಷ್ಟವೇ? ಇಲ್ಲಿ ನಗರಗಳಲ್ಲಿ ನೋಡಿದರೆ ಎಲ್ಲರೂ ಎಲ್ಲರನ್ನೂ ಬೈದುಕೊಳ್ಳುತ್ತಾ, ಕಾರ್ಪೊರೇಷನ್ನವರಿಗೊಂದಿಷ್ಟು ದೂರುತ್ತಾ ಇದ್ದುಬಿಡುತ್ತೇವೆ. ಹೇಗೋ ದೈನಂದಿನ ಸಾಮಾನ್ಯ ವ್ಯವಸ್ಥೆಗಳ ಏರ್ಪಾಡಿಗಾದರೂ ಕಾರ್ಪೊರೇಷನ್ನು, ಎಸ್ಕಾಮ್, ವಾಟರ್ಬೋರ್ಡ್ಗಳೆಲ್ಲ ನೀರು, ವಿದ್ಯುತ್ತು, ಚರಂಡಿ, ಕಸ ವಿಲೇವಾರಿಗಳನ್ನಂತೂ ಹೇಗೋ ಹಾಗೆ ತೂಗಿಸಿ, ಕೊಟ್ಟ ತೆರಿಗೆಗೆ ತಿಪ್ಪೆ ಸಾರಿಸ್ತಾರೆ. ನಮ್ಮ ಹಳ್ಳಿಗಳಲ್ಲಿ ಬೇರೆಯದೇ ರೀತಿಯ ಸಮಸ್ಯೆ. ಜಾತಿಜಾಡ್ಯದಿಂದ ಹಿಡಿದು, ಶೀತಕೆಮ್ಮಿಗೂ ಒಂದು ಆಸ್ಪತ್ರೆಗೆ ಹತ್ತಾರು ಮೈಲಿಯಾಚೆಯ ಪಟ್ಟಣಕ್ಕೆ ಹೋಗಿ ಟೋಕನ್ಹಿಡಿದುಕೊಳ್ಳಬೇಕಾದ; ಪ್ರಾಥಮಿಕ ಮಾಧ್ಯಮಿಕ ಶಾಲೆಗಳೆಲ್ಲವಕ್ಕೂ ಹಳದಿವ್ಯಾನುಗಳನ್ನು ಅವಲಂಬಿಸಿಕೊಂಡು, ಅದಕ್ಕೆ ಫೀಸು ಕಟ್ಟುವುದಕ್ಕೆಂದು ತಿಣುಕಾಡುವ; ಬೆಳೆಹೊತ್ತಿನಲ್ಲಿ ಮಳೆಯಿಲ್ಲದೆ ಕೊಯ್ಲಿನ ಹೊತ್ತಿಗೆ ನೆರೆ ಬರುವಂತಹ ಪರಿಸ್ಥಿತಿಯಿದ್ದರೂ, ಹೇಗೋ ಹಾಗೆ ಬೆಳೆದಿದ್ದ ಫಸಲಿಗೂ ಎಷ್ಟೋ ಸಿಕ್ಕಷ್ಟು ಅನ್ನುವ ಹಾಗೆ ಸಂಪಾದನೆ ಮಾಡಿಕೊಂಡು ಪ್ರತಿವರ್ಷ ಮುಂದಿನ ಬೆಳೆ ಸಾಲ, ಅದನ್ನ ಮನ್ನಾ ಮಾಡಬೇಕಾದ ಸರ್ಕಾರ, ಅದರಲ್ಲಿ ಕಮೀಷನ್ನು; ಈ ರೀತಿಯ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದ ಸತೀಶನ ತಲೆಭಾರವಾಗಿತ್ತು. ಬ್ರೇಕ್ಹೊತ್ತಿನಲ್ಲಿ ಒಂದು ಕಾಫಿ ಹೀರುತ್ತಾ, ಕಳೆದ ತಿಂಗಳಷ್ಟೇ ಅಮೇರಿಕಾದ ಆನ್ಸೈಟ್ಕೆಲಸದಿಂದ ಮರಳಿದ್ದ ಸಹೋದ್ಯೋಗಿ

ಸಂದಣಿ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಪದೇ ಪದೇ ಕಾಡೋದು ಮನುಷ್ಯನ ವೈರುಧ್ಯಗಳು, ಸಂಬಂಧಗಳು. ಸಾಮಾಜಿಕ ತಲ್ಲಣ ತವಕಗಳು” ಮಮತಾ ಅರಸೀಕೆರೆ ಪರಿಚಯ :ಮಮತಾ ಅರಸಿಕೆರೆ ಕವಯಿತ್ರಿ. ವೃತ್ತಿಯಿಂದ ಶಿಕ್ಷಕಿ. ಚಿಕ್ಕಮಗಳೂರಿನ ಬೆಳವಾಡಿ ಅಪ್ಪನ ಊರು. ತುಮಕೂರು ಅವರ ತಾಯಿಯ ತವರು. ಶಿಕ್ಷಣ ಪಡೆದದ್ದೆಲ್ಲವೂ ಜಾವಗಲ್ ನಲ್ಲಿ. ಶಿಕ್ಷಕ ವೃತ್ತಿಯಲ್ಲಿದ್ದು, ಎಂ.ಎ.ಬಿಎಡ್ ಪಡೆದವರು. ವೃತ್ತಿಯಿಂದ ಶಿಕ್ಷಣ ಇಲಾಖೆಯಲ್ಲಿ ಈಗ ಸಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಕೃತಿಗಳು ಪ್ರಕಟವಾಗಿವೆ. ಕಾವ್ಯ, ಅನುವಾದ ಹಾಗೂ ಮಕ್ಕಳ ೩ ನಾಟಕಗಳು ಎಂಬ ಕೃತಿಗಳನ್ನು ಹೊರ ತಂದಿರುವ ಇವರ ಆಸಕ್ತಿಯ ಕ್ಷೇತ್ರಗಳು ವಿಜ್ಞಾನ, ರಂಗಭೂಮಿ, ಸಂಘಟನೆ, ಸಾಹಿತ್ಯ ಕ್ಷೇತ್ರ. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಇವರ ಕವಿತೆ, ಬರಹಗಳು ಪ್ರಕಟವಾಗಿವೆ ಮುಖಾಮುಖಿಯಲ್ಲಿ ಕವಯಿತ್ರಿ ಮಮತಾ ಅರಸಿಕೆರೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ ?             ಕವಿ ಅನ್ನುವಾಗ ನನಗೆ ಕೆಲವೊಮ್ಮೆ ಸಂಕೋಚವಾಗುತ್ತದೆ. ಬರೆದದ್ದು ಕವಿತೆಗಳಾ? ಅಂತ ಮುಟ್ಟಿ ನೋಡಿಕೊಳ್ಳುವ ಹಾಗೆ. ಆಲೋಚನೆಗಳು ಹಾಳೆಗಿಳಿದಾಗ ಪದ್ಯದ ರೂಪವಾಗುತ್ತದಷ್ಟೆ. ಕವಿತೆ ಹುಟ್ಟುವ ಘಳಿಗೆ ಯಾವುದು ? ಕವಿತೆ ಹುಟ್ಟುವ ಸಂದರ್ಭ ಇಂತಿಷ್ಟೆ ಅಂತಿಲ್ಲ. ಸದಾ ಕವಿತೆಯ ಗುಂಗು ನನಗೆ. ಸಮಯಾ ಸಮಯದ ಹಂಗಿಲ್ಲದೆ ಫಳಕ್ಕನೆ ಹೊಳೆವ ಸಾಲುಗಳನ್ನ ಜೋಡಿಸೋದು. ನಂತರ ಧ್ಯಾನಿಸಿ ಸುಧಾರಿಸೋದು. ಬರೆದ ನಂತರ ನೋವೋ ನಲಿವೋ ಜೊತೆಯಾಗುತ್ತದೆ. ಇತ್ತೀಚೆಗೆ ಉದ್ದೇಶಪೂರ್ವಕವಾಗಿ ಬರೆಸಿಕೊಳ್ಳುತ್ತಿವೆ . ನಿಮ್ಮ ಕವಿತೆಗಳ ವಸ್ತು ಏನು ? ಹೆಚ್ಚಾಗಿ ಕಾಡುವ ಸಂಗತಿಯಾವವು ?              ಈ ಪ್ರಶ್ನೆಗೆ ಉತ್ತರ ಕ್ಲೀಷೆಯಾಗುತ್ತದೇನೋ, ಆದರೂ ಸಾಮಾಜಿಕ ವಿಷಯಗಳೇ ಕವಿತೆಯ ವಸ್ತು. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸ್ಪಂದಿಸಿ ಬರೆಯಬೇಕು ಅನ್ನುವ ಅರಿವು ಒಮ್ಮೆ ಮೂಡಿದರೆ  ಆ ಜಾಡಿನಿಂದ ತಪ್ಪಿಸಿಕೊಳ್ಳುವುದು ಕಷ್ಟ. ಆ ನಂತರವೂ ವಸ್ತು ವೈವಿಧ್ಯ ಇದ್ದೇ ಇರುತ್ತದೆ, ಪದೇ ಪದೇ ಕಾಡೋದು ಮನುಷ್ಯನ ವೈರುಧ್ಯಗಳು, ಸಂಬಂಧಗಳು. ಸಾಮಾಜಿಕ ತಲ್ಲಣ ತವಕಗಳು. ನಿಮ್ಮ ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ ? ತಮಾಷೆ ಅಂದರೆ ಬಾಲ್ಯದಲ್ಲಿ ಪ್ರೌಢಳಂತೆ, ಪ್ರೌಢಳಾದಾಗ ಬಾಲ್ಯದ ಕುರಿತು ಆಲೋಚನೆ ಹೆಚ್ಚು ಕಾಡತೊಡಗಿದ್ದು.  ಅವಧಿಯ ಹಂಗಿಲ್ಲ, ಈ ಎರಡೂ ವಿಷಯಗಳು ಪದ್ಯಗಳಲ್ಲಿ ಕಾಣಿಸಿಕೊಂಡಿದೆ. ಶಿಸ್ತಿಲ್ಲ ನನಗೆ!! ಇವತ್ತಿನ ರಾಜಕಾರಣದ ಬಗ್ಗೆ ನಿಮಗೆ ಏನನಿಸುತ್ತದೆ ? ಬಹಳ ದಿನಗಳವರೆಗೆ ರಾಜಕೀಯ ಅರ್ಥವೇ ಆಗುತ್ತಿರಲಿಲ್ಲ. ಸಿಕ್ಕಾಪಟ್ಟೆ ಪಾರದರ್ಶಕ ಆಲೋಚನೆ ನನ್ನದು. ನಂತರದ ದಿನಗಳಲ್ಲಿ ನಿಜದ ಅರಿವಾದಂತೆ ದಂಗಾದೆ. ನಡೆನುಡಿಗೆ ತಾಳಮೇಳವೇ ಇಲ್ಲ. ಆದರ್ಶವೆಂದು ಓದುವ ವಿಚಾರಗಳಿಗೂ ಸಾಮಾಜಿಕ ವ್ಯವಸ್ಥೆಗೂ ಸಂಪೂರ್ಣ ಕೊಂಡಿಕಳಚಿದ ವಾತಾವರಣ. ಹೆಚ್ಚು ಹೇಳದಿರಲು ನನ್ನದೇ ಕಾರಣಗಳಿವೆ. ಇಲ್ಲವೆಂದರೆ ಆ ವಿಷಯವೇ ಪೇಜುಗಟ್ಟಲೇ ತುಂಬೀತು! ಧರ್ಮ, ದೇವರ ಬಗ್ಗೆ ನಿಮ್ಮ ಅನಿಸಿಕೆಗಳೇನು?             ಧರ್ಮ, ದೇವರು ವೈಯಕ್ತಿಕ ನಂಬಿಕೆಗಳು ಎಂಬುದು ಸರ್ವೇಸಾಧಾರಣ ವಿಷಯ. ಪ್ರಾಮಾಣಿಕತೆ ಪ್ರದರ್ಶಿಸಬೇಕೆಂದರೆ , ಕೆಲವು ದಿನಗಳ ಕಾಲ ದೇವರ ವಿಷಯಕ್ಕೆ ಶ್ರದ್ಧಾಳು ನಾನು. ಧರ್ಮದ ಬಗ್ಗೆ ಅಲ್ಲ. ಕಾಲಕ್ರಮೇಣ ಜಾಗೃತಿಯ ಮಿಂಚು ಹರಿಸಿದ್ದು ನನ್ನ ಮೇಷ್ಟ್ರು  ದೇವರ ಹೆಸರಿನ ಸಮೂಹ ಸನ್ನಿಯ ಮೂಲಕ ಜರುಗುವ ಎಷ್ಟೊಂದು ಅವಘಡಗಳು, ಮೋಸಗಳ ಪರಿಚಯವಾಗುತ್ತಾ ದಿಗ್ಭ್ರಮೆಯಾಯಿತು. ಈ ಸಂಚುಗಳನ್ನು ವಿರೋಧಿಸಿದರೆ ಕೋಪಗೊಳ್ಳುವ ಹಿತಾಸಕ್ತಿಗಳು ದೇವರು ಧರ್ಮಗಳ ಮುಖವಾಡಗಳನ್ನು ಪುರಸ್ಕರಿಸುವುದು, ಮಾನ್ಯತೆ ದಕ್ಕಿಸುವ ಬಗ್ಗೆ ಸೋಜಿಗ ನನಗೆ. ಇನ್ನುಳಿದಂತೆ ದೇವರ ನಾಮಧೇಯದ ಮೂಲಕ ಆಯೋಜನೆಗೊಳ್ಳುವ ಸತ್ಕಾರ್ಯಗಳ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲನೆ ನಡೆಸಬೇಕಿದೆ. ಇವತ್ತಿನ ಸಾಂಸ್ಕೃತಿಕ ವಾತಾವರಣದ ಬಗ್ಗೆ ಏನನಿಸುತ್ತದೆ ?             ಸಾಂಸ್ಕತಿಕ ವಾತಾವರಣದ ಅಲೆಗಳು ಹೆಚ್ಚಾಗುತ್ತಿದೆ. ಎಲ್ಲಾ ಬಗೆಯ ಕ್ಷೇತ್ರಗಳೂ ಈಗ ಬಹಳಷ್ಟು ಬ್ಯುಜಿಯಾಗಿವೆ. ವರ್ಷಕ್ಕೆ ಒಂದೊ ಎರಡೋ ಸಂಖ್ಯೆಯಲ್ಲಿ ಊರಿಗೊಂದರಂತೆ ಜರುಗುತ್ತಿದ್ದ ಕಾರ್ಯಕ್ರಮಗಳು,  ವಾರಕ್ಕೊಂದಾದರೂ ಕಾಣಿಸಿಕೊಳ್ಳುತ್ತಿವೆ, ಅದರದ್ದೇ ಆಯಾಮಗಳನ್ನು ಹೊತ್ತು.  ಗುಣಮಟ್ಟ, ಹಿನ್ನೆಲೆ, ಅವುಗಳ ಹಿಂದಿನ ಕಾರಣಗಳು ಬಹಳಷ್ಟಿರಬಹುದು. ಆದರೆ ಶುದ್ಧತೆಯ ಪ್ರಮಾಣವನ್ನ ಕಾಪಾಡಿಕೊಳ್ಳಬೇಕೆನಿಸುತ್ತದೆ. ಹೀಗೆ ಹೇಳಿದರೆ ಶುದ್ಧತೆಯ ಮಾಪಕವೇನು ಅಂತ ಕೇಳಿಯಾರು! ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?             ಈ ಪ್ರಶ್ನೆ ಯಾವತ್ತಿನದೂ ಆಗಿದೆ. ಮುಂದೆಯೂ ಇರುತ್ತದೆ. ಈ ವಲಯದೊಳಗೆ ಸಿಲುಕದಿರುವವರೇ ಕಡಿಮೆ! ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ ?             ಚಲನೆಯ ಬಗ್ಗೆ ಕಾಳಜಿಯಿದೆ ಹಾಗಾಗಿ ಖಂಡಿತಾ ಆತಂಕವಿದೆ. ಕಾತುರವಿದೆ. ಕಾಲ ಕಾಲಕ್ಕೆ ಈ ಬಗ್ಗೆ ಸಾಹಿತ್ಯ ರಚನೆಯಾಗಿದೆ. ಉಗ್ರ ಹಾಗೂ ಸೌಮ್ಯ ಪ್ರತಿಕ್ರಿಯೆಗಳೆರಡೂ ಕಾಣಿಸಿಕೊಂಡಿವೆ. ಸದ್ಯಕ್ಕಂತೂ ಚಲನೆಯ ಮಾದರಿ ಆಶಾದಾಯಕವಾಗಿಲ್ಲ. ಹಿಮ್ಮಖವಲ್ಲದ ಮುಂಚಲನೆ ಮುಖ್ಯವಾಗಬೇಕು. ಆದರೆ ಭರವಸೆ ಕಳೆದುಕೊಂಡಿಲ್ಲ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?             ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಆಸಕ್ತಿ ನನಗೆ. ಸಂಘಟನೆಯಲ್ಲಿ ತೊಡಗಿ ಸಾಹಿತ್ಯ ಹಿಂದುಳಿದಿದೆ. ಆದರೆ ಸಂಘಟನಾತ್ಮಕ ಕೆಲಸ ಬಹಳ ಮುಖ್ಯವೆನಿಸುತ್ತದೆ ಆಗಾಗ್ಗೆ. ಬಹಳಷ್ಟು ಬರೆಯಬೇಕೆಂಬ ಅಪಾರ ಸಾಮಗ್ರಿ ಜೊತೆಗಿದೆ. ಸೋಮಾರಿತನ ಜತೆಗೂಡಿ ಹಿನ್ನೆಡೆಯಾಗ್ತಿದೆ! ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ,ಕಾಡಿದ ಬರಹಗಾರರು ಯಾರು ?             ಸಹಜವಾಗಿಯೇ ವಿಶ್ವಮಾನವತೆಯನ್ನು ಬೋಧಿಸಿದ ಕುವೆಂಪು ನಂತರ ಕಾರಂತರು ಇಷ್ಟವಾಗುತ್ತಾರೆ. ಕನ್ನಡದ ಬಹಳಷ್ಟು ಹಿರಿಯ ಲೇಖಕರನ್ನ ಓದಿದ್ದೇನೆ. ಮಾನವತೆ ಹಾಗೂ ಜೀವಪರವಾಗಿ ಬರೆಯುವ ಎಲ್ಲ ಲೇಖಕರು ಆಪ್ತವಾಗುತ್ತಾರೆ. ಆಂಗ್ಲ ಲೇಖಕರಲ್ಲಿ ನೆರೂಡ, ಚಾರ್ಲ್ಸ್ ಬುಕೋವ್‌ಸ್ಕಿ, ಇನ್ನು ಹಿಂದಿಯಲ್ಲಿ ಪ್ರೇಮ್‌ಚಂದ್ ಇಷ್ಟ, ಈಚೆಗೆ ಓದಿದ ಕೃತಿಗಳಾವವು ?             ಇಲ್ಲೀವರೆಗೂ ಕೊಂಡ ಪುಸ್ತಕಗಳ ಸಂಖ್ಯೆಗಿಂತ ಕಳೆದ ಆರು ತಿಂಗಳಲ್ಲಿ ತರಿಸಿಕೊಂಡ ಪುಸ್ತಕಗಳ ಸಂಖ್ಯೆ ಅಧಿಕ. ಕೊಡುಗೆಯಾಗಿ ಬಂದವೂ ಹೆಚ್ಚು, ಓದಿದ ಪುಸ್ತಕಗಳ ಪಟ್ಟಿ ಕೊಂಚ ಉದ್ದ ಇದೆ! ನಿಮಗೆ ಇಷ್ಟವಾದ ಕೆಲಸ ಯಾವುದು ? ಇಷ್ಟವಾದ ಕೆಲಸ ಪ್ರಯಾಣ ಮಾಡುವುದು. ತಿರುಗಾಟವೆಂದರೆ ನೆಚ್ಚು ನಿಮಗೆ ಇಷ್ಟವಾದ ಸ್ಥಳಯಾವುದು ? ನಿರ್ದಿಷ್ಟವಾಗಿ ಹೇಳಬೇಕೆಂದರೆ ಇಷ್ಟವಾದ ಸ್ಥಳ ಸಾಬರಮತಿ ಆಶ್ರಮ. ಒಮ್ಮೆ ಭೇಟಿಯಿತ್ತಿದ್ದೆ. ಪ್ರಕೃತಿ ಮೈದುಂಬಿರುವ ಯಾವುದೇ ಸ್ಥಳ ಮತ್ತು ಮರಳುಗಾಡು ಸದಾ ಕುತೂಹಲಕ್ಕೆ ಕಾರಣವಾಗುತ್ತವೆ ನಿಮ್ಮ ಪ್ರೀತಿಯ ಸಿನಿಮಾ ಯಾವುದು? ಇಷ್ಟಪಟ್ಟ ಸಿನಿಮಾಗಳಾವವು ?             ಕಲಾತ್ಮಕ ಸಿನೆಮಾಗಳು ಇಷ್ಟ. ದಕ್ಷಿಣ ಭಾರತದ ಭಾಷೆಗಳ ಸಿನೆಮಾ, ಬೆಂಗಾಲಿ, ಮರಾಠಿಗಳ ಆಯ್ದ ಸಿನೆಮಾ ನೋಡ್ತೇನೆ. ಇರಾನಿಯನ್ ಮೂವಿಸ್ ಇಷ್ಟಪಟ್ಟು ವೀಕ್ಷಿಸ್ತೇನೆ ನೀವು ಮರೆಯಲಾರದ ಘಟನೆ ಯಾವುದು ?  ಮುಖ್ಯಪ್ರವಾಹಕ್ಕೆ ವಿರುದ್ಧವಾಗಿ ಈಜುವವರ ಬದುಕಲ್ಲಿ ಮರೆಯಲಾರದ ಅನೇಕ ಘಟನೆಗಳು ಸಂಭವಿಸುತ್ತವೆ. ಹಾಗೇ ನಾನೂ ಹೊರತಾಗಿಲ್ಲ. ಕಹಿ ಸಿಹಿ ಘಟನೆಗಳ ಒಟ್ಟು ಮೊತ್ತ ನನ್ನ ಬದುಕು. ಆಕಸ್ಮಿಕಗಳಿಗೆ ಲೆಕ್ಕವಿಲ್ಲ. ಹಾಗಂತ ವಿಶೇಷ ವ್ಯಕ್ತಿತ್ವ ನನ್ನದಲ್ಲ. ಸರಳ ಸಾಮಾನ್ಯಳಾದರೂ ಸಂದರ್ಭಗಳ ಕಾರಣಕ್ಕೆ ಸಹಜವಾಗಿ ನಾನೆಂದೂ ಬದುಕಲೇ ಇಲ್ಲ ಅನಿಸತ್ತೆ. ಹಾಗಾಗಿ ಸ್ಮರಣೀಯ ಸಂಗತಿಗಳು ಪ್ರಸಂಗಗಳು ಜರುಗುತ್ತಲೇ ಇರುತ್ತವೆ. ಹೇಳಲೇ ಬೇಕಾದ ಸಂಗತಿಗಳಾವವು ? ಸಂಘಟನಾತ್ಮಕವಾಗಿ ತೊಡಗಿಕೊಂಡವರ ಬಳಿ ನೂರಾರು ವಿಷಯಗಳಿರುತ್ತವೆ! ಸದ್ಯಕ್ಕೆ ಇಷ್ಟೇ ಹೆಚ್ಚಾಯಿತು. ನಾನೊಬ್ಬಳು ಸಾಮಾನ್ಯ ವ್ಯಕ್ತಿ. ಹೀಗೆ ನೀವು ಪ್ರಶ್ನೆಗಳ ಮುಖಾಂತರ ಸಂದರ್ಶನ ಅಂದಾಗ ಮುಜುಗರವಾಯಿತು. ವಿಶ್ವಾಸಕ್ಕೆ ಶರಣು. ತುಂಬು ವಿನಯ ಹಾಗೂ ನಮ್ರವಾಗಿ ಧನ್ಯವಾದಗಳು.   ತುಂಬಾ ಪ್ರೀತಿ ************************************************************* ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ  ದುಗುಡದ ನೆನಪು (ಕಲಬುರ್ಗಿಯವರು ಕೊಲೆಯಾದಾಗ ಬರೆದ ಬರೆಹ) ಕರ್ನಾಟಕ ವಿಶ್ವವಿದ್ಯಾಲಯದ ಶ್ರೇಷ್ಠ ಅಧ್ಯಾಪಕರಲ್ಲಿ ಎಂ.ಎಂ.ಕಲಬುರ್ಗಿಯವರೂ ಒಬ್ಬರೆಂದು ಅವರ ಶಿಷ್ಯರ ಮೂಲಕ ಕೇಳುತ್ತಿದ್ದೆವು. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತಿರುವುದೂ ತಿಳಿದಿತ್ತು. ಆದರೆ ಅವರ ವೈಯಕ್ತಿಕ ಒಡನಾಟವಿರಲಿಲ್ಲ. ನನಗೆ ಈ ಒಡನಾಟವು ಮೊದಲ ಸಲ ಒದಗಿದ್ದು ನನ್ನ ಪಿಎಚ್.ಡಿ., ಪ್ರಬಂಧದ ಮೌಲ್ಯಮಾಪಕರಾಗಿ ಅವರು ಮೌಖಿಕ ಪರೀಕ್ಷೆಗೆ ಬಂದಾಗ. 1987ರಲ್ಲಿ. ಪ್ರಬಂಧದಲ್ಲಿ ವಚನಸಾಹಿತ್ಯದ ಮೇಲೆ ನಾನು ಮಾಡಿದ್ದ `ಸೋಲು’ ಎಂಬ ಟೀಕೆಯ ವಿಷಯದಲ್ಲಿ ಅವರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು. ಎಳೆಯನಾದ ನನ್ನನ್ನು ಝಂಕಿಸಲಿಲ್ಲ. ಒಳ್ಳೆಯ ಪ್ರಬಂಧ ಬರೆದಿದ್ದೇನೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿಗೆ ಆ ಪ್ರಕರಣ ಮುಗಿಯಿತು. ಕಲಬುರ್ಗಿಯವರ ದುಡಿಮೆ ಸಿಟ್ಟು ಪ್ರೀತಿ ತುಂಬಿದ ವ್ಯಕ್ತಿತ್ವವನ್ನು ಮತ್ತಷ್ಟು ಹತ್ತಿರದಿಂದ ನೋಡಲು ಸಾಧ್ಯವಾಗಿದ್ದು ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಬಂದ ಬಳಿಕ. ಅವರು ಕುಲಪತಿಗಳಾಗಿ ಕಾಲಿಡುವಾಗಲೇ ಕೆಲವು ಪೂರ್ವಗ್ರಹಿಕೆಗಳನ್ನು ಹೊತ್ತು ತಂದಿದ್ದರು. ಸಾರ್ವಜನಿಕ ಹಣದಲ್ಲಿ ನಡೆಯುವ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಆಸಕ್ತಿ ಇಲ್ಲದವರೇ ಸೇರಿಕೊಂಡಿದ್ದಾರೆ; ಅವು ಚಲಿಸದ ಕಲ್ಲಿನರಥಗಳಾಗಿವೆ; ಅವನ್ನು ಚಲನಶೀಲಗೊಳಿಸಬೇಕು; ಕನ್ನಡ ವಿಶ್ವವಿದ್ಯಾಲಯದಲ್ಲಿ ಹಳಗನ್ನಡ ಶಾಸ್ತ್ರಸಾಹಿತ್ಯ ಪರಿಚಯವಿಲ್ಲದ, ಪಂಪನನ್ನು ಓದಲು ಬಾರದ ಆಧುನಿಕ ಸಾಹಿತ್ಯದಲ್ಲಿ ಮಾತ್ರ ಆಸಕ್ತಿಯುಳ್ಳ ವಿಚಾರವಾದಿಗಳು ತುಂಬಿಕೊಂಡಿದ್ದಾರೆ; ಅವರಿಗೆಲ್ಲ ಪ್ರಾಚೀನ ಸಾಹಿತ್ಯ ಮತ್ತು ಶಾಸನಗಳ ದೀಕ್ಷೆ ಕೊಟ್ಟು ಕೆಲಸ ಮಾಡಿಸಬೇಕು ಇತ್ಯಾದಿ. ನಾವೂ ಅವರ ಬಗ್ಗೆ ಇಂತಹವೇ ಗ್ರಹಿಕೆಗಳನ್ನು ಹೊಂದಿದ್ದೆವು. ಕನ್ನಡ ವಿಶ್ವವಿದ್ಯಾಲಯವನ್ನು ಸಾರ್ವಜನಿಕವಾಗಿ ಮುಳುಗುತ್ತಿರುವ ಹಡಗೆಂದು ಟೀಕಿಸಿದವರು ಇವರು. ಇವರಿಗೆ ವೈಚಾರಿಕತೆಯಿಲ್ಲ. ಆಧುನಿಕ ಮನಸ್ಸಿಲ್ಲ. ಗತವನ್ನು ಪುನಾರಚಿಸುವ ಇವರ ಸಂಶೋಧನ ಮಾದರಿಯನ್ನು ವಿಮರ್ಶಾತ್ಮಕವಾಗಿ ಮುಖಾಮುಖಿ ಮಾಡಬೇಕು. ಸಾಧ್ಯವಾದರೆ ಅವರನ್ನೇ ಪರಿವರ್ತಿಸಬೇಕು-ಇದು ನಮ್ಮ ಇರಾದೆಯಾಗಿತ್ತು. ನಮ್ಮ ಅವರ ತಾತ್ವಿಕ ಸಂಘರ್ಷ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಡಿದ ಚೊಚ್ಚಲ ಭಾಷಣದಿಂದಲೇ ಶುರುವಾಯಿತು. ಆದರೆ ಮೂರು ವರ್ಷಗಳ ಗುದುಮುರಿಗೆಯಲ್ಲಿ ನಮಗರಿಯದಂತೆ ಅವರೂ ಅವರಿಗರಿಯದಂತೆ ನಾವೂ ಕಲಿತೆವು ಮತ್ತು ಬದಲಾದೆವು. ಅವರು ತಾವೂ ದುಡಿದು ನಮ್ಮನ್ನೂ ದುಡಿಸಿದರು. ಹಿಂತಿರುಗಿ ನೋಡುವಾಗ, ಅವರೊಟ್ಟಿಗೆ ಕೆಲಸ ಮಾಡಿದ ಮೂರು ವರ್ಷಗಳು ಹೆಮ್ಮೆಯ ಗಳಿಗೆಗಳು ಅನಿಸುತ್ತಿವೆ. ವಿಶ್ವವಿದ್ಯಾಲಯಕ್ಕೆ, ದೇಶೀಪ್ರತಿಭೆಯ ಸೃಜನಶೀಲ ಮನಸ್ಸಿನ ಕವಿ ಕಂಬಾರರು ಬುನಾದಿ ಹಾಕಿದರು; ಕ್ಲಾಸಿಕಲ್ ಅಭಿರುಚಿ ಮತ್ತು ಮಾರ್ಗ ಮನೋಧರ್ಮದ ಕಲಬುರ್ಗಿ, ತಮ್ಮ ವಿದ್ವತ್‍ಬಲದಿಂದ ಅದರ ಮೇಲೆ ಇಮಾರತು ಕಟ್ಟಿದರು. ವಿಶೇಷವೆಂದರೆ, ಕಲಬುರ್ಗಿಯವರ-ನಮ್ಮ ವಿದ್ವತ್ ಸಂಬಂಧ ಅವರು ನಿವೃತ್ತರಾಗಿ ಧಾರವಾಡಕ್ಕೆ ತೆರಳಿದ ಬಳಿಕವೂ ಮುಂದುವರೆದಿದ್ದು. ನಾವು ಅವರನ್ನು ಅನಧಿಕೃತ ಕುಲಪತಿ ಎನ್ನುತ್ತಿದ್ದೆವು. ನಮ್ಮಲ್ಲಿ ಅನೇಕರು ತಮ್ಮ ಸಂಶೋಧನೆಯನ್ನು ಪ್ರಕಟಿಸುವ ಮುಂಚೆ ಅವರಿಗೆ ಕೊಟ್ಟು ಅಭಿಪ್ರಾಯ ಪಡೆಯುವ ಪದ್ಧತಿ ಇರಿಸಿಕೊಂಡೆವು. ಆಗ ಉಮಾತಾಯಿ ಬಡಿಸುತ್ತಿದ್ದ ಬಿಸಿರೊಟ್ಟಿ-ಬದನೆಪಲ್ಯದ ಊಟವನ್ನು ತೀರಿಸುತ್ತಿದ್ದೆವು. ಅವರ ಎಲ್ಲ ಸೂಚನೆ ಪಾಲಿಸದಿದ್ದರೂ ಅವರು ಕೊಡುತ್ತಿದ್ದ ಹೊಳಹುಗಳನ್ನು ಹೆಕ್ಕಿಕೊಂಡು ಬೆಳೆಸುತ್ತಿದ್ದೆವು. ಅವರು ಯಾವ್ಯಾವುದೊ ಕಾಲೇಜುಗಳಲ್ಲಿ ಸಂಶೋಧನಾಸಕ್ತ ಅಧ್ಯಾಪಕರನ್ನು ಗುರುತಿಸಿ ಅವರಿಂದ ಕೆಲಸ ತೆಗೆಸಿದರು. ಕರ್ನಾಟಕ ಭಾಷೆ ಚರಿತ್ರೆ ಸಂಸ್ಕøತಿ ಸಾಹಿತ್ಯಗಳ ಮೇಲಿನ ಅವರ ಬದ್ಧತೆ ಅಪರೂಪದ್ದು.ಲಿಂಗಾಯತ ಸಮುದಾಯ ಮತ್ತು ಧರ್ಮಗಳಿಗೆ ಹೆಚ್ಚು ಒತ್ತುಕೊಟ್ಟು ಸಂಶೋಧನೆ ಮಾಡಿ, ವೈಚಾರಿಕವಾಗಿ ಸ್ಥಗಿತಗೊಂಡಂತೆ ಕಾಣುತ್ತಿದ್ದ ಕಲಬುರ್ಗಿ, ನಿಧಾನವಾಗಿ ಕರ್ನಾಟಕ ಸಂಸ್ಕøತಿಯನ್ನು ಹಲವು ಧರ್ಮ ಭಾಷೆ ಸಂಸ್ಕøತಿಗಳ ಮೂಲಕ ನೋಡುವ ಬಹುತ್ವದ ನೋಟಕ್ರಮಕ್ಕೆ ಹೊರಳಿಕೊಂಡರು. ಹಂಪಿಯಲ್ಲಿದ್ದಾಗ ಕರ್ನಾಟಕದ ಫಾರಸಿ-ಅರಬಿ ಶಾಸನಗಳನ್ನು ಪ್ರಕಟಿಸಿದರು; ನಿವೃತ್ತಿ ನಂತರ ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆಯಲ್ಲಿ ತೊಡಗಿಕೊಂಡರು. ಅವರಿಗೆ ಕನ್ನಡದ ಕೆಲಸ ಮಾಡಲು ವಿಶ್ವವಿದ್ಯಾಲಯಗಳೇ ಬೇಕಿರಲಿಲ್ಲ. ಮಠಗಳು ಶಿಕ್ಷಣಸಂಸ್ಥೆಗಳು ಸಾಕಾಗಿದ್ದವು. ಅವರಂತೆ ಸಾಂಸ್ಥಿಕ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರೈಸಿದ ವಿದ್ವಾಂಸರೇ ಕನ್ನಡದಲ್ಲಿ ಕಡಿಮೆ. ನನಗೆ ಕಲಬುರ್ಗಿಯವರು ಬಜಾರಿನಲ್ಲಿ ಭೇಟಿಯಾದ ಒಂದು ಪ್ರಸಂಗ ನೆನಪಾಗುತ್ತಿದೆ. ನಾನು ಮಾರುಕಟ್ಟೆಗೆ ಹೋದವನು, ಕಾಯಿಪಲ್ಲೆ ತುಂಬಿದ ಎರಡು ಬ್ಯಾಗುಗಳನ್ನು ಸೈಕಲ್ ಹ್ಯಾಂಡಲಿನ ಎರಡೂ ಬದಿಗೆ ಸಿಕ್ಕಿಸಿಕೊಂಡು, ಕ್ಯಾರಿಯರಿನಲ್ಲಿ ನನಗೆ ಪ್ರಿಯವಾಗಿದ್ದ ಹಲಸಿನ ಹಣ್ಣನ್ನಿಟ್ಟು ಅದು ಬೀಳದಂತೆ ಹುರಿಯಲ್ಲಿ ಕಟ್ಟಿಕೊಂಡು ಬರುತ್ತಿದ್ದೆ. ಅವರು ಮೈಯಲ್ಲಿ ಹುಶಾರಿಲ್ಲವೆಂದು ಡಾಕ್ಟರ ಬಳಿ ಹೋಗಿದ್ದವರು, ಕಣ್ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ನನ್ನನ್ನು ಕಾರುಹತ್ತುವ ಮುನ್ನ ಕಂಡವರೇ `ತರಕೇರಿ’ ಎಂದು ಕರೆದರು. ಮನಸ್ಸಿಲ್ಲದ ಮನಸಿನಿಂದ ಸನಿಹಕ್ಕೆ ಹೋದೆ. ನನ್ನನ್ನು ಅಡಿಯಿಂದ ಮುಡಿಯವರೆಗೆ ನೋಡಿ, `ಏನಿದು ನಿನ್ನ ಅವಸ್ಥೆ? ಬಸವಣ್ಣ ಅಷ್ಟಿಲ್ಲದೆ ಹೇಳಿಲ್ಲ. ಸಂಸಾರ ಉರದುದ್ದವೇ ಹೇಳಾ? ಶಿರದುದ್ದವೇ ಹೇಳಾ?’ ಎಂದು ಚಾಷ್ಟಿ ಮಾಡಿದರು. ವಿದ್ವತ್ ಕೆಲಸದಲ್ಲಿ ಸಂಸಾರದ ದಂದುಗವನ್ನೇ ಮರೆತುಹೋಗಬಲ್ಲ ವಿದ್ವಾಂಸರಾದ ಅವರಿಗೆ ಅಧ್ಯಾಪಕರಿಗೂ ಖಾಸಗಿ ಬದುಕಿದೆ ಎಂಬುದು ಮರೆತುಹೋಗುತ್ತಿತ್ತೊ ಏನೊ? ಆದರೆ ಅವರು ಯಾವುದೇ ಸಂಸಾರಸ್ಥರಿಗೆ ಕಡಿಮೆಯಿಲ್ಲದಷ್ಟು ಭಾರದ ಕನ್ನಡದ ಕೆಲಸಗಳನ್ನು ಮೈತುಂಬ ಹೊತ್ತುಕೊಂಡವರಾಗಿದ್ದರು. ಅವರ ಅಮಾನುಷ ಕೊಲೆ, ಸಂಶೋಧನ ಕರ್ನಾಟಕದ ಎಷ್ಟೊ ಕನಸುಗಳನ್ನು ಹೊಸಕಿಹಾಕಿತು. ಲಂಕೇಶ್ ತೇಜಸ್ವಿ ಅನಂತಮೂರ್ತಿ ತೀರಿಕೊಂಡಾಗ ವೈಚಾರಿಕ ತಬ್ಬಲಿತನ ಕಾಡಿತ್ತು. ಕಲಬುರ್ಗಿಯವರ ಕೊಲೆ ವಿದ್ವತ್ ತಬ್ಬಲಿತನ ಹುಟ್ಟಿಸಿತು. ಅವರ ಜತೆ ನೂರಾರು ಭಿನ್ನಮತಗಳು ನನ್ನ ತಲೆಮಾರಿನವರಿಗಿದ್ದವು. ಅವರ ನಿರ್ಣಯಗಳು ಅವಸರದವು ಅನಿಸುತ್ತಿತ್ತು. ‘ಸಂಗ್ಯಾಬಾಳ್ಯಾ’ ಕುರಿತ ಅವರ ವಿಚಾರಗಳು ಸಮ್ಮತವೆನಿಸಿರಲಿಲ್ಲ; `ಪಂಪ ರನ್ನ ಕುಮಾರವ್ಯಾಸರು ಉತ್ತರ ಭಾರತದ ಆರ್ಯಜನಾಂಗದ ಕಥನವನ್ನು ವಸ್ತುವಾಗಿಟ್ಟುಕೊಂಡು ಕಾವ್ಯ ಬರೆದರು; ತಮಿಳು ಕವಿಗಳಂತೆ ದೇಸೀ ಕಥನವನ್ನು ಮುಟ್ಟದೆ ತಪ್ಪು ಹಾದಿ ಹಾಕಿಕೊಟ್ಟರು’ ಎಂಬ ಅವರ ಹೇಳಿಕೆಯಲ್ಲಿ ತುಸು ನಿಜವಿದ್ದರೂ, ಕನ್ನಡಕಾವ್ಯ ಪರಂಪರೆಯನ್ನು ನೋಡುವ ರೀತಿಯಿದಲ್ಲ ಅನಿಸುತ್ತಿತ್ತು; `ಗುಲ್ವಾಡಿ ವೆಂಕಟರಾವ್, ಪಂಜೆ, ಮಾಸ್ತಿ, ಕೈಲಾಸಂ, ಬೇಂದ್ರೆ, ಆರ್.ನರಸಿಂಹಾಚಾರ್ ಮುಂತಾದ ಕನ್ನಡೇತರ ಲೇಖಕರಿಂದ ಆಧುನಿಕ ಕನ್ನಡ ಸಾಹಿತ್ಯ ಶುರುವಾಗಿದ್ದರಿಂದ ಅದಕ್ಕೆ ಬರಬೇಕಾದ ಕಸುವು ಒದಗಲಿಲ್ಲ’ ಎಂಬರ್ಥವಿದ್ದ ಅವರ ಹೇಳಿಕೆ ಒಪ್ಪುವುದು ಕಷ್ಟವಾಗುತ್ತಿತ್ತು. ಅನಂತಮೂರ್ತಿಯವರಿಗೆ ಬಸವಶ್ರೀ ಪ್ರಶಸ್ತಿ ಬಂದಾಗ ಹೊರಹಾಕಿದ ವಿಚಾರಗಳಂತೂ ಸಂಕುಚಿತವಾಗಿದ್ದವು. ಅವು ನನ್ನನ್ನು ವ್ಯಥಿತನನ್ನಾಗಿ ಮಾಡಿದ್ದವು.ಆದರೂ ಅವರ ಜತೆ ವೈಚಾರಿಕ ಅಸಮ್ಮತಿ ಇಟ್ಟುಕೊಂಡೂ ನನ್ನ ತಲೆಮಾರಿನವರು ಬೆರೆಯುತ್ತಿದ್ದೆವು; ಸಂಶೋಧನೆಯಲ್ಲಿ ಕೈಜೋಡಿಸುತ್ತಿದ್ದೆವು. ಅವರು ಪ್ರಾಚೀನ ಸಾಹಿತ್ಯ ಅರ್ಥಮಾಡಿಕೊಳ್ಳುವಲ್ಲಿ ಬೇಕಾದ ಕೀಲಿಕೈ ಗೊಂಚಲು ಇಟ್ಟುಕೊಂಡ ವಿದ್ವಾಂಸರಲ್ಲಿ ಒಬ್ಬರಾಗಿದ್ದರು; ಶಾಸನ ಹಳಗನ್ನಡ ಹಸ್ತಪ್ರತಿ ವಚನಸಾಹಿತ್ಯಗಳಲ್ಲಿ ತಮಗಿದ್ದ ತಿಳುವಳಿಕೆಯಿಂದ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ತಮ್ಮ ವಿಚಾರಗಳನ್ನು ಹೊಸ ತಲೆಮಾರಿನವರು ಪೂರ್ಣವಾಗಿ ಒಪ್ಪುವುದಿಲ್ಲ ಎಂದು ಗೊತ್ತಿದ್ದರೂ, ಕರ್ನಾಟಕದ ಸಾಂಸ್ಕøತಿಕ ಹುಡುಕಾಟ ಬಂದಾಗ ಭಿನ್ನಮತ ಬದಿಗಿಟ್ಟು ಒಡನಾಡಬಲ್ಲವರಾಗಿದ್ದರು. ದಿಟ್ಟವಾಗಿ ಭಿನ್ನಮತ ವ್ಯಕ್ತಪಡಿಸುವ ಮೂಲಕ ಸಂಶೋಧನ ಪರಿಸರವನ್ನು ಜೀವಂತವಿಟ್ಟಿದ್ದ ಕಲಬುರ್ಗಿಯವರಿಗೆ, ಭಿನ್ನಮತ-ವಿವಾದ ಹೊಸವಲ್ಲ. ಪಂಚಪೀಠಗಳ ವೀರಶೈವವು ಬಸವತತ್ವಕ್ಕೆ ಸಲ್ಲದು ಎಂದು ಹೇಳುತ್ತ ಕಣ್‍ಕಿಚ್ಚಿಗೆ ಗುರಿಯಾಗಿದ್ದರು; ಬಸವತತ್ವದ ಸಮರ್ಥಕರಾಗಿ ಲಿಂಗಾಯತವು ಸಿಖ್ ಜೈನ ಬೌದ್ಧಗಳ ಹಾಗೆ ಭಾರತದ ಸ್ವತಂತ್ರ ಧರ್ಮಗಳಲ್ಲಿ ಒಂದೆಂದು ಪ್ರತಿಪಾದಿಸುತ್ತ ಸಂಪ್ರದಾಯವಾದಿಗಳ ಆಗ್ರಹಕೆ ಗುರಿಯಾಗಿದ್ದರು; ಕೊನೆಯ ದಿನಗಳಲ್ಲಿ ತಮ್ಮ ಅವಸರದ ಹೇಳಿಕೆಗಳಿಗೆ ದ್ವೇಷದಾಯಕ ಪ್ರತಿಕ್ರಿಯೆ ಎದುರಿಸಿದ್ದರು. ಸಂಶೋಧಕ ಸತ್ಯ ಹೇಳಿದಕ್ಕೆ ಶಿಲುಬೆ ಏರಬೇಕಾಗುವುದು ಎಂದು ಸದಾ ಹೇಳುತ್ತಿದ್ದರು. ಆದರೆ ಅವರ ಬದುಕಿನ ಕೊನೆ ಹೀಗೆ ದಾರುಣವಾಗುತ್ತದೆ ಎಂದು ಯಾರುತಾನೇ ಊಹಿಸಿದ್ದರು? 12ನೇ ಶತಮಾನದ ‘ಕಲ್ಯಾಣ’ ಕರ್ನಾಟಕ ಸಂಸ್ಕøತಿಯಲ್ಲಿ ಮಹತ್ವದ ಸ್ಥಳ. ಹೆಸರು ಕಲ್ಯಾಣವಾದರೂ ಅದು ಶರಣರ ಪಾಲಿಗೆ ದುರಂತ ತಾಣವೂ ಹೌದು. ಈ ವಸ್ತುವನ್ನಿಟ್ಟುಕೊಂಡು ಕಲಬುರ್ಗಿ ‘ಕೆಟ್ಟಿತ್ತು ಕಲ್ಯಾಣ’ ನಾಟಕವನ್ನೂ ಬರೆದರು. ಅವರು ವಾಸವಾಗಿದ್ದು ಧಾರವಾಡದ ಕಲ್ಯಾಣನಗರದಲ್ಲಿ. ಇದೇ ಕಲ್ಯಾಣನಗರವು ಅವರ ಬಾಳಿನಲ್ಲಿ ದುರಂತ ತಾಣವಾಗಿಬಿಟ್ಟಿತು. ಕಲಬುರ್ಗಿಯವರ ಕೊಲೆಯ ಕಾರಣ ಖಚಿತಗೊಂಡಿಲ್ಲ. ಕೊಲೆಗಾರರು ಸಿಕ್ಕಿಲ್ಲ. ಆದರೆ ಅವರ ಕೊಲೆಯನ್ನು ಕೆಲವರು ಸಂಭ್ರಮಿಸಿದ್ದು ಮಾತ್ರ ಅಮಾನುಷ. ಗಾಂಧಿಯವರ ಕೊಲೆಯಾದಾಗಲೂ ಸನಾತನವಾದಿಗಳು ಸಿಹಿಹಂಚಿದ್ದರು. ನಮಗೆ ಸಮ್ಮತವಲ್ಲದ ಚಿಂತಕರ ಸಾವನ್ನು ಸಂಭ್ರಮಿಸುವ ಘಟನೆ, ಅನಂತಮೂರ್ತಿ ನಿಧನದ ಹೊತ್ತಲ್ಲಿ ಕಾಣಿಸಿಕೊಂಡಿತು. ಲೇಖಕರ ಸಾವು-ಕೊಲೆಗಳಿಗೆ ಮಾಡುವ ಸಂಭಮ್ರಾಚರಣೆ, ಕರ್ನಾಟಕ ಕಷ್ಟಪಟ್ಟು ಉಳಿಸಿಕೊಂಡು ಬಂದಿದ್ದ ಸಾಂಸ್ಕøತಿಕ ಮತ್ತು ವೈಚಾರಿಕ ಸಹನೆಗಳು ತೀರಿರುವುದರ ಸೂಚನೆಯೇ? ಕೊಲೆ ತಾತ್ವಿಕ ಭಿನ್ನಮತದ ಕಾರಣಕ್ಕಾಗಿಯೆ ಸಂಭವಿಸಿದ್ದರೆ, ಕರ್ನಾಟಕದ ವಾಗ್ವಾದ ಪರಂಪರೆ ಕ್ಷೀಣವಾಗುತ್ತಿದೆ ಎಂದರ್ಥವೇ? ಪರರ ಸಾವಿಗೆ ಸಂತೋಷ ಪಡುವ ನಂಜಿನ ಮನಸ್ಸು ಸೃಷ್ಟಿಸಬಲ್ಲವರು ಎಂತಹ ಸಮಾಜ ಮತ್ತು ದೇಶವನ್ನು ಕಟ್ಟಬಯಸಿದ್ದಾರೆ? ಭಿನ್ನಮತವನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಬಯಸುವ ಎಲ್ಲರಿಗೂ ಬರುವ ದಿನಗಳು ಸವಾಲಿನವು. ಇದು ಪ್ರಜಾಪ್ರಭುತ್ವವನ್ನು ರಾಜಕೀಯ ನೆಲೆಯಲ್ಲಿ ಮಾತ್ರವಲ್ಲ, ಚಿಂತನೆಯ ನೆಲೆಯಲ್ಲಿ ಸಹ ಉಳಿಸಿಕೊಳ್ಳುವ ಪ್ರಶ್ನೆ. ಇದಕ್ಕೆ `ಮಾರ್ಗ’ ಯಾವುದು? ಇಂತಹ ಅನೇಕ ಜಟಿಲವಾದ ಪ್ರಶ್ನೆಗಳನ್ನು ಕಲಬುರ್ಗಿಯವರ ಕೊಲೆ ನಮ್ಮ ಮುಂದಿಟ್ಟು ನಿರ್ಗಮಿಸಿದೆ. ಕಷ್ಟ ತೀರಿಕೊಂಡವರದ್ದಲ್ಲ. ಉತ್ತರದಾಯಿಯಾಗಿ ಬದುಕುವವರದ್ದು. ********* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ನರವಾನರ ನರವಾನರಮರಾಠಿ ಮೂಲ : ಶರಣಕುಮಾರ ಲಿಂಬಾಳೆಕನ್ನಡಕ್ಕೆ : ಪ್ರಮೀಳಾ ಮಾಧವಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ. ೧೬೫ಪುಟಗಳು : ೧೯೨ ಭಾರತದಾದ್ಯಂತ ಅಂಬೇಡ್ಕರ್ ದಲಿತರ ಪರವಾಗಿ ಮಾಡಿದ ಚಳುವಳಿಯ ಕುರಿತಾದ ಕಾದಂಬರಿ ಇದು. ಮನುಸ್ಮೃತಿಯಲ್ಲಿ ಶೂದ್ರರು ಮತ್ತು ದಲಿತರ ಕುರಿತಾಗಿರುವ ಉಲ್ಲೇಖಗಳಿಂದ ದಲಿತರ ಬದುಕು ನರಕವಾಗಿ ಬಿಟ್ಟು ಅವರಿಗಾದ ಅನ್ಯಾಯಗಳ ವಿರುದ್ಧ ಕೆರಳಿ ಕೆಂಡವಾದ ಅಂಬೇಡ್ಕರ್ ವರ್ಣವ್ಯವಸ್ಥೆಯಿಂದಾಗಿ ಹಿಂದೂ ಸಮಾಜದಲ್ಲಿ ಮೇಲು ಜಾತಿಯವರು ನಿಮ್ನ ಜಾತಿಯವರನ್ನು ಶೋಷಿಸಿದ್ದರ ವಿರುದ್ಧ ಸಮರ ಸಾರಿದರು. ಇಂಥ ಹಿಂದೂ ಸಮುದಾಯದಲ್ಲಿ ತಾನೆಂದೂ ಇರಲಾರೆ ಎಂದು ಬೌದ್ಧಧರ್ಮಕ್ಕೆ ಮತಾಂತರ ಹೊಂದಿ ಇತರರಿಗೂ ಕರೆಯಿತ್ತರು. ಆದರೆ ಆ ಮಹನೀಯರು ಮರಣ ಹೊಂದಿದ ನಂತರ ದಲಿತ ಚಳುವಳಿಯ ನೇತೃತ್ವ ವಹಿಸುವವರು ಯಾರೂ ಇಲ್ಲದೆ ದಲಿತರು ಅಸಹಾಯಕರಾದರು. ಆ ವಿಚಾರದಲ್ಲಿ ದೇಶದಾದ್ಯಂತ ಬಿಕ್ಕಟ್ಟುಗಳು ತಲೆದೊರಿದವು. ಜಗಳಗಳಾದವು. ಹಲವಾರು ಪಕ್ಷ- ಪಂಗಡಗಳು ಹುಟ್ಟಿಕೊಂಡವು. ಎಲ್ಲರೂ ‘ನಿಜವಾದ ಆಂದೋಲನ ನಮ್ಮದು’ಎಂದು ಕೂಗೆಬ್ಬಿಸ ತೊಡಗಿದವು. ಪ್ರಜಾಪ್ರಭುತ್ವದ ಹೆಸರಿನಲ್ಲಿ ದಲಿತ ಪ್ರತಿನಿಧಿಗಳನ್ನು ರಾಜಕೀಯ ಪಕ್ಷಗಳು ತಮ್ಮೆಡೆಗೆ ಸೆಳೆಯ ತೊಡಗಿದವು. ಈ ಕಾದಂಬರಿ ಇದೇ ವಿಷಯವನ್ನು ಕುರಿತು ಚರ್ಚಿಸುತ್ತದೆ. ಮೊದಲ ಅಧ್ಯಾಯದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಬಡ ಯುವಕ ಅನಿರುದ್ಧ ಕಾಲೇಜಿಗೆ ಸೇರಿದಾಗ ಅವನಿಗೆ ದಲಿತ ಯುವಕರಿದ್ದ ರೂಮಿನಲ್ಲಿ ಸೀಟು ಸಿಗುತ್ತದೆ. ಅವನು ದಲಿತ ಗೆಳೆಯರ ಸಂಕಷ್ಟಗಳನ್ನು ನೋಡಿ ಮರುಗುತ್ತ ಸಾವಿರಾರು ವರ್ಷಗಳಿಂದ ಅವರನ್ನು ಶೋಷಿಸುತ್ತ ಬಂದ ತನ್ನ ಬ್ರಾಹ್ಮಣ ಸಮುದಾಯವನ್ನು ಬಿಟ್ಟು ದಲಿತನಾಗುತ್ತಾನೆ. ಇನ್ನೊಂದು ಅಧ್ಯಾಯದಲ್ಲಿ ಬ್ರಾಹ್ಮಣ ಸಮುದಾಯದ ಹುಡುಗಿ ದಲಿತನನ್ನು ಮದುವೆಯಾಗುತ್ತಾಳೆ. ದಲಿತ ಚಳುವಳಿ ಪ್ರಬಲವಾಗುತ್ತ ಹೊಗುತ್ತದೆ. ದಲಿತ ಪ್ಯಾಂಥರ್ ಮತ್ತು ರಿಪಬ್ಲಿಕನ್ ಪಾರ್ಟಿ ಎಂಬ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಸಂಘರ್ಷಗಳ ಮೂಲಕ ದಲಿತ ಚಳುವಳಿ ವ್ಯವಸ್ಥೆಯ ಒಂದು ಭಾಗವಾಗಿ ಹೋಗುತ್ತದೆ. ದಲಿತ ಸಾಹಿತ್ಯ ಮತ್ತು ದಲಿತ ರಾಜಕೀಯಗಳು ಈ ಚಳುವಳಿಯ ಉತ್ಪನ್ನಗಳಾಗುತ್ತವೆ. ಹೀಗೆ ಕಾದಂಬರಿಯ ವಸ್ತು ಇಂದಿನ ವ್ಯವಸ್ಥೆಯ ಜ್ವಲಂತ ಚಿತ್ರಣವಾಗಿದ್ದು ಅತ್ಯಂತ ಪ್ರಸ್ತುತವಾಗಿದೆ. ಪ್ರಮೀಳಾ ಅವರ ಅನುವಾದದ ಶೈಲಿ ಸುಂದರವಾಗಿದೆ ಮತ್ತು ಸುಲಲಿತವಾಗಿದೆ. *************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಇತರೆ, ವರ್ತಮಾನ

ಮಣ್ಣಿನ ಕಣ್ಣು ವರ್ತಮಾನದ ರಾಜಕೀಯ,ಸಾಮಾಜಿಕ, ಆಗುಹೋಗುಗಳ ಬಗೆಗಿನ ಬರಹಗಳು ರೈತರ ಆತ್ಮಹತ್ಯೆ: ತಡೆಯಬಲ್ಲಂತಹ ಒಂದಷ್ಟು ಯೋಜನೆಗಳ ಬಗ್ಗೆ!          ರೈತನ ಆತ್ಮಹತ್ಯೆ ಎನ್ನುವುದು ಈಗೀಗ ಮಾಮೂಲಿಯಾದ ಸುದ್ದಿಯಾಗಿಬಿಟ್ಟಿದೆ ಪ್ರತಿ ವರ್ಷವೂ ಒಂದೋ ಬರಗಾಲ ಎದುರಾಗುತ್ತದೆ, ಇಲ್ಲ ಅತಿವೃಷ್ಠಿಯ ಭೂತ ಬಂದೆರಗುತ್ತದೆ. ಬೆಳೆನಷ್ಟವಾಗಿ ಬೀದಿಗೆ ಬೀಳುವ ರೈತ ವಿಧಿಯಿಲ್ಲದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.. ವಿರೋಧಪಕ್ಷಗಳು ಆಡಳಿತ ಪಕ್ಷದವರ ವೈಫಲ್ಯದ ಬಗ್ಗೆ ಹೇಳಿಕೆ ನೀಡಿ, ತೀರಾ ಮನಸ್ಸು ಬಂದರೆ  ಸದರಿ ರೈತನ ಮನೆಗೆ ಟಿ.ವಿ.ಕ್ಯಾಮೆರಾದೊಂದಿಗೆ ಬೇಟಿ ನೀಡಿ ಒಂದಿಪ್ಪತ್ತು ಸಾವಿರದ ಚೆಕ್ ನೀಡಿ ಮುಂದಿನ ಚುನಾವಣೆಗೆ ಒಂದಿಷ್ಟು ಮತಗಳು ನಿಕ್ಕಿಯಾದವೆಂದು ಸಂಭ್ರಮಿಸುತ್ತಾರೆ.  ಸರಕಾರವೂ ಒಂದಿಷ್ಟು ಪರಿಹಾರ ಘೋಷಿಸಿ ತನಿಖೆಗೆ ಒಂದು ಸಮಿತಿ ನೇಮಿಸಿ ಮುಂದಿನ ವರ್ಷ ಇಂತಹ ಆತ್ಮಹತ್ಯೆಗಳು ನಡೆಯದಂತೆ ನೋಡಿಕೊಳ್ಳುವುದು ತಮ್ಮ  ಉದ್ದೇಶವೆಂದೆ ಘೋಷಿಸಿ ಮತ್ತೆ ಮಲಗುತ್ತವೆ.ಪ್ರತಿ ವರ್ಷ ಇಂತಹ ರಾಜಕೀಯ ಕೃಪಾಪೋಷಿತ ನಾಟಕಗಳು ನಡೆಯುತ್ತಲೇ ಇರುತ್ತವೆ. ನಾವೂ ಕೂಡ ಯಾವುದೋ ನಾಟಕದ ಪ್ರೇಕ್ಷಕರಂತೆ ನೋಡುತ್ತ ಕೂರುತ್ತೇವೆ. ತೊಂಭತ್ತರ ದಶಕದವರೆಗೂ ರೈತರ ಆತ್ಮಹತ್ಯೆಗಳು ವಿರಳವಾಗಿದ್ದವು. ಆದರೆ ಜಾಗತೀಕರಣದ ನಂತರ ನಮ್ಮ ಪ್ರಗತಿಯ ಹಾದಿಯನ್ನು ಬದಲಾಯಿಸಿಕೊಂಡ ನಾವು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟೆವು. ಇದರ ಪರಿಣಾಮವಾಗಿ ಮೊದಲು ಶೇಕಡಾ 72ರಷ್ಷಟಿದ್ದ ನಮ್ಮ ಕೃಷಿ ಆದಾಯ ಇದೀಗ ಕೇವಲ ಶೇಕಡಾ 12ಕ್ಕೆ ಇಳಿಯುವಂತಾಗಿದೆ. ಕೈಗಾರಿಕೆಗಳಿಗೆ ನೀಡುವ ಯಾವ ಸೌಲಭ್ಯವೂ ಕೃಷಿ ಕ್ಷೇತ್ರಕ್ಕೆ ದೊರೆಯದಂತಾಗಿ ಈ ಕ್ಷೇತ್ರ ಸೊರಗತೊಡಗಿದೆ. ಸಮಯಕ್ಕೆ ಸರಿಯಾಗಿಬರದ ಮಳೆ, ಒಮ್ಮೆಲೆ ಬಂದೆರಗುವ ಅತಿವೃಷ್ಠಿ, ದೊರೆಯದ ಬ್ಯಾಂಕುಗಳ ಸಾಲ, ಉತ್ತಮ ಗುಣಮಟ್ಟದ ಬೀಜ ಗೊಬ್ಬರಗಳ ಕೊರತೆ, ಬೆಳೆದ ಬೆಳೆಗೆ ದೊರೆಯದ ನ್ಯಾಯಯುತ ಮಾರುಕಟ್ಟೆ ಬೆಲೆಗಳು ರೈತನನ್ನು ಅಸಹಾಯಕತೆಯಿಂದ ಹತಾಶೆಗೆ ದೂಡಿ ಅವನನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿವೆ. ಇವೆಲ್ಲವುಗಳ ಅರಿವಿದ್ದೂ ಸರಕಾರಗಳು ರೈತರ ಬಗ್ಗೆ ಕಾಳಜಿ ತೋರದೆ ದಪ್ಪ ಚರ್ಮವನ್ನು ಬೆಳೆಸಿಕೊಂಡು ಅವನನ್ನು ಮತ್ತಷ್ಟು ಹತಾಶೆಗೆ ದೂಡುತ್ತಿವೆ.      ಪ್ರತಿವರ್ಷ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಇದಕ್ಕೊಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಆದ್ದರಿಂದ ಇಂತಹದೊಂದು ಸಮಸ್ಯೆಗೆ ಸರಕಾರ ಒಂದು ಶಾಶ್ವತವಾದ ನೀತಿಯೊಂದನ್ನು ಅಳವಡಿಸಿಕೊಂಡು ಮುಂದುವರೆದರೆ ಮಾತ್ರ ಭವಿಷ್ಯದಲ್ಲಿ ರೈತನ ಆತ್ನಹತ್ಯೆಗಳನ್ನು ತಡೆಯಬಹುದು ಜೊತೆಗೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ. ಈ ದಿಸೆಯಲ್ಲಿ ಸರಕಾರವೊಂದು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ  ಒಂದಿಷ್ಟು ಸಲಹೆ ಸೂಚನೆಯನ್ನು ಈ ಲೇಖನದ ಮೂಲಕ ನೀಡಲು ಪ್ರಯತ್ನಸಿದ್ದೇನೆ. ಬೆಳೆ ವಿಮೆ ಯೋಜನೆ:      ಈಗಿರುವ ಬೆಳೆ ವಿಮಾ ಯೋಜನೆ ಯಾವುದೇ ವೈಜ್ಞಾನಿಕ ಮಾನದಂಡವನ್ನೂ ಹೊಂದಿಲ್ಲ  ಮತ್ತು ಇಂತಹ ವಿಮೆಯ ಬಗ್ಗೆ ರೈತರಿಗೂ ಸಂಪೂರ್ಣ ಅರಿವಿಲ್ಲ.  ಆದ್ದರಿಂದ ಬೆಳೆಯುವ ಬೆಳೆಯ ಆಧಾರದಲ್ಲಿ  ಇಡೀ ರಾಜ್ಯವನ್ನು ಒಂದಷ್ಟು ವಿಭಾಗಗಳಾಗಿ ವಿಂಗಡಿಸಬೇಕು. ಆಯಾ ಪ್ರದೇಶದಲ್ಲಿ ಬೆಳೆಯುವ ಮುಖ್ಯ ಬೆಳೆಯ ಬಗ್ಗೆ ತಜ್ಞರು ಅದ್ಯಯನ ಮಾಡಿ  ಒಂದು ಏಕರೆಯಲ್ಲಿ ಆ ಬೆಳೆ ಬೆಳೆಯಲು  ತಗುಲಬಹುದಾದ ಅಂದಾಜು ವೆಚ್ಚವನ್ನು  ಮತ್ತು ಬರಬಹುದಾದ ಆದಾಯದ ಪ್ರಮಾಣವನ್ನು  ನಿಗದಿ ಪಡಿಸಬೇಕು. ತದನಂತರ ಒಂದು ಏಕರೆಗೆ ಇಷ್ಟು ಎಂದು ವಿಮಾಕಂತನ್ನು ನಿಗದಿಪಡಿಸಬೇಕು. ಹೀಗೆ ನಿಗದಿಪಡಿಸುವ ಮೊತ್ತ ರೈತನಿಗೆ ಹೊರೆಯಾಗುವಂತಿರಬಾರದು. ಆಯಾ ಪಂಚಾಯಿತಿ ವ್ಯಾಪ್ತಿಯ ವ್ಯವಸಾಯ ಸೇವಾ ಸಹಕಾರಸಂಘ(ಸೊಸೈಟಿ)ಗಳಲ್ಲಿ ಗ್ರಾಮಲೆಕ್ಕಿಗರ ಮೇಲುಸ್ತುವಾರಿಯಲ್ಲಿ  ರೈತರು ವಿಮಾ ಕಂತು ಪಾವತಿ ಮಾಡುವ ಮತ್ತು ಹಾಗೆ ಕಂತು ಪಾವತಿ ಮಾಡಿದ 24 ಗಂಟೆಗಳ ಒಳಗೆ ಕೃಷಿಬಾಂಡ್ ನೀಡುವ ವ್ಯವಸ್ಥೆ ಮಾಡಬೇಕು. ಸಣ್ಣ ರೈತರಿಗೆ ಈ ವಿಮಾ ಮೊತ್ತವನ್ನು ಕಟ್ಟುವುದು ಹೊರೆಯಾಗುವುದರಿಂದ ಗುರುತಿಸಿದ ಸಣ್ಣ ರೈತರ ವಿಮಾ ಮೊತ್ತವನ್ನು ಸರಕಾರದ ಕೃಷಿ ಇಲಾಖೆಯೇ ಭರಿಸುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪ್ರತಿ ಬಜೆಟ್ಟಿನಲ್ಲೂ ಸದರಿ ಇಲಾಖೆಗೆ ಇಂತಿಷ್ಟೆಂದು ಅನುದಾನ ಬಿಡುಗಡೆ ಮಾಡಬೇಕು.  ಇಂತಹ ಬೆಳೆ ವಿಮೆಯನ್ನು ಸರಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು.ಅಕಸ್ಮಾತ್ ಬೆಳೆ ನಾಶವಾದರೆ  ವಿಮೆಯ ಪರಿಹಾರ ಮೊತ್ತವನ್ನು ಮೊದಲೇ ಅಂದಾಜಿಸಿದರೀತಿಯಲ್ಲಿ  ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಬೇಕು. ಬೆಳೆನಷ್ಟದ ಬಗ್ಗೆ ಅಧಿಕೃತವಾಗಿ ಪ್ರಮಾಣ ಪತ್ರ ನೀಡುವುದಕ್ಕೆ  ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಜ್ಞರುಗಳ ಒಂದು ಸಮಿತಿ ಮಾಡಿ  ಗರಿಷ್ಠ ಮೂರುದಿನಗಳಲ್ಲಿ ಈ ವರದಿ ನೀಡುವ ಕಾನೂನು ಜಾರಿಗೊಳಿಸಬೇಕು. ಹೀಗೆ ವರದಿ ನೀಡಲು ವಿಫಲವಾದರೆ ಆ ಸಮಿತಿಗಳವರೆ ಪರಿಹಾರದ ಹಣವನ್ನು ನೀಡಬೇಕೆನ್ನುವ ಷರತ್ತನ್ನು ವಿದಿಸಬೇಕು. ಅಂತಹ ಸಮಿತಿಯಲ್ಲಿ ಸ್ಥಳೀಯ ಗ್ರಾಮಲೆಕ್ಕಿಗ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖೆಗಳ ಮುಖ್ಯಸ್ಥರು ಇರುವಂತೆ ನೋಡಿಕೊಂಡು ತಹಶೀಲ್ದಾರ್ ಇಂತಹ ಸಮಿತಿಯ ಅದ್ಯಕ್ಷರಾಗಿರುವಂತೆ ನಿಯಮ ರೂಪಿಸಬೇಕು.ಹೀಗೆ ಬೆಳೆ ನಷ್ಟದ ಪರಿಹಾರ ನೀಡಲು ಬೇಕಾದ ಮೊತ್ತವನ್ನು ವಿಮಾ ಕಂತುಗಳಿಂದ ಸಂಗ್ರಹಿಸುವುದರ ಜೊತೆಗೆ ಸರಕಾರವೂ ಆಯವ್ಯಯದಲ್ಲಿ ಸಾಕಷ್ಟು ಅನುದಾನ ಒದಗಿಸ ಬೇಕು.  ಅಗತ್ಯವೆನಿಸಿದರೆ ಕೃಷಿ ಇಲಾಖೆಯಲ್ಲಿಯೇ ಇದಕ್ಕೊಂದು ಪ್ರತ್ಯೇಕ ವಿಭಾಗವನ್ನು ರಚಿಸಿ, ಕೃಷಿಯಲ್ಲಿ ಪಧವೀದರರಾಗಿರುವವರನ್ನು ನೇಮಕ ಮಾಡಬಹುದು. ತನ್ಮೂಲಕ ಕೃಷಿ ಪಧವೀದರರಿಗೆ ಉದ್ಯೋಗಾವಕಾಶವನ್ನೂ ಒದಗಿಸಬಹುದಾಗಿದೆ. ಇಂತಹದೊಂದು ಬೆಳೆವಿಮಾ ಯೋಜನೆಯನ್ನು ಜಾರಿಗೆ ತಂದಲ್ಲಿ ಶೇಕಡಾ ತೊಂಭತ್ತೈದರಷ್ಟು ಆತ್ಮಹತ್ಯೆಗಳನ್ನು ನಿಲ್ಲಿಸಬಹುದಾಗಿದೆ. ಇಲ್ಲಿ ನಾನು ಪ್ರಸ್ತುತ ಪಡಿಸಿದ ಯೋಜನೆಯ ವಿವರಗಳಲ್ಲಿ ಕೆಲವೊಂದು ತಾಂತ್ರಿಕ ಅಡಚಣೆಗಳು ಇರಬಹುದಾರೂ ತಜ್ಞರುಗಳ ಸಮಿತಿಯೊಂದು ಇಂತಹ ಯೋಜನೆಯನ್ನು ಇನ್ನೂ ಸರಳೀಕರಿಸಿ ತಳಮಟ್ಟದಲ್ಲಿ ಜಾರಿಗೆ ತರಬಹುದಾಗಿದೆ.ಇದಕ್ಕಾಗಿ ಸರಕಾರ ಕೃಷಿಯನ್ನು ನಿಜವಾದ ಅರ್ಥದಲ್ಲಿ ಅದ್ಯಯನ ಮಾಡಿರುವ ವಿದ್ವಾಂಸರುಗಳನ್ನು, ವಿಮಾ ಕ್ಷೇತ್ರದಲ್ಲಿನ ಅನುಭವಿಗಳನ್ನು, ರೈತ ಮುಖಂಡರುಗಳನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಿ ಇಂತಹದೊಂದು ಬೆಳೆವಿಮೆಯ ಯೋಜನೆಯನ್ನು ರೂಪಿಸಿಕೊಡುವಂತೆ ಹೇಳಬಹುದಾಗಿದೆ. ಒಂದು ಪ್ರಜಾಸತ್ತಾತ್ಮಕ ಸರಕಾರಕ್ಕೆ ಇದೇನು ತೀರಾ ದೊಡ್ಡವಿಚಾರವಲ್ಲ, ನಿಜ. ಆದರೆ ನಮ್ಮ ಸರಕಾರಗಳನ್ನು ನೆಸುವ ರಾಜಕಾರಣಿಗಳಿಗೆ ಈ ಬಗ್ಗೆ ಇಚ್ಚಾಶಕ್ತಿ ಇರಬೇಕಾಗುತ್ತದೆ. ರೈತರಿಗೆ ನೀಡುವ ಬೆಳೆಸಾಲ    ಇವತ್ತು ನಮ್ಮ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಖಾಸಗಿಯವರಿಂದ ಪಡೆದ ಸಾಲದ ಬಡ್ಡಿ ಕಟ್ಟಲಾಗದೆ ಹೋಗುವುದಗಿದೆ. ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ನೀಡುವ ವಿಚಾರದಲ್ಲಿ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಸರಕಾರವೇ ಮುಂದೆ ನಿಂತು ರೈತರ ಬೆಳೆವಿಮೆಯಿಂದ ಸಿಗಬಹುದಾದ ಪರಿಹಾರವನ್ನು ಅದು ನೀಡುವ ಸಾಲಕ್ಕೆ ಗ್ಯಾರಂಟಿಯಾಗಿ ನೀಡುವ ಪದ್ದತಿಯನ್ನು ಅಳವಡಿಸಿಕೊಂಡು ಈ ಬಗ್ಗೆ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ. ಎಷ್ಟು ಸಾಲ ನೀಡಬೇಕು ಎನ್ನುವುದರ ಬಗ್ಗೆಯೂ ಬೆಳೆವಿಮೆ ಮಾಡುವಾಗ ಅಂದಾಜಿಸಿದ್ದ ವೆಚ್ಚದ ಆಧಾರದ ಮೇಲೆಯೇ ಬ್ಯಾಂಕುಗಳು ಸಾಲ ನೀಡುವುದನ್ನು ಕಡ್ಡಾಯಗೊಳಿಸಬೇಕು. ಹೀಗೆ ನೀಡುವ ಸಾಲಗಳು ಸದುಪಯೋಗವಾಗುವಂತೆ ರೈತರು ಖರೀಧಿಮಾಡುವ ಬೀಜ ಗೊಬ್ಬರಗಳನ್ನು ಪೂರೈಸುವವರಿಗೆ ಚೆಕ್ ರೂಪದಲ್ಲಿಯೇ ಬ್ಯಾಂಕಿನಿಂದ ಹಣ ಸಂದಾಯವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ರೈತರು ದೊರೆತ ಹಣವನ್ನು ಬೇರೆ ಉದ್ದೇಶಗಳಿಗೆ ವ್ಯಯಿಸುವುದು ತಪ್ಪಿದಂತಾಗುತ್ತದೆ.    ಇವೆಲ್ಲವುಗಳಿಗೆ ಪೂರಕವಾಗುವಂತೆ ಪ್ರತಿ ಗ್ರಾಮದ ಕೃಷಿ ಸಹಕಾರ ಸಂಘಗಳಲ್ಲಿಯೂ ರೈತರ ಭೂಮಿ ಬೆಳೆ ಇತ್ಯಾದಿಗಳನ್ನು ಕಂಪ್ಯೂಟರಿಕರಣಗೊಳಿಸಬೇಕು. ಸ್ಥಳೀಯವಾಗಿ ಕಂಪ್ಯೂಟರ್ ಕಲಿತ ಯುವಕ ಯುವತಿಯರನ್ನು ಇದಕ್ಕೆ ನೇಮಕ ಮಾಡಿಕೊಳ್ಳುವುದರಿಂದ ರೈತರ ನಿರುದ್ಯೋಗ ನಿವಾರಣೆಯು ನಿವಾರಣೆಯಾದಂತಾಗುತ್ತದೆ.     ರೈತರ ಆತ್ಮಹತ್ಯೆ ತಪ್ಪಿಸಲು ನಾನು ಹೇಳಿದ ಮೇಲಿನ ಅಂಶಗಳಿಂದಲೇ ಸಾದ್ಯವಿಲ್ಲವಾದರೂ, ರೈತರ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಂತೂ ಆಗುವುದರಲ್ಲಿ ಅನನುಮಾನವಿಲ್ಲ.  ನಮ್ಮ ರೈತ ಸಂಘಟನೆಗಳು ಇಂತಹ ಯೋಜನೆಗಳ ಬಗ್ಗೆ ಕರಡು ಪ್ರತಿಯೊಂದನ್ನು ರಚಿಸಿ ಸರಕಾರದ ಮುಂದಿಟ್ಟು ಅದನ್ನು ಅನುಷ್ಠಾನಗೊಳಿಸುವಂತೆ ಹೋರಾಡಬೇಕಿದೆ. ಈ ವಿಚಾರದಲ್ಲಿಯಾದರು ನಮ್ಮ ರೈತ ಮುಖಂಡರುಗಳು ತಮ್ಮ ಪ್ರತಿಷ್ಠೆಯನ್ನು ಮರೆತು ಒಂದಾಗಿ ಹೋರಾಡಬೇಕಾಗಿದೆ. ಇಲ್ಲದೇ ಹೋದರೆ ಭವಿಷ್ಯದಲ್ಲಿ ರೈತ ಹೋರಾಟಗಳೆಂದರೆ  ಜನರ ದೃಷ್ಠಿಯಲ್ಲಿ ಅಣಕು ಪ್ರದರ್ಶನಗಳಾಗಿ ಪರಿವರ್ತನೆಗಳಾಗಲಿವೆ. ಸರಕಾರಗಳು ಅಷ್ಟೆ ಅನ್ನ ನೀಡುವ ರೈತರನ್ನು ನಿರ್ಲಕ್ಷಿಸದೆ ಇಂತಹ ರೈತಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ  ಯೋಚಿಸಬೇಕಾಗಿದೆ. ********* ಕುಸಮ

Read Post »

ಇತರೆ

ಎರಡು ಪತ್ರಗಳು

ಎರಡು ಪತ್ರಗಳು ಪತ್ರ ಒಂದು [6:27 pm, 18/10/2020] NAGRAJ HARAPANALLY: ಸಂಗಾತಿಯ ನೆನೆಯುತ್ತಾ…. ಹಿರಿಯ ಸಂಗಾತಿ ಮಧುಸೂದನ್ ಸರ್ ಗೆ ನಮಸ್ಕಾರಗಳು.. ಸಂಗಾತಿ ಕನ್ನಡ ವೆಬ್ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ನಾನು ಸಂಗಾತಿಯ ಭಾಗವಾದುದು ಈ ವರ್ಷದ ಮಾರ್ಚನಲ್ಲಿ. ಮಧುಸೂದನ್ ಸರ್ ನನ್ನ fb ಗೆಳೆಯರು.ಹಿರಿಯರು‌ .‌ಆದರೆ ಕನ್ನಡ ವೆಬ್ ಮಾಡಿದ್ದು ಗೊತ್ತಿರಲಿಲ್ಲ. ನನ್ನ ಪತ್ರಿಕೆ ಕೆಲಸ ,ಪತ್ರಕರ್ತ ವೃತ್ತಿ ಕಾರಣವಾಗಿ‌ .ಗೆಳೆಯ ಮೋಹನ್ ಗೌಡನ ಬರಹ ಸಂಗಾತಿಯಲ್ಲಿ ಪ್ರಕಟವಾಗಿತ್ತು. ಕುತೂಹಲದಿಂದ ಅವನ ಬರಹ ಓದಿದೆ. ವಿಳಾಸ ಹುಡುಕಿದೆ. ಮೋಹನ್ ನನಗೆ ಸಂಗಾತಿಯ ಪರಿಚಯಿಸಿದ. ಹಾಗೂ ಮಧುಸೂದನ್ ಸರ್ ನಂಬರ್ ಪಡೆದು ಕವಿತೆ ಕಳಿಸಲು ಪ್ರಾರಂಭಿಸಿದೆ. ನಂತರ ನಮ್ಮ ಸ್ನೇಹ ಗಾಢವಾಯಿತು.‌ಚರ್ಚೆಗಳಾದವು. ರಹಮತ್ ತರಿಕೆರೆ ಸರ್ ಅವರನ್ನು ಕರೆತಂದೆವು. ನಂತರ ” ದುರಿತಕಾಲದ ದನಿ ” ತಲುಪಿತು. ಅದನ್ನು ಓದಿದ ಮೇಲೆ ಕನ್ನಡದ ಸಾಂಸ್ಕೃತಿಕ ಲೋಕ ಮಧುಸೂದನ್ ಅವರಂತಹ ಆಗ್ನಿ ಕುಂಡದ ಕವಿಯನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿರುವುದು ತಿಳಿಯಿತು.‌ ನಂತರ ನನ್ನ ಕಾಯಕ ನಾ ಮಾಡುತ್ತಲೇ…ಮಧುಸೂದನ್ ಸರ್ ಮತ್ತೂ ಹತ್ತಿರವಾದರು. ಮುಖಾಮುಖಿ ಅಂಕಣ ಪ್ರಾರಂಭಿಸಲು ಅವಕಾಶ ನೀಡಿದರು. ಕವಿಗಳ ಮನಸ್ಥಿತಿ, ಅವರ ಒಲವು ನಿಲುವು ನಿಷ್ಠುರತೆ ತಿಳಿಯಲು ಮುಖಾಮುಖಿ ಸಹಾಯವಾಯಿತು. ಇದರಿಂದ ಸಂಗಾತಿಗೆ ಕನ್ನಡ ಕಾವ್ಯಲೋಕದ ನಡೆ ಏನು ಎತ್ತ ಎಂದು ಅರಿಯಲು ಸಹಾಯ.‌ಮುಂದೆ ಸಾಹಿತ್ಯದ ವಿದ್ಯಾರ್ಥಿಗಳು ನಮ್ಮ ಕವಿಗಳ ರಾಜಕೀಯ ನಿಲುವು ಏನು? ಅವರಿಗೆ ದೇವರು ಧರ್ಮ ದೇಶ ಜನರ ಬಗ್ಗೆ ಏನು ನಿಲುವು ಇದ್ದವು ಎಂಬ ಸಂಗತಿ ಅಧ್ಯಯನ ಮಾಡಿದರೆ ಸಂಗಾತಿ ವೆಬ್ ಹುಡುಕಬೇಕು. ಇದು ನಮ್ಮ ಉದ್ದೇಶ. ಸಂಗಾತಿ ಸಂಪಾದಕರು ಈ ಸೂಕ್ಷ್ಮ ಅರಿತೇ ಈ ಅಂಕಣಕ್ಕೆ ಅವಕಾಶ ನೀಡಿದರು ಎಂಬುದು ನನ್ನ ಗ್ರಹಿಕೆ.‌ಸಂಗಾತಿ ನೂರಾರು ಹೊಸ ಲೇಖಕರಿಗೆ ವೇದಿಕೆಯಾಗಿದೆ. ಎಲ್ಲ ಪಂಥದವರು ಇದ್ದಾರೆ. ಜೀವವಿರೋಧಿ ನಿಲುವು ಬಿಟ್ಟು ಉಳಿದೆಲ್ಲಾ ಬರಹ ಇಲ್ಲಿ ಪ್ರಕಟವಾಗಿವೆ. ಆಗುತ್ತಿವೆ. ಅದೇ ಸಂಗಾತಿ ವೆಬ್ ಹೆಚ್ಚುಗಾರಿಕೆ. ಇದನ್ನು ವಿನಯದಿಂದ ಇಲ್ಲಿ ಸ್ಮರಿಸುವೆ. ಸಂಗಾತಿ ವೆಬ್ ಕನ್ನಡ ಸಾಹಿತ್ಯ ಲೋಕದ ಬೆಳಕಾಗಲಿ. ———————————————-ನಾಗರಾಜಹರಪನಹಳ್ಳಿ ಪತ್ರ-ಎರಡು ಪ್ರೀತಿಯ ಕ.ಮ.ಮಧುಸೂದನ್ ಸರ್ ಅವರಿಗೆ ನಮಸ್ಕಾರ..ಮೊದಲಿಗೆ ಯಶಸ್ವಿ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ನಮ್ಮೆಲ್ಲರ ಹೆಮ್ಮೆಯ “ಸಂಗಾತಿ” ಗೆ ಅದರ ಸಾರಥ್ಯ ವಹಿಸಿರುವ ಮಧುಸೂದನ್ ಸರ್ ಅವರಿಗೂ ಅಭಿನಂದನೆಗಳು.ಗೆಳೆಯ ಮೋಹನ್ ಗೌಡ ಹೆಗ್ರೆ ಅವರ ಮೂಲಕ ಪರಿಚಯವಾದ ‘ಸಂಗಾತಿ’ ನಮ್ಮ ಮನಸು ಭಾವನೆಗಳ ಭಾಗವಾಗಿ ನಮ್ಮೆಲ್ಲರ ಅಭಿವ್ಯಕ್ತಿಯ ವೇದಿಕೆಯಾಯಿತು.ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿ (ಪ್ರಜಾವಾಣಿ ಹೊರತು ಪಡಿಸಿ) ನಿಂತು ಹೋಗಿ ಕವಿತೆಗಳು ಪ್ರಕಟವಾಗುವುದೆಲ್ಲಿ ಎಂದು ಯೋಚಿಸುತ್ತಿರುವಾಗ ಓಯಾಸಿಸ್ ನಂತೆ ಬಂದು ನಮ್ಮೆಲ್ಲರ ಆವರಿಸಿಕೊಂಡು ನಮ್ಮ ಸಾಹಿತ್ಯದ ಅಂತರ್ಜಲ ಬತ್ತದಂತೆ ಜೀವಂತವಾಗಿರಿಸಿದ್ದು ನಮ್ಮ ಸಂಗಾತಿ ಎಂದರೆ ಅತಿಶಯೋಕ್ತಿಯಲ್ಲ.ಈ ಮೂಲಕ ಹಲವಾರು ಹೊಸ ಕವಿಗಳು ಉದಯವಾದರು.ಕನ್ನಡದ ಪ್ರಬುದ್ಧ ವಿಮರ್ಶಕರಾದ ರಹಮತ್ ತರಿಕೆರೆಯಂತವರು ಬರೆಯಲು ತೊಡಗಿ ನಮಗೆ ಇನ್ನಷ್ಟು ಸುಪರಿಚಿತವಾಯಿತು.ಆಮೇಲೆ ಮಧುಸೂದನ್ ಸರ್ ಅವರ ಅದ್ಭುತ ಕವಿತೆಗಳನ್ನು ಓದಿ ಪ್ರತಿಕ್ರಿಯಿಸುವ ಅವಕಾಶ ನನಗೆ ಸಿಕ್ಕಿತು. ಒಬ್ಬ ಸಂಪಾದಕರಾಗಿ ತಮ್ಮ ಕವಿತೆಗಳನ್ನು ಪ್ರಕಟಿಸಿ ವೈಭವೀಕರಿಸದೇ ಗ್ರೂಪ್‌ನಲ್ಲಿ ಓದುವ ಅವಕಾಶ ನೀಡಿದ್ದು ನಿಮ್ಮ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಯಿತು.’ಸಂಗಾತಿ’ ಯನ್ನು ನಿರ್ವಹಿಸಿದ ರೀತಿ ನಿಜಕ್ಕೂ ಓದುಗರ ಮೆಚ್ಚುಗೆ ಪಡೆಯಿತು.ಈ ಒಂದು ವರ್ಷದ ನೆನಪಿಗೆ ಪತ್ರಿಕೆಯ ಓದುಗರಿಗಾಗಿ ಕವನ,ಕಥಾ ಸ್ಪರ್ಧೆ ಮಾಡವಹುದೇನೋ..ವೈಶಿಷ್ಟ್ಯಪೂರ್ಣ ಚಿತ್ರ ಲೇಖನಗಳು,ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ವೈವಿಧ್ಯಗಳು,ವೈಜ್ಞಾನಿಕ,ವೈಚಾರಿಕ ಲೇಖನಗಳನ್ನು ಹಿರಿಯ ಲೇಖಕರಿಂದ ಆಹ್ವಾನಿಸಿ ಪತ್ರಿಕೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬುದು ನನ್ನ ಪ್ರೀತಿಯ ಸದಾಶಯ..’ಸಂಗಾತಿ’ಗೆ ಅಭಿನಂದನೆಗಳು ಫಾಲ್ಗುಣ ಗೌಡ ಅಚವೆ

ಎರಡು ಪತ್ರಗಳು Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ಸಂಪಾದಕೀಯ ಇವತ್ತಿಗೆ ಸಂಗಾತಿಗೆ ವರ್ಷ ತುಂಬಿತು. ಈ ಪಯಣದಲ್ಲಿ ಜೊತೆ ನೀಡಿದ    ನನ್ನೆಲ್ಲ ಓದುಗಮತ್ತು ಬರಹಗಾರ ಮಿತ್ರರುಗಳಿಗೆ ದನ್ಯವಾದಗಳು. ಸಂಗಾತಿಯ ಸಾಧನೆಯೇನು? ಕೇಳಿದವರಿಗೆ ನನ್ನ ಉತ್ತರ: ಒಂದು ವಿನಮ್ರ ಮುಗುಳ್ನಗುವಷ್ಟೆ! ಹೆಚ್ಚೇನು ಹೇಳಲಿ? ಸಾಕ್ಷಿಗೆ ಸಂಗಾತಿಯಬರಹಗಳೇ ಇವೆ. ** ಆದರೂ ಕೆಲವನ್ನು ನಿಮಗಾದರೂ ಹೇಳಲೇಬೇಕು: ಮುನ್ನೂರ ಅರವತ್ತೈದು ದಿನಗಳು, ಮುನ್ನೂರ ಐವತ್ತಕ್ಕೂ ಅಧಿಕ ಲೇಖಕರು, ಮೂರು ಸಾವಿರಕ್ಕೂ ಹೆಚ್ಚಿನ  ಬರಹಗಳು ಹದಿನೈದಕ್ಕೂ ಹೆಚ್ಚು ಅಂಕಣಗಳು ಅಮೇರಿಕಾದ ಅಶ್ವಥ್ ರಿಂದ ಹಿಡಿದು ಚಾಮರಾಜನಗರದ  ಮಾಲತಿ ಯವರವರೆಗು ಹರಡಿದ ವಿಶಾಲ ಬರಹಗಾರರ ದಂಡು ಕನ್ನಡ ಸಾಹಿತ್ಯಕ್ಕೆ    ಸಂಗಾತಿ ನೀಡಿದ ಅಲ್ಪ ಕೊಡುಗೆ. ಇದರಲ್ಲಿ ನಿಮ್ಮ ಪಾಲೇ ಅಧಿಕ.. ಸಂಪಾದಕ ನೆಪ ಮಾತ್ರ! *** ಮುಖ್ಯವಾಗಿ ಸಂಗಾತಿಗೆ——– ಜಾತಿ-ದರ್ಮಗಳಿಲ್ಲ, ಗುಂಪುಗಳ ಗೊಡವೆಯಿಲ್ಲ, ಅರಗಿಸಿಕೊಳ್ಳಲಾಗದಂತಹ ಸಿದ್ದಾಂತಗಳ ಹೆಣಬಾರವಿಲ್ಲ, *** ಸಂಗಾತಿಗಿರುವುದು- ಕನ್ನಡ ಸಾಹಿತ್ಯದ ಜೀವನದಿಗೆ ಸಂಗಾತಿಯ ಪುಟ್ಟಪುಟ್ಟ ಝರಿಗಳು ಸೇರಿ ಸಂಗಾತಿಯ ಸ್ರಮ ಸಾರ್ಥಕವಾಗಬೇಕು *** ಹೆಚ್ಚೇನು ಹೇಳಲಿ? ಮುಂದಿನ ದಿನಗಳಲ್ಲಿಯೂ ಸಂಗಾತಿಯ ಜೊತೆ ನೀವಿರುತ್ತೀರಿ ಎಂಬ ನಂಬಿಕೆ ನನ್ನದು. *** ಇಷ್ಟು ದಿನಗಳ ನಿಮ್ಮ ಪ್ರೀತಿಗೆ ಶರಣು *************************************************

ನಿಮ್ಮೊಂದಿಗೆ Read Post »

ಕಾವ್ಯಯಾನ

ಹಸಿವು

ಕವಿತೆ ಹಸಿವು  ಗಂಗಾಧರ ಬಿ ಎಲ್ ನಿಟ್ಟೂರ್ ಹಸಿದು ಬಸವಳಿದವರಿಗೆ  ಪ್ರಾಣ ಹೋಗುವ ಸಂಕಟ ಉಳ್ಳವರಿಗೆ ಬರೀ ಚೆಲ್ಲಾಟ ಅನ್ನ ಚೆಲ್ಲುವ ಮಂದಿಗೆ ಅರ್ಥವಾದೀತೆ ಹಸಿದ ಕರುಳಿನ ಆಕ್ರಂದನ ಎದೆಯೊಳಗೆ ನಡುಕ  ಕರುಳು ಹಿಂಡುವ ಕಥನ  ಜಗದಿ ಹಸಿವಿನ ಮರಣ ಮೃದಂಗ  ಪ್ರಕೃತಿಗೆ ಕಣ್ಣಿಲ್ಲ ಕರುಣೆಯೂ ಇಲ್ಲ ಗಂಜಿಗೂ ಗತಿ ಇಲ್ಲದೆ ಸಾಯುವ ಕಂದಮ್ಮಗಳ ಸಂಖ್ಯೆ  ನಿತ್ಯ 20 ಸಾವಿರಕೂ ಅಧಿಕ ಹಿಡಿ ಅನ್ನ ಬೊಗಸೆ ನೀರಿಗೂ ತತ್ವಾರ  ಅಪೌಷ್ಟಿಕತೆ – ಸಾಂಕ್ರಾಮಿಕಗಳ ಪ್ರಹಾರ  ಎಂಥಾ ವಿಚಿತ್ರ ಬದುಕಿದು ದೇವಾ ಬಡತನ ಮುಕ್ತ ದೇಶದ ಪುಕಾರು  ತುತ್ತು ಬಾಯಿಗಿಡುವ ಭರಾಟೆಯೂ ಜೋರು ತಿಂದು ತೇಗಿ ರಸ್ತೆಗಿಳಿವ ಸುದ್ದಿ ಶೂರರ ಗಡಿಪಾರು ಆದಾಗ ಲಭ್ಯ ನಿಜ ಸೂರು  ********************************

ಹಸಿವು Read Post »

ಕಾವ್ಯಯಾನ

ಮತ್ತೆ ಹುಟ್ಟಲಿ ದುರ್ಗಿ…

ಕವಿತೆ ಮತ್ತೆ ಹುಟ್ಟಲಿ ದುರ್ಗಿ… ಮಹಿಷನ ಪೂಜಿಸಿದರೇನಂತೆತ್ರಿಲೋಕ ದಹಿಸೆಂದು ಅವನು ಹೇಳಲಿಲ್ಲಬ್ರಹ್ಮನಿಂದ ವರಪಡೆದರೇನಂತೆಅಬಲೆಯ ಬಲಾತ್ಕರಿಸೆಂದು ಅವನು ಹರಸಲಿಲ್ಲಹುಣ್ಣಿಮೆಯೋ ಮಹಾಲಯವೋಮಹಿಷಾಸುರನ ಕ್ರೌರ್ಯಕ್ಕೆ ಎಣೆಯಿಲ್ಲ ,ಬಗೆ ಬಗೆಯ ಛಧ್ಮವೇಶವೂ ರಕ್ಷಿಸಲಿಲ್ಲಕೊನೆಗೆಮಹಿಳೆಯೋರ್ವಳ ರೋಷಕ್ಕೆಪುರುಷನೊಬ್ಬನ ಅಹಂಕಾರಕ್ಕೆಅಲಂಕಾರಿಕ ಅಂತ್ಯ…ಕರುಳು ಚೆಲ್ಲಿತ್ತು ತ್ರಿಶೂಲ ಹೊಕ್ಕಿತ್ತುಮೂಜಗದ ಶಾಪಕ್ಕೆ ದುರ್ಗೆಯ ಕೋಪಕ್ಕೆಮಹಿಷಾಸುರನ ಪ್ರಾಣ ಹಾರಿತ್ತು…. ಹಾಗೆಂದು ಬದಲಾಯಿಸಿಬಿಟ್ಟಿತೇ ಕಾಲ?ಬಣ್ಣ,ವೇಷ, ವಾಸನೆಗಳ ಈಜಗ?ಇಲ್ಲ ಇಲ್ಲ ಆಗಾಗ ಮತ್ತೊಮ್ಮೆ ಮಗದೊಮ್ಮೆಮತ್ತೆ ಮತ್ತೆ ನಗ್ನವಾಗುತ್ತಲೇ ಇದೆಪುರುಷನೊಳಗಿನಮೃಗಮರಳಿ ಬಾ ದುರ್ಗಾಮಾತೆ …ರಕ್ತ ಬೀಜಾಸುರರಿವರುಅಬಲೆಯರ ಹುಡುಕುವರುಹೇಡಿಗಳಂತೆ ಹೊಂಚುವರು,ಒಬ್ಬಳ ಮೇಲೆ ಹಲವು ಹತ್ತು ಜನರುಕಾಮಾಂಧರಾಗಿ ಎರಗಿ ಭೋಗಿಸಿಸಾಯಿಸಿ,ಅಡಗುತ್ತ ತೇಕುವರುಕಾಲ ಇಂದಿಗೂ ಬದಲಾಗಿಲ್ಲ… ಉಧ್ಬವಿಸಲಿ ಸಾವಿರದಿ ಕಾಳಿಯರು,ದುರ್ಗೆಯರು,ಶುಭಾಂಕರಿಯರುರಕ್ಕಸರಠಕ್ಕತೆಗೆ ಆಗಿಉತ್ತರಮೀರಿಜಗದೆತ್ತರಮಾಟದಮೈಯಕೋಮಲಾಂಗಿಯರುಹಣೆತುಂಬರಕ್ತಕಾರಿಬಿರುಬಿರುಸಿನಕೇಶಕೆದರಿಸಾವಿರ ಮಹಿಷರ ಮರ್ದನಕ್ಕೆ ನಾಂದಿ ಹಾಡಿಕತ್ತಲೆಗೆ-ಬೆಳಕಿನ ದಾರಿತೋರಿ ದುರ್ಗೆಯಾಗಲಿ ಇಂದಿನಮಹಿಳೆ ( ಮಹಿಷಾಸುರ ಮಹಿಷ ದೇವರನ್ನು ಪೂಜಿಸುತ್ತಿದ್ದ ಅಸುರ.ಆತನಿಗೆ ಕೋಣನ (ಮಹಿಷ) ತಲೆಯಿದೆಯಿತ್ತು ಎನ್ನಲಾಗಿದೆ.ಭ್ರಮ್ಹನಿಂದ ವರವನ್ನು ಪಡೆದಿದ್ದವನು). ************************** ಡಾ.ಪ್ರೇಮಲತ ಬಿ.

ಮತ್ತೆ ಹುಟ್ಟಲಿ ದುರ್ಗಿ… Read Post »

You cannot copy content of this page

Scroll to Top