ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಕಾಗೆ ಮುಟ್ಟಿದ ನೀರು

ಪುಸ್ತಕ ಪರಿಚಯ ಕಾಗೆ ಮುಟ್ಟಿದ ನೀರು ಪುಸ್ತಕ:- ಕಾಗೆ ಮುಟ್ಟಿದ ನೀರುಲೇಖಕರು:-ಡಾ.ಪುರುಷೋತ್ತಮ ಬಿಳಿಮಲೆಪ್ರಕಾಶನ:-ಅಹರ್ನಿಶಿ ಪ್ರಕಾಶನ,ಶಿವಮೊಗ್ಗ ಕಾಗೆ ಮುಟ್ಟಿದ ನೀರು ಪುಸ್ತಕ ಅನೇಕ ಓದುಗ ಪ್ರಭುಗಳ ಉತ್ತಮ ಅನಿಸಿಕೆಗಳ ಓದಿ ತೀರಾ ಮನಸ್ಸಾಗಿ ಓದಲು ಹಂಬಲ ಹೆಚ್ಚಾಗಿ,ತೀರಾ ಕಡಿಮೆ ರಿಯಾಯತಿಯಲ್ಲಿ ಪುಸ್ತಕ ಕೊಡುವುದಾದರೆ ಕಳಿಸಿ ಎಂದು ಪ್ರಕಾಶಕರಿಗೆ ಸಂದೇಶವನ್ನು ಕಳಿಸಿದ ಕೂಡಲೇ, ಆಯ್ತು ವಿಳಾಸ ಬರಲಿ ಎಂದು ಅತ್ತಕಡೆಯಿಂದ ಕಳುಹಿಸಿ ಕೊಟ್ಟರು.ಆತ್ಮಕತೆ ನನ್ನಿಷ್ಟದ ಒಂದು ಓದುವಿನ‌ ವಿಭಾಗ. ಪುಸ್ತಕವೂ ಕೈಸೇರಿತು, ಸಿಕ್ಕಗಳಿಗೆ ಮೊದಲು ಬೆನ್ನುಡಿ-ಮುನ್ನುಡಿ ಓದುವ ಹವ್ಯಾಸ ನನ್ನದಾಗಿದೆ. ಬಿಳಿಮಲೆರವರು ಒಬ್ಬ ಎಡಪಂಥೀಯರು, ಚಿಂತಕರೂ, JNU ಯಲ್ಲಿ ಪ್ರಾಧ್ಯಾಪಕರು ಅಂತ ಮಾತ್ರ ತಿಳಿದಿದ್ದ ನನಗೆ, ಕಾಗೆ ಮುಟ್ಟಿದ ನೀರಿನಿಂದ ಅವರೇನೂ ಅಂತ ಮತ್ತಷ್ಟು ಒಳಹೊಕ್ಕು ತಿಳಿಯಲು ಅನುಕೂಲವಾಯಿತು. ಬಂಟಮಲೆಯಿಂದ ದೆಹಲಿವರೆಗೆ ಬೆಳೆದು ದೇಶ-ವಿದೇಶ ಸುತ್ತಿ ಅನೇಕ ಕಾರ್ಯಗಳನ್ನು ಮಾಡಿದ ಇವರ ಎದೆಗಾರಿಕೆಗೆ ಮೆಚ್ಚಲೇಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪಳಗಿಸುತ್ತಿರುವುದು ಸಹ ವಿಶೇಷ. ಬಾಲ್ಯದ ನೆನಪನ್ನು ಹೆಕ್ಕಿ, ಪಿಯು ಫೇಲಾಗಿ ಶಿಕ್ಷಣ ಪೂರೈಸಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಾ, ಬದುಕು ಬಂದಂತೆ ಎದುರಿಸಿ, ಕೊನೆಗೆ ಬದುಕು ಕಟ್ಟಿಕೊಂಡ ಇವರ ಯಶೋಗಾಥೆ ನನಗೆ ಸ್ಪೂರ್ತಿ ಆಗಬಹುದೆಂದರೆ ತಪ್ಪಾಗಲಿಕ್ಕಿಲ್ಲ. ದೊಡ್ಡ-ದೊಡ್ಡ ಮನುಷ್ಯರೆನಿಸಿಕೊಂಡವರ ಮನಸ್ಥಿತಿ ಹೇಗಿರುತ್ತದೆಂದು ಕಂಬಾರರ ಕರಾಳ ಮುಖವನ್ನ ಎತ್ತಿ ಹಿಡಿದು, ಅಮೆರಿಕನ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿನ ಇವರ ಸೇವೆ, ಜೆ-ಎನ್-ಯುನಲ್ಲಿ ಕನ್ನಡ, ಕನ್ನಡಪೀಠ ಕಟ್ಟಿದ್ದು ಒಂದು ದಾಖಲೆ, ಇತಿಹಾಸ. ಮದುವೆ, ದೆಹಲಿಯಲ್ಲಿ ಮನೆ, ಪುನರ್ಜನ್ಮ, ಮಾಟಮಂತ್ರ, ಜಾತಿ, ರೋಗದಲ್ಲೂ ಗೆದ್ದಿದ್ದು ಮೇಲ್ನೊಟ್ಟಕ್ಕೆ ಕಟ್ಟುಕತೆಯಂತಿದ್ದರೂ ಇದೊಂದು ವಿಶೇಷ. ಹೋರಾಟದ ಬದುಕು ಆಪ್ತವಾಗಿ ಓದಿಸಿಕೊಂಡು ಹೋಗುವ ಪುಸ್ತಕ. ನೀರೇ ಗತಿಯಿಲ್ಲದ ಊರಲ್ಲಿ ಕಾಗೆ ಮುಟ್ಟಿದ ನೀರು ನಲ್ಲಿ, ಹಳ್ಳ-ಕೊಳ್ಳದಲ್ಲಿ ಬಂದಿದೆ ನೀವು ಮುಟ್ಟುತ್ತೀರೋ ಇಲ್ಲೋ ಕುಡಿತಿರೋ ಇಲ್ಲ, ಬಳಸುತ್ತಿರೋ ಇಲ್ಲೋ ಅಂತ ಗದ್ಗರ್ತೀತನಾಗಿ ಯಾರೋ ಗದರಿಸಿ ಹಾಡು ಹಾಡಿದಂತೆ ಕಿವಿಯಲ್ಲಿ ಇಂಪರಿಸುತಿದೆ. ಸಕಲ ರೋಗಗಳಿಂದಾನೆ ಬದುಕುತ್ತಿದ್ದಾರೋ ಏನೋ ಅನ್ನಿಸುತ್ತಿದೆ.ಇತ್ತೀಚಿಗೆ ನಿವೃತ್ತರಾಗಿರಬಹುದು ಯಕ್ಷಗಾನದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಕಲಾವಿದ, ಸಂಶೋಧಕ, ಜಾನಪದ ಸಂಶೋಧಕರು, ಕನ್ನಡವಾದಿ, ಮಹಿಳಾಪರರು ಅಪಾರ ಶಿಷ್ಯೋತ್ಸವವನ್ನು ಹೊಂದಿರುವ ನೇರ, ನಿಷ್ಠುರವಾದಿ ಇವರ ಅನುಭವಗಳನ್ನು ಓದುತ್ತಾ ಹೋದರೆ ನಾವೇ ಇದ್ದು ಅನುಭವಿಸುತ್ತಿದ್ದೇವೆನೋ ಅಂತ ಅನ್ನಿಸುವ ಮಟ್ಟಿಗೆ ಆಪ್ತತೆಯ ನಿರೂಪಣೆ ಮುನ್ನುಡಿಯಲ್ಲಿ ಅಚ್ಚುಕಟ್ಟಾಗಿ ಕನ್ನಡಿ ತೋರಿಸಿದ ದಿನೇಶ್ ಅಮಿನ್ ಮಟ್ಟುರವರು, ಒಂದು ರಾತ್ರಿಯಿಡೀ ಯಕ್ಷಗಾನ ನೋಡಿದಂತ ಅನುಭವವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. *********************************** ಶಿವರಾಜ್ ಮೋತಿ

ಕಾಗೆ ಮುಟ್ಟಿದ ನೀರು Read Post »

ಕಾವ್ಯಯಾನ

ಮಳೆಗಾಲದ ಬಿಸಿಲುಕವಿತೆ

ಕವಿತೆ ಮಳೆಗಾಲದ ಬಿಸಿಲು ಅಬ್ಳಿ,ಹೆಗಡೆ ಹಗಲ ಶಿಶು ಶಶಿಯೊಡನೆಆಟದಲಿ ಸೋತು.ಮುಗಿಲುಗಳ ಮರೆಯಲ್ಲಿಅಳುತಿಹನು ಕೂತು.ಮಗುವ ಕಾಣದ ತಾಯಿರಮಿಸಿ ತಾ ಕರೆಯೆ-ಕಣ್ಣೊರೆಸಿ ಹೊರ ಬಂದಮಗು-ನಗುವ ‘ಹೊಳೆಯೆ’. ******************************

ಮಳೆಗಾಲದ ಬಿಸಿಲುಕವಿತೆ Read Post »

ಕಾವ್ಯಯಾನ

ಬದುಕು- ಬವಣೆ

ಕವಿತೆ ಬದುಕು- ಬವಣೆ ಸಹನಾ ಪ್ರಸಾದ್ ಗಂಡ ಹೆಂಡಿರ ಸಂಬಂಧಸಂಸಾರಕ್ಕೆ ಇದೇ ಮೆರಗುಉಫ಼್ಫ಼್ ಹೇಳಲಾಗದು ಅನುಬಂಧಜತೆಗಿರುವರು ಸಾಯುವವರೆಗೂ ಆದರೆ ಇರಲೇಬೇಕಿಲ್ಲ ಪ್ರೀತಿವ್ಯಾವಹಾರಿಕವಾದರೂ ನಡೆದೀತುಇದ್ದರೆ ಸಮಾಜದ ಭೀತಿಪ್ರೀತಿಯೂ ಗಿಲೀಟು ಬತ್ತಿ ಹೋದ ಮೇಲೆ ಪ್ರೀತಿಯ ಚಿಲುಮೆಜತೆಗಿರುವುದೂ ಅನಿವಾರ್ಯವಾದಾಗಮುದುಡಿದ ಮನಸ್ಸುಗಳಿಗೆ ಎಲ್ಲಿದೆ ಒಲುಮೆಕಿತ್ತೇ ಹೋಯಿತೇನೋ ಅನಿಸುತ್ತೆ ಹೃದಯದ ಭಾಗ ನಮ್ಮ ಸಮಾಜದಲ್ಲಿ ಇಲ್ಲ ವಿಚ್ಚೇದನಒಮ್ಮೆ ಜತೆಗೂಡಿದರೆ ಮುಗಿಯಿತು ಬದುಕುಒಳ್ಳೆ ಜನ ಸಿಗದಿದ್ದರೆ ಬದುಕೇ ವೇದನಸಹಿಸಿಕೊಳ್ಳಬೇಕು ಖಾಲಿಯಾಗುವವರೆಗೂ ಸರಕು! *************************

ಬದುಕು- ಬವಣೆ Read Post »

ಇತರೆ, ಜೀವನ

ಬದಲಾದ ಕಾಲಕ್ಕೆ ಹಳ್ಳಿಯ ಬದುಕು

ಲೇಖನ ಬದಲಾದ ಕಾಲಕ್ಕೆ ಹಳ್ಳಿಯ ಬದುಕು ಸರಿತಾ ಮಧು ಹಳ್ಳಿಗಳ ದೇಶವೇ ನಮ್ಮದು. ಮೊದಲಾದರೆ ಸುಂದರ ಸ್ವರ್ಗದಂತೆ ಇದ್ದವು. ಕೂಡು ಕುಟುಂಬ, ಅದಕ್ಕೆ ಹೊಂದಿಕೊಂಡಂತೆ ಗದ್ದೆ- ತೋಟಗಳು, ರಕ್ತ ಸಂಬಂಧಗಳು ಹಾಗೂ ಮಾನವೀಯ ನೆಲೆಯಲ್ಲಿ ಒಟ್ಟಿಗೆ ಸೇರಿ ನಲಿಯುತ್ತಿದ್ದ ಸಂದರ್ಭಗಳು. ಮೂರು – ನಾಲ್ಕು ತಲೆಮಾರಿನ ಅನುಭವಗಳ ಬೆರೆತ ಸಂಸಾರ. ಮನೆಗಳಲ್ಲಿ ಆಡಂಬರವಿರಲಿಲ್ಲ ಮನಸಿನಲ್ಲಿ ಆತ್ಮೀಯತೆ ಇತ್ತು. ಅವಿಭಕ್ತ ಭಾವ ರಕ್ತಗತವಾಗಿ ಮುಂದುವರೆಯುತ್ತಿತ್ತು. ಹಣಕಾಸಿಗೆ ಅಡಚಣೆಯಿತ್ತು ಅದರ ಹೊರತು ಪರಿಶುದ್ಧವಾದ  ಬದುಕಿಗಲ್ಲ. ನಗರ ಜೀವನಕ್ಕೆ ಮನಸೋತ ಕೆಲವು ವ್ಯಕ್ತಿಗಳು ಮಾತ್ರ ಈ ವ್ಯವಸ್ಥೆಯ ವಿರೋಧಿಸಿ ಹೊರನಡೆದಿರಬಹುದು. ಶಾಲಾ ಶಿಕ್ಷಣದ ಜೊತೆ ಜೊತೆಗೆ ಹಿರಿಯರ ಮೂಲಕ ಅನೌಪಚಾರಿಕವಾಗಿ ಜೀವನ ಮೌಲ್ಯಗಳು ಒಟ್ಟುಗೂಡಿ ಮುಂದಿನ ಬದುಕಿಗೆ ಮೆರುಗು ತರುತ್ತಿದ್ದವು.ಹಳ್ಳಿಯ ಶಾಲೆಯಲ್ಲಿ ಕಲಿತ ನನ್ನನ್ನೂ ಒಳಗೊಂಡಂತೆ ಸಾವಿರಾರು ಕನಸುಗಳಿಗೆ ರೆಕ್ಕೆ ಹಚ್ಚಿದ್ದು ನಮ್ಮ ಹಳ್ಳಿಯೇ . ಇಲ್ಲಿಗೆ ಸುಮಾರು ಐವತ್ತು – ಅರವತ್ತು ವರ್ಷಗಳ ಹಿಂದಿನ ಜೀವನ ಬಹಳ ಕಠಿಣವಾಗಿತ್ತು. ಹೀಗಂತ ನನ್ನ ಅಪ್ಪ ಲೆಕ್ಕವಿಲ್ಲದಷ್ಟು ಸಲ ನಮ್ಮ ಬಳಿ ಹೇಳಿದ್ದಾರೆ. ಅವರು ವಾಸಿಸುತ್ತಿದ್ದ ಮನೆಯಲ್ಲಿ ಕನಿಷ್ಟ ಮೂವತ್ತು ಮಂದಿ ಇರುತ್ತಿದ್ದರು. ಊಟವೆಂದರೆ ಅವರಿಗೆ ಮೂಲಭೂತ ಅವಶ್ಯಕತೆ ಆಗಿತ್ತು. ಕಾರಣ ಈಗಿನಷ್ಟು  ಸುಖ ಸಮೃದ್ಧಿಯ ಭೋಜನವಿರುತ್ತಿರಲಿಲ್ಲ. ಅನ್ನದ ಊಟವೆಂದರೆ ಅದು ಹಬ್ಬ ಹರಿದಿನಗಳಿಗೆ ಮಾತ್ರವಂತೆ. ರಾತ್ರಿ ರೊಟ್ಟಿ ಊಟವಾದರೆ ಒಂದೆರಡು ರೊಟ್ಟಿಗಳನ್ನು ಪಲ್ಯದ ಸಮೇತ ಸುತ್ತಿ ಜೋಡಿಸಿಟ್ಟ  ಜೋಳದ ಚೀಲಗಳ ನಡುವೆ ಬಚ್ಚಿಡುತ್ತಿದ್ದರಂತೆ.ಅದು ರಹಸ್ಯವಾಗಿ ಬೆಳಗಿನ ತಿಂಡಿಗಾಗಿ.ಶಾಲೆಗೆ ಹೋಗುವಾಗ ತಿನ್ನುವುದಕ್ಕಾಗಿ. ಕಾರಣ ಈಗಿನಂತೆ ಮಕ್ಕಳ ಕೈತಿಂಡಿ ಇರುತ್ತಿರಲಿಲ್ಲ. ಹಾಗಾಗಿಯೇ ಅವರು ಸದೃಢ ವಾಗಿದ್ದಿರಬೇಕು. ಬಟ್ಟೆಗಳೂ ಕೂಡ ಅತಿ ಕಡಿಮೆ . ಆದರೆ ನಮ್ಮ ಈಗಿನ ಬದುಕು ವಿಭಿನ್ನವಾದ ನೆಲೆ ಕಂಡುಕೊಂಡಿದೆ. ಎಲ್ಲವೂ ಕೈಗೆಟುಕುವ ಅಂತರದಲ್ಲೇ ಇವೆ . ಸಾವೂ ಕೂಡಾ ಅಲ್ಲವೇ? ನಮ್ಮ ಹಿಂದಿನ ಹಳ್ಳಿ ಹಾಡು ಪಾಡು ಕಷ್ಟಕರ ವಾಗಿದ್ದಿರಬಹುದು. ಆದರೆ ಈಗಿನಂತೆ ಇರಲಿಲ್ಲ. ಎಲ್ಲವೂ ನಗರೀಕರಣದ   ಪ್ರಭಾವ . ಅನುಕರಿಸಿದ್ದು ತುಸು ಹೆಚ್ಚೇ ಆಯಿತಲ್ಲವೇ? ಆಧುನಿಕತೆಯ ಸೋಗಿಗೆ ಮುಗ್ಧ ಜನರು ಗುರುತೇ ಸಿಗದಷ್ಟು ಬದಲಾದರು. ಕುಟುಂಬಗಳು ಒಡೆದವು ಹಾಗೆಯೇ ಭಾವನೆಗಳೂ. ಮೊದಲೆಲ್ಲ ಬೀದಿಯಲ್ಲಿ ಜಗಳಗಳು ಸಾಮಾನ್ಯವಾಗಿ ಇದ್ದವು. ಅಲ್ಲಿಗೆ ಮಾತು ನೇರವಾಗಿ ಮುಗಿಯುತ್ತಿದ್ದವು. ಆದರೆ ಈಗ ಮುಸುಕಿನೊಳಗಿನ ಗುದ್ದಾಟ. ಮಾತುಗಳಿಲ್ಲದ ಒಳಗೊಳಗಿನ ಕಿಚ್ಚುಗಳು, ಸಲ್ಲದ ಮಾತುಗಳು. ನಿಜಕ್ಕೂ ಹಳ್ಳಿಗಳು ಬದಲಾಗಬಾರದಿತ್ತು. ಸೌಕರ್ಯಗಳಿಗೆ ಮನಸೋತ ಮಂದಿ ನೆಮ್ಮದಿಯನ್ನು ಬಲಿನೀಡಿದ್ದಾರೆ. ಹೊಲಗದ್ದೆಗಳು ಕ್ರಮೇಣ ತೋಟಗಳಾದವು. ಆಹಾರ ಬೆಳೆಗಳು ಮರೆಯಾಗಿ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡಲಾಯಿತು. ಮೊದಲಾದರೆ ವಸ್ತುಗಳ ವಿನಿಮಯದ ಮೂಲಕವೇ ಜೀವನ ನಡೆಯುತ್ತಿತ್ತು. ಮನೆಯಲ್ಲಿ ಎಲ್ಲವೂ ಚೀಲದಲ್ಲಿ , ಹಗೇವು ಅಥವಾ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದವು‌. ಆದರೆ ಈಗ ಹಳ್ಳಿಗಳಲ್ಲಿ ಭತ್ತ, ರಾಗಿ, ಜೋಳ, ಅವರೆ, ಉದ್ದು, ಕಡಲೆ ಹೀಗೆ ಬೆಳೆಗಳೇ ಇಲ್ಲ. ಮನೆಯಲ್ಲಿ ದನಕರುಗಳೂ ಇಲ್ಲ. ಸಾಕುವವರಿಲ್ಲದೇ ಎಲ್ಲವೂ ಮಾರಲ್ಪಟ್ಟವು. ಸ್ವಂತಿಕೆಯೂ ಬಿಕರಿಯಾಯಿತು ಈ ನಡುವೆ. ಎತ್ತುಗಳಿಲ್ಲದ ಜಾಗಕ್ಕೆ ಟ್ರ್ಯಾಕ್ಟರ್ಗಳು, ಎತ್ತಿನ ಬಂಡಿಯ ಜಾಗಕ್ಕೆ ಕಾರುಗಳು ಮನೆಯನ್ನು ಸೇರಿದವು. ಎಲ್ಲವೂ ಬಹಳ ಬೇಗ ಬದಲಾಗಿ ಬಿಟ್ಟಿತು. ಜೀವನ ಶೈಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಕರೆದೊಯ್ದಿತು. ಬಣ್ಣ ಬಣ್ಣದ ಬಟ್ಟೆಗಳಂತೆ ಹೊದಿಕೆ ಮಾತ್ರ ಬದಲಾಗಲಿಲ್ಲ ಮನುಷ್ಯನೇ ಬದಲಾವಣೆಗೆ ಒಳಪಟ್ಟನು. ಕಾರಣ ಬದಲಾವಣೆ ಜಗದ ನಿಯಮ , ಏನಂತೀರಿ? ಆಹಾರ – ವಿಹಾರ , ಉಡುಗೆ- ತೊಡುಗೆ, ಮನೆ- ಸಂಸಾರ ಎಲ್ಲವೂ ಸಾರ್ವಜನಿಕವಾಗಿ ಪ್ರದರ್ಶನಗೊಂಡವು. ನಾಲ್ಕು ಗೋಡೆಗಳ ನಡುವಣ ಬದುಕು ನಾಲ್ಕು ದಿಕ್ಕುಗಳಲ್ಲಿ ಪ್ರಸಾರವಾಗಿದ್ದು ನಮ್ಮ ಸಾಧನೆಯೇ? ಹಳ್ಳಿಗಳಾದ್ರೂ ಮೊದಲಿನಂತೆ ಇರಬೇಕಿತ್ತು ಅಂತ ನನಗೆ ತುಂಬಾ ಸಲ ಅನಿಸಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಅಮ್ಮನ ಅಡುಗೆಯ ವಿಷಯದಲ್ಲಿ ನಾನೂ ತುಂಬಾ ಮಿಸ್ ಮಾಡಿಕೊಳ್ಳಲು ಕಾರಣ ಇದೆ. ಅಮ್ಮ ಒಲೆಯಲ್ಲಿ ಅಡುಗೆ  ಮಾಡುತ್ತಿದ್ದ ದಿನಗಳವು. ಎಷ್ಟು ರುಚಿಯಾಗಿರುತ್ತಿತ್ತು ಅಂದರೆ ಈಗಲೂ ಬಾಯಿಯಲ್ಲಿ ನೀರೂರುತ್ತದೆ.ನಮ್ಮ ಮನೆಗೆ ಸದಾ ಬರುತ್ತಿದ್ದ ನನ್ನ ಅಪ್ಪನ ಸೋದರಮಾವ ಕೇವಲ ಸಾಂಬಾರನ್ನೇ ಸೊರ್ ಎಂದು ಕುಡಿದುಬಿಡುತ್ತಿದ್ದರು. ಇದಲ್ಲವೇ ಹಳ್ಳಿಯ ಊಟದ ಗಮ್ಮತ್ತು‌. ಈಗೆಲ್ಲಿದೆ ನಮಗೆ ಒಲೆ ಹಚ್ಚಿ ಅಡುಗೆ ಮಾಡುವ ಸಮಯ ಗ್ಯಾಸ್ ಮೇಲೆ ಕುಕ್ಕರ್ ಸೀಟಿ ಒಡೆಸಿ , ರುಬ್ಬುವ ಯಂತ್ರದಲ್ಲಿ ನುಣ್ಣಗೆ ಮಾಡಿ  ಜಠರಕ್ಕೆ ಕೆಲಸವನ್ನು ನೀಡದೇ ಬೊಜ್ಜು ಬರಿಸಿಕೊಂಡಿದ್ದು. ಬರೆಯುತ್ತಾ ಹೋದರೆ ಹಳ್ಳಿಯ ಜೀವನದ ಸೊಗಸಿಗೆ ಪದಗಳೇ ಕಡಿಮೆ. ನನಗಂತೂ ಹೀಗೆ ಹಲವಾರು ಬಾರಿ ಅನಿಸಿದ್ದು ಹೋದವರೆಲ್ಲ ಪುಣ್ಯಮಾಡಿದ್ದಿರಬೇಕು. ಸಂಪೂರ್ಣ ಜೀವನವನ್ನು ಅನುಭವಿಸಿದ್ದಾರೆ‌. ಮೊದಲ ಹಳ್ಳಿಯ ಬದುಕು ಮತ್ತೊಮ್ಮೆ ಬಾರದೇ? ******************************

ಬದಲಾದ ಕಾಲಕ್ಕೆ ಹಳ್ಳಿಯ ಬದುಕು Read Post »

ಕಾವ್ಯಯಾನ

ರಚ್ಚೆ ಹಿಡಿದ ಮನ

ಕವಿತೆ ರಚ್ಚೆ ಹಿಡಿದ ಮನ ಸ್ವಭಾವ ಕೋಳಗುಂದ ಮಳೆ ನಿಂತ ನೆಲದಲ್ಲಿನಡೆಯುತ್ತಲೇ ಇದ್ದಳುಗುರುತು ಮಾಡಿ ಗುರಿಯೆಡೆಗೆ ಹಸಿಟ್ಟಿಗೆ ಬಿಸಿ ನೀರು ಸುರುವಿತಟ್ಟಿ ಬೆಳರ ಚಿತ್ರದ ಹಚ್ಚೆಬೆಂದ ರೊಟ್ಟಿ ಹಸಿದ ಹೊಟ್ಟಗೆ ಹರಗಿದ ಹೊಲಕ್ಕೆ ಬೀಜ ಬಿತ್ತಿನೀರು ಹಾಯಿಸಿ ಕಳೆ ಕಿತ್ತುಕೊಯ್ಲಿಗೆ ಕಾದು ರಾಶಿ ಪೈರಾಗಿಸಿದ್ದ ರಚ್ಚೆ ಹಿಡಿದ ಕೂಸುನೆಟಿಗೆ ತೆಗೆದು ನೀವಾಳಿಸಿರಂಚು ಬೂದಿಯ ತಿಲಕದ ಕೈಚಳಕ ಗುಡಿಯ ಗಂಟೆಯ ನಾದಕ್ಕೆತಲೆದೂಗಿದ ಎಳೆ ಜೋಳದ ತೆನೆನೊರೆ ಉಕ್ಕಿ ಕೆಚ್ಚಲ ತಂಬಿಗೆ ಸೋರಿತ್ತು ಕೊಟ್ಟಗೆಯ ಕರು ಚಂಗನೆ ಎಗರಿಅಂಗಳದ ರಂಗೋಲಿ ಗೋಮಮಯಅಜ್ಜಿಗೆ ಕೈಲಾಸ ತೀರ್ಥ ಕೋಲು ಕನ್ನಡಕದ ಅಜ್ಜಊರುರು ಅಲೆದು ಊರು ಕಟ್ಟಿದಮೊಮ್ಮೊಗನು ಮನೆಯೊಡೆದತಲೆ ಬಾಗಿಲು ಸೀಳಿ *****

ರಚ್ಚೆ ಹಿಡಿದ ಮನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಸ್ಮಿತಾ ಭಟ್ ಒಲವಿನ ನಿರೀಕ್ಷೆಯ ಬದುಕ ಮುಗಿಸಿದ್ದೇನೆನಲಿವಿನ ದೀಪದೆದುರು ಕಣ್ಮುಚ್ಚಿ ಕುಳಿತಿದ್ದೇನೆ/ ಯಾರಿಗೆ ಯಾರೂ ಆಸರೆಯಲ್ಲ ಇಲ್ಲಿಸೆರೆಯಾದ ಉಸಿರಿನ ಕೀಲಿ ತೆಗೆದಿದ್ದೇನೆ / ಕ್ಷಮಿಸು ಕಣ್ಣತೇವಕ್ಕೆ ನನ್ನ ಹೊಣೆ ಮಾಡದಿರುಕರವಸ್ತ್ರ ಇರಿಸಿಕೊಳ್ಳುವ ರೂಢಿ ಮರೆತಿದ್ದೇನೆ/ ಮೊಗಕೆ ಒಳಗುದಿಯ ತೋರುವ ಇರಾದೆ ಇಲ್ಲಬರಿದೇ ತರತರದ ಮಾತಾಗಿ ನಗುತ್ತಿದ್ದೇನೆ/ ಬಲಹೀನ ಮನಸು ಏನೂ ಸಾಧಿಸದು ಮಾಧವಾಭವಿತವ್ಯದ ಬಾಗಿಲಿಗೆ ತೋರಣವ ಕಟ್ಟಿದ್ದೇನೆ/ *********************************

ಗಝಲ್ Read Post »

You cannot copy content of this page

Scroll to Top