ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬದುಕಲಿ ಅವಳು

ಕವಿತೆ ಬದುಕಲಿ ಅವಳು ತಿಲಕ ನಾಗರಾಜ್ ಬಿಟ್ಟು ಬಿಡಿ ಅವಳನುಅವಳ ಪಾಡಿಗೆಬದುಕಲಿ ಅವಳು…. ನಿಮ್ಮ ನಿರ್ಧಾರಗಳೇಸುಟ್ಟಿರುವಾಗಅವಳ ಬದುಕಅಳಿದುಳಿದವುಗಳನೇಜೋಡಿಸಿ ಮುನ್ನಡೆಯಲಿ ಬಿಡಿ ಕಣ್ಮುಂದೆ ಕುಣಿದುಅಣಕಿಸುತಿರುವಾಗ ಅವಳುಕಂಡ ಕನಸುಗಳುಈಡೇರದ ಆಸೆಗಳು ಚಾಟಿಯೇಟಿನಂತೆ ಮೈಮನದ ತುಂಬೆಲ್ಲಾ ನೋವಬರೆಗಳ ಎಳೆಯುತಿರಲುಕೆನ್ನೆಯ ತುಂಬೆಲ್ಲಾ..ಕಂಬನಿಯ ಬಿಂದುಗಳು ಬಿಟ್ಟುಬಿಡಿ ಅವಳನುಅವಳ ಪಾಡಿಗೆಆಗಲೇ ದಾಟಿತಲ್ಲ ಮೂವತ್ತು ಎಲ್ಲದಕೂ ಆಕ್ಷೇಪಿಸುವ ನೀವುಗಳುಕೊಟ್ಟಿರೇ ಒಂದೊಳ್ಳೆ ಬದುಕನು?ಇನ್ನಾದರೂ ಬಿಟ್ಟು ಬಿಡಿ ಅವಳನುನಿಮ್ಮ ಬಂಧನದ ಕಟ್ಟಳೆಗಳಿಂದ ಕಟ್ಟಿಕೊಳ್ಳಲಿ ಒಂದೊಳ್ಳೆ ಬದುಕನು ***********************************

ಬದುಕಲಿ ಅವಳು Read Post »

ಕಾವ್ಯಯಾನ

ಬದಲಾಗುವ ಸತ್ಯ

ಕವಿತೆ ಬದಲಾಗುವ ಸತ್ಯ ನೂತನ ದೋಶೆಟ್ಟಿ ನಿನ್ನೆಗಳ ಬಾನಲ್ಲಿ ನಿನ್ನ ನಗುವಿನ ನಕ್ಷತ್ರ‘ ಶೂಟಿಂಗ್ ಸ್ಟಾರ್ ‘ ಎಂದ ಗೆಳತಿಯ ಪುಳಕಮರೆತ ಜಿಜ್ಞಾಸೆಎದುರಲ್ಲಿ ನಿನ್ನ ಗುರಿಗಳು ಅವಳ ಪಿಟಿಪಿಟಿಸುವ ಬಾಯಲ್ಲಿಅವಸರದ ಬೇಡಿಕೆಗಳುನನ್ನ ಮುಚ್ಚಿದ ಕಂಗಳಲ್ಲಿನಿನ್ನ ಕನಸುಗಳ ಹಾರೈಕೆನಿನ್ನೆಯವರೆಗೆ ಇದೆಲ್ಲ ಸತ್ಯ ಇಂದುನೀನು, ನಕ್ಷತ್ರ , ಕನಸು ನನ್ನ ಮುಖದಲೊಂದು ಮುಗುಳ್ನಗೆತುಟಿಯಂಚಿನ ಅಚ್ಚರಿಗಲ್ಲದಲ್ಲೂರಿ ಕುಳಿತ ವಾಸ್ತವಶೂಟಿಂಗ್ ಸ್ಟಾರಿನತ್ತ ಹರಿದು ನೋಟನಾಳಿನ ಸತ್ಯಕ್ಕೆ ಸಿದ್ಧವಾಗಿತ್ತು. **********************

ಬದಲಾಗುವ ಸತ್ಯ Read Post »

ನಿಮ್ಮೊಂದಿಗೆ

ಮಾತಿನಲ್ಲಿಯೇ ಇದೆ ಎಲ್ಲವೂ…

ಲೇಖನ ಮಾತಿನಲ್ಲಿಯೇ ಇದೆ ಎಲ್ಲವೂ… ಪೂಜಾ ನಾಯಕ್ ನುಡಿದರೆ ಮುತ್ತಿನ ಹಾರದಂತಿರಬೇಕು| ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು| ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು| ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು| ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯ ? ಇತ್ತೀಚಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಮ್ಮೆಲೇ ಹಿಂದೆ ಪ್ರೌಢಶಾಲೆಯಲ್ಲಿ ಓದಿದ ಬಸವಣ್ಣನವರ ವಚನದ ಈ ಸಾಲುಗಳು ಥಟ್ಟನೆ ನೆನಪಾಯಿತು. ನೆನಪಾಗುವುದರ ಹಿಂದೆ ಒಂದು ಘಟನೆಯಿದೆ.              ಅಂದು ಐದರ ಇಳಿ ಸಂಜೆಯ ಹೊತ್ತು. ನಾನು ಮತ್ತು ನನ್ನ ಗೆಳತಿ, ರಸಾಯನಶಾಸ್ತ್ರ ವಿಷಯದ ಪ್ರಾಯೋಗಿಕ ತರಗತಿಗಳನೆಲ್ಲ ಮುಗಿಸಿ, ನಮ್ಮ ಕಾಲೇಜಿನಿಂದ ತುಸುದೂರ ಇರುವ ಬಸ್ಸ್ಟಾಂಡಿಗೆ ನಡೆದು ಬಂದು, ಬಸ್ ಹತ್ತಿ , ಆವತ್ತಿನ ಕಾಲೇಜಿನ ದಿನಚರಿಯನ್ನು ಮೆಲುಕು ಹಾಕುತ್ತಾ ಕುಳಿತಿದ್ದೆವು. ಇನ್ನೇನು, ಬಸ್ ಹೊರಡಲು ಕೆಲವೇ ಕೆಲವು ನಿಮಿಷಗಳು ಬಾಕಿ ಇದೆ ಎನ್ನುವಾಗ, ಬಿಳಿ ಬಣ್ಣದ ಉಡುಪು ತೊಟ್ಟ, ಬೆಳ್ಳನೆಯ ಕೂದಲು, ಸುಕ್ಕುಗಟ್ಟಿದ ಮೈ (ಚರ್ಮ), ಚಪ್ಪಲಿ ರಹಿತ ಪಾದಗಳು, ಒಂದು ಕೈಯಲ್ಲಿ ಊರುಗೋಲು, ಇನ್ನೊಂದು ಕೈಯಲ್ಲಿ ಚೀಲ ಹಿಡಿದು ಒಬ್ಬ ಮುದುಕರು ಇತ್ತ ನಾವು ಕುಳಿತ ಬಸ್ಸಿನೆಡೆಗೆ ನಡೆದು ಬರುತ್ತಿದ್ದಾರೆ. ಆ ಮುದುಕರ ಸಣಕಲು ಜೀವವೇ ಸಾರಿ – ಸಾರಿ ಹೇಳುವಂತಿತ್ತು, “ಇವರು ಜೋರಾಗಿ ಗಾಳಿ ಬಂದರೆ ತೂರಿ ಹೋಗುವರು” ಎಂದು. ಅವರನ್ನು ನೋಡಿದ ಯಾರಿಗಾದರೂ ಸರಿಯೇ, ಒಂದು ಕ್ಷಣ ಹಾಗೆ ಅನಿಸದೇ ಇರಲಿಕ್ಕಿಲ್ಲ.ಅವರಿಗಾಗಲೇ ಬಹಳ ವಯಸ್ಸಾಗಿದ್ದಿರಬೇಕು. ಅವರು ನಡೆಯಬೇಕಾದರೆ ಯಾರಾದರೂ ಕೈ ಹಿಡಿದುಕೊಳ್ಳಬೇಕಿತ್ತು ಇಲ್ಲವೇ ಊರುಗೋಲು, ಎರಡರಲ್ಲಿ ಒಂದು ಬೇಕೇ ಬೇಕು . ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಕಿವಿಯೂ ಅಷ್ಟಕ್ಕಷ್ಟೇ. ಸುಮಾರು ನನ್ನ ಪ್ರಕಾರ ಎಂಭತ್ತರ ಮುದಿ ಜೀವದ ಅವರು ಹೇಗೋ ಅಲ್ಲಿ ಇಲ್ಲಿ ಹಿಡಿದುಕೊಂಡು ಹರಸಾಹಸಮಾಡಿ ಬಸ್ ಹತ್ತಿದವರೆ, ಮುಂಭಾಗದಲ್ಲಿನ ಖಾಲಿ ಸೀಟ್(ಆಸನ) ನಲ್ಲಿ ಚೀಲವನ್ನಿರಿಸಿಕೊಂಡು ಕುಳಿತುಕೊಂಡರು. ಇವರು ಈ ವಯಸ್ಸಿನಲ್ಲಿ, ಎಲ್ಲಿಗೆ ಹೋಗುತ್ತಿದ್ದಾರಪ್ಪಾ ಎಂದು ನನಗೆ ಅಚ್ಚರಿಯಾಯಿತು. ಆ ಮುದುಕರು ಕುಳಿತುಕೊಂಡ  ಎರಡೇ ಎರಡು ನಿಮಿಷಕ್ಕೆ, ಬಸ್ಸಿನ ಹಿಂಬಾಗಿಲಿನ ಕಡೆಯಿಂದ ಮಹಿಳಾ ನಿರ್ವಾಹಕಿ (ಕಂಡೆಕ್ಟರ್) ಟಿಕೆಟ್ ಟಿಕೆಟ್ ಎನ್ನುತ್ತಾ ಬರಹತ್ತಿದಳು. ಟಿಕೆಟು ಕೊಡುತ್ತಾ ಬರುತ್ತಿದ್ದ ಅವಳ ಕಣ್ಣ ದೃಷ್ಟಿ ಎಲ್ಲಿಯೂ ವಕ್ರೀಭವನವಾಗದೆ ನೇರವಾಗಿ ಮುಂಭಾಗದ ಆಸನದಲ್ಲಿ ಕುಳಿತಿರುವ ಈ ಮುದುಕರ ಮೇಲೆ ಬಿತ್ತು. ಅವಳ ದೃಷ್ಟಿ ಬೇರೆಲ್ಲಿಯೂ ಬೀಳದೆ ಮುಖ್ಯವಾಗಿ ಇವರ ಮೇಲೆಯೇ ಬೀಳಲು ಕಾರಣ, ಮುದುಕರು ಮಹಿಳಾ ಸೀಟ್ನಲ್ಲಿ ಕುಳಿತಿದ್ದಾರೆ!…. ಅವರನ್ನು ನೋಡಿದ್ದೆ ತಡ, ದರ-ದರನೆ ಬಿರುಗಾಳಿಯಂತೆ ಅವರತ್ತ  ಬಂದವಳೆ ಹೇಳಿದಳು….. ” ಏನಾಯ್ಯಾ, ಕಣ್ ಕಾಣ್ಸಂಗಿಲ್ಲೆನ್ ನಿನಗೆ? ಹಿಂದಕ್ಕ್ ಹೋಗ್ ಕುಂಡ್ರು” ಎಂದು. ಅಬ್ಬಾ! ವಯಸ್ಸಿನಲ್ಲಿ ಅಷ್ಟು ಹಿರಿಯರಾದವರಿಗೆ ಈ ರೀತಿಯಾದ ಸಂಭೋದನೆಯೇ? ನಾನು ಮತ್ತು ನನ್ನ ಗೆಳತಿ ನಾಗಶ್ರೀ, ಆಕೆಯಾಡಿದ ಒಂದು ಮಾತಿಗೆ ಬೆಚ್ಚಿ ಬೆರಗಾಗಿ ಹೋದೆವು. ಈಕೆಯಾಡಿದ ಮಾತಿನಿಂದಾಗಿ ಆ ಮುದುಕರಿಗೆ ಅತೀವ ದುಃಖವೂ ಹಾಗೆಯೇ ಸ್ವಲ್ಪ ಮಟ್ಟಿಗೆ ಅವರ ಮೂಖದಲ್ಲಿ  ಭಯ ಆವರಿಸಿದಂತೆ ನನಗೆ ಕಂಡವು. ಆದರೆ ಅವರಿಗೆ ಈ ಮಹಿಳಾ ಕಂಡೆಕ್ಟರ್ ತನ್ನನ್ನು ಈ ರೀತಿ ಗದರಿಸಿಕೊಂಡು ಮಾತನಾಡಿದ್ದು ಯಾಕೆ ಎಂದು ತಿಳಿಯುವ ಕುತೂಹಲ  ಉಂಟಾಗಿ ಕೇಳಿದರು, “ತಾಯಿ, ನಿನ್ನ ಮಾತು ನನಗೆ ಆಶ್ಚರ್ಯ ತಂದಿದೆ. ಯಾಕೆಂದರೆ ನಾನೇನು ಅಂತಹ ತಪ್ಪು ಮಾಡಿದೆ? ಈ ರೀತಿ ಗುಡುಗುತ್ತಿರುವೆಯಲ್ಲ ಏನು ಕಾರಣ?” ಎಂದು. ಅದಕ್ಕೆ ಆಕೆ, ” ಮ್ಯಾಗ್ ಏನ್ ಬರ್ದಾರ್ ಅಂದ್ ನೋಡಿಯೇನ? ಮಹಿಳಾ ಸೀಟ್ನಲ್ಲಿ ಯಾಕ್ ಕುಂತಿ? ಎದ್ದು ಹಿಂದ್ ನಡಿ ” ಎಂದಳು. ಆಗ ಮುದುಕರು ಹೇಳಿದರು, ” ನಾನು ಮೇಲೆ ಬರೆದಿರುವುದನ್ನು ನೋಡಿಲ್ಲ ಹಾಗೆಯೇ ನಾನು ಓದಲು ತಿಳಿದವನಲ್ಲ ತಾಯಿ ” ಎಂದು ಮೆಲ್ಲಗೆ ನುಡಿದರು. ಅದಕ್ಕೆ ಆಕೆ, “ಈಗ ನಾನು ಓದಿ ಹೇಳಿದ್ನಲ್ಲ, ಎದ್ದೋಗು”. ಎಂದಳು. ಆಗ ಅವರು, ಸಣ್ಣ ಧ್ವನಿಯಲ್ಲಿ ಹೇಳಿದರು “ಅಮ್ಮಾ, ನನಗೆ ಬೆನ್ನಿನ ಆಪರೇಷನ್ ಆಗಿದೆ. ಹಿಂದೆ ಕುಳಿತರೆ ಬಸ್ ಬ್ರೇಕ್ ಹಾಕಿದಾಗ, ಜಂಪ್ ಆದಾಗ ತೊಂದರೆ ಆಗುತ್ತೆ. ಹಾಗಾಗಿ ಮುಂಭಾಗದಲ್ಲಿ ನಾನು ಕುಳಿತಿರುವೆ” ಎಂದು. ಆ ವೃದ್ಧರು ಹೇಳುವ ರೀತಿ, ಅವರ ಸ್ಥಿತಿ ನೋಡಿದರೆ ಅಳು ಒತ್ತರಿಸಿ ಬರದ ಜನರಿರಲು ಸಾಧ್ಯವೇ ಇಲ್ಲ. ಆದರೂ ಆಕೆ ನಿಷ್ಕರುಣಿಯಂತೆ ನುಡಿದಳು, “ಹೋಗಯ್ಯಾ, ಏನಾದ್ರು ಒಂದು ಕಾರಣ ಕೊಟ್ ಬುಟ್ರೆ ನಾನು ಸುಮ್ಕೆ ಬುಟ್ ಬುಡ್ತಿನಿ ಅಂದ್ಕೊಂಡಿದ್ಯಾ? ನಿನ್ ಅಂತವರ್ನ ಎಷ್ಟ್  ಜನರ್ ನೋಡಿಲ್ಲ, ಎದ್ದೋಗ್-ಎದ್ದೋಗ್. ನಿನ್ನ ಪುರಾಣ ಎಲ್ಲ ಕಡೆಗೆ. ನೀನ್ ಹಿಂದ್ ಬಂದು ಕುಳ್ಳೋವರೆಗೆ ನಾನ್ ಟಿಕೆಟ್ ಕೊಡಂಗಿಲ್ಲ” ಎಂದು ತ್ರಿವಿಕ್ರಮನಂತೆ ಛಲತೊಟ್ಟು, ಆತನನ್ನು ಹೇಗಾದರೂ ಮಾಡಿ ಹಿಂದೆ ಕುಳ್ಳಿಸಿಯೇ ತೀರುವೆ ಎಂದು ಪಟ್ಟು ಹಿಡಿದು ಅಲ್ಲಿಯೇ ಕಂಬ ಹಿಡಿದು ನಿಂತೇ ಬಿಟ್ಟಳು. ಆ ಮುದುಕರು,” ಈಕೆಯ ಬಳಿ ವಾದ ಮಾಡಿ ಕಂಠ ಶೋಷಣೆ ಮಾಡಿಕೊಳ್ಳುವುದಕ್ಕಿಂತ ಸುಮ್ಮನಾಗುವುದೇ ಲೇಸು” ಎಂದು ತಮ್ಮ ಪಾಡಿಗೆ ತಾವು ಕುಳಿತುಕೊಂಡರು. ಈಕೆಗೆ ಸಮಾಧಾನವೇ ಆಗಲಿಲ್ಲ ಯಾಕೆಂದರೆ ಅವರು ಇವಳ ಮಾತಿಗೆ ಸ್ಪಂದಿಸದೆ ಮೌನದ ಮೊರೆ ಹೋಗಿದ್ದಾರೆ ಎಂದು . ಮಹಾಭಾರತದಲ್ಲಿ, ದ್ರೌಪದಿಯು ಕೀಚಕನ ಉಪಟಳವನ್ನು ತಾಳಲಾರದೇ ತನ್ನ ಕಷ್ಟವನ್ನು, ತನಗೆ ಆದ ಅವಮಾನವನ್ನು ಹೇಳಿಕೊಳ್ಳಲು ಭೀಮನಲ್ಲಿ ಬಂದಾಗ ಆತ ಏನೂ ಮಾತನಾಡದೆ ಕೆಲಕಾಲ ಸುಮ್ಮನಿದ್ದ. ಆಗ ಆತನನ್ನು ಹೇಗೆ ಮೂದಲಿಸಿ ಮಾತಿಗೆ ಸ್ಪಂದಿಸುವಂತೆ ಮಾಡಿದ್ದಳೋ, ಇವಳು ಹಾಗೆಯೇ ಮುದುಕರನ್ನು ಕೆಣಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಸಿಟ್ಟನ್ನು ಬಡಿದೆಬ್ಬಿಸಿ ಮಾತಿಗೆ ಅಣಿಗೊಳಿಸಿದಳು. ಅವರಿಬ್ಬರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು. ಚಿತ್ರವಿಚಿತ್ರ ವಾದಗಳನ್ನು ಮಾಡಿ, ಬಸ್ಸಿನಲ್ಲಿ ದೊಡ್ಡ ಗಲಾಟೆ ಎಬ್ಬಿಸಿಬಿಟ್ಟಳು ನಿರ್ವಾಹಕಿ. ಇದನ್ನು ಕಂಡು ಗಾಬರಿಗೊಂಡ ಉಳಿದ ಕೆಲ ಬಸ್ ಸಿಬ್ಬಂದಿಗಳು, ಕೆಲ ಪ್ರಯಾಣಿಕರು, ಜಗಳವನ್ನು ನಿಲ್ಲಿಸಲು ಮುಂದೆ ಬಂದರು. ಆತನಿಗೆ ಹಿಂದೆ ಹೋಗಿ ಕುಳಿತುಕೊ ಎಂದರೆ ಹೋಗುತ್ತಿಲ್ಲ. ಹಾಗೆಯೇ ನನಗೆ, ಬಾಯಿಗೆ ಬಂದ ಹಾಗೆ ಹೇಳುತ್ತಿದ್ದಾನೆ ಎಂದು ಮೊಂಡುವಾದವನ್ನು ಮಂಡಿಸಿ, ಆ ವೃದ್ಧರ ಮಾತುಗಳನ್ನೆಲ್ಲಾ ತಿರುಚಿ – ತಿರುಚಿ ಅವರಿಗೆ ಒಪ್ಪಿಸಿದಳು. ನಾನೇನು ಹೇಳಿಲ್ಲ ಸ್ವಾಮಿ ಆಕೆಗೆ. ನನ್ನ ಪರಿಸ್ಥಿತಿಯನ್ನು ಹೇಳಿದರೂ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಳು. ಹಿರಿಯರಲ್ಲಿ ಹೇಗೆ ಮಾತನಾಡಬೇಕೆಂಬ ಕನಿಷ್ಠ ಸೌಜನ್ಯತೆಯನ್ನು ಆಕೆ ಹೊಂದಿಲ್ಲ. ಇಲ್ಲಿ ಕುಳಿತ ಯಾರಿಗಾದರೂ ಕೇಳಿ ಸ್ವಾಮಿ ಬೇಕಾದರೆ ಆಕೆ ಎಷ್ಟು ಕೆಟ್ಟ- ಕೆಟ್ಟ ಮಾತನಾಡಿದ್ದಾಳೆ ನನಗೆ ಎಂದು ಮುದುಕರು ಗೋಗರೆದರು. ಅವರೆಲ್ಲ ಅವಳದೇ ತಪ್ಪಿದೆ ಎಂದು ತಿಳಿದಿದ್ದರೂ, ಅವಳ ಪರ ವಹಿಸಿ ಮಾತನಾಡಿದರು. ಅದ್ಯಾಕೆ ಅವಳ ಪರ ವಾದ ಮಾಡಿದರೋ ಏನೋ ನನಗೆ ಗೊತ್ತಿಲ್ಲ. ಅವಳು ಮಾತನಾಡುವ ಪರಿ ನೋಡಿ ಅವರಿಗೂ ಹೆದರಿಕೆ ಹುಟ್ಟಿತೋ ಏನೋ ಅಥವಾ ಈಕೆ ಬಸ್ಸಿನಲ್ಲಿ ದೊಡ್ಡ ರಂಪಾಟ ಮಾಡುವಳೆಂದು, ಇವಳದ್ದೆ ಸರಿ ಎಂದು ವಾದಿಸುವುದು ಒಳಿತು ಎಂದು ಹಾಗೆ ಮಾಡಿದರೋ ಏನೋ. ಆ ವೃದ್ಧರಿಗೆ, ನಿಮ್ಮದು ಪೂರ್ತಿ ತಪ್ಪಿದೆ ಸುಮ್ಮನಿರು ಎಂದು ಬಾಯಿ ಮುಚ್ಚಿಸಿ, ಅಷ್ಟೂ ಜನ ಸೇರಿ ಹಿಂದೆ ಹೋಗಿ ಕುಳಿತುಕೊಳ್ಳಲು ಆದೇಶ ಮಾಡಿದರು. ಅದಕ್ಕೆ ಮುದುಕರು ಹೇಳಿದರು “ಸೌಜನ್ಯದಿಂದ ಒಂದೇ ಬಾರಿ ಹೇಳಿದರೆ ಸಾಕಾಗಿತ್ತು, ನೂರು ಬಾರಿ ಈ ರೀತಿ ಹೇಳುವುದಕ್ಕಿಂತ. ನನ್ನ ಕಷ್ಟ ಏನೇ ಇದ್ದರೂ ಸಹಿಸಿಕೊಂಡು ಹಿಂದೆ ಹೋಗಿ ಕುಳಿತುಕೊಳ್ಳುತ್ತಿದ್ದೆ. ಆದರೆ ಈಕೆ ನನ್ನ ಮೇಲೆ ಇಷ್ಟು ಆರೋಪ ಮಾಡಿ, ಹಿರಿಯರ ಬಳಿ ಯಾವ ರೀತಿ ಮಾತನಾಡುವುದು ಎಂಬ ಕನಿಷ್ಠ ಜ್ಞಾನವೂ ಇಲ್ಲದೇ ಅಜ್ಞಾನಿಯಂತೆ ವರ್ತಿಸಿದ್ದಾಳೆ. ನೀವೆಲ್ಲರೂ ಸುಳ್ಳಿನ ಪರವಾಗಿ ಮಾತನಾಡಿದಿರಿ. ಇರಲಿ ಬಿಡಿ ನಾನೇ ಹಿಂದೆ ಹೋಗಿ ಕುಳಿತುಕೊಳ್ಳುವೆ ಎಂದು ಅತ್ತ ಕಡೆ ಸಾಗುತ್ತಾ ಒಳಗೊಳಗೆ ಹೀಗೆ ಗೊಣಗಿದರು “ಛೇ, ಸತ್ಯವೆಂಬುದು ನನ್ನನ್ನು ಸಂಕಷ್ಟದಿಂದ ಪಾರುಮಾಡಲು ಶಕ್ತವಾಗಲಿಲ್ಲ. ಸತ್ಯವೆಂಬುದು ನಿರರ್ಥಕ”. ನೊಂದ ಮುದುಕರ ಬಾಯಿಂದ ಎಂಥ ಮಾತು ಬರುತ್ತದೆ ನೋಡಿ. ಇದು ಇಂದಿಗೂ ಅನೇಕ ಸಭ್ಯ , ಸಾತ್ವಿಕ ಜನರ ಮಾತೂ ಹೌದು. ಪ್ರಾಮಾಣಿಕವಾಗಿ ಬದುಕಿದ ವ್ಯಕ್ತಿಗೆ ಅನ್ಯಾಯವಾದಾಗ ಅವರು ಹೇಳುವ ಮಾತೂ ಇದೇ ಅಲ್ಲವೇ? ” ಸತ್ಯವೆಂಬುದು ನಿರರ್ಥಕವಾದದ್ದು”. ನಮಗೂ ಒಮ್ಮೊಮ್ಮೆ ಹೀಗೆ ಅನಿಸುತ್ತದಲ್ಲವೇ?ಈ ಮಾತುಗಳಲ್ಲಿ ಎಷ್ಟೊಂದು ಹತಾಶೆ, ಉದ್ವೇಗ ತುಂಬಿದೆ! ಮನಸ್ಸು ವಿಹ್ವಲವಾದಾಗ, ನೋವಿನಲ್ಲಿ ಬೆಂದುಹೋದಾಗ ಇಂಥ ಮಾತು ಬರುತ್ತವೆ. ಶಕ್ತಿಯಿಲ್ಲದಿದ್ದರೂ ಕೇವಲ ಹಣದ ಬೆಂಬಲದಿಂದ,  ಸುಳ್ಳಿನ ಘರ್ಜನೆಯಿಂದ, ಅಹಂಕಾರದಿಂದ ಮೆರೆಯುವವರನ್ನು ಕಂಡಾಗ, ಅಧರ್ಮದ ಮಾರ್ಗದ ಮೂಲಕ ಗೆಲುವನ್ನು, ಅಧಿಕಾರವನ್ನು, ಅದರ ಮೂಲಕ ಜನಮನ್ನಣೆಯನ್ನು ಪಡೆದವರನ್ನು ನೋಡಿದಾಗ ಸತ್ಯಕ್ಕೆ ಬೆಲೆಯೇ ಇಲ್ಲ ಎನ್ನಿಸಿ ಬಿಡುತ್ತದೆ. ಆದರೆ ಅದು ಸರಿ ಅಲ್ಲ. ಸುಳ್ಳು, ದೀಪಾವಳಿಯಲ್ಲಿ ಪುಟ್ಟ ಮಕ್ಕಳು ಹಚ್ಚುವ ಸುರ್-ಸುರ್ ಕಡ್ಡಿ (ನಕ್ಷತ್ರ ಕಡ್ಡಿ) ಇದ್ದ ಹಾಗೆ. ಅದು ನಾನಾ ರೀತಿಯ ಬಣ್ಣದ ಕಿರಣಗಳನ್ನು ಹೊರ ಸೂಸಿ ಕಣ್ಣು ಕುಕ್ಕಿಸುವಾಗ ತುಂಬಾ ಮನಮೋಹಕವಾಗಿ ಕಾಣಿಸುತ್ತದೆ. ಆದರೆ ಅದು ಕಣ್ಣು ರೆಪ್ಪೆ ಮಿಟುಕಿಸುವುದರ ಒಳಗಾಗಿ ಮಾಯವಾಗುತ್ತದೆ. ಕಡೆಗೆ ಮತ್ತದೇ ಅಂಧಕಾರ. ಸತ್ಯ, ದೇವರ ಮುಂದೆ ಹಚ್ಚಿದ ನಂದಾದೀಪವಿದ್ದಂತೆ. ಅದು ಕಣ್ಣು ಕುಕ್ಕಿಸುವುದಿಲ್ಲ, ಆದರೆ ಬಹಳ ಕಾಲ ಜೀವಿಸುವಂಥದ್ದು, ನೆಮ್ಮದಿ ನೀಡುವಂಥದ್ದು. ಹಾಗೆಯೇ ಇನ್ನೊಂದು ಬಹು ಮುಖ್ಯವಾದುದೆಂದರೆ ನಾವು ಇನ್ನೊಬ್ಬರಲ್ಲಿ ಮಾತನಾಡುವ ರೀತಿ ಮತ್ತು ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳುವಿಕೆ. ಅದಕ್ಕಾಗಿ ಬಹು ದೊಡ್ಡ ತ್ಯಾಗ ಮಾಡುವುದೇನು ಬೇಕಿಲ್ಲ. ನಮ್ಮ ಒಂದಿಷ್ಟು ಗೌರವಯುತ ಸವಿಮಾತು, ಸಹಕಾರ ಸಾಕು ಪಡೆದವರ, ನೀಡಿದವರ ಬದುಕಿಗೆ ಕ್ಷಣಕಾಲದ ಕೃತಾರ್ಥತೆ ಮತ್ತು ಖುಷಿಯನ್ನು ನೀಡುವುದಕ್ಕೆ. ಇದೇ ಅಲ್ಲವೇ ನಮಗೆ ಬೇಕಾದದ್ದು ಕೂಡ? ಬೇಕಾದದ್ದನ್ನು ಪಡೆಯಲು ಎಲ್ಲೆಲ್ಲೋ ಹುಡುಕುತ್ತಾ ಹೋಗಬೇಕೆಂದೇನಿಲ್ಲ.         ಮಾತಿನಲ್ಲಿಯೇ ಇದೆ ಎಲ್ಲವೂ…… ***********************************

ಮಾತಿನಲ್ಲಿಯೇ ಇದೆ ಎಲ್ಲವೂ… Read Post »

ಕಾವ್ಯಯಾನ

ಅದಿತಿ

ಕವಿತೆ ಅದಿತಿ ಮುರಳಿ ಹತ್ವಾರ್  ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.ಒಂದಿಷ್ಟೂ ಬಿಸಿಯಾಗಲಿಲ್ಲ ಅದುಅದರ ಮೇಲೇ ಕುಳಿತು ಆ ಒಂದೂವರೆ ಕಾಲಿನ, ಒಂಟಿ ಕಣ್ಣಿನಇರಾಕಿನವ ಕಣ್ಣು ಕಿತ್ತು ಬರುವ ಹಾಗೆ ಅವನ ಕಥೆ ಹೇಳಿಕೊಂಡಾಗ ಹೇಗೆ ಬಿಸಿಯಾದೀತು? ನಾಜೂಕಿನಿಂದಧೂಳೊರೆಸಿಕೊಳ್ಳುವದು ಅಭ್ಯಾಸವಾದಮೇಲೆ.ಬೇರು ಕಿತ್ತು, ಕೈ-ಕಾಲು ಕೊಯ್ದು,ನೀರು, ಎಣ್ಣೆಯಲದ್ದಿದ ತುಂಡುಗಳ ಅಂಟಿಸಿ,ಮೇಲೊಂದು ಹತ್ತಿಯ ಮೆತ್ತೆಯಿಟ್ಟು ಕಟ್ಟಿದ ಕುರ್ಚಿಯಲ್ಲವೇ ಅದು. ಆ ಆಫ್ರಿಕಾದ ಅಮ್ಮ, ಅಲ್ಲ, ಎಲ್ಲರ ಅಮ್ಮಅವಳ ಕಥೆ ಹೇಳಿಕೊಂಡಾಗಲೂ ಅಷ್ಟೇ.ಆಕೆ “ಅಯ್ಯೋ, ನಂಬಿಬಿಟ್ಟೆ ಆ ಜನದ ಮಾತು,‘ಅಮ್ಮ, ಬೇಡಮ್ಮ, ಬಿಡಬೇಡ ನನ್ನ ಇವರೊಟ್ಟಿಗೆ”ಎಂದ ಇನ್ನೂ ನೆರೆಯದ ಕೂಸಿನ ಮಾತೂ ಕೆಳದಷ್ಟು.ಕೆಟ್ಟೆ, ನಾ ಕೆಟ್ಟೆ, ನನ್ನ ಮಕ್ಕಳನ್ನು ಇನ್ನಾದರೂ ಬದುಕಲು ಬಿಟ್ಟುಬಿಡಿ”ಎಂದು ಗೋಳಿಟ್ಟರೂ ಒಂದಿಷ್ಟೂ ಒದ್ದೆಯಾಗಲಿಲ್ಲ ಆ ಕುರ್ಚಿ. ಅದರ ಒಣ ಪ್ರತಿಷ್ಠೆ ನೋಡಿ ನೋಡಿ ಸಾಕಾಗಿತ್ತು ಅವನಿಗೂ.ಎತ್ತಿ ನೆಲಕ್ಕೆಸೆದ ಜೋರಾಗಿ. ಶಬ್ದ ಹುಟ್ಟಿ ಮೌನವಾಯಿತು ಅಷ್ಟೇ.ಕತ್ತಿಯಲಿ ಕೊಚ್ಚಿದ – ನೋವು ಹುಟ್ಟಬಹುದೆಂದು.ಒಂದಿಷ್ಟು ತರಚಿತಷ್ಟೇ. ಅಲ್ಲಾಡಲಿಲ್ಲ ಅದು. ಅವನೂ ಬಿಡಲಿಲ್ಲ: ಮಾರಮ್ಮನ ಗುಡಿಯ ಸುತ್ತ ಸುತ್ತಿಸಿದ;ರಕ್ತೇಶ್ವರಿಯ ಕೋಲ ಕಟ್ಟಿದ; ಕೆಂಡದ ಮೇಲೆ ದೂಡಿದಸುಟ್ಟು ಬೂದಿಯಾಯಿತೇ ಹೊರತು ಕೆಚ್ಚು ಕೆರಳಲಿಲ್ಲ. ಕಣ್ಣಿಗೆ ಸಿಡಿದ ಆ ಬೂದಿ ಬೆಳೆದ ರೊಚ್ಚಿನಲಿ,ದುರ್ಗಮ್ಮನಿಗೆ ಹೊದಿಸಿದ್ದ ಸೀರೆಯಲಿ ಮೈ ಸುತ್ತಿಕೊಂಡ;ಅಣ್ಣಮ್ಮನ ಅರ್ಚನೆಯ ಕೆಂಪನ್ನ ಹಣೆಗೊತ್ತಿಕೊಂಡಗಿರಗಿರನೆ, ಗಿರಗಿರನೆ, ಗಿರಗಿರನೆ ತಿರುಗಿದ: ಉಧೋ! ಉಧೋ! ಎನ್ನುತೆದ್ದವುನೆಲದಡಿಯ ಚಿನ್ನ, ಚಿಪ್ಪಿನೊಳಿಟ್ಟ ಮುತ್ತುಕುದಿಯುತಲಿ – ಕುಣಿಕುಣಿದು ಕಂಪಿಸಿ.ಅಲ್ಲೋಲ ಕಲ್ಲೋಲ ಎಲ್ಲೆಲ್ಲೂಎಲ್ಲವೂ ಛಿದ್ರ, ಛಿದ್ರ, ಛಿದ್ರ;ಉಸಿರಿಲ್ಲದ ಕಾರ್ಗತ್ತಲ ಮೌನಗರ್ಭದಲಿ ಲೀನ. ಆ ತುಂಬು ಗರ್ಭದಮೌನದ ಬಸಿರೊಡೆದುಹೊಸ ಬೆಳಕೊಂದು ಹುಟ್ಟಿಮತ್ತೆ ಅದಿತಿಯಾಯಿತು! **********************************

ಅದಿತಿ Read Post »

ಕಾವ್ಯಯಾನ

ದ್ವಿಪದಿಗಳು

ಕವಿತೆ ದ್ವಿಪದಿಗಳು ವಿ.ಹರಿನಾಥ ಬಾಬು ಹೊರಗೆ ಚಿಟ್ಟೆ ಹಾರುವುದ ನೋಡಿದೆಮೊನ್ನೆಯಿಂದ ಹೃದಯವೇಕೋ ಖಾಲಿ ಖಾಲಿ ಮೋಡಗಳು ಇದ್ದ ಮಳೆಯೆಲ್ಲಾ ಸುರಿಸಿ ನಿಂತಿವೆಮನಸು ನೀನಿಲ್ಲದೆ ಕತ್ತಲ ಕೋಣೆಯಾಗಿದೆ ನದಿಗಳು ಉಕ್ಕಿ ಹರಿಯುತ್ತಿವೆನಿನ್ನ ಹುಡುಕಿ, ಕೈಚೆಲ್ಲಿ ಕುಳಿತಿರುವೆ ಈಜಲಾಗದೆ ನೀರು ಹರಿದ ನೆಲದ ಮೇಲೆ ಅದರ ಹೆಜ್ಜೆ ಮೂಡಿದೆನಿನ್ನ ಬಂದು ಹೋಗುವಿಕೆಗೂ ಇಂಥದೇ ನವಿರು ಯಾಕೋ ಗಾಳಿ, ಛಳಿಗೆ ಮೂಲೆಯಲಿ ಮುದುಡಿ ಕುಳಿತಿದೆನೀನು ಕಾಣದೆ ಮನಸು ಗರಬಡಿದ ಹಾಗಿದೆ *********************

ದ್ವಿಪದಿಗಳು Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಮಾತಲ್ಲಿ ಹಿಡಿದಿಡಲಾಗದ ಚಿತ್ರ… ಕೆಲವರ ವ್ಯಕ್ತಿತ್ವವೇ ಹಾಗಿರುತ್ತದೆ. ಜೇನು ತುಪ್ಪದಲ್ಲಿ ಅದ್ದಿ ತೆಗೆದಷ್ಟು ಸವಿಯಾಗಿ. ಅದೆಷ್ಟು ವಿನಯತೆ, ಅದೆಷ್ಟು ಭೂಮಿಗಿಳಿದ ಮನುಷ್ಯ ಎನಿಸಿಬಿಡುವಂತೆ. ಮನುಷ್ಯ ಏನೂ ಗೊತ್ತಿಲ್ಲದ ಸಂದರ್ಭದಲ್ಲಿ ಮುಗ್ಧನಷ್ಟೇ ಸ್ವಾರ್ಥಿಯೂ ಇರುತ್ತಾನೆ. ಅದು ಪುಟ್ಟ ಮಗುವಿನಲ್ಲಿ ಕಂಡು ಬರುವಂತಹ ಮುಗ್ಧತೆ ಮತ್ತು ಸ್ವಾರ್ಥ. ತದ ನಂತರ ಬೆಳೆಯುತ್ತ ಬೆಳೆಯುತ್ತಾ ಅವನ್ನು ತನಗೆ ಬೇಕಾದ ಹಾಗೆ ಬಳಸುವುದನ್ನು ಕಲಿಯುತ್ತಾನೆ. ಆದರೆ ಜ್ಞಾನ ಸಂಪಾದನೆ ಮಾಡುತ್ತಾ ಮಾಡುತ್ತಾ ವಿನೀತನಾಗಿ ಬಿಡುತ್ತಾನೆ. ಅವನೆಲ್ಲಾ ಅಹಂಕಾರವೂ ಸತ್ತುಹೋಗುತ್ತದೆ. ಜ್ಞಾನ ಸಂಪಾದನೆಗಾಗಿ ಹೊರಡುವಾಗ ನಾನು ಎಲ್ಲ ಜ್ಞಾನವನ್ನೂ ಆಪೋಶನ ತೆಗೆದುಕೊಳ್ಳಬಲ್ಲೆ ಎನ್ನುವ ಆತ್ಮವಿಶ್ವಾಸದಿಂದ ಹೊರಡುವ ಅವನು, ಜ್ಞಾನಿಯಾಗುತ್ತಾ ಆಗುತ್ತ ಅವನಿಗೆ ಒಂದು ವಿಷಯ ಅರ್ಥವಾಗುತ್ತದೆ. ಜ್ಞಾನವೆಂಬುದು ಒಂದು ಬೃಹತ್ ಸಾಗರ. ನಾನದರ ಒಂದೇ ಒಂದು ಹನಿಯನ್ನು ಮಾತ್ರ ನನ್ನದಾಗಿಸಿಕೊಳ್ಳಬಲ್ಲೆ. ಆ ಹನಿಯಾದರೂ ಅರಿವು ಮರೆವಿನ ಜಲಚಕ್ರವನ್ನು ಸದಾ ಸುತ್ತುವ ಜಲಬಿಂದು ಎನ್ನುವುದು ಅವನಿಗೆ ಅರ್ಥವಾಗುತ್ತದೆ. ಅವನಿಗೀಗ ಸಾಧನೆಯ ಹಂಬಲವಿಲ್ಲ, ಪರಮ ಸುಖದ ಚಿಂತೆಯಿಲ್ಲ. ಅವನಿಗೆ ಬದುಕಿನ ದೊಡ್ಡ ಅರ್ಥ ಯಾವುದು ಎಂಬುದು ತಿಳಿದುಬಿಟ್ಟಿರುತ್ತದೆ. ಆಗ ಅವನು ನಾನು ಎನ್ನುವ ಸ್ವಯಂಭೂತನವನ್ನು ತನಗೆ ತಾನೇ ಕಳೆದುಕೊಂಡುಬಿಡುತ್ತಾನೆ.  ಆ ಹಂತ ತಲುಪಿದ ಯಾರೇ ಆಗಲಿ, ಅವರ ಸಾಧನೆಯನ್ನ ಜಗತ್ತು ಕೊಂಡಾಡುತ್ತದೆ, ಆದರೆ ಆ ವ್ಯಕ್ತಿ ಮಾತ್ರ ಸಂಕೋಚದ ಮುದ್ದೆಯಾಗಿರುತ್ತಾನೆ. ಇಷ್ಟೆಲ್ಲಾ ಹೇಳುತ್ತಿರುವಾಗ ನನ್ನ ಕಣ್ಮುಂದೆ ಇದ್ದ ಚಿತ್ರ ಎಸ್ಪಿಬಿಯವರದ್ದು. ಅವರ ವ್ಯಕ್ತಿತ್ವ ಹೀಗೆ ಸಾಮಾನ್ಯೀಕರಿಸುವ ವ್ಯಕ್ತಿತ್ವವಾಗಿತ್ತು ಎನ್ನುವದೇ ಆ ವ್ಯಕ್ತಿತ್ವದ ಶ್ರೇಷ್ಠತೆ. ಅಷ್ಟು ವಿಶಾಲವಾದ, ವಿನೀತವಾದ, ಮಗುವಿನಂಥಾ ವ್ಯಕ್ತಿ ಅವರು. ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಅವರ ಕೆಲವು ಗೀತೆಗಳನ್ನು ಕೇಳಬಹುದು. ಮಲಯಮಾರುತ ಚಿತ್ರದ “ಶಾರದೇ ದಯೆ ತೋರಿದೆ…”, ಶ್ರೀನಿವಾಸ ಕಲ್ಯಾಣ ಚಿತ್ರದ “ಪವಡಿಸು ಪರಮಾತ್ಮ ಶ್ರೀ ವೆಂಕಟೇಶ, ಮನವೆಂಬ ಮಲ್ಲಿಗೆಯ, ಹೂವ ಹಾಸಿಗೆ ಮೇಲೆ….”, ಶ್ರೀ ಮಂಜುನಾಥ ಚಿತ್ರದ “ಈ ಪಾದ ಪುಣ್ಯ ಪಾದ, ಈ ಪಾದ ದಿವ್ಯ ಪಾದ…”ಎನ್ನುವ ಈ ಮೂರು ಹಾಡುಗಳನ್ನು ನಾನಿಲ್ಲಿ ಉದಾಹರಿಸುತ್ತೇನೆ. ಈ ಹಾಡುಗಳನ್ನು ಹಾಡುವಾಗ ಅವರ ಧ್ವನಿಯಲ್ಲಿ ಒಂದು ಶರಣಾಗತಿ ಕಾಣಿಸುತ್ತದೆ, ಒಂದು ದೀನತೆ ಕಾಣಿಸುತ್ತದೆ. ಅಂತಹ ಹಾಡುಗಳನ್ನು ಹಾಡುವಾಗ ಧ್ವನಿಗೆ ಒಂದು ಮೆದುತನ ಬೇಕಿರುತ್ತದೆ, ಆದರೆ ಅದು ದುಃಖ ಆಗಿರಬಾರದು, ನೋವೂ ಆಗಿರಬಾರದು. ಅದೊಂದು ಪರಮ ಸುಖವನ್ನು ಒಂದೇ ಒಂದು ಹನಿಯನ್ನೂ ಇಲ್ಲದಂತೆ ಉಂಡು ನಿಂತವನ ಧನ್ಯತಾ ಭಾವವಾಗಿರಬೇಕು. ಅದನ್ನು ಧ್ವನಿ ಮಾತ್ರದಿಂದ ಹೊಮ್ಮಿಸಬೇಕು. ಅಂತಹಾ ಒಂದು ಶಕ್ತಿ ಎಸ್ಪಿಬಿಯವರ ಕಂಠಕ್ಕೆ ಮಾತ್ರ ಸಾಧ್ಯವೇನೋ ಎನಿಸುವಷ್ಟು ಅವರು ಸಂಗೀತ ನಿರ್ದೇಶಕರ ಏಕ ಮಾತ್ರ ಆಯ್ಕೆಯಾಗಿರುತ್ತಿದ್ದರು ಎನ್ನುವುದು ಹೊಗಳಿಕೆಯ ಅತಿಶಯೋಕ್ತಿಯಲ್ಲ, ವಾಸ್ತವ. ಬಹುಶಃ ಅವರನ್ನು ರಿಪ್ಲೇಸ್ ಮಾಡಬಹುದಾದಂತಹ ಮತ್ತೊಬ್ಬ ಗಾಯಕ ಹುಟ್ಟಿಯೇ ಇಲ್ಲವೇನೋ. ಅದೆಷ್ಟು ರೀತಿಯಲ್ಲಿ ತಮ್ಮನ್ನು ತಾವು ಪ್ರಯೋಗಕ್ಕೆ ಒಳಪಡಿಸಿಕೊಂಡಂತಹ ಗಾಯಕ ಅವರು. ಅವರ ಒಂದೊಂದು ಗೀತೆಯೂ ಒಂದೊಂದು ಪ್ರಯೋಗ, ಒಂದೊಂದೂ ಅತ್ಯಮೂಲ್ಯ ರತ್ನ. ಅವರೊಬ್ಬ ಗಾಯನ ಲೋಕದ ದೇವರು… ಈ ಕೊರೋನಾ ನಮ್ಮನ್ನು ಎಷ್ಟೆಲ್ಲ ಪರೀಕ್ಷೆಗೆ ದೂಡುತ್ತಿದೆ. ನಾವು ತುಂಬಾ ಪ್ರೀತಿಸುವ ಅದೆಷ್ಟೋ ವ್ಯಕ್ತಿಗಳನ್ನು ನಮ್ಮಿಂದ ದೂರ ಮಾಡುತ್ತಿದೆ. ಎಲ್ಲಿಯೂ ಯಾರ ಮನೆಗೂ ಹೋಗದೆ ಇದ್ದಲ್ಲೇ ಇರುವ ಸಂಕಷ್ಟದ ನಡುವೆ ಧ್ವನಿ ಮಾತ್ರದಿಂದ ನಮ್ಮವರನ್ನು ಪ್ರೀತಿಸುವಂತಾಗಿದೆ. ಸ್ಪರ್ಷ ಮತ್ತು ಪರಸ್ಪರ ಭೇಟಿಯನ್ನು ನಿರ್ಬಂಧಿಸುತ್ತಿದೆ ಈ ಕೊರೋನಾ. ಪರಿಸ್ಥಿತಿ ಹೀಗಿರುವಾಗ ನಾವು ನಮ್ಮ ಆರಾಧ್ಯ ದೈವ ಎಂದು ಭಾವಿಸಿಕೊಳ್ಳುತ್ತಿದ್ದ ಕೆಲ ವ್ಯಕ್ತಿಗಳನ್ನೂ ಕಳೆದುಕೊಳ್ಳುವಂತಾಯಿತು. ಅದರಲ್ಲೂ ಎಸ್ಪಿಬಿಯವರು ಹೊರಟೇ ಹೋದಾಗ… ಮನಸ್ಸು ತಹಬದಿಗೇ ಬಂದಿರಲಿಲ್ಲ. ಸತ್ಯವನ್ನು ಒಪ್ಪಲು ಮನಸ್ಸು ಸಿದ್ಧವಿರಲಿಲ್ಲ. ಎಲ್ಲೇ ಅವರ ಹಾಡು ಕೇಳಲಿ, ಕಾರ್ಯಕ್ರಮ ಬರಲಿ ದುಃಖ ಉಕ್ಕುತ್ತಿತ್ತು. ದೇಶಕ್ಕೆ ದೇಶವೇ ಕಣ್ಣೀರು ಮಿಡಿಯಿತು, ಅವರಿಗೆ ಕೊನೆಯ ಶ್ರದ್ಧಾಂಜಲಿಯನ್ನು ಅರ್ಪಿಸಿತು. ಅವರ ಮುಗ್ಧ ನಗು, ಸರಳತೆ, ವಿನಯತೆ, ವಿನೀತತೆ, ಬದುಕಿದರೆ ಹೀಗೆ ಬದುಕಬೇಕು ಎನ್ನುವಂತೆ ಬದುಕಿದ ಅವರ ಬದುಕಿನ ರೀತಿ… ಅದೆಂಥ ಆದರ್ಶ. ಆಗಾಗ  ನಾನು ನನ್ನ ತಂದೆ ತಾಯಂದಿರು ಮತ್ತು ಗುರುಹಿರಿಯರಿಗೆ ಅವರ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸುತ್ತಿರುತ್ತೇನೆ. ನನ್ನ ಮಕ್ಕಳಿಂದಲೂ ಅದನ್ನು ಮಾಡಿಸುತ್ತೇನೆ. ಹಾಗೆ ಮಾಡುವಾಗ ನನಗೆ ನನ್ನ ಅಹಂಕಾರವನ್ನ ಕಳೆದುಕೊಂಡಂತೆ ಭಾಸವಾಗುತ್ತದೆ. ಮನಸ್ಸು ತಿಳಿಯಾಗುತ್ತದೆ. ಇದು ನನ್ನ ಅನುಭವ. ಎಸ್ಪಿಬಿಯಂತಹ ಮೇರು ವ್ಯಕ್ತಿ ಚೂರೂ ಅಹಂಕಾರವಿಲ್ಲದೆ ಏಸುದಾಸರ ಪಾದಪೂಜೆ ಮಾಡಿ ಅವರ ಆಶೀರ್ವಾದ ಪಡೆಯುವ ದೃಶ್ಯ ಹೃದಯ ತುಂಬಿ ಬರುವಂತೆ ಮಾಡುತ್ತದೆ. ಅಹಮ್ಮಿನ ಕೋಟೆಯೊಳಗೆ ಬಂಧಿಯಾದ ಅದೆಷ್ಟೋ ಮಂದಿಗೆ ಮಾದರಿಯಾಗಿ ಕಾಣುತ್ತದೆ ಈ ದೃಶ್ಯ. ಮತ್ತೆ ಎಸ್ಪಿಬಿಯವರು ಈಗ ತಾನೇ ಗಾಯನ ಲೋಕಕ್ಕೆ ಕಾಲಿಡುತ್ತಿರುವ ಪುಟ್ಟ ಮಕ್ಕಳನ್ನೂ ಸಹ “ಶಾರದೆ”, ಬಾಲಸರಸ್ವತಿ” ಎಂದೆಲ್ಲಾ ಹೊಗಳುತ್ತಾ ಶರಣಾಗಿಬಿಡುವಾಗ ನಮ್ಮ ಜನ್ಮ ಪಾವನವಾಯಿತೆನ್ನಿಸಿಬಿಡುತ್ತದೆ ಆ ಮಕ್ಕಳಿಗೆ. ಮತ್ತೆ ಹೊಸ ಗಾಯಕರನ್ನು ಅವರು ಉತ್ತೇಜಿಸುವ ರೀತಿಯಂತೂ ಅದ್ಭುತ. ಅಷ್ಟೇ ಅಲ್ಲ ಒಬ್ಬ ಸಾಮಾನ್ಯ ವ್ಯಕ್ತಿಯನ್ನೂ ಅವರು ಗೌರವಿಸುವ ರೀತಿ ಅನನ್ಯ.  ಇಂತಹ ಹಲವು ಕಾರರಣಗಳಿಗೂ ಎಸ್ಪಿಬಿಯವರು ಅನುಕರಣೀಯರು ಅನುಸರಣೀಯರು. ಈ ಗಾಯನ ಗಾರುಡಿಗ ನಟನೆಯಲ್ಲೂ ಸೈ ಎನಿಸಿಕೊಂಡವರು. ಅವರು ಮಾಡಿದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದವರು. ಗಾಯನದ ಹೊರತಾಗಿ ನಟನೆ, ಸಂಗೀತ ನಿರ್ದೇಶನವನ್ನೂ ಮಾಡಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದವರು. ಸದಾ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾ ಅದರಲ್ಲಿ ಯಶಸ್ವಿಯಾದವರು ಎಸ್ಪಿಬಿ.  2012 ರಲ್ಲಿ ಮಿಥುನಮ್ ಎನ್ನುವ ಚಿತ್ರವೊಂದು  ಬರುತ್ತದೆ. ಇದು ಅಪ್ಪದಾಸು ಎನ್ನುವ ರಿಟೈರ್ಡ್ ಟೀಚರ್ ಒಬ್ಬನ ಕತೆ‌. ಇದೊಂದು ರಮಣರ ಕತೆಯನ್ನು ಆಧರಿಸಿದ ಚಲನಚಿತ್ರ. ಇದನ್ನು ಸುಂದರ ದೃಶ್ಯಕಾವ್ಯವನ್ನಾಗಿ ತೆರೆಗೆ ತಂದವರು ತನಿಕೆಲ್ಲ ಭರಣಿ. ಮಿಥುನಮ್ ಎನ್ನುವ ಈ ಚಲನಚಿತ್ರದ ಪ್ರತಿಯೊಂದು ಫ್ರೇಮನ್ನೂ ಗಾಢವಾಗಿ ಆವರಿಸಿಕೊಂಡಿರುವ ಬುಜ್ಜೆಮ್ಮಾ ಮತ್ತು ಅಪ್ಪದಾಸು ನಮ್ಮನ್ನು ಯಾವುದೇ ಕಾರಣಕ್ಕೂ ಅತ್ತಿತ್ತ ಅಲುಗಾಡದಂತೆ ಹಿಡಿದು ಕೂರಿಸಿಬಿಡುತ್ತಾರೆ. ಅಲ್ಲೊಂದು ಸುಂದರ ದಾಂಪತ್ಯ ಗೀತೆ ಇದೆ. ಅದು ಶುದ್ಧ ಪ್ರೇಮ ಕಾವ್ಯವನ್ನು ನವಿರಾಗಿ ಹಾಡುತ್ತದೆ. ಅವರ ದಾಂಪತ್ಯವನ್ನು ತೆರೆಯ ಮೇಲೆ ನೋಡುವ ನಮ್ಮಲ್ಲಿ ಒಂದು ಕನಸು ಹುಟ್ಟುತ್ತದೆ. ನಾವೂ ಸಹ ಇಷ್ಟೇ ಪ್ರೀತಿಯಿಂದ ಬದುಕಬೇಕು ಎಂದು. ಬುಜ್ಜೆಮ್ಮ ಒಮ್ಮೆ ಹೇಳುತ್ತಾಳೆ “ಮನುಷಗಾ ಪುಟ್ಟಡಂ ಕಷ್ಟಂ ಕಾದು, ಮನುಷಗಾ ಬದುಕಡಮೇ ಕಷ್ಟಂ” ಎಂದು. ಅದರೆ ಇವರಿಬ್ಬರೂ ಅಪ್ಪಟ ಮನುಷ್ಯರಾಗಿ ಬದುಕುವವರು. ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂಬ ನಿರಾಸೆ, ಕೋಪ, ನೋವು, ಸಂಕಟ, ತಿರಸ್ಕಾರ, ಬೇಸರ…. ಎಂಥದ್ದೂ ಇಲ್ಲ ಅವರಲ್ಲಿ. ಆದರೆ ಮಕ್ಕಳು ತಮ್ಮೊಂದಿಗಿರಲಿ ಎನ್ನುವ ಸಣ್ಣ ಆಸೆ ಮಾತ್ರ ಇದೆ. ಅದೇ ಮಮತೆಯನ್ನು ತಾವು ಸಾಕುವ ಪ್ರಾಣಿಗಳಿಗೆ ಉಣಿಸುತ್ತಾರೆ. ತಮ್ಮ ಮುದ್ದು ಗೌರಿಯ(ಹಸು) ಕರು ಕಳೆದು ಹೋದಾಗ ಅದಕ್ಕಾಗಿ ಅವರು ಪರಿತಪಿಸುವ, ಹುಡುಕುವ ರೀತಿ ನಮ್ಮನ್ನು ತಲ್ಲಣಗೊಳಿಸುತ್ತದೆ. ಕೊನೆಗೆ ಅದು ಶವವಾಗಿ ಸಿಕ್ಕಾಗ ಇವರು ಗೋಳಾಡುವ ರೀತಿ ಎಂಥವರಲ್ಲೂ ಕಣ್ಣೀರು ತರಿಸುತ್ತದೆ. ಬುಜ್ಜೆಮ್ಮ ಯಾವಾಗಲೂ ತಮಾಷಿಗೆ ಅಪ್ಪದಾಸುವನ್ನು ರೇಗಿಸಲಿಕ್ಕಾಗಿ, “ನನ್ನನ್ನು ದ್ರಾಕ್ಷಿ ತೋಟ ಇದ್ದವನೊಬ್ಬ ಮದುವೆಯಾಗಲು ಆಸೆಪಟ್ಟಿದ್ದ. ನಾನು ಆ ದ್ರಾಕ್ಷಿತೋಟದವನನ್ನು ಮದುವೆಯಾಗಬೇಕಿತ್ತು. ಅವನನ್ನು ಮದುವೆಯಾಗಿದ್ದರೆ ಎಷ್ಟು ಸುಖವಾಗಿರುತ್ತಿದ್ದೆ. ಹೋಗಿ ಹೋಗಿ ನಿನ್ನನ್ನು ಮದುವೆಯಾಗಿ ಹಿಂಗಿದೀನಿ” ಅಂತ ರೇಗಿಸುತ್ತಿರುತ್ತಾಳೆ. ಅಪ್ಪದಾಸುವಿಗೆ ಈ ವಿಷಯ ಬಿಸಿತುಪ್ಪ. ಆದರೆ ಕೊನೆಯಲ್ಲೊಮ್ಮೆ ಇದೇ ಕಾರಣಕ್ಕೆ ಇಬ್ಬರ ನಡುವೆಯೂ ಜಗಳವಾಗುತ್ತದೆ. ಅಜ್ಜಿ ಅದೇ ಚಿಂತೆಯಲ್ಲಿ ಕಾಯಿಲೆಗೆ ಬೀಳುತ್ತಾಳೆ. ಮುನಿಸು ಬಿಟ್ಟು ಅಪ್ಪದಾಸು ಬುಜ್ಜೆಮ್ಮನ ಸೇವೆ ಮಾಡುತ್ತಾನೆ. ನನ್ನನ್ನು ಬಿಟ್ಟು ಅವಳು ಹೊರಟು ಹೋದರೆ ಏನು ಮಾಡುವುದು ಎನ್ನುವ ಚಿಂತೆಯ ಜೊತೆಗೆ ಹೋಗಲಿ ಪಾಪ ನನ್ನ ಕಣ್ಮುಂದೆಯೇ ಮುತ್ತೈದೆಯಾಗಿ ಹೋಗಲಿ ಎಂದುಕೊಳ್ಳುತ್ತಾ ಅವಳಿಗೆ ಆ ಕಾಯಿಲೆಯ ನಡುವೆಯೂ ಅಲಂಕಾರ ಮಾಡಿ ಅವಳಿಂದ ಪೂಜೆ ಮಾಡಿಸುತ್ತಾನೆ. ಅವಳಿನ್ನು ಸಾವಿನ ಅಂಚಿನಲ್ಲಿದ್ದಾಳೆ ಅನ್ನಿಸಿ ಅಜ್ಜ ಕಟ್ಟಿಗೆಯನ್ನು ಸಿದ್ದಪಡಿಸುವಾಗ ನಾವು ನಮ್ಮ ಕಣ್ಣೀರನ್ನು ಹಿಡಿದಿಡುವುದು ತುಂಬ ಕಷ್ಟ. ಅವತ್ತು ರಾತ್ರಿ ಮಲಗುವಾಗ ಹೆಂಡತಿ “ನನಗೆ ಯಾರೂ ದ್ರಾಕ್ಷಿತೋಟದವನೂ ಇರಲಿಲ್ಲ ಕಣ್ರಿ. ನಿಮ್ಮನ್ನು ರೇಗಿಸಲಿಕ್ಕಾಗಿ ಹಾಗೆ ಹೇಳುತ್ತಿದ್ದೆ ಎನ್ನುತ್ತಾಳೆ. ಅವತ್ತು ಅಪ್ಪದಾಸುವಿಗೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅಕ್ಷರಶಃ ಕುಣಿದಾಡಿಬಿಡುತ್ತಾನೆ. ಅವತ್ತು ಅದೆಷ್ಟು ನೆಮ್ಮದಿಯಾಗಿ ಆರಾಮ್ ಕುರ್ಚಿಯ ಮೇಲೆಯೇ ನಿದ್ರಿಸಿಬಿಡುತ್ತಾನೆ ಎಂದರೆ, ಮರುದಿನ ಅವನನ್ನು ಹೆಂಡತಿ ಏಳಿಸಿದಾಗಲೇ ತಿಳಿಯುವುದು ಅವ ಪ್ರಾಣವನ್ನೇ ಬಿಟ್ಟಿದ್ದಾನೆ ಎಂಬುದು. ಇದೊಂದು ಮಾತಿಗಾಗಿಯೇ ಅವ ಪ್ರಾಣ ಬಿಗಿಹಿಡಿದಿದ್ದನಾ?! ಅವನ ಬುಜ್ಜೆಮ್ಮ, ” ದೇವರೇ ವಿಧವೆ ಪಟ್ಟ ಬೇಡುತ್ತಿದ್ದ ಯಾರದರೂ ಹೆಣ್ಣುಮಗಳಿದ್ದರೆ ಅದು ನಾನೊಬ್ಬಳೇ ಇರಬಹುದು. ಸಧ್ಯ ನನ್ನ ಕೋರಿಕೆಯನ್ನ ಈಡೇರಿಸಿಬಿಟ್ಯಲ್ಲ. ಎಲ್ಲಿ ನಾನೇ ಮೊದಲು ಹೋಗಿ ಇವನನ್ನು ಅನಾಥನನ್ನಾಗಿ ಮಾಡಿ ಬಿಡ್ತೀನೇನೋ ಎನ್ನುವ ಭಯ ಕಾಡ್ತಿತ್ತು. ಮೊದಲೇ ಮಗುವಿನಂಥವನು. ನಾನೂ ಇಲ್ಲದೆ ಹೋದರೆ ಹೇಗೆ ಬದುಕಿಯಾನು…” ಎಂದೆಲ್ಲಾ ಮಾತಾಡುವ ರೀತಿ ಹೃದಯಂಗಮ. ಮತ್ತೆ ಅವನು ನೆಮ್ಮದಿಯಾಗಿ ಇಹಲೋಕ ತ್ಯಜಿಸಿದ್ದರ ಬಗ್ಗೆ ಒಂಥರಾ ನೆಮ್ಮದಿ. ಆದರೆ ನಾವೆಲ್ಲ ಹೊಸ ಪೀಳಿಗೆಯ ಜನ ನಮ್ಮ ತಂದೆ ತಾಯಂದಿರನ್ನು ಹೀಗೆ ಅನಾಥರನ್ನಾಗಿ ಮಾಡುತ್ತಿದ್ದೇವಲ್ಲ ಒಮ್ಮೆ ಒಂದು ಕ್ಷಣ ಯೋಚಿಸಬೇಕಿದೆ. ದುಡ್ಡಿಗಿಂತಲೂ ದೊಡ್ಡದಾದದ್ದು ನಿಜಕ್ಕೂ ಇದೆ. ಮಾನವೀಯತೆ  ಪ್ರೀತಿ ವಾತ್ಸಲ್ಯಕ್ಕಿಂತ ದೊಡ್ಡದು ಯಾವುದೂ ಅಲ್ಲ ಅಲ್ಲವಾ…. ಹೀಗೆ ಮಾತಲ್ಲಿ ಹಿಡಿದಿಡಲಾಗದ ಅದೆಷ್ಟೋ ವಿಷಯ ಈ ಚಿತ್ರದಲ್ಲಿದೆ. ಅಥವಾ ನನ್ನ ಪದಗಳದೇ ಬಡತನವಿರಬಹುದು. ಆದರೆ ಎಸ್ಪಿಬಿ ಮತ್ತು ಲಕ್ಷ್ಮಿಯವರು ನಮ್ಮನ್ನು ಆವರಿಸುವ ಪರಿ ಅದ್ಭುತ. ಲಕ್ಷಿಯವರು ಎಸ್ಪಿಬಿಯವರಿಗೆ “ನಾನು ನಿಮ್ಮ ದೊಡ್ಡ ಫ್ಯಾನ್, ನನ್ನಷ್ಟು ದೊಡ್ಡ ಫ್ಯಾನ್ ಯಾರೂ ಇರಲು ಸಾಧ್ಯವಿಲ್ಲ” ಎಂದು ಹೇಳುತ್ತಿದ್ದ ಮಾತು ನೆನಪಾಗುತ್ತಿದೆ. ಇದು ನಮ್ಮೆಲ್ಲರ ಮಾತೂ ಸಹ ಅಂತಲೂ ಅನಿಸುತ್ತಿದೆ. ಹೃದಯ ಆರ್ದ್ರವಾಗುತ್ತಿದೆ. ಕಣ್ಣಂಚು ಒದ್ದೆ ಒದ್ದೆ. ಇನ್ನೂ ಏನೇನೋ ಬರೆಯಬೇಕೆನಿಸುತ್ತಿದ್ದರೂ ಬರೆಯಲಾಗದೆ ಹೋಗುತ್ತಿರುವೆ ಎನಿಸುತ್ತಿದೆ. ಎಸ್ಪಿಬಿ ಎನ್ನುವ ಮಹಾಸಾಗರದ ಬಗ್ಗೆ ನಾನೆಂಬ ಪುಟ್ಟ ಹಾಯಿದೋಣಿ ಎಷ್ಟು ತಾನೆ ಬರೆಯಲು ಸಾಧ್ಯ…. ************************************** –ಆಶಾಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ-ಹೊಸ ಬನಿ-೧೧ ಭಾವಕ್ಕಿಂತಲೂ ಬುದ್ಧಿಯ ನಡೆಯಲ್ಲೇ ತವಕಿಸುವ ದಿಲೀಪ ಕುಮಾರ್ ಪದ್ಯಗಳು. ಹೊಸ ಕಾಲದ ಹುಡುಗ ಹುಡುಗಿಯರು ಫೇಸ್ಬುಕ್ ವಾಟ್ಸ್ ಆಪಿನಂಥ ಸಾಮಾಜಿಕ ಜಾಲತಾಣದಲ್ಲಿ ಬರೆದುದನ್ನು ತಿದ್ದುವ ಮೊದಲೇ ಪ್ರಕಟಿಸಿ ಬಿಡುವುದರಿಂದ ನಿಜಕ್ಕೂ ಕವಿತೆಗಳಾಗುವ ತಾಕತ್ತಿದ್ದ ರಚನೆಗಳು ಕೂಡ ಗರ್ಭಪಾತಕ್ಕೆ ಸಿಲುಕಿ ಅಂಥ ತಾಣಗಳಲ್ಲೇ ತಿಣುಕುತ್ತಿರುವ ಕೆಲವರ ಲೈಕು ಈಮೋಜಿ ಕಮೆಂಟುಗಳಿಂದಲೇ ಉಬ್ಬಿ ಹೋಗಿ ಆ ಕವಿ ಮಿಣುಕುಗಳು ನಕ್ಷತ್ರಗಳಾಗುವ ಮೊದಲೇ ಉರಿದು ಬಿದ್ದು ಹೋಗುತ್ತಿರುವ ಕಾಲವಿದು. ಅಪರೂಪಕ್ಕೆ ಹೊಸತಲೆಮಾರಿನ ಕೆಲವು ಹುಡುಗ ಹುಡುಗಿಯರು ತಮ್ಮ ಓದಿನ ಪ್ರಖರ ದಾರಿಯಿಂದ ಸ್ಪೂರ್ತಿಗೊಂಡು ಕಾವ್ಯ ಕ್ರಿಯೆಯಲ್ಲಿ ತೊಡಗಿರುವುದು ಸಂತಸದ ವಿಚಾರ. ಕನ್ನಡ ಮಾಧ್ಯಮದಲ್ಲಿ ಓದುವುದಿರಲಿ, ಮಾತನಾಡುವವರೂ ವಿರಳರಾಗುತ್ತಿರುವ ಹೊತ್ತಲ್ಲಿ ಈಗಾಗಲೇ ತಮ್ಮ ಹರಿತ ವಾಗ್ಝರಿ ಮತ್ತು ಮೊನಚು ವಿಮರ್ಶೆಯ ಮೂಲಕ ಪ್ರಸಿದ್ಧರಾಗಿರುವ ಚಾಮರಾಜ ನಗರದ ಯುವಕವಿ ಆರ್.ದಿಲೀಪ್ ಕುಮಾರ್ ತಮ್ಮ ಮೊದಲ ಕವನ ಸಂಕಲನ ” ಹಾರುವ ಹಂಸೆ” ಯನ್ನು ಪ್ರಕಟಿಸಿದ್ದಾರೆ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯ, ಸಂಗೀತ ಮತ್ತು ಚಿತ್ರಕಲೆಗಳಲ್ಲಿ ಸಮಾನ ಆಸಕ್ತಿಯಿಂದ  ಸದ್ಯ ಕಾವ್ಯ, ವಿಮರ್ಶೆ, ಭಾಷಾಂತರ, ಸಂಶೋಧನೆ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯು.ಜಿ.ಸಿ ಸೆಮಿನಾರ್ ಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದು ಅವರ ಲೇಖನಗಳು ಮೆಚ್ಚುಗೆ ಪಡೆದಿವೆ. ಚಾಮರಾಜನಗರದ ಪ್ರಾದೇಶಿಕ ಪತ್ರಿಕೆಯಲ್ಲಿ ಹಲವು ಲೇಖನಗಳು ಪ್ರಕಟವಾಗಿದೆ. ಮಯೂರದಲ್ಲಿ ಮೊದಲು ಕವನವೊಂದು ಪ್ರಕಟವಾಗಿದ್ದು, ಆನಂತರ ಅಂತರ್ಜಾಲ ಪತ್ರಿಕೆಯಾದ ಕೆಂಡಸಂಪಿಗೆಯಲ್ಲಿ ಮತ್ತು ಜಾಲತಾಣ ಸುಗಮದಲ್ಲಿ ಕವನಗಳು ಪ್ರಕಟವಾಗಿದೆ. “ಹಾರುವ ಹಂಸೆ” ಕವನ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಯೋಜನೆಯ ಅಡಿಯಲ್ಲಿ ಗೋಮಿನೀ ಪ್ರಕಾಶನದಿಂದ ಪ್ರಕಟವಾದ ಮೊದಲ ಕವನ ಸಂಕಲನವಾಗಿದೆ . ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಮುನ್ನುಡಿಯ ಮೂಲಕ ಈ ಯುವ ಕವಿಯ ಸಾವಯವ ಸಾಮರ್ಥ್ಯವನ್ನು ಎತ್ತಿಹಿಡಿದಿದ್ದಾರೆ. ಹಾಗೇ ಎಚ್ಚರಿಕೆಯ ಮಾತನ್ನು ಬಲು ಸೂಕ್ಷ್ಮವಾಗಿ ಹೇಳಿದ್ದಾರೆ. ಬೆನ್ನುಡಿಯಲ್ಲಿ ಡಾ.ಎಚೆಸ್ವಿ ಕೂಡ ಬಹಳ ಮೌಲಿಕವಾದ ಮಾತನ್ನು ಬರೆದಿದ್ದಾರೆ. ಕವಿ ತನ್ನ ಮಾತಲ್ಲಿ ತನ್ನ ಕಾವ್ಯ ಕರ್ಮದ ಹಿಂದಣ ಸಿದ್ಧತೆಯನ್ನು ಸರಳವಾಗಿ ಬಿಚ್ಚಿಟ್ಟಿದ್ದಾರೆ. ಸಂಕಲನದಲ್ಲಿ ಒಟ್ಟು ಐವತ್ತೊಂದು ಕವಿತೆಗಳಿವೆ. ನವ್ಯದ ನುಡಿಗಟ್ಟುಗಳೇ ಶೀರ್ಷಿಕೆಯಾಗಿರುವ ಸಂಕಲನದ ಎಲ್ಲ ಕವಿತೆಗಳ ತಲೆಬರಹವನ್ನು ಸಣ್ಣದೊಂದು pause ಕೊಟ್ಟು ಓದಿದರೆ ಅದೇ ಮತ್ತೊಂದು ಕವಿತೆಯಾಯಿತು! ಇಂಥ ಭಾಗ್ಯ ಮತ್ತು ಅನುಕೂಲ ಕವಿತೆಯ ಬಗ್ಗೆ ಭರವಸೆ ಮತ್ತು ಅಧ್ಯಯನದ ಮೂಲಕವೇ ಕವಿ ಬೆಳೆದಿರುವುದರ ಸೂಚನೆಯಾಗಿದೆ. ಅಡಿಗರ ಜೊತೆಜೊತೆಗೇ ಅಲ್ಲಮ ಇಣುಕುವಾಗಲೇ ಕೆ ಎಸ್ ನ ಕೂಡ ಈ ಕವಿಯ ಜೊತೆಗೆ ಹೆಜ್ಜೆ ಇಕ್ಕುತ್ತಾರೆ. ಇನ್ನೂ ಮಜವೆಂದರೆ ಚಾಮರಾಜನಗರ ಪ್ರದೇಶದ ಮೌಖಿಕ ಕಾವ್ಯ ಪರಂಪರೆಯ ಸೊಗಡಿನ ವಾಸನೆ ಕೂಡ ಮೂಗನ್ನು ಅರಳಿಸುತ್ತದೆ. ಪ್ರಾರ್ಥನೆ, ಬಿನ್ನಹ, ಒಂದು ಭಾವ, ಕೊಡು, ನೋ, ಸತ್ತಿಗೆ ಮುಂತಾಗಿ ಶೀರ್ಷಿಕೆಗಳನ್ನೇ ಓದುತ್ತ ಹೋದರೆ ಮತ್ತೊಂದು ಕವಿತೆ ಹುಟ್ಟುವುದು ಈ ಕವಿಯನ್ನು ಭರವಸೆಯಿಂದ ನಿಜದ ಅರಿವು ಮತ್ತು ಅಧ್ಯಯನ ಮಾಗಿಸಿದ ತಾತ್ವಿಕತೆಗೆ ಭೇಷ್ ಅನ್ನುತ್ತೇನೆ. ದಿಲೀಪ್ ಈಗಾಗಲೇ ಒಂದು ಸಂಕಲನ ಪ್ರಕಟಿಸಿ ತುಂಬ ಹೆಸರು ಮಾಡಿದವರು. ಅಲ್ಲದೆ ತುಂಬ ಕಿರಿಯ ವಯಸ್ಸಿನ ವಿಮರ್ಶಕರು ಕೂಡ ಹೌದು. ಪಂಪನನ್ನು ವರ್ತಮಾನದಲ್ಲಿ ಅರಿತಿರುವ ಯುವಕರ ಪೈಕಿ ದಿಲೀಪ್ ಮೊದಲು ನೆನಪಾಗುತ್ತಾರೆ. ಅವರ ಫೇಸ್ಬುಕ್ ಬರಹಗಳಲ್ಲಿ ಬರಿಯ ಕವಿತೆಗಳಲ್ಲದೇ ನಾಡು, ನುಡಿ, ಸಂಸ್ಕೃತಿ, ರಾಜಕಾರಣವೂ ಸೇರಿದಂತೆ ಬದುಕಿನ ಎಲ್ಲ ಸ್ತರಗಳ ದರ್ಶನದ ಜೊತೆಗೇ ಶಾಸ್ತ್ರೀಯ ಸಂಗೀತದ ಕುರಿತ ಟಿಪ್ಪಣಿಗಳೂ ಹಾಗೂ ಈ ಕವಿಯನ್ನು ಬಹಳವಾಗಿ ಪ್ರಭಾವಿಸಿದವರ ಕುರಿತೂ ಇವೆ. ನಮ್ಮಲ್ಲಿ ಬಹುತೇಕರ ಫೇಸ್ಬುಕ್ ಪುಟಗಳು ಸ್ವಂತದ ಪಟ, ಸಾಮಾಜಿಕ ಘಟನೆಯೊಂದರ ಬಿಡುಬೀಸು ಹೇಳಿಕೆಗಳಾಗಿ ಬದಲಾಗುತ್ತಿರುವ ಕಾಲದಲ್ಲಿ ಎಲ್ಲೋ ಅಪರೂಪಕ್ಕಷ್ಟೇ ಕಾಣುವ ದಿಲೀಪನಂಥವರ ಪುಟಗಳು ಇನ್ನೂ ಅಲ್ಪ ಸ್ವಲ್ಪ ಉಳಿದಿರುವ ಮಾನವೀಯತೆಯ ಮುಖವನ್ನೂ ನಿಜಕ್ಕೂ ಆಗಬೇಕಿರುವ ನಿಜದ ಕೆಲಸಗಳನ್ನೂ ಹೇಳುತ್ತವೆ. ಜೊತೆಗೇ ಪರಂಪರೆಯನ್ನೂ ಪೂರ್ವ ಸೂರಿಗಳನ್ನೂ ಗೌರವಿಸುವ ಈ ಕವಿಯ “ಹಾರುವ ಹಂಸೆ” ಸಂಕಲನದ ಶೀರ್ಷಿಕೆಯೇ ಮೂಲತಃ ಕಂಬದಲಿಂಗನೆಂಬ ಹೆಸರಲ್ಲಿ ವಚನಗಳನ್ನು ಬರೆದ ಕಂಬದ ಮಾರಿತಂ‍ದೆಯೆಂಬ ವಚನಕಾರನ ವಚನದಿಂದ ಪ್ರಭಾವಿಸಲ್ಪಟ್ಟ ಕುರುಹಾಗಿದೆ. ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾರುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ. ಇನ್ನು ಹೆಚ್ಚು ವಿಸ್ತರಿಸುತ್ತ ಹೋದರೆ ಸ್ವಾರಸ್ಯ ಕೆಟ್ಟೀತೆಂಬ ವಿವೇಕದಲ್ಲಿ ದಿಲೀಪರ ಕೆಲವು ಕವಿತೆಗಳನ್ನು ಪರಿಶೀಲಿಸುವ ಕೆಲಸ ಮಾಡೋಣ. ಕೇಳಬೇಕು ಸಿಕ್ಕಾಗ ಒಂದು ನದಿಯಿಂದ ಹರಿಯಿತೇ ಬದುಕು ಸಪ್ತಕಂದಕಗಳ ದಾಟಿ ನಿಲ್ಲಿಸಿ ಇಳಿಸಿತ್ತೇ ಸಹಸ್ರಾರದ ಮೇಲೆ ಎಂದು ಪ್ರಾರಂಭವಾಗುವ ದಿಲೀಪರ ಬುದ್ಧನಿಗೆ ಹೆಸರಿನ ಕವಿತೆ ಈ ಕವಿಯು ಅನುಸರಿಸುತ್ತಿರುವ ದಾರಿಯನ್ನು ಮತ್ತು ಅವರು ನಂಬಿರುವ ನೆಚ್ಚಿರುವ ದಾರಿಯನ್ನೂ ತೋರುತ್ತಿದೆ. ಅಂದ ಮಾತ್ರಕ್ಕೇ ಇವರ ಪದ್ಯಗಳು ಸರ್ವ ಗುಣ ಸಂಪನ್ನತೆಯನ್ನೇನೂ ಹೊಂದಿಲ್ಲ. ಅಪರೂಪಕ್ಕೆ ಅವರಿವರ ಮೇಲೆ ಏರಿ ಹೋಗುವ ಚಾಳಿಯ ಜೊತೆಗೇ ವ್ಯಂಗ್ಯದ ಮಾತೂ ಹೀಗೆ ಹೊರಬೀಳುತ್ತವೆ; ಅವನೊಬ್ಬನಿದ್ದ ಗೆಳೆಯ ಗಾಜಿನ ಬಾಟಲಿ ಸದ್ದಾದಾಗ ಓಡಿ ಬರುತ್ತಿದ್ದ ಬಾಟಲಿ ತರೆಯುವಾಗ ಓಪನರ್ ಕೊಡುತ್ತಿದ್ದ ಲೋಟಕ್ಕೆ ಸುರಿದಾಗ ಸೋಡದ ಹಾಗೆ ಮುಖ ಉಬ್ಬಿಸಿ ಕೈ ಅಲುಗಾಡಿದೆ ಹಿಡಿದು ಮುತ್ತಿಕ್ಕಿಸಿ ಲೋಟಕ್ಕೆ ಲೋಟ ಒಟ್ಟಿಗೆ ಕೂರುತ್ತಿದ್ದ (ದುರಿತ ಕಾಲ) ಜೊತೆಗೇ “ತೀರ್ಥಪುರದವರು ಸಿಕ್ಕಿದ್ದರು ” ಥರದ ಕವಿತೆಗಳಲ್ಲಿ ಕಾಣುವ “ತೀರ್ಥರೂಪ”ರನ್ನೂ ನಾವು ಅರಿಯಬೇಕು. ವೈರಾಗ್ಯಕ್ಕೆ ಹೊತ್ತು ಗೊತ್ತಿಲ್ಲ ಗಂಟೊಳಗಿನ ಸ್ವಾದದ ಆಸ್ವಾದನೆಯ ಸಾಧನೆಯ ತುದಿ ಅದೆ ಹಾದಿ ಬೇರೆ ಬೇರೆ ಅಷ್ಟೆ ಒಂದೊಂದು ರುಚಿಯಲೂ ಇರುವ ಸ್ವಾದ ಕಠಿಣವೆನಿಸಿದರೆ ನಿನ್ನ ಬದುಕೂ ಬಲು ಕಠಿಣವಾಗಿದೆ ಒಂದೊಂದು ಭಾಷೆಯ ಲೀಲೆಯಲೂ ಮನದ ಕೊನೆ ಹಾರಬೇಕು (ತೀರ್ಥಪುರದವರು ಸಿಕ್ಕಿದ್ದರು). “ಕವಿತೆಯಲ್ಲದ ಕವಿತೆ”ಯಂಥ ರಚನೆಗಳಲ್ಲಿ ಹಿತೋಪದೇಶ ಕೂಡ ಇದೆ. ಜನಸಾಗರ ರಕ್ತದ ಮಡುವಲ್ಲಿ ತೇಲಿ ಮುಳುಗಿ ಈಜುವಾಗ ನನ್ನೀ ಪ್ರೇಮಾಖ್ಯಾನದ ಪುಟ ಪುಟವನೂ ಬಿಡದೆ ಲೋಲುಪನಾಗಿ ಪ್ರೀತಿಯಲಿ ಓದುವೆ ನನಗೆರಡು ಕಿವಿ ಬೇಡವೆ ನಾನೂ ಕವಿಯಲ್ಲವೇ (“ಗೆ”) ಎಂದು ಬೀಗುವ ವಾಸ್ತವದ ಕವಿಗಳನ್ನು ಚುಚ್ಚುತ್ತಾರೆ ಕೂಡ. ಸ್ವಂತದ ಕವಿತೆಗಳ ಜೊತೆಗೇ ಭರ್ತೃಹರಿಯಂಥ ಹಿರಿಯರನ್ನು ಕನ್ನಡಕ್ಕೆ ಒಗ್ಗಿಸುವ ಅನುವಾದದ ಕೆಲಸಕ್ಕೂ ಇವರು ಕೈ ಹಾಕಿರುವುದು ಸಂತಸದ ಕೆಲಸ. ಇಂದು ಮತ್ತೆ ಮಳೆ ಅದೇ ರಸ್ತೆಯಲಿ ಇದ್ದೇನೆ ರಸ್ತೆ ಕೊನೆಯಲ್ಲೆ ಕಣ್ಣಿದೆ ಗುರುತುಗಳೆಲ್ಲಾ ಅಳಿಸಿ ಕಾಲವಾಗಿದೆ ಇಲ್ಲೆಲ್ಲಾ ಹೆಜ್ಜೆಗುರುತಿದೆ “ಮತ್ತೆ ಮಳೆ” ಪದ್ಯದ ಸಾಲುಗಳ ಮೂಲಕ ತನ್ನಲ್ಲೂ ಇರುವ ಹತಾಶ ಪ್ರೇಮಿಯ ಹುಯಿಲನ್ನೂ ಇವರು ಕಾಣಿಸುವ ರೀತಿ ಹೊಸ ಪರಿಯದ್ದು. ದಿಲೀಪರ ಎಲ್ಲ ಪದ್ಯಗಳನ್ನೂ ಒಟ್ಟಿಗೆ ಹರಡಿಕೊಂಡು ಕೂತರೆ ಅವರೊಳಗಿನ ಕವಿಗೆ ಅನುಭವದ ಹದಕ್ಕಿಂತ ಓದಿನ ಮೂಲಕವೇ ಪಡೆದ ಜ್ಞಾನವೇ ಕೆಲಸ ಮಾಡುವುದು ಅರಿವಾಗುತ್ತದೆ. ಆ ಕಾರಣಕ್ಕೇ ದಿಲೀಪ್ ಹೃದಯದ ಪದ್ಯಗಳಿಗಿಂತ ಬುದ್ಧಿಯ ಬಲದ ಪದ್ಯಗಳ ರಚನೆಯಲ್ಲೇ ಹೆಚ್ಚು ಆಸಕ್ತರಾಗಿರುವ ಕಾರಣಕ್ಕೋ ಏನೋ ಅವರು ವರ್ತಮಾನದ ಸಂಗತಿಗಳಿಗಿಂತಲೂ ಐತಿಹ್ಯದ ಪುರಾವೆಗಳ ಬೆನ್ನುಹತ್ತುತ್ತಾರೆ ಮತ್ತು ಆ ಕಾರಣಕ್ಕೇ ನವ್ಯವು ಕಲಿಸಿಕೊಟ್ಟ ಪ್ರತಿಮೆ ಮತ್ತು ತಮ್ಮ ಅಪಾರ ಓದಿನ ಕಾರಣದಿಂದ ಕಲ್ಪಿಸಿಕೊಂಡ ರೂಪಕಗಳಲ್ಲೇ ತೊನೆಯುತ್ತಾರೆ. ನಿಜದ ಕವಿ ಇದನ್ನು ಮೀರದ ಹೊರತೂ ತನ್ನದೇ ಹಾದಿಯನ್ನು ನಿರ್ಮಿಸಿಕೊಳ್ಳಲಾರ. ಅದು ಅವರಿಗೂ ಗೊತ್ತಿದೆ. ಈ ಮಾತಿಗೆ ಸಾಕ್ಷಿಯಾಗಿ “ಪುರಂದರರಿಗೆ” ಕವಿತೆಯ ಈ ಸಾಲುಗಳನ್ನು ನೋಡಬಹುದು; ಈಗ ಆರಂಬ ಮಾಡಿದ್ದೇನೆ ಒಂದಷ್ಟು ಮೋಡಿಯ ಮಾಯದಮಳೆ‌ ಬಂದಿದೆ ನಾದದಲಿ ಪಚ್ಚೆತೆನೆ ಹುಲುಸಾಗಿ ಬೆಳೆಯಲು ಉಸಿರಾಗಿ ಕೈ ಹಿಡಿದು ನಡೆಸಬಹುದು ಒಳಗಿನ ಮೂಲೆ ಮೂಲೆಯಲೆಲ್ಲ‌ ಇಂದೂ ಕೇಳುತಿದೆ ನೀವು ಎಂದೋ ಮೀಟಿದ ತಂಬೂರಿ ದನಿಯ ಮಾರ್ದನಿ. “ಪುರಂದರರಿಗೆ” ಎಂದು ಹೇಳುವ ಪದ್ಯ ಸ್ವತಃ ಕವಿ ತನಗೆ ತಾನೇ ಹೇಳಿಕೊಳ್ಳುತ್ತಲೇ ಜೊತೆಗೇ ಇರುವವರ ಕಕ್ಕುಲಾತಿ ಮತ್ತು ವಿಸ್ಮೃತಿಗಳ ನಡುವೆ ಜೀಕುತ್ತದೆ ಮತ್ತು ಈ ಕವಿಯ ಮೆಚ್ಚಲೇ ಬೇಕಾದ ಪದ್ಯಗಳಲ್ಲಿ ಒಂದಾಗಿದೆ. ಇದನ್ನು ವಿಸ್ತರಿಸುವ ಹಾಗೆ ಇರುವ  “ಒಮ್ಮೆಲೇ ಹೀಗಾಗಿಬಿಟ್ಟರೆ ಹೇಗೆ” ಹೆಸರಿನ ಪದ್ಯದಲ್ಲಿ ಇರುವ ಅಂತಃಶಕ್ತಿ ಬೆರಗು ಹುಟ್ಟಿಸಿ ಈ ಕವಿಯು ಮುಂದೆ ನೇಯಬಹುದಾದ ಕವಿತೆಯ ಚಮತ್ಕಾರಿಕ ಪದ ಸಂಚಯದ ವಿಶೇಷವಾಗಿಯೂ ಕಾಣಬಹುದು. ಒಳಗೆ ಬೆಂಕಿ ಹೊರಗೂ ಕನಸಲ್ಲಿ ಬೆಂಕಿ ಉರಿ ತಾಕಿ ಮೈ ಉರಿದು ಸುಟ್ಟು ಕರಕಲಾದ ಕನಸು ಬಿದ್ದ ಕ್ಷಣ ಮೈ ಕೈ ಕೊಡವಿ ಗಡಿಬಿಡಿಯಲ್ಲಿ ಎದ್ದು ಕನ್ನಡಿ ಎದುರು ಬಲಗೈ ಎಂದು ಮುಟ್ಟಿದಾಗ ಎಡಗೈ ಎಡಗೈ ಎಂದು ಮುಟ್ಟಿದಾಗ ಬಲಗೈ ನೋಡಿಕೊಂಡು ಮುಖ ಮೈ ಕೈ ಎಲ್ಲಾ ಸವರಿಕೊಂಡು ನೀರು ಕುಡಿದ ತಕ್ಷಣ ಅನುಮಾನ ಶುರುವಾದದ್ದು ಬೆಂಕಿ ಬಿದ್ದದ್ದು ಆ ಕೈ ಗಾ ಈ ಕೈ ಗಾ ಮುಟ್ಟಿದ್ದು ನಿದ್ದೆಯಲ್ಲಾ ಅಥವಾ ಎಚ್ಚರದಲ್ಲಾ ಬೆಂದು ಬೂದಿಯಾಗಿದ್ದು ಒಳಗಾ ಹೊರಗಾ ನಿಜಕ್ಕೂ‌ ಈ‌ ಬಗೆಯ ದ್ವಂದ್ವವೇ ಪದ್ಯದ ಆಂತರ್ಯವಾದರೆ ಅದರ ಮುಂಬಗೆಯ ಬೆಂಕಿಯ ಹದ ಹುಟ್ಟಿಸುವ ಶಾಖಕ್ಕೆ ಪರ್ಯಾಯವಾಗುವುದು ಮತ್ತೊಂದು ಪದ್ಯವೇ ತಾನೆ? ಆದರೆ ಸಾವು ಕೂಡ ಎಲ್ಲ ಕವಿಗಳನ್ನು ಕಾಡುವ ಅನಿವಾರ್ಯ ವಸ್ತುವಾದ್ದರಿಂದ ದಿಲೀಪ ಹೀಗೆ ಹೇಳುತ್ತಾರೆ; ಕರಿನೆರಳು ಎದುರುಗೊಂಡಂತೆ ಮಕ್ಕಳು ಆಟಿಕೆ ತೆಗೆದೆಸೆದಂತೆ ಅತ್ತ ಇತ್ತ ಜೀವದಲಿ ಉನ್ಮಾದದಾಟ ಪಕ್ಕಸರಿದಂತೆ ಆಸೆ ಪಡುವ ಜೀವ ಜೀಕಿದಂತೆ ಕತ್ತಲೆಗೂ ಬೆಳಕಿಗೂ ಜೋಕಾಲಿಯಾಟ ಸರಿ, ಬದುಕಿನ ಮುಖಗಳನ್ನೇ ಇನ್ನೂ ಅರಿಯದ ಹುಡುಗರು ಹೀಗೆ ಸಾವಿಗೆ ಮರುಗುವುದು ಕೂಡ ಕರೋನಾ ಕಲಿಸಿದ ಪಾಠವೇ ಇರಬೇಕು! ದಿಲೀಪ್ ತಮ್ಮ ಓದಿನ ಮೂಲಕ ಕಡ ಪಡೆದ ಸಂಗತಿಗಳಾಚೆ ನಿಜ ಬದುಕಿನ ಪಲುಕುಗಳನ್ನು ಅರಿತವರಾದರೂ ಅವರ ಮೊದಲ ಪ್ರಾಶಸ್ತ್ಯ ಸಲ್ಲುವುದು ಓದಿನ ಮೂಲಕ ಪಡೆದ ಅರಿವಿನ ಕಡೆಗೇ. ಅವರ ಓದಿನ ಹರಹು ಸಮೃದ್ಧವಾದದ್ದು ಹೌದಾದರೂ ವರ್ತಮಾನದ ರಿಕ್ತತೆಯನ್ನು ಮತ್ತು ಸ್ವಂತ ಅನುಭವಗಳ ಮೂಲಕ ಅರಿಯುವ ಬದುಕಿನ ವಿಷಣ್ಣತೆ ಕೂಡ ಕಾವ್ಯೋದ್ಯೋಗಕ್ಕೆ ಪೋಷಾಕನ್ನೂ ಪಕ್ವಾನ್ನವನ್ನೂ ಪಡೆಯುವ ಸಾಧನವೆಂಬುದನ್ನು ತಮ್ಮ ಮುಂದಿನ ಪದ್ಯಗಳ ಮೂಲಕ ಸಾಬೀತು ಪಡಿಸಲಿ ಎನ್ನುವ ಆಶಯದೊಂದಿಗೆ ಅವರ ಫೇಸ್ಬುಕ್ ಕವಿತೆಗಳ ಓದಿನ ಟಿಪ್ಪಣಿಯನ್ನು ಕೊನೆ ಮಾಡುವ ಮೊದಲು ಅವರ ಆಯ್ದ ಆರು ಕವಿತೆಗಳನ್ನು ನಿಮ್ಮ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. **************************************************************** ದಿಲೀಪ ಕುಮಾರ್ ಅವರ ಆಯ್ದ ಕವಿತೆಗಳು ೧. ಬುದ್ಧನಿಗೆ ಕೇಳಬೇಕು ಸಿಕ್ಕಾಗ ಒಂದು ನದಿಯಿಂದ ಹರಿಯಿತೇ ಬದುಕು ಸಪ್ತಕಂದಕಗಳ ದಾಟಿ ನಿಲ್ಲಿಸಿ ಇಳಿಸಿತ್ತೇ ಸಹಸ್ರಾರದ ಮೇಲೆ ರಾಹುಲನ ಕಣ್ಣು ಇನ್ನೂ ಒದ್ದೆ ಒದ್ದೆ ನೀನು ಹತ್ತಿ ಇಳಿದಿದ್ದಕ್ಕೋ ಯಶೋಧರೆ ಧರೆಗೆ ಬಿದ್ದಿದ್ದಕ್ಕೋ ಸುತ್ತಲಿನ ಜನರೆಲ್ಲರ ಕಣ್ಣ ಭಾಷೆ ತೋಯಿಸಿತ್ತೇ ಇಬ್ಬರನೂ ಹರಿವ ನದಿಯ ಜಾಡು ಹಿಡಿದು ಮುರಿದ ಮನವ ಬೆಸೆವ ಕಾಯಕಕ್ಕೆ ಬಿಟ್ಟು ಹೊರಟಿದ್ದಾದರೂ ಏಕೆ ಒಂದು ಕಾವಿ ಜೊತೆಗೆ ಆನಂದ ಅದು ಹೇಗೆ ಮತ್ತೆ ಕೇಳಬೇಕು ನಮ್ಮ ಗಲ್ಲಿಯಲಿ ಸಪ್ತಗಿರಿಗೆ ಹೋಗುವ ದಾರಿಯಂಚಲಿ ಸಿಕ್ಕರೆ ಬುದ್ಧನಿಗೆ ಬಿಟ್ಟು ಹೊಗುತ್ತಲೇ ಉಳಿದಿದ್ದು ಹೇಗೆ ಉಳಿಯುತ್ತಲೇ ಅಳಿಯದ ಹಾಗೆ ಇರುವುದು ಹೇಗೆ ೨. ತೀರ್ಥಪುರದವರು_ಸಿಕ್ಕಿದ್ದರು ಇಲ್ಲೇನಿದೆ ಅದೇ ನರಕ ಮೇಲೂ ಹೆಚ್ಚೇನಿಲ್ಲ ಎನಿಸಿ ಸುಮ್ಮನೆ ಕುಳಿತವನೆದುರು ಬಂದು ಬುತ್ತಿ ಬಿಚ್ಚಿ ಮಾತು ಶುರು ಮಾಡಿದರು ಹಂಚಿ ಉಂಡೆವು ಇಬ್ಬರೂ ಒಂದಷ್ಟು ರುಚಿ

Read Post »

You cannot copy content of this page

Scroll to Top