ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬೀಜಕ್ಕೊಂದು ಮಾತು

ಕವಿತೆ ಬೀಜಕ್ಕೊಂದು ಮಾತು ರಜಿಯಾ ಬಳಬಟ್ಟಿ ಎಲೆ ಬೀಜವೇನೀ ಹೆಣ್ಣೋ ಗಂಡೋ ಹೀಗೇಕೆ ಕೇಳುವಳೀ ಅಮ್ಮಎಂದು ಆಶ್ಚರ್ಯ ವೇನು ಕಂದಾ , ಹೌದು ಕೇಳುವ ಸ್ಧಿತಿ ಈಗ. ಒಂದು ಕಾಲವಿತ್ತುಸುತ್ತೆಲ್ಲ ಗುಲಾಬಿ ತೋಟನಡುವೆ ಕೆಂಗುಲಾಬಿನನ್ನ ಮಗಳೆಂದುಖುಷಿ ಪಡುವದು. ಈಗಿಲ್ಲವಮ್ಮ. ಗುಲಾಬಿಯ ತೋಟದಲ್ಲೆಲ್ಲಹೊಂಚು ಹಾಕಿದ ಕಾಮದ ಕಂಗಳುಕ್ಷಣ ಕ್ಷಣವೂ ಅಭದ್ರತೆಕೀಚಕ – ದುಶ್ಯಾಸನರವಂಶಾವಳಿಯಲ್ಲಿಅದೆಂತು ರಕ್ಷಿಸಲಿ ಮಗಳೆ,ಭೀತಿಯ ಬಾಹುಗಳಲಿನನ್ನನ್ನೇ ನಾ ಉಳಿಸಿಕೊಂಡುಗೂಡು ಸೇರುವದೇದುಸ್ಸಾಹಸವಾಗಿರುವಾಗ,ನೀ ಮೊಳಕೆಯೊಡೆಯಬೇಡತಿಳಿ, ಈ ಅಸಹಾಯಕತೆಯ. ಅಪ್ಪಾ ಮಗಾ ರಾಜಕುಮಾರಾವಂಶಕ್ಕೆ ಹೆಸರು ತಂದುದೃಷ್ಟಿ ತುಂಬ ಸಹಾಯ ಭಾವದಿಆದರ್ಶದಿ ಬದುಕುವದಿದ್ದರೆ ಬಾ.ಇಲ್ಲದಿರೆ ಚಿಗುರೊಡೆಯಬೇಡ.ಬಂಜೆ ಎಂದು ಸಹಿಸಬಹುದು.ಆ ಕಾಮುಕನ,ಪಾಪಿಯ ತಾಯಿಇವಳೆಂದು ಜನ ದಿಟ್ಟಿಸಿದಾಗ,ಆ ಕೆಂಗಣ್ಣಿನಲ್ಲಿಯೇ ನಾಕರಕಾಗುವೆ ಕಂದಾತಿಳಿ ನೀ ಜವಾಬ್ದಾರಿಯ. *************************************** ರಜಿಯಾ ಬಳಬಟ್ಟಿ

ಬೀಜಕ್ಕೊಂದು ಮಾತು Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಂಕಣ ಬರಹ ತ್ವರಿತವಾಗಿಉತ್ತಮನಿರ್ಧಾರತೆಗೆದು ಕೊಳ್ಳುವುದುಹೇಗೆ? ಹಿಂದೆ ಮಾಡಿದ ನಿರ್ಧಾರಗಳು ಇಂದು ನಾವಿರುವ ಸ್ಥಿತಿಗೆ ಕಾರಣ.ಎಂಬುದು ನಮಗೆಲ್ಲ ಗೊತ್ತಿರುವ ವಿಷಯವೇ. ಆದರೂ ಹಲವೊಮ್ಮೆ ನಾವು, ಛೇ! ನಾನು ಅಷ್ಟು ತಡವಾಗಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಈಗ ನೋಡು ಎಷ್ಟೊಂದು ನೋವು ಅನುಭವಿಸುವ ಹಾಗಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು. ನನ್ನ ವಿಳಂಬ ನಿರ್ಧಾರದಿಂದ ಸಾಕಷ್ಟು ನಷ್ಟವಾಗುತ್ತಿದೆ ಅಂತ ತಿಳಿಯುತ್ತಿದ್ದರೂ ಅದನ್ನು ಬದಲಿಸಿಕೊಳ್ಳಲು ಆಗುತ್ತಿಲ್ಲ ಎಂದು ಹಲಬುತ್ತೇವೆ.ನಿರ್ಧಾರಗಳು ಇಡೀ ಜೀವನವನ್ನೇ ಆವರಿಸಿವೆ. ವೃತ್ತಿ ಪ್ರವೃತ್ತಿ ಆರೋಗ್ಯ ಸಂಬಂಧಗಳು ಎಲ್ಲವೂ ನಿರ್ಧಾರದಿಂದ ನಿರ್ಧರಿಸಲ್ಪಡುತ್ತವೆ. ನನ್ನ ಜೊತೆಗೆ ಇದ್ದ ಗೆಳೆಯರು ಇದೇ ವಿಷಯದಲ್ಲಿ ಮಾಡಿದ ಸೂಕ್ತ ತ್ವರಿತ ನಿರ್ಧಾರಗಳು ಅವರ ಬದುಕನ್ನು ಉನ್ನತ ಸ್ಥಿತಿಗೆ ಏರಿಸಿದವು.ನಿರ್ಧಾರವೆಂದರೆ. . . . . .?‘ಮೂಲತಃ ನಿರ್ಧಾರವೆಂದರೆ ಲಭ್ಯವಿರುವ ಆಯ್ಕೆಗಳಲ್ಲಿ ಸರಿಯೆನಿಸಿದ ಒಂದನ್ನು ಆರಿಸಿಕೊಳ್ಳುವುದು.’ ‘ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನಮ್ಮ ಜೀವನವನ್ನು ನಿರ್ಧರಿಸುತ್ತದೆ.’ನಾವು ತೆಗೆದುಕೊಳ್ಳುವ ನಿರ್ಧಾರಗಳು ಬದುಕನ್ನು ಕಟ್ಟುತ್ತವೆ ಇಲ್ಲವೇ ಕೆಡುವುತ್ತವೆ. ನಿರ್ಧಾರಗಳಿಗೆ ಬಹಳಷ್ಟು ಸಮಯ ಕಳೆಯುತ್ತೇವೆ. ಮುಂಜಾನೆ ಎಷ್ಟು ಗಂಟೆಗೆ ಏಳೋದು? ಮಧ್ಯಾಹ್ನ ಊಟಕ್ಕೇನು? ಇಂದು ಯಾವ ಯಾವ ಕೆಲಸ ಮಾಡುವುದು? ಯಾರನ್ನು ಭೇಟಿಯಾಗುವುದು ಇಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ನಿರ್ಧಾರ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದೆ. ಬಿಕ್ಕಟ್ಟಿನ ಸಮಯದಲ್ಲಿ ಇಲ್ಲವೇ ಜೀವನದ ಮಹತ್ವದ ನಿರ್ಧಾರದಲ್ಲಂತೂ ಇದರ ಪಾತ್ರ ಬದುಕನ್ನೇ ಅಲ್ಲಾಡಿಸಿ ಬಿಡುತ್ತದೆ. ತ್ವರಿತ ನಿರ್ಧಾರದಿಂದ ಸಾಕಷ್ಟು ಸಮಯ ಉಳಿಸಬಹುದು.ಕಠಿಣ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಸಮರ್ಪಕ ಗುರಿ ಹೊಂದಿರುವುದು ಮುಖ್ಯ.ಬಿಲಿಯನ್ ಡಾಲರ್ ಪ್ರಶ್ನೆನಿರ್ಧಾರಗಳೇ ಹಾಗೆ ಕೇವಲ ಕೆಲವು ಕ್ಷಣಗಳಲ್ಲಿ ಬದುಕನ್ನು ವಿಚಿತ್ರ ತಿರುವಿನಲ್ಲಿ ತಂದು ನಿಲ್ಲಿಸಿ ಬಿಡುತ್ತವೆ. ಪ್ರತಿ ಬಾರಿ ನಿರ್ಧರಿಸುವಾಗ ತುಂಬಾ ಅವಸರಿಸಿದರೂ ಕಷ್ಟ ವಿಳಂಬವಾದರೂ ಕಷ್ಟ. ಇದೊಂದು ತರಹ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಅನುಭವ ಉಗುಳಲೂ ಆಗದು. ನುಂಗಲೂ ಆಗದು. ಎನ್ನುವುದು ಹಲವರ ಅಂಬೋಣ.ಕೆಲವರ ಸಲಹೆ ಪ್ರಕಾರ ಮುಗ್ಗರಿಸಿದರಂತೂ ಅವರನ್ನು ಇನ್ನಿಲ್ಲದಂತೆ ಹಾಡಿ ಹರಸುತ್ತೇವೆ. ಸಲಹೆ ನೀಡುವವರು ಸಾರ್ವತ್ರಿಕವಾಗಿ ಯೋಚಿಸಿ ನಿರ್ಧಾರ ಪ್ರಕಟಿಸುತ್ತಾರೆ. ನಮ್ಮ ಬದುಕಿನ ಬಗ್ಗೆ ನಮಗಿಂತ ಚೆನ್ನಾಗಿ ಬೇರೆಯವರಿಗೆ ಹೆಚ್ಚು ತಿಳಿದಿರುವುದಿಲ್ಲ. ನಮಗೆ ಚೆನ್ನಾಗಿ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲವೆಂದ ಮೇಲೆ ಅನುಭವಿಗಳ ತಿಳಿದವರನ್ನು ಅವಲಂಬಿಸುವುದು ಸಾಮಾನ್ಯ. ಆದರೆ ಆ ನಿರ್ಧಾರ ಯಾವಾಗಲೂ ಒಳ್ಳೆಯ ಫಲಿತಗಳನ್ನು ಕೊಡುತ್ತದೆ ಎನ್ನುವುದು ಲಾಟರಿ ಫಲಿತಾಂಶ ಇದ್ದಂತೆ. ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಇತರರ ಮೇಲೆ ಅವಲಂಬಿಸುವುದು ಎಂದರೆ, ‘ಕುಸಿಯುತ್ತಿರುವ ಆಧಾರವನ್ನು ಗಟ್ಟಿಯಾಗಿ ಹಿಡಿದುಕೊಂಡಂತೆ.’ ಹೀಗಿದ್ದಾಗ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಹೇಗೆ?ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆಯಂತೆ ಕಾಡುತ್ತದೆ ಅಲ್ಲವೇ? ಹಾಗಾದರೆ ಮುಂದಕ್ಕೆ ಓದಿ.ನನ್ನ ನಿರ್ಧಾರ ನನ್ನದುಪ್ರತಿಯೊಂದರಲ್ಲೂ ಪರಿಶ್ರಮ ಪಡುವ ಮನೋಭಾವವಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಿ ಬಿಡುತ್ತೇವೆ ಎನ್ನುವುದು ಸುಳ್ಳು. ಧೈರ್ಯದ ತ್ವರಿತ ನಿರ್ಧಾರ ತೊಟ್ಟು ಚೈತನ್ಯದೊಂದಿಗೆ ಮುಂದುವರೆದರೆ ಮಾತ್ರ ಬದುಕಿನಲ್ಲಿ ಸುಧಾರಣೆ ತಂದುಕೊಳ್ಳಬಹುದು. ಚಾಣಕ್ಯ ನೀತಿಯಲ್ಲಿ ಹೇಳಿದಂತೆ “ಕೋಳಿಯಿಂದ ನಾಲ್ಕು ಪಾಠ ಕಲಿಯಬಹುದು. ಬೇಗ ಏಳುವುದು, ಆತ್ಮ ರಕ್ಷಣೆಗೆ ಹಾಗೂ ಯುದ್ಧಕ್ಕೆ ಸದಾ ಸನ್ನದ್ಧವಾಗಿರುವುದು.ತನ್ನ ಸುತ್ತಲಿನವರಿಗೆ ಉದಾರವಾಗಿ ಹಂಚುವುದು. ತನ್ನ ಅವಶ್ಯಕತೆಗಳಿಗೆ ತಾನೇ ಸಂಪಾದಿಸುವುದು.” ಕೋಳಿ ಹೇಗೆ ತನ್ನ ಅಗತ್ಯತೆಗೆ ತಾನೇ ಸ್ಪಂದಿಸುವುದೋ ಹಾಗೆ ನಾವೂ ನಮ್ಮ ನಿರ್ಧಾರಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು.ಗ್ರೀಕ್ ನಾಣ್ಣುಡಿಯಂತೆ “ಬಲ್ಲಿದವನಿಗಿಂತ ತಿಳಿದವನು ಮೇಲು.” ಇತರರು ನಮ್ಮನ್ನು ಬಲ್ಲರು ಆದರೆ ಚೆನ್ನಾಗಿ ತಿಳಿಯಲಾರರು. ಆದ್ದರಿಂದ ನಮ್ಮ ಬಗ್ಗೆ ನಾವೇ ಅರಿತು ನಿರ್ಧರಿಸುವುದು ಮೇಲು.ಪ್ರಮಾಣ ನಿರ್ಧರಿಸಿಸುಮ್ಮನೆ ಯೋಚಿಸಿದರೆ ಪ್ರತಿ ದಿನದ ಬದುಕಿನಲ್ಲಿ ಜೀವಿಸುತ್ತಿರುವುದು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ. ತೆಗೆದುಕೊಳ್ಳುವ ನಿರ್ಧಾರಗಳು ಬದುಕನ್ನು ಬದಲಿಸುವ ತಾಕತ್ತು ಹೊಂದಿವೆ. ಮಾಡುವ ಆಯ್ಕೆಯಲ್ಲಿ ತುಸು ತಡವಾದರೂ ಬಹಳಷ್ಟು ತೊಂದರೆ ಅನುಭವಿಸುವ ತೊಂದರೆ ತಪ್ಪಿದ್ದಲ್ಲ. ಪ್ರತಿ ಸಲ ಪ್ರತಿ ವಿಷಯದಲ್ಲೂ ವಿಳಂಬ ನಿರ್ಧಾರವನ್ನು ರೂಢಿಸಿಕೊಂಡರೆ ಮುಗಿದೇ ಹೋಯಿತು.ಬಂಗಾರದಂಥ ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ಜೀವನ ಪರ್ಯಂತ ಅದನ್ನೇ ನೆನೆ ನೆನೆದು ಕೊರಗ ಬೇಕಾಗುತ್ತದೆ.ಅವರಿವರ ಮುಂದೆ ಅದನ್ನೇ ತೋಡಿಕೊಳ್ಳುತ್ತ ಕೂರಬೇಕಾಗುತ್ತದೆ. ಹಾಗಾದರೆ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಒಂದು ಕೌಶಲ್ಯ ಅಲ್ಲವೇ? ಸರಿ, ಏನಾದರೂ ಆಗಲಿ ಅಂತ ಅವಸರದಲ್ಲಿ ಏನಾದರೂ ನಿರ್ಧಾರ ಕೈಗೊಂಡರೆ ಅದನ್ನೂ ಅನುಭವಿಸಲೇಬೇಕು. ನಿರ್ಧಾರಗಳನ್ನು ಸಣ್ಣ ಮಧ್ಯ ಮತ್ತು ದೊಡ್ಡ ಎನ್ನುವ ವರ್ಗಕ್ಕೆ ಸೇರಿಸಬೇಕು.ಇದು ನಿರ್ಧಾರದ ಪ್ರಾಮುಖ್ಯತೆಯನ್ನು ಬೇರ್ಪಡಿಸುವುದು. ಸೂಕ್ತ ಸಮಯ ಹಾಗೂ ಶ್ರಮವನ್ನು ಹಾಕಲು ಅನುವು ಮಾಡಿಕೊಡುವುದು.ಇರಲಿ ಸಮಯ ಮಿತಿಸ್ವಯಂ ಸಮಯ ಮಿತಿಯು ನಿರ್ಧಾರವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವುದು.ಯಾವುದೇ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದರೆ ಟೈಮರ್‍ನ್ನು ಹೊಂದಿಸಿ ಮತ್ತು ನಿರ್ಧಾರದ ಪ್ರಕ್ರಿಯೆ ಪ್ರಾರಂಭಿಸಿ. 10,10,10 ವಿಧಾನ ಬಳಸಿ ಅಂದರೆ ತೆಗೆದುಕೊಂಡ ನಿರ್ಧಾರ 10 ನಿಮಿಷ, 10 ತಿಂಗಳು 10 ವರ್ಷಗಳ ನಂತರ ಖುಷಿ ನೀಡುವುದು ಎನ್ನುವುದನ್ನು ತಿಳಿದುಕೊಂಡರೆ ಸಾಕು. ತ್ವರಿತ ಉತ್ತಮ ನಿರ್ಧಾರ ಸಾಧ್ಯ. ನಿರ್ಣಯ ತೆಗೆದುಕೊಳ್ಳಬೇಕಾದ ಸಮಸ್ಯೆಯನ್ನು ಬರೆದು ಸಂಭವನೀಯ ನಿರ್ಣಯಗಳನ್ನು ಲಾಭದಾಯಕ ಅಂಶಗಳನ್ನು ವಿಶ್ಲೇಷಿಸುವುದು ಅತ್ಯಂತ ಉತ್ತಮ ವಿಧಾನ. ನಿರ್ಣಯದ ತುದಿಯನ್ನು ಸರಳವಾಗಿ ತಲುಪಲು ಸಹಾಯ ಮಾಡುತ್ತದೆ. ‘ಸಮಯ ಮಿತಿಯು ಯಾವಾಗ ಕೊನೆಗೊಳ್ಳುತ್ತದೆ ಎಂದು ತಿಳಿದಾಗ ನಾವು ನಿರ್ಧಾರದಲ್ಲಿ ಹೆಚ್ಚಿನ ಶ್ರಮವನ್ನು ಹೂಡುತ್ತೇವೆ.’ ಎಂದು ಒಂದು ಅಧ್ಯಯನ ತಂಡ ಹೇಳಿದೆ. ಅಷ್ಟೇ ಅಲ್ಲ ಕಡಿಮೆ ಆಯಾಸವನ್ನು ಅನುಭವಿಸುತ್ತೇವೆ. ಇದು ಗಡುವಿನ ಶಕ್ತಿ ಅಲ್ಲದೇ ಮತ್ತೇನೂ ಅಲ್ಲ. ದೊಡ್ಡ ಅಥವಾ ಮಹತ್ವದ ನಿರ್ಧಾರಗಳಿಗೆ ಹೆಚ್ಚಿನ ಗಡುವನ್ನು ಅನ್ವಯಿಸಿ.ಒಳ್ಳೆಯದು ಮತ್ತು ಕೆಟ್ಟದ್ದೆಂದು ಯೋಚಿಸಿಹೆಚ್ಚಿನ ವಿಶ್ಲೇಷಣೆಯು ಹೆಚ್ಚಿನ ಆಯ್ಕೆಗಳಿದ್ದಲ್ಲಿ ನಿರ್ಧರಿಸುವುದನ್ನು ಇನ್ನೂ ಹೆಚ್ಚು ನೆನಗುದಿಗೆ ಬೀಳುವಂತೆ ಮಾಡುತ್ತದೆ. ನಿರ್ಧಾರ ತೆಗೆದುಕೊಂಡಾದ ಮೇಲೆಯೂ ಫಲಿತಾಂಶದ ಕುರಿತಾಗಿ ಯೋಚಿಸುವುದು ಒಳ್ಳೆಯದಲ್ಲ. ಇಂಥ ಸಂದರ್ಭದಲ್ಲಿ ನಿರ್ಧಾರ ಮುಳಗಿಸಬಹುದು ಇಲ್ಲವೇ ತೇಲಿಸಬಹುದು. ವಿಶ್ಲೇಷಣೆ ಸಕಾರಾತ್ಮಕವಾಗಿರಲಿ. ಕೆಲವೊಮ್ಮೆ ಆಪ್ತರೊಂದಿಗೆ ಚರ್ಚಿಸಿ ನಿರ್ಧರಿಸುವುದು ಸೂಕ್ತವೆನಿಸುವುದು. ನಿರ್ಧರಿಸುವಾಗ ಆಯ್ಕೆಗಳನ್ನು ಒಳ್ಳೆಯದು ಕೆಟ್ಟದ್ದು ಎಂದು ವಿಭಜಿಸುವುದು ಸೂಕ್ತ. ಇದೊಂದು ತರಹ ಬೆಳೆಯಲ್ಲಿನ ಕಳೆ ತೆಗೆಯುವ ಪ್ರಕ್ರಿಯೆಯಂತೆ. ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ಕಾಲಮ್ ಮಾಡಿಕೊಂಡು ಆಯ್ಕೆಗಳನ್ನು ವಿಭಜಿಸಿ ಈ ಕೌಶಲ್ಯ ನಿರ್ಧರಿಸುವಿಕೆಯನ್ನು ಸರಳಗೊಳಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ. ನಿರ್ಣಯಿಸುವ ವಿಷಯದ ಕುರಿತು ಯೋಚಿಸುವುದು ಸೂಕ್ತ ಇದರಿಂದ ಸರಿಯಾಗಿ ಮೌಲ್ಯಮಾಪನ ಮಾಡಬಹದುದು. ಆದರೆ ಅತಿಯಾಗಿ ಯೋಚಿಸುವುದು ಸಮಸ್ಯೆಯಾಗುತ್ತದೆ.ಕಾಗದದಲ್ಲಿ ಬರೆಯಿರಿಎಲ್ಲ ಆಯ್ಕೆಗಳು ಹೆಚ್ಚು ಕಡಿಮೆ ಸರಿ ಸಮಾನ ಮೌಲ್ಯವನ್ನು ಹೊಂದಿವೆ ಎಂದು ತೋರುತ್ತಿದ್ದರೆ ಉತ್ತಮವೆನಿಸಿದವುಗಳನ್ನು ಪ್ರತ್ಯೇಕ ಕಾಗದದಲ್ಲಿ ಬರೆದು ನಂತರ ಯಾದೃಚ್ಛಿಕವಾಗಿ ಒಂದನ್ನು ಆರಿಸಿ ನಿರ್ಧರಿಸಬಹುದು. ನಿರ್ಧಾರಗಳು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ ಆದ್ದರಿಂದ ಇದು ದೊಡ್ಡ ನಿರ್ಧಾರಗಳಿಗೆ ಸೂಕ್ತವಲ್ಲ. ಸಣ್ಣ ಪುಟ್ಟ ನಿರ್ಧಾರಗಳಿಗೆ ಇದು ಹೇಳಿ ಮಾಡಿಸಿದ ಕೌಶಲ್ಯದಂತೆ ಕಾರ್ಯ ನಿರ್ವಹಿಸುತ್ತದೆ.ಈ ಕ್ಷಣದಲ್ಲಿ ಜೀವಿಸಿನಿರ್ಧರಿಸುವಿಕೆ ಮಾನಸಿಕವಾಗಿ ನಮ್ಮನ್ನು ಗೊಂದಲಕ್ಕೆ ಬೀಳಿಸುತ್ತದೆ. ಪ್ರತಿ ಹೆಜ್ಜೆಯ ಫಲಿತಾಂಶವನ್ನು ನೋಡಲು ಇಚ್ಛಿಸುತ್ತೇವೆ ಹೀಗಾಗಿ ಕೈಯಲ್ಲಿರುವ ಸಮಯ ಸೋರಿ ಹೋಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ಸರಳವಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅತಿಯಾಗಿ ಯೋಚಿಸಿ ಸಮಯ ವ್ಯರ್ಥ ಮಾಡದಂತೆ ನಿಮ್ಮಷ್ಟಕ್ಕೆ ನೀವು ವೀಕ್ಷಕರಾಗಿ ಕಾರ್ಯ ನಿರ್ವಹಿಸಿ.ಕೆಲಸದಲ್ಲಿ ಉತ್ಪಾದಕತೆಯನ್ನು ಬಾನೆತ್ತರಕ್ಕೆ ಏರಿಸಿ ನಿರ್ಧಾರದಲ್ಲಿ ತೀವ್ರಗೊಳ್ಳಲು ಹೆಚ್ಚು ಪರಿಣಾಮಕಾರಿಯಾಗಿ ಇರಬೇಕೆಂದರೆ ವರ್ತಮಾನದತ್ತ ಹೆಚ್ಚು ಗಮನ ನೀಡಬೇಕು. ನಿರ್ಧರಿಸುವಲ್ಲಿಯೇ ಹೆಚ್ಚು ಸಮಯ ತೆಗೆದುಕೊಂಡು ಕಾರ್ಯಾನುಷ್ಟಾನಕ್ಕೆ ಸಮಯ ಇಲ್ಲದಂತೆ ಮಾಡಿಕೊಳ್ಳುತ್ತೇವೆ. ದುಡುಕಿನ ನಿರ್ಧಾರ ಹಾಳುಗೆಡುವುದೇ ಹೆಚ್ಚು. ಈ ಕ್ಷಣದಲ್ಲಿ ಜೀವಿಸಿ ನಿರ್ಣಯಿಸಿ.ವೈಫಲ್ಯವನ್ನು ಸ್ವೀಕರಿಸಿತ್ವರಿತ ನಿರ್ಧಾರ ಸದಾ ಕಾಲ ಉತ್ತಮವಾಗಿಯೇ ಫಲ ನೀಡುತ್ತವೆ ಎಂದೇನಿಲ್ಲ. ಕೆಲವೊಮ್ಮೆ ಬಿರುಗಾಳಿಯಂತೆ ಸಮಸ್ಯೆಗಳನ್ನು ತಂದು ಚೆಲ್ಲಬಹುದು. ತಪ್ಪು ನಿರ್ಧಾರಗಳು ವೈಫಲ್ಯದ ಉಡುಗೊರೆಯನ್ನು ನೀಡಬಹುದು ಆದ್ದರಿಂದ ವೈಫಲ್ಯವನ್ನು ಸ್ವೀಕರಿಸುವ ಮನೋಭಾವವನ್ನು ಹೊಂದುವುದು ಒಳಿತು. ವೈಫಲ್ಯ ಜೀವನದ ಅವಿಭಾಜ್ಯ ಅಂಗ ಅದರಿಂದ ಬಹಳಷ್ಟನ್ನು ಕಲಿಯುತ್ತೇವೆ ಎನ್ನುವುದೂ ನಿಜ.ಸೋಲು ನಮ್ಮ ಹಿನ್ನೆಡೆಗೆ ಕಾರಣವಾಗದಂತೆ ನೋಡಿಕೊಳ್ಳಬೇಕು.ಕೊನೆ ಹನಿಜೀವನ ಆಯ್ಕೆಗಳ ಸರಮಾಲೆ. ಬೇಕಾದುದನ್ನು ಆರಿಸಿಕೊಳ್ಳುವುದೇ ನಿರ್ಧಾರ. ಎಲ್ಲ ಪರಿಸ್ಥಿತಿಗಳಲ್ಲಿ ನೂರಕ್ಕೆ ನೂರರಷ್ಟು ತ್ವರಿತ ಉತ್ತಮ ನಿರ್ಧಾರ ತೆಗೆದುಕೊಳ್ಳುವಷ್ಟು ಪರಿಪೂರ್ಣರು ಯಾರೂ ಇಲ್ಲ. ಇಲ್ಲಿ ಪರಿಪೂರ್ಣತೆ ಮುಖ್ಯವಲ್ಲ. ಶೀಘ್ರ ಮತ್ತು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಮುಖ್ಯ. ತ್ವರಿತ ಉತ್ತಮ ನಿರ್ಧಾರ ನಮ್ಮನ್ನು ವೃತ್ತದೊಳಗೆ ಮತ್ತು ಹೊರಗೆ ಗೆಲುವಿನತ್ತ ಕರೆದೊಯ್ಯಲು ಸಹಕಾರಿ. ನಡೆಯುವ ದಾರಿಯಲ್ಲಿ ನಿರ್ಣಯದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ ಹಾಗಂತ ಅಸಾಧ್ಯವುದುದೂ ಅಲ್ಲ. ಬದುಕಿನ ಕೆಲ ಚಿಕ್ಕ ತ್ವರಿತ ಉತ್ತಮ ನಿರ್ಣಯಗಳು ಕೆಲವೊಮ್ಮೆ ದೊಡ್ಡ ಪರಿಣಾಮವನ್ನು ಬೀರುತ್ತವೆ. ಅಂತರಂಗವು ಹೇಳಿದಂತೆ ಭಾವನೆಗಳಿಗೆ ಒತ್ತು ಕೊಟ್ಟು ತೆಗೆದುಕೊಂಡ ನಿರ್ಣಯಗಳು ಖಂಡಿತ ಒಳ್ಳೆಯ ದಾರಿಯಲ್ಲಿ ನಮ್ಮನ್ನು ನಡೆಸುತ್ತವೆ ಮತ್ತು ದೊಡ್ಡ ನಗು ಚೆಲ್ಲುವಂತೆ ಮಾಡುತ್ತವೆ. ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಇತರೆ

ಸಂತೆಯಲ್ಲಿ ನಿಂತ ಅವಳು

ಲೇಖನ ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು)             ಪ್ರಾಚೀನ ಕಾಲದಿಂದ ಇಂದಿನವರೆಗೂ ಮಾರುಕಟ್ಟೆಗೆ ಒಂದು ಆರೋಗ್ಯಕರವಾದ ನೀತಿ ಸಂಹಿತೆಯನ್ನು ರೂಪಿಸುವ ವಿವೇಕ ಮತ್ತು ವ್ಯವಧಾನ ಸಾಮುದಾಯಿಕ ಜವಾಬ್ದಾರಿಯಾಗಿ ಯಾವ ಕಾಲದಲ್ಲಿ ಯಾರಲ್ಲಿಯೂ ಕಾಣಿಸಿಕೊಂಡಿಲ್ಲ. ಆರೋಗ್ಯಕರ ಸಮಾಜಕ್ಕೆ ಲಾಭಗಳಿಕೆಯ ವ್ಯವಹಾರಿಕತೆಯನ್ನು ನಿಯಂತ್ರಿಸುವ ಶಕ್ತಿಯಿಲ್ಲದಿದ್ದರೆ ಇಡೀ ವ್ಯವಸ್ಥೆಯೇ ನರಳಬೇಕಾಗುತ್ತದೆ. ಮಾರುಕಟ್ಟೆ ಸಂಸ್ಕೃತಿ ಗಳಿಕೆಯ ತೂಗು ಕತ್ತಿಯನ್ನು ನಿರಂತರ ಗ್ರಾಹಕನ ಮೇಲೆ ಬೀಸುತ್ತಿರುತ್ತದೆ. ಇದರಿಂದ ವ್ಯಕ್ತಿ ಸಮಾಜಗಳು ಹಲವಾರು ಅಪಾಯಗಳಿಗೆ ಒಳಗಾಗಬೇಕಾಗುತ್ತದೆ.             ಭಾರತೀಯ ಸಮಾಜದಲ್ಲಿ ಹೆಣ್ಣನ್ನು ವ್ಯಕ್ತಿಯೆಂದು ಪರಿಗಣಿಸಿದ ಉದಾಹರಣೆಗಳಿಲ್ಲ. ಚರಿತ್ರೆಯುದ್ದಕ್ಕೂ ಹೆಣ್ಣನ್ನು ವಸ್ತು ಮುಖೇನವೆ ಗುರುತಿಸುವುದು ಯಾವ ಮಹಾತ್ಮರಿಗೂ ಅಪರಾಧವಾಗಿ ಕಾಣಿಸಿಲ್ಲ. ಗಂಡಸು ಸಂಪಾದಿಸಬಹುದಾದ ನಿರ್ಜೀವ ಭೌತಿಕ ವಸ್ತುವಿನಲ್ಲಿ ಹೆಣ್ಣನ್ನು ಪ್ರಭುತ್ವ ಮತ್ತು ಧರ್ಮ ಸತ್ತೆಗಳು ನಿರ್ಲಜ್ವವಾಗಿ ಸೇರಿಸಿಕೊಂಡು ಬಂದಿರುವ ಬಗ್ಗೆ ಯಾವ ಸಮಾಜ ಸುಧಾರಕನ ಸಂಕಟಕ್ಕೆ ನಿಲುಕದ ಹಾಗೇ ಉಳಿದಿದೆ.             ಸರಕು ಸಂಸ್ಕೃತಿಯ ವಿಶೇಷತೆ ಮತ್ತು ಹಿತ ಅಡಗಿರುವುದು ಹೆಣ್ಣನ್ನು ಬಳಸಿಕೊಳ್ಳುವ ವಿಧಾನದಲ್ಲಿ . ಸಾಮಾಜಿಕವಾಗಿ ಹೆಣ್ಣನ್ನು ಬದುಕಿನುದ್ದಕ್ಕೂ ಅನ್ಯರ ಹಂಗಿನಲ್ಲಿರುವ ಬೆಲೆಯುಳ್ಳ ಪ್ರಾಣಿ, ವಸ್ತುವಾಗಿಸಿರುವ ಸಾಮಾಜಿಕ ಬದುಕಿನ ಸಂರಚನೆಯಲ್ಲಿಯೇ ಅಫೀಮಿನಂತಹ ಧರ್ಮ ಮತ್ತು ಹಿಂಸಾವಾದದ ಪ್ರಭುತ್ವದ ಕೌರ್ಯ ಗಟ್ಟಿಗೊಂಡಿದೆ. ಇದನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಸ್ತ್ರೀಯ ಬದುಕಿನ ಸಂಕಥನವನ್ನು ಕಟ್ಟಿಕೊಳ್ಳಲು ಸಾಧ್ಯ. ಮಾರುಕಟ್ಟೆಯಲ್ಲಿ ಮಹಿಳೆ ಕಳೆದು ಹೋಗುತ್ತಿರುವ ಸಂಗತಿ ನಮಗೇನೂ ಹೊಸ ಸಂಗತಿಯಲ್ಲ. ನಮ್ಮ ಪುರಾಣ ಪುಣ್ಯ ಪುರುಷರ ಬೆನ್ನ ಹಿಂದೆ, ಕಣ್ಣ ಮುಂದೆ, ಕಾಲ ಕೆಳಗೆ, ಕಾಲ ಮೇಲೆ ಹೆಣ್ಣನ್ನು ಇಟ್ಟುಕೊಂಡು ದಮನಿಸಿದ ಸಂಗತಿಗಳು ನಮ್ಮ ಸಾಮಾಜಿಕ ಮೌಲ್ಯಗಳೆಂದು ಧರ್ಮ ಮುದ್ರೆಯ ಮೂಲಕ ನಿರಂತರ ಭಕ್ತಿಪೂರ್ವಕವಾಗಿ ಪಠಿಸುವ ಪರಿಪಾಠ ಇಂದಿಗೂ ನಿಂತಿಲ್ಲ.             ಮಹಾಭಾರತದಲ್ಲಿ ಧರ್ಮರಾಯ ಕೈ ಹಿಡಿದ ಹೆಂಡತಿ ದ್ರೌಪದಿಯನ್ನು ಹಿರಿಯರ ಸಮ್ಮುಖದಲ್ಲಿ ಜೂಜಿನಲ್ಲಿ ಪಣಕ್ಕಿಟ್ಟು ಸೋಲುವುದರ ಮೂಲಕ ಧರ್ಮವನ್ನು  ಎತ್ತಿ ಹಿಡಿದ ಕಥೆಯನ್ನು ರಸವತ್ತಾಗಿ ಹೇಳುವ ಮುಂದೆ ದ್ರೌಪದಿಯ ಅಸಹಾಯಕತೆ ನೆನಪಾಗುವುದೇ ಇಲ್ಲ. ಸಪ್ತಪದಿ ತುಳಿದು ಸುಖ-ದುಃಖದಲ್ಲಿ ಸಮವಾಗಿರೆಂದು ಕೈ ಹಿಡಿದು ಬಂದ ಹೆಂಡತಿಯನ್ನು ತುಂಬಿದ ಸಭೆಯಲ್ಲಿ ನಿಲ್ಲಿಸಿ ಪಾತಿವ್ರತ್ಯ ಪರೀಕ್ಷಿಸುವ ರಾಮ ಮಹಾತ್ಮನೆಂದು ಕರೆಯಿಸಿಕೊಂಡಿದ್ದರ ಹಿಂದೆ ಸೀತೆಯ ದಯನೀಯತೆ ಮರೆತು ಹೋಗುತ್ತದೆ. ಸತ್ಯಕ್ಕಾಗಿ ಹರಿಶ್ಚಂದ್ರ ಹೆಂಡತಿಯನ್ನು ಮಾರುವಾಗ ಚಂದ್ರಮತಿ ಅನುಭವಿಸಿದ ಸಂಕಟದ ಅರಿವು ಯಾರ ಹೃದಯಕ್ಕೂ ತಟ್ಟುವುದಿಲ್ಲ. ಯಯಾತಿ ಮಹಾರಾಜ ತನ್ನ ಸ್ತ್ರೀಯರಿಗೆ ಹೆಸರುಳಿಸಿಕೊಳ್ಳುವ ಸಲುವಾಗಿ ದಾನವಾಗಿ ಕುದುರೆ ಕೇಳಿದ ಗಾವಲನಿಗೆ ಹೊಟ್ಟೆಯಲ್ಲಿ ಹುಟ್ಟಿದ ಮಗಳು ಮಾಧವಿಯನ್ನು ದಾನವಾಗಿ ನೀಡಿದ್ದು ಉಳಿದಿರುವುದೇ ಹೊರತು ಮಾಧವಿಯ ಛಿದ್ರಗೊಂಡ ಕನಸುಗಳು ಮರೆತು ಹೋಗಿವೆ.  ಗುರುವಿಗೆ ದಕ್ಷಿಣೆ ಕೊಟ್ಟು ಗುರು ಭಕ್ತಿಯನ್ನು ಮರೆಯುವ ಸಲುವಾಗಿ ಗಾಲವ ರಾಜರಿಂದ ರಾಜರಿಗೆ ಮಾಧವಿಯನ್ನು ಹೆತ್ತು ಕೊಡುವ ಯಂತ್ರದಂತೆ ಮಾರಿ ಕುದುರೆ ಪಡೆಯುತ್ತ ಹೋದ ಸಂಗತಿ ನಮಗೆ ಮಾರಿದ ದಾಖಲೆ ಕಡತಗಳಲ್ಲಿ ಮಿಂಚುತ್ತಿದೆ. ಇಂದಿಗೂ ಗಂಡಸಿನ ಅಹಮ್ಮಿಗೆ ಪೆಟ್ಟು ಬೀಳುವುದೆಲ್ಲ ಆತನ ಒಡೆತನದಲ್ಲಿರುವ ಹೆಂಗಸರನ್ನು ಕುರಿತು ಮಾತನಾಡಿದಾಗ ಮಾತ್ರ.             ನಮ್ಮ ಸುತ್ತ ಮುತ್ತಲೂ ನಡೆಯುತ್ತಿರುವ ಘಟನೆಗಳಿಗೆ ಒಂದಿಲ್ಲಾ ಒಂದು ರೀತಿಯಲ್ಲಿ ಹೆಣ್ಣನ್ನು ತಳುಕು ಹಾಕಲಾಗಿರುತ್ತದೆ. ಹೆಣ್ಣನ್ನು ಮಾರುವ, ಕೊಳ್ಳುವ, ಪಣಕ್ಕಿಡುವ, ಕದ್ದು ಪರಾರಿಯಾಗುವ ವಿಷಯಗಳೆಲ್ಲ ಮಾರುಕಟ್ಟೆಯ ಸಂಸ್ಕೃತಿಯ ಇನ್ನೊಂದು ರೂಪ. ಅಷ್ಟೇ ಅಲ್ಲ ಹೆಣ್ಣನ್ನು ನಿರ್ಜೀವ  ವಸ್ತುವಾಗಿ ಸಂಭೋದಿಸುವುದನ್ನು ಕಾಣಬಹುದು. ಇಂದಿಗೂ ಅದು, ಇದು ಎಂದೇ  ಕರೆಯಲಾಗುತ್ತದೆ. ಅಷ್ಟೇ ಅಲ್ಲ ಎತ್ತು ಕತ್ತೆಗಳನ್ನು ಓಡಿಸಿಕೊಂಡು ಹೋದರು ಎನ್ನುವಂತೆ ಹೆಣ್ಣನ್ನು ಓಡಿಸಿಕೊಂಡು ಹೋಗಲಾಯಿತೆಂದು ಕರೆಯುವುದನ್ನೆಲ್ಲ ನೋಡಿದಾಗ ಹೆಣ್ಣಿನ ಇರುವಿಕೆಯನ್ನು ಸಾಂಸ್ಕೃತಿಕವಾಗಿ ಹೇಗಿದೆಯೆಂಬುದನ್ನು ಮತ್ತೇ ಮತ್ತೇ ವೇದಪುರಾಣಗಳನ್ನು ಉದಾಹರಣೆಗೆ ಬಳಸಬೇಕಾಗಿಲ್ಲ.             ಇಂದು ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಕಾರಣಗಳಿಂದ ಅಭಿವೃದ್ಧಿ ಶೀಲ ದೇಶಗಳು ತಮ್ಮ ಬಹುಮುಖ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿವೆ. ವ್ಯಾಪಾರಿ ಉದ್ದೇಶದಿಂದ ಬರುವ ವ್ಯಕ್ತಿ ಸಂಗತಿಗಳೆಲ್ಲ ಬರಿ ಲಾಭದ ಮೇಲೆ ಕಣ್ಣಿಟ್ಟಿರುತ್ತವೆ. ಲಾಭ ಗಳಿಕೆಗಾಗಿ ಜೀವ ವಿರೋಧಿ ತಂತ್ರಗಳನ್ನೆಲ್ಲ ಯಥೇಚ್ಛವಾಗಿಯೇ ಬಳಸುತ್ತೇವೆ. ಐವತ್ತು ವರ್ಷದ ಹಿಂದೆ ಭಾರತಕ್ಕೆ ಕಾಲಿಟ್ಟ ಬ್ರಿಟಿಷರ ಕೈಯಲ್ಲಿ ತಕ್ಕಡಿ ಉದಾಹರಣೆಗೆ ಮಾತ್ರವಿತ್ತೆಂಬುದನ್ನು  ನೆನಪಿಸಿಕೊಳ್ಳಬೇಕಾಗಿದೆ. ಇಂದು ಮತ್ತೆ ಅದೇ ಅಪಾಯದಲ್ಲಿ ದೇಶ ಸಿಲುಕುತ್ತಿದೆ. ವ್ಯಕ್ತಿ ಹಿತಾಸಕ್ತಿಯ ರಾಜಕಾರಣಕ್ಕೆ ಯಾವುದೇ ತಾತ್ವಿಕ ಬದ್ಧತೆಯಿಲ್ಲದೆ ಇರುವುದರಿಂದ ಏನೆಲ್ಲ ಆಪತ್ತುಗಳನ್ನು ಆಹ್ವಾನಿಸಿದ್ದೇವೆ. ವಿಶ್ವ ವಾಣಿಜ್ಯ ನೀತಿಗೆ ಒಪ್ಪಿಗೆ ನೀಡುವಾಗ ನಮ್ಮ ದೇಶದ ಆರ್ಥಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಧಕ್ಕೆ ಭವಿಷ್ಯತ್ತಿನಲ್ಲಿ ಬರಬಹುದೆಂಬ ಮುಂಜಾಗರೂಕತೆ, ಮುಂದಾಲೋಚನೆಗಳಿಲ್ಲದೆ ವಧಾಸ್ಥಾನಕ್ಕೆ ಬಂದು ನಿಂತಿರುವೆವು. ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿಯನ್ನು ಹಾಸಿ ನಡುಮನೆಗೆ ಕರೆದುಕೊಂಡಿದ್ದೇವೆ. ಹೀಗೆ ಬಂದವರಿಗೆ ನಮ್ಮ ಮನೆಯ ಹೆಂಗಸರಿಂದ ರಾಜೋಪಚಾರ ನೀಡಲು ಭ್ರಮೆ ಮತ್ತು ದುರಾಸೆಯ ಒತ್ತಡಗಳನ್ನು ಹೇರಿದ್ದೇವೆ.             ಈ ಜಾಗತೀಕರಣ ಪ್ರಕ್ರಿಯೆಯಿಂದ ಬಹುಸಂಖ್ಯಾತ ದುಡಿವ ವರ್ಗ ಮತ್ತು ಮಹಿಳೆಯರು ಅಗ್ಗದ ವಸ್ತುಗಳಾಗಿ ಬಳಕೆಗೊಳ್ಳುತ್ತಿರುವ ಶೋಚನೀಯ ವಾತಾವರಣ ದೇಶದುದ್ದಕ್ಕೂ ಕಾಣಿಸುತ್ತಿದೆ. ಧಾರ್ಮಿಕವಾಗಿಯೇ ಹೆಣ್ಣನ್ನು ಭೋಗಪ್ರದ ಜೀವವೆಂದು ಸಾರಿದ್ದಷ್ಟೇ ಅಲ್ಲ ಅದನ್ನು ಸಂಸ್ಕೃತಿಯಾಗಿಯೂ ಬೆಳಸಿಕೊಂಡು ಬರುತ್ತಿರುವೆವು. ಈ ಹಳೆಯ ಪುರಾಣ ಮೂಲದ ಸ್ತ್ರೀ ಮಾದರಿಗಳು ಇಂದು ಸಾಣೆ ಹಿಡಿಯಲ್ಲಿಟ್ಟು ಹೊಸ ರೂಪದಲ್ಲಿ ತಳಕು ಬಳುಕಿನಿಂದ ನಾವು ಕೊಳ್ಳುವ ವಸ್ತುಗಳಿಗೆ ಕಿರುನಗೆ ಬೀರಲು ನಿಂತಿರುವಳು. ಬಂಡವಾಳ ಹೂಡುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸ್ವದೇಶಿ ಬಂಡವಾಳ ಶಾಹಿಗಳು ರಾಷ್ಟ್ರದ ಆರ್ಥಿಕ ಸ್ವಾಯತ್ತತೆ, ಸಾವಲಂಬನೆಯ ನೆಲೆಗಳನ್ನು ಕ್ರಮೇಣ ನಿಷ್ಕ್ರಿಯಗೊಳಿಸುತ್ತಿವೆ. ಇದಕ್ಕಾಗಿ ರಾಜಕೀಯ ಅರಾಜಕತೆಯನ್ನು ಹುಟ್ಟು ಹಾಕುತ್ತದೆ. ಪ್ರಜ್ಞಾವಂತರ ಗಮನ ತನ್ನ ಮೇಲೆ ಬೀಳದಿರುವಂತೆ ಮತೀಯ ಭಯೋತ್ಪಾದಕತೆಯನ್ನು ಪ್ರಚೋದಿಸುತ್ತದೆ. ಜನ ಸಾಮಾನ್ಯರನ್ನೊಳಗೊಂಡ ಹಾಗೇ ಇಡೀ ಜನ ಸಮುದಾಯಗಳಲ್ಲಿ ಪರಸ್ಪರ ಸಂದೇಹ, ಅಪನಂಬುಗೆಯನ್ನುಂಟು ಮಾಡಿ ಆಂತರಿಕ ನೆಮ್ಮದಿಯನ್ನು ಕಿತ್ತುಕೊಳ್ಳತ್ತದೆ. ಇದಕ್ಕೆಲ್ಲ ಸ್ತ್ರೀಯನ್ನು ಒಂದಲ್ಲಾ ಒಂದು ರೀತಿಯಲ್ಲಿ ತಳುಕು ಹಾಕಿರುತ್ತದೆ.             ಇಲ್ಲಿಯ ಭೌದ್ಧಿಕ ಮತ್ತು ಭೌತಿಕ ಸಂಪತ್ತಿನ ಮೇಲೆ ಆಕ್ರಮಣಕಾರಿ ನೀತಿಯನ್ನು ಹೇರುತ್ತದೆ. ಮಹಿಳೆಯರಲ್ಲಿ ಉಪಭೋಗಪ್ರದವಾದ ಮನೋವೃತ್ತಿಯನ್ನು ಉದ್ದೀಪಿಸುತ್ತದೆ. ದುಡಿಯುವ ವರ್ಗದ ದುಡಿಯುವ ಅವಕಾಶಗಳನ್ನು ಯಂತ್ರಗಳ ಬಾಯಿಗೆ ಒಡ್ಡುತ್ತದೆ. ಹೀಗೆ ಆರ್ಥಿಕ ಅಸಹಾಯಕತೆಯಿಂದ ಬಳಲುವ ಜನವರ್ಗ ವ್ಯಾಪಾರಿ ತಂತ್ರಗಳಿಗೆ ಹೊಸ ಹೊಸ ರೂಪದಲ್ಲಿ ಬಲಿಯಾಗುತ್ತದೆ.             ಮುಂದುವರೆದ ದೇಶಗಳು ಉತ್ಪಾದಿಸುತ್ತಿರುವ ಕಾಂಡೋಂನಿಂದ ಹಿಡಿದು ಮಕ್ಕಳು ತಿನ್ನುವ ಚಾಕೋಲೇಟ್‌ನವರೆಗೂ ನಮ್ಮ ದೇಶದಲ್ಲಿ ಮಾರುಕಟ್ಟೆ ಕಳೆದುಕೊಂಡಿರುವ ಕಾರಣಕ್ಕಾಗಿ ಜಾಗತಿಕ ಮಾರುಕಟ್ಟೆಯನ್ನು ಮುಕ್ತವಾಗಿಟ್ಟಿದೆ. ಎಲ್ಲ ರೀತಿಯಿಂದಲೂ ಹಸಿದು ಕುಳಿತಿರುವ ಹಿಂದುಳಿದ ದೇಶಗಳು ದಿಢೀರನೆ ಈ ವ್ಯಾಪಾರಿ ಜಾಲಕ್ಕೆ ಬಿದ್ದು ದೇಶೀಯ ಸಾರ್ವಜನಿಕ ಉದ್ಯಮ ವ್ಯವಹಾರಗಳೆಲ್ಲ ಕುಸಿದು ಹೋಗಿವೆ. ಸರಕಾರಿ, ಸಾರ್ವಜನಿಕ ಉದ್ಯಮಗಳು ಕೃತಕ ನಷ್ಟದ ಕಾರಣಕ್ಕಾಗಿ ಶಾಶ್ವತವಾಗಿ ಬೀಗ ಜಡಿದು ಖಾಸಗಿಯವರ ಕೈಯಲ್ಲಿ ಬೀಗ ನೀಡುತ್ತಿರುವೆವು. ಇದರಿಂದ ಮಾರುಕಟ್ಟೆಯ ನೀತಿ ಹೇಗೆ ರೂಪಿಸಲ್ಪ ಡುತ್ತಿದೆಯೆಂದರೆ ‘ಅಕ್ಕನನ್ನು ತೆಗೆದುಕೊಂಡರೆ ತಂಗಿ ಫ್ರೀ’ ಎಂದು ರಸ್ತೆ ಬದಿಯಲ್ಲಿ ನಿಂತು ಕೂಗಿ ಕೂಗಿ ಕರೆಯುವಂತಾಗಿದೆ.             ಹೀಗೆ ಗ್ರಾಹಕನಲ್ಲಿ ಅಗ್ಗದರ ಮತ್ತು ಫ್ರೀ ಎನ್ನವುದರ ಆಮಿಷ ತೋರಿಸಿ ತನ್ನ ಉತ್ಪಾದನಾ ವಸ್ತುಗಳನ್ನು ಬಳಸುವಂತೆ ಮಾನಸಿಕ ರೋಗಕ್ಕೆ ಒಳಪಡಿಸಿದರೆ ಮುಗಿದೇ ಹೋಯಿತು. ಮಾನಸಿಕವಾಗಿ ಗುಲಾಮನಾದ ಗ್ರಾಹಕನನ್ನು ನಿರಂತರ ಶೋಷಿಸುವ ವಿಧಾನ ಬಂಡವಾಳಿಗರಿಗೆ ಚೆನ್ನಾಗಿ ತಿಳಿದಿರುತ್ತದೆ. ಹೀಗೆ ತಾನು ಉತ್ಪಾದಿಸಿದ ವಸ್ತುವಿಗೆ ಗ್ರಾಹಕನ ಮನೆಯ ಬಾಗಿಲನ್ನು ತಟ್ಟಲು ಅಗ್ಗದ ಕೂಲಿಯಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ಏಕ ಕಾಲದಲ್ಲಿ ನಮ್ಮ ಮಹಿಳೆಯರು ಮತ್ತು ನಮ್ಮ ಗಂಡಸರ ಜೇಬಿನ ಭಾರ ಹಗುರವಾಗುವುದು. ಹೆಣ್ಣಿನ ಸೌಂದರ್ಯ ಬಹುಕಾಲದಿಂದ ಬಲಿಷ್ಠ ಗಂಡಸಿನ ಉಪಭೋಗಕ್ಕಾಗಿ ವೃದ್ಧಿಯಾಗುತ್ತಿತ್ತು. ಅದಕ್ಕಾಗಿಯೇ ಒಂದು ವರ್ಗದ ಹೆಣ್ಣನ್ನು ಸಿದ್ಧಗೊಳಿಸಲಾಗುತ್ತಿತ್ತು. ಇಂದು ಸಹ ವಿಶ್ವ ಮಾರುಕಟ್ಟೆಯಲ್ಲಿ ಒಂದು ವಸ್ತುವಿನ ಅಸ್ತಿತ್ವವನ್ನು ಸ್ಥಾಪಿಸಬೇಕಾದರೆ ಹೆಣ್ಣಿನ ಸೌಂದರ್ಯ ದೇಹವೊಂದು ಮುಖ್ಯ ಪಾತ್ರವಹಿಸುತ್ತದೆ. ಈ ಶತಮಾನದ ಅಂತ್ಯದಲ್ಲಿ ವಿಶ್ವ ಸುಂದರಿಯರ ಸ್ಪರ್ಧೆ ಗಲ್ಲಿ-ಗಲ್ಲಿಗಳಲ್ಲಿ ನಡೆಯುತ್ತಿದೆ. ಬಹು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ವಿಶ್ವ ಸುಂದರಿ ಸ್ಪರ್ಧೆಯ ಹಿಂದೆ ಬಂಡವಾಳ ಶಾಹಿಗಳ ಕೈಗಳಿವೆ. ಸಾವಿರಾರು ವರ್ಷಗಳಿಂದ ಪುರಾಣಗಳ ಮೂಲಕ ನಮ್ಮ ನೆತ್ತಿಯ ಮೇಲೆ ಕುಣಿಯುತ್ತಿದ್ದ ಮೇನಕೆ, ತಿಲೋತ್ತಮೆ, ಊರ್ವಶಿಯರು ಪಾಯಿಖಾನೆಗಳನ್ನು ಬಿಡದೆ ಹಾಗೆ ಎಲ್ಲೆಂದರಲ್ಲಿ ತಳವೂರಿರುವರು. ಇಷ್ಟು ಶತಮಾನಗಳಲ್ಲಿ ಹುಟ್ಟಿದ ಸುಂದರಿಯರು ದಿಢೀರನೆ ಈ ಶತಮಾನದ ಅಂಚಿನಲ್ಲಿ ನಮ್ಮಂತಹ ದೇಶದಲ್ಲಿ ದಿಢೀರನೆ ಕಾಣಿಸಿಕೊಂಡಿರುವುದರ ಬಗ್ಗೆ ಅಶ್ಚರ್ಯಪಡುವುದೇನೂ ಇಲ್ಲ.             ಬೆಂಗಳೂರಿನಂತಹ ನಗರಗಳಲ್ಲಿ ಮಧ್ಯಮ ವರ್ಗದ ಜನ ಸಂಪತ್ತಿನ ಗಳಿಕೆಗಾಗಿ ಮನೆಯ ಮಕ್ಕಳನ್ನು ಅನಾರೋಗ್ಯದ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿರುವರು. ಸ್ಥಳೀಯ ವಸ್ತುವನ್ನು ಒಳಗೊಂಡ ಹಾಗೇ ವಿದೇಶ ಉತ್ಪಾದಿತ ವಸ್ತುಗಳಿಗೆ ಮಹಿಳೆಯರನ್ನು ರೂಪದರ್ಶಿಯರನ್ನಾಗಿ ಬಳಸಿಕೊಳ್ಳುವುದನ್ನು ಹೆಮ್ಮೆಯ ಸಂಗತಿ ಎಂದು ಕಾಣುತ್ತಿರುವೆವು.             ಜಾಹೀರಾತುಗಳಿಗೂ ವಸ್ತುಗಳಿಗೂ ಕಾರ್ಯಕಾರಣ ಸಂಬಂಧ ಏನೆಂಬುದನ್ನು ಕಾಣುತ್ತಿಲ್ಲ. ಮನೋ ವಿಕಾರಕ್ಕೆ ಆಸ್ಪದ ನೀಡುವ, ಸಾಮಾಜಿಕ ಸ್ವಾಸ್ಥ್ಯ ಕೆಡಿಸಬಹುದಾದ ಜಾಹೀರಾತುಗಳ ಮೇಲೆ ಕನಿಷ್ಠ ಪ್ರಮಾಣದ ನಿಯಂತ್ರಣ ಸಮಾಜ ಮತ್ತು ಸರಕಾರಕ್ಕಿಲ್ಲದಾಗಿದೆ. ದುಡಿಯುವ ವರ್ಗದ ಬದುಕಿನ ಸಂದೇಶದ ಮೇಲೆ ಜಾಹಿರಾತುಗಳು ದಾಳಿಗಿಳಿದಿವೆ. ನಮ್ಮ ದೇಶೀ ಪಾರಂಪರಿಕ ನಂಬಿಕೆ ಮತ್ತು ಸಂಸ್ಕೃತಿಯನ್ನು ಕ್ರಮೇಣ ವಿನಾಶಗೊಳಿಸುವ ಎಲ್ಲ ಹುನ್ನಾರಗಳು ಈ ಜಾಹಿರಾತುಗಳ ಮೂಲಕ ನಮ್ಮ ಮನೆ ಮನೆಯ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿರುವುದರ ಕಡೆ ನಮ್ಮ ಗಮನ ಕೇಂದ್ರಿಕರಿಸಬೇಕಾಗಿದೆ. ಉದಾಹರಣೆಗೆ: ನಮ್ಮ ಕೌಟುಂಬಿಕ ಬದುಕಿನ ಸೌಹಾರ್ದ ಸಂಬಂಧದ ಪ್ರತೀಕವಾಗಿದ್ದ ಮನೆಗೆ ಬಂದವರ ಬಾಯಾರಿಕೆ ನೀರು ಕೊಡುವ ಸ್ಥಾನದಲ್ಲಿ ಚಹಾ, ಕಾಫಿಗಳು ಹಲವು ವರ್ಷಗಳ ಅಧಿಪತ್ಯ ಸ್ಥಾಪಿಸಿದ್ದವು. ಇಂದು ಅದರ ಸ್ಥಾನದಲ್ಲಿ ಕೊಕೋ ಕೋಲಾ, ಪೆಪ್ಸಿ, ಸೆವೆನ್ ಅಫ್, ಲಿಮ್ಕಾ ಮಿಂಚುತ್ತಿವೆ. ಅದು ಹೇಗೆಂದರೆ ನಮ್ಮ ರೂಪದರ್ಶಿಯರನ್ನು ಜನಪ್ರಿಯ ನಟ-ನಟಿಯರನ್ನು ಬಳಸಿಕೊಂಡು ಮಾಡುತ್ತಿರುವ ಜಾಹಿರಾತು ಇಡೀ ನಮ್ಮ ಕೃಷಿ ಸಂಸ್ಕೃತಿಯನ್ನೆ ನಾಶ ಮಾಡುವಂತಿದೆ. ಹೊಲಕ್ಕೆ ಹೋಗಿ ಬಾಯಾರಿದೆ ಎಂದು ಯಾರಾದರೂ ಕೇಳಿದರೆ ಬಾವಿಯ ನೀರನ್ನು ಸೇದಿ ಬಾಯಾರಿಕೆಯನ್ನು ನೀಗುವ ನಮ್ಮ ಮಾನವ ಸಹಜತೆಯೇ ಮರೆಯಾಗಿ ಅದರ ಸ್ಥಾನದಲ್ಲಿ ಒಬ್ಬ ನಟನು ರೈತರ ವೇಷದಲ್ಲಿ ಬಂದು ಬಾವಿಯಿಂದ ಸೇದಿ ನೀರು ಕೇಳಿದ ಬೆಡಗಿಯರಿಗೆ ನೀಡುವುದೇನೆಂದರೆ ಪೆಪ್ಸಿ, ಕೊಕೋ ಕೋಲಾದ ಬಾಟಲಿಗಳನ್ನು. ಅಷ್ಟೇ ಅಲ್ಲ ಆ ಬೆಡಗಿಯರು ಅದನ್ನು ಕುಡಿದು ಆತನಿಗೆ ಮುತ್ತಿಕ್ಕಿ ಮೂರ್ಛೆ ಗೊಳಿಸುವುದು. ಇದು ಏಕಕಾಲದಲ್ಲಿ ನಮ್ಮ ನೆಲದ ಸಂಸ್ಕೃತಿಯನ್ನು ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಮುಂದಿಟ್ಟೆ ಮಾಡುವುದು. ಹೀಗೆ ಮಾರುಕಟ್ಟೆಯ ಸಂಸ್ಕೃತಿ ತಮ್ಮ ಪಾರಂಪರಿಕ ನಂಬಿಕೆ, ನಡತೆ, ವಿಚಾರಗಳನ್ನು ಕ್ರಮೇಣ ನಾಶಗೊಳಿಸುವುದು. ಇಂತಹದ್ದನ್ನು ದಿನ-ದಿನವು ನೋಡುವ ಮಕ್ಕಳು ಬಾವಿಯಲ್ಲಿ ತೆಂಗಿನ ಕಾಯಿಗಳಲ್ಲಿ ಬಾಯಾರಿಕೆಗೆ ನೀರಿರುವುದು ಎಂಬುದನ್ನು ಮರೆತು ಬಾಯಾರಿಕೆ ಎಂದರೆ ಕೊಕೋ ಕೋಲಾ, ಪೆಪ್ಸಿ, ಸೆವೆನ್ ಅಪ್ ಎಂದು ಭಾವಿಸುವ ಅಪಾಯಗಳು ನಮ್ಮೆದುರಿಗಿದೆ ನಮ್ಮ ಸಾಮಾಜಿಕ ಪಿಡುಗಾದ ವರದಕ್ಷಿಣೆ, ವರೋಪಚಾರಗಳ ಬಗ್ಗೆ ಕಾನೂನು ಬದ್ಧವಾಗಿ ತಡೆಯುವ ಕ್ರಮವನ್ನು ಬಿಗಿಗೊಳಿಸುವಷ್ಟರಲ್ಲಿಯೇ ಅದು ನುಣುಚಿಕೊಂಡು ಹೊಸ ರೂಪದಲ್ಲಿ ಯುವ ಜನತೆಯ ಮನಸ್ಸಿನಲ್ಲಿ ಬೇರೂರಿದೆ. ಸಾಂಪ್ರದಾಯಿಕವಾಗಿ ಮದುವೆಯಲ್ಲಿ ಸ್ಥಿತಿವಂತರು ವರನನ್ನು ಎದುರುಗೊಳ್ಳಲು, ಬೀಳ್ಕೊಡಲು ಕುದುರೆ, ಎತ್ತಿನಬಂಡಿ, ಟಾಂಗಾ, ತೆರೆದ ಜೀಪುಗಳನ್ನು ಬಳಸಿ ತಮ್ಮ ಸಂತೋಷ, ಸಂಭ್ರಮ ಯೋಗ್ಯತೆ, ಅಂತಸ್ತುಗಳನ್ನು ಪ್ರದರ್ಶಿಸುತ್ತಿದ್ದರು. ಇಂದು ಕುದುರೆಗಾಡಿ, ಎತ್ತಿನ ಬಂಡಿಯ ಸ್ಥಾನದಲ್ಲಿ ಹೀರೋ

ಸಂತೆಯಲ್ಲಿ ನಿಂತ ಅವಳು Read Post »

ಕಾವ್ಯಯಾನ

ಕತ್ತಲಿನಲಿ ನ್ಯಾಯ

ಕವಿತೆ ಕತ್ತಲಿನಲಿ ನ್ಯಾಯ ಸಾಯಬಣ್ಣ ಮಾದರ ಎಳೆಯ ಬಾರದೆಕ್ಕೆಅವರ ಕರಳು ಬಳ್ಳಿಗಳನ್ನುಕ್ರೀಯಗೆ ಪ್ರತಿಕ್ರೀಯೇ ?ಆಗುವದ್ಯಾವಾಗಿನ್ನುಎಷ್ಟು ದಿನವಂತೆಕೂಗುವಿರಿ ದಿಕ್ಕಾರಮೇಲಿನವರ ಕುರ್ಚಿಗಳಿಗೆಕಿವಿ ಕುರುಡಮನಿಷಾಗೆ ಸಿಗುವುದೇಕತ್ತಲಿನಲ್ಲಿರುವನ್ಯಾಯ ಬೆಳಕು !! ಜೋಳದ ಹೊಲದ ದಂಟುಗಳೆಕಣ್ಣೀರುಗೈದವುಯೋನಿಯಿಂದರಿದ ರಕ್ತಮಡುಗಟ್ಟಿತ್ತಲಕೂಗಲು ಬಾರದಂತೆನಾಲಿಗೆ ಸೀಳಿಅಟ್ಟಹಾಸ ಗೈದರಲ್ಲಸಬಲರುಆಗಬೇಕಲ್ಲವೇ ಅವರಿಗೂಆ ನೋವು ಜಾತಿ ಬಲವಿದ್ದರೆಮಾಡುವರು ಎನ್ಕೌಂಟರ್ಸುಡುವರು ದಮನಿತರನ್ನುನಡುರಾತ್ರೀ ಹಗಲು !! ನಾಟ್ಯದವರು ಬಸಿರಾದರುದೇಶದ ದೊರೆಕುಣಿದಾಡುವನು ಹಿರಿ ಹಿರಿ ಹಿಗ್ಗಿಬೆನ್ನು ಮೂಳೆ ಮುರಿದುಯೋನಿ ಹರಿದರುಇವರಿಗೆಕನಿಕರಿಸದವನು !! ಭಯಭರವಸೆ ಕಳೆದುಕೊಂಡರೆಹಾವೇ ಹಗ್ಗಭಯ ಬುಗ್ಗೆಯಚಿಲುಮೆ ಹುಟ್ಟಿಸಿನ್ಯಾಯ ದೀಪಕ್ಕೆಬತ್ತಿ ಹತ್ತಿಸಿಕಣ್ಣಿಗೆ ಕಣ್ಣು ಕಳೆಯಲುಸಿದ್ದರಾಗ ಬೇಕಲ್ಲವೆನಾವು !! *********************************

ಕತ್ತಲಿನಲಿ ನ್ಯಾಯ Read Post »

ಇತರೆ, ಲಹರಿ

ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ

ಲಹರಿ ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ ಸ್ಮಿತಾ ಭಟ್ ತವರು ಎನ್ನುವದು ಮುಗಿಯಲಾರದ ಸೆಳೆತ ಮತ್ತದು ಹೆಣ್ಮಕ್ಕಳಿಗೆ ಮಾತ್ರ ಸೀಮಿತ. ತಲೆ ತಲಾಂತರಗಳಿಂದಲೂ ತವರು ಮತ್ತು ಹೆಣ್ಣು ಸಯಾಮಿಯಂತೆ ಬದುಕುತ್ತ ಬಂದಿದ್ದಾರೆ. ಹೆಣ್ಣಿನೊಳಗೆ ತವರಿನ ಸೆಳೆತ,ಪುಳಕ,ಅಪ್ಯಾಯ ಭಾವಗಳು ಶುರುವಾಗುವದೇ ಮದುವೆಯೆಂಬ ಬಂಧನದಲಿ,ಭಾವದಲಿ,ಸಿಲುಕಿ ತವರ ತೊರೆದು ಹೊರನಡೆದಾಗಲೇ. ಅಲ್ಲಿಯವರೆಗೆ ಸುಪ್ತವಾಗಿದ್ದ ನಯ ನಾಜೂಕಿನ ಭಾವನೆಗಳೆಲ್ಲ ಕಟ್ಟೆಯೊಡೆದು ಹೃದಯವನ್ನು ತಲ್ಲಣಗೊಳಿಸಿಬಿಡುತ್ತವೆ. ಎಂತಹ ಐಶಾರಾಮಿ ಗಂಡನಮನೆಯೇ ಸಿಗಲಿ ತವರಿನಿಂದ ಬರುವ ಪುಟ್ಟ ಉಡುಗೊರೆಗಾಗಿ  ಹೆಣ್ಣು ಕಾತರದಿಂದ ಕಾಯುತ್ತಾಳೆ. ತವರೂರಿನ ಹೆಸರು ಹೇಳಿ ಯಾರೇ ಬಂದರೂ ಮುಖದಭಾವಕ್ಕೆ ಬೇರೆಯದೇ ಕಳೆಗಟ್ಟುತ್ತದೆ. “ನಿನ್ನ ತವರು ಮನೆಗೆ ಹೋಗಿದ್ದೆ ತಂಗೀ” ನಿನ್ನ ಅಮ್ಮನಿಗೂ ಈತರದ್ದು ಎರಡು ಡಜನ್ ಬಳೆ ಕೊಟ್ಟು ಬಂದಿದ್ದೀನಿ, ಅನ್ನುವಾಗ ನನಗೂ ಅದೇ ಇರಲಿ ಎನ್ನುವ ಮಾತು ಅರಿವಿಲ್ಲದೆ ಬರುತ್ತದೆ. ಅಲ್ಲಿಂದ ಬರುವ ಕೆಲಸದ ಆಳುಗಳೇ ಇರಲಿ, ನೆಂಟರೇ ಇರಲಿ, ಹಿಂದೊಂದು ತವರೂರಿನ ಹೆಸರು ಸೇರಿಕೊಂಡರೆ ವಿಶೇಷ ಅಕ್ಕರೆ, ಹಾಗಂತ ಅದು ಬೇದ ಭಾವದ್ದಲ್ಲ. ರಕ್ತಗತವಾಗಿ ಬಂದದ್ದು.  ದಾರಿಯಲ್ಲಿ ತವರೂರಿಗೆ ಹೊರಟ ಬಸ್ಸಿನ ಬೋರ್ಡ ಕಂಡರೂ ಸಾಕು ಆ ಬಸ್ಸಿನ ಮೇಲೆ ಡ್ರೈವರ್ ನ ಮೇಲೆ ಎಲ್ಲ ಪ್ರೀತಿ ಉಕ್ಕತ್ತದೆ. ತುಪ್ಪ ಬಡಿಸುವಾಗ ತವರ ಸುದ್ದಿ ಕೇಳಿದರೆ ಎರಡ್ಹುಟ್ಟು ತುಪ್ಪ ಹೆಚ್ಚಿಗೆ ಬೀಳುವದು. ಎಂದು ಛೇಡಿಸುವಿಕೆಯಾದರೂ ಸತ್ಯವೇ, ಸ್ವಲ್ಪ ನಕ್ಕರೂ ,ಅಡುಗೆಯಲ್ಲಿ ವೀಶೇಷವಾದದನ್ನು ಸಜ್ಜು ಗೊಳಿಸುತ್ತಿದ್ದರೂ ಏನಿದು !!ಇಂದು ತವರಿಂದ ಏನಾದರೂ ವಿಶೇಷ ಸುದ್ದಿ ಇದೆಯಾ? ಯಾರಾದರೂ ಬರುತ್ತಿದ್ದಾರಾ? ಎಂದು ಕಾಲೆಳೆಯುವ ಪತಿರಾಯರಿಗೇನೂ ಕಡಿಮೆಯಿಲ್ಲ. ಆದರೆ ತಕರಾರು ಅದರದ್ದಲ್ಲ. ಇಷ್ಟೆಲ್ಲ ಬದುಕಿನ ಜೊತೆಗೇ ಅಂಟಿಕೊಂಡು ಬಂದಿರುವ ಭಾವವನ್ನು ಸಂಬಂಧವನ್ನು ಮದುವೆಯಾಗುತ್ತಿದ್ದಂತೆ ಬಿಡಲಾಗಲಿ ಆ ಭಾವದೊಳಗೆ ಬದಲಾವಣೆ ತಂದುಕೊಳ್ಳಲಾಗಲಿ ಸಾಧ್ಯವೇ!? ತವರು ಹೆಣ್ಣಿನ ಹಕ್ಕು ಮತ್ತು ಆಸ್ತೆಯ ವಿಷಯ. ತವರಿನ ಬಗ್ಗೆ ಸ್ವಲ್ಪವೇ ಸ್ವಲ್ಪ ಮೂಗು ಮುರಿದರೂ ಆಗುವ ಯಾತನೆ ಹೇಳತೀರದ್ದು.  ತವರು ನಗುತಿದ್ದರೆ,ಮನೆಯಾಕೆಯೂ  ನಗುತ್ತಿರುತ್ತಾಳೆ ಎನ್ನುವ ಅರಿವಿದ್ದೂ ಅಹಂಕಾರದಿಂದ ಅದೆಷ್ಟೋ ಗಂಡಸರು ಹೂಂಕರಿಸುವದನ್ನು ನೋಡಿದ್ದೇನೆ. ಸುಕಾ ಸುಮ್ಮನೇ ತವರ ದೂರುವುದು. ಅಪ್ಪ, ಅಮ್ಮ, ಅಣ್ಣ,ತಮ್ಮ ,ಯಾರೇ ಇದ್ದರೂ ಅವರಡೆಗೊಂದು ಅಸಡ್ಡೆಯ ಮಾತೊಗೆಯುವದು. ಗೊತ್ತಿದೆ ಬಿಡೆ ನಿನ್ನ ತವರು ಎನ್ನುವ ಅನಾಧರ. ಈಗೇನು ನಿನ್ನ ತವರಿನ ದೊಡ್ಡಸ್ತಿಕೆ,ಒಂದು  ನಯಾ ಪೈಸಾ ತಗೊಳ್ದೆ ನಿನ್ನ ಮದುವೆ ಮಾಡ್ಕೊಂಡು ಬಂದಿದ್ದೀನಿ. ಆಗ ಬಡತನವಿತ್ತು ಬಿಡು,ಈಗ ಹಬ್ಬಕ್ಕೆ ಏನು ಕೊಟ್ರೋ!? ಕರೆಯುವಲ್ಲಿ, ಕೇಳುವಲ್ಲಿ,ಹೇಳುವಲ್ಲಿ, ಕೊಂಚ ವ್ಯತ್ಯಾಸ ವಾದರೂ, ಕೃಷ್ಣ ಕದ್ದನೆಂದ ಶ್ಯಮಂತಕಮಣಿಯಂತೆ ಅಪವಾದ ಹೆಗಲೇರುತ್ತದೆ. ಹೇಗೆ ತೊರೆಯುವದು ಹೇಳಿ ತವರಿನ ಸೆಳೆತವ. ನೋವುಂಡು ನಗುವ ಮೂರ್ತಿಯನ್ನು ಮಾಡಿದ ಒಲವ. ಅಲ್ಲಿ ಮುಗಿಯದ ನಗುವಿದೆ, ಆಗಾದ ನೆನಪಿದೆ,ಅಪ್ಯಾಯ ಭಾವವಿದೆ, ತೀರದ ಬಂಧವಿದೆ. ನಿನಗೆ ನನಗಿಂತ ತವರೇ ಹೆಚ್ಚು ಎಂದು ಮೂದಲುಸುವಿಕೆಗಾದರೂ  ಒಂದು ಅರ್ಥ ಬೇಡವೇ? ಇಲ್ಲಿ ಹೆಚ್ಚು ಕಡಿಮೆ ಏನಿದೆ!?  ಜತನವಾಗಿ ಸಾಕಿದ ಪ್ರೀತಿಯನ್ನು ,ಜೀವವನ್ನೇ ಎರಡು ಭಾಗ ಮಾಡಿಕೊಟ್ಟ ವೇದನೆಯಲ್ಲಿ ಕೈ ಹಿಡುದು ಇನ್ನೊಂದು ಕೈಗೆ ಕೊಡುವಾಗ ಅಸಹಾಯಕ ತಂದೆ  ಕಣ್ಣೊಳಗೆ ಉಕ್ಕಿದ ಭಾವಕ್ಕೆ ವಿವರಣೆ ಕೊಡಲು ಸಾಧ್ಯವೇ? ತುಟಿ ಕಚ್ಚಿ ತಡೆದ ಅಮ್ಮನ ಕಣ್ಣ ಹನಿಗೆ ಋಣದ ಮಾತಾಡಲು ಸಾಧ್ಯವೇ? ಕೊಟ್ಟ ಹೆಣ್ಣು ಕುಲದ ಹೊರಗೆ ಎನ್ನುವುದಕ್ಕೆ ವಿವರಣೆ ಏನು ಕೊಟ್ಟು ಸಮರ್ಥಿಸುತ್ತಾರೋ ಅರಿಯೆ. ಆದರೆ ಎಂದಿಗೂ ಸಮ್ಮತವಲ್ಲದ ವಿಷಯ ಇದು ಹೆಣ್ಮನಸಿಗೆ. ಹಾಗೆ ನೋಡಿದರೆ ಗಂಡು ಕೂಡಾ ಹೆಣ್ಣು ಕೊಟ್ಟ ಮನೆಗೆ ಸದಾ ಋಣಿಯಾಗಿರಬೇಕು. ತವರಬಗ್ಗೆ ಸದಾ ತಕರಾರೆತ್ತುವ ಗಂಡನಮನೆಯಲ್ಲಿ ಹೆಣ್ಣು ತುಟಿ ಕಚ್ಚಿ ನಗುತ್ತಿರುತ್ತಾಳಷ್ಟೇ. ಗಂಡ ತನ್ನ ತವರನ್ನು ಗೌರವಿಸಲಿ. ಪ್ರೀತಿಸಲಿ,ಎನ್ನುವದು ಹೆಣ್ಣಿನ ಸಹಜ ಬಯಕೆ, ಗಂಡನಾದವ ಹೆಂಡತಿ ತನ್ನ ಮನೆಯವರನ್ನೆಲ್ಲ ಪ್ರೀತಿ ಆದರಗಳಿಂದ ಕಾಣಲಿ ಎಂದು  ಬಯಸುತ್ತಾನೋ  ಹಾಗೇ,  ತನ್ನ ಅಕ್ಕ ತಂಗಿಯರು ತವರನ್ನು ಪ್ರೀತಿಸುವದರ ಬಗ್ಗೆ ಖುಷಿ ಪಡುವವ, ತನ್ನ ಹೆಂಡತಿ ತವರನ್ನು ಪ್ರೀತಿಸತೊಡಗಿದರೆ ಸಿಡಿದೇಳುವ ವರ್ತನೆಗೆ ಅರ್ಥವುಂಟೇ!? ಅದೇನೆ ಹೊಂದಾಣಿಕೆಯ ಕೊರತೆ ಇದ್ದರೂ ತವರಿನೆಡೆಗಿನ ಹೆಣ್ಮನಸಿನ ಭಾವ ಅರಿತ ಗಂಡಸಿನೊಳಗೆ ಹೆಚ್ಚು ಯಶಸ್ಸಿದೆ. ಅದೆಷ್ಟೇ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡಾ ಗಂಡ ತನ್ನ ತವರನ್ನು ಪ್ರೀತಿಸುತ್ತಾನೆಂದರೆ, ಹೆಂಡತಿ ಗಂಡನ ಮನೆ ಕುರಿತು ತಕರಾರು ಎತ್ತುವದೇ ಇಲ್ಲ. ಎಲ್ಲಿ ತವರಿಗೆ ಬೆಲೆ ಇದೆಯೋ ಅಲ್ಲೇ ತನ್ನ ಅಸ್ತಿತ್ವ ಎನ್ನುವದನ್ನು ಅವಳು ಎಂದೋ ನಿರ್ಧರಿಸಿದ್ದಾಳೆ. ಅದು ಪ್ರಕೃತಿ ಮಾತೆ ಪಾರ್ವತಿದೇವಿಯಿಂದಲೇ ಒಲಿದು ಬಂದ ಬಳುವಳಿ ಹೆಣ್ಣಿಗೆ.  ಪರಮ ಅಹಂಕಾರಿ,ಕಠೋರ ಸ್ವರೂಪಿ ದಕ್ಷ , ಶಿವನನ್ನು ಅವಮಾನಿಸಿದ ನಿದರ್ಶನಗಳಿಗೆ ಲೆಕ್ಕವೇ ಇಲ್ಲ, ಆದರೆ ಶಿವ, ಅರ್ಧಾಂಗಿನಿಯಾದ ಸತಿಯ ತವರಿನ ಗೌರವದ ಬಗ್ಗೇಯೇ ಸದಾ ಯೋಚಿಸುತ್ತಿದ್ದ.ಮತ್ತಿ ಕಾಪಾಡುತ್ತಿದ್ದ. ಸಕಲ ಅವಮಾನಗಳನ್ನು ಸತಿಗಾಗಿ ಸಹಿಸಿದ. ಮನಸು ಮಾಡಿದರೆ ಪರಶಿವನಿಗೆ ದಕ್ಷನ ಅಹಂಕಾರ ಮುರಿಯುವುದು ಕ್ಷಣದ ಕೆಲಸವಾಗಿತ್ತು, ಅಪಾರವಾಗಿ ತಂದೆಯನ್ನು ಪ್ರೀತಿಸುವ ಸತಿಗೆ ಎಲ್ಲಿಯೂ ನೋವಾಗಬಾರದೆಂದು,ಅವಳ ಭಾವಕ್ಕೆ ಧಕ್ಕೆಯಾಗಬಾರದೆಂದು ನೊಂದ, ಬೆಂದ,ಪರಿತಪಿಸಿದ. ತಂದೆಯ ತಪ್ಪುಗಳು ಸತಿಗೆ ಅರಿವಾಗಲೆಂದು ವರುಷಗಳೇ ಕಾದ. ಕೊನೆಗೆ ತವರನ್ನೇ ತೊರೆಯಲು ನಿರ್ಧಸಿದ ಸತಿಯ ಕುರಿತು ಹೇಳುತ್ತಾನೆ. ಹೆಣ್ಮಕ್ಕಳಿಗೆ ತವರು ಎಂದರೆ ದೇಹದ ಉಸಿರು. ಅದನ್ನು ನೀನು ತೊರೆದು ಬದುಕಲಾಗದು. ನಿನ್ನ ಅಂತರಂಗದ ನೋವು ವೇದನೆ ನಾನು  ಸಹಿಸಲಾರೆ. ಅಲ್ಲದೇ ಉಸಿರು ತೊರೆದು ಬಂದ ನಿನ್ನ ದೇಹಕ್ಕೆ ಲಕ್ಷಣವಿರಲಾರದು. ತಂದೆಯನ್ನು ತಿದ್ದುವ ಪ್ರಯತ್ನಮಾಡುವದಾಗಿ ವಚನವನ್ನೂ ಕೊಡುತ್ತಾನೆ. ಇದೇ ಕಾರಣಕ್ಕಾಗಿ ಸತಿ ದೇಹತ್ಯಾಗವನ್ನೂ ಮಾಡುತ್ತಾಳೆ. ಶಿವ ತನ್ನ ಬದುಕಿನುದ್ದಕ್ಕೂ ಅರ್ಧಾಂಗಿನಿಯ ಮುಖಾಂತರ ತವರು ಮತ್ತು ಹೆಣ್ಣಿನ ಅವಿನಾಭಾವ ಸಂಬಂಧದ ಬಗ್ಗೆ ಹೇಳುತ್ತಲೇ ಬಂದಿದ್ದಾನೆ. ಪರ್ವತ ರಾಜನ ಮಗಳು ಪಾರ್ವತಿಯಾಗಿ ಶಿವನ ವರಿಸಿದಮೇಲೂ ತನ್ನ ಹಿಂದಿನ ಜನ್ಮದ ತಂದೆ ತಾಯಿಯಿದ್ದಲ್ಲಿ ಹೋಗಿ ಶಿವನ ಕೋಪಕ್ಕೆ ಬಲಿಯಾದ ದಕ್ಷನ ತಲೆಗೆ ಮೊದಲಿನ ರೂಪ ನೀಡಲು ಶಿವನನ್ನು ಕೇಳಿಕೊಳ್ಳುತ್ತಾಳೆ. ಆಗ ಶಿವ ಹೇಳುತ್ತಾನೆ. ನೋಡಿದೆಯಾ ದೇವೀ..  ಹೆಣ್ಮಕ್ಕಳ ಈ ಮನಸ್ಥಿತಿಯೇ ಸದಾ ತವರು ನಗುತ್ತಿರಲು ಸುಖವಾಗಿರಲು ಕಾರಣ. ಜಗತ್ತಿನ ಎಲ್ಲ ಹೆಣ್ಮಕ್ಕಳೂ ನಿನ್ನ ಗುಣವನ್ನೇ ಹೊಂದಲಿ ಎಂದು ವರ ನೀಡುತ್ತಾನೆ. ಶಿವನ ಹಾರೈಕೆಯ ಪರಿಣಾಮವೋ ಏನೋ ಪ್ರಕೃತಿಯ ಈ ಸ್ವರೂಪವೇ ಮುಂದುವರಿದು ಪ್ರತೀ ಹೆಣ್ಣು ಪಾರ್ವತಿಯೇ ಆಗಿದ್ದಾಳೆ. ಆದರೆ ಸಹನಾಮೂರ್ತಿ ಶಿವ ಯಾವ ಗಂಡಸಿನೊಳಗೂ ಇಲ್ಲವೇನೋ!? ಅಕಸ್ಮಾತ್ ಇದ್ದರೆ ಆ ಹೆಣ್ಣು ಪಾರ್ವತಿದೇವಿ ಯಷ್ಟೇ ಖುಷಿಯಾಗಿ ಬದುಕುತ್ತಿದ್ದಾಳೆ ಎಂದೇ ಅರ್ಥ.

ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಒಂದು ಜೀವನ ಸಾಲದು ( ಆತ್ಮ ಕಥೆ) ಒಂದು ಜೀವನ ಸಾಲದು ( ಆತ್ಮ ಕಥೆ)ಮೂಲ : ಕುಲದೀಪ್ ನಯ್ಯರ್ಅನುವಾದ : ಆರ್. ಪೂರ್ಣಿಮಾಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ :೨೦೧೮ಬೆಲೆ :ರೂ.೪೪೬ಪುಟಗಳು : ೫೯೨ ಇದು ಪ್ರಸಿದ್ಧ ಪತ್ರಕರ್ತ ಕುಲದೀಪ ನಯ್ಯರ್ ಅವರ ಆತ್ಮಕಥೆಯ ಅನುವಾದ.  ಸಾಕಷ್ಟು ದೀರ್ಘವಾಗಿರುವ ಈ ಕೃತಿಸ್ವಾತಂತ್ರ್ಯೋತ್ತರ.      ಭಾರತದಲ್ಲಿ ಘಟಿಸಿದ ಅನೇಕ ದುಃಖಕರ ಘಟನೆಗಳನ್ನು ನಿರೂಪಿಸುತ್ತದೆ.  ಹಾಗೆಯೇ  ಸ್ವಾತಂತ್ರ್ಯ   ಪೂರ್ವದಲ್ಲಿ ದೇಶವನ್ನು ವಿಭಜನೆಯತ್ತ ಕೊಂಡೊಯ್ದ ರಾಜಕೀಯ ಸನ್ನಿವೇಶಗಳನ್ನು ಕುರಿತೂ ಹೇಳುತ್ತದೆ. ಸಾಮಾನ್ಯ ಆತ್ಮಕಥೆಯಲ್ಲಿರುವಂತೆ ಇಲ್ಲಿ ನಿರೂಪಕನ ಅಂತರಂಗದ ನೋಟವಿಲ್ಲ. ಇದು ಪೂರ್ತಿಯಾಗಿ ಬಹಿರಂಗದ ಘಟನೆಗಳ ಚಿತ್ರಣ.  ಚರಿತ್ರೆಯ ಘಟನೆಗಳನ್ನು ಆಧರಿಸಿದ್ದು. ಆದ್ದರಿಂದ ಇಂದು ಪ್ರತಿಯೊಬ್ಬ ಭಾರತೀಯನೂ ಓದಲೇ ಬೇಕಾದ ಅತ್ಯಂತ ಪ್ರಸ್ತುತವಾದ ಸಮಕಾಲೀನ ಚರಿತ್ರಕೋಶವಿದು. ಸಿಯಾಲ್ ಕೋಟ್‌ನಲ್ಲಿ ಜನಿಸಿದ ಕುಲದೀಪ ನಯ್ಯರ್ ಮೊದಲು ವಕೀಲರಾಗ ಬಯಸಿದ್ದು,  ದೇಶವಿಭಜನೆಯ ನಂತರ ಭಾರತಕ್ಕೆ ಬಂದ ಬಗೆ, ದಾರಿಯುದ್ದಕ್ಕೂ ಧರ್ಮಾಂಧರಿಂದಾದ ನರಮೇಧವನ್ನು ಕಂಡದ್ದು, ಮುಂದೆ ತಾನು ಶಾಂತಿಗಾಗಿ ಶ್ರಮಿಸಬೇಕೆಂದು ನಿರ್ಧರಿಸಿದ್ದು, ಸಿಯಾಲ್ ಕೋಟನ್ನು ಬಿಟ್ಟು ಬಂದಾಗ ತಾನೊಂದು ವೈರಿ ದೇಶವನ್ನು ಬಿಟ್ಟು ಬರುತ್ತಿದ್ದೇನೆ ಎಂದು ಸ್ವಲ್ಪವೂ ಅನ್ನಿಸದಿದ್ದದ್ದು, ದೆಹಲಿಯಲ್ಲಿ ಒಂದು ಉರ್ದು  ಪತ್ರಿಕೆಯಲ್ಲಿ ವರದಿಗಾರರಾಗಿ ಸೇರಿದ್ದು,  ಗಾಂಧೀಜಿಯವರ ಹತ್ಯೆಯ ಕರಾಳ ಘಟನೆಯಿಂದ ಆಘಾತಗೊಂಡದ್ದು, ಇಂಡಿಯನ್ ಎಕ್ಸ್ ಪ್ರೆಸ್   ಪತ್ರಿಕೆಗೆ ಸೇರಿಕೊಂಡದ್ದು, ಲಾಲ್ ಬಹಾದ್ದೂರ ಶಾಸ್ತ್ರಿಯವರ ಮಾಧ್ಯಮ ಸಲಹೆಗಾರರಾಗಿದ್ದು,  ಪಾಕಿಸ್ಥಾನದೊಂದಿಗೆ ಶಾಂತಿ ಒಪ್ಪಂದಕ್ಕಾಗಿ ಶಾಸ್ತ್ರಿಯ    ವರೊಂದಿಗೆ ರಷ್ಯಾದ ತಾಷ್ಕೆಂಟಿಗೆ ಹೋಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರವನ್ನು ವಿರೋಧಿಸಿದ್ದು, ಸದಾ ವಾಕ್ ಸ್ವಾತöತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯಗಳಿ ಗಾಗಿ ಹೋರಾಡಿದ್ದು, ಗಾಂಧಿವಾದಿಯಾಗಿ ರೈತರು, ದಲಿತರು , ಸ್ತ್ರೀಯರು ಮತ್ತು ಸಮಾಜದ ದಮನಿತ ವರ್ಗದವರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಿದ್ದು- ಹೀಗೆ ತಮ್ಮ ವೈಯಕ್ತಿಕ ಬದುಕಿನೊಂದಿಗೆ ಬೆಸೆದುಕೊಂಡಿದ್ದ ನೂರಾರು ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳನ್ನು ಇಲ್ಲಿ ನಿರೂಪಿಸುತ್ತಾರೆ. ಆರ್.ಪೂರ್ಣಿಮಾ ಅವರ ಅನುವಾದದ ಭಾಷೆ ಸುಂದರವೂ ಸುಲಲಿತವೂ ಆಗಿದೆ. ಬಹಳ ದೀರ್ಘವಾದ ಒಂದು ಕಥನವಾದರೂ ಅನುವಾದಕಿ ಎಲ್ಲೂ ತಾಳ್ಮೆ ಕಳೆದುಕೊಳ್ಳದೆ ಏಕಪ್ರಕಾರದ ಸಮತೋಲನವನ್ನು ಕಾಯ್ದುಕೊಂಡದ್ದು ಅವರ ಅಪಾರ ಪರಿಶ್ರಮ-ಪ್ರತಿಭೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಮುದ್ರಣದ ಗುಣಮಟ್ಟ, ರಕ್ಷಾಪುಟ, ಬಳಸಿದ ಕಾಗದ-ಹೀಗೆ ಎಲ್ಲ ದೃಷ್ಟಿಯಿಂದಲೂ ಪುಸ್ತಕದ ಬಾಹ್ಯ ನೋಟ ನೋಡುಗರ ಗಮನ ಸೆಳೆಯುತ್ತದೆ. ******************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top