ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಶಿಕ್ಷಣ

ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ

ಲೇಖನ ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ ಡಾ. ಸಹನಾ ಪ್ರಸಾದ್ ಇಂದಿನ ಜೀವನ ಬಹಳ ಸ್ಪರ್ಧಾತ್ಮಕವಾದುದು.ನಮ್ಮ ಯುವ ಜನಾಂಗವನ್ನು ನೋಡಿದಾಗ ಕೆಲವೊಮ್ಮೆ “ ಅಯ್ಯೋ ಪಾಪ” ಎನ್ನಿಸುವುದುಂಟು.ಎಷ್ಟು ಓದಿದರೂ ಸಾಲದು, ಎಷ್ಟು ಕಷ್ಟಪಟ್ಟರೂ, ಎಷ್ಟು ಅಂಕೆಗಳು ತೆಗೆದರೂ ಸಾಕಾಗುವುದಿಲ್ಲ. ಯಾವಾಗಲೂ ಒತ್ತಡದ ಬದುಕು. ಚಿಕ್ಕ ತರಗತಿಗಳಿಂದಲೇ ಶುರು.ತರಹ ತರಹದ ಕ್ಲಾಸುಗಳು, ಮನೆ ಪಾಠಗಳು, ಒಂದು ತರಗತಿಯಿಂದ ಇನ್ನೊಂದಕ್ಕೆ ಯಾವಾಗಲೂ ಓಟ. ನರ್ಸರಿಗೆ ಸೇರುವ ಮೊದಲೇ “ಕೋಚಿಂಗ್”. ವಿಧ ವಿಧವಾದ ಬಣ್ಣಗಳು,ಆಕೃತಿಗಳು, ಪದ್ಯಗಳನ್ನು ಕಂಠ ಪಾಠ ಮಾಡಬೇಕು. ತಾಯಿ ಪ್ರೀತಿಯಿಂದ ಮುದ್ದು ಮಾಡುತ್ತಾ ಕಲಿಸಬೇಕಾದ ವಿಷಯಗಳನ್ನು ಈಗ ದುಡ್ಡು ಕೊಟ್ಟು ಶಿಕ್ಷೆಯ ತರಹ ಕಲಿಸುವ ತರಗತಿಗಳು, ಅವನ್ನು ಅಳು ಮುಖದಿಂದ ಕಲಿವ ಮಕ್ಕಳು.ಸಂಜೆ ಆರಾಮವಾಗಿ ಆಟವಾಡಿಕೊಂಡಿರಬೇಕಾದ ಮಕ್ಕಳು ತರಗತಿಯಲ್ಲಿರುವುದನ್ನು ನೋಡಿದರೆ ಬೇಸರವಾಗುತ್ತದೆ, ಆಟವಾಡಿ ಬೆಳೆಯಬೇಕಾದ ಎಳೆ ಮನುಸ್ಸುಗಳು ಈ ರೀತಿಯ ಸತತವಾದ ಧಾಳಿಯಿಂದ ಕೊರಗುವ ಸಾಧತೆಗಳೂ ಇವೆ. ಎಷ್ಟೋ ಸಲ ತಾವು ಮಾಡಲಾಗದಿದ್ದನ್ನು ಮಕ್ಕಳಿಂದ ಮಾಡಿಸುವ, ತಮ್ಮ ಅಪೂರ್ಣ ಕನಸುಗಳನ್ನು ಅವರ ಮೂಲಕ ಸಾಕಾರಗೊಳಿಸುವ ಪೋಷಕರೂ ಸಿಗುತ್ತಾರೆ.ನಮ್ಮ ಮಕ್ಕಳ ಅಭಿವೃದ್ಧಿ ಎಲ್ಲಾ ರೀತಿಯಲ್ಲೂ ಆಗಲಿ, ಅವರ ಬೆಳವಣಿಗೆ ಪರಿಪೂರ್ಣವಾಗಲಿ ಎಂದು ಸದ್ದುದ್ದೇಶ ಹೋಂದಿರುವ ಮಾತಾ ಪಿತೃಗಳೂ ಇದ್ದಾರೆ. ಕೆಲವು ಮಕ್ಕಳು ಅತಿಯಾಗಿ ಚೂಟಿಯಾಗಿರುತ್ತಾರೆ.ಅಂತಹ ಮಕ್ಕಳನ್ನು ಹಿಡಿಯುವುದು ಬಲು ಕಷ್ಟ., ತಂಟೆ ಮಾಡದೆ, ಏನೋ ಒಂದು ತೊಂದರೆಗೆ ಸಿಕ್ಕಿಹಾಕಿಕೊಳ್ಳದೆ ಇದ್ದರೆ ಆ ಮಕ್ಕಳಿಗೆ ಸಮಾಧಾನವೇ ಇಲ್ಲ. ಅಂತಹ ಮಕ್ಕಳಿಗೆ ಈ ರೀತಿಯ ತರಗತಿಗಳಿಗೆ ಸೇರಿಸುವುದರಿಂದ ಸ್ವಲ್ಪ ಮಟ್ಟಿಗೆ ಅವರ ತುಂಟತನ ಕಡಿಮೆಯಾಗುತ್ತದೆ ಹಾಗೂ ಜ್ನಾನಾಭಿವೃದ್ಧಿ ಕೂಡ ಆಗುತ್ತದೆ.“ಮಕ್ಕಳಿಗೆ ಕಷ್ಟ ಎಂದರೇನು, ಅವರಿಗೆ ಇನ್ನೇನು ಕೆಲಸವಿರುತ್ತದೆ? ಎಲ್ಲ ಕಡೆ ಕರೆದೊಯ್ಯಲು,ಕೇಳಿದ್ದೆಲ್ಲಾ ಕೊಡಿಸಲು ನಾವಿದ್ದೇವೆ, ಕಲಿಯಲು ಏನು ಕಷ್ಟ” ಎಂದು ಕೇಳುವ ಪೋಷಕರು ಬಹಳ. ಅದು ನಿಜವೇ ಆದರೂ, ಮಕ್ಕಳ ಇಷ್ಟ ಹಾಗೂ ಆಸಕ್ತಿಯನ್ನೂ ಗಮನಿಸಿ ಪೋಷಕರು ಮುಂದುವರೆಯುವುದು ಮುಖ್ಯ.ಎಷ್ಟೋ ಜನ ವಿದ್ಯಾರ್ಥಿಗಳಿಗೆ ವಿಜ್ಞಾನ ಕಷ್ಟ. ಅದರಲ್ಲೂ ಗಣಿತವೆಂದರೆ ಅಲರ್ಜಿ.ಅಂತಹ ಮಕ್ಕಳನ್ನು ಬಲವಂತವಾಗಿ ವಿಜ್ಞಾನ ಓದುವುದಕ್ಕೆ ನೂಕಿದರೆ ಅದು ತುಂಬಾ ತಪ್ಪು.ಎಷ್ಟೂ ಜನ ಪೀಯೂಸೀಯಲ್ಲಿ ಗಣಿತ ತೆಗೆದುಕೊಂಡು, ಒದ್ದಾಡಿ, ಆಮೇಲೆ ತಮ್ಮ ತಮ್ಮ ಆಸಕ್ತಿಯ ಮೇಲೆ ಬೇರೆ ವಿಷಯ ಓದುವುದುಂಟು. ಕೆಲವು ಪೋಷಕರು ಇದನ್ನು ಅರ್ಥ ಮಾಡಿಕೊಂಡು ಮಕ್ಕಳಿಗೆ ಉತ್ತೇಜನ ನೀಡಿದರೆ,, ಇನ್ನೂ ಕೆಲವರು ಇದರಿಂದ ತಮ್ಮ ಅಭಿಮಾನಕ್ಕೆ ಧಕ್ಕೆ ಎಂದೇ ಭಾವಿಸುತ್ತಾರೆ. ಖ್ಯಾತ ವೈದ್ಯರೊಬ್ಬಳ ಮಗಳು ಕಲಾ ವಿಭಾಗಕ್ಕೆ ಸೇರಲು ಬಂದಿದ್ದಳು.ಅವಳು ಮುಂಚೆ ಓದಿದ್ದು ವಿಜ್ಞಾನ. ಅಂಕೆಗಳೂ ಸುಮಾರು ಚೆನ್ನಾಗಿಯೇ ಬಂದಿತ್ತು. ಸಾಮಾನ್ಯವಾಗಿ ಕೇಳುವಂತೆ ಯಾಕೆ ಈ ಬದಲಾವಣೆ ಎಂದು ವಿಚಾರಿಸಿದಾಗ , ಅವಳು ಹೇಳಿದ್ದು “ ನನಗೆ ಮುಂಚಿಂದಲೂ ಕಲೆಯ ಬಗ್ಗೆ ಒಲವು,ಅದರಲ್ಲೂ ಆಂಗ್ಲ ಸಾಹಿತ್ಯ ನನ್ನ ಅಚ್ಚು ಮೆಚ್ಚಿನ ವಿಷಯ.ಆದರೆ ನಮ್ಮ ಕುಟುಂಬದಲ್ಲಿ ಎಲ್ಲರೂ ವಿಜ್ಞಾನ ಓದಿದವರೆ, ವೈದ್ಯ ಅಥವಾ ಎಂಜಿನಿಯರ್ ಆಗಿರುವರೆ. ಇದುವರೆಗೂ ನಾನು ತೆಗೆದಿರುವ ಅಂಕಿಗಳಿಗೂ, ನನ್ನ ಆಸಕ್ತಿಗೂ ಏನೂ ಸಂಭಂಧವಿಲ್ಲ.ಅದೆಲ್ಲ ಟ್ಯೂಷನ್ ಮಹಿಮೆ ಅಷ್ಟೇ”. ಅವಳ ತಾಯಿಯ ಮುಖ ಕೋಪದಿಂದ ಗಂಟಿಕ್ಕಿತ್ತು.” ನಾನು ನನ್ನ ಆಸ್ಪತ್ರೆಯನ್ನು ಇವಳು ಮುಂದುವರೆಸುತ್ತಾಳೆ,ಅದನ್ನು ಬೆಳೆಸುತ್ತಾಳೆ ಎಂದು ಕನಸು ಕಟ್ಟಿದ್ದೆ.ಇವಳಿಗೆ ಅದರ ಪರಿವೆಯೇ ಇಲ್ಲ”. ಅವರ ಮಾತಿಗೆ ಸೊಪ್ಪು ಹಾಕದೆ ಆ ಹುಡುಗಿಗೆ ಸೀಟ್ ಕೊಡುವುದೆಂದು ನಿರ್ಧರಿಸಿದೆವು. ಆದರೆ ಸ್ವಲ್ಪ ದಿನದ ನಂತರ ತಿಳಿದುದೆಂದರೆ ಅವಳಿಗೆ ಬಲವಂತವಾಗಿ ಇಂಜಿನೀರಿಂಗ್ ಸೀಟ್ ಕೊಡಿಸಿದ್ದರು.ಕೆಲವು ವರುಷದ ನಂತರ ಸಿಕ್ಕಾಗ ಹೇಗಿದ್ದೆಯ ಎಂದು ಕೇಳಿದರೆ, ಅವಳ ಮಾತಿನಲ್ಲಿ ರೋಷ ಹೆಪ್ಪುಗಟ್ಟಿತ್ತು. ಎಲ್ಲ ಸೆಮ್ಮಿಸ್ಟರ್ನಲ್ಲೂ “ ಬ್ಯಾಕ್ ” ಇದೆ.ನಮ್ಮ ಮನೆಯವರ ಸಮಾಧಾನಕ್ಕಾಗಿ ಓದುತ್ತಿದ್ದೇನೆ. ಆದರೆ ಮನಸ್ಸೆಲ್ಲ ಸಾಹಿತ್ಯದ ಮೇಲೆ. ಕೆಲವೊಮ್ಮೆ, ಅವರಿಗೆ ಬುದ್ಧಿ ಕಲಿಸಲಿಕ್ಕಾದರೂ ಇದೆ ರೀತಿ ನಪಾಸಾಗುತಲೇ ಇರೋಣ ಎನಿಸುತ್ತದೆ”. ಅವಳ ಬಿಚ್ಚು ಮನಸ್ಸಿನ ಮಾತು ಕೇಳಿ ಎದೆ ಧಸಕ್ಕೆಂದಿತು. “ ನೋಡಮ್ಮ, ಇದು ನಿನ್ನ ಬದುಕು. ನೀನು ಇದೇ ರೀತಿ ಅಂಕಿಗಳು ತೆಗೆಯುತ್ತಿದ್ದರೇ , ನಿನಗೆ ಒಳ್ಳೆಯ ಕೆಲಸ ಸಿಗುವುದು, ನೀನು ನಿನ್ನ ಸಾಹಿತ್ಯದ ಕಡೆ ಗಮನ ಕೊಡುವುದಕ್ಕಾಗುವುದೇ ಇಲ್ಲ.ಯೋಚಿಸು, ಅವರಿಗೆ ಬುದ್ಧಿ ಕಲಿಸಲು ಹೋಗಿ ನಿನ್ನ ಬದುಕನ್ನು ನೀನೆ ನಾಶ ಮಾಡಿಕೊಳ್ಳಬೇಡ “ ಎಂದು ಹೇಳಿದಾಗ ಅವಳ ಕಣ್ಣಲ್ಲಿ ಅರ್ಥವಾದ ಭಾವ ಕಂಡು ಬಂದಿತು.”. ಅಡ್ಮಿಷನ್ ಸಮಯದಲ್ಲಿ ಮಕ್ಕಳ ಜತೆ ಪೋಷಕರಿಗೂ “ ಕೌನ್ಸಿಲ್ಲಿಂಗ್” ಬೇಕಾಗುತ್ತದೆ.ಮಕ್ಕಳಿಗೆ ನಮ್ಮ ಬದುಕಿನ ಒಂದು ಭಾಗದಂತೆ ನೋಡದೆ, ಅವರಿಗೂ ಅವರದೇ ಆದ ವ್ಯಕ್ತಿತ್ವ ಇದೆಯೆಂದು ಅರಿತು ಅವರನ್ನು ಗೌರವಿಸಿದಾಗ, ಅವರ ಬದುಕೂ ಸುಂದರ, ನಮ್ಮ ಬದುಕೂ ಸಾರ್ಥಕ! *****************************************

ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ Read Post »

ಕಾವ್ಯಯಾನ

ಒಂದು ಸುಖದ ಹಾಡು.

ಕವಿತೆ ಒಂದು ಸುಖದ ಹಾಡು. ನಂದಿನಿ ಹೆದ್ದುರ್ಗ ಪ್ರತಿ ಭೇಟಿಗೂ ಅವನುಳಿಸಿಹೋಗುತ್ತಿದ್ದ ಒಂದಾದರೂಕೊರತೆಯ ಕಾವಿನಲಿಬೇಯುತ್ತಾ ಬದುಕಿಕೊಳುವಸುಖದಅಭ್ಯಾಸವಾದವಳು ನಾನು. ಮರೆತೇ ಬಿಟ್ಟ ಈ ಬಾರಿಯಾಕೋ.ತೃಪ್ತ ಎದೆಯಲ್ಲಿ ಚಿಮ್ಮುವವೆತಪ್ತ ಹಾಡುಗಳು.?ಬೇಸರಕೆ ಆಕಳಿಕೆ. ಕತ್ತಿನೆತ್ತರದಲಿ ಅವನಿತ್ತಮುತ್ತುಗಳಅದೋ..ಆ ಮರದಡಿ ಹರಡಿಬಿಟ್ಟೆ..ಅವನ ಹಂಗಿರದೆಹಲವು ನಿಮಿಷಹಾಯೆನಿಸಿತು. ಹೊರಗೆ ಸಣ್ಣಗೆ ಸೋನೆ.ಅವನಿರದ ಎದೆಯೊಳಗೆಮತ್ತವನದೇ ಕಾಮನೆ. ಮೊಳಕೆಯೊಡೆಯುತಿದೆಬಿಸುಟ ಮುತ್ತೊಂದು.ಎರಡೆಲೆಯೆದ್ದು ಕಣ್ಣ ಪಿಳುಕಿಸಿದಒಡನೆಚಿಗುರು ಚಿವುಟಿ ಬಿಸುಟಲುಠರಾವು ಮಾಡಿರುವೆ. ಪಾತಾಳಕಿಳಿಯುತಿದೆ ಬೇರು.ಅವರಿವರಿಗೆ ಅಲ್ಲೊಂದು ಸಸಿಇರುವ ಕುರುಹೂ ಇರದೆ.ಎತ್ತರಕ್ಕಿಂತಲೂ ಆಳದಹುಚ್ಚಿನವಳು ನಾನು. ಅವನ ಸಣ್ಣಗೆ ನೋಯಿಸುತ್ತಒಳಗೊಳಗೆ ನಗುವಾಗೆಲ್ಲಾಕಿರುಬೆರಳನೆರಳೊಂದು ನವುರಾಗಿ ಕೊರಳತಾಕಿ ಹೋಗುತ್ತದೆ.ನಾನೀಗ ಸುಖವಾಗಿರುವೆ..****************************

ಒಂದು ಸುಖದ ಹಾಡು. Read Post »

ಕಾವ್ಯಯಾನ

ಹೃದಯಂಗಮ

ಕವಿತೆ ಹೃದಯಂಗಮ ಸ್ಮಿತಾ ಭಟ್ ನೀನಿರುವುದೇ ಬಡಿದುಕೊಳ್ಳಲುಅನ್ನುವಾಗಲೆಲ್ಲಒಮ್ಮೆ ಸ್ತಬ್ಧವಾಗಿಬಿಡುಎನ್ನುವ ಪಿಸುಮಾತೊಂದ ಹೇಳಬೇಕೆನಿಸುತ್ತದೆ! ‘ಹೃದಯದ ಮಾತು ಕೇಳಬೇಡಬುದ್ಧಿಯ ಮಾತು ಕೇಳು’ಎನ್ನುವ ಫಿಲಾಸಫಿಗಳಎದೆಗಾತುಕೊಳ್ಳುವ ಕಿವಿಗಳಿಗೆ ಇಯರ್ ಪೋನ್ ಜೋತು ಬಿದ್ದುಲಬ್ ಡಬ್ಒಂಟಿಬಡಿತ! ಅಡಿಯಿಂದ ಮುಡಿಯವರೆಗೂಪಾರುಪತ್ಯದ ಅಧಿಕಾರ ಹೊತ್ತರೂನಿರಂತರ ಚಲನೆಯಲ್ಲಿ ನಿಲ್ಲುವ ಅಧಿಕಾರವಿಲ್ಲ! ಚೂರೇ ಚೂರು ದಣಿವಿಗೆ ಕೊಸರಿಕೊಂಡರೂಭುಗಿಲೇಳುವ ಭಯದ ಹನಿ. ಇರ್ರಿ, ಹೃದಯ ಬಡಿತ ಶುರುವಾಗಲಿ ಈಗೇನೂ ಹೇಳುವದಿಲ್ಲ –ಎದೆಯ ಮೇಲೆ ಕೈ ಇಟ್ಟು ಸ್ಕ್ಯಾನಿಂಗ್ ಕೋಣೆಯಿಂದ ಹೊರ ಬರುವ ಜೀವಮನದೊಳಗಿನ ಪ್ರತೀ ಭಾವಕ್ಕೂ ಸ್ಪಂದಿಸಿ –ಲಬ್ ಡಬ್ ಮತ್ತಷ್ಟು ತೀವ್ರ. ಹಿಡಿಯಷ್ಟು ಪುಟ್ಟ ಕೋಣೆಯೊಳಗೆಹಿಡಿಯಲಾರದಷ್ಟು ನೋವು ನಲಿವು ಭಾವ ಜೀವಗಳುಹೃದಯದಿಂದ ಹೊರಟು ಮತ್ತೆ ಹೃದಯಕ್ಕೇಸೇರುವ ತದಾತ್ಮ್ಯಪ್ರೇಮ ಪ್ರವಹಿಸುವ ಪ್ರತೀ ದಾರಿಯಲಿ ಜೀವಕಳೆನದಿಯೊಂದು ಹರಿದು ಸಾಗರದೊಳು ಲೀನವಾಗ ಬಯಸಿದಾಗಲೇಎದೆಯ ಕವಾಟವೊಂದು ಮುಚ್ಚಿಕೊಳ್ಳುವುದು!! **************************

ಹೃದಯಂಗಮ Read Post »

ಕಾವ್ಯಯಾನ

ಕ್ಷಮಿಸಲಾಗದು

ಕ್ಷಮಿಸಲಾಗದು ಸುಧಾ ಹಡಿನಬಾಳ ಹೇ ನಿಷ್ಕರುಣಿ ನಿರ್ಗುಣಿಕರುಣೆಯಿಲ್ಲದ ನಿರ್ದಯಿ ಸಿಂಹಿಣಿಸಾವು ಬರಲೆಂದುದಿನವೂ ಹಂಬಲಿಸುವವರಮೇಲಿಲ್ಲ ನಿನ್ನ ಕರುಣಇನ್ನೂ ಬಾಳಿ ಬದುಕಬೇಕಾದಮುಗ್ಧ ಜೀವಗಳ ಸಂಚು ಹಾಕಿಪ್ರಾಣ ಹೀರಿ ಹೊತ್ತೊಯ್ಯುವನಿನ್ನ ಭಯಾನಕ ಪರಿಸಹಿಸಲಾಗದು ನಿನ್ನ ಕ್ಷಮಿಸಲಾಗದುಯಾಕೆ ನಿನಗೆ ಯಾರ ಯಾರಮೇಲೊ ಕಾಕ ದೃಷ್ಟಿ..?ಒಂದು ಸಣ್ಣ ಸುಳಿವೂನೀಡದೆ ಕಸಿದುಕೊಳ್ಳುವೆಯಲ್ಲಮೊಲೆಯನುಂಬ ಕಂದಮ್ಮಗಳ ತಾಯ್ಗಳಇನ್ನೂ ಬಾಳಿ ಬದುಕಿಎಲ್ಲರಿಗೂ ಬೇಕಾದವರಜೀವಕ್ಕೆ ಜೀವವಾಗಿ ಅರಿತುಬೆರೆತ ಸತಿ ಪತಿಗಳಲ್ಲೊಬ್ಬರಇಳಿ ವಯದಲ್ಲಿ ಊರುಗೋಲಿನಂತೆಆಸರೆಯಾಗಿ ನಿಂತವರಪಾಪ ಪುಣ್ಯ ಎಲ್ಲ ಕಂತೆಪಾಪಿಗಳಿಗಲ್ಲಿ ನಿಶ್ಚಿಂತೆಮುಗ್ಧ ಮಾನವಂತರಿಲ್ಲಿನಿನ್ನ ತೋಳ ತೆಕ್ಕೆಯಲ್ಲಿನಿನಗಿಲ್ಲ ಯಾರ ಮೇಲೂದಯೆ, ಪ್ರೀತಿ, ಕರುಣನಿನ್ನ ಹೆಸರೆ ಅಲ್ಲವೆ ಮರಣನಿನಗೆ ಎಳೆದೊಯ್ಯಲುಕಾರಣ ಬೇಕೆಂದಿಲ್ಲಬೇಕು ಒಂದು ನೆಪಇನ್ನು ಸಾಕು ನಿಲಿಸುನಿನ್ನ ಕರುಣೆಯಿಲ್ಲದ ಕೃತ್ಯವಕೃಪೆ ಮಾಡಿ ದಯೆ ತೋರುಉಳಿಸು ಎಳೆಯ ಜೀವವ. ****************************z

ಕ್ಷಮಿಸಲಾಗದು Read Post »

ಇತರೆ, ಜೀವನ

ಥಾಂಕ್ಸ್ ಎಂದರೆ ಸಾಕೇ

ಲೇಖನ ಥಾಂಕ್ಸ್ ಎಂದರೆ ಸಾಕೇ ಶಾಂತಿವಾಸು ನನಗೆ ನಮ್ಮಪ್ಪ (ನಾವು ನಮ್ಮಪ್ಪನನ್ನು ಅಣ್ಣ ಅಂತಾನೇ ಕರೀತಿದ್ದಿದ್ದು) ಏನು ಅಂತ ಅರ್ಥವಾಗಿದ್ದು, ನಾನು ಮದುವೆ ಆದ ಮೇಲೇನೆ. ನನ್ನ ಮದುವೆಯಾದ ನಂತರ ಮೊದಲ ಸಲ ಅತ್ತೆ ಮನೆಗೆ ಹೊರಡಿಸಲು ಕೆಲವರು ಹಾಗೂ ಕರೆದುಕೊಂಡು ಹೋಗಲು ಬಂದ ನೆಂಟರು ಮನೆ ತುಂಬಾ ತುಂಬಿರುವಾಗ, ನಮ್ಮಪ್ಪ ಬಚ್ಚಲುಮನೆಯ ಒಳಗೆ ಸೇರಿಕೊಂಡು ಚಿಲಕ ಜಡಿದು ಕಿರಿಚಿ ಕಿರಿಚಿ ಅತ್ತಿದ್ದನ್ನು ಕಂಡು ಎಲ್ಲರಿಗೂ ಪರಮಾಶ್ಚರ್ಯ. ನಮ್ಮಪ್ಪನ ಹೃದಯದಲ್ಲಿಯೂ ಪ್ರೀತಿ ಎಂಬ ಒರತೆ ಜಿನುಗುತ್ತದೆ ಎಂದು ಎಲ್ಲರಿಗೂ ಗೊತ್ತಾಗಿದ್ದೇ ಆಗ. ಪಟಪಟ ಮಾತು, ಹಠ ಹಾಗೂ ಅತಿ ಶುದ್ಧತೆಯಿದ್ದ ನಾನು ನಮ್ಮಪ್ಪನ ಕಣ್ಣಲ್ಲಿ “ಸಾಧಕಿ”. ಅತೀ ಕೋಪ ಇದ್ದ ನಮ್ಮಪ್ಪ ಬಹಳ ಶಿಸ್ತಿನ ಸಿಪಾಯಿಯಾಗಿದ್ದರು. ಮನೆಗೆ ಯಾರೇ ಬಂದರೂ ಯಾರೂ ಮುಖ ಹೊರಹಾಕುವಂತಿರಲಿಲ್ಲ. ನನಗೊಬ್ಬಳಿಗೆ ಮಾತ್ರ ಅದರಲ್ಲೆಲ್ಲ ಸ್ವಲ್ಪ ಸಡಿಲತೆಯಿತ್ತು. ಬಂದವರೆದುರು ಮಾತು, ಡಾಕ್ಟರ್ ರಾಜ್ ಕುಮಾರ್ ಪರ ವಾದ, ಚರ್ಚೆ ಮಾಡುವುದಕ್ಕೂ ಮತ್ತು ಅವರಿಗೆಲ್ಲಾ ತಿಂಡಿ ಕಾಫಿ ಕೊಡುವುದಕ್ಕೂ ನನಗೆ ಮಾತ್ರ ಅವಕಾಶವಿತ್ತು. ನಾವು ನಾಲ್ಕು ಜನ ಅಕ್ಕತಂಗಿಯರು ಕೂರವ, ನಿಲ್ಲುವ ಭಂಗಿಗಳೆಲ್ಲ ಅವರು ಮಾಡಿದ ನಿಯಮಗಳ ಪಟ್ಟಿಯಲ್ಲಿದ್ದವು. ಮಕ್ಕಳು ಕೂರುವಂಥ ಪುಟ್ಟ ಪುಟ್ಟ ಕಬ್ಬಿಣದ ಕಟ್ಟಿನಲ್ಲಿ ಬಿಗಿದ ಪ್ಲಾಸ್ಟಿಕ್ ವೈರಿನ ಮೂರು ಖುರ್ಚಿಗಳನ್ನು ತಂದು ಅದರಲ್ಲಿಯೇ ಕೂರಲು ನಿರ್ಭಂಧ ಹೇರಿದ್ದರು. ನನಗೆ ಬುದ್ದಿ ಬಂದ ಮೇಲೆ (ನನಗೆ ಪ್ರಶ್ನೆ ಕೇಳುವಷ್ಟು ಬುದ್ದಿ ಬಂದದ್ದು ನನ್ನ 20 ವರ್ಷ ವಯಸ್ಸಿನ ನಂತರ) ಕೇಳಿದ್ದೆ “ಯಾಕಣ್ಣ ನಮ್ಮನ್ನ ಯಾವಾಗಲೂ ಪುಟ್ಟ ಖುರ್ಚಿ ಮೇಲೆ ಕೂರಿಸ್ತಿದ್ದೆ” ಅಂತ. ಅದಕ್ಕವರು “ಜಾಗ ದೊಡ್ಡದಿದ್ರೂ ಚಿಕ್ಕದಾಗಿ ಕೂತ್ಕೋಳ್ಳೋದನ್ನು ಕಲಿಸೋಕ್ಕೆ” ಎಂದಿದ್ದರು. ಯಾರಿಗೂ ಏನೂ ಅಲ್ಲವೆನಿಸುವ, ಅಷ್ಟು ಸಣ್ಣ ವಿಷಯ ಕೂಡಾ ನನ್ನ ತಂದೆಯ ಜೀವನದಲ್ಲಿ ಶಿಸ್ತಿನ ಭಾಗವಾಗಿತ್ತು. ನನ್ನ ತಂದೆಯ ಕೊನೇ ದಿನ ನನ್ನನ್ನು ಮನೆಗೆ ಕರೆಸಿಕೊಂಡು, ಪಕ್ಕದಲ್ಲೇ ರಾತ್ರಿ ಪೂರ್ತಿ ಕೂಡಿಸಿಕೊಂಡು ತಾನು ನಿದ್ದೆ ಮಾಡಿದ್ದರು. ಕೊನೆಯ ಊಟ ನನ್ನ ಕೈಯಿಂದ ಮಾಡಿ, ತಲೆಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ, ದೀರ್ಘವಾದ ಉಸಿರಿನೊಂದಿಗೆ ಹಾಗೇ ಹೊರಟುಬಿಟ್ಟರು. ನಾನು ತಣ್ಣಗಾದ್ರೆ ತಿನ್ನಲ್ಲ ಅಂತ ಪ್ರತಿದಿನ ಬೇಸರ ಮಾಡದೆ, ಎರಡು ಕಿಲೋಮೀಟರ್ ದೂರವಿದ್ದ ನನ್ನ ಶಾಲೆಯ ತನಕ ನಡೆದು ಊಟ ತಂದುಕೊಟ್ಟು, ಮತ್ತೆರಡು ಕಿಲೋಮೀಟರ್ ವಾಪಸ್ ಮನೆಗೆ ಬರುತ್ತಿದ್ದ ನನ್ನಪ್ಪನಿಗೋ, ತಾತನಿಗೋ ನಾನೆಂದೂ ಥಾಂಕ್ಸ್ ಹೇಳೇ ಇಲ್ಲ. ನನಗೆ ಊಟದ ಡಬ್ಬಿ ಕೊಟ್ಟುಬಂದು ನಮ್ಮಪ್ಪ, ಊಟ ಮಾಡಿ ಎರಡು ಕಿಲೋಮೀಟರ್ ದೂರದ ಕಾರ್ಖಾನೆಗೆ ಎರಡನೇ ಪಾಳಿಯ ಕೆಲಸಕ್ಕೆ ನಡೆದು ಹೋಗಬೇಕಿತ್ತು. ಅಲ್ಲಿ ಮೆಷಿನಿನ ಮುಂದೆ ನಿಂತು ಕೆಲಸ ಮಾಡಿ, ಮಧ್ಯರಾತ್ರಿ 12.30ಗೆ ಮನೆಗೆ ನಡೆದು ಬರುತ್ತಿದ್ದ ನನ್ನಪ್ಪನ ಕಷ್ಟಗಳು, ಪ್ರೀತಿ ನನಗೆ ತಿಳಿದದ್ದು ಮಾತ್ರ ಗಂಡನ ಮನೆ ಮೆಟ್ಟಿದ ನಂತರವೆ. ನಾಲ್ಕು ಹೆಣ್ಣು ಮಕ್ಕಳಿಗೂ 8 ಗಂಟೆ ಒಳಗೆ ಸ್ನಾನ, ಸೀಮೆಎಣ್ಣೆ ಸ್ಟವ್ವಿನಲ್ಲಿ ತಿಂಡಿ, ಬ್ಯಾಗು ಏನೇನೋ ಅವಸ್ಥೆ ಜೊತೆಗೆ ಎಂಟು ಜಡೆ ಹೆಣಿದ ಅಮ್ಮನಿಗೂ ನಾನೆಂದೂ ಥಾಂಕ್ಸ್ ಹೇಳಲಿಲ್ಲ. ಎಳವೆಯಲ್ಲಿ ಅಂದರೆ ಇಲ್ಲಿಗೆ 45 ವರ್ಷಗಳ ಹಿಂದೆ ಬೇನೆ ಬಂದು, ಮುಚ್ಚಿಹೋದ ಕಣ್ಣಿಗೆ ಹಾಕಲು, ಕಳ್ಳರ ಕೂಪವಾಗಿದ್ದ, ಆಗಿನ ಬೆಂಗಳೂರು ಹೊರವಲಯದಲ್ಲಿದ್ದ (ಈಗ ಈ ಜಾಗವನ್ನೂ ದಾಟಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿಕೊಂಡಿದೆ) 40 ಕ್ಯಾಂಡಲ್ ಬ್ರಿಡ್ಜ್ ಹತ್ತಿರವಿದ್ದ ಸೀಗೇ ಬೇಲಿಯ ಕೊರಡನ್ನು, ನನ್ನ ಸೋದರಮಾವನೊಡನೆ ನಡೆದೇ ಹೋಗಿ ತಂದು, ಪ್ರಾಣ ಹಾರಿಹೋಗುವಂತೆ ಊದಿದರೆ, ಬರುವ ಎಣ್ಣೆಯನ್ನು ಹಾಕಿ ಕಣ್ಣುಳಿಸಿದ ನನಪ್ಪನನ್ನು ಕಣ್ಣುಮುಚ್ಚುವ ತನಕ ಮಗುವಂತೆ ಕಾಯ್ದಿದ್ದೇನೆ. ಗಂಡ್ಯಾಕೆಂದು ಇಂದು ನಿಡುಸುಯ್ವ ಇದೇ ಜನ, ಅಂದು “ನಾಲ್ಕೂ ಹೆಣ್ಣು ಬೋಕಿಗಳೆಂದೂ, ಕೊಳ್ಳಿ ಇಡಲು ಒಬ್ಬ ಗಂಡು ಹೆರಲು ಯೋಗ್ಯತೆಯಿಲ್ಲದವಳು, ಕೊನೇ ಕಾಲದಲ್ಲಿ ನಿನಗ್ಯಾರು ಆಸರೆ” ಎನ್ನುತ್ತಾ ಮೂದಲಿಸಿ, ಹೆದರಿಸಿದಾಗೆಲ್ಲ, ಕೊರಗುತ್ತಿದ್ದ ನಮ್ಮಮ್ಮನ ಮನಸ್ಸನ್ನು ಮಾತ್ರ, ಅವರಿರುವ ತನಕವೂ ಬದಲಾಯಿಸಲಾಗದೆ ಸೋತಿದ್ದೇನೆ… ಇದುವೇ ಅಲ್ಲವೇ “ಸಹಜ ಜೀವನ” ಮಾತುಮಾತಿಗೆ ಥಾಂಕ್ಸ್ ಥಾಂಕ್ಸ್ ಅನ್ನುವುದು, ಮತ್ತು ನಮ್ಮ ಮಕ್ಕಳಿಗೆ ನಾವು ಮಾಡಲೇಬೇಕಾದ ಕರ್ತವ್ಯಕ್ಕೂ ಥಾಂಕ್ಸ್ ನಿರೀಕ್ಷಿಸುವ ಇಂದಿನ ಮನಃಸ್ಥಿತಿ ಖಂಡಿತ ಅಸಹಜ. ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ನನ್ನ ತಂದೆತಾಯಿಯರಿಗೋ ಮತ್ತು ಅವರ ಸಮವಯಸ್ಕರಿಗೋ ಈ ವಿಷಯದಲ್ಲಿ ಖಿನ್ನತೆ ಇರಲಿಲ್ಲ. ಯಾಕೆಂದ್ರೆ ಎಲ್ಲರೂ ಮಾಡುವ ಕೆಲಸವನ್ನೇ ನಾವು ಮಾಡುವುದೆಂಬ ಭಾವನೆಯಿತ್ತು. ಕುಟುಂಬಕ್ಕಾಗಿ ನಾನೇನೂ ವಿಶೇಷವಾದದ್ದನ್ನು ಮಾಡುತ್ತಿಲ್ಲ ಅನ್ನೋ ಹಾಗೆ ಹೇಳದೆ ಬದುಕಿಬಿಟ್ಟರು. ಮುಖ್ಯವಾಗಿ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ನಿರೀಕ್ಷೆಗಳೆ ಇರಲಿಲ್ಲ. ಬದಲಾದ ಪರಿಸ್ಥಿತಿಗಳು ಜೀವನದ ಸಹಜತೆಯನ್ನು ನುಂಗಿ ಖಿನ್ನತೆಯನ್ನು ಹುಟ್ಟುಹಾಕುತ್ತಿವೆ. ******************************************

ಥಾಂಕ್ಸ್ ಎಂದರೆ ಸಾಕೇ Read Post »

ಕಾವ್ಯಯಾನ

ಸ್ನೇಹ

ಕವಿತೆ ಸ್ನೇಹ ನೂತನ ದೋಶೆಟ್ಟಿ ಶುಭ್ರ ಬೆಳಗಿನಲ್ಲಿನೀಲಿ ಆಕಾಶಬಾನ ತುಂಬೆಲ್ಲನಗುಮೊಗದ ಬಿಳಿ ಮೋಡ ಕವಿ ಕಲ್ಪನೆಯಗರಿ ಬಿಚ್ಚುವ ಹೊತ್ತುಹೂ ದಳಗಳ ತುದಿಎಲೆಯಂಚಿನ ಬದಿಮಣಿ ಮಾಲೆ ಸೃಷ್ಟಿ ನೇಸರನಿಟ್ಟ ರಂಗೋಲಿಕಾಮನಬಿಲ್ಲಿನಕಾವ್ಯ ರಂಗಿನ ಮುನ್ನುಡಿ ಹೊತ್ತೇರಿ ಸುಡು ಬಿಸಿಲುನೆತ್ತಿಯ ಸೂರ್ಯನೇಕಳಕಳಿಸಿ ನೀಡಿದತಂಪು ನೆರಳು ನಸು ನಾಚಿ ಮುತ್ತಿಕ್ಕಿಇಳೆಯ ಬೀಳ್ಕೊಟ್ಟುದೂರ ಸರಿವನೋವ ಮರೆಯಲುಚಂದ್ರಗೆ ಅಹವಾಲು ರಾತ್ರಿ ಕಳೆದುಅರುಣೋದಯಕಲ್ಪನೆಯಹರಿವ ತೊರೆಯಸಲಲ ನಿನದರವರವ ಇದು ಸ್ನೇಹಬಾನು, ಭೂಮಿನೀರು , ನೆಲಚಂದ್ರಮನ ಬಿಳುನೊರೆ ಕಲಿಯಬೇಕುಇದರಿಂದಸ್ನೇಹದ ಗುಟ್ಟುಸಮರಸದ ನಂಟಲ್ಲದೆಬದುಕಲೇನು ಉಂಟು? ***********************

ಸ್ನೇಹ Read Post »

ಕಾವ್ಯಯಾನ

ಉರಿಯುತ್ತಿದ್ದೇನೆ…. ಅಯ್ಯೋ!

ಕವಿತೆ ಉರಿಯುತ್ತಿದ್ದೇನೆ…. ಅಯ್ಯೋ! ಕಾತ್ಯಾಯಿನಿ ಕುಂಜಿಬೆಟ್ಟು ಸಾವಿನ ಕೆಂಡದ ಮೇಲೆಓಡುತ್ತಲೇ ಇರುವ ಲಾಕ್ಷಾದೇಹ…ಲೆಪ್ಪದ ಗೊಂಬೆ ನಾನುನಿಂತರೆ ಕರಗುತ್ತದೆ ಕೋಮಲ ಅರಗು ಮೈ…ಆತ್ಮ ಹಾರಿ ಇನ್ನೊಂದು ಮೈಯನ್ನುಪಡೆದು ಹೊಸದಾಗಿ ಹುಟ್ಟುತ್ತೇನೆಮರಳಿ ಮರಳಿ ನಾನು ನನ್ನ ಆತ್ಮ ನನ್ನದೆಂದುಕೊಂಡಿದ್ದೆಆದರೆ…ಇದು ನನ್ನದಲ್ಲವೇ ಅಲ್ಲ!ತಲೆ ತಲಾಂತರದಿಂದ ದೇಹದಿಂದ ದೇಹ ದೇಹದಿಂದ ದೇಹದೇಹ ದೇಹ ದೇಹಗಳನ್ನು ದಾಟಿಈಗ ಈ ದೇಹದೊಳಗೆಸೇರಿಕೊಂಡಿದೆಹಾಗಾದರೆ ನಾನು ಯಾರು?ಈ ದೇಹವೇ? ಆ….. ಆತ್ಮವೇ? ದೇಹದಿಂದ ದೇಹಕ್ಕೆ ಹಾರುವ ಅತೃಪ್ತ ಹೆಂಗಸಿನಂತೆಅಥವಾ ಗಂಡಸಿನಂತೆಹಾದರಗಿತ್ತಿ ಅಥವಾ ಹಾದರಗಿತ್ತವಲ್ಲವೇ ದೇವರೇಈ ಆತ್ಮಗಳು?ಹೊಸ ಅಂಗಿ ಹೊಸ ಹೊಸ ಅಳತೆಗಳಡಿಸೈನ್ ಗಳ ಬಣ್ಣ ಬಣ್ಣಗಳ ನಿಲುವಂಗಿ!ದೇವರ ಜವಳಿ ಅಂಗಡಿಯಲ್ಲಿರಶ್ಶೋ ರಶ್ಶು!ನಿರಾಕಾರ ಆತ್ಮಗಳಿಗೆ ಆಕಾರಗಳಒಳಗೆ ತೂರುವ ಹುಚ್ಚು!ಮನ್ಮಥನನ್ನು ಸುಟ್ಟು ಬೂದಿ ಅನಂಗ ಮಾಡಿದನಿರಾಕಾರಿ ದೇವರಿಗೂಆಕಾರ ಆಕಾರ ಹೊಲಿದಿಡುವ ದಜಿ೯ಯದೇ ಹುಚ್ಚು!ನಿರಾಕಾರದ ಉದ್ದ ದೇಹ ಅರಿವೆಯನ್ನು ಕತ್ತರಿಸಿ ಅಂಗ ಅ೦ಗ ಅಂಗಾಂಗಗಳನ್ನೂ ಜೋಡಿಸಿ ಹೊಲಿದು ಆಕಾರ ಕೊಡುತ್ತಹ್ಯಾಂಗರಲ್ಲಿ ನೇತು ಹಾಕುತ್ತಾನೆಗಣಪತಿಯ ಮೂತಿ೯ಗೆ ಕೊನೆಗೆಕಣ್ಣು ದೃಷ್ಟಿ ಇಡುವ ಹಾಗೆಆತ್ಮಗಳು ಧರಿಸಿಕೊಂಡ ಗಳಿಗೆಯಲ್ಲೆಆಕಾರಗಳಿಗೆ ಜೀವ! ಈ ಷೋಕಿ ಆತ್ಮ ಒಂದು ಅಂಗಿಯನ್ನು ಕಳಚಿ ಇನ್ನೊಂದನ್ನು ಧರಿಸಿಮತ್ತೊಂದರಲ್ಲಿ ಸಿಂಬಳ ಒರೆಸಿತುಕ್ಕು ಹಿಡಿದ ತಗಡು ಬಟ್ಟೆಯOತೆನಾಯಿ ಬಣ್ಣ ಮಾಡಿ ಎಸೆಯುತ್ತದೆಮಸಣದ ಬೆಂಕಿಯ ಮುಂದೆಯೇಮತ್ತೊಂದನ್ನು ಧರಿಸುತ್ತದೆದರಿದ್ರದ್ದು! ಇನ್ನೂ ಎಷ್ಟು ಅಂಗಿಗಳನ್ನುಧರಿಸಬೇಕೋ ದೇವರೇ ಈ ಆತ್ಮ?ಹೊಲಿಯುವ ನಿನಗೂ ಬೇಜಾರಿಲ್ಲತೊಡುವ ಅದಕ್ಕೂ ಬೇಜಾರಿಲ್ಲ ಜನ್ಮ ಜನ್ಮಾಂತರಗಳ ಪಾಪ ಪುಣ್ಯಗಳಲೆಕ್ಕಗಳನ್ನು ಹೊತ್ತುಸತ್ತ ದೇಹದಿಂದ ಹಾರಿ ಮತ್ತೊಂದುದೇಹದಲ್ಲಿ ಹುಟ್ಟಿಮಗದೊಂದು ದೇಹವನ್ನುಅವು ಏಕೆ ಹುಡುಕಬೇಕು? ದೇವರ ಜವಳಿ ಅಂಗಡಿಯನ್ನೇಸುಡುವ ಬೆಂಕಿಗಾಗಿ ನಾನುಕಾಯುತ್ತಿದ್ದೇನೆನಾನು ಅಂಗಿಯೇ ಆತ್ಮವೇ?ಆತ್ಮಾಂಗಿಯೇ? ಅಂಗಾತ್ಮಿಯೇ?ಉರಿಯುತ್ತಿದ್ದೇನೆ ಅಯ್ಯೋ!ಆತ್ಮ – ಅಂಗಿಗಳ ನಡುವೆ. *****************************

ಉರಿಯುತ್ತಿದ್ದೇನೆ…. ಅಯ್ಯೋ! Read Post »

ಕಾವ್ಯಯಾನ

ನೆನಪ ಕಟ್ಟೋಣ

ಕವಿತೆ ನೆನಪ ಕಟ್ಟೋಣ ಸುಧಾರಾಣಿ ನಾಯಕ್ ಹೇಗೂ ದೂರಾಗುವವರಿದ್ದೆವೆಬಾ..ಕಡಲದಂಡೆಯ ಗುಂಟಒಂದಿಷ್ಟು ಹೆಜ್ಜೆ ಹಾಕೋಣನಾಳೆಯ ಮಾತೇಕೆ,ಕವಲು,ಕವಲು,ನಿನ್ನೆಯದೇ ಬೇಕುನೆನೆದುಕೊಳ್ಳೊಣ ಸಾವಿರ ಸಾವಿರ ಆಣೆಗಳುಸವಕಲಾಗಿದೆ,ಚಲಾವಣೆಯಿಲ್ಲದಸಂದೂಕಿನ ನಾಣ್ಯಗಳಂತೆಯಾವ ವ್ಯಥೆಯಕಹಾನಿಯು ಬೇಡಒಂದಿಷ್ಟು ನೆನಪ ಕಟ್ಟೋಣ ಕಾಡಿ,ಬೇಡಿ,ಮೋಹಿಸಿಮುದ್ದಿಸಿದ್ದೆಲ್ಲ ನಕಾಶೆಯಗೆರೆಗಳಂತಿದೆ ಎದೆಯಲಿಮಾತು,ನಗು ಯಾವುದುಮುಗಿದಿಲ್ಲ,ಮುಗಿಯದಮಾತುಗಳ ಸೊಲ್ಲೇ ಬೇಡಒಂದಿಷ್ಟು ಜೊತೆ ಸಾಗೋಣ ಅರ್ಧರ್ಧ ಹೀರುವ ಚಹಾ,ತಾಸಿನ ಪರಿವೇ ಇಲ್ಲದೇವಿಷಯವೂ ಇರದೇಮಾತಾಡಿ,ಕಿತ್ತಾಡಿ ಕಳೆದದಿನಗಳೆಲ್ಲ‌ ನಾಳೆಗೆಪಳೆಯುಳಿಕೆಯಾಗಬಹುದುಬಾ ,ಒಂದಿಷ್ಟುಒಪ್ಪವಾಗಿಸೋಣ ಅಲೆಅಲೆಯುಕೊಡುವ ಕಚಗುಳಿ,ಅಪ್ಪಿ ಗುಯ್ ಗುಡುವಆರ್ದ್ರ ಗಾಳಿ,ನದಿ ನೀರು ಸಹ ಉಪ್ಪಾಗುವಹುಚ್ಚು ಮೋಹದ ಪರಿ,ಎಲ್ಲವನೂ ನಾಳೆಗೆನಮ್ಮೊಲವಿಗೆ ಸಾಕ್ಷಿಯಾಗಿಸಬೇಕಿದೆನೀ ತೊರೆದಾಗಲೂ,ನೀನಿರುವ ಭ್ರಮೆಯಲಿನಾ ಬದುಕಬೇಕಿದೆ,ಬಾ..ಸುಳ್ಳಾದರೂ ಒಂದಿಷ್ಟುಕನಸ ಕಟ್ಟೋಣ ********************************************

ನೆನಪ ಕಟ್ಟೋಣ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಕನಸಿನೂರಿನ ಕಿಟ್ಟಣ್ಣ ಕನಸಿನೂರಿನ ಕಿಟ್ಟಣ್ಣ ( ಮಕ್ಕಳ ಕಾದಂಬರಿ)ಮಲೆಯಾಳ ಮೂಲ : ಇ.ಪಿ.ಪವಿತ್ರನ್ ಕನ್ನಡಕ್ಕೆ : ಕೆ.ಪ್ರಭಾಕರನ್: ದೇಸಿ ಪುಸ್ತಕಪ್ರಕಟಣೆಯ ವರ್ಷ :೨೦೧೫ಬೆಲೆ :ರೂ.೮೦ಪುಟಗಳು :೧೩೮ ಕನ್ನಡದಲ್ಲಿ ಅತಿ ವಿರಳವೆಂದು ಹೇಳಬಹುದಾದ ಮಕ್ಕಳ ಕಾದಂಬರಿ ಪ್ರಕಾರಕ್ಕೆ ಕೊಡುಗೆಯಾಗಿ ಈ ಕಾದಂಬರಿ ಅನುವಾದವಾಗಿ ಬಂದಿದೆ ಎನ್ನಬಹುದು.  ಶೀರ್ಷಿಕೆಯೇ ಸೂಚಿಸುವಂತೆ ಕಿಟ್ಟಣ್ಣ ಈ ಕಥೆಯ ನಾಯಕ. ಕನಸಿನೂರು ಎಂಬ ಪುಟ್ಟ ಹಳ್ಳಿಯ ಮಧ್ಯಮ ವರ್ಗದ ಜಮೀನ್ದಾರಿ ಕುಟುಂಬವೊಂದರಲ್ಲಿ ಪುರಾಣದ ಕೃಷ್ಣನಂತೆ ಜಡಿಮಳೆಯ ಆರ್ಭಟದ ನಡುವೆ ಹುಟ್ಟುವ ಕಿಟ್ಟಣ್ಣ ಮುಂದೆ ಉದ್ದಕ್ಕೂ ಪವಾಡಗಳನ್ನು ಸೃಷ್ಟಿಸುತ್ತ ಹೋಗುತ್ತಾನೆ.  ಕಿಟ್ಟಣ್ಣನ ಬುದ್ಧಿಶಕ್ತಿ, ಅವನ ನಿಸರ್ಗ ಪ್ರೇಮ, ನಿಸರ್ಗದೊಂದಿಗಿನ ಅವನ ವಿಚಿತ್ರ ಒಡನಾಟ, ಅವನ ಸಾಹಸಗಳು, ಅವನ ಬದುಕಿನಲ್ಲಾಗುವ ಆಕಸ್ಮಿಕ ತಿರುವುಗಳು ಮತ್ತು ಆಶ್ಚರ್ಯಕರ ಬೆಳವಣಿಗೆಗಳು ಇಡೀ ಕಾದಂಬರಿಯ ಕಥಾನಕದ ಕವಲುಗಳಾಗಿ ಟಿಸಿಲೊಡೆಯುತ್ತ ಹೋಗುತ್ತವೆ.  ಮಕ್ಕಳನ್ನು ಖುಷಿ ಪಡಿಸಲು ಬೇಕಾಗುವ ಎಲ್ಲ ಸರಕುಗಳೂ ಇಲ್ಲಿವೆ. ಮಕ್ಕಳ ಕುತೂಹಲವನ್ನು ಹೆಜ್ಜೆ ಹೆಜ್ಜೆಗೂ ಹೆಚ್ಚಿಸುವಂತಹ ನೂರಾರು ಘಟನೆಗಳಿಂದ ಕಾದಂಬರಿ ತುಂಬಿದೆ. ನಂಬಲಸಾಧ್ಯವಾದ ನೂರಾರು ಅಚ್ಚರಿಗಳು ಇದೊಂದು ಕನಸಿನ ಕಂತೆಯೇನೋ ಎಂಬ ಭಾವನೆಯನ್ನು ಹುಟ್ಟಿಸುತ್ತವೆ.  ಹಳ್ಳಿಯ ಹಸಿರು ನಿಸರ್ಗ, ಪ್ರಾಣಿ-ಪಕ್ಷಿಗಳ ಓಡಾಟ, ದಟ್ಟ ಕಾಡಿನ ರುದ್ರ ರಮಣೀಯ ದೃಶ್ಯಗಳು ಮತ್ತು ಅತಿಯಾಗಿ ತಿಂದರೂ ಅರಗಿಸಿಕೊಳ್ಳುವ ದೈತ್ಯನಾಗಿ ಬೆಳೆಯುವ ಕಿಟ್ಟಣ್ಣನ ಪರಿ ಕಾದಂಬರಿಗೆ ಫ್ಯಾಂಟಸಿಯ ಸ್ಪರ್ಶವನ್ನು ಕೊಟ್ಟಿವೆ.  ಆದರೆ ದೇವಸ್ಥಾನದಿಂದ ಕಳವಾಗುವ ಗಣಪತಿ ವಿಗ್ರಹವು ಕಾಡಿನ ಭಯಾನಕತೆಯೊಳಗೆ ಬಯಲಾಗುವ ಮೂಲಕ ಪತ್ತೆಯಾಗುವ ಕಳ್ಳರ ಜಾಲ  ಹಾಗೂ ಆ ಬಗ್ಗೆ ಮುಂದುವರಿಯುವ ಕಾರ್ಯಾಚರಣೆಗಳು , ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳು ನಮ್ಮನ್ನು ಕನಸಿನೂರಿನಿಂದ ವಾಸ್ತವ ಪ್ರಪಂಚಕ್ಕೆ ತರುತ್ತವೆ.  ಒಟ್ಟಿನಲ್ಲಿ ಈಗಾಗಲೇ ಮಕ್ಕಳ ಮನಸ್ಸನ್ನು ಬಹುವಾಗಿ ಸೆಳೆದಿರುವ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯ ಇನ್ನೊಂದು ಮುಖವೇ ‘ಕನಸಿನೂರಿನ ಕಿಟ್ಟಣ್ಣ’ ಎನ್ನಬಹುದು. ಇಂದು ಮಕ್ಕಳಿಗೆ ಖುಷಿ ಕೊಡುವ, ಮಕ್ಕಳ ಮನಸ್ಸನ್ನು ತೆರೆದಿಡುವ, ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸುವ, ಅವರಲ್ಲಿ ಧೈರ್ಯವನ್ನೂ ಸಾಹಸ ಪ್ರವೃತ್ತಿಯನ್ನೂ ಪ್ರೋತ್ಸಾಹಿಸುವ ಸಾಹಿತ್ಯವನ್ನು ನಾವು ಮಕ್ಕಳಿಗೆ  ಕೊಡ ಬೇಕಾಗಿದೆ. ಈ ನಿಟ್ಟಿನಲ್ಲಿ ‘ಕನಸಿನೂರಿನ ಕಿಟ್ಟಣ್ಣ’  ಒಂದು ಒಳ್ಳೆಯ ಸೇರ್ಪಡೆ. ಈಗಾಗಲೇ ಮಲೆಯಾಳದಿಂದ ಆರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಪ್ರಭಾಕರನ್ ಈ ಕೃತಿಯನ್ನು ಸರಳ ಸುಂದರ ಭಾಷೆಯಲ್ಲಿ ಅನುವಾದಿಸಿದ್ದಾರೆ. ******************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top