ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಏಕೆ ಹೀಗೆ ಈ ಬಿರುಕುಗಳು?

ಕವಿತೆ ಏಕೆ ಹೀಗೆ ಈ ಬಿರುಕುಗಳು? ಮಮತಾಶ0ಕರ್ ಕಳಚಿಕೊಳ್ಳುವುದೇಕೆ ಒಂದೊಂದೇ ಕೊಂಡಿಗಳು?ಯಾವಬಾದರಾಯಣ ಸ0ಬಂಧಗಳೋಬೆಸೆದುಕೊಂಡಿದ್ದವುಈಗ ಬೆಸುಗೆ ಬಿಟ್ಟುಕೊಳ್ಳತೊಡಗಿದೆ ಬಿರುಕು ದೊಡ್ಡದಾಗುತ್ತಾ ಹೋದಂತೆದೂರಾಗುತ್ತ ಹೋಗುತ್ತೇವೆ…ಜೊತೆಗೆ ಅಪಾರ್ಥಗಳೂ್ ಬೆಳೆಯುತ್ತಾ ಹೋಗುತ್ತವೆಅಷ್ಟೇ ಆದರೆ ಪರವಾಗಿಲ್ಲ…ಆದರೆ ನಾವೇನು ಹೇಳಿಲ್ಲವೋಅದು ಎದುರಿನವರಿಗೆ ಕೇಳುತ್ತದೆನಮ್ಮ ಮೌನ ಏನೇನೋ ಹೇಳುತ್ತಿರುತ್ತದೆ…! ಈಗ ಈ ಸ್ಂಜೆ ಕೆಂಪಲ್ಲಿಕರಗಿ ಹೋಗುತ್ತಿದೆ ಸಂಬಂಧಗಳುಕತ್ತಲಾಗುತ್ತಿರುವಾಗ ಅನಿಸುತ್ತಿದೆ ಅವರಿಗೆಸ್ವಲ್ಪವೇ ಕ್ಷಮಿಸಿದ್ದರೂ ಇರುತ್ತಿತ್ತೇನೋಈ ಬಿಟ್ಟುಹೋದ ಸಂಬಂಧಗಳು…. ಆದರೇನು…ಅಹಂಕಾರಗಳ ಯುದ್ದದಲ್ಲಿವಿದಾಯವೇ ಗೆದ್ದುಬಿಟ್ಟಿದೆ…..! **************************************

ಏಕೆ ಹೀಗೆ ಈ ಬಿರುಕುಗಳು? Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಕಾಲಚಕ್ರ ಬೈಟು ಕಾಫಿ ಮತ್ತು ತೇಜಾವತಿ ಅವರ ‘ಕಾಲಚಕ್ರ’ ಎಂಬ ಕವಿತೆಗಳ ಕಟ್ಟು ‘ ಮನಸು ನೀಲ ಗಗನದಲಿ ಸ್ವಚ್ಛಂದವಾಗಿವಿಹರಿಸುವ ಬಾನಾಡಿ’ ನಾನು ಬರಿ ಸಣ್ಣ ದನಿ ಹೊರಹಾಕುವ ಸ್ವಂತ ಅಸ್ತಿತ್ವವಿಲ್ಲದ ಹುಲುಗೆಜ್ಜೆ. ಆದರೆ ಕವಿತೆ ಹಾಗಲ್ಲ.ಅದು ವಿನೀತ ಭಾವವನ್ನು ಅಪ್ಪಿಕೊಂಡು ಬಿಚ್ಚು ಮನಸಿನ ಸ್ಮೃತಿಗಳ ಹಾಯಿಯನ್ನು ಹೊರ ಹಾಕುತ್ತದೆ.ಅಂತೆ ಭರವಸೆಯ, ಪ್ರತಿಭಾನ್ವಿತ ಕವಯಿತ್ರಿ ತೇಜಾವತಿ ಹುಳಿಯಾರ ಅವರ ‘ಕಾಲಚಕ್ರ’ ಕೃತಿಯು ಬೆಳಗಿನ ಕಾಫಿಯೊಂದಿಗೆ ಕೈಗೆತ್ತಿಕೊಂಡೆ.ಇದೊಂದು ಹೊನ್ನುಡಿ ಕವಿತೆಗಳ ಪುಟ್ಟ ಸಂಕಲನ.ಓದುವಿನ ಕುತೂಹಲ ಇನ್ನಷ್ಟು ತೀವ್ರಗೊಂಡಿತು.ಮೊದಲ ಗುಟುಕಿನೊಂದಿಗೆ ಓದು ಸುರುವಿಟ್ಟುಕೊಂಡು ಕೊನೆಯ ಹನಿ ಹೀರುವಿಕೆಯೊಂದಿಗೆ ಸಂಕಲನ ತನ್ನ ಓದು ಮುಗಿಸಿಕೊಂಡಿತು.ಪ್ರೇಮ,ಬದುಕು ಮತ್ತು ನಿಸರ್ಗದೊಂದಿಗಿನ ಒಡನಾಡಿತನಗಳು ಇಲ್ಲಿನ ಕಾವ್ಯದ ಆತ್ಮೀಯ ಸಂಬಂಧಗಳೆನಿಸಿದವು.ಇಲ್ಲಿನ ಬಹುತೇಕ ಕವಿತೆಗಳು ಏಕಮೇವ ಹೊನ್ನುಡಿಯೆಂಬ ಶೀರ್ಷಿಕೆ ಹೊಂದಿರುವ ಚುಟುಕು ಕವಿತೆಗಳಾಗಿವೆ.ಆದರೆ ದೀರ್ಘ ಕವಿತೆಗಳ ಆಯಾಮಗಳನ್ನು ಹೊಂದಿರುವುದಲ್ಲದೇ ಓದುಗರ ಮನಸಿಗೆ ತಲ್ಲೀನತೆ ನೀಡುವ ಬರೆಹಗಳೇ ಆಗಿವೆ ಜೊತೆಗೆ ಕನಸುಗಳಿಗೆ ಮೂರ್ತಸ್ವರೂಪ ಕೊಟ್ಟು ರೂಪಾಂತರಗೊಳಿಸುವ ನುಡಿಗಳಾಗಿವೆ.ಕಾವ್ಯ ರಚನೆಯ ಲಕ್ಷಣ ಕೂಡಾ ಅದೇ ಆಗಿರುತ್ತದೆ.ಇಲ್ಲಿನ ಬಹುತೇಕ ಕವಿತೆಗಳು ಓದುತ್ತಾ ಹೋದಂತೆಲ್ಲಾ ಪರಿವರ್ತಿತ ಸಮಾಜದಲ್ಲಿನ ಕೌಟಂಬಿಕ ಸಂಬಂಧಗಳು,ಯಾಂತ್ರಿಕ ಬದುಕು,ಒಡಲಾಳದ ಉರಿಯ ನೋವು ಇಂತಹವೆ ವಿಷಯಗಳು ಸರಳ ಪ್ರತಿಮೆಗಳ ಮುಖಾಂತರ ವೈವಿದ್ಯಮಯ ಆಯ್ಕೆಯಾಗಿ ಕಂಡುಬರುತ್ತವೆ. ಅಲ್ಲಲ್ಲಿ ತಿಳಿಯಾದ ಭಾವಗಳು ಇಡುಕಿಕರಿಸಿಕೊಂಡಿವೆ. ಕವಯತ್ರಿ ತೇಜಾವತಿ ಅವರಿಗೆ ಬದುಕು ಮತ್ತು ಕಾವ್ಯ ಅವರ ಜೀವದ್ರವ್ಯವೇ ಆಗಿದೆ.ಸಮಾಜದಲ್ಲಿ ನಡೆಯುವ ಕೆಲವು ಕ್ಷುಲ್ಲಕಗಳ ಕುರಿತು ಹತಾಸೆಯಿದೆ,ನೋವಿದೆ.ಈ ತೆರನಾದ ಅಭಿವ್ಯಕ್ತಿಗಳು ಕವಯಿತ್ರಿಯ ಮನದ ಬಾಗಿಲಿಗೆ ಬಂದು ಮೌನ ಮುರಿದಿವೆ. ಹೀಗೆ ಕಾಫಿ ಹೀರುತ್ತಾ ಸಂಕಲನದ ಪುಟ ತಿರುವುತ್ತಿದ್ದಾಗ ಇಲ್ಲಿನ ಒಂದು ಕವಿತೆ ನನಗೆ ತಟ್ಟನೆ ನೆನಪಿಗೆ ತರಿಸಿದ್ದು ಇಂಗ್ಲಿಷಿನ ಪ್ಯಾಟ್ ಪ್ಲೇಮಿಂಗ್ ಅವರ ‘Depression is a monster’ ಕವಿತೆ ನೆನಪಿಸಿತು. ಇವೆರಡಕ್ಕೂ ಅಂತರ ಸಾಮ್ಯತೆ ಕುರಿತು ಹೇಳುವುದಾದರೆ ಪ್ಯಾಟ್ ಅವರು ಖಿನ್ನತೆ ಎನ್ನುವುದು ಕರುಣೆಯನ್ನು ಹಿಸುಕುತ್ತಿದೆ ಎನ್ನುವ ದನಿ ವ್ಯಕ್ತಪಡಿಸಿದರೆ,ಇಲ್ಲಿ ತೇಜಾವತಿ ಅವರಿಗು ಕೂಡಾ ಮನುಷ್ಯನ ಸಹಜ ಅಂತಪ್ರೇರಣೆಗಳಲ್ಲೊಂದೆನಿಸಿದಅಸಮಾಧಾನದ ಕುರಿತು ಅಸಮಾಧಾನವಿದೆ,ಸೆಡುವು ಇದೆ.ಹಾಗಾಗಿ ಅದನ್ನು ಯಾವುದೋ ರೂಪದಲ್ಲಾದರೂ ಹೊರಹಾಕಬೇಕು,ಇಲ್ಲದಿದ್ದರೆ ಜ್ವಾಲಾಮುಖಿಯಾಗಿ ಸ್ಪೋಟಗೊಳ್ಳುತ್ತದೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ.ಅಂತೆಯೇ ಪ್ಯಾಟ್ ಫ್ಲೆಮಿಂಗ್‌ ಮತ್ತು ಕವಯಿತ್ರಿ ಹುಳಿಯಾರ್ ಅವರಿಗೆ ಕ್ರಮವಾಗಿ ಖಿನ್ನತೆ ಮತ್ತು ಅಸಮಾಧಾನದ ಬಗೆಗೆ ಭಯವಿದೆ. ಖಿನ್ನತೆ/ಅಸಮಾಧಾನವು ಹೃದಯ ಮತ್ತು ಆತ್ಮ ಎರಡೂ ನಾಶಪಡಿಸುತ್ತವೆ ಎಂದು ತಮ್ಮತಮ್ಮ ಕವಿತೆಗಳಲ್ಲಿ ಹಳಹಳಿಸುತ್ತಾರೆ. ವಿಫಲ ಪ್ರೇಮ,ದುಷ್ಟ ನಡವಳಿಕೆಯ ಕುರಿತು ಮಾತನಾಡುವ ಬರೆಹ, ಹೊಸತನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಯ ಬಗೆಗೂ ಇಲ್ಲಿನ ಕವಿತೆಗಳು ಮಾತಾಡ್ತವೆ.ಜೊತೆಗೆ ಬದುಕಿನ ಮುಂದುವರೆದ ಭಾಗವೆಂಬಂತೆ ನಿರ್ದಿಷ್ಟ ಗುರಿ ತನ್ನ ಚಲನಶೀಲ ಕಳೆದುಕೊಂಡು ಹೊಸತನಕ್ಕೆ ಒಗ್ಗಿಕೊಳ್ಳುವ ಕವಿತೆ ಹೀಗೆ ದನಿಸುತ್ತದೆ. ‘ಹಳೆಯ ಮಾರ್ಗಗಳುನೀರಸವಾದಾಗಹೊಸ ದಾರಿಗಳ ಅನ್ವೇಷಣೆಅನಿವಾರ್ಯಅವಶ್ಯಕ’ ಮುಂದುವರೆದು,ಇಚ್ಚೆ ಸಿಡಿಮದ್ದಿನಂತಿರಬೇಕು/ಪಡೆಯುವಿಕೆ ಜೀವಜಲದಂತೆ ತಣಿಸಬೇಕು ಎನ್ನುತ್ತಲೇ ಕವಯಿತ್ರಿ ಸದಾ ಹೊಸತನಕ್ಕೆ ಹಂಬಲಿಸುವ ಆಶಾವಾದ ವ್ಯಕ್ತಪಡಿಸುತ್ತಾರೆ.ಈ ಕಾವ್ಯದ ಕುರಿತು ಆರಂಭದಲ್ಲಿಯೇ ನಾನು ಕಂಡುಕೊಂಡದ್ದು ತುಂತುರು ಹನಿಗಳಂತೆ,ಬುಳುಬುಳು ಬೀಳುವ ಅನ್ ಪಿನಿಶ್ಡ್ ಸೋಸಿಯಲ್ ಕಾಂಟ್ರಾಕ್ಟ್ ಗಳು,ಬಾಲ್ಯದ ನೆನಪುಗಳು,ಮುಟ್ಟದೆ ಮುಂದು ಹೋಗುವ ಸಂಗತಿಗಳು,ಅಮೂರ್ತವಾದ ಮೌನ,ನೋವು,ಬೇಸರ,ಬದುಕಿನ ಉಲ್ಲಾಸತೆಗಳು,ಶುಗರ್ ಮಿಶ್ರಿತಗೊಂಡ ಅರೆಬೆಂದ ಕಾಫಿ ಸವಿಯುತ್ತಲೇ ಓದಿಸಿಕೊಂಡ ಆಪ್ತಸಾಲುಗಳಿವು. ಪ್ರಾರ್ಥನೆ,ಶ್ರದ್ಧೆ, ಸಮರ್ಪಣಾ ಭಾವ,ಅಹಂಕಾರದ ವಿನಾಶತೆ ಇತ್ಯಾದಿ ಸಂದೇಶಗಳೂ ಒಳಗೊಂಡಿರುವ ಕವಿತೆಗಳು ಕಾಫಿಯಂತೆ ಸಮನ್ವಯವಾಗಿ, ಒಟ್ಟಾರೆಯಾಗಿ ಲೋಕರೂಡಿ ಗುರುಗಳಂತಿವೆ.ತಮಗೆ ತೋಚಿದ್ದನ್ನು ಹೇಳುವ ಬಗೆಯಲ್ಲಿ ಹೊಸತನವಿದೆ.ದ್ವನಿ ಕವಿತೆಯ ರೂಪಗಳಲ್ಲಿ ಅಡಗಿ ಸಹಜೋಕ್ತಿಯಾಗಿ ಓದುಗರಿಗೆ ತಲುಪುವ ಪರಿ ಮೆಚ್ಚುಗೆಯಾಗುತ್ತದೆ.ಮುಂದಿನ ದಿನಮಾನಗಳಲ್ಲಿ ದೀರ್ಘ ಕವಿತೆಗಳೊಂದಿಗೆ ನಮ್ಮ ಮುಖಾಮುಖಿಯಾಗುತ್ತಾರೆಂಬ ಭರವಸೆಯೊಂದಿಗೆ ಬೆಳಗಿನ ಕಾಫಿಯ ರುಚಿ ಮತ್ತು ಓದುವಿನ ಕೊನೆಯ ಸಾಲು ಮುಗಿಸುತ್ತೇನೆ. ****************** ದೇವೂ ಮಾಕೊಂಡ

ಪುಸ್ತಕ ಪರಿಚಯ Read Post »

ಕಾವ್ಯಯಾನ

ಮುಂಗಾರಿನ ಮಳೆಯಲಿ

ಕವಿತೆ ಮುಂಗಾರಿನ ಮಳೆಯಲಿ ಜಯಶ್ರೀ ಭ.ಭಂಡಾರಿ. ಬೆಳಗಿನಿಂದ ಕಂಬ ನಿಂತಂಗ ನಿಂತ ಕಾಯ್ತಿದಿನಿನೀ ಬರುವ ದಾರಿಗೆ ಎವೆಯಿಕ್ಕದೆ ನೋಡ್ತಿದಿನಿಮುಂಗಾರು ಮಳೆಯ ಮಣ್ಣವಾಸನೆಯಲಿನಿನ್ನ ಬೆವರಘಮಲು ತೇಲಿಬರುವದೆ ಎಂದು ಪಟಪಟ ಮಳೆಹನಿಗಳೆಲ್ಲ ಕಣ್ಣತೋಯಿಸಿನಿನ್ನ ನೆನಪುಗಳಲ್ಲಿ ಮನ ಹೂವಾಗಿಸಿಪ್ರತಿಕ್ಷಣ ಶಬರಿಯಾಗಿರುವೆ ಕಣೆ ನಿನ್ನ ನೆನೆಸಿಕಡಲಾದ ಭಾವನೆಗಳೆಲ್ಲ ಮುನಿಸಿ ಮುತ್ತಿಕ್ಕಿವೆ ನಿನಗೇಕೆ ಇಂತಹ ಕಠಿಣ ಮನಸುಬರಬಾರದೆ ಭಾವನೆಗಳಿಗೆ ರೆಕ್ಕೆಮೂಡಿಸಿಅರಳಬಾರದೆ ನನ್ನಿ ಬಾಹುಗಳ ಬಳಸಿರಿಮ್ ಜಿಮ್ ನಾದದಲಿ ಒಂದಾಗುವಾ ಸರಸಿ ಗೆಜ್ಜೆಯ ಹೊನ್ನ ಪಾದಗಳ ಅರಸಿ ನೀಹೆಜ್ಜೆಯನಿಡುತ ಒಲಿದು ಬಾರೆ ಒಲವ ಕನವರಿಸಿಎದೆಯಬಾಂಧಳದ ತುಂಬೆಲ್ಲ ನಿನ್ನದೆ ಘಮನಿನಗೇಕೆ ಅರ್ಥವಾಗತಿಲ್ಲ ಈ ಹೃದಯ ಕುಲುಮೆ ಬಚ್ಚಿಟ್ಟ ಭಾವನೆಗಳೆಲ್ಲ ತಣ್ಣಗಾಗುತಿವೆಬಿಚ್ಚಿಟ್ಟ ಮನವಿದು ಮುನಿದು ಸೊರಗುತಿಹೆಹನಿಗಳ ಲೀಲೆಯಲಿ ಕನಸು ಕಮರುತಿಹೆಭಾವನೆಗಳು ಸೋರಿಹೋಗಿ ಕಮರುತಿಹೆ ಮಳೆ ರಭಸ ಮಂದವಾಗುವ ಮುನ್ನಮನಹಾಳಾಗಿ ರಚ್ಚೆಹಿಡಿಯುವ ಮುನ್ನನನ್ನೆಲ್ಲ ಸಿಹಿಕನಸುಗಳು ಜಾರಿಹೋಗುವ ಮುನ್ನಮನದನ್ನೆ ಮನ್ನಿಸಿ ಭಾವನೆಗಳಿಗೆ ರುಜು ಹಾಕುಬಾ **********************************************

ಮುಂಗಾರಿನ ಮಳೆಯಲಿ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಸಂಗಾತಿಯ ಮೌನ ಪಂಡಿತ್ ರವಿಶಂಕರ್ ನಿಧನರಾದಾಗ ಅವರ ಸಂಗೀತ ಪ್ರತಿಭೆ, ಪ್ರಯೋಗಶೀಲತೆ, ಪ್ರಶಸ್ತಿಗಳನ್ನು ಮೆಚ್ಚುವ ಬರೆಹಗಳು ಪ್ರಕಟವಾದವು. ಕೆಲವು ಪತ್ರಿಕೆಗಳು ಮಾತ್ರ ಅವರ ಖಾಸಗಿ ಬದುಕಿನ ಬಗ್ಗೆ ಬರೆದವು. ಅಲ್ಲಿ ಅವರ ಪ್ರೇಯಸಿಯರ, ಮಡದಿಯರ ಹಾಗೂ ವಿಚ್ಛೇದನಗಳನ್ನು ಕುರಿತ ಮಾಹಿತಿಯಿತ್ತು. ಈ ಲೇಖನಗಳಿಗೆ ರವಿಶಂಕರ್ ಅವರನ್ನು ಬದನಾಮಿ ಮಾಡುವ ಇರಾದೆ ಏನಿರಲಿಲ್ಲ. ಹೆಸರಾಂತ ಕಲಾವಿದರು ವೈಯಕ್ತಿಕ ಜೀವನದಲ್ಲಿ ತಮ್ಮ ಸಂಗಾತಿಗಳನ್ನು ನಡೆಸಿಕೊಂಡ ವಿಶ್ಲೇಷಣೆಯಿತ್ತು. ಇವುಗಳಲ್ಲಿ ರವಿಶಂಕರರ ಮೊದಲ ಪತ್ನಿಯೂ ಗುರು ಉಸ್ತಾದ್ ಅಲ್ಲಾವುದ್ದೀನಖಾನರ ಪುತ್ರಿಯೂ ಆದ ಅನ್ನಪೂರ್ಣಾ ದೇವಿಯವರು, ರವಿಶಂಕರ್ ತ್ಯಜಿಸಿದ ಬಳಿಕ ತಮ್ಮ ಬದುಕನ್ನು ಮುಂಬೈನ ಫ್ಲಾಟಿನಲ್ಲಿ, ಏಕಾಂತವಾಗಿ ಮೌನವಾಗಿ ದುಗುಡದಲ್ಲಿ ಕಳೆಯುತ್ತಿರುವ ಚಿತ್ರ ಮಾತ್ರ ಕರುಳಿಗೆ ಕಿಚ್ಚಿಡುವಂತಿತ್ತು. ಪ್ರತಿಭಾವಂತ ಕಲಾವಿದೆಯಾಗಿದ್ದ ಅನ್ನಪೂರ್ಣಾ ವಿಚ್ಛೇದನದ ಬಳಿಕ ಸಾರ್ವಜನಿಕ ಕಾರ್ಯಕ್ರಮ ನಿಲ್ಲಿಸಿದರು. ಆಮೆಯಂತೆ ಚಿಪ್ಪಿನಲ್ಲಿ ತಮ್ಮನ್ನು ಒಳಗೆಳೆದುಕೊಂಡು ಬದುಕಲಾರಂಭಿಸಿದರು. ರವಿಶಂಕರ್ ಸಾವಿಗೆ ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಯತ್ನಿಸಿದವು. ಅವರು ಯಾರ ಕೈಗೂ ಸಿಗಲಿಲ್ಲ್ಲ. ರವಿಶಂಕರ್ ಯಾಕೆ ಹೀಗೆ ಮಾಡಿದರು? ಸ್ವತಃ ಅನ್ನಪೂರ್ಣಾ ಬದುಕಿನ ಈ ತಿರುವನ್ನು ಯಾಕೆ ಸವಾಲನ್ನಾಗಿ ಸ್ವೀಕರಿಸಲಿಲ್ಲ? ಗಂಡ ಮಾಡಿದ್ದು ವಿಶ್ವಾಸದ್ರೋಹ ಎನಿಸಿತೇ? ಗಂಡನ ಮನೋಭಾವವನ್ನು ಅರಿಯದಂತೆ ನಡೆದುಕೊಂಡ ಪರಿತಾಪವೇ? ನಿಜವೇನೆಂದು ಅವರಿಗಷ್ಟೆ ಗೊತ್ತು. ಆದರೆ ಲೋಕದ ಮುಂದೆ ಹೇಳಲೊಲ್ಲರು. ಅನಕೃ ಅವರ `ಸಂಧ್ಯಾರಾಗ’ ಕಾದಂಬರಿಯಲ್ಲೂ ಹೀಗೇ ಆಗುತ್ತದೆ. ಕಲಾವಿದ ತನ್ನ ಕಲಾಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತುತ್ತ ಹೋಗುತ್ತಾನೆ. ತಾನು ಬಳಸಿ ಕೈಬಿಡುತ್ತ ಹೋಗುವ ಸ್ತ್ರೀಯರ ಬಗ್ಗೆ ಮರಳಿ ಚಿಂತಿಸುವುದೇ ಇಲ್ಲ. ಕಾದಂಬರಿ ಕೂಡ ಈ ಪರಿತ್ಯಕ್ತರ ಬಾಕಿ ಜೀವನದ ಬಗ್ಗೆ ಮೌನತಳೆಯುತ್ತದೆ. ಭೀಮಸೇನ ಜೋಶಿಯವರನ್ನು ಒಳಗೊಂಡಂತೆ ಅನೇಕ ಕಲಾವಿದರ ಜೀವನದ ಬಗ್ಗೆಯೂ ಇಂತಹ ಚಿತ್ರಗಳಿವೆ. ನಮ್ಮ ಕಲಾವಿದರ ಈ ಬದಲಿ ಮುಖಕ್ಕಾಗಿ ಅವರ ಕಲೆಯನ್ನು ನಿರಾಕರಿಸಬೇಕಿಲ್ಲ; ಅವರ ಕಲಾಸಾಧನೆ ಮೆಚ್ಚುವ ಭರದಲ್ಲಿ ಈ ಮುಖವನ್ನು ಅಡಗಿಸಬೇಕಿಲ್ಲ. ಸಾರ್ವಜನಿಕ ಬದುಕಿನಲ್ಲಿ ಪುಟಿಯುವ ನಮ್ಮ ಲೇಖಕರ ಮಡದಿಯರು ಯಾಕೆ ಮಂಕುಹಿಡಿದು ಕೂತಿರುತ್ತಾರೆ ಎಂಬ ಪ್ರಶ್ನೆ ನನಗೆ ಚುಚ್ಚುವುದುಂಟು. ಅದರಲ್ಲೂ ದಂಪತಿಗಳು ಒಂದೇ ವೃತ್ತಿಯಲ್ಲಿದ್ದಾಗ, ಮಡದಿ ತನಗಿಂತ ಪ್ರತಿಭಾವಂತಳಾಗಿದ್ದರೆ, ಪುರುಷಾಸೂಯೆ ನಾನಾ ಪರಿಯಲ್ಲಿ ಪ್ರಕಟವಾಗಲು ತೊಡಗುತ್ತದೆ. ಪ್ರತಿಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ರಮ್ಯ ಹೇಳಿಕೆಯ ಹಿಂದೆ ಕ್ರೂರ ವಾಸ್ತವವೂ ಅಡಗಿದೆ. ಅದು `ಸ್ತ್ರೀತ್ಯಾಗ’ದ ಹೆಸರಲ್ಲಿ ಅವಳ ಚೈತನ್ಯ ಹೀರಿ ಬೆಳೆಯುವ ಗಂಡುಸ್ವಾರ್ಥ. ಗಾಂಧೀಜಿ ಜೀವನದಲ್ಲೂ ಕಸ್ತೂರಬಾಯಿ ಈ ಕಷ್ಟ ಅನುಭವಿಸಿದರು. ಗಾಂಧಿಗೆ ತಮ್ಮ ಅಹಂ ಮಡದಿಯ ಭಾವನೆಯನ್ನು ಘಾಸಿಗೊಳಿಸುತ್ತಿರುವ ಬಗ್ಗೆ ಪರಿತಾಪವಿತ್ತು. ಅನೇಕ ಕೀರ್ತಿವಂತ ಪುರುಷರ ಬಾಳಲ್ಲಿ ಈ ಪರಿತಾಪ ಕಾಣುವುದಿಲ್ಲ. ಎಷ್ಟೊ ಹೆಸರಾಂತ ಲೇಖಕರ ಆತ್ಮಚರಿತ್ರೆಯಲ್ಲಿ ಅವರ ಮಡದಿಯರ ಚಿತ್ರಗಳೇ ಇರುವುದಿಲ್ಲ. ಇದ್ದರೂ ಸಣ್ಣರೇಖೆಯಂತೆ ಬಂದು ಹೋಗುತ್ತದೆ. ಆದರೆ ಇದೇ ಮಡದಿಯರು, ತಮ್ಮ ಸಂಗಾತಿಗಳು ತೀರಿಕೊಂಡ ಬಳಿಕ ಬರೆಯುವ ಆತ್ಮಕಥೆಗಳಲ್ಲಿ, ಬಾಳಿನ ಇನ್ನೊಂದೇ ಸತ್ಯವನ್ನು ಹೊರಹಾಕುವರು. ಹೀಗಾಗಿ ಪ್ರಸಿದ್ಧ ಲೇಖಕರ ಸಂಭಾವನ ಗ್ರಂಥಗಳಲ್ಲಿ ಅವರ ಮಕ್ಕಳು-ಮಡದಿ ಬರೆದಿರುವುದು ಸ್ವಾರಸ್ಯಕರ ಮಾತ್ರವಲ್ಲ, ಮಹತ್ವದ್ದು ಕೂಡ. ಅಲ್ಲಿ ಸಾಮಾನ್ಯವಾಗಿ ಪತಿಯೇ ಪರಮೇಶ್ವರ ಎಂದು ತಮ್ಮನ್ನು ಸಲ್ಲಿಸಿಕೊಂಡಿರುವ ಧೋರಣೆಯ ಲೇಖನಗಳಿರುತ್ತವೆ. ಅವುಗಳ ಒಳಗೆಯೇ ಪತಿದೇವರು ನಿತ್ಯ ಬದುಕಿನಲ್ಲಿ ಎಸಗಿರುವ ಕೃತ್ಯಗಳ, ಸಣ್ಣತನ, ಎಗರಾಟಗಳ ಸೂಕ್ಷ್ಮ ಚಿತ್ರಗಳೂ ಇರುತ್ತವೆ. ಗಂಡನಿಂದ ಹಿಂಸೆಗೀಡಾದ ಮಹಿಳೆಯರು ಬರೆದಿರುವ ಆತ್ಮಕಥನಗಳನ್ನು ಈ ದೃಷ್ಟಿಯಿಂದ ಗಮನಿಸಬೇಕು. ಸಾಮಾನ್ಯವಾಗಿ ಅವು ಗಂಡ ಸತ್ತಮೇಲೆಯೇ ಪ್ರಕಟವಾಗುತ್ತವೆ. ಸಾವಿಗೂ ಸತ್ಯಪ್ರಕಟನೆಗೂ ಇರುವ ಈ ಸಂಬಂಧ ಚೋದ್ಯ ಹುಟ್ಟಿಸುತ್ತದೆ. ಅನ್ನಪೂರ್ಣದೇವಿ, ರವಿಶಂಕರ್ ತೀರಿಕೊಂಡ ಮೇಲೂ ಏನನ್ನೂ ಬರೆಯಲಿಲ್ಲ. ಈ ವೈರುಧ್ಯಗಳಿಗೆ ಕಾರಣವೇನು? ಬರೆಹ ಮತ್ತು ಬದುಕಿನ ನಡುವಣ ನಡೆನುಡಿ ಕಂದಕ? ಜೀವನ ಸಂಗಾತಿಯನ್ನು ಸಮನಾಗಿ ಬೆಳೆಯಲು ಅವಕಾಶಕೊಡದ ಪುರುಷಾಹಮಿಕೆ? ಅಮೀರ್‍ಬಾಯಿ ಕರ್ನಾಟಕಿಯವರ ಜೀವನ ಸಂಗಾತಿಯಾಗಿದ್ದ ಖಳನಟ ಹಿಮಾಲಯವಾಲಾನ ಕುಡಿತ,ಆತ ಕೊಡುತ್ತಿದ್ದ ದೈಹಿಕ ಹಿಂಸೆಗಳು ತನಗೆ ನಿಷ್ಠಳಾಗಿರದ ಹೆಂಡತಿಯ ಮೇಲಿನ ಕೋಪದ ಫಲವೇ ಅಥವಾ ಆಕೆ ಸಾರ್ವಜನಿಕ ಬದುಕಿನಲ್ಲಿ ತನಗಿಂತ ಯಶಸ್ವಿ ಆಗುತ್ತಿದ್ದುದರ ಅಸೂಯೆಯೇ?ಪ್ರಸಿದ್ಧರ ಮನೆಗೆ ಹೋದಾಗಲೆಲ್ಲ ಅವರು ಮಡದಿಯ ಜತೆ ವರ್ತಿಸುವ ರೀತಿ ಕುತೂಹಲ ಹುಟ್ಟಿಸುತ್ತದೆ. ಬಹುಪಾಲು ಮಡದಿಯರು ಚಹಕೊಟ್ಟು ಅತಿಥಿಗಳಿಗೆ ನಮಸ್ಕರಿಸಿ ಅಡುಗೆಮನೆ ಸೇರಿಬಿಡುತ್ತಾರೆ. ಚರ್ಚೆ ಹರಟೆಗಳಲ್ಲಿ ಭಾಗವಹಿಸುವುದಿಲ್ಲ. ವ್ಯಂಗ್ಯವೆಂದರೆ, ಗಂಡನು ಬಂದವರೊಡನೆ ಮಾಡುವ ಚರ್ಚೆ ಕೆಲವೊಮ್ಮೆ ಸ್ತ್ರೀಯರ ಬಗ್ಗೆಯೂ ಇರಬಹುದು. ಕೆಲವು ಮಹಿಳೆಯರಿಗೆ ಚರ್ಚೆಗಳಲ್ಲಿ ಆಸಕ್ತಿ ಇರುವುದಿಲ್ಲ ಎಂದು ವಾದಿಸಬಹುದು. ಆಸಕ್ತಿ ಇರಲೇಬೇಕಿಲ್ಲ, ನಿಜ. ಆದರೆ ಆಸಕ್ತಿ ಹುಟ್ಟಿಸಲು ಅಗತ್ಯವಾದ ಅಭಿವ್ಯಕ್ತಿಯ ಅವಕಾಶ ಸಿಕ್ಕದೆ ಹೋಗಿದೆ ಎನ್ನುವ ವಾಸ್ತವ ಮರೆಯಲಾಗದು. ಸಾರ್ವಜನಿಕ ಚರ್ಚೆಯಲ್ಲಿ ಮಹಿಳೆಯರು ಭಾಗವಹಿಸುವುದರ ಬಗ್ಗೆ ಅಘೋಷಿತ ನಿಷೇಧಗಳು ಎಲ್ಲ ಮನೆಗಳಲ್ಲೂ ವಿಭಿನ್ನ ಪ್ರಮಾಣಗಳಲ್ಲಿ ಜಾರಿಯಲ್ಲಿವೆ. ಇದು ಕಂಡವರ ಮನೆಯ ಕತೆಯಲ್ಲ. ನಮ್ಮ ಮನೆಯ ಕತೆಯೂ ಹೌದು. ನಾಡಿನಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗಿವೆ. ಅವು ಹೆಚ್ಚಾಗುತ್ತಿವೆಯೊ ಅಥವಾ ಈಗ ವರದಿ ಆಗುತ್ತಿರುವುದರಿಂದ ಹೀಗನಿಸುತ್ತಿದೆಯೊ? ಈ ಪ್ರಕರಣಗಳು ಹೆಚ್ಚಾಗಲು ಲೈಂಗಿಕ ಪ್ರಚೋದಕ ಸಿನಿಮಾ ಸೀರಿಯಲ್ ಹಾಗೂ ಜಾಹಿರಾತು ಸಹ ಕಾರಣ ಎಂಬ ವಾದವಿದೆ. ಹೊಸತಲೆಮಾರಿನ ನಿರುದ್ಯೋಗಿ ತರುಣರ ಹತಾಶೆಗಳು ಪ್ರಟಕವಾಗುತ್ತಿರುವ ಪರಿ ಎಂಬ ವಿವರಣೆಯೂ ಇದೆ. ಅಷ್ಟೊಂದು ಮುಂಚೂಣಿಗೆ ಬಾರದ ಇನ್ನೊಂದು ವಾದವೆಂದರೆ, ಮಹಿಳೆಯರು ತಮ್ಮ ಸ್ವಾತಂತ್ರ್ಯ ಹಕ್ಕು ಚಲಾಯಿಸಲು ಆರಂಭಿಸಿದ್ದಾರೆ ಎನ್ನುವುದು. ಭಾರತದ ದಲಿತರಾಗಲಿ, ಅಮೆರಿಕೆಯ ಕಪ್ಪುಜನರಾಗಲಿ, ಕೆಲವು ಇಸ್ಲಾಮಿಕ್ ದೇಶಗಳ ಮಹಿಳೆಯರಾಗಲಿ, ಸಾಂಪ್ರದಾಯಿಕ ವ್ಯವಸ್ಥೆ ಕೊಡಮಾಡಿದ್ದ ಎರಡನೇ ದರ್ಜೆಯ ಸ್ಥಾನಮಾನ ಒಪ್ಪಿಕೊಂಡಿದ್ದರು. ಹಲ್ಲೆಗಳು ಕಡಿಮೆಯಿದ್ದವು. ಅವರು ವ್ಯವಸ್ಥೆಯನ್ನು ಪ್ರಶ್ನಿಸಲು ಹಾಗೂ ಹಾಕಿದ ಗೆರೆಮೀರಿ ತಮ್ಮ ಸ್ವಂತಿಕೆ ತೋರಲು ಆರಂಭಿಸಿದೊಡನೆ ಅವು ಅಧಿಕಗೊಂಡವು. ಹಲ್ಲೆಗೆ ಸಿಕ್ಕಿರುವುದು ಕುಂಟುನೆವ. ಮಹಿಳೆಯರು ಪ್ರಚೋದಕ ವೇಷ ಧರಿಸುವುದರಿಂದಲೇ ಅತ್ಯಾಚಾರಗಳು ಆಗುತ್ತಿವೆ; ಆಕೆ ಗಂಡಸರಂತೆ ಬಾರಿಗೆ ಹೋಗುವುದರಿಂದ, ಸಿಗರೇಟು ಸೇದುವರಿಂದ, ಸಾರ್ವಜನಿಕ ಕ್ಷೇತ್ರಗಳಲ್ಲಿ ದುಡಿಯಲು ಹೋಗುತ್ತಿರುವುದರಿಂದ ಸಂಸಾರಗಳು ಬಿರುಕು ಬಿಡುತ್ತಿವೆ ಎಂಬ ನಾಜೂಕು ವಾದಗಳಿವೆ. ಈ ವಿಚಾರದಲ್ಲಿ ಎಲ್ಲ ಧಾರ್ಮಿಕ ನಾಯಕರೂ ಏಕಮತೀಯರು. ಪಾಕಿಸ್ತಾನದಲ್ಲಿ ಒಬ್ಬ ಪ್ರತಿಭಾವಂತ ಮಹಿಳೆ, ಮಂತ್ರಿಯಾಗಿದ್ದವರು, ಪ್ಯಾರಾಚೂಟಿನಲ್ಲಿ ಪೈಲಟನನ್ನು ಅಪ್ಪಿಕೊಂಡು ಧುಮುಕಿದರು ಎಂಬ ಕಾರಣದಿಂದ ಕೊಲೆಯಾದರು. ಬೆನಜೀರ್ ಕೊಲೆಯ ಹಿಂದೆಯೂ ಮಹಿಳೆ ಸಾರ್ವಜನಿಕ ಬದುಕಿನಲ್ಲಿ ಗಳಿಸುತ್ತಿರುವ ಯಶಸ್ಸಿಗೆ ಕರುಬುತ್ತಿದ್ದ ಪುರುಷವಾದವಿದೆ. ಹೆಣ್ಣುಮಕ್ಕಳ ಶಾಲೆಗಳ ಮೇಲೆ ಬಾಂಬ್ ಹಾಕುವುದಕ್ಕೆ, ಹುಟ್ಟುಹಬ್ಬ ಆಚರಿಸುತ್ತಿದ್ದ ತರುಣ-ತರುಣಿಯರ ಮೇಲೆ ಹಲ್ಲೆ ಮಾಡಲು, ಧರ್ಮ ಸಂಸ್ಕøತಿ ರಕ್ಷಣೆಯ ಸಮರ್ಥನೆ ನೀಡಲಾಗುತ್ತಿದೆ. ಮಹಿಳೆ ಗಂಡಸರಂತೆ ವರ್ತಿಸುತ್ತಿರುವ ಅಥವಾ ಗಂಡಸರ ಸಮಸಮಕ್ಕೆ ಬರುತ್ತಿರುವ ಬಗೆಗೆ ಪುರುಷವಾದಿಗಳಲ್ಲಿ ವಿಪರೀತ ಅಂಜಿಕೆಯಿದೆ. ಭಾರತದ ಸಾಮಾಜಿಕ ಪರಿಸರದಲ್ಲಿರುವ ಗಂಡುವಾದಿ ಮನೋಧರ್ಮವು, ಮಹಿಳೆಯರ ಪ್ರತಿಭೆ ಮತ್ತು ಕ್ರಿಯಾಶಕ್ತಿ ಹೊರಹೊಮ್ಮಲು ಅದೃಶ್ಯವಾದ ಅಸಂಖ್ಯ ತೊಡಕುಗಳನ್ನು ನಿರ್ಮಿಸಿದೆ. ಇದರಿಂದ ಮದುವೆಯಾದ ಅಥವಾ ಮಕ್ಕಳಾದ ಬಳಿಕ ಗಾಯನವನ್ನು ಬಿಟ್ಟು ಗೃಹಿಣಿಯರಾಗಿ ಮಾತ್ರ ಉಳಿದ ಕಲಾವಿದರಿದ್ದಾರೆ; ವೈದ್ಯಕೀಯ ಇಂಜಿನಿಯರಿಂಗ್ ಓದಿ ಕೂಡ ಗೃಹಿಣಿಯರನ್ನಾಗಿ ಪಳಗಿಸಲಾದ ಚೈತನ್ಯಗಳಿವೆ; ಅನ್ನಪೂರ್ಣಾ ಅವರಿಂದ ಯಾರಿಗೂ ಸಂಗೀತವನ್ನು ಕಸಿಯಲಾಗಿಲ್ಲ. ಆದರೆ ಏಕಾಂತದ ಬದುಕನ್ನು ಅವರು ದೂಡುತ್ತಿರುವವರು. ಕೊಲ್ಲುವುದು ಎಂದರೆ ಜೀವ ತೆಗೆಯುವುದು ಮಾತ್ರವಲ್ಲ. ಬಾಳಿನಲ್ಲಿ ನುಗ್ಗಿಬಂದ ಅನಿರೀಕ್ಷಿತ ಆಘಾತಗಳನ್ನು ಹೊಸತಿರುವನ್ನು ಸವಾಲಾಗಿ ತೆಗೆದುಕೊಂಡಿರುವ ಅನೇಕ ಧೀಮಂತರಿದ್ದಾರೆ. ಉಮಾಶ್ರೀ, ಪ್ರತಿಭಾ ನಂದಕುಮಾರ್, ಇಂದಿರಾ ಲಂಕೇಶ್, ವಿಜಯಮ್ಮ ಮುಂತಾದವರ ಆತ್ಮಕತೆಗಳನ್ನು ಓದುವಾಗ ಇದು ಅರಿವಾಗುತ್ತದೆ; ಸುರಂಗದ ತುದಿಗೆ ಬೆಳಕಿರುತ್ತದೆಯೆಂದು ನಡೆದ ಇವರು, ಕಠಿಣ ಸವಾಲನ್ನು ಎದುರಿಸಿ ಗೆದ್ದ ಪರಿ ಹೆಮ್ಮೆ ಮೂಡಿಸುತ್ತದೆ. ಇವುಗಳ ಜತೆಯಿಟ್ಟು ನೋಡುವಾಗ, ಅನ್ನಪೂರ್ಣಾ ತೆಗೆದುಕೊಂಡ ತೀರ್ಮಾನವು, ಪ್ರತಿಭಟನೆಯ ಇನ್ನೊಂದು ಮಾದರಿಯೂ ಆಗಿರಬಹುದು. ಆದರೆ ಅದು ಅವರನ್ನು ಕರೆದುಕೊಂಡು ಹೋಗಿ ಮುಟ್ಟಿಸಿರುವ ತುದಿ-ಅದೇನೆಂದು ಸ್ಪಷ್ಟವಾಗಿಲ್ಲ- ಹೊರನಿಂತು ನೋಡುತ್ತಿರುವ ನಮಗೆ ದಿಗಿಲು ಹುಟ್ಟಿಸುತ್ತಿದೆ. ************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಕಾವ್ಯಯಾನ

ಶಾಲೆ ಮಾಸ್ತರ್ರು

ಕವಿತೆ ಶಾಲೆ ಮಾಸ್ತರ್ರು ಫಾಲ್ಗುಣ ಗೌಡ ಅಚವೆ ಗೆರೆ ಗೆರೆಗಳ ಪಾಯಜಾಮಗದ್ದೆ ಹಾಳಿಯ ಮೇಲೆ ನಡೆದು ಬಂದರೆಎದುರುಗೊಳ್ಳುತ್ತದೆ ಬೆತ್ತ ವರಾಂಡಾದಲ್ಲಿಟೇಬಲ್ಲು ಚೊಕ್ ಪೀಸು ಕರಿ ಹಲಗೆಎಲ್ಲವೂ ಒಮ್ಮೆ ಎದ್ದು ನಿಲ್ಲುತ್ತವೆ ಪ್ರಾರ್ಥನಾ ಬೆಲ್ಲಿಗೆ ಎಚ್ಚರಗೊಂಡ ಗಾಂಧಿ,ಬೋಸ್,ರಾಧಾಕೃಷ್ಣನ್ ಎಲ್ಲ ಮಕ್ಕಳೊಂದಿಗೆ ಎದೆಗೆ ಕೈಯಿಟ್ಟು ನಿಂತಂತೆ ಮಕ್ಕಳಿಗೆ ಭಾಸವಾಗುತ್ತದೆ ಮಗ್ಗಿ ಬರೆದ ಪಾಟಿ ಅದ್ದು ಹೋಗಿದೆ ಜೋರುಮಳೆಗೆಮತ್ತೆ ತೋರಿಸಬೇಕು ಬರೆದುಇಲ್ಲದಿರೆ ಗದ್ದೆಯಲಿ ಸಗಣಿ ಹೆಕ್ಕಬೇಕು ಆಗಾಗ ಅಂಗಿಯನು ಉಲ್ಟಾ ಹಾಕಿ ಬಂದರೂನೋಡಿಯೂ ನೋಡದಂತೆಕಿಟಕಿಗಳೂ ಗಪ್ ಚಿಪ್ಹೆದರಿ ಕೂತ ಮಕ್ಕಳಂತೆ ಏಕೋಪಾದ್ಯಾಯ ಶಾಲೆಯ ಮಾಸ್ತರರು ಇರುವುದೇ ಒಂದು ಖೋಲಿಟೇಬಲ್ಲೇದುರೇ ಪಾಠ ಹೇಳುವರುಕರಿ ಹಲಗೆ ಇದ್ದೂ ಇಲ್ಲದಂತೆಸದಾ ಎದುರಿಗಿರುತ್ತದೆ ಸೋರುವ ಹಂಚಿನಂತೆ ಶನಿವಾರ ಬಂದರೆ ಹಬ್ಬವೋ ಹಬ್ಬಹುಡುಗರೇ ನಾವೆಲ್ಲಾ ಗದ್ದೆ ಬಯಲಲ್ಲೇಹೋಮ್ ವರ್ಕ ಮಾಡದಿರೆ ಬಾಯ್ ಹಾರ್ಟ್ ಹಾಕದಿರೆಗಾಳ ಹಾಕುವ ಶಿಕ್ಷೆಛಡಿ ಚಮ್ ಚಮ್ ವಿದ್ಯಾ ಗಮ್ ಗಮ್ ಒಮ್ಮೆ ಏನಾಯಿತೆಂದರೆ,ಒದೆ ತಿಂದ ಮಕ್ಕಳು ಬಯಲ ದೇವರೆದುರು ನಿಂತು ಕಾಯಿಟ್ಟುಹರಕೆ ಮಾಡಿಕೊಂಡರು‘ ಶನಿವಾರ ಊರಿಗೆ ಹೋದ ಮಾಸ್ತರುತಿರುಗಿ ಬರಬಾರದು! ‘ಬಂತು ಸೋಮವಾರ ಯಥಾಸ್ಥಿತಿಒದೆ ತಿಂದರು!! ********************************

ಶಾಲೆ ಮಾಸ್ತರ್ರು Read Post »

ಕಾವ್ಯಯಾನ

ಸುಮ್ಮನೆ ಬದುಕಿಬಿಡು

ಕವಿತೆ ಸುಮ್ಮನೆ ಬದುಕಿಬಿಡು ವಿಶಾಲಾ ಆರಾಧ್ಯ ಬದುಕಿ ಬಿಡಬೇಕು ಸುಮ್ಮನೆದುಮ್ಮಾನ ಬಿಗುಮಾನವಿಲ್ಲದೆಎಲ್ಲರೊಳಗೊಂದಾಗಿಯೂತಾನೇತಾನಾಗಿ ಆಕಾಶಕ್ಕೇಕೆ ಚಪ್ಪರ ..ನಿಸರ್ಗಕ್ಕೇನು ಮದುವೆಯೇ?ಇಷ್ಟಕ್ಕೂ ಮದುವೆಗೆ ಚಪ್ಪರಬೇಕೇ ಬೇಕೆಂದವರಾರು?ಮದುವೆಗೆ ಗಂಡು ಹೆಣ್ಣಿದ್ದರೆ ಸಾಕುಬೇರೆಲ್ಲಾ ಬೇಲಿಗಳ ಕಿತ್ತು ಹಾಕು ಪ್ರಕೃತಿ ಚೈತ್ರದ ಚಿಗುರೊಡನೆಮೈನೆರೆದಾಳೆ ಚಲುವೆರೆದಾಳೆಹೆಣ್ಣಿನ ಗುಣವೇ ಈ ಮಣ್ಣಿಗೂಮೈದುಂಬಿದಾಗ ಮಿಕ್ಕಿ ಎರೆವುದುಪ್ರಕೃತಿ ಸಹಜ ! ಅದಕೇಕೆ ನಿಯಮ ***************************

ಸುಮ್ಮನೆ ಬದುಕಿಬಿಡು Read Post »

ಕಾವ್ಯಯಾನ

ಮನ ನೆಡದಾಗ

ಕವಿತೆ ಮನ ನೆಡದಾಗ ರೇಶ್ಮಾಗುಳೇದಗುಡ್ಡಾಕರ್ ನಡೆಯುತ್ತ ನಡೆಯುತ್ತಾ ನಡೆದದಾರಿಯೇ ಕಾಣಲಿಲ್ಲ ಹಿಂತಿರುಗಿನೋಡಿದಾಗ ಮುಂದಿರುವ ಗೂಢಾರಣ್ಯವುನಡಿಗೆಗೆ ಧೊಳಿಪಟವಾಗಿಅವಶೇಷವೇ ಇಲ್ಲದಂತಾಗಿತ್ತು …..! ಬದುಕಿನ ಪ್ರವಾಹಕ್ಕೆ ನಿಲ್ಲದಪಯಣ ರಭಸದಿ ಹುಡುಕುತ್ತಲೆಇತ್ತು ನೆಮ್ಮದಿಯ ದಡವದಣಿವರಿಯದ ದೇಹದ ಜೊತೆಗೆಹೆಗಲಲ್ಲಿ ಭದ್ರವಾಗಿದ್ದವು ಕನಸಿನಜೋಳಿಗೆ ಒಮ್ಮೊಮ್ಮೆ ನಿಂತಲ್ಲೇ ನಿಂತು ,ಕಾದು ,ಕಾದು , ಕೆಂಡಕಿಂತಲುಬಿಸಿಯಾಗಿ ! ಎಲ್ಲ ಬೇಗುದಿಗಳನ್ನುತನ್ನೊಳಗೆ ಸುಟ್ಟು ಬೂದಿಮಾಡಿತು …… ದಿಟ್ಟತನ ನೋಡುಗರ ಎದೆಯಲ್ಲಿಭಯದ ಬುಗುರಿಯ ಆಡಿಸಿದ್ದುಕ್ಷಣ ಮಾತ್ರದಲ್ಲಿಸಂಕೋಲೆಗಳನ್ನು ಕಿತ್ತು ಒಸೆದಮೇಲೆಹೆದರುವದು ಯಾತಕ್ಕೆ ?ಭವಿಷ್ಯ ಕ್ಕೂ ,ವಾಸ್ತವಕ್ಕೂ …..ಬಿರುಗಾಳಿಗೆ ಸಿಕ್ಕ ತರಗೆಲೆಯಂತಾದವುಭಯದ ಭೂತಗಳು … *******************************

ಮನ ನೆಡದಾಗ Read Post »

ಕಾವ್ಯಯಾನ

ಜೋಳದ ಹೂವು

ಕವಿತೆ ಜೋಳದ ಹೂವು ಪೂಜಾ ನಾರಾಯಣ ನಾಯಕ್ ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆಜೋಳದ ಹೂವೊಂದು ಮಗುವಂತೆಮನದಿಂಗಿತವ ಕೇಳುವವರಾರೆಂದುನರಳುತಿದೆ ತನ್ನೆದೆಯ ಗೂಡಲ್ಲಿರಾತ್ರಿ-ಹಗಲೆನ್ನದೆ. ಯಾರಬಳಿ ನನ್ನ ಮನದಿಂಗಿತವನರುಹಲಿ?ಯಾರ ಬಳಿ ತೋಡಿಕೊಳ್ಳಲಿ ನನ್ನಳಲ?ಗೆಳೆತನದ ಸಲುವಾಗಿ ಯಾರ್ಯಾರ ಬೇಡಲಿ?ನನ್ನೆಡಗೆ ಸುಳಿಯರಾರೂಅಯ್ಯೋ, ಇದು ನನ್ನ ವಿಧಿಯೆ? ಪಾತರಗಿತ್ತಿಗೆ ಹೇಳಲೆ?ಛೇ, ತಗುಲಿದೆ ಮಲ್ಲಿಗೆಯ ಹುಚ್ಚು!ಭ್ರಮರಕ್ಕೆ ತಟ್ಟಿದೆಸೂರ್ಯಕಾಂತಿಯ ಮೋಹ!ಕಣಜವನು ಕೈಬೀಸಿ ಕರೆವೆನೆಂದರೆಛೇ, ಅದಕೂ ಸೋಕಿದೆ ತಾವರೆಯ ಪ್ರೇಮ!ಯಾರ ಬಳಿ ಹೇಳಲಿ ಅಡಗಿದಗುಹೆಯೊಳಗಿನ ಮರ್ಮ ಕಣ್ಣೀರಿನದ್ದೆಂದು,ಗೋಗರೆಯುತಿಹೆ ಸುಯ್ಲು ಸೋರದ ಹಾಗೆನುಂಗುತಿಹೆ ಒಳಗೊಳಗೆ… ಎತ್ತಲಿಂದಲೂ ಬರರ್ಯಾಕೆ ಇತ್ತ?ಕುಸುಮ-ವಾಸನೆಯ ಕಂಪಿಲ್ಲವೆಂದೆ?ಇದ್ದರೂ ಇರಬಹುದೆ ನನ್ನೊಳಗಿನಮಧುವಿಗೆ ರುಚಿಯಿಲ್ಲವೆಂದು?ಮರುಗುತಿಹ ಹೂವು ಸೇರುವುದುಹೇಗೋ ಕೊನೆಗೆ ಮೌನದಾ ಒಡಲಸಮಾಧಾನಿಸಿಕೊಂಡು ತನ್ನೆದೆಯ ಕಡಲ… ಹೋದರೇನಂತೆ, ಹೋಗಲಿ ಬಿಡಿವಯ್ಯಾರದ ಹೂವಿನೆಡೆಗೆ ಮಧು-ಕಂಪನರಸಿನಾನರಿಯದಿಹೆನೆ, ಈ ಗೆಳೆತನದ ಗುಟ್ಟ?ಹೂವು-ದುಂಬಿಯ ಆಟವಾಮಕರಂದ ಇರುವನಕಪಾತರಗಿತ್ತಿಯ ಹುಚ್ಚು,ವಯ್ಯಾರವಿರುವನಕಭ್ರಮರದಾ ಪ್ರೇಮ,ಘಮ ಘಮಿಸುತಿರುವನಕಕಣಜದಾ ಸ್ನೇಹ!ಎಲ್ಲ ತೀರಿದ ಮೇಲೆ ಉಳಿಯುವುದೆ ಮೋಹ?ಬೇರೆ ದಾರಿಯ ಹುಡುಕಲೆಲ್ಲಸನ್ನಾಹ!!        ************************************

ಜೋಳದ ಹೂವು Read Post »

ಕಾವ್ಯಯಾನ

ದೊರೆಯ ಕಿರೀಟದ ನೀಲ ಮಣಿಯಲ್ಲಿ….

ಕವಿತೆ ದೊರೆಯ ಕಿರೀಟದ ನೀಲ ಮಣಿಯಲ್ಲಿ…. ಶ್ರೀದೇವಿ ಕೆರೆಮನೆ ರತ್ನ ಖಚಿತ ಸಿಂಹಾಸನದಲ್ಲಿ ಆಸೀನನಾಗಿದ್ದದೊರೆಯಲ್ಲೊಂದು ಉದಾಸೀನಅನತಿ ದೂರದಲ್ಲಿ, ಕೈ ಕಟ್ಟಿವಿಧೇಯಳಾಗಿ ನಿಂತಿದ್ದಕಪ್ಪು ಬಣ್ಣದ ನಿರಾಭರಣ ಯುವತಿಯಕಡೆಗೊಂದು ದಿವ್ಯ ನಿರ್ಲಕ್ಷ ಹ್ಞೂಂಕರಿಸಿ ಎದುರಿಂದ ತೊಲಗೆಂಬಂತೆಕೈಬೀಸಿದ ದೊರೆಯಲ್ಲಿ ಅದೇನೋ ವ್ಯಂಗ್ಯಸುಂದರವಾಗಿರದ್ದು ಯಾವುದೂ ಕಣ್ಣೆದುರುಕಾಣಲೇ ಬಾರದು ಎಂಬ ಹಟಎದುರಿಗಿದ್ದ ಯುವತಿಯೋಯಾರ ಕಣ್ಣೂ ಅರಳಿಸಿದ ಸೀದಾ ಕವಿತೆ ದೊರೆಯ ಅಣತಿಯಂತೆ ತಲೆ ತಗ್ಗಿಸಿಮುಖ ತಿರುವಿ ಹೊರ ಹೊರಟಾಕೆಯಕಣ್ಣಲ್ಲೊಂದು ಅಬ್ಬರಿಸುವ ಕಡಲುಉಕ್ಕಿದ ನಗೆಯಲ್ಲೊಂದು ಕಡಲಲೆಗಳನೆನಪಿಸುವ ಭೋರ್ಗರೆತ ಅದೋ…ದೊರೆ ಓಡೋಡಿ ಬಂದಿದ್ದಾನೆಈಗ ತಾನೆ ಹೊರಗೆ ಹೋದಕಪ್ಪು ಕಣ್ಣಿನ ಕಪ್ಪು ಹುಡುಗಿಗಾಗಿಆಕೆ ಅಲ್ಲೆಲ್ಲೂ ಕಾಣುತ್ತಿಲ್ಲ…ಗಾಳಿಯಲ್ಲಿ ಉಪ್ಪು ನೀರಿನ ಘಮಲುಕಿವಿಯಲ್ಲಿ ಅಲೆಗಳ ಮೊರೆತಮುಗ್ಗರಿಸಿದ ದೊರೆಯ ಎದೆಯಲ್ಲೂಎಂದೂ ಇರದ ಕಡಲ ಸೆಳೆತಕಪ್ಪು ಹುಡುಗಿಯ ಕನವರಿಕೆ ಈಗ,ದೊರೆಯ ಕಿರೀಟದ ನಡುವಲ್ಲಿಜ್ವಲಿಸುವ ನೀಲ ಮಣಿಯಲ್ಲಿಕಪ್ಪು ಕಡಲಿನ ಆರ್ಭಟ…. ****************************

ದೊರೆಯ ಕಿರೀಟದ ನೀಲ ಮಣಿಯಲ್ಲಿ…. Read Post »

ಕಾವ್ಯಯಾನ

ಗೆಳೆಯರು ಹಲವರು

ಕವಿತೆ ಗೆಳೆಯರು ಹಲವರು ಮಾಲಾ.ಮಾ.ಅಕ್ಕಿಶೆಟ್ಟಿ. ಕಲಿಸುವುದು ದಿನವೂಗೆಳೆತನ ವ್ಯಾಖ್ಯೆಗಳುವಾಟ್ಸಪ್ ಫೇಸ್ ಬುಕ್ ನಲ್ಲಿ ನೋಯಿಸುವುದು ಹೀಯಾಳಿಸುವುದುಕಡೆಗಣಿಸುವುದು ಸಲ್ಲಚೂರು ಚೂರು ಹೃದಯವನ್ನಂತೂಮಾಡಬಾರದುಗಳ ಸರಮಾಲೆಯಲ್ಲಿಸಾಲು ನಿಂತ ‘ಬಾರದುಗಳು’ ಬೇಕೇ ಬೇಕು ಹಠಒಂದು ಕಾಲದಲ್ಲಿ ಗೆಳೆತನಇರದಿರೆ ನಿರುತ್ಸಾಹಸಿಗಲಿಲ್ಲ ಅಂದುಸಿಗುತ್ತಿದೆ ಇಂದುವಾಟ್ಸಪ್ ಫೇಸ್ ಬುಕ್ ನಲ್ಲಿ ಒಂಟಿತನ, ಅಸಂತೋಷಅಶಾಂತಿಯನ್ನು ಕೊಟ್ಟದೇಣಿಗೆ ಅಂದಿನ ಗೆಳೆತನದ್ದುಸುಧಾರಿಸಿದ ಗೆಳೆತನಇಗಿಂದು ನೀಗಿಸಲುಅಸಾಧ್ಯ ಆಗಿನ ಬೇಡಿಕೆಯನ್ನುಸಾಕು ಗೆಳೆತನ ಡೋಂಗಿರೂಢಿಯಾಗಿದೆ ಅವರಿಲ್ಲದಜೀವನದ ಒಂಟಿ ಪಯಣ ವ್ಯತ್ಯಾಸವಿಲ್ಲ ಇವರಇರುವಿಕೆ ಇಲ್ಲದಿರುವಿಕೆಯಾರ್ಯಾರ ಜೀವನದಲ್ಲಿಏನು, ಕುತೂಹಲವಿಲ್ಲಆತ್ಮೀಯರಲ್ಲದವರಜೊತೆ ಉತ್ಸಾಹವೆಲ್ಲಿ ನೀರೆರೆಯಲು ಬರುವರುಸತ್ತಾಗ ಬಾಯಲ್ಲಿ ಆತ್ಮೀಯರುಹೊರತು ಡೋಂಗಿಯಲ್ಲಪಾಪ ಫೋಟೋ ಶೇರ್ಮಾಡಿ ಆರ್ ಐ ಪಿ ಹೇಳುವುದುವಾಟ್ಸಪ್ ಫೇಸ್ ಬುಕ್ ನಲ್ಲಿ ನಿರೀಕ್ಷೆಯ ಅವಶ್ಯಕತೆಯಹಂಚಿ ತುಸು ಪ್ರೀತಿಯಬೇಡಿದವರಿಗೆ ದೂರಾಗುವ ಮುಂಚೆನೆನೆಬಹುದು ಸಾವಿನಾಚೆಯೂ ****************************

ಗೆಳೆಯರು ಹಲವರು Read Post »

You cannot copy content of this page

Scroll to Top