ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ತರಗೆಲೆ

ಅನುವಾದ ತರಗೆಲೆ ಕನ್ನಡ ಮೂಲ: ನಾಗರೇಖಾ ಗಾಂವಕರ್ ಇಂಗ್ಲೀಷಿಗೆ: ಸಮತಾ ಆರ್. ತರಗೆಲೆ ಮರದಡಿಯ ನೆರಳಲ್ಲಿ ಬೆಚ್ಚಗೆ ಇತ್ತು ತರಗೆಲೆ.ಕಾಲಾಂತರದ ಕರಿಯಪ್ಪುಗೆಯಲ್ಲಿ ಮುಂದೊಂದು ದಿನ ಹಾಗೇಕೊಳೆತು ಹೋಗುವುದಿತ್ತುಮರಳಿ ಮಣ್ಣಡಿ ಸೇರಿ. ದಿಗ್ಗನೇ ಬೆಳಗಿದ ನಾಜೂಕುಬೆಳಕಿನ ಹೊಳಪುಅದೇಕೋ ಅರಿವ ಹೊಸೆವ ಅನಂತದ ನೆರಳಡಿತಂದು ನಿಲ್ಲಿಸಿತು.ತರಗೆಲೆಯ ಮಾಸಿದ ಬಣ್ಣಕ್ಕೆ ಹೊಂಬಣ್ಣದ ಹೊಳಪು.ಮತ್ತೆ ಚಿಗುರಿದಂತೆ ಸಂಭ್ರಮ.ನೆಲದ ನಿಯಮದ ಹಾಗೇ.ಮಬ್ಬು ಸರಿಸಿ ‘ ಕಾಣಬಯಸಿದ್ದ ಮನಗಾಣು’ ಎಂದು ಎದೆ ತೆರೆದು ಆಹ್ವಾನಿಸಿಅಪ್ಪಿ ಮುದ್ದಿಸಿತು ಬೆಳಕು. ಬೆಳಕಿನ ದಾರಿಯಲ್ಲಿ ಕಣ್ಢಿಗೆಣ್ಣೆಬಿಟ್ಪು ಹಾಗೇ ನೋಡುತ್ತಲೇಇತ್ತು ತರಗೆಲೆ ತಪದಂತೆ ಸೈರಿಸಿ ಬೆಳಕ ಕಿರಣಹೊಳಪುಂಡು ಶಕ್ತ ನಿಲುವಲಿನಿರಾಳ ಉಸಿರಾಡುತ್ತಕಾಯುತ್ತಲೇ ಇತ್ತು. ಪ್ರತಿಮಿಸುವ ಪ್ರತಿ ಪದವೂಒಳಗಣ್ಣ ತೆರೆಸಿ, ವಿಸ್ಮಯದ ಅಂಚು ಎಲೆಯ ಸುತ್ತುಗಟ್ಟಿತಾರೀಪುಗಳ ಹೊತ್ತ ಎಲೆಯ ಭಿತ್ತಿಯಮೇಲೆ ನೂರಾರು ಚಿತ್ರಗಳ ಚಲನೆ, ಚಿಂತನೆ,ನಿಂದನೆಯ ಎಣ್ಣೆಯಲ್ಲಿ ಹುರಿದು,ಕಮಟು ವಾಸನೆ ಬಡಿಸಿ, ಮತ್ತೆ ಮರುಗಳಿಗೆ ತುಪ್ಪ ಮೂಗಿಗೆ ಸವರಿ,ಬೆಳಕು ಹದವರಿತು ತರಗೆಲೆಯನುಡಿಸಿತ್ತು. ಉರಿವ ಬೆಳಕಿಂದಜಿಗಿಯಬಲ್ಲ ಬೆಂಕಿಯ ತಾಪದಭಯಕಾಡುತ್ತಲೇ ಇತ್ತು. ಆದರೂ ತರಗೆಲೆಗೆ ತೀರದವ್ಯಾಮೋಹ.ಹಾರುವ ಪುಟ್ಟ ಗುಬ್ಬಿಯ ಬಾಯೇರಿ, ಅದಿಟ್ಟ ಮೊಟ್ಟೆಯ ಗೂಡಿಗೆ ಮಂದರಿಯಾಗಿಪುಟಪುಟ ನೆಗೆತದ ಚೀಂವ್ ಚೀಂವ್ ಮರಿಗುಬ್ಬಿಗಳಕಾಲಡಿಗೆ ರೋಮಾಂಚನಗೊಳ್ಳಬೇಕುಚಿಲಿಪಿಲಿಯೂದುವ ತೊದಲ ನುಡಿಗಳಿಗೆ ಕಿವಿಯಾಗಬೇಕು. ಜೀವವಿಲ್ಲದ ಒಣ ಎಲೆಯೆಂದವರ ಕಡೆಗೊಮ್ಮೆನಲ್ಮೆಯ ನೋಟವೆಸಗಬೇಕು. ———————ನಾಗರೇಖಾ ಗಾಂವಕರ. A dry leaf.. A dry leaf resting cosily,Under the shadow of a tree,Was about to get degradedIn the dark embrace of timeAnd get mixed up with the soil as usual. Just then all of a sudden a soft tender lightLit up everything with its gleam. And without any reasonBrought under the shade ofInfinite enlightenment.. The faded leaf got a new shineAnd beaming as if budding anewJust as the laws of the earth. Removing the darkness said the light“Perceive whatever you wanted to see “Inviting with open arms and cuddling. With the eyes wide openThe leaf kept on seeingThe path of light. Bearing the light just as a penanceDevouring the lightStood strong and breathing.And kept on waiting.. Every word casted ,Opened the inner eyeA mesmerizing rimSurrounded the leaf,Hundreds of pictures and thoughtsAre moving all over the laminaladen with the praises. Fried with the oil of accusationsMade to smell rancid,butLater buttering up to console,The light has made the leaf to sayWith the right temper. But the leaf still fearsThe heat of the firethat may emergeFrom the glowing light. But still this leaf hasAn unending yearning.Wants to fly away held inThe beak of a little sparrow,Wants to be a quilt for it’s eggs filled nest.Wants to be thrilled under the tripping feetOf the tweeting nestlings.Wants to be all ears for theirStammering chirpings. And wants to stare with love,All those,who called it“A lifeless dry leaf,” —————————————- Translated by Samatha.R

ತರಗೆಲೆ Read Post »

ಪುಸ್ತಕ ಸಂಗಾತಿ

ನಾನು ದೀಪ ಹಚ್ಚ ಬೇಕೆಂದಿದ್ದೆ

ಪುಸ್ತಕ ವಿಮರ್ಶೆ ನಾನು ದೀಪ ಹಚ್ಚ ಬೇಕೆಂದಿದ್ದೆ ನಮ್ಮ ಕಣಿವೆಯ ಹುಡುಗಿ ಅಕ್ಷತಾ ಕೃಷ್ಣಮೂರ್ತಿ ಕಳಿಸಿದ “ನಾನು ದೀಪ ಹಚ್ಚ ಬೇಕೆಂದಿದ್ದೆ”ಕವನ ಸಂಕಲನ ತಲುಪಿದೆ. ಅಣಶಿ ಘಟ್ಟದ ಶಾಲೆಯೊಂದರಲ್ಲಿ ಕಷ್ಟದಲ್ಲಿ ಕಾರ್ಯ ನಿರ್ವಹಿಸುತ್ತಾ ಬರೆವ ಓದಿನ  ತನ್ನನ್ನೇ ಅರ್ಪಿಸಿಕೊಂಡ ಅವಳ ಜೀವನ ಪ್ರೀತಿಗೆ ಮನಸ್ಸು ಅರಳುತ್ತದೆ.                     ಈಗಿತ್ತಲಾಗಿ ಓದುವುದೇ ಕಡಿಮೆಯಾದ ನನ್ನ ಬದುಕಿನಲ್ಲಿ ಆಗಾಗ ಓದಿಗೆ ಹಚ್ಚಿ ಬರೆಸುವ ಅನೇಕ ಗೆಳತಿಯರಿದ್ದಾರೆ ಎನ್ನುವುದೇ ಖುಷಿಯ ಸಂಗತಿ ಅವರೆಲ್ಲರಿಗೂ ನನ್ನ ರಾಶಿರಾಶಿ ಪ್ರೀತಿ .                              ಅಕ್ಷತಾಳ “ನಾನು ದೀಪ ಹಚ್ಚ ಬೇಕೆಂದಿದ್ದೆ”  ಕವನಸಂಕಲನದಲ್ಲಿ ಅನೇಕ ಕವನಗಳು ಪ್ರೀತಿಯಲ್ಲಿ ಅದ್ದಿ ತೆಗೆದಂತವುಗಳು ಹಾಗೆ ಮನಸ್ಸಿನಾಳಕ್ಕೆ ಇಳಿದು ನೆಲೆಗೊಳ್ಳುವಂತವುಗಳು. ” ನೀ ಮಾತನಾಡಿಸದ ಮೇಲೆ “ಕವನದಲ್ಲಿ  “ನಿನ್ನ ನೆನಪಲ್ಲಿ ಹುಟ್ಟಿದ ಕವನಗಳಿಗೆ ನೇಣು ಹಾಕಿ ಗಲ್ಲಿಗೇರಿಸಬೇಕಿತ್ತು  ಕೊನೆ ಆಸೆ ಕೇಳದೆ … ” ವಿರಹದುರಿಯಲ್ಲಿ ಬೆಂದ ಸಾಲುಗಳು..ಇನ್ನೊಂದು ಕವನದಲ್ಲಿ “ನನಗೆ ಬೇಸರವಿದೆ ಒಂದೊಂದು ಮಧ್ಯಾಹ್ನ ಕಳೆದ ಹಾಗೆಲ್ಲ ಅರಳಿದ ಗುಲ್ಮೊಹರ್  ಉದುರುತ್ತದೆ ಸದ್ದಿಲ್ಲದೆ …”ಬೇಸರವನ್ನು ಹಾಸಿ ಹೊದ್ದ0ತ  ಸಾಲುಗಳು  ಎದೆಗೆ ತಾಕುತ್ತವೆ .ರಾಧಾ ಮಾಧವರ ಪ್ರೇಮಕವನಗಳಂತೂ  ವಿಶಿಷ್ಟವಾಗಿವೆ. “ತರಬೇತಿ ಯನ್ನಾದರೂ ನೀಡು ಕೃಷ್ಣನ ಕೊಳಲ ದನಿ ಯಾಗುವುದು ಹೇಗೆಂದು ?..” ಎಂದು ರಾಧೆಯಲ್ಲಿ ಅರಹುವ ಸಾಲುಗಳು ಕೃಷ್ಣನ ಕಾಡದೇ ಇರದು .            “ಮಸರಿಯಾಗಲೇ ಬಾರದು”   ಕವನದಲ್ಲಿ ಶೋಷಣೆಯ ವಿರುದ್ಧದ ದನಿಯಿದೆ. ಸೀರೆ ಮಸರಿಯ ಪ್ರತಿಮೆಗಳಲ್ಲಿ ಕವನ ಕಣ್ಸೆಳೆಯುತ್ತದೆ. ಹಾಗೆಯೇ”ಎಲ್ಲಿಯೂ  ಮಾತನಾಡಬಾರದು” ಕವನ ಕೂಡ ಇದನ್ನೇ ಮಾತನಾಡುತ್ತದೆ .            ‌‌‌‌‌                 ಕಣಿವೆಯ ಉಸಿರಾದ ಕಾಳಿ ನದಿಯ ದಂಡೆಯಲ್ಲೂ ಕವನಗಳರಳುತ್ತವೆ .ಅಣೆಕಟ್ಟು ಒಡೆದಿದೆ ಎಂಬ ಸುಳ್ಳುಸುದ್ದಿ ಮುಗ್ಧ ಜೀವಿಗಳ ಕಾಡಿದ ಪರಿಗೆ ಕಣ್ಣು ಆರ್ದ್ರವಾಗುತ್ತದೆ .ಕಾಯುವ ಕಾಳಿ ಕಾಡುವ ಕಾಳಿ ಯಾಗದಿರಲಿ ಮನಸ್ಸು ಬೇಡುತ್ತದೆ .ಕೊನೆಯ ಆರು ಮಕ್ಕಳ ಕವಿತೆಗಳು ಬಾಲ್ಯದ ಬೆರಳು ಹಿಡಿದು ನಡೆಸುತ್ತವೆ. ಈಗಾಗಲೇ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ಮಯೂರವರ್ಮ ಪ್ರಶಸ್ತಿ ತನ್ನದಾಗಿಸಿಕೊಂಡ ಹೆಮ್ಮೆ ಕವಯಿತ್ರಿಯ ಈ ಸಂಕಲನಕ್ಕಿದೆ.                   ಈ ಸಂಕಲನದ ಎಲ್ಲ ಕವನಗಳು ವಿಶಿಷ್ಟ ರೀತಿ ನೆಲೆಯಲ್ಲಿ ಎದೆಗೆ ಹತ್ತಿರವಾಗುತ್ತವೆ. ಥೇಟು  ಅಕ್ಷತಾಳ೦ತೆ. ತುಂಬು ಪ್ರೀತಿ ವಿಶ್ವಾಸ ಮೊಗೆ ಮೊಗೆದು ಮಡಿಲಲ್ಲಿ  ತುಂಬುತ್ತವೆ ಅವಳಂತೆ .ದೂರದಲ್ಲೆಲ್ಲೋ ಅರೆಬರೆ ಮಿಣುಕುವ ನಕ್ಷತ್ರವನ್ನು ದಿಟ್ಟಿಸುವ ಕಕ್ಕುಲತೆಯಿದೆ ಕಣಿವೆಯ ದಾರಿಯಲ್ಲಿ. ಅಕ್ಷತಾ ಬರೆದ ಅಕ್ಷರಗಳೆಲ್ಲ ಅಕ್ಷಯವಾಗಲಿ ….ಆ ಅಕ್ಷರಗಳೆಲ್ಲ ಕಣಿವೆಯ ದಾರಿಯಲ್ಲಿ ಹೂವಾಗಿ ಅರಳಿ ದಾರಿಹೋಕರ ದಣಿವಾರಿಸಲಿ ಎಂಬುದು ಮನದಾಳದ ಹಾರೈಕೆ. **************************************** ಪಿ .ಎಸ್. ಸಂಧ್ಯಾರಾಣಿ    #

ನಾನು ದೀಪ ಹಚ್ಚ ಬೇಕೆಂದಿದ್ದೆ Read Post »

ಕಾವ್ಯಯಾನ

ಅವಳನ್ನು ಸಂತೈಸುವವರು

ಕವಿತೆ ಅವಳನ್ನು ಸಂತೈಸುವವರು ಮಾಲಾ ಮ ಅಕ್ಕಿಶೆಟ್ಟಿ ಕಳೆದುಕೊಂಡೆ ನನ್ನವನನ್ನ ಶಾಶ್ವತವಾಗಿಮತ್ತೆ ಸಿಗಲಾರ’ ದುಃಖಿಸಿತು ಹೆಣ್ಣುಜೀವಮನದ ನೋವು ಹಂಚಿಕೊಳ್ಳಲುನನ್ನೊಂದಿಗೆ, ಆ ಗೆಳತಿಯ ಹೃದಯನೋವನ್ನು ತಡೆಯಲಾರದೆ, ಸಿಡಿಲುಮಳೆಯಿಲ್ಲದೇ ಬಡಿದಿತ್ತು ಬೇಸಿಗೆಯಲ್ಲಿ ಯಾವತ್ತೂ ಗಂಭೀರ ಮೂರ್ತಿತೂಕದಲ್ಲಿ ಮಾತುಗಳ ಸಂಕಲನಅಪಘಾತದಲ್ಲಿ ಬಾರಲಾರದಲೋಕಕ್ಕೆ ತೆರಳಿದ ಮರಣಒಟ ಒಟ ಎಂದು ಒಟಗುತ್ತಿದ್ದಳುತಡೆಯಲಾರದ ಸೊಲ್ಲುಗಳಲ್ಲಿ ಮೊನ್ನೆ ಇನ್ನೀತರ ಗೆಳೆತಿಯರೊಂದಿಗೆಭೇಟಿಯಾಗಿದ್ದಳು ಇಕೆ ಅಕಸ್ಮಾತ್ನೋವು ನೋವು ಎಂದು ಜರ್ಜರಿತವಾದದೇಹ, ಮತ್ತೆ ಮತ್ತೆ ಒಟಗುಡುತ್ತಿತ್ತುಸ್ಥಿತಿಯನ್ನು ಅರಿಯಲಾರದ ಇತರರುಒಟಗುಟುವಿಕೆ ನೋವು ಅರಿಯದೇ ಬೆಸರಿಸುತ್ತಿದ್ದರು ದುಃಖದ ಸುಣ್ಣದಲ್ಲಿ ಅದ್ದಿತೆಗೆದ ನನ್ನ ದೇಹಕ್ಕೆ ತುಸುಅರ್ಥವಾಗಿತ್ತು ಆಕೆಯ ವೇದನೆಸಹಜವಲ್ಲಾ? ಆತ್ಮೀಯಕೊಂಡಿ ಕಳಚಿದಾಗ ಕೈಯಿಂದನಿಲುಕದು ಸಂವೇದನೆರಹಿತರಿಗೆ ಭ್ರಮೆಯೇ ಎಲ್ಲಾ?ಹೆಣ್ಣು, ಹೆಣ್ಣನ್ನು ಅರ್ಥೈಸುವುದುರುಚಿ ಗೊತ್ತು ನೋವುಂಡವರಿಗೆವಿಚಿತ್ರ ನೋಡಿ ಪ್ರಸಂಗನನ್ನ ಮತ್ತು ಆಕೆಯ ಭೇಟಿ,ಇತ್ತುಮರುದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ******************************

ಅವಳನ್ನು ಸಂತೈಸುವವರು Read Post »

ಇತರೆ

ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ

ಲೇಖನ ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ ನಿಂತು ಮಲ್ಲಿಕಾರ್ಜುನ ಕಡಕೋಳ  ಕಳೆದವರ್ಷದವರೆಗೆ ಹೈದ್ರಾಬಾದ್ ಕರ್ನಾಟಕವೆಂದು ಕರೆಯಲಾಗುತ್ತಿದ್ದ  ಕಲಬುರಗಿ ನಾಡನ್ನು ೧೭.೦೯.೨೦೧೯ ರಂದು ಮುಖ್ಯಮಂತ್ರಿ ಯಡಿಯೂರಪ್ಪ  “ಕಲ್ಯಾಣ ಕರ್ನಾಟಕ” ಎಂದು ನಾಮಕರಣ ಮಾಡಿದರು. ಆ ಮೂಲಕ  ಹೈದ್ರಾಬಾದ್ ಕರ್ನಾಟಕ ಕನ್ನಡನಾಡ ಪ್ರಜ್ಞೆಗೆ ಹೊಸವಿನ್ಯಾಸದ ತಾಜಾ ತಾಜಾ ಖುಷಿ ದೊರಕಿದಂತಾಗಿದೆ. ಇದು ಸಾಂಸ್ಕೃತಿಕವಾಗಿ ವಿನೂತನ ಉಮೇದು. ಅಂದು ಕಳಚೂರಿ ಬಿಜ್ಜಳನ ಕಲ್ಯಾಣ ರಾಜ್ಯದ ಮಂತ್ರಿಯಾಗಿದ್ದ ಬಸವಣ್ಣ, ಪ್ರಭುತ್ವದ ಎಲ್ಲೆಮೀರಿ ವಚನಗಳ ಮೂಲಕ ಜನಚಳವಳಿ ರೂಪಿಸಿದ್ದು ಜನಕಲ್ಯಾಣದ ಕಳಕಳಿಯ ದ್ಯೋತಕ. ಜನರಿಗೆ ಮತ್ತೆ ಅಂದಿನ ಕಲ್ಯಾಣದ  ಕನಸುಗಳನ್ನು ಇಂದು ಕಾಣುವ ತವಕ. ೧೫.೦೮.೧೯೪೭ ರಂದು ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕನ್ನಡ ನೆಲದ ಅಂದಿನ ಕಲಬುರ್ಗಿ, ಬೀದರ, ರಾಯಚೂರು ಈ ಮೂರು ಜಿಲ್ಲೆಗಳು, ಮರಾಠಿಯ ಐದು, ತೆಲಂಗಾಣದ ಎಂಟು ಜಿಲ್ಲೆಗಳು ಅಂದಿನ ಮುಸ್ಲಿಂ ದೊರೆ ಮೀರ್ ಉಸ್ಮಾನ್ ಅಲಿಖಾನ್ ಬಹದ್ದೂರ್  (ಇದು ನಿಜಾಮನ ಪೂರ್ಣ ಹೆಸರು)  ಆಡಳಿತದಲ್ಲೇ ಇದ್ದವು. ಹತ್ತು ಹಲವು ಹೋರಾಟಗಳ ಫಲವಾಗಿ ೧೭.೦೯.೧೯೪೮ ರಂದು ಭಾರತದ ಒಕ್ಕೂಟಕ್ಕೆ ಇವು ಸೇರಿದವು. ಒಂದಲ್ಲ, ಎರಡಲ್ಲ ಅಜಮಾಸು ಆರುನೂರು ವರ್ಷಗಳ ಸುದೀರ್ಘ ಕಾಲದ ದೇಶಿಯ ಪರಕೀಯತೆಯಲ್ಲಿದ್ದುದು ಹೈದ್ರಾಬಾದ ಕರ್ನಾಟಕ. ಸಹಜವಾಗಿ ಉರ್ದು, ದಖನಿ, ಮೋಡಿ, ಮರಾಠಿ, ತೆಲುಗು, ಕನ್ನಡಗಳ ಬಹುಭಾಷಾ ಸೌಹಾರ್ದತೆ, ಸಾಮಾಜಿಕ ಸೌಂದರ್ಯ ಸಂಸ್ಕೃತಿಯ ಚಾರಿತ್ರಿಕ ನೆಲ ಇದು. ಇವತ್ತಿಗೂ ದಖನಿ ಛಾಯೆಯ ಉರ್ದು, ಮರಾಠಿ ಮೋಡಿಯ ಹಿಂದಿ ಭಾಷಾ ಸಂಸ್ಕೃತಿಗಳು  ಇಲ್ಲಿನ ಕನ್ನಡದ ಬದುಕಿನ ತುಂಬೆಲ್ಲ ಹಾಸು ಹೊಕ್ಕಾಗಿವೆ.  ಘಮ ಘಮಿಸುವ ಸೂಜಿಮಲ್ಲಿಗೆಯ ಹೂವರಳಿದಂತಹ ಖಮ್ಮನೆಯ ಉರ್ದು ಮಾತಾಡುವ ಮುಸ್ಲಿಮೇತರ ಅನೇಕರು ಇಲ್ಲಿರುವುದು ಸರ್ವೇಸಾಮಾನ್ಯ. ಅದೇ ನಮ್ಮ ಬೀದರ ಕನ್ನಡದ ರಾಗಮಾಧುರ್ಯವೇ ತುಸು ಭಿನ್ನ. ಅದನ್ನವರು ಎನ್ಕಿ, ತ್ವಾಡೇ ಫರಕ್ ಅಂದಾರು… ” ಯಾನ ಮಾಡ್ಲತ್ತರಿ… ಹೊಂಟೀರಿ… ನೀ ಹೋರಿ… ನಾ.. ಬರ್ತಾ…”  ಹೀಗೆ ಅದರ ದೇಸಿಯತೆಯ ಜೀವಧ್ವನಿ. ಕಲಬುರ್ಗಿಯದು ಹಾಂಗಲ್ಲ… ಯವ್ವಾ, ಯಪ್ಪಾ, ಯಣ್ಣಾ, ಯಕ್ಕಾ ಎನ್ನುವ ಮೊಗಲಾಯಿಯ ಜವಾರಿ ಬನಿ.  ನಿಜಾಮನ ಕಾಲದಲ್ಲಿ ಭಾಳ ಸಂಖ್ಯೆಯ ಸೂಫಿ – ಸಂತರು, ತತ್ವಪದಗಳ ಅನುಭಾವಿಗಳು ಮೈ ಮನಸು ಬಿಚ್ಚಿ ಕನ್ನಡದಲ್ಲಿ ಮಹಾಕಾವ್ಯಗಳನ್ನೇ ರಚಿಸಿದ್ದಾರೆ. ಹಾಗೆಂದು  ಆಳರಸ ನಿಜಾಮ ಇವರಿಗೆ ಪ್ರೇರಕ, ಪ್ರೋತ್ಸಾಹಕನೇನು ಆಗಿರಲಿಲ್ಲ.‌ ಆದರೆ  ಸೂಫಿ, ಅವಧೂತ, ಆರೂಢ ಕವಿಗಳಿಗೆ ಯಾವುದೇ ಘೋಷಿತ ಇಲ್ಲವೇ ಅಘೋಷಿತ ನಿರ್ಬಂಧಗಳನ್ನು ಆತ ವಿಧಿಸಿರಲಿಲ್ಲ ಎಂಬುದು ಮುಖ್ಯ. ಜಂಗಮನಾಗಬೇಕಾದರೆ / ಮನಲಿಂಗ ಮಾಡಿಕೊಂಡಿರಬೇಕು// ಅಂತ ಚನ್ನೂರ ಜಲಾಲ ಸಾಹೇಬ ಹಾಡಿದರೆ ಫಕೀರನಾಗಬೇಕಾದರೆ/ ಮನಃ ಧಿಕ್ಕಾರ ಮಾಡಿಕೊಂಡಿರಬೇಕು// ಇದು ಕಡಕೋಳ ಮಡಿವಾಳಪ್ಪನವರು ಜಲಾಲ ಸಾಹೇಬರಿಗೆ ಕೊಡುವ ಉತ್ತರ. ಹೀಗೆ ಇಬ್ಬರದು ಬೇರೆ ಬೇರೆ ಮತ ಧರ್ಮಗಳ ಒಂದೇ ಗುರುಮಾರ್ಗ ಪಂಥದ ಸೌಹಾರ್ದಯುತ, ಸಾಂಸ್ಕೃತಿಕ ಸಂವಾದದ ಸಣ್ಣದೊಂದು ಝಲಕ್. ಇಂಥ ನೂರಾರು ನಿದರ್ಶನಗಳು ಇಲ್ಲಿವೆ.  ಸಬ್  ಕಹತೆ ಹೈ ಈಶ್ವರ ಅಲ್ಲಾ ಅಲ್ಲಾ/ ಇದರ ಒಳಮರ್ಮ ಯಾರಿಗೂ ತಿಳಿದಿಲ್ಲಾ// ಹೀಗೆ ಉರ್ದು ಕನ್ನಡ ಮಿಶ್ರಿತ ಸಂಕರ ಪ್ರಜ್ಞೆಯಿಂದ ರೂಪುಗೊಂಡ ಅನೇಕ ತತ್ವಪದಗಳ ಭಾವ ಮತ್ತು ಭಾಷೆಯಲ್ಲಿ ಸಹೃದಯ ಸಮನ್ವಯತೆ ಸಾಧಿಸಿರುವುದನ್ನು ಗುರುತಿಸಬಹುದು . ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ಧರ್ಮಮುಮಂ/ ಪರ ವಿಚಾರಮುಮಂ// ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಕವಿರಾಜಮಾರ್ಗಕಾರನು ಹೇಳಿದ ಪರರ ಧರ್ಮ ಮತ್ತು ಪರರ ವಿಚಾರಗಳನ್ನು ಗೌರವಿಸುವುದೇ, ಮನುಷ್ಯ ಪ್ರೀತಿಯ ನಿಜದ ನೆಲೆಯ ಸಂಪತ್ತು. ನೃಪತುಂಗ ನೆಲದ ಇಂತಹ ಬೀಜದಮಾತುಗಳು ಇಡೀ ದೇಶಕ್ಕೇ ಇವತ್ತು ಹೆಚ್ಚು ಹೆಚ್ಚು ಅನ್ವಯಿಸಿ ಅನುಷ್ಠಾನಕ್ಕೆ ಬರಬೇಕಾಗಿದೆ. ಆಗ ಅದನ್ನು ದುರಿತ ನಿವಾರಕ ಕಾಲವೆಂದು ಕರೆಯಬಹುದು. ಬುದ್ಧಧರ್ಮದ ‘ಸಾರ’ ಸಾರುವ ಅಶೋಕ ಚಕ್ರವರ್ತಿಯ ‘ದೇವನಾಂಪ್ರಿಯ’ ಕುರುಹು ದೊರಕಿದ ಸನ್ನತಿ, ಘಟಿಕಾಲಯಗಳ ನಾಗಾವಿ, ಬಸವ ಅಲ್ಲಮರ ವಚನ ಚಳವಳಿಯ ಶಕ್ತಿಕೇಂದ್ರ,  ಸಂತ ಕಥನದ ಗೇಸುದರಾಜ್ ಬಂದೇನವಾಜ್, ಗಾಣಗಾಪುರದ ದತ್ತಾವಧೂತ,  ಮಹಾದಾಸೋಹಿ ಶರಣಬಸವೇಶ್ವರ,  ತತ್ವಪದಗಳ ಹರಿಕಾರ ಕಡಕೋಳ ಮಡಿವಾಳಪ್ಪ ಮತ್ತು ಅವರ ಅನೇಕ ಮಂದಿ ತತ್ವಪದಕಾರ ಶಿಸುಮಕ್ಕಳು, ಊರೂರಿಗೂ ದೊರಕುವರು.   ಇಂತಹ ನೂರಾರು ಮಂದಿ ಹಿಂದೂ ಮುಸ್ಲಿಂ ಸೂಫಿ ಸಂತರು ಬಾಳಿ ಬದುಕಿದ ಕಲ್ಯಾಣ ಕರ್ನಾಟಕವು ಕನ್ನಡ ಸಂಸ್ಕೃತಿ ಮತ್ತು  ಸೌಹಾರ್ದತೆಯ ಸಾಕ್ಷಿಪ್ರಜ್ಞೆಯೇ ಆಗಿದೆ. ಇವತ್ತಿಗೂ ಸಾವಳಗಿಯ ಶಿವಲಿಂಗೇಶ್ವರ ಜಾತ್ರೆಯಲ್ಲಿ ಗದ್ದುಗೆಗೆ ಮುಸ್ಲಿಂ ಧರ್ಮದ ಹಸಿರು ಗಲ್ಲೀಫದ ಗೌರವ ಸಲ್ಲುತ್ತದೆ. ಅಲ್ಲಿನ ಸ್ವಾಮೀಜಿಯವರು ಸುತ್ತುವ ರುಮಾಲು ಹಸಿರು. ಲಾಂಛನಕ್ಕೆ ಶರಣೆಂಬೆನೆಂಬ ಅಂತಃಕರಣದ ಅನುಭಾವ ಪರಂಪರೆ ಅದು. ಇಂದಿಗೂ ಕಲಬುರ್ಗಿಯ ಬಂದೇನವಾಜ ಉರುಸಿನಲ್ಲಿ, ನಿತ್ಯದ ದರ್ಗಾದ  ದರುಶನದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಹಿಂದೂಗಳ ಸಕ್ಕರೆ ಲೋಬಾನದ ಅಕ್ಕರೆ. ಇದು ನಿಸರ್ಗ ಸುಭಗ ಕೋಮು ಸೌಹಾರ್ದತೆಯ ಕುರುಹು. ಆದರೆ ಇತ್ತೀಚೆಗೆ  ಕೆಲವು ಮತಾಂಧರಿಂದ ಚುನಾವಣಾ ರಾಜಕಾರಣದ ಕೊಳಕು ಹುನ್ನಾರಗಳು ಸೈತಾನ ನೃತ್ಯದ ದೆವ್ವಗಾಳಿಗಳಾಗಿ ರಕ್ಕಸತನದಿಂದ ಬೀಸುತ್ತಿರುತ್ತವೆ. ಶತಮಾನಗಳಿಂದ ಕೃಷ್ಣೆಯ ಒಂದು ದಡ ಹರಿದಾಸ ಸಾಹಿತ್ಯ, ಮತ್ತೊಂದು ದಡ ತತ್ವಪದ ಮತ್ತು ವಚನಗಳ  ಬಹುತ್ವದ ಜೀವತುಂಬಿ ಹರಿದಿದೆ. ” ಓಂ ಏಕ್ ಲಾಖ್ ಅಸ್ಸೀ ಹಜಾರ ಪಾಚೋಪೀರ್ ಮೌನ್ಧೀನ್ ” ತಿಂಥಣಿ ಮೋನಪ್ಪಯ್ಯನ  ಇಂಥ ನುಡಿಗಟ್ಟುಗಳು  ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹಿಡಿದ ನಿಲುಗನ್ನಡಿ. ಎಡ – ಬಲ ಪಂಥಗಳೆರಡರ ಅತಿರೇಕಗಳನ್ನು ಮೀರಿದ ಲೋಕಪಂಥದ ಬೆರಗಿನ ಬಯಲು ನಮ್ಮ ಕಲ್ಯಾಣ ಕರ್ನಾಟಕದ ನೆಲ. ಅಫಜಲಪುರ, ಆಳಂದ, ಜೇವರ್ಗಿ, ಶಹಾಪುರ ಹೀಗೆ ಕಲ್ಯಾಣ ಕರ್ನಾಟಕದ ಅನೇಕ ಭಾಗಗಳಲ್ಲಿ ಹಿಂದೂಗಳ ಮನೆದೇವರುಗಳೆಂದರೆ ಸೂಫಿ ಸಂತರು. ಕರ್ಜಗಿಯ ಸೈಫುಲ್ಲಾ ಮುಲ್ಕ ದರ್ಗಾ, ನೀಲೂರು ಮಹಬೂಬ ಸುಬಾನಿ ದರ್ಗಾ, ಹೈದ್ರಾ ದರ್ಗಾಗಳ ಸೂಫಿ ದೈವಗಳು ಬಹುಪಾಲು ಹಿಂದೂ ವೀರಶೈವ, ಲಿಂಗಾಯತರ ಪಾಲಿನ ಉಪಾಸನ ದೇವರುಗಳು. ಹಾಗೇನೇ ಅನೇಕ ಮಂದಿ ಮುಸಲ್ಮಾನರು ಎಲ್ಲ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ. ಭಸ್ಮವಿಭೂತಿ ಧರಿಸುತ್ತಾರೆ. ಮೊಹರಮ್ ಹಬ್ಬಗಳಲ್ಲಿ ಫಕೀರರಾಗಿ ಬಹುಪಾಲು ಮುಸ್ಲಿಮೇತರರು ಅಲಾಯಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೀಗೆ ಭಾವೈಕ್ಯತೆಗೆ ಕಲ್ಯಾಣ ಕರ್ನಾಟಕ ಹೇಳಿ ಮಾಡಿಸಿದ ಹೆಸರು. ಒಂದೆರಡು ಜಿಲ್ಲೆಯಲ್ಲಿ ಹರಿದಾಡುವ ಕಾವೇರಿ ಸಮಗ್ರ ಕನ್ನಡನಾಡಿನ ಜೀವನದಿಯಾಗಿ ಅಲ್ಲಿನ ಸಿನೆಮಾಗಳಿಗೆ, ಸಾಹಿತಿಗಳಿಗೆ ಗೋಚರಿಸುತ್ತಾಳೆ. ಆದರೆ ನಮ್ಮಭಾಗದ ಆರೇಳು ಜಿಲ್ಲೆಗಳ ತುಂಬೆಲ್ಲ ತುಂಬಿ ತುಳುಕುವ, ಇಲ್ಲಿನ ಜನಜೀವನದ ಸಮಗ್ರ ಬದುಕನ್ನು ಸಮೃದ್ಧಗೊಳಿಸುವ ಕೃಷ್ಣೆ, ಭೀಮೆಯರು ಬೆಂಗಳೂರು ಕೇಂದ್ರಿತ ಸಾಂಸ್ಕೃತಿಕ ಲೋಕಕ್ಕೆ, ಸಿನೆಮಾ ಜಗತ್ತಿಗೆ ಇವು ಬರೀ ನದಿಗಳಾಗಿಯೇ ಗೋಚರ. ಈ ಬಗೆಯ ಸಾಂಸ್ಕೃತಿಕ ರಾಜಕಾರಣ ಕುರಿತು ತಲೆ ಕೆಡಿಸಿಕೊಳ್ಳದ ಮುಗ್ಧ ಮೊಗಲಾಯಿ ಮಂದಿ ನಮ್ಮವರು. ನಿಜವಾದ ರಾಜಕೀಯಪ್ರಜ್ಞೆ ಎಂಬುದರ ಅರಿವಿರದೇ ಥೇಟ್ ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ಮಾತಾಡುವುದನ್ನೇ ರಾಜಕೀಯಪ್ರಜ್ಞೆ ಎಂದು ನಂಬಿರುವ ಹುಂಬತನ ನಮ್ಮವರದು. ಅತಿಯಾದ ಸಿಹಿ, ಅತಿಯಾದ ಖಾರಪ್ರಿಯರು ಇವರು. ಹೀಗೆ ಎರಡರಲ್ಲೂ  ಅತಿರೇಕಗಳು.  ಕೃಷ್ಣೆ ಮೈತುಂಬಿ ಹರಿದರೂ ಕಷ್ಟಗಳು ಬಗೆ ಹರಿಯಲಿಲ್ಲ. ಅಷ್ಟಕ್ಕೂ ಕೃಷ್ಣೆ ರೈತರ ಹೊಲಗಳಿಗಿಂತ ಕೆಲಸಗೇಡಿ ಹಳ್ಳ್ಳ ಕೊಳ್ಳಗಳಲ್ಲೇ ಹೆಚ್ಚು ಹರಿಯುತ್ತಿರುವಳು. CADA  ಎಂಬುದು ಈ ಭಾಗದಲ್ಲಿ ಕಿಲುಬು ಕಾಸಿನಷ್ಟು ಕೆಲಸ ಮಾಡಿಲ್ಲ.   ೩೭೧ ಜೆ ‘ಲಾಗೂ’ ಆದರೂ ನಮ್ಮ ಎಲ್ಲ ಸಂಕಟಗಳು ಹಾಗೇ ಇವೆ. ನಾವು ಹಕ್ಕಿನೊಡೆಯರಾಗಿ ಮೂಲ ಸೌಲಭ್ಯಗಳನ್ನು ಪಡೆಯದೇ ಬಡವಾದವರು. ಕನ್ನಡನಾಡಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ನಾವು ಹಿಂದುಳಿದವರಲ್ಲ, ಹಿಂದುಳಿಸಲ್ಪಟ್ಟವರು. ಎಲ್ಲಕ್ಕೂ ” ಜಾಂದೇ ಚೋಡೋ ” ಎಂದು ಉದಾಸೀನ ತೋರುವ ಅಸಡ್ಡೆ ಜಾಯಮಾನ ನಮ್ಮದು. ಜವಾರಿ ಮುಗ್ದತೆ ಉಳಿಸಿಕೊಂಡುದೇ ನಮ್ಮ ಹೆಗ್ಗಳಿಕೆ. ಕಲಬುರ್ಗಿ ಹೆಸರಿನೊಂದಿಗೆ ಅಂಟಿಕೊಂಡಿರುವುದು ಕೆಂಡದ ಬಿಸಿಲು ಮತ್ತು ತೊಗರಿ.  ಕಲಬುರ್ಗಿಯಲ್ಲಿ ಸರ್ಕಾರದ ಖರೀದಿಗಿಂತಲೂ ಭರ್ಜರಿಯಾಗಿ ಖಾಸಗಿ ಖರೀದಿದಾರರ  ಕಿಗ್ಗಳದ ರೇಟುಗಳಿಗೆ ರೈತರು ತೊಗರಿ ಮತ್ತು ಹತ್ತಿ ಮಾರುವಂತಾಗಿದೆ. ಸರಕಾರ ಎಂಬುದರ ದರಕಾರವಿಲ್ಲದೇ ಹೆದ್ದಾರಿಗಳ  ಬಾಜೂಕೆ ರಾಜಾರೋಷವಾಗಿ ಖಾಸಗಿ ಸಾಹುಕಾರರು  ತಕ್ಕಡಿ ಕಲ್ಲುಗಳನ್ನಿಟ್ಟುಕೊಂಡು ಮುಗ್ದರೈತರು ಬೆಳೆದ ಹತ್ತಿ, ತೊಗರಿ, ಇತರೆ ಫಸಲುಗಳನ್ನು ಕಾಟಾ ಖರೀದಿ ಮಾಡುವ ಕಾಳದಂಧೆ ಯಾವೊಂದು ಎಗ್ಗಿಲ್ಲದೇ ಜಗ್ಗಿ ಪ್ರಮಾಣದಲ್ಲೇ ಜರುಗುತ್ತಲಿರುತ್ತವೆ. ಅದೇ ರಸ್ತೆಗಳಲ್ಲಿ ಮಂತ್ರಿ, ಎಮ್ಮೆಲ್ಲೆ, ಎಂಪಿ, ಇತರೆ ರಾಜಕಾರಣಿಗಳು ಅದನ್ನು ನೋಡುತ್ತಲೇ ಓಡಾಡುತ್ತಾರೆ. ರೈತರನ್ನು ಲೂಟಿ ಮಾಡುವ ಈ ಹಗಲು ದರೋಡೆಕೋರ ದಂಡನ್ನು ಇದುವರೆಗೂ ಯಾವೊಬ್ಬ ತೀಸ್ಮರ್ಕ ರಾಜಕಾರಣಿ ತಡವಿಕೊಂಡ ನಿದರ್ಶನವಿಲ್ಲ. ಇಂತಹ ಹತ್ತು ಹಲವು ಶೋಷಣೆಗಳ ಬಲಿಪಶುಗಳಾಗಿರುವ ನಮ್ಮವರನ್ನು ಹೆಸರಲ್ಲಿ ಮಾತ್ರ ಕಲ್ಯಾಣ ಗೊಳಿಸಿದ್ದಾಗಿದೆ.  ಹೈದ್ರಾಬಾದ್ ಕರ್ನಾಟಕ ಹೆಸರಲ್ಲಷ್ಟೇ ಬದಲಾದರೆ ಸಾಕೇ.? ಖರೇ ಖರೇ ಕಲ್ಯಾಣ ಕರ್ನಾಟಕ ಆಗೋದು ಯಾವಾಗ ***********************************************   

ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಘೋಷಣೆಗಳ ನಡುವೆ ರೂಪಕಗಳಿಗೂ ಕಾತರಿಸುವ ಕಲ್ಮೇಶ ತೋಟದ್  ಕವಿತೆಗಳು ಕಲ್ಮೇಶ ತೋಟದ್ . ಮೂರು ಗೇಣಿನಷ್ಟೇ ಅಂತರ ಭಾಸವಾಗುತ್ತಿದ್ದ ಬಾನಹಂದರ ನೋಡಲದೆಷ್ಟು ಸುಂದರ ಆಕಾಶ ಭೂಮಿ ಮಂದಾರ ಅಪ್ಪನ ಹೆಗಲದು ಸುಂದರ ಇಂಥ ಭಾವುಕ ಸಾಲುಗಳಲ್ಲಿ ಅಪ್ಪನ ಹೆಗಲನ್ನು ವರ್ಣಿಸಿ ಅಪ್ಪನನ್ನು ಕುರಿತಂತೆ ಈವರೆಗೂ ಇದ್ದ ಇಮೇಜುಗಳಿಗೆ ಮತ್ತೊಂದು ಹೊಸ ರೂಪಕವನ್ನು ಕೊಡಮಾಡಿರುವ ೨೬ರ ಹರಯದ ಯುವ ಕವಿ ಕಲ್ಮೇಶ ತೋಟದ ಅವರ ಕವಿತೆಗಳನ್ನು ಪರಿಚಯಿಸುವುದಕ್ಕೆ ಸಂತೋಷ ಮತ್ತು ಸಂಭ್ರಮಗಳು ಮೇಳೈಸುತ್ತವೆ.  “ಕೌದಿ” ಶೀರ್ಷಿಕೆಯಲ್ಲಿ ಈಗಾಗಲೇ ಒಂದು ಸಂಕಲನ ಪ್ರಕಟಿಸಿರುವ ಈ ಕವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಸ್ನಾತಕೋತ್ತರ ಪದವಿ ಪಡೆದು ಸದ್ಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಕಲ್ಮೇಶ ತೋಟದ ತಮ್ಮ ಕವನ ಸಂಕಲನಕ್ಕೆ ಕವಿಯ ಮಾತು ಬರೆಯುವಾಗ ಹೀಗೆ ಟಿಪ್ಪಣಿಸುತ್ತಾರೆ; “ಅವ್ವ ಹಸಿದ ಬೆಕ್ಕಿನ ಮರಿಯೊಂದು ಕಂಡರೆ ಹಿಂದೆ ಮುಂದೆ ನೋಡದೆ ಒಂದಷ್ಟು ಹಾಲು ಹಾಕುತ್ತಾಳೆ. ನಾಯಿ ಕಂಡರೆ ಅನ್ನ ಹಾಕುತ್ತಾಳೆ. ಹಸು ಕಂಡರೆ ಒಂದು ರೊಟ್ಟಿ ಕೊಟ್ಟು ಬೆನ್ನು ಸವರುತ್ತಾಳೆ‌. ಪಕ್ಷಿಗಳಿಗೆ ಕಂಪೌಂಡ್ ಮೇಲೆ ಹಸನು ಮಾಡಿ ಉಳಿದ ಕಾಳು ಕಡ್ಡಿ ಚಲ್ಲುತ್ತಾಳೆ. ತುಳಸಿ ಗಿಡದ ಕುಂಡಲಿ ಪಕ್ಕ ಇರುವೆಗಳಿಗೆ ಸಕ್ಕರೆ ಹರವುತ್ತಾಳೆ. ಕೂದಲು, ಪಿನ್ನು ಮಾರಲು ಬರುವ ಮಹಿಳೆಯರಿಗೆ ತಾನಾಗಿಯೇ ಕುಡಿಯಲು ನೀರು ಬೇಕೆ ಎಂದು ಕೇಳಿ ನೀರು ಕೊಡುತ್ತಾಳೆ. ಇಷ್ಟೆಲ್ಲ ಮಾಡಿದ್ದಕ್ಕೆ ಆಕೆ ಫೋಟೋ ಕ್ಲಿಕ್ಕಿಸಿಕೊಂಡೋ, ಸೆಲ್ಫಿ ತೆಗೆದುಕೊಂಡು ಸಾಕ್ಷಿ ನೀಡುವುದಿಲ್ಲ. ಏನೂ ಮಾಡಿಯೇ ಇಲ್ಲವೆಂಬಂತೆ ಎಲ್ಲವನ್ನು ಮರೆತು ಮತ್ತೆ ನಾಳೆಗೆ ಸಿದ್ಧಳಾಗುತ್ತಾಳೆ”. ಫೇಸ್ಬುಕ್ ಪುಟ ತೆರೆದರೆ ಸಾಕು, ಸುಮ್ಮ ಸುಮ್ಮನೇ ಪಟ ಬದಲಿಸುವ, ಸಣ್ಣ ಪುಟ್ಟ ಸಂಗತಿಗಳನ್ನೂ ಎಂಥದೋ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವ ಸೆಲ್ಫಿ ಹುಚ್ಚಿನವರು ಗಮನಿಸಲೇ ಬೇಕಾದ ಮತ್ತು ಅನುಸರಿಸಲೇ ಬೇಕಾದ ಸಾಲುಗಳು ಇವು. ತಮ್ಮ ಪಾಡಿಗೆ ತಾವು ಮಾನವೀಯ ಕೆಲಸಗಳನ್ನು ಮಾಡುತ್ತಿದ್ದರೂ ತೋರಿಸಿಕೊಳ್ಳದೇ ಹೇಳಿಕೊಳ್ಳದೇ ತಮ್ಮಲ್ಲೇ ಸುಖ ಕಾಣುತ್ತಿರುವವರನ್ನು ನಮ್ಮ ಫೇಸ್ಬುಕ್ಕಿಗರು ಗಮನಿಸದೇ ಇರುವುದು ಇದಕ್ಕೆ ಕಾರಣ. ಕವಿಯೆಂದು ಬೀಗುತ್ತಿರುವ ಹಲವರು ಮೊದಲು ತಮ್ಮ ಸುತ್ತ ಇರುವ ಜನ ಹೇಗೆ ಯಾವುದಕ್ಕೆ ಪ್ರತಿಕ್ರಯಿಸುತ್ತಾರೆ ಎನ್ನುವುದನ್ನು ಕಂಡುಕೊಳ್ಳದೇ ಅಂದು ಕೊಂಡದ್ದನ್ನೇ ಕಾವ್ಯ ಎಂದು ಬರೆಯುವಾಗ ಈ ಕವಿಯ ಈ “ನೋಟ” ಅವರ ಕವಿತೆಗಳಲ್ಲೂ ಚಾಚಿವೆ. “ಸರ್ಕಾರಿ ಬಸ್ಸಿನ ಕೊನೆಯ ಗಿರಾಕಿ” ಕವಿತೆ ಕೂಡ ಇಂಥದೇ ಬೆರಗಿನ ನೋಟದಲ್ಲೇ ಅರಳುತ್ತದೆ ಮತ್ತು ನಾವೆಲ್ಲರೂ ನೋಡಿ ಗಮನಿಸದೇ, ಗಮನಿಸಿದ್ದರೂ ತುಲನೆ ಮಾಡದ ಸಂಗತಿಗಳನ್ನು ಚಿತ್ರಿಸುತ್ತದೆ. ಕಣ್ಣಿಗೆ ಕಂಡದ್ದನ್ನು ಕಂಡಹಾಗೆ ಬರೆಯುತ್ತಿದ್ದ ಕವಿ ಒಮ್ಮೆಲೇ “ಅಜ್ಜನ ದೋತ್ರಕ್ಕೆ ಎಷ್ಟೊಂದು ನೆರಿಗೆಗಳು ಥೇಟ್ ಅವನ ಮುಖದ ಮೇಲಿನಂತೆ” ಎಂದು ಹೇಳುತ್ತ ರೂಪಕದ ಸಾಧ್ಯತೆಯನ್ನು ತೋರುತ್ತಾರಲ್ಲ, ಈ ಇಂಥ ಯತ್ನಗಳೇ ನಾಳೆಯ ಇವರ ಕವಿತೆಗಳನ್ನು ಎದುರು ನೋಡಲು ಪ್ರೇರೇಪಿಸುತ್ತದೆ. “ರಾಮನಾದರೂ ದಕ್ಕಲಿ, ರಹೀಮನಾದರೂ ದಕ್ಕಲಿ ಬಿಕ್ಕಿ ಅಳುವ ಕಂದನ , ಕಣ್ಣೀರು ಕೊಂಚ ಒರೆಸಲಿ” “ದೇವರು ತುಂಬ ದೊಡ್ಡವನು” ಹೆಸರಿನ ಕವಿತೆಯ ಆಶಯ ಮಾನವೀಯ ಗುಣ ಇಲ್ಲದವರಿಗೆ ಸುಲಭಕ್ಕೆ ದಕ್ಕದ್ದು ಮತ್ತು ಸಿದ್ಧಿಸದ್ದು ಕೂಡ. ಏಕೆಂದರೆ ತಮ್ಮ ತಮ್ಮ ದೇವರು ಧರ್ಮ ಜಾತಿಗಳನ್ನೇ ದೊಡ್ಡದೆಂದು ಭಾವಿಸುವವರ ನಡುವೆ ಇಂಥ ಔದಾರ್ಯ ಮತ್ತು ಆತ್ಮ ನಿರ್ಭರತೆ ಇಲ್ಲದ ಯಾರೂ ಕವಿಯೆಂದು ಹೇಳಿಕೊಂಡ ಮಾತ್ರಕ್ಕೇ ಕವಿಯಾಗುವುದಿಲ್ಲ, ಅನ್ಯರ ಕಷ್ಟವನ್ನೂ ತನ್ನದೆಂದು ಭಾವಿಸದವನು ಕವಿಯಾಗುವುದು ಆಗದ ಮಾತು. ಆದರೆ ಇಷ್ಟು ಚಂದದ ದಾರಿಯಲ್ಲಿ ನಡೆದಿದ್ದ ಈ ಕವಿತೆ ಅಂತ್ಯದಲ್ಲಿ ಹೇಳಿಕೆಯಾಗಿ ಬದಲಾಗುತ್ತದೆ; “ಕಟ್ಟುವುದೇ ಆದರೆ ಒಂದು ಶಾಲೆಯನ್ನೊ, ಶೌಚಗೃಹವನ್ನೊ ಕಟ್ಟೋಣ ಹಸಿವು, ಅಜ್ಞಾನ, ಮಾನದ ಮುಂದೆ ಯಾವ ದೇವರೂ ದೊಡ್ಡವನಲ್ಲ ಅಲ್ಲವೆ…” ಇಂಥ ಹೇಳಿಕೆಗಳು ಮತ್ತು ಘೋಷಣೆಗಳು ಒಂದು ವರ್ಗದ ಮನಸ್ಥಿತಿ ಇದ್ದವರಿಗೆ “ಹಿತ” ಅನ್ನಿಸುವದರಿಂದ ಮತ್ತು ಫೇಸ್ಬುಕ್ ಪುಟಗಳ ತುಂಬ ಅಂಥವರದೇ ಲೈಕು ಕಮೆಂಟುಗಳು ತುಂಬಿಕೊಳ್ಳುವುದರಿಂದ ಯುವ ಕವಿಗಳು ಕ್ಷಣದ ಹೊಗಳಿಕೆಗಾಗಿ ಹೇಳಿಕೆಗಳಲ್ಲೋ ಘೋಷಣೆಗಳಲ್ಲೋ ಕವಿತೆಯನ್ನು ಧ್ವನಿಸದೇ ಪ್ರತಿಮೆ ರೂಪಕಗಳ ಮೂಲಕವೇ ತಮ್ಮ ಅಭಿವ್ಯಕ್ತಿಯನ್ನು ಪ್ರಚುರಗೊಳಿಸುವ ಅಗತ್ಯತೆ ಇದೆ. “ಒಂದರೆಘಳಿಗೆಯ ನಿದ್ದೆ” ಕವಿತೆ ಕೂಡ ಮೇಲ್ನೋಟಕ್ಕೆ ರಿಯಲ್ ಮತ್ತು ವರ್ಚ್ಯುಯಲ್ ಪ್ರಪಂಚಗಳ ಡಿಸೆಕ್ಷನ್ ಥರ ಕಂಡರೂ ಆ ಡಿಸೆಕ್ಷನ್ನಿಗೆ ಬೇಕಾದ ಪರಿಕರಗಳನ್ನು ಇಟ್ಟುಕೊಳ್ಳದೇ ಥಟ್ಟನೇ ಹೊಳೆದ ಜನ ಮನ್ನಣೆಗೆ ಬರೆದ ಸಾಲುಗಳಾಗಿ ಬದಲಾಗಿವೆ. ಈ ಎರಡೂ ಕವಿತೆಗಳ ಆತ್ಮವನ್ನು ಬೆಳಗಿ ದೈಹಿಕ ನ್ಯೂನತೆಗಳನ್ನು ಸರಿಪಡಿಸಿದರೆ ಎರಡೂ ಕೂಡ ಉತ್ತಮ ರಚನೆಗಳಾಗುವ ವಸ್ತು ಹೊಂದಿವೆ. “ಸಾವು ಅಂತಿಮ ಎನಿಸಿದಾಗ ನೀನೊಮ್ಮೆ” ಎಂಬ ಸಾಲುಗಳನ್ನು ಪ್ರತಿ ಅನುಪಲ್ಲವಿಯಲ್ಲಿ ಮತ್ತೆ ಮತ್ತೆ ಧೇನಿಸುವ ಕವಿತೆ ಅದ್ಭುತ ಚಿತ್ರಗಳನ್ನು ಚಿತ್ರಿಸುತ್ತಲೇ ನಿಜಕ್ಕೂ ಬದುಕಿಗೆ ಬೇಕಾದ ಪರಿಕರಗಳನ್ನು, ಜರೂರು ಬೇಕಿರುವ ಆತ್ಮ ಸಾಂಗತ್ಯದ ಅನಿವಾರ್ಯಗಳನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಬದುಕಿದ್ದಷ್ಟೂ ದಿನ ಅರ್ಥ ಪೂರ್ಣವಾಗಿ ಬದುಕಬೇಕಿರುವ ಹೃದಯವಂತಿಕೆಯ ಚಿತ್ರಣವಾಗಿದೆ. ಆದರೆ ಈ ಕವಿ ಏಕೋ ಘೋಷಣೆಗೋ ಅಥವ ಹೇಳಿಕೆಗೋ ಹೆಚ್ಚು ಮಹತ್ವ ಕೊಟ್ಟ ಕಾರಣಕ್ಕೆ ಕಡೆಯ ಸಾಲುಗಳಲ್ಲಿ ಕವಿತೆ ತಟಸ್ಥವಾಗಿ ಬಿಡುತ್ತದೆ. “ಜಿನುಗುವ ಮಳೆಯಲ್ಲಿ ಬಿಕ್ಕುವ ಹಳೆ ನೆನಪುಗಳ ಕೆಣಕಬೇಡ ಸಖಿ” ಎಂದು ಆರಂಭವಾಗುವ ತಲೆ ಬರಹವಿಲ್ಲದ ಪದ್ಯದ ಆಶಯ ಮಹತ್ವದ್ದು. ಘೋಷಣೆ ಅಥವ ಹೇಳಿಕೆಗಳಿಲ್ಲದ ನಿಜದ ಮಾತುಗಳೇ ತುಂಬಿರುವ ಪದ್ಯ ಹರೆಯದ ಹುಡುಗರು ಸಾಮಾನ್ಯ ಸೃಷ್ಟಿಸುವ ಪ್ರೀತಿ, ಪ್ರೇಮಗಳ ಕುರಿತಾದ ಅಂಶಗಳಿದ್ದರೂ ಭೋರ್ಗರೆತ ಮತ್ತು ಸುಳಿ ತಿರುವುಗಳ ಚಿತ್ರಣವಿಲ್ಲದೆಯೂ ಸರಾಗ ಹರಿದು ಕಡಲು ಸೇರುವ ನದಿಯ ಹರಿವಂತೆ ಭಾಸವಾಗುತ್ತದೆ. “ಹುಡುಕುತ್ತಲೇ ಇದ್ದಾಳೆ ಅವ್ವ ಕುಂಕುಮದ ಬಟ್ಟಲಲ್ಲಿ, ಅರಿಶಿಣದ ಬೇರಿನಲ್ಲಿ ಮಲ್ಲಿಗೆ ಹೂ ದಾರದಲ್ಲಿ ಬಳೆಯ ಸದ್ದಿನ ಗುಂಗಿನಲ್ಲಿ ಗೆಜ್ಜೆನಾದದ ಸದ್ದಿನಲ್ಲಿ…..” ಇಲ್ಲವಾದ ಅಪ್ಪನನ್ನು ಸಾರ್ಥಕವಾಗಿ ಚಿತ್ರಿಸಿದ ಸಾಲು ಇಷ್ಟವಾಗುತ್ತದೆ. ಆದರೆ ಇನ್ನೂ ಬೆಳಸಬಹುದಾಗಿದ್ದ ಈ ಪದ್ಯ ಅವಸರದಲ್ಲಿ ಬರೆದಂತೆ ಕಾಣುತ್ತದೆ. “ಎರೆಮಣ್ಣ ನೆಲದಲ್ಲಿ ತರತರದ ಸೊಬಗಲ್ಲಿ ಮೂಡಗಾಳಿಯ ಎದುರು, ಮಸಡಿ ಬಿರಿತರು ಕೂಡ ಬನ್ನಿಗಿಡದಡಿಯ ಕಲ್ಲು ಪಾಂಡವರಿಗೆ ಕೈ ಮುಗಿದು ದೆವ್ವದ ಗಾಳಿಗೆ ಎದೆಯೊಡ್ಡಿ ನಿಂತ ಭೂತಾಯಿ ಇವಳು ಜನಕರಾಜನ ಮಗಳು..” ಎನ್ನುವ ಸಾಲುಗಳನ್ನು ಓದುತ್ತಿದ್ದಾಗ ಯಾಕೋ ಲಂಕೇಶರ ಅವ್ವ ಪದ್ಯ ಬೇಡ ಬೇಡ ಎಂದರೂ ನೆನಪಾಗುತ್ತದೆ. ಕನ್ನಡದ ಕವಿತೆಗಳೇ ಹಾಗೆ, ಒಂದರ ನೆರಳು ಮತ್ತೊಂದರ ತಲೆಗೆ ತಾಕುತ್ತದೆ, ಮಗದೊಂದು ತೋರಿದ ಝಳಕ್ಕೆ ಎಗ್ಗು ಸಿಗ್ಗಿಲ್ಲದೇ ಅರಳಿಕೊಳ್ಳುತ್ತದೆ, ಹೊರಳಿಕೊಳ್ಳುತ್ತದೆ. ಶ್ರೀ ಕಲ್ಮೇಶ ತೋಟದ ಈಗಿನ್ನೂ ೨೬ರ ಹರಯದ ಯುವಕ. ಅವರು ಸಾಗಬೇಕಿರುವ ದಾರಿ ಮತ್ತು ಮುಟ್ಟ ಬೇಕಿರುವ ಗುರಿ ಬಹಳ ದೊಡ್ಡದಿದೆ. ಆತ್ಮ ಸಂಗಾತಕ್ಕೆ ಅನುಭವದ ಹಾದಿಯ ಎಡರು ತೊಡರುಗಳನ್ನು ಬಳಸುತ್ತಲೇ ಅವನ್ನೇ ಕವಿತೆಯ ರೂಪಕಗಳನ್ನಾಗಿ ಬಳಸುವ ಜಾಣ್ಮೆ ಮತ್ತು ಕಲೆ ಅವರು ಸಿದ್ಧಿಸಿಕೊಳ್ಳುತ್ತ ಇದ್ದಾರೆ ಎನ್ನುವುದು ಅವರ ರಚನೆಗಳ ಮೇಲ್ನೋಟದ ಓದಿನ ಫಲಶೃತಿ. ಇಂಥ ಕವಿಗಳು ಅವರಿವರು ಬೆನ್ನು ತಟ್ಟಿದರೆಂಬ ಖುಷಿಯಲ್ಲಿ, ಮೈ ಮರೆಯದೇ ತಮ್ಮ ಅನುಭವಕ್ಕೆ ಬಂದ ಸಂಗತಿಗಳತ್ತಲೇ ಕಿವಿ ಮೂಗು ಕಣ್ಣುಗಳನ್ನು ಕೀಲಿಸಿದರೆ ಮಾತ್ರ ಹೇಳಿಕೆಗಳಿಂದಲೂ ಘೋಷಣೆಗಳಿಂದಲೂ ಮುಕ್ತರಾಗಬಲ್ಲರು. ಆ ಅಂಥ ಶಕ್ತಿ ಇರುವ ಈ ಯುವಕವಿ ತಕ್ಷಣಕ್ಕಲ್ಲವಾದರೂ ನಿಧಾನದ ಓದಿನಿಂದ, ಪೂರ್ವ ಸೂರಿಗಳ ಒಡನಾಟದಿಂದ ಪಡೆಯಲಿ, ಪಡೆಯುತ್ತಾರೆ ಎನ್ನುವ ಹಾರೈಕೆಯ ಜೊತೆಗೇ ಅವರ ಆಯ್ದ ಐದು ಕವಿತೆಗಳನ್ನು ಕಾವ್ಯಾಸಕ್ತರ ಓದಿಗೆ ಶಿಫಾರಸು ಮಾಡುತ್ತಿದ್ದೇನೆ; ಕಲ್ಮೇಶ ತೋಟದ್ ಕವಿತೆಗಳು 1.ಸರ್ಕಾರಿ ಬಸ್ಸಿನ ಕೊನೆಯ ಗಿರಾಕಿ ಕಿಕ್ಕಿರಿದು ತುಂಬಿದ ವಾ.ಕ.ರ.ಸಾ.ಸಂ ಬಸ್ಸಿನಲ್ಲಿ ಎಷ್ಟೊಂದು ಮುದ್ರಣಗೊಳ್ಳದ ಬದುಕುಗಳಿವೆ ಬಸ್ಸು ತನ್ನ ಪಾಡಿಗೆ ತಾ ಹೊರಟಿರುತ್ತದಷ್ಟೆ ಒಳಗೆ ಅಲ್ಲಲ್ಲಿ ಒಂದಿಷ್ಟು ಗುಂಪುಗಳು ಮಾತಿಗಿಳಿದಿರುತ್ತವೆ ಎಷ್ಟೊಂದು ರಾದ್ಧಾಂತದ ಬದುಕು  ಪ್ರತಿಯೊಬ್ಬರು ಇನ್ನೊಬ್ಬರನ್ನು ದೂಷಿಸುವುದರಲ್ಲಿಯೇ ಮಗ್ನರಾಗಿದ್ದಾರೆ ಅಲ್ಲೊಂದು ಹಿರಿಯ ನಾಗರಿಕರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತ ಹುಡುಗರಿಗೆ ಕಾಲೇಜಿನ ಗೌಜು ಗದ್ದಲದ ಚಿಂತೆ ಅಲ್ಲೆ ಮುಂದೆ ಸೀಟು ಸಿಗದೆ ನಿಂತ ಮುದುಕನೊಬ್ಬ ಎಡಗಾಲನ್ನೊಮ್ಮೆ, ಬಲಗಾಲನ್ನೊಮ್ಮೆ ಬದಲಿಸುತ್ತ ದೇಹದ ಭಾರ ನಿಭಾಯಿಸುತ್ತಾನೆ ಅಜ್ಜನ ದೋತ್ರಕ್ಕೆ ಎಷ್ಟೊಂದು ನೆರಿಗೆಗಳು ಥೇಟ್ ಅವನ ಮುಖದ ಮೇಲಿನಂತೆ ಹಿಂದೆ ಯಾರದ್ದೊ ಮೊಬೈಲಿನಲಿ ಹಳೆ ಟ್ಯಾಕ್ಟರ್ ಜಾನಪದದ ಹಾಡು ಎಗ್ಗಿಲ್ಲದೆ ಬಡಿದುಕೊಳ್ಳುತ್ತಲೆ ಇದೆ ಚಿಲ್ಲರೆ ಕೇಳಿ ಕೇಳಿ ಸುಸ್ತಾದ ಕಂಡಕ್ಟರ್ ಕೂಡಾ ಸಾರ್ವಜನಿಕರಿಗೆ ಮನದಲ್ಲೆ ಬೈಯುತ್ತ ಟಿಕೆಟ್ ಹರಿಯುತ್ತಿದ್ದಾನೆ ಬಸ್ಸು ತಗ್ಗು ದಿಬ್ಬಿನ ರಸ್ತೆಯೊಡನೆ ಎಷ್ಟೊಂದು ಆತ್ಮೀಯವಾಗಿದೆ ಎದ್ದರೂ, ಬಿದ್ದರೂ ಮುಗ್ಗರಿಸದೆ ಮುನ್ನಡೆಯುತ್ತದೆ ಬಸ್ಸಿನ ಕಂಬಗಳೆಲ್ಲವೂ ಈಗ ಅನಾಥ ಎಲ್ಲರೂ ಮೊಬೈಲ್ ಹಿಡಿದು ಕುಳಿತವರೆ ನಾನು ಬಸ್ಸಿಗೆ ಹೊಸಬನೊ ಅಥವಾ ಬಸ್ಸು ನನಗೆ ಹೊಸದೊ, ಥೋ… ಗೊತ್ತಿಲ್ಲ ಒಂದೊಂದೆ ನಿಲ್ದಾಣ ಬಂದಂತೆಲ್ಲಾ ಬಸ್ಸು ಬರಿದಾಗತ್ತಲೆ ಇದೆ ಈಗೋ ಕಂಡಕ್ಟರ್ ನ ಅಂತಿಮ ಪ್ರಕಟಣೆ ‘ಲಾಸ್ಟ್ ಸ್ಟಾಪ್ ಯಾರ ನೋಡ್ರಿ ಇಳಕೊಳ್ಳೊರು ಇಳಕೊಳ್ರಿ’ 2. ದೇವರು ತುಂಬ ದೊಡ್ಡವನು ರಾಮನಾದರೂ ದಕ್ಕಲಿ, ರಹೀಮನಾದರೂ ದಕ್ಕಲಿ ಬಿಕ್ಕಿ ಅಳುವ ಕಂದನ , ಕಣ್ಣೀರು ಕೊಂಚ ಒರೆಸಲಿ ಬಣ್ಣದ ಬಾವುಟಗಳು ಒಂದಿಷ್ಟು ಶಾಂತವಾಗಲಿ ಬದುಕೆ ಇಲ್ಲದೆ ಕೊರಗುವವರಿಗೆ ಒಂದಿಷ್ಟು ರಂಗು ದೊರೆಯಲಿ ಧರ್ಮ ಶ್ರೇಷ್ಠತೆಯ ಬೊಬ್ಬೆಯಿಡು ನೀನು ನಾನು ಮಾತ್ರ ಹಸಿದವರಿಗೆ ಒಂದು ತುತ್ತು ಅಣ್ಣ ಕಲಸಿ, ಕೈತುತ್ತನ್ನಷ್ಟೆ ನೀಡಬಲ್ಲೆ ಅಲಿಸಾಬ್ ಕಾಕಾನೊಂದಿಗೆ ವ್ಯವಹಾರ ನಡೆಸುತ್ತಿದ್ದ ದೊಡ್ಡಪ್ಪ ಎಂದಿಗೂ ಧರ್ಮ-ಜಾತಿಗಳ ಲೆಕ್ಕ ಹಾಕಿದ್ದು ಕಂಡಿಲ್ಲ ಇಷ್ಟ್ಯಾಕೆ ಕಚ್ಚಾಡಿ, ಕಷ್ಟಪಡುತ್ತೀರಿ ದೇವರು ತುಂಬ ದೊಡ್ಡವನು ನಿವ್ಯಾಕೆ ಬೀದಿಗಿಳಿದು ಚಿಕ್ಕವರಾಗುತ್ತೀರಿ ಗೋಡೆಯಾದರೂ ಉರುಳಲಿ, ಗುಮ್ಮಟವಾದರೂ ಉರುಳಲಿ ಹಸಿವಿನ ಕಟ್ಟೆ ಒಡೆಯದಿರಲಿ ಕಟ್ಟುವುದೇ ಆದರೆ ಒಂದು ಶಾಲೆಯನ್ನೊ, ಶೌಚಗೃಹವನ್ನೊ ಕಟ್ಟೋಣ ಹಸಿವು, ಅಜ್ಞಾನ, ಮಾನದ ಮುಂದೆ ಯಾವ ದೇವರೂ ದೊಡ್ಡವನಲ್ಲ ಅಲ್ಲವೆ… 3. ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಪಾರಿಜಾತದ ಹೂ ನೋಡಬೇಕಿತ್ತು ಕೊಂಡಿ ಕಳಚಿದಾಗಲೂ ಅದು ನಗುತ್ತಲೆ ನೆಲಕ್ಕುದುರುವ ಪರಿ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ನವಿಲು ಗರಿಯನ್ನ ಮಾತಿಗೆಳೆಯಬೇಕಿತ್ತು ಮೈ ಕೊಡವಿದಾಗ ದೇಹದಿಂದ ಬೇರ್ಪಟ್ಟರು ಅದು ನಗುವ ಪರಿ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಕಡಲ ಚಿಪ್ಪನ್ನು ಕಂಡು ಬರಬೇಕಿತ್ತು ತಲೆ ಒಡೆಸಿಕೊಂಡಾಗ ಮುತ್ತು ನೀಡಿದ ಘಳಿಗೆಯ ನೆನದು ಅದು ಸಾಂತ್ವನ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಹೆತ್ತವ್ವನ ಒಡಲಲ್ಲಿ ಸುಮ್ಮನೆ ತಲೆಯಿಟ್ಟು ಮಲಗಬೇಕಿತ್ತು ಕರುಳಬಳ್ಳಿ ಕತ್ತರಿಸಿ, ಕೋಡಿ ನೆತ್ತರ ಹರಿಸಿದಾಗಲೇ ನೀ ಹುಟ್ಟಿದ್ದನ್ನು ಕಿವಿ ಹಿಂಡಿ  ಹೇಳುತ್ತಿತ್ತು ಸಾವೇ ಅಂತಿಮ ಎನಿಸಿದಾಗ ನೀನೊಮ್ಮೆ ನಿನ್ನಾತ್ಮದೊಂದಿಗೆ ಸಂವಾದಕ್ಕಿಳಿಯಬೇಕಿತ್ತು ಕೊನೆ ಪಕ್ಷ ಇದ್ದು ಮಾಡಬೇಕಾದ ಜರೂರತ್ತುಗಳನ್ನ ನೆನಪಿಸುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಮೌನ ಮುರಿದು ಮಾತಾಗಬೇಕಿತ್ತು ನಾನು ಹೆಗಲುಕೊಟ್ಟು ದುಃಖಕ್ಕೆ ಜೊತೆಯಾಗುತ್ತಿದ್ದೆ ನೀ ಇದ್ದರೂ, ಇಲ್ಲದಿದ್ದರೂ ಇಲ್ಲಿ ಯಾವುದು ನಿಲ್ಲುವುದಿಲ್ಲ ಈಗ ಎಲ್ಲವೂ ಮೀರಿ ಹೋಗಿದೆ ಅಷ್ಟೆ ನಿನ್ನ ಬಿತ್ತಿದ ನೆಲವೂ ಉಬ್ಬಿ ನಿಂತಿದೆ ಹೂಗಳ ಹೊತ್ತು ಸನ್ಮಾನವೆಂದು ಭ್ರಮಿಸಿ ನೀನಷ್ಟೆ ಕುಗ್ಗಿ ಮಣ್ಣಾಗಿ ಹೋದವ ಮೂರ್ಖ 4. ಜಿನುಗುವ ಮಳೆಯಲ್ಲಿ ಬಿಕ್ಕುವ ಹಳೆ ನೆನಪುಗಳ ಕೆಣಕಬೇಡ ಸಖಿ ಸುಕ್ಕುಗಟ್ಟಿದ ಮನಸ್ಸಲ್ಲಿ ಮತ್ತೆ ಮುಂಗಾರು ಮಳೆ ಸುರಿದು ಒಲವ ಹೂ

Read Post »

You cannot copy content of this page

Scroll to Top