ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರುಬಾಯಿಗಳು

ರುಬಾಯಿಗಳು ಪ.ನಾ.ಹಳ್ಳಿ.ಹರೀಶ್ ಕುಮಾರ್ ೧. ಮಂಕುತಿಮ್ಮನಾಗು ಕೂಡಿಡುವುದು ಬಿಡು ಜಿಪುಣನೆಂಬ ಹೆಸರು ತಪ್ಪೀತು.ಓದಿ ಜ್ಞಾನಿಯಾಗು, ಅಜ್ಞಾನಿಯೆಂಬ ಹಣೆಪಟ್ಟಿ ತಪ್ಪೀತು.ಎಲ್ಲರೊಡನೆ ಒಂದಾಗಿ ಡಿವಿಜಿಯ ಮಂಕುತಿಮ್ಮನಾಗು,ರೌರವ ನರಕ ಲೋಕದ ದರ್ಶನವಾದರೂ ತಪ್ಪೀತು. ೨.ಕರ್ಮ ಹುಲಿಯ ಹೊಟ್ಟೆಯೊಳಗುಟ್ಟಿ ಹುಲಿಯಾದೆವುಹಸುವಿನೊಟ್ಟೆಯೊಳಗುಟ್ಟಿ ಹಸುವಾದೆವುಮನುಷ್ಯನ ಹೊಟ್ಟೆಯೊಳಗುಟ್ಟಿದಾ ಕರ್ಮಕ್ಕೆ,ಹಿಂದೂ ಕ್ರೈಸ್ತ ಜೈನ ಮುಸಲ್ಮಾನರೆಂದಾದೆವು **************************

ರುಬಾಯಿಗಳು Read Post »

ಕಾವ್ಯಯಾನ

ಕೆಂಡದ ಕೋಡಿ

ಕೆಂಡದ ಕೋಡಿ ವಿಶಾಲಾ ಆರಾಧ್ಯ ಬೆಳದಿಂಗಳಿನ ರಂಗೋಲಿಯಲೂಚಿತ್ತದಲಿ ನೆತ್ತರಿನ ಚಿತ್ರಗಳು ಮೂಡಿಕತ್ತಲ ಗರ್ಭಕ್ಕಿಳಿದು ಬಸಿರಾಗುತ್ತವೆಸೂಜಿಯ ಮೊನೆಯಲ್ಲಿ ಹುಟ್ಟಿದಮತ್ಸರದ ಕನಸುಗಳುದ್ವೇಷದ ಕೋರೆಹಲ್ಲಿನೊಡನೆಕತ್ತಿಯ ಝಳಪಿನ ತಾಳದಲಿನರ್ತಿಸಲು ಹವಣಿಸುತ್ತವೆ!! ಪಕ್ಷಗಳ ದಾಟಿ ಮಾಸದಮಾಸಗಳಲಿ ಇಣುಕಿ ಕಣ್ಣಲ್ಲೇಕೆಂಡದ ಕೊಂಡ ನಿಗಿನಿಗಿಸಿಮಿನುಗಿ ಮನದ ರಸವನುಕೊತಕೊತನೆ ಕುದಿಸಿ ನಾನುನೀನಿನಮೇಲು ಕೀಳಿನ ಧರ್ಮಾಧರ್ಮದತುಪ್ಪವ ಸುರಿಸಿ ಅಗ್ನಿಗೊಂಡವಮತ್ತೆ ಬಾನ ಕೊನೆವರೆಗೂ ಉರಿಸಿಧಗಧಗಿಸುವ ಹುಚ್ಚು ಕೋಡಿಹರಿಯುತ್ತದೆ!! ಏರಿಯ ದಾಟಿದ ಮತ್ಸರದ ಝರಿಕೊರಳ ಸೀಳೆ ಕಿರುದನಿಗೂಎಡೆಗೊಡದೆ ನೆತ್ತರು ಹರಿದಾಡುತ್ತದೆಆ ನೆತ್ತರಲೇ ಕಾರ್ಕೋಟ ಬೀಜಗಳುಮೊಳಕೆಯೊಡೆಯುತ್ತವೆ ಮತ್ತೆ ಮತ್ತೆ

ಕೆಂಡದ ಕೋಡಿ Read Post »

ನಿಮ್ಮೊಂದಿಗೆ

ಕರೋನಾ ಮತ್ತು ಭಯ ಜ್ಯೋತಿ ಡಿ.ಬೊಮ್ಮಾ ಭಯ ಬೇಡ ಎಚ್ಚರಿಕೆ ಇರಲಿ ಎಂದು ಹೇಳುತ್ತಲೆ ಈಗ ಪ್ರತಿಯೊಬ್ಬರ ಮನದಲ್ಲೂ ಕರೋನಾ ಬಗ್ಗೆ ಭಯ ಮನೆಮಾಡಿದೆ. ಮೇಲೆ ಇದೊಂದು ಸಾಮಾನ್ಯ ಕಾಯಿಲೆ ಎಂದುಕೊಂಡರೂ ಒಳಗೋಳಗೆ ಆತಂಕ ಪಡದವರಿಲ್ಲ.ರೋಗಕ್ಕಿಂತಲೂ ಅದರ ಸುತ್ತಲೂ ಇರುವ ಕ್ಲಿಷ್ಟಕರ ಕಾನೂನುಗಳು ಭಯವನ್ನು ಹೆಚ್ಚಿಸುತ್ತಿವೆ. ಸದ್ಯ ಕರೋನಾ ದಿಂದಾಗುವ ಸಾವಿನ ಪ್ರಮಾಣದಲ್ಲಿ ವಯಸ್ಸಾದವರೆ ಹೆಚ್ಚು. ಅವರಿಗೆ ಮತ್ತೆ ಬೇರೆ ಆರೋಗ್ಯ ಸಮಸ್ಯಗಳು ಇರಬಹುದು.ಬಹಳಷ್ಟು ಸಾವು ಆಸ್ಪತ್ರೆಯಲ್ಲಿ ಅಡ್ಮೀಟ್ ಆದ ಮೇಲೆ ಸಂಭವಿಸುತ್ತಿವೆ. ಅಡ್ಮಿಟ್ ಆದ ಮೇಲೆ ರೋಗಿ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಕರೋನಾ ರೋಗದ ಹೆಸರಿನಿಂದಲೇ ಮನೊಸೈರ್ಯ ಕುಸಿಯುತ್ತಿದೆ. ಹೊರಗೆ ರಾಜಾರೋಷವಾಗಿ ಓಡಾಡುವವರು ಕರೋನಾ ಬಂದ ತಕ್ಷಣ ಭಯಭೀತರಾಗುತ್ತಿದ್ದಾರೆ.Quarantine ಭಯದಿಂದ ಎಷ್ಟೋ ಜನರು ರೋಗ ಲಕ್ಷಣಗಳಿದ್ದರು ಪರಿಕ್ಷೆ ಮಾಡಿಸಿಕೊಳ್ಳದೆ, ರೋಗ ಉಲ್ಫಣಗೊಂಡಮೇಲೆ ಆಸ್ಪತ್ರೆಗೆ ದೌಡಾಯಿಸುತ್ತಾರೆ.ಅಷ್ಟರಲ್ಲಿ ಸೋಂಕು ವ್ಯಾಪಿಸಿ ಮರಣ ಸಂಭವಿಸಬಹುದು. ಭಯಕ್ಕೆ ಮತ್ತೊಂದು ಕಾರಣ ರೋಗದ ಸಂದರ್ಬದಲ್ಲಿ ತಮ್ಮವರಾರು ತಮ್ಮ ಬಳಿ ಇರದೆ ಒಬ್ಬಂಟಿಯಾಗಿ ಆಸ್ಪತ್ರೆಯಲ್ಲಿ ಇರಬೇಕಾದ ಸಂದರ್ಭ ಬಂದಾಗ ರೋಗಿ ತನ್ನ ಆತ್ಮಸೈರ್ಯ ಕಳೆದುಕೊಳ್ಳುತ್ತಾನೆ. ಅನಾಥ ಪ್ರಜ್ಞೆ ಯಿಂದ ಖಿನ್ನತೆಗೊಂಡು ರೋಗ ನೀರೋಧಕ ಶಕ್ತಿ ಕುಂಠಿತಗೊಂಡು ಚಿಕಿತ್ಸೆ ದೇಹಕ್ಕೆ ಪ್ರತಿಕ್ರಿಯಿಸಲಾರದು.ಇನ್ನೊಂದು ಭಯ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ದೂರದಿಂದಲೇ (ತುರ್ತು ಸಂದರ್ಬ ಹೊರತು ಪಡಿಸಿ) ರೋಗಿಗಳೊಂದಿಗೆ ಸ್ಪಂದಿಸುವದರಿಂದ ರೋಗಿ ಕುಗ್ಗುತ್ತಾನೆ.ರೋಗ ಬೃಹದಾಕಾರವಾಗಿ ಕಾಡತೋಡಗುತ್ತದೆ. ಇನ್ನೂ ಕರೋನಾ ರೋಗಿಗಳು ಮನೆಯಲ್ಲಿದ್ದುಕೊಂಡೆ ಆರೈಕೆ ಮಾಡಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿರುವದು ಸಮಧಾನಕರವೆ. ಆದರೆ ಮನೆಯವರು ರೋಗಿಯೊಂದಿಗೆ ಪ್ರೀತಿಯಿಂದ ಕಾಳಜಿಯಿಂದ ನೊಇಡಿಕೊಳ್ಳಬೇಕು.ಅವರಿಂದ ನಮಗೆಲ್ಲಿ ಹರಡುವದೊ ಎಂದು ರೋಗಿಯನ್ನು ಅನಾದರ ಮಾಡಿದರೆ ರೋಗಿ ನಿರಾಶೆಯಿಂದ ಕುಗ್ಗಬಹುದು.ರೋಗಿಯೊಂದಿಗೆ ಕೆಲದಿನ ದೈಹಿಕ ಅಂತರವಿಟ್ಟುಕೊಂಡು ಅವರನ್ನು ಆರೈಕೆ ಮಾಡಬಹುದು. ತಮ್ಮವರ ಪ್ರೀತಿ ಅಂತಃಕರಣ ದಿಂದಲೇ ರೋಗ ಗುಣಮುಖವಾಗಬಹುದು. ಹಾಗಾದರೆ ಈ ಭಯದ ಮೂಲ ಶುರುವಾದದ್ದು ಎಲ್ಲಿಂದ..? ರೋಗ ಬಂದರೆ ಸಾವು ಖಚಿತ ಎಂದು ನಂಬಿದ್ದರಿಂದ ,ಅಥವಾ ತಾವೇ ಅಂತಹ ಸಂದರ್ಬ ನೋಡಿದ್ದರಿಂದ ಇರಬಹುದು.ಇನ್ನೊಂದು ಈ ರೋಗ ತಮ್ಮವರಿಂದ ಪ್ರತ್ಯಕಗೊಳಿಸುತ್ತದೆ ಎಂಬ ದುಗಡ ..ಆಸ್ಪತ್ರೆಯಲ್ಲಿ ವೈದ್ಯರು ದೂರದಿಂದಲೆ ತಮ್ಮ ಕರ್ತವ್ಯ ನಿರ್ವಹಿಸುವ ರೀತಿಯಿಂದ..ರೋಗ ಬಂದಮೇಲೆ ಗುಣಮುಖ ವಾಗುವದೋ ಇಲ್ವೋ ಎಂಬ ಆತಂಕ..ರೋಗ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ಮಾಡಿಸಬೇಕೋ ಬೇಡವೂ ಎಂಬ ಇಬ್ಬಂದಿತನ..ರೋಗ ದೃಢ ಪಟ್ಟರೆ ಅಕ್ಕಪಕ್ಕದ ಮನೆಯವರ ನಿರಾದರ..ಇಂತಹ ಎಲ್ಲಾ ಸಂದರ್ಬಗಳು ಭಯ ಹೆಚ್ಚಾಗಲು ಕಾರಣವಾಗುತ್ತಿವೆ. ಉದ್ಯೋಗಸ್ಥರು ಭಯಮುಕ್ತರಾಗಿ ನಿರಾಂತಕವಾಗಿ ಕಾರ್ಯನಿರ್ವಹಿಸದಂತಾಗಿದೆ.ಹೋರಗೆ ಹೋದರೆ ಎಲ್ಲಿ ಸೋಂಕು ತಗಲುವದೋ ಎಂಬ ದುಗುಡದಲ್ಲೆ ಕಾರ್ಯೋನ್ಮುಖರಾಗಬೇಕಾಗಿರುವದು ಅನಿವಾರ್ಯ. ಮಕ್ಕಳಂತೂ ಶಾಲೆಯೆ ಮರೆತಂತಾಗಿದ್ದರೆ.ಎಲ್ಲಿ ನೋಡಿದ್ದರು ರೋಗ ಮತ್ತು ಭಯದ್ದೆ ವಿಜೃಂಬಣೆ.ಎಲ್ಲವೂ ಅಯೋಮಯ. ಒಂದಂತೂ ಸತ್ಯ ,ರೋಗ ಗೆಲ್ಲಬೇಕಾದರೆ ಆತ್ಮಸೈರ್ಯ ಅತ್ಯಂತ ಮುಖ್ಯ.ಆದರೆ ಈ ಸಂದರ್ಬದಲ್ಲಿ ಬಹುತೇಕ ಜನ ಅದನ್ನೇ ಕಳೆದುಕೊಳ್ಳುತ್ತಿದ್ದಾರೆ.ಕರೋನಾ ಬಂದು ಗುಣಮುಖರಾದವರು ಉತ್ಸಾಹ ಭರಿತರಾಗಿರದೆ ಯಾವದೇ ಖಿನ್ನತೆಯಿಂದ ಬಳಲುವರಂತೆ ಕಾಣುತಿದ್ದಾರೆ.ಎಕೆಂದರೆ ರೋಗದ ಭಯ ಅಷ್ಟೊಂದು ಆವರಿಸಿಕೊಂಡಿದೆ. ಈಗ ಇದರೊಂದಿಗೆ ಬದುಕುವದು ಅನಿವಾರ್ಯ. ಯಾವಾಗಾದರೂ ಒಮ್ಮೆ ಬರುತ್ತದೆ ಎಂದಿಟ್ಟುಕೊಳ್ಳೊಣ.ಭಯ ಪಡದೆ ಹಿಂದೆ ಅನೇಕ ಸಲ ಬಂದು ಹೋದ ನೆಗಡಿ ಕೆಮ್ಮನ್ನೆ ನೆನಸಿಕೊಂಡು ಹಗುರವಾಗಿ ತೆಗೆ್ಉಕೊಳ್ಳಬೇಕು.ಭಯ ಪಟ್ಟಷ್ಟು ರೋಗದ ತೀವ್ರತೆ ಹೆಚ್ಚುತ್ತದೆ.ಈಗ ನಮ್ಮ ಮುಂದಿರುವ ದೊಡ್ಡ ಸವಾಲೆಂದರೆ ಕರೋನಾ ರೋಗಕ್ಕೆ ಭಯಪಡದೆ ಇರುವದು.ಆತ್ಮವಿಶ್ವಾಸ ಗಟ್ಟಿಗೋಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಆಲೋಚನೆಗಳು ಮತ್ತು ಸ್ವಲ್ಪ ಮಟ್ಟಿನ ಯೋಗ ಮತ್ತು ದ್ಯಾನಗಳು ಅತ್ಯವಶ್ಯಕ. ****************************** .

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಸಹಜ ನಡಿಗೆಯ ರುದ್ರ ನರ್ತನದ ಭಾವಗಳಂತೆ ಕುಮಾರ್ ಹೊನ್ನೇನಹಳ್ಳಿ‌ ಪದ್ಯಗಳು . ಕುಮಾರ್ ಹೊನ್ನೇನಹಳ್ಳಿ ವೃತ್ತಿಯಿಂದ ಶಿಕ್ಷಕ ಮತ್ತು ಶಿಕ್ಷಕರ ತರಬೇತುದಾರ ಅಂದರೆ ರಿಸೋರ್ಸ್ ಪರ್ಸನ್. ಅವರ ವೃತ್ತಿಯ ಕಾರಣ ಅಂದರೆ ಸಂಪನ್ಮೂಲ ವ್ಯಕ್ತಿಯಾಗಿರುವ ಕಾರಣ ಜಗತ್ತಿನ ಸಮಸ್ತ ಆಗು ಹೋಗುಗಳ ಅರಿವು ಮತ್ತು ಅಂಥ ಸಂಗತಿಗಳು ಒಟ್ಟೂ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಪ್ರಮಾಣಗಳನ್ನೂ ಆನುಷಂಗಿಕವಾಗಿ ಅವರು ಪ್ರಸ್ತಾಪಿಸದೇ ಅನ್ಯ ಮಾರ್ಗಗಳು ಇರುವುದಿಲ್ಲ. ಹಾಗಾಗಿಯೇ ಏನೋ ಇವರ ಕವಿತೆಗಳಲ್ಲಿ ಐತಿಹಾಸಿಕ ವ್ಯಕ್ತಿಗಳೂ ವರ್ತಮಾನದ ಸಂಗತಿಗಳೂ ಆಗೀಗ ಬೇರೆ ಬೇರೆಯದೇ ರೂಪದಲ್ಲಿ ಭೇಟಿಯಾಗುತ್ತಲೇ ಇರುತ್ತವೆ. ಇವರ ಎಫ್ಬಿ ಖಾತೆಯಲ್ಲಿ  Kumara h c holenarsipur  ಎಂದಿದೆ. ಎಫ್ಬಿಯ ಅಸಂಖ್ಯಾತ ಪೋಸ್ಟುಗಳ ನಡುವೆ ದಿನಕ್ಕೊಮ್ಮೆಯಾದರೂ ಹಣಕುವ ಲೈಕೋ ಕಮೇಂಟೋ ಅಥವ ತಮ್ಮದೇ ಪಟಗಳನ್ನೇ ತೇಲಿ ಬಿಡುವವರ ನಡುವೆ ಸ್ವಲ್ಪ ಸೀರಿಯಸ್ ಆಗಿಯೇ ಪ್ರತಿಕ್ರಯಿಸುವ ಕುಮಾರ್ ತಮ್ಮ ಕವಿತೆಗಳಿಂದಲೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಕಳೆದ ಆರೇಳು ವರ್ಷಗಳಿಂದ ಕವನ ಕೃಷಿಗೆ ಕೈ ಹಾಕಿರುವ ಕುಮಾರ್ ಸದ್ಯ ಹುಣಸೂರಿನ ವಾಸಿ. “ಬೆಳಕಿನೆಡೆಗೆ” ಸಂಘಟನೆಯ ಮೂಲಕ ಹುಣಸೂರಿನಲ್ಲಿ ಸಾಹಿತ್ಯಾಸಕ್ತರ ಗುಂಪಿನ ಜೊತೆ ಒಡನಾಟ ಇಟ್ಟುಕೊಂಡಿರುವ ಇವರು ಶ್ರೀ ಅರವಿಂದ ಚೊಕ್ಕಾಡಿಯವರ ಮಧ್ಯಮಪಂಥದ ಬೆಂಬಲಿಗ. ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಲೇಖನಗಳನ್ನು ಡಯಟ್ ಮೈಸೂರಿನ ಮೂಲಕ ಪ್ರಕಟಿಸಿರುವ ಇವರುಯಾವುದೇ ಲೇಖನ ಕವನಗಳನ್ನು ಉಳಿದಂತೆ  ಯಾವುದೇ ಪತ್ರಿಕೆಗೂ ಕಳುಹಿಸಿಲ್ಲ ಎಂದು ಹೇಳಿದಾಗ ಆಶ್ಚರ್ಯವಾಗದೇ ಇರದು. ಆದರೂ ಕವನ ಸಂಕಲನ “ಪ್ರಳಯವಾಗುತ್ತಿರಲಿ..” ಪ್ರಕಟಿಸಿದ್ದಾರೆ. ಯಾವ ಪತ್ರಿಕೆಗೂ ಬರೆಯದೆ ಬರಿಯ ಫೇಸ್ಬುಕ್ಕಿನ ಮೂಲಕವೇ ಕವಿತೆ ಪ್ರಕಟಿಸುವ ಶ್ರೀಯುತರ ಸಂಕಲನ ನಾನು ನೋಡದೇ ಇದ್ದರೂ ಅವರ ಫೇಸ್ಬುಕ್ ಕವಿತೆಗಳ ಮೂಲಕವೇ ಅವರೊಳಗಿನ ಕವಿಯ ಭಾವವನ್ನು ಆ ಕವಿಯು ಸಮಾಜದ ನಡವಳಿಕೆಗಳ ಮೇಲೆ ಇರಿಸಿ ಕೊಂಡಿರುವ ನೈತಿಕ ಸಿಟ್ಟನ್ನೂ ಅರಿಯಬಹುದು. ಶ್ರೀ ಕುಮಾರ್ ಅರವಿಂದ ಚೊಕ್ಕಾಡಿಯವರ ಮಧ್ಯಮ ಪಂಥದ ಸಹವರ್ತಿಯೂ ಆಗಿರುವ ಕಾರಣ ಅವರ ನಿಲುವು ಎಡವೂ ಅಲ್ಲದ ಬಲಕ್ಕೂ ವಾಲದ ಆದರೆ ಸಾಮಾಜಿಕ ಸನ್ನಿವೇಶಗಳಿಗೆ ಆಯಾ ಸಂದರ್ಭಗಳ ಅಗತ್ಯತೆಗೆ ತಕ್ಕಂತೆ ಬಾಗುವುದನ್ನೂ ಬಳುಕುವುದನ್ನೂ ಹಾಗೆಯೇ ಬಗ್ಗದೇ ಸೆಟೆಯುವದನ್ನೂ ಈ ಕವಿತೆಗಳ ಅಧ್ಯಯನದಿಂದಲೇ ಅರಿಯಬಹುದು. ನಿಜದ ಕವಿಯು ನಿಜಕ್ಕೂ ಇಟ್ಟುಕೊಳ್ಳಲೇ ಬೇಕಾದ ನೈತಿಕತೆ ಇದುವೇ ಆಗಿದೆ. ಏಕೆಂದರೆ ಕವಿಯೂ ಮೂಲತಃ ಒಬ್ಬ ಮ‌ನುಷ್ಯ. ಅವನಿಗೂ ಎಲ್ಲರ ಹಾಗೆ ಬದುಕಿನ ಸವಾಲುಗಳು, ಸಾಲ ಸೋಲಗಳು, ಸೋಲು ಗೆಲವುಗಳು, ನೈತಿಕತೆಯನ್ನು ಪ್ರಶ್ನಿಸುತ್ತಲೇ ಅನೈತಿಕತೆಗೆ ಎಳೆಸುವ ಪ್ರಲೋಭನೆಗಳು ಈ ಎಲ್ಲವನ್ನೂ ಕವಿಯೂ ಅನುಭವಿಸುತ್ತಲೇ ಇರುತ್ತಾನೆ ಮತ್ತು ಆ ಅಂಥ ಸಂದರ್ಭಗಳಲ್ಲಿ ಎಲ್ಲ ಸಾಮಾನ್ಯರೂ ವರ್ತಿಸುವಂತೆಯೇ ವರ್ತಿಸಿರುತ್ತಾನೆ. ಆದರೆ ಕವಿಯಾದವನು ಆ ಅಂಥ ಅನುಭವವನ್ನು ತನ್ನದೇ ರೀತಿಯಲ್ಲಿ ಅಭಿವ್ಯಕ್ತಿಸಲು ಕವಿತೆಗೆ ಮೊರೆ ಹೋಗುತ್ತಾನೆ. ಮತ್ತು ತನ್ನ ಮುಂದಣ ಸವಾಲುಗಳಿಗೆ ಕವಿತೆಯ ಮೂಲಕವೇ ಉತ್ತರ ಕಂಡು ಕೊಳ್ಳುತ್ತಾನೆ. ಇದನ್ನು ಅವರ “ಸರದಿ” ಅನ್ನುವ ಕವಿತೆಯಲ್ಲಿ ನೀವೇನೋ ಬಿಡಿ ಆ ಕಡೆ ಆದರೂ ಸರಿ ಈ ಕಡೆ ಆದರೂ ಸರಿ ನಿಂತು ಬಿಡುವಿರಿ ಏನೂ ಮಾಡಲಾಗದ ಆ ಒಂದು ಗಳಿಗೆ ನೀವೂ ದಾಟಲೇಬೇಕು ಆಳ ಎಷ್ಟಿದ್ದರೂ ಹರವು ಹರವಿದ್ದರೂ ಕತ್ತಲಲಿ ಹೊರಟರೂ ಬೆಳಕಿನಲಿ ಹೊರಟರೂ ಒಪ್ಪಿ ನಡೆದರೂ ಒಪ್ಪದೆ ಇದ್ದರೂ…… (ಸರದಿ) ಈ ದ್ವಂದ್ವಗಳ ನಡುವೆಯೂ ಪಯಣವನು ಮುಂದಕ್ಕೆ ಸಾಗಿಸಬೇಕಲ್ಲ ಅನ್ನುವ ವ್ಯಥೆಯ ನಡುವೆಯೇ ಸರದಿಯಲ್ಲಿರುವ ನಾವು ನಮ್ಮಾಚೆ ಇನ್ನೂ ಯಾರೋ ಕಾಯುತ್ತಲೇ ಇದ್ದಾರೆ ಅನ್ನುವ ಅರಿವು ಇಲ್ಲಿ ಮುಖ್ಯ. ಮತ್ತು ಆ ಅದೇ ಭಾವವೇ ಈ ಕವಿತೆಯು ದ್ವಂದ್ವವನ್ನು ಗೆಲ್ಲುವ ಉಪಾಯ ಕಂಡುಕೊಂಡದ್ದು! ಈ ಕವಿ ವೃತ್ತಿಯಿಂದ ಶಿಕ್ಷಕ. ಹಾಗಾಗಿ ಪ್ರತಿ ವರ್ಷ ಫಲಿತಾಂಶದತ್ತಲೇ ದಿಟ್ಟಿ. ಅವರು ಹೇಳುತ್ತಾರೆ; ಉದುರಿದ ಎಲೆಗಳ ಗುಡಿಸದೆ ಕಳಿಯಲು ಬಿಟ್ಟಿದ್ದರೆ ತನ್ನದೇ ಬುಡದಲಿ? (ಉದುರಿದ ಎಲೆಗಳ ಗುಡಿಸಿ) ವರ್ತಮಾನದ ಶಿಕ್ಷಣ ವ್ಯವಸ್ಥೆಯನ್ನೂ ಅದು ಅಮೂಲಾಗ್ರವಾಗಿ ಬದಲಾಗಬೇಕಾದ ಅನಿವಾರ್ಯವನ್ನೂ ಹೇಳುತ್ತಿದ್ದಾರೆ ಅನ್ನಿಸಿತು. ಉದುರಿದ ಎಲೆಗಳನ್ನು ಗುಡಿಸಿ ಬಿಸಾಕುವ ಅಂದರೆ ಈಗಾಗಲೇ ಘಟಿಸಿದ ಐತಿಹಾಸಿಕ ಸಾಮಾಜಿಕ ಸನ್ನಿವೇಶಗಳನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳದೇ ಕಡ ತಂದ ರಸ ಗೊಬ್ಬರ ಚಲ್ಲಿದರೆ ಅಂದರೆ ಆಧುನಿಕ ವಿದ್ಯಾಭ್ಯಾಸ ಕ್ರಮ(?) ನೆಲವನ್ನು ಬಂಜರು ಮಾಡುತ್ತಿದೆ ಅನ್ನುವ ಅರಿವು ಸ್ವತಃ ಅನುಭವದಿಂದಲೇ ಕಂಡು ಕೊಂಡ ಕಾಣ್ಕೆ. ” ಕಳೆದ ಆ ನನ್ನ ಮೊಗ” ಕವಿತೆಯು ಧೇನಿಸುವುದು ಸಾಮಾನ್ಯ ಸಂಗತಿಯನ್ನೇ ಆದರೂ ಅದು ಪಡೆಯುವ ನಿಲುವು ಸಾರ್ವತ್ರಿಕವಾಗಿ ಸತ್ಯವಾದುದೂ ಸತ್ವವಾಗಿಯೂ ಇರುವಂಥದು. ಮುಖವಾಡಗಳೊಳಗೇ ಏಗಬೇಕಿರುವ ನಮ್ಮೆಲ್ಲರ ಬದುಕನ್ನೂ ಈ ಕವಿ ಅತ್ಯಂತ ಯಶಸ್ವಿಯಾಗಿ ಹೀಗೆ ಅಭಿವ್ಯಕ್ತಿಸುತ್ತಾರೆ; ಅದೆಷ್ಟು ವರುಷಗಳಾದವು ಕನ್ನಡಿಯಲಿ ಅದೆಷ್ಟು ಮುಖಗಳು ಕಂಡವು ಅದು ನನ್ನದು ಅನ್ನುವ ಯಾವುದೋ ಏನೋ ಎಲ್ಲಾ ಅಯೋಮಯ ಮುಂದುವರೆದ ಪದ್ಯ ಕಡೆಯಲ್ಲಿ ಕಂಡುಕೊಳ್ಳುವ ಸತ್ಯ ಹೀಗೆ; ಅಲ್ಲಿಯವರೆಗೆ ಹೀಗೆ ಅನಿವಾರ್ಯ ಕನ್ನಡಿಯೊಳಗೆ ಕಾಣುವ ಸಾವಿರಾರು ಮುಖಗಳಲಿ ಸಿಕ್ಕ ಒಂದನು ಕಿತ್ತು ಭುಜಗಳ ಮೇಲೆ ಸಿಕ್ಕಿಸಿಕೊಂಡು … ಅಂದ ಮಾತ್ರಕ್ಕೆ ಇವರ ಎಲ್ಲ ಕವಿತೆಗಳೂ ಹೀಗೆ ಅನೂಹ್ಯಕ್ಕೆ ಸಲ್ಲುತ್ತವೆ ಎಂದೇನಲ್ಲ. ನಿಜಕ್ಕೂ ಅದ್ಭುತವಾಗಬಹುದಾಗಿದ್ದ “ನಾನು ಮತ್ತು ನನ್ನಂಥವರು” ಕವಿತೆ ಆರಂಭದಲ್ಲಿ ಹುಟ್ಟಿಸಿದ ಭರವಸೆಯನ್ನೂ (ಶೀರ್ಷಿಕೆ ಗಮನಿಸಿ) ಸಾಮಾನ್ಯ ಸಂಗತಿಯನ್ನೂ ಕವಿತೆಯ ವಸ್ತುವನಾಗಿಸುವ ಕ್ರಮವನ್ನೂ ಉದ್ದೀಪಿಸುತ್ತಲೇ ಅಂತ್ಯವಾಗುವ ವೇಳೆಗೆ ತೀರ ಸಾಮಾನ್ಯ ಹೇಳಿಕೆಯಾಗಿಬಿಡುವುದು ನಿರಾಶೆಯ ಸಂಗತಿ. ಇಂಥ ಹಲವು ಪಲಕುಗಳ ನಡುವೆಯೂ ಕವಿ ಅರಳಿ ಮತ್ತೆ ಹೊರಳುವುದು, ಅನೂಹ್ಯಕ್ಕೆ ತಡಕುವುದು ಕಾವ್ಯ ಕೃಷಿಯ ಪರಂಪರೆಯನ್ನು ಅರಿತವರಿಗೆ ತಿಳಿದ ಸಾಮಾನ್ಯ ಅಂಶ. ಏಕೆಂದರೆ ಇಂಥ ಪದ್ಯಗಳ ನಡುವೆ ಅಬ್ಬ ಎನ್ನುವ ಪ್ರತಿಮೆ ರೂಪಕಗಳನ್ನೂ ಈ ಕವಿ ನೀಡಬಲ್ಲರು. ಉದಾಹರಣೆಗೆ “ಪ್ರಶ್ನೆಗಳು” ಕವಿತೆಯ ಈ ಸಾಲು ನೋಡಿ; ಬಲಹೀನ ನಿಜ ಬಲಹೀನ ಸುಳ್ಳು ಎರಡನ್ನೂ ಹೇಳುವುದಿಲ್ಲ ನಿನ್ನೆದುರು ಹೇಳು ಗೆಳೆಯ ‘ನಿಜ’ವೆಂದರೆ ಏನು? ‘ಸುಳ್ಳು’ ಅದರ ವಿರುದ್ಧ ಪದವೆ? ಓಡುವ ಕಾಲದ ಜತೆಜತೆಗೆ ಓಡುವಾಗ ಯಾವುದು ನಿನ್ನ ಮುಂದಿನ ಕಾಲು ಹಿಂದಿನ ಕಾಲು? ಹೀಗೆ ಪ್ರಶ್ನೆಗಳಿಗೆ ಉತ್ತರವನ್ನು ತಡಕದೆಯೇ ಇದ್ದರೆ ಆ ಕವಿ ಬರಿಯ ಹೇಳಿಕೆ ಕೊಟ್ಟಾನು. ಹೇಳಿಕೆ ಮತ್ತು ಘೋಷಣೆಗಳನ್ನು ಬಿಟ್ಟುಕೊಟ್ಟ ಅನುಭವಗಳ ಸಹಜ ಅಭಿವ್ಯಕ್ತಿ ಮಾತ್ರ ಕವಿತೆಯಾಗಿ ಅರಳುತ್ತದೆ ಮತ್ತು ಬಹುಕಾಲ ಓದುಗನ ಮನಸ್ಸಿನಲ್ಲಿ ನಿಲ್ಲುತ್ತದೆ. ಈಗ ಈವರೆಗೂ ಈ ಕವಿ ಪ್ರಕಟಿಸಿರುವ ಕವಿತೆಗಳಲ್ಲೆಲ್ಲ ಬಹುವಾಗಿ ನನ್ನನ್ನು ಕಾಡಿದ ಮತ್ತು ಎಲ್ಲ ಸಹೃದಯರ ಮನಸ್ಸಿನಲ್ಲೂ ಉಳಿಯಬಹುದಾದ ರಚನೆಯೆಂದರೆ ಸದ್ಯದ ರಿಯಲ್ ವರ್ಲ್ದ್ ಮತ್ತು ವರ್ಚುಯಲ್ ವರ್ಲ್ದ್ ಗಳ ನಡುವಣ ಅಘೋಷಿತ ಯುದ್ಧದ ಪರಿಣಾಮ. ಆ ಪದ್ಯದ ಶೀರ್ಷಿಕೆ “ಹುಚ್ಚು ಹುಚ್ಚಾಗಿ”. ಸರಕು ಇರದ ಸಂತೆಯಲಿ ಬರೀ ಮಾತು ಮಾಹಿತಿ….. ಎಂಥ ವಿಪರ್ಯಾಸದ ಮಾತಿದು? ಸರಕೇ ಇಲ್ಲದ ಸಂತೆಯಲಿ ಮಾರಲೇನಿದೆ? ಕೊಳ್ಳಲೇನಿದೆ? ಇಂಥ ಅದ್ಭುತ ರೂಪಕಗಳನ್ನು ನಿಜ ಕವಿಯು ಮಾತ್ರ ಸೃಷ್ಟಿಸಬಲ್ಲ. ಈ ಮೊದಲೇ ಹೇಳಿದಂತೆ ಫೇಸ್ಬುಕ್ ಕವಿಗಳು ತಮ್ಮ ಪಟಗಳ ಲೈಕು ಕಮೆಂಟುಗಳಲ್ಲಿ ಕಳೆದು ಹೋಗುತ್ತಿರುವಾಗ ನಿಜಕ್ಕೂ ಹೌದೆನ್ನಿಸುವ ಈ ರೂಪಕ ಸೃಷ್ಟಿಸಿದ ಕುಮಾರ್ ಕವಿತೆಯನ್ನು ಮೆಚ್ಚದೇ ಇರುವುದು ಅಸಾಧ್ಯ. ಪದ್ಯದ ಕೊನೆ ಹೀಗಿದೆ; ಸುಮ್ಮನಿರಬೇಕು ಎಂದುಕೊಂಡರೂ ಹೆಂಡತಿ ಬಿಡುವುದಿಲ್ಲ ಮಗ ಕೇಳುತ್ತಾನೆ “ಅಪ್ಪಾ, ಕುಪ್ಪಳಿಸಿದರೆ ತಪ್ಪೇನು?” ಕುಪ್ಪಳಿಸುವುದ ನೋಡುತ್ತ ನಾನೂ ಕುಪ್ಪಳಿಸುತ್ತ ಅವಳ ಕರೆಗೆ ಓಗೊಟ್ಟು… ಹಿಮಾಲಯಕ್ಕೆ ಹೋಗುವುದು ಕನಸು ಬಿಡಿ. ವಾಹ್, ವಾಸ್ತವದ ಉರುಳಲ್ಲಿ ನರಳುತ್ತಿರುವ ಮತ್ತು ಮತ್ತೇನೋ ಕನಸುವ ಎಲ್ಲರಲ್ಲೂ ಈ ಭಾವನೆ ಇರದೇ ಉಂಟೇ? ಕುಮಾರ್ ಅವರ “ಪ್ರಳಯವಾಗಲಿ” ಸಂಕಲನ ನಾನು ಓದಿಲ್ಲ‌. ಪ್ರಾಯಶಃ ಅವರ ಇಂಥ ಪದ್ಯಗಳು ಆ ಸಂಕಲನದಲ್ಲಿ ಇರಲಾರವು. ಹತ್ತು ಹೆರುವುದಕ್ಕಿಂತ ಮುತ್ತ ಹೆರಬೇಕು ಎನ್ನುವುದು ಆಡುಮಾತು. ಅಂತೆಯೇ ಈ ಕವಿ ಹತ್ತು ಜಾಳು ಪದ್ಯ ಹಿಸೆಯುವ ಬದಲು ಒಂದು ರೂಪಕ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಲಿ ಎರಡನೆಯ ಸಂಕಲನ ತರುವ ಮನಸ್ಸು ಮಾಡಲಿ ಎನ್ನುವ ಹಾರೈಕೆಯೊಂದಿಗೆ ಅವರ ಐದು ಕವಿತೆಗಳನ್ನು ನಿಮ್ಮೆಲ್ಲರ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ಕುಮಾರ್ ಹೊನ್ನೇನಹಳ್ಳಿಯವರ ಕವಿತೆಗಳು ೧. ಸರದಿ ನೀವೇನೋ ಬಿಡಿ ಆ ಕಡೆ ಆದರೂ ಸರಿ ಈ ಕಡೆ ಆದರೂ ಸರಿ ನಿಂತು ಬಿಡುವಿರಿ ಏನೂ ಮಾಡಲಾಗದ ಆ ಒಂದು ಗಳಿಗೆ ನೀವೂ ದಾಟಲೇಬೇಕು ಆಳ ಎಷ್ಟಿದ್ದರೂ ಹರವು ಹರವಿದ್ದರೂ ಕತ್ತಲಲಿ ಹೊರಟರೂ ಬೆಳಕಿನಲಿ ಹೊರಟರೂ ಒಪ್ಪಿ ನಡೆದರೂ ಒಪ್ಪದೆ ಇದ್ದರೂ ಇವೆ ಕೆಲವು ನಿಮ್ಮಾತಿನ ವ್ಯಂಗ್ಯದಂತೆ ದಾಟುವ ಹೆಜ್ಜೆಗಳಿಗೆ ತಮ್ಮೆದೆಯನೇ ಹಾಸುವ ಕಡುಮೂರ್ಖ ಶಿಖಾಮಣಿಗಳು ಗೊತ್ತಿದೆ ಮಾತು ಮತ್ತು ಹೆಜ್ಜೆಗಳು ಸಿಗವು ಗಳಿಗೆ ದಾಟಿದ ಯಾವ ನಿಯಮಗಳಿಗೂ ಆದರೂ ನಿಮ್ಮಗಳ ವಜ್ಜೆ ಪಾದಗಳಿಗೆ ತಮ್ಮೆದೆಯನೇ ಹಾಸಿರುವ ಇವರುಗಳು ಹಾಗೆಯೆ, ತಡಮಾಡಬೇಡಿ ಯಾರಾದರೇನು ನೀವು, ದಾಟಿರಿ. ನಡೆದು ಬಂದ ಹಾದಿಯ ನೋಡಿದರೆ ಹಿಂದಿರುಗಿ ದಾಟಿರುವೆವು ನಾವೂ ನಮ್ಮ ಕನಸ ನನಸಿಗೆ ತಮ್ಮ ಕನಸುಗಳ ನಮ್ಮ ಕಾಲಡಿಗೆ ಹಾಸಿದ್ದವರ ಎದೆಗಳ ತುಳಿದು ಮುಗಿಯದ ಹಾದಿಯಲಿ ಮುಗಿಯಬಾರದು ಪಯಣವೂ ಬೇಕಾಗಿವೆ ಇನ್ನೂ ಸೇತುವೆಗಳು ಇದ್ದಾರೆ ಪಯಣಿಗರೂ ಈಗಲಾದರೂ ನುಡಿಯಬೇಕಲ್ಲವೆ ಮುಂಚೂಣಿಯಲಿ ನಿಂತಿರುವ ನಿಮ್ಮೆದೆ, ನಮ್ಮೆದೆ ‘ ಇನ್ನಾದರೋ ಸರದಿ ನಮ್ಮದೆ ‘. ೨. ಉದುರಿದ ಎಲೆಗಳ ಗುಡಿಸಿ ಮಾಗಿ ಕಾಲದಲ್ಲಿ ಮರ ಎಲೆ ಉದುರಿಸುವಂತೆ ಮಾತು, ಈ ಮಕ್ಕಳದ್ದು. ತಾಕೀತು ಮಾಡಿದ್ದೆ ” ಕೈ ಕಟ್ ಬಾಯ್ ಮುಚ್ “ ಮರದ ಬುಡದ ಸುತ್ತ ಉದುರಿದ್ದ ಎಲೆಗಳ ಗುಡಿಸಿ ಎಸೆದು ಪಾತಿ ಮತ್ತೊಮ್ಮೆ ಅಗೆದು ಸುರಿದೆ ರಸಗೊಬ್ಬರ, ಇನ್ನೇನಿದ್ದರೂ ಕೈತುಂಬಾ ಹಣ ಎಣಿಸುವ ಕನಸು. ಕೂಡಿ ಕೂರಿಸಿದ ಕೋಣೆಯೊಳಗೆ ಪಿಳಿಪಿಳಿ ನೋಡುವ ಮಕ್ಕಳು ಎಲ್ಲವ ನಾನೇ ಹೇಳುತ್ತಿರುವೆ ಸುಮ್ಮನೆ ಕೇಳುತ್ತಾ ಕಲಿಯಲು ಏನು ದಾಡಿ? ಯಾರು ಕೊಡುತ್ತಾರೆ ಇಷ್ಟು ಚನ್ನಾಗಿ ರಸಗೊಬ್ಬರ? ಕೇಳಿದಾಗ, ಹೇಳಿಕೊಟ್ಟಂತೆ ಉಲಿದಿದ್ದ ಈ ಗಿಳಿಗಳು ‘ ಹಾರಿ ತೋರಿ ‘ ಎಂದಾಗ ನಿಂತಿವೆ ಹಾಗೆ ಗೊಂದಲದಲಿ. ಸಾಕಲ್ಲವೆ ಕಾಲುಗಳು ಎಂದೇ ಕಟ್ಟಿ ಹಾಕಿದ್ದೆ ರೆಕ್ಕೆಗಳ. ರಸಗೊಬ್ಬರ ಉಂಡುಂಡ ಮಣ್ಣು ಈಗೀಗ ಬಂಜರು ಇಳುವರಿ ಇರಲಿ ಫಲ ಕಚ್ಚಿದರೆ ಸಾಕಾಗಿದೆ. ಉದುರಿದ ಎಲೆಗಳ ಗುಡಿಸದೆ ಕಳಿಯಲು ಬಿಟ್ಟಿದ್ದರೆ ತನ್ನದೇ ಬುಡದಲಿ? ೩. ಹೂವು ಮತ್ತು ಕಲ್ಲು ಹೂವಿಗೂ ಕಲ್ಲಿಗೂ ಮದುವೆ ಕರಗಿಸಿ ಮೃದು ಮಾಡಲು ಒದ್ದಾಡಿತು ಹೂವು ಕಲ್ಲು ಕಲ್ಲೇ ಮಿಸುಕಲಿಲ್ಲ ದಿನ ಕಳೆದ ಹಾಗೆ ಹೊಂದಿಕೊಂಡರೂ ನಲುಗಿ ನಲುಗಿ ಬಾಡಿ ಮಣ್ಣಾಯಿತು ಕಲ್ಲಿಗೇನು, ಗುಂಡಗೆ ನಿಂತಲ್ಲಿ ನಿಂತು ಕುಂತಲ್ಲಿ ಕುಂತು ಚಳಿ ಬಿಸಿಲಿಗೇ ಅಲುಗದವನು ಇನ್ನು ಈ ಹುಲು ಹೂವಿಗೆ ನಿಮಗೂ ಗೊತ್ತಿದೆ ನಮ್ಮಲ್ಲಿ ವಿಧುರನ ಲಗ್ನ ಸುಲಭ ಉಳಿಗೂ ಕಲ್ಲಿಗೂ ಮದುವೆ ಉಳಿಯ ಮುಂದೆ ಕಲ್ಲೇ ಮಿದು! ಉಳಿಯ ಒಂದೊಂದು ಪೆಟ್ಟಿಗೂ ನೋವಾದರೂ ಕಲ್ಲು ಕಲ್ಲೇ. ಈಗೇನೋ ಅದು ವಿಗ್ರಹವಂತೆ ನೀಡಿ ಉಳಿಗೆ ವಿಚ್ಛೇದನ ಪಡೆದು ದೀಕ್ಷೆ ನೆಲೆಸಿದೆಯಂತೆ ಗುಡಿಯೊಳಗೆ ಈ ಜನ ನೋಡಿ ಮತ್ತೆ ಮತ್ತೆ ಗುಡಿಗೆ ಹೂವುಗಳ ಹೊರುವುದು “ಕಲ್ಲಿಗೂ ಹೂವಿಗೂ”… ಕ್ಷಮಿಸಿ “ವಿಗ್ರಹಕೂ ಹೂವಿಗೂ”… ಅಲ್ಲಲ್ಲ  “ದೇವರಿಗೂ

Read Post »

You cannot copy content of this page

Scroll to Top