ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲಹರಿ

ಹರಟೆ ಕಟ್ಟೆ

ಮಾಲಾ  ಕಮಲಾಪುರ್  

ನಾನು  ಹೇಳುವ ಮಾತು ಇದು  ಮೂವತ್ತು ವರ್ಷ ಗಳ ಹಿಂದು ಮುಂದಿನ ಮಾತು ಆಗಿನ ಜನರು ಗಂಡಾಗಲಿ ಹೆಣ್ಣಾಗಲಿ  ಭೇದ  ಭಾವ ಇಲ್ಲದೆ ತನ್ನವರು ನನ್ನವರು ಎನ್ನುವ ಭಾವನೆ ಯೊಂದಿಗೆ ಬೆರೆತು ಹರಟೆ ಹೊಡಿಯುತ್ತಿದ್ದರು. ತಮಗೆ ಬಿಡುವಾದಾಗ ಒಬ್ಬರಿಗೊಬ್ಬರು ಸಂಜೆಗೆ ಹರಟೆ ಕಟ್ಟೆಗೆ ಬಂದು ಹರಟೆ ಹೊಡೆದು ಹೋಗುತ್ತಿದ್ದರು. ಅಷ್ಟೇ ಅಲ್ಲ  ಸುಖ ದುಃಖ ದಲ್ಲಿ ಪಾಲ್ಗೊಂಡು  ತಮ್ಮ ಮನೆಯವರಂತೆ  ಹಚ್ಚಿಕೊಂಡು ಕೆಲಸ ಮಾಡುತ್ತಿದ್ದರು. ಮನೆಯ ಯಜಮಾನಿಯಂತೂ ತನ್ನ ಊಟ ಕೆಲಸ ವಾದಮೇಲೆ ಹೊಟ್ಟಿಯೊಳಗಿನ ಮಾತು ತನಗೆ ಬೇಕಾದವರೊಡನೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆದು ಮನಸು ಹಗುರ ಮಾಡಿಕೊಳ್ಳುತ್ತಿದ್ದರು.ಬಾಜು ಮನೆಯವರಿಗೆ  ಯಾವತ್ತೂ ಹೆಸರು ಹಿಡಿದು ಕರೆಯದೆ ಮಾಮಾ, ಮಾಮಿ, ಕಾಕಾ, ಕಾಕು , ವೈನಿ ಅಂತ ಸಂಬೋಧಿಸುವ ವಾಡಿಕೆಯೂ ಇತ್ತು ಇದರಿಂದ ಅನ್ನ್ಯೋನ್ಯತೆ ಬೆಳೆಯುತ್ತಿತ್ತು.

ಒಬ್ಬರಿಗೊಬ್ಬರು ಸಹಾಯ ಮಾಡೋದು ಮತ್ತು ಕಡಾ ಕೇಳೋದು ಜೋಳದ ಹಿಟ್ಟು ಮುಗಿದರೆ ಕೇಳಿ ತಂದು ಬೀಸಿ ಕೊಡೋದು ಮತ್ತ ತಿರುಗಿ ಹೀಗೆಲ್ಲ ನಡೆಯೋದರಲ್ಲಿ ಭಾಂದವ್ಯ ಇತ್ತು.

ಒಬ್ಬರಿಗೊಬ್ಬರು ಬೆಳದಿಂಗಳಲ್ಲಿ ಪಂಕ್ತಿ ಊಟ ಮಾಡೋದು ಹಂಚಿ ತಿನ್ನೋದು ಒಂದು ತರಹ ಮಜಾನೇ ಇತ್ತು.

ದೀಪಾವಳಿಯಲ್ಲಿ ಪಗಡೆ ಆಟ ಅಂತೂ ಬಹಳ ವಿಶೇಷ ಅದರಲ್ಲೂ ಬಳಗದವರಿಗಿಂತ ಓಣಿ ಮಂದಿ ಗಂಡಸರು ಮತ್ತು ಹೆಣ್ಣು ಮಕ್ಕಳು ಕೂಡಿ ಪಗಡಿ ಆಟ ಆಡಿ ಅದರಲ್ಲಿ ನಡುವ ಬ್ರೇಕ್ ಚಹಾ  ಆಹ ಅದೆಂಥ ದಿನ ಅಂತೀರಾ ಈಗ ನೆನಿಸಿದರೆ ಗತ ಕಾಲದ ನೆನಪು ಮಾತ್ರ

 ಸಂಡಗಿ, ಹಪ್ಪಳ, ಶಾವಗಿ, ಉಪ್ಪಿನಕಾಯಿ ಮಾಡೋದು ಓಣಿ ಜನ ಸೇರಿ. ಅದೆಂಥ ಸಹಾಯ, ಪ್ರೀತಿ ನೆನೆಸುವುದಾಗಿದೆ ಆಗಿನ ಜನರ ಅನ್ನ್ಯೋನ್ಯ ವಿಚಾರಗಳು ನಗೆ ಮಾತುಗಳು. ಹರಟೆ ಕೇವಲ ಹರಟೆಯಾಗದೆ ಅದ್ದ್ಭುತ ವಿಚಾರಗಳನ್ನು ಹಂಚಿಕೊಳ್ಳುವುದು.

ಯಾರದೇಮನೆಯಲ್ಲಿ ಕಾರ್ಯಕ್ರಮ ಆದರೂ ಮನೆಯಲ್ಲಿ ಓಡಾಡಿ ಸಹಾಯ ಮಾಡುವುದು ಇದು ಒಂದು ತರಹ ನಾವೆಲ್ಲರೂ ಒಂದು ಅನ್ನುವ ವಿಚಾರ ತೋರಿಸುತ್ತಿತ್ತು ಕಷ್ಟದಲ್ಲಿ ಸುಖದಲ್ಲಿ ಭಾಗಿಯಾಗಿ ತಮ್ಮ ಹಿರಿಮೆಯನ್ನು ತೋರಿಸುತ್ತಿದ್ದರು.

ಇದೆಲ್ಲ ಈಗಿನ ಕಾಲದಲ್ಲಿ ಶೇಕಡಾ 99ರಷ್ಟು ಇಲ್ಲ. ತಾವಾಯಿತು ತಮ್ಮ ಮನೆ ಆಯಿತು ಎಲ್ಲ ಹಾಯ್ ಬಾಯ್ ಅಷ್ಟೇ ಯಾರಿಗೂ ಇದರ ಅವಶ್ಯಕತೆ ಇಲ್ಲ ಎಲ್ಲರದ್ದೂ ಬ್ಯುಸಿ ಲೈಫ್. ಬಾಜು ಮನೆಯಲ್ಲಿ ಏನು ಆದ್ರೂ ಗೊತ್ತಾಗದೆ ಇರುವ ಪರಿಸ್ಥಿತಿ ಈಗ. ಯಾಕೆಂದರೆ ಆ ನಂಬಿಕೆ ವಿಶ್ವಾಸವು ಯಾರಲ್ಲೂ ಉಳಿದಿಲ್ಲ ಉಳಿದವರು ಬೆರಳೆಣಿಕೆ ಯಲ್ಲಿ. ಮನೆಯಲ್ಲಿ ಹಿರಿಯರು ಮಕ್ಕಳು ಹೇಳಿದಂತೆ ಮೌನ ತಾಳಿ ಹೊಂದಿಕೊಂಡು ಮನೆಯಲ್ಲಿಯೇ ಉಳಿಯುತ್ತಾರೆ ಈಗಿರುವ ಪರಿಸ್ಥಿತಿ ಹೀಗೆ. ಈಗ ಪ್ರತಿಮನೆಯಲ್ಲಿ ಗಂಡ ಹೆಂಡತಿ ಮಕ್ಕಳು ಅತ್ತಿ ಮಾವ ಇಷ್ಟು ಮಾತ್ರ.

ಹೀಗೆ ಕಾಲಮಾನ ವಿಚಾರ ಆಚಾರ ಕೆಲಸದ ಒತ್ತಡ ಅಂತಾನೆ ಇಟ್ಟುಕೊಳ್ಳರಿ ಆದರ ಆಗಿನ ಜನರ ರೀತಿನೀತಿ ಹಂಚಿಕೊಳ್ಳುವ ಮಾತು ತೀರಾ ಕಡಿಮೆ. ಎಲ್ಲವೂ ತೋರಿಕೆಯ ಜೀವನ ಈಗಿನದು ಯಾವುದರಲ್ಲಿಯೂ ಸಮಾಧಾನವು ಇಲ್ಲ ಎಲ್ಲವೂ ಇದೆ ಆದ್ರೆ ಮನ್ಸಿಗೆ ನೆಮ್ಮದಿ ಇಲ್ಲ ಯಾಕೆಂದರೆ ಎಲ್ರಿಗೂ ಒಂದಿಲ್ಲ ಒಂದು ಒತ್ತಡ ಟೆನ್ಷನ್.  ಜೀವನವೇ ಟೆನ್ಷನ್. ಆಗ ಈ ಟೆನ್ಷನ್ ಪದಬಳಿಕೆ ಇರಲಿಲ್ಲ ಹಾಗಂತ ಅವರು ತುಂಬಾ ಕಾಲ ಬದುಕಿ ಬಾಳಿದರು. ನಾವು ಸಹ ಸ್ವಲ್ಪ ನಮ್ಮ ಹತ್ತಿರದವರೊಡನೆ ಒಂದು ಘಳಿಗೆ ಪ್ರೀತಿಯ ಮಾತುಗಳನ್ನು ಹಂಚಿಕೊಂಡು ನಮ್ಮ ಒತ್ತಡ ಕಡಿಮೆಮಾಡಿಕೊಳ್ಳೋಣ

ಇದು ವಾಟ್ಸಪ್ ಯುಗ ಯಾರಿಗೂ ಮಾತು ಬೇಡ ಕಣ್ಣಿಗೆ ಕೆಲಸ, ಮತ್ತು ಕೈ ಕೆಲಸ ಅಷ್ಟೇ.

 ಮನಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು  ಬಿಡುವಿನ ವೇಳೆಯಲ್ಲಿ ನಮ್ಮ ಹಿತೈಷಿ ಗಳೊಂದಿಗೆ  ಹಾಸ್ಸ್ಯ ಹರಟೆ, ಸಂಗೀತ, ಆಧ್ಯಾತ್ಮ ವಿಚಾರ,  ಸಾಹಿತಿಕ ವಿಚಾರ  ಚಿಂತನೆ ಮಾಡಿದಾಗ ನಮ್ಮ ಮನಸು ಪ್ರಫುಲ್ಲ ವಾಗುವುದಲ್ಲವ

*******************************************

About The Author

2 thoughts on “ಹರಟೆ ಕಟ್ಟೆ”

  1. ಮಾಲಾ ಬಹಳ ಚೆನ್ನಾಗಿದೆ ಹಲವು ನೈಜತೆಗಳಲ್ಲಿ ಇದು ಒಂದಾಗಿದೆ.ಆದರೆ ನಾವೆಲ್ಲರೂ ನಮ್ಮ ಸಂಕುಚಿತ ಭಾವನೆಗಳಿಂದಾಗಿ ನೈಜತೆಯಿಂದ ಕೃತ್ರಿಮತೆಯೆಡೆಗೆ ಬಹಳ ದೂರ ಪ್ರಯಾಣ ಬೆಳೆಸಿದ್ದೇವೆ.ನಾವು ಮತ್ತೆ ಹಿಂದೆ ತಿರುಗಿ ನೋಡಬೇಕು.ಅದನ್ನು ಪಡೆಯುವ ಪ್ರಯತ್ನ ಮಾಡಬೇಕು

    1. ಶೋಭಾ ಕುಲ್ಕರ್ಣಿ

      ಮನದಾಳದ ಮಾತನ್ನು ತುಂಬಾ ಸವಿಯಾಗಿ ಹಂಚಿಕೊಂಡಿದ್ದೀರಿ

Leave a Reply

You cannot copy content of this page

Scroll to Top