ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

Heart flower. Valentine flower heart design, vector illustration vector illustration

ರತ್ನರಾಯ ಮಲ್ಲ

ಅಂದವನ್ನು ಮುಚ್ಚಿಡಲು ಬಟ್ಟೆಗಳನ್ನು ತರುತಿರುವೆ
ಚಂದವನ್ನು ಹೆಚ್ಚಿಸಲು ಸೀರೆಯನ್ನು ಉಡಿಸುತಿರುವೆ

ಅವಯವಗಳ ಇಳಿಜಾರಿನಲ್ಲಿ ಬೆರಳುಗಳು ಸೋಲುತಿವೆ
ಸೌಂದರ್ಯದ ಕೆನೆಯಲ್ಲಿ ಪ್ರೀತಿಯಿಂದ ಅಲೆಯುತಿರುವೆ

ಹೇಮವನ್ನು ನಾಚುವ ಕಿವಿಯೋಲೆಗಳನ್ನು ತಂದಿರುವೆ
ಒರಟು ಅಧರಗಳಿಂದ ಕರ್ಣಗಳನ್ನು ಸಿಂಗರಿಸುತಿರುವೆ

ಹೃದಯದ ಉದ್ಯಾನದಲ್ಲಿ ಹೂವೊಂದು ಅರಳಿ ನಿಂತಿದೆ
ಹಿಂಬದಿಯಿಂದ ಆಲಂಗಿಸಿ ಲತೆಯನ್ನು ಮುಡಿಸುತಿರುವೆ

ತೆಳುವಾದ ಮೈಯ ಕಂಡು ಅರಿವೆಗೂ ತುಸು ಮತ್ಸರ ಮಲ್ಲಿ
ಶೂನ್ಯ ಅಂಗದ ಸೊಬಗಿನಲಿ ನಾನು ಕಳೆದು ಹೋಗುತಿರುವೆ

************************

About The Author

2 thoughts on “ಗಝಲ್”

  1. ಡಾ. ಮಲ್ಲಿನಾಥ ಶಿ. ತಳವಾರ

    ತುಂಬು ಹೃದಯದ ಧನ್ಯವಾದಗಳು ಸರ್ ಜೀ…

Leave a Reply

You cannot copy content of this page

Scroll to Top