ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಎಚ್.ಕೆ.ನಟರಾಜ್

ನಿಜಕ್ಕೂ ನಿನ್ನ ಮೇಲೆ ತುಂಭಾ ಮನಸಾಗಿದೆ
ಹೇಗೇ ಹೇಳಲಿ. ನೀನೊಪ್ಪದೆ ಬಯ್ದರೆ
ತಿರಸ್ಕರಿಸಿದರೆ
ಆ ನೋವ ಹೇಗೆ ಸಹಿಸಲೀ
ಈ ಮನದಾಳದೊಲವಿಗೆ
ಏನೆಂದು ಹೆಸರಿಡಲಿ.
ನಿದ್ದೆಗಳಿಲ್ರದ ರಾತ್ರೀ
ಇರುಳ ನಿಶೆಯೂ ನಿನ್ನ ಮುಗುಳ್ನಗೆಯ
ಹೊನಲಲ್ಲಿ ಬೆಳಕಾಗಿ ಕಾಡುತ್ತದೆ
ನೀ ನನ್ನ ಒಲವು ತಾನೆ.
ಹೇಳೇ
ಕಾವ್ಯವನೆ ಉಲಿವ ಜಾಣೆ
ಹೃದಯ ಕುದಿವ ಕುಲುಮೆ ಕೆಂಡ
ವಿರಹದುರಿಯ ಹೊಂಡ..
ಅಗ್ನೀಕುಂಡವಾಗಿದೆ.
ಸವೆಸಿ ಬಂದ ದಾರಿಯಲ್ಲೆಲ್ಲಾ..
ನಿನ್ನ ಗುರುತಿನ ನೆನಪುಗಳ ಬಳ್ಳಿ…
ವೃಕ್ಷ… ಘಮಲಿನ ಪುಷ್ಪ
ಹೇಗೆ ದಾಟಲಿ ಈ ಬದುಕ.. ಪ್ರೀತಿಯದೆಯಲ್ಲರಳಿದ ಉತ್ಥಾನದ ನೆನಪ
ಹೇಗೆ ಬಂದರೂ.. ಸುತ್ತಿ ನಿಂತರೂ
ಬಳಸಿ ಬಂದರೂ ಕಾಡುವುದು…
ನಿಜಕ್ಕೂ ನಿನ ಮೇಲೆ ಮನಸಾಗಿದೆ
ಕನಸುಗಳಲ್ಲಿ ಕಾಡದೆ ಬಂದು ಮುದ್ದಿಸಿಬಿಡೆ

ನಿನದೇ ನೆನಪು ಹೊತ್ತು ಗೊತ್ತಿಲ್ಲದೆ ಕಾಡುವುದು. ಹಾಡುವುದು ನಿನದೇ ನೆನಪ
ಮಂಜುಮಾತಿನ ಮಲ್ಲಿಗೆ ನಿನ ಸೂಗಸ

ಹೇಳೇ ಕಿನ್ನರಿ.. ನನ್ನೊಲವ ಸುಂದರಿ
ನೀ.. ನನ್ನ ಪ್ರೀತಿಸುವ ತಾನೆ.. ನಾ ಕಾರ್ಮುಗಿಲ ಕಪ್ಪಾದರೂ ನೀನು ಹೊಳೆವ ಬಿಳಿ ಮುಗಿಲು
ಅಂದುಕೊಳ್ಳಲೇ ಇನ್ನು ನನಗಿಲ್ಲಾ ದಿಗಿಲು
ನೀನು ಅಪ್ರತಿಮ ಸುರಸುಂದರಿಗೂ ಮಿಗಿಲು
ತೆರೆದಿದೆ ನಿನ ಸ್ವಾಗತಕೆ
ಎಂದೂ ನನ್ನ ತೆರೆದೆದೆಯ ಬಾಗಿಲು

ಹೊತ್ತು ಗೊತ್ತಿನ ಪರಿವೇ ಏತಕೆ ಪರಿಮಳ
ನೀ ಬರದಿದ್ದರೆ ಮನ ತಾಳದು ತಳಮಳ
ಬಂದು ಬೀಡೆ ನಲ್ಲೆ ನಸು ನಾಚಿ ನಿಲ್ಲೆ
ನನ್ನೆದೆಯ ಅಂಗಳದಿ ಆಡೋಣ ನಾವಿಬ್ಬರು ಕುಂಟೋಬಿಲ್ಲೆ
ಹೇಳಿಬಿಡಲೇ.. ನಿನ ಮೇಲೆ ಮನಸಾಗಿದೆ..
ಮುನಿಸು ತೋರದೆ..
ಮುಖ ಮುತ್ತಿದ ಮುಂಗುರುಳೊಳಗೆ
ನಕ್ಕು ರಮಿಸಿಬಿಡೇ. ಒಮ್ಮೆ..
ಹಾಗೇ. ಕ್ಷಮಿಸಿ ಬಿಡೆ ನನ್ನ ಸುಮ್ನೆ
(ನೀನು)

******************************

About The Author

1 thought on “ಒಂದು ಪ್ರೇಮ ಕವಿತೆ”

Leave a Reply

You cannot copy content of this page

Scroll to Top