ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಂಗೇಕೆ..?

ಕವಿತೆ ಹಂಗೇಕೆ..? ವೀಣಾ ಪಿ. ಹಂಗೇಕೆ..?ಇಹದ ಅಂಗೈಯಹುಣ್ಣಿಗೆಕನ್ನಡಿಯ ಹಂಗೇಕೆ..? ಮೆರುಗು ಮೌನದಮಂದಿರಕೆಮಾತಿನ ಹಂಗೇಕೆ..? ಶುದ್ಧ ಶ್ವೇತದಒನಪಿಗೆರಂಗಿನ ಹಂಗೇಕೆ..? ಗತಿಯ ಗಮ್ಯದನಡುಗೆಗೆಗತದ ಹಂಗೇಕೆ..? ಅಗ್ನಿಗೆದೆಯೊಡ್ಡಿ ಗೆದ್ದಪಾವನೆಗೆಪತಿತತೆಯ ಹಂಗೇಕೆ..? ರಾಗ-ದ್ವೇಷಗಳಳಿದವಿರಕ್ತೆಗೆಅನುರಕ್ತಿಯ ಹಂಗೇಕೆ..? ಬಂಧನವ ಕಳಚಿಟ್ಟ ದಿಟ್ಟಪರಿವ್ರಾಜೆಗೆಸಂಘದ ಹಂಗೇಕೆ..? ಬದ್ಧ ಬದುಕ ಧನ್ಯಾತ್ಮಭಾವಕ್ಕೆಸಾವಿನಾಚಿನ ಮುಕ್ತಿಯ ಹಂಗೇಕೆ..? ***********************************

ಹಂಗೇಕೆ..? Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ -9

ಕಬ್ಬಿಗರ ಅಬ್ಬಿ -8 ಬಂಧ ಮತ್ತು ಸ್ವಾತಂತ್ರ್ಯದ ನಡುವೆ ಹದ ಹುಡುಕುತ್ತಾ. ಶ್ರೀ ಹರಿ ಕೋಟಾದ ರಾಕೆಟ್ ಉಡ್ಡಯನ ಕೇಂದ್ರವದು. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಗಣಕಯಂತ್ರದ ಪರದೆಯೇ ಕಣ್ಣಾಗಿ ಕುಳಿತಿದ್ದಾರೆ. ಮಹಿಳಾ ವಿಜ್ಞಾನಿಯ ಇಂಪಾದ ಮತ್ತು ಅಷ್ಟೇ ಸಾಂದ್ರವಾದ ದನಿಯಿಂದ ನಿಧಾನವಾಗಿ ಮತ್ತು ಖಚಿತವಾಗಿ…ಹತ್ತು..ಒಂಭತ್ತು…ಎಂಟು.. ಹೌದು. ಅದು ಕೌಂಟ್ ಡೌನ್! ಉಪಗ್ರಹದ ಭಾರ ಹೊತ್ತ ರಾಕೆಟ್ ಸಾಕಮ್ಮನ ಮಡಿಲಿಂದ ಎದೆಯುಬ್ಬಿಸಿ ಹಾರಬೇಕು.ಒಂದು….ಸೊನ್ನೆ!!.ಅದೋ ಅದೋ..ಅಧೋಮುಖದಿಂದ ಬೆಂಕಿ ಹೊಗೆ ಚಿಮ್ಮಿತು, ರಾಕೆಟ್ಟು ಜಿಗಿಯಿತು ಅನಂತಕ್ಕೆ. ವ್ಯೋಮಗಮನಕ್ಕೆ ಮೊದಲ ಜಿಗಿತ.ಸಾಕೇ?. ಸಾಲದು!. ಭೂಮಿತಾಯಿಯ ಪ್ರೇಮ ಬಂಧನದಿಂದ ದಾಟಿಹೋಗಲು ಸುಲಭವೇ. ತಾಯಿ ಅವಳು. ಮಗು ಮಡಿಲು ಬಿಟ್ಟು ಹೋಗಲು ಮನಸ್ಸು ಒಪ್ಪಲ್ಲ. ವೇಗ..ಹೆಚ್ಚಿಸಬೇಕು.. ನೇರವಾಗಿ ಹಾರಿದರೆ ವೇಗ ವೃದ್ಧಿಸಲು ಮಾತೆಯ ಕೊಂಡಿ ಕಳಚಲು ಕಷ್ಟ. ಹಾಗೇ ಪ್ರೀತಿಯಿಂದ ಓಡಿ ಒಂದರ್ಧ ಪ್ರದಕ್ಷಿಣೆ ಹಾಕಿ ಭೂಮಿತಾಯಿಯ ಒಲವಿನ ವೃತ್ತಕ್ಕೆ ಹೊರಮುಖಿಯಾಗಿ ಹಾರುತ್ತಾ, ವಿಮೋಚನಾ ವೇಗ( escape velocity) ಪಡೆದು ಹಾರಿದಾಗ..ಅದು ಕೊನೆಯ ಲಂಘನ. ಭೂತಾಯಿಯ ಆಕರ್ಷಣೆಯಿಂದ ಬಿಡುಗಡೆ!ವ್ಯೋಮದಲ್ಲಿ, ನಿರ್ವಾತ! ಹಾರಲು ತಡೆಯೇ ಇಲ್ಲ! ಅಂತಹ ಬಿಡುಗಡೆ ಅದು! ಇನ್ನೊಂದು ಉದಾಹರಣೆ ಕೊಡುವೆ!. ಆಕೆ ಗರ್ಭಿಣಿ. ಅಮ್ಮನಾಗುವ ತವಕ. ದಿನಗಳು ಕಳೆದು ಮಗು ಬೆಳೆದು..ಹೆರಿಗೆ ಆಗದಿದ್ದರೆ?. ಆಗಲೇ ಬೇಕು. ಮಗು ಗರ್ಭದ ಕೋಶದೊಳಗಿಂದ ತಾಯಿ ದೇಹದ ಬಂಧ ಬಿಡಿಸಿ, ಜನ್ಮಿಸಿದಾಗ ಮೊದಲ ಕೆಲಸ, ಹೊಕ್ಕುಳ ಬಳ್ಳಿ ತುಂಡರಿಸುವುದು. ಅದು ಮಗುವಿನ ದೇಹಕ್ಕೆ ಸ್ವತಂತ್ರವಾಗಿ ಎದೆ ಬಡಿಯಲು, ಉಸಿರಾಡಲು ಸಿಗುವ ಸ್ವಾತಂತ್ರ್ಯ. ಸಹಜ ಕ್ರಿಯೆಯಾದರೂ ಸಣ್ಣ ವಿಷಯ ಅಲ್ಲ,ಅದು. ಪಲ್ಲಣ್ಣ ಗಾಳಿಪಟ ಹಾರಿಸ್ತಿದ್ದಾರೆ. ಅದರ ದಾರ ಒಲವು. ಆದರೆ ದಾರವನ್ನು ಗಟ್ಟಿಯಾಗಿ ಹಿಡಿದರೆ ಗಾಳಿಪಟ ಹಾರಲ್ಲ! ದಾರವನ್ನು ಬಿಡಬೇಕು! ಮತ್ತೆ ಹಿಡಿಯಬೇಕು. ಗಾಳಿಪಟ ಒಂದಷ್ಟು ಹಾರಿದಾಗ ಪುನಃ ದಾರವನ್ನು ತನ್ನತ್ತ ಸೆಳೆಯಬೇಕು, ಮತ್ತೆ ಬಿಡಬೇಕು. ಹೀಗೆ ನಿರಂತರವಾಗಿ ಎಳೆದೂ ಬಿಟ್ಟೂ, ಎಳೆದೂ ಬಿಟ್ಟೂ ನೂರಾರು ಬಾರಿ ಮಾಡಿದಾಗ ಗಾಳಿಪಟ ಆಗಸದ ಎತ್ತರದಲ್ಲಿ ಪಟಪಟಿಸಿ ಏರೋಡೈನಮಿಕ್ಸ್ ನ ಪಾಠ ಮಾಡುತ್ತೆ. ಹಕ್ಕಿ ಗೂಡಲ್ಲಿ ಮರಿಗಳಿಗೆ ರೆಕ್ಕೆ ಪುಕ್ಕ ಬಲಿತು ಹಾರುವ ವರೆಗೆ ಅಮ್ಮ ಹಕ್ಕಿ , ಮರಿಕೊಕ್ಕಿನೊಳಗೆ ಕಾಳಿಕ್ಕುತ್ತೆ. ಒಂದು ದಿನ ಅಚಾನಕ್ಕಾಗಿ ಹಕ್ಕಿ ಮರಿ ರೆಕ್ಕೆ ಬೀಸುತ್ತೆ, ಆಗಸಕ್ಕೆ ಹಾರುತ್ತೆ.ಬಂಧ, ಬಂಧನ ಮತ್ತು ಸ್ವಾತಂತ್ರ್ಯ ಇವುಗಳು ಜೀವ ನಿರ್ಜೀವ ಜಗತ್ತಿನ ಚಲನತತ್ವದ ಸಮೀಕರಣಗಳ ಚರಸಂಖ್ಯೆಗಳು. ಹಾಗಿದ್ದರೆ ಪ್ರೀತಿ ಬಂಧನವೇ. ಅಗತ್ಯವೇ ಅನಗತ್ಯವೇ?. ಮೀರಾ ಜೋಶಿಯವರ ಕವನ “ಮರಳು ಗೂಡಿಗೆ” ಇಂತಹ ಒಂದು ಹದ ಹುಡುಕುವ ಪ್ರಯತ್ನ. ಕವಿತೆ ಓದಿದಂತೆ ಅದಕ್ಕೆ ಅಧ್ಯಾತ್ಮಿಕ ದೃಷ್ಟಿಕೋನ ಪ್ರಾಪ್ತವಾಗುವುದು ಕವಿತೆಯ ಇನ್ನೊಂದು ಮುಖ. ಮೊದಲು ಕವಿತೆ ನೋಡೋಣ. ** *** *** ಮರಳು ಗೂಡಿನತ್ತ ಎನ್ನಂಗಳದಲಿ ಮೊಟ್ಟೆಯೊಡೆದುಮರಿಯೊಂದು ಹೊರ ಬಂದಿತ್ತುಕೋಮಲ ನಿಸ್ಸಹಾಯಕಬಯಸಿದರೂ ಹಾರಲಾರದು ಹಾಲುಣಿಸಿ ನೀರುಣಿಸಿಕಾಳುಗಳಕ್ಕರದಿ ತಿನಿಸಿಬೆಳೆಯುವದ ನೋಡುತಲಿದ್ದೆನೋಡಿ ನಲಿಯುತಲಿದ್ದೆ ಪಿಳಿ ಪಿಳಿ ಬಿಡುವ ಕಣ್ಣಿನಲಿಇಣುಕಿದಾ ಮುಗ್ಧತೆಕಂಡಾಗ ಹೃದಯದಲಿಸೂಸಿತು ಮಮತೆ ಬೆಳೆ ಬೆಳೆದಂತೆ ಗರಿಗೆದರಿನನಗೇನೋ ಭಯಹಾರಿಹೋಗುವದೇನೋ ಎಂಬಕಳವಳ ವ್ಯಾಕುಲ ಅಂತೆಯೇ ಪಂಜರದಲಿಟ್ಚೆಎಲ್ಲ ಸುಖವ ಕೊಟ್ಟೆಸದಾ ಕಣ್ಣಿನ ಕಾವಲಿಟ್ಟೆಹಾರದೆಂದು ಸಂಭ್ರಮ ಪಟ್ಚೆಒಂದು ದಿನ ಪ್ರೀತಿಯುಕ್ಕಿ ಅಂಜಲಿಯಲ್ಹಿಡಿದುಮುದ್ದು ಮಾಡುತಲಿದ್ದೆಹೃದಯ ಸಮೀಪದಲ್ಲಿಟ್ಟು ಸುಖಿಸುತಿದ್ದೆಭಾವಾವೇಶದಲಿ ಎಲ್ಲಿಯೋ ನೋಡುತಿದ್ದೆ ಹಕ್ಕಿಯನಿಡಲು ಪಂಜರದಲಿಪ್ರೇಮ ಸೂಸುತ ನೋಡಿದೆ ಕೈಗಳಲಿಅಂಜಲಿ ಯಾವಾಗಲೋ ಸಡಿಲಿಸಿತ್ತುಹಕ್ಕಿ ಗರಿಗೆದರಿ ಹಾರಿ ಹೋಗಿತ್ತು ಅತ್ತಿತ್ತ ಅರಸಿದೆವ್ಯರ್ಥ ನೋಟ ಹರಿಸಿದೆಪಂಜರ ಚಿತೆಯೇರಿತುಇನ್ನೂ ನಿಂತೇ ಇದ್ದೇನೆ ನಿರೀಕ್ಷೆಯಲಿಎಂದಾದರೂ ಮರಳಿ ಬರಬಹುದೇನೋಹೊಸದೊಂದು ಗೂಡಿಗೆ ** *** *** ಈ ಕವಿತೆಯಲ್ಲಿ ಕವಿಯ ಅಂಗಳದಲ್ಲಿ ಅನಾಥ ಮೊಟ್ಟೆ, ಅದು ಮರಿಯಾಗುತ್ತೆ. ಹಕ್ಕಿ ಮರಿ.ಕವಿ ಆ ಮರಿಯನ್ನು ಸಾಕಿ ಸಲಹುತ್ತಾಳೆ.ಕವಿಗೆ ಹಕ್ಕಿಯತ್ತ ಎಷ್ಟು ಪ್ರೇಮ!. ಹಾರಿ ಹೋದರೆ! “ಬೆಳೆ ಬೆಳೆದಂತೆ ಗರಿಗೆದರಿನನಗೇನೋ ಭಯಹಾರಿಹೋಗುವದೇನೋ ಎಂಬಕಳವಳ ವ್ಯಾಕುಲ” ಈ ಕವಿತೆಯಲ್ಲಿ ಕವಿ ಪ್ರಶ್ನಿಸದಿದ್ದರೂ ಮನಕ್ಕೆ ಬರುವ ಪ್ರಶ್ನೆ ..ಹಾರಲು ಬಿಡಬೇಕೇ ಬೇಡವೇ?ಅಂತೂ ಕವಿ ಒಂದು ಪಂಜರ ತಂದು….. “ಅಂತೆಯೇ ಪಂಜರದಲಿಟ್ಚೆಎಲ್ಲ ಸುಖವ ಕೊಟ್ಟೆಸದಾ ಕಣ್ಣಿನ ಕಾವಲಿಟ್ಟೆಹಾರದೆಂದು ಸಂಭ್ರಮ ಪಟ್ಚೆ” ಇಲ್ಲಿರುವ ವಿಪರ್ಯಾಸ ಗಮನಿಸಿ. ಕವಿಗೆ, ಹಕ್ಕಿಯ ಮೇಲೆ ಪ್ರೇಮ. ಹಕ್ಕಿ ಹಾರಿ ಹೋಗುವ,ತನ್ನ ಆಧೀನದಿಂದ ದಾಟಿಹೋಗುವುದನ್ನು ಸುತರಾಂ ಒಪ್ಪಲಾರ. ಆದರೆ ಹಕ್ಕಿ!. ಹಾರಲೇ ಹುಟ್ಟಿದ ಜೀವವದು. ಪಂಜರ ಅದಕ್ಕೆ ಬಂಧನ. ಹಾಗೊಂದು ದಿನ ಬೊಗಸೆಯಲ್ಲಿ ಹಕ್ಕಿ ಹಿಡಿದು ಪ್ರೇಮದಲ್ಲಿ ಮೈಮರೆತಾಗ ಹಕ್ಕಿ ಹಾರಿ ಹೋಗುತ್ತೆ.ಕವಿ ಪಂಜರವನ್ನು ಕಳೆದು ಮುಂದೊಂದು ದಿನ ಹಕ್ಕಿ ಬರಬಹುದೇನೋ ಎಂದು ಕಾಯತ್ತಾನೆ.ಇದಿಷ್ಟು ನೇರವಾದ ಅರ್ಥ. ಇದರೊಳಗೆ ಅಡಕವಾಗಿರುವ ಧರ್ಮ ಸೂಕ್ಷ್ಮವನ್ನು ಗಮನಿಸಿ. ಕವಿಯ ಪಂಜರದೊಳಗೆ ಹಕ್ಕಿ, ಅದು ಕವಿಯ ಪ್ರೇಮ. ಹಕ್ಕಿಗೆ ಅದು ಬಂಧನ. ಹಾಗಿದ್ದರೆ,ಪ್ರೇಮ ಬಂಧನವೇ, ಪ್ರೇಮವಿರಬಾರದೇ?ಸಮಾಜದಲ್ಲಿ ಹಲವಾರು ಅಮ್ಮಂದಿರು, ಮಕ್ಕಳನ್ನು ಅತಿಯಾಗಿ ಪ್ರೀತಿಸಿ ( pampered child), ಮಕ್ಕಳ ಬೆಳವಣಿಗೆ ಆಗದಿರುವ ಸಾಮಾಜಿಕ ಸಮಸ್ಯೆಯನ್ನು ಕವಿ ಎಷ್ಟು ಚಂದ ಕಟ್ಟಿ ಕೊಟ್ಟಿದ್ದಾನೆ. ಹಾಗಿದ್ದರೆ ಪ್ರೇಮ ಎಂದರೆ ಪೂರ್ಣ ಸ್ವಾತಂತ್ರ್ಯವೇ?. ಪೂರ್ಣ ಸ್ವಾತಂತ್ರ್ಯ ಅನುಭವಿಸಿದ ಮಕ್ಕಳು ದಾರಿ ತಪ್ಪಿ ವ್ಯಸನಗಳಿಗೆ ದಾಸರಾದದ್ದೂ ಕಾಣಿಸುತ್ತೆ. ನಾನು ಮೊದಲೇ ಹೇಳಿದ ಗಾಳಿಪಟದ ಉದಾಹರಣೆಯಲ್ಲಿ ಹೇಳಿದ ಹಾಗೆ,ಹಿಡಿದೂ ಬಿಟ್ಟೂ ಪುನಃ ಪುನಃ ಮಾಡಿದಾಗಲೇ ಗಾಳಿಪಟ ಹಾರುತ್ತೆ ಎತ್ತರದಲ್ಲಿ.ಭೂಮಿಯ ಗುರುತ್ವಾಕರ್ಷಣ ಶಕ್ತಿ ಇಲ್ಲದಿದ್ದರೆ ನಮಗೆ ನೆಲದಲ್ಲಿ ನೇರವಾಗಿ ಧೃಡವಾಗಿ ನಿಲ್ಲಲು, ನಿಯಂತ್ರಣದಲ್ಲಿ ಚಲಿಸಲು ಆಗಲ್ಲ. ಗುರುತ್ವಾಕರ್ಷಣ ಶಕ್ತಿ ಅಧಿಕವಾದರೆ ಮಲಗಿದಲ್ಲೇ ಬಂದಿಯಾಗುತ್ತೇವೆ. ಹಾಗೆಯೇ ಪ್ರೇಮದ ಕಾಂತೀಯ ಶಕ್ತಿಯನ್ನು ಅತ್ಯಂತ ವಿವೇಚನೆಯಿಂದ ಪ್ರಯೋಗಿಸುವುದು, ಮಗುವಿನ ಬೆಳವಣಿಗೆಗೆ ಅಗತ್ಯ. ಮಗು ಬೆಳೆದ ಮೇಲೆ ಅದರ ಕಾಲಲ್ಲಿ ನಿಲ್ಲುವ, ರೆಕ್ಕೆ ಬೀಸಿ ಹಾರುವುದರಲ್ಲಿ, ಹಾರಲು ಬಿಡುವುದರಲ್ಲಿ ನಾವೆಲ್ಲರೂ ಸಂಭ್ರಮ ಪಡಬೇಕು ತಾನೇ. ಈಗ ಕವಿತೆಯ ಎರಡನೆಯ ಅರ್ಥಸಾಧ್ಯತೆಗೆ ಬರೋಣ. ” ಎನ್ನಂಗಳದಿ ಮೊಟ್ಟೆಯೊಡೆದು ಮರಿಯೊಂದು ಹೊರ ಬಂದಿತ್ತು” ಅಂಗಳ ಎಂಬ ಪದದ ವ್ಯಾಪ್ತಿ ದೊಡ್ಡದು. ಅದು ಚಿಂತಕನ ಮನದಂಗಳ ಆಗಬಹುದು. ಮನದಂಗಳದಲ್ಲಿ ಮೊಟ್ಟೆಯೊಡೆದುಮರಿ ಹೊರಬರುವುದು ಒಂದು ಹೊಸ ಚಿಂತನೆ, ಐಡಿಯಾ, ಭಾವನೆ, ಕವಿತೆ,ಕನಸು ಆಗಬಹುದು.ಇವಿಷ್ಟನ್ನೂ ಮನಸ್ಸಿನೊಳಗೆ ಬೆಳೆಸುತ್ತೇವೆ. ನಮ್ಮ ಯೋಚನೆಯನ್ನು, ಅತ್ಯಂತ ಪ್ರೀತಿಸುತ್ತೇವೆ. ಅವುಗಳನ್ನು ಸಿದ್ಧಾಂತ ಎಂಬ ಪಂಜರದೊಳಗೆ ಬಂದಿಯಾಗಿಸಿ ಖುಷಿ ಪಡುತ್ತೇವೆ. ಒಂದು ದಿನ ನಂಬಿದ ಸಿದ್ಧಾಂತ ಮುರಿದಾಗ ಚಿಂತನೆಗೆ ಸ್ವಾತಂತ್ರ್ಯ ಸಿಕ್ಕಿ ಅದು ನಾಲ್ಕೂ ದಿಕ್ಕುಗಳಿಗೆ ಹರಿಯುತ್ತೆ. ಇಂತಹ ಸ್ವಸಿದ್ಧಾಂತದೊಳಗೆ ಬಂದಿಯಾದ ಹೊರಬರಲಾರದ ಅದೆಷ್ಟು ಚಿಂತಕರು ನಮ್ಮ ಸುತ್ತುಮುತ್ತಲೂ.ಹಾಗೆ ಬಂದಿಯಾದವರು, ಬೆಳವಣಿಗೆ ಸ್ಶಗಿತವಾಗಿ ಕಾಲಗರ್ಭದೊಳಗೆ ಕಾಣೆಯಾಗುವುದನ್ನೂ ಕಾಣುತ್ತೇವೆ. ಒಮ್ಮೆ ಚಿಂತನೆ ಕವಿತೆಯಾಗಿಯೋ, ಕಲೆಯಾಗಿಯೋ,ಚಿತ್ರವಾಗಿಯೋ ಹೊರಬಂದರೆ ಹಳೆಯ ಪಂಜರದ ಪಳೆಯುಳಿಕೆಗಳನ್ನು ದಹಿಸಿ ಮನಸ್ಸನ್ನು ಹಸಿಯಾಗಿಸಿ, ಇನ್ನೊಂದು ಚಿಂತನೆಯ ಹಕ್ಕಿ ಗೂಡುಕಟ್ಟಲು ಅನುವು ಮಾಡಿಕೊಡಬೇಕು. ಇನ್ನು ಮೂರನೆಯ ಅರ್ಥಕ್ಕೆ ಬರೋಣ. ಕವಿತೆಯ ಶೀರ್ಷಿಕೆ ” ಮರಳು ಗೂಡಿಗೆ”ಮರಳು ಎಂಬುದು ವಾಪಸ್ ಬರುವುದು ಎಂಬ ಸಾಧಾರಣ ಅರ್ಥ, ಮೇಲೆ ಹೇಳಿದ ಎರಡೂ ಇಂಟರ್ಪ್ರಿಟೇಷನ್ ಗಳಿಗೆ ಹೊಂದುತ್ತದೆ.ಆದರೆ ಮರಳು ಗೂಡಿಗೆ ಎಂಬುದು ಮರಳಿನಿಂದ ಮಾಡಿದ ಗೂಡಿಗೆ ಎಂಬ ಅರ್ಥವೂ ಇದೆ ತಾನೇ.‌ಮರಳು ಒದ್ದೆಯಾದಾಗ ಗೂಡು ಮಾಡಿದರೆ ನಿಲ್ಲುತ್ತೆ. ಮರಳಿಂದ ನೀರಿನ ಅಂಶ ಒಣಗಿದಾಗ ಅದು ಕುಸಿಯುತ್ತೆ. ಅಷ್ಟೂ ತಾತ್ಕಾಲಿಕ ಅದು. ನಶ್ವರ ಅದು. ಪುರಂದರ ದಾಸರ ಗಿಳಿಯು ಪಂಜರದೊಳಗಿಲ್ಲ ಎಂಬ ಪದ್ಯದಲ್ಲಿ, ಒಂಭತ್ತು ಬಾಗಿಲ ಮನೆ ಅಂತ ಈ ಪಂಜರವನ್ನು ವರ್ಣಿಸುತ್ತಾರೆ. ಈ ಮರಳು ಮನೆ ಅದೇ ಪಂಜರವೇ?ಪದ್ಯದ ಅಷ್ಟೂ ಸಾಲುಗಳೂ ದೇಹ,ಆತ್ಮವನ್ನು ಸಲಹುವಂತೆಯೇ ಇದೆ. ಕೊನೆಯ ಪ್ಯಾರಾದಲ್ಲಿ, ಗಮನಿಸಿ. “ಪಂಜರ ಚಿತೆಯೇರಿತುಇನ್ನೂ ನಿಂತೇ ಇದ್ದೇನೆ ನಿರೀಕ್ಷೆಯಲಿಎಂದಾದರೂ ಮರಳಿ ಬರಬಹುದೇನೋಹೊಸದೊಂದು ಗೂಡಿಗೆ” ಅಸ್ತಿಪಂಜರ, ಆತ್ಮದ ಹಕ್ಕಿ ಬಿಟ್ಟು ಹೋದಾಗ ಚಿತೆಯೇರುತ್ತೆ. ಆತ್ಮ ಪುನಃ ಹೊಸ ಗೂಡು ಹುಡುಕಿ ಮರಳಿ ಬರುವುದೇ. “ಪುನರಪಿ ಜನನಂ ಪುನರಪಿ ಮರಣಂಪುನರಪಿ ಜನನೇ ಜಠರೇ ಶಯನಂ” ಎಂಬ ಶಂಕರಾಚಾರ್ಯರ ಗೀತೆಯ ಸಾಲುಗಳ ಹಾಗೆ ಆತ್ಮ ಗೂಡಲ್ಲಿ ವಾಸ ಹೂಡುತ್ತೆ. ಗೂಡು ಬಿಟ್ಟು ಹೊಸ ಗೂಡಿಗೆ ವಾಪಸ್ಸಾಗುತ್ತೆ.ಇಲ್ಲಿನ ಗೂಡು,ಮರಳು ಗೂಡು.ನಶ್ವರವೂ ಹೌದು. ಪುನಃ ಪುನಃ ಮರಳಬೇಕಾದ ಗೂಡೂ ಹೌದು. *********************************************** ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

ಕಬ್ಬಿಗರ ಅಬ್ಬಿ -9 Read Post »

ಕಾವ್ಯಯಾನ

ರೇಖಾಭಟ್ ಕಾವ್ಯಗುಚ್ಛ

ರೇಖಾಭಟ್ ಕಾವ್ಯಗುಚ್ಛ ಮರುಹುಟ್ಟು ಇಳಿಯಬೇಕು ನೆನಪಿನಾಳಕೆಮುದಗೊಳ್ಳಬೇಕುಎದುರಿಗೆ ಹಾಸಿ ಹರವಿಕೊಂಡುಚೆನ್ನ ನೆನಪುಗಳಆಯಸ್ಸು ಹೆಚ್ಚಿಸಬೇಕುಮೆತ್ತಗಾದ ಹಪ್ಪಳ ಸಂಡಿಗೆಗಳುಬಿಸಿಲಿಗೆ ಮೈಯೊಡ್ಡಿಗರಿಗರಿಯಾಗಿ ಡಬ್ಬಿ ಸೇರುವಂತೆನೆನಪುಗಳು ಸದಾ ಬೆಚ್ಚಗಿರಬೇಕು ಒತ್ತಿ ತಡೆ ಹಿಡಿದ ನೋವಿಗೂಆಗಾಗ ಬಿಕ್ಕಲುರಂಗ ಸಜ್ಜಿಕೆ ಬೇಕುತುಂಬಿಕೊಂಡ ಮಂಜು ನಂಜುಪೂರ್ತಿ ಹೊರಹೋಗಬೇಕು ಬಾಚಿ ಕರೆಯಬೇಕುನೆನಪೆಂಬ ನೆಂಟನನ್ನುನಿನ್ನೆಯ ನಂಟಿನ ಗಂಟುಗಳಬಿಡಿಸುತ್ತ ಹರಟಬೇಕುಅಂಟಿಯೂ ಅಂಟದಿರುವನೆನಪಿಗೆ ಮೀಸಲಾದಸಾಕ್ಷ್ಯಗಳಹೊರಗೆಳೆದು ಹೊದೆಯಬೇಕು ಇರಬೇಕು ನಿನ್ನೆಗಳಿಗೂನೆನಪುಗಳೆಂಬ ಮರುಹುಟ್ಟುಆಗಾಗ ಹಾಯುತಿರಲಿಇಲ್ಲಸಲ್ಲದ ನೆಪವಿಟ್ಟು.. ಅರ್ಥವಾಗದಿದ್ದರೆ ಹೇಳಿ ಅವನು ನನ್ನ ಕಂಗಳಲ್ಲಿಹೊಳೆಯುತ್ತಾನೆಹೊಳೆಯೂ ಆಗುತ್ತಾನೆಇಷ್ಟು ಸಾಕಲ್ಲವೇ ನಿಮಗೆಅವನು ನನಗೇನೆಂದು ತಿಳಿಯಲು ಅವನ ನಗುವ ಕಂಡು ನಾನುಪೂರ್ತಿ ಖಾಲಿಯಾಗುತ್ತೇನೆಆ ನಗು ನನ್ನ ಸಂಧಿಸಿದಾಗಮತ್ತೆ ತುಂಬಿಕೊಳ್ಳುತ್ತೇನೆನಮ್ಮ ನಡುವಿನ ಸಣ್ಣ ಮೌನಆಕಾಶದ ತಾರೆಗಳುಸದ್ದಿಲ್ಲದೆ ಮಿನುಗಿದಂತೆ ತೋರುತ್ತದೆನಾನು ಅವುಗಳ ಬೊಗಸೆಗೆ ತಂದುಸಂಭ್ರಮಿಸುತ್ತೇನೆ ಒಲವರಾಗ ಸಮ್ಮೋಹಗಳೆಲ್ಲತುಟಿಯ ಖಾಯಂ ರಹವಾಸಿಗಳಾಗಿಅವ ಮಾತಿಗಳಿದರೆಮಾಂತ್ರಿಕ ಲೋಕ ತೆರೆದುಕೊಂಡುನಾ ಕಳೆದೇ ಹೋಗುತ್ತೇನೆಅವನಲ್ಲಿ ಅವತರಿಸಲು ಬಿಡದೇಹವಣಿಸುತ್ತೇನೆ ಈಗ ನಿಮಗೆ ಖಂಡಿತಅರ್ಥವಾಗಿದೆ ಬಿಡಿಅವನು ನನಗೇನೆಂದುಅರ್ಥವಾಗದಿದ್ದರೆನೀವು ನಿಮ್ಮವನ ಒಮ್ಮೆನೆನಪು ಮಾಡಿಕೊಳ್ಳಿಆಮೇಲೆ ಅರ್ಥವಾಗದಿದ್ದರೆ ಹೇಳಿ ಬೆಂಬಲಿಸುವ ಬನ್ನಿ ನಾವು ನದಿಯಾಗಿ ಹರಿಯಬಲ್ಲೆವುಸಾಧ್ಯವಾದರೆ ಮಳೆಯಾಗಿ ಜೊತೆಯಾಗಿಆಣೆಕಟ್ಟು ಕಟ್ಟಿ ಬಳಸಿಕೊಳ್ಳಿಆದರೆ ನಮ್ಮ ಗಮ್ಯದೆಡೆಗಿನಒಂದೆರಡು ಬಾಗಿಲುಗಳನು ತೆರೆದೇ ಇಡಿ ನಾವೂ ಹಕ್ಕಿಯಾಗಿ ಹಾರಬಲ್ಲೆವುನಿಮ್ಮ ಬಾನ ವಿಸರ ನಮಗೂ ಸಲ್ಲಲಿಗಿಡುಗ ಹದ್ದುಗಳನ್ನು ಛೂ ಬಿಡಬೇಡಿನಮ್ಮ ನೆಲೆಗಳನ್ನು ಜೋಪಾನವಾಗಿಡಿಮತ್ತೆ ನಮ್ಮ ಗೂಡು ಒಂದೇ ಆಗಿರಲಿ ಹೊಗಳಿ ಅಟ್ಟದಲ್ಲೇ ಬಂಧಿಸದಿರಿದೇವರ ಪಟ್ಟ ಕಟ್ಟಿತಾಯಿ ಬೇರುಗಳು ಆಳಕ್ಕಿಳಿಯಲುನೆಲದಲ್ಲಿ ಪಾಲು ನೀಡಿಹಸಿರಾಗಿ ಎದ್ದು ನಿಂತಾಗಕೊಡಲಿ ಮಸೆಯದಿರಿ ಮರೆಯಲ್ಲೇ ಇರಿಸದಿರಿನಿಮ್ಮರ್ಧವಾದ ನಾವು ಕಾಣದಂತಿದ್ದರೆ ಹೇಗೆ ಪೂರ್ಣವಾಗುವಿರಿ ನೀವುನಮಗಾಗಿ ಬೇಡಿಕೆಯಲ್ಲ ಇದುಪೂರ್ಣತೆಗಾಗಿಪರಸ್ಪರ ಬೆಂಬಲಿಸುವ ಬನ್ನಿಹೊಸ ಕನಸನು ಹಂಬಲಿಸುವ ಬನ್ನಿ *****************************************

ರೇಖಾಭಟ್ ಕಾವ್ಯಗುಚ್ಛ Read Post »

ಅನುವಾದ

ಅನುವಾದ ಸಂಗಾತಿ

ಅವ್ವ ಕನ್ನಡ ಮೂಲ: ಎ.ಜಿ.ರತ್ನಾ ಕಾಳೇಗೌಡ ಇಂಗ್ಲೀಷಿಗೆ: ರತ್ನಾ ನಾಗರಾಜ್ ಏನೆಲ್ಲ ಅಡಗಿದೆಅವ್ವ ನಿನ್ನೆದೆಯೊಳಗೆನಿನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿ ರಾಗಿತಲೆಯೊಳಗೆ ಬೆರಳುಗಳಿಂದತಡಕಿ ತಡಕ ಹೇನು ಹೆಕ್ಕಿಸಾಹಿಸುತ್ತಿದ್ದೆಆಗ ಅದೇನೋ ಅಕ್ಷರ ವಲ್ಲದಸ್ವರ ನಿನ್ನ ಬಾಯಿಂದಎಷ್ಟೋ ಸಾರಿ ಅರ್ಥಕ್ಕಾಗಿಹುಡುಕಿ ಸೋತಿದ್ದೇನೆಸಿಗಲಿಲ್ಲ ನೀನು ಹೇಳುತ್ತಿದ್ದಸಂಗತಿಗಳೆಲ್ಲನೆನಪಿನಲ್ಲಿದ್ದಿದ್ದರೆಒಂದೊಂದು ಮಹಾಗ್ರಂಥವಾಗುತ್ತಿದ್ದವು ಇಂದು ವಾರಗಿತ್ತಿಯರ ಕಾಟಗಂಡನ ಕಾಟ ಸಾಲದು ಎಂದು ಅತ್ತೆ ಮಾವನ ಕಾಟಎಲ್ಲವನ್ನು ಹೇಗೆ ಸಹಿಸಿಕೊಂಡೆ ಅವ್ವನಿನ್ನ ಒಂದೊಂದು ಕಣ್ಣೀರಕಥೆಯನ್ನು ಹೇಳುವಾಗನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ ಸಾರಿಗೆ ಉಪ್ಪು ಜಾಸ್ತಿ ಆಗಿದೆಯಾಕೆಂದುಕೊಳ್ಳಿಯಿಂದಲೇಮುಂಗೈಗೆ ಬೇರೆ ಹಾಕಿದ್ದಳುಅತ್ತೆಸುಟ್ಟ ಕಲೆಯನ್ನು ತೋರಿಸಿದ್ದೆನನ್ನ ಕರುಳು ಕಿವಿಚಿ ಬಾಯಿಗೆಬಂದಂತಾಗಿತ್ತು ಆಸ್ತಿ ಮನೆ ಎಲ್ಲ ಇದ್ದರೂನೆಮ್ಮದಿ ಯಿಲ್ಲದ ದಿನಗಳನ್ನುಸವೆಸಿದೆನಿನ್ನ ಆಸೆ ಆಕಾಂಕ್ಷೆ ಗಳೆಲ್ಲಚಿಂತೆಯ ಚಿಂತೆಯಲ್ಲಿಸುಟ್ಟುಹೋಯ್ತುನಿಟ್ಟುಸಿರಿನ ಅಲೆಯಲ್ಲಿಕೊಚ್ಚಿ ಹೋದವು ಅವ್ವ ನಾನೀಗ ಬೆಳೆದು ದೊಡ್ಡವಳಾಗಿದ್ದೇನೆನೌಕರಿಯೂ ಸಿಕ್ಕಿದೆಕೈ ತುಂಬ ಸಂಬಳನಿನ್ನ ಬರಿದಾದ ಮೂಗು ಕಿವಿಕೈಗೆವಜ್ರದ ಮೂಗುತಿ ಓಲೆ ಕಡಗಕೊಡಿಸುತ್ತಿದ್ದೆಆದರೆ…ಆದರೆ….ಈಗನೀನಿಲ್ಲ ಅವ್ವ … ನೀನಿಲ್ಲ Mother What all is hidden in your heart ! I was laying my head on your lap Your fingers were searching lice in my head and killing them one by one your were murmuring some words which I could not catch up with and struggled a lot to understand, but failed. The facts and issues that you had told me If I could remember them each one would have become a collection of a Great book today Just because the curry was a little bit salty my mother in law put a burn line from the fire stick on my fore hand , when I showed the burnt mark out of pain , your tummy seemed to be squeezed out of your mouth Though I had money and wealth I passed my days restlessly All your sweet dreams were burnt to ashes in your death in a deep sigh all were slushed Mother, now I have grown up I even got a job and earn a handful I wanted to buy you a Diamond nose ring, earrings , a bracelet for your bare ears and hands but to adorn it your are not there *********************************

ಅನುವಾದ ಸಂಗಾತಿ Read Post »

ಕಾವ್ಯಯಾನ

ಕೆಲವರು ಹಾಗೆ

ಕವಿತೆ ರೇಷ್ಮಾ ಕಂದಕೂರ. ಕೆಲವರು ಹಾಗೆಕೆಲಸ ಸಾಧಿಸುವ ತನಕ ಒಡನಾಡಿಗಳುನಂತರ ಸರಿದುಹೋಗುವ ನರನಾಡಿಗಳು ಕೆಲವರು ಹಾಗೆಗೆಲ್ಲುವ ಕುದುರೆಯಿಂದ ಓಡುತಸಲಾಮು ಮಾಡಿ ಬೇಳೆ ಬೇಯಿಸಿಕೊಳ್ಳುವರು ಕೆಲವರು ಹಾಗೆಮೋಹದ ಬಲೆಯ ಬೀಸಿಕಬಳಿಕೆಯ ನಂತರ ತಿರುಗಿನೋಡದವರು ಕೆಲವರು ಹಾಗೆಮುಂದೊಂದು ನಡೆಯಲಿಹಿಂದೆ ಧೂರ್ತರಾಗಿ ಗುದ್ದುಕೊಡುವರು ಕೆಲವರು ಹಾಗೆನಿಷ್ಟಾವಂತರಂತೆ ನಟಿಸಿಒಳಗೊಳಗೆ ಕೊರೆಯುವ ಕೀಟದಂತವರು ಕೆಲವರು ಹಾಗೆಸತ್ಯ ಗೊತ್ತಿದ್ದರು‌ಸುಳ್ಳಿನ ಬಿಡಾರ ಹೂಡುವರು ಕೆಲವರು ಹಾಗೆನೇಮ ನಿತ್ಯ ಮಾಡುತಕಳ್ಳನೋಟ ಬೀರುವರು ಕೆಲವರು ಹಾಗೆಜೊತೆಗಾರರಂತೆ ಮುಖವಾಡದಿಗುಪ್ತಚರರಂತೆ ಸಂಚನು ಹೂಡುವರು ಕೆಲವರು ಹಾಗೆಗೊತ್ತಿದ್ದರು ಅವರು ನಮ್ಮವರುಎಂಬ ಭ್ರಮೆಯಲಿ ಸಹಿಸಿಕೊಳ್ಳುವರು. *****

ಕೆಲವರು ಹಾಗೆ Read Post »

ಇತರೆ, ಜೀವನ

ನಮ್ಮ ಮಕ್ಕಳು ಮಕ್ಕಳಲ್ಲ

ಸರಿತಾ ಮಧು ಮಕ್ಕಳಿಗಾಗಿ ಹಂಬಲ ಎಲ್ಲರದು. ಅಂದಿನಿಂದ ಇಂದಿನವರೆಗೂ ಮಕ್ಕಳು ಮನೆಯ ನಂದಾದೀಪ. ಮಕ್ಕಳಿರಲವ್ವ ಮನೆತುಂಬ ಎನ್ನುವ ಕಾಲ ಸರಿದು ಆರತಿಗೊಬ್ಬಳು ಕೀರ್ತಿ ಗೊಬ್ಬ , ತದನಂತರ ನಾವಿಬ್ಬರು ನಮಗೊಂದು ಮಗು ಅನ್ನುವ ಕಾಲಘಟ್ಟದಲ್ಲಿದ್ದೇವೆ. ಇದೆಲ್ಲವೂ ಸರಿಯಷ್ಟೇ ಆಧುನಿಕತೆಯ ಬೆನ್ನನೇರಿದ ಈಗಿನವರು ಮಗುವಿನ್ನೂ ಗರ್ಭದಲ್ಲಿರುವಾಗಲೇ ವಿದ್ಯಾಭ್ಯಾಸದ ವಿಚಾರಕ್ಕೆ ತಲೆಬಿಸಿ ಮಾಡಿಕೊಳ್ಳುತ್ತಾರೆ.ಮೊದಲೆಲ್ಲಾ ಹೀಗಿರುತ್ತಿತ್ತೇ? ಅವಿಭಕ್ತ ಕುಟುಂಬಗಳಲ್ಲಿ ಅನೌಪಚಾರಿಕವಾಗಿ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತಿತ್ತು.ಐದುವರ್ಷಗಳು ಪೂರ್ಣ ತುಂಬುವವರೆಗೂ ಬಾಲ್ಯಾವಸ್ಥೆಯ ಎಲ್ಲಾ ಸುಖಗಳನ್ನು ಸಂಪೂರ್ಣ ಬಾಚಿಕೊಳ್ಳುತ್ತಿದ್ದೆವು. ಮನೆಯ ಅಜ್ಜ ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ, ಮಾವ ಅತ್ತೆ, ಚಿಕ್ಕಪ್ಪ ಚಿಕ್ಕಮ್ಮ ,ಅಣ್ಣ ಅಕ್ಕ , ಅಪ್ಪ ಅಮ್ಮ ರೊಂದಿಗೆ ನಲಿವಿನ ಸಮಯ ಕಳೆಯಲು ಅವಕಾಶವಿತ್ತು. ಹಗಲಿನಲ್ಲಿ ಹಾಡುವ ಹಕ್ಕಿಯೂ,ಓಡುವ ಎಳೆಗರುವೂ, ಮೂಡಣದ ಸೂರ್ಯ, ಹಸಿರೆಲೆಯ ಗಿಡಮರಗಳು, ಬಣ್ಣ ಬಣ್ಣದ ಹೂಗಳು, ಮಕರಂದ ಹೀರುವ ದುಂಬಿಗಳು ಒಂದಲ್ಲ ಎರಡಲ್ಲ . ಎಂಥ ಚಂದವಿತ್ತು ನಮ್ಮ ಬಾಲ್ಯ.ಸಂಜೆಯಾದೊಡನೆ ತಿಂಗಳ ಬೆಳಕಿನ ಅಂಗಳದಲ್ಲಿ ಅಜ್ಜನೇ ಮೇಷ್ಟ್ರು. ಅವನ ಬಾಯಿ ಲೆಕ್ಕಾಚಾರದ ಮುಂದೆ ಈಗಿನ ಕ್ಯಾಲ್ಕುಲೇಟರ್ ಸಹಾ ಹಿಂದೆಬೀಳುತ್ತಿತ್ತು.ಎಷ್ಟು ಸರಾಗವಾಗಿ ಮಗ್ಗಿಗಳನ್ನು ನನ್ನಜ್ಜ ಹೇಳುತ್ತಿದ್ದ. ಅಜ್ಜಿಯೇ ಕಥೆಯ ನಿರೂಪಕಿಯಾಗಿ ಲಾಲಿ ಹಾಡುವವರೆಗೂ ರಾತ್ರಿಯ ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ.    ಟಿವಿ, ಮೊಬೈಲ್ ಗಳ  ಹಾವಳಿಯಿಲ್ಲದ ನಿರಾತಂಕ ಜೀವನ. ಐದು ವರ್ಷಗಳ ನಂತರವೇ ಊರಿನ ಕನ್ನಡ ಶಾಲೆಗೆ ಹೋಗುವುದು. ಹೆಚ್ಚಿನ ಹೊರೆಯಿಲ್ಲದ ಸರಳ ಕಲಿಕೆ ಆದರೂ ಶಾಶ್ವತ ಕಲಿಕೆಯಾಗಿತ್ತು.   ಬದಲಾದ ಕಾಲಕ್ಕೆ ಎಲ್ಲವೂ ಮರೆಯಾಯಿತು.ಈಗಂತೂ ಹುಟ್ಟುವ ಮೊದಲೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಹೆಸರು ನೊಂದಾಯಿಸಿ ತಮ್ಮ ಮಗುವಿಗೆ ಸೀಟೊಂದನ್ನು ಕಾಯ್ದಿರಿಸಲಾಗುತ್ತದೆ. ರಾತ್ರಿಯಿಡೀ ಸರತಿಸಾಲಿನಲ್ಲಿ ನಿಂತು ತಾವು ಕಷ್ಟಪಟ್ಟ ಅನೇಕ ವರ್ಷಗಳ ದುಡಿಮೆಯನ್ನು ಕೇವಲ ಒಂದು ವರ್ಷದ ಶಾಲಾ ಶುಲ್ಕಕ್ಕಾಗಿ ಖರ್ಚುಮಾಡುತ್ತೇವೆ. ಎರಡೂವರೆ ಮೂರು ವರ್ಷದ ಮಕ್ಕಳ ಬೆನ್ನಿಗೆ ಬಣ್ಣದ ಬ್ಯಾಗನ್ನು ಏರಿಸಿ, ಕೈಗೊಂದು ಊಟದ ಬ್ಯಾಗನ್ನು ಇಳಿಬಿಟ್ಟು, ಹಳದಿ ಬಣ್ಣದ ಬಸ್ಸನ್ನು ಅವಸರದಿಂದಲೇ ಹತ್ತಿಸಿ ಟಾಟಾ, ಬೈಬೈ ಹೇಳಿ ನಿಟ್ಟುಸಿರು ಬಿಡುತ್ತೇವೆ. ಅಲ್ಲಿಗೆ ಒಂದು ದಿನದ ಮಗುವಿನ ಪಯಣ ಯಶಸ್ವಿಗೊಳಿಸಿದ ನಿರಾಳತೆ. ಆದರೆ ಒಲ್ಲದ ಮನಸ್ಸಿನಿಂದ ಶಾಲೆಗೆ ಹೊರಟ ಮಗುವಿನ ಮನಸ್ಸು ಅರಿಯಲು ನಾವು ವಿಫಲವಾದೆವಲ್ಲ! ಬಾಲ್ಯದ ಚಿಗುರುವ ಕನಸುಗಳ ಅಲ್ಲಿಯೇ ಹೊಸಕಿಹಾಕಿಬಿಟ್ಟೆವಲ್ಲ.ನಮ್ಮ ನಿರೀಕ್ಷೆಗಳಿಗಾಗಿ ಅವರ ಕನಸುಗಳನ್ನು ಸೀಲ್ ಮಾಡಿಬಿಟ್ಟೆವಲ್ಲ. ಖಲೀಲ್ ಗಿಬ್ರಾನ್ ಒಬ್ಬ ಅಮೆರಿಕದ ಕವಿ ತನ್ನ ಕವಿತೆಯೊಂದರಲ್ಲಿ ಹೇಳುವಂತೆ:    Your children are not children   They are the sons and daughters of life’s longing for itself   They come through you but not from you   And though they are with you ,   Yet they belong not to you “     ಹೀಗೆ ಸಾಗುವ ಪದ್ಯವೊಂದರಲ್ಲಿ “ನಿಮ್ಮ ಮಕ್ಕಳು , ಮಕ್ಕಳಲ್ಲ ಜೀವದ ಸ್ವಪ್ರೇಮದ ಪುತ್ರ ಪುತ್ರಿಯರು ಅವರು ನಿಮ್ಮ ಮೂಲಕ ಬಂದಿದ್ದಾರೆಯೇ ನಿಮ್ಮಿಂದಲ್ಲ ನಿಮ್ಮ ಜೊತೆ ಇರುವುದಾದರೂ ನಿಮಗೆ ಸೇರಿದವರಲ್ಲ”   ಹೌದು ಮಕ್ಕಳ ಮೇಲೆ ನಮ್ಮ ನಿರೀಕ್ಷೆ ಎಂದೂ ಅತಿಯಾಗಬಾರದು.ನಮ್ಮ ಕನಸುಗಳ ಈಡೇರಿಕೆಗೆ ಅವರನ್ನು ಬಳಸಿಕೊಳ್ಳಬಾರದು.ನಾವೆಂದೂ ಅವರನ್ನು ನಮ್ಮಂತೆ ಮಾಡಲು ಪ್ರಯತ್ನಿಸಬಾರದು.ಕಾರಣ ಅವರ ಕನಸಿನೊಳಗೆ ನಮ್ಮ ಪ್ರವೇಶವಿರಕೂಡದು.ನಮ್ಮ ಪ್ರೀತಿಯನ್ನು ಮಕ್ಕಳಿಗೆ ನೀಡಬೇಕೇ ಹೊರತು ಆಲೋಚನೆಗಳನ್ನಲ್ಲ.   ಡಾ||ಸಿ.ಆರ್.ಚಂದ್ರಶೇಖರ್ ರವರು ತಮ್ಮ ಮನಸ್ಸೇ ನೀ ಪ್ರಶಾಂತವಾಗಿರು ಪುಸ್ತಕದಲ್ಲಿ(ಪು.74) ಹೇಳುತ್ತಾರೆ ನಿರೀಕ್ಷೆಗಳನ್ನು ತಗ್ಗಿಸಿ, ಸಾಧ್ಯವಾದರೆ ನಿವಾರಿಸಿಕೊಳ್ಳಿ. ಅವರ ಮಾತಿನಂತೆ ಖಂಡಿತವಾಗಿ ನಿರೀಕ್ಷೆಗಳಿಂದ ನಿರಾಸೆಯೂ, ನಿರ್ಲಿಪ್ತತೆಯಿಂದ ನೆಮ್ಮದಿಯೂ ದೊರೆಯುತ್ತದೆ. ಮಕ್ಕಳ ಪಾಲನೆ, ಪೋಷಣೆ, ವಿದ್ಯಾಭ್ಯಾಸ,ಮದುವೆ, ಉದ್ಯೋಗ ಎಲ್ಲವೂ ನಮ್ಮ ಕರ್ತವ್ಯ. ಆದರೆ ಇದಕ್ಕೆ ಪ್ರತಿಫಲವಾಗಿ ಪ್ರೀತಿ, ಆಸರೆ,ಹಣ,ವೃದ್ಧಾಪ್ಯದಲ್ಲಿ ನೆರವನ್ನು ನಿರೀಕ್ಷಿಸಬೇಡಿ ಎನ್ನುತ್ತಾರೆ ಡಾಕ್ಟರ್. ಹಾಗಿದ್ದರೆ ಮಕ್ಕಳನ್ನು ಹೆತ್ತು ಹೊತ್ತು ಸಾಕಿದ್ದಕ್ಕೆ ನಿರೀಕ್ಷೆ ಇರಬಾರದೇ?        ಇರಲಿ, ಆದರದು ಒತ್ತಾಯಕ್ಕಲ್ಲ.ನಿಮ್ಮ ಆಸೆ ಆಕಾಂಕ್ಷೆಗಳನ್ನು ,ಗುರಿಗಳನ್ನು ಬಲವಂತವಾಗಿ ಅವರ ಮೇಲೆ ಹೇರಬೇಡಿ. ಅವರ ಹುಟ್ಟು ನಿಮಗೆ ಅದೃಷ್ಟ ತಂದಿತೆಂದು , ಸಂಪತ್ತಿಗೆ ಅಧಿಪತಿಯಾದರೆಂದು ಯಾವುದೇ ಮಗುವನ್ನು ಮೆರೆಸುವುದಾಗಲೀ ಅಥವಾ ಉಂಟಾದ ಸಾಲ ನಷ್ಟಗಳಿಗೆ ಹುಟ್ಟಿದ ಮಗುವಿನ ಜಾತಕವೇ ಕಾರಣವೆಂದು ಹೀಗಳೆಯುವುದಾಗಲೀ ಸಲ್ಲದು. ಮಕ್ಕಳಿಗೆ ಅವರ ಆಸೆ ಆಕಾಂಕ್ಷೆಗಳಿಗೆ ಅನುಗುಣವಾದ ಶಿಕ್ಷಣ ನೀಡಿ, ಆದರೆ ಸಮಾಜದ ಇತರೆ ಮಕ್ಕಳೊಂದಿಗೆ ಹೋಲಿಕೆ ಖಂಡಿತಾ ಬೇಡ. ಜೀವನೋಪಾಯಕ್ಕಾಗಿ ಅವಶ್ಯಕವಾಗಿ ನ್ಯಾಯಯುತವಾದ ದುಡಿಮೆಯೊಂದನ್ನು ಮಾಡುವಂತಿರಲಿ. ದುಡಿಯದೇ ಅಥವಾ ಕೆಲಸ ಮಾಡದೇ ಸುಲಭ ಮಾರ್ಗದಲ್ಲಿ ಹಣ ಗಳಿಸುವುದನ್ನು ತಪ್ಪು ಎಂಬ ಅರಿವು ನೀಡಿದರೆ ಸಾಕು. ಮಕ್ಕಳೆಂದಿಗೂ ನಿಮ್ಮ ಹಣವನ್ನು ಹಿಂತಿರುಗಿಸುವ ಯಂತ್ರಗಳಲ್ಲ. ಬಂಡವಾಳ ಹೂಡಿ ಲಾಭವನ್ನು ನಿರೀಕ್ಷಿಸುವ ವ್ಯವಹಾರವಲ್ಲ.ಬದಲಾಗಿ ಪ್ರೀತಿ, ಸಂಸ್ಕಾರ , ಜವಾಬ್ದಾರಿ , ಶಿಕ್ಷಣ , ಮಾನವೀಯತೆ ನೀಡಿ ನಿರ್ಲಿಪ್ತವಾಗಿ ನೆಮ್ಮದಿಯಿಂದ ನಿಂತು ಬಿಡಿ ಕಾರಣ ಮಕ್ಕಳು ನಿಮ್ಮ ಮಕ್ಕಳಲ್ಲ, ನಿಮ್ಮ ಮೂಲಕ ಬಂದ ದೈವ ಸೃಷ್ಟಿಗಳು. ****************************************

ನಮ್ಮ ಮಕ್ಕಳು ಮಕ್ಕಳಲ್ಲ Read Post »

ಕಾವ್ಯಯಾನ

ವಸುಂಧರಾ ಕಾವ್ಯಗುಚ್ಛ

ವಸುಂಧರಾ ಕದಲೂರು ಕಾವ್ಯಗುಚ್ಛ ಮುಖ್ಯ- ಅಮುಖ್ಯ ಮೇಲುಕೀಳಾಟದ ಯಾವತ್ತೂಯುದ್ಧ ಬೇಕಿಲ್ಲ. ಈ ಹೊತ್ತಿನ ತುತ್ತು;ಎಂದಿಗೆ ಒಲೆ ಹೊತ್ತಿ ಅನ್ನವೋಗಂಜಿಯೋ ಬೆಂದರಾಗುತ್ತಿತ್ತು, ಈಸತ್ಯದ ಬಾಬತ್ತೇ ನಮಗೆ ಮುಖ್ಯ. ಚದುರಂಗದಾಟ ಎಂದೆಣಿಸಿ, ದಾಳಉದುರಿಸಿ, ಗಾಳ ಹಾಕಿ -ದಾಳಿಮಾಡಿ, ಕೋಟೆಗೋಡೆಗಳನು ಕಟ್ಟುತ್ತಾಕೆಡವುತ್ತಾ, ಸಿಂಹಾಸನಾರೋಹಣ,ಪದಾಘಾತ- ಅಧಃಪತನ ಯಾರಿಗಾದರೇನು?ನಮಗೆ ಅಮುಖ್ಯ. ಯುದ್ಧವೆಂದರೆ ಕಂದನ ತೊಟ್ಟಿಲಮೇಲೆ ತೂಗುಬಿದ್ದ ಘಟಸರ್ಪ; ಕಕ್ಕಿದರೂಕುಕ್ಕಿದರೂ ಆಪತ್ತೇ. ಬದುಕು ಕಸಿದಂತೆ,ಆಸೆ ಕುಸಿದಂತೆ ಮಾಡುವೀ ಅಜೀವನ್ಮುಖಿಯುದ್ಧ ನಮಗೆ ಅಮುಖ್ಯ. ಹೂವಿನೊಡಲ ಮಕರಂದಕೆ ಎರವಾಗುವದುಂಬಿಯಾಡುವ ಯುದ್ಧ; ಮಳೆಮೋಡದತಡೆಗೆ ಬೆಟ್ಟ ಸಾಲು ಹೂಡುವ ಹುಸಿ ಯುದ್ಧ,ಹಸಿದ ಒಡಲ ತಣಿಸಲು ಅವ್ವನಂತವರಒಡಲ ಬೇಗುದಿಯ ಯುದ್ಧ ; ದುಡಿಮೆಗಾರರನಿರಂತರ ರಟ್ಟೆ ಯುದ್ಧ ನಮಗೆ ಬಲು ಮುಖ್ಯ. ‘ಅರಿವೇ ಗುರು’ ದೀಪವಾರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ-ಕತ್ತಲು, ಒಳಹೊರಗೂ.. ಮೌನಕ್ಕೆ ಶರಣಾಗಿ ಕಿವುಡುಗಿವಿತೆರೆದಿದ್ದೆ, ಶಾಂತಿಯೆಂದರೆಶಾಂತಿ ಒಳಹೊರಗೂ.. ಇತಿಮಿತಿಯ ಅರಿವಾಯ್ತು ಈಗ,ನನ್ನದು ಮತ್ತೂ ಹೆಚ್ಚಾಗಿ ಅವರದು.ಜಾಗರೆಂದರೆ ಜಾಗರೂಕಳೀಗ.. ಮಮತೆ ಕಣ್ತೆರೆದು, ಒಲವಿನಲೆಶುಭನುಡಿಯ ಉಲಿದಾಗಹರುಷವೆಂದರೆ ಹರುಷವೀಗ.. ಮತ್ತೆ ಕಣ್ತೆರೆದುಕೊಂಡೆ, ಒಳಹೊರಗುಅರಿಯುವ ಹಂಬಲದಲಿ ಇರುಳಿನಿಂದೆದ್ದುಬರುವ ತಾಜಾಸೂರ್ಯ ಕಂಡ.ಬೆಳಕೆಂದರೆ ಬೆಳಕೀಗ!! ಪದ- ಪದಕ ಪದಗಳ ಗೀಳು ಹಿಡಿಸಿಕೊಂಡುಪದಗಡಲೊಳಗೆ ಮುಳುಗುಹಾಕಿಗಿರಕಿಹೊಡೆದದ್ದು ಸಾಕೆನಿಸಿ ಮೇಲೆದ್ದುಬಂದರೆ, ಪುನಃ ಪದಗಳೇ ರಾಶಿರಾಶಿದಂಡೆಯಲಿ ಬಿದ್ದಿದ್ದವು ಮರುಳಾಗಿ… ಸದ್ದುಗದ್ದಲದ ಗೂಡ ಹೊರಗೆ ಹಾರಿ,ನಡುಗುಡ್ಡೆ ಕಾನನದೆಡೆ ನೀರವ ಹುಡುಕಿ,ಹಾಗೇ ತಪಸಿಗೆ ಕುಳಿತರೆ ಪದಗಳೇವಿಸ್ತರಿಸಿದವು. ಧ್ಯಾನ ನಿಮೀಲಿತನೇತ್ರದೊಳು ಪದಪತ್ರ ಬಿಂದು!ಕರ್ಣದುಂಬಿತು ಪದೋಚ್ಚಾರಮಂತ್ರಪಠಣ!! ಪದನರಿದು ವಿಸ್ತರಿಸಲು ತೊಡಗಿ,ಅಪೂರ್ಣ ಪದವಾಗಿ, ಪೂರ್ಣಲಯಮೈದಳೆಯದ ಮರೀಚಿಕೆಯಾಗಿ,ಪದಗಳ ಹಳುವ ಸರಿಸಿ, ಕಾನನದಂಚಿನ ಮರುಭೂಮಿ ಎಡೆಗೆ ಓಡೋಡಿ ಬಂದರೂ,ಬೆನ್ನಹತ್ತಿತು ಪದ ಮಾಯಾಮೃಗವಾಗಿ… ಪದವೆಂದರೆ ಮಾಯೆ. ಬಿಟ್ಟ ಮಾಯೆಯಲ್ಲ ಬಿಡಿಸಿಕೊಳುವ ಹುಂಬತನವೂ ನನದಲ್ಲ.ಪದ-ಪದಕವಾಗಿ ಕೊರಳಿಗೆ ಬಿದ್ದು, ಬೆನ್ನಹತ್ತಿ ಬಂದರೆ, ಹೊರೆ ಎನದೆ ನಾ ಹೇಗೆಧರಿಸದಿರಲಿ..? ***************************************

ವಸುಂಧರಾ ಕಾವ್ಯಗುಚ್ಛ Read Post »

ಕಾವ್ಯಯಾನ

ನಾಗರೇಖಾ ಕಾವ್ಯಗುಚ್ಚ

ನಾಗರೇಖಾ ಗಾಂವಕರ್ ಕಾವ್ಯಗುಚ್ಚ ಅಸ್ವಸ್ಥ ಮಂಚದ ಮೇಲೆ ಬೆಳದಿಂಗಳ ರಾತ್ರಿಯಲ್ಲಿಕೊಳ್ಳಿ ದೆವ್ವವೊಂದುಮನೆಯ ಮೂಲೆಯೊಳಗೆ ನುಸುಳಿಬಂದಂತೆತಬ್ಬಿದ ಜಾಡ್ಯ.ಆಸ್ಪತ್ರೆಯ ಮಂಚದ ಮೇಲೆಸೂರು ನೋಡುತ್ತಾ ಬೆದರಿ ಮಲಗಿದಾಗ,ಮೊಣಕೈಗೆ ದಪ್ಪ ಬೆಲ್ಟೊಂದನ್ನುಸುತ್ತಿ, ನರ ಹುಡುಕಲು ಬೆರಳಿಂದಮೊಟಕುವ ದಪ್ಪ ಕನ್ನಡಕದ ನರ್ಸಮ್ಮತತ್ತರಿಸಿ ಬಿದ್ದ ರಕ್ತನಾಳಗಳು ಜಪ್ಪಯ್ಯ ಎನ್ನದೇಅಂಟಿಕೊಂಡು ಸೀರಿಂಜಿಗೂರಕ್ತ ನೀಡಲು ಒಲ್ಲೆ,ಎನ್ನುವಾಗಲೇಕಂಬನಿಯ ತುಟಿಯಲ್ಲಿನುಡಿಯುವ ಕಣ್ಣುಗಳುಒಸರಿದ ರಕ್ತದ ಅಂಟಿದ ಕಲೆಗಳು ಆಯಾಸದ ಬೆನ್ನೇರಿ ಬಂದಗಕ್ಕನೇ ಕಕ್ಕಬೇಕೆನ್ನುವ ಇರಾದೆತರಗುಡುತ್ತಿದ್ದ ದೇಹವನ್ನುಸಂಭಾಳಿಸಲಾಗದೇ ಇರುವಾಗಲೇಮುಲುಗುಡುವ ದೇಹಗಳು ಖಾನೆ ಖಾನೆಗಳಲ್ಲಿಬೇನೆ ತಿನ್ನುವ ವೇದನೆಯ ನರಳಾಟನೋವು ತಿಳಿಯದಂತೆ ಬರಲಿನಿರಾಳ ಸಾವು. ಸಾವೆಂದರೆ ಸಂಭ್ರಮದ ಹಾದಿಎಂದವರೇಕೆ ಅಂಜುತ್ತಲೇಇದಿರುಗೊಳ್ಳುವರೋ? ನಿನ್ನ ಹೆಗಲಮುಟ್ಟಲೇಕೆ ಹಿಂಜರಿಯುವರೋ? ಮನದ ಅಸ್ವಸ್ಥ ಮಂಚದ ಮೇಲೂ ಪ್ರೀತಿಯನಿರಾಕರಣೆಗೆ, ನಿರ್ಲಕ್ಷ್ಯಕ್ಕೆ ತುಟಿ ತೆರೆಯದೇಉಗುಳು ನುಂಗಿ ಸಹಿಸುವುದೆಂದರೆಸಾವಲ್ಲವೇ?ಕಣ್ಣಲ್ಲಿ ಮೂಡಿದ ಚಿತ್ರವನ್ನುಸತ್ಯವಾಗಿಸಲಾಗದ ಅಸಹಾಯಕತೆಸಾವಲ್ಲವೇ? ಬದುಕೆಂದರೆ ಹೀಗೆಹುಚ್ಚಾಗಿ ಹಲಬುವಿಕೆ ಪ್ರೀತಿಗೂಪ್ರೇಮಕ್ಕೂ ಮತ್ತು ಸಾವಿಗೂ. ಇಕೋ, ಗಿರಿಗವ್ವರದ ಹಸಿರೆಲೆಗಳಸಂದಿ ಸಂದಿನಲ್ಲೂ ತೊಟ್ಟ,ನಿತ್ಯ ಸುತ್ತಾಟದಲ್ಲೂ ಹೂವರಳಿಸುವಕಲೆಯಲ್ಲೂ ಬೆರೆತುಹೋದ ಚೆಂದುಳ್ಳಿ ನೀ.ಮೆಲುನಡೆಯ ನಲ್ನುಡಿಯ ಸೊಗಸೇನರಳುತ್ತಲೇ ಇರುವೆತಿರಸ್ಕಾರದ ತೇರು ಹೂಮುಡಿಯಲ್ಲಿ ಹೊತ್ತುಆಯಾಸ ಬಳಲಿಕೆಗಳಮೈ ತುಂಬಾ ಹೊದ್ದು ಹೆಣ್ಣ ಸೌಂದರ್ಯ,ಸಂಗವನ್ನೇ ದ್ವೇಷಿಸಿದವನಪ್ರೀತಿಯ ಆಳದಲ್ಲಿ ಬಿದ್ದುಯುಗಯುಗಗಳಿಂದ ಪರಿತಪಿತೆ, ಪ್ರಲಾಪಿತೆಸ್ವ ಸಂಗತಗಳ ಅಸಂಗತಗಳಲ್ಲಿ ಮರುಳಾದವನಮೋಹದ ಸದ್ದುಸದ್ದಾಗಿಯೇ ಉಳಿದುಹೋದೆ. ನೆಮಿಸೆಸ್ ನಿನ್ನ ನೋವಿಗೆ ಮಿಡಿದಳುನಾರ್ಸಿಸಿಸ್ ತನ್ನ ಪ್ರತಿಬಿಂಬ ಕಂಡುಮರುಳಾಗುವಂತೆ ಮಾಡಿದಳು.ಆತನೋ ಮುದ್ದುಕ್ಕಿ ತನ್ನನ್ನೇ ಮೋಹಿಸಿದಸ್ವಮೋಹಿತ ಮರುಳುತನಕ್ಕೆ ಮದ್ದುಂಟೇ?ಅದೊಂದು ವಿಚಿತ್ರ ಸಮ್ಮೋಹನ ಜಾಲದಂತೆ.ಈಗ ಜಗದ ತುಂಬಾ ಅವನಂತೆಸುರ ಸುಂದರಾಂಗರು,ಪ್ರೀತಿಯ ನೆಪದಲ್ಲಿ ತಮ್ಮ ಹೊರತುಯಾರನ್ನೂ ಪ್ರೀತಿಸರುತಮ್ಮದೇ ಸಾಮ್ರಾಜ್ಯದ ಸುಖದಲ್ಲಿಇತರರ ಸುಖಕಾಣದವರು.ಇಕೋ, ಅಪಾತ್ರನ ಪಾಲಾದ ಪ್ರೀತಿಪಲ್ಲವಿಸಿಸುವುದೆಂತು,ಕಾದಿರುಳು ಕಣ್ಣು ಮುಚ್ಚದೇನಿನ್ನಂತೆ ಬೇಗೆಯಲ್ಲಿ ಬೇಯುವುದೇ ಬಂತು. ಎದೆ ಬೆಳಕು ಮತ್ತು ಕಣ್ಣ ಕಾಡಿಗೆ ನಿನ್ನ ಉತ್ತರೀಯಕ್ಕೆಅರಿವಿಲ್ಲದೇ ಬಳಿದ ನನ್ನ ಕೆಂಪುತುಟಿರಂಗು ಇನ್ನೂ ಹಸಿಹಸಿಆಗಿಯೇ ಇದೆಇಳಿಸಂಜೆಗೆ ಹಬ್ಬಿದ ತೆಳುಮಂಜಿನಂತಹ ಹುಡುಗಮಸುಕಾಗದ ಕನಸೊಂದುಕಣ್ಣಲ್ಲೇ ಕಾದು ಕೂತಿದೆ ನೀನೊಲಿದ ಮರುಗಳಿಗೆಭವದ ಹಂಗು ತೊರೆದೆಮುಖ ನೋಡದೇಮಧುರಭಾವಕ್ಕೆ ಮನನೆಟ್ಟುಒಳಹೃದಯದ ಕವಾಟವಒಪ್ಪಗೊಳಿಸಿ ಮುಗ್ಧಳಾದೆಈಗ ನೆನಪುಗಳ ಮುದ್ದಾಡುತ್ತಿರುವೆ ಮುದ್ದು ಹುಡುಗ, ನಿನ್ನ ಒಲವಿಂದಬರಡಾದ ಒರತೆಗೂ ಹಸಿಹಸಿ ಬಯಕೆಒಣಗಿದ ಎದೆಗೂ ಲಗ್ಗೆ ಇಡುವಹನಿ ಜಿನುಗಿನ ಕುಪ್ಪಳಿಸುವಿಕೆ ಗೊತ್ತೇ ನಿನಗೆ?ಈ ತಂಗಾಳಿಯೂ ತೀರದ ದಿಗಿಲುಹತ್ತಿಸಿಕೊಂಡ ಏಕಾಂಗಿ ಮೃಗದಂತೆಸುಂಯ್ಯನೇ ಹಾಗೇ ಬಂದುಹೀಗೆ ಹೊರಟುಹೋಗುತ್ತದೆಮರೆತ ಕನಸುಗಳಿಗೆ ಕಡಒದಗಿಸಿ ಬೆನ್ನು ಹತ್ತುತ್ತದೆ ಈ ಮಳೆಗೂ ಕರುಣೆಯಿಲ್ಲಹಸಿಮನಗಳಲಿಹುಸಿ ಬಯಕೆಗಳಕುದುರಿಸಿ ಕಾಡುತ್ತದೆ ಇದೆಲ್ಲವನೂ ಹೇಗೆ ಉಲಿಯಲಿ?ಕಂಪು ಹೆಚ್ಚಾಗಿ ಜೋಂಪುಹತ್ತಿದೆ, ಕಣ್ಣುಗಳು ಮತ್ತೇರಿಪಾಪೆಯೊಳಗೆ ಮುದುರಿದೆಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕುಹಚ್ಚುವ ನಿನ್ನ ಬಿಂಬವಹೇಗೆ ಮರೆಮಾಚಲಿ ಹುಡುಗ? ನೀನಾದರೋ ಭೂವ್ಯೋಮಗಳ ತಬ್ಬಿನಿಂತ ಬೆಳಕ ಕಿರಣಕಣ್ಣ ಕಾಡಿಗೆಯ ಕಪ್ಪು,ಅದಕ್ಕೆ ಎದೆಯೊಳಗೆ ಬೆಳಕ ಹಚ್ಚಿದೆ,ಕಣ್ಣ ಮುಂದೆ ಇಲ್ಲದೆಯೂ ಕಣ್ಣ ಕಾಡಿಗೆಗೆಬಣ್ಣ ಬಳಿದೆ. ಮುದ್ದು ಹುಡುಗ,ಹೀಗಾಗೇ ದಿನಗಳೆದಂತೆನನ್ನ ಕಣ್ಣ ಕೆಳಗಡೆ ಕಪ್ಪು ಬರೀ ಕಪ್ಪು *************************************

ನಾಗರೇಖಾ ಕಾವ್ಯಗುಚ್ಚ Read Post »

ಕಾವ್ಯಯಾನ

ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ

ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ ನೆನಪುಗಳೇ…… ಬೆಳ್ಳಂಬೆಳಗು ನಸುನಕ್ಕುಮತ್ತೆ ಬಂದಿಹೆನೆಂಬ ಹೊತ್ತಲ್ಲಿಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿವರ್ತಮಾನವ ಕದಡದಿರಿಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿನೋವು ನಲಿವುಗಳ ಚಿತ್ತಾರದ ರಂಗೋಲಿಹಾಲುಕ್ಕಿ ಹರಿದ ಬದುಕಿನಲಿಒಂದೊಂದೇ ಪಾರಿಜಾತಗಳು ಜಾರಿ ಉದುರಿಭೂತದ ನೆರಳುಗಳಿಗೆ ಇಂದುಹೊಸರೆಕ್ಕೆ ಕಟ್ಟಿಅಗಲಿಕೆಯ ನೋವು, ವಿರಹದ ಕಾವುತುಂಬಿಹ ಬೆಂಗಾಡಿನಮಾಯೆ ಮರುಳಿಗೆ ಹೊತ್ತೊಯ್ಯದಿರಿಬರಗಾಲದ ಬಿರು ಬಿಸಿಲಿಗೆನಿಡುಸುಯ್ದ ಈ ಇಹಕ್ಕೆಮರಳಿ ಅರಳುವ ಬಯಕೆನೀರು ಹುಯ್ಯುವವರಿಲ್ಲಒಂಟಿ ಮರಕ್ಕೆಸಂಜೆ ಗಾಳಿಯ ಹಿತಆಳಕ್ಕೆ ಇರಿದ ಕೆಂಪಿನಲಿಮನಸ್ಸರಳಿ ಹಿತವಾಗಿ ನರಳುತ್ತದೆಅವನೆದೆ ಕಾವಿನಲಿ ಕರಗುತ್ತದೆಸೆಟೆದ ನರನಾಡಿಗಳು ಅದುರಿಹಗುರಾಗಿ ಬಿಡುತ್ತವೆಕೂಡಿ ಕಳೆದುಹೋಗುವ ತವಕದಲಿಕಣ್ಣೆವೆ ಭಾರವಾಗುವ ಹೊತ್ತಲ್ಲಿನಿಮ್ಮ ಒತ್ತಾಸೆಯಿರಲಿ ನನಗೆನನ್ನ ಬಿಡದಿರಿ,ಬಿಡದೆ ಕಾಡದಿರಿಅಣಕಿಸದಿರಿ ನೆನಪುಗಳೆ, ಬದುಕಿದುಎಪ್ಪತ್ತರಲಿ ಒಂಟಿ ಮುದುಕಿ. ಭಿಕ್ಷೆಗೆ ಬೀಳದ ಬದ್ಧತೆ… ಬೊಂಬೆಯಂತ ಬೊಂಬೆ ಮಗುವ ಬಟ್ಟೆಯಲಿ ಸುತ್ತಿಸುಡುವ ನೆತ್ತಿ, ಚಪ್ಪಲಿಯಿಲ್ಲದ ಕಾಲಹೆಂಗಸೊಬ್ಬಳುಕಾರ ಕಿಟಕಿಗೆ ಮೈ ತಾಗಿಸಿಭಿಕ್ಷೆಗೆ ಕೈ ಮುಂದೊಡ್ಡೂತ್ತಾಳೆನಿರೀಕ್ಷೆಯಿಲ್ಲದ ಕಣ್ಣುಗಳಆಚೀಚೆ ಸರಿಸುತ್ತ ಮುಂದೆ ಯಾರೆಂದುಮನದಲ್ಲೇ ಲೆಕ್ಕವಿಡುವಾಗ ಎಲ್ಲ ದಿನಗಳುಕೊನೆಯಲಿ ಒಂದೇ ಇರಬೇಕು..ಹೊಟ್ಟೆಪಾಡು, ಕೈ ಗಳ ಜೋಲಿ ಹಾಡುಇಷ್ಟಕ್ಕೇ ಮುಗಿಯುತ್ತಿರಬೇಕು… ದಣಿವಿರದೆ ದುಡಿದ ಇಪ್ಪತ್ತು ವರ್ಷಗಳಕಾಲೇಜಿನಲಿ ಕಳೆದ ಹತ್ತು ವರ್ಷಗಳಮನೆದುಡಿಮೆಯಲಿ ಸುಕ್ಕುಗಟ್ಟಿದ ಕೈಯಲ್ಲಿಹತ್ತು, ನೂರು,ಸಾವಿರದ ನೋಟುಗಳತಡಕುತ್ತ ಅಂಜುತ್ತೇನೆ, ಕೊನೆ ಎಲ್ಲಿಗೆ? “ಬರುತ್ತೀಯೇನು ಕೊಡುತ್ತೇನೆಊಟ, ಬಟ್ಟೆ, ದುಡ್ಡು, ಕೆಲಸಪುಟ್ಟಮಗುವಿಗೆ ಆಟದ ಸಾಮಾನುಶಾಲೆಯ ಜೊತೆ , ತೂಗಲು ಆಶೆಯ ಕಮಾನು? “ಪ್ರಶ್ನೆ ಕೇಳದಂತೆ, ಮುಂದೆ ಮಾತಾಡದಂತೆಮುಖ ತಿರುವಿ ನಡೆಯುತ್ತಾಳೆಇರದಿರುವುದು ಎಂದೋ ಕಳೆದ ನಂಬಿಕೆಯೇ?ಸುಟ್ಟ ಸಂಕಲ್ಪವೆ? ಹಲ್ಲಂಡೆ ಬದುಕಿನಭಾರೀ ಸೆಳೆತವೆ?ತೋರದೆ ಬೆಪ್ಪಾಗುತ್ತೇನೆಮುಂದಿರುವ ಡ್ರೈವರು ಮೀಸೆಯಡಿನಗುವ ತಡೆಹಿಡಿದು ಮುಚ್ಚಿಡುವಾಗಪ್ರಶ್ನೆಗಳು ಮಿನುಗುತ್ತವೆಆದರ್ಶಗಳು ಅಳ್ಳಕವೆ ?ಭಿಕ್ಷೆಯ ಕೈಗಳಿಗೆ ಚಾಚಿದಸಹಾಯ ಹಸ್ತ ಇಷ್ಟು ನಿರರ್ಥಕವೆ?ಬಂಧನಗಳಿಲ್ಲದ ಅವಳ ಬದುಕಿನಲಿಬದ್ಧತೆಯ ಕೇಳಿದ ನನ್ನಭಿಕ್ಷಾ ಪಾತ್ರೆ ಖಾಲಿಯೇ ಉಳಿಯುತ್ತದೆ ! ಗಾಳ ಹಾಕಿ ಕೂತ ಮನಸು…. ಗಾಳ ಹಾಕಿ ಕೂತ ಮನಸಜಾಳು ಜಾಳು ಬಲೆಯ ತುಂಬಸಿಕ್ಕ ನೆನಪುಗಳು ವಿಲ ವಿಲಪರ್ವತಗಳು ಪುಡಿಯಾಗಿ ಸಿಡಿದುಹಡೆದ ಮರುಭೂಮಿಯಲ್ಲಿಸೂರ್ಯ ಉರಿದು ಕರಗಿನಡುಗಿ ಇಳಿಯುತಿರುವಲ್ಲಿಕಡುಗಪ್ಪು ಬಣ್ಣದ ವೃತ್ತಭುವಿಯ ಕುದಿಯೆಲ್ಲ ಉಕ್ಕಿರಂಧ್ರಗನ್ನಡಿ ಕೊರೆದು ಕಣ್ಣೀರಿನಲಿಸೃಷ್ಟಿಸಿದಂತಹ ಪುಟ್ಟ ಕೊಳಸುತ್ತ ಯಾವ ಹೆಜ್ಜೆ ಗುರುತುಗಳಿಲ್ಲದಂಡೆಯಿರದ ತೀರಬೇರೊಂದು ಲೋಕಕ್ಕೆ ಒಯ್ಯಲುತೆರೆದಂತೆ ಬಾಗಿಲಾಗಿ ಕರೆವಲ್ಲಿತಲೆ ಮೇಲೆತ್ತಿ ನೋಡಲುಆಗಸದಲಿ ಮೋಡ, ತಾರೆಗಳಿಲ್ಲಫಳಕ್ಕನೆ ಏನೋ ಮಿಂಚಿ ಹಿಂಡುತ್ತದೆತುಟಿ ಎದೆಗಳಲಿ ವಿದ್ಯುತ್ ಪುಳಕಿಸಿದಂತೆದಶಕಗಳಿಗೂ ಮುಂಚೆಮುಳುಗುವ ಸೂರ್ಯನ ಸಾವಿರ ರಶ್ಮಿಗಳಲಿಒಂದು ಬಾಗಿ ನನ್ನ ತಲೆ ಸವರಿದಂತೆಹಿಡಿದು ಬಿಡಲು ಸೆಣೆಸುತ್ತೇನೆಕಣ್ಣಿಗೆ ಕಂಡಿದ್ದು, ಕೈಗೆ ಸಿಗದಾಯ್ತುಆತಿಡಿದು ಜೋತುಬೀಳಲು ಮನಸಿನಲಿಕನಸುಗಳು ಗೂಡು ಕಟ್ಟಲಾಗಲಿಲ್ಲಮತ್ತೇನೋ ತಡಕುತ್ತದೆ ಬಹುಆಳದ ತಳದಲ್ಲಿ ಭಾರೀ ತೂಕದ ವಸ್ತುಅದರ ನೆನಪೆಲ್ಲ ಹೇಳುವುದು ದುಃಖದಕತೆ, ಅಳಲು, ಅಸಹಾಯಕತೆಕೈ ಚಾಚಿ, ಎದೆ ಚೀಪಿ ಆಳ ಆಳ ಮುಳುಗಿಒಳಗಿಳಿದು ನೋಡಿದರೆ ನನ್ನದೇ ಕಥೆಹೋಗಿ ಸೇರಲು ರಸ್ತೆ ಕಡಿದುಕಣ್ಣೀರಲ್ಲಿ ಕರಗಿದ ನೆನಪುಗಳ ತಲೆ-ಮಾರುಗಳು ಕಳೆದಿವೆ ಮತ್ತೆ ಮರುಕಳಿಸಿಕತ್ತಲು ಸೂರ್ಯನ ಕರಗಿಸಿಬಾನನ್ನು ತಿಂದು ತೇಗಿಪ್ರೇತದಂತಹ ಚಂದ್ರನ ತೂಗುಬಿಟ್ಟಿದೆಗಾಳವನು ಸರಕ್ಕನೆ ಎಳೆದು ತಲೆಯೆತ್ತಿದಕ್ಕಿರದಿದ್ದನ್ನು ಹಿಡಿಯುವ ಚಂಡಿಯಾಗಿಗಾಳವೆಸೆದು ಕೂರುತ್ತೇನೆ ಮತ್ತೆಕೇಳುತ್ತೇನೆ ಕಳೆದುಕೊಳ್ಳಲು ಏನಿದೆ?ಕತ್ತಲ ರಾತ್ರಿ ನುಂಗಲೆಂದು ಕಾಯುತ್ತೇನೆ…. *****************

ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ Read Post »

ಕಾವ್ಯಯಾನ

ಅರ್ಪಣಾ ಮೂರ್ತಿ ಕಾವ್ಯಗುಚ್ಛ

ಅರ್ಪಣಾ ಮೂರ್ತಿ ಕಾವ್ಯಗುಚ್ಛ ಕವಿತೆ-ಒಂದು ಸದ್ದುಗದ್ದಲದಬೀದಿಯ ಬದಿಯಬೇಲಿಯ ಹೂಅರಳುವ ಸದ್ದಿಗೆಕಿವಿಯಾಗುವಉತ್ಸುಕತೆ,ಹೂ ಬಾಡಿದಷ್ಟೂಚಿಗುರುತಿದೆ, ಹರಿವನದಿಗಳೆಲ್ಲದರ ಗಮ್ಯಸಾಗರವೇ ಆಗಬೇಕಿಲ್ಲ,ಸಮುದ್ರ ಸೇರುವಮೊದಲೇಭುವಿಯೊಳಗೆ ಇಂಗಿದಅದೆಷ್ಟೋ ನದಿಗಳಆರ್ದ್ರತೆಯ ಗುರುತುಗಳುಕಾಲ್ಮೆತ್ತಿವೆ, ಮೈಸುತ್ತಿದ ನೂಲುತೆರಣಿಯ ಹುಳವನುಂಗಲೇಬೇಕಿಲ್ಲ,ರೇಷಿಮೆಯರೆಕ್ಕೆಯಂಟಿಸಿಕೊಂಡಚಿಟ್ಟೆಹೂವಿನ ತೆಕ್ಕೆಯಲಿನಾಚಿದ ಬಣ್ಣಹೂದಳದ ಮೈಗಂಟಿದೆ, ಕತ್ತಲಿಗಂಟಿದಕನಸುಗಳೆಲ್ಲಕಣ್ಣೊಳಗುಳಿಯುವುದಿಲ್ಲ,ಕನಸು ನುಂಗಿದಅದೆಷ್ಟೋ ಹಗಲುಗಳುನನಸಿಗೆ ಮುಖ ಮಾಡಿನಿಂತಿವೆ…. ಕವಿತೆ-ಎರಡು ನದಿ ತುಂಬಿ ಹರಿದರೆಬಯಲಿಗೆ ನೆಲೆಯೆಲ್ಲಿ,ಬತ್ತಬೇಕುಬರಿದಾಗಬೇಕುಬಯಲಾಗಬೇಕು,ಬರದ ಬದುಕಿನ ಒಳಗೂಇಳಿಯಬೇಕು, ಧರೆ ಕಾದು ಕರಗದೆಮಳೆಯ ಸೊಗಸೆಲ್ಲಿ,ಕಾಯಬೇಕುಕಾದು ಕರಗಬೇಕು,ಮುಗಿಲೇರಿ ಹನಿಕಟ್ಟಿಹನಿಯಬೇಕುಇಳೆ ತಣಿಯಬೇಕು, ಇರುಳು ಕವಿಯದೆಹುಣ್ಣಿಮೆಗೆ ಹೊಳಪೆಲ್ಲಿ,ಕಪ್ಪು ಕತ್ತಲ ನೆಪವುಕಣ್ಣ ಕಟ್ಟಬೇಕು,ರೆಪ್ಪೆ ಮುಟ್ಟಬೇಕುಕನಸು ಹುಟ್ಟಬೇಕು… ಕವಿತೆ-ಮೂರು ಉಸಿರುಗಟ್ಟಿದಮರುಭೂಮಿಯಲಿಬಿರುಗಾಳಿಯಹುಡುಕುವಬರಡುಮರಳ ಹಾಸುಚಿಲುಮೆ ನೀರನುಗುಟುಕಿಸಿಉಸಿರ ಹಿಡಿದುತಂಪು ಗಾಳಿಯಕಾಯುವುದೂಒಲವೇ, ಹಾಯಿದೋಣಿಹಾಯಲಿಲ್ಲನಿಂತ ನೀರ ಕಡಲಲಿ,ಅಲೆಗಳ ನೆಪವೊಡ್ಡಿಸೆಳೆದೊಯ್ಯುವಕಡಲ ಸಂಚಿಗೆನಿಂತುಮುನಿಯುವುದೂಒಲವೇ, ಬೆಳಕು ಮಲಗುವಾಗಎಚ್ಚರಾದ ಇರುಳು,ಚುಕ್ಕಿಗಳ ಬದಿಗಿರಿಸಿಚಂದಿರನ ಹುಡುಕುವಕತ್ತಲ ಮೌನದನೀರವತೆಯೂಒಲವೇ……. *********************************

ಅರ್ಪಣಾ ಮೂರ್ತಿ ಕಾವ್ಯಗುಚ್ಛ Read Post »

You cannot copy content of this page

Scroll to Top