ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ

ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ ಚೆಕ್‌ಮೇಟ್ ಜೀವನವೇ ಒಂದು ಚದುರಂಗಎಂದು ಭಾವಿಸಿದಾಗಲೆಲ್ಲ ಕಣ್ಣೆದುರಿಗೆ ಬರೀಕಪ್ಪು ಬಿಳುಪಿನ ಚೌಕದ ಸಾಲು ಸಾಲುಹಾಸಿನ ಮೇಲೆ ಕಪ್ಪು ಸೈನ್ಯಕ್ಕೆ ಎದುರಾಗಿಶತಮಾನಗಳಿಂದಲೂ ಎಲ್ಲವನ್ನೂ ನಿಯಂತ್ರಿಸುತ್ತಕಾವಲು ಕಾಯುತ್ತ ನಿಂತ ಬಿಳಿಯ ಸೈನ್ಯ ಕಪ್ಪು ಆನೆ ಒಂಟೆ ಕುದುರೆಗಳನ್ನೆಲ್ಲದ್ವಂಸಗೈದ ಬಿಳಿಯ ಸೈನ್ಯವನ್ನುಬರೀ ಪದಾತಿದಳವೊಂದರಿಂದಲೇಕಟ್ಟಿಹಾಕಿ ನಿಯಂತ್ರಿಸುವುದೂ ಒಂದು ಕಲೆಚಕ್ರವ್ಯೂಹಕ್ಕೂ ಒಂದು ತಿರುಮಂತ್ರವಿದೆಎಂಬುದನ್ನು ಮರೆತಿರೋ ಬದುಕು ಮೂರಾಬಟ್ಟೆ ಮಿಸುಕಲೂ ಆಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂಆನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡುಬದುಕಲೆಂದೇ ಇದೆ ಕ್ಯಾಸ್‌ಲಿಂಗ್ರಾಜನೊಬ್ಬ ಬದುಕಿದರೆ ಸಾಕುಆತನ ಸೈನ್ಯಕ್ಕೇಕೆ ಅಂತಹ ಲೆಕ್ಕ? ಒಬ್ಬ ರಾಜನನ್ನುಳಿಸಲುಸೈನ್ಯದ ಪ್ರತಿಯೊಬ್ಬನೂಜೀವದ ಹಂಗು ತೊರೆದು ಹೋರಾಡಬೇಕುಪದಾತಿದಳದ ಸೈನಿಕನೊಬ್ಬ ಒಂದೊಂದೇಹೆಜ್ಜೆಯಿಟ್ಟು ಕೊನೆಯ ಹಂತ ತಲುಪಿತ್ರಿವಿಕ್ರಮನಾಗಿಬಿಟ್ಟರೆ ತಕ್ಷಣವೇಆತನನ್ನು ಬದಲಿಸಿರಾಣಿಯೊಬ್ಬಳನ್ನು ಪಟ್ಟಕ್ಕೇರಿಸಬೇಕುಇನ್ನೊಬ್ಬರ ಶ್ರಮದ ದುಡಿಮೆಯಲ್ಲಿರಾಜ ಮತ್ತಿಷ್ಟು ಕೊಬ್ಬಬೇಕು ಎಷ್ಟೆಂದು ಆಡುತ್ತೀರಿ?ದಿನವಿಡೀ ಒಂದೇ ಆಟಛೇ… ಈಗಲಾದರೂ ಮುಗಿಸಿಬಿಡಿಕಪ್ಪು ಸೈನ್ಯವನ್ನು ಸೋಲಿಸುವ ಮೋಸದಾಟಮುಸುಗುಡುವ ಬಿಳಿಯ ರಾಜನಿಗೆ ಎದುರಾಗಿಕಪ್ಪು ರಾಣಿಯನ್ನಿಟ್ಟು ಬಿಟ್ಟರೆಅಲ್ಲಾಡಲಾಗದೇ ಜೀವನವೇ ಚೆಕ್‌ಮೇಟ್ ಬಿಸಿ ಚಹಾ- ಈ ಮುಸ್ಸಂಜೆಯಲ್ಲಿ ನಾನುನಿನ್ನ ನೆನಪಿನಲ್ಲಿ ಕನವರಿಸುತ್ತಿದ್ದರೆನೀನು ಈ ಲೋಕಕ್ಕೆ ಸಲ್ಲದಅತೀತ ಲೋಕದ ಸಹಚರರೊಂದಿಗೆಬ್ಲೆಂಡರ್ಸ್ ಪ್ರೈಡ್ ಹೀರುತ್ತಿರುವ ಚಿತ್ರಮನದ ಕಿಟಕಿಯೊಳಗೆ ತೂರಿ ಬರುತ್ತಿದೆ ನನ್ನ ಏಕಾಂತಕ್ಕೆ ಸಾಥ್ ಕೊಡುವಆತ್ಮಸಾಂಗತ್ಯದ ಗೆಳೆಯನೆಂದರೆಅದು ಹೊಗೆಯೇಳುವಬಿಸಿಚಹಾದ ಬಟ್ಟಲು ಮಾತ್ರಎನ್ನುವ ಸತ್ಯ ಗೊತ್ತಿರುವುದರಿಂದನೀನು ನಿಶ್ಚಿಂತನಾಗಿದ್ದೀಯ ಬಾಡಿದ ಮನಸ್ಸನ್ನು ಝಾಡಿಸಿಕೊಂಡುಬಲವಂತವಾಗಿ ವಾಸ್ತವಕ್ಕೆ ಎಳೆ ತರಲುಚಹಾ ಮಾಡಿಕೊಳ್ಳುವ ನೆಪ ಹೂಡುತ್ತೇನೆಸಕ್ಕರೆ ಡಬ್ಬದೊಳಗೆ ಸಿಕ್ಕಿಕೊಂಡ ಇರುವೆಹೊರಜಗತ್ತಿನ ಸಂಪರ್ಕ ಕಾಣದೇಸುತ್ತಿದಲ್ಲೇ ಸುತ್ತುತ್ತ ಸುಖವಾಗಿದೆ ನನ್ನೆದುರಿಗಿದ್ದ ಎರಡು ಕಪ್ ಚಹಾದಲ್ಲಿನನ್ನ ಪಾಲಿನ ಚಹಾವನ್ನು ಕಪ್‌ನತಳದಲ್ಲಿ ಒಂದಿಷ್ಟೂ ಅಂಟದಂತೆಹನಿಹನಿಯಾಗಿ ಹೀರಿದ್ದೇನೆನಿನ್ನ ಕುಸುರಿ ಕೆತ್ತಿದ ಪಿಂಗಾಣಿ ಕಪ್‌ನಒಳಗೆ ಬಿಸಿಚಹಾ ಕೆನೆಗಟ್ಟುತ್ತಿದೆ ಇರಲಿ ಬಿಡು,ನಿನ್ನ ಬಟ್ಟಲಿನಲ್ಲಿ ಇಣುಕುವಕೆಂಪು ದ್ರವದಷ್ಟು ಉನ್ಮಾದವನ್ನುಈ ಚಹಾ ನನಗೆ ಏರಿಸದೇ ಹೋದರೂನನ್ನ ನೆನಪಿನ ನೋವಿಗೆ ಮುಲಾಮು ಹಚ್ಚಲುನಿನಗೆಂದು ಕಾದಿಟ್ಟ ಬಿಸಿಚಹಾ ಕೈ ಚಾಚುತ್ತದೆ—— ಅಸಂಗತನ್ನು ಅರಸುತ್ತ.. ಕೈಯ್ಯಲ್ಲಿ ಹೂವು ಹಣ್ಣು ಅಕ್ಷತೆಕುಂಕುಮ, ಧೂಪದ ಬಾನಿ ಒಂದಿಷ್ಟು ಗಂಧಜೊತೆಗೆ ಹೆಜ್ಜೆಯಿಟ್ಟ ಸಖಿಯರನ್ನೆಲ್ಲಜುಲುಮೆಯಿಂದ ದೂರ ಸರಿಸಿದೂರದ ಶಿವಾಲಯಕೆ ಹೊರmನನ್ನೊಳಗೆ ನಿಗಿನಿಗಿಸುವ ಕೆಂಡ ಶಿವಾಲಯದ ಆಸುಪಾಸಲ್ಲೆಲ್ಲೂನಿನ್ನ ಸುಳಿವಿಲ್ಲಡಮರುಗದ ದನಿಯೂ ಮೊರೆಯುತ್ತಿಲ್ಲಗರ್ಭಗುಡಿಯ ಒಳಗೆ ಅನ್ಯಮನಸ್ಕಳಾಗಿಕುಂಕುಮವಿಟ್ಟೆ, ಹೂ ಮುಡಿಸಿನಿಟ್ಟುಸಿರಿಟ್ಟು ಕೋಪಿಸಿದೆ ಒಳಗೊಳಗೇಬಂದಿದ್ದು ನಿನಗಾಗಿ ಅಲ್ಲವೋ ಸ್ಮಶಾನವಾಸಿ,ಎಲ್ಲಾತ? ಜಗವನ್ನೇ ಕುಣಿಸುವ ಮದ್ದಳೆಯವ?ಪ್ರಶ್ನಿಸಿದೆ ಶಿವನನ್ನೇ ಕೊಂಕಿಸಿ ಕತ್ತು ದಿಟ್ಟಿಸಿದರೆ ಗಂಧ ಪೂಸುವಾಗ ಶಿವನನ್ನೇಅರೆರೆ…, ಮನ ಕದ್ದು ,ಬವಣೆಗೊಳಪಡಿಸಿಲಿಂಗದೊಳಗೆ ಅಡಗಿ ಕುಳಿತಿದ್ದಾನಲ್ಲದಿನವಿಡೀ ನಿನ್ನನ್ನೇ ಕಂಡಂತಾಗುವ ಭ್ರಮೆಗೆರೋಸಿ ಕಣ್ಣುಜ್ಜಿಕೊಂಡ ಪಿರಿಗಣ್ಣು ತೆರೆದರೂಅಲ್ಲಿ ಕಂಡಿದ್ದು ಲಿಂಗವಲ್ಲಬರಿದೇ ನಿನ್ನ ರೂಪ ಮಂತ್ರಘೋಷ, ಜಾಗಟೆಯ ದನಿಕೇಳಿಸಿದರೂ ಕಿವಿಗಿಳಿಯಲಿಲ್ಲಧೂಪದಾರತಿ, ಮಂಗಳಾರತಿ ಕಣ್ತುಂಬಲಿಲ್ಲಲಿಂಗದೊಳಗೆ ಕಣ್ಣು ಮುಚ್ಚಾಲೆಯಾಡುವವನೇಕಣ್ಣು ತಪ್ಪಿಸುವ ನಾಟಕವೇಕೇ? ಮನದೊಳಗೇ ಅನುಸಂಧಾನ ನಡೆಸುತ್ತಲಿಂಗದೆದುರು ಶಿಲೆಯಾದ ನನ್ನ ಕಂಡುಹಣ್ಣು ಹಾಲು ತಂದಿಲ್ಲವೇ?ನೈವೇದ್ಯದ ಅರ್ಪಣೆಗೇನಿದೆ?ಮೀಸೆ ಮರೆಯಲ್ಲೇ ನಗುತ್ತ ಕೇಳಿದವರಿಗೆನನ್ನನ್ನೇ ಆತನಿಗೆ ಸಮರ್ಪಿಸುತ್ತೇನೆಎಂದುಸುರಿಯೇ ಬಿಟ್ಟ ತರಳೆ ನಾನು ಲೋಕ ಬೆಚ್ಚಿಬಿದ್ದು, ಗಡಗಡನೆ ನಡುಗಿತು,ಬೂದಿ ಬಳಿದು, ಊರೂರು ತಿರುಗುವ ಶಿವನಿಗೆತನ್ನನ್ನೇ ನೀಡುವ ಶಪಥಗೈಯ್ಯುವುದೇ?ಹಾಹಾಕಾರ ಎಲ್ಲೆಲ್ಲೂಲೋಕಪಾಲನಿಗೇ ಈ ಆಹ್ವಾನವೇ?ಜಗನ್ಮಾತೆಗೆ ಸವತಿಯಾಗುವ ಕನಸೇ? ಗಹಗಹಿಸಿದೆ ಮನದಲ್ಲೇತುಟಿಯಂಚು ಮೀರದಂತೆ ನಗು ಅಡಗಿಸಿಹಿಮ ಆವರಿಸಿದ ಬೆಟ್ಟಗಳೊಡೆಯನಾತಎಲ್ಲರಿಗೂ ಭಕ್ತವತ್ಸಲಬಯಸಿದ ಹೆಣ್ಣಿಗೆ ಮಾತ್ರ ಅಸಂಗತನನಗಲ್ಲ, ಶಿವೆಗೂ ಸಿಗದ ವಿರಾಗಿಕುಹಕದ ಎಲ್ಲ ಮಾತುಗಳಿಗೆ ಬೆನ್ನು ಹಾಕಿಇಹ ಪರವೆರಡರಲ್ಲೂ ಒಂದೇ ಗುರಿ ಹೊತ್ತುಹೊರಟಿದ್ದೇನೀಗ ಮದ್ದಳೆಯ ದನಿಯರಸಿ(ಆಸೆಯೆಂಬ ಶೂಲದ ಮೇಲೆ ಸಂಕಲನದಿಂದ) ***********************

ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಉಮೇಶ ಮುನವಳ್ಳಿ ಹಣಿದ ಮೇಲೂ ಹಣಿಯಬೇಕು ಜಿಟಿ ಜಿಟಿ ಮಳೆ, ಹನಿಹನಿಯಾಗಿ,ದಣಿದ ಮೇಲೂ ದಣಿಯಬೇಕು ಇಳೆಯ ಕಳೆ, ಹನಿಹನಿಯಾಗಿ, ಸೋಲೊಪ್ಪದ ಸಾಹಸಿ ನೀನಾಗಬೇಕು,ಸವೆದ ಮೇಲೂ ಸವೆಯಬೇಕು ಕತ್ತಿಯ ಮೊನೆ, ಹನಿಹನಿಯಾಗಿ. ದೂರ ದಾರಿ ಕ್ರಮಿಸಬೇಕು ಶ್ರಮವರಿಯದೆ,ಹರಿದಮೇಲೂ ಹರಿಯಬೇಕು ಸಂತೃಪ್ತಿಯ ಹೊಳೆ, ಹನಿಹನಿಯಾಗಿ. ದಣಿವರಿಯದ ಕಾರ್ಯ ನಿನ್ನ ಕಸರತ್ತು,ಕಳೆದ ಮೇಲೂ ಕಳೆಯಬೇಕು ಒಳಮನೆ, ಹನಿಹನಿಯಾಗಿ. ತಾಕತ್ತು ಇಮ್ಮಡಿಯಾಗಿಸಿ ಗುದ್ದಾಡು ಕಣದಲ್ಲಿ,ತೆರೆದ ಮೇಲೂ ತೆರೆಯಬೇಕು ನೊರೆಯಾಗಿ ಪಸೆ, ಹನಿಹನಿಯಾಗಿ. ಗಟ್ಟಿ ಜೀವ ‘ಉಮಿ’ಯದು, ಸತ್ತು ಸತ್ತು ಹುಟ್ಟುವುದು,ಬೇಸತ್ತ ಮೇಲೂ ಮತ್ತೆ ಸಾಯುವ ಹಸೆ, ಹನಿಹನಿಯಾಗಿ ***********************

ಗಝಲ್ Read Post »

ಕಾವ್ಯಯಾನ

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ ಒಂದು ಹೆಣ್ಣಿನ ಸ್ವಗತ. ನನಗಾರ ಭಯ..!ನಾನು ಜನ್ಮ ಕೊಡುವ ಹೆಣ್ಣು ಮಗುವನ್ನುಈ ಲೋಕದಿ ತರಲು ನನಗಾರ ಭಯ..ಇಲ್ಲ.. ಭಯ ಲೋಕದ್ದಲ್ಲ..ನನ್ನಂತರಂಗದ್ದು..ಮತ್ತೊಂದು ಹೆಣ್ಣನ್ನು ಈ ಲೋಕಕ್ಕೆ ತರುವಧೈರ್ಯ ನನಗಿಲ್ಲದಿರುವದು..ಬೇಡ ಎಂದವರಿಗೆ ನಾನೇಕೆ ವೀರೋಧಿಸಲಿಲ್ಲ..!ನನಗೂ ಎಲ್ಲೊ ಬೇಡವೇ ಆಗಿತ್ತಲ್ಲ..ಗಂಡು ಮಗುವಿನ ಮೋಹವೇ ಅಧಿಕವಾಗಿತ್ತಲ್ಲ..ಸ್ತ್ರೀ ಸಬಲಿಕರಣಕ್ಕಾಗಿ ಹೋರಾಡುವನನಗೂ ಹೆಣ್ಣು ಮಗು ಬೇಕಾಗಿಲ್ಲ.. ಏಕೆ.. ನಾನನುಭವಿಸಿದ ತವಕ ತಲ್ಲಣಗಳುಅವಳು ಅನುಭವಿಸುವದು ಬೇಡವೆಂದೇ…ಕೆಟ್ಟ ಕಾಮುಕರಿಗೆ ಬಲಿಯಾದೀತೆಂದುದಿಗಿಲುಗೊಂಡೇ…ವರದಕ್ಷಿಣೆಗಾಗಿ ಸುಟ್ಟು ಬಿಟ್ಟಾರೆಂದುಭಯಗೊಂಡೆ…ಅಸಹಾಯಕತೆ ಯನ್ನು ಉಪಯೋಗಿಸಿಕೊಳ್ಳುವರದುರುಳುತನಕ್ಕಂಜಿಯೇ… ಸರಿ ಬಿಡು..ಹೆಣ್ಣನ್ನು ಹೇರದಿದ್ದರೇನಾಯಿತು..ಭ್ರೂಣದಲ್ಲೆ ಹತ್ಯೆ ಮಾಡಿದರಾಯಿತು.ಹೆಣ್ಣು ಗಳಿಲ್ಲದೆ ಬರೀ ಗಂಡಸರೇನು ಮಾಡುವರು..!ಸೃಷ್ಟಿಯನ್ನು ಮುಂದುವರೆಸುವರಾ ಅವರೋಬ್ಬರೆ.. ಹೆದರದಿರು ಮನವೇ..ಹೆಣ್ಣನ್ನು ಅಷ್ಟೊಂದು ಅಸಹಾಯಕಳೆಂದುತಿಳಿದಿರು..ಅಕ್ಕನಂಥ ವಿರಾಗೀನಿಯರು ಹಾಕಿಕೊಟ್ಟದಾರಿ ಇದೆ..ಸೀತೆ ಸಾವಿತ್ರಿಯಂಥವರ ದಿಟ್ಟ ನಿಲುವುಗಳಿವೆ..ಮಲ್ಲವ್ವ ಓಬವ್ವರ ಸಾಹಸ ಗಾಥೆಗಳಿವೆ..ಹೆಣ್ಣು ಹೆಣ್ಣೆಂದು ಜರೆಯಬೇಡ..ಹೆಣ್ಣು ಹೇರಲು ಅಂಜಬೇಡ..ಹೆಣ್ಣು ‌ಬಾಳಿನ ಕಣ್ಣೆಂಬುದು ಮರೆಯಬೇಡ. ಭರವಸೆಯ ಕಿರಣ. ದೀಪಗಳೆ..ದೀಪಗಳೆಮಿನುಗುವ ಮಿಣುಕು ನಕ್ಷತ್ರಗಳೆಮನದ ಕತ್ತಲೆ ಓಡಿಸಿ ಬೆಳಕುಪಸರಿಸುವ ಚಂದಿರಗಳೆ.. ಬಾನಿಗೂ ಭೂವಿಗೂ ಬೆಸೆದಮಿಂಚಿನ ದಿವ್ಯ ಪ್ರಭೆಗಳೆನಾಲ್ಕು ದಿಕ್ಕಿಗ ಹರಡಿದಅರಿವಿನ ವಿಶ್ವ ಜ್ಯೋತಿಗಳೆ.. ಚಿಂತೆಯ ಕಾರ್ಮೊಡ ಕರಗಿಸುವಹರುಷದ ಹೊನಲುಗಳೆನಿರಾಶೆಯ ಮುಂದೆ ಆಸೆ ತೋರುವವಿಶ್ವಾಸದ ದನಿಗಳೆ.. ಕನಸಿನ ಗೊನೆಗೆ ನೀರೆರೆದುಪೋಷಿಸುವ ಮಿಂಚಿನ ಸಿಂಚನಗಳೆಬದುಕ ಭಾರವನ್ನು ಹಗುರಗೊಳಿಸುವಉಲ್ಲಾಸದ ಕೋಲ್ಮಿಂಚುಗಳೆ.. ಕತ್ತಲು ಕಳೆದು ಬೆಳಗು ಮೂಡಿಸುವಸುಖದ ಕಲ್ಪನೆಗಳೆಮುಸುಕು ಸರಿಸಿ ದಾರಿ ತೋರಿಸಿಗುರಿಮುಟ್ಟಿಸುವ ಹೊಂಗಿರಣಗಳೆ.. ನಿಸ್ತರಂಗದ ಬಾಳಲಿ ಚಲನೆಮೂಡಿಸುವ ಆಶಾ ದೀವಿಗೆಗಳೆಬಾಳ್ ದಾರಿಯಲೆಲ್ಲಾ ಸದಾಜೊತೆಗಿರುವ ಭರವಸೆಯ ಕಿರಣಗಳೆ.. ಅಕ್ಕ. ಅಕ್ಕ…ಚನ್ನನ ಮೇಲೆ ಅದೆಂತಹ ಮೋಹ ನಿನಗೆಆ ಚೆನ್ನ ಸಿಕ್ಕನೇನೆ ನಿನಗೆ.ಕೇಶವನ್ನೆ ಅಂಗಕ್ಕೆ ಮರೆಮಾಡಿಕೊಂಡುಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವನಿಗಾಗಿಕಾಡು ಮೇಡು ಅಲೆದು ದಣಿದ ನಿನಗೆಆ ಚೆನ್ನ ಸಿಕ್ಕನೇನೆ ಕೊನೆಗೆ ದೇಹದ ಮೋಹವನ್ನು ತೋರೆದುಭಯವೆಂಬ ಭವವ ನಿರ್ಬಯದಿ ಹರಿದುಆಡಿಕೊಳ್ಳುವವರ ಮುಂದೆ ಧೈರ್ಯದಿ ಮೆರೆದೆ ನೀನಿನೋಲಿದ ಚನ್ನ ಸಿಕ್ಕನೇನೆ ನಿನಗೆ. ಬೆಟ್ಟು ಮಾಡುವರನ್ನು ದಿಟ್ಟ ನಿಲುವುಗಳಿಂದಬಿಚ್ಚು ಮನಸ್ಸಿನಿಂದ ಬೆರಗುಗೋಳಿಸಿಇಚ್ಚೆ ಪಟ್ಟವನನ್ನು ಅರಸುತ್ತಾಅರಸೊತ್ತಿಗೆ ಬಿಟ್ಟು ಬಂದ ನಿನಗೆಆ ಚನ್ನ ಸಿಕ್ಕನೇನೆ ಅಕ್ಕ.. ಶ್ರೀಶೈಲದ ಕಾಡುಮೇಡು ಅಲೆದುಕದಳಿಯ ಭವ ಘೋರಾರಣ್ಯ ಹೊಕ್ಕುಭವಗೆಟ್ಟು ಹೋದನಿನಗೆ ಬಿಗಿದಪ್ಪಲು ಭವಹರನಾದಆ ಚನ್ನ ಸಿಕ್ಕನೇನೆ ಅಕ್ಕ.. ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದಸೀಮೆಇಲ್ಲದ ನಿಸ್ಸೀಮನಿಗಾಗಿಉಡತಡಿಯಿಂದ ಕಲ್ಯಾಣದ ವರೆಗೆಕದಳಿಯ ಸೀಮೆಯವರೆಗೆ ತ್ರೀಕೂಟವೆಂಬಮಹಾಗಿರಿಯ ಬಟ್ಟಬಯಲೋಳಗೆ ಹುಚ್ಚಾಟದ ಮೇರೆಮೀರಿ ಹುಡುಕಾಡಿಶರಣಸತಿ ಲಿಂಗಪತಿ ಎಂಬ ಭಾವದಲ್ಲಿಕದಳಿಯಲ್ಲಿ ನಿನ್ನ ಚನ್ನನಲ್ಲೆ ಒಂದಾದೆಯಲ್ಲ.. ಕೋನೆಗೂ ನಿನ್ನ ಚನ್ನನನ್ನು ಹುಡುಕೆಬಿಟ್ಟಯಲ್ಲ… *******************

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ Read Post »

ಕಾವ್ಯಯಾನ

ವಿಶಾಲಾ ಆರಾಧ್ಯ ಕಾವ್ಯಗುಚ್ಛ

ವಿಶಾಲಾ ಆರಾಧ್ಯ ಕಾವ್ಯಗುಚ್ಛ ಬುದ್ಧನೊಂದಿಗೊಂದು ದಿನ ನಿನ್ನಂತಾಗಲೂನಾನೇನು ಮಾಡಬೇಕು ?ಕತ್ತಲ ಬದುಕಿನಿಂದೊಡನೆನಡೆದುಬಿಡಲೇ?ಓ..ಓಹ್ಎಂದಾದರೂ ಉಂಟೆ ಬುದ್ಧ ?ಯಶೋಧರೆ ಏನಾದರೂ ನಿನ್ನ ಬಿಟ್ಟು ರಾಹುಲನ ದಾಟಿ ಬಂದಿದ್ದರೆಕಥೆ ಏನಾಗಿರುತ್ತಿತ್ತು..??ನೀನೇನೋ ಸಿದ್ಧಾರ್ಥನಿಂದಬುದ್ಧನಾಗಿ ಹೋದೆಯಶೋಧರೆಗೆಂತೆಂಥಹ ಪದವಿಬಿರುದು ವಿಜೃಂಭಿಸುತ್ತಿದ್ದವುಬಲ್ಲೆ ಏನು?ಸಾಧ್ವಿ ಸೀತೆಯ ಶೀಲಕೆ ಬೆಂಕಿಯಿತ್ತ ಜನಸಾವಿತ್ರಿಯ ಸೋಲಿಸೆ ನಿಂದಸಿದ ಯಮಕೃಷ್ಣೆಗೆ ಹೊರಗಿನರಲ್ಲ ಅರಮನೆಯಲೇಅಂಬರವ ಹರಿದ ಬಣ!ಯಶೋಧರೆಯ ಬೇರಾವ ಅಗ್ನಿನುಡಿಗೀಡುಮಾಡುತ್ತಿದ್ದರೋ..ನಿನಗೆ ಒಮ್ಮೆಯಾದರೂ ಪತ್ನಿ ಬೇಡ..!ಪುತ್ರನ ನೆನಪೇನಾದರೂ ಸುಳಿಯಿತೇ?ಊರಿಗೇ ಬೆಳಕಿತ್ತ ಪುಣ್ಯಾತ್ಮ ನೀನುಒಳಗೊಳಗೇ ನೀನು ಕತ್ತಲಾಗಲಿಲ್ಲವೇ? ದೀಪದ ಕೆಳಗಿನ ಕತ್ತಲಂತೆ..!! ಎಲ್ಲೆ ದೇವರು ದಿಕ್ಕರಿಸಿ ಗಡಿಪಾರಾಗಿದ್ದಾನೆಮಾಡಿದ ಸೈಟು ಬೇಡಿದ ಕಾರುಮಾಡಿದ ಕಾರುಬಾರೆಲ್ಲಾಅವನ ಕೃಪೆಯೇ !ಗೋಡೆಯಲಿ ಇದ್ದಾಗಅಮ್ಮ ಅಪ್ಪನೇ ಗುರುವೇ ಎಂದುವಾರ ಮಾಡಿ ಪಕ್ಷ ಮಾಡಿ ಬೇಡಿ ಕಾಡಿ ಪಡೆದವರೇ .!ಕಾಯಿ ಹೊಡೆದು ಹಣ್ಣನಿತ್ತುದೀಪ ಧೂಪ ಹಚ್ಚಿ ಇಟ್ಟು ವಸ್ತ್ರ ದಕ್ಷಿಣೆಗಳನಿಟ್ಟುಕೈ ಜೋಡಿಸಿ ಬೇಡಿದವರೇ..!ಅವನಿಗಾಗಿ ಜಾತ್ರೆ ಮಾಡಿಅವನ ಹೆಸರಲೇ ಯಾತ್ರೆ ಮಾಡಿದಂಡಿ ದಂಡಿ ದಂಡವಿಟ್ಟುಹರಕೆ ಹೊತ್ತು ಉರುಳಿ ಬಂದು ದೀರ್ಘ ದಂಡ ಹಾಕಿದವರೇ ..!ಅಂಬರಕ್ಕೇ ಅಂಬರವನಿತ್ತುದಯಾಮಯಿಗೇ ದಯೆ ತೋರಿನೆಲೆಯಾದವನಿಗೇ ಗುಡಿಯ ಕಟ್ಟಿಮನೋಹರನಿಗೇ ಉಪಚಾರ ಮಾಡಿ ಕಡೆಗೊಂದು ದಿನಮಾಸಿದನೆಂದೋ ಪಟ ಪಸುಗೆಯಾಯಿತೆಂದೋಮನೆಯಾಚೆ ತಳ್ಳಿ ಜಗನ್ನಾಥನನ್ನೇಅನಾಥಗೊಳಿಸಿದ ಮನುಜ ಭಕ್ತಿಗೇನೆಂಬೆ? ಕುದಿ ಕುದಿಯುವ ಹೂವಿನ ಹೃದಯಗಳಲಿನಗುವಿನ ಆವಿಯ ಚಿತ್ರಣ ತೋರಿಕೆಅಂತರಂಗದ ಕತ್ತಲಾಮಿಷ ಕೋಣೆಗೆಬಹಿರಂಗದಿ ಕಾಣುವ ಬೆಳಕಿನ ಜವನಿಕೆ ಹೂವಿನ ಹುಡುಗನು ಕಟ್ಟುವ ನೂಲಲೇಕೊರಳುಸಿರಿನ ಇರಿತದ ಮತ್ಸರವಿಹುದುಕಸಾಯಿಕಾನೆಯ ಕಟುಕನ ಕಣ್ಣಲೂಕರುಣೆಯ ಕರುಳಿನ ಕರೆಯಿರಬಹುದು ಕಣ್ಣಿಗ್ಹಬ್ಬವಾಗೋ ಅಂದದ ಕಡಲೊಳುಜೀವ ತೆಗೆಯುವ ಸುಂದರ ಜಲಚರಕಸವನೇ ನುಂಗಿದ ಕೆಸರಿನ ಹೊಂಡದಿಪೂಜೆಗೆ ಒದಗುವ ಕಮಲದ ಹಂದರ ಸುಂದರ ಗೋಕುಲ ವೃಂದಾವನದಿ ಗೂಡೊಳಗೊಂದು ವ್ಯಾಘ್ರ ನುಗ್ಗಿದೆಅಂದದೊಂದಿಗೆ ಚಂದದ ಮನದಿಮನದೊಳಗೆ ವಿಷವನೇ ಬಸಿದಿದೆ————- *********************

ವಿಶಾಲಾ ಆರಾಧ್ಯ ಕಾವ್ಯಗುಚ್ಛ Read Post »

ಕಾವ್ಯಯಾನ

ಕವಿತೆಯೆಂದರೆ

ಕವಿತೆ ಪ್ರೇಮಶೇಖರ ಕವಿತೆಯೆಂದರೆ ಏನು?ಏನಲ್ಲ? ಕವಿತೆಯೆಂದರೆ ಕತ್ತಲೆಬೆಳಕಿನಾಟದ ಜೀವನರಂಗಮಂಚ. ಕವಿತೆಯೆಂದರೆ ಸಮುದ್ರತೀರದ ಸತ್ತ ಮೀನುಅರಳಿಸುವ ಮಲ್ಲಿಗೆಸುವಾಸನೆ, ಕವಿತೆಯೆಂದರೆ ಹೆಣ್ಣುನಾಗರಇಟ್ಟ ನೂರೊಂದು ಮೊಟ್ಟೆಗಳೊಡೆದು ಬಂದನವಿಲುಗರಿಗಳು. ಕವಿತೆಯೆಂದರೆ ಪ್ರೇಯಸಿಕೊಟ್ಟ ಮುತ್ತುಒಡೆದುಹೋಗಿಧಾರಾವಾಹಿಯಾದ ನಿರೀಕ್ಷೆ. ಕವಿತೆಯೆಂದರೆ ಬೀಸಣಿಗೆಯ ಬಣ್ಣದ ರೆಕ್ಕೆಯ ಗಿಣಿಮರಿಗೆ ಮಾತು ಕಲಿಸಹೊರಟಮಗು. ಕವಿತೆಯೆಂದರೆ ನಾಳೆಹಾರಿ ಹೋಗುತ್ತದೆಎಂದು ಗೊತ್ತಿದ್ದರೂ ಇಂದುಗುಟುಕು ನೀಡುವತಾಯಿಹಕ್ಕಿ. ಕವಿತೆಯೆಂದರೆ ಅಕ್ಷತಯೋನಿಒಂಬತ್ತು ಹೆತ್ತು ಮೂಲೆಯಲ್ಲಿಕೂತ ಅಡುಗೂಲಜ್ಜಿಕತೆ. ಕವಿತೆಯೆಂದರೆ ತಾಯಿಹುಲ್ಲೆಯನು ಕೊಂದುತಿಂದುಎಳೆಹುಲ್ಲೆಗೆ ತಾಯಿಯಾಗಿ ಹಾಲೂಡಿಸಿದ ಹೆಣ್ಣುಹುಲಿ. ಕವಿತೆಯೆಂದರೆಕೊನೆಗೂ ಏನುಂಟು?ಏನಿಲ್ಲ? ಅಹ್ ಕವಿತೆಯೇ ಅಂತಿಮವಾಗಿ ನೀನೇ ಎಲ್ಲ,ನಾನೆಲ್ಲೂ ಇಲ್ಲ. **********************

ಕವಿತೆಯೆಂದರೆ Read Post »

ಕಾವ್ಯಯಾನ

ಚೈತ್ರಾ ಕಾವ್ಯಗುಚ್ಛ

ಚೈತ್ರಾ ಶಿವಯೋಗಿಮಠ ಕಾವ್ಯಗುಚ್ಛ ಕೊರೋನಾ ಖೈದಿ ದಿನ ರಾತ್ರಿಗಳಿಗೆ ವ್ಯತ್ಯಾಸವೇ ಇಲ್ಲಉದಯಾಸ್ತಮಾನಗಳ ನಡುವೆಭೂಮ್ಯಾಕಾಶದ ಅಂತರ.ಗಡಿಯಾರದ ಮುಳ್ಳುಗಳುಅಪೌಷ್ಟಿಕತೆಯಿಂದ ನರಳುತ್ತಿವೆಚಲನೆ ಅದೆಷ್ಟು ಕ್ಷೀಣವೆಂದರೆಒಂದು ಹೆಜ್ಜೆ ಇಡಲೂ ಆಗದ,ಕೀಲಿಲ್ಲದ ಮುದುಕಿಯ ಹಾಗೆಕೈಲಾಗದಿದ್ದರೂ ಬೊಬ್ಬಿಡುವುದಕೇನೂಕಡಿಮೆ ಇಲ್ಲ ‘ಟಿಕ್’ ಎಂಬ ಶಬ್ದಮಾತ್ರ ಕಿವಿಯೊಳಗೆ ಕಾದ ಸೀಸಹೊಯ್ದಷ್ಟು ಕಠೋರ. ಆಗೊಮ್ಮೆ-ಈಗೊಮ್ಮೆನರ್ಸಗಳ ಅಡ್ಡಾಡುವಿಕೆ ಮಾತ್ರನಾನಿನ್ನೂ ಮನುಷ್ಯರ ನಡುವಿರುವುದಕೆಪುರಾವೆ.ಖಾನೆಯೊಳಗೆ ಖಾಲಿತನ ತುಂಬಿಉಸಿರಾಟದ ಭದ್ರತೆ ಕಾಯ್ದುಕೊಂಡು ಏಳು ದಿನಗಳನ್ನಏಳು ವರ್ಷಗಳಂತೆ ಕಳೆದು ಬರುವ ಖೈದಿ! ಕಣ್ಣಾಮುಚ್ಚಾಲೆ ತಪ್ಪಿಸಿಕೊಳ್ಳುವುದಕ್ಕೆ ಹೇಳುತ್ತಿದ್ದ ಕುಂಟುನೆಪಗಳಿಂದು ಬಂಧಿಸುವುದಕ್ಕೆಬರುವ ಭಟನಂತೆ.ಜ್ವರವೆಂದು ನರಳುವ ಹಾಗಿಲ್ಲರಾಕ್ಷಸನಂತೆ ಹಗಲಿರುಳೆನ್ನದೆ ದುಡಿದುಒಂದೆರಡು ದಿನವೂ ಮೈಕೈ ನೋವೆಂದುಒದ್ದಾಡುವ ಹಾಗಿಲ್ಲ. ಎಲ್ಲ ರಸ್ತೆಗಳೂಅಲ್ಲಿಗೆ ಎಳೆದುಕೊಂಡು ಹೋಗುತ್ತಿವೆ.ಕಾಲು ಕಿತ್ತು ರಸ್ತೆ ಬದಲಿಸಿದರೂ ಅವುಒಯ್ಯುವುದು ಅಲ್ಲಿಗೇ!ಎಲ್ಲಿಯೂ ಹೋಗದೆ ಒಳಗಿರಲುನನ್ನ ದಾಸ್ತಾನು ಅಕ್ಷಯಪಾತ್ರೆಯೇ?ದುಡಿದು ತುತ್ತಿನ ಚೀಲ ತುಂಬಿಸಿಯೇನೆಂದರೆಎಲ್ಲಿಂದಲೋ ಹಾರಿ ಬಂದು ಕತ್ತುಹಿಸುಕುವ ಅಣುರಕ್ಕಸ. ಎಷ್ಟು ದಿನಈ ಕಣ್ಣಾಮುಚ್ಚಾಲೆಯೋ ? ಕಾಲ ಮುಟ್ಟಿದರೆ, ಮುತ್ತಿಟ್ಟರೆ ಹೆಚ್ಚುತ್ತಿದ್ದಿದ್ದುಪ್ರೀತಿ ಒಲವುಗಳು ಮಾತ್ರ.ಸುರಿವ ಕಣ್ಣೀರಿಗೆ ಅಣೆಕಟ್ಟಾಗಿದ್ದುನೇವರಿಕೆ, ತೆಕ್ಕೆಯ ಮೃದು ಅಪ್ಪುಗೆಕಳೇಬರಕ್ಕೆ ಕೊನೆ ಪೂಜೆಯೇಕಳೆಯಂತೆ, ಕೊನೆಯದಾಗಿ ತಬ್ಬಿಬಿದ್ದು ಹೊರಳಾಡಿ ಅತ್ತರೂ ತೃಪ್ತಿನೀಡುತ್ತಿರಲಿಲ್ಲ ಬೀಳ್ಕೊಡುಗೆ.ತಂದೆ- ತಾಯಿ ಮಕ್ಕಳೆಲ್ಲ ಒಂದೆಡೆಸೇರಿ ಸಂಭ್ರಮಿಸುತ್ತಿದ್ದಿದ್ದು ಹಬ್ಬಗಳುಒಬ್ಬರಿಗೊಬ್ಬರಾದಾಗ ಹರಡುತ್ತಿದ್ದಿದ್ದುಭ್ರಾತೃತ್ವ, ಒಂದೆಂಬ ಭಾವಎಲ್ಲಿಯೋ ಏನೋ ಅವಘಡವಾದರೆಮರುಗುತ್ತಿದ್ದಿದ್ದು ಮೃದು ಮನ. ಎಲ್ಲವೂ ಗತ ವೈಭವವೀಗಮುಟ್ಟುವ ಹಾಗಿಲ್ಲ ತಟ್ಟುವ ಹಾಗಿಲ್ಲನೇವರಿಸಿ ಸಂತೈಸಿದರೆ ಹರಡುವುದುಖಾಯಿಲೆ ಮಾತ್ರ!ಸಂಸ್ಕಾರ ಕಾಣದ ಶವಗಳ ಕನಿಷ್ಠಒಮ್ಮೆ ಕಂಡರೂ ಸೌಭಾಗ್ಯತಂದೆ ತಾಯಿ ಮಕ್ಕಳು ದಿಕ್ಕಿಗೊಬ್ಬರಂತೆಒಬ್ಬರಿಗೊಬ್ಬರಾದರೆ ಹರಡುವುದುಪಿಡುಗಂತೆದಿನವೂ ಒಂದೇ ರುಚಿ ನಾಲಿಗೆಯದುಡ್ಡು ಬೀಳಿಸಿದಂತೆ, ಎಂತಹ ಅನಾಹುತಕ್ಕೂಮನಗಳು ಈಗ ಮರಗಟ್ಟಿ ಹೋಗಿವೆ *************************

ಚೈತ್ರಾ ಕಾವ್ಯಗುಚ್ಛ Read Post »

ಇತರೆ, ಜೀವನ

ಇತರೆ

ರೈತರ ಆಪತ್ಭಾಂದವ ಜೋಕಪ್ಪನೂ..! ಮಳೆ ತರುವ ದೇವರು ಜೋಕುಮಾರಸ್ವಾಮಿ. ಗಣೇಶ ಶಿಷ್ಟ ಪರಂಪರೆಯ ದೇವರು. ಅಲ್ಲದೇ ಜಾನಪದರ ದೇವರು ಜೋಕುಮಾರಸ್ವಾಮಿ.ಗಣೇಶ ಹೊಟ್ಟೆ ತುಂಬ ಉಂಡು ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆತಾಯಿಗಳಾದ ಶಿವ-ಪಾರ್ವತಿಯರಿಗೆ ವರದಿ ಒಪ್ಪಿಸಿದರೆ, ಜಾನಪದರ ದೇವರು ಜೋಕುಮಾರಸ್ವಾಮಿ ಇಲ್ಲಿ ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ಜನತೆಯ ಕಷ್ಟ ಕಾರ್ಪಣ್ಯಗಳ ವರದಿ ನೀಡಿ ಮಳೆ ಸುರಿಸಲು ವಿನಂತಿಸಿಕೊಳ್ಳುತ್ತಾನೆ. ಹೀಗಾಗಿಯೇ ಜೋಕುಮಾರಸ್ವಾಮಿ ಒಕ್ಕಲಿಗರಿಗೆ ಮಳೆ ತರುವ ನಂಬಿಗಸ್ತ ದೇವರು. ‘ಜೋಕುಮಾರಸ್ವಾಮಿ ಮಳಿ ಕೊಡಾವ ನೋಡ್ರೀ’ ಎಂದು ರೈತರು ಎದೆ ತಟ್ಟಿ ಹೇಳುತ್ತಾರೆ. ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ ‘ಜೋಕಪ್ಪ’ ಎಂಬ ಮುನಿಯ ಮಗನೆಂದೂ, ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ. ಜೋಕುಮಾರನನ್ನು ಹೊತ್ತು ತರುವ ಬುಟ್ಟಿಯಲ್ಲಿ ಯಥೇಚ್ಛವಾಗಿ ಬೇವಿನ ಸೊಪ್ಪನ್ನಿಟ್ಟಿರುತ್ತಾರೆ. ಹಾಗಾಗಿಯೇ ದುರ್ಮರಣಕ್ಕೀಡಾದವರನ್ನು ಬೇವಿನ ಸೊಪ್ಪು ಮುಚ್ಚಿ ಶವ ಸಾಗಿಸಲಾಗುತ್ತದೆ. ಆ ಕಾರಣವಿಟ್ಟುಕೊಂಡೇ ಹಳ್ಳಿಯಲ್ಲಿ ತಮ್ಮೂರಿನ ಉಡಾಳರಿಗೆ, ಗೂಂಡಾಗಳಿಗೆ, ಫಟಿಂಗರಿಗೆ ‘ಅಂವಾ ಹೊಕ್ಕಾನಳ ಬೇವಿನ ತೊಪ್ಪಲ ದೊಳ್ಗ’ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿರುತ್ತಾರೆ. ಇಂಥ ಜೋಕುಮಾರ ಹುಟ್ಟುವುದು ವಿಶ್ವಕರ್ಮರ ಮನೆಯಲ್ಲಿ. ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ ಎಲೆ. ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ. ವಾಲ್ಮೆಕಿ ಜನಾಂಗದ, ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ ‘ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ’ ಎಲ್ಲವೂ ಆ ಹಾಡಿನಲ್ಲಿ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ ಎಂಬ ನಮ್ಮ ‘ಜನಪದ’ರದು. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ. ಬೇವಿನ ಸೊಪ್ಪು ಕಹಿಯಾದ ಹಾಗೂ ಔಷಧೀಯ ಗುಣವಿರುವ ಸೊಪ್ಪು.ಊರಲ್ಲಿ ಹೀಗೆಯೇ ಏಳು ದಿನ ತಿರುಗಾಡಿದನಂತರ ತಳವಾರರ ಮನೆಯಲ್ಲಿ ಬುಟ್ಟಿ ತುಂಬುವಷ್ಟು ಜೋಳದ ಕಡುಬು ಮಾಡಿ ಜೋಕುಮಾರನ ಮೈ ಮೇಲಿನ ವಸ್ತುಗಳನ್ನು ತೆಗೆದು ಆತನ ಕುತ್ತಿಗೆ ಮುಚ್ಚುವವರೆಗೆ ಕಡುಬುಗಳನ್ನು ಪೇರಿಸಿ ಇಡಲಾಗುತ್ತದೆ.ಒಂದು ಕೈಯ್ಯಲ್ಲಿ ಕೊಬ್ಬರಿ ಬಟ್ಟಲನ್ನು, ಇನ್ನೊಂದು ಕೈಯ್ಯಲ್ಲಿ ದೀಪ ಹಚ್ಚಿದ ಪರಟೆಯನ್ನು ಕೊಟ್ಟಿರುತ್ತಾರೆ. ಆ ನಂತರದಲ್ಲಿ ಗಂಡಸೊಬ್ಬನು ಜೋಕುಮಾರನನ್ನು ಕುಳ್ಳಿರಿಸಿದ ಬುಟ್ಟಿಯನ್ನು ಹೊತ್ತು ನಡೆಯುತ್ತಾನೆ. ಹೀಗೆ ಕತ್ತಲಲ್ಲಿ ಸಾಗಿದ ಜೋಕುಮಾರನನ್ನಾಗಲೀ, ಆತನ ಕೈಯ್ಯಲ್ಲಿಯ ದೀಪವನ್ನಾಗಲೀ ಯಾರೂ ನೋಡುವಂತಿಲ್ಲ. ನೋಡಿದರೆ ಅಪಶಕುನವಷ್ಟೇ ಅಲ್ಲ, ವರ್ಷ ತುಂಬುವದರೊಳಗಾಗಿ ನೋಡಿದಾತ ಲೈಂಗಿಕ ಹಗರಣದಲ್ಲಿ ಸಿಲುಕಿ ಅಪಮಾನವಾಗಿ ಇಲ್ಲವೇ ಪ್ರಾಣ ಕಳೆದುಕೊಳ್ಳುವ ಅಪಾಯವೂ ಉಂಟೆಂದು ಹೇಳಲಾಗುತ್ತದೆ ‘ಜನಪದ’ದಲ್ಲಿ. ಜೋಕುಮಾರನ ಹತ್ಯೆಯಾಗುವ ದಿನ ಆತ ಹಾಯ್ದು ಹೋಗುವ ದಾರಿಯುದ್ದಕ್ಕೂ ಮೊದಲೇ ಒಬ್ಬಾತ ‘ಜೋಕುಮಾರ ಬರ್ತಾನ, ಲಗೂ ಬಾಗ್ಲಾ ಮುಚ್ಚ್ರೀ’ ಎಂದು ಹೇಳುತ್ತಾ ಹೋಗುತ್ತಾನೆ. ಮಧ್ಯರಾತ್ರಿಯ ನಂತರವೇ ಜೋಕುಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ. ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮುಳ್ಳಿನ ಕಂಟಿಯನ್ನಿಟ್ಟಿರುತ್ತಾರೆ. ವೇಶ್ಯೆಯರು ಚಾವಡಿಯಲ್ಲಿಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಜಗ್ಗಿದಾಗ ‘ಜೋಕುಮಾರ ನಮ್ಮನ್ನು ಹಿಡಿದುಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ’ ಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಮಾಡತೊಡಗುತ್ತಾರೆ. ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒಣಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ. ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ನದಿ ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ ‘ದಿನ’ ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ..! ಇದು ಜೋಕುರಸ್ವಾಮಿಯ ಜಾನಪದ ಕತೆ… ನಿಜಕ್ಕೂ ಜೊಕುಮಾರಸ್ವಾಮಿ ರೈತರ ದೇವರು. ಏಕೆಂದರೆ ರೈತರ ಪೀಕು-ಪೈರಿನ ಹುಲುಸುವಿಕೆ ಬಯಸುವ ದೇವರು ಜೋಕುಮಾರಸ್ವಾಮಿ. ಮಳೆಗಾಗಿ ಶಿವ-ಪಾರ್ವತಿಯರನ್ನು ಅಂಗಲಾಚಿ ಮಳೆ ತರಿಸುವ ದೇವರು.ಜೊಕುಮಾರಸ್ವಾಮಿಗಿಂತಲೂ ಮೊದಲು ಬಂದು ಹೋಗುವ ದೇವರು ಗಣೇಶ ಉಂಡಿ-ಕಡಬು ತಿಂದು ಸಂಪಲೇಪರಾಕೆನ್ನುತ್ತಾ ರೈತರ ಕಷ್ಟ-ಕಾರ್ಪಣ್ಯದತ್ತ ಗಮನ ಕೊಡದ ದೇವರು..! ಹೀಗಾಗಿಯೇ ಜೊಕಪ್ಪ ಅಥವಾ ಜೋಕುಮಾರಸ್ವಾಮಿ ರೈತರಿಗೆ ಆಪದ್ಭಾಂವ ಅನ್ನಲೇನೂ ಅಡ್ಡಿಯಿಲ್ಲ… *********************** ಕೆ.ಶಿವು.ಲಕ್ಕಣ್ಣವರ

ಇತರೆ Read Post »

ನಿಮ್ಮೊಂದಿಗೆ

ಪ್ರಸ್ತುತ

ಹರಪ್ಪ – ಡಿಎನ್ಎ ನುಡಿದ ಸತ್ಯ ನೂತನ ದೋಶೆಟ್ಟಿ ಈ ಶೀರ್ಷಿಕೆಯ ಕೃತಿಯನ್ನು ಲಕ್ಷ್ಮೀಪತಿ ಕೋಲಾರ ಹಾಗೂ ಸುರೇಶ್ ಭಟ್ ಬಾಕ್ರಬೈಲು  ಅವರು ಜೊತೆಯಾಗಿ ಹೊರತಂದಿದ್ದಾರೆ. ಸಾಗರ ತಾಲೂಕು ಕುಗ್ವೆಯ ಓದು ಪ್ರಕಾಶನ  2018ರಲ್ಲಿ  ಇದರ ದ್ವಿತೀಯ ಆವೃತ್ತಿ ಮಾಡಿದೆ.ಮೊದಲ ಮುದ್ರಣದ ಎಲ್ಲ ಪ್ರತಿಗಳು ಎರಡೇ ದಿನಗಳಲ್ಲಿ  ಖಾಲಿಯಾಗಿದ್ದು ಈ ಕೃತಿಯ ಮಹತ್ವವನ್ನು ಹೇಳುತ್ತದೆ. 76 ಪುಟಗಳ ಈ ಕೃತಿಯಲ್ಲಿ  ಇರುವ ಎರಡು ಲೇಖನಗಳಲ್ಲಿ  ಅತ್ಯಂತ ಕುತೂಹಲಕಾರಿ ಸಂಶೋಧನೆಗಳ ಮಾಹಿತಿ ಇದೆ. ವಂಶವಾಹಿಗಳ ಕುರಿತ ಜ್ಞಾನವನ್ನು ಮನುಕುಲದ ಇತಿಹಾಸ ಸಂಶೋಧನೆಗೆ ಬಳಸುವ ಪ್ರಕ್ರಿಯೆ ಎರಡು ದಶಕಗಳಿಂದ ಈಚೆಗೆ ಶುರುವಾದದ್ದು. ಓದು ಬಳಗ ತನ್ನ ಮುನ್ನುಡಿಯಲ್ಲಿ ಹೇಳಿದಂತೆ,                “2001ರಲ್ಲಿ ವಿಜ್ಞಾನಿಗಳು ಮಾನವ ಜಿನೋಂ ಯೋಜನೆಯ ಮೂಲಕ ಅಧ್ಯಯನ ನಡೆಸಲು ತೊಡಗಿ ನಂತರದ ಎರಡು ದಶಕಗಳಲ್ಲಿ ಅಗಾಧ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕಳೆದ 7-8 ವರ್ಷಗಳಲ್ಲಿ  ಪ್ರಪಂಚದ ಬಹುತೇಕ ಎಲ್ಲಾ ಜನಾಂಗೀಯ ಹಾಗೂ ಪ್ರಾದೇಶಿಕ ಭಿನ್ನತೆಗಳ ಜನರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ  ಒಳಪಡಿಸಿದ್ದಾರೆ. ಸದ್ಯದ ಮಟ್ಟಿಗೆ ಇಡೀ ಜಗತ್ತಿನಲ್ಲಿ ಮನುಷ್ಯನ ಚರಿತ್ರೆಯಲ್ಲಿ ನಡೆದಿರುವ ಎಲ್ಲಾ ವಲಸೆಗಳ ಇತಿಹಾಸವನ್ನು, ವಲಸೆಗಳ ಸ್ವರೂಪಗಳನ್ನು, ಜನಾಂಗೀಯ ಸಂಬಂಧಗಳನ್ನು ಸ್ಪಷ್ಟ ರೂಪದಲ್ಲಿ ಮುಂದಿಡಲು ಡಿಎನ್ಎ ಯಶಸ್ವಿಯಾಗಿದೆ ಎನ್ನಬಹುದು.” ನಾನು ಯಾರು? – ಈ ಪ್ರಶ್ನೆ ಅಧ್ಯಾತ್ಮಿಕವಾಗಿಯೂ, ಸಾಮಾಜಿಕವಾಗಿಯೂ ಸತತವಾಗಿ ಕಾಡುವಂಥದ್ದು. ಇದುವರೆಗೂ ಮನುಷ್ಯನಿಗೆ ತನ್ನ ಚರಿತ್ರೆಯ ಕುರಿತು ಇರುವ ನಂಬಿಕೆಯನ್ನು, ಅಹಂ ಅನ್ನು ಈ ಸಂಶೋಧನೆ ಬುಡಮೇಲು ಮಾಡಬಲ್ಲದು. ಜೊತೆಗೆ ವೈಜ್ಞಾನಿಕ ಆಧಾರವನ್ನೂ ಅದು ಒದಗಿಸುವುದರಿಂದ ಮಾಹಿತಿಗೆ ಅಧಿಕೃತತೆಯೂ ಬರುವುದು. ಮನುಷ್ಯನ ಚರಿತ್ರೆಯ ಸತ್ಯದ ಬಗ್ಗೆ ಕರಾರುವಾಕ್ಕಾದ ತಿಳಿವನ್ನೂ ಸಹ ಅದು ನೀಡಬಲ್ಲದು.  ಹರಪ್ಪ, ಮೊಹೆಂಜೊದಾರೊ, ಧೊಲವೀರ, ಇತ್ತೀಚೆಗೆ ಹರಿಯಾಣಾದ ರಾಖಿಗರಿಯ ಉತ್ಖನನದಲ್ಲಿ ದೊರೆತ ಮನುಷ್ಯರ ಪಳೆಯುಳಿಕೆಗಳ ಡಿಎನ್ಎ ಸಂಶೋಧನೆ ನಮ್ಮ ದೇಶದ ಚರಿತ್ರೆಯ ಕುರಿತೂ ಹೊಸ ಹೊಳಹುಗಳನ್ನು ನೀಡಬಲ್ಲದು.  ಕೃತಿಯ ಮೊದಲ ಲೇಖನ — ರಾಖಿಗರಿ ಪಳೆಯುಳಿಕೆಯ ಡಿಎನ್ಎ ನುಡಿದ ಸತ್ಯವೇನು? ಈ ಶೀರ್ಷಿಕೆಯಲ್ಲೇ ಕುತೂಹಲವಿದೆ. ಹರಪ್ಪ-ಮೊಹೆಂಜೊದಾರೋ ಉತ್ಖನನದಲ್ಲಿ ದೊರೆತ ಪಳೆಯುಳಿಕೆಗಳು ಭಾರತ ಉಪಖಂಡದ ಪ್ರಾಚೀನ ನಾಗರಿಕತೆಗೆ ತಳುಕು ಹಾಕಿಕೊಂಡಿದ್ದು ತಿಳಿದಿದೆ. ಆದರೆ ಇಲ್ಲಿಯ ನಿವಾಸಿಗಳ ಕುರಿತು ಎದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ರಾಖಿಗರಿಯಲ್ಲಿ ಸಿಕ್ಕಿರುವ 4500ವರ್ಷಗಳ ಹಿಂದಿನ ಅಸ್ಥಿಪಂಜರ ಈ ಜನ ಯಾರು ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಬಲ್ಲುದಾಗಿದೆ.  ಈ ಸಂಶೋಧನೆಗಳಲ್ಲಿ ಸಿಂಧೂ ನಾಗರಿಕತೆಯ ಜನ ವಿಕಾಸಗೊಂಡಿರುವುದು ಇರಾನಿನ ಬೇಸಾಯಗಾರರು ಮತ್ತು ಪ್ರಾಚೀನ ಆದಿಯ ದಕ್ಷಿಣ ಭಾರತೀಯರ ಕೂಡುವಿಕೆಯಿಂದ , ಆದಿಯ ಉತ್ತರ ಭಾರತೀಯ ಜನವರ್ಗದ ವಿಕಾಸ, ಆದಿಯ ಉತ್ತರ ಭಾರತೀಯ ಹಾಗೂ ಆದಿಯ ದಕ್ಷಿಣ ಭಾರತೀಯರ ಸಮ್ಮಿಶ್ರಣದ ಫಲವಾಗಿ ಬಹುತೇಕ ಜನವರ್ಗಗಳ ವಿಕಸನ ಮೊದಲಾದ ಅತ್ಯಂತ ರೋಚಕ ವಿಷಯಗಳನ್ನು ಹೇಳುತ್ತ ಇದುವರೆಗೆ ಪ್ರಚಲಿತದಲ್ಲಿದ್ದ ಆರ್ಯ ಸಂಸ್ಕೃತಿಯ ಮೂಲ  ಭಾರತ ಎಂಬ ವಾದವನ್ನೂ ಅಲ್ಲಗಳೆಯುತ್ತದೆ. ರಾಖಿಗರಿ ಸಂಶೋಧನೆ, ಹರಪ್ಪ/ಸಿಂಧೂ ನಾಗರಿಕತೆಯ ಜನರು ಮತ್ತು ಇಂದು ಪಶ್ಚಿಮ ಘಟ್ಟಗಳ ದಕ್ಷಿಣ ತಮಿಳು ನಾಡಿನ ನೀಲಗಿರಿ ಅರಣ್ಯ ಬೆಟ್ಟದಲ್ಲಿ ನೆಲೆಸಿರುವ ಆದಿವಾಸಿ ಇರುಳರು ಮೂಲತಃ ಒಂದೇ ವಂಶದವರು ಎಂದು ಹೇಳುತ್ತದೆ. ಆಧುನಿಕ ಭಾರತೀಯ ಒಂದು ಮಿಶ್ರಣ ತಳಿಯಾಗಿದ್ದು ಅದರಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇರುವುದು ಹರಪ್ಪ ನಾಗರಿಕತೆಯ ಜನರು ಅಂದರೆ ಆದಿಯ ದಕ್ಷಿಣ ಭಾರತೀಯರ ವಂಶವಾಹಿಗಳು. ಇನ್ನು ವಲಸೆ ಬಗ್ಗೆ ಇವರು ಹೇಳಿರುವುದು-ಆಧುನಿಕ ಲಕ್ಷಣಗಳಿರುವ ಮಾನವರು  ಸುಮಾರು 70000 ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಹೊರಟು ವಿಶ್ವದ ಬೇರೆ ಬೇರೆ ಭಾಗಗಳಿಗೆ ಚದುರಿ ಹೋದರು.ಅವರಲ್ಲಿ ಒಂದು ಗುಂಪು ಸುಮಾರು 50000 ವರ್ಷಗಳ ಹಿಂದೆ ಭಾರತಕ್ಕೆ ಬಂದಿಳಿದಿದೆ.  ಡಿಎನ್ಎ ಅಧ್ಯಯನಗಳೂ ಇದನ್ನು ದೃಢಪಡಿಸಿವೆ.ಮತ್ತೊಂದು ದೊಡ್ಡ ವಲಸೆ 10000 ವರ್ಷಗಳ ಹಿಂದೆ ಪಶ್ಚಿಮ ಏಷಿಯಾದಿಂದ ಕೆಲವು ಗುಂಪು ಯುರೋಪ್ ಕಡೆಗೂ ಕೆಲವು ಇರಾನ್ ಮೂಲಕ ಭಾರತ ಹಾಗೂ ಇತರ ಭಾಗಗಳಲ್ಲೂ ನೆಲೆಸಿದವು. ಇಂಥ ಹಲವಾರು ಆಸಕ್ತಿದಾಯಕ ವಿಷಯಗಳು ಇಲ್ಲಿವೆ.  ಕೆಲವು ನಿಂದನೆಗಳಿವೆ. ಇಂಥ ಪ್ರಯತ್ನಗಳು ಕೂಡ ಇತಿಹಾಸದಲ್ಲಿ ತಮ್ಮ ಮೇಲ್ಲ್ಮೆಯನ್ನು ಸ್ಥಾಪಿಸಿಕೊಳ್ಳುವ ಭಾಗವೇ ಆಗಿರುವುದರಿಂದ ಅವುಗಳನ್ನು ಬಿಟ್ಟು ಮನುಕುಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಂಶೋಧನೆಗಳ ಬಗ್ಗೆ ಕೇಂದ್ರೀಕರಿಸಿ ಓದುವುದು ಒಳ್ಳೆಯದು. ಎರಡನೇಯ ಲೇಖನ ಲಕ್ಷ್ಮೀಪತಿಯವರದು. ಶೀರ್ಷಿಕೆ–ಸಂಸ್ಕ್ರತಿ  ಇತಿಹಾಸದ ಮಹಾಮರೆವು      ( ರಾಖಿಗರಿ ಡಿಎನ್ಎ ಫಲಿತಾಂಶದ ಜಾಡಿನಲ್ಲಿ).  ಕೆಲ ವರ್ಷಗಳ ಹಿಂದೆ ಇಂಥ ಒಂದು ಮಾಹಿತಿ ಸಂಗ್ರಹಣೆಯನ್ನು ಕಳೆದ 20 ವರ್ಷಗಳಿಂದ  ಮಾಡುತ್ತಿದ್ದೇನೆ ಎಂದು ಅವರು ನನಗೆ ಹೇಳಿದ್ದರು. ಅದರ ಬಗ್ಗೆ 3 ಚಿಂತನಗಳನ್ನು ಅವರ ಹತ್ತಿರ ಬೆಂಗಳೂರು ಆಕಾಶವಾಣಿಗೆ ಆಗ ಮಾಡಿಸಿದ್ದೆ.  8 ವರ್ಷಗಳ ಹಿಂದೆ ನಾನು ಧೊಲವಿರಾಕ್ಕೆ ಹೋದಾಗ ಅಲ್ಲಿಯ ಗೈಡುಗಳು ಬಹಳ ಅಲವತ್ತುಕೊಂಡು ಒಂದು ಮಾತು ಹೇಳಿದ್ದರು. ಒಬ್ಬ ಇತಿಹಾಸಜ್ಞ ಆ ಸ್ಥಳದ ಬಗ್ಗೆ ಸಾಕಷ್ಟು ಹೊಸ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಸರ್ಕಾರಕ್ಕೆ ಅದನ್ನು  ಸಲ್ಲಿಸುತ್ತಿಲ್ಲ ಎಂದು. ಆಗ ನನಗೇಕೊ ಅನುಮಾನವಾಗಿತ್ತು. ಈಗ ರಾಖಿಗರಿಯ ಸಂಶೋಧನೆಗಳು ಬಂದ ಮೇಲೆ ಅದಕ್ಕೆ ತಾಳೆಯಾಗುತ್ತಿದೆ. ಇಂದು ಭಾರತವೊಂದೇ ಅಲ್ಲ. ಇಡೀ ಜಗತ್ತೇ ಕಕೇಷಿಯನ್ ಜನಾಂಗವಾದಿಗಳ ವಸಾಹತಾಗಿ ಮಾರ್ಪಟ್ಟಿದೆ ಎಂಬ ಅಚ್ಚರಿ ಹುಟ್ಟಿಸುವ ಮಾಹಿತಿಯೊಂದಿಗೆ ಲೇಖನ ಆರಂಭವಾಗುತ್ತದೆ. ಯುರೇಷಿಯಾದ ದಕ್ಷಿಣಕ್ಕಿರುವ ಕಾಕಸಸ್ ಪರ್ವತಾವಳಿಗಳಲ್ಲಿ ವಾಸಿಸುತ್ತಿದ್ದ ಜನರು ಕಕೇಷಿಯನ್ನರು. ಇದರ ಬಗ್ಗೆ ಆಗಿರುವ ನಿಖರ ಸಂಶೋಧನೆಗಳ ಮಾಹಿತಿಯನ್ನು ಇಲ್ಲಿ ಅವರು ಕೊಡುತ್ತಾರೆ. ಮಾನವ ಕುಲದ ಪೂರ್ವಿಕ ಪಿತೃವಿನ ಬಗೆಗಿನ ಜಿಜ್ಞಾಸೆ ಹೊಸ ಹೊಸ ಸಿದ್ಧಾಂತಗಳನ್ನು ರೂಪಿಸಿದೆ. ಆಫ್ರಿಕಾದ ಮೂಲವನ್ನು ಒಪ್ಪಿಕೊಳ್ಳಲಾಗದೆ ಪ್ರತಿಷ್ಠಿತ ಯುರೋಪ್ ತನ್ನದೇ ಸಿದ್ಧಾಂತಗಳನ್ನು ರೂಪಿಸಿಕೊಂಡಿದೆ. ‘ಆರ್ಯ ‘ ಮೂಲದ ಬಗೆಗಿನ ಚರ್ಚೆಗಳನ್ನು ಇಲ್ಲಿ ನೆನಪಿಸಿಕೊಳ್ಳುತ್ತ ಹಿಟ್ಲರ್ ಕೂಡ ‘ತಾನು ಆರ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ‘ಎಂಬ ಮಾತೂ ಇಲ್ಲಿ ಸ್ಮರಣೀಯ. ಬಹುತೇಕ ಅನುವಂಶಿಕ ವಿಜ್ಞಾನಿಗಳು ತಾಯಿಯಿಂದ ಮಕ್ಕಳಿಗೆ ಹರಿದು ಬರುವ X ವರ್ಣತಂತುವಿನ ಮೂಲಕ ವಿಶ್ಲೇಷಣೆಗಳನ್ನು ನಡೆಸಿ ಮಾನವನ ಪೂರ್ವಿಕ ಪಿತೃಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಿ ವಿಫಲರಾಗಿದ್ದರು.ಆದರೆ ಲಂಡನ್ ಮೂಲದ ವಂಶವಾಹಿ ವಿಜ್ಞಾನಿ ಡಾ. ಸ್ಪೆನ್ಸರ್ ವೆಲ್ಸ್ ತಂದೆಯಿಂದ ಗಂಡು ಮಕ್ಕಳಿಗೆ ಮಾತ್ರವೇ ಹರಿದು ಬರುವ Y ವರ್ಣತಂತುವಿನ ಡಿಎನ್ಎ ವಿಶ್ಲೇಷಣೆಯನ್ನು ನಡೆಸಿದರು. ಒಟ್ಟು22 ಭಿನ್ನ ಭೌಗೋಳಿಕ ಪ್ರದೇಶಗಳ 1062 ಪುರುಷರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ 8 ದೇಶಗಳ ವಿಜ್ಞಾನಿಗಳ ತಂಡದೊಂದಿಗೆ ನಡೆಸಿದ ಅಧ್ಯಯನದ ನಂತರ ಅವರು ನೀಡಿದ ವಿವರ ಅತ್ಯಂತ ಕುತೂಹಲಕಾರಿಯಾದದ್ದು. ನಮೀಬಿಯಾದ ಸ್ಯಾನ್ ಬುಷ್ ಬುಡಕಟ್ಟಿನ Y ವರ್ಣತಂತುವಿನಲ್ಲಿ ದೊರೆತ ಗುರುತು 6000೦ ವರ್ಷಗಳಿಗೂ ಹಿಂದಿನದ್ದು. ಇದೇ ಗುರುತು ಭಾರತದ ಸೌರಾಷ್ಟ್ರ, ಮಧುರೈ, ಮಲೇಷಿಯಾ, ನ್ಯೂಗಿನಿ ಹಾಗೂ ಆಸ್ಟ್ರೇಲಿಯಾ ಮೂಲದ ನಿವಾಸಿಗಳಲ್ಲೂ ಕಂಡು ಬಂದಿದ್ದರಿಂದ ಆಧುನಿಕ ಮಾನವನ ಪೂರ್ವಿಕರ ಮೊದಲ ವಲಸೆಯ ಮಾರ್ಗ ಆಫ್ರಿಕಾದಿಂದ ಭಾರತದ ಕರಾವಳಿ ಮಾರ್ಗವನ್ನೊಳಗೊಂಡಂತೆ ಇಂಡೋನೆಷಿಯಾ, ಮಲೇಷಿಯಾ, ಆಸ್ಟ್ರೇಲಿಯಾದ ವರೆಗೂ ಗುರುತಿಸಲಾಯಿತು. ಈ ಪ್ರಯಾಣದ  ಅವಧಿ 300೦ ವರ್ಷಗಳು ಎಂದು ಅವರು ಅಂದಾಜಿಸುತ್ತಾರೆ. ಎರಡನೆಯ ವಲಸೆಯಲ್ಲಿ 4500೦ ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಟ ತಂಡ ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ಚೀನಾ, ಯುರೋಪ್ ಹಾಗೂ ದಕ್ಷಿಣ ಏಷ್ಯಾಗಳಲ್ಲಿ ಸಂತತಿ ಹಬ್ಬಿಸಿತು. ಹೀಗೆ ಮೆಡಿಟರೇನಿಯನ್ ಭಾಗದಿಂದ ಭಾರತದ ವಾಯುವ್ಯವನ್ನು ತಲುಪಿದವರೇ ಭಾರತದ ಇಂದಿನ ದ್ರಾವಿಡ ಭಾಷಿಕರು. ಹಾಗೆ ಯುರೇಷಿಯಾದಲ್ಲಿ ನೆಲೆಸಿದವರೇ ಕಕೇಷಿಯನ್ನರು!  ವೆಲ್ಸ್  ನಿಷ್ಕರ್ಷಿಸಿದ ಸಮಯಕ್ಕಿಂತ ಹಿಂದೆಯೇ ಮಾನವ ವಂಶಾವಳಿಗಳು ಚೀನಾ ಹಾಗೂ ಯುರೋಪಿನಲ್ಲಿ ಇದ್ದವು. ಆದರೆ ನೈಸರ್ಗಿಕ ವಿಕೋಪಕ್ಕೆ, ಇನ್ನಿತರ ಕಾರಣಗಳಿಗೆ  ತುತ್ತಾಗಿ  ಅವರೆಲ್ಲ  ನಾಮಾವಶೇಷವಾಗಿರಬೇಕು.  ವೆಲ್ಸ್ ಅವರ ಪ್ರಕಾರ ಇವತ್ತು ಭೂಮಿಯ ಮೇಲಿರುವ ಸಂತತಿಯಲ್ಲಿ ಇನ್ನೂರು ಜನರಲ್ಲಿ ಒಬ್ಬ ನಿಸ್ಸಂಶಯವಾಗಿ ಚೆಂಗೀಸ್ ಖಾನ್ ವಂಶದವನು! ಇಂಥ ಅನೇಕ ಕೌತುಕದ ವಿಷಯಗಳು ಈ ಲೇಖನದಲ್ಲಿವೆ. ಲಕ್ಷ್ಮೀಪತಿಯವರು ರಾಖಿಗರಿಯ ಬಗ್ಗೆ, ಅಲ್ಲಿಯ ಸಂಶೋಧನೆಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡುತ್ತಾರೆ.  ಇಡೀ ಜಗತ್ತಿನ ಇಂದಿನ ಜನಸಮುದಾಯಗಳು ವಲಸೆ, ಪಲ್ಲಟಗಳ ಕಾರಣದಿಂದ ಹಲವಾರು ಧಾರೆಗಳ ಮಿಶ್ರಣ ಹೊಂದಿರುವುದರ ಬಗ್ಗೆಯೂ ಅಧ್ಯಯನಗಳು ದೃಢಪಡಿಸಿವೆ. ವೈಜ್ಞಾನಿಕ ತಿಳಿವಿನ ಆಧಾರದ ಮೇಲೆ ಆದಿಪೂರ್ವಿಕ ದಕ್ಷಿಣ ಭಾರತೀಯರು, ಪೂರ್ವಿಕ ದಕ್ಷಿಣ ಭಾರತೀಯರು, ಪೂರ್ವಿಕ ಉತ್ತರ ಭಾರತೀಯರು ಎಂಬ ವಿಂಗಡಣನೆಯನ್ನು ವಿದ್ವಾಂಸರು ಗುರುತಿಸಿಟ್ಟಿದ್ದಾರೆ. ಲೈಂಗಿಕ ಪಕ್ಷಪಾತದಿಂದ ಆದ ಉತ್ಪರಿವರ್ತನೆಗಳನ್ನೂ ಗುರುತಿಸಿದ್ದಾರೆ.  ಲಕ್ಷ್ಮೀಪತಿಯವರು ವೇದಕಾಲವನ್ನೂ ತರ್ಕಿಸಿದ್ದಾರೆ. ಯುರೇಷಿಯಾದ ಯುದ್ಧೋನ್ಮಾದಿಗಳು ಭಾರತಕ್ಕೆ ಬಂದು ಇಲ್ಲಿನ ಉಪ್ಪನ್ನೇ ಉಂಡು …ಛೇ! ಈ ನೆಲದ ಇತಿಹಾಸ ಏಕೆ ವಕ್ರಗತಿ  ಹಿಡಿಯಿತೋ ಎಂದು ಬೇಸರಿಸಿದ್ದಾರೆ. ಕಾಲಕಾಲಕ್ಕೆ ಜರುಗಿದ ಸಾಂಸ್ಕ್ರತಿಕ ರಾಜಕಾರಣದ ಬಗ್ಗೆಯೂ ದೀರ್ಘವಾಗಿ ಹೇಳಿದ್ದಾರೆ. ನಾನು ಕಾಕತಾಳೀಯವೆಂಬಂತೆ  ಈ ಪುಸ್ತಕ, ರವಿ ಹಂಜ್ ಅವರ ಹ್ಯೂಎನ್ ತ್ಸಾಂಗನ ಮಹಾಪಯಣ, ನೇಮಿಚಂದ್ರರ ಯಾದ್ ವಶೇಮ್ ಇವುಗಳನ್ನು ಒಂದರ ಹಿಂದೆ ಒಂದು ಓದಿದೆ. ಮೂರರಲ್ಲೂ ಅದೆಷ್ಟು ಒಂದೇ ಬಗೆಯ ಹೊಳಹುಗಳು ಕಂಡವು ನನಗೆ. ವಸುಧೈವ ಕುಟುಂಬಕಂ- ಎಂಬ ಮಾತಿದೆಯಲ್ಲ. ಇಂಥ ಸಂಶೋಧನೆಗಳು ಹೆಚ್ಚು ನಡೆದು, ಜಗವೆಲ್ಲ ಒಂದೇ ಎಂಬ ಸಿದ್ಧಾಂತ ನಮ್ಮ ಕಾಲದಲ್ಲಿ ಸಿದ್ಧವಾಗದಿದ್ದರೂ ಆ ದಿಸೆಯ ಆಲೋಚನೆ ಆರಂಭವಾಗಿ ಜಗತ್ತಿನಲ್ಲಿ ಜಾತಿ, ಮಾತು, ಪಂಥ, ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಯುದ್ಧಗಳು ಕಡಿಮೆಯಾಗಲಿ. ಲಕ್ಷ್ಮೀಪತಿಯಾವರ  ಸತತ ಅಧ್ಯಯನ, ಸುವಿಸ್ತಾರ ಓದಿಗೆ ಶರಣು. ಇತಿಹಾಸ ಎಂದರೆ ಮೂಗು ಮುರಿಯುವವರು ತಿಳಿಯಲೇಬೇಕಾದ ಸತ್ಯವೆಂದರೆ ಅದನ್ನು ಓದದಿದ್ದರೆ ‘ ನಾನು ಯಾರು?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಈ ಜಗತ್ತು ಒಂದು ದಿನ ಕೊನೆಯಾಗುತ್ತದೆ ಎಂಬುದು. ಈ ಹಿನ್ನೆಲೆಯಲ್ಲಿ  ಎಲ್ಲರೂ ಓದಲೇಬೇಕಾದ ಪುಸ್ತಕ ಇದು. ( ಪ್ರಕಾಶಕರು- Harshakumar KSKugwe Post, Sagar Taluk, Shimoga District- 577401Rs 50.ಪುಸ್ತಕಗಳಿಗಾಗಿ – 7353712715, 9844252648)***** ****************************************

ಪ್ರಸ್ತುತ Read Post »

ಕಾವ್ಯಯಾನ

ಚೇತನಾ ಕುಂಬ್ಳೆ ಕಾವ್ಯಗುಚ್ಚ

ಚೇತನಾ ಕುಂಬ್ಳೆ ಕಾವ್ಯಗುಚ್ಚ ನಿರೀಕ್ಷೆ ನಿನ್ನ ಕೈಹಿಡಿದು ನಡೆದ ದಾರಿಯಲ್ಲಿಹೆಜ್ಜೆಗುರುತುಗಳು ಇನ್ನೂ ಮಾಸಿಲ್ಲನಿನ್ನ ಹೆಸರ ನೆಪದಲ್ಲಿ ಅಂಗೈಯಲ್ಲಿ ಹಚ್ಚಿದಮದರಂಗಿಯ ಬಣ್ಣ ಇನ್ನೂ ಅಳಿಸಿಲ್ಲ ಸಮಯವನ್ನು ದೂಷಿಸುತ್ತಾದಿನ ರಾತ್ರಿಯೆನ್ನದೆಕಾದಿದ್ದೆ ಕಾತರಿಸಿದ್ದೆಬಯಸಿದ್ದೆ ನಿನ್ನ ಸೇರಲು ಕಣ್ಗಳಿಂದುದುರಿದ ಹನಿಗಳುಮಣ್ಣಿನಲ್ಲಿ ನರಳುತ್ತಿದೆತನು ಮನ ತಣ್ಣಗಾಗಿದೆನಿನ್ನ ಬಿಸಿಯುಸಿರ ಬಿಸುಪಿಲ್ಲದೆ ಅದೆಷ್ಟು ಚುಚ್ಚು ಮಾತುಗಳನ್ನಾಲಿಸಿದ್ದೆಎಷ್ಟೊಂದು ಕೆಂಗಣ್ಣುಗಳಿಗೆ ಗುರಿಯಾಗಿದ್ದೆಎದೆ ಸೀಳುವಂತ ನೋವಿದ್ದರೂಬಲವಂತದಿ ತುಟಿಗಳಲ್ಲಿನಗುವ ತರಿಸಿದ್ದು ನಿನಗಾಗಿಯೇ ಜೊತೆಗಿದ್ದ ಒಂದಷ್ಟು ಕ್ಷಣಗಳುನೋವನ್ನು ಮರೆಸುತ್ತವೆನಿನ್ನ ನೆನೆಯುವಾಗಲೆಲ್ಲನೀನಿತ್ತ ನೆನಪುಗಳು ಸಂತೈಸುತ್ತವೆ ಈಗಲೂ ಕಣ್ಣ ನೋಟಗಳುಬಾಗಿಲಿನತ್ತ ಸರಿಯುವುದು ನಿಲ್ಲಲಿಲ್ಲನಿನ್ನಲ್ಲಿಟ್ಟ ನಂಬಿಕೆಗಳುಇನ್ನೂ ಸುಳ್ಳಾಗಲಿಲ್ಲ ಕಾರಣ ನೀನು ಎದೆಯಲ್ಲಿಹಚ್ಚಿದ ಪ್ರೀತಿಯ ದೀಪನಿತ್ಯವೂ ಉರಿಯುತಿದೆಅದರ ಬೆಳಕಿನಲ್ಲೆನಾನು ಉಸಿರಾಡುತ್ತಿರುವೆ ಕವಿತೆ ಬರೆಯುತ್ತೇನೆ ನೋವು ಎದೆಯನ್ನಿರಿಯುವಾಗಸಹಿಸಲಾಗದೆ ಕಣ್ಣೀರು ಹರಿಸುತ್ತೇನೆಪ್ರೀತಿಸುವ ಕೈಗಳು ಒರೆಸಲಿಯೆಂದಲ್ಲಮನಸ್ಸು ಒಂದಿಷ್ಟು ಹಗುರಾಗಲಿಯೆಂದು ಇರುಳ ನಿಶ್ಯಬ್ದತೆಯಲ್ಲಿಕನಸುಗಳನ್ನು ಹೆಣೆಯುತ್ತೇನೆಎಲ್ಲವೂ ನನಸಾಗಲಿಯೆಂದಲ್ಲವಾಸ್ತವವನ್ನು ಕ್ಷಣಹೊತ್ತು ಮರೆಯಲೆಂದು ಮುಸ್ಸಂಜೆ ಮರಳಲ್ಲಿಕುಳಿತುಕೊಳ್ಳುತ್ತೇನೆಅಲೆಗಳ ನರ್ತನವನ್ನು ನೋಡಲು ಮಾತ್ರವಲ್ಲಪ್ರಕೃತಿಯಲ್ಲಿ ಮಿಂಚಿಮರೆಯುವವಿಸ್ಮಯಗಳನ್ನು ಕಣ್ತುಂಬಿಕೊಳ್ಳಲೆಂದು ಮರೆಯಲಾಗದ ಕ್ಷಣಗಳನ್ನುನೆನಪಿನ ಜೋಳಿಗೆಯಲ್ಲಿ ತುಂಬಿಕೊಳ್ಳುತ್ತೇನೆಧೂಳು ಹಿಡಿದು ಮಾಸಲೆಂದಲ್ಲನೆನಪಾದಾಗ ನೆನೆಯಲೆಂದು ಆಗಾಗ ಮೌನಕ್ಕೆ ಶರಣಾಗುತ್ತೇನೆಮಾತು ಬೇಸರವಾಗಿಯಲ್ಲಮೌನದೊಳಗವಿತಿರುವಮಾತುಗಳನಾಲಿಸಲೆಂದು ನಾನು ಕವಿತೆ ಬರೆಯುತ್ತೇನೆಓದುಗರು ಓದಲೆಂದಲ್ಲಭಾವನೆಗಳಿಗೆ ಉಸಿರುಗಟ್ಟುವ ಮೊದಲುಅಕ್ಷರ ರೂಪಕ್ಕಿಳಿಸಿ ಜೀವ ತುಂಬಲೆಂದು ಕರೆಯದೆ ಬರುವ ಅತಿಥಿ ಕರೆಯದೆ ಬರುವ ಅತಿಥಿ ನೀನುಕರೆದರೂ ಕಿವಿ ಕೇಳಿಸದವನುಯಾರೂ ಇಷ್ಟ ಪಡದ ಅತಿಥಿ ನೀನು ಎಲ್ಲಿ, ಯಾವಾಗ, ಹೇಗೆ, ಯಾಕೆಯಾವ ನಿಮಿಷದಲ್ಲಿ ಯಾವ ರೂಪದಲ್ಲಿನೀನು ಬರುವೆಯೆಂದು ಗೊತ್ತಿಲ್ಲ ನನಗೆಮನ್ಸೂಚನೆ ನೀಡದೆ ಬರುವೆ ನೀನುಎಲ್ಲಿಂದ ಬರುವೆಯೋಎಲ್ಲಿಗೆ ಕರೆದೊಯ್ಯುವೆಯೋಒಂದೂ ತಿಳಿದಿಲ್ಲ ಒಡೆದು ನುಚ್ಚುನೂರು ಮಾಡುವೆಸಣ್ಣಪುಟ್ಟ ಸಂತೋಷಗಳನ್ನುಮನದ ತುಂಬ ವೇದನೆ ನೀಡಿಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ ಹಿರಿಯರೆಂದೋ, ಕಿರಿಯರೆಂದೋಶ್ರೀಮಂತರೆಂದೋ, ಬಡವರೆಂದೋನೋಡದೆ ಓಡಿ ಬರುವೆಎಲ್ಲರ ಬಳಿಗೆ ಕಾಲಕಾಲಕೆಕಾರಣ,ನಿನ್ನ ಕಣ್ಣಿಗೆ ಸಮಾನರಲ್ಲವೇ ಎಲ್ಲರೂ ಕಣ್ಣೀರು ಕಂಡರೂ,ಕರಗದ ಹೃದಯ ನಿನ್ನದುನೋವನ್ನು ಅರಿತರೂ,ಮಿಡಿಯದ ಮನಸ್ಸು ನಿನ್ನದುಓ ಅತಿಥಿಯೇ….ಯಾಕಿಷ್ಟು ಕ್ರೂರಿಯಾದೆ ನೀನು? ***********************************************************

ಚೇತನಾ ಕುಂಬ್ಳೆ ಕಾವ್ಯಗುಚ್ಚ Read Post »

ಕಾವ್ಯಯಾನ

ನೀನೆಂದರೆ ಆಕಾಶದಾಚೆಯ ಖುಷಿ

ನೀನೆಂದರೆ ಆಕಾಶದಾಚೆಯ ಖುಷಿ ಪ್ರೇಮಾ ಟ.ಎಂ.ಆರ್. ನೀ ಮಡಿಲಲ್ಲಿ ಮಲಗಿದ್ದೆನಿನ್ನ ಮೆತ್ತಗೆ ಸವರಿದೆ ನಾನುಆಕಾಶ ಮುಟ್ಟಿದ ಖುಶಿಯೇಉಹುಂ ಅದು ಕಡಿಮೆಯೇ ಹೋಲಿಕೆಗೆಮುಗಿಲ ಚುಕ್ಕಿನೀನು ಬೊಗಸೆಯೊಳಗಿದ್ದೆನಿನ್ನ ಕಣ್ಣೊಳಗೆ ಬರೀ ನಾನಿದ್ದೆನಿನ್ನ ಕೆಂಪು ಬೆರಳುಗಳ ಪುಟ್ಟ ಬಿಗಿಮುಷ್ಠಿಯೊಳಗೆ ನಾನು ಹುದುಗಿ ಕೂರಬೇಕೆಂದುಕೊಂಡೆ ನಿನಗೆ ಎದೆಯೂಡುತ್ತಿದ್ದೆ ನಾನುಜಗದಾವ ನೋವುಗಳೂ ನಿನ್ನಮುಟ್ಟಕೂಡದೆಂಬ ಕಕ್ಕುಲಾತಿಯಲ್ಲಿನಿನಗೆ ಹಾಲನ್ನದ ತುತ್ತು ಇಕ್ಕುತ್ತಿದ್ದೆಚಂದ್ರ ಚಂದ ನಗೆ ನಗುತ್ತಿದ್ದನಿನಗೆ ಜುಟ್ಟು ಕಟ್ಟುತ್ತಿದ್ದೆ ನಾನುಇನ್ನೊಂದು ಹಡೆವ ಬಯಕೆನನ್ನ ಕಾಡದಿರಲೆಂದುನಿನಗೆಂದೇ ಇರುವ ವಾತ್ಸಲ್ಯಹಂಚಿ ಹೋಗದಿರಲೆಂದು ಅಂದು ನೀ ಕಿತ್ತಾಡಿದ ಪಾತ್ರೆ ಸ್ಟೆಂಡ್ ಚಪ್ಪಲಿಗೂಡು ಅಪ್ಪನ ಬರೆವ ಮೇಜುಲಾಂಡ್ರಿ ಬಕೀಟು ಒಡೆದ ಕಿಟಕಿಯ ಗಾಜುಎತ್ತೊಗೆಯುತ್ತಿದ್ದ ಪುಟ್ಟ ಸೈಕಲ್ಲುಎದೆಯಲ್ಲೆಲ್ಲೋ ಹೇಗಿದ್ದವೋ ಹಾಗೇ ಇದೆ ಒಪ್ಪವಾಗದೇ..ನಿನ್ನ ಕಣ್ಣೀರು ಸಿಂಬಳ ಒರೆಸಿದ ನನ್ನ ಹಳೆಸೀರೆಗಳ ಇಂದಿಗೂಮಡಿಕೆಮಾಡಿ ದಿಂಬಿನಮೇಲೆ ಹಾಸಿಕೊಳ್ಳುತ್ತೇನೆ ಬಿಸಾಡಲಾಗದೇ… ಅಜ್ಜನ ಅಷ್ಟುದ್ದದ ಚಪ್ಪಲಯಲ್ಲಿ ನಿನ್ನಇಟ್ಟೆಇಟ್ಟಿರುವ ಪಾದ ತೂರಿಕೊಂಡುನಡೆಯುವದೆಂದರೆ ನಿನಗೆಷ್ಟು ಮೋಹವೋ ನಾನು ನೀನು ಅಪ್ಪಪುಟ್ಟ ಬಾಡಿಗೆ ಸೂರಿನೊಳಗೆಗೋಡೆ ನೆಲ ಕಿಟಕಿಗಳನ್ನೂಮುಟ್ಟಿ ತಡವಿ ಹಚ್ಚಿಕೊಳ್ಳುತ್ತಹರಟೆಕೊಚ್ಚುತ್ತ…ನೀನು ತಿಂದುಳಿಸಿದ ಅನ್ನ ದೋಸೆ ಅಮೃತವೆಂಬಂತೆ ಬಾಚಿಕೊಳ್ಳುತ್ತನಿನ್ನ ಬಾಯಿಂದ ಜಾರಿಬಿದ್ದಚೋಕಲೇಟ್ ಚೂರುಗಳನ್ನು ಗಬಕ್ಕನೆತ್ತಿಬಾಯಿಗೆಸೆದುಕೊಳ್ಳುತ್ತದೂರದರ್ಶನದ ಜಂಗಲ್ ಬುಕ್ ನೋಡಿಕುಣಿದು ಕುಪ್ಪಳಿಸುತ್ತ ವಾಶಿಂಗ್ ಪೌಡರ್ನಿರ್ಮಾ ಹಾಡು ತೊದಲುತ್ತಹೀಗಿದ್ದೆವು ನಾವುಶಹರದ ಕೃತ್ರಿಮತೆಯೇ ಸೋಂಕದೇ ಇಂದಿಲ್ಲಿ ಬಂಗಲೆಯಿದೆ…ಬದುಕ ಬೆಳಕು ನೀನಲ್ಲಿಇಲ್ಲಿ ದೇಹವಿದೆ ಜೀವ ಭಾವ ನಿನ್ನಲ್ಲಿಇಂದು ನೀನೇ ಕೊಡಿಸಿದನನ್ನ ಮೊಬೈಲ್ ಗೆ ನಿನ್ನ ವಿಡಿಯೋ ಕಾಲ್ನಗುತ್ತಿರುವೆ..ನಗಿಸುತ್ತಿರುವೆಕಣ್ಣೆದುರು ನಡೆದಾಡುತ್ತಿರುವೆ…ನಿನ್ನ ಮುಟ್ಟಲೆಂದು ಕೈ ಚಾಚುತ್ತೇನೆಕಣ್ಣು ಹನಿಯುತ್ತದೆನಿನಗೆ ಕಾಣಗೊಡದೇ ಮತ್ತೆ ಕೇಳುತ್ತೇನೆ ನನ್ನ ನಿನ್ನ ಅದೇ ಗಾಂವ್ಟಿಯಲ್ಲಿ ಯಾವಾಗ ಬತ್ತೆ ಮಗಾ?ನಿನ್ನದು ಅದೇ ಉತ್ತರ ಬರುತ್ತೇನೆಕರೋನಾ ಒಂಚೂರು ಹದಕ್ಕೆ ಬರಲಿನಾ ಅಂಟಿಸಿಕೊಂಡು ತಂದುನಿನಗೆ ಬಂದು..ಅದೆಲ್ಲ ಜಂಜಾಟ ಬೇಡಮ್ಮಾನಿನಗೂ ವಯಸ್ಸಾಯ್ತು… ಕರೋನಾದ ಕುಲಕೋಟಿಗೆ ಶತಕೋಟಿಶಾಪ ಹಾಕುತ್ತಾ ದಿನ ದೂಡುತ್ತಿದ್ದೇನೆ…ನೀ ಬರುವ ದಾರಿಗೆ ದಿಟ್ಟಿಯ ನೆಟ್ಟು ******************************

ನೀನೆಂದರೆ ಆಕಾಶದಾಚೆಯ ಖುಷಿ Read Post »

You cannot copy content of this page

Scroll to Top