ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಲಹರಿ

ನೀ ಒಂದು ಸಾರಿ ನನ್ನ ಮನ್ನಿಸು

ನೀ ಒಂದು ಸಾರಿ ನನ್ನ ಮನ್ನಿಸು ಜಯಶ್ರೀ ಜೆ.ಅಬ್ಬಿಗೇರಿ ಪ್ರೀತಿ ಪ್ರೇಮದ ವಿಷಯದಲ್ಲಿ ತಿರಸ್ಕರಿಸಲ್ಪಟ್ಟರೆ ಅದೆಂಥ ಭಯಂಕರ ನೋವು ಆಗುತ್ತದೆ ಅನ್ನೋದು ಅನುಭವಿಸಿದವರಿಗೆ ಗೊತ್ತು. ಅದೊಂಥರ ಹಲ್ಲು ನೋವಿದ್ದ ಹಾಗೆ. ಎಂಥ ಹುಲಿಯಂಥ ಮನುಷ್ಯನನ್ನೂ ನರಮ್ ಮಾಡಿಬಿಡುತ್ತದೆ. ಈ ಸಾಲುಗಳು ನಿನ್ನ ಭಾವ ಪ್ರಪಂಚವನ್ನು ತಟ್ಟುತ್ತವೆ ಅಂದುಕೊಂಡಿದೀನಿ. ಇವು ಕೇವಲ ಪದಗಳಲ್ಲ. ನಿನಗಾಗಿ ಬರೆದ ಮೌನ ಮಿಲನದ ಮುದ್ದು ಮನವಿ ಪತ್ರ. ಪ್ರೀತಿಯ ಭಾವದಲ್ಲಿ ವಿರಹದ ಉರಿ ಸಣ್ಣಗೆ ಮನಸ್ಸನ್ನು ಸುಡುತ್ತಿದೆ. ಒಂದೇ ಒಂದು ಸಾರಿ ಎದೆಗವಚಿಕೊಂಡು ಸಾಲು ಸಾಲು ಮುತ್ತಿಕ್ಕಿದರೆ ಸಾಕು. ಹೃದಯದಲ್ಲಿ ನೀ ಮಾಡಿದ ಆಳವಾದ ಗಾಯ ಮಾಯ. ಹರಿಯುವ ನೀರಿನಂತೆ ಸುಡುವ ಬೆಂಕಿಯಂತೆ ಅರಳಿದ ಪ್ರೀತಿಯನ್ನು ಬಚ್ಚಿಡುವುದು ಅಸಾಧ್ಯ. ಪ್ರೀತಿಯಲ್ಲಿ ಸಾವು ಬಂದರೂ ಲೆಕ್ಕಕ್ಕಿಲ್ಲ. ಸಾವಿನ ಭಯವೂ ನನಗಿಲ್ಲ.ಭಯದ ನೆರಳಲ್ಲಿ ಬದುಕುವುದು ಒಂದು ಬದುಕೇ?  ಪ್ರೀತಿಯಿಲ್ಲದ ಜೀವನ, ಜೀವನವೂ ಅಲ್ಲ. ನೀನು ಒಲಿದಾಗ ಇಷ್ಟಿಷ್ಟೇ ಬದಲಾಗಿದ್ದೆ. ತಡೆ ಹಿಡಿದ ಮನದ ಎಲ್ಲ ಬಯಕೆಗಳನು ಮೆರವಣಿಗೆಗೆ ಸಜ್ಜುಗೊಳಿಸಿದ್ದೆ. ನಾನು ಮಾತಿನಲ್ಲಿ ಒರಟ ಎಂದು ಎಲ್ಲರಿಗೂ ಗೊತ್ತು ಆದರೆ ಹೃದಯ ಮೆತ್ತನೆಯ ಹತ್ತಿಯಂತೆ ಬಲು ಮೃದುವಾಗಿದೆ ಕಣೆ.  ಕಾವ್ಯ ಸಾಲಿನಲಿ ಧುಮ್ಮಿಕ್ಕಿ ಹರಿಯುವ ಜಲಧಾರೆಯಂತೆ. ನನ್ನ ಪ್ರೀತಿಗೆ ಮನಸೋತು ನನ್ನ ಬಲಿಷ್ಟ ತೋಳುಗಳಲ್ಲಿ ನಿನ್ನ ನೀನೇ ಬಂಧಿಸಿಕೊಂಡು ಸುಖಿಸಿದ ಪರಿಯನು ಬಣ್ಣಿಸಲು ಪದಕೋಶದ ಪದಗಳು ಸಾಲವು. ನಾನು ನೀನು ಜೊತೆ ಸೇರಿ ಓಡಾಡುತ್ತಿದ್ದಾಗ ಕ್ಷಣ ಕ್ಷಣವೂ ಲವ ಲವಿಕೆ ಪುಟಿದೇಳುತ್ತಿತ್ತು. ಎದೆ ಸೇರಿದ ಹಿತಾನುಭವ ಗುಪ್ತವಾಗಿ ಇರುಳಿನಲ್ಲಿ ಎದ್ದು ನಲಿಯುತ್ತಿತ್ತು. ಅದರಲ್ಲೇ ಮೈ ಮರೆಯುತ್ತಿದ್ದೆ.  ಈಗ ನಿನ್ನ ಮುಂದೆ ನನ್ನ ಮನದ ತೊಳಲಾಟ ಹೇಳದಿದ್ದರೆ ಉಳಿಗಾಲವಿಲ್ಲವೆಂದು ಈ ಓಲೆ ಬರೆಯುತಿರುವೆ. ಪ್ರೇಮ ನಿವೇದನೆಯ ಸಂದರ್ಭದಲ್ಲಿ ನಾನು ಒರಟಾಗಿ ನಡೆದುಕೊಂಡೆ ಎಂಬುದು ನನಗೂ ಅನ್ನಿಸಿದೆ ಗೆಳತಿ. ಅಷ್ಟೊಂದು ಆಪ್ತಳಾದ ನಿನ್ನ ಮುಂದೆ ಇನ್ನೇನು ಮುಚ್ಚು ಮರೆ ಎಂದು ಹಾಗೆ ನಡೆದುಕೊಂಡೆ ಹೊರತು, ಮತ್ತೆ ಬೇರೆ ಯಾವ ಕಾರಣಗಳೂ ಇಲ್ಲ. ಪ್ರೇಮ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿ ನಡೆದದ್ದು ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಿನ್ನನ್ನು ನನ್ನ ಜೀವದಂತೆ ಕಂಡ ನನಗೆ ಈ ರೀತಿ ಶಿಕ್ಷಿಸುವುದು ತರವೇ? ನೀನೇ ಪ್ರಶ್ನಿಸಿಕೋ ಗೆಳತಿ. ನನ್ನುಸಿರಲ್ಲಿ ಉಸಿರಾಗಿ ನೀನಿರುವಾಗ, ಉಸಿರಿನ ಕೊನೆಯವರೆಗೂ ಜೊತೆಯಲ್ಲೇ ಜೊತೆಗಿರುವೆ. ಈಗಷ್ಟೇ ಕಲೆತಿರುವ ನವಿರಾದ ಮನವನು ಒರಟಾದ ಮಾತುಗಳಿಂದ ಘಾಸಿಗೊಳಿಸಿರುವೆ. ನಿನ್ನೆದೆಯ ಮೃದು ಭಾವಗಳ ಸಂತೈಸಬೇಕು. ಹೃದಯಾಳದಿಂದ ಆರಾಧಿಸುವ ನಿನ್ನನು ನೆನೆದರೆ ಸಾಕು ಭಾವ ಕೋಶವೆಲ್ಲ ಬೆಚ್ಚಗಾಗುವುದು.  ನೀನೇ ನಿನ್ನ ಕೈಯಾರೆ ಹೆಣೆದ ಸ್ವೆಟರ್‌ನ್ನು ನನ್ನ ಜನುಮ ದಿನದಂದು ಉಡುಗೊರೆಯಾಗಿ ನೀಡಿದೆ. ಅದರ ಮೇಲಿರುವ ಕೆಂಗುಲಾಬಿ ನನ್ನನ್ನು ಮುದ್ದಿಸಲು ಕೆದಕಿ ಕರೆಯುತ್ತದೆ. ಈ ಬಿರು ಬೇಸಿಗೆಯಲ್ಲೂ ನಿನ್ನೊಲವಿನ ಉಡುಗೊರೆ ಮೈಗಂಟಿಸಿಕೊಂಡೇ ಹೊರ ಬೀಳುವೆ. ಗೆಳೆಯರೆಲ್ಲ ಕಾಲೆಳೆದರೂ ಕಿವಿಗೊಡುವುದಿಲ್ಲ. ನೀನೇ ನನ್ನನ್ನು ಗಟ್ಟಿಯಾಗಿ ತಬ್ಬಿದ ಭಾವ ನನ್ನನ್ನು  ಸಣ್ಣನೆಯ ನಶೆಗೊಳಗಾದವನಂತೆ ಆಡಿಸುತ್ತದೆ. ಅದೊಮ್ಮೆ ಇಡೀ ದಿನ ಕಾಡು ಮೇಡು ಬೆಟ್ಟ ಗುಡ್ಡ ಕೈ ಕೈ ಹಿಡಿದು ತಿರುಗಿ ಇಬ್ಬರಿಗೂ ಸುಸ್ತಾಗಿತ್ತು. ಸುಂದರ ಹೂದೋಟದ ಪುಟ್ಟ ಗುಡಿಲಿನ ಮುಂದೆ ಸಂಜೆ ಬಾನಿನ ರಂಗಿಗೆ ಮೈ ಮರೆತಿದ್ದೆ. ಹೃದಯದಲ್ಲಿ ಅವಿತಿದ್ದ ಪ್ರೇಮವು ಕಾರ್ಮೋಡಗಳ ನಡುವೆ ಝಗ್ಗನೇ ಬೆಳಗುವ ಮಿಂಚಂತೆ ನಿನ್ನ ಕಂಗಳಲ್ಲಿ ಮಿಂಚಿದ್ದನ್ನು ಕಂಡೆ. ಜಗದ ಪ್ರೇಮವನ್ನೆಲ್ಲ ನಿನ್ನ ಹೃದಯಕ್ಕಿಳಿಸಿಹರೇನೋ ಎನ್ನುವಂತೆ ಮುಖಭಾವ. ಅಲ್ಲಿರುವ ಕಲ್ಲು ಬಂಡೆಯ ಮೇಲೆ ಸುಖಾಸೀನನಾದೆ.  ನನ್ನ ಬೆರಳುಗಳನು ನವಿರಾಗಿ ಸವರಿದೆ. ಮೊದಲ ಸಲ ಇಂಥ ಒಲವ ಪರಿ ಕಂಡು ಅಚ್ಚರಿಗೊಂಡೆ. ಒಲುಮೆಯಿಂದ ನನ್ನ ಬೆನ್ನಿಗೆ ನಿನ್ನ ಎದೆಯನು ತಾಗಿಸಿದೆ. ಮೈ ನರ ನಾಡಿಗಳೆಲ್ಲ ಒಮ್ಮೆಲೇ ರೋಮಾಂಚನಗೊಂಡವು. ನನ್ನ ಭುಜದ ಮೇಲೊರಗಿ ಕೆನ್ನೆಗೆ ಮುತ್ತಿಕ್ಕಿದೆ.ಅದ್ಯಾವಾಗ ನಿನ್ನ ಕೋಮಲ ಬೆರಳುಗಳ ಸಂದುಗಳನು ನನ್ನ ಒರಟಾದ ಬೆರಳುಗಳು ತುಂಬಿದವೋ ಅರಿವಿಗೆ ಬರಲೇ ಇಲ್ಲ. ಆಲಿಂಗನದಲ್ಲಿ ತುಟಿಗೆ ತುಟಿ ಸೇರಿಸಿ ದೀರ್ಘವಾಗಿ ಚುಂಬಿಸಿದ ಹಿತ ಒಂದು ಅದ್ಭುತ ಕಾವ್ಯ ಓದಿದ ರೀತಿಯಂತಿತ್ತು. ಬಲು ಹುಮ್ಮಸ್ಸಿನಿಂದ ಕಾಮದ ಕುದುರೆಯನು ಓಡಿಸಲು ಉತ್ಸುಕನಾದೆ.  ಪ್ರೇಮೋತ್ಸವದ ಸಂಭ್ರಮದಲ್ಲಿ ಮೀಯಲು ಅಣಿಯಾಗಿದ್ದೆ. ಪ್ರೀತಿಯ ಮಳೆಗರೆದು ದಾಹ ತೀರಿಸಲು ಮುಂದಾಗಿದ್ದೆ ಎಷ್ಟಾದರೂ ಹೆಣ್ಣು ಜೀವವಲ್ಲವೇ? ಬಯಲಲ್ಲಿ ಬೆತ್ತಲಾದರೆ ಮುಂದಾಗುವ ಆಗು ಹೋಗುಗಳಿಗೆ ಈ ಮಿಲನವೇ ಮುಳುವಾಗುವ ಯೋಚನೆ ಕಾಡಿದಾಕ್ಷಣ ನಿನ್ನ  ನಡುವಲ್ಲಿ ಸಣ್ಣಗೆ ನಡುಕ ಶುರುವಾಯಿತು. ಗುಡಿಸಲಿನಿಂದಾಚೆ ಹೆಜ್ಜೆಯಿಟ್ಟು ಹುಲಿಯಿಂದ ತಪ್ಪಿಸಿಕೊಂಡ ಹರಿಣಿಯಂತೆ ಕಾಡನ್ನು ದಾಟಿ ಊರು ತಲುಪಿದೆ.ಅಂದಿನಿಂದ ನನ್ನ ಈ ಬದುಕಿಗೆ ಮಳೆ ಚಳಿ ಬಿಸಿಲಿನ ಲೆಕ್ಕವೇ ಇಲ್ಲ. ದೇಹ ಸಮೀಪಿಸಿದರೂ ಮನಸ್ಸು ಗೆಲ್ಲಲಾಗಲಿಲ್ಲ ಎನ್ನುವ ನೋವು ಕಾಡುತ್ತಿದೆ. ಅರಿಯದೇ ಮಾಡುತ್ತಿದ್ದ ತಪ್ಪಿಗೆ ತೆರೆ ಎಳೆದು ದೊಡ್ಡ ತಪ್ಪನು ತಪ್ಪಿಸಿದೆ. ನಿನಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನೀನು ನನ್ನಿಂದ ದೂರವಾದ ಮೇಲೆ ಬದುಕು ಅದೆಷ್ಟೋ ಅನುಭವಗಳನು ಹೇಳಿ ಕೊಟ್ಟಿದೆ. ಬಯಲಲ್ಲಿ ಬೆತ್ತಲೆಯ ಕೋಟೆ ಏರಿದ್ದರೆ ಬದುಕಿನ ಹಳಿ ತಪ್ಪಿ ಹೋಗುತ್ತಿತ್ತು ಎನ್ನುವ ಅರಿವು ಬಂದಿದೆ. ಹೀಗೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸಿಕೊಂಡು ನಿನಗೆ ನೀನು ಶಿಕ್ಷಿಸಿಕೊಳ್ಳದಿರು. ರಾಜ ಬೀದಿಯಲ್ಲಿ ನನ್ನ ಪಟ್ಟದ ರಾಣಿಯಾಗಿ ನಿನ್ನ ಸ್ವೀಕರಿಸುವ ಕಾಲ ಬಂದಿದೆ. ‘ನೀ ಒಂದು ಸಾರಿ ನನ್ನ ಮನ್ನಿಸು. ನನ್ನ ಮೇಲೆ ದಯೆ ತೋರಿಸು ಓ ಚಿನ್ನ ರನ್ನ ನನ್ನ ಪ್ರೀತಿಸು.’ ಎಂದು ಹಾಡುತ್ತ ಅದೇ ಗುಡಿಸಲಿನ ಮುಂದೆ ಕಾದು ಕುಳಿತಿರುವೆ. ನಮ್ಮೀರ್ವರ ಹೆತ್ತವರನೂ ಒಪ್ಪಿಸಿರುವೆ. ನನ್ನೊಂದಿಗೆ ಜೀವನ ಪಯಣ ಬೆಳೆಸಲೋ ಬೇಡವೋ ಎನ್ನುವ ಹೊಯ್ದಾಟದಲ್ಲಿ ಬೀಳಬೇಡ. ನಿನ್ನ ಮನಸ್ಸನ್ನು ಗೆದ್ದ ಮೇಲೆಯೇ ಮೈಗೆ ಮೈ ತಾಗಿಸುವೆ ಗೆಳತಿ. ಮೋಡ, ಮಳೆ, ಹಗಲು, ರಾತ್ರಿ, ಮುಸ್ಸಂಜೆ, ಮುಂಜಾವು, ಸಾಗರ, ನದಿ, ತೊರೆ, ಹಳ್ಳ, ಕೊಳ್ಳದ ದಂಡೆಗಳು  ಇನ್ನು ಮೇಲೆ ನಮ್ಮ ಪ್ರೀತಿ ತುಳುಕಾಡಿ ಹೊರಚೆಲ್ಲುವುದಕ್ಕೆ ಸಾಕ್ಷಿಯಾಗಿಸೋಣ. ***************************************                                                  

ನೀ ಒಂದು ಸಾರಿ ನನ್ನ ಮನ್ನಿಸು Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ನಲಿವಿನ ನಾಲಗೆ (ಪ್ರಬಂಧ ಸಂಕಲನ) ನಲಿವಿನ ನಾಲಗೆ ಪುಸ್ತಕದ ಹೆಸರು:ನಲಿವಿನ ನಾಲಗೆ(ಪ್ರಬಂಧ ಸಂಕಲನ)ಲೇಖಕರ ಹೆಸರು:ಸುಮಾವೀಣಾಪುಟಗಳ ಸಂಖ್ಯೆ:128–ಬೆಲೆ-120ರೂಪ್ರಕಾಶಕರ ಹೆಸರು:ಪರಶಿವಪ್ಪ,ಸ್ನೇಹ ಬುಕ್ ಹೌಸ್, ಬೆಂಗಳೂರುಪುಸ್ತಕ ದೊರೆಯುವ ಸ್ಥಳ:www.mybookadda.netಅಂಚೆಯಲ್ಲಿಪುಸ್ತಕ ತರಿಸಿಕೊಳ್ಳಲು ಹಣ ಹಾಕಬೇಕಾದ ಬ್ಯಾಂಕ್ ಖಾತೆ ವಿವರ;Ac No3211142353,IFSC code SBIN0011259

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಮೌನ ಮಂದಾರ ಮೌನ ಮಂದಾರ ಕರ್ತೃ_ ವಾಣಿಮಹೇಶ್ಪ್ರಕಾಶಕರು_ ಜ್ಞಾನಮುದ್ರ ಪ್ರಕಾಶನಲಿಂಗರಾಜು ಬಿ.ಎಲ್.ಹೊಳಲುಮಂಡ್ಯ_571402 ಪುಸ್ತಕದಬೆಲೆ-85ರೂಪಾಯಿ ಸ್ವ ವಿಳಾಸ_ವಾಣಿಮಹೇಶ್w/oಮಹೇಶ್ ಹೆಚ್. ಆರ್.ನಂ. ಎ.ಆರ್.613 ಮೊದಲನೇ ಮುಖ್ಯ ರಸ್ತೆ ನಾಲ್ಕನೇ ಅಡ್ಡ ರಸ್ತೆ ಸಾಲಗಾಮೆ ಗೇಟ್ ಸರಸ್ವತಿ ಪುರಂ ಹಾಸನ_573201 PH: 7975353693 ಬ್ಯಾಂಕ್ ಖಾತೆ ನಂ_37614898049IFSC_SBIN0040956 ಇದು ಸಾಧನೆಯ ಸಂಗಮದ ಅನವರತ. ಬೇಕಾದ್ದವು ಭಾವನೆಯಾಗಿ , ಸೋತು ನಿಂತ ನೆನಪುಗಳು ಮೌನ ಮಂದಾರವಾಗಿದೆ. ಕವಯತ್ರಿ ವಾಣಿಮಹೇಶ್ ಅವರ ಬರಹಗಳನ್ನು ಅಧ್ಯಯನ ಮಾಡಿದಾಗ ಸರಳ ಅಕ್ಷರಗಳಿಂದ ಜನನಾಡಿಗೆ ಸರಾಗವಾಗಿ ಹಂಚುವುದರ ಮೂಲಕ ಹೊಸ ಅನುಭವವೂ ಆಯ್ತು. ಹೇಗೆಂದರೆ ಸರಳ ಅನ್ನುವುದನ್ನು ಸರಿಸಿ ಆಳವಾಗಿ ಹೋದಂತೆ ಹಲವಾರು ಕವಲೊಡೆಯಲು ಶುರುವಾಯಿತು. ನಾ ಕಂಡೆ ಆ ಮನವ , ಮಿಡಿವ ಹೂವಂತೆ , ನಾ ಕಂಡೆ ಆ ಮನವ ಆಳದ ಕಡಲಂತೆ. ನಲಿವ ಸ್ಪರ್ಷದಿಂದ ಹೊಸ ಅನುಭವ ಯಾನದಲ್ಲಿ ಮುಳುಗಿ ಹೋದೆ. ಸಾಹಿತ್ಯ ಜಗತ್ತನ್ನು ಸರಳವಾಗಿ ಪರಿಚಯಿಸುವ ಮೂಲಕ ಹೊಸ ಸಂಶೋಧನೆ ಮಾಡಿದ್ದಾರೆ. ಆಳವಾಗಿ ಮುಳುಗಿ ನೋಡಿದಾಗ ಸರಳ ಭಾವನೆಯಲ್ಲೂ ಸಾವಿರ ಸಾರ ತುಂಬಿದ ಅನುಭವ ಸಂದೇಶ ಉಕ್ಕಿ ಬಂತು. ಅವರ ಕವನಗಳಿಂದ ಕಣ್ತುಂಬಿ ಬಂದದ್ದಂತೂ ನಿಜ. ಬದುಕಿನ ತ್ಯಾಗ ವೈರಾಗ್ಯ ಮರೆಯಲು ಮನಸ್ಸು ಮೂಕ ಪ್ರಶ್ನೆಯಾದಾಗ ಮಿಡಿದ ಹೂವೇ ಮೌನ ಮಂದಾರ. ಓದುಗರಿಗೆ ಉತ್ತಮ ಅಭಿರುಚಿಕರವಾಗಿದೆ ಎಂದು ಮನದಾಳದ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ. ——————————————————–

ಪುಸ್ತಕ ಪರಿಚಯ Read Post »

ಕಾವ್ಯಯಾನ

ಕಾವ್ಯಯಾನ

ಮಾಲತಿ ಶಶಿದರ್ ಒಂದು ಪ್ರೇಮಕವಿತೆ ಒಲವೆಕಗ್ಗತ್ತಲಲ್ಲಿ ಹೊಳೆವ ಬಂಧಕ್ಕಾಗಿ ಹಾತೊರೆದಿರುವೆಕಡಲಾದ ನಿನ್ನ ಒಂದು ಹನಿಯಾಗಿ ಸೇರಿರುವೆ ನಿನ್ನ ಚಲುವಿಗೆ ಪುರಾವೆಯಾಗಬಲ್ಲೆನೇ ನಾನು..ನಮ್ಮಿಬ್ಬರ ಮಿಲನ ಕಂಡು ಮಣ್ಣು, ಮಳೆ ಹನಿ ನಾಚದೆನು ನಿನ್ನೊಲವ ಸ್ಫೂರ್ತಿಯಲಿ ಆಗಸದಲ್ಲಿ ತೇಲಿಹೆನು,ಹೆಗಲ ಮೇಲೆ ಒರಗುವಾಸೆ ದಾಟಿ ಬಳಿಗೆ ಬಂದಿಹೆನು ನನ್ನೊಳಗೆ ಅವಿತಿರುವ ನೀನೊಂದು ಸುಂದರ ಗುಟ್ಟುಏಕಾಂತದಲ್ಲೂ ನಿನ್ನದೇ ಪರಿಮಳ, ನಿನ್ನದೇ ನೆನಪು.. ಬೇಸಿಗೆ ಆಗಸ ವಸಂತವಾಗಿದೇದೂರದ ಕಾಡು ನಿನ್ನೆಸರ ಕೂಗಿದೆ.. ಅಣುವಿನ ವಿದಳನದಂತೆ ನಮ್ಮ ಬಂಧ ದಿನೇ ದಿನೇ ಸಿಡಿದಿದೆಬೆರಳುಗಳ ಹೊಸ ಭಾಷೆಯ ಈ ಪಾಪಿ ಹೃದಯ ಅರಿವುದೆ? ಇದೊಂದು ಜನ್ಮ ಸಾಕೆ ಹುಡುಗ ನಿನ್ನ ಸೇರಿ ಬಾಳಲು..ಒಂದೇ ಒಂದು ಹೃದಯ ಸಾಕೆ ನಿನ್ನ ಪ್ರೀತಿ ಮಾಡಲು.. ***********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೂತನ ಅವರ ಹೊಸ ಕವಿತೆ ನೂತನ ದೋಶೆಟ್ಟಿ ಸಾಲುಗಟ್ಟಿದ ವಾಹನಗಳ ಸಂದಿನಲ್ಲಿಚಟಚಟನೆ ಜಿಗಿಯುವ ಪುಟ್ಟ ಕಾಲುಗಳುದೇಹವಿಡೀ ಲೋಹದ ಗೋಲದೊಳಗೆ ತೂರಿಕೈಕಾಲು ಬಿಡಿಬಿಡಿಯಾಗಿ ಹೊರಬರುವ ಆಟ ಮಿಂಚುವ ಕಣ್ಣುಗಳ ಸುತ್ತ ಕಪ್ಪು ಕಾಡಿಗೆಸೆರೆ ಹಿಡಿಯುವ ದಾಹಮಿರಮಿರನೆ ಹೊಳೆವ ಕದಪುಗಳುಬಾಲ್ಯವನ್ನು ನುಂಗಿ ಉಬ್ಬಿ ಗರಿಗರಿಯಾಗುತ್ತಿರುವವು ಒಡ್ಡಿದ ಕೈಮೇಲೆ ಬೀಳುವ ಕನಸ ಕಾಸುಗಳುಸಂಜೆಗತ್ತಲಲ್ಲಿ ಕರಗುವುದ ತಿಳಿದೂಸುಡುಬಿಸಿಲಲಿ ಮೈ ಮಣಿಸುವ ಕಸುವುಸೊಂಟಕ್ಕೆ ಬಿಗಿದ ದಾವಣಿಯುಸಡಿಲವಾಗುವುದಕ್ಕೆ ಪೂರ್ವಹಾದಿಬದಿಯ ದೊಂಬರಾಟದಲ್ಲಿ ತಯಾರಿ ಬಡಿಯುವವನ ತಮಟೆ ತಾಳಕ್ಕೆಬಾಗಿ ಬಳುಕುವ ನೋಡುಕಣ್ಸನ್ನೆ, ಕೈಸನ್ನೆ, ಬಾಯ್ಸನ್ನೆಗಳ ಪಾಠಉಣ್ಣುವ ಅನ್ನದಲಿ ಸುಖ ನೀಡಿದ ಘಾಟು ಕೆಂಪು ದೀಪ ಹತ್ತುತ್ತಲೇ ನಿಲ್ಲುವ ವಾಹನಗಳಗಾಜನ್ನು ಬಗೆವ ಕಣ್ಣುಗಳುಕ್ಷಣಕ್ಷಣದ ಬದುಕ ಹುಡುಕುವವು ಇಂತೆಷ್ಟೋ ಭಾಗ್ಯಲಕ್ಷ್ಮಿಯರುರಸ್ತೆಯಂಚಲಿ ದಿನಗಳ ಸವೆಸಿಟಾರ್ಪಾಲು ಗೂಡುಗಳಲೋಫುಟ್ ಪಾತುಗಳಲೋ ರಾತ್ರಿಗಳ ಮಾರಿ ಕಂತೆ ಕಂತೆ ನೋಟುಗಳ ನುಂಗುವಕಡತಗಳ ಶಪಿಸುವರುಕಣ್ಣ ಮಿಂಚನ್ನು ಎದೆಯಲ್ಲಿ ಉಳಿಸಿ ಹೋಗುವರುನಿಟ್ಟುಸಿರು ದಾಟಿ ಸಾಗುವರುಗಣತಿಯಲ್ಲೂ ಹೆಸರಿಲ್ಲದಾಗುವರು ***************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಸೆ ಪೂಜಾ ನಾಯಕ್ ಝಗಝಗಿಸುವಾ ಆಸೆನಳನಳಿಸುವಾ ಆಸೆಮೊಮ್ಮೊದಲ ವಸಂತ ಋತು,ಕೋಗಿಲೆಗೆ ಕಂಠದ ಮಾಧುರ್ಯವ ಹೊರಹೊಮ್ಮಿಸುವ ಆಸೆ.ಕವಿಗೆ ಕಾವ್ಯದಾ ರಚನೆಯಮೇಲಾಸೆಕಲಾಕಾರನಿಗೆ ಚಿತ್ರ ಬಿಡಿಸುವ ಆಸೆಶಿಲ್ಪಿಗೆ ಮೂರ್ತಿಯ ಕೆತ್ತುವುದರಲ್ಲಾಸೆನಟರಾಜನಿಗೆ ತನ್ನ ನೃತ್ಯದಾಮೇಲಾಸೆಪ್ರೇಮಿಗೆ ಪ್ರೇಯಸಿಯೊಡಗೂಡಿ ನಲಿಯುವಾ ಆಸೆ ಮಾಗಿಯ ಚಳಿಯು ಇನಿಯನಿಗೆ ಆದರೆ,ಚಂದ್ರನ ಬೆಳದಿಂಗಳು ಗೆಳತಿಗೆಹತ್ತಾರು ಬಣ್ಣದಾ ಕನಸಿನಾ ಲೋಕದೊಳು ಚಿಟ್ಟೆಯ ಹಾಗೆ ನಲಿ-ನಲಿದು,ಏಕಾಂತದಲಿ ಕುಳಿತಾಗ ಕವಿತೆಯ ಬರೆದು, ಎಲ್ಲರೊಡಗೂಡಿ ಹಾಡುವ ಆಸೆ ಎನಗೆ.ಆಸೆ ಎಂಬುದು ಬಿಡಲಿಲ್ಲ ಗೌತಮ ಬುದ್ಧನನೇಅವನಿಗೂ ಕೂಡ ಇತ್ತೊಂದು ಆಸೆ,ಆಸೆಯ ಬಿಡಬೇಕು ಎನ್ನುವ ಮಹದಾಸೆ.ಆಸೆ ಎಂಬುದು ಎಲ್ಲರಾ ಬದುಕಿನ ಬಿಡಿಸಲಾಗದ ಬಂಧಮಿತಿ ಮೀರದೇ ಇದ್ದರೆ ಬೆಲೆ ಉಂಟು ಆಸೆಗೂ ಕಂದಾ. **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಿರುಗಾಟ ಭಾಗ್ಯ ಸಿ ಏಕೆ ತಿರುಗುವೆ ಅತ್ತಿಂದಿತ್ತಅತ್ತ ಪ್ರಳಯ ಇತ್ತ ಕೋಲಾಹಲತಿನ್ನುವ ಕೂಳಿಗೂ ಪರದಾಟ ಅಲ್ಲಿತುಸುವೆ ಹೆಚ್ಚಾಗಿ ಕಿತ್ತಾಡುತ್ತಿರುವರಿಲ್ಲಿ ಮೌಲ್ಯಾಧಾರಿತ ಸಮಸ್ಯೆಗಳು ಸಾಕಷ್ಟಿವೆಕ್ಲಿಷ್ಟತೆಗಳು ಜೇಡರ ಬಲೆಯಂತಾಗಿವೆಹೊರಾಡಬೇಕಿದೆ ಒಳಗಿನ ಶತ್ರುವಿನೊಂದಿಗೆಸಮಾಜ ಸ್ವಾಸ್ಯ ಕಾಪಾಡುವ ಗುರಿಯೊಂದಿಗೆ ಮಣ್ಣು, ಗಾಳಿ, ಬೆಳಕು ನೀರಿನ ಮಿಶ್ರಣಹೋದರೆ ಹೋಯಿತು ಬೆಲೆ ಇಲ್ಲಆತ್ಮ ಸತ್ಯವದು ಹೊಲಸು ಮಾಡಿಕೊಳ್ಳಬೇಡಿಲೆಕ್ಕ ತೀರಿಸಲೇ ಬೇಕು ಮರೆಯಬೇಡಿ ಏಕೆ ತಿರುಗುವೆ ಅತ್ತಿಂದಿತ್ತತಿರುಗಾಟ ಪರಿಹಾರವಲ್ಲಎಣೆ ಬಲೆಯನು ಬಿಗಿಯಾಗಿಬೀಳಲಿ ಮಿಕ ತಲೆಕೆಳಗಾಗಿ *****************************************

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕಸಂಗಾತಿ

ಹೋಗಿ ಬಾ ಮಗಳೆ. ಹೋಗಿ ಬಾ ಮಗಳೇ ಲೇಖಕರು: ಡಾ||ವಿರೂಪಾಕ್ಷ ದೇವರಮನೆಪ್ರಕಾಶಕರು: ಸಾವಣ್ಣ ಎಂಟರ್ಪ್ರೈಸಸ್ಪುಸ್ತಕದ ಬೆಲೆ: ೧೫೦.೦೦ರೂ ಡಾ||ವಿರೂಪಾಕ್ಷ ದೇವರಮನೆಯವರಿಂದ ರಚಿತವಾದ “ಹೋಗಿ ಬಾ ಮಗಳೇ” ಜವಾಬ್ದಾರಿಯುತ ಅಪ್ಪನೊಬ್ಬ ತನ್ನ ಮಗಳಿಗೆ ವೈವಾಹಿಕ ಜೀವನದ ಅನೇಕ ಆಗು ಹೋಗುಗಳ ಬಗ್ಗೆ ಹಿತವಾಗಿ ಮುಖಾಮುಖಿ ಮಾತನಾಡಿದಂತೆ ತೋರುವ ಪುಸ್ತಕ ರೂಪದ ಕೈಗನ್ನಡಿ. ಮದುವೆ ಎನ್ನುವ ಮೂರಕ್ಷರಗಳೊಂದಿಗೆ ಆರಂಭವಾಗುವ ಎರಡು ವಿಭಿನ್ನ ಕುಟುಂಬಗಳ ನಡುವಿನ ಸೇತುವೆ. ಯಾವುದೇ ಮದುವೆಯ ಸಂದರ್ಭದಲ್ಲಿ ಎರಡೂ ಕಡೆ ಕೊಂಚವಾದರೂ ತಕರಾರಿಲ್ಲದೇ ಕಾರ್ಯಕ್ರಮ ನೆರವೇರದು. ಮದುವೆ ಗಂಡು ಹೆಣ್ಣಿನ ನಡುವೆ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಆತಂಕದ ವಿಷಯವೇ. ಸಂಭ್ರಮದ ಜೊತೆಗೆ ಭವಿಷ್ಯದ ಕಾತರವು ಬೆರೆತಿರುತ್ತದೆ. ಪ್ರಸ್ತುತ ಪುಸ್ತಕದ ಲೇಖಕರು ತಮ್ಮ ಬಳಿ ಬರುವ ಬಹಳಷ್ಟು ಪಾತ್ರಗಳ ಮೂಲಕ ಜೀವನದ ವಿವಿಧ ಮಜಲುಗಳಲ್ಲಿ ಎದುರಾಗಬಹುದಾದ ಘಟನೆಗಳ ಸವಿಸ್ತಾರ ವಿವರಣೆ ಹಾಗೂ ಸೂಕ್ತ ಪರಿಹಾರವನ್ನು ನೀಡಿದ್ದಾರೆ. ಹೆಣ್ಣಾಗಿ ನಾನೂ ಕೂಡಾ ಮತ್ತೊಂದು ಮನೆಗೆ ಬಂದವಳು ಹಾಗೂ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಸಾಕಷ್ಟು ಪರದಾಡಿದವಳು. ಅಪ್ಪ -ಅಮ್ಮನ ಮನೆಗೆ ವಿಭಿನ್ನವಾದ ವಾತಾವರಣ , ಒಂದು ರೀತಿಯ ಅಳುಕು . ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಇದೇ ರೀತಿ. ಸೊಸೆ ಗಂಡನ ಮನೆಯಲ್ಲಿ  ಮದುವೆಯ ಮೊದಲಿನಿಂದಲೂ ಸೊಸೆಯೇ ಆಗಿರುತ್ತಾಳೆ. ಆದರೆ ಅಳಿಯನೆಂದರೆ ಹೆಂಡತಿಯ ಮನೆಯಲ್ಲಿ ವಿಶೇಷ ಗೌರವ, ಆದರಾತಿಥ್ಯ. ಬೇರೊಂದು ಮನೆಗೆ ಹೊಂದಿಕೊಳ್ಳುವಾಗ ಸಾಕಷ್ಟು ಸಮಸ್ಯೆಗಳಿರುತ್ತವೆ. ಆದರೆ ಯಾರೂ ಸಮಯದ ಅವಕಾಶವೇ ಕೊಡುವುದಿಲ್ಲ.  ಲೇಖಕರು ಈಗಿನ ಸಮಾಜದಲ್ಲಿ ಮುರಿದುಬೀಳುವ ಅನೇಕ ವಿವಾಹ ಹಾಗೂ ಅವುಗಳ ತೊಳಲಾಟಗಳ ಮೂಲಕ ಮದುವೆ ಎಂದರೆ ಸಮಸ್ಯೆಯಲ್ಲ,‌ ಅದನ್ನು ನಿಭಾಯಿಸಲು ಒಂದಷ್ಟು ತಯಾರಿ ಮಾಡಿಸುವುದು ಹೆತ್ತವರಿಗೂ, ಗಂಡಿನ ಕಡೆಯವರಿಗೂ ಸೇರಿರುತ್ತದೆ. ಲೇಖಕರು ತಮ್ಮ ಈ ಪುಸ್ತಕ ರೂಪದ ದಾರಿದೀಪವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ೨೫ ಘಟಕಗಳು ಇದರಲ್ಲಿ ಸೇರಿದ್ದು , ನಮ್ಮನ್ನು ಓದಿಸಿಕೊಂಡು ಹೋಗುವ ಮಾರ್ಗದಲ್ಲಿ ಸ್ವ ಅನುಭವಗಳು , ಬೇಸರಿಕೆಗಳು, ಸಂಕಟಗಳು ಇಣುಕುತ್ತವೆ. ಮದುವೆಯ ವಯಸ್ಸಿನ ಕನಸಿನಿಂದ ಹಿಡಿದು ಮಕ್ಕಳ ಜವಾಬ್ದಾರಿ, ಮನೆಯವರೊಂದಿಗೆ ಹೊಂದಾಣಿಕೆ ಹೀಗೆ ಎಲ್ಲವನ್ನೂ ಸಾದೃಶ್ಯಗೊಳಿಸಿದ್ದಾರೆ. ಪತಿ ಹಾಗೂ ಪತ್ನಿ ಯಾರೂ ಹೆಚ್ಚು ಕಡಿಮೆ ಎಂಬ ತರ್ಕ ಕ್ಕೆ ಹೋಗಲೇಬಾರದೆಂಬ ಕಿವಿಮಾತು, ದಂಪತಿಗಳ ನಡುವೆ ಅನ್ಯರ ಪ್ರವೇಶ ಎಂದಿಗೂ ನಿಷಿದ್ಧ , ಅಪಾರ್ಥ ತರುವ ಮೌನಗಳಿಗಿಂತ ಅರ್ಥ ವಿರದ ಜಗಳಗಳೇ ವಾಸಿ, ಕ್ಷಮಿಸುವ ಮರೆಯುವ ಗುಣಗಳನ್ನು ಹೊಂದುವ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಬದುಕು ಕಟ್ಟಲು ಅಪ್ಪನಂಥ ಗೆಳೆಯನಿಂದ ಸಲಹೆ ಈ ಪುಸ್ತಕ ಎನಿಸಿತು. ಇಂಥ ಘಟನೆಗಳು ಸಾಮಾನ್ಯವಾಗಿ ಎನಿಸಿದರೂ ನಮಗೆ ಕಲಿಯುವ ಪಾಠ ಇದರಲ್ಲಿ ಅಡಗಿದೆ. ಅವಳಿಗೆ… ಅವನಿಗಿರದ ಪ್ರಾಕೃತಿಕ ಸವಾಲುಗಳು! ಅವನಿಗೆ .. ಅವಳಿಗಿರದ ಜವಾಬ್ದಾರಿಗಳು! ಎಂಥಾ ಅದ್ಭುತ ಅಲ್ಲವೇ  ಡಾಕ್ಟರ್ ಅವರ ಈ ನುಡಿಗಳು. ಹೆಣ್ಣು ಹಾಗೂ ಗಂಡು ವಿಭಿನ್ನ ದೈಹಿಕ, ಮಾನಸಿಕ ಕ್ಷಮತೆಯನ್ನು ಪಡೆದವರು. ಅವಳಿರಲಿ, ಅವನಿರಲಿ ಇಬ್ಬರೂ ಒಂದೇ ಆದರೂ ಭಿನ್ನ. ಆರೋಪಗಳ ಸರಮಾಲೆಯ ಮತ್ತೊಬ್ಬರಿಗೆ ಹಾಕುವ ಮುನ್ನ ಸ್ವ ವಿಮರ್ಶೆಗೆ ಅವಕಾಶ ನೀಡುತ್ತದೆ. ಈ ನಿಟ್ಟಿನಲ್ಲಿ ಮನವ ತಟ್ಟಿದ ಪುಸ್ತಕ. ಥ್ಯಾಂಕ್ಯೂ ಡಾಕ್ಟರ್. ****************************************** ಸರಿತಾ ಮಧು

ಪುಸ್ತಕಸಂಗಾತಿ Read Post »

ಇತರೆ, ಲಹರಿ

ಕಾಡುವ ವಿಚಾರ…

ಕಾಡುವ ವಿಚಾರ… ವಸುಂಧರಾ ಕದಲೂರು               ಆ ದಿನ ನಿಜಕ್ಕೂ ಬಹಳ ಕಳವಳಪಟ್ಟಿದ್ದೆ. ಏನು ಮಾಡಿದರೂ ನನಗೆ ನಂಬಿಕೆ ಮೂಡುತ್ತಿರಲಿಲ್ಲ. ಏಕೋ ಎದೆಯಾಳದಲಿ ತೀವ್ರ ನೋವಾಗುತ್ತಿರುವ ಅನುಭವ. ಆ ಕ್ಷಣಕ್ಕೆ ಆಶಾಭಂಗದ ಅರ್ಥವೂ, ದಿಗ್ಭ್ರಮೆ ಎಂಬುದರ ಪರಿಚಯವೂ ಆಗಿಹೋಯಿತು. ಎಳೆ ಮನದ ಭಿತ್ತಿಯಲಿ  ಉದಿಸಿದ ದುಃಖ ಹಸಿ ನೆಲದಲ್ಲಿ ಬೇರೂರಿದ ಬೀಜದಂತಾಯ್ತು.       ಹೌದು, ಮೊದಲ ಬಾರಿಗೆ ಪ್ರೀತಿಯ ‘ಗಾಂಧಿ’ ಅವರ ಸಾವು ಹೇಗಾಯಿತೆಂದು ತಿಳಿದಾಗ ನನಗಾದ ಅನುಭವವೇ ಈ ಮೇಲಿನದ್ದು. ‘ಮಹಾತ್ಮ ಗಾಂಧೀಜೀ’ ಅಂತಹವರನ್ನೂ ಹೇಗೆ ಕೊಲ್ಲುವುದಕ್ಕೆ ಸಾಧ್ಯ? ಅದೂ ನಾವು ಭಾರತದವರೇ!ಬೆಚ್ಚಿ ಬಿದ್ದಿದ್ದೆ.       ದಿನಗಳು ಉರುಳುರುಳಿ ಸಾವಕಾಶದ ಪರದೆ ಸರಿದು ಅಗೋಚರ ಸಟೆಗಳೂ, ಉಳಿದ ಹಲವು ಸತ್ಯಗಳೂ ದೃಗ್ಗೋಚರವಾಗುತ್ತಾ ಆಗುತ್ತಾ ನನ್ನನ್ನು ಕಂಗೆಡಿಸಿದವು. ಸಮಾಧಾನ ಪಡೆಯುವ ಹಂಬಲಕೆ ಯಾರೂ ದಾರಿ ತೋರುತ್ತಿಲ್ಲ. ಹತಾಶೆ ಗೊಂದಲದ ಗೊಂಡಾರಣ್ಯ ಹೊಕ್ಕು ಸಿಕ್ಕ ಸಿಕ್ಕ ಸಿಕ್ಕುಗಳನು ಬಿಡಿಸುತ್ತಾ ಮತ್ತೆ ಹೆಣೆಯುತ್ತಾ ಅಬ್ಬೇಪಾರಿಯಾಗಿ ನಿಂತ ಭಾವ ನನ್ನದಾಗಿತ್ತು.      ಗಾಂಧಿ ಮಾತ್ರವೇ ಅಲ್ಲ, ಕೃಷ್ಣ(?), ಕ್ರಿಸ್ತ, ಬಸವಣ್ಣ…..!! ಏಕೆ ಈ ಜಗತ್ತು ನ್ಯಾಯಪರವಾಗಿರುವುದಿಲ್ಲ? ಬೆಳಕನ್ನು ಕಾಣಬಯಸದೇ ಕತ್ತಲಿನಲ್ಲಿ  ಕಡಲ ದಡದ ಬಂಡೆಗೆ ಅದೆಷ್ಟು ನಿರಂತರದ ಅಲೆಗಳ ಬಡಿದಂತೆ. ಕಣ್ಣ ಮುಂದೆಯೇ ಒಂದು ಸೊಗಸಾದ ಚಿತ್ರವನು ತಿರುಚಿ ಮುರುಟಿ ತಿಪ್ಪೆಗೆಸೆದಂತೆ. ಆಗ ತಿಳಿದ ಸತ್ಯಗಳೂ… ಆಮೇಲಿನ ದೊಂದಿ ಹಚ್ಚಿ ಕಾಣಿಸುವ ಸುಳ್ಳುಗಳೂ… ಈಗಲೂ ನನ್ನನ್ನು ಕಾಡುತ್ತಲೇ ಇವೆ. ಇದಾವುದರ ಗೊಡವೆಗೆ ಹೋಗದೇ ನಿರಾಳದಲ್ಲಿ ಸಮಾಧಿ ಆಗಿಹೋದ ನನ್ನ ಹಿರೀಕರು ನೆನಪಾಗುತ್ತಾರೆ. ಎಂಥಾ ನೆಮ್ಮದಿಯ ಬದುಕು ಅವರದ್ದಿತ್ತೆಂದು ಯಾವಾಗಲೂ ಅನಿಸುತ್ತದೆ. ಆದರೆ, ಬೆಳಕ ಕಿಡಿ ಕಂಡ ಮೇಲೂ ಅದಕ್ಕೆ ಬೆನ್ನು ತಿರುಗಿಸಿ ಪಾತಾಳದ ಆಳದಲಿ ಬದುಕುವುದು ನನಗೆ ಸಾಧ್ಯವಾದೀತೆ!?            ಸತ್ಯವು ತಿಳಿಯಲಾರದೆಂದಲ್ಲ, ತಿಳಿಯಾಗಲಾರದ ರಾಡಿಯಲ್ಲೇ ಈಗ ಬದುಕುತ್ತಿರುವಾಗ ಕನಸು ಹುಟ್ಟದ  ಕತ್ತಲಲ್ಲಿ ಸೊಗಸಾದ ನಿದ್ರೆಗಳನು ಕಾಣುವುದು ಹೇಗೆ?  ಅಪಾರ ನೆಮ್ಮದಿಯ ರಾತ್ರಿಗಳನ್ನು ಕಂಡಿದ್ದ ಪೂರ್ವಿಕರು  ಹೆಚ್ಚು ಒಳ್ಳೆಯ ಅಭಿರುಚಿ ಇದ್ದವರೆಂದೂ, ಸುಖಿಗಳೆಂದೂ, ಸಿರಿವಂತರೆಂದೂ ನಾನು ಗಟ್ಟಿಯಾಗಿ ನಂಬುತ್ತೇನೆ.       ನನ್ನನ್ನು ಕಾಡುವ ಇತಿಹಾಸಗಳು ನನ್ನ ಕನಸಿಗೂ ಕನ್ನ ಹಾಕುತ್ತಿವೆ. ಹಾಗಾದರೆ ಇತಿಹಾಸ ಓದಲೇ ಬಾರದೆ?  ಅಥವಾ ಓದಬಾರದ ಚರಿತ್ರೆಗಳೂ ಇವೆಯೇ?! ಗೊತ್ತಿಲ್ಲ. ಏಕೆಂದರೆ ಗಾಂಧಿ, ಬಸವಣ್ಣ ಅಂತಹವರ ಸಾವು ಹಾಗೂ ಅದರ ಕಾರಣಗಳು ಆಗ ನಾನು ಪಾಠ ಓದುವ ಹುಡುಗಿಯಾಗಿದ್ದಾಗ ಅಪಾರ ವೇದನೆಯೊಡನೆ ದಿಗ್ಭ್ರಮೆ ತಂದಿದ್ದರೆ, ಈಗ ಈ ನೆಲದ ಮೇಲೆ ಜವಾಬ್ದಾರಿಯುಳ್ಳ ಪ್ರಜೆಯಾಗಿ ಬದುಕಬೇಕೆಂದು ನಿಶ್ಚಯಿಸಿರುವಾಗ, ಇಲ್ಲಿ ಕಂಡುಬರುತ್ತಿರುವ ಹಲವು ಸಾಮಾಜಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಹೆಚ್ಚು ಕಾಡುತ್ತಿವೆ. ***********************************

ಕಾಡುವ ವಿಚಾರ… Read Post »

ಅಂಕಣ ಸಂಗಾತಿ, ದಿಕ್ಸೂಚಿ

ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ ಸಾಮಾನ್ಯವಾಗಿ ನಾವು ಮಾಮೂಲಿ ಕೆಲಸಗಳನ್ನು ಮಾಮೂಲಿ ರೀತಿಯಲ್ಲಿ ಮಾಡಿ ಅತ್ಯದ್ಭುತ ಫಲಿತಾಂಶ ಬಯಸುತ್ತೇವೆ. ನಾವು ಮಾಡುತ್ತಿರುವ ಕೆಲಸವನ್ನು ಎಂದಿನಂತೆ ಮಾಡುವ ರೀತಿಯಲ್ಲಿಯೇ ಮುಂದುವರೆಸಿದರೆ ಹಿಂದೆ ಬಂದ ಫಲಿತಾಂಶವೇ ಬರುವುದು ಸಹಜ. ಕೆಲವರು ನಾವು ಮಾಡುತ್ತಿರುವ ಕೆಲಸವನ್ನೇ ಮಾಡಿ ನೋಡ ನೋಡುತ್ತಿದ್ದಂತೆ ಗೆಲುವು  ಪಡೆಯುತ್ತಾರೆ. ಎಲ್ಲರ ನೆದರಿನಲ್ಲಿಯೂ ಮಿಂಚುತ್ತಾರೆ.ತಾವೂ ಹಿಗ್ಗಿ ಹಲಸಿನಕಾಯಿಯಾಗುತ್ತಾರೆ.  ಅದನ್ನು ನಾವು ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದು ಬಿಡುತ್ತೇವೆ. ಅವರು ಅದೃಷ್ಟವಂತರು ಎಂಬ ಹಣೆಪಟ್ಟಿ ಕಟ್ಟುತ್ತೇವೆ. “ಮನುಷ್ಯನು ತನ್ನ ಕುರಿತು ತಾನೇನು ಅಂದುಕೊಳ್ಳುತ್ತಾನೋ ಅದೇ ಆತನ ಅದೃಷ್ಟವನ್ನು ನಿರ್ಣಯಿಸುತ್ತದೆ.” ಎನ್ನುವ ಎಚ್ ಡಿ ಥೋರೇ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದೇ  ನಾವು ತುಂಬಾ ದುರದೃಷ್ಟವಂತರು ಎಂದು ಕರಬುತ್ತೇವೆ.. ನಿಜ ಸಂಗತಿ ಎಂದರೆ “ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನೂ ಮಾಡುವುದಿಲ್ಲ; ಅವರು ಕೆಲಸ ಮಾಡುವ ರೀತಿ ವಿಭಿನ್ನವಾಗಿರುತ್ತದಷ್ಟೆ.”ಮಾಡುವ ಕಾರ್ಯಗಳ ಬಗೆಗೆ ಹಳೆಯದರ ಆಧಾರದ ಮೇಲೆ ವಿಭಿನ್ನವಾಗಿ ವಿಚಾರ ಮಾಡಿ ಹೊಸ ರೀತಿಯಲ್ಲಿ ನಿರ್ವಹಿಸುವುದೇ ಸೃಜನಶೀಲತೆ ಎಂದು ಕರೆಸಿಕೊಳ್ಳುತ್ತದೆ. ಹಳೆಯ ಪದ್ದತಿಗಳನ್ನು ನಂಬಿಕೊಂಡು ಅದಕ್ಕೆ ಜೋತು ಬಿದ್ದು ಪಡೆದ ಜ್ಞಾನವನ್ನು ಅರಿವಾಗಿಸಿಕೊಳ್ಳದೇ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ರೀತಿಯಲ್ಲಿ ಮುನ್ನಡೆಯುತ್ತಿರುವುದರಿಂದ ಹೀಗಾಗುತ್ತಿದೆ. ಈ ಮನಸ್ಥಿತಿಯಿಂದ ನಾವಿಂದು ಹೊರಬರಲೇಬೇಕಿದೆ. ಇಂಥ ಮನೋಭಾವವನ್ನು  ಕಂಡು ಕಾಳಿದಾಸ “ಹಳೆಯದು ಎಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದಲ್ಲ.” ಎಂದು ಹೇಳಿ ಹಳೆಯದರ ಪರಿಮಿತಿಯೆಡೆಗೆ ನಮ್ಮ ಗಮನ ಸೆಳೆದಿದ್ದಾನೆ. ಇತಿಹಾಸದ ಪುಟಗಳಲ್ಲಿ ಯಶಸ್ವಿ ವ್ಯಕ್ತಿಗಳಾಗಿ ತಮ್ಮ ಹೆಸರು ದಾಖಲಿಸಿಕೊಂಡ ಅಲ್ಬರ್ಟ್ ಐನಸ್ಟೀನ್, ಸಿ ವಿ ರಾಮನ್ ಥಾಮಸ್ ಅಲ್ವಾ ಎಡಿಸನ್, ಸರ್ ಎಮ್ ವಿಶ್ವೇಶ್ವರಯ್ಯನವರಂಥವರ ಯಶಸ್ಸಿಗೆ ಸೃಜನಶೀಲತೆಯು ಬಹುಮುಖ್ಯ ಪಾತ್ರ ವಹಿಸಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸೃಜನಶೀಲತೆ ಎಂದರೆ. . . . .? “ಮಾಡುವ ಕೆಲಸ ಕಾರ್ಯಗಳನ್ನು ಸಾಮಾನ್ಯವಾಗಿ ಯೋಚಿಸದೇ ವಿಭಿನ್ನ ದೃಷ್ಟಿಕೋನದಿಂದ ಆಲೋಚಿಸಿ ಹೊಸ ಸಂಶೋಧನೆಗಳಿಗೆ ಆವಿಷ್ಕಾರಗಳಿಗೆ ಮುನ್ನುಡಿ ಬರೆಯಲು ಸಹಕರಿಸುವ ಅಂಶವೇ ಸೃಜನಶೀಲತೆ ಎಂದು ಸೃಜನಶೀಲತೆಯು ನಮ್ಮನ್ನು ಇತರರಿಂದ  ವಿಭಿನ್ನ ಎಂದು ತೋರಿಸುತ್ತದೆ. ಜಗತ್ತಿನಲ್ಲಿ ಕುತೂಹಲಕಾರಿ ವಿಸ್ಮಯಕಾರಿ ಸಂಗತಿಗಳೆಡೆಗೆ ಕಣ್ಣರಳಿಸಿ ನೋಡುತ್ತ ಈ ಸತ್ಯ ಸಂಗತಿಗಳ ಬೆನ್ನು ಹತ್ತಿ ತಿಳಿದುಕೊಳ್ಳುವ ಹಂಬಲವನ್ನು ಮನದಲ್ಲಿ ತುಂಬಿಕೊಂಡು ನಾವೂ ಅಂಥ ಚಕಿತಗೊಳಿಸುವ ¸ಸಂಗತಿಗಳನ್ನು ಇದ್ದುದರಲ್ಲಿಯ ನ್ಯೂನತೆಗಳನ್ನು ತಿದ್ದಿ ಉತ್ತಮ ಪಡಿಸುವುದು ಹೇಗೆ ಎಂದು ನಿರಂತರವಾಗಿ ಯೋಚಿಸಿ ಊಹಿಸಿ ಕಲ್ಪನೆಗಳನ್ನು ಕಟ್ಟಿಕೊಂಡು ಆ ಕಲ್ಪನೆಗಳನ್ನು ನನಸಾಗಿಸುವುದೇ ಸೃಜನಶೀಲತೆ.ಹೊಸತನಕ್ಕೆ  ತುಡಿಯುವ ಮನ ಸಹಜವಾಗಿ ಸೃಜನಶೀಲತೆಯತ್ತ ವಾಲುತ್ತದೆ. ಇಂಥವರನ್ನು ಸೃಜನಶೀಲ ಮನಸ್ಸುಳ್ಳವರು ಎಂದು ಗುರುತಿಸಿ ಗೌರವಿಸುತ್ತೇವೆ. ನೀವೂ ಸೃಜನಶೀಲರಾಗಬೇಕೇ? ಹಾಗಾದರೆ ಈ ಅಂಶಗಳನ್ನು ನಿಮ್ಮದಾಗಿಸಿಕೊಳ್ಳಿ ಪ್ರಶ್ನಿಸುವುದನ್ನು ರೂಢಿಸಿಕೊಳ್ಳಿ ಯಾರೋ ಏನೋ ಹೇಳಿದರು ಎಂದು ಸುಮ್ಮನೆ ನಂಬಿ ಬಿಡಬೇಡಿ. ಪ್ರಶ್ನಿಸಿಕೊಳ್ಳಿ ಅದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿ. ಉತ್ತರ ನಿಮಗೆ ಸಮಾಧಾನ ನೀಡುವವರೆಗೆ ಪ್ರಯತ್ನ ಮುಂದುವರೆಯಲಿ. ಕುತೂಹಲವಿರಲಿ ಮೂಲತಃ ಸೃಜನಶೀಲತೆ ನಿಂತಿರುವುದೇ ಕುತೂಹಲ ಪ್ರವೃತ್ತಿಯ ಮೇಲೆ. ಯಾವುದೇ ಸಂದರ್ಭ ಸನ್ನಿವೇಶ ಪ್ರಸಂಗಗಳಲ್ಲಿಯ ಅನುಭವಗಳನ್ನು ಕುತೂಹಲ ದೃಷ್ಟಿಯಲ್ಲಿಯೇ ನೋಡುವುದು. ಕುತೂಹಲಭರಿತರಾಗಿಯೇ ಆಸ್ವಾದಿಸುವುದನ್ನು ಮೈಗೂಡಿಸಿಕೊಳ್ಳಿ. ಸ್ವಂತಿಕೆಯ ಹಂಬಲವಿರಲಿ ಮತ್ತೊಬ್ಬರ ವಿಚಾರಗಳನ್ನು ಅಂಧಾನುಕರಣೆಯಂತೆ ಒಪ್ಪದಿರಿ. ಪರಾಮರ್ಶಿಸಿ ಸ್ವತಂತ್ರವಾದ ನಿಲುವುಗಳನ್ನು ತಳೆಯಿರಿ. ಈ ಪ್ರಕ್ರಿಯೆ ನಡೆಯುತ್ತಿರುವಾಗ ಮಾನಸಿಕ ಸಂಘರ್ಷ ನಡೆಯುತ್ತದೆ. ನೀವು ತೆಗೆದುಕೊಂಡ ಸ್ವತಂತ್ರ ನಿರ್ಧಾರಗಳಿಗೆ ಪ್ರಬಲವಾದ ಸಮರ್ಥನೆಗಳಿರಲಿ.ಅವು ವಾಸ್ತವಿಕತೆಯಿಂದ ಕೂಡಿರಲಿ. ಕಲ್ಪನಾಶಕ್ತಿ ಪುಟಿಗೊಳಿಸಿ ಊಹಿಸುವ ಸಾಮರ್ಥ್ಯವೇ ಕಲ್ಪನಾಶಕ್ತಿ. ಅಗಾಧವಾದ ಕಲ್ಪನಾಶಕ್ತಿಯನ್ನು ಪುಟಿಗೊಳಿಸಿ ಸಾಧಿಸಬೇಕೆನ್ನುವ ಕ್ಷೇತ್ರದಲ್ಲಿ ಪೂರ್ವ ನಿರ್ಧರಿತ ಪರಿಕಲ್ಪನೆಗಳನ್ನು ಬಳಸಬೇಕೆಂದರೆ ಕಲ್ಪನಾಶಕ್ತಿ ಅತ್ಯಗತ್ಯ. ಕಲ್ಪನಾಶಕ್ತಿಯನ್ನು ವೃದ್ಧಿಸಿಕೊಂಡಷ್ಟು ವಿಷಯ ವಿಸ್ತರಿಸುವ ವಿಷ್ಲೇಶಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಸಣ್ಣ ಸಂಗತಿಯನ್ನೂ ವಿಭಿನ್ನ ಆಯಾಮದಿಂದ ನೋಡಿ ಅದಕ್ಕೆ ಹೊಸ ರೂಪವನ್ನು ನೀಡಲು ಸಾಧ್ಯವಾಗುವುದು. ಪ್ರಯೋಗಶೀಲತೆ ಇರಲಿ ಪ್ರಯೋಗಶೀಲತೆಯನ್ನು ಸೃಜನಶೀಲತೆಯ ತಾಯಿ ಎಂದು ಕರೆಯಬಹುದು. ಕೇಳಿದ ತಿಳಿದ ವಿಷಯಗಳ ಬಗ್ಗೆ ಗೋಚರ ಇಲ್ಲವೇ ಅಗೋಚರ ರೀತಿಯಲ್ಲಿ ಪ್ರಯೋಗಶೀಲತೆ ನಿರಂತರವಾಗಿ ನಡೆಸಿ. ಇದು ಅಪರೋಕ್ಷವಾಗಿ ನಿಮ್ಮಲ್ಲಿ ಸಾಹಸ ಪ್ರವೃತ್ತಿಗೆ ಬೇಕಾದ ಅಸಾಧಾರಣ ಧೈರ್ಯವನ್ನು ತುಂಬುತ್ತದೆ. ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸುತ್ತದೆ. ಚಿಂತನೆಯ ರೀತಿ ಬದಲಿಸಿ ಹೇಳಿದ್ದನ್ನು ಕೇಳಿದ್ದನ್ನು ಓದಿದ್ದನ್ನು ಬರೆದಿದ್ದನ್ನು ಏಕಮುಖೀ ರೀತಿಯಲ್ಲಿ ಯೋಚಿಸಿ ಒಪ್ಪಿಕೊಂಡು ಬಿಡದೇ ಯಾವುದೇ ಒಂದು ವಿಷಯದ ಬಗ್ಗೆ ವಿವಿಧ ಆಯಾಮಗಳಲ್ಲಿ ಚಿಂತಿಸಿದರೆ ಒಂದೇ ಕಾರ್ಯವನ್ನು ವಿವಿಧ ರೀತಿಯಲ್ಲಿ ಮಾಡಲು ಹಲವಾರು ಸಾಧ್ಯತೆಗಳು ಸಿಗುತ್ತವೆ. ಹೀಗೇ ನಿಮ್ಮ ಏಕ ಮುಖಿ ಚಿಂತನೆಯನ್ನು ಬಹುಮುಖಿ ಚಿಂತನಾ  ವಲಯಕ್ಕೆ ವಿಸ್ತರಿಸಿಕೊಳ್ಳಿ. ಹೊಸತನದ ಜೊತೆಗೆ ಮುಕ್ತತೆ ಇರಲಿ ಸೃಜನಶೀಲತೆಯು ಹೊಸತನದ ವಿನ್ಯಾಸದಲ್ಲಿಯೇ ಅಡಗಿದೆ. ನೊಡುವ ನೋಟದಲ್ಲಿ, ಕಾರ್ಯ ನಿರ್ವಹಣೆಯಲ್ಲಿ,ಚಿಂತನೆಯಲ್ಲಿ ವರ್ತನೆಯಲ್ಲಿ ಒಟ್ಟಿನಲ್ಲಿ ಪ್ರತಿಯೊಂದರಲ್ಲಿ ಹೊಸತನವೇ ಮಿಂಚುತಿರಲಿ. ಪೂರ್ವಾಗ್ರಹಪೀಡಿತರಾಗಿ ಯಾವುದೇ ಒಂದು ನಿರ್ಧಿಷ್ಟ ವಿಚಾರಗಳಿಗೆ ಕಟ್ಟಿ ಹಾಕಿಕೊಳ್ಳಬೇಡಿ. ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ. ಸಾಧಕ ಬಾಧಕಗಳನ್ನು ಗಮನದಲ್ಲಿರಿಸಿ ಕಾರ್ಯೋನ್ಮುಖರಾಗುವುದು ಉಚಿತ. ಉತ್ಸಾಹ ಚಿಮ್ಮುತಲಿರಲಿ ಉತ್ಸಾಹ ಹೊಸತನದ ಹೊಸ್ತಿಲಲ್ಲಿ ವಿವಿಧ ರೀತಿಯ ನೂತನ ವಿಚಾರಗಳಿಗೆ ನಾಂದಿ ಹಾಡುತ್ತದೆ. ಪ್ರತಿ ಬಾರಿ ಹೊಸತನಕ್ಕೆ ತುಡಿಯುವದರ ಜೊತೆಗೆ ಹಳೆಯದರಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿ ತೆಗೆಯಬೇಕು.ಅದನ್ನೇ ಬುನಾದಿಯನ್ನಾಗಿಸಿಕೊಂಡರೆ ಅವಿಷ್ಕಾರ ಪ್ರವೃತ್ತಿಯು ನಿಮ್ಮದಾಗುತ್ತದೆ. ಅವಿಷ್ಕಾರ ಪ್ರವೃತ್ತಿಯು ನಿಮ್ಮನ್ನು ಗೆಲುವಿನ ಶಿಖರದ ತುತ್ತ ತುದಿಯ ಮೇಲೆ ನಿಲ್ಲುವಂತೆ ಮಾಡುತ್ತದೆ. ಪ್ರೇರೇಪಿಸಿಕೊಳ್ಳಿ ಸೃಜನಶೀಲತೆಗೆ ಎಲ್ಲಡೆಯೂ ಮಣೆ ಮನ್ನಣೆ ಹೊಗಳಿಕೆ ಇದ್ದೇ ಇದೆ. ಇದರಿಂದ ಬಹಿರಂಗ ಪ್ರೇರಣೆ ದೊರೆಯುವುದು ಖಚಿತ.  ಕೇವಲ ಬಹಿರಂಗ ಪ್ರೇರಣೆಯೊಂದೇ ಸಾಲದು. ಈ ಬಹಿರಂಗ ಪ್ರೇರಣೆ ಅಂತಃಪ್ರೇರಣೆಯಾಗಿ ಪರಿವರ್ತನೆಯಾಗಬೇಕು. ನಿಮ್ಮನ್ನು ಪ್ರೇರೇಪಿಸಿಕೊಂಡಾಗ ಮಾತ್ರ ಸೃಜನಶೀಲತೆ ಹೊರೆ ಹೊಮ್ಮುವುದು. ಸೃಜನಶೀಲತೆಯು ಎಲ್ಲರಿಗೂ ಎಟಕುವಂಥದ್ದು..ಏಕೆಂದರೆ  ಇದು ಮಾನವ ಸಹಜವಾದ ಗುಣ. ದಿನ ನಿತ್ಯದ ಬದುಕಿನಲ್ಲಿ ಜೀವನೋತ್ಸಾಹವನ್ನು ತುಂಬಿಕೊಂಡು ಸುತ್ತಮುತ್ತಲಿರುವ ಸಂಗತಿಗಳೆಡೆಗೆ ಆಸಕ್ತಿ ಯ ಕಂಗಳಿಂದ ನೋಡುವುದನ್ನು ರೂಢಿಸಿಕೊಂಡರೆ ಸೋಲಲ್ಲೂ ಸಂಭ್ರಮಿಸುವ ಗಳಿಗೆ ಸನ್ನಿಹಿತವಾಗುವುದು. ಸೋಲನ್ನು ಗೆಲುವಾಗಿ ಪರಿವರ್ತಿಸುವ ಗುಣ ಸೃಜನಶೀಲತೆಗಿದೆ. ಬದುಕಿನ ಎಲ್ಲ ಹಂತದ ಕಾರ್ಯಗಳ ಗೆಲುವಿಗೂ ಸೃಜನಶೀಲತೆ ಬೇಕೇ ಬೇಕು. ಸೃಜನಶೀಲತೆಯು ವಿವೇಕವನ್ನು ಹೆಚ್ಚಿಸುವುದು.ಎಂಥ ಕ್ಲಿಷ್ಟಕರ ಸನ್ನಿವೇಶಗಳಲ್ಲೂ ಸಹನೆ ಕಳೆದುಕೊಳ್ಳದೇ ಪರಿಹಾರ ಕಂಡುಕೊಳ್ಳುವ ಪಕ್ವತೆ ನೀಡುವ ಶಕ್ತಿ,ನಮ್ಮ ಎಲ್ಲ ಶಕ್ತಿಗಳನ್ನು ಸಮರ್ಥವಾಗಿ ಉಪಯೋಗಿಸಿ ಸರ್ವತೋಮುಖ ವ್ಯಕ್ತಿತ್ವ ನೀಡುವ ಶಕ್ತಿ ಸೃಜನಶೀಲತೆಗೆ ಮಾತ್ರ ಇದೆ. ನೀವು ಯಶಸ್ಸು ಗಳಿಸಬೇಕೆಂದರೆ ನೀವು ನೂತನ ದಾರಿಗಳನ್ನು ಆರಿಸಬೇಕು.ಈಗಾಗಲೇ ಒಪ್ಪಿರುವ ನಡೆದಾಡಿರುವ ದಾರಿಗಳನ್ನು ಹೊರತುಪಡಿಸಿ ಸೃಜನಶೀಲತೆಯು ವಿಶ್ವದಾದ್ಯಂತ ಬಂದೂಕಿನ ಗುಂಡುಗಳಿಗಿಂತ ಹೆಚ್ಚು ಶಬ್ದ ಮಾಡುತ್ತ ಸಾಗುತ್ತದೆ ಎನ್ನುವುದು ನೆನಪಿರಲಿ. ಹಾಗಾದರೆ ತಡವೇಕೆ ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ. *********************** ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

You cannot copy content of this page

Scroll to Top