ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಏಕಾಂತದ ನಿರೀಕ್ಷೆಯಲ್ಲಿ

ಕವಿತೆ ಏಕಾಂತದ ನಿರೀಕ್ಷೆಯಲ್ಲಿ ತೇಜಾವತಿ.ಹೆಚ್.ಡಿ. ಬಹಳ ಖುಷಿಯಾಗಿದ್ದೆ ನಾನುಹರೆಯದ ವಯಸ್ಸಿನಲ್ಲಿ ಮೂಡಿದಅಸ್ಪಷ್ಟ ಕನಸುಗಳಿಗೆ ರೆಕ್ಕೆಪುಕ್ಕ ಕಟ್ಟಿಕೊಂಡುನನ್ನದೇ ಕಲ್ಪನಾ ಲೋಕದಲ್ಲಿ ತಾರೆಯಾಗಿ ಪ್ರಜ್ವಲಿಸಿದ್ದೆ ದಿಂಬಿಕೆ ತಲೆಗೊಡುವುದೇ ತಡನಿದ್ರಾದೇವಿಗೆ ಶರಣಾಗುತ್ತಿದ್ದೆಗುಡಿಸಿಲಿನ ಅಂಗಳದಿ ಕುಳಿತುಅರಮನೆಯ ರಾಣಿಯಾಗಿದ್ದೆಅತೀ ಸೂಕ್ಷ್ಮ ಸಂವೇಗಗಳಿಗೂ ಪ್ರತಿಕ್ರಿಯಿಸುತ್ತಾಚಳಿಗೆ ಬೆಂಕಿ ಕಾಯಿಸುವಾಗಮಾರು ದೂರವಿರುವಾಗಲೇನೆಗೆದು ಹೌಹಾರಿ ಬೀಳುತ್ತಿದ್ದೆ ಎಡವಿದ ಕಲ್ಲಿಗೂ ಕಂಬನಿಗರೆದುಮಳೆಯಲ್ಲಿ ತೋಯುತ್ತಿದ್ದೆಪುಟ್ಟ ಪುಟ್ಟ ಕಂಗಳಲಿ ದೊಡ್ಡ ದೊಡ್ಡ ಖುಷಿಯ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದೆ ಪ್ರತಿ ವೀಕೆಂಡ್ ಬಂತೆಂದರೆ ಸಾಕುಕಾಲಿಗೆ ಚಕ್ರ ಕಟ್ಟಿದವಳಂತೆ ಗರಗರ ಗಿರಕಿ ಹೊಡೆಯುತ್ತಿದ್ದೆ ಬರುಬರುತ್ತಾ….ಕಾಯ ಗಟ್ಟಿಗೊಂಡುಮನಸ್ಸು ಪಕ್ವವಾಗಿಚರ್ಮ ಸುಕ್ಕುಗಟ್ಟಿಅಂತರಂಗ ಬಹಿರಂಗಗಳೆರಡರ ಆದ್ಯತೆಗಳೊಂದಿಗೆಕಾಲ ಬದಲಾಯಿತುಪರಿಸ್ಥಿತಿ ಬದಲಾಯಿತುಈಗ ನಾನೂ ಕೂಡ.. ಬದಲಾವಣೆ ಜಗದ ನಿಯಮಕೆಂಡ ಮುಟ್ಟಿದರೂ ಕೈ ಸುಡುತ್ತಿಲ್ಲ ಈಗಅಕ್ಷಿಗಳ ಸನಿಹವೇ ಸ್ವರ್ಗ ತೋರಿಸಿದರೂ ತೇಲಾಡುವ ಮರ್ಜಿಯಿಲ್ಲಮನೆ -ರಸ್ತೆಗಳ ತುಂಬೆಲ್ಲಾ ವಾಹನಗಳ ಕಾರುಬಾರಿದ್ದರೂ ತಿರುಗಾಡಬೇಕೆನಿಸುತ್ತಿಲ್ಲ ಪಟ್ಟದರಸಿಯಾಗಿರುವೆ…ಆದರೀಗ ಭವದ ಭೋಗಗಳನ್ನೇ ತೊರೆದಿರುವೆಸದ್ಯಕ್ಕೆ ಮನಸ್ಸು ಮತ್ತೇನನ್ನೋ ಬಯಸುತ್ತಿದೆದೂರದ ಬೆಳಕನೊಂದ ಅರಸಿ ಹೊರಟಂತಿದೆಗತಿಸಿದ ಖುಷಿಯನ್ನು ಮತ್ತೆ ಪಡೆಯಲು ಏಕಾಂತದಿ…. *****************************

ಏಕಾಂತದ ನಿರೀಕ್ಷೆಯಲ್ಲಿ Read Post »

ಇತರೆ

ನನ್ನ ತಂದೆ, ನನ್ನ ಹೆಮ್ಮೆ

ನೆನಪು ಶ್ರೀನಿವಾಸ ಖರೀದಿ ತಂದೆಯವರ ಹೆಸರು: ಶ್ರೀ ಕೆ.ಎನ್. ಶ್ರೀಧರಮೂರ್ತಿ ಭದ್ರಾವತಿ ಹುಟ್ಟಿ ಬೆಳೆದದ್ದು : ತರೀಕೆರೆ / ರಂಗೇನಹಳ್ಳಿ ವ್ಯವಹಾರ ಸ್ಥಳ : ಭದ್ರಾವತಿ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿದ್ದ ನನ್ನ ತಂದೆ ಭದ್ರಾವತಿಯ ದಿವಂಗತ ಶ್ರೀ ಕೆ. ಎನ್.ಶ್ರೀಧರಮೂರ್ತಿ ಯವರು. 1931ರಲ್ಲಿ ಜನಿಸಿದ ಇವರು, ತಮ್ಮ ಹತ್ತನೇ ವಯಸ್ಸಿನಲ್ಲಿ ಮಹಾತ್ಮ ಗಾಂಧೀಜಿ ರವರ ಪಾದಗಳ ಸ್ಪರ್ಷಿಸುವ ಮೂಲಕ ತನ್ನಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚು ರೂಡಿಸಿಕೊಂಡವರು. ಚಿಕ್ಕಂದಿನಲ್ಲೇ ನಾಯಕತ್ವಗುಣಗಳನ್ನು ಬೆಳೆಸಿಕೊಂಡಿದ ಇವರು, ತರೀಕೆರೆಯಲ್ಲಿ ತನ್ನ ಶಾಲಾದಿನಗಳಲ್ಲಿಯೇ ಸ್ವಾತಂತ್ರ ಹೋರಾಟಗಳಲ್ಲಿ ಭಾಗಿಯಾಗಿದ್ದರು.  ಅಪ್ರಾಪ್ತ ಬಾಲಕನಾಗಿ ಕ್ವಿಟ್-ಇಂಡಿಯಾ ಚಳುವಳಿ, ಸ್ವರಾಜ್ಯ ಚಳುವಳಿ, ಅಸಹಕಾರ ಚಳುವಳಿ, ಮೈಸೂರು ಚಲೋ ಚಳುವಳಿ ಮುಂತಾದ ಸ್ವಾತಂತ್ರ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ತನ್ನ ಹದಿಹರೆಯ ವಯಸ್ಸಿನಲ್ಲಿ ಒಮ್ಮೆ ಪಟ್ಟಣ್ಣ-ಪಂಚಾಯ್ತಿ ಚುನಾವಣೆಗೆ ತನ್ನ ಉಮೇದುವಾರಿಕೆ ಸಲ್ಲಿಸಿ ಅವರ ಅಪ್ಪ ಇವರನ್ನು ಮನೆಯಿಂದ ಹೊರಹಾಕ್ಕಿದ್ದರಂತೆ. ಹೈಸ್ಕೂಲಿನ ವಿದ್ಸಾರ್ಥಿ ಸಂಘದ ನಾಯಕನಾಗಿ ತನ್ನ ಸ್ನೇಹಿತರೊಡನೆ ಅಸಹಕಾರ ಚಳುವಳಿ – ಸ್ವರಾಜ್ಯ ಚಳುವಳಿಗಳಲ್ಲಿ ಭಾಗವಹಿಸಿ, ಬ್ರಿಟೀಷರ ಕಛೇರಿಗಳಿಗೆ ದಾಳಿ ಮಾಡಿ ಅಲ್ಲಿನ ಕಾರ್ಯಕಲಾಪಗೆ ಅಡ್ಡಿಪಡಿಸುವುದು, ರೈಲು ತಡೆದು ಪ್ರತಿಭಟಿಸುವುದು,  ರಾತ್ರಿಯಲ್ಲಿ ಮನೆಮನೆಗಳ ಬಾಗಿಲುಗಳಿಗೆ ಕರಪತ್ರ ಅಂಟಿಸಿ ಸ್ವಾತಂತ್ರ ಹೋರಾಟದ ಸಭೆಗಳಿಗೆ ಬರುವಂತೆ ಅಲ್ಲಿನ ನಿವಾಸಿಗಳಿಗೆ ಸ್ಪೂರ್ತಿ ತುಂಬುತಿದ್ದರು. ಎಷ್ಟೊ ಬಾರಿ ಬಂಧನಗೊಳಗಾಗಿ ಕೋರ್ಟ್ ಗೆ ಹಾಜರುಪಡಿಸಿದರೂ ಚಿಕ್ಕ ಬಾಲಕನೆಂದು ಬಿಡುಗಡೆಗೊಂಡಿದುಂಟಂತೆ. ಹೀಗೆ ಓಮ್ಮೆ ತಿಪಟೂರಿನಲ್ಲಿ  ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿದ್ದಾಗ, ರೈಲ್ವೇ ನಿಲ್ದಾಣದಲ್ಲಿ ರೈಲನ್ನು ತಡೆಹಿಡಿದು ಬ್ರಿಟೀಷ್ ಸರ್ಕಾರಕ್ಕೆ ಸಂಭಂದಪಟ್ಟ ಅಂಚೆ ಟಪಾಲುಗಳನ್ನು ನಾಶಪಡಿಸಿ,  ರೈಲ್ವೇ ನಿಲ್ದಾಣ ದ್ವಂಸ ಪಡಿಸಿದ ಆರೋಪದಡಿ ಚಿಕ್ಕಮಗಳೂರಿನ ಜೈಲು ಪಾಲಾಗಿದ್ದರು. ಮೈಸೂರು ಚಲೋ ಚಳುವಳಿಯಲ್ಲಿ ಬಂದಿಸಲ್ಪಟ್ಟು ಬೆಂಗಳೂರಿನ ಕೆ.ಆರ್.ಪುರಂನ ಸೆಂಟ್ರಲ್ ಕಾರಾಗೃಹದಲ್ಲಿ 3ತಿಂಗಳ ಕಾಲ ಜೈಲುವಾಸ ಅನುಭವಿಸಿದರು. ಜೈಲುವಾಸದಲ್ಲಿ ಕಾಂಗ್ರೆಸ್ ನ ಹಲವು ಮುಂದಾಳುಗಳ  ಪರಿಚಯವು ಮುಂದೆ ಒಬ್ಬ ಪ್ರಭಾವಿ ಕಾಂಗ್ರೆಸ್ ದುರೀಣನಾಗಿ ಬೆಳೆಯಲು ಕಾರಣವಾಯಿತು. ರಾಜಕೀಯವಾಗಿ ಇವರಿಗೆ ಎಪ್ಪತ್ತರ ದಶಕದಲ್ಲಿ ಎಷ್ಟೇ ಪ್ರಭಾವವಿದ್ದರೂ ಯಾವುದೇ ಅಧಿಕಾರ ಸಿಗದದ್ದು ವಿಪರ್ಯಾಸವೇ ಸರಿ. ಓಮ್ಮೆ ಎಮರ್ಜೆನ್ಸಿ ಸಮಯದಲ್ಲಿ ಕಾಂಗ್ರೆಸ್ ನ ಬಿ-ಫಾರಂ ಮನೆ ಬಾಗಿಲಿಗೆ ಬಂದರೂ ಇಂದಿರಾ ವಿರೋಧಿ ಗಾಳಿ ಇರಬಹುದೆಂದು ಹೆದರಿ ಟಿಕೇಟ್ ನಿರಾಕರಿಸಿದರು. ಮತ್ತೊಮ್ಮೆ ಪರಿಷತ್ತಿಗೆ ನಾಮನಿರ್ದೇಶನವಾಗುವ ಕಡೇ ಗಳಿಗೆಯಲ್ಲಿ,  ಆಗಿನ ಮುಖ್ಯಮಂತ್ರಿ ಅರಸುರವರು ರಾಜಕೀಯ ಒತ್ತಡಕೊಳಲಾಗಿ  ಇವರಿಗೆ ಮೀಸಲಿಟ್ಟಿದ್ದ ಸ್ಥಾನವನ್ನ ಪರಭಾರೆ ಮಾಡಿದರು. ಇನ್ನ ಎಂಬತ್ತರ ದಶಕದಲ್ಲಿ ಆರೋಗ್ಯ, ವಯಸ್ಸು  ಒಂದೆಡೆಯಾದರೆ, ಜಾತಿ ಆಧಾರಿತ ರಾಚಕೀಯವು ಇವರ ವಿಧಾನಸಭೆ ಪ್ರವೇಶಿಸುವ ಆಸೆ, ಆಸೆಯಾಗಿಯೇ ಉಳಿಹಿತು. ಓಮ್ಮೆ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ, ಮತ್ತೊಮ್ಮೆ ಬಾಯಲಿದದ್ದು ಕಿತ್ತುಕೊಂಡರು. ತೊಂಬತ್ತರ ದಶಕದಲ್ಲಿ ನಮ್ಮ ಮನೆಗೆ ಬೇಟಿಕೊಟ್ಟಿದ್ದ ಮಾಜಿ ಮುಖ್ಯಮಂತ್ರಿ ಗುಂಡೂರಾಯರಿಗೆ ತಂದೆಯವರು ತಮಾಷೆ ಮಾಡುತ್ತ ಹೇಳಿದ ನೆನಪು : ‘ನೀವು “ಮಾಜಿ ಮುಖ್ಯಮಂತ್ರಿ”, ಆದರೆ ನಾವು ಸ್ವಾತಂತ್ರ ಹೋರಾಟಗಾರರು ಎಂದಿಗೂ “ಮಾಜಿ” ಯಾಗುವುದಿಲ್ಲ,’ ಎಂದು. 82 ವರುಷ ಬಾಳಿ ಬದುಕಿದ ಈ ಸ್ವಾತಂತ್ರ ಹೋರಾಟಗಾರ, 2013ರಲ್ಲಿ ತನ್ನ ಕೊನೆಯ ಉಸಿರೆಳೆದರು. ನನ್ನ ತಂದೆಯ ಬಗ್ಗೆ ಈ ವಿಷಯಗಳನ್ನು ಹಂಚಿಕೊಳ್ಳಲು ನನಗೆ ಹೆಮ್ಮೆ ಎನ್ನಿಸುತ್ತಿದೆ. *********************************

ನನ್ನ ತಂದೆ, ನನ್ನ ಹೆಮ್ಮೆ Read Post »

ಕಾವ್ಯಯಾನ

ಕಾವ್ಯಯಾನ

ಮತ್ತೆ ಮಳೆಯಾಗಲಿ ಸುನೀಲ್ ಹೆಚ್ ಸಿ ಎದೆಯಲ್ಲಿ ಹಾಗೆ ಕುಳಿತಿರುವ ನೋವುಗಳೆಲ್ಲಾಅಳಿಸಿ ಹೋಗುವ ಹಾಗೆಮನಸಲ್ಲಿ ಬೆಂದು ಬೆಂಡಾಗಿರುವ ದುಃಖ ಗಳೆಲ್ಲಾತೊಳೆದು ಹೋಗುವ ಹಾಗೆಕಳೆದು ಹೋಗಿರುವ ಕಣ್ಣೀರ ಕ್ಷಣಗಳು ಮತ್ತೆನೆನಪಾಗದ ಹಾಗೆಒಣಗಿ ಬಣ ಗುಟ್ಟಿದ್ದ ಕಣ್ಣುಗಳು ಆನಂದದಲ್ಲಿ ತುಂಬಿ ತುಳುಕುವ ಹಾಗೆಹೃದಯದ ಕಿಟಕಿ ಬಳಿ ಮತ್ತದೇ ಶಬ್ದಇಂಪಾಗಿ ಕೇಳುವ ಹಾಗೆಹೆಜ್ಜೆ ಇಡಲು ಹೆದರುತ್ತಿದ್ದ ಕಾಲುಗಳಿಗೆ ಶಕ್ತಿಸಿಂಪಡಿಸುವ ಹಾಗೆಬರಹಗಳೇ ಅಳಿಸಿ ಹೋಗಿದ್ದ ಹಣೆಯಲ್ಲಿ ಕೇಸರಿ ತಿಲಕ ಸದಾ ನಗುವ ಹಾಗೆಎಲ್ಲಾ ಕಳೆದು ಹೃದಯದಲ್ಲಿ ಪ್ರೀತಿ ಎಂಬ ಹಸಿರುಮತ್ತೆ ಚಿಗುರುವ ಹಾಗೆನಮ್ಮ ಪ್ರೀತಿಯಲ್ಲಿ ನಮಗೆ ಅರಿವಿಲ್ಲದೆಯೇ ಪವಾಡಗಳೆ ನಡೆದು ಹೋಗುವ ಹಾಗೆ *********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಿಡುಗಡೆ ರುಕ್ಮಿಣಿ ನಾಗಣ್ಣವರ ನಂಬಿಗಸ್ಥ ಕುನ್ನಿಯಂತೆ ಪಾಲಿದತಲೆತಲೆಮಾರಿನ ಮೌನವನ್ನುಮತ್ತೊಮ್ಮೆ ಮುರಿದುದವಡೆಯಲ್ಲಿ ಒತ್ತಿ ಹಿಡಿದಸಿಟ್ಟು ಬಳಸಿ ಹೊಟ್ಟೆಬಾಕರಹುಟ್ಟಡಗಿಸಬೇಕಿದೆ ತುತ್ತು ಅನ್ನಕ್ಕೆ, ತುಂಡು ಭೂಮಿಗೆಕೈ ಕಟ್ಟಿ, ಬಾಯಿ ಮುಚ್ಚಿ,ಟೊಂಕದಲ್ಲಿರಿಸಿದಸ್ವಾಭಿಮಾನ ಗಾಳಿಗೆ ತೂರಿಜೀತದಾಳಾಗಿ ದುಡಿಯುವಕಾಲ ದೂರಿಲ್ಲಅರಿಯಬೇಕಿದೆ ಅಗೋ…ಉರುಳಿಹೋದ ದಿನಗಳುಮರುಕಳಿಸುವ ಕರಾಳಕ್ರೌರ್ಯದ ಕೂಗುಇತ್ತಲೇ ಹೆಜ್ಜೆ ಇರಿಸಿದೆ ನರಳಾಟದ ಕೆಂಡದಲಿಅಂಡು ಸುಡುವ ಮೊದಲುಎಚ್ಚೆತ್ತುಕೊಳ್ಳಬೇಕಿದೆಕ್ರಾಂತಿಯ ಕಹಳೆ ಮೊಳಗಿಸಿನಮ್ಮವರಿಂದಲೇ ನಾವುಬಿಡುಗಡೆ ಹೊಂದಬೇಕಿದೆ.. *****************

ಕಾವ್ಯಯಾನ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ….

ಮನುಷ್ಯ ಭ್ರಮೆಗಳಲ್ಲಿ ಬದುಕಬಾರದೆಂದು ನಂಬಿದವನು ನಾನು. ಹೀಗಾಗಿಯೇ ಸಂಗಾತಿಬ್ಲಾಗ್ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದುದೇನೊ ಮಾಡಿಬಿಡುತ್ತದೆ ಮತ್ತು ಅತ್ಯುತ್ತಮ ಸಾಹಿತ್ಯ ಸೃಷ್ಠಿಗೆ ಕಾರಣವಾಗುತ್ತದೆಯೆಂಬ ಹುಸಿಭ್ರಮೆನನ್ನೊಳಗಿರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ

ನಿಮ್ಮೊಂದಿಗೆ…. Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬೀಳದ ಗಡಿಯಾರ. ಕೃತಿಯ ಹೆಸರು: ಬೀಳದ ಗಡಿಯಾರ.ಪ್ರಕಟಣೆ: 2018ಬೆಲೆ: 90ರೂ.ಪ್ರಕಾಶಕರು: ಪ್ರೇಮ  ಪ್ರಕಾಶನ, ಮೈಸೂರು-570029 ಡಾ. ಬಸು ಬೇವಿನಗಿಡದ ಅವರ “ಬೀಳದ ಗಡಿಯಾರ” ಹಿಂದೆಲ್ಲ ಕೆಲವು ಮನೆಗಳಲ್ಲಿ ಎಷ್ಟು ಗಂಟೆಯಾಗಿದೆಯೋ ಅಷ್ಟುಸಲ ಢಣ್ ಢಣ್ ಎಂದು ಗಂಟೆ ಹೊಡೆಯುವ ಗಡಿಯಾರಗಳಿದ್ದವು. ಅಂತಹ ಗಡಿಯಾರ ಆಗ ಮಕ್ಕಳಾಗಿದ್ದ ನಮಗೆ ಆಕರ್ಷಣೆಯ ಕೇಂದ್ರವಾಗಿತ್ತು. ಹನ್ನೆರಡು ಗಂಟೆಯಾಗುವಾಗ ಅದು ಹನ್ನೆರಡುಸಾರಿ ಗಂಟೆ ಬಾರಿಸುವುದರಿಂದ ಅದನ್ನು ಕೇಳಲು ಗಡಿಯಾರದ ಮುಂದೆ ಕಾತುರದಿಂದ ನಿಂತಿರುತ್ತಿದ್ದುದೂ ಇದೆ. ಆದರೆ ಹಾಗೇ ಮುಂದುವರಿದು ಹದಿಮೂರು, ಹದಿನಾಲ್ಕು ಹೀಗೆ ಗಂಟೆ ಹೊಡೆಯುತ್ತ ದಿನದ ಮುಕ್ತಾಯದಲ್ಲಿ ಇಪ್ಪತ್ನಾಲ್ಕು ಗಂಟೆ ಹೊಡೆಯುವ ಗಡಿಯಾರವಿದ್ದರೆ… ಚನ್ನಾಗಿತ್ತು ಎಂದೆಲ್ಲಾ ಅನಿಸಿದ್ದಿದೆ. ಆದರೆ ನಾನು ಇಲ್ಲಿ ಹೇಳ ಹೊರಟಿರುವುದು “ಬೀಳದ ಗಡಿಯಾರದ” ಮಕ್ಕಳ ಕಥಾ ಸಂಕಲನದ ಕುರಿತು. ಬೀಳದ ಗಡಿಯಾರ ಹಾಗಂದರೇನು, ಅದು ಹೇಗೆ ಬೀಳದೇ ಇರಲು ಸಾಧ್ಯ… ಎಂದೆಲ್ಲಾ ಮಕ್ಕಳಾದವರು ಯೋಚಿಸಿಯೇ ಯೋಚಿಸುತ್ತಾರೆ. ಅಂತಹ ಕುತೂಹಲದ ಶೀರ್ಷಿಕೆಯ ಕಥಾಸಂಕಲನ ರೂಪಿಸಿದವರು ಡಾ. ಬಸು ಬೇವಿನಗಿಡದ ಅವರು. ಬಸು ಬೇವಿನಗಿಡದ ಅವರು ಈಗ ಧಾರವಾಡ ಆಕಾಶವಾಣಿಯ ಮುಖ್ಯಸ್ಥರು. ಅವರ ಮಕ್ಕಳ ಸಾಹಿತ್ಯದ ಕುರಿತಾದ ಅಧ್ಯಯನ, ಮಕ್ಕಳಿಗಾಗಿ ಅವರು ಬರೆದ “ನಾಳೆಯ ಸೂರ್ಯ” ಹಾಗೂ “ಓಡಿ ಹೋದ ಹುಡುಗ” ಮಕ್ಕಳ ಕಾದಂಬರಿಗಳು ಗಳಿಸಿದ ಜನಪ್ರಿಯತೆ, ಮಕ್ಕಳ ಮೇಲಿನ ಪ್ರೀತಿ ಇವೆಲ್ಲ ನಮಗೆ ಹೆಚ್ಚು ಆಪ್ತತೆಯನ್ನು ಉಂಟು ಮಾಡುತ್ತದೆ. ನಾಡಿನ ನಾಮಾಂಕಿತ ಕಥೆಗಾರ, ಕವಿ, ವಿಮರ್ಶಕರಾಗಿರುವ ಬಸು ಅವರು ಮಕ್ಕಳಿಗಾಗಿಯೂ ಬರೆಯುತ್ತ ಎಲ್ಲರೊಂದಿಗೆÀ ಸ್ನೇಹ ಪರತೆಯನ್ನು ವಿಸ್ತರಿಸಿಕೊಂಡಿದ್ದಾರೆ. ಹಾಂ, ನಾನು ಬೀಳದ ಗಡಿಯಾರದ ಕುರಿತು ಹೇಳುತ್ತಿದ್ದೆ. ಗಡಿಯಾರ ಬೀಳದಂತೆ ಮೊಳೆ ಜಡಿದಿದ್ದಾರಾ, ಮಕ್ಕಳು ಬೀಳಿಸಲು ಸಾಧ್ಯವಾಗದ ಹಾಗೆ ಅವರಿಗೆ ಸಿಗದಂತೆ ಮೇಲೆ ಇಟ್ಟಿದ್ದಾರಾ, ಏನದು ಎಂಬುದು ಮಕ್ಕಳ ಪ್ರಶ್ನೆ. ನಮ್ಮದೂ ಆಗಬುದು. ಮೊಬೈಲ, ನೀರಿನ ಜಗ್ಗು ಒಡೆದು ಹಾಕಿರುವ, ಪಾಟಿ ಚೀಲ ರೊಂಯ್… ಎಂದು ಎಸೆದುಬಿಡುವ ಗಂಗಾಧರ ಎನ್ನುವ ಹುಡುಗ ಬೀಳದ ಗಡಿಯಾರ ಕಥೆಯಲ್ಲಿ ಇದ್ದಾನೆ. ಅವನು ಏನೆಲ್ಲಾ ಮಾಡಿದ ಹಾಗೂ ಅವನ ಜಗತ್ತಿನ ಸುತ್ತ ಮಕ್ಕಳ ಬಾಲ್ಯ ಹಾಗೂ ಹಿರಿಯರ ಕಷ್ಟ ಮತ್ತು ಖುಷಿ ಹೇಗೆಲ್ಲಾ ಹರಡಿಕೊಂಡಿದೆ ಎಂಬುದನ್ನು ನಾವು ಕಥೆ ಓದಿಯೇ ತಿಳಿಯ ಬೇಕು. ಬಸು ಅವರು ಕಥೆಗಳ ಟೈಟಲ್ ಒಂದುರೀತಿ ಕುತೂಹಲ ಕೆರಳಿಸುವಂತೆ ಇಡುವುದರಲ್ಲಿ ಸಹಜತೆಯನ್ನು ಗಳಿಸಿದ್ದಾರೆ. ಅದು ಕಥೆಗಳಿಗೆ ಸರಿಯಾಗಿಯೇ ಇರುತ್ತದೆ. ಎರಡನೇ ಕಥೆ ‘ಮಾತಾಡದ ಮರ’. ಮರ ಮಾತಾಡದು ಎಂದು ನಮಗೆ ಗೊತ್ತು. ಆದರೆ ಆರೀತಿ ಏಕೆ ಬರೆದರು, ಮರ ಮಾತಾಡುತ್ತಿತ್ತೆ ಎಂಬೆಲ್ಲ ಪ್ರಶ್ನೆಗಳು ಏಳ ತೊಡಗುತ್ತವೆ. ಮುಗ್ಧ ಬಾಲಕನೊಬ್ಬ ಅಮ್ಮನೊಂದಿಗೆ ಜಗಳ ಮಾಡಿ ಕಾಣೆಯಾಗಿದ್ದ ತನ್ನ ಅಪ್ಪನನ್ನು ಹುಡುಕುತ್ತ ಸಾಗುವುದು ಈ ಕಥೆಯಲ್ಲಿ ಇದೆ. ಅಪ್ಪ ಕಲ್ಲಾಗಿ ಕುಳಿತಿರುವುದನ್ನು ಕಾಣುವ ಬಾಲಕನ ಮುಂದೆ ಅಪ್ಪ ಅಥವಾ ಬುಟ್ಟಿ ತುಂಬಿದ ಬಂಗಾರದ ಆಯ್ಕೆ ತೆರೆದುಕೊಳ್ಳುವ ಸಂದರ್ಭ ಇದೆ. ಆದರೆ ತನಗೆ ಅಪ್ಪ ಅಮ್ಮನೇ ಮುಖ್ಯ ಎನ್ನುವ ಶುದ್ಧ ಹೃದಯದ ಬಾಲಕ ಬಂಗಾರವನ್ನು ತಿರಸ್ಕರಿಸುತ್ತಾನೆ. ಜೀವ ಪಡೆದ ಅಪ್ಪ ಬಂಗಾರದ ಆಸೆಯಲ್ಲಿ ಮಗನನ್ನು ಕಳೆದುಕೊಳ್ಳುವ ಸಂಗತಿ ಇದೆ. ಇಲ್ಲೆಲ್ಲಾ ಮಕ್ಕಳ ಮುಗ್ಧತೆ, ಜೀವ ಪ್ರೀತಿ, ಮನದ ವಿಶಾಲತೆ ಜೊತೆಗೆ ದೊಡ್ಡವರ ಆಸೆ ಹಾಗೂ ಸ್ವಾರ್ಥಪರತೆ ಅನಾವರಣವಾಗುತ್ತದೆ. ಹಳ್ಳಿಯ ಬದುಕಿನ ಚಿತ್ರಣದೊಂದಿಗೆ ಬಂದ ‘ದನಗಳು ಮಾತಾಡಿದ್ದು’ ಕಥೆ ಆಪ್ತವಾಗುತ್ತದೆ. ಇಲ್ಲಿ ಬಾಲಕನೊಬ್ಬ ತಾದಾತ್ಮ್ಯತೆಯಿಂದ ದನಗಳನ್ನು ಕಾಯುತ್ತ, ಪ್ರೀತಿಸುತ್ತ, ಅವರ ನಡೆಗಳಿಗೆ ಪ್ರತಿಕ್ರಿಯಿಸುತ್ತ ಸಂವಹನ ನಡೆಸುದೆಲ್ಲ ಇದೆ. ಮಕ್ಕಳಿರಲಿ ದೊಡ್ಡವರಿರಲಿ ತಾವು ಪರಿಸರದೊಂದಿಗೆ ಎಷ್ಟೋ ಸಾರಿ ಸಂವಾದ ನಡೆಸುತ್ತಾರೆ. ಬೆಕ್ಕು-ನಾಯಿಗಳೊಂದಿಗೆ, ದನಗಳೊಂದಿಗೆ, ತಮ್ಮ ಹೊಲ-ತೋಟಗಳೊಂದಿಗೆ ಮಾತಾಡುತ್ತ ಅದರ ಭಾವ ಮನಸ್ಸಿಗಿಳಿಸಿಕೊಳ್ಳುದೆಲ್ಲವನ್ನು ಈ ಕಥೆ ನಮಗೆ ಪರೋಕ್ಷವಾಗಿ ಹೇಳುತ್ತ ಆಪ್ತವಾಗಿ ಬಿಡುತ್ತದೆ. ‘ಅಲ್ಲಪ್ಪ’ ಕಥೆಯಲ್ಲಿ ತನ್ನ ಹೆಸರಿನಿಂದಾಗಿ ಮುಜುಗರಕ್ಕೊಳಗಾಗುವ ಬಾಲಕನ ತುಮುಲ ವ್ಯಕ್ತವಾಗಿದೆ. ಹಳ್ಳಿಗಳಲ್ಲಿ ಇಡುವ ಗ್ರಾಮೀಣ ಸೊಗಡಿನ ಹೆಸರುಗಳಿಂದಾಗಿ ಕೆಲವೊಂದುಸಾರಿ ಮಕ್ಕಳ ಮಧ್ಯದಲ್ಲಿ ಕೀಟಲೆಗೆ, ಅಪಹಾಸ್ಯಕ್ಕೆ ಒಳಗಾಗುವ ಸಂದರ್ಭಗಳಿರುತ್ತವೆ. ಇಲ್ಲೂ ಅಲ್ಲಪ್ಪ ಎನ್ನುವ ಬಾಲಕ ಅಂತಹುದೇ ನೋವು ಅನುಭವಿಸುತ್ತಾನೆ. ಆದರೆ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದಾಗ ಅಲ್ಲಪ್ಪ ಪ್ರಸಿದ್ಧನಾಗಿ ಅವನ ಹೆಸರೂ ಎಲ್ಲರ ಪ್ರೀತಿಯ ಹೆಸರಾಗಿ ಮಾರ್ಪಡುತ್ತದೆ. ಹೆಸರಿನ ಕುರಿತು ಚಿಂತಿಸುವುದಕ್ಕಿಂತ ನಾವು ಮಾಡುವ ಕಾರ್ಯವೇ ಮುಖ್ಯವಾಗುತ್ತದೆ ಹಾಗೂ ಹೆಸರಿನ ಕುರಿತು ಚಿಂತೆಪಡುವ, ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬುದನ್ನು ಕಥೆ ಸೊಗಸಾಗಿ ನಿರೂಪಿಸಿದೆ. ‘ಬೆಳದಿಂಗಳು ಬೇಡಿದ ಬಾಲಕ’ ಇನ್ನೊಂದು ಕಥೆ. ಇಲ್ಲಿ ಹಳ್ಳಿಯ ಬದುಕು ಅನುಭವಗಳೆಲ್ಲ ಹೇಗೆ ಮಕ್ಕಳಲ್ಲಿ ಸಕಾರಾತ್ಮಕ ಬೆಳವಣಿಗೆ ಉಂಟಾಗಲು ಕಾರಣವಾಗುತ್ತವೆ ಎನ್ನುವುದನ್ನು ಹೇಳಲಾಗಿದೆ. ಹಿಟ್ಟು ಮುಕ್ಕುವ ಹುಡುಗ, ದೊಡ್ಡವರ ಹೋಮವರ್ಕ ಕಥೆಗಳು ಕೂಡಾ ಮಕ್ಕಳ ಸುತ್ತಲಿನವೇ ಆಗಿದ್ದು ಮಕ್ಕಳ ಲೋಕ ಹೇಗೆಲ್ಲ ವಿಸ್ತರಿಸಿಕೊಂಡಿವೆ ಎಂಬುದೇ ಆಗಿವೆ. ಅಜ್ಜನೊಬ್ಬ ಬ್ಯಾಗ ರಿಪೇರಿ ಮಡುವ ಹುಡುಗನೊಂದಿಗೆ ಹೊಂದಿದ್ದ ಸಂಬಂಧ, ಆ ಬಡ ಹುಡುಗನಿಗೆ ಉಂಟಾಗುವ ತೊಂದರೆ, ಅಜ್ಜ ಅವನಿಗಾಗಿ ಪರಿತಪಿಸುವುದು, ವೃದ್ಧಾಪ್ಯದಲ್ಲಿಯ ನಮ್ಮ ನಡವಳಿಕೆಗಳು ಸುತ್ತಲಿನವರಿಗೆ ಹೇಗೆಲ್ಲಾ ಅನಿಸುತ್ತದೆ ಎಂಬುದೆಲ್ಲ ಹೇಳುವ ‘ಬ್ಯಾಗ ರಿಪೇರಿ’ ಕಥೆ ಮನಸ್ಸಿನಲ್ಲಿ ಉಳಿಯುತ್ತದೆ. ಬಸು ಅವರು ಚಿತ್ರಿಸುವ ಗ್ರಾಮೀಣ ಚಿತ್ರಣವಾಗಲಿ, ಪೇಟೆಯ ಬಡ ಮಕ್ಕಳ ಬದುಕಾಗಲಿ, ಮುದುಕರ ಸಂಕಷ್ಟಗಳಾಗಲಿ, ಮಕ್ಕಳ ಮುಗ್ಧತೆಯಾಗಲಿ ಎಲ್ಲವೂ ಸಹಜವೆಂಬಂತೆ ಹೇಳುವ ನಿರೂಪಣೆ ಬಹಳ ಆಪ್ತವಾಗುತ್ತದೆ. ಅಲ್ಲಿ ಬರುವ ಫ್ಯಾಂಟಸಿ ಕೂಡಾ ನಮ್ಮ ಮುಂದೆ ನಡೆಯುತ್ತಿರುವ ಘಟನೆಯಂತೇಯೇ ಕಾಣುತ್ತದೆ. ಪಂಚ ತಂತ್ರ, ನೀತಿ ಕಥೆ, ಜನಪದ ಕಥೆಗಳಿಂದ ಆವರಿಸಿಕೊಂಡಿದ್ದ ಕನ್ನಡ ಮಕ್ಕಳ ಕಥಾ ಲೋಕ ಹೊಸ ಹರಿವನ್ನು ಕಾಣುತ್ತಿದೆ. ಬಸು ಅವರ ಕಥೆಗಳು ಈ ಹೊಸ ಹರಿವಿನ ಬಹು ಮುಖ್ಯ ಕಥೆಗಳಾಗಿವೆ. ವಾಸ್ತವ ಹಾಗೂ ಗ್ರಾಮೀಣ ಬದುಕಿನ ಬಹು ಸುಂದರ ಮಕ್ಕಳ ಲೋಕದೊಂದಿಗೆ ಬಸು ಅವರು ಅನುಸಂಧಾನ ಹೊಂದುವುದೇ ನಮಗೆಲ್ಲ ಬಹಳ ಖುಷಿ. ಹೊಸ ಸಂವೇದನೆಯ ಈ ಕಥೆಗಳನ್ನು ತಾವೆಲ್ಲ ಓದ ಬೇಕು, ಡಾ. ಬಸು ಬೇವಿನಗಿಡದ ಅವರು ಮತ್ತಷ್ಟು ಕಥೆಗಳನ್ನು ಬಿಚ್ಚಿಕೊಳ್ಳುತ್ತ ಕನ್ನಡದ ಮಕ್ಕಳ ಕಥಾಲೋಕ ವಿಸ್ತರಿಸುವ ಪಾಲುದಾರರಾಗಿಯೇ ಇರಬೇಕು ಎನ್ನುವುದು ನಮ್ಮ ಆಶಯ. ***************************************** –ತಮ್ಮಣ್ಣ ಬೀಗಾರ.

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ದೇಶಪ್ರೇಮ ಗೋಪಾಲತ್ರಾಸಿ ದೇಶಎಂದರೆಸೀಮೆಯೊಳಗಿನಬರೇಭೂಭಾಗವಲ್ಲ ದೇಶಪ್ರೇಮಕೋಟೆಯೇರಿಊದುವತುತ್ತೂರಿಯೇನಲ್ಲ ದೇಶಪ್ರೇಮ,ವ್ವವಹಾರ, ರಾಜಕೀಯಧರ್ಮ-ರೀತಿ-ರಿವಾಜುಪೊರೆಕಳಚುವಸಹಜಮಾನವಪಥ ನಮ್ಮಷ್ಟೇ, ನಮ್ಮಂತಹಸಹಜೀವದಕುರಿತಷ್ಟುಕಾಳಜಿ ಸಕಲಜೀವಜಂತುಗಳತೆಕ್ಕೆಯೊಳಗೆಆಹ್ವಾನಿಸಿಕೊಳ್ಳುವಕಾರುಣ್ಯ ದೇಶಪ್ರೇಮಎಂದರೆದೇಶದಕೊನೇಯನಿರ್ಗತಿಕನಯೋಗಕ್ಷೇಮ. ******************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಭಾರತ ದರ್ಶನ ಅರುಣಾ ರಾವ್ ದೇಗುಲ ದರ್ಶನ ಮಾಡುವ| ನಾವ್ ದೇಗುಲ ದರ್ಶನ ಮಾಡುವ|ವಿಶ್ವ ಭೂಪಟದೆ ಭಾರತವೆಂಬ| ದೇಗುಲ ದರ್ಶನ ಮಾಡುವ|| ಭವ್ಯ ಹಿಮಾಲಯ ಶಿಖರವೆ ನಿನ್ನ| ಮಂದಿರ ಗೋಪುರವು|ಅರಬ್ಬಿ ಹಿಂದೂ ಬಂಗಾಳ ಕೊಲ್ಲಿ| ಗುಡಿಯ ಪರಿಧಿಗಳು|ಹಿಂದೂ ಮುಸ್ಲಿಂ ಜೈನ ಕೈಸ್ತ| ಆಧಾರ ಸ್ಥಂಭಗಳುಜಯ ಜಯ ಭಾರತ ಎಂಬುದೇ| ಇಲ್ಲಿಯ ಮಂತ್ರದ ಘೋಷಗಳು|| ಭಿತ್ತಿ ಬಿತ್ತಿಗಳು ಸಾರುವವಿಲ್ಲಿ| ಸಾಹಸ ಕಥೆಗಳನು|ಕಲ್ಲು ಕಲ್ಲುಗಳು ಹೇಳುವವಿಲ್ಲಿ| ನಡೆದಿಹ ಹಾದಿಯನು|ಗರ್ಭ ಗುಡಿಯು ನಮ್ಮಯ ಮನಗಳು| ಬಿಡು ಸಂದೇಹವನು|ಜಯ ಜಯ ಭಾರತ ಎನ್ನುತ| ತಾಯಿ ಪಾದಕೆ ಮಣಿಯುವೆನು|| ಹೆಜ್ಜೆ ಹೆಜ್ಜೆಗೂ ಕಣ್ಮನ ಸೆಳೆಯುವ| ಶಿಲ್ಪ ಕಲೆಗಳು ಇವೆಯಿಲ್ಲಿ|ಹಂತ ಹಂತಕೂ ಸಂಸ್ಕೃತಿ ಸೌರಭ| ಸೂಸುವ ಕೊಳಗಳು ಇವೆಯಿಲ್ಲಿ|ಭಾರತೀಯರೇ ಭಕ್ತರೆಲ್ಲರೂ| ಒಂದೇ ನಾಮದ ಜಪವಿಲ್ಲಿ|ಜಯ ಜಯ ಭಾರತ ಎಂಬುದೆ ತುಂಬಿದೆ ಎಮ್ಮಯ ಮನಗಳಲಿ|| ************************

ಕಾವ್ಯಯಾನ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳ ವಿಭಾಗ

ಬಾವುಟ ಪದ್ಯ ಮಲಿಕಜಾನ ಶೇಖ ಅತ್ತ ನೋಡು ಇತ್ತ ನೋಡು ಸುತ್ತ ನೋಡು ಎತ್ತ ನೋಡುಬೀದಿ ನೋಡು ಕೇರಿ ನೋಡುನೋಡು ನೀನು ಬಾವುಟ ಮಾಡು ನೀನು ಸೆಲ್ಯೂಟ್… ಕೆಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರ ಒಂದು ನೀಲಿ ನೋಡು ಸತ್ಯ ಶಾಂತಿ ನ್ಯಾಯ ಪ್ರೀತಿತ್ಯಾಗ ಶೌರ್ಯ ನೀತಿ ಮೌಲ್ಯಐಕ್ಯ ಒಂದು ಪ್ರತೀಕ ನೋಡು  ಪರತಂತ್ರವ ಕಳಚಿ ಬಿಟ್ಟುಸ್ವಾತಂತ್ರವ ಮೆರೆಸಿ ಕೊಟ್ಟುದೇಶದೊಂದು ಪ್ರತೀಕ ನೋಡು ಮೆಡಂ ಕಾಮಾ ಹಾರಿಸಿದಭಗತ ಗುರು ಪ್ರೇಮಿಸಿದಗಾಂಧೀನೆಹರು ಪ್ರೀತಿಸಿದ ಪ್ರತೀಕ ನೋಡು ಹಲವು ಭಾವ ಹಲವು ಭಾಷೆಹಲವು ಬಣ್ಣ ಹಲವು ವೇಷಎಲ್ಲರೊಂದು ಪ್ರತೀಕ ನೋಡು 

ಮಕ್ಕಳ ವಿಭಾಗ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹುಳುಕ ಹೂರಣದ ಹೋಳಿಗೆ ತೋರಣ ‘ರಾಯಕೊಂಡ’ ಕರಣಂ ಪವನ ಪ್ರಸಾದರ ಬಹುನಿರೀಕ್ಷಿತ ಕಾದಂಬರಿ. ಕಾನ್ಕೇವ್ ಪ್ರಕಾಶನ ಇದನ್ನು ಪ್ರಕಟಿಸಿದೆ. ನನ್ನಿ, ಗ್ರಸ್ತ, ಕರ್ಮ ಕಾದಂಬರಿಗಳನ್ನು, ಕರಣಂ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು. ಅವರೇ ಹೇಳಿಕೊಂಡಂತೆ ಇದು ಡಾರ್ಕ್ ಹ್ಯೂಮರ್ ಪ್ರಕಾರಕ್ಕೆ ಸೇರುವ ಕಾದಂಬರಿ. ಈ ವಿಭಾಗವು ಸಾಮಾನ್ಯವಾಗಿ ನಿಷೇಧವೆಂದು ಭಾವಿಲ್ಪಡುವ ವಿಷಯದ ಬೆಳಕನ್ನು ಚೆಲ್ಲುತ್ತದೆ. ವಿಶೇಷವಾಗಿ ಗಂಭೀರ ಅಥವಾ ವಿಷಾದದಿಂದ ಕೂಡಿದ ವಿಷಯಗಳನ್ನು ಕಪ್ಪು ಹಾಸ್ಯದ ಮಾದರಿಯಲ್ಲಿ ಚರ್ಚಿಸುತ್ತದೆ. ಎಂ. ವ್ಯಾಸರ ಕಪ್ಪು ದರ್ಶನದ ಕಥೆಗಳೇ ಬೇರೆ, ಅದನ್ನು ಇಲ್ಲಿ ಚರ್ಚಿಸದೇ ಮುಂದಕ್ಕೆ ಹೋಗೋಣ ( ಕಾದಂಬರಿಯಲ್ಲಿಯೂ ನಿರೂಪಕರು ಇದೇ ಧಾಟಿಯಲ್ಲಿ ಸಾಗುತ್ತಾರೆ). ಈ ಕಾದಂಬರಿಯ ಕೊನೆಕೊನೆಗೆ ಸ್ವಲ್ಪ ಈ ಡಾರ್ಕ್ ಹ್ಯೂಮರ್ ನ ಫೀಲಿಂಗ್ ಆಗುತ್ತದೆ. ಅದೇನೇ ಇರಲಿ, ಒಟ್ಟು ಹತ್ತು ಅಧ್ಯಾಯಗಳಲ್ಲಿ ಈ ಕೃತಿ ಹರಡಿಕೊಂಡಿದೆ. ಕಥೆಗಳ ತೋರಣಕ್ಕೂ ಮುನ್ನ ಪಾತ್ರಗಳ ಸಂಬಂಧ ಸೂಚಿಯಿದೆ. ಗೋಪಾಲಕೃಷ್ಣ ಪೈಗಳ ಸ್ವಪ್ನ ಸಾರಸ್ವತ ಮತ್ತು ನಾ. ಮೊಗಸಾಲೆ ಅವರ ‘ ಉಲ್ಲಂಘನೆ’ ಕಾದಂಬರಿಯಲ್ಲಿ ಇದನ್ನು ನಾವು ಕಾಣಬಹುದು. ಮಿರ್ಜಿ ಅಣ್ಣಾರಾಯರ ‘ ನಿಸರ್ಗ’ , ಎಸ್. ಎಲ್ ಭೈರಪ್ಪನವರ ‘ಅನ್ವೇಷಣೆ’ ಆಗಾಗ ನೆನಪಾಗುತ್ತದೆ. ಭೈರಪ್ಪನವರು ಪರ್ವದಲ್ಲಿ ಪಾತ್ರಗಳ ಮುಖೇನ ಮಹಾಭಾರತವನ್ನು ಹೇಳುವ ಧಾಟಿಯಲ್ಲಿ ರಾಯಕೊಂಡದ ನಿರೂಪಣೆಯಿದೆ. ರಾಯಕೊಂಡದ ಮೂಲಕ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದ ಪ್ರಾದೇಶಿಕ ಸೊಗಡನ್ನು ತುಂಬಾ ಚೆನ್ನಾಗಿ ಪವನ ಪ್ರಸಾದರು ಕಟ್ಟಿಕೊಟ್ಟಿದ್ದಾರೆ. ಆದರೆ ತೆಲುಗು ಲವಲೇಶವೂ ಗೊತ್ತಿಲ್ಲದವರಿಗೆ ಸಂಭಾಷಣೆಗಳು ತೊಂದರೆಕೊಡುತ್ತವೆ. ಅಮ್ಮಿ ಅತ್ತೆ, ಕಿಟ್ಟಪ್ಪ, ಚಿರತೆ ಪದ್ದಣ್ಣ ಪಾತ್ರಗಳ ಪೋಷಣೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಗುಂಡ ಮತ್ತು ಸೂಜಿ ; ಅದೇ ಅದೇ ಸಲಿಂಗ ಕಾಮ ಮತ್ತು ಅನೈತಿಕ ಸಂಬಂಧಗಳ ಕಥೆಗಳು. ಮತ್ತೆ ಮಧು ಪಾತ್ರ ಅದೇ ಕೆಲಸ ಮಾಡುತ್ತದೆ. ಪಾತ್ರಗಳ ಮೂಲಕ ಹೇಳಿಸಲಾಗದ ಅಭಿಪ್ರಾಯ, ನಿಲುವನ್ನು ನಿರೂಪಕ ಮುಂದೆ ನಿಂತು ಹೇಳುವುದು ಅಭಾಸ ಎನ್ನಿಸುತ್ತದೆ. ಮದುವೆಯಾಗದ ಹೆಣ್ಣುಮಕ್ಕಳನ್ನು ಕಾದಂಬರಿಯುದ್ದಕ್ಕೂ ಚಿತ್ರಿಸಿರುವ ರೀತಿಯ ಬಗ್ಗೆ ವಿಮರ್ಶಕರೇ ಬೆಳಕು ಚೆಲ್ಲುವುದು ಉಚಿತವೇನೋ! ಹೆಣ್ಣಿನ ಕುರಿತು ಕೆಲವು ಸಾಲುಗಳು ಡಿಸ್ಟ್ರಿಕ್ಟಿವ್ ಧಾಟಿಯಲ್ಲಿವೆ ಎಂಬ ಭಾವನೆ ಮೂಡದಿರದು. ತೆಲುಗು ರಾಜಕೀಯದ ರಕ್ತಸಿಕ್ತ ಅಧ್ಯಾಯ ಕಟ್ಟಿಕೊಡುವ ಪ್ರಯತ್ನ ಕೂಡ ಗಾಢವಾಗಿಲ್ಲ ಎಂದು ಪುಸ್ತಕ ಕೆಳಗಿಟ್ಟ ಮೇಲೆ ಭಾಸವಾಗುತ್ತದೆ. ಆದರೂ ಕರಣಂ ಅವರ ಹೊಸ ಪ್ರಯತ್ನವನ್ನು ಶ್ಲಾಘಿಸಲು ಭಾಷೆಯ ಪ್ರಯೋಗ, ಪಾತ್ರ ಚಿತ್ರಣ, ಕುಟುಂಬದ ಮಜಲುಗಳನ್ನು ತೆರೆದಿಡುವ ರೀತಿ ಸಾಕು. ಒಟ್ಟಾರೆ ಕಾದಂಬರಿಯಾಗಿ ಸರಾಗವಾಗಿ ಓದಿಸಿಕೊಳ್ಳುವುದಿಲ್ಲವಾದರೂ, ಒಂದೆಡೆ ಸಿಗುವ ಕಥಾಗುಚ್ಛದ ಪರಿಣಾಮವನ್ನು ಬೀರಲು ಕಾದಂಬರಿಯು ಯಶಸ್ವಿಯಾಗುತ್ತದೆ.ಭೂಪತಿ ಶ್ರೀನಿವಾಸನ್ ಉತ್ತಮ ಮುಖಪುಟ ವಿನ್ಯಾಸ ಮಾಡಿದ್ದಾರೆ. ಪ್ರಕಾಶಕರು ಎರಡನೇ ಮುದ್ರಣಕ್ಕೆ ಮುನ್ನ ಸಾಕಷ್ಟಿರುವ ಅಕ್ಷರ ದೋಷಗಳನ್ನು ತಿದ್ದುಪಡಿ ಮಾಡಿಸುವುದು ಒಳ್ಳೆಯದು. ಕಾದಂಬರಿ ಪ್ರಕಾರವನ್ನು ಇಷ್ಟಪಡುವ, ಧಾರಾವಾಹಿಗಳನ್ನು ಮೆಚ್ಚುವ ಜನರು ಒಮ್ಮೆ ಓದಲೇಬೇಕಾದ ಪುಸ್ತಕವಿದು. *********************** – ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

You cannot copy content of this page

Scroll to Top