ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಣ್ಣೀರಿಗೆ ದಂಡೆ ಸಾಕ್ಷಿ

ನಾಗರಾಜ ಹರಪನಹಳ್ಳಿ

-೧-
ಬೀಜಕ್ಕೆ ನೆಲವಾದರೇನು
ಗೋಡೆಯ ಬಿರುಕಾದರೇನು
ಬೇಕಿರುವುದು
ಒಂದು ಹಿಡಿ ಮಣ್ಣು, ಹನಿಯಷ್ಟು ನೀರು

-೨-

ನದಿ
ಯಾರಿಗೆ ತಾನೇ ಬೇಡ

-೩-
ನದಿ ಎಷ್ಟೇ ಕವಲಾಗಿ ಹರಿದರೂ
ಕೊನೆಗೆ ಸೇರುವುದು ಕಡಲನ್ನೇ

-೪-
ಕೋಣೆ
ನಿಟ್ಟುಸಿರಿಗೆ ಫ್ಯಾನ್
ಗಾಳಿ ಹಾಕಿದೆ

-೫-
ಅವಳು
ನೆರಳಾಗಿದ್ದಳು ಕನ್ನಡಿಯಲ್ಲಿ
ಈಗ
ಅದಕ್ಕೂ ವಿರಹ

-೬
ಅಲೆಗಳ ಕಣ್ಣೀರಿಗೆ
ದಂಡೆ ಸಾಕ್ಷಿ

-೭-
ಕಾಯುವುದು ಎಂದರೆ
ಎದೆಯೊಳಗೆ
ಕನಸುಗಳ ಬಿತ್ತುವುದು

-೮-
ಸಹನೆ ಇದೆಯಾ
ಹಾಗಾದರೆ ;
ನಾಳೆಯೂ ಇದೆ

-೯-
ಆಸೆಯ ಬೆನ್ನು ಹತ್ತು
ಸಂಚುಗಳ
ಅರ್ಥಮಾಡಿಕೊ
ದಾರಿ ಹೊಳೆದೀತು

-೧೦-ಬದುಕಿನ ಅಂತಿಮ‌ ಸತ್ಯ
ಏನು
ಏನು
ಏನು
ಏನು ಅಂದರೆ
ಬಯಲಲ್ಲಿ ಬಯಲಾಗು
************************************************

About The Author

4 thoughts on “ಕವಿತೆ”

  1. ಮಳೆಯ ನಂತರದ ತೇವದ ಅನುಭವ…
    ಕೆಲವನ್ನು ಬಿಡಬಹುದು …ಉದಾ…ನದಿ ಕಡಲನ್ನು ಸೇರುವುದು

  2. ನಾಗರೇಖಾ ಗಾಂವಕರ

    ಒಂದು ಏಳು ಎಂಟು ಒಂಬತ್ತು ಹತ್ತು ಬಹಳ ಅರ್ಥಪೂರ್ಣ

Leave a Reply

You cannot copy content of this page

Scroll to Top