ವಾರದ ಕವಿತೆ
ಕವಿತೆ ನಿದ್ದೆ ಬರುತ್ತಿಲ್ಲ! ಕಾತ್ಯಾಯಿನಿ ಕುಂಜಿಬೆಟ್ಟು ನಿದ್ದೆ ಬರುತ್ತಿಲ್ಲ!ಆದರೆ…ನಿದ್ದೆ ಮಾಡದಿದ್ದರೆಒಳಗಿರುವ ಆತ್ಮಿಣಿ ಅಲಂಕರಿಸಿಕೊಂಡುಶತಪಥ ಸುತ್ತುತ್ತಾಳೆ ಪಂಜರದ ಗಿಳಿಯಂತೆಹೊರಹಾದಿ ಅರಸುತ್ತ! ಆಗ…ಪಕ್ಕದಲ್ಲಿರುವ ಪುರುಷಾಕಾರಲಂಘಿಸಿ ರಾವಣನಾಗುತ್ತದೆನನ್ನನ್ನು ಅಪಹರಿಸಿ ಅಶೋಕವನದಲ್ಲಿಡಲು!ಅಥವಾ…ಗುಟುರು ಹಾಕುತ್ತ ರಕ್ಕಸನಾಗುತ್ತದೆಹೊತ್ತೊಯ್ದು ಏಳುಕೋಟೆಯೊಳಗೆಬಂಧಿಸಿಡಲು! ನಿದ್ದೆಯೇ ಬಾರದಿದ್ದರೆನಾನು ಸೀತೆಯಾಗಬೇಕಾಗುತ್ತದೆ!ಆಗ…ಕನಸುಗಳನ್ನು ಹತ್ತುತಲೆಗಳಇಪ್ಪತ್ತು ಕಣ್ಣುಗಳುನೋಟದಲ್ಲೇ ಬೂದಿ ಮಾಡುತ್ತವೆಹತ್ತು ಮೂಗುಗಳು ಇಪ್ಪತ್ತು ಕಿವಿಗಳುಕಿಟಕಿ ಕಿಂಡಿಗಳಾಗಿಹೋದೆಯ ಪಿಶಾಚಿ ಎಂದರೆಬಂದೆ ನಾ ಗವಾಕ್ಷಿಯಲ್ಲಿ! ಎಂದರಚುತ್ತಹತ್ತು ದಳಬಾಯಿಗಳುಕೋಟೆಯ ಮಹಾದ್ವಾರಗಳಾಗಿಅಶೋಕವನದ ಮರಗಳನ್ನುಹೊರದೂಡುತ್ತವೆಅವು ಎಲೆಗಳ ಕಣ್ಣುಗಳನ್ನುಗಾಳಿಗೆ ಮುಚ್ಚಿ ತೆರೆಯುತ್ತಕಣ್ಸನ್ನೆಯಲ್ಲೇಕೋಟೆಯ ಹೊರಗಿಂದಲೇಬಾ ಬಾ ಎಂದು ಬಳಿಕರೆಯುತ್ತವೆ ಶೋಕಿಸಲು ಅಶೋಕವನದಆ ಮರ ಇಲ್ಲವಾದರೆಸೀತೆ ಸೀತೆಯೇ ಅಲ್ಲ!ರಾಮರಾಮರಾಮರಾ… ಎನ್ನುತ್ತಶೋಕಿಸಲು ಹೆಣ್ಣಿಗೆರಾಮನಂಥದ್ದೇ ಮರವೂ ಬೇಕು… ಕಾರಣ!ರಾವಣನಂಥ ಕೋಟೆಯೂ… ಪರಿಣಾಮ! ಒಂದುವೇಳೆ ಸೀತೆಯಾಗದಿದ್ದರೆ…ಏಳುಸುತ್ತಿನ ಕೋಟೆಯಲ್ಲಿ ರಾಕ್ಷಸಸೆರೆಹಿಡಿದ ಅನಾಮಿಕ ರಾಜಕುಮಾರಿಯಂತೆಒಳಗೇ ಬಾಯ್ಬಿಟ್ಟು ರೋಧಿಸುತ್ತಆತ ಏಳು ಕಡಲಾಚೆ ಗಿಳಿಯೊಳಗೇ ತನ್ನ ಜೀವವನ್ನುಬಚ್ಚಿಟ್ಟು ಮೊಸಳೆಯಂತೆ ಕೋಟೆಬಾಗಿಲಲ್ಲೇ ನಿದ್ರಿಸುವಾಗನಿದ್ದೆಯೇ ಬಾರದ ನಾನುಇದುವರೆಗೂ ಕಣ್ಣಲ್ಲೇ ಕಂಡಿರದ ರಾಜಕುಮಾರನನ್ನುಕಾಯುತ್ತ ಕಂಬನಿಯ ಕಡಲಲ್ಲಿಬಂಡೆಯಂತೆ ಈಜುತ್ತಿರಬೇಕು!ಅಜ್ಜಿಯು ಬೊಚ್ಚುಬಾಯಲ್ಲಿ ಕಟ್ಟಿದ ದಂತಕತೆಯಲ್ಲಿ ಉಳಿಯುವ ನಾಸ್ತಿತ್ವದಅನಾಮಧೇಯ ಪಾತ್ರವದು! ನಿದ್ದೆಯೇ ಬಾರದಿದ್ದರೆ…ಏನಾದರೊಂದು ಆಗಲೇಬೇಕಾಗುತ್ತದೆ!ರಾಮಾಯಣದ ಸೀತೆಯಾದರೆಕೋಟೆಯಾಚಿನ ಅಶೋಕವನದಲ್ಲಿಇಡೀ ಲೋಕಕ್ಕೇ ಕಾಣುವ ಹಾಗೆರಾಮಾ ರಾಮಾ ಸೀತಾರಾಮಾ ಎಂದುಬಾಯ್ಬಿಟ್ಟು ಎದೆಬಡಿದು ರೋಧಿಸುತ್ತಮಹಾನಾರೀ ಪತಿವೃತಾಶಿರೋಮಣಿಯಂತೆಕೊರಳ ತಾಳಿ ಹೆರಳ ಚೂಡಾಮಣಿಯನ್ನುಪದೇ ಪದೇ ಕಣ್ಣಿಗೊತ್ತಿಕೊಳ್ಳುತ್ತಅಶೋಕವನದ ನೆರಳಲ್ಲಿಶೋಕ ಕವನವಾಗಬಹುದುಸೀತೆಯ ಕವನ!ಆದರೆ ಶೀರ್ಷಿಕೆ… ಸೀತಾಯಣವಲ್ಲ ರಾಮಾಯಣ!ರಾಮಾಯಣದ ಸೀತೆ… ಗಂಡು ವಾಲ್ಮೀಕಿನುಡಿಸಿದಂತೆ ನುಡಿಯುವ ಹೆಣ್ಣು ಸೀತೆ!ರಾಮನು ಗೆದ್ದ ಸೊತ್ತು ಸೀತೆ!ರಾಮಾ ರಾಮಾ ಅನ್ನುತ್ತಲೇ ಹೋಮಾಗ್ನಿ ಸುತ್ತಿಅಯೋಧ್ಯಾ ಪ್ರವೇಶಅಲ್ಲಿಂದ ವನಪ್ರವೇಶ… ಕಾಡ್ಗಿಚ್ಚು!ಅಲ್ಲಿಂದ ಲಂಕಾಗ್ನಿಅಗ್ನಿಯಿಂದ ಅರಮನೆಅರಮನೆಯಿಂದ ಕಾನನಕಾನನದಿಂದ ಅವನಿ..ಕಾವ್ಯದಿಂದ ಕಾವ್ಯ… !ಅಗ್ನಿ ತಪ್ಪುವುದೇ ಇಲ್ಲ! ಮಂಥರೆಯ ಜಲಪಾತ್ರೆಯಲ್ಲೇಚಂದ್ರನನ್ನು ಪಡೆದು ರಾಮಚಂದ್ರನಾದವನಿಗೆಬಾಳಿಡೀ ಸುಳ್ಳಲ್ಲೇ ನಿಜದ ಭ್ರಮೆ!ನಿದ್ದೆಯೇ ಬಾರದಿದ್ದರೆ…ಭ್ರಮಾಯಣವೇ ಶುರುವಾಗುತ್ತದೆ!ಸೀತೆ ಮಿಥಿಲೆಯ ಜನಕನ ನೇಗಿಲ ಬಾಯಿಗೆ ಸಿಕ್ಕುಕೊನೆಗೆ ರಾಮನ ಬದಿಯಲ್ಲಿ ಸ್ಥಾಪಿತ ಮೂರ್ತಿಯಾಗಿಸುಳ್ಳಲ್ಲೇ ನಿಜವಾಗುತ್ತಾಳೆ…ಅಶ್ವಮೇಧ ಯಾಗದ ಹೊಗೆಯಲ್ಲಿನಹುಷ ಯಯಾತಿ ಪುರುವಂಶದಯುದ್ಧ ಹಿಂಸೆಗಳ ನೆತ್ತರ ಪುಣ್ಯತೀರ್ಥದಲ್ಲಿಮಿಂದು ಗಂಗೆಯಾಗುತ್ತಾಳೆ! ನಿದ್ದೆಯೇ ಬರುತ್ತಿಲ್ಲ!ಓಹ್! ಏನಾಶ್ಚರ್ಯ! ಅಗ್ನಿ! ಅಗ್ನಿ!ವಾಲ್ಮೀಕಿ ರಾಮಾಯಣದಅಗ್ನಿಕುಂಡದ ಅಗ್ನಿದಿವ್ಯದಿಂದೆದ್ದ ಸೀತೆಯು…ಕುವೆಂಪು ರಾಮಾಯಣದರ್ಶನಂನಹೊಸದರ್ಶನದ ಅಗ್ನಿಯೊಳಗೆರಾಮನೊಂದಿಗೇ ಪ್ರವೇಶಿಸಿಅವನು ಅವಳು ಬೇಧವಳಿದುಎದೆಯ ಅಗ್ನಿಕುಂಡದಿಂದೆದ್ದು ಬಂದೇಬಿಟ್ಟರಲ್ಲ! ಅದ್ವೈತ! ಇನ್ನಾದರೂ ನಿದ್ದೆ ಮಾಡಬೇಕು!ಅಯ್ಯೋ! ನನ್ನ ಎದೆಯನ್ನೇ ಸೀಳಿಕೊಂಡು ಹೊರಹೊಮ್ಮುತ್ತಿದೆತುಂಬು ಬಸುರಿಯ ಅರಣ್ಯರೋಧನ!ರಾಮದೇವರೇ!ಉತ್ತರ ರಾಮಚರಿತಕ್ಕೆ ಉತ್ತರ?ಅಲ್ಲೇ ನಿಲ್ಲು ಸೀತೇ!ಹೆಣ್ಣಿನ ಪಾತ್ರವನ್ನು ಇನ್ನು ಹೆಣ್ಣೇ ಬರೆಯಬೇಕು! ***********************************









