ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಾಕ್ಡೌನ್ ಬೇಡಿಕೆ

ಗಣೇಶ್ ಭಟ್ ಸಮೂಹ ಸನ್ನಿಯಾಗುತ್ತಿರುವ ಲಾಕ್ಡೌನ್ ಬೇಡಿಕೆ ಕೊರೊನಾ ವೈರಸ್ ಹಾವಳಿಯ ಕುರಿತಾದ ಭಯದಿಂದಾಗಿ ಲಾಕ್ಡೌನ್ಗಾಗಿ ಒತ್ತಾಯ ಪ್ರಾರಂಭವಾಗಿದೆ.ಲಾಕ್ಡೌನ್ನಿಂದಾಗಿ ಕೊರೊನಾ ಪಿಡುಗನ್ನು ಹೋಗಲಾಡಿಸಬಹುದೆಂಬುದಕ್ಕೆ ಯಾವುದೇ ಆಧಾರವಿಲ್ಲ. 10, 20 ಅಥವಾ ಇನ್ನೂ ಎಷ್ಟೇ ವಾರಗಳ ಸಂಪೂರ್ಣ ಲಾಕ್ಡೌನ್ನಂತರವೂ ಜನರ ಓಡಾಟ ಪ್ರಾರಂಭವಾದಾಗ ವೈರಸ್ನ ಹಬ್ಬುವಿಕೆ ಒಮ್ಮೆಲೇ ಹೆಚ್ಚುವುದು ಸಹಜವೆಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.ಕೇಂದ್ರ ಸರ್ಕಾರ ರಚಿಸಿದ ತಜ್ಞರ ತಂಡ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಭಾರತದಲ್ಲಿ ಲಾಕ್ಡೌನ್ ವಿಧಿಸದಂತೆ ಕಳೆದ ಫೆಬ್ರುವರಿಯಲ್ಲಿ ಸಲಹೆ ನೀಡಿತ್ತು. ಮೇ ತಿಂಗಳಿನಲ್ಲಿ ಲಾಕ್ಡೌನ್ – ವಿಸ್ತರಿಸುವ ಮೊದಲು ಕೂಡಾ ಇದನ್ನೇ ಪುನರುಚ್ಚರಿಸಿತ್ತು.ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೊರೊನಾ ನಿಯಂತ್ರಣಕ್ಕೆ ಇರುವ ಸರಳದಾರಿ. ಕೊರೊನಾ ಕುರಿತಾದ ಅತಿಯಾದ ಭಯವೇ ವೈರಾಣುವಿಗಿಂತ ಹೆಚ್ಚಿಗೆ ಅಪಾಯಕಾರಿ. ಅತಿಯಾಗಿ ಭಯಗ್ರಸ್ತನಾದ ವ್ಯಕ್ತಿಯ ದೇಹದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಗಳು ರೋಗ- ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಅತಿಯಾದ ಭಯದಿಂದ ಉಂಟಾಗುವ ಮಾನಸಿಕ ಒತ್ತಡವು ಹೃದಯಸ್ತಂಭನ ಅಥವಾ ಇತರೆ ಅಪಾಯಕಾರಿ ಪರಿಣಾಮಗಳನ್ನುಂಟು ಮಾಡುತ್ತದೆಂದು ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ. ಕಾಲುದಿನ, ಅರ್ಧ ದಿನ ಲಾಕ್ಡೌನ್ ಮುಂತಾದ ಕ್ರಮಗಳಿಂದಾಗಿ ಜೀವನಾವಶ್ಯಕ ವಸ್ತುಗಳನ್ನು ಕೊಳ್ಳಲು ಜನರು ಪೇಚೆಗೆ ಧಾವಿಸುತ್ತಾರೆ. ದಿನವಿಡೀ ನಡೆಯುತ್ತಿರುವ ವ್ಯವಹಾರ. ಸೀಮಿತ ಅವಧಿಗೆ ಮೊಟಕುಗೊಂಡಾಗ ಜನರು ಖರೀದಿಗೆ ಮುಗಿಬೀಳುತ್ತಾರೆ, ಮಾರುಕಟ್ಟೆಯಲ್ಲಿ ಅತಿಯಾದ ನೂಕುನುಗ್ಗಲು ಉಂಟಾಗುತ್ತದೆ. ಇದರಿಂದಾಗಿ ಪರಸ್ಪರ ಭೌತಿಕ ಅಂತರ ಕಾಪಾಡಿಕೊಳ್ಳುವದೂ ಸಾಧ್ಯವಾಗುವುದಿಲ್ಲ. ಜನರ ಮನದಲ್ಲಿ ಅನಗತ್ಯವಾಗಿ ಆತಂಕ ಸೃಷ್ಟಿಗೂ ಕಾರಣವಾಗುತ್ತದೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಕಳೆದ ಐದು ತಿಂಗಳುಗಳಿಂದ ಯಾವುದೇ ರಕ್ಷಾ ಕವಚಗಳಿಲ್ಲದೇ ದಿನವಿಡೀ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ವಿದ್ಯುತ್ ವಿತರಣಾ ವ್ಯವಸ್ಥೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು,ಮಾಧ್ಯಮ ಪ್ರತಿನಿಧಿಗಳು,ಪತ್ರಿಕಾ ವಿತರಕರು,ಪೋಲೀಸರು, ಹಾಲು ಮುಂತಾದ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವವರ ಧೈರ್ಯ, ಆತ್ಮವಿಶ್ವಾಸಗಳಳು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು. ಇವರೆಲ್ಲರೂ ನಮ್ಮೊಂದಿಗೆ,ನಮ್ಮಸುತ್ತಮುತ್ತಲೇ ಬದುಕಿತ್ತಿದ್ದಾರೆ,ಅವರೂ ನಮ್ಮಂತೆಯೇ ಮನುಷ್ಯರು ಎಂಬುದನ್ನು ಮರೆಯಬಾರದು.ಮಧ್ಯಾಹ್ನ 2 ಗಂಟೆಯ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದೇ ನಂತರವೇ ಓಡಾಟ ಪ್ರಾರಂಭಿಸಲು ಕೊರೊನಾ ವೈರಸ್, ಸಾಕು ಪ್ರಾಣಿಯಲ್ಲ. ಕತ್ತಲೆಯಾದ ನಂತರ ಬೀದಿಗಳಲ್ಲಿ ಸಂಚರಿಸಲು, ಕೊರೊನಾ ಕಾಡಿನಿಂದ ಓಡಿ ಬಂದ ಚಿರತೆಯೂ ಅಲ್ಲ.ಅರೆಬರೆ ಮಾಹಿತಿ, ಮಾಧ್ಯಮಗಳ ಬೇಜವಾಬ್ದಾರಿ ಉತ್ಪ್ರೇಕ್ಷೆ, ಆಧಾರಹೀನ ಭಯಗಳಿಂದ ಪ್ರೇರಿತರಾಗಿ ಮಂಡಿಸಲ್ಪಡುತ್ತಿರುವ ಲಾಕ್ಡೌನ್ ಬೇಡಿಕೆಗೆ, ಒತ್ತಡಕ್ಕೆ, ಕೊರೊನಾ ಕುರಿತಾದ ಅನಗತ್ಯ ಭಯ, ಆತಂಕಕ್ಕೆ ಒಳಗಾಗದೇ, ಸಮೂಹಸನ್ನಿಗೆ ಸಿಲುಕದೇ, ಆತ್ಮವಿಶ್ವಾಸದಿಂದ ಬದುಕುವ ದಾರಿಯಲ್ಲಿ ಸಾಗೋಣ. ಸೂಕ್ತ ಆಹಾರ ಕ್ರಮ, ಯೋಗ, ಧ್ಯಾನ, ಧನಾತ್ಮಕ ಯೋಚನೆಗಳು ದೈವ ಚಿಂತನೆ, ಶೃದ್ಧೆಯಿಂದ ಇದು ಸಾಧ್ಯ. ಕೊರೊನಾ ಕುರಿತು ಜಾಗೃತಿ ಇರಲಿ, ಭಯ ಪಡುವುದು ಬೇಡ, ಭಯ ಹಬ್ಬಿಸುವುದೂ ಬೇಡ… *************

ಲಾಕ್ಡೌನ್ ಬೇಡಿಕೆ Read Post »

ಕಾವ್ಯಯಾನ, ಗಝಲ್

ಗಝಲ್

ರತ್ನರಾಯ ಮಲ್ಲ ಕೋಟೆಯಲ್ಲಿ ಕುಂತಿರುವೆ ಬರುವವರೆಲ್ಲ ಬಂದುಬಿಡಿಹಸಿವಿನಿಂದ ಬಳಲುತಿರುವೆ ತಿನ್ನುವವರೆಲ್ಲ ತಿಂದುಬಿಡಿ ಬುದ್ಧಿಮಾತುಗಳು ಬುದ್ಧಿಭ್ರಮಣೆಯಲಿ ಕೊಳೆಯುತಿವೆಜೋಳಿಗೆಯು ಹರಿದಿದೆ ನೋಟುಗಳಿಂದ ತುಂಬಿಸಿಬಿಡಿ ಭೂಷಣವಾಗಿದ್ಧ ನಾಚಿಕೆಯ ಪರದೆಯನ್ನು ಎಸೆದಿರುವೆನೀವು ಬಂದ ಕೆಲಸವನ್ನು ಮುಗಿಸಿಕೊಂಡು ಹೋಗಿಬಿಡಿ ಪೂಜೆ-ಪುನಸ್ಕಾರದ ಜೊಳ್ಳು ಮೌಲ್ಯಗಳು ಬೇಡವಾಗಿವೆನಮ್ಮ ಪಾಡಿಗೆ ನಮಗೆ ಸುಖವಾಗಿ ಇರಲು ಬಿಟ್ಟುಬಿಡಿ ಹಸಿಮಾಂಸ ತಿನ್ನುವ ರಣಹದ್ದುಗಳ ಪರಪಂಚವಿದುಅನ್ನ ತಿನ್ನುವುದನ್ನು ಕಲಿತು ನೆಮ್ಮದಿಯಾಗಿ ಇದ್ದುಬಿಡಿ **************

ಗಝಲ್ Read Post »

ಕಾವ್ಯಯಾನ

ಶೂನ್ಯದುಂಗುರ….

ಶಿವಲೀಲಾ ಹುಣಸಗಿ ಅರಿವಿಗೆ ಬಾರದ ಕ್ಷಣ ನೆನೆದುಭಯದ ನಡುವೆ ನಲುಗುತಿವೆಹಿಂಡಿ ಹಿಪ್ಪೆಯಾದ ಮನಗಳುಆದ್ರತೆಗೊಂದು ಭದ್ರತೆಯಿಲ್ಲದೆಅಂಜಿಕೆಯ ಹಿನ್ನೋಟ ತಲೆ ಕೆಳಗೆಬಿಂಬಗಳ ಮೆಲುಕಿನ ಶರಣಾಗತಿಗೊತ್ತು ಗುರಿಯಿಲ್ಲದ ಮೌನಕೆಕೊರಳೊಡ್ಡಿ ನೇಣಿಗೇರಿದವರೆಲ್ಲಥಟ್ಟನೆ ಪ್ರತ್ಯಕ್ಷವಾದ..ಪ್ರೇತಾತ್ಮದಂತೆನರಕಗಳು ಅಂತಸ್ತಿನ ಅರಮನೆಯಉತ್ಸವ ಮೂರ್ತಿಗಳಾಗುವಾಗೆಲ್ಲಬಿಕ್ಕಳಿಕೆಗಳು,ನೀರಿಳಿಯದಾ ಗಂಟಲಲ್ಲಿಉಸಿರ ಬಿಗಿದಾಟಕೆ ಹರಕೆಯ ಜಪತಪನೆತ್ತಿಗಾದ ಗಾಯಕೆ ಸುಣ್ಣದಾ ಶೂಚಿತ್ತದಲ್ಲಿ ಮೂಡಿದ ನಕ್ಷತ್ರಗಳೆಲ್ಲವೂಬಾನ ಹುಡುಕಿ ಹೊರಟಂತೆಮಾನಗಳೆಲ್ಲ ಬಿಕರಿಯಾಗಿಹವುಮಾರುಕಟ್ಟೆಗೂ ಲಗ್ಗೆಯಿಡದೆಸಂದಿಗೊಂದಿಗಳಲ್ಲಿ ಅಡಗಿರುವಗಿರಾಕಿಗಳಿಗೇನು ಕೊರತೆಯಿಲ್ಲಮಾಂಸದ ಮುದ್ದೆ ಯಾವುದಾರೇನುಹರೆಯದಲಿ ಮಾಗಿರಬೇಕು ಅಷ್ಟೇತುಟಿಕಚ್ಚಿ ನರಳುವಾಗೆಲ್ಲ ಟೊಂಕದಾಡಾಬು ಸಡಿಲವಾಗಿ ಕಳಚಿದಂತೆಮನಸಿಗೆ ರುಚಿಸದಿದ್ದರು ಲೋಭವಿಲ್ಲದೇಹದಂಗಗಳಿಗೆ ಮೋಹದ‌ ಉಡುಗೊರೆಇಳೆಯ ಸೇರುವ ಕಾಯ ನಿರ್ಮೊಹಿಮಣ್ಣಾದವರ ಚರಿತ್ರೆ ಅರಹುವವರಿಲ್ಲಸಾವು…ಎಂದೆಂದಿಗೂ ಸಾವೇನಿರಾಂತಕ,ನಿರಾಕಾರಕ್ಕೆ ಮುನ್ನುಡಿದಿಕ್ಕುಗಳ ಒಗ್ಗೂಡಿಸಿ ಐಕ್ಯವಾದಂತೆಶೂನ್ಯದುಂಗುರವ ತೊಡಿಸಿದಂತೆ *******

ಶೂನ್ಯದುಂಗುರ…. Read Post »

ಕಾವ್ಯಯಾನ

ನಾನೋರ್ವ ಕವಿ

ಪ್ರಕಾಶ್ ಕೋನಾಪುರ ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕಅಕ್ಷರಗಳ ಅಭ್ಯಾಸದಲಿ ರೂಪಕಗಳಮೋಹಪಾಶದಲಿ ಪ್ರತಿಮೆಗಳ ಪೇರಿಸಿಭಾವಸನ್ನೀಯಲ್ಲೀ ತೇಲಾಡುವ ಕವಿ ಮೊಗ್ಗು ಹೂ ಹಣ್ಣು ದುಂಬಿ ತರುಲತೆಕಾಗೆ ಗುಬ್ಬಿ ಗಿಳಿವಿಂಡು ಪಾರಿವಾಳಮೊಲ ಹಸು ಕರು ನಾಯಿ ನರಿ ಕುರಿ ತೋಳನದಿ ಬೆಟ್ಟ ಕಾನನ ಸೂರ್ಯ ಚಂದ್ರ ಆಕಾಶಬೈಗು ಬೆಳಗು ಸೃಷ್ಟಿಯ ಸೊಬಗು ವರ್ಣಿಸಿ ವರ್ಣಿಸಿಕವಿತೆಗಳ ಮಹಾಪೂರವೇ ಹರಿಸಿಯಾಯ್ತು ಹೆಣ್ಣಿನ ಮೂಗು ತುಟಿ ಕಟಿ ಕದಪು ಮುಂಗುರುಳುಎದೆಕಳಸ ನಾಭಿ ನಡ ನೀತಂಬ ಕೋಮಲ ಪಾದಪಡುವ ಪಾಡು ತ್ಯಾಗ ಸಹನೆ ಬಾಳುಗೋಳುಹೆರಳು ತುರುಬು ಮುಡಿಗೆ ಮುಡಿಪ ಹೂಸೌಂದರ್ಯ ಬಣ್ಣಿಸಿ ಬರೆದ ಕವಿತೆಗಳ ಸಾಲುಬತ್ತದ ಕಾವ್ಯದ ಒರತೆ ನಿತ್ಯ ಹರಿಯುತಿರುವ ಝರಿ ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕಎಲ್ಲರೂ ಇರುವಂತೆ ಮೂಕನೂ ಅಲ್ಲಾಕಣ್ಣಿದ್ದೂ ಕಾಣದ ಹಗಲು ಕುರುಡನೂ ಅಲ್ಲಾ ಕಂಡದ್ದನ್ನು ಕಂಡ ಹಾಗೇಕಣ್ಣಿದ್ದ ಕುರುಡರೂ ನಾಚುವಂತೆಹೇಳಬೇಕೆನ್ನಿಸಿದ್ದನ್ನು ಭಿಡೇ ಭಿಟ್ಟುಹರಿತಕತ್ತಿ ಇರಿದಂತೆ ಹೇಳದೇಇರುವನಂತೂ ನಾನಲ್ಲ ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕಪ್ರಭುತ್ವವನ್ನು ಆರೋಪಿಸಿ ಕಟಕಟೆಯಲ್ಲಿ ನಿಲ್ಲಿಸಿಹಸಿವಿನ ನ್ಯಾಯ ಪದಗಳ ಸಂಯೋಜನೆಯಲ್ಲಿ ಕಾವ್ಯದ ಶಬ್ಧಾಡಂಗುರದಲ್ಲಿಅಲಂಕಾರ ಪ್ರತಿಮೆಗಳಲ್ಲಿತಿವಿದು ತಿವಿದು ಪ್ರಶ್ನಿಸುತ್ತೇನೆಕಾವ್ಯಾತ್ಮಕ ಲಯಲಾವಣ್ಯದಲಿಪ್ರಜೆಪ್ರಭುಗಳಿಬ್ಬರನ್ನೂ ಎಚ್ಚರಿಸುತ್ತೇನೆ ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕಕೈಕೋಳ ತೊಡಿಸಿ ಜೈಲಿಗಟ್ಟಿದರೂ ಬಿಡದ ಕಾಯಕನನ್ನ ಮುಂಗೈ ಕತ್ತರಿಸಿದರೂ ಹಿಡಿದ ಪೆನ್ನು ಬಿಡೆನು ಕವಿತೆ ಬರೆಯಲು ಜೈಲು ಗೋಡೆಯಾದರೇನುಕಲ್ಲು ಬಂಡೆಯಾದರೇನು ಯಾವುದೇನುಯಾರಾಜ್ಞೆಗೂ ನಿಲುಕದ ಕವಿಸಮಯಪೆನ್ನೇ ನನ್ನ ಗನ್ನು ಬರೆಯುತ್ತೇನೆ ಕವಿತೆಯನ್ನು ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕ *********

ನಾನೋರ್ವ ಕವಿ Read Post »

ಕಾವ್ಯಯಾನ

ಮಳೆಹಾಡು-4

ಆಶಾ ಜಗದೀಶ್ ಒಂದು ತಣ್ಣನೆಯ ರಾತ್ರಿಮಳೆಗೆಅದೆಷ್ಟೋ ವರ್ಷಗಳ ತಪಸ್ಸಿನಂತೆಕಾದು ಕುಳಿತಿದ್ದೆರಾತ್ರಿಗಳಾಗಲೀ ಮಳೆಯಾಗಲೀಒಟ್ಟಾಗಿ ಬಂದೇ ಇಲ್ಲ ಅಂತಲ್ಲಅವು ಒಟ್ಟಾಗಿ ಬಂದ ಒಂದು ದಿನವೂನಾನು ಪ್ರಜ್ಞೆಯಿಂದಿರಲಿಲ್ಲ ಸರಿ ರಾತ್ರಿ ಹೀಗೆ ಜಗತ್ತೇ ನಿದ್ರೆಯ ತೆಕ್ಕೆಯಲ್ಲಿರತಿ ಶಿಖರ ಮುಟ್ಟುತ್ತಿರುವಾಗನಾನು ಮಾತ್ರ ಅದನ್ನು ಧಿಕ್ಕರಿಸಿಮುಂಬಾಗಿಲ ತೆರೆದು ಮಂಜಿನಷ್ಟು ತಣ್ಣಗಿದ್ದಕಲ್ಲ ಮೆಟ್ಟಿಲ ಮೇಲೆ ಕೂರುವಾಗಪರಮ ಚರಮ ಸುಖವನ್ನೂಮೀರಿದೊಂದು ಅನುಭೂತಿಮತ್ತು ಈ ಮಳೆಯ ಮೇಲೆಸಣ್ಣದೊಂದು ಹುಸಿ ಮುನಿಸು ತನ್ನ ರಾತ್ರಿ ಸಖನನ್ನು ಕೂಡುವಅಮೃತಘಳಿಗೆಯ ಬಗ್ಗೆಚಕಾರೆತ್ತದೆ ಸೂಚನೆ ಕೊಡದೆಸುರಿದು ಸೇರಿ ಸರಿದು ಹೋಗಿಯಾಗಿಮರು ಮುಂಜಾನೆ ಮನೆ ಮುಂದೆನೆನ್ನೆಯ ರಂಗೋಲಿ ಅಳಿಸಿದ್ದುಸಮತಟ್ಟು ಅಂಗಳವೆಲ್ಲ ಕಿತ್ತು ಹೋಗಿಸಣ್ಣ ಸಣ್ಣ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿದ್ದುಎಲ್ಲೆಲ್ಲಿಯದೋ ಕಸಕಡ್ಡಿ ಜೊಂಡು ಜೊಂಪೆಮತ್ತು ಮಿಲನದ ಹಸಿ ಮಣ್ಣ ಪರಿಮಳಭೂಮಿಯಷ್ಟನ್ನೂ ಹಸಿಯಾಗಿಸಿ ಬಿಸಿಯಾಗಿಸಿಹೋದ ಬೆಚ್ಚನೆಯ ಮಿಲನ ಇದಕ್ಕೆ ಸಾಕ್ಷಿಯಾಗಲಿಕ್ಕೆಂದೇನನಗೆ ಬೆಳಕು ಹರಿಯುತ್ತಿತ್ತುಆದರೆ ನನಗಿದ್ದದ್ದು ಮಹೋತ್ಸವ ನೋಡುವಮತ್ತು ಒಂದು ಚಂದನೆ ಮಳೆಹಾಡು ಕಟ್ಟಿರಾತ್ರಿಮಳೆಯ ಸುತ್ತಾ ಹಾಡುತ್ತಾ ನೆನೆಯುತ್ತಾಕಣ್ಣಾಗುತ್ತಾ ದನಿಯಾಗುತ್ತಾ ಮೈಯ್ಯಾಗುತ್ತಾಮುದಗೊಳ್ಳುತ್ತಾ ದಣಿಯುತ್ತಾ ….ಸೋಲಬೇಕೆನ್ನುವ ಬಯಕೆ ಇಂದು ಸುರಿದ ಮಳೆಯ ಮುಂದೆಎಲ್ಲ ಬರಿದಾಗಿಸಿಕೊಂಡು ಕೂತ ನಂತರಆದ ಒಂದು ತಣ್ಣನೆಯ ಸಮಾಧಾನವೆಂದರೆಎಂದೋ ಬರೆದಿಟ್ಟ ಮಳೆ ಹಾಡಿಗೆಗೊದಮೊಟ್ಟೆಯಂಥಾ ಜೀವ ಬಂದಿದೆ **********

ಮಳೆಹಾಡು-4 Read Post »

ಕಾವ್ಯಯಾನ

ಭಿನ್ನ ಬದುಕು

ಸರಿತಾ ಮಧು ನೀರಿನೊಂದಿಗೆ ನಂಬಿಕೆ ಇಟ್ಟುಮೀನು ಮರಿಗಳ ಅದರೊಳು ಬಿಟ್ಟುಅದಮ್ಯ ಆಸೆಯಿಂದ ದಿನಗಳೆದದ್ದುಅಪರಿಮಿತ ಮಳೆಗೆ ಕನಸೆಲ್ಲವೂಕೊಚ್ಚಿ ಹೋದದ್ದು ಅನೂಹ್ಯ! ಜಲ ಸೌಂದರ್ಯ ನೋಡಲುಮುಗಿಬಿದ್ದ ಜನಸಮೂಹ ಒಂದೆಡೆಅಳಿದುಳಿದ ಕನಸ ಶೋಧಿಸಲುತೆಪ್ಪ ಹತ್ತಿ ಹೊರಟ ಬೆಸ್ತರ ಹುಡುಗಿ ಇನ್ನೊಂದೆಡೆ ಹೂಗಳಂತೆ ಬದುಕು ಸುಂದರವಾದೀತೆಂದುತೆಪ್ಪವನೇರಿ ಹೊರಟಿದೆ ಬಾಲೆಯ ಕನಸುಅವಳ ಮುಗ್ಧ ನಗೆ ಹೂವ ಸೌಂದರ್ಯದಂತೆಬಣ್ಣ ಬಣ್ಣದ ಆಸೆಗಳು ಗರಿಗೆದರಿ ನಿಂತಂತೆ ಹೂವ ಹಿಡಿದು ಅದೇನು ಉಸುರಿದಳೋಅದೂ ತಲೆ ತೂಗಿ ಅವಳೆಡೆಗೆ ನಗುವ ಚೆಲ್ಲಿದೆಆನಂದಮಯ ಸಮಯ ಈರ್ವರ ನಡುವೆಬಾಲೆ ಮತ್ತು ಹೂವು ಜಗದ ನೋವ ಮರೆತಂತೆ ಸಂತಸದ ಸಂಗತಿ ದಡದ ಹೊರಗೆನೀರ ಸೌಂದರ್ಯ ಕಣ್ತುಂಬಿಕೊಂಡವರಿಗೆಬಯಸಿದ ಫಲಕಾಣದ ಹುಡುಗಿ ಕೆರೆಯೊಳಗೆಮಳೆಯೊಂದೇ ಬದುಕು -ಭಿನ್ನ ಈ ಜಗದೊಳಗೆ ********

ಭಿನ್ನ ಬದುಕು Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ವಲಸೆಯ ಹಾದಿಯಲ್ಲಿ ಪುಸ್ತಕ- ಮಲಾಣ್ಲೇಖಕರು- ಶಾಂತಾ ನಾಯ್ಕ ಶಿರಗಾನಹಳ್ಳಿಬೆಲೆ-೩೧೦/-ಪ್ರಕಾಶಕರು- ದೇಸಿ ಪುಸ್ತಕ        ಸೃಷ್ಟಿ ನಾಗೇಶ್ ಒಂದಿಷ್ಟು ಪುಸ್ತಕಗಳನ್ನು ಕಳಿಸಿದ್ದರು. ಅದರಲ್ಲಿ ಮಲಾಣ್ ಕೂಡ ಒಂದು. ನೋಡಿದ ಕೂಡಲೇ ಬೇರೆಲ್ಲ ಕೆಲಸ ಬಿಟ್ಟು ಅದನ್ನೇ ಓದಲಾರಂಭಿಸಿದೆ. ಯಾಕೆಂದರೆ ಅದು ನಾನು ತುಂಬಾ ಗೌರವಿಸುವ ಶಾಂತಾ ನಾಯ್ಕ ಶಿರಗಾನಹಳ್ಳಿಯವರ ಪುಸ್ತಕ. ಹಿಂದೊಮ್ಮೆ ಸುಮಾರು ನಾನು ಹೈಸ್ಕೂಲಿನಲ್ಲಿದ್ದಾಗ ಅವರು ಕಾರವಾರದ ಆಕಾಶವಾಣಿಯಲ್ಲಿದ್ದವರು. ಆಗಲೇ ಇವಳು ಬರೆಯುತ್ತಾಳೆ ನೋಡಿ ಎಂದು ಬೆನ್ನು ತಟ್ಟಿದವರು. ಹೀಗಾಗಿ ಅವರ ಹೆಸರು ನೋಡಿದಾಕ್ಷಣ ಅದನ್ನೇ ಮೊದಲು ಓದಬೇಕೆನಿಸಿತ್ತು. ಈ ಸಲ ಸೃಷ್ಟಿ ನಾಗೇಶ್ ಹೇಳಿದ ಇದನ್ನು ಮೊದಲು ಓದಿ ಎನ್ನುವ ಎಲ್ಲ ಮಾತುಗಳನ್ನೂ ಗಾಳಿಗೆ ತೂರಿಯಾಗಿತ್ತು.     ಇದೊಂದು ಶತಮಾತಗಳ ವಲಸೆಯ ಕಥೆ. ರಾಜಸ್ಥಾನದ ಒಂದು ಹಳ್ಳಿಯಿಂದ  ಕರ್ನಾಟಕ, ಆಂದ್ರದ ಕಡೆಗೆ ಗುಳೆ ಬಂದಂತಹ ಈ ಜನಾಂಗದ ಕಥೆಯನ್ನು ಓದಿದರೆ ಮೈನವಿರೇಳದೇ ಇರದು. ಕೆಲವು ಕಡೆ ಕೋಪ, ಕೆಲವು ಕಡೆ ಕಣ್ಣೀರು ನಮ್ಮನ್ನು ಕೇಳದೇ ನುಸುಳದಿದ್ದರೆ ನೀವು ಈ ಕಾದಂಬರಿಯನ್ನು ಓದಿದ್ದೂ ವ್ಯರ್ಥ ಎನ್ನುವಷ್ಟು ಸೊಗಸಾಗಿ ಮೂಡಿ ಬಂದಿದೆ.     ಬಂಜಾರಾ ಜನಾಂಗವು ರಾಜಸ್ಥಾನದ ಹಳ್ಳಿಗಳಲ್ಲಿ ವೈಭವದಿಂದ ಜೀವನ ಮಾಡಿಕೊಂಡಿದ್ದವರು. ವ್ಯಾಪಾರ ವಹಿವಾಟಿನಿಂದಾಗಿ ಸಾಕಷ್ಟು ಗಟ್ಟಿ ಕುಳ ಎನ್ನಿಸಿಕೊಂಡವರು. ಆದರೆ ಯಾವಾಗ ದೆಹಲಿಯಲ್ಲಿ ಮುಸ್ಲಿಂ ಆಡಲಿತ ಪ್ರಾರಂಭವಾಯಿತೋ ಅದರಲ್ಲೂ ಔರಂಗಜೇಬ್ ದೆಹಲಿಯ ಸಿಂಹಾಸನವನ್ನೇರಿದನೋ ಆಗ ಪ್ರಾರಂಭವಾಯಿತು ನೋಡಿ, ಬಂಜಾರಾಗಳ ದುರ್ವಿಧಿ.   ಈ ಕಾದಂಬರಿ ಪ್ರಾರಂಭವಾಗುವುದೂ ಕೂಡ ದಕ್ಷಿಣಕ್ಕೆ ವಲಸೆ ಹೋಗುವ ಸೈನ್ಯದೊಂದಿಗೆ ಸೇರಿಕೊಳ್ಳುವ ಇಬ್ಬರು ಸಹೋದರರ ಕಥೆಯೊಂದಿಗೆ. ಅವರು ದಕ್ಷಿಣದ ಕಡೆಗೆ ವಲಸೆ ಹೋಗಲು ನಿರ್ಧರಿಸಿರುವುದೂ ಕೂಡ ಮುಸ್ಲಿಂ ಯುವಕರು ತಮ್ಮ ಸಹೋದರಿಯರನ್ನು ‘ಆಗ್ವಾ’ ಮಾಡಿಕೊಂಡು ಹೋದಾರೆಂಬ ಭಯದಿಂದಲೇ. ಬಂಜಾರಾ ಹುಡುಗಿಯರು ತಾಂಡಾದಿಂದ ಹೊರಗೆ ಬರುವುದೇ ದೀಪಾವಳಿ ಹಬ್ಬದಂದು ಮಾತ್ರ. ತಾಂಡಾದ ಆದಿದೇವತೆ ಮರಿಯಮ್ಮನ ಮಟ್ಟೋದ ಮುಂದೆ ನೃತ್ಯ ಮಾಡಲು. ಆಗ ಮಾತ್ರ ಮುಸ್ಲಿಂ ಯುವಕರಿಗೆ ಆ ಹುಡುಗಿಯರು ಕಾಣಸಿಗುತ್ತಿದ್ದುದು. ಹೀಗಾಗಿ ಗುಂಪು ಗುಂಪಾಗಿ ಬರುವ ಮುಸ್ಲಿಂ ಯುವಕರು ಬಂಜಾರಾ ಯುವತಿಯರನ್ನು ಅಪಹರಿಸಿಕೊಂಡು ಹೋಗಿಬಿಡುತ್ತಿದ್ದರು. ಹಾಗೆ ಅಪಹರಿಸಿಕೊಂಡು ಹೋದ ನಂತರ ಆ ಯುವತಿಯರು ಅತ್ತ ಮುಸ್ಲಿಂ ಕೂಡ ಆಗಲಾರದೇ, ಇತ್ತ ಬಂಜಾರಾ ಸಮುದಾಯಕ್ಕೂ ಸೇರಿದವರಾಗಿ ಉಳಿಯದೇ ಜೀವನದಲ್ಲಿ ನೊಂದು ಬದುಕೇ ಬೇಸರವಾಗಿ ಆತ್ಮಹತ್ಯೆಗೂ ಹೇಸದ ಸ್ಥಿತಿ ತಲುಪಿಬಿಡುತ್ತಿದ್ದರು. ಈ ಕಾರಣದಿಮದಾಗಿಯೇ ಎತ್ತುಗಳನ್ನು ಸಾಕಿಕೊಂಡು ದೊಡ್ಡ ವ್ಯಾಪಾರಸ್ಥರಾಗಿದ್ದ ಬಂಜಾರ ಸಮುದಾಯ ಗುಜರಾತ ಕಡೆಗೆ ಅತ್ತ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ ಕಾಡುಗಳೊಳಗೆ ಸೇರಿಕೊಂಡು ಬುಡಕಟ್ಟುಜನಾಂಗದವರಂತೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಬಂಜಾರರ ವ್ಯಾಪಾರದ ನೈಪುಣ್ಯತೆ, ಅವರ ವ್ಯವಹಾರಿಕ ಜ್ಞಾನ ಮತ್ತು ಎಲ್ಲದ್ದಕ್ಕಿಂತ ಮುಖ್ಯವಾಗಿ ಅವರ ಧೈರ್‍ಯ ಸಾಹಸ ಹಾಗೂ ದೇಹದೃಢತೆಯಿಂದಾಗಿ ಮುಸ್ಲಿಂ ಆಡಳಿತಗಾರರಿಗೆ ಬಂಜಾರರ ಮಾರ್ಗದರ್ಶನ ಅನಿವಾರ್ಯವಾಗಿದ್ದಿತು. ಇತ್ತ ಬಂಜಾರರಿಗೂ ಮುಸ್ಲಿಂ ಆಡಳಿತದಿಂದ ದೂರ ಸರಿದು ತಮ್ಮ ಹೆಣ್ಣುಮಕ್ಕಳ ರಕ್ಷಣೆ ಮಾಡಿಕೊಳ್ಳುವ ಆತುರದಲ್ಲಿದ್ದರು. ಇಂತಹುದ್ದೇ ಹೊತ್ತಿನಲ್ಲಿ ತಮ್ಮ ತಂಗಿ ರೂಪ್ಕಿ ಹಾಗೂ ಅವಳ ತಂಗಿ ಪಾರೂವನ್ನು ರಕ್ಷಣೆ ಮಾಡುವ ಭರದಲ್ಲಿ ಹತ್ತು ಮುಸ್ಲಿಂ ಯುವಕರನ್ನು ಕೊಂದು ಹಾಕಿದ್ದ ಮೀಟು ಹಾಗೂ ಥಾವು ಔರಂಗಜೇಬನ ಸೇನಾಧಿಪತಿಯರಲ್ಲಿ ಒಬ್ಬನಾದ ಜುಲ್ಮಾನ್‌ಖಾನ ಎಂಬುವವನಿಗೆ ತಿಳಿದರೆ ಇಡೀ ತಾಂಡಾ ಸರ್ವನಾಶವಾಗುವುದನ್ನು ಅರಿತು ಸಂಕೆಭಾಕ್ರಿ ಎನ್ನುವ ತಾಂಡಾವನ್ನು ಬಿಟ್ಟು ಜೈಪುರದ ಹತ್ತಿರ ದಕ್ಷಿಣ ಭಾರತದ ವ್ಯಾಪಾರಕ್ಕೆಂದು ತಮ್ಮೊಂದಿಗೆ ಸೈನ್ಯವನ್ನು ಆಯ್ಕೆ ಮಾಡುತ್ತಿರುವ ಜಂಗಿ ಭಂಗಿ ಎಂಬ ಸಹೋದರರ ಕಡೆ ಬಂದಿದ್ದರು. ಅವರ ಬಳಿ ತಾವು ಚವ್ಹಾಣರು ಎಂದು ಕೆಲಸಕ್ಕೆ ಸೇರಿಕೊಂಡು ಹೊರಡುವ ಮಹಾ ವಲಸೆಯ ಕಥೆ ಇದು. ಆ ವಲಸೆಯಲ್ಲಿಯೇ ಮದುವೆ ಮಾಡಿಕೊಳ್ಳುವ ಮೀಟುವಿನ ಬಾಳಿನ ತಿರುವಿನ ಕಥೆ ಇಲ್ಲಿದೆ.    ಚಿಕ್ಕವಳಿರುವಾಗ ನನಗೆ ರಾಧಾ ಕೃಷ್ಣರ ಕಥೆ ಅಚ್ಚರಿ ಹುಟ್ಟಿಸುತ್ತಿತ್ತು. ಇಡೀ ಜಗತ್ತಿಲ್ಲಿ ಅತ್ಯುನ್ನತ ಪ್ರೇಮಕ್ಕೆ ಉದಾಹರಣೆಯಾಗಿ ನೀಡುವ ಈ ಕಥೆಯ ನಾಯಕಿ  ರಾಧಾ ಕೃಷ್ಣನ ಪತ್ನಿಯಲ್ಲ. ಆಕೆ ಬರೀ ಕೃಷ್ಣನ ಪ್ರೇಯಸಿ. ಆಕೆಗೊಬ್ಬ ಗಂಡನಿದ್ದಾನೆ. ಅವಳದ್ದೇ ಆದ ಒಂದು ಸಂಸಾರವಿದೆ. ಆದರೆ ಕೃಷ್ಣನ ಮೇಲಿರುವ ಅವಳ ಪ್ರೇಮಕ್ಕೆ ಯಾವುದೇ ಹೋಲಿಕೆಯಿಲ್ಲ. ಅಚ್ಚರಿಯೆಂದರೆ ಈ ಪ್ರೇಮ ಎಂದೂ ಅನೈತಿಕ ಎಂದು ಅನ್ನಿಸಿಕೊಳ್ಳಲೇ ಇಲ್ಲ. ತೀರಾ ಮಡಿವಂತರಿಂದ ಹಿಡಿದು ತೀರಾ ಕರ್ಮಠ ಸಂಪ್ರದಾಯಿಗಳವರೆಗೆ ಎಲ್ಲರೂ ಈ ಪ್ರೇಮವನ್ನು ಅತ್ಯಂತ ಸಹಜ ಎಂದು ಒಪ್ಪಿಕೊಂಡಿದ್ದರು. ಆದರೆ ನಿಜ ಜೀವನಕ್ಕೆ ಬಂದ ಕೂಡಲೇ ಈ ತರಹದ ಪ್ರೇಮಗಳೆಲ್ಲ ಅನೈತಿಕ ಅಥವಾ ಹಾದರ ಎನ್ನಿಸಿಕೊಳ್ಳುತ್ತದೆ. ಬಾಜಿರಾವ್ ಎಂಬ ಮರಾಠಾ ಶೂರ ಮಸ್ತಾನಿ ಎಂಬ ಮುಸ್ಲಿಂ ಯುವತಿಯನ್ನು ಪ್ರೇಮಿಸಿದರೆ ಅದು ಅಪ್ಪಟ ಸಾಮಾಜಿಕ ಬಹಿಷ್ಕಾರಗೊಂಡ ಪ್ರೇಮವಾಗುತ್ತದೆ. ಕೊನೆಯಪಕ್ಷ ಬಾಜಿರಾವ್ ಹಾಗೂ ಮಸ್ತಾನಿಯ ಈ ಪ್ರೇಮ ಕಥಾನಕವಾಗಿಯಾದರೂ ಅದೆಷ್ಟೋ ಕಾಲದ ನಂತರ ಒಪ್ಪಿತವಾಗುತ್ತದೆ. ಆದರೆ ಜನಸಾಮಾನ್ಯರ, ನಮ್ಮ ನಿಮ್ಮ ನಡುವೆಯೇ ಇಂತಹ ಪ್ರೇಮವನ್ನು ಕಂಡರೆ ನಾವು ಹೇಗೆ ಅವರೊಡನೆ ವ್ಯವಹರಿಸಬಹುದು ಎಂದು ಒಮ್ಮೆ ಯೋಚಿಸಿ ನೋಡಿ. ವಿವಾಹದ ಆಚೆಗಿರುವ ಗಂಡು ಹೆಣ್ಣಿನ ಸಂಬಂಧವನ್ನು ನಾವು ಯಾವ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಕೆಲವು ವರ್ಷಗಳ ಹಿಂದೆ ಒಬ್ಬ ವಿವಾಹಿತ ಯುವತಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣವಿಷ್ಟೇ. ಅರಬ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಗಂಡ ಊರಿಗೆ ಬಂದವನು ಅವಳ ಬಳಿ ಬರದೇ ಸೀದಾ ಅವನ ತಾಯಿಯ ಬಳಿ ಹೋಗಿದ್ದ. ಅದಕ್ಕೆ ಕಾರಣವೂ ಇತ್ತೂ ಈ ಯುವತಿ ಬೇರೆ ಯುವಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆತನಿಗೆ ತಿಳಿಸಲಾಗಿತ್ತು. ಗಂಡ ಬರುತ್ತಾನೆ ಎಂದು ಎರಡು ದಿನ ಕಾದ ಆಕೆ ನಂತರ ಬೆಂಕಿ ಹಚ್ಚಿಕೊಂಡಿದ್ದಳು. ಆಗಲೆಲ್ಲ  ಆಕೆ ರಾತ್ರಿ ಹೊತ್ತು ಹೊರಗೆ ನಿಂತು ಒಬ್ಬನ ಬಳಿ ಮಾತನಾಡುತ್ತಿರುತ್ತಾಳೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ನಿಜಕ್ಕೂ ನನಗೆ ಅಚ್ಚರಿ. ‘ಆ ಯುವಕನೊಂದಿಗೆ ಆಕೆಯ ಸಂಬಂಧ ಇದ್ದಿದ್ದೇ ನಿಜವಾದರೆ ಮನೆಯ ಹೊರಗೆ ನಿಂತು ಮಾತನಾಡುವ ಅಗತ್ಯವಾದರೂ ಏನಿದೆ? ಹೊರಗೆ ನಿಂತು ಮಾತನಾಡುತ್ತಿದ್ದಾಳೆಂದರೆ ಅವರಿಬ್ಬರ ನಡುವೆ ನಾವೆಲ್ಲ ಅನುಮಾನಿಸುವ ಸಂಬಂಧ ಇರಲಿಕ್ಕಿಲ್ಲ. ಅದು ಕೇವಲ ಸ್ನೇಹವಿರಬಹುದು.’ ಎಂದು ಅವಳ ಪರವಾಗಿ ಮಾತನಾಡಿದ್ದೆ. ಆದರೆ ಏನೇ ಆದರೂ ವಿವಾಹದ ಆಚೆಗಿನ ಹೆಣ್ಣು ಗಂಡಿನ ಸ್ನೇಹ ಕೂಡ ಅನುಮಾನಕ್ಕೆ ಕಾರಣವಾಗುತ್ತದೆ ಎಂಬುದನ್ನು ಗಮನಿಸುವಾಗ ಈ ಕಾದಂಬರಿಯಲ್ಲಿನ ಅಂತಹುದ್ದೊಂದು ಸಂಬಂಧ ಹೇಗೆ ಇಡೀ ಬಂಜಾರಾ ಜನಾಂಗವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂಬುದನ್ನು ಗಮನಿಸಬೇಕಿದೆ.    ಮೀಟು ಹೊರಟಿದ್ದು ಆಸೀಫ್‌ಖಾನ್ ಎನ್ನುವವನೊಡನೆ. ಆದರೆ ಆತನ ಮಗಳು ಮೀಟುವಿನ ಶೌರ್‍ಯಕ್ಕೆ ಮರುಳಾಗಿ ಆತನಿಗೆ ಒಲಿದು ಬಂದಿದ್ದಳು. ಇತ್ತ ಆಗತಾನೆ ಮದುವೆಯಾದ ಮೀಟು ಸೈನಾಜ್‌ಳ ಒತ್ತಾಯಕ್ಕೆ ಅನಿವಾರ್‍ಯವಾಗಿ ಅವಳೊಂದಿಗೆ ಸಂಬಂಧ ಬೆಳೆಸಬೇಕಾಗಿತ್ತು. ಅವಳ ಮದುವೆಯ ನಂತರವೂ ಈ ಸಂಬಂಧ ಮುಂದುವರೆದು ಆಕೆ ಮಿಟುವಿನಿಂದ ಒಬ್ಬ ಮಗನನ್ನು ಪಡೆಯುವ ಆಕೆ ಬಾಣಂತಿಯ ನಂಜಿನಿಂದ ಸಾವನ್ನಪ್ಪುತ್ತಾಳೆ. ಆದರೆ ಮುಂದೊಮ್ಮೆ ಅವಳ ಗಂಡ ಲತೀಫ್‌ಖಾನ್‌ನಿಗೆ ಇವರ ವಿಷಯ ಗೊತ್ತಾಗಿದ್ದಲ್ಲದೇ ಮಾವನ  ಅಧಿಕಾತರವನ್ನು ಪಡೆಯುವುದಕ್ಕೋಸ್ಕರ ಮೀಟುನನ್ನು ಕೊಂದು ಹಾಕುವುದರೊಂದಿಗೆ ಕಥೆ ಮತ್ತೊಂದು ತಿರುವು ಪಡೆಯುತ್ತದೆ.   ಮೀಟುವಿನ ತಮ್ಮ ಥಾವೂ ಅಣ್ಣನ ಹೆಂಡತಿ ಹಾಗೂ ಮಗ ದೇಸೂನನ್ನು ತುಂಬ ಜಾಗ್ರತೆಯಿಂದ ಕಾಪಾಡಿಕೊಳ್ಳುತ್ತಾನಾದರೂ ಪೀಳಿಗೆಗಳು ಮುಂದುವರೆದಂತೆ ಹಳೆಯ ಬಾಂಧವ್ಯದ ಎಳೆ ಬಿಚ್ಚಿಕೊಳ್ಳುತ್ತ ಸಡಿಲವಾಗುತ್ತದೆ. ಇತ್ತ ಥಾವೂ ಕೂಡ ಹೈದರಾಬಾದಿನ ಕಡೆ ವ್ಯಾಪಾರಕ್ಕೆಂದು ಮಗ ಲಚ್ಮಿ ಜೊತೆ ಹೋದವನು ಅಲ್ಲಿ ನಿಜಾಮರ ಜೊತೆಗಿದ್ದ ಲತೀಫ್‌ಖಾನನ ಮಗನ ಸೈನಿಕರಿಂದ ಸತ್ತು ಹೋಗುತ್ತಾನೆ. ಇರಿತದ ಗಾಯದ ನಂಜೇರಿ ಲಚ್ಮ ಕೂಡ ಮರಣ ಹೊಂದುತ್ತಾನೆ. ಲಚ್ಮನ ಹೆಂಡತಿ ಗುಜಾ ಸತಿಯಾಗುತ್ತಾಳೆ. ಆಕೆ ದೈವಿಸ್ಥಾನ ಪಡೆಯುತ್ತಾಳೆ. ಇಂದಿಗೂ ಭರಮ್‌ಕೋಟ್‌ದ ಜನಾಂಗ ಗುಜಾಸತಿಯನ್ನು ಪ್ರಾರ್ಥಿಸಿಯೇ ಮುಂದುವರೆಯುವ ಸಂಪ್ರದಾಯವಿದೆ.    ಮುಂದೆ ದೇಸು ಹೈದರಾಬಾದಿನ ಕಡೆ ಪುನಃ ವ್ಯಾಪಾರಕ್ಕೆ ಹೊರಟಾಗ ಮತ್ತೆ ಲತೀಫ್‌ಖಾನನ ಮಗ ಜಂಗ್ಲಿಖಾನ್‌ನ್ನು ಭೇಟಿಯಾಗುವ ಸಂದರ್ಭ ಎದುರಾಗುತ್ತದೆ. ತನ್ನಂತೆಯೇ ಇರುವ ಬಂಜಾರಾನನ್ನು ನೋಡಲು  ಆಸಕ್ತನಾದ ಜಂಗ್ಲಿಖಾನನನ್ನು ಸಂಧಿಸಿದಾಗ ಇಬ್ಬರಿಗೂ ಒಳಮರ್ಮ ಅರ್ಥವಾದರೂ ಏನೂ ಅರಿವಾಗದಂತೆ ಇಬ್ಬರೂ ದೂರವಾಗಿದ್ದರೂ ದರೋಡೆಕೋರರು ದಾಳಿ ಮಾಡಿದಾಗ ಪುನಃ ಜಂಗ್ಲಿಖಾನನೇ ಬಂದು ದೇಸುವಿನ ರಕ್ಷಣೆ ಮಾಡಿದ್ದ. ಇದು ಕಥೆಯೊಳಗೆ ಕಾಣುವ ಮಾನವ ಸಂಬಂಧದ ಮಿತಿ ಮತ್ತು ಶ್ರೇಷ್ಠತೆಯನ್ನು ತೋರಿಸುತ್ತದೆ. ಆದರೆ ದೇಸುವಿನ ಚಿಕ್ಕಪ್ಪ ಥಾವೂನ ಮಗ ತೋತ್ಯಾ ಬೇರೆಯಾಗಿದ್ದ. ಸಂಬಂಧಗಳು ನಿಧಾನವಾಗಿ ಹರಿದು ಹೋಗತೊಡಗಿತ್ತು.   ಇದಾದ ನಂತರ ಈ ಬಂಜಾರರಿಗೆ ದೊಡ್ಡ ಏಟು ಬಿದ್ದಿದ್ದು ಬ್ರಿಟೀಷ್ ಆಡಳಿತದಲ್ಲಿ. ಸ್ವತಃ ವ್ಯಾಪಾರಿಗಳಾದ ಬ್ರಿಟೀಷರು, ಈ ಚಿಕ್ಕಪುಟ್ಟ ವ್ಯಾಪಾರಿಗಳನ್ನೆಲ್ಲ ಹೊಸಕಿ ಹಾಕಿಬಿಟ್ಟಿದ್ದರು. ತಮ್ಮ ಅನುಮತಿಯಿಲ್ಲದೇ ವ್ಯಾಪಾರ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಬಂಜಾರರನ್ನೆಲ್ಲ ದರೋಡೆಕೋರರೆಂದು ಬಿಂಬಿಸಿ ಬಿಟ್ಟಿದ್ದರು. ಬ್ರಿಟೀಷರಿಂದ ತಮ್ಮನ್ನು ಕಾಪಾಡಿಕೊಳ್ಳುವ ಸಲುವಾಗಿ ಮತ್ತೆ ಈ ಜನಾಂಗ ಕಾಡುಗಳನ್ನೇ ಆಶ್ರಯಿಸಬೇಕಾದದ್ದು ವಿಪರ್‍ಯಾಸ. ದೇಸೂನ ನಂತರ ಧನಸಿಂಗ್, ಅವನ ನಂತರ ಹನುಮನಾಯ್ಕ ಹಾಗೆಯೇ ಸಾಗಿ ಸೂರ್ಯನಾಯ್ಕನವರೆಗಿನ ಕಥೆಯನ್ನು ಹೇಳುತ್ತದೆ.    ಇಡೀ ಕಾದಂಬರಿಯ ಕೊನೆಯ ಹಂತದಲ್ಲಿ ಬಂಜಾರಾ ಜನಾಂಗ ಹೇಗೆ ಆಧುನಿಕತೆಯತ್ತ ಮುಖ ಮಾಡಿದೆ ಎನ್ನುವುದನ್ನು ಹಂತಹಂತವಾಗಿ ತಿಳಿಸುತ್ತದೆ. ಭಮರ್‌ಕೋಟ್ಯಾದ ಕವಲುಗಳು ಬೇರೆಬೇರೆಯಾಗಿ ಈಗಿನ ಕರಮ್‌ತೋಟ್ ಜನಾಂಗದ ಸೂರ್ಯನಾಯ್ಕ ಉಪನ್ಯಾಸಕನಾಗಿದ್ದ. ಹೆಂಡತಿ ವಂದನಾ ಕೂಡ ಸಂಶೋಧನೆ ಮಾಡಿ ವಿದ್ಯಾವಂತೆ ಅನ್ನಿಸಿಕೊಂಡಿದ್ದಳು. ನೇರ ನಡೆನುಡಿಯ ಸೂರ್‍ಯ ನಾಯ್ಕ ಬದುಕನ್ನು ಸರಳವಾಗಿ ಎದುರಿಸಿದವನು. ಬಡತನದ ಬದುಕಿನಿಂದ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿಕೊಂಡಿದ್ದನಾದರೂ ಸಹೋದ್ಯೋಗಿಗಳ ತುಳಿತಕ್ಕೂ ಒಳಗಾದವನು. ತನ್ನ ಮಕ್ಕಳಾದರೂ ಮೇಲೆ ಬರಲಿ ಎಂದು ಕಾಯುತ್ತಿರುವವನುಇಷ್ಟೆಲ್ಲದರ ನಡುವೆ ಇಡೀ ಕಾದಂಬರಿಯಲ್ಲಿ ಬಂಜಾರಾಗಳ ಪದ್ದತಿಗಳು, ಆಚಾರ ವಿಚಾರಗಳು ಯಥೇಶ್ಚವಾಗಿ ಕಾಣಸಿಗುತ್ತವೆ. ಪ್ರತಿ ಸಂಪ್ರದಾಯದ ಸ್ಥೂಲ ಚಿತ್ರಣವನ್ನು ಕೊಡುವುದರಲ್ಲಿ ಕಾದಂಬರಿಕಾರರು ಯಶಸ್ವಿಯಾಗುತ್ತಾರೆ. ಜೊತೆಗೆ ಬಂಜಾರಾ ಜನಾಂಗದ ಭಾಷೆಯ ಸಣ್ಣ ಪರಿಚಯವೂ ಸಿಗುತ್ತದೆ.    ಚಿಕ್ಕವಳಿದ್ದಾಗ ಲಂಬಾಣಿ ಜನಾಂಗದ ಉಡುಪು ನೋಡುವುದೇ ಒಂದು ವಿಶೇಷ ಎನ್ನಿಸುತ್ತಿತ್ತು ನನಗೆ. ಕಟ್ಟಡ ಕೆಲಸ ಮಾಡಲು ಬಂದ ಬಂಜಾರಾ ಹೆಂಗಸರ ಬಳಿ ಮಾತನಾಡುತ್ತ ನಾಣ್ಯಗಳನ್ನು ಪೋಣಿಸಿ ಹೊಲೆದ ಅವರ ದುಪಟ್ಟಾಗಳನ್ನು ಮುಟ್ಟಿಮುಟ್ಟಿ ನೋಡಿ ಖುಷಿಪಡುತ್ತಿದ್ದೆ. ಯಾರ ಬಳಿಯಲ್ಲಾದರೂ ಸರಿ ಸಲೀಸಾಗಿ ಸ್ನೇಹ ಬೆಳೆಸುವ ನನ್ನ ಗುಣ ಆ ಹೆಂಗಳೆಯರ ಬಳಿ ಹೋಗುವಂತೆ ಮಾಡುತ್ತಿತ್ತು. ಕಾದಂಬರಿ ಓದಿ ಮುಗಿಸಿದ ನಂತರ ಶಾಂತಾ ನಾಯ್ಕರಿಗೆ ಫೋನ್ ಮಾಡಿ ನನಗೆ ನಿಮ್ಮ ಹೆಂಗಸರು ಹಾಕುವಂತಹ ಡ್ರೆಸ್ ಬೇಕು ಪುಟ್ಟ ಮಕ್ಕಳಂತೆ ಹಠ ಹಿಡಿದು ಹೇಳಿದ್ದೆ. ಮುಂದಿನ ಸಲ ಇಲ್ಲಿಗೆ ಬಂದಾಗ ಕೊಡಸ್ತೀನಿ. ಆದರೆ ಈಗ ಅದನ್ನು ಮಾಡೋದು ಕಡಿಮೆ ಆಗಿದೆ. ಹೇಳಿ ಮಾಡಿಸಬೇಕು. ಎಂದಿದ್ದಾರೆ. ಚಂದದ ನಾಣ್ಯ ಹೊಲಿದು ಮಾಡಿದ ಆ ದುಪಟ್ಟಾಗೋಸ್ಕರ ಈಗ ಕಾಯುತ್ತಿದ್ದೇನೆ.                         —– ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಬೊಗಸೆಯಲ್ಲೊಂದು ಹೂನಗೆ ನೆನಪೊಂದು ಮಳೆಯಾಗಿ ಸುರಿದಾಗಲೆಲ್ಲ ನಗುವೊಂದು ಮಳೆಯ ಹನಿಗಳಾಗಿ ಅಂಗೈಯನ್ನು ಸ್ಪರ್ಶಿಸುತ್ತದೆ. ಹಾಗೆ ಸ್ಪರ್ಶಿಸಿದ ಒಂದಿಷ್ಟು ಹನಿಗಳು ಜಾರಿಬಿದ್ದು ನೆಲವನ್ನು ಹಸಿಯಾಗಿಸಿದರೆ, ಉಳಿದವು ಬೊಗಸೆಯಲ್ಲೊಂದು ಹೊಸ ಪ್ರಪಂಚವನ್ನು ಬಿಚ್ಚಿಡುತ್ತವೆ. ಹಾಗೆ ನಮ್ಮೆದುರು ತೆರೆದುಕೊಳ್ಳುವ ಪ್ರಪಂಚದಲ್ಲಿ ಕೈಗೂಸಿನ ಕನಸಿನಂಥ ನಗುವೊಂದು ಅಮ್ಮನ ಮಡಿಲಿನಲ್ಲಿ ಕದಲಿದರೆ, ಹೂನಗೆಯ ಹೊತ್ತ ಹುಡುಗಿಯೊಬ್ಬಳು ಸೈಕಲ್ಲನ್ನೇರಿ ಕನಸಿನಂತೆ ಮರೆಯಾಗುತ್ತಾಳೆ; ಹನಿಮೂನ್ ಪ್ಯಾಕೇಜಿನ ರೆಸಾರ್ಟ್ ಒಂದರ ಡೈನಿಂಗ್ ಹಾಲ್ ನಲ್ಲಿ ನಾಚಿಕೆಯ ನಗುವೊಂದು ಮೋಂಬತ್ತಿಯಾಗಿ ಕರಗಿದರೆ, ಆಪರೇಟಿಂಗ್ ರೂಮೊಂದರಿಂದ ಹೊರಬಂದ ವೈದ್ಯರ ನಗುವೊಂದು ಕಣ್ಣೀರನ್ನೆಲ್ಲ ಕರಗಿಸಿ ಕಣ್ಮರೆಯಾಗಿಸುತ್ತದೆ. ಹೀಗೆ ನಗುವಿನಲ್ಲಿ ಕಣ್ತೆರೆವ ಬದುಕೊಂದು ಜಾತ್ರೆಯಲ್ಲಿ ಖರೀದಿಸಿದ ಹೇರ್ ಕ್ಲಿಪ್ಪಿನಲ್ಲಿ, ಬಾಲ್ಯದ ಗೆಳೆಯನೊಬ್ಬನ ನೆನಪಿನಲ್ಲಿ, ಕಾಲೇಜಿನ ಗ್ರೂಪ್ ಫೋಟೋಗಳಲ್ಲಿ, ಕಂಟ್ರೋಲಿಗೆ ಸಿಕ್ಕುವ ಶುಗರ್ ಲೆವಲ್ಲಿನಲ್ಲಿ, ತಾನೇ ನಗುವಾಗಿ ಅರಳುತ್ತದೆ. ನಗುವೊಂದು ಬದುಕಿನೊಂದಿಗೆ ತೆರೆದುಕೊಳ್ಳುವ ರೀತಿಯೇ ಒಂದು ವಿಸ್ಮಯ. ಕ್ಯಾಮರಾಗಳಿಲ್ಲದ ಕಾಲದಲ್ಲಿ ಅಪ್ಪನ ಕಣ್ಣುಗಳಲ್ಲಿ, ಅಮ್ಮನ ಹೃದಯದಲ್ಲಿ ಪ್ರಿಂಟಾಗುತ್ತಿದ್ದ ಮಗುವಿನ ನಗೆಯೊಂದು ಬಿಡುವಿನ ಸಮಯದಲ್ಲಿ ಎಳೆಎಳೆಯಾಗಿ ಧಾರಾವಾಹಿಯಂತೆ ಜಗಲಿಯಲ್ಲಿ ಬಿಚ್ಚಿಕೊಳ್ಳುತ್ತಿತ್ತು. ಮಗುವಿಗೆ ಮೊದಲಹಲ್ಲು ಹುಟ್ಟಿದಾಗ ಅಮ್ಮನ ಮುಖದಲ್ಲರಳಿದ ನಗುವನ್ನು ಎಷ್ಟೇ ದುಬಾರಿಯ ಕ್ಯಾಮರಾದಿಂದಲೂ ಸೆರೆಹಿಡಿಯಲಾಗದು. ಅಂಬೆಗಾಲಿಡುತ್ತಲೋ, ಗೋಡೆಯನ್ನು ಹಿಡಿದು ಒಂದೊಂದೇ ಹೆಜ್ಜೆಯನ್ನಿಡುತ್ತಲೋ ಅಮ್ಮನ ತೆಕ್ಕೆ ಸೇರುವ ಮಗುವೊಂದು ಅಮ್ಮನ ಮಡಿಲಿಗೆ ಸುರಿಯುವ ನಗುವಿಗೆ ಪರ್ಯಾಯ ನಗುವೊಂದನ್ನು ಸೃಷ್ಟಿಸಲಾಗದು. ಮಗುವಿನ ಬೆಳವಣಿಗೆಯ ಪ್ರತೀಹಂತವೂ ಸುಂದರವೆನ್ನಿಸುವುದು ಅದು ಕಟ್ಟಿಕೊಡುವ ಬದುಕಿನ ಸಾಧ್ಯತೆಗಳಲ್ಲಿ. ಆ ಸಾಧ್ಯತೆಗಳೆಲ್ಲ ನೆನಪುಗಳಾಗಿ, ಕನಸಾಗಿ, ಒಮ್ಮೊಮ್ಮೆ ದುಗುಡವಾಗಿ, ನಗುವಿನಲ್ಲಿ ಸುಖಾಂತ್ಯವಾಗುವ ಸನ್ನಿವೇಶಗಳಾಗಿ, ಸಂಸಾರವೊಂದರ ರಸವತ್ತಾದ ಕಥೆಗಳಾಗಿ ಉಳಿದುಕೊಳ್ಳುತ್ತವೆ. ಅಂತಹ ದುಗುಡವೊಂದು ನಗುವಾಗಿ ಬದಲಾಗಿ ನನ್ನ ಬದುಕಿನಲ್ಲಿ ಉಳಿದ ಕಥೆ ಕೂದಲಿನದು. ನಾನು ಹುಟ್ಟಿ ಒಂದು ವರ್ಷವಾದರೂ ನನ್ನ ತಲೆಯಲ್ಲಿ ಒಂದೇ ಒಂದು ಕೂದಲು ಹುಟ್ಟುವ ಲಕ್ಷಣವೂ ಕಾಣಿಸಿಕೊಳ್ಳಲಿಲ್ಲವಂತೆ. ಏನಾದರೂ ಸಮಸ್ಯೆಯಿರಬಹುದೆಂದು ಡಾಕ್ಟರಿಗೆ ತೋರಿಸಲು ಕರೆದೊಯ್ದರೆ ಗುಂಡುಗುಂಡಾಗಿ ಮುದ್ದಾಗಿದ್ದ ನನ್ನನ್ನು ಎತ್ತಿಕೊಂಡೇ ರೌಂಡ್ಸ್ ಮುಗಿಸಿದ ಡಾಕ್ಟರು, ಏನೂ ಸಮಸ್ಯೆಯಿಲ್ಲವೆಂದು ಸಮಾಧಾನ ಮಾಡಿದರೂ ಅಮ್ಮನ ಚಿಂತೆ ಕರಗಲಿಲ್ಲವಂತೆ. ದೇವತೆಯಂಥ ಅಮ್ಮ ದೇವರಿಗೆ ಹರಕೆ ಹೊತ್ತು ನನ್ನ ತಲೆಯಮೇಲೆ ಕೂದಲು ಕಾಣಿಸಿಕೊಂಡು, ಅಮ್ಮನ ದುಗುಡವೊಂದು ದೇವರು ಕಣ್ಬಿಡುವಲ್ಲಿಗೆ ಸುಖಾಂತ್ಯ ಕಂಡಿತು. ಈಗಲೂ ಪಾರ್ಲರಿನ ಕತ್ತರಿಗೆ ಕೂದಲು ಕೊಡುವಾಗಲೆಲ್ಲ ಅಮ್ಮನ ದುಗುಡವೇ ಕಣ್ಮುಂದೆ ಬಂದು ನಿಂತಂತಾಗಿ, ಕಾಣದ ದೇವರಲ್ಲೊಂದು ಕ್ಷಮೆ ಯಾಚಿಸುತ್ತೇನೆ. ಒಂದೊಂದೇ ಕೂದಲು ಬೆಳ್ಳಗಾಗುತ್ತಿರುವುದು ಕಾಣಿಸಿದಾಗಲೆಲ್ಲ ಈ ದುಗುಡಕ್ಕೆ ಯಾವ ದೇವರಲ್ಲಿ ಪರಿಹಾರವಿರಬಹುದೆಂದು ಯೋಚಿಸಿ, ನಕ್ಕು ಸುಮ್ಮನಾಗುತ್ತೇನೆ. ದೇವರಿಗೂ ಡಾಕ್ಟರಿಗೂ ಜಾಸ್ತಿ ವ್ಯತ್ಯಾಸವಿಲ್ಲ ಎನ್ನುವ ನಂಬಿಕೆ ನನ್ನದು. ದೇಹಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಡಾಕ್ಟರ್ ಹತ್ತಿರ ಸಿಗದ ಪರಿಹಾರವೊಂದು ದೇವರ ಹತ್ತಿರ ಇದ್ದಿರಬಹುದಾದ ಸಾಧ್ಯತೆಗಳೆಲ್ಲವೂ ನನ್ನ ನಂಬಿಕೆಯಿಂದ ಹೊರಗೆ ಇರುವಂಥವುಗಳು. ದೇವರಂಥ ಡಾಕ್ಟರ್ ಎನ್ನುವ ನಂಬಿಕೆಯೊಂದು ನಿಜವಾಗಬಹುದೇ ಹೊರತು ದೇವರನ್ನೇ ಡಾಕ್ಟರನ್ನಾಗಿಸಿದರೆ ದೇವರ ನಗುವನ್ನೂ ಕಸಿದುಕೊಂಡಂತಾದೀತು. ಇಂತಹ ದೇವರ ರೂಪದ ವೈದ್ಯರೊಬ್ಬರು ಪ್ರತಿಯೊಬ್ಬರ ಜೀವನದಲ್ಲೂ ನಗುವನ್ನು ಮರಳಿಸಲು ಅಥವಾ ಇಲ್ಲದ ನಗುವೊಂದನ್ನು ಹೊಸದಾಗಿ ಹುಟ್ಟಿಸಲು ಕಾರಣೀಕರ್ತರಾಗಿರುತ್ತಾರೆ. ಸ್ವರ್ಗದ ಕಲ್ಪನೆಯನ್ನು ಸರಾಗವಾಗಿ ಕಟ್ಟಿಕೊಡುವ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನಾನು ಬೆಂಗಳೂರಿಗೆ ಬಂದಾಗ ಅನಾರೋಗ್ಯ ಎನ್ನುವುದು ಸಮಯ ಸಿಕ್ಕಾಗಲೆಲ್ಲ ಬೆನ್ನಹಿಂದೆ ಬಿದ್ದು ಹಿಂಸಿಸುತ್ತಿತ್ತು. ಗಂಭೀರವೂ ಅಲ್ಲದ, ನಿರ್ಲಕ್ಷ್ಯಿಸಲೂ ಆಗದ ಸಣ್ಣಪುಟ್ಟ ತೊಂದರೆಗಳೆಲ್ಲ ಸಂಜೆಯಾದಂತೆ ಸಮಯ ತಪ್ಪದೇ ಹಾಜರಾಗುವ ಸೊಳ್ಳೆಗಳಂತೆ ಕಾಟ ಕೊಡುತ್ತಿದ್ದವು. ಅವರಿವರು ಸೂಚಿಸಿದ ಆಸ್ಪತ್ರೆ, ಡಾಕ್ಟರುಗಳನ್ನೆಲ್ಲ ಭೇಟಿ ಮಾಡಿದ್ದಾಯಿತು. ಬಣ್ಣಬಣ್ಣದ ಮಾತ್ರೆಗಳೆಲ್ಲ ಕಣ್ಮುಂದೆ ಬಂದು ಕುಣಿದಂತೆನ್ನಿಸಿ, ಮುಖದ ಮೇಲಿಂದ ನಗುವೊಂದು ಅದೆಲ್ಲಿಯೋ ಮಾಯವಾಗಿಹೋಯಿತು. ಈ ಅನಾರೋಗ್ಯದ ಕಥೆಗೊಂದು ತಿರುವು ಸಿಕ್ಕಿದ್ದು ಪರಿಚಿತರೊಬ್ಬರು ತೋರಿಸಿದ ದವಾಖಾನೆಯಿಂದ. ತಪಾಸಣೆ ಮಾಡಿದ್ದಕ್ಕೆ ಶುಲ್ಕವನ್ನು ಕೂಡಾ ಪಡೆಯದೇ ಔಷಧದ ಖರ್ಚನ್ನು ಮಾತ್ರವೇ ತೆಗೆದುಕೊಳ್ಳುತ್ತಿದ್ದ ವೈದ್ಯರೊಬ್ಬರು ನಡೆಸುತ್ತಿದ್ದ ಆ ದವಾಖಾನೆ, ಅವರ ಮುಖದಲ್ಲಿದ್ದ ಮಂದಹಾಸದಿಂದಾಗಿ ಪುಟ್ಟದೊಂದು ದೇವಸ್ಥಾನದಂತೆ ಭಾಸವಾಗುತ್ತಿತ್ತು. ಅಂಥ ದೇವಸ್ಥಾನದಂಥ ದವಾಖಾನೆಯ ಪ್ರವೇಶದಿಂದ ವರ್ಷಗಟ್ಟಲೇ ಕಷ್ಟಪಟ್ಟ ಮೂಗು, ಗಂಟಲುಗಳೆಲ್ಲ ಎರಡೇ ತಿಂಗಳಿಗೆ ನೆಮ್ಮದಿಯಿಂದ ಉಸಿರಾಡಲಾರಂಭಿಸಿದವು. ಆರೋಗ್ಯ ಸುಧಾರಿಸಿ ಜೀವನಕ್ಕೆ ನಗುವೊಂದು ಮರಳಿ ದೊರಕಿದರೂ, ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ಹೋಗುವ ಭಕ್ತಿಯಲ್ಲಿ ದವಾಖಾನೆಗೆ ಹೋಗಿ ವೈದ್ಯರ ಆರೋಗ್ಯವನ್ನೇ ವಿಚಾರಿಸಿಕೊಂಡು ಪರಿಪಾಠವೊಂದು ಖಾಯಂ ಆಯಿತು. ಮನೆಯನ್ನು ಬದಲಾಯಿಸಿ ಬೇರೆ ಏರಿಯಾಕ್ಕೆ ಶಿಫ್ಟ್ ಆದರೂ ಔಷಧಿಯ ಅಗತ್ಯ ಬಿದ್ದಾಗಲೆಲ್ಲ, ನಗುವಿನಿಂದಲೇ ಅರ್ಧರೋಗವನ್ನು ವಾಸಿಮಾಡುತ್ತಿದ್ದ ದೇವರಂಥ ಡಾಕ್ಟರನ್ನು ನೆನಪಿಸಿಕೊಂಡು ನಗುನಗುತ್ತಲೇ ಮಾತ್ರೆಯನ್ನು ನುಂಗಿ ನೀರು ಕುಡಿಯುತ್ತೇನೆ. ಹೀಗೇ ನೆನಪುಗಳೊಂದಿಗೆ ನಗುವೆನ್ನುವುದು ಒಂದಿಲ್ಲೊಂದು ವಿಧದಲ್ಲಿ ಅಂಟಿಕೊಂಡೇ ಇರುತ್ತದೆ. ಇನ್ನೆಂದೂ ಮರಳಿ ಬಾರದಂತೆ ನಮ್ಮನ್ನಗಲಿ ದೂರವಾದವರು, ಬದುಕಿದ್ದೂ ಸಂಪರ್ಕವಿಲ್ಲದೇ ಮರೆಯಾಗಿ ಹೋದವರು ಎಲ್ಲರೊಂದಿಗೂ ನೆನಪೊಂದು ನಗುವಾಗಿ ಬೆಸೆದುಕೊಂಡು ನಮ್ಮೊಳಗೆ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನನ್ನೊಂದಿಗೆ ಓದುತ್ತಿದ್ದ ಹುಡುಗನೊಬ್ಬ ಯಾವಾಗಲೂ ಜಿದ್ದಿಗೆ ಬಿದ್ದವನಂತೆ ಜಗಳವಾಡುತ್ತಿದ್ದ. ಆ ವಯಸ್ಸಿನಲ್ಲಿ ಅದೊಂದು ಗಂಭೀರವಾದ ವಿಷಯವೇ ಆಗಿದ್ದರೂ ಈಗ ಅವನ ನೆನಪಾದಾಗಲೆಲ್ಲ, ಆ ಜಗಳಕ್ಕೆ ಕಾರಣವೇನಿದ್ದಿರಬಹುದೆಂದು ಯೋಚಿಸಿ ನನ್ನಷ್ಟಕ್ಕೆ ನಾನೇ ನಗುತ್ತಿರುತ್ತೇನೆ. ಕಾಮನ್ ಫ್ರೆಂಡ್ಸ್ ಎನ್ನುವಂಥವರು ಯಾರೂ ಇಲ್ಲದ ಕಾರಣ ಆತನನ್ನು ಇನ್ನುವರೆಗೂ ಹುಡುಕಲು ಸಾಧ್ಯವಾಗದೇ, ಆ ಜಗಳದ ಕಾರಣವೂ ಬಗೆಹರಿಯದೇ, ಅದು ದಯಪಾಲಿಸಿದ ಸಣ್ಣದೊಂದು ನಗುವನ್ನು ನನ್ನದಾಗಿಯೇ ಉಳಿಸಿಕೊಂಡಿದ್ದೇನೆ. ಆತ ಎಲ್ಲಾದರೂ ಒಮ್ಮೆ ಎದುರಾಗಿ ಜಗಳದ ಕಾರಣ ತಿಳಿದುಬಿಟ್ಟರೆ ಅಪರೂಪದ ನಗೆಯೊಂದು ಮರೆಯಾಗಿಬಿಡುವ ಭಯವಿದ್ದರೂ, ಸದ್ಯಕ್ಕೆ ಆ ನಗು ನನ್ನದೆನ್ನುವ ಸಮಾಧಾನದೊಂದಿಗೆ ಜಗಳದ ನೆನಪನ್ನೂ ಕಾಪಾಡಿಕೊಳ್ಳುತ್ತೇನೆ. ಇಂತಹ ಚಿಕ್ಕಪುಟ್ಟ ನೆನಪುಗಳೊಂದಿಗೆ ಶಾಶ್ವತ ನೆಂಟಸ್ತನ ಬೆಳೆಸಿಕೊಳ್ಳುವ ನಗುವೊಂದು ತನ್ನ ಕರ್ತವ್ಯವೆನ್ನುವಂತೆ ಮನಸ್ಸುಗಳನ್ನು ಬೆಸೆಯುತ್ತ, ಮಾತುಗಳನ್ನು ಬೆಳೆಸುತ್ತ, ಮೌನವನ್ನೂ ಗೌರವಿಸುತ್ತ ಸಂಬಂಧಗಳನ್ನೆಲ್ಲ ಕಾಪಾಡುತ್ತಿರುತ್ತದೆ. ಶಾಪಿಂಗ್ ಮಾಲ್ ನ ಅಂಗಡಿಗಳ ಗ್ಲಾಸುಗಳಲ್ಲಿ ಹೊಳೆಯುವ ಹೊಟ್ಟೆಪಾಡಿನ ನಗು, ಆಫೀಸಿನ ಕನ್ನಡಕದೊಳಗಿನ ಒತ್ತಡಕ್ಕೆ ಉತ್ತರವೆಂಬಂಥ ರಿಸೆಪ್ಷನ್ನಿನ ನಗು, ಸ್ಮೋಕಿಂಗ್ ಝೋನ್ ಒಂದರ ಬಿಡುಗಡೆಯ ನಗು, ಕಾಫಿಶಾಪ್ ಒಂದರ ಮೊದಲಭೇಟಿಯ ನಗು ಎಲ್ಲವೂ ಜೀವಂತವಾಗಿರುವವರೆಗೂ ಬೊಗಸೆಯಲ್ಲೊಂದಿಷ್ಟು ಸುಂದರ ಸಂಬಂಧಗಳು ನಸುನಗುತ್ತಿರುತ್ತವೆ. ******************************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

You cannot copy content of this page

Scroll to Top