ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಪೂಜಾ ನಾರಾಯಣ ನಾಯಕ

ನಾನರಿಯಲಾಗದ  ಶೂಲೆಗಳೇ

ಆಪ್ತವಾಗಿ ನನ್ನನ್ನು

ಬಿಗಿದಪ್ಪಿಕೊಂಡಾಗ

ಬದುಕು ಬರಡಾಗಿ

ಬೆಂಬಿಡದೆ ಕಾಡಿದಾಗ

ನನಗನಿಸುತ್ತದೆ,

ನಾನೊಮ್ಮೆ ಜ್ವಾಲಾಮುಖಿಯಂತೆ ಭುಗಿಲೇಳಬೇಕು!

ಕಳೆದುಕೊಂಡ ಮಧುರವಾದ ಪ್ರೇಮ

ನೆನಪಿನಾಳದಲಿ ಪುಟಿದೆದ್ದು ಕೂತಾಗ

ನನ್ನ ನಿಟ್ಟುಸಿರಿನಲೂ ಮಿಣುಕು ಹುಳುವಂತೆ ಮಿನುಗ ತೊಡಗಿದಾಗ

ನನಗನಿಸುತ್ತದೆ,

ನಾನೊಮ್ಮೆ ಅಗ್ನಿ ಪರ್ವತದಂತೆ ಧಗಧಗಿಸಿ ಉರಿಯಬೇಕು!

ಕಗ್ಗತ್ತಲ ವೇಳೆಯಲಿ

ನಿಶ್ಯಬ್ದ ನೂರಾರು ಬಯಕೆಗಳ ಹೊತ್ತ

ದೂರ ದೂರ ನೇರ ಹಾದಿಗಳಲಿ ನೀರವತೆಯೇ ಮುಗುಳ್ನಕ್ಕಾಗ

ನನಗನಿಸುತ್ತದೆ,

ನಾನೊಮ್ಮೆ ಶಿವನಂತೆ ರುದ್ರವಾಗಿ ನರ್ತಿಸಬೇಕು!

ಏಕಾಂತದಲಿ

ಮರೀಚಿಕೆಯಂತ ಕನಸುಗಳು ಎಡಬಿಡದೆ ತಿವಿದಾಗ

ಹಿಂದಿನ ಕಹಿ ನೆನಪೇ ತುಡಿದಾಗ

ಕಂಬನಿಯೇ ಬೇರುರಿದಾಗ

ನನ್ನೆದೆಯ ಶರಧಿಯಲಿ

ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ

ನನಗನಿಸುತ್ತದೆ,

ನಾನು ಹೀಗೆಯೆ ಕಾವ್ಯವಾಗಿ   ಮಂಜುಗಡ್ಡೆಯಂತೆ ಕರಗಿಬಿಡಬೇಕು!.

**************

About The Author

2 thoughts on “ಕಾವ್ಯವಾಗಿ ಕರಗುತ್ತೇನೆ”

  1. km vasundhara

    ಎಷ್ಟೆಲ್ಲಾ ಆಗಿಬಿಡುವ ಆಸೆಯಿದೆ ಕವಯಿತ್ರಿಯವರಿಗೆ..! ಭಾವ – ಭಾಷೆ ಬಹಳ ಚೆನ್ನಾಗಿದೆ..

  2. Pooja Narayan Nayak

    ನಿಮ್ಮ ಪ್ರೇರಣೆಗೆ ತುಂಬು ಹೃದಯದ ಧನ್ಯವಾದ ಮೇಡಮ್

Leave a Reply

You cannot copy content of this page

Scroll to Top