ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಏಕೆ ಹೀಗೆ? ನೀ.ಶ್ರೀಶೈಲ ಹುಲ್ಲೂರು ಅಧರದಲಿರುವ ಲಾಲಿ ರಂಗುಪದರು ಪದರಾಗೆರಗುತಿಹುದುಮರುಗುತಿರುವ ಮನದ ಮತಿಯುಅತಿಯ ಮೀರಿ ಕೊರಗುತಿಹುದು ಕಣ್ಣಲಿಟ್ಟ ಒಲವ ಬಾಣಎದೆಯನಿರಿದು ನರಳುತಿಹುದುಕಳೆದಿರುವ ಕಾಲ ಸಾಲುಪದವ ಕಿತ್ತು ಕೊರಗುತಿಹುದು ಆಗಸದ ಸೊಗಸ ಮೋಡನಕ್ಕು ತಾನೆ ಅಳುತಲಿಹುದುಚಕ್ರವಾಕ ಹೆದೆಯ ಮೆಟ್ಟಿಮುದವನಪ್ಪಿ ನಗುತಲಿಹುದು ಇರುವ ಸುಖದ ಕೊರಳ ಮುರಿದುದು:ಖ ಕೇಕೆಗೈಯುತಿಹುದುದಾರಿ ನಡೆವ ಧೀರನೆದೆಗೆಒದ್ದು ಹಾಸಗೈಯುತಿಹುದು ಮನುಜರಾಳದೊಡಲ ಬಗೆದಕರುಳೆ ಸಿಳ್ಳೆಯೂದುತಿಹುದುಭವದಿ ತೇಲುತಿರುವ ಘಟದಉಸಿರ ಗುಳ್ಳೆಯೊಡೆಯುತಿಹುದು ಏಕೆ ಹೀಗೆ ದೇವ ಭಾವ ?ತನ್ನ ತಾನೆ ತುಳಿಯುತಿಹುದುನರರ ನಡುವೆ ನರಕ ತೂರಿಮರುಕವಿರದೆ ಅಳಿಯುತಿಹುದು *******

ಕಾವ್ಯಯಾನ Read Post »

ಇತರೆ, ಪರಿಸರ

ಪರಿಸರ

ಮರಗಳ ಕಡಿದರೆ ಖಚಿತ ನಮ್ಮದೇ ಮಾರಣ ಹೋಮ!! ಜಯಶ್ರೀ ಜೆ.ಅಬ್ಬಿಗೇರಿ                                                    ಇದು  ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಮಾತು ಪ್ರತಿ ಗ್ರಾಮದಲ್ಲೂ ಚಾವಡಿ ಕಟ್ಟೆಗೆ ಹೊಂದಿಕೊಂಡಂತೆ ಮತ್ತು  ಊರ ಹೊರಗಿನ ಗ್ರಾಮ ದೇವತೆಯ ದೇವಸ್ಥಾನದ ಸನಿಹ ಗಿಡ ಮರಗಳ ಸೊಂಪಾದ ನೆರಳು ಇದ್ದೇ ಇರುತ್ತಿತ್ತು.  ದುಡಿದು ದಣಿದು ಬಂದ ರೈತಾಪಿ ವರ್ಗ,  ಹಿರಿಯರು, ಹೈದರು ಮಕ್ಕಳಿಗೆಲ್ಲ ಮನದ ಭಾವನೆಗಳನ್ನು ಹಂಚಿಕೊಳ್ಳುವ ಅಡ್ಡಾದಂತೆ ಕೆಲಸ ನಿರ್ವಹಿಸುತ್ತಿತ್ತು.  ಪ್ರತಿಯೊಬ್ಬರ ಮನೆಯ ಹಿಂದೆ ಹಿತ್ತಲಿನಲ್ಲಿ ತರಹೇವಾರಿ ತರಕಾರಿಯೊಂದಿಗೆ ವಿಧ ವಿಧ ಗಿಡಗಳಿಗೂ ಜಾಗ ಕಡ್ಡಾಯವಾಗಿರುತ್ತಿತ್ತು. ಕೆಲವರಂತೂ ಊರಾಚೆಗೆ ತೋಟದಲ್ಲಿ ಮನೆ ಕಟ್ಟಿಕೊಂಡು ಪ್ರಕೃತಿ ಮಾತೆಯ ಮಡಿಲಲ್ಲಿ ಆನಂದಿಸುವ ಪರಿಯೂ ಕಂಡು ಬರುತ್ತಿತ್ತು. ಇತ್ತೀಚಿಗೆ  ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟು ನಾವು ಉನ್ಮಾದಿತರಾಗಿದ್ದೇವೆ ಎಂದರೆ ನಮ್ಮ ಕಾಲ ಮೇಲೆ ನಾವು ಕಲ್ಲು ಹಾಕಿಕೊಳ್ಳುತ್ತಿರುವುದು ನಮಗೆ ತಿಳಿಯುತ್ತಿಲ್ಲ. ಮರದ ಬುಡಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವುದು ನಮ್ಮ ಬುಡಕ್ಕೇ ಪೆಟ್ಟು ಎನ್ನುವುದು ಬುದ್ಧಿಗೆ ತಿಳಿದಿದ್ದರೂ ಶೋಕಿ ಹಿಂದೆ ಬೆನ್ನು ಹತ್ತಿ ನಮ್ಮ ಜೀವನದ ದಾರಿಯನ್ನೇ ಬದಲಾಯಿಸಿಕೊಂಡು ಮರಗಳ ರಕ್ಷಣೆಯನ್ನು ಕೇವಲ ಉದ್ದುದ್ದ ಭಾಷಣಗಳನ್ನು ಮಾಡಿ ಸಾಲು ಮರದ ತಿಮ್ಮಕ್ಕನಂಥ ಮರಗಳ ಪ್ರೇಮಿ ಹೆಸರು ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದೆವೆ. ಮರಗಳ ರಕ್ಷಿಸುವ ಯೋಜನೆಗಳೆಲ್ಲ ಕಾಗದದ ಕುದುರೆಗಳಾಗಿವೆ. . ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರಣ ಹೊಂದಿದ ಮರಗಳ ಸಂಖೈಯಂತೂ ಲೆಕ್ಕಕ್ಕಿಲ್ಲ. ದಿನವೂ ಯಾವುದೋ ಒಂದು ಹೆಸರಿಗೆ ಮರಗಳ ಮಾರಣ ಹೋಮ ನಡೆಯುತ್ತಲೇ ಇದೆ. ನಮ್ಮ ದುರಾಸೆಗೆ ಬಲಿಯಾಗುತ್ತಿರುವ ಮರಗಳು ನಮ್ಮ ಅವಿವೇಕತನಕ್ಕೆ ಮರ ಮರ ಮರಗುತ್ತಿವೆ    ಧರ್ಮೋ ರಕ್ಷತಿ ರಕ್ಷತಃ ಎನ್ನುವ ಮಾತಿನಂತೆ ವೃಕ್ಷೊ ರಕ್ಷತಿ ರಕ್ಷತಃ ಮಾತು ದಿಟವೇ ಎನ್ನುವುದು ಅರಿತಿದ್ದರೂ ನಮ್ಮ ನಡೆ ಮಾತ್ರ ಪೈಶಾಚಿಕದಂತೆನೆಸುತ್ತಿದೆ. ಮರಗಳನ್ನೆಲ್ಲ ನೆಲಕ್ಕುರುಳಿಸಿ ಆಕಾಶ ಮುಟ್ಟುವ ಮಹಲು ಮಾಲ್ಗಳನ್ನು ಕಟ್ಟಲೇಬೇಕೆಂಬ ಪಣ ತೊಟ್ಟವರಂತೆ ಹಳ್ಳಿ ಪಟ್ಟಣ ನಗರಗಳೆಂಬ ಭೇದ  ಭಾವ ತೋರದೆ ತಾತ ಮುತ್ತಾತಂದಿರು ವಷರ್ಾನುಗಟ್ಟಲೇ ನೀರುಣಿಸಿ ಬೆಳೆಸಿದ ಮರಗಳನ್ನು ಕ್ಷಣಾರ್ಧದಲ್ಲಿ ಕೊಡಲಿ ಹಿಡಿದು ನೆಲಸಮಗೊಳಿಸುತ್ತಿದ್ದೇವೆ. ಇದು ಊರುಗಳಲ್ಲಿಯ ಕತೆಯಾದರೆ, ಕಾಡಿನತ್ತ ಧಾವಿಸಿ  ಕಾಂಚಾಣ ಎಣಿಸಲು ಹವಣಿಸಿ, ಕಾಡಿನ ಪ್ರಾಣಿಗಳನ್ನು ನಾಡಿಗೆ ಕರೆತರುತ್ತಿದ್ದೇವೆ.  ಇದೇ ಸ್ಥಿತಿ ಮುಂದುವರೆದರೆ ಭವಿಷ್ಯ ಘನಘೋರ. ನಮ್ಮ ಜೀವಕ್ಕೆ  ಕುತ್ತು ಖಚಿತ.ಎಂಬುದು ಪರಿಸರ ವಾದಿಗಳಿಗೆ  ಪ್ರಕೃತಿ ಪ್ರೀಯರಿಗೆ ಬಿಡದೇ ಕಾಡುತ್ತಿರುವ ಭಯ.  ಸೃಷ್ಟಿ ಹುಟ್ಟಿದ ಆರಂಭದಲ್ಲಿ ಮೂರು ಭಾಗದಷ್ಟು ನೀರು ಒಂದು ಭಾಗದಷ್ಟೇ ಭೂಮಿ ಇತ್ತು. ಭೂಮಿಯ ಮೇಲೆಲ್ಲ ಹಸಿರು ಕಂಗೊಳಿಸುತ್ತಿತ್ತು. ಆಹಾರ ಧಾನ್ಯಗಳ ಉತ್ಪಾದನೆಗಾಗಿ ಜಮೀನಿನ ಅವಶ್ಯಕತೆಯಿದೆ ಎಂದು   ಮಾನವ ಕಾಡನ್ನು ನಾಶ ಪಡಿಸಿದ. ದೈವತ್ವದ ಸ್ಥಾನ ನೀಡಿ ಪೂಜಿಸುತ್ತಿದ್ದ ಮರಗಳನ್ನು ಬರುಬರುತ್ತ ಸಂಚಾರಿ ಹೆಸರಿನಲ್ಲಿ ಸಾವಿರಾರು ಮರಗಳ ತಲೆಗಳನ್ನು ತುಂಡರಿಸಿದ. ಈ ಭೂಮಿಯ ಮೇಲೆ ಬದುಕಲು ನಮ್ಮಷ್ಟೇ ಹಕ್ಕು ಪಡೆದ ನಮ್ಮ ಜೀವನಕ್ಕೆ ಸಹಕಾರಿಯಾಗಿರುವ ಸುಮಾರು 500ಕ್ಕೂ ಹೆಚ್ಚು ಪಕ್ಷಿ ಸಂಕುಲಗಳ ಕ್ರಿಮಿ ಕೀಟಗಳ ನಾಶಕ್ಕೂ  ಮುನ್ನುಡಿ ಬರೆಯತೊಡಗಿದ. ಈ ವಿನಾಶವನ್ನು ಕಂಡ ಪ್ರಾಜ್ಞರು, ಆಯುವರ್ೇದದ ಚಿಕಿತ್ಸೆ ತಜ್ಞರು ಸಸಿಗಳ ನೆಡುವಿಕೆಗೆ ಪ್ರೇರೇಪಿಸಿದರು.. ಬೇವು ಆಲದ ಮರದಂಥ ಅತ್ಯುಪಯುಕ್ತ  ಮರಗಳ ಮಹತ್ವವನ್ನು ಸಾರಿದರು.ಅವುಗಳ ಗಾಳಿಯನ್ನು ಶ್ವಾಸಿಸಿದರೆ ಶ್ವಾಸಕೋಶಗಳಿಗೆ ಅತ್ಯುತ್ತಮವೆಂದು  ಜನಮಾನಸದಲ್ಲಿ ಬಿತ್ತಿದರು. ಒತ್ತಡದ  ಬದುಕಿನ ಫಲಶೃತಿಯಾಗಿ ರಕ್ತದೊತ್ತಡ ಮಧುಮೇಹದಂಥ ಜೀವನ ಪೂತರ್ಿ ಜೀವ ತಿನ್ನುವ ಕಾಯಿಲೆಗಳು ವಯೋ ಭೇದವಿಲ್ಲದೇ ಬೆನ್ನು ಬಿದ್ದಿವೆ. ದಿನವಿಡಿ ಕಂಪ್ಯೂಟರ್ ಇಂಟರ್ಪಪಪಪಪಪನೆಟ್ನಲ್ಲಿ ಮುಳುಗಿದ ಕಣ್ಣುಗಳಿಗೆ ದಿನದ ಕೆಲ ಹೊತ್ತು ಹಸಿರು ಗಿಡಗಳೆಡೆಗೆ  ದೃಷ್ಟಿಯಿಡುವಂತೆ, ಹಸಿರನ ಮಧ್ಯದಲ್ಲಿ ವಾಯುವಿಹಾರ ನಡೆಸುವಂತೆ ವೈದ್ಯರು ಗ್ರೀನ್ ಥೆರಪಿ ಸಲಹೆ ನೀಡುತ್ತಿದ್ದಾರೆ. ಆದರೆ ಹಸಿರು ಗಿಡ ಮರಗಳೆಲ್ಲಿ ಸಿಗುತ್ತಿಲ್ಲ. ಅಲ್ಲಲ್ಲಿ ಕಾಂಕ್ರೀಟ್ ಕಾಡುಗಳು ಸಣ್ನ ಪುಟ್ಟ ಪಾಕರ್್ಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ಸಮೀಕ್ಷೆಯ ಅಧ್ಯಯನದ ಪ್ರಕಾರ ಹಸಿರು ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ಇತ್ತೀಚಿಗೆ ಹೆಚ್ಚುತ್ತಿರುವ ಹೃದ್ರೋಗದ ಸಾವುಗಳನ್ನು ಕಡಿಮೆಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂಬ ವರದಿ ಹೊರ ಬಿದ್ದಿದೆ. ಮನೆಯ ಮುಂದೆ ಹಿಂದೆ ಹಸಿರಿಗೆಂದೇ ಮೀಸಿಲಿಟ್ಟಿದ್ದ ಜಾಗ ಈಗೀಗ ಫೋರ್ ವ್ಹೀಲರ್ಸ್ ಬೈಕ್ ಪಾಕರ್ಿಂಗ್ನ ಪಾಲಾಗುತ್ತಿದೆ. ಮರಗಳಿಗಾಗಿ ಹುಡುಕಿಕೊಂಡು ಮೈಲುಗಟ್ಟಲೇ ನಡೆಯುವ ಪ್ರಸಂಗ ತಲೆದೋರಿದೆ.  ಮರ ಗಿಡಗಳು ಮನೆ ಮುಂದೆ ಇದ್ದರೆ ಕೋಟಿ ಕೋಟಿ ಅದಾಯ ಅದ್ಹೇಗೆ ಎಂದು ಹುಬ್ಬೇರಿಸುತ್ತೀರೇನು! ಮರವೊಂದು ತನ್ನ ಜೀವಿತಾವಧಿಯಲ್ಲಿ ಹೂವು ಕಾಯಿ ಹಣ್ಣು ಉರುವಲು ರೂಪದಲ್ಲಿ ಆದಾಯ ತರುವುದಲ್ಲದೇ ತಜ್ಞರ ಪ್ರಕಾರ ಶ್ವಾಸ ಸಂಬಂಧಿತ ಕ್ಯಾನ್ಸರ್ನಿಂದ ಬಳಲುವ 10 ಲಕ್ಕಕ್ಕಿಂತಲೂ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಜೀವ ದಾನ ನೀಡುತ್ತವೆ. ಅವು ನೀಡುವ  ಪ್ರಾಣ ವಾಯುವಿಗೆ ಬೆಲೆ ಕಟ್ಟಲಾದೀತೆ? ವೈಭವೀಕರಣದ ಜೀವನದ ಭ್ರಾಂತಿಯಲ್ಲಿ  ಸ್ವಚ್ಛ ಗಾಳಿಗೆ ಪರದಾಡುವ ಸ್ಥಿತಿ ನಿಮರ್ಾಣವಾಗಿದೆ ಎಲ್ಲೆಲ್ಲೂ ಕಾಖರ್ಾನೆಯ ವಿಷಾನೀಲ ವಾಹನದ ದಟ್ಟನೆಯ ಧೂಳು ನಮ್ಮ ಶ್ವಾಸದ ಗೂಡಿಗೆ ಕೈ ಹಾಕುತ್ತಿದೆ. ಮಳೆಯ ಆರ್ಭಟವನ್ನು ಸಹಿಸಿಕೊಂಡು ಮಣ್ಣಿನ ಸವಕಳೀಯನ್ನು ತಡೆಯುತ್ತಿದ್ದ ಮರಗಳು ಇದೀಗ  ನಮ್ಮ ಆರ್ಭಟಕ್ಕೆ  ತಾವೇ  ಕೊನೆಯುಸಿರೆಳೆಯುತ್ತಿವೆ. “       ಅತಿಯಾದ ಕಾಡಿನ ನಾಶ ಅತಿವೃಷ್ಟಿ ಅನಾವೃಷ್ಟಿ ಉಂಟಾಗುತ್ತಿದೆ. ಇದರಿಂದ  ತುತ್ತಿನ ಚೀಲ ತುಂಬಿಸುವ ಅನ್ನದಾತನ ತುತ್ತಿಗೆ ತತ್ವಾರ ತಂದೊಡ್ಡಿ ಆತನನ್ನು ಆತನ ಕುಟುಂಬವನ್ನೂ ಬಲಿತೆಗೆದುಕೊಳ್ಳುವ ಹಂತಕ್ಕೆ ಬಂದು ನಿಂತಿದ್ದೇವೆ.   ನಮ್ಮ ಸ್ವಾರ್ಥಕ್ಕೆ ಭೂ ಮಂಡಲವೆಲ್ಲ ಧಗ ಧಗ ಉರಿಯುವ ಕೆಂಡದುಂಡೆಯಂತೆ ಭಾಸವಾಗುತ್ತಿದೆ. ಕಾಡುಗಳ ಕಣ್ಮರೆಯಿಂದ. ಜೀವ ವೈವಿಧ್ಯತೆಯ ಅಮಾಯಕ ಮೂಕ ಪ್ರಾಣಿಗಳ ಮತ್ತು ಕಾಡು ಪ್ರಾಣಿಗಳ ಅವಸಾನವಷ್ಟೇ ಅಲ್ಲ ಪ್ರಕೃತಿಯ ಸಮತೋಲನವನ್ನೇ ಅಲ್ಲಾಡಿಸುತ್ತಿದೆ. ಅದಲ್ಲದೇ ಮಳೆಯ ಪ್ರಮಾಣವೂ ತುಂಬಾ ಕುಸಿಯುತ್ತಿದೆ. ರೆಫ್ರಿಜರೇಟರ್ನಂತಹ ವಸ್ತುಗಳ ಬಳಕೆಯಿಂದ ಭೂಮಿಗೆ ರಕ್ಷಣಾ ಕವಚದಂತಿರುವ ಓಜೋನ್ ಪರದೆಗೂ ಅಲ್ಲಲ್ಲಿ ರಂಧ್ರಗಳು ಬಿದ್ದು ಅದಕ್ಕೂ ಜೀವ ಭಯ ಕಾಡುತ್ತಿದೆ. ಇದರ ಪರಿಣಾಮ ಜಾಗತಿಕ ತಾಪಮಾನ ಏರಿ ಜೀವ ಹಿಂಡುತ್ತಿದೆ ಬಿಸಿಲಿನ ತಾಪಕ್ಕೆ ಮಂಜು ಕರಗಿ ಸಮುದ್ರಕ್ಕೆ ಸೇರುತ್ತಿದೆ. ಪ್ರವಾಹಗಳ ಭೀತಿಯೂ ಹೆಚ್ಚುತ್ತಿದೆ. ಜೀವ ರಕ್ಷಕ ಆಮ್ಲಜನಕ ನೀಡುವ ಗಿಡ ಮರಗಳ ರಕ್ಷಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಮರಗಳ ಧರೆಗುರುಳಿಸುವುದು ಅತಿ ಸುಲಭ. ಮರಗಳನು ಧರೆಯ ಮೇಲೆ ಬೆಳೆಸುವುದು ಕಷ್ಟದ ಕೆಲಸ. ಅಶ್ವತ್ಥಮೇಕಂ ಪಿಚುಮಂದುಮೇಕಮ್ ನ್ಯಗ್ರೋಧಮೇಕಂ ದಶತಿಂತ್ರಿಣೀಶ್ಚ ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್ ಧಮರ್ಾರ್ಥಮಾರೋಪ್ಯ ಸ ಯಾತಿ ನಾಕಂ ಒಂದು ಅರಳಿ ಮರ ಒಂದು ಬೇವಿನ ಮರ ಒಂದು ಆಲದ ಮರ ಹತ್ತು ಹುಣಸಿ ಮರ ಸಾಕಷ್ಟು ಬೇಲ ಬಿಲ್ವ ನೆಲ್ಲಿ ಮತ್ತು ಮಾವಿನ ಮರಗಳನ್ನು ಧಮರ್ಾರ್ಥಕ್ಕಾಗಿ ಬೆಳೆಸಿ ಒಬ್ಬನು ಸ್ವರ್ಗಕ್ಕೆ ಹೋಗುತ್ತಾನೆ ಎಂದು ಹೇಳುವ ಸಂಸ್ಕೃತ ಶ್ಲೋಕ ಧರೆಯನ್ನೇ ಸ್ವರ್ಗವನ್ನಾಗಿಸುವ ಸಂದೇಶವನ್ನು ಸಾರುತ್ತದೆ. ಮರಗಳು ಆಮ್ಲಜನಕ ತಯಾರಿಸುವ ಕಾಖರ್ಾನೆಗಳು ಒಂದು ಬಲಿತ ಮರವು ಪ್ರತಿ ವರ್ಷ 25-30 ಕಿಲೊ ಇಂಗಾಲದ ಡೈ ಆಕ್ಸೈಡ್ ತೆಗೆದು ಹಾಕಬಲ್ಲದು. ಜೀವ ರಕ್ಷಕ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ  ಕಡಿದರೆ ಖಚಿತ ನಮ್ಮದೇ ಮಾರಣ ಹೋಮ.  ಇನ್ನಾದರೂ ಎಚ್ಚೆತ್ತುಕೊಂಡು ಗಿಡ ಮರಗಳನ್ನು ಬೆಳೆಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವತ್ತ ಹೊಸ ಹೆಜ್ಜೆ ಇಡೋಣ.                                                   *********

ಪರಿಸರ Read Post »

ಕಾವ್ಯಯಾನ

ಆವಿಷ್ಕಾರ

ಆವಿಷ್ಕಾರ ಡಾ.ಅಜಿತ್ ಹರೀಶಿ ಗುಪ್ತಗಾಮಿನಿ ರಕುತಹೃದಯದೊಡಲಿಂದ ಚಿಮ್ಮುತಕೋಟಿ ಜೀವಕಣಗಳಿಗುಣಿಸುತಜೀವಿತವ ಪೊರೆಯುವುದುಎಷ್ಟು ಸಹಸ್ರಕಾಲದ ನಡೆಯುಹೀಗೆ ಅರಿವಾದಂತೆಹೊಸ ಕಾಯಕಲ್ಪ ಜೀವನಕ್ಕೆ…! ಪರಮಾಣುಗಳಲಿ ಅದುಮಿಟ್ಟಬಹಳ ಬಲವಾದ ಸ್ಫೋಟಅಣ್ವಸ್ತ್ರಗಳೊಳಗೆ ಬಿಗಿದಿಟ್ಟುಲಕ್ಷ ಜೀವಗಳ ಮರಣಪಟ್ಟಿರಣಕಹಳೆ ಊದುವ ಮೊದಲೇಯುದ್ಧ ನಡೆಸುವ ರಣನೀತಿಅಸ್ತ್ರಗಳು‌ ಅಣುವಾದಂತೆಬೃಹತ್ ದ್ವೇಷ ಜಗಕ್ಕೆ…! ಧರಣಿ ಹೂಡದ ಧರೆಯ ಮೇಲೆಹಸಿರುಟ್ಟು ನಿಂತ ಸಸ್ಯಶ್ಯಾಮಲೆಕಾಡು, ನಾಡಿಗೆ ಜೀವಂತ ದೇವರೇಇವು ಜೀವಿಸುತ್ತವೆ, ಎಂಬ ವಿಜ್ಞಾನಈ  ತಿಳಿವು ಬಂದಂತೆಮುನ್ನಡೆಯಾಯಿತು ವಿನಾಶಕ್ಕೆ..! **********

ಆವಿಷ್ಕಾರ Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ

ಸಂಪ್ರೋಕ್ಷಣ ಬಣ್ಣಗಳಲ್ಲದ್ದಿದ ಬದುಕು ಅಂಜನಾ ಹೆಗಡೆ ಬಣ್ಣಗಳೇ ಇರದಿದ್ದರೆ ಜಗತ್ತು ಹೇಗಿರುತ್ತಿತ್ತು ಯೋಚಿಸಿ ನೋಡಿ. ಪುಟ್ಟ ಮಗುವೊಂದು ಬಣ್ಣದ ಬಲೂನುಗಳ ಹಿಂದೆ ಓಡುವ ದೃಶ್ಯವೇ ಕಾಣಸಿಗುತ್ತಿರಲಿಲ್ಲ. ಗಾಳಿಪಟವೊಂದು ಚೂರುಚೂರೇ ನೆಗೆಯುತ್ತ ಆಕಾಶಕ್ಕೆ ಎಗರಿ ಬಣ್ಣದ ಲೋಕವೊಂದನ್ನು ಸೃಷ್ಟಿಸುತ್ತಲೇ ಇರಲಿಲ್ಲ. ಕೆಂಡಸಂಪಿಗೆಗೆ ಕೆಂಡದಂತಹ ಬಣ್ಣವಿರುತ್ತಿರಲಿಲ್ಲ. ಕಾಮನಬಿಲ್ಲೊಂದು ಹುಟ್ಟುತ್ತಲೇ ಇರಲಿಲ್ಲ. ಬಣ್ಣಗಳಿಲ್ಲದಿದ್ದರೆ ಕಲೆ, ಸೌಂದರ್ಯ, ಪ್ರಕೃತಿ ಇವೆಲ್ಲವುಗಳ ಪರಿಕಲ್ಪನೆ ಬೇರೆಯೇ ಏನೋ ಆಗಿರುತ್ತಿತ್ತು. ಅದೇನಾಗಿರಬಹುದಿತ್ತು ಎಂದು ಒಂದು ಸೆಕೆಂಡು ಯೋಚಿಸಿದರೂ ಒಂದಿಷ್ಟು ಬಣ್ಣಗಳೂ ಯೋಚನೆಯೊಂದಿಗೆ ಅಂಟಿಕೊಳ್ಳುತ್ತವೆ.      ಯೋಚನೆಗಳಷ್ಟೇ ಅಲ್ಲದೇ ಮನುಷ್ಯನ ಭಾವನೆಗಳೊಂದಿಗೂ ಬೆಸೆದುಕೊಂಡಿರುವಂಥದ್ದು ಈ ಬಣ್ಣಗಳ ಪ್ರಭಾವ. ಹೆಣ್ಣು ಎಂದರೆ ಗುಲಾಬಿಬಣ್ಣ, ಪ್ರೀತಿಯೆಂದರೆ ಕೆಂಪು, ಸಂಭ್ರಮಕ್ಕೆ ಹಸಿರು, ದುಃಖಕ್ಕೆ ಬಿಳಿ-ಕಪ್ಪು, ಹೀಗೆ ವಿವೇಚನೆ ಅಥವಾ ತರ್ಕಗಳೆಲ್ಲ ಅಮುಖ್ಯವಾಗಿ ಭಾವನೆಗಳೊಂದಿಗೆ ಬಣ್ಣಗಳು ಬೆರೆತುಹೋಗಿವೆ. ಸೀಮಂತಕ್ಕೋ, ಮದುವೆಗೋ ಹಸಿರುಸೀರೆಯನ್ನೇ ಏಕೆ ಉಡಬೇಕು ಎಂದು ಪ್ರಶ್ನಿಸುವವರನ್ನು ಯಾವ ನ್ಯಾಯಾಲಯವೂ ಜೈಲಿಗೆ ತಳ್ಳುವುದಿಲ್ಲ. ಧಾರೆಸೀರೆಗೆ ಹಸಿರುಬಣ್ಣವೇ ಶ್ರೇಷ್ಠ ಎಂದ ಅಮ್ಮ, ಸೀಮಂತಕ್ಕೆ ಹಸಿರುಸೀರೆ ಉಡುವುದು ಉತ್ತಮ ಎಂದ ಅತ್ತೆ ಇವರುಗಳೇ ನ್ಯಾಯಾಧೀಶರಾಗಿ ನಮ್ಮ ಸಂಭ್ರಮಕ್ಕೊಂದಷ್ಟು ಬಣ್ಣಗಳನ್ನು ತುಂಬುತ್ತಾರೆ. ಅಷ್ಟಕ್ಕೂ ಬದುಕಿನಲ್ಲಿ ಯಾವತ್ತಿಗೂ ಮರೆಯಾಗದ, ಮುಗಿದುಹೋಗದ ಸಂಭ್ರಮಗಳೆಂದರೆ ಬಣ್ಣಗಳೇ ಅಲ್ಲವೇ!      ಮನುಷ್ಯನಿಗೆ ಬಾಲ್ಯಕ್ಕಿಂತ ಬಲುದೊಡ್ಡ ಸಂಭ್ರಮ ಇನ್ನೊಂದಿಲ್ಲ ಎಂದು ನಂಬಿದವಳು ನಾನು. ಕಾಲ ದೇಶ ಭಾಷೆ ಜಾತಿ ಧರ್ಮ ಯಾವ ಬೇಲಿಯನ್ನಾದರೂ ಕಟ್ಟಿಕೊಳ್ಳಿ, ಅದರಾಚೆಗಿನ ಸ್ವಚ್ಛಂದ ಬಾಲ್ಯವೊಂದರ ನೆನಪು ಎಲ್ಲರೊಳಗೂ ಸದಾ ಜಾಗ್ರತ. ಇನ್ನೊಮ್ಮೆ ಬಾಲ್ಯಕ್ಕೆ ಮರಳುವುದು ಸಾಧ್ಯವಾದರೆ ಅದನ್ನು ಇನ್ನಷ್ಟು ಸುಂದರವಾಗಿಸುವ ಹಗಲುಗನಸೊಂದು ಎಲ್ಲರ ಹೆಗಲಮೇಲೂ ನೇತಾಡುತ್ತಿರುತ್ತದೆ; ಆ ಕನಸುಗಳನ್ನೆಲ್ಲ ಒಂದಿಷ್ಟು ಬಣ್ಣಗಳು ನೇವರಿಸುತ್ತಿರುತ್ತವೆ ಆಗಾಗ. ಬಾಲ್ಯವೊಂದು ಕನಸಾಗುವ ಗಳಿಗೆಯಲ್ಲಿ ಆಗಷ್ಟೇ ನೆಲಕ್ಕುರುಳಿದ ಅಚ್ಚಹಳದಿ ಕರವೀರದ ಮೇಲೆ ಇಬ್ಬನಿಯೊಂದು ಹೂಬಿಸಿಲಿಗೆ ಹೊಳೆದು, ಆ ಜಾಗವನ್ನೆಲ್ಲ ತಿಳಿಹಳದಿ ಬಣ್ಣವೊಂದು ಮಾಯೆಯಾಗಿ ಆವರಿಸಿದಂತೆ ಅನ್ನಿಸುವುದುಂಟು ನನಗೆ. ಹೂಹೃದಯದ ಹುಡುಗನೊಬ್ಬನಿಗೆ, ತಿಳಿಗುಲಾಬಿ ಬಣ್ಣದ ಗ್ರೀಟಿಂಗ್ ಕಾರ್ಡೊಳಗೆ ಹಸಿರು ಜೆಲ್ ಪೆನ್ನಿನಲ್ಲಿ ಬಿಡಿಸಿದ್ದ ಹೃದಯವೊಂದು ಕೆಂಪು ಚೂಡಿದಾರ ಧರಿಸಿ ಕನಸಿನೊಳಗೊಂದು ಕನಸ ಹುಟ್ಟಿಸಿರಬಹುದು. ಒಂಟಿಜೀವವೊಂದು, ಬಾಲ್ಯಕ್ಕೊಂದಿಷ್ಟು ಕನಸುಗಳ ಕರುಣಿಸಿ ಮರೆಯಾದ ನೀಲಿಕಣ್ಣಿನ ಹುಡುಗನ ನೆನಪಲ್ಲಿ ಹೊಸಹೊಸ ಕನಸುಗಳ ಸ್ವೆಟರೊಂದನ್ನು ಹೆಣೆಯುತ್ತಿರಬಹುದು.      ಹೀಗೆ ನೆನಪುಗಳಿಗೆ ಜಾರಿದಂತೆಲ್ಲ ಜೊತೆಗಿಷ್ಟು ಬಣ್ಣಗಳು ಹಿಂಬಾಲಿಸುತ್ತಲೇ ಇರುತ್ತವೆ. ಅಜ್ಜಿಯೋ, ಅಮ್ಮನೋ, ಚಿಕ್ಕಮ್ಮನೋ ನಮ್ಮ ಬಾಲ್ಯದ ಕಥೆ ಹೇಳುವುದನ್ನು ಯಾವತ್ತಾದರೂ ಗಮನಿಸಿದ್ದೀರಾ! ಪುಟ್ಟಪುಟ್ಟ ಸರಕುಗಳೆಲ್ಲ ಸಕಲ ಬಣ್ಣಗಳನ್ನೊಳಗೊಂಡ ವಿವರಗಳಾಗಿ, ಸಾದಾಸೀದಾ ಸುಂದರ ಕಥೆಯೊಂದರಂತೆ ನಮ್ಮ ಬಾಲ್ಯ ಅನನ್ಯ ಅನುಭೂತಿಯಾಗಿ ನಮ್ಮೆದುರು ತೆರೆದುಕೊಳ್ಳುವ ಸಮಯವಿದೆಯಲ್ಲ, ಅದಕ್ಕಾಗಿ ಸದಾ ಕಾಯುತ್ತಿರುತ್ತೇನೆ ನಾನು. ಅಂಥದ್ದೇ ಒಂದು ಚಂದದ ಕಥೆಯಲ್ಲಿ ನನ್ನ ಬಾಲ್ಯ ಒಂದಿಷ್ಟು ಬಣ್ಣಬಣ್ಣದ ಮಣಿಗಳೊಂದಿಗೆ ಸೇರಿಕೊಂಡಿದೆ. ಜೀವನಶೈಲಿಯಂತೆಯೇ ಆಟಿಕೆಗಳೂ ಸಿಂಪಲ್ಲಾಗಿದ್ದ ಹಳ್ಳಿಗಳಲ್ಲಿ ಆಗೆಲ್ಲ ಕಾಣಸಿಗುತ್ತಿದ್ದ ಆಟಿಕೆಗಳೆಂದರೆ ಜಾತ್ರೆಗಳಲ್ಲೋ ಅಥವಾ ತೇರುಗಳಲ್ಲೋ ಮಾರಾಟವಾಗುತ್ತಿದ್ದ ಪ್ಲಾಸ್ಟಿಕ್ ಚೆಂಡುಗಳು, ಲಾರಿ-ಬಸ್ಸುಗಳ ಆಕಾರದ ಪುಟ್ಟಪುಟ್ಟ ಪ್ಲಾಸ್ಟಿಕ್ ವಾಹನಗಳು. ಅವುಗಳಿಗೆ ದಾರಕಟ್ಟಿ ಎಳೆಯುತ್ತಾ ಕೇರಿಯ ಮನೆಗಳನ್ನೆಲ್ಲ ಸುತ್ತುತ್ತಾ ಹಗಲುಗಳು ಕಳೆದುಹೋಗುತ್ತಿದ್ದವಾದರೂ ರಾತ್ರಿಗಳಲ್ಲಿ ಮಾತ್ರ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿತ್ತು. ಹಗಲುಗಳ ಶಾಂತಸ್ವರೂಪಿ ಅಮ್ಮಂದಿರೆಲ್ಲ ರಾತ್ರಿ ರಣಚಂಡಿಯ ಅವತಾರವನ್ನು ತಾಳುವ ದೃಶ್ಯ ಸಾಮಾನ್ಯವಾಗಿತ್ತು. ಅಂತಹ ದೃಶ್ಯವೊಂದನ್ನು ಸುಂದರ ಕಾವ್ಯವನ್ನಾಗಿ ಪರಿವರ್ತಿಸಿದ್ದು ಬಣ್ಣದ ಮಣಿಗಳ ಹಳೆಯದೊಂದು ಪುಟ್ಟ ಪೆಟ್ಟಿಗೆ.      ಅಮ್ಮನಿಗೆ ಆ ಪೆಟ್ಟಿಗೆಯನ್ನು ನನ್ನ ಆಟಿಕೆಯನ್ನಾಗಿಸುವ ಯೋಚನೆ ಅದೆಲ್ಲಿಂದ ಬಂತು ಅವಳಿಗೂ ಗೊತ್ತಿಲ್ಲ. ಅಥವಾ ಆ ಪೆಟ್ಟಿಗೆಯೊಳಗೆ ಮಣಿಗಳು ಎಲ್ಲಿಂದ ಬಂದು ಸೇರಿಕೊಂಡವು ಎನ್ನುವುದಕ್ಕೂ ಉತ್ತರವಿಲ್ಲ. ತುಂಬುಕುಟುಂಬದ ಯಾವುದೋ ಹೆಣ್ಣುಮಗಳ ಸರವೊಂದು ಹರಿದುಹೋದಾಗಲೋ, ಮಕ್ಕಳ ಕೈಗಳನ್ನು ಅಲಂಕರಿಸುತ್ತಿದ್ದ ಕರಿಮಣಿಯ ಬಳೆಯೊಂದು ತುಂಡಾದಾಗಲೋ ಚಲ್ಲಾಪಿಲ್ಲಿಯಾದ ಮಣಿಗಳನ್ನೆಲ್ಲ ಯಾರೋ ಅದರಲ್ಲಿ ತುಂಬಿಸಿಟ್ಟಿರಬಹುದು. ಈಗಲೂ ಅಟ್ಟದಮೇಲೆ ನೆನಪುಗಳ ಪಳೆಯುಳಿಕೆಯಂತೆ ಬೆಚ್ಚಗೆ ಕುಳಿತಿರುವ ಆ ಪೆಟ್ಟಿಗೆಯಲ್ಲಿ ಬಣ್ಣಗಳೆಲ್ಲ ಬೆಳಕಿಗೆ ಹೊರಳಲು ಹಾತೊರೆಯುತ್ತಿರುವ ಹಂಬಲವೊಂದು ಕಾಣಿಸುವುದುಂಟು ನನಗೆ. ಆಕಾಶಬಣ್ಣದ ನುಣುಪಾದ ಮಣಿಗಳು, ಪಾರಿವಾಳದ ಕಣ್ಣುಗಳು ಅತ್ತಿತ್ತ ಹರಿದಾಡುವ ಅನುಭವ ನೀಡುವ ಕಪ್ಪುಮಿಶ್ರಿತ ಕೆಂಪುಮಣಿಗಳು, ಜೊತೆಗೊಂದಿಷ್ಟು ಬೇರೆಬೇರೆ ಆಕಾರ-ಗಾತ್ರಗಳ ಕರಿಮಣಿಗಳು ಎಲ್ಲವೂ ಇದ್ದವು ಅದರಲ್ಲಿ. ಮನೆಯ ಕೆಲಸಗಳನ್ನೆಲ್ಲ ಮುಗಿಸಿ ಮಲಗಲು ರೆಡಿಯಾಗುತ್ತಿದ್ದ ಅಮ್ಮ ರೂಮಿನ ಲೈಟನ್ನು ಉರಿಯಲು ಬಿಟ್ಟು, ಪೆಟ್ಟಿಗೆಯ ಪುಟ್ಟ ಪ್ರಪಂಚವನ್ನು ನನ್ನೆದುರು ತೆರೆದಿಟ್ಟು, ಕೈಗೊಂದು ದಾರವನ್ನು ಕೊಟ್ಟು ಮಲಗಿಬಿಡುತ್ತಿದ್ದಳಂತೆ. ನಾನು ದಾರದೊಳಗೆ ಒಂದೊಂದಾಗಿ ಮಣಿಗಳನ್ನು ಪೋಣಿಸಿ, ಬಣ್ಣಬಣ್ಣದ ಸರವೊಂದನ್ನು ಸೃಷ್ಟಿ ಮಾಡಿ ಪೆಟ್ಟಿಗೆಯೊಳಗೆ ಇಟ್ಟು, ಡ್ಯೂಟಿಯೊಂದನ್ನು ಮುಗಿಸಿದವಳಂತೆ ಅಪ್ಪನ ಕೆಂಪುಚಾದರದೊಳಗೆ ಸೇರಿಕೊಂಡು ಮಲಗುತ್ತಿದ್ದೆನಂತೆ. ಒಂದೆರಡು ದಿನಗಳ ಕಥೆಯಲ್ಲ ಈ ಮಣಿಸರಗಳದ್ದು; ಎರಡು ಮೂರು ವರ್ಷಗಳ ದಿನಚರಿ. ಪುಟ್ಟಮಗುವೊಂದು ಪುಟ್ಟಪುಟ್ಟ ಕೈಗಳಲ್ಲಿ ದಾರ ಹಿಡಿದು ಮಣಿಗಳನ್ನು ಪೋಣಿಸುತ್ತಾ, ತನ್ನ ಸುತ್ತ ಬಣ್ಣದ ಲೋಕವೊಂದನ್ನು ಸೃಷ್ಟಿಸಿಕೊಳ್ಳುವಂತಹ ಸುಂದರ ದೃಶ್ಯಕಾವ್ಯ ಬೇರೆಲ್ಲಾದರೂ ನೋಡಲು ಸಿಕ್ಕೀತೇ!      ಹೀಗೆ ಬಾಲ್ಯವೆಂಬ ಸಂಭ್ರಮ ಅಚ್ಚುಕಟ್ಟಾಗಿ ಬಣ್ಣಗಳೊಂದಿಗೆ ಬೆರೆತು, ನೆನಪಾಗಿ ಎದೆಯ ಗೋಡೆಗಂಟಿಕೊಂಡಿತು. ಜಡೆಯ ಮೇಲೆ ಹೂವಾಗಿ ಅರಳುತ್ತಿದ್ದ ಕೆಂಪು, ಹಸಿರು ರಿಬ್ಬನ್ನುಗಳನ್ನು ಲವ್ ಇನ್ ಟೋಕಿಯೊ ಹೇರ್ ಕ್ಲಿಪ್ ಗಳು ರಿಪ್ಲೇಸ್ ಮಾಡಿದವು. ಉದ್ದಜಡೆಯ ಮೋಹ ಮರೆಯಾದಂತೆಲ್ಲ ಪಾರ್ಲರುಗಳ ಕೆಂಪು, ಗೋಲ್ಡನ್ ಕಲರುಗಳು ಸ್ಟ್ರೀಕ್ಸುಗಳಾಗಿ ತಲೆಯನ್ನೇರಿದವು. ಬಾಲ್ಯದ, ಯೌವನದ ಅವೆಷ್ಟೋ ಆಸೆ-ಕನಸುಗಳು ಕಣ್ಮರೆಯಾಗಿ ಹೋದರೂ ಬಣ್ಣಗಳೆಡೆಗಿನ ಮೋಹ ಮಾತ್ರ ಅಟ್ಟದ ಮೇಲಿನ ಪೆಟ್ಟಿಗೆಯಂತೆ; ಮುಪ್ಪಾಗುವುದಿಲ್ಲ. ಮಳೆಗಾಲಕ್ಕೆ ತಿಳಿಹಳದಿ ಕೊಡೆಯೊಂದು ಸಂಗಾತಿಯಾಗಿ ಜಗಲಿಗಿಳಿದರೆ, ಚಳಿಗಾಲಕ್ಕೊಂದು ಬಣ್ಣಬಣ್ಣದ ಹೂಗಳ ದುಪ್ಪಟಿ ಮಂಚವೇರುತ್ತದೆ. ಬೇಸಿಗೆಯ ತಿಳಿಮಜ್ಜಿಗೆಯ ಮೇಲೆ ಅಚ್ಚಹಸಿರು ಕೊತ್ತಂಬರಿಸೊಪ್ಪಿನ ಎಲೆಯೊಂದು ತಣ್ಣಗೆ ತೇಲುತ್ತಿರುತ್ತದೆ; ನೆನಪುಗಳಂತೆ!      ಹೀಗೆ ಹಚ್ಚಹಸಿರಾಗಿ ತೇಲುವ ನೆನಪುಗಳಲ್ಲಿ ಆಫೀಸಿನ ಹೋಳೀಹಬ್ಬವೊಂದು ಕೂಡಾ ಶಾಮೀಲಾಗಿದೆ. ಅಲ್ಲೊಬ್ಬ ಹುಡುಗನಿದ್ದ; ಲೆನ್ಸ್ ಹಾಕುತ್ತಿದ್ದ ಅವನ ಕಣ್ಣುಗಳಲ್ಲೊಂದು ಅನನ್ಯವಾದ ನಿರ್ಲಿಪ್ತತೆಯಿರುತ್ತಿತ್ತು. ಅವನೊಂದಿಗೆ ಮಾತನಾಡುವಂತಹ ಯಾವ ಅಗತ್ಯವೂ ಇರದಿದ್ದ ಕಾರಣ ಅವನು ಎದುರಾದಾಗಲೆಲ್ಲ ಅವನ ಕಣ್ಣುಗಳನ್ನೊಮ್ಮೆ ನೋಡಿ ಸುಮ್ಮನಾಗಿಬಿಡುತ್ತಿದ್ದೆ. ಆಫೀಸಿನ ತುಂಬಾ ಹೋಳೀಹಬ್ಬದ ಸಂಭ್ರಮ ತುಂಬಿದ್ದ ಒಂದು ಸಂಜೆ ನಾನೊಬ್ಬಳೇ ಮುಗಿಸಲೇಬೇಕಾದ ಕೇಸೊಂದನ್ನು ಹಿಡಿದು ಕೂತಿದ್ದೆ. ಡ್ರಾದಲ್ಲಿದ್ದ ಬಣ್ಣದ ಪ್ಯಾಕೇಟುಗಳನ್ನು ಒಯ್ಯುತ್ತಿದ್ದ ಅದೇ ಲೆನ್ಸ್ ಕಣ್ಣಿನ ಹುಡುಗ ನನ್ನ ಡೆಸ್ಕಿನೆದುರು ಒಮ್ಮೆ ನಿಂತು ಗಿಳಿಹಸಿರು ಬಣ್ಣದ ಪ್ಯಾಕೆಟೊಂದರ ಟಾಚಣಿಯನ್ನು ಬಿಡಿಸಿ, ಚಿಟಿಕೆಬಣ್ಣವನ್ನು ಕೆನ್ನೆಗಂಟಿಸಿ ಅವನ ಪಾಡಿಗೆ ಹೊರಟುಹೋದ. ಆ ಘಟನೆಯಿಂದಾಗಿ ನಮ್ಮ ಮಧ್ಯೆ ಪ್ರೇಮಾಂಕುರವಾಗುವಂತಹ ಅದ್ಭುತಗಳೇನೂ ಘಟಿಸದೇ ಹೋದರೂ, ಈಗಲೂ ಹೋಳೀಹಬ್ಬದ ಗಿಳಿಹಸಿರು ಬಣ್ಣದ ಪ್ಯಾಕೆಟನ್ನು ನೋಡಿದಾಗಲೆಲ್ಲ ನಿರ್ಲಿಪ್ತ ಕಣ್ಣುಗಳಿಂದ ಟಾಚಣಿ ಬಿಡಿಸಿದ ಹುಡುಗ ನೆನಪಾಗುತ್ತಾನೆ. ಅವನ ಬೆರಳಂಚಿಗೂ ಗಿಳಿಹಸಿರು ಬಣ್ಣದ ನೆನಪೊಂದು ಅಂಟಿಕೊಂಡಿರಬಹುದು! **** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು; ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡೆನಿಂಗ್ ಇವರ ನೆಚ್ಚಿನ ಹವ್ಯಾಸ

ಅಂಕಣ ಬರಹ Read Post »

ಇತರೆ, ಪರಿಸರ

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ? ನಂದಿನಿ ಹೆದ್ದುರ್ಗ ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. ‘ರೀಫಿಲ್ ಮಾತ್ರ ಸಾಕು’ ಎಂದೆ.. ‘ಅಯ್ಯೋ ರೀಫಿಲ್ಗೂ ,ಫುಲ್ ಪೆನ್ನಿಗೂ ಎರಡೇ ರೂಪಾಯಿ ವ್ಯತ್ಯಾಸ ಮೇಡಮ್ . ಇದನ್ನೇ ತಗೋಳಿ ‘ ಅಂದ ಅಂಗಡಿಯ ಹುಡುಗ. ತಕ್ಕಮಟ್ಟಿಗೆ ವಿದ್ಯಾವಂತನಂತೇ ಕಾಣುತ್ತಿದ್ದ.. ಎರಡು ಮೂರು ರೂಪಾಯಿಗಳ ವ್ಯತ್ಯಾಸಕ್ಕಲ್ಲಣ್ಣ ರಿಫಿಲ್ ಕೇಳ್ತಿರುವುದು.. ನಾನು ಉತ್ಪತ್ತಿ ಮಾಡುವ ಕಸದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಎಂದೆ… ವಿಚಿತ್ರ ಪ್ರಾಣಿಯಂತೆ ಸುತ್ತಲಿನವರು ನೋಡಿದರೆ ಇನ್ನೂ ಕೆಲವರು ನೀವು ಏನ್ ಮಾಡ್ತೀರಾ ಮೇಡಮ್…?ಎಂದರು. ಗೃಹಿಣಿ ಎಂದೆ.. ಅಬ್ಬಾ ಗೃಹಿಣಿ ಯಾಗಿ ಇಷ್ಟು ಸೂಕ್ಷ್ಮ ವಿಷಯಗಳಲ್ಲಿ ಗಮನವಿದೆಯಾ ಎಂದರು… ಗೃಹಿಣಿ ಇಂತಹ ವಿಷಯಗಳಲ್ಲಿ ಹೆಚ್ಚು ಜಾಗೃತಿ ವಹಿಸಬಾರದೇ ಅಥವಾ ಆಕೆ ಬೇಸಿಕಲಿ ಅಸೂಕ್ಷ್ಮಳೇ? ಅವರ ಪ್ರಶ್ನೆಗಳು ವಿಚಿತ್ರವೆನಿಸಿತು. “ಇಲ್ಲಾಆಆಆ….ಇನ್ ಮುಂದೆ ಹೀಗೇ ತರಕಾರಿ ತಂದರೆ ನಾನು ಮನೆಯೊಳಗೇ ತಗೊಂಡು ಹೋಗಲ್ಲ…” ಅವತ್ತು ಮನೆಯಲ್ಲಿ ಜೋರು ಜಗಳ. ಅವಳ ಗಂಡ ದಿನಾ ಎಫ್ಬಿಯಲ್ಲಿ ಬರುವ ವಿಡಿಯೊ ಗಳನ್ನು ನೋಡಿ ‘ನೋಡ್ ಸುಮಿ ಇಲ್ಲಿ.. ಮೀನಿನ ಹೊಟ್ಟೆಯಲ್ಲು ,ಹಸುವಿನ ಹೊಟ್ಟೆಯಲ್ಲೂ ಬರೀ ಪ್ಲಾಸ್ಟಿಕ್ಕು…ಜನರಿಗೆ ಬುದ್ದಿನೇ ಬರಲ್ಲಾ ಅಲ್ವಾ…’ ಅಂತಿರ್ತಾನೆ. ಆದರೆ ಅವನು ಮಾತ್ರ ಹೊರಗೆ ಹೋಗುವಾಗ ಕೈಚೀಲ ಕೊಟ್ರೆ ಅಲ್ಲೇ ಇಟ್ಟು ಹೋಗ್ತಾನೆ.. ನಾನೊಬ್ಬ ಪ್ಲಾಸ್ಟಿಕ್ ಬಳಸುವುದರಿಂದ ಮಹಾ ಬದಲಾವಣೆ ಏನೂ ಆಗಲ್ಲ…ಅನ್ನುವುದು ಅವನ ವಾದ. ಬಹಳಷ್ಟು ಬಾರಿ ತಿಳಿಹೇಳಿ,ವಾದಿಸಿ ಸೋತ ಸುಮತಿ ಅವತ್ತು ಪ್ಲಾಸ್ಟಿಕ್ ನಲ್ಲಿ ತಂದ ತರಕಾರಿಗಳನ್ನು ಒಳಗೆ ತೆಗೆದುಕೊಂಡೇ ಹೋಗಲಾರೆ ಅಂತ ಮುಷ್ಕರ ಮಾಡಿದಳು.. ಆ ಮೇಲಿಂದ ಸ್ವಲ್ಪ ಸ್ವಲ್ಪ ಬದಲಾವಣೆ ಕಾಣುತ್ತಿದೆ… ಚಪ್ಪಲಿ ಕೊಂಡ ಮೇಲೆ ಅದಕ್ಕಾಗಿ ಕೊಡುವ‌ ರಟ್ಟಿನ ಪೆಟ್ಟಿಗಳನ್ನು ಬೇಡ ಎಂದರೆ ಅಂಗಡಿಯವ‌ನಿಗೆ ಅಚ್ಚರಿ.! ಸೀರೆ ಕೊಂಡಮೇಲೆ ಪಾಕೀಟು ಹಿಂದಿರುಗಿಸಿದರೆ ಹೊಸತರ ಹಾಗೆ ಅನಿಸುವುದಿಲ್ವಂತೆ. ಅಗತ್ಯವಿದೆಯೇ ಅದೆಲ್ಲಾ? ತಿನ್ನುವ ಪಿಜ್ಜಾದ ಮೂರುಪಟ್ಟು ಪ್ಯಾಕಿಂಗ್. ಸಣ್ಣದೊಂದು ಬಿಸ್ಕತ್ತು ಪ್ಯಾಕಿಗೆ ಮತ್ತೇನೋ ಪ್ಲಾಸ್ಟಿಕ್ ಆಟಿಕೆ ಫ್ರಿ.. ಆ ಫ್ರಿ ಸಿಗುವ ವಸ್ತವಿಗಾಗಿಯೇ ಮಗುವಿಗೆ ಬಿಸ್ಕತ್ತು ಪ್ಯಾಕಿನ ಮೋಹ.. ಒಂದು ಕೊಂಡರೆ ಮತ್ತೊಂದೇನೋ ಉಚಿತ… ಆ ಉಚಿತದ್ದು ಮೂರು ದಿನಕ್ಕೆ ಖಂಡಿತವಾಗಿ ಕಸ.. ಚೈನಾ ಮೇಡ್ ಬಹಳ ಚೀಪು. ಇದೊಂದು ಇರಲಿ ಅಂತ ಅನಿಸುವುದೂ ಸಹಜ. ಮೂರೇ ದಿನಕ್ಕೆ ಕೆಟ್ಟು ಹೋಗುವ ಅವು ರಿಪೇರಿಗೆ ಒದಗಲಾರವು. ಮತ್ತೆ ಕಸ.. ಮನೆಯಿಂದ ಹೊರಗೆ ಕಾಲಿಟ್ಟರೆ ಕಸ.. ಹೊರಗಿನಿಂದ ಒಳಗೆ ಬಂದರೆ ಮತ್ತೊಂದಿಷ್ಟು ಕಸ.. ಕಸ ಕಸ ಕಸ.. ಬದುಕೇ ಕಸಮಯವಾದ ಕಾಲ ಇದು. …. ಈ‌ ಮೊದಲೆಲ್ಲಾ ಮಹಾನಗರಗಳಿಗೆ ಮಾತ್ರ ಕಸ ವಿಲೇವಾರಿ ಸಮಸ್ಯೆ ಎನಿಸುತಿತ್ತು.. ಹಳ್ಳಿಯಲ್ಲಾದರೆ ಪ್ರತಿ ಮನೆಯಲ್ಲೂ ಒಂದು ತಿಪ್ಪೆ ಇರುತಿತ್ತು..ಮನೆಯ ಎಲ್ಲಾ ಕಸವೂ ಅಲ್ಲಿ ಕೊಳೆತು ಅದರ ಮೇಲೆ ಎರಡು ಕುಂಬಳ ಬೀಜ ಎಸೆದರೆ ವರ್ಷಕ್ಕಾಗುವಷ್ಟು ಕುಂಬಳ ಸಿಕ್ತಿತ್ತು.. ಆದರೆ.. ಪ್ಲಾಸ್ಟಿಕ್ ಹಳ್ಳಿಯನ್ನೂ ಬಿಡುತಿಲ್ಲ ಈಗ. ಪ್ರತಿ ಪ್ರಜ್ಞಾವಂತ ಹಳ್ಳಿಗ ನಿತ್ಯ ದಿನಚರಿಯೊಂದಿಗೆ ಕಡ್ಡಾಯ ಎನುವಂತೆ ಒದಗುವ ಪ್ಲಾಸ್ಟಿಕ್ ಅನ್ನು ಏನು ಮಾಡಬಹುದು ಅಂತ ತೋಚದೆ ಒದ್ದಾಡುತ್ತಾನೆ.. ನಗರದಂತೆ ಕಸ ಒಯ್ಯುವ ಗಾಡಿ ಇಲ್ಲಿಗೆ ಬರುವುದಿಲ್ಲ. ನೀರೊಲೆ ಕಾಣಿಸುವುದು ಸುಲಭದ ಮಾರ್ಗವಾದರೂ ವಾಯುಮಾಲಿನ್ಯ ನಿಶ್ಚಿತ. ಮಣ್ಣು ಅದನ್ನು ಜೀರ್ಣಿಸಿಕೊಳ್ಳಲಾರದು.. ಹರಿವ ನೀರಿಗೆ ಬಿಡವುದು ಥರವಲ್ಲ. ಮತ್ತೇನು ಮಾಡಬಹುದು..? … ಪ್ರತಿ ಮನುಷ್ಯನು ಜಾಗೃತನಾಗಲೇಬೇಕಾದ  ಪರ್ವಕಾಲ ಇದು ಎನಿಸುತ್ತದೆ. ಆದಷ್ಟೂ ಮಟ್ಟಿಗೆ ತಾನು ವೈಯಕ್ತಿಕವಾಗಿ ಸೃಷ್ಟಿಸುವ ಕಸದ ಪ್ರಮಾಣವನ್ನು ಕಡಿಮೆ ಮಾಡುವ ಕಡೆಗೆ ಯೋಚಿಸಲೇಬೇಕಾಗಿದೆ. ಒಂದು ಎಕ್ಸಟ್ರಾ ಪೇಪರ್ ನ್ಯಾಪ್ಕಿನ್ ತೆಗೆಯುವ ಮೊದಲು,ಅನಗತ್ಯ ವಸ್ತವೊಂದನ್ನು ಕೊಳ್ಳುವ ಮೊದಲು,ಒಂದು ತುತ್ತು ಆಹಾರವನ್ನು ವ್ಯರ್ಥಮಾಡುವ ಮುನ್ನ ಎರಡನೇ ಬಾರಿ ಯೋಚಿಸುವವ ಮಾತ್ರ ನಿಜಕ್ಕೂ ಇಂದಿನ ನಾಗರಿಕ ವ್ಯಕ್ತಿ ಎನ್ನಬಹುದು.. “ಮಾಲಿನ್ಯ ನಿಯಂತ್ರಿಸಿ ,ಪರಿಸರ ಉಳಿಸಿ” ಈ ಘೋಷ ವಾಕ್ಯಕ್ಕೆ ಬದ್ದರಾಗಲೇಬೇಕಾದ ಕಾಲ ಸನ್ನಿಹಿತ ವಾಗಿದೆ. … ಜಗತ್ತೇ ಒಂದು ಕುಟುಂಬ ಎನ್ನುವ ಮಾತು ಈಗಿನ ದಿನಮಾನಗಳಲ್ಲಿ ಹೆಚ್ಚು ಪ್ರಸ್ತುತ ಎನಿಸುವುದಿಲ್ಲವೇ.? ದೂರದ ವೂಹಾನ್ ನಲ್ಲಿ‌ ಬಂದ ‌ಕೊರೊನಾ ತಿಂಗಳೊಪ್ಪತ್ತಿಗೆ ಜಗತ್ತನ್ನೇ ವ್ಯಾಪಿಸಿದ ಬಗೆ .. ಭೂಮಿಯ ಆ ಬದಿಯಲ್ಲಿ ಬಂದ ರಾಕ್ಷಸ ಸ್ವರೂಪಿ ಮಿಡತೆಗಳು ಎರಡೇ ವಾರದಲ್ಲಿ ನಮ್ಮ ದೇಶಕ್ಕೂ ಬಂದ ವೇಗ. ಲೋಕವನ್ನೇ ಆಹುತಿ ತೆಗೆದುಕೊಳ್ಳುವಂಥ  ಮನುಷ್ಯ ಮನುಷ್ಯನ ನಡುವಿನ ವರ್ಣ ವರ್ಗ ಸಂಬಂಧಿ ಕದನಗಳು ದಿನ‌ ಮುಗಿಯುವುದರೊಳಗಾಗಿ ಎಲ್ಲೆಡೆ ಸುದ್ದಿಯಾಗುವ ಗದ್ದಲೆಬ್ಬಿಸುವ ಹುನ್ನಾರ.. ಈ ಎಲ್ಲವೂ “ಸದ್ಯ..ನಾನು ಸುಖವಾಗಿದ್ದೇನೆ ಸಾಕು” ಎನ್ನುವ ಮನಸ್ಥಿತಿಗೆ ಅಂಕಿತ ಹಾಡಲಿಕ್ಕಾಗಿಯೇ ಬಂದವು ಎಂಬುದು ತಿಳಿಯುತ್ತಿದೆ.. ನೀನು ಕ್ಷೇಮವಿದ್ದರೆ ಮಾತ್ರ ನಾನೂ ಕ್ಷೇಮ ಎನ್ನುವ ಹೊಂದಾವಳಿ ನಿರ್ಮಾಣವಾಗಲೇಬೇಕಿದೆ.. ಜೂನ್ ಐದು..ಅಂದರೆ ಇಂದು ವಿಶ್ವ ಪರಿಸರ ದಿನ.. ನಾಲ್ಕು ಮಾತಾಡಿ, ನಾಲ್ಕಕ್ಷರ ಬರೆದು ನಮ್ಮ ಕರ್ತವ್ಯ ಮುಗಿಸುವ ಯೋಜನೆಗೆ ಇತಿಶ್ರಿ ಹಾಡಿ ಸಣ್ಣಪುಟ್ಟ ಬದಲಾವಣೆಗಳನ್ನು ದಿನಚರಿಗೆ ಅಳವಡಿಸಿಕೊಳ್ಳಬಹುದೇ..? ನೂರು ಸಸಿಯನ್ನು ಕ್ಯಾಮೆರಾಗಾಗಿ ನೆಟ್ಟು ಒಂದೂ ಬದುಕದ ಒಣ ಮಹೋತ್ಸವದ ಆಚರಣೆಗೆ ಬದಲಾಗಿ ತನ್ನ ಇತಿಮಿತಿಯಲ್ಲಿ ಐದಾದರೂ ಗಿಡಗಳನ್ನು ನೆಟ್ಟು ಪೋಷಿಸುವುದಕ್ಕೆ ಈ ದಿನವನ್ನು ನಿಮಿತ್ತ ಮಾಡಿಕೊಳ್ಳಬಹುದೇ..? ಒಮ್ಮೆ ಹಿಂದಿರುಗಿ ನೋಡಿದರೆ ಹಿರಿಯರು ನಿರ್ಮಿಸಿಕೊಂಡ ದೇವರಕಾಡು,ಬನದ ಮರ,ಚೌಡಿ ಪೂಜೆ, ಬಯಲು ಬಸವ,ಕಾಡು ಬಸವ,ಬ್ರಹ್ಮ ದೇವರು, ಗುಂಡುತೋಪು ಇವೆಲ್ಲವೂ ಅದೆಷ್ಟು ಸಹಜವಾಗಿ ಈ ನೆಲ ಜಲ ವೃಕ್ಷಗಳನ್ನು ರಕ್ಷಿಸುತ್ತಿದ್ದವು. ಇವೆಲ್ಲವೂ ‘ನಂಬಿಕೆಯೆಂದರೆ..,ಇಲ್ಲಾ ಇಲ್ಲ ಮೂಢನಂಬಿಕೆ’  ಎನ್ನುವ ನಾಗರಿಕರ ಲೋಕ ಈಗ ನಮ್ಮದು. … ಮನುಷ್ಯನ ಮಿತಿ ಮೀರಿದ ವೇಗಕ್ಕೆ ಇತಿ ಹೇಳಲಿಕ್ಕಾಗಿಯೇ ಜಗತ್ತಿಗೆ ಕೊರೊನಾ ಬಂದಿದೆ ಎನುವುದನ್ನು ಒಂದಿಲ್ಲೊಂದು ಬಾರಿ ನಾವೆಲ್ಲರೂ ಹೇಳಿರುವ ಈ ಕಾಲದಲ್ಲಿ  ನಿತ್ಯವೂ ಬೇಸರ ಹುಟ್ಟಿಸುವಷ್ಟು ಬಾರಿ ಜಗತ್ತಿನ,ದೇಶದ ,ರಾಜ್ಯದ ,ಜಿಲ್ಲೆಯ, ಸ್ಥಳೀಯ ಸೋಂಕಿನ ಅಂಕಿಅಂಶಗಳನ್ನು ಮಾದ್ಯಮಗಳು  ಹೇಳುತ್ತಲೇ ಇರುತ್ತವೆ.. ಪ್ರತಿ ಬಾರಿ ಕೇಳಿದಾಗಲೂ ಮಾಸ್ಕಿನ ನೆನಪೂ,ಕೈತೊಳೆಯುವ ಮನಸ್ಸೂ,ಕ್ವಾರಂಟೈನಿನ ಭಯವೂ ಹೃದಯಮೆದುಳಿರುವ ಈ‌ ಮನುಷ್ಯ ಮಾತ್ರನಿಗೆ ಹೊಕ್ಕಿಳಿಯುವುದಂತೂ ಸತ್ಯ. ಹೀಗೊಂದು ಬಗೆ ಮನುಷ್ಯನನ್ನು ಎಚ್ಚರಿಸುತ್ತದೆ ಎಂದರೆ ಪ್ರತೀ ಹನ್ನೆರಡು ತಾಸಿಗೊಮ್ಮೆ ನಮ್ಮ ದೇಶದ,ನಮ್ಮ ರಾಜ್ಯದ,ಜಿಲ್ಲೆಯ, ತಾನು ವಾಸಿಸುವ ಏರಿಯಾದ ಮಾಲಿನ್ಯದ ಕುರಿತಾದ ಅಂಕಿಅಂಶಗಳು ಪ್ರತಿಯೊಬ್ಬರ ಮೊಬೈಲಿಗೆ ಬಂದು ಬೀಪಿಸಿದರೆ ನಮ್ಮೊಳಗೆ ಒಂದು ಎಚ್ಚರಿಕೆಯ ಗಂಟೆ ಮೊಳಗಬಹುದೇ…? ಪ್ರತೀ ರಸ್ತೆಯ ತಿರುವಿನಲ್ಲಿ, ಊರಿನ ಆರಂಭದಲ್ಲಿ ವಾಯುಮಾಲಿನ್ಯ ,ಶಬ್ದ ಮಾಲಿನ್ಯ, ನೆಲಮಾಲಿನ್ಯ ಇಷ್ಟಿಷ್ಟಿದೆ ಎನ್ನುವ ಮಾಹಿತಿ ದೊರಕಿದರೆ ನಮ್ಮ ಕೊಳ್ಳುಬಾಕತನಕ್ಕೆ ,ಕಸೋತ್ಪಾದನೆಗೆ ಒಂದು ಶೇಕಡವಾದರೂ ತಡೆ ಬೀಳಬಹುದಲ್ಲವೇ..? ಒಂದು ನದಿ ಅಥವಾ ಹೊಳೆಯ  ನೀರಿನ ಮಟ್ಟದಂತೆಯೇ ಅದರ ಜಲದ ಮಾಲಿನ್ಯ ‌ಮಟ್ಟವೂ ಪ್ರತಿನಿತ್ಯ ಮಾಹಿತಿ ಬೋರ್ಡಿನಲ್ಲಿ ದಾಖಲಾದರೆ  ನಮ್ಮ ಅಸೂಕ್ಷ್ಮತೆ ತುಸುವಾದರೂ ಬದಲಾಗಬಹುದೇ..? … ಪರಿಸರದಷ್ಟು ನಿಗೂಢ, ನಿಷ್ಠುರ  ವಿಷಯ ಬೇರೊಂದಿಲ್ಲ. ತಾನು ಗೆದ್ದೆ ಎಂದುಕೊಂಡಾಗಲೆಲ್ಲಾ ಅದು ಮನುಷ್ಯ ಜೀವಿಗೆ ನಾನಿದ್ದೇನೆ ಎನುವಂತೆ ಪಾಠ ಕಲಿಸುತ್ತಲೇ ಬಂದಿದೆ.. ಬದುಕು ಮತ್ತು ಭೂಮಿ ಒಂದನ್ನೊಂದು ಗಾಢವಾಗಿ ಅವಲಂಬಿಸಿರುವುದು ತಿಳಿದ ನಂತರವೂ ನಮ್ಮ ಹಮ್ಮು ಕಮ್ಮಿಯಾಗುವುದಿಲ್ಲ.. ಗುಬ್ಬಚ್ಚಿಯನ್ನು ನಾಶ ಪಡಿಸಿದರೆ ತಾನು ವರ್ಷಕ್ಕೆ ಬೆಳೆಯುವ ಧಾನ್ಯ  ಮೂರು ವರ್ಷ ಉಣ್ಣಲು ಸಾಲುತ್ತದೆ ಎಂದುಕೊಂಡ ತಲೆತಿರುಕ ಚೀನಾ ಅವುಗಳನ್ನು ಕೊಂದು ಅನುಭವಿಸಿದ ಬೇಗೆ ನಮ್ಮ ಕಣ್ಣೆದುರಿಗೇ ಇದ್ದರೂ ತಪ್ಪಿನಿಂದ ನಾವು ಕಲಿಯುವುದಿಲ್ಲ… ಗರ್ಭ ತುಂಬಿಕೊಂಡ ಆನೆಗೆ ಹಣ್ಣಿನ ರೂಪದಲ್ಲಿ ಸಾವು ತೋರುವ ಮಹಾ ಮನುಷ್ಯರು ನಾವು… ಅಗಾಧ‌ನೋವು ಅನುಭವಿಸುತ್ತಲೇ ಸುಮ್ಮನೇ ಘೀಳಿಟ್ಟು ,ಹರಿವ ನದಿಗಿಳಿದು ಬೇಗೆ ಶಮನಗೊಳಿಸಿಕೊಳ್ಳಲೆತ್ನಿಸಿ ಸಾವು ನೋಡಿದ ಯಃಕಶ್ಚಿತ್ ಆನೆ ಅದು.. ಮನುಷ್ಯ ಹೇಗೆ ಮತ್ತು ಏಕೆ ಇಷ್ಟೊಂದು ಸ್ವಾರ್ಥಿಯಾದ.!! ಹಣವೇ..?ಹಸಿವೇ…?ಗೆಲ್ಲುವ ಬಗೆಯೇ? ಸಾಮಾನ್ಯ ತಿಳುವಳಿಕೆಗೂ ನಿಲುಕುವ ಸಂಗತಿ ಎಂದರೆ ಎಕಾಲಜಿ ಮತ್ತು ಎಕಾನಮಿ ಸದಾ ಒಂದಕ್ಕೊಂದು ಪೂರಕವಾಗಿಯೇ ಕೆಲಸ ಮಾಡುತ್ತವೆ. ಹಾವು ಇಲಿಯನ್ನು,ಇಲಿ ಕಪ್ಪೆಯನ್ನು ಕಪ್ಪೆ ಕೀಟವನ್ನು ,ಕೀಟ ಹೂವು ಹೀಚುಗಳನ್ನು ತಿನ್ನುವುದು ಕೊರತೆ ಅಲ್ಲ..ಅದೇ ಕ್ರಮ ಬದ್ದತೆ ‌. its not by default.. It is by design.. .. ಮಣ್ಣನ್ನು ಆರೋಗ್ಯವಾಗಿಡುವ,ಪರಿಸರವನ್ನು ಸಹಜವಾಗಿರಿಸುವ , ಕಸದ ಉತ್ಪತ್ತಿ ಕಡಿಮೆಯಾಗಿಸುವ ಕುರಿತು ನಮ್ಮ ಕೊಡುಗೆ ಏನು.? ಬಹುಶಃ ಇಂದಲ್ಲದಿದ್ದರೆ ಇನ್ನೆಂದೂ‌ ನಮಗೆ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗುವ ಅವಕಾಶ ಸಿಗದೇ ಹೋಗಬಹುದು… ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.? _ ನಂದಿನಿ ಹೆದ್ದುರ್ಗ.

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. Read Post »

ಕವಿತೆ ಕಾರ್ನರ್

ಅದೊಂದು ಗಳಿಗೆ.

ಅದೊಂದು ಗಳಿಗೆ. ನಿನ್ನ ಕಾಣುವ ಬಯಕೆಯೊಂದು ಮತ್ತೆ ಮತ್ತೆ ಮುಗಿಬೀಳಲು ತುಕ್ಕು ಹಿಡಿದ ಬುದ್ದಿ ಹಿಡಿತ ತಪ್ಪಿ ಬಂದು ನಿಂತಿದ್ದು ನಿನ್ನ ಮನೆಯಂಗಳಕೆ ಬಂದಾಗ ನೀನು ಮುಚ್ಚಿದ ಕದ ತೆರೆಯದೆ ಕಾಯಿಸಿದ್ದು ನಿನ್ನೊಳಗಿನ ಅಹಮ್ಮಿನ ತುಣುಕಿನೊಂದಂಶವಾಗಿತ್ತು ಕರಗಿದ ಹಗಲು ನಿಶ್ಯಬ್ದ ಇರುಳೊಳಗೆ ಕರಗಿ ಲೀನವಾಗುವ ಸರಿಹೊತ್ತಲ್ಲಿ ದಿಡೀರನೆ ಜ್ಞಾನೋದಯವಾಗಿ ಕಣ್ಮುಂದೆ ಕಂಡ ಮಾಣಿಕ್ಯವೊಂದು ಕಣ್ಮರೆಯಾದ ಪರಿಗೆ ಏಳೂರುಗಳೂ ದಿಗ್ಬ್ರಮೆಗೊಳಗಗಿದ್ದವು. ಸುದೀರ್ಘ ಬರದ ಬೆಂಕಿಯೊಳಗೆ ಬೆಂದ ನನ್ನೂರೊಳಗಿನ ಹಸಿವಿನ ಹಾಹಾಕಾರಕ್ಕೆ ಅಸುನೀಗಿದ ಹಾಲುಗಲ್ಲದ ಹಸುಗೂಸುಗಳ ಹೊತ್ತು ಮಣ್ಣು ಮಾಡಿದ ಕೈಗಳಿಗೆ ಹತ್ತಿದ ಕುಷ್ಠ ಕಿವಿ ಮೂಗು ಪಾದಗಳ ಬೆರಳ ಸಂದಿಗಳಿಗೆ ವ್ಯಾಪಿಸಿ ಉರಿದು ಹೋಯಿತು ಹಾಗೇನೆ ಹಗಲ ಚಿತೆ ಹಿಮ ಪರ್ವತದ ತುತ್ತ ತುದಿಯಲಿ ನೆಲೆಸಿದ ಶಂಕರನ ಪಾದಗಳ ನುಣುಪಾದ ತಣ್ಣನೆಯ ಸ್ಪರ್ಶಕೆ ಕರಗಬಲ್ಲುದೆಂದು ನಂಬಿದ ಪಾಪಾತ್ಮಗಳ ದಿವ್ಯೋಪದೇಶಕೆ ಮಾರು ಹೋಗಿ ಹಮ್ಮು ತೊರೆದು ಸುತ್ತೂರಿನೆಲ್ಲ ಗರತಿಯರ ಪಾದಕೆರಗಿ ಶತಮಾನಗಳ ಪುರಾತನ ಶಾಪ ಉಶ್ಯಾಪಗಳೆಲ್ಲವನ್ನು ಇಲ್ಲವಾಗಿಸಿ ಅದೊಂದು ಮಂಗಳಕರವಾದ ಬೆಳಗಿಗೆ ಕಾಯುತ್ತ ಕೂತ ಕಡುಪಾಪಿ ಮನುಷ್ಯನ ಪಾಪಿಷ್ಠ ಕ್ಷಣಗಳ ಮನ್ನಿಸುವ ಮನಸಿರುವ ದೇವಪುರುಷನಿಗಾಗಿ ಕಾಯುವ ಗಳಿಗೆಯಿದೆಯಲ್ಲ ಅದಕ್ಕಿಂತ ಅಮೃತಮಯವಾದ್ದು ಬೇರೆ ಯಾವುದಿದೆ? ********* ಕು.ಸ.ಮಧುಸೂದನ

ಅದೊಂದು ಗಳಿಗೆ. Read Post »

ಕಾವ್ಯಯಾನ

ನಿರೀಕ್ಷೆ

ನಿರೀಕ್ಷೆ ಉಷಾ ಸಿ.ಎನ್ ಅಂದು ಭಾನುವಾರ ಕನ್ನಡಿಯ ಮುಂದೆ ನಿಂದು ನೀ ಮೆಚ್ಚುವ ಬಣ್ಣವ ಧರಿಸಿದ್ದೆ ಅದಕೊಪ್ಪುವ ಬಿಂದಿ ಬಳೆಗಳ ತೊಟ್ಟು ನೀಳ ಕೇಶವ ಹೆಣೆದು ಮಲ್ಲಿಗೆಯ ಮುಡಿದಿದ್ದೆ ನಗೆ ಚೆಲ್ಲುವ ತುಟಿಗಳಿಗೆ ಕೆಂಪು ಬಣ್ಣ ಲೇಪಿಸಿ ನಿನ್ನ ಕಣ್ಣುಗಳ ನೆನೆದು ನನ್ನ ಕಣ್ಣಿಗೆ ಕಾಡಿಗೆ ಬಳಿದಿದ್ದೆ ಅನುಗಾಲ  ನಿನ್ನತ್ತ ಬರಲು ತವಕಿಸುವ ಕಾಲುಗಳಿಗೆ  ಗೆಜ್ಜೆ ತೊಟ್ಟಿದ್ದೆ ಕಂಗಳಲಿ ಮಿಂಚಿಟ್ಟು, ತುಟಿಗಳಲಿ ನಗೆಯಿಟ್ಟು ನಿನ್ನ ದಾರಿಯ ಕಾದಿದ್ದೆ. ನೀ ಬಾರದೆ  ನಿರೀಕ್ಷೆಗಳು  ನೀರ ಮೇಲಣ ಗುಳ್ಳೆಗಳಾದವು ಕನಸುಗಳು ಕನಸುಗಳಾಗಿಯೆ ಉಳಿದವು. *********

ನಿರೀಕ್ಷೆ Read Post »

ಕಾವ್ಯಯಾನ

ಚೆಲ್ಲಿ ಹೋಯಿತು ಉಸಿರು

ಚೆಲ್ಲಿ ಹೋಯಿತು ಉಸಿರು ( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ) ವಿಜಯಶ್ರೀ ಹಾಲಾಡಿ ಚೆಲ್ಲಿಹೋಯಿತು ಉಸಿರು…( ಪರಿಸರ ದಿನದಂದು ಈ ಕವಿತೆ ಬರೆಯಬೇಕಾದ್ದಕ್ಕೆ ವಿಷಾದಿಸುತ್ತ) ಗಾಳಿಗೆ ಗಂಧ ತುಂಬುತ್ತಿದ್ದಬಾಗಾಳು ಮರವನ್ನುಈ ಬೆಳಗು ಕಡಿಯಲಾಗಿದೆಮರದ ಮಾಂಸ ರಕ್ತ ಚರ್ಮಚೆಲ್ಲಾಡಿದ ಬೀದಿಯೊಳಗೆಇದೀಗ ತಾನೇ ನಡೆದುಬಂದೆನೆಲದಲ್ಲಿ ಜಜ್ಜಿಹೋದ ಹೂಮೊಗ್ಗು ಎಲೆಗಳ ಕಂಬನಿಕುಡಿಯುತ್ತಾ… ಹಕ್ಕಿ ಕೊರಳಿಗೆ ಕಷಾಯಕುಡಿಸಿದ ಸಂಗಾತಿ ಮರಮಣ್ಣಿನಾಳದ ಕಸುವುಗಳನಕ್ಷತ್ರಗಳಿಗೆ ಅಂಟಿಸಿದಅವಧೂತ ಮರಜೀವಜಂತುಗಳಿಗೆ ಜೀವಜಲಮೊಗೆದ ತಾಯಿಮರಬದುಕಿತ್ತು ಇಲ್ಲೇ ಕಣ್ಣೆದುರಲ್ಲೇಮಾತು ಮೀರಿದಬುದ್ಧಕಾರುಣ್ಯದಂತೆಮಮತೆ ತೋಳುಗಳಂತೆ… ಚೆಲ್ಲಿಹೋಯಿತು ಉಸಿರುಸಾವು ಹೆಪ್ಪುಗಟ್ಟಿದಂತೆ!****** ಬಾಗಾಳು ಮರ– ಬಕುಲದ ಮರ. ಪಶ್ಚಿಮಘಟ್ಟದ ಸಸ್ಯ. ನವಿರು ಪರಿಮಳದ ಹೂಗಳನ್ನು ಬಿಡುತ್ತದೆ. ಕಾಡಿನ ನಾಶದಿಂದಾಗಿ ಈ ಮರದ ಸಂಖ್ಯೆ ಕ್ಷೀಣಿಸಿದೆ.ಸು.ರಂ.ಎಕ್ಕುಂಡಿಯವರ ಒಂದು ಕವನಸಂಕಲನದ ಹೆಸರು: ಬಕುಲದ ಹೂಗಳು.**ವಿಜಯಶ್ರೀ ಹಾಲಾಡಿ *

ಚೆಲ್ಲಿ ಹೋಯಿತು ಉಸಿರು Read Post »

ಪುಸ್ತಕ ಸಂಗಾತಿ

ಆಖ್ಯಾನ

ಆಖ್ಯಾನ ಆಖ್ಯಾನಲೇಖಕರು- ಮೂರ್ತಿ ಅಂಕೋಲೆಕರಕಥಾಸಂಕಲನಪ್ರಕಾಶಕರು- ಕ್ರೈಸ್ಟ್ ವಿಶ್ವವಿದ್ಯಾಲಯ ಕನ್ನಡ ಸಂಘ ಜೀವ ವಿಮಾ ನಿಗಮದ ಅಧಿಕಾರಿಯಾಗಿ ಈಗ ನಿವೃತ್ತಿ ಜೀವನ ನಡೆಸುತ್ತಿರುವ ಮೂರ್ತಿ ಅವರು ತಮ್ಮ ಇಪ್ಪತ್ತರಿಂದ ಮೂವತ್ನಾಲ್ಕನೇ ವಯಸ್ಸಿನವರೆಗೆ ಬರೆದ ಕಥೆಗಳಲ್ಲಿ ಆಯ್ದ ಹತ್ತು ಕಥೆಗಳು ಇಲ್ಲಿವೆ. ಇದಕ್ಕೆ ಕೆ.ವಿ. ತಿರುಮಲೇಶ್ ಅವರು ಮುನ್ನುಡಿ ಬರೆದಿದ್ದಾರೆ.ನಾನಿಲ್ಲಿ ಉದ್ದೇಶಪೂರ್ವಕವಾಗಿ ಪ್ರತೀ ಕಥೆಯ ಬಗ್ಗೆ ಬರೆಯುವುದಿಲ್ಲ. ಏಕೆಂದರೆ ಇವು ಸಾಕಷ್ಟು ಸಂಕೀರ್ಣವಾಗಿ ಇದ್ದು ಒಂದೇ ಹಿಡಿತಕ್ಕೆ ಸಿಗುವಂಥವಲ್ಲ. ಇವೆಲ್ಲವೂ ಬಹಳ ಪ್ರಬುದ್ಧ ಕಥೆಗಳೆಂದು ಮಾತ್ರ ಹೇಳಬಹುದು. ಕತೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೇಖಕನಿಗೆ ಮಾತ್ರ ಸಾಧ್ಯವಾಗುವ ಕತೆಗಳು. ಬಹುಮುಖ್ಯವಾದ ಕಥಾವಸ್ತುಗಳು, ಗಂಭೀರವಾದ ಶೈಲಿ, ಎಲ್ಲವನ್ನೂ ಗಮನಿಸುವ ಸೂಕ್ಷ್ಮತೆ, ಅವಕ್ಕೆ ಸ್ಪಂದಿಸುವ ಗುಣ, ಅದ್ಭುತವಾದ ವೈಚಾರಿಕತೆ – ಇವೆಲ್ಲವೂ ಈ ಕಥೆಗಳನ್ನು ಬಹಳ ಮೇಲ್ಮಟ್ಟದಲ್ಲಿ ಇರಿಸುತ್ತವೆ. ಅಂಕೋಲೆಕರರು ಚಿತ್ರಿಸುವ ಜಗತ್ತು- ಕರಾವಳಿ ಮತ್ತು ಘಟ್ಟದ ಮೇಲಿನ ಹಳ್ಳಿ , ಪಟ್ಟಣಗಳು. ಅಲ್ಲಿನ ಎಲ್ಲಾ ತಲೆಮಾರಿನ ಜನ, ತೋಟ, ಒಳದಾರಿಗಳು, ಕಾಡು, ತೊರೆ, ಪ್ರಕೃತಿ. ದೇವಸ್ಥಾನ, ಜಾತ್ರೆ ಮತ್ತು ಕಾಲೇಜುಗಳು. ಈ ಜನರ ಸಂಬಂಧ, ವೈಷಮ್ಯ, ಪ್ರೀತಿ ಪ್ರಣಯ, ಹಾದರ, ಅಸೂಯೆ, ಅನುರಾಗ ಇತ್ಯಾದಿ. ಆದರೆ ಅವರ ‘ ಕ್ರಿಟಿಕಲ್ ಇನ್ಸೈಡರ್ ‘ ಈ ಮೇಲಿನವುಗಳನ್ನೇ ವಿಭಿನ್ನವಾದ ದೃಷ್ಟಿಯಿಂದ ಚಿತ್ರಿಸಿದ್ದಾರೆ. ಮಾರುತಿಯವರ ಪಾತ್ರಗಳು ಹೆಚ್ಚು ತೀವ್ರತೆಯಲ್ಲಿ ಚಿಂತನ ಮಂಥನದಲ್ಲಿ ತೊಡಗುತ್ತವೆ. ಕೆಲವು ಗೊಂದಲಗಳಲ್ಲಿ ಉಳಿದರೆ , ಇನ್ನು ಕೆಲವಕ್ಕೆ ಉಪಸಂಹಾರಗಳು ತಾನಾಗಿಯೇ ಒದಗಿ ಬರುತ್ತವೆ. ಮನುಷ್ಯಾವಸ್ಥೆ ಎಂದರೆ ಇದೇನೇ ಎಂದು ಕಥೆಗಳು ತೋರಿಸಿಕೊಡುವಂತೆ ಅನಿಸುತ್ತದೆ. ಈ ಚಿಂತನೆಯ ಸ್ವಭಾವವೇ ಅವರ ಕಥಾಪಾತ್ರಗಳನ್ನು ಬಹು ಆಯಾಮಿಗಳಾಗಿ ಮಾಡುತ್ತವೆ. ಬೆನ್ನುಡಿಯಲ್ಲಿ ಶ್ರೀಧರ ಬಳಗಾರ ಅವರು ಹೇಳಿರುವಂತೆ – ಮೂರ್ತಿ ಅವರ ಕಥನ ಪ್ರಪಂಚದಲ್ಲಿ ಸ್ವಭಾವತಃ ಒಳ್ಳೆಯತನದಲ್ಲಿ ಬದುಕುವ ಅಪೂರ್ವ ಶೋಭೆಯ ಮನುಷ್ಯರಿದ್ದಾರೆ. ಆತ್ಮಶೋಧನೆಗೆ ಹಿಂಜರಿಯದ ಅವರ ಕಥೆಗಳು ನವ್ಯೋತ್ತರ ಕಥನ ಸ್ವರೂಪಕ್ಕೆ ಸೂಚಕವಾಗುವುದರಿಂದ ಕಥನ ಪರಂಪರೆಯ ಅಧ್ಯಯನ ದೃಷ್ಟಿಯಿಂದಲೂ ಮುಖ್ಯವಾಗುತ್ತವೆ. ಇವೆಲ್ಲ ಕಾರಣಗಳಿಂದ ಒಮ್ಮೆ ಓದಲೇಬೇಕಾದ ಕೃತಿ ‘ ಆಖ್ಯಾನ’.********** ಡಾ. ಅಜಿತ ಹರೀಶಿ

ಆಖ್ಯಾನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಸಹದೇವ ಯರಗೊಪ್ಪ ಎದೆ ಎತ್ತರ ಬೆಳೆದು ನಿಂತ ಪೀಕಿನಲಿ ಕಣ್ಣು ತಪ್ಪಿಸಿ ಎಲ್ಲಿ ಹೋದೆ|ಬತ್ತಿದೆದೆಯ ಬಾವಿಗೆ ಕಣ್ಣೀರು ಕುಡಿಸಿ ಎಲ್ಲಿ ಹೋದೆ|| ಬಿತ್ತಿದ ತಾಕುಗಳಿಗೆ ಉಳಿ ನೀರು ಉಣಿಸದೆ ಸೆರಗ ಜಾಡಿಸಿದೆ|ಮಣ್ಣಿನ ಹೊಕ್ಕಳಿಂದ ಅನ್ನದ ಬೇರು ಕತ್ತರಿಸಿ ಎಲ್ಲಿ ಹೋದೆ|| ತೂಗಿ ತೊನೆವ ಬೆವರ ತೆನೆಗಳಿಗೆ ಕವಣೆ ಬೀಸಲೆ ಇಲ್ಲ|ನೇಸರನ ಕಾಯುವ ಸೂರ್ಯಕಾಂತಿ ದಿಕ್ಕು ಬದಲಿಸಿ ಎಲ್ಲಿ ಹೋದೆ| ಬಿರುಕು ಬಿಟ್ಟ ನೆಲದ ಕೆಂಡಕ್ಕೆ ಬೆವರ ದೂಪದ ಬೆರಕೆ|ತೀರದ ಸಾಲಕ್ಕೆ ಉಳುವ ನೇಗಿಲ ಅಡಾ ಇರಿಸಿ ಎಲ್ಲಿ ಹೋದೆ|| ಸಗಣಿ ಬಳೆದ ಅಂಗೈಗೆ ಮದರಂಗಿ ಬಣ್ಣದ ಕಾಂತಿ|ಬೆವರ ಗಂಧ ತುಂಬಿದ ಉಡಿಯನು ಗಾಯಗೊಳಿಸಿ ಎಲ್ಲಿ ಹೋದೆ|| ಜತಿಗೆ ಸುಡುವ ಬಿಸಿಲಲಿ ಸಾಚಿ ಮೈ ಸುಟ್ಟು ಮಾಯವಾದೆ|ಕಾಳಿನ ಕೊರಳಿಗೆ ನುಶಿಗಳ ಮಾಲೆ ಪೋಣಿಸಿ ಎಲ್ಲಿ ಹೋದೆ|| *******

ಗಝಲ್ Read Post »

You cannot copy content of this page

Scroll to Top