ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನಸು

Low Angle Photo of Dreamcatcher

ಪ್ರೊ.ಸುಧಾ ಹುಚ್ಚಣ್ಣವರ

ಕಾಣುವ ಕನಸುಗಳಿಗೆಲ್ಲಾ
ದಾರಿ ತೋರಿದವರು ಯಾರೋ!
ಬಂದೆ ಬಿಡುವವು
ನಮ್ಮ ಭಾವನೆಗಳ ಅರಸಿ.

ಇತಿಮಿತಿಗಳ ಅರಿವಿಲ್ಲ ಸಾಗಿದಷ್ಟು ದೂರ
ಬಹುದೂರ ಚಲಿಸುವವು ಪ್ರಯಾಸವಿಲ್ಲದ….
ಪಯಣಿಗನಂತೆ.

ಹೊತ್ತು ಸಾಗುವವು ಸುಂದರ ಅತಿ ಸುಂದರ…
ಕಲ್ಪನೆಗಳ ಹೂರಣವ ಪರಿಮಿತಿಯೆ ಇರದ ಬಜಾರಿನಲ್ಲಿ .

ಬಯಕೆಗಳ ಭಾರವ ಹಗುರಗೊಳಿಸಲೆ೦ದೆ….. ಕಲ್ಪನಾ ಲೋಕದಲ್ಲಿ ವಿಹರಿಸುತಿಹವು ಬಂಧನದಿ ಹೊರಬಂದ ಪಕ್ಷಿಗಳಂತೆ.

ಕೆಲವೊಂದು ವಾಸ್ತವಕ್ಕೆ ಹತ್ತಿರವಾಗುತ್ತಾ ಮತ್ತೆ ಕೆಲವು ಭ್ರಮೆಯಲ್ಲಿಯೇ ಉಳಿದು ಭಾವನೆಗಳ ಅರಳಿಸಿ.. ಕೆರಳಿಸಿ.. ಕನಸಿನ ಸಾಮ್ರಾಜ್ಯಕ್ಕೆ ಅಧಿಪತಿಯಾಗಿಹವು.

********

About The Author

1 thought on “”

Leave a Reply

You cannot copy content of this page

Scroll to Top