ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಜಕ್ಕವಕ್ಕಿಗಳು ಕಮಲಾ ಹೆಮ್ಮಿಗೆ ೧. ನೆನಪಿದೆಯೆ ನಿಮಗೆ ಕಣವಿಯವರೆ      ಜಯನಗರದ ಹಳಿ ದಾಟಿದರೆ      ಹಳದೀ ಹೂವು ಚೆಲ್ಲಿದ ರಸ್ತೆ      ‘ ಚೆಂಬೆಳಕು’! ಹಕ್ಕಿ ಗೂಡಂಥ ನಿಮ್ಮ ಮನೆ      ಆಚೀಚೆ ಕೂತ ನೀವುಗಳು,ನಡುವೆ      ಬೂದಿ ಮುಚ್ಚಿದ ಕೆಂಡದಂಥ ನಾನು….ಮಧ್ಯೆ ವ್ಯಸ್ತ,ಮೂಸಿನೋಡುವ ನಿಮ್ಮ ‘ಗೂಫಿ’ನಾಯಿ!……….             ಗುಟುಕರಿಸುತ್ತ ಚಹಾ,ಮಾತು,ಬದುಕಿನ ಪಾಡು…………………………         ಜsರ್ ಮಳೆಯಿದ್ದಲ್ಲಿ, ದಾಟಿಸುತ್ತಿದ್ದಿರಿ ಬ್ರಿಡ್ಜು,ಛತ್ರಿ ಹಿಡಿದು….. ೨.  ನಿಮ್ಮ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲೊಮ್ಮೆ       ಓದಬೇಕಿತ್ತು ನಾನೂ,ಒಂದು ಕವಿತೆ       ರೈಲಲ್ಲಿ ಒಂದೇ ಬೋಗಿ….ಧಡಖ್ ಧಡಖ್       ಧಡಖ್ ಧಡಖ್….. ಮೆಲ್ಲಗೆ ಬಂದಿರಿ ಲಯಕೆ ತಕ್ಕಂತೆ..‌..       ‘ ಮನಿಯವರು ನಿಮಗು ಬುತ್ತಿ ಕಟ್ಯಾರೆ’ ಎಂದಾಗ, ಒಣರೊಟ್ಟಿ ಬದಿಗೆ ಸರಿಸಿದ್ದೆ ನಾನು…… ನೀವು ನೀಡಿದಿರಿ ಚಪಾತಿ, ಮೊಸರನ್ನ ಮತ್ತು    ಹೆಚ್ಚಿಟ್ಟ ಹಣ್ಣಿನ ವಾತ್ಸಲ್ಯದ ಹೋಳು,ಮಿನುಗಿತ್ತು ಕಣ್ಣು…… ೩. ಕಳೆದಬಾರಿ,ಕಲ್ಯಾಣನಗರಕ್ಕೆ ಬಂದಾಗ    ‘ ಕವಿನೆರಳು’! ನೀವೇ ಒಳಹೋಗಿ ಚಹ ತಂದಿರಿ.     ‘ ಇವರಿಗೆ ಮಂಡೀನೋವು,ಸದ್ಯ ನನಗಿಲ್ಲ’ ….ನಕ್ಕಿರಿ….. ಹೊರಡುವಾಗ ಅಚಾನಕ ಕಾಲಿಗೆರಗಿದೆ ನಾನು…. ಅಸ್ಪಷ್ಟ ಏನೋ ಉಲಿದಿರಿ,ತುಂಬು ಮನದಿಂದ ನೀವು! ೪. ಈಗ  ‘ಹಾರಿತು ಜಕ್ಕವಕ್ಕಿಗಳಲ್ಲೊಂದು’ ಎಂದಾರು,  ಆಲಂಕರಿಕವಾಗಿ ಮಂದಿ! ಒಂಟಿಹಕ್ಕಿ ನೆನಪು ಹಾರೀತು  ಆದರೆ ……..ನೀವು? —–    ಜsರ್ — ಒಂದುವೇಳೆ ,  ಕವಿನೆರಳು Twilight (ಹಿರಿಯ ಲೇಖಕಿ ಶಾತಾದೇವಿ ಕಣವಿಯವರು ತೀರಿದ ಸಂದರ್ಭ)

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನದೇ ಜಪದಲ್ಲಿ ವೀಣಾ ಪಿ. ಏಕಪತ್ನಿ ರಾಮನಿಗೆ ವನ-ವೈಭೋಗಗಳಲಿಅನ್ಯ ಸ್ತ್ರೀಯಿಲ್ಲ ಸತಿ ಸೀತೆ ಹೊರತು.. ಕೃಷ್ಣನನೆದೆಯಲ್ಲಿ ಅನುರಣಿತ ರಾಗದಲಿಅನ್ಯ ಪ್ರೇಮವದಿಲ್ಲಅನುರಾಗಿ ರಾಧೆ ಹೊರತು.. ಮೀರಾ-ಶಬರಿಯರಲ್ಲಿ ಅನ್ಯ ತುಡಿತವದಿಲ್ಲಕೃಷ್ಣ-ರಾಮರ ಪರಮ ಕಾಮ್ಯದ ಹೊರತು.. ಸ್ವರ-ಶೃತಿಯ ಬೆಸೆಯುವ ಸರಸತಿಯ ಮೀಟು ತಂತಿಅನ್ಯವಾದ್ಯವಲ್ಲವದು ವೀಣಾ.. ಹಂಗಿನರಮನೆ ತೊರೆದ ಪ್ರೇಮದೀ ಗುಡಿಯಲ್ಲಿಬೇರೆ ಮಾತುಗಳಿಲ್ಲ ನಿನ್ನ ಜಪದ ಹೊರತು.. *******

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ತಬ್ಬಲಿ ಕವಿತೆ ಮಾತುಗಳ ಅಟ್ಟಹಾಸದೊಳಗೆ ಅಪಹಾಸ್ಯಕ್ಕೀಡಾದ ಮೌನ ಶಬ್ದಗಳ ಜಾತ್ರೆಯೊಳಗೆ ತೇರಿನ ಗಾಲಿಯಡಿ ಅಪ್ಪಚ್ಚಿಯಾಯಿತು. ಮುಳ್ಳುಗಳ ಕಾವಲಿನಲಿದ್ದ ಹೂಗಳು ನಗುವುದನ್ನೆ ಮರೆತುಬಿಟ್ಟವು ವಿರಹದಲಿ ಬಣ್ಣಗೆಟ್ಟ ಚಿಟ್ಟೆಗಳು ಹಸಿವಿನಲಿ ಕಂಗೆಟ್ಟವು. ನಿನ್ನೆ ಸಂಜೆಯ  ಮುದಿಬಿಸಿಲಲಿ ಅಕಾಲ ಮಳೆಸುರಿಯುತು ವಿದಾಯದ ಹೊತ್ತಿನಲಿ ಬಿಕ್ಕಿದವಳ ನೋಡಿ ಒಂಟಿಹಕ್ಕಿ ಮಮ್ಮುಲ ಮರುಗಿತು. ಕವಿತೆಯೊಂದ ಕಟ್ಟುವ ನೆಪದಲಿ ಶಬ್ದಗಳ ಮಾರಣಹೋಮ ಕವಿಯ ಸಮಾದಿಯ ಮೇಲೆ ಅಪರಿಚಿತ ಓದುಗನ ಹೂಗುಚ್ಚ. ಎರಡು ಸಾಲಾದರು ಬರೆದು ಹೋಗು ಗೋಗರೆದ ಕವಿತೆಯೀಗ ತಬ್ಬಲಿ. ******** ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಇನ್ನಷ್ಟು ಯೌವನ ಕೊಡು ಮಂಜುನಾಥ ನಾಯ್ಕ ಹಾಲುಮಾರುವ ಹುಡುಗ ಕಾಜುಗಣ್ಣಿನ ವಿನೋದನೊರೆ ಹಾಲಿನಂತವನು ಪೇಟೆಯ ತುಂಬಹಾಲು ಹಂಚುವ ಉಮೇದಿಕಾಜುಗಣ್ಣ ಬಿಂಬಗೊಳಗೆಉಫ್ ಉಫ್ ಎಂದು ರಸ್ತೆ ಉಬ್ಬಿನಲಿ ತುಳಿದಿದ್ದಕ್ಕೆ ಸೈಕಲ್ಲುಬಿದ್ದು ರಕ್ತಕಾರಿಕೊಂಡ ಹೆಬ್ಬಟ್ಟಿನ ಉರಿ ಬ್ರೇಕೊತ್ತಿದೆಸೈಕಲ್ಲಿನ ವೇಗಕ್ಕೆಅಪ್ಪನ ಕ್ಯಾನ್ಸರಿಗೆ, ಅಮ್ಮನ ಮಧುಮೇಹಕ್ಕೆಚಂದನದ ಕೊರಡುತೇಯುತ್ತಿದೆ ಬೀದಿಯಲಿಕಾಯುತ್ತಿದೆಹಾಲಿನ ಮನಸ್ಸೊಂದುಮಗನ ಬರುವಿಕೆಗೆಅಡುಗೆ ಮನೆಯಲಿ ಬೇನೆಯಲಿಬೇಯುವ ಹಂಚಿನ ರೊಟ್ಟಿ ಐನೋರ ತೋಟದ ಮರದ ತುದಿಗೇರಿ ಅಡಿಕೆಗೊನೆ,ಸಿಂಗಾರ,ಸಿಯಾಳಕಾಯಿ ಕೊಯ್ವ ಈರಜ್ಜಕಸರತ್ತುಗಯ್ಯುತ್ತಾಆಕಾಶ ಮುಟ್ಟುವಂತೆಮರದ ತುದಿಯಲಿಒಂದೊಂದೇ ಫಲಗಳಎಸೆಯುವ ಕೆಳಗೆನುಣ್ಣಗೆ ಜಾರುವ ಮರತಡವರಿಸುವುದು ಒಮ್ಮೊಮ್ಮೆ ಈರನ ಕಾಲುಕೆಳಗೆ ಭೂಮಿ ಬಾಯ್ತೆರೆದು ಕಾದಿದೆಬಿಡಾರದೊಳಗೆ ಈರಜ್ಜನಗುಡಿಸಲೊಡತಿಕೊಳೆ ಅಡಿಕೆ ಅಂಬಡಿ ಎಲೆಗೆತಿಕ್ಕುತ್ತಾ ಚಿಪ್ಪೆಕಲ್ಲಿನ ಸುಣ್ಣವ ನುಣ್ಣಗೆ ಬೈಗಿನಲಿಈರಜ್ಜನಡೆದು ಬರುವ ತೋಡಿನಲಿಇಣುಕಿಣುಕಿ ನೋಡುತ್ತಾಬೆಚ್ಚಗಾಗುತಿದೆ ಬಿಸಿನೀರುಹಬೆ ಹಬೆ ಹಂಡೆಯಲಿಬೆಚ್ಚನೆಯ ಬದುಕ ಗೂಡೊಳಗೆ ನಸುಕಲಲ್ಲಿ ಬೈಗೆ ಬಂಗುಡೆಸಮದಾಳೆ,ಕುಡುತ್ಲಿ,ಪೇಡಿ ಏಡಿಗಳ ಹೊತ್ತು ಬರುವ ನಮ್ಮೂರ ಬೆಸ್ತರ ಪದ್ಮಕ್ಕನ ಮಗಳು ತುಂಬು ಬಸುರಿಪಾತಿದೋಣಿಗೆ ಗಂಡಉದರದ ಗೇಣಿಗೆ ಅವ್ವದಣಪೆಯಾಚೆ ನಿಂತು ನೀಕುವಳುಖಾಲಿ ಬುಟ್ಟಿಹೊತ್ತ ಅಮ್ಮನನಿರಾಳ ಹೆಜ್ಜೆ ಸದ್ದಿಗೆಪೇಟೆಯಲಿ ಪದ್ಮಕ್ಕನ ಮೀನಿಗೆಚೌಕಾಸಿಯ ಕೂಗು ಜೋರಾಗಿದೆಸಾಸಿವೆಯ ದರಕ್ಕೆ ಮಾರಿಮನೆಯ ದಾರಿ ಹಿಡಿದಿದ್ದಾಳೆಅಲ್ಲಿ ತುಂಬು ಬಸುರಿಯವೇದನೆ ಜೋರಾಗಿದೆ ಸಾಗುವ ಹೆಜ್ಜೆಗಳಿಗೆಲ್ಲಾಇನ್ನಷ್ಟು ಯೌವನ ಕೊಡು ದಿವ್ಯವೇಕಾಯುವ ಹೃದಯಗಳೆಲ್ಲಾಹಸುಳೆಯಂತದ್ದು. ************

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹಾಲಕ್ಕಿ ಕೋಗಿಲೆ ಮಾರ್ಚ್ ತಿಂಗಳಿನಲ್ಲಿ ಬರಹ ಓಡಾಟ ಎಂದುಕೊಂಡು ಸದಾ ಕೆಲಸದ ಒತ್ತಡದಲ್ಲಿದ್ದ ನನಗೆ ಒಮ್ಮೆಲೆ ಅನಿರೀಕ್ಷಿತವಾಗಿ ಕೋವಿಡ- 19 ನಿಂದಾಗಿ ಲಾಕ್ಡೌನ ಆದಾಗಿನಿಂದ ಮಾನಸಿಕ ಗೊಂದಲ.ಭಯದಿಂದ ಮನೆಯ ನಾಲ್ಕು ಗೋಡೆಗಳ ನಡುವೆ ಸುಧಾರಿಸಿಕೊಳ್ಳಲು ಕೆಲವು ದಿನಗಳು ಬೇಕಾದವು.ಬಳಿಕ ನಾವೆಲ್ಲ ನಮ್ಮ ಆಸಕ್ತಿಗೆ ತಕ್ಕಂತೆ ಮನಸ್ಸು ಪ್ರಪುಲ್ಲಗೊಳಿಸಿಕೊಳ್ಳಲು ಮಾರ್ಗ ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಅಕ್ಷತಾಕೃಷ್ಣಮೂರ್ತಿ ಅವರ ಹಾಲಕ್ಕಿ ಕೋಗಿಲೆ. ಮುಖಪುಟದಲ್ಲಿದ್ದ ಮುಗ್ಧ ನಗುವಿನ ಸುಕ್ರಜ್ಜಿಯನ್ನು ಕಂಡ ಮೇಲಂತೂ ಒಂಥರಾ ಖುಷಿ. ಇದಕ್ಕೆ ಒಂದು ತಿಂಗಳ ಮೊದಲಷ್ಟೆ ಬಡಗೇರಿಯ ಸುಕ್ರಜ್ಜಿಯವರ ಮನೆಯಂಗಳದಲ್ಲಿ ವೈಶಿಷ್ಟಪೂರ್ಣವಾಗಿ ಕವಿ ಕಥೆಗಾರ ಜಯಂತಕಾಯ್ಕಿಣಿಯವರು ಬಿಡುಗಡೆಗೊಳಿಸಿದ ಕೃತಿ ಇದು.ಆ ಬಿಡುಗಡೆಯ ಕ್ಷಣ ಮರೆಯಲಾಗದು.ನಿರಾಡಂಬರವಾದ ಸರಳ ಸಮಾರಂಭದಲ್ಲಿ ಅತ್ಯಂತ ಆತ್ಮೀಯ, ಪ್ರೀತಿಯ, ಒಂದು ರೀತಿಯಲ್ಲಿ ದಿವ್ಯ ಎನಿಸಬಹುದಾದ ವಾತಾವರಣದಲ್ಲಿಜಾನಪದ ಹಾಡುಗಾರ್ತಿಯರಾದ ಪದ್ಮಾವತಿ, ಕುಸಲಿ, ಲಲಿತಾ ಅವರ ಹಾಡಿನ ಹಿನ್ನೆಲೆಯಲ್ಲಿ ಜಯಂತಕಾಯ್ಕಿಣಿ ಅವರು ಪುಸ್ತಕ ಬಿಡುಗಡೆಗೊಳಿಸಿ ಸುಕ್ರಜ್ಜಿಯವರ ಕೈಗಿಟ್ಟ ಅಪರೂಪದ ಘಳಿಗೆಯಲ್ಲಿ ನಾನೂ ಪಾಲುದಾರಳಾಗಿದ್ದೆ. ಈ ಹಾಲಕ್ಕಿ ಹಾಡುಗಾರ್ತಿಯರ ಹೃದಯ ತುಂಬುವ ಮನಸ್ಸು, ಮುಖದಲ್ಲಿನ ಸಂತೃಪ್ತ ಭಾವ, ಜೀವನ ಪ್ರೀತಿ, ಪ್ರಾಮಾಣಿಕ ಪಾರದರ್ಶಕ ವ್ಯಕ್ತಿತ್ವ ಇತರರಿಗೆ ಮಾರ್ಗದರ್ಶನ ಎನಿಸುವಂತಹುದ್ದು.ಕನ್ನಡ ಜಾನಪದ ಸಾಹಿತ್ಯದ ವೈಶಿಷ್ಟಪೂರ್ಣ ಬೆಳವಣಿಗೆಯಲ್ಲಿ ಇವರ ಕೊಡುಗೆ ಅಪೂರ್ವವಾದದ್ದು.                       ನಾಡೋಜ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಲಕ್ಕಿ ಒಕ್ಕಲು ಬುಡಕಟ್ಟಿನ  ಸುಕ್ರಿ ಬೊಮ್ಮಗೌಡ ಅವರ ಜೀವನ ಪರಿಚಯಿಸುವ ಇಪ್ಪತ್ತೊಂದು ಲೇಖಕರ ಬರಹಗಳ ಗುಚ್ಛವೇ ಹಾಲಕ್ಕಿ ಕೋಗಿಲೆ. ಸುಕ್ರಜ್ಜಿ ಬದುಕಿನ ಶೈಲಿ, ಸರಳತೆ, ಜಾನಪದ ಜಗತ್ತಿಗೆ ಅವರ ಕೊಡುಗೆ, ಅವರ ಸಮಾಜಮುಖಿ ವ್ಯಕ್ತಿತ್ವ ಮುಂತಾದ ವಿಷಯಗಳ ಕುರಿತು ಹತ್ತಿರದಿಂದ ಸುಕ್ರಜ್ಜಿಯವರನ್ನು ಕಂಡ ಲೇಖಕರು ಸರಳ ಸುಂದರವಾಗಿ, ಆತ್ಮೀಯವಾಗಿ ತೆರೆದಿಟ್ಟಿದ್ದಾರೆ. ಇದು ಜಾನಪದದಲ್ಲಿ ಅರಳಿದ ಹೂವಿಗೆ ಸರಳವಾಗಿ ಸುಂದರವಾಗಿ ಸಂದ ಗೌರವವೆನಿಸುತ್ತದೆ. ಸುಕ್ರಜ್ಜಿಯ ಸಾಮಾಜಿಕ ಕಳಕಳಿ, ಔಷಧೀಯ ಸಸ್ಯಗಳ ಕುರಿತು ಜ್ಞಾನವು ತುಂಬ ಮಹತ್ವಪೂರ್ಣವಾದದ್ದು. ಸಾವಿರಗಟ್ಟಲೇ ಹಾಡುಗಳ ಧ್ವನಿಭಂಡಾರವಾದ ಸುಕ್ರಜ್ಜಿಗೆ ಅಕ್ಷತಾ ಅವರು ಬಳಸಿದ `ಧ್ವನಿದೂತೆ’ ಪದ ಮಾರ್ಮಿಕ ವೆನಿಸಿತು.             ಹಲವಾರು ಲೇಖಕರು ಸುಕ್ರಜ್ಜಿಯವರ ಕಷ್ಟದ ಜೀವನದ ಕ್ಷಣಗಳನ್ನು ಎಳೆಎಳೆಯಾಗಿ ಬಿಡಿಸುತ್ತ ಸುಕ್ರಜ್ಜಿಯವರ ಜಾನಪದ ಹಾಡುಗಳ ಧಾರೆಯಿಂದಲೇ ಅಭಿನಂದನೆ ಸಲ್ಲಿಸಿದ್ದಾರೆ. ಸಾಂಸ್ಕೃತಿಕ ರಾಯಭಾರಿಯಾಗಿ ಸುಕ್ರಜ್ಜಿಯ ಪ್ರತಿಭೆ, ನಮ್ಮ ನಾಡಿನ ಹೆಮ್ಮೆಯಾಗಿ ಸುಕ್ರಜ್ಜಿ, ಜಾನಪದದ ಅಗಣಿತ ನಿಧಿಯಾಗಿ, ಲೋಕಸಿರಿಯಾಗಿ, ಕಲಾಸಿರಿಯಾಗಿ ಸುಕ್ರಜ್ಜಿಯ ಜೀವನ ಸುಂದರವಾಗಿ ಈ ಕೃತಿಯಲ್ಲಿ ಅನಾವರಣಗೊಂಡಿದೆ. `ನೀನೊಂದುಕೋಗಿಲೆಯೋ’ ಜನಪದ ಜಗದ ಬಾಗಿನವೋ’ ಎಂಬುದಾಗಿ ಹಿರೇಗುತ್ತಿಯವರು ರೂಪಕ ನೀಡಿರುವುದು ಉತ್ಫ್ರೇಕ್ಷೆ ಅನಿಸುವುದಿಲ್ಲ. ಸುಕ್ರಜ್ಜಿಯ ಸರಳ ಬದುಕು, ಪ್ರತಿಭೆ, ಸಮಾಜಮುಖಿ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ ನಿಲ್ಲುವಲ್ಲಿ ಪ್ರಸ್ತುತ ಕೃತಿ ಪ್ರೇರಣೆಯಾಗಿ ನಿಲ್ಲುತ್ತದೆ. ಇಂತಹ ಅಮೂಲ್ಯಕೃತಿ ಲೋಕಾರ್ಪಣೆ ಮಾಡಿದ ಅಕ್ಷತಾಕೃಷ್ಣಮೂರ್ತಿ ಹಾಗೂ ಅವರ ವಿವರ ಕಟ್ಟಿಕೊಟ್ಟ ಲೇಖಕರಿಗೆ ವಂದನೆಗಳು.ಜೊತೆಗೆ ಈ ಕೃತಿಗೆ ಕರ್ನಾಟಕ ಜಾನಪದ ಪರಿಷತ್ತಿನ ಲೋಕ ಸರಸ್ವತಿ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಗಳು. ************ ಡಾ. ಪ್ರೀತಿ ಭಂಡಾರಕರ್

ಪುಸ್ತಕ ಸಂಗಾತಿ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ರತ್ನರಾಯಮಲ್ಲ ಆಗಸದಲ್ಲಿ ನೇಸರ ಹುಟ್ಟುತಿದ್ದಾನೆ ನೋಡಿಕನಸುಗಳು ಮೂಟೆ ತರುತಿದ್ದಾನೆ ನೋಡಿ ಇರುಳು ಕಳೆದು ಹೋಗಿದೆ ಹಗಲಿನ ಒಡಲಲ್ಲಿಚೈತನ್ಯವನ್ನು ಹೊತ್ತು ಬಂದಿದ್ದಾನೆ ನೋಡಿ ಮೂಡಣದಲ್ಲಿ ರವಿ ಅಂಬೆಗಾಲು ಇಡುತಿರುವನುಅಕ್ಷಯ ಉಲ್ಲಾಸವನ್ನು ಹಂಚುತಿದ್ದಾನೆ ನೋಡಿ ಅವನಿಯನ್ನು ಹೊಂಗಿರಣಗಳು ಚುಂಬಿಸುತಿವೆಪಾದರಸದ ಚಲನೆಯನ್ನು ನೀಡುತಿದ್ದಾನೆ ನೋಡಿ ಹಕ್ಕಿಗಳ ಚಿಲಿಪಿಲಿಯು ಹೃದಯವನ್ನು ತಟ್ಟುತ್ತಿದೆನಿರಾಸೆಯ ಕೊಳೆಯನ್ನು ತೊಳೆಯುತಿದ್ದಾನೆ ನೋಡಿ ಗಿಡ-ಮರಗುಳು ತಂಗಾಳಿಯಿಂದ ಸ್ವಾಗತಿಸುತಿವೆಬಾಳಿನ ಅನನ್ಯ ಕಲೆಯನ್ನು ಕಲಿಸುತಿದ್ದಾನೆ ನೋಡಿ ಹಾಸಿಗೆಯನ್ನು ತೊರೆದು ಹೊರಗೆ ನೋಡು ಮಲ್ಲಿಮಂದಹಾಸದ ಪಾಠವನ್ನು ಹೇಳುತಿದ್ದಾನೆ ನೋಡಿ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೀ ಹೋದರೂ.. ಶೀಲಾ ಭಂಡಾರ್ಕರ್ ನಿನ್ನ ನೆನಪುಗಳು..ನನ್ನ ಬಳಿಯೇ ಉಳಿದಿವೆನಿನ್ನ ಜತೆ ಹೋಗದೆ.. ಇನ್ನೂ ..ಚೆನ್ನಾಗಿ ಬೆಳೆಯುತ್ತಿವೆ..ದಟ್ಟವಾಗಿಮನದ ತೋಟದೊಳಗೆ ನೀನಾಡಿದ್ದ ಮಾತುಗಳುಆಸೆಯಿಂದ ಕತ್ತೆತ್ತುತ್ತವೆ ಆಗಾಗಹಳೆಯ ಆಲದ ಮರದಪೊಟರೆಯೊಳಗಿನಿಂದಮರಿ ಕೋಗಿಲೆಗಳು ಇಣುಕಿದ ಹಾಗೆ. ಎಷ್ಟು ದೂರದವರೆಗೆನಡೆದು ಬಂದಿವೆ ನೋಡುಆ ನೆನಪುಗಳು ಬರಿಗಾಲಿನಲ್ಲಿ.ಬೇಸಿಗೆಯಿಂದ ಮಳೆಯವರೆಗೆಬಾಲ್ಯದಿಂದ ತಾರುಣ್ಯದವರೆಗೆ ಅಡಗಿ ಕುಳಿತುಸಂಭಾಷಿಸುತ್ತವೆ ಕೆಲವುತಮ್ಮ ತಮ್ಮಲ್ಲೇಒಳಕೋಣೆಯೊಳಗೆ. ಎಲ್ಲವೂ ನೆನಪಿದೆ ನನಗೆನಿನ್ನ ಪ್ರೀತಿ. ನಿನ್ನ ಮಾತು..ತಿಳಿ ಹಾಸ್ಯ ಮತ್ತು ನಿನ್ನ ನಗೆ. ನೇರಳೆ ಹಣ್ಣೆಂದು ತಿನ್ನಿಸಿದಬೇವಿನ ಹಣ್ಣಿನ ರುಚಿಯೂಮರೆತಿಲ್ಲ ಇನ್ನೂ ನನಗೆ ಕಹಿ ಹಾಗೆಯೇ ಉಳಿದುಕೊಂಡಿದೆ..ನಾಲಿಗೆಯ ಮೇಲೆ. ********

ಕಾವ್ಯಯಾನ Read Post »

You cannot copy content of this page

Scroll to Top