ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕವಿತೆ ಕಾರ್ನರ್

ಕವಿತೆ ಕಾರ್ನರ್

ವಾರಸುದಾರ! ಕಪ್ಪು ಕಾಲುಗಳನೇರೆಕ್ಕೆಯಾಗಿಸಿಕಡಿದಾದ ಬೆಟ್ಟವನೇರುವ ಸಾಹಸದೆ ಕಾಲವೆನ್ನುವುದು ಇಳಿಜಾರಿಗೆಜಾರಿಬಿಟ್ಟ ಚಕ್ರವಾಗಿಸರಸರನೆ ಉರುಳುತ್ತ ಹಗಲಿರುಳುಗಳುಸ್ಪರ್ದೆಗಿಳಿದುಗಡಿಯಾರಗಳನೂ ಸೋಲಿಸಿ ಸೂರ್ಯಚಂದ್ರರೂ ಸರದಿ ಬದಲಿಸಿಉಸಿರೆಳೆದುಕೊಂಡು ಕಣ್ಣರಳಿಸಿಜಗವನರ್ಥಮಾಡಿಕೊಳ್ಳುವಷ್ಟರಲ್ಲಿ ಬೆನ್ನು ಬಾಗಿಕಣ್ಣು ಮಂಜಾಗಿಚರ್ಮ ಸುಕ್ಕಾಗಿ ಮುಪ್ಪೆಂಬುದುಮುಂದೆ ನಿಂತಿರಲುಕವಿತೆಯೆಂಬುದು ಮರಣವಾಕ್ಯವಾಗುವುದು ಶವದ ಮುಂದೆ ನಿಂತುಕಣ್ಣಾಲಿ ತುಂಬಿಕೊಂಡಗೆಳೆಯರಮುಖಗಳಲ್ಲೇನೊ ಸಮಾದಾನದ ಭಾವ ಕವಿತೆ ಸೋತಿತೊ ಗೆದ್ದಿತೊ? ಬಿರುಸಿನ ಚರ್ಚೆಯ ನಡುವೆಗೋಣು ಚಿಲ್ಲಿದ ಕವಿಯಾರ ಕಣ್ಣಿಗೂ ಬೀಳುವುದಿಲ್ಲ! ಅನಾಥ ಶವಕೆವೀರಬಾಹು ಮಾತ್ರವೇವಾರಸುದಾರ! ******** ಕು.ಸ.ಮಧುಸೂದನ ರಂಗೇನಹಳ್ಳಿ

ಕವಿತೆ ಕಾರ್ನರ್ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಪುಸ್ತಕ: ಫೂ ಮತ್ತು ಇತರ ಕಥೆಗಳು ಲೇಖಕರು: ಮಂಜುನಾಯಕ ಚಳ್ಳೂರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರಾದ ಮಂಜುನಾಯಕ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಲಿತು ಕೆಲಕಾಲ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಕಲರ್ಸ್ ಸೂಪರ್ ಕನ್ನಡ ವಾಹಿನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸೃಜನಶೀಲ ಲೇಖಕರಾದ ಮಂಜುನಾಯಕ ಅವರ ಮೊದಲ ಕಥಾ ಸಂಕಲನ ಇದು. ಇಲ್ಲಿನ ಫೂ, ಖತಲ್ ರಾತ್ರಿ ಹಾಗೂ ತೇರು ಸಾಗಿತಮ್ಮ ನೋಡಿರೆ ಎಂಬ ಮೂರು ಕಥೆಗಳಿಗೆ ೨೦೧೮ರ ಟೊಟೊ ಯುವ ಪುರಸ್ಕಾರ ಲಭಿಸಿದೆ. ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿರುವ ಈ ಕಥಾ ಸಂಕಲನದಲ್ಲಿ ಒಟ್ಟು ೭ ಕಥೆಗಳಿವೆ. ವೈವಿಧ್ಯಮಯ ಕಥಾವಸ್ತುಗಳು, ಪಾತ್ರಗಳ ಮೂಲಕ ಇಲ್ಲಿನ ಕಥೆಗಳು ಓದುಗರನ್ನು ಸೆಳೆದುಬಿಡುತ್ತವೆ. ಈ ಪುಸ್ತವನ್ನ ಓದಿ ಮುಗಿಸುವಾಗ ಖುಷಿಯೊಂದು ಮನಸ್ಸನ್ನು ಆವರಿಸಿಕೊಂಡಿತ್ತು. ಈ ಕಥೆಗಳು ನಮ್ಮನ್ನು ಕೂಡ ಬಿಸಿಲ ಸೀಮೆಗೆ ಕರೆದೊಯ್ಯುತ್ತವೆ. ಅಲ್ಲಿನ ಜನರ ಬದುಕನ್ನು ಪರಿಚಯಿಸುತ್ತದೆ. ಇಲ್ಲಿನ ಪಾತ್ರಗಳ ಸಂಭಾಷಣೆಯಲ್ಲಿ ಉತ್ತರ ಕನ್ನಡ ಭಾಷೆಯನ್ನು ಬಳಸಲಾಗಿದೆ. ಮೊದಲ ಕಥೆ ‘ಫೂ’ ಅಲ್ಲಿ ಕುಟುಂಬದೊಳಗೆ ಹೆಣ್ಣಿನ ಮೇಲೆ ನಡೆಯುವ ಹಿಂಸೆಯನ್ನು ಪದರ ಪದರವಾಗಿ ತಿಳಿಸಲಾಗಿದೆ. ಚಿಕ್ಕ ಹುಡುಗನ ನಿರೂಪಣೆಯಂತು ಮನಸನ್ನು ತಟ್ಟುತ್ತದೆ ಅವಿವಾಹಿತಳಾದ ಜಯತ್ತೆಯ ಪಾತ್ರವಂತು ಮನದಲ್ಲಿ ಉಳಿದುಬಿಡುತ್ತದೆ. ಎಲ್ಲ ಕಷ್ಟಗಳನ್ನೂ ಅಣ್ಣ ಅತ್ತಿಗೆಯರ ಚುಚ್ಚುಮಾತುಗಳನ್ನು ಸಹಿಸಿಕೊಂಡೇ ಬರುವ ಜಯತ್ತೆ, ಪುಟ್ಟ ಬಾಲಕನೊಡನೆ ಆಕೆಯ ಒಡನಾಟ ತಾಯಿ ಮಗುವಿನಂತಿರುತ್ತದೆ. ‘ನನ ಹೊಟ್ಯಾಗ್ ಹುಟ್ಟೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ” ಎಂಬ ಮಾತಿನಲ್ಲಿ ಅಳಿಯನ ಮೇಲಿನ ಮಮತೆ ವಾತ್ಸಲ್ಯಗಳನ್ನು ಗಮನಿಸಬಹುದು. ಜಯತ್ತೆ ಎಂದರೆ ತನಗೆ ಜೀವ ಎಂದೂ ಆಕೆಯ ಬಾಯಲ್ಲಿ ಕಾಮನಬಿಲ್ಲಿತ್ತು ಎಂದು ಹೇಳುವ ಹುಡುಗ, ಅತ್ತೆ ಬಾಯಲ್ಲಿ ನೀರು ತುಂಬಿಕೊಂಡು ಬಿಸಿಲಿಗೆ ಮುಖ ಮಾಡಿ ಫೂ ಮಾಡುವಾಗಲೆಲ್ಲ ಮೂಡಿ ಬರುವ ಕಾಮನಬಿಲ್ಲನ್ನು ಕಂಡು ವಿಸ್ಮಯಗೊಳ್ಳುವ ಮುಗ್ಧ ಹುಡುಗ ತುಂಬ ಇಷ್ಟವಾಗಿಬಿಡುತ್ತಾನೆ. ಇಲ್ಲಿನ ಜಯತ್ತೆಯ ಪಾತ್ರವು ವೈದೇಹಿ ಅವರ ‘ಜಾತ್ರೆ’ ಸ್ಮೃತಿ ಕಥನದಲ್ಲಿ ಬರುವ ‘ಮಂಜತ್ತೆ’ಯ ಪಾತ್ರವನ್ನು ನೆನಪಿಸುತ್ತದೆ. ‘ಖತಲ್ ರಾತ್ರಿ’ ಕಥೆಯಲ್ಲಿ ಮೊಹರಂ ದೇವರುಗಳ ಕೊನೆಯ ರಾತ್ರಿಯೇ ಖತಲ್ ರಾತ್ರಿ. ಜಾತಿ ಧರ್ಮಗಳನ್ನು ಮರೆತಯ ಎಲ್ಲರೂ ಜೊತೆಗೂಡಿ ಆಚರಿಸುವ ಹಬ್ಬದ ಸಂಭ್ರಮವಿದೆ. ಜೊತೆಗೇ ಮಕ್ಕಳಲ್ಲಿ ಅಗಲಿದ ಅಪ್ಪನ ನೆನಪುಗಳಿವೆ. ಸಂತೋಷದ ಮಧ್ಯೆಯೇ ನೋವಿನ ಎಳೆಯೊಂದು ಗೋಚರಿಸುತ್ತದೆ. ‘ತೇರು ಸಾಗಿತಮ್ಮ ನೋಡಿರೆ’ ಕಥೆಯಲ್ಲಿ ಶ್ರೀಶೈಲ ಎಂಬ ಹುಡುಗನ ಹೃದಯವಿದ್ರಾವಕ ಕಥೆಯಿದೆ. ಓದಲು ಬುದ್ಧಿವಂತನಾದ ಆತನಿಗೆ ಭಜನೆಯ ಮೇಲೆ ಅಪಾರ ಆಸಕ್ತಿ. ಶಾಲೆ ಬಿಟ್ಟ ಮೇಲೆ ಶರಣಪ್ಪನಿಂದ ಸಾಧ್ಯವಾದಷ್ಟೂ ಭಜನೆಗಳನ್ನು ಕಲಿತು ಹಾಡುತ್ತಿದ್ದ. ಶರಣಪ್ಪ ಹುಡುಗನಿಗೆ ಪ್ರೀತಿಯ ಕಕ್ಕಪ್ಪನಾಗಿದ್ದ. ಕಕ್ಕಪ್ಪನ ಸಾವು ಶ್ರೀಶೈಲನ ಬದುಕಿನ ಮೇಲೆ ಮಾಡಿದ ದಟ್ಟ ಪರಿಣಾಮಗಳನ್ನು ವಿವರಿಸಲಾಗಿದೆ. ಸಮಾಜದ ಕಣ್ಣಿಗೆ ಹುಚ್ಚನಂತೆ ಕಾಣುವ ಮಗನ ಬಗ್ಗೆ ತಾಯಿಯ ದುಃಖ ಸಂಕಟಗಳಿವೆ. ‘ವಜ್ರಮುನಿ’ ಕಥೆಯಲ್ಲಿ ಕೆಟ್ಟ ಚಟಕ್ಕೆ ಬಲಿಯಾಗಿ ಇದ್ದದ್ದನ್ನೆಲ್ಲ ಕಳಕೊಂಡು ಕೆಲಸಕ್ಕೂ ಹೋಗದೆ ತನ್ನ ಜವಾಬ್ದಾರಿಗಳ ಕಡೆ ಗಮನ ಹರಿಸದೆ ಮಕ್ಕಳೊಂದಿಗೆ ಆಡುತ್ತಾ, ಕಾಲ ಬದಲಾದರೂ ತನ್ನ ನೆನಪುಗಳಲ್ಲೇ ಮೈಮರೆತಿರುವ ಭಗವಂತ ಊರವರ ದೃಷ್ಟಿಯಲ್ಲಿ ವಜ್ರಮುನಿಯಾದ ಕಥೆ ಹೇಳುತ್ತಾರೆ. ‘ಕನಸಿನ ವಾಸನೆ’ ಕಥೆಯಲ್ಲಿ ಮಿರ್ಚಿ ರಂಗಮ್ಮನ ಪಾತ್ರ ಗಮನಾರ್ಹವಾಗಿದೆ. ಲಚುಮನಿಗೆ ತನ್ನ ತಪ್ಪಿನ ಅರಿವಾಗಿ ಮನ ಪರಿವರ್ತನೆಗೊಂಡು “ತಪ್ಪಾತಾ ನಮವ್ವಾ” ಎಂದು ರಂಗಮ್ಮನಲ್ಲಿ ಕ್ಷಮೆಯಾಚಿಸಿ ಅವಳ ಮಡಿಲಲ್ಲಿ ಮಗುವಾಗಿ ಮಲಗುವ ಚಿತ್ರಣ ಅಪ್ಯಾಯಮಾನವಾಗಿದೆ. ‘ಪಾತಿ’ ಕಥೆಯಲ್ಲಿ ಬಾಲ್ಯದಿಂದ ಹದಿಹರೆಯದವರೆಗೆ ಜೊತೆಗೆ ಆಡಿಬೆಳೆವ ಮಕ್ಕಳ ಸಂಭ್ರಮ ಓದುಗರನ್ನೂ ತಮ್ಮ ಬಾಲ್ಯವನ್ನು ನೆನಪಿಸುವಂತೆ ಮಾಡುತ್ತದೆ. ಮತ, ವರ್ಣ ಬೇಧಗಳಿಲ್ಲದೆ ಹುಟ್ಟಿ ಬೆಳೆವ ಸ್ನೇಹ. ಮುಗಿಯದ ಮಾತು, ನಿಸ್ವಾರ್ಥ ಪ್ರೀತಿ, ಪರಸ್ಪರ ರೇಗಿಸುವಿಕೆ ಜಗಳ, ಮುನಿಸು, ರಾಜಿ ಕೋಪಗಳು ಅವರ ಸ್ನೇಹದ ಸಂಬಂಧವನ್ನು ಗಟ್ಟಿಗೊಳಿಸುತ್ತಿತ್ತು. ಈ ಕಥೆ ಓದಿ ಮುಗಿಸಿದಾಗ ಫಾತಿಮಳಂಥ, ಆಕೆಯ ಗೆಳೆನಂಥ ಸ್ನೇಹಿತರು ಇರಬೇಕೆಂದು ಅನಿಸಿಬಿಡುತ್ತದೆ.‘ಮಿಂಚುಹುಳ’ದ ಬಗ್ಗೆ ಕಲ್ಪನೆಯಲ್ಲಿ ಮೂಡಿದ ಕಥೆಯನ್ನೂ ಹೇಳುತ್ತಾರೆ. ಇದರಲ್ಲಿ ಲೇಖಕರ ಕಲ್ಪನೆಯಿಂದಲೇ ಕಥೆ ಕಟ್ಟುವ ರೀತಿಯನ್ನು ಗಮನಿಸಬಹುದು. ಇವರ ಕಥೆಯಲ್ಲಿ ಬಡತನದ ಬದುಕು, ಮುಗ್ಧ ಜನರ ಆಲೋಚನೆಗಳು, ಧಾರ್ಮಿಕ ನಂಬಿಕೆಗಳು, ಮಕ್ಕಳ ಮನದಲ್ಲಿ ಮೂಡುವ ಅದ್ಭುತ ಕಲ್ಪನೆಗಳು, ಹದಿಹರೆಯದವರ ಸಂಭ್ರಮ, ಆತ್ಮೀಯರ ಅಗಲುವಿಕೆಯಿಂದಾಗುವ ಪರಿಣಾಮಗಳು , ಎದುರಾಗುವ ಕಷ್ಟಗಳು, ಕುಟುಂಬದೊಳಗೆ ಹೆಣ್ಣಿಗಾಗುವ ಹಿಂಸೆ ಮನುಷ್ಯ ಸಂಬಂಧಗಳು, ಭಾವನಾತ್ಮಕ ವಿಚಾರಗಳನ್ನು ಎಲ್ಲವನ್ನು ಸಮರ್ಥವಾಗಿ ಕಥೆಗಳಲ್ಲಿ ಕಟ್ಟಿಕೊಡುತ್ತಾರೆ. ಇವರ ಬರಹ ತುಂಬ ಆಪ್ತವಾಗಿದ್ದು ನಿರೂಪಣೆಯ ಶೈಲಿಯೂ ಭಿನ್ನವಾಗಿದೆ. ಓದುಗರನ್ನೂ ತಮ್ಮ ಲೋಕಕ್ಕೆ ಕೊಂಡೊಯ್ಯುವ, ಓದಿ ಮುಗಿಯುವವರೆಗೆ ಅಲ್ಲೇ ಹಿಡಿದಿಡುವ ಶಕ್ತಿ ಈ ಕಥೆಗಳಿಗಿವೆ. ಇವರ ಬರವಣಿಗೆ ನಿರಂತರವಾಗಿ ಸಾಗುತಿರಲಿ, ಇನ್ನಷ್ಟು ಕಥೆಗಳು ಓದುಗರನ್ನು ತಲುಪಲಿ. ಸಾಹಿತ್ಯ ಲೋಕಕ್ಕೆ ಇಂಥ ಉತ್ತಮ ಕೃತಿಗಳನ್ನು ನೀಡುವಂತಾಗಲಿ. ****** ಚೇತನಾ ಕುಂಬ್ಳೆ

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಕುದ್ದು ಕುದ್ದು……..ಆವಿಯಾಗದೇ…… ವಿಭಾ ಪುರೋಹಿತ್ ಮೂಕ ಪ್ರಾಣಿಗಳಂತೆಸಂವೇದನೆಗಳ ಬಯಸಿಭೂಮಿಯಂತೆ ಸಹಿಸಿನದಿಯಂತೆ ಮಲಿನವಾದರೂಸುಮ್ಮನಾಗಿಪ್ರಕೃತಿಯಂತೆ ಹಿಂಸೆಯನ್ನುತಡೆದುಕೊಳ್ಳುತ್ತದೆಭಾಷೆ ಅನನ್ಯ,ಅರ್ಥ ಅನೂಹ್ಯಅವನ ಆವರಿಸಿದಾಗಮನೆಯೆಲ್ಲಾ ದಿಗಿಲುಖುಷಿಪಡಿಸಲಿಕ್ಕೆ ಯತ್ನಿಸುತ್ತಾರೆಆಗ ಮಹಾಬೆಲೆ ! ಅವಳ ಮುತ್ತಿಕೊಂಡಾಗಮನೆಯ ಕಾಡುವುದಿಲ್ಲಯಾರಿಗೂ ಗೊತ್ತಾಗುವುದಿಲ್ಲ‘ಮಿತಭಾಷಿ’ಎಂದು ಹೊಗಳುತ್ತಾರೆನಮ್ಮವಳಿಗೆ ಮಾತನಾಡಲುಬರುವುದಿಲ್ಲ ನಗರದವರ ಹಾಗೆ…..ಚೂಟಿಯಲ್ಲ,ಚತುರೆಯಲ್ಲ‘ಅಲ್ಪಮತಿ’ ಯ ಬಿರುದು ಕೊಟ್ಟುಅಭಿಮತದ ಆಯ್ಕೆ ಯನ್ನೇಕಿತ್ತುಕೊಳ್ಳುತ್ತಾರೆವಿಪರ್ಯಾಸ ವ್ಯಾಖ್ಯಾನ !ಕೂಡಿಟ್ಟು ಕೂಡಿಟ್ಟು ಕುದ್ದು ಕುದ್ದುಆವಿಯಾಗಿ ಹೊರಬರದೇಮತ್ತೆ ಬಸಿದು ಬಿಂದು ಬಿಂದುಗಳಾಗಿಹೊಸಜನ್ಮ ಪಡೆಯುತ್ತವೆನಿರೀಕ್ಷೆಯಂತೆ ಕಾಳಿಯಾಗಲಿಲ್ಲಸಿಡಿಮದ್ದಾಗಿ ಸಿಡಿಯಲೂಯಿಲ್ಲಯಾವ ಕಿಂಪುರುಷ ಕಿನ್ನರಿಯ ಮಾಯೆಯೂ ಅಲ್ಲಅವಳೊಳಗಿನ ತ್ರಾಣ,ಸಹನ, ಮೌನ

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಸ್ಮಿತಾ ಭಟ್ ಗೂಡಿನಲ್ಲಿ ಕನಸುಗಳು ಆಗಮನಕ್ಕಾಗಿ ಕಾಯುತ್ತಿವೆಗಡಿಯಲ್ಲಿ ಬದುಕುಗಳು ಶಾಂತಿಗಾಗಿ ಕಾಯುತ್ತಿವೆ. ಕುದಿಯುವ ಜ್ವಾಲಾಗ್ನಿ ಸಿಡಿದೇಳುವುದು ಸತ್ಯಮೌನದಲಿ ಜೀವಗಳು ಪ್ರೀತಿಗಾಗಿ ಕಾಯುತ್ತಿವೆ ಗಡಿ ಗೆರೆಗಳು ನೆಮ್ಮದಿಯ ನೀಡಿದ್ದುಂಟೇ ಎಲ್ಲಾದರೂಬಲಿದಾನದ ದೀವಿಗೆಗಳು ಬೆಳಕಿಗಾಗಿ ಕಾಯುತ್ತಿವೆ ಕೋಟೆ ಕಟ್ಟಿ ಆಳಿದವರೆಲ್ಲ ಉಳಿದಿರುವರೇ ಎಲ್ಲಾದರೂಹೆಪ್ಪುಗಟ್ಟಿದ ದ್ವೇಷಗಳು ಸೋಲಿಗಾಗಿ ಕಾಯುತ್ತಿವೆ. ಅಸ್ತ್ರ,ಶಸ್ತ್ರಗಳೇ ಮಾತಿಗಿಳಿಯುತ್ತಿವೆ ಜಗದೊಳಗೆಅಮಾಯಕರ ಉಸಿರು ನಂಬಿಕೆಗಾಗಿ ಕಾಯುತ್ತಿವೆ. ಯದಾ ಯದಾಹಿ ಧರ್ಮಸ್ಯ ಅನ್ನುತ್ತೀಯಲ್ಲೋ “ಮಾಧವ”ಬುವಿಯೊಡಲ ನೋವುಗಳು ನಿನ್ನ ನ್ಯಾಯಕ್ಕಾಗಿ ಕಾಯುತ್ತಿವೆ *********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಜುಲ್ ಕಾಫಿ಼ಯ ಗಜ಼ಲ್ ಎ.ಹೇಮಗಂಗಾ ಜೀವಸಂಕುಲದ ಉಳಿವಿಗೆಂದು ಜಪವಾಗಬೇಕು ಹಸಿರ ಉಳಿವುಅಸಮತೋಲನದ ಅಳಿವಿಗೆಂದು ತಪವಾಗಬೇಕು ಹಸಿರ ಉಳಿವು ಮಲಿನಗೊಂಡಿವೆ ಮನುಜ ಸ್ವಾರ್ಥಕೆ ಬಾನು, ಬುವಿ , ವಾಯು, ಜಲವೆಲ್ಲಾಪ್ರಕೃತಿದೇವಿ ಮುನಿಯದಿರಲೆಂದು ಧ್ಯೇಯವಾಗಬೇಕು ಹಸಿರ ಉಳಿವು಼ ಬತ್ತುತ್ತಲೇ ಇದೆ ಅಂತರ್ಜಲ ಒತ್ತೊತ್ತಾದ ಕಾಡುಗಳ ಸತತ ಹನನದಿಇರುವ ಅಲ್ಪವ ವೃದ್ಧಿಸಲೆಂದು ಧ್ಯಾನವಾಗಬೇಕು ಹಸಿರ ಉಳಿವು ಅರಿಯದಂತೆ ಕಾಯವ ನಲುಗಿಸಿ ಬಲಿಪಡೆದಿವೆ ಸೋಂಕು , ವಿಷಗಳುಎಲ್ಲರುಸಿರ ಉಳಿಸಲೆಂದು ಕಾಯಕವಾಗಬೇಕು ಹಸಿರ ಉಳಿವು ಕಾಲ ಮಿಂಚಿ ಹೋಗುವ ಮುನ್ನ ಕಾಪಿಡಬೇಕು ಪರಿಸರ ಜತನದಿಬದುಕು ಹಸನಾಗಲೆಂದು ಗುರಿಯಾಗಬೇಕು ಹಸಿರ ಉಳಿವು ಜಾಗೃತಳಾಗು ಹೇಮ ವಿನಾಶದ ಕೂಪ ಬಾಯ್ತೆರೆದಿದೆ ಮುಂದೆಸಾವ ದೂರ ಇಡಲೆಂದು ಸಾಧನೆಯಾಗಬೇಕು ಹಸಿರ ಉಳಿವು

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಶಿಕ್ಷಣದ ಬದಲಾವಣೆ ಅನಿವಾರ್ಯ ರೇಷ್ಮಾ ಕಂದಕೂರ ಶಿಕ್ಷಣದ  ಬದಲಾವಣೆ ಅನಿವಾರ್ಯ ಶಾಲೆ ಎಂಬುದು ಗಾರೆ ತುಂಬಿದ ಕಟ್ಟಡವಲ್ಲ ಜೀವಕೆ ಜೀವನ ನೀಡುವ ಸಂಗ್ರಹಾಗಾರ .ಕಾಲ ಘಟ್ಟದೊಂದಿಗೆ ಸದಾ ಹರಿವ ನೀರಿನಂತೆ ಬದಲಾಗುವ ರೀತಿಯ ಅರಿತು ಮಕ್ಕಳ ಮನವ ಅರಿತು ಬದಲಾಗುವ ಶೈಲಿಯ ರೂಢಿಸಿಕೊಂಡು ಮುಗ್ಧ ಮನಸುಗಳ ವಿಕಾಸಕ್ಕೆ ದಾರಿ ದೀಪವಾಗ ಬೇಕೆ ವಿನಃ ಕಟ್ಟುಪಾಡುಗಳಿಂದ ಚೌಕಟ್ಟಿನಲಿ ಜೋತು ಬೀಳಬಾರದು. ಅಂಕ ಶ್ರೇಣಿಯ ಹೊರತಾಗಿಯೂ ಬದುಕುವ ಜೀವನ ಶೈಲಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಸಾಗಬೇಕು.             ಮಾನವ ಜನಾಂಗದ ಪ್ರಗತಿಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ.ಮಾನವ ಶಕ್ತಿಯನ್ನು ರಾಷ್ಟ್ರವನ್ನು ಬೆಳೆಸುತ್ತಿರುವ ಅಮೂಲ್ಯ ಸಂಪನ್ಮೂಲಗಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತದೆ ಶಿಸ್ತು ಸಂಯಮ ಮತ್ತು ಉತ್ಪಾದಕ ಮಾನವ ಶಕ್ತಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಶಿಕ್ಷಣ ಮಾನವನ ಸಹಜ ಗುಣಗಳನ್ನು ಅಡೆತಡೆಯಿಲ್ಲದ ಮಾರ್ಪಾಡು ಮಾಡಿ ವ್ಯಕ್ತಿತ್ವ ವಿಕಸನಕ್ಕೆ ಎಡೆ ಮಾಡಿ ಕೊಡಬೇಕು.           ದೇಶದ ಕಲ್ಯಾಣಕ್ಕೆ ತಾತ್ವಿಕವಾಗಿ ಆರ್ಥಿಕವಾಗಿ ಸಾಮಾಜಿಕ ವಲಯಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುತ್ತದೆ. ಸಮಾನವಾಗಿ ಸಮನ್ವಯದೊಂದಿಗೆ ವಾಸ್ತವದ ನೆಲೆಗಟ್ಟು ಕಂಡುಕೊಳ್ಳಲು ಸಹಕಾರಿ ಜೀವನೋಪಾಯದ ಹಲವು ಮಜಲುಗಳನ್ನು ತಿಳಿಸುವ ಏಕೈಕ ಮಾರ್ಗ ಶಿಕ್ಷಣ.             ಶಿಕ್ಷಣ ಆಸಕ್ತಿದಾಯಕ ಸೃಜನಶೀಲತೆಗೆ ಹೆಚ್ಚು ಒತ್ತುಕೊಟ್ಟಾಗ ಅವುಗಳ ಅನುಷ್ಠಾನಕ್ಕೆ  ಪ್ರಚೋದಿಸಿ ಸಂತೃಪ್ತ ಮನೋಭಾವ ತುಂಬಿ ಹತಾಷೆ,ನಿರಾಸಕ್ತಿಗಳನ್ನು ತಿದ್ದಿ ಹೊಸತೊಂದು ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ.ಆದರೆ ಇಂದಿನ ಶಿಕ್ಷಣದ ವ್ಯಾಪಾರೀಕರಣ ಮಾಡುವುದು ಸಲ್ಲದು.ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ ಸುಖಶಾಂತಿಗಳಿಲ್ಲದೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ.ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞ ಡಾ.ರಾಧಾಕೃಷ್ಣನ್ ಹೇಳುವಂತೆ ಮಾನವ ಹಕ್ಕಿಯಂತೆ ಹಾರುವುದನ್ನು ಮೀನಿನಂತೆ ಈಜುವುದನು ಕಲಿತ ಆದರೆ ಮಾನವ ಮಾನವನಾಗಿ ಬಾಳುವುದನು ಮಾತ್ರ ಕಲಿಯಲಿಲ್ಲ.  ಇದರ ಅರ್ಥ ಮಾನವ ಬರೀ ಸಂಪತ್ತು ಗಳಿಕೆಗೆ ಒತ್ತು ಕೊಟ್ಟು ವೈಜ್ಞಾನಿಕ ಸಂಶೋಧನೆ ಮಾಡಿದ. ತಂತ್ರಜ್ಞಾನದಲ್ಲಿ ಕೊಡುಗೆ ನೀಡಿದ ಮಾನವ ಮಾನವನಾಗಿ ಬಾಳಿ ಬದುಕುವುದನು ಮರೆತ.       ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಮೌಲ್ಯಯುತ ಅಂಶಗಳನ್ನು ಕಲಿಸುವುದು ಇಂದಿನ ದಿನಮಾನಕ್ಕೆ ಅವಶ್ಯಕ.ಓದು ಹುದ್ದೇಯೇರುವ ಹಂಬಲ ಹೆಚ್ಚಾದರೆ ಅದನ್ನು ಸಾಧಿಸದಾದಾಗ ಆತ್ಮಹತ್ಯೆ ಎಂಬ ಮಾರಕತೆಗೆ ಒಳಗಾಗಿ ಜೀವ ನಷ್ಟ ವಾಗುತ್ತದೆ.          ಜೀವನ ಮಾಡಲು ದೊಡ್ಡ ಹುದ್ದೆಯೇ ಬೇಕೆಂದಲ್ಲ.ಇನ್ನಿತರ ಮಾರ್ಗಗಳನ್ನು ಇಂದಿನ ಶಿಕ್ಷಣ ನೀಡಬೇಕಾದುದು ಅವಶ್ಯಕ‌        ಸಮಾಜದ ಹಿತಕಾಯ್ದುಕೊಳ್ಳಲು ಆರೋಗ್ಯಕರವಾದ ವಾತಾವರಣವನ್ನು ಸಂರಕ್ಷಿಸುವ ಉದ್ದೇಶ ಹೊಂದಿರಬೇಕಾಗುತ್ತದೆ.ಶಿಕ್ಷಣದ ಗುರಿಗಳು ಶಾರೀರಿಕ ಬೆಳವಣಿಗೆಯೊಂದಿಗೆ ಸಚ್ಛಾರಿತ್ರ್ಯ ಬದುಕುವ ಕೌಶಲಗಳನ್ನು ನೀಡುವುದು ಅವಶ್ಯಕ.        ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ.  ಇದನ್ನು ಪ್ರತಿಯೊಬ್ಬ ಪ್ರಜೆ ಪಡೆಯಲೇಬೇಕು.        ಶಿಕ್ಷಣ ಉರು ಹೊಡೆದು ಪರೀಕ್ಷೆ ಬರೆದು ಅಂಕ ಪಡೆದರೆ ಸಾಲದು ಅನುಭವ,ಪ್ರಾಯೋಗಿಕವಾಗಿ ಪಡೆದು ಜೀವನ ನಡೆಸುವ ಕೌಶಲ್ಯಗಳನ್ನು ಧಾರೆ ಎರೆಯಬೇಕಾಗಿದೆ.ಸದೃಢ ದೇಹ ಮನಸು,ಮೌಲ್ಯಯುತ ಬದುಕು ಸಾಗಿದಾಗ ಜೀವನಕೊಂದು ಅರ್ಥ ಬರುತ್ತದೆ.  *******

ಪ್ರಸ್ತುತ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಪ್ರೋ.‘ಸಿಜಿಕೆ’ ಎಂಬ ರಂಗ ಪ್ರಜ್ಞೆ ಪ್ರೋ.‘ಸಿಜಿಕೆ’ ಎಂಬ ರಂಗ ಪ್ರಜ್ಞೆಯೂ..!ಸಿಜಿಕೆ ರಂಗ ದಿನವೂ.!! ‘ಸಿಜಿಕೆ’ ಎಂದರೆ ಅದೊಂದು ಮಹಾ ರಂಗಪರಂಪರೆಯ ಸಂಕೇತ. ತನ್ನ ಸುತ್ತಲಿನವರನ್ನು ಒಟ್ಟು ಸಮಾಜವನ್ನು ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆ ಮತ್ತು ಹೋರಾಟದ ಮನೋಭಾವನೆಯ ರಂಗ ಚಟುವಟಿಕೆಗಳ ಮೂಲಕ ಪ್ರಭಾವಿಸಿದ ರಂಗ ಚೇತನ. ದೇಶ, ಕಾಲ ಆಯಾ ಸಂದರ್ಭದಲ್ಲಿ ಎದುರಿಸುವ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ರಂಗ ಬದ್ಧತೆಯೊಂದಿಗೆ ದಿಟ್ಟತನದಿಂದ ಮೆರೆದ ಮಹಾ ಜಗಜಟ್ಟಿ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಿ.ಜಿ.ಕೃಷ್ಣಸ್ವಾಮಿ ಪಕ್ಕಾ ದೇಸಿ ಪ್ರತಿಭೆ.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಕನಾಮಿಕ್ಸ್‌ ಪ್ರೊಫೆಸರ್‌ ಆಗಿ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡುವುದರ ಜೊತೆಗೆ ರಾಜಧಾನಿ ಬೆಂಗಳೂರಿನ ಮೂಲಕ ಇಡೀ ನಾಡಿನ ಸಾಂಸ್ಕೃತಿಕ ಲೋಕ ಬೆಳಗಿದ ಪರಿಯೇ ಒಂದು ಅದ್ಭುತ ರಂಗ ಇತಿಹಾಸ.ದೈಹಿಕವಾಗಿ ಸ್ವತಃ ಸಹಜವಾಗಿ ಓಡಾಡಲಾಗದ ಸ್ಥಿತಿ. ಆದರೂ ಏರಿದ್ದು ಮಾತ್ರ ರಂಗಕುದುರೆ. ಆಗಿನಿಂದ ಅಂದರೆ 80 ಮತ್ತು 90ರ ದಶಕದ ಅತ್ಯಂತ ಕ್ರಿಯಾಶೀಲ ಅವಧಿಯಿಂದ ಕೊನೆಗಾಲದವರೆಗೂ ಅವರು ರಂಗಭೂಮಿಯಲ್ಲಿ ಶರವೇಗದ ಸರದಾರ..! ಜಂಗಮತ್ವ ಎನ್ನುವುದು ಅವರ ಒಟ್ಟು ಬದುಕಿನ ಸ್ವರೂಪವೇ ಆಗಿತ್ತು. ಕಲಾಕ್ಷೇತ್ರ ಹೆಚ್ಚೂ ಕಮ್ಮಿ ಅವರ ಕರ್ಮಭೂಮಿಯೇ ಆಗಿತ್ತು. ಸಂಸ ಬಯಲು ರಂಗಮಂದಿರದ ಖಾಲಿ ಸ್ಟೇಜ್‌ ಮೇಲೆ ಅಂಗಾತ ಮಲಗಿ ಆಕಾಶವನ್ನು ದಿಟ್ಟಿಸುತ್ತ ರಂಗಭೂಮಿಯಲ್ಲಿ ನವತಾರೆಗಳನ್ನು ಸೃಷ್ಟಿಸುವ ಕನಸು ಕಾಣುವುದು ಅವರ ಖಯಾಲಿಯೇ ಆಗಿತ್ತು. ಅಂಥ ಖಯಾಲಿಯಿಂದಲೇ ನಾಡಿನ ತುಂಬ ಹಲವು ರಂಗಪ್ರತಿಭೆಗಳು ದೊಡ್ಡ ಮಟ್ಟದ ಸ್ಟಾರ್‌ ಆಗಿದ್ದು. ತಮ್ಮ ತವರು ಜಿಲ್ಲೆಯ ಸಾಣೆಹಳ್ಳಿಯಲ್ಲೂ ಅವರು ಬೆಳೆಸಿದ ರಂಗಸಂಸ್ಕೃತಿ ಅವಿಸ್ಮರಣೀಯ. ಸದಾ ಯುವ ಮನಸುಗಳು ಮತ್ತು ಕ್ರಿಯಾಶೀಲರ ಜೊತೆ ಒಡನಾಟದಲ್ಲಿರುತ್ತಿದ್ದ ಈ ರಂಗಚೇತನ ಕಟ್ಟಿದ ನಾಟಕಗಳೆಷ್ಟೊ, ನೀಡಿದ ಪ್ರಯೋಗಗಳೆಷ್ಟೋ. ಬೆಳೆಸಿದ ರಂಗಸಾಹಿತಿ, ನಿರ್ದೇಶಕ, ತಂತ್ರಜ್ಞ, ನಟ, ನಟಿಯರೆಷ್ಟೊ. ಅವರ ಎಲ್ಲ ರಂಗಪ್ರಯೋಗಗಳು ಆಯಾ ಕಾಲದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಕ್ಷಿ ಪ್ರಜ್ಞೆಯೂ ಹೌದು.ಸಿಜಿಕೆ ಅವರ ‘ಒಡಲಾಳ’ ರಂಗಪ್ರಯೋಗ ರಂಗಭೂಮಿಯಲ್ಲಿ ಒಂದು ದೊಡ್ಡ ಮೈಲುಗಲ್ಲು. ಹಾಗೆಯೇ ಬೆಲ್ಚಿ, ಮಹಾಚೈತ್ರ, ದಂಡೆ, ಅಂಬೇಡ್ಕರ್‌, ರುದಾಲಿ ಇತ್ಯಾದಿ ರಂಗಪ್ರಯೋಗಗಳು ರಂಗಾಸಕ್ತರ ಜನಮಾನಸದಲ್ಲಿ ಅಚ್ಚಳಿಯದ ನೆನಪು. ಪ್ರಜ್ಞೆಯ ಭಾಗ. ಮಹಾನ್‌ ರಂಗಜೀವಿ ಸಿಜಿಕೆ ಕಾಲವಾಗಿ (2006) ವರ್ಷಗಳೇ ಸಂದಿವೆ. ಅವರ ನೆನಪಿಗೆ ರಂಗಾಸಕ್ತರು ಸೇರಿ ‘ರಂಗನಿರಂತರ’ ಸಂಸ್ಥೆಯ ನೇತೃತ್ವದಲ್ಲಿ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ ಆಯೋಜಿಸುತ್ತ ಬಂದಿದ್ದಾರೆ. ಈ ವರ್ಷವೂ ರಂಗೋತ್ಸವದ ಐದು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಕಳೆಕಟ್ಟಲಿದೆ. ಆ ಮೂಲಕ ಸಿಜಿಕೆ ಅವರನ್ನು ಅರ್ಥಪೂರ್ಣವಾಗಿ ಸ್ಮರಿಸಲಾಗುತ್ತಿದೆ. ಸಿಜಿಕೆ ಬೀದಿರಂಗ ದಿನವೂ..!– ಕನ್ನಡ ರಂಗಭೂಮಿ ಹಾಗೂ ಬೀದಿ ನಾಟಕಗಳಿಗೆ ಅಪಾರ ಕೊಡುಗೆ ನೀಡಿದ ಪ್ರಸಿದ್ಧ ರಂಗಕರ್ಮಿ ಸಿಜಿಕೆ ಅವರ ಹುಟ್ಟುಹಬ್ಬವನ್ನು ಜೂ. ೨೭ ರಂದು ಎಲ್ಲಾ ಕಡೆ ಯೂ ರಂಗಭೂಮಿಯ ಆಸಕ್ತಿ ಇರುವವರು ‘ಸಿಜಿಕೆ ಬೀದಿ ರಂಗ ದಿನ’ ವನ್ನಾಗಿ ವಿಶಿಷ್ಟವಾಗಿ ಆಚರಿಸರುತ್ತಾರೆ. ನಗರದ ಸಂಸ್ಕೃತಿ ಪ್ರಕಾಶನ, ಚಿಗುರು ಕಲಾ ತಂಡ ಹಾಗೂ ಬೆಂಗಳೂರಿನ ಸಂಸ ಥಿಯೇಟರ್, ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಬೆಳಿಗ್ಗೆ ೧೦-೩೦ ಗಂಟೆಗೆ ಇಲ್ಲಿನ ರಾಘವ ಕಲಾ ಮಂದಿರದ ಆವರಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಜಾನಪದ, ಬೀದಿ ರಂಗ ಗೀತೆ, ಕ್ರಾಂತಿ ಹಾಗೂ ವೈಚಾರಿಕ ಗೀತೆಗಳನ್ನು ಪ್ರಸ್ತುತಪಡಿಸಲಾಗುವುದು. ಸಿಜಿಕೆ ನೆನಪಿನಲ್ಲಿ ರಾಜ್ಯದ ೩೦ ಜಿಲ್ಲೆಗಳಲ್ಲಿ ಇಡೀ ದಿನ ವಿಚಾರ ಸಂಕಿರಣ, ಸಿಜಿಕೆ ರಂಗ ಹುಡುಕಾಟ, ಬೀದಿ ನಾಟಕ, ಸಿಜಿಕೆ ರಂಗ ಪುರಸ್ಕಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ಹೀಗಿದೆ ಪ್ರೋ.ಸಿಜಿಕೆ ಪರಿಚಯ ಮತ್ತು ಸಿಜಿಕೆಯ ಬೀದಿ ರಂಗಭೂಮಿಯ ದಿನದ ಪ್ರಯೋಗಗಳ ಅವಿರತ ಪ್ರಯತ್ನವೂ. ********* ಕೆ.ಶಿವು.ಲಕ್ಕಣ್ಣವರ

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಎಲ್ಲೆಲ್ಲೋ ನುಗ್ಗುತ್ತ ಸರಿಯಾದ ಹಾದಿ ಮರೆತುಹೋಗಿದೆಬಳಸುದಾರಿಗಳ ಬಳಸುತ್ತ ನೇರದ ಹಾದಿ ಮರೆತುಹೋಗಿದೆ ಒಂದೋ ಓಲೈಕೆ,ಹಲ್ಲುಕಿರಿತ ಅಥವಾ ಕತ್ತಿಮಸೆತಮಾತು ಚರ್ಚೆಗಳಲ್ಲಿ ಸಹಜದ ಹಾದಿ ಮರೆತುಹೋಗಿದೆ ಮತಿ ಕೃತಿಗಳ ನಡುವೆ ಎಷ್ಟು ಅಂತರ ಗೆಳೆಯಎಲ್ಲವೂ ಇವೆ ಇಲ್ಲಿ, ಆತ್ಮದ ಹಾದಿ ಮರೆತುಹೋಗಿದೆ ಮಾತು ಮನಸುಗಳಲ್ಲಿ ಪೇರಿಸಿದೆ ಪೆಡಸುತನಬದುಕಿನ ಓಟದಲ್ಲಿ ಪ್ರೇಮದ ಹಾದಿ ಮರೆತುಹೋಗಿದೆ ಎದೆಯ ಪಿಸುಮಾತುಗಳಿಗೆ ಜಾಗವೆಲ್ಲಿದೆ ಗೆಳತಿನೋವಿನಲೆಗೆ ಕಿವಿಯಾದ ಹಾದಿ ಮರೆತುಹೋಗಿದೆ ವ್ಯಕ್ತದ ಮೂಲಕ ಹಾದು ಅವ್ಯಕ್ತವ ಸೇರುವುದಿತ್ತುಎಲ್ಲಿ ಆ ದನಿ,ಅದು ತೋರಿದ ಹಾದಿ ಮರೆತುಹೋಗಿದೆ ಹಗಲು ರಾತ್ರಿಗಳ ಲೋಲಕದಲ್ಲಿ ಸಿಲುಕಿದ್ದಾನೆ ‘ಜಂಗಮ’ಹಿಡಿಯಬೇಕಿರುವ ಹೆಜ್ಜೆಮೂಡದ ಹಾದಿ ಮರೆತುಹೋಗಿದೆ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಪಿತೆ ಜಯಲಕ್ಷ್ಮೀ ಎನ್ ಎಸ್ ಅವನೋ ಗಡ್ಡ ಬಿಟ್ಟ ಕಾವಿ ತೊಟ್ಟಕಾವಿರದ ಕಸುವಿರದ ತಾಪಸಿ…ಇವಳೋ ಕಾನನದ ಕಣಕಣವಕ್ಷಣ ಕ್ಷಣದ ಚಮತ್ಕಾರಗಳಆಸ್ವಾದಿಸಿ ಆನಂದಿಸುವ ಚಿರಯೌವನೆ…! ಹಾರುವ ಪತಂಗಗಳ ಚಲ್ಲಾಟಕಂಡು ಒಳಗೊಳಗೇ ಕುತೂಹಲ..ಕಣ್ಣು ಹೊರಳಿಸಲು ಜೋಡಿ ಜೋಡಿಚಿಗರೆಗಳ ಚಿನ್ನಾಟಕೆ ಮರುಳು… ಕೊಳದೊಳಗೆ ಕೊಕ್ಕಿಗೆ ಕೊಕ್ಕನಿಟ್ಟುಮುತ್ತಿಕ್ಕುವ ಜೋಡಿ ಅಂಚೆಗಳ ಸಲ್ಲಾಪ…ರೆಂಬೆ ಕೊಂಬೆಗಳಲ್ಲಿ ಜಕ್ಕವಕ್ಕಿಗಳಸ್ವಯಂ ಭಾಷೆಯ ಚಿಲಿ ಪಿಲಿ ಮಾತುಕತೆ…! ಸಂಗಾತಿಯ ಸೆಳೆವ ಮಯೂರ ನರ್ತನಕೆಮೈಮರೆವ ಮಾಯಾಂಗನೆ…ಗೋಶಾಲೆಯೊಳಗಿನ ಖರಪುಟದಸದ್ದಿಗೆ ಕಲ್ಪನೆಯ ಕಾವು……! ದುಂಬಿಗಳ ಝೇಂಕಾರಕೂಕಿವಿ ನಿಮಿರಿಸುವಳು…ಅರಗಿಳಿಗಳ ಪ್ರಣಯ ಸಂಭಾಷಣೆಯಅರಿತವಳಂತೆ ನಾಚುವಳು……! ಅವನೋ ಸಾಧನೆಯಲಿ ತಲ್ಲೀನಇವಳು ಇರುಳು ಪಲ್ಲಂಗದಲೂ ಒಂಟಿಕಣ್ಣು ಮುಚ್ಚಲು ಚಿತ್ತ ಕದಡುವಹಗಲಿನ ಚಿತ್ತಾರದ ಕನಸುಗಳು….! ಕಲ್ಲಾದವಳ ಮೊಗ್ಗಿನ ಮನಸನುಅರಳಿಸಿದವನೊಬ್ಬ ಸಮಯ ಸಾಧಕ..ಹೂಮನದ ಕಾಮಿನಿಯ ಶಪಿಸಿಜಡವಾಗಿಸಿದವನೊಬ್ಬ ಮೋಕ್ಷಸಾಧಕ…! ಅವನು ಸಾಧಿಸಿದ್ದೇನನ್ನುಸಂಯಮವ ತೊರೆದು….!ಇವಳ ನಡಿಗೆಯ ಹಾದಿಗೆಜಾರುಬಂಡೆಯಾದಉನ್ಮಾದಗಳ ಶಪಿಸಬೇಕಿತ್ತು..

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆ ಹನಿಯೊಂದು ಒಡೆದು.. ಬಿದಲೋಟಿ ರಂಗನಾಥ್ ತಣ್ಣನೆಯ ಗಾಳಿಗೆ ಮೈ ಬಿಟ್ಟು ಕೂತೆಬಿದ್ದ ಹನಿಯೊಂದು ಒಡೆದು ಮುತ್ತಾಯ್ತುಕಚಗುಳಿಯಿಟ್ಟ ಆ ಹನಿಯನ್ನು ಮತ್ತೆ ಮತ್ತೆ ಹುಡುಕಿದೆ…ಇಲ್ಲ, ಸಿಗಲೇ ಇಲ್ಲ ಇದಾದ ಮೇಲೆ ಅದೆಷ್ಟೋ ಹನಿಗಳುನನ್ನ ಮೈ ಮುಟ್ಟಿರಬಹುದುಆ ಹನಿ ಕೊಟ್ಟ ಸ್ಪರ್ಶದ ಅಮಲುನನ್ನ ಮನಸನು ಮುಟ್ಟಲೇ ಇಲ್ಲ ಮತ್ತೆ ಬೇಸಿಗೆಬಿರು ಬಿಸಿಲ ಝಳಆದರೂ ಕಾಯುವುದ ಮಾತ್ರ ಮರೆಯಲಿಲ್ಲಬರುವ ಮಳೆ ಗಾಲದ ಹೆಜ್ಜೆ ಮೂಡುವವರೆಗೆ…ಪ್ರತಿಸಲ ಮೋಡ ಗರ್ಭಕಟ್ಟಿದಾಗೆಲ್ಲಏನೋ ಪುಳಕಿತ ಕಾತರ ರೋಮಾಂಚನಆ ಹನಿಯ ಸ್ಪರ್ಶಕ್ಕಾಗಿ. ಯಾವುದಾ ಹನಿ ?ಪ್ರಶ್ನೆಯ ಬಟ್ಟೆಯಲಿ ನೂರಾರು ಚಿತ್ತಾರಕಾಲಗಳು ಸರಿದವುಕೊಳಲು ಕೀರಲಾಯಿತುಜೀವಧ್ವನಿಯೊಂದು ಮೋಡದ ಕಡೆ ಕಣ್ಣಾಸಿತು ಪಟ ಪಟನೇ ಬೀಳುವಇಷ್ಟೊಂದು ಹನಿಗಳಲ್ಲಿಮೈ ತೊಯ್ದು ಹೋಗಿದೆನನ್ನೊಳಗಿನ ಜೀವ ಮಾತ್ರ ಆ ಹನಿಗಾಗಿಯೇಕಾತರಿಸಿದೆ ಕಾಯುವೆ..ಕಾಲಗರ್ಭ ಮುಗಿಲು ಸೇರುವವರೆಗೂಆ ಹನಿಯು ಮತ್ತೆ ಕಾಲೂರಿಜಡಜೀವತ್ವದ ಕಣ್ಣಂಚು ಬೆಳಗುವವರೆಗು. ********

ಕಾವ್ಯಯಾನ Read Post »

You cannot copy content of this page

Scroll to Top