ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಸೋಂಕು ವೀಣಾ ರಮೇಶ್ ನಾ ನಡೆದ ಹೂಗಳಹಾದಿಯಲಿ ಯಾಕೋಚುಚ್ಚುತ್ತಿದೆನೋವಿನ ಮುಳ್ಳುಗಳುನನಗೊಂದು ಶಂಕೆಕಾಡಿದೆ ಹಪಹಪಿಸುವ ಪ್ರೀತಿಗೆನನ್ನದೇ ದೃಷ್ಟಿಯ ಸೋಂಕುತಗಲಿರಬಹುದುನನ್ನ ಭಾವನೆಗಳು ಸುರಿಸುವ ನಿಟ್ಟುಸಿರಿಗೆನೆಮ್ಮದಿಯಮುಖ ಗವಸುಬೇಕಿರಬಹುದು ಹೃದಯಕ್ಕೂ ಮನಸಿನಯೋಚನೆಗಳಿಗೂಅಂತರ ಕಾಯುವುದುಬೇಕಿದೆ. ಈಗಒಂದಷ್ಟು ದಿನಗಳುಮೌನದೊಳಗೆ ಕಾಮನೆಗಳ ಬಂಧಿಸಿಎದೆಯ ಗೂಡೊಳಗೆಕಾವಲಿರಿಸಿ ಒಂದಷ್ಟು ಕಾಲಮನಸ್ಸು ಕ್ವಾರಂಟೈನ್ಆದರೆ ಸಾಕಿತ್ತುಆಗಲಾದ್ರೂ ಕಾಡುವವೈರಸ್ಗಳುಕಡಿಮೆಯಾಗಿಸೋಂಕು ಬಾರದೆ ಇರಬಹುದು ************

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಆತ್ಮದ ಮಾತುಗಳು ಈಗ ಹಗಲನ್ನುಇರುಳನ್ನೂಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆತುಂಗೆಯ ಮರಳುರಾಶಿಯಲ್ಲಿ ಮೂಡಿದನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆಕಾಲುಗಳುಹೂತುಹೋದದ್ದು ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿಕಳೆದುಕೊಂಡಿದ್ದೆ ನಿನ್ನನ್ನೂ. ಕವಿತೆಯ ಪ್ರತಿಸಾಲನ್ನೂನೀನು ಆಕ್ರಮಿಸುವಾಗಪ್ರತಿ ಶಬುದವನ್ನೂ ಜತನದಿಂದಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲು ಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನುಮುಸುಕಿದ ಕತ್ತಲ ಕಂಡುತಿರುಗಿ ನೋಡುವಷ್ಟರಲ್ಲಿನೀನಾಗಲೇ ವಿದಾಯ ಹೇಳಿಯಾಗಿತ್ತು ಯಾಕೆ ಹೋದೆಎಲ್ಲಿ ಹೋದೆಯಾರಿರುವರು ಜೊತೆಗೆಕೇಳಬಾರದಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರ ಬಯಲು ಸೀಮೆಯ ಕುರುಚಲು ಬಯಲುಗಳಲ್ಲಿಆತ್ಮದ ಮಾತಾಡಬೇಡವೆಂದು ಹೇಳಿದ ನಿನ್ನ ಮಾತುಗಳಷ್ಟೇರಿಂಗಣಿಸುತ್ತವೆ ನನ್ನ ಕಿವಿಗಳೊಳಗೆ! ಕು.ಸ.ಮದುಸೂದನ್

ಕವಿತೆ ಕಾರ್ನರ್ Read Post »

ಪುಸ್ತಕ ಸಂಗಾತಿ

ಘಾಚರ್ ಘೋಚರ್

ಘಾಚರ್ ಘೋಚರ್ಕಥಾಸಂಕಲನಲೇಖಕ: ವಿವೇಕ ಶಾನಭಾಗ ಏಕತ್ವ ಮನಸ್ಸಿನ ಗುಣ. ಆದರೆ, ಪ್ರತೀ ಉನ್ಮೇಷ, ನಿಮೇಷದಲ್ಲಿಯೂ ಮಗದೊಂದು ವಿಷಯ ಚಿಂತನೆಗೆ ಜಾರಬಲ್ಲ ಮನಸ್ಸು ಒಂದು ಕ್ರಮಬದ್ಧತೆಗೆ ಒಳಪಡಲು ಅಭ್ಯಾಸ ಬೇಕು. ಬದುಕು ಅದೇ ಮನೋಭ್ಯಾಸದ ಪಡಿಯಚ್ಚು‌. ಅದರ ಈ ಅಣಿಮ, ಗರಿಮಾದಿ ಗುಣಗಳ ಬಿಚ್ಚಿಡುವ ಈ ಕಥಾಸಂಕಲನ ಈ ವಿಶಿಷ್ಟ ನಿರೂಪಣೆಯಿಂದಾಗಿ ಹೃದಯವನ್ನು ಗೆಲ್ಲುತ್ತದೆ. ಒಂದು ನೀಳ್ಗತೆ, ಐದು ಕಥೆಗಳ ಸಂಗ್ರಹವಿದು. ಘಾಚರ್ ಘೋಚರ್ ನೀಳ್ಗತೆಯ ಮುಂದುವರೆದ ಭಾವವೇ ಉಳಿದ ಕಥೆಗಳು ಎಂಬ ಸುಳಿವು ಕೊನೆಯವರೆಗೂ ಓದುವಾಗ ಅನಿಸುತ್ತದೆ. ಅಬ್ಬಾ ವಿವೇಕರಿಗೊಂದು ಸಲಾಂ. ಕಥೆಯ ನಿರೂಪಣೆ, ಘಟನೆಗಳ ಎಳೆಗಳ ವಿಶ್ಲೇಷಣೆಯಲ್ಲಿ ಗೆಲ್ಲುವ, ಈ ನೀಳ್ಗತೆಯಲ್ಲಿ, ತನ್ನ ಬದುಕಿನ ಸಿಕ್ಕುಗಳ ಬಿಡಿಸಿ ಹೇಳುತ್ತಾ, ಕೊನೆಗೊಂದು ಗಂಟು ಉಳಿಸಿಯೇ ಕಥೆ ಮುಗಿಯುವುದು ಒಂದು ವಿಲಕ್ಷಣ ಯೋಚನೆಗೆ ಹಚ್ಚುತ್ತದೆ. ಓದುಗನಿಗೆ ಮುಂದಿನ ಕಥೆಯ ಆವೇಶವಾಗುವದಕ್ಕೂ ಮೊದಲು ಈ ಕಗ್ಗಂಟು ಕರಗುವುದೇ ಇಲ್ಲ… ಹೇಗೆಂದರೆ ಕಂಡಲ್ಲೆಲ್ಲಾ ಬಡಪಾಯಿ ಇರುವೆಯನ್ನು ಸಾಯಿಸುವ ಒಂದು ವಿಕ್ಷಿಪ್ತ ಮನಸ್ಥಿತಿಯನ್ನೇ ಬೆಳೆಸುತ್ತಾ ‘ಘಾಚರ್ ಘೋಚರ್’ ಎಂಬ ಒಂದು ಜೋಡಿ ಪದಗಳ ಆವಿಷ್ಕಾರವನ್ನು ಹೆಣೆಯುತ್ತಾ ಅದೇ ಅಂತ್ಯ ಎಂಬಲ್ಲಿಗೆ ಕಥನ ಮುಗಿಯುತ್ತದೆ. ಈ ಇಜ್ಜೋಡು ಪದಗಳನ್ನು ಅರಿತಿರುವ ಪ್ರಪಂಚದ ಕೆಲವೇ ಕೆಲವು ಜನರಲ್ಲಿ ನೀವೂ ಒಬ್ಬರಾಗುತ್ತೀರಿ… ಈ ಕಥೆಯ ಮೂಲಕ… ನಿರ್ವಾಣ ಕಥೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ, ಅಪರಿಚಿತ ಸ್ಥಳದಲ್ಲಿ ಒಂದು ಅಸಂಗತ ರೀತಿಯಲ್ಲಿ ಮೂರ್ತನಾಗುವ ಘಟನೆಯಿದೆ… ಇದೊಂದು ವಿಶಿಷ್ಟಪ್ರಯೋಗ. ಕೋಳಿ ಕೇಳಿ ಮಸಾಲೆ? ಕಥೆಯಲ್ಲಿ ನವಿರಾದ ವ್ಯಂಗ್ಯವು ಹಾಸ್ಯ ಎನಿಸುತ್ತಲೇ, ಒಂದು ವ್ಯವಸ್ಥೆಯ ಸೂಕ್ಷ್ಮ ಅವಲೋಕನವಿದೆ. ರಿಸ್ಕ್ ತಗೊಂಡು ಎಂಬ ಪುಟ್ಟ ಕಥೆಯಲ್ಲಿ ಸಹಜವಾದ ಕಥನದ ಹಾದಿಯ ಬದಿಗೊತ್ತಿ, ಗಂಡು- ಹೆಣ್ಣಿನ ಸಂಬಂಧ, ಮನಸ್ಥಿತಿಯ ಅನಾವರಣ ಅನನ್ಯವಾಗಿ ಮೂಡಿದೆ. ಇದೊಂದು ಸೂಜಿ ಮೊನೆಯ ಚುಚ್ಚುಮದ್ದು. ಸುಧೀರನ ತಾಯಿ ಕಥೆಯು ಭಾವನಾತ್ಮಕವಾಗಿ ಕಾಡುವ, ಕದಡುವ ಕಥೆ. ಆದರೆ, ಮನಸ್ಸಿನ ಖೇದಗಳ ಶಬ್ಧ ಕಥೆಯಲ್ಲಿ ವಾಚ್ಯವಾಗಿಲ್ಲ. ಓದುಗನಲ್ಲಿ ಧ್ವನಿಸುತ್ತದೆ. ಈ ಕಥೆಯ ಸಮಯದಲ್ಲಿ ಮನಸ್ಸು ಹದವಾಗಿ, ಕೊನೆಗೆ ಬಂದಾಗ ಒಂದು ಸುಖವಾದ ಉಸಿರು ಆಚೆ ಬರುವುದು ಅನುಭವ! ವಿಚಿತ್ರ ಕಥೆಯು ಒಂದು ವರದಿಯಂತೆ ಕಾಣುವ ಕಥನ. ಆದರೆ, ಈಗಿನ ಜಾಯಮಾನದ ವೈದ್ಯಕೀಯ ವ್ಯವಸ್ಥೆಯ ಅತಿರೇಕ ಮಾಹಿತಿಗಳ ಲೋಕದಲ್ಲಿ, ಕೇವಲ ಮನುಷ್ಯನ ತಪ್ಪು ಕೂಡ ಸಂಬಂಧಗಳ ನಡುವಿನ ರೋಗವನ್ನು ತೆರೆದಿಡುವುದು, ಒಂದು ಸಿನಿಮೀಯ ತಿರುವುಗಳನ್ನು ತರುತ್ತಾ ಸಾಗುವ ಕಥೆ.. ಇದು ಥಟ್ಟನೆ ಮುಗಿದು ಹೋಗುವುದಿಂದ ಒಮ್ಮೆ ಓದುಗ ಮನಸ್ಸಿನ ಓಟಕ್ಕೆ ಬ್ರೇಕ್ ಹಾಕಿಕೊಳ್ಳಬೇಕಾಗುತ್ತದೆ‌. ಕನ್ನಡದ ಕಥಾ ಪ್ರಪಂಚದಲ್ಲಿ ತಮ್ಮದೇ ಗುರುತು ಛಾಪಿಸಿದವರಲ್ಲಿ ವಿವೇಕ ಶಾನಭಾಗರೂ ಪ್ರಮುಖರು. ಬೇರೆ ಭಾಷೆಗಳಲ್ಲೂ ಅನುವಾದವಾಗಿರುವ ಈ ಕಥೆಯು ನಿರೂಪಣೆ, ವಿನ್ಯಾಸದಿಂದಾಗಿ ಏಕಾಏಕಿ ಮನಸ್ಸಿಗೊಂದು ಸಂಸ್ಕಾರ ತರುವುದು ಖಚಿತ. ಕಥೆ ಕಟ್ಟುವಿಕೆಯ ಅಧ್ಯಯನದ ಪಾಠ ಉಚಿತ. ಒಂದು ಉತ್ತಮ ಓದಿಗೆ ಈ ಕೃತಿ. ******************************** ಡಾ. ಅಜಿತ್ ಹರೀಶಿ ಡಾ. ಅಜಿತ್ ಹರೀಶಿ

ಘಾಚರ್ ಘೋಚರ್ Read Post »

ಕಾವ್ಯಯಾನ

ಕಾವ್ಯಯಾನ

ನಮ್ಮೂರ ಮಣ್ಣಿನಲಿ ವಿನುತಾ ಹಂಚಿನಮನಿ ನಮ್ಮೂರ ಬೀಸು ಗಾಳಿಯಲಿಮಾಸದ ಸಂಸ್ಕೃತಿಯ ಸುಗಂಧನನ್ನ ಉಸಿರ ಪರಿಮಳದಲಿಇಂದಿಗೂ ಸೂಸತಾವ ಘಮಘಮ ನಮ್ಮೂರ ಕಾಡ ಹಾದಿಯಲಿನಾ ಮೂಡಿಸಿದ ಹೆಜ್ಜೆ ಗುರುತುನಡೆದ ದಾರಿಯ ತೋರಿಸುತಲಿಇಂದಿಗೂ ಬೆನ್ಹತ್ತತಾವ ಎಡಬಲ ನಮ್ಮೂರ ಕೆರೆಯ ನೀರಿನಲಿನಾ ಒಗೆದ ಕಲ್ಲು ಹರಳುಅಲೆಗಳ ಮಾಲೆ ಹೆಣೆಯುತಲಿಇಂದಿಗೂ ನಗತಾವ ಕಿಲಕಿಲ ನಮ್ಮೂರ ನಿಷ್ಠ ಮಣ್ಣಿನಲಿಕಷ್ಟ ಎದುರಿಸುವ ಕೆಚ್ಚುಕನಸಿಗೆ ಎಣ್ಣಿ ಹೊಯ್ಯತಲಿಇಂದಿಗೂ ಮಿನಗತಾವ ಮಿಣಮಿಣ ********** ನಮ್ಮೂರ ಚಿಕ್ಕ ಆಗಸದಲಿಅಕ್ಕರೆಯ ಚೊಕ್ಕ ಚುಕ್ಕೆಗಳುಸಕ್ಕರೆಯ ಕಥೆ ಹೇಳುತಲಿಇಂದಿಗೂ ನೀತಿ ಹೇಳತಾವ ಚಕಚಕ ನಮ್ಮೂರ ಜನರ ಮನಸಿನಲಿಕರುಣೆಯ ಮಹಾಪೂರಸವಿ ನೆನಪುಗಳ ಸುರಿಯುತಲಿಇಂದಿಗೂ ಹರಸತಾವ ಭರಪೂರ

ಕಾವ್ಯಯಾನ Read Post »

ಅಂಕಣ ಸಂಗಾತಿ, ಜೀವನ

ದಿಕ್ಸೂಚಿ

ವಿಶಾಲ ಗೋಲದೊಳಗೆ ಎಂದೆಂದಿಗೂ ಅನಿಶ್ಚತತೆ ಜಯಶ್ರೀ ಜೆ.ಅಬ್ಬಿಗೇರಿ . ಅನಿಶ್ಚಿತತೆ ಎಂದ ಕೂಡಲೇ ನನಗೆ ನೆನಪಿಗೆ ಬರೋದು ತತ್ವಜ್ಞಾನಿಯೊಬ್ಬನ ಜೀವನದ ನೈಜ ಘಟನೆ.ಆತ ಪ್ರಸಿದ್ಧ ಪಾಶ್ಚಿಮಾತ್ಯ ತತ್ವಜ್ಞಾನಿ ನರ‍್ಮನ್ ಕಸಿನ್ಸ್.ಆತನ ದಿ ಅನಾಟಮಿ‌‌ ಆಫ್ ಇಲ್ನೆಸ್ ಎಂಬ ಗ್ರಂಥ ತುಂಬಾ ಪ್ರಸಿದ್ಧಿಯನ್ನು ಹೊಂದಿದೆ.ಇಂಥ ಸಾಧಕನಿಗೆ ರಕ್ತ ಕ್ಯಾನ್ಸರ್ ಎಂದು ಗೊತ್ತಾಯಿತು.ಇದನ್ನು ಕೇಳಿ ಆತನಿಗೆ ಬರಸಿಡಿಲು ಬಡಿದಂತಾಯಿತು.ಆದರೆ ಅವನು ತನ್ನ ಮನೋಭಾವನೆ ಯಿಂದ ಅದನ್ನು ಗುಣಪಡಿಸಿಕೊಳ್ಳಬೇಕೆಂದು ನಿರ್ಧರಿಸಿದ ಹಾಸ್ಯ ಚಲನಚಿತ್ರಗಳನ್ನು ನೋಡತೊಡಗಿದ.ಸುಮಾರು ೫೦೦ ಹಾಸ್ಯ ಚಲನಚಿತ್ರಗಳನ್ನು ನೋಡಿದ್ದರ ಪರಿಣಾಮ ಭಾರಿ ಆಗಿತ್ತು.ಆತ ರಕ್ತ ಕ್ಯಾನ್ಸರ್‌ನಿಂದ ಗುಣ ಮುಖ ಆಗು ವುದು ಅಷ್ಟೇ ಅಲ್ಲ.ಮುಂದೆ ಇಪ್ಪತ್ತು ವರ್ಷಗಳ ಕಾಲ ಸು ಖವಾಗಿ ಬದುಕಿದ.ನರ‍್ಮನ್‌ನ ಕಥೆ ಓದಿ ಅರೆ! ಅನಿಶ್ಚಿತತೆ ಯ ಮನೋಭಾವನೆಯಿಂದ ಇಷ್ಟು ಸಲೀಸಾಗಿ ಗೆಲ್ಲಬಹು ದೇ ಅಂತೆನಿಸಿತಲ್ಲವೇ? ಶತಾಯುಷಿಗಳಾಗಿ ಬದುಕಿದವರ ಜೀವನ ಚರಿತ್ರೆಯ ಅಧ್ಯಯನ ಮಾಡಿದವರು ಮತ್ತು ಸ ಮೀಕ್ಷೆಗಳು ಪ್ರಕಟಿಸಿದ ವರದಿ ‘ಸಂತೋಷದಾಯಕ ಮ ನೋಭಾವವೇ ಶತಾಯಿಷಿಗಳನ್ನು ಎಂಥ ಕಡುಕಷ್ಟ ಕಾಲ ದ ಪರಿಸ್ಥಿತಿಯಲ್ಲಿ ಮತ್ತು ಅನಿಶ್ಚಿತತೆಯಲ್ಲಿ ರಕ್ಷಿಸಿತು’ ಎಂದು ಹೇಳುತ್ತದೆ.ಅನಿಶ್ಚಿತತೆ ಜೀವನದ ಒಂದು ಭಾಗ ಎಲ್ಲವೂ ನಾವೆಂದಕೊಂಡಂತೆ ನಡೆದರೆ ಬದುಕು ನಮ್ಮ ನಿಯಂತ್ರಣದಲ್ಲಿದೆ ಅಂತ ಖುಷಿಯಾಗುತ್ತದೆ.ಯಾವುದೇ ಒಂದು ದಿನ ಹೀಗೆಲ್ಲ ಆಗುತ್ತೆ ಅಂತ ನಾವೆಲ್ಲ ನಿರೀಕ್ಷಿಸಿರು ವುದಿಲ್ಲ.ಅಷ್ಟೇ ಅಲ್ಲ ಆ ದಿಸೆಯಲ್ಲಿ ಎಳ್ಳಷ್ಟು ಯೋಚಿಸಿರು ವುದಿಲ್ಲ. ಅಂಥ ಸಂದರ್ಭದಲ್ಲಿ ಒಂದು ಅನಿಶ್ಚಿತತೆ ನಮಗೆ ಹೇಳದೇ ಕೇಳದೇ ಒಮ್ಮೆಲೇ ಧುತ್ ಎಂದು ಪ್ರತ್ಯಕ್ಷವಾಗಿ ಬಿಡುತ್ತದೆ.ಅದು ನೈಸರ್ಗಿಕ ವಿಕೋಪದ ದಿನಗಳಲ್ಲಿ ಆದ ರಂತೂ ಮುಗಿದೇ ಹೋಯಿತು. ಅಯ್ಯೋ! ಇದನ್ನು ಇನ್ನು ಹೇಗೆ ನಿಭಾಯಿಸಬೇಕೆಂದು ತಲೆಗೆ ಕೈ ಹಚ್ಚಿಕೊಂಡು ಅಸ ಹಾಯಕರಾಗಿ ಕೂತು ಬಿಡುತ್ತೇವೆ.ಕೆಲವರು ಇದು ಹೀಗೆ ಒಂದು ದಿನ ಆಗಬಹುದು ಅಂತ ಅಂದುಕೊಂಡಿದ್ದೆ ಅಂತ ಹೇಳುವುದನ್ನೂ ಕೇಳುತ್ತೇವೆ.ಅದು ಮೊದಲೇ ಗೊತ್ತಿದ್ದರೆ, ಏನಾದರೂ ಕ್ರಮ ಏಕೆ ತೆಗೆದುಕೊಳ್ಳಲಿಲ್ಲ ಎನ್ನುವ ಪ್ರಶ್ನೆ ನಮ್ಮ ಮುಖಕ್ಕೆ ಮುಖ ಮಾಡಿ ನಿಲ್ಲುತ್ತದೆ.ಅಂದರೆ ಅದೆಲ್ಲ ನಾವೆಷ್ಟು ಜಾಣರು ಅಂತ ತೋರಿಸಿಕೊಳ್ಳುವ ನಂಬ‌ಲಾಗ ದ ತಂತ್ರ ಅಷ್ಟೇ.ಕೆಲವೊಮ್ಮೆ ಬರೀ ಸಮಾಧಾನಕ್ಕೆ ಹಾಗೆ ಹೇಳಿಕೊಳ್ಳುತ್ತೇವೆ.ಅಂದ್ಹಾಗೆ ಅನಿಶ್ಚಿತತೆ ಜೀವನದ ಒಂದು ಭಾಗ.ಅನ್ನುವುದನ್ನು ನಾವು ಬಹಳಷ್ಟು ಸಲಮರೆತು ಬಿಡು  ತ್ತೇವೆ.ಹಾಗೆ ಕೂಲಂಕುಷವಾಗಿ ಗಮನಿಸಿದರೆ ಅನಿಶ್ಚಿತತೆ ಯ ಬಗ್ಗೆ ನಾವು ಆತಂಕ ಪಡಬೇಕಿಲ್ಲ.ಏಕೆಂದರೆ ‘ಅನಿಶ್ಚಿತ ತೆಯ ಸನ್ನಿವೇಶದಲ್ಲಿ ಸಾಧ್ಯತೆಗಳು ಮತ್ತು ಆಯ್ಕೆಗಳು ಹೆಚ್ಚಾಗಿರುತ್ತವೆ’ . ಬದಲಾವಣೆಯ ಆಗರ ಅನಿಶ್ಚಿತತೆ ಆವರಿಸಿದಾಗ ಎಷ್ಟೇ ಗಟ್ಟಿಗರಾಗಿದ್ದರೂ ಅರಿವಿಗೆ ಬರದೇ ಭಯ ಆವರಿಸಿಕೊ ಳ್ಳುತ್ತದೆ.ಉಳಿದ ಸಮಯದಲ್ಲಿ ಅತಿ ಚುರುಕಾಗಿ ಕೆಲಸ ಮಾಡುವ ಮೆದುಳು ಮಂಕಾಗಿ ಬಿಡುತ್ತದೆ.ಹಿಂಡನ್ನು ಅಗ ಲಿದ ಮರಿ ಆನೆಯಂತಾಗುತ್ತದೆ.ಬಿದ್ದರೂ ಮೀಸೆ ಮಣ್ಣಾಗಿ ಲ್ಲ ವೆಂದು ತೋರಿಸಿಕೊಳ್ಳುವ ಜಾಯಮಾನ.ಅಷ್ಟು ಸುಲ ಭ ವಾಗಿ ಒಪ್ಪಿಕೊಳ್ಳುವುದಿಲ್ಲ.ಇದೇನು ಮಹಾ ಅದೆಷ್ಟೋ ಕಷ್ಟಗಳ ಮೂಟೆಗಳನ್ನು ಎತ್ತಿ ಬಿಸಾಕಿದ್ದೀನಿ.ಇದು ಯಾವ ಲೆಕ್ಕ ಬಿಡಿ ಎನ್ನುವ ಅಹಂಕಾರದ ಮಾತುಗಳನ್ನೂ ಆಡು ತ್ತೇವೆ.ಆದರೆ ವಾಸ್ತವ ಬೇರೆಯೇ ಇರುತ್ತದೆ.ನಮ್ಮೆದುರು ದೊಡ್ಡದೊಂದು ಶೂನ್ಯ ನಗುತ್ತ ನಿಂತಿರುತ್ತದೆ.ಸಣ್ಣ ವಿಷ ಯಗಳು ಸಣ್ಣ ಮನಸ್ಸುಗಳಿಗೆ ಸಂತೋಷ ನೀಡುತ್ತವೆ. ಎನ್ನುತ್ತ ದೊಡ್ಡದರತ್ತ ಚಿತ್ತ ಹರಿಸಿದರೆ ಮುಂದೇನು ಅಂತ ದಿಕ್ಕೇ ತೋಚದ ಹಾಗೆ ಕೂತಲ್ಲೇ ಕಣ್ಣೀರು ಹರಿಯುತ್ತದೆ. ಕೆಲವೊಮ್ಮೆ ದೇವರ ಮನೆಗೆ ಓಡಿ ಹೋಗಿ ಕಾಪಾಡಪ್ಪಾ ಅಂತ ಗಲ್ಲ ಗಲ್ಲ ಬಡಿದುಕೊಳ್ಳುವುದೂ ಉಂಟು.ಹಾಗಾದ ರೆ ಈ ಅನಿಶ್ಚಿತತೆ ಸನ್ನಿವೇಶದಲ್ಲಿ ಏನೆಲ್ಲ ಮಾಡಬಹುದು? ಚಿನ್ನದಂಥ ಕನಸನ್ನು ಮತ್ತೆ ಮತ್ತೆ ಕಂಡು ಹತಾಶರಾಗುತ್ತೇ ವೆ. ಹಾಗೆ ನೋಡಿದರೆ ಬದುಕು ಬದಲಾವಣೆಯ ಆಗರವೇ ಅಲ್ಲವೇ? ಪ್ರತಿನಿತ್ಯ ಅನಿಶ್ಚತತೆ ನಮ್ಮ ಸುತ್ತಲೂ ಸುತ್ತುತ್ತ ಲೇ ಇರುತ್ತದೆ. ಅದರಿಂದ ಪಾರಾಗವುದು ಸುಲಭವಲ್ಲ. ಸುಲಭವಲ್ಲ ಅಂದ ಮಾತ್ರಕ್ಕೆ ಅಸಾಧ್ಯ ಅಂತ ಅರ್ಥವಲ್ಲ. ‘ನಾವು ವಿಶಾಲವಾದ ಗೋಲದೊಳಗೆ ಪ್ರಯಾಣಿಸುತ್ತೇವೆ. ಎಂದೆಂದಿಗೂ ಅನಿಶ್ಚಿತತೆಯಿಂದ ಚಲಿಸುತ್ತೇವೆ’.ಎನ್ನುತ್ತಾ ನೆ ಬ್ಲೇಸ್ ಫಾಸ್ಕಲ್.ಅನಿಶ್ಚಿತತೆಯನ್ನು ಎದುರಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ,ಗುರಿ ಸ್ಪಷ್ಟಪಡಿಸಿಕೊಳ್ಳಿ. ‘ಬರೆದಿಡಲಾರದ ಗುರಿಯು ಕೇವಲ ಒಂದು ಆಸೆ.ಎನ್ನುತ್ತಾ ರೆ ಬಲ್ಲವರು.ಆದ್ದರಿಂದ ಗುರಿಯನ್ನು ಸ್ಪಷ್ಟವಾಗಿ ದೊಡ್ಡ ಅಕ್ಷರಗಳಲ್ಲಿ ಬರೆದಿಡಿ.ಅದು ಮೇಲಿಂದ ಮೇಲೆ ನಿಮ್ಮ ಕಣ್ಣಿಗೆ ಬೀಳುವಂತಿರಲಿ.ನಿಮ್ಮ ಗಮನ ಸೆಳೆಯುವಂತಿರಲಿ ಸ್ಪಷ್ಟತೆ ಇರದೇ ಇದ್ದಾಗ ಸಮಯವು ಹೇಗೇಗೋ ವ್ಯರ್ಥ ವಾಗಿ ಕಳೆದು ಹೋಗಿ ಬಿಡುತ್ತದೆ.ಇಲ್ಲದ ಅನಿಶ್ವಿತತೆಗಳ ರಾಶಿಯನ್ನು ತಂದು ನಮ್ಮ ಮುಂದೆ ಚೆಲ್ಲುತ್ತದೆ. ಒಂದು ವೇಳೆ ಸಾಗುವ ದಾರಿ ಇದೇ ಅಂತ ಗೊತ್ತಾದರೆ ನಿಶ್ವಿತತೆಗೆ ದೊಡ್ಡ ಮಣೆ ಸಿಗುತ್ತದೆ. ಗುರಿಯೊಂದಿಗೆ ಉದ್ದೇಶಗಳನ್ನು ಸ್ಪಷ್ಟಪಡಿಸಿಕೊಂಡರೆ ನಡೆಯುವ ದಾರಿ ಅನಿಶ್ಚತತೆಯಿಂದ ಪರ‍್ತಿ ಸರಳಗೊಳಿಸಬಹುದು. ಯೋಜನೆಗಳ ಮೂಲಕ ಕೈಗೆತ್ತಿಕೊಳ್ಳಬಹುದು.ಎದೆಗಪ್ಪಿಕೊಳ್ಳಬಹುದು.ನಿರ್ಧಿಷ್ಟ ದಿಕ್ಸೂಚಿ ಬದಲಾವಣೆಗೆ ಪ್ರತಿರೋಧಿಸುವ ಗುಣ ನಮ್ಮ ಜೀನ್ಸಗಳಲ್ಲಿದೆ.ಗುರಿಯತ್ತ ಸಾಗಲು ಒತ್ತಡ ನೋವುಗಳ ನ್ನು ತಾಳಿಕೊಳ್ಳಲಾರದೇ ಪ್ರಯತ್ನಕ್ಕೆ ಮಂಗಳ ಹಾಡುತ್ತೇವೆ ನಡುವೆ ಕೈ ಬಿಡುವ ಜಾಯಮಾನಕ್ಕೆ ಒಗ್ಗಿಕೊಂಡ ಮನಸ್ಸಿ ಗೆ ಇದೆಲ್ಲ ಬೇಡವಾಗುತ್ತದೆ.ಕೂಲಂಕಷವಾಗಿ ಅವಲೋಕಿ ಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಅನಿಶ್ಚಿತತೆಯು ಭಾವನೆಗಳಿಗೆ ಮತ್ತು ಆಲೋಚನೆಗಳಿಗೆ ಲಗ್ಗೆ ಇಡುತ್ತದೆ.ಹೀಗಾಗಿ ಭಾವ ಲೋಕವನ್ನು ಪರಿಶುದ್ಧವಾ ಗಿ ಇಟ್ಟುಕೊಳ್ಳಬೇಕಾಗುತ್ತದೆ.ಗೊತ್ತಿಲ್ಲದ ಪ್ರದೇಶಗಳಿಗೆ ಭೇ ಟಿ ನೀಡುವಾಗ ಅಲ್ಲಿಗೆ ಹೋಗಿ ಬಂದವರನ್ನು ಕೇಳುತ್ತೇವೆ.  ಅದರೊಂದಿಗೆ ಹೋಗುವ ದಾರಿಯ ವಿವರಣೆಯನ್ನು ತಿಳಿ ದುಕೊಳ್ಳುತ್ತೇವೆ ಅಲ್ಲವೇ? ಹಾಗೆಯೇ ನಿಶ್ಚಿತಗೊಳಿಸಿದ ಗುರಿಯಲ್ಲಿ ನೀವೀಗ ಎಲ್ಲಿದ್ದೀರಿ. ಅದನ್ನು ತಲುಪಲು ದಿನ ನಿತ್ಯ ಮಾಡಬೇಕಾದ ಕಾರ‍್ಯಗಳ ಪಟ್ಟಿಯನ್ನು, ಮಾಡುವ ಕೆಲಸದ ವೇಳಾ ಪಟ್ಟಿಯನ್ನು ತಯಾರಿಸಿಕೊಳ್ಳುವುದರಿಂದ ಅನಿಶ್ಚಿತತೆಯಿಂದ ದೂರ ಬರಬಹುದು. ವೇಳಾ ಪಟ್ಟಿಯು ನಿಮ್ಮನ್ನು ನಿರ‍್ದೇಶಿಸುತ್ತದೆ. ಯೋಜನೆಗಳಲ್ಲಿ ಮಾಡಿಕೊಳ್ಳ ಬೇಕಾದ ಬದಲಾವಣೆಗಳು ಅದರಲ್ಲಿ ತೊಡಗಿಕೊಂಡ ಮೇಲೆ ದಿನೇ ದಿನೇ ಸ್ಪಷ್ಟವಾದ ಚಿತ್ರವನ್ನು ನೀಡುತ್ತ ಹೋ ಗುತ್ತವೆ.ಆದ್ದರಿಂದ ಒಂದು ವೇಳಾ ಪಟ್ಟಿಯನ್ನು ನಿರ‍್ಧಿಷ್ಟ   ದಿಕ್ಸೂಚಿಯಂತೆ ಬಳಸುವುದು ಉತ್ತಮ ಮಾರ್ಗವೆಂದರೆ ಏಕಾಗ್ರತೆ. ಬದುಕಿನಲ್ಲಿ ಎಲ್ಲವೂ ನಮ್ಮ ನಿಯಂತ್ರಣದಲ್ಲಿಲ್ಲ.ಕೆಲವು ಸಂಗತಿಗಳು ನಿಯಂತ್ರಣದಾಚೆಗೆ ಇವೆ.ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ ಉಚಿತ.ಸಾಮಾಜಿಕ ಜಾಲ ತಾಣ ಗಳಲ್ಲಿ ಕಳೆಯುವ ಬಹುತೇಕ ಸಮಯ ಕೃತಕ ಖುಷಿ ನೀಡ ಡುತ್ತದೆ.ಅಲ್ಲಿ ಕಳೆಯುವ ಸಮಯವನ್ನು ಮಿತಿಗೊಳಿಸು ವುದು ನಮ್ಮ ನಿಯಂತ್ರಣದಲ್ಲಿದೆ.ಅನಿಶ್ಚತತೆಯನ್ನು ನೀಗಿ ಸಲು ಅನೇಕ ಹಂತಗಳು ನಮ್ಮ ಕೈಯಲ್ಲೇ ಇವೆ.ಕೆಲವು ಸಮಯ ನೀವು ವಾಟ್ಸಪ್ ಫೇಸ್ ಬುಕ್ ನೋಡದಿದ್ದರೆ ರಾತ್ರೋ ರಾತ್ರಿ ಏನೂ ಆಗಿ ಬಿಡಲ್ಲ.ಕಾರ‍್ಯದೆಡೆಗಿನ ಸರಳ ಶಿಸ್ತು,ನಿರ‍್ಧಿಷ್ಟವಾದುದರ ಮೇಲಿನ ಕೇಂದ್ರೀಕರಿಸುವಿಕೆ ಫಲಿತಾಂಶವನ್ನು ಎತ್ತರಕ್ಕೇರಿಸುತ್ತದೆ.ಉತ್ಕೃಷ್ಟತೆ ಎಂದರೆ ಕೇಂದ್ರೀಕರಿಸುವಿಕೆ ಪರಿಣಾಮಕಾರಿಯಾಗಿ ಕಾರ‍್ಯ ನಿರ‍್ವಹಿ ಸಲು ಪ್ರಯತ್ನ ಮಾಡುವುದು.ಒಮ್ಮೆ ನೆಪೋಲಿಯನ್ ಹೀ ಗೆ ಹೇಳಿದನು: ‘ಏಕಾಗ್ರತೆಯಿಂದ ಯಾವನು ಪ್ರಯತ್ನಿಸು ವುದಿಲ್ಲವೋ, ಅವನು ಎಂದೂ ಯಶಸ್ವಿಯಾಗಲಾರನು. ಸಮಯ ಅಮೂಲ್ಯ ಸಮಯವನ್ನು ಹೆಚ್ಚು ಸಮರ್ಥವಾ ಗಿ ನಿರ‍್ವಹಿಸಲು ಬದ್ಧರಾಗಬೇಕು. ‘ಸಮಯವೇ ಜೀವನ.’ ಒಮ್ಮೆ ಕಳೆದು ಹೋದರೆ ಮರಳಿ ಸಿಗದ ಸಂಪತ್ತು ಎಂಬ ಗಾಢ ಭಾವವನ್ನು ಬೆಳೆಸಿಕೊಳ್ಳಬೇಕು.ಇತರರು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲು ಬಿಡಬೇಡಿ. ಬರೀ ಚಟುವಟಿಕೆಯಿಂದ ಕೂಡಿದ ಕೆಲಸಗಳಲ್ಲಿ ತೊಡಗಿ ಕೊಳ್ಳುವುದನ್ನು ಬಿಟ್ಟು ಉತ್ಪಾದನಶೀಲ ಕಾರ‍್ಯಕ್ಕೆ ಒತ್ತು ಕೊಡಬೇಕು.‘ಕಾಲದ ಪ್ರಯೋಜನ ಗೊತ್ತಿರದವರಿಗೆ ದಿನ ವು ಬಹು ದುಗರ್ಮವಾಗುತ್ತದೆ’.ಎನ್ನುತ್ತಾನೆ ಬುದ್ಧ.ಅನಿಶ್ಚಿ ತ ಸಮಯದಲ್ಲಿ ಕೈಯಲ್ಲಿರುವ ಸಮಯ ಒಂದು ಅವಕಾ ಶದಂತೆ ಅದನ್ನು ಸಿದ್ಧತೆಗಾಗಿ ಬಳಸಿಕೊಳ್ಳಬೇಕು.ಇದನ್ನೇ ಡಿಸ್ರೆಲ್ ಹೀಗೆ ಹೇಳುತ್ತಾನೆ,’ಅವಕಾಶವು ಎದುರಾದಾಗ ಅದನ್ನು ಎದುರುಗೊಳ್ಳುವ ಸಿದ್ಧತೆಯಲ್ಲಿರುವುದೇ ಯಶ ಸ್ವಿ ಜೀವನದ ರಹಸ್ಯವಾಗಿದೆ’.ಅಚ್ಚರಿಗಳಿಗೆ ಮುಕ್ತ ವಾಗಿರಿ ‘ಸುಂದರ ಬದುಕು ಒಂದು ಆಕಸ್ಮಿಕವಲ್ಲ.’ ಬದುಕು ಸುಂದ ರವಾಗಿಲ್ಲ ಅದನ್ನು ನಾವೇ ಸುಂದರವಾಗಿವಾಗಿಸಿ ಕೊಳ್ಳ ಬೇಕು.ಬದುಕು ಅಚ್ಚರಿಗಳ ಆಗರವೂ ಹೌದು. ಹೀಗಾಗಿ ಅಚ್ಚರಿಗಳು ನಡದೇ ಇರುತ್ತವೆ.ಆದ್ದರಿಂದ ಅಚ್ಚರಿಗಳನ್ನು ಮುಕ್ತವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇ ಕು.ಅಚ್ಚರಿಗಳಿಗೆ ಸಿದ್ದತೆ ಮಾಡಿಕೊಳ್ಳಲು ಕಲಿಯಬೇಕು. ಅದನ್ನು ಹಿರಿಯರ ಹಿತೋಪದೇಶದಿಂದಲೂ ಕಲಿಯಬ ಹುದು.ಅಚ್ಚರಿಗಳು ಅದ್ಭುತವನ್ನು ನೀಡುತ್ತವೆ.’ಯಾಕೋ ಏನೋ ಈ ಪ್ರಪಂಚದಲ್ಲಿ ಉಪದೇಶವೆಂದರೆ ಯಾರೂ ಇಷ್ಟ ಪಡುವುದಿಲ್ಲ.ನಿಜಕ್ಕೂ ಅವುಗಳ ಅಗತ್ಯ ಹೆಚ್ಚಾಗಿರು ವವರು ಅವುಗಳನ್ನು ತೀರಾ ಕಡಿಮೆ ಇಷ್ಟ ಪಡುತ್ತಿರುತ್ತಾರೆ  ಎಂದಿದ್ದಾನೆ ಜಾನ್ಸನ್.ಅನಿಶ್ಚತತೆಯ ಸವಾಲುಗಳನ್ನು ತೊಡೆದು ಹಾಕಲಾಗುವುದಿಲ್ಲ ಸ್ವೀಕರಿಸಲೇಬೇಕು. ಅನಿಶ್ಚಿತತೆಯನ್ನು ಎದುರಿಸುವಲ್ಲಿ ತಪ್ಪುಗಳಾಗಬಹುದು ಆದರೆ ನಿಂತಲ್ಲೇ ಕೊಳೆಯುವುದಕ್ಕಿಂತ ತಪ್ಪು ಮಾಡಿ ಅನಿಶ್ಚತತೆಯನ್ನು ಎದುರಿಸುವುದು ಉತ್ತಮವಲ್ಲವೇ? ***************

ದಿಕ್ಸೂಚಿ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಬಾಳಾಸಾಹೇಬ ಲೋಕಾಪುರ ಬಾಳಾಸಾಹೇಬ ಲೋಕಾಪುರ ಅವರ ಸಾಹಿತ್ಯ ಕೃಷಿಯೂ..!ಮತ್ತವರ ಉಧೋ ಉಧೋ ಎನ್ನುವ ಉತ್ತರ ಕರ್ನಾಟಕದ ಭಾಷೆಯೂ.!! ಬಾಳಾಸಾಹೇಬ ಲೋಕಾಪುರ ಇವರು ನವ್ಯೋತ್ತರ ಸಾಹಿತಿಗಳು. ಬಾಗಲಕೋಟದ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾಗಿದ್ದಾರೆ… ಇವರ ಕೃತಿಗಳು ಹೀಗಿವೆ– ಕಥಾಸಂಕಲನಗಳು– ಕವಣಿಗಲ್ಲು,ಹಾರುವ ಹಕ್ಕಿ ಮತ್ತು ಆಕಾಶ,ತನು ಕರಗದವರಲ್ಲಿ,ಕಂಗಳು ತುಂಬಿದ ಬಳಿಕ, ಇವರ ಕಾದಂಬರಿಗಳು– ಉಧೊ ಉಧೊಹುತ್ತಬಿಸಿಲುಪುರನೀಲಗಂಗಾ. ಇವರ ಕವನ ಸಂಕಲನಗಳು– ಭ್ರಮರಂಗೆ. ಇವರು ಪಡೆದ ಪ್ರಸಸ್ತಿಗಳು– ಕನ್ನಡ ಸಾಹಿತ್ಯ ಅಕಾಡಮಿ ಪ್ರಸಸ್ತಿಚದುರಂಗ ಪ್ರಸಸ್ತಿಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಬಾಳಾ ಸಾಹೇಬ ಲೋಕಾಪುರರು. ‘ನೀಲಗಂಗಾ’ ಕಾದಂಬರಿಯ ಪರಿಚಾಯಾ ಮೆಲಕು– ನೀಲಗಂಗಾ ಕಾದಂಬರಿಯ ತುಣುಕುಗಳು‘ಉಧೊ! ಉಧೊ!’, ‘ಬಿಸಿಲುಪುರ’ ಮತ್ತು ‘ಹುತ್ತ’ ಕಾದಂಬರಿಗಳ ಮೂಲಕ ಚಿರಪರಿಚಿತರಾಗಿರುವ ಬಾಳಾಸಾಹೇಬ ಲೋಕಾಪುರ ಅವರ ಇನ್ನೊಂದು ಕೃತಿ ‘ನೀಲಗಂಗಾ’. ಉತ್ತರ ಕರ್ನಾಟಕದ ಅಪ್ಪಟ ಗ್ರಾಮ್ಯ ಭಾಷಾ ಶ್ರೀಮಂತಿಕೆಯ ಪ್ರೇಮಗಾಥೆಯಿರುವ ಈ ಕೃತಿ ಹದಿ ಹರೆಯದ ಮನಸ್ಸುಗಳ ಭಾವನೆಯ ಪ್ರವಾಹದ ವೇಗವೂ, ಓದಿನ ಸುಖ ನೀಡುವ ಉನ್ಮಾದ ಲಹರಿಯೂ ಹೌದು… ಮೇಲ್ನೋಟಕ್ಕೆ ತ್ರಿಕೋನ ಪ್ರೇಮದ ಕಥೆಯೆನಿಸಿದರೂ ಕಾದಂಬರಿಯ ಶ್ರೀಮಂತಿಕೆಯಿರುವುದು ಕಥೆಗಿಂತಲೂ ಅದನ್ನು ಬರೆದ ಶೈಲಿಯಲ್ಲಿ. ಆಡು ಭಾಷೆಯ ಸೊಗಸು ಆಡುವುದಕ್ಕಿಂತಲೂ, ಓದುವುದರಲ್ಲಿಯೇ ಹೆಚ್ಚು ಆಪ್ತವೆನಿಸುತ್ತದೆ. ಪಂಚಯ್ಯ, ನೀಲಗಂಗಾ ಮತ್ತು ಸ್ವರೂಪರಾಣಿ ಪಾತ್ರಗಳ ಮೂಲಕ ಸ್ವಗತವಲ್ಲದೇ ಆಯಾಯ ಪಾತ್ರ ಚಿತ್ರಣದ ಮೂಲಕ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.”.. ತುತ್ತು ಕೂಳಿಗೂ ಗತಿಯಿಲ್ಲದ ಬಡ ಹುಡುಗ ಪಂಚಯ್ಯ. ಮನೆಯವರ ಅನಾಧಾರದಲ್ಲಿ ಅನಾಥನಾಗಿ ಆಶ್ರಮ ಸೇರಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ಕವಿ ಹೃದಯದ ಆತ ಪ್ರಬುದ್ದನಾಗಿ ಬೆಳೆದು ಸಾರಸ್ವತ ಲೋಕದ ‘ಮೃತ್ಯುಂಜಯ’ ಆಗಿ ಕಾಲೇಜ್ನಲ್ಲಿ ಪ್ರೊಫೆಸರೂ ಆಗುತ್ತಾನೆ… ನೀಲಗಂಗಾ, ವೇದಮೂರ್ತಿ ‘ಮಲ್ಲಯ್ಯ’ನವರ ಮಗಳು. ಹೆಡೆದವ್ವನ ಪ್ರೀತಿಯಿಂದ ವಂಚಿತಳಾದ ಅವಳಿಗೆ ಹೆತ್ತಬ್ಬೆಯ ಪ್ರೀತಿಯ ಜೊತೆಗೆ ಜವಾಬ್ದಾರಿಯ ತಂದೆಯಾಗಿ ಅವೆರಡು ತಾವೇ ಆಗಿ ಅವಳನ್ನು ಬೆಳೆಸುತ್ತಾರೆ ಮಲ್ಲಯ್ಯ. ಕೊರ್ಯಾಣ ಹಿಡಿದು ಬದುಕುವ ಅವರ ಮನೆ ಬಡತನದ, ಬಟ್ಟಾ ಬಯಲಿನಂತೆ ಬಾಗಿಲುಗಳಿಲ್ಲದ ತೆರೆದ ಜಾಗ. ಹೀಗೆ ಬಡತನದಲ್ಲಿಯೇ ಬೆಳೆಯುತ್ತಾ ಕೃಷ್ಣೆಯಷ್ಟೇ ಮುಗ್ಧಳಾಗಿರುವ ನೀಲಗಂಗಾಳಿಗೆ ಓದಿ, ಪ್ರೊಫೆಸರ್ ಆಗಿರುವ ಪಂಚಯ್ಯನ ಮೇಲೆ ಹೇಳಿಕೊಳ್ಳಲಾರದಷ್ಟು ಪ್ರೀತಿ. ಅವನು ಮಾತನಾಡದಿದ್ದರೆ ಏನೋ ಕಳೆದುಕೊಳ್ಳುವ ತಳಮಳ. ಅಂತೊಂದು ಕಾತುರದ ದಿನ ಕೃಷ್ಣೆಯ ಬಳಿ ಅವನ ಭೇಟಿಯಾದಾಗ ಮಾತನಾಡಿದರೂ, ನಿರ್ಲಕ್ಷಿತನಂತೆ ಮೌನೊದೊಳಗೆ ನುಸುಳಿ ಹೋದ ಪಂಚಯ್ಯ ಮಲ್ಲಯ್ಯನವರು ಇಲ್ಲದ ಸಮಯದಲ್ಲಿ ನೀಲಗಂಗಾಳನ್ನು ಹುಡುಕಿಕೊಂಡು ಬರುತ್ತಾನೆ. ಹದಿಹರೆಯದ ಕನಸುಗಳ ಬೆಚ್ಚನೆಯ ಮುಸುಕೊಳಗೆ ಅರಿಯದೆ ನೀಲಗಂಗಾಳ ಕತ್ತಲ ಬದುಕಿಗೆ ನಾಂದಿ ಹಾಡುತ್ತಾನೆ… ನೀಲಗಂಗಾಳ ಬದಲಾದ ಭಾವಕ್ಕೆ ಕಾರಣ ತಿಳಿದ ಮಲ್ಲಯ್ಯ ‘ಎಲ್ಲಾ ಶಿವನಿಚ್ಛೆ’ಯೆನ್ನುವ ದೈವ ಭಕ್ತ. ಮಗಳಿಗಾದ ಅನ್ಯಾಯವನ್ನು ಸಂಬಂಧ ಪಟ್ಟವರಿಗೆ ತಿಳಿಸಿದರೂ, ಅವರುಗಳ ಅಸಹಾಯಕತೆ, ಗೌಡರ ವಿಳಂಬ ನಿರ್ಧಾರ, ಕೊನೆಗೂ ಕೆಟ್ಟ ಸುದ್ದಿಯಾಗಿಯೇ ಎದುರಾಗುತ್ತದೆ. ಪಂಚಯ್ಯನನ್ನು ಹುಡುಕಿಕೊಂಡು ಬರುವಾಗ ಅವನು ಸ್ವರೂಪರಾಣಿಯೆನ್ನುವ ಅವನ ಅಭಿಮಾನಿಯಾದ ವೈದ್ಯೆಯ ಜೊತೆಗೆ ಮದುವೆಯಾಗಿ ಹನಿಮೂನಿಗೆ ಹೊರಟಿರುವುದು ತಿಳಿಯುತ್ತದೆ. ಇದರಿಂದ ನೊಂದ ಮಲ್ಲಯ್ಯ ಊರಿನವರಿಂದಲೂ ನಿಂದೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿ ನೀಲಗಂಗಾಳನ್ನು ನಿರ್ಗತಿಕಳನ್ನಾಗಿಸುತ್ತಾನೆ… ಮುಂದೆ ಗಂಡು ಕೂಸಿಗೆ ಜನ್ಮವಿತ್ತ ನೀಲಗಂಗಾ ಎಲ್ಲದರಲ್ಲಿಯೂ ನಿರಾಸಕ್ತಳಾಗಿ, ಇನ್ನೊಂದೆಡೆ ತನ್ನ ತಂದೆಯ ಸಾವಿಗೆ ಕಾರಣನಾದೆನಲ್ಲಾವೆನ್ನುವ ದು:ಖ ಅವಳನ್ನು ಅಂತರ್ಮುಖಿಯನ್ನಾಗಿಸುತ್ತದೆ. ಬದುಕಿನಲ್ಲಿ ಸತ್ವವನ್ನೇ ಕಳೆದುಕೊಂಡ ಅವಳು ಅನ್ನಕ್ಕೂ ತಾತ್ವರ ಪಡುತ್ತಾಳೆ. ಕೊನೆಗೆ ತನ್ನ ಮೇಲೆ ಅನುಕಂಪ ತೋರಿದ ನಾಗವ್ವನೇ ಅವಳನ್ನು ನಿಂದಿಸುತ್ತಾಳೆ. ಆದರೆ ಹಸಿದ ಒಡಲಿನ ಜೊತೆಗೆ ಎಳೆ ಕೂಸಿನ ಮಮತೆ ಅವರ ಮುಂದೆ ಕೈಯೊಡ್ಡುತ್ತದೆ. ಅಲ್ಲಿ ನಾಗವ್ವನಿಂದ ಅವಮಾನಿತಳಾದ ಅವಳು ಹೆಣ್ಣು ಮಕ್ಕಳಿಗೆ ಕೊರ್ಯಣದ ಹಕ್ಕು ಇಲ್ಲದಿದ್ದರೂ ತನ್ನ ಗಂಡುಮಗುವಿಗೆ ಆ ಹಕ್ಕಿದೆಯೆಂದು ಹೊರಟಾಗ ನಾಗಮ್ಮ, ‘… ಈ ಜೋಳಿಗೆ ಐತಲ್ಲಾ ಅದು ಭಿಕ್ಷಾ ಬೇಡು ವಸ್ತು ಅಲ್ಲ. ಅದು ಶಿವನ ಸಂಕೇತ… ನಿನಗಾ ಧರ್ಮ ಸೂಕ್ಷ್ಮ ಕಲಿಸಿಕೊಡಬೇಕಾಗಿಲ್ಲ’ ಅನ್ನುವಾಗ ಸತ್ಯದ ಅರಿವಾಗಿ ಹಿಂದಕ್ಕೆ ಬರುತ್ತಾಳೆ ನೀಲಗಂಗಾ… ಕವಿ ಹೃದಯದ ಪಂಚಯ್ಯನನ್ನು ಭೇಟಿಯಾಗಿ ತನ್ನ ತಾಯಿಯ ಮಾತನ್ನೂ ಮೀರಿ ಮದುವೆಯಾದ ಸ್ವರೂಪರಾಣಿ, ಓದುಗರನ್ನು ಭ್ರಾಮಾಲೋಕಕ್ಕೆ ಕರೆದೊಯುವ ಕವಿ, ವಾಸ್ತವದ ಬಗ್ಗೆ ಸ್ಪಷ್ಟವಾಗಿ ಮತ್ತು ನಿಷ್ಟುರವಾಗಿ ತನ್ನ ಮಡದಿಗೆ ಹೇಳುವಾಗ ತಾನು ಭಾವಿಸಿದೆಲ್ಲಾ ಸುಳ್ಳೇ ಅನಿಸುತ್ತದೆ ಅವಳಿಗೆ. ಅವಳನ್ನು ನಿರಾಶೆ ಆವರಿಸಿ, ಅವನ ಮೇಲೆ ಬೇಸರ ಮೂಡಿದರೂ, ಅದು ಪ್ರೀತಿಯ ಉನ್ಮಿಲಿತವೆನಿಸುತ್ತದೆ. ಅವನ ಬಗ್ಗೆ ವ್ಯತಿರೀಕ್ತವಾದ ಭಾವನೆಯೊಂದು ಉದಯಿಸುತ್ತದೆ. ಆದರೂ ಅವಳ ಪ್ರೀತಿಯೇನೂ ಕಡಿಮೆಯಾಗುವುದಿಲ್ಲ… ಒಮ್ಮೆ ಪಂಚಯ್ಯ ತನ್ನ ಮುಖ್ಯ ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೊರಟಾಗ ಆತ ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾನೆ ಅನ್ನುವ ಸಂಶಯ ಸ್ವರೂಪರಾಣಿಗೆ ಮೂಡುತ್ತದೆ. ಅವನು ಬೆಂಗಳೂರಿಗೆ ಹೊರಟ ಮೇಲೆ ತಾನು ಉತ್ತರಭಾರತದ ಪ್ರವಾಸ ಕೈಗೊಂಡು ಅವನಿಗೆ ವಿಸ್ಮಯ ಮೂಡಿಸುವ ಹವಣಿಕೆಯಲ್ಲಿರುತ್ತಾಳೆ… ಆದರೆ ಕಥೆ ತಿರುವು ಪಡೆಯುವುದು ಅಲ್ಲಿಯೆ. ಪಂಚಯ್ಯನ ಊರಿನವನೇ ಆದ ವಿದ್ಯಾರ್ಥಿಯೊಬ್ಬ ನೀಲಗಂಗಾಳಿಗೆ ಪಂಚಯ್ಯನಿಂದ ಆದ ಅನ್ಯಾಯವನ್ನು ಸ್ವರೂಪರಾಣಿಗೆ ತಿಳಿಸುತ್ತಾನೆ. ತಾನು ಕೈ ಹಿಡಿದಾತನ ಬಣ್ಣ ಬದಲಾದಾಗ ಹತಾಶಳಾದರೂ ತನ್ನ ಕಾರಿನಲ್ಲಿಯೇ ಪಂಚಯ್ಯನ ಊರಿಗೆ ಬರುತ್ತಾಳೆ. ನೀಲಗಂಗಾಳಿಗಾದ ಅನ್ಯಾಯವನ್ನು ತಿಳಿದು ಅವಳ ಇಚ್ಛೆಯಂತೆಯೇ ತನ್ನ ಜೊತೆಗೆ ಕರೆದುಕೊಂಡು ಬರುತ್ತಾಳೆ… ಇತ್ತ ಪಂಚಯ್ಯ ಬೆಂಗಳೂರಿನಿಂದ ಮರಳಿದವನು ಸ್ವರೂಪರಾಣಿ ತನ್ನ ಊರಿಗೆ ಹೊರಟಿರುವುದು ತಿಳಿದು ಅವನು ಹುಡುಕಿಕೊಂಡು ಅಲ್ಲಿಗೆ ಬರುವಾಗ ಅವನ ತಾಯಿ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯುತ್ತದೆ. ಆತನ ಅಕ್ಕ ನಾಗವ್ವ ತಮ್ಮನಿಂದ ನೀಲಗಂಗಾಳಿಗಾದ ಮೋಸವನ್ನು ಕೇಳಿ ಸಿಟ್ಟಾಗುತ್ತಾಳೆ. ಆದರೂ ಅವಳಿಗೆ ಆತ ನಿರ್ದೋಶಿಯೆನ್ನುವುದು ಬೇಕು. ಆದರೆ ಪಂಚಯ್ಯ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ನಾಗವ್ವ ನಿಷ್ಠುರವಾಗಿ ಮಾತನಾಡಿ ಒಂದು ಅಮಾಯಕ ಹೆಣ್ಣಿಗಾದ ನೋವನ್ನು ಪ್ರತಿಭಟಿಸುತ್ತಾಳೆ. ಪಂಚಯ್ಯ ಅಲ್ಲಿ ಸ್ವರೂಪರಾಣಿ ಮತ್ತು ನೀಲಗಂಗಾಳನ್ನು ಕಾಣದೆ ಹುಡುಕುತ್ತ ಬರುವಾಗ ಅವನಿಗೆ ಒಮ್ಮೆ ಸ್ವರೂಪರಾಣಿ ಹೇಳಿದ ಮಾತುಗಳು ನೆನಪಾಗಿ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ಅವಳನ್ನು ಭೇಟಿಯಾದರೂ ಸ್ವರೂಪರಾಣಿಯ ದೃಢ ನಿರ್ಧಾರದ ಮುಂದೆ ತಲೆ ತಗ್ಗಿಸುತ್ತಾನೆ. ಆಕೆಯೇ ನೀಲಗಂಗಾಳ ಜೊತೆಗೆ ಊರಿಗೆ ಹೋಗು ಅನ್ನುತ್ತಾಳೆ. ಪಂಚಯ್ಯ ಕ್ಷಮಾಪಣೆ ಕೇಳಿಕೊಂಡು ಮಗುವಿನ ಜೊತೆಗೆ ನೀಲಗಂಗಾಳನ್ನು ಕರೆದುಕೊಂಡು ಊರಿಗೆ ಹಿಂತಿರುಗುತ್ತಾನೆ… ಹೀಗೆ ಕಥೆ ಮುಗಿದರೂ ಆ ಕಥಾಭಾಷೆಯ ಸವಿ ಕೃತಿಯನ್ನು ಮಗದೊಮ್ಮೆ ಓದುವಂತೆ ಪ್ರೇರೇಪಿಸುತ್ತದೆ. ಅದೇ ಲಹರಿ, ಪದಗಳ ಸಿಹಿಯನ್ನು ಅಸ್ವಾದಿಸುವ ಮನಸ್ಸು ತನ್ನಿಂದ ತಾನೆ ಖುಷಿಪಡುತ್ತದೆ… ಹೀಗಿದೆ ಬಾಳಾಸಹೇಬ ಲೋಕಾಪುರರ ಸಾಹಿತ್ಯ ಕೃಷಿ..! ********** ಕೆ.ಶಿವು.ಲಕ್ಕಣ್ಣವರ

ಸ್ವಾತ್ಮಗತ Read Post »

ಅಂಕಣ ಸಂಗಾತಿ, ಆರೋಗ್ಯ

ಆರೋಗ್ಯ ಅರಿವು

ಆಗಾಗ್ಗೆ ಹಿಂತಿರುಗಿ ನೋಡಬೇಕು… ಡಾ ವಿಜಯಲಕ್ಷ್ಮಿ ( ರಮಾ) ಪುರೋಹಿತ “ಆಗಾಗ್ಗೆ ಹಿಂತಿರುಗಿ ನೋಡಬೇಕುಭವಿಷ್ಯದ ಹಾದಿಯಲ್ಲಿ ಸಾಗುತ್ತ. ಆರೋಗ್ಯದ ಸಂರಕ್ಷಣೆ ಪ್ರತಿಯೊಬ್ಬ ಮನುಷ್ಯನ ಮಹದಾಸೆ ಏನಾದರೂ ಸಾಧಿಸಬೇಕೆಂಬ ಉತ್ಕಟ ಬಯಕೆ ಇದ್ದೇ ಇರುತ್ತದೆ.ಅದು ಸಂತೋಷಕರ ಸಂಗತಿಯೇ.ಈ ಕಾಲದಲ್ಲಿಯ ಜೀವನ ಆನಂದಮಯ ಹಾಗೂ ತೃಪ್ತಿಕರವಾಗಿರದೇ ಎಲ್ಲೊ ಕಳೆದುಕೊಂಡಹಾಗೆ,ಏನೊ ಹುಡುಕುತ್ತಿರುವ ಹಾಗೆ ಬಹಳ ಜನರನ್ನು ಕಾಣುತ್ತೇವೆ.ಯಾವದರಲ್ಲಿಯೂ ಸಮಧಾನ ಇಲ್ಲ.ಇನ್ನು ಕೆಲವರಿಗಂತೂ ಭಯವೇ ಜೀವನದಲ್ಲಿ ಆವರಿ ಸಿದೆ.ಚಿಕ್ಕವರಿಗೆ ಶಾಲಾ,ಕಾಲೇಜಿನಲ್ಲಿ ಅಂಕಗಳಿಸುವ ತುಡಿತವಿದ್ದರೆ,ಯುವಕರಿಗೆ ಜೀವನೋಪಾಯದ ಚಿಂತೆ  ವಯಸ್ಕರಿಗೆ ಅನಾರೋಗ್ಯದ ಛಾಯೆ ಅಷ್ಟೇ ಅಲ್ಲದೇ ತಪ್ಪಿಸಲಾಗದ ಮರಣ ಹತ್ತಿರವಾದಂತೆ ಅವರದೇ ಬೇರೆ ದುಗುಡ,ಆತಂಕ.ಹೀಗಾಗಿ ದೊರಕಿರುವ ಆಯುಷ್ಯದಲ್ಲಿ ಮನುಷ್ಯನಿಗೆ ಕ್ರಮಬದ್ಧವಾಗಿ,ಶಿಸ್ತಿನ ಜೀವನ ಶೈಲಿ ಇದ್ದರೆ ಒಳ್ಳೆಯ ಆರೊಗ್ಯ ಲಭಿಸಿ ಅಂದು ಕೊಂಡ ಸಾಧನೆ ಸಾಧ್ಯ. ಶರೀರ ಮಾಧ್ಯಂ ಖಲು ಧರ್ಮ ಸಾಧನಂ !! ಸಾಧನೆ ಮಾಡಬೇಕಿದ್ದರೆ ಆರೋಗ್ಯಕರ ಶರೀರದ ಅತ್ಯವ ಶ್ಯಕತೆ ಇರುತ್ತದೆ.ಒಟ್ಟಿನಲ್ಲಿ ರೋಗ ರಹಿತವಾಗಿರುವದೆಂದ ರೆ,ಮಾನಸಿಕ ಹಾಗೂ ದೈಹಿಕಸ್ವಾಸ್ಥ್ಯಕಾಪಾಡಿಕೊಳ್ಳುವು ದು.ಹಾಗಾದರೆ ಅನಾರೋಗ್ಯ ಇರದೇ ಆರೋಗ್ಯ ಭಾಗ್ಯ ದೊರಕುವ ಬಗೆಯನ್ನು ತಿಳಿಯಲು ಪ್ರಯತ್ನ ಮಾಡೋಣ ಔಷಧಿಗಳ ಬಳಕೆ ತೀರಾ ಅವಶ್ಯಕವಾದಾಗ ಮಾಡಬೇಕು. ಅದನ್ನು ಉಪೇಕ್ಷಿಸುವಂತಿಲ್ಲ. ಆದರೆ ಯಾವ ಔಷಧಗಳು ಅಡ್ಡಪರಿಣಾಮ ಬೀರುವದಿಲ್ಲವೋ ಅವು ಹೆಚ್ಚು ಸೂಕ್ತ. “ಧರ್ಮಾರ್ಥಕಾಮ ಮೋಕ್ಷಾಣಾಮಾರೋಗ್ಯಂಮೂಲ ಮುತ್ತಮಂ! ರೋಗಾಸ್ತಸ್ಯಾಪಹರ್ತಾರ: ಶ್ರೆಯಸೋ   ಜೀವಿತ ಸ್ಯಚ!!”. ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿವಪ್ರತಿ ಮನುಷ್ಯನ ಮೂಲ ಉದ್ದೇಶ ಧರ್ಮ,ಅರ್ಥ,ಕಾಮ ಮತ್ತು ಮೋಕ್ಷವ ನ್ನುಪಡೆಯುವದು.ಈ ನಾಲ್ಕು ಮನುಷ್ಯನ ವಶವಾಗಬೇ ಕಾದರೆ ಎಲ್ಲಕ್ಕಿಂತ ಅತಿ ಮುಖ್ಯವಾಗಿ ಬೇಕಾಗಿರುವದು ಒಳ್ಳೆಯ ಆರೋಗ್ಯ.ಅನಾರೋಗ್ಯ ವ್ಯಕ್ತಿಗೆ ಧರ್ಮಕರ್ಮ ಗಳಾಗಲೀ ಸಾಧಿಸುವದಿಲ್ಲ ಹಾಗೂ ಅರ್ಥವ್ಯವಸ್ಥೆಯೂ ದೊರಕುವದಿಲ್ಲ.ಜೀವನದ ಸುಖ ಸಂತೋಷಗಳಿಂದ ಅವನು ದೂರವೇ ಉಳಿಯಬೇಕಾಗುತ್ತದೆ.ಮೋಕ್ಷವಂತು ದೂರವೇ ಉಳಿಯಿತು.ಜೀವನದಲ್ಲಿ ಆರೋಗ್ಯ ಒಂದು ಕಡೆಯಾದರೆ ಉಳಿದೆಲ್ಲಸುಖ,ಸಂಪತ್ತು,ಧನ,ಕೀರ್ತಿ,ಬಲು ದ್ದಿ ಮಟ್ಟ,ಜನಮನ್ನಣೆ ಇತ್ಯಾದಿಗಳೆಲ್ಲವೂ ಇನ್ನೊಂದು ಕಡೆ ತೂಗುತ್ತವೆ.”ಆರೋಗ್ಯವಂತ ಬಡವನ ಬಾಳು  ಸಿರಿವಂತ ರೋಗಿಯ ಅಳು” ಇವೆರಡರಲ್ಲಿ ಆರೋಗ್ವಂತನ ಬಾಳೇ ಶ್ರೇಷ್ಠ.ಅನಾದಿ ಕಾಲದಿಂದಲೂ ಭಾರತೀಯರಿಗೆ ಆರೋಗ್ಯ ದ ಕಾಳಜಿ,ಅರಿವು,ಪಾಲಿಸುವ ಸದಭಿರುಚಿ ಇದ್ದೇ ಇತ್ತು. ಅವೆಲ್ಲ ಜೀವನದ ಅವಿಭಾಜ್ಯ ಅಂಗಗಳಾಗಿಯೂ ಇತ್ತು. ಅದಕ್ಕಾಗಿಯೇ,”ಸ್ವಾಸ್ಥಸ್ಯಸ್ವಾಸ್ಥ್ಯರಕ್ಷಣಂ!ಆತುರಸ್ಯವಿಕಾರಪ್ರಶಮನ!!ಎಂದುಹೇಳಿದ್ದಾರೆ.ಅಂದರೆ:: ಆರೋಗ್ಯವಂತನ ಆರೋಗ್ಯ ನನ್ನು ಕಾಪಾಡಿ ಕೊಂಡು ಹೋಗುವದು ಹಾಗೂ ರೋಗ ಬಂದಾಗ ಅದನ್ನು ಶಮನಗೊಳಿಸುವದು ಎಂದರ್ಥ‌. ಆದರೆ ಇಂದಿನ ದಿನಗಳಲ್ಲಿ ಎಲ್ಲರ ಮನೋಭಿಲಾಷೆಗಳು ಶೀಘ್ರಹಣ ಮಾಡುವದು, ಹೆಚ್ಚು ಹಣ ಮಾಡುವದು ಇತ್ಯಾದಿ ಕ್ಷುಲ್ಲಕ ಆಮಿಷಗಳಿಗೆ ಬಿದ್ದು ಆರೋಗ್ಯದ ಪರಿವೆ ಇಲ್ಲದೆ ನಿತ್ಯ ನರಕ ಅನುಭವಿಸುತ್ತಾರೆ.ಅಷ್ಟೇ ಅಲ್ಲದೆ ಬೇ ಗ ಗುಣವಾಗಬೇಕು,ಯಾರಿಗೂ ರಜೆ ಇಲ್ಲ,ಮತ್ತೆ ಮಾರನೆ ದಿನ ಎಂದಿನಂತೆ ಕೆಲಸಗಳಿಗೆ ಹಾಜರಾಗಬೇಕೆಂಬ ಅನಿ ವಾರ್ಯತೆಯೂ ಇರುವದರಿಂದ ತಮ್ಮ ದೇಹದ ಮಾತನ್ನ ಆಲಿಸುವ ಸಹನೆ,ವೇಳೆ ಯಾರಲ್ಲಿಯೂ ಇಲ್ಲ.ಆತುರದ ಮನಸ್ಸಿನಲ್ಲಿ ಯಾವ ಔಷಧಿ ಸೂಕ್ತ ಅಂತ ಯೋಚಿಸದೇ, ಆದರ ಅಡ್ಡಪರಿಣಾಮಗಳನ್ನು ತಿಳಿಯದೇ ಸಧ್ಯಕ್ಕೆ ಆರಾ ಮ ಆದರೆ ಆಯಿತು ಅನ್ನುವ ಮನೋಭಾವದಲ್ಲಿ ನಾವೆಲ್ಲ ಇದ್ದೆವೆ. ಈಗಂತೂ ಔಷಧಿಗಳ ಜಾಹಿರಾತುಗಳು ಸಹಜನ ರನ್ನು ತಪ್ಪು ದಾರಿಗೆಳೆಯುತ್ತವೆ. ರೋಗ ಬಂದಾಗ ಔಷಧೋಪಚಾರ ಇರಲಿ ಆದರೆ ರೋಗ ಬಾರದಂತೆ ನಮ್ಮ ಹಿಂದಿನವರು ನಡೆದುಕೊಂಡು ಬಂದ ದಾರಿ ಅವರ ತಿಳುವಳಿಕೆ,ಜಾಣ್ಮೆ,ಮೈಬಗ್ಬಿಸಿ ದುಡಿಯುವ ದು,ಹಿತ,ಮಿತ ಮಾತು,ಆಹಾರ ಸೇವನೆ,ನಿದ್ದೆ,ಕಾಯಿಲೆಗೆ ತುತ್ತಾಗದಂತೆ ಅವರು ತೆಗೆಳ್ಳುತಿದ್ದ ಮುಂಜಾಗ್ರತೆ ಎಲ್ಲವ ನ್ನೂ ಅವಲೋಕಿಸಿದಾಗ ನಾವು ಸುಶಿಕ್ಷಿತರು ಎನ್ನಿಸಿಕೊಳ್ಳು ವವರು ಖಂಡಿತ ನಮ್ಮನ್ನು ನಾವೇ ಅರಿಯಬೇಕಾಗಿದೆ. ಕೆಲವರಂತೂ ಆಹಾರಕ್ಕಿಂತ ಔಷಧಿಯ ಮೇಲೆಯೇ ಅವ ಲಂಬಿತರಾಗಿದ್ದು ಅವರ ಹಣಕಾಸಿನ ಖರ್ಚು,ಔಷಧಿಯ ಬೇಡದ ಪರಿಣಾಮಗಳು ಇತ್ಯಾದಿಯಿಂದ ಮನುಷ್ಯ ಖಿನ್ನ ತೆಯನ್ನು ಹೊಂದುತ್ತಾನೆ. ಭಗವಾನ ಧನ್ವಂತರಿ ಆಯುವೇ ೯ದ ಶಾಸ್ತ್ರದಲ್ಲಿ ಹೇಳಿದಂತೆ “ಸಮದೋಷ:ಸಮಾಗ್ನಿಷ್ಚಸಮಧಾತುಮಲಕ್ರಿಯಾ: ! ಪ್ರಸನ್ನಾತ್ಮೇಂದ್ರಿಯಮನ: ಸ್ವಸ್ಥಇತ್ಯಭಿದಿಯತೆ!! ಅರ್ಥ:: ಯಾವ ಮನುಷ್ಯನ ದೋಷ (ವಾತ, ಪಿತ್ತ,ಹಾಗೂ ಕಫ ೩ ದೋಷಗಳು) ಸಮಸ್ಥಿತಿಯಲ್ಲಿದ್ದು,ಅಂದರೆ ಹೆಚ್ಚು ಕಡಿಮೆ ಆಗದೇ,ಯಾರ ಅಗ್ನಿ (ಜೀರ್ಣಶಕ್ಕ್ತಿ),(digestive         fire) ಶರೀರದ ಧಾತುಗಳು (bodytissues) ಅಂದರೆ ರಸ ( lymphatic fluid) ,ರಕ್ತ( blood),ಮಾಂಸ (mu scle),ಮೇದ(lipids),ಅಸ್ಥಿ(bone),ಮಜ್ಜಾ(bonema rrow) ಹಾಗೂ ಶುಕ್ರ(sperm/ovum) ಎಲ್ಲವೂ,ಅಷ್ಟೇ ಅಲ್ಲದೇ ಮಲನಿರ್ಹರಣ ಅಂಗಗಳೂ ಕೂಡ ಸರಿಯಾಗಿ ಕಾರ್ಯನಿರ್ವಹಿಸಿದರೆ ಮತ್ತುಆತ್ಮ,ಇಂದ್ರಿಯಗಳನ್ನೂ ಹಾಗೂ ಮನಸ್ಸು ಪ್ರಸನ್ನವಾಗಿಟ್ಟು ಕೊಂಡ ವ್ಯಕ್ತಿ ಮಾತ್ರ ನಿರೋಗಿ,ಆರೋಗ್ಯವಂತ ಸ್ವಸ್ಥ ಅನಿಸಿಕೊಳ್ಳಲು ಸಾಧ್ಯ. ಆಗ ಮಾತ್ರ ಅವನ ಅವಳ ಸಾಧನೆ ಪೂರ್ಣಗೊಳ್ಳುವದರ ಲ್ಲಿ ಸಫಲತೆಯನ್ನು ಕಾಣುತ್ತಾನೆ. ಒಂದು ನೆನಪಿರಲಿ  ಆರೋಗ್ಯ ಎಂದರೆ ಬರೀದೇಹ ಸಾಸ್ಥ್ಯವಷ್ಟೇ ಅಲ್ಲ,ಮನ ಸ್ಸಿನ ಆರೋಗ್ಯವೂ ಅಷ್ಟೇ ಪ್ರಾಮುಖ್ಯ ತೆಯನ್ನು ಪಡೆದಿದೆ.”ಇಂದಿನ ನಮ್ಮ ಆಹಾರ ವಿಹಾರ ನಾಳೆಯ ಗುಣಮಟ್ಟದಬದುಕು.” ************

ಆರೋಗ್ಯ ಅರಿವು Read Post »

ಕಾವ್ಯಯಾನ

ಕಾವ್ಯಯಾನ

ಶರಧಿಗೆ ದೀಪ್ತಿ ಭದ್ರಾವತಿ ಶರಧಿಗೆ.. ನಿನ್ನ ತೀರದಲಿ ಹೆಜ್ಜೆ ಊರಿ ಕೂತಿದ್ದೇನೆಅಳಿಸದಿರುಬಲ್ಲೆ ನಾನುನಿನ್ನ ಉನ್ಮತ್ತ ಅಗಾಧ ಕರುಣೆಯಅಂತರಾಳವನ್ನುನೂರೆಂಟು ನದಿಗಳ ಲೀನದಲ್ಲಿಯುಸಾಧಿಸುವ ನಿಶ್ಚಲತೆಯನ್ನುಮೌನದ ಕಡು ಮೋಹಿಯೇಜಗದ ನೋವುಗಳ ಹೆಕ್ಕಿ ನೀನು ಮೊರೆವಾಗಲೆಲ್ಲ’ಇಟ್ಟ ಅದೆಷ್ಟೋ ಗುರುತುಗಳುಆವಿಯಾಗುತ್ತವೆಹುಟ್ಟಿದ ಮೋಹಗಳುಕಬಂಧ ಬಾಹುಗಳಲಿಇಲ್ಲವಾಗುತ್ತವೆಆದರೂ,ನಿನ್ನೆದೆಯ ರೇವೆಯಲಿ ಹೆಸರು ಗೀಚುವಹುಚ್ಚು ಹಂಬಲಕೆ ಬಿದ್ದಿದ್ದೇನೆಅಲೆದು ದಣಿದ ಕಾವುಗಳಲಿತೇವ ಹೀರಿಕೊಳ್ಳಲು ಕಾಯುತ್ತಿದ್ದೇನೆ..ಇಲ್ಲವೆನ್ನಬೇಡಕಟ್ಟಿದ ಒದ್ದೆ ನೆನೆಹಿಕೆಗಳ ಹಾಗೆಯೇ ಇರಿಸುಉಕ್ಕಿ ಬಾ ಒಮ್ಮೆ ತೋಳ ಚಾಚಿಆಲಂಗಿಸುನಿನ್ನಂತೆಯೇ ನನ್ನ ಉಳಿಸು *******

ಕಾವ್ಯಯಾನ Read Post »

You cannot copy content of this page

Scroll to Top