ಗಝಲ್
ಜಯಶ್ರೀ.ಜೆ. ಅಬ್ಬಿಗೇರಿ ಬೀಳುಗಳಲ್ಲೇ ಬೀಳುವುದಕ್ಕಿಂತ ಬೀಳುಗಳಿಂದ ಮೇಲೇಳುವುದು ಮೇಲುಆಸೆ ಹೊತ್ತ ಮನಗಳಿಗೆ ದಾರಿ ತಪ್ಪಿಸುವುದಕ್ಕಿಂತ ದಾರಿಯಾಗುವುದು ಮೇಲು ನೆರೆಮನೆಯ ಗೋಡೆಗಳಿಗೆ ಕಿವಿಯಾಗುವುದಕ್ಕಿಂತ ಮನಗಳಿಗೆ ಕಿವಿಯಾಗುವುದು ಮೇಲುಇತರರ ನೋಡಿ ನಗುವುದಕ್ಕಿಂತ ಇತರರ ಕೂಡಿ ನಗುವುದು ಮೇಲು ಗಾಳಿಗೆ ಮಾತೆಸೆದು ಇರಿಯುವುದಕ್ಕಿಂತ ಮಸಿಯಾಗಿಸದೇ ಹಸಿರಾಗಿಸುವುದು ಮೇಲುಅಳೆದಳೆದು ಆಳುವುದಕ್ಕಿಂತ ಆಳಾಗಿ ಅರಸನಾಗುವುದು ಮೇಲು ನಿನ್ನ ಕೊಲುವೆ ಗೆಲುವೆ ಎನ್ನುವದಕ್ಕಿಂತ ಒಲವೇ ಗೆಲುವೆಂಬುದು ಮೇಲುತುಳಿದು ಬೆಳೆಯುವುದಕ್ಕಿಂತ ಬೆಳೆಯುತ್ತ ಬೆಳೆಸುವುದು ಮೇಲು ಅತ್ತು ಸತ್ತು ಬೇಸತ್ತು ಬದುಕುವುದಕ್ಕಿಂತ ಸತ್ತ ಮೇಲೂ ಬದುಕುವುದು ಮೇಲುಮಣ್ಣಲ್ಲಿ ಮಣ್ಣಾದ ಮೇಲೂ ಜನರ ಹಲ್ಲಿನಲ್ಲಿರುವುದಕ್ಕಿಂತ ನಾಲಿಗೆಯಲ್ಲಿರುವುದು ಮೇಲು **************








