ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗತ್ತಿನ ಭಾಷೆ ಗೊತ್ತಿಲ್ಲ

Rain on the road

ಮಧುಸೂದನ ಮದ್ದೂರು

ಅಳುವ ಮುಗಿಲಿನಿಂದ
ಕಣ್ಣೀರ ಕಡವ ಪಡೆದು
ಭೋರ್ಗೆರೆವ ಕಡಲ ಮೇಲೆ
ಯಾತನೆಯ ಯಾನ ಬಯಸಿದ್ದೇನೆ..
ನಿನ್ನ ನೆನಪು ಮಾಸಿ
ಸೋಲುಗಳು ಗೆಲುವುಗಳಾಗಲೆಂಬ
ಬಯಕೆಯಿಂದಲೂ
ಭ್ರಮೆಯಿಂದಲೂ….

ನಗೆಯ ಕೋಟೆಗೆ ಲಗ್ಗೆಯಿಟ್ಟು
ಅಳುವ ಆಳೋ ಸಂತಸದ ತೇರನ್ನೇರಿ
ಮೈ ಮರೆತ್ತಿದ್ದೇನೆ..
ನಿನ್ನ ಒನಪು ಕಾಡದಿರಲೆಂಬ
ಜಂಭದಿಂದಲೂ
ಆತಂಕದಿಂದಲೂ…

ಬಯಕೆ ಭ್ರಾಂತಿಯಾಗುವುದೋ
ಜಂಭ ಕರಗಿ ನಿನ್ನೆದೆಗೆ ಒರಗುವನೋ
ಗೊತ್ತಾಗುತ್ತಿಲ್ಲ..
ಕಾರಣ ಹೃದಯಕೆ ಗತ್ತಿನ ಭಾಷೆ
ಗೊತ್ತಿಲ್ಲವಲ್ಲ..

**********

About The Author

2 thoughts on “ಕಾವ್ಯಯಾನ”

  1. ತುಂಬಾ ಸುಂದರವಾದ ಕವಿತೆ ಮನಮುಟ್ಟಿದೆ ಧನ್ಯವಾದಗಳು ಸರ್

Leave a Reply

You cannot copy content of this page

Scroll to Top