ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನ ಸಖ

ಮಧು ವಸ್ತ್ರದ್

ನೀಲಾಗಸದಿ ಹೊಳೆವ ತಾರೆಯ ಕಂಡನು ಸಖ..
ಸಖನ ಮತ್ತೇರಿಸುವ ಕಂಗಳಲಿ ನನದೇ ನಗು ಮುಖ..
ನಗುಮುಖದ‌ ಪ್ರೀತಿಯರಿತು ಕೈ ಹಿಡಿದು ನೀಡಿದ ಸ್ನೇಹಸುಖ..
ಸ್ನೇಹಸುಖದ ಎರಕ ಜೀವನದಲಿ ದೂರಾಗಿಸಿದೆ ದುಃಖ..

ದುಃಖ ದುಗುಡವ ಬೇರು ಸಹಿತ ಕಿತ್ತೆಸೆದಿದೆ ನಿನ್ನೊಲವು..
ನಿನ್ನೊಲವ ಮಹಲಿನೊಳಕರೆದು ಬರಸೆಳೆದು ನೀಡಿದೆ ನೀ ನಲಿವು..
ನಲಿವುನೋವಿನಬಾಳಪಯಣದಿ
ನಮ್ಮದಾಯ್ತು ಗೆಲುವು..
ಗೆಲುವ ಮಾಲೆಯ‌ಪ್ರೇಮಪುಷ್ಪ
ಗಳಿಗೆ ಅದೆಂಥಾ ಚೆಲುವು..

ಚೆಲುವಾದ ಕಂಗಳಲಿ ಅರಸುತ ನಿನ್ನರಸಿಯ..
ನಿನ್ನರಸಿಯ ಮನದ ಹಿರಿಯ ಧ್ಯೇಯವ ಹರಸುವೆಯ..
ಹರಸುತವಳ ಕಾರ್ಯದಕ್ಷತೆಯ ಎಲ್ಲಡೆ ಮೆರೆಸುವೆಯ..
ಮೆರೆಯುತಿರಲಿ ನಮ್ಮ ಉನ್ನತ ಧ್ಯೇಯವೆಂದೂ ನೀಲಾಗಸದಲಿ

***********

About The Author

Leave a Reply

You cannot copy content of this page

Scroll to Top