ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾರ್ಮಿಕ-ಶ್ರಮಿಕ

ಪ್ರೊ.ಕವಿತಾ ಸಾರಂಗಮಠ

ಕಾರ್ಮಿಕ-ಶ್ರಮಿಕ

Varanasi's Brick Kiln Workers - UnFrame

ದೇವನಿತ್ತ ಭೂಮಿಯಲ್ಲಿ ಶ್ರಮಿಕ
ಪ್ರಾಮಾಣಿಕತೆಯ ಧನಿಕ
ಸಮಯದ ಪರಿಪಾಲಕ
ನಿತ್ಯ ದುಡಿದು ತಿನ್ನುವ ಕಾಯಕ!

ಕರ್ಮದಿಂದ ಜಗವೆಲ್ಲ ಸುಗಮ
ಕರ್ಮದಿಂದಲೇ ಸಂತಸದ ಉಗಮ
ಹರಿಸುತ ನಿತ್ಯ ಬೆವರ ಸುಮ
ಜಗವೆಲ್ಲ ಹರಡುವ ಶ್ರಮದ ಕುಸುಮ!

ಶ್ರಮದೊಂದಿಗೆ ದಿನಚರಿ ಆರಂಭ
ಅವಿರತ ದುಡಿದ ಬೆವರಲವನ ಬಿಂಬ
ಸಹಿಸುವ ಧನಿಕರ ದಬ್ಬಾಳಿಕೆ ಆದರೂ ಇವನ ಕೆಲಸಕಿಲ್ಲ ಹೋಲಿಕೆ!

ಕಟ್ಟುವ ನಿತ್ಯ ಕಾಯಕದ ಕಟ್ಟೆ ಕೈಯಲ್ಲಿ ಹಿಡಿದು ಉಣ್ಣುವ ಕರ್ಮದ ತಟ್ಟೆ
ತೊಟ್ಟರೂ ಚಿಂದಿ ಬಟ್ಟೆ
ಎಂದು ಬಿಡದವ ಕಾಯಕ ನಿಷ್ಠೆ!

ವೃತ್ತಿ ಭೇದಗಳಿಲ್ಲ
ನಾ ಮೇಲೆಂಬ ಭಾವವಿಲ್ಲ
ಪ್ರಾಮಾಣಿಕತೆಯೆ ಇವನಿಗೆಲ್ಲ
ದುಡಿದು ತಿಂದು ಬದುಕಾಗಿಸಿಕೊಂಡಿರುವ ಬೆಲ್ಲ!

*******

About The Author

Leave a Reply

You cannot copy content of this page

Scroll to Top