ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನ್ನಡ ಮೂಲ: ರಾಜು ಹೆಗಡೆ

ಇಂಗ್ಲೀಷಿಗೆ: ನಾಗರೇಖಾ ಗಾಂವಕರ್

Emptiness” artist : Albert György... - SiMBA, Simpson's Memory Box ...

ಹುಟ್ಟು

ಹುಟ್ಟು

ದೇವರಾಣೆ! ನನಗೆ ಗೊತ್ತಿರಲಿಲ್ಲ.
ನಾನು ಹುಟ್ಟುತ್ತೇನೆಂದು
ಹುಟ್ಟಿ ಇಷ್ಟು ವರ್ಷವಾದರೂ
ಹುಟ್ಟಲಾಗಲೇ ಇಲ್ಲ.

ಖಾಲಿ ಆಕಾಶದ ಕೆಳಗೆ
ಬಟಾಬಯಲ ಒಳಗೆ
ಬೋಳು ಮರದಡಿಯಲ್ಲಿ
ಕೂರುತ್ತಿರಲಿಲ್ಲ ಹೀಗೆ
ನಾನು ಹುಟ್ಟಿದ್ದರೆ

ನಿರುದ್ಯೋಗ
ಕಲಿಯದಿದ್ದರೆ
ಇರುತ್ತಿರಲಿಲ್ಲ ಹೀಗೆ
ನಾ ಹುಟ್ಟಿದ್ದರೆ

ಕ್ಷಮಿಸಿ, ನನ್ನ ಕೈಲಿನ್ನೂ
ಹುಟ್ಟಲಾಗಲೇ ಇಲ್ಲ..
-**********

Birth
——-

Swear God!
I didn’t know
that I would be born.
After the birth
Years passed many more,
but I couldn’t be born.

Below the empty sky
within the open plain
under a leafless tree
I wouldn’t sit
If i was born

Unemployment,,,

if I didn’t learn
I wouldn’t be like this
If I was born.

Forgive me, for
not born yet.

********

About The Author

2 thoughts on “ಅನುವಾದ ಸಂಗಾತಿ”

  1. ನಾಗರಾಜ್ ಹರಪನಹಳ್ಳಿ

    ತಾತ್ವಿಕ ಪ್ರಶ್ನೆಯನ್ನು ಕವಿತೆ ಓದುಗನ ಮುಂದಿಡುತ್ತಾನೆ ಕವಿ.ಸ್ವಗತದಂತಿರುವ ಈ ಕವಿತೆ ನಿಜವಾದ ಹುಟ್ಟಿನ ಬಗ್ಗೆ ಪ್ರಶ್ನೆ ಎತ್ತುತ್ತದೆ. ಸಾರ್ಥಕ ಹುಟ್ಟಿನ ಕಡೆಗೆ ಕೈ ತೋರಿಸುತ್ತದೆ. ನಮಗಾಗಿ ಬದುಕುವುದು ಬದುಕಲ್ಲ( ಹುಟ್ಟಲ್ಲ) ; ಇತರಿಗಾಗಿ ,ಸಮಾಜಕ್ಕಾಗಿ ಬದುಕುವುದು ನಿಜವಾದ ಹುಟ್ಟು ಎಂತಲೂ, ಸಾರ್ಥಕ ಬದುಕಿನ ಸ್ವರೂಪದತ್ತಲೂ ಕಿರು ಬೆರಳ ತೋರಿಸಿ ಹಠಾತ್ ಮುಗಿದು ಬಿಡುತ್ತದೆ. ರಾಜು ಹೆಗಡೆ ಕವಿತೆಗಳ ಶೈಲಿಯೇ ಹಾಗೆ….
    ಇನ್ನು ಅನುವಾದ ಸಹ ಚೆಂದ…ನಾಗರೇಖಾ ನಮ್ಮ ನಡುವಿನ ಪ್ರತಿಭೆ….

Leave a Reply

You cannot copy content of this page

Scroll to Top