ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಾಮರಸ್ಯ

Religions symbols around the Earth Globe, 3D rendering isolated on white background - Royalty-free Religion Stock Photo

ನೆನಪಾಗುತ್ತಾರೆ ಈದ್ ದಿನ ಬಾನು,ಅಹ್ಮದರು
ಯುಗಾದಿ ದೀಪಾವಳಿಗೆ
ಶುಭ ಕೋರುವ ಇವರು
ಅಳುವಲ್ಲಿ ನಗುವಲ್ಲಿ
ಒಂದಾಗುವ ನಾವು
ಕಾಣುವ ಕನಸುಗಳಿಗೆ
ಬಿಳಿಹಸಿರುಕೇಸರಿ
ಎಂಬ ಭೇದವಿಲ್ಲ
ಅಂತರಂಗದ ಮಿಡಿತ ನಮ್ಮದು
ವೇಷ-ಭೂಷ, ಆಚಾರ-ವಿಚಾರಗಳಿಲ್ಲದ
ನಮ್ಮ ಸ್ನೇಹ ತೊಟ್ಟಿದೆ
ಸಾಮರಸ್ಯದ ಅಂಗಿಯನ್ನು
ಇಣುಕಲಾರವು
ಜಾತಿ ಮತ ಧರ್ಮಗಳು
ಹೆಡೆಮುರಿ ಕಟ್ಟಿಕೊಂಡು
ಬಿದ್ದಿರುತ್ತವೆ ಅವು.

*****

ಗೌರಿ.ಚಂದ್ರಕೇಸರಿ

About The Author

1 thought on “ಕಾವ್ಯಯಾನ”

  1. ಜಾತಿ ಮತ ಧರ್ಮಗಳು ಹೆಡೆಮುರಿ ಕಟ್ಟಿಕೊಂಡು ಬಿದ್ದಿರಲಿ
    ಸದಾಶಯದ ಕವನ

Leave a Reply

You cannot copy content of this page

Scroll to Top