ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಚ್ಚಿಟ್ಟ ನೆನಪುಗಳು

Photo Of Pink Petaled Flowers

ವೀಣಾ ರಮೇಶ್

ನೀ ಬರುವೆಯೆಂದು
ಕಾಯುತ್ತಿದ್ದೆ…….
ಒಡಲಸೆರಗಲಿ ಅದುಮಿಟ್ಟ
ಬಯಕೆಗಳು
ತಬ್ಬಲಿಯಾದ ನಿನ್ನ ಕನಸುಗಳ ಜೊತೆ ನನ್ನ ಕನಸುಗಳು
ಕಾಡುವುದು ಬಸಿರಾಗದ
ಆಸೆಯ ಕುಡಿಗಳು,
,ಹಸಿಯಾಗಿ,

ಹುಲ್ಲುಜಾಡಿನಲಿ ಕಳೆಗೂಡಾದ
ಬದುಕು ಹೊಸಕಿ..
ನೀ ಬರುವೆಯೆಂದು
ಕಾಯುತ್ತಿದ್ದೆ ……

ಹಾಕಿದ ಏಳು ಹೆಜ್ಜೆಗಳು
ಬಿಸಿಯ ಕೆಂಡದ ಮೇಲಿನ
ಅವಳ ತಪ್ಪಿನ ನಡೆಗಳು
ಹೊಸಿಲ ಮೇಲೆ ಜಾಡಿಸಿ
ಒದ್ದ ಸೇರಿನ ಜೊತೆ
ಕನಸುಗಳ ಒದ್ದೋಡಿಸಿದೆ
ಸರಕಾಗಿದೆ ನಿನ್ನ ಮೌಲ್ಯಗಳು,
ಬಿಕರಿಯಾಗುತ್ತಿದೆ ಕನಸುಗಳು,….

ಬೆತ್ತ ಲಾಗಬೇಡ
ಬತ್ತಿದ ಕನಸುಗಳಿಗೆ,
ಮನಸು ಹರಿದ ಪುಟಗಳ
ಮತ್ತೆ ಸೇರಿಸಿ
ಸಂಬಂಧಗಳ ದಾರದಿಂದ
ಬಿಗಿದು,ನಿನ್ನ ಕನಸುಗಳ
ಬಸಿರಿಗೆ ಮೆಲುವಂಗಿ
ಹೊದಿಸು ,ನೀ ಕಟ್ಟುವ
ಕನಸಿಗೆ ಪ್ರೀತಿಯ ದೇಣಿಗೆ
ನಾ ನೀಡುವೆ,

ಮಾತು ಮೌನದಲ್ಲೆ ಅಡಗಿಸಿ
ಪದಗಳು ಸ್ಪರ್ಶ ವಿಲ್ಲದೆ
ಎದೆಯಲಿ
ಬಚ್ಚಿಟ್ಟು ನೆನಪುಗಳು ನೀ ಇಲ್ಲದೆ ಒದ್ದಾಡಿವೆ…..

ಅಲ್ಲೊಂದು ಇಲ್ಲೊಂದು
ಕರಗಿಬಿದ್ದ ನೀರಹನಿಯೊಂದು
ಚಿಗುರೊಡೆದ ಹಸಿರೊಂದು ಬಸಿರಾಗುವ
ಕನಸಿಗೆ,
ನೀಳಗೆನ್ನೆಯ ಮೇಲೆ
ತುಸು ಹರಿದು ಎದೆಯ
ತಂಪಾಗಿಸಿದ ಕಣ್ಣೀರ ಹನಿ
ತಂದು,
ಹೊಸ ಮನ್ವಂತರದ
ಪರ್ವದಲ್ಲೊಂದು
ಬದಲಾಯಿಸಿದ ಬದುಕಿನ ಗತಿ
ಹಚ್ಚಿದ ಕನಸಿನ ಹಣತೆಗೆ
ಬಾಳ ಸಮತೆಯಲಿ
ಉರಿವ ದೀಪವಾಗಿ,
ನಿನ್ನೊಡಲ ಕಾಂತಿಗೆ ಬೆಳಕಾಗುವೆ

ನಾ ಕಾಯುತ್ತಿರುವೆ.
ನೀ …ಬಂದೆ ಬರುವೆಯೆಂದು…..

********

About The Author

Leave a Reply

You cannot copy content of this page

Scroll to Top