ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ವಿರಹಿ ದಂಡೆ ಬಾನಿಗೂ ಭೂವಿಗೂ ಸಾಕ್ಷಿಯಾಗಲಿ ಕಡಲಂಚಿನಾ ವಿರಹಿ ದಂಡೆ….  ಯುಗಯುಗಗಳು ಜಾರಿದರೂಪ್ರೀತಿಯಭಾಷೆಯೆಂದಿಗೂ ಬದಲಾಗದಿರುವುದು‌ ಸರ್ವಕಾಲಿಕ ಸತ್ಯ. ಹಠಾತ್ ಸುರಿದ ಮಳೆಗೆ ದಂಡೆ ನಾಚಿದೆಎಂಬ ಕವಿ ನುಡಿಯಂತೆ                                            ಕಣ್ಣಂಚಿನಕುಡಿನೋಟಅರಿಯುವುದುಎದೆಯುಸಿರಬಡಿತಗಳು…..ಕಂಗಳಿಗೂ ಭಾರವಾದ ಮನ ಹೃದಯದಲ್ಲಿ ಮಿಡಿಯುವುದು..ಎಂಬಂತೆ.. ಬಹುತೇಕ ಮನಸುಗಳು ಮೀನಿನಂತೆ..! ಕಡಲಾಚೆ ದಂಡೆಯಲಿ ವಿಲವಿಲ ಒದ್ದಾಡಿ,ವಿರಹದಲಿ ಬೆಂದಂತೆ..!.. ಆತ್ಮೀಯ ಸಹೃದಯಿ ,ಇದ್ದುದನ್ನು ಇದ್ದ ಹಾಗೆ ವರದಿ ನೀಡಿ ಮನವನ್ನು ಹಗುರಮಾಡಿಕೊಳ್ಳುವ,ಅನ್ಯಾಯದ ವಿರುದ್ಧ ಒಂಟಿಯಾಗಿಯಾದರೂ ಹೋರಾಟಮಾಡುವ,ಮೃದುಸ್ವಭಾವದಮನೋಭಾವಹೊಂದಿರುವಕವಿಮಿತ್ರ,ಪತ್ರಕರ್ತ   ಶ್ರೀ ನಾಗರಾಜಹರಪನಹಳ್ಳಿಯವರ ಮುದ್ದಾದಕವನ ಸಂಕಲನ *ವಿರಹಿ ದಂಡೆ** ಕೈಸೇರಿದಾಗ ಕುತುಹಲ… ಎಲೆಗಳು ಉದುರುವ ಸಮಯ ಚಳಿಯ ದಾಟಿ ಬಿಸಿಲಿಗೆ ಮೈ ಒಡ್ಡುವ ಕಾಲ…ದಲೊಂದು ಹೊಸ ಚೈತನ್ಯ..!! ಪ್ರೇಮವೆಂದರೆ ಕಾಮವೆಂದು ಪೂರ್ಣವಿರಾಮವಿಟ್ಟರೆ ಮುಗಿಯಿತೇ?? ಪ್ರೇಮವೆಂದರೆ ಗಹಗಹಿಸಿ ಮುಸುಕುಹಾಕಿ ಕತ್ತಲೆಯಲಿ ನರಳಾಡಲು ಪ್ರೀತಿಯ ಪಟ್ಟ ಬೇಕೆ..??? ಅಲ್ಪನ ಮನಸು ಕೊಚ್ಚೆಯಲ್ಲಿ…! ವಿಕೃತನಾಗಿ ಅಲೆದಾಡುವ ಕಾಮುಕನಂತೆ..!! ಇವೆಲ್ಲ ಪ್ರೀತಿ, ಪ್ರೇಮದ ಕೊನೆಯ ಪುಟಗಳಾಗಿ ವಿರಮಿಸಿದರೆ ಸಾಕೆ??? ಎಂಬ ಪ್ರಶ್ನೆಗೆ??.. ವಿರಹದ ಹಗಲ ಸುಡಬೇಕಿದೆ ತಣ್ಣಗೆ ದಂಡೆಯಲಿ ಕುಳಿತು… ಅಲ್ಲಿ ಪ್ರೇಮದ ಗಿಡ ನೆಡುತ್ತೇನೆ ನೀ ನೀರು ಹಾಕುವುದಷ್ಟೆ ಬಾಕಿ……  ಅಧ್ಬುತಚಿಂತನೆ…ಪ್ರೀತಿಗೊಂದು ಹೊಸ ಭಾಷೆ..  ಕವಿಯ ಮನಸ್ಸು ಕೇವಲ ಪ್ರೇಮವಷ್ಟೆ ಅಲ್ಲ,ಆ‌ ಪ್ರೀತಿಗೆ ಪರಿಸರವು ಪೂರಕವೆಂಬಂತೆ ಭಾವಿಸಿ ಸದಾ ಪಕೃತಿಯ ಜೀವಾಳವಾಗಿ ತನ್ನಂತರಂಗದ ಸಂಗಾತಿಯನ್ನು ಪ್ರತಿಕ್ಷಣದಲ್ಲೂ ಹೃದಯದಲ್ಲಿಟ್ಟುಕೊಳ್ಳಬೇಕೆನ್ನುವ ತವಕ. ಕವಿ ನಿಜವಾಗೂ ಬದುಕನ್ನು ಬಹುವಾಗಿ ಪ್ರೀತಿಸುವ ವ್ಯಕ್ತಿ…..  ಕಡಲು ನೀರಾಳ..! ಅದಕ್ಕೆಂದು ಭಯವಿಲ್ಲ..!ಕರಗುವೆನೆಂಬ ಆತಂಕವಿಲ್ಲ..! ಜಗದ ಪ್ರಳಯಕ್ಕೂ,ಜಗದ ಉಳಿವಿಗೂ ಸಾಮರಸ್ಯದ ಕೊಂಡಿ…!   ಕವಿಯ ತುಡಿತ. ಸಮುದ್ರ ನಿದ್ದೆ ಹೋಗಿದೆ ಗೆಳತಿ ವಿರಹಿ ದಂಡೆಗೆ ಮೌನ ಆಕಾಶಬಾಗಿ ಮುನಿಸಿ ಕುಳಿತಿದೆ ಗಾಳಿ ಮಿಸುಗದೇ ನಿಂತಿದೆ ನದಿಗೆ ಈಗ ಧ್ಯಾನದ ಸಮಯ ಮಾತು ಮೂಕವಾಗಿ ಸೋತು ಕುಳಿತಿದೆ ಭುಜಕೆಭುಜ ಬೆಸೆದ ಹೊತ್ತು… ಮಂಚದ ತುಂಬಾ ಎಕಾಂಗಿ ಕನವರಿಕೆಗಳು…! .. ಕಾಯುವ ಸಂಯಮ ವಿರಹಿಗೆ ಅನಿವಾರ್ಯ…!ಪ್ರೀತಿಯ ತುಮುಲಗಳು,ಕನವರಿಕೆಗಳು ,ಕನಸುಗಳು,ಎಲ್ಲವೂ ಪ್ರೇಮಮಯವೇ…ಎಲೆಯದುರಿದ ಮರವೂ..ಪ್ರೇಮ ನಶೆಗೆ ಬಯಲಾದಂತೆ.ಕಂಗಳ ಕಾತರಿಕೆ ಉದರಾಗ್ನಿಗೆ ತುಪ್ಪ ಸುರಿದಂತೆ..! ಪ್ರಾಣಿ,ಪಕ್ಷಿ,ಗಿಡ ಬಳ್ಳಿ, ಚರಾಚರಗಳೆಲ್ಲ ಪ್ರೇಮಿಯ ಆಣತಿಯಂತೆ ನವಿಲು‌ನರ್ತಿಸಿದಂತೆ…! ಬಾನು ಭೂಮಿ ಅದೆಷ್ಟು ದೀರ್ಘವಾಗಿ ಚುಂಬಿಸುತ್ತೆ ನಾಚಿಕೆಯೇ ಇಲ್ಲ,ಅದು ಬಟ್ಟಬಯಲಿನಲಿ ನಟ್ಟ ನಡು ರಸ್ತೆಯಲಿ ನವ ವಧುವರರಂತೆ…!  ಪ್ರಕೃತಿಗೆ ಮಳೆಯಲ್ಲಿಯೇ ಮಿಲನೋತ್ಸವ..ಬಾನು ಭುವಿ ಒಂದಾದರೆ ಮಾತ್ರ ನಮ್ಮ ಒಡಲು ತುಂಬುವುದು…ಹಸಿರು ಉಸಿರಾಗಲೂ ಸಮಯ ಬೇಕು.  ಹಿಂದಿನಂತೆ ಮಳೆಗಾಲವಿಲ್ಲ..ಬರಗಾಲದ ಛಾಯೇ..! ಧರೆತಣಿಯಲು,ಪ್ರವಾಹ ಉಕ್ಕಿಹರಿದರೂ ಭೂಮಿಯ  ವಿರಹದ ತಾಪ ಕಡಿಮೆಯಾಗಿಲ್ಲ…ಕಾರಣ                ಕಾದ ಕಾವಲಿಯಂತಿದ್ದ ವಿರಹದ ಬೇಸಿಗೆ  ಮಳೆ ಮೋಡ ಬಿಗಿದಪ್ಪಿದರೂ  ಕರಗದಾ ಮೋಹ….! ಹರೆಯದ ಬಯಕೆಗಳು ನೂರಾರು..ಕವಿಗೆ ಆಗಾಗ ಬುದ್ದನ ನೆನಪಾದಂತಿದೆ.. ನೀ ನಿದ್ರಿಸಿ ನನ್ನ ಕನಸು ಕಾಣುವಾಗ ಕಾರಣ ಹೇಳದೇ ಹೋಗಲಾರೆ ಮೋಕ್ಷ ದ ಬೆನ್ನು ಹತ್ತಲಾರೆ ಬುಧ್ದನಾಗಲಾರೆ… ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ..!! ಇದ್ದು ಜಯಿಸಬೇಕು ಎಂಬ ಧೀಮಂತ ಮನಸ್ಸಿನವರು, ಕವಿ ಪಕ್ಕಾ ನಂಬಿಗಸ್ಥ.  ಪ್ರೇಮಿ…! ಪ್ರೀತಿಗೆ ಬೆನ್ನುತೋರಿಸದೆ ಹೃದಯದಲ್ಲಿಟ್ಟು ಪೊರೆದವ. ಕವಿಗೆ ತನ್ನವರನ್ನು ಬಿಟ್ಟಿರುವಾಗೆಲ್ಲ..ಕಡಲ ದಂಡೆ ವಿರಹವನ್ನು ತಣಿಸುವ ತಾಣವಾಗಿದೆ…. ವಿಶಾಲ ಕಡಲನ್ನು ಸೇರುವ ನದಿಗಳು ಗುಡ್ಡಗಳನ್ನು ,ಕಾಡುಗಳನ್ನು, ಇಳಿಜಾರುಗಳನ್ನು  ಲೆಕ್ಕಿಸದೇ ಹಾತೊರೆವ ಜಾತಕ ಪಕ್ಷಿಯಂತೆ ಎಡರು ತೊಡರುಗಳ ದಾಟಿ ನಿರ್ಭಯವಾಗಿ ಸಾಗರವ ಮುತ್ತಿಡಲು ಹವಣಿಸುವಂತೆ….ತನ್ನ ಕೊನೆಯ ಪಯಣ ನಿನ್ನಲ್ಲೆಯೆನ್ನುವಂತೆ ಧಾವಿಸುವ ಧಾವಂತಕೆ ಕವಿ ಪ್ರೀತಿಯ ಹಸಿರು ನಿಶಾನೆ ತೋರಿಸಿದ್ದಂತೂ ಸತ್ಯ…! ಒಟ್ಟಾರೆ ಕವಿ ಶ್ರೀ ನಾಗರಾಜ ಹರಪನಹಳ್ಳಿಯವರ ಸುಕೋಮಲ ಪ್ರೇಮ ಗೀತೆಗಳು ವಿರಹದ ನೋವನ್ನು ಅನುಭವಿಸುತ್ತಾ ವಿರಹದ ನೂರುಭಾವಗಳು ತಾವು ಕಂಡಂತೆ ಬಿತ್ತರಿಸುತ್ತಾ ಸಾಗುವಾಗ ಪ್ರೇಮ ಕವಿ ನಿಸಾರ ಅಹಮ್ಮದ ನೆನಪಾಗದಿರಲಿಲ್ಲ ನನಗೆ… ಉತ್ತಮ ಹನಿಗವನಗಳು ಅಲ್ಲಿ ಬಟ್ಟಲು ಹೂವಿನಂತೆ ಅರಳಿ ನಕ್ಕಿದ್ದಂತೂ ನಿಜ..!ಕವಿಯ ಮನಸು ಪಕ್ಕಾ ಮಾಗಿದೆ. ಒಲವಾಗಲು ಹೆಚ್ಚೇನು ಬೇಕಿಲ್ಲ ಸೊಗಸಾದ ಒಂದು ಪ್ರೇಮದ ಹಾಡು ಸಾಕು….!!! ಶ್ರೀ ನಾಗರಾಜರವರ *ವಿರಹಿದಂಡೆ *ಅರಿತವನಿಗೆ  ಖಂಡಿತ ನಿಸರ್ಗದ ಅಧ್ಬುತ ಪ್ರೇಮದ ಕೊಡುಗೆಯ ದರ್ಶನವಾಗುವುದಂತೂ ದಿಟ..!ಅವರವರ ಭಾವಕ್ಕೆ..ನನ್ನರಿವಿಗೆ ತೋಚಿದ್ದು…ಇನ್ನೂ ಹೆಚ್ಚೆಚ್ಚು ಪ್ರೇಮ ಗೀತೆಗಳು ದುಂಬಿಯಂತೆ ಝೆಂಕರಿಸಲೆಂದು ಶುಭಹಾರೈಸುವೆ…. ***************** ಶಿವಲೀಲಾ ಹುಣಸಗಿ

ನಾನು ಓದಿದ ಪುಸ್ತಕ Read Post »

ಕಾವ್ಯಯಾನ

ಕಾವ್ಯಯಾನ

ಜುಲ್ ಕಾಫಿ಼ಯಾ ಗಜ಼ಲ್ ಎ.ಹೇಮಗಂಗಾ ನೀ ಒಪ್ಪಿಗೆಯ ನಗೆ ಬೀರುವವರೆಗೂ ಮನದ ಕಳವಳಕೆ ಕೊನೆಯಿಲ್ಲ ನೀ ಅಪ್ಪುಗೆಯ ಬಿಸಿ ನೀಡುವವರೆಗೂ ಹೃದಯದ ತಳಮಳಕೆ ಕೊನೆಯಿಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಮಳೆ ಸುರಿದು ಇಂದ್ರಚಾಪ ಮೂಡಿತೇಕೆ ? ನೀ ಬರಡು ಬಾಳಿಗೆ ಹಸಿರಾಗುವವರೆಗೂ ಅಂತರಂಗದ ಹೊಯ್ದಾಟಕೆ ಕೊನೆಯಿಲ್ಲ ಗೋರಿ ಸೇರಿದ ಕನಸುಗಳು ಬಿಡದೇ ಬೇತಾಳನಂತೆ ಹೆಗಲೇರಿವೆ ನೀ ಹೊಸ ಬಯಕೆಗಳ ಬಿತ್ತುವವರೆಗೂ ಅಂತರಾಳದ ನರಳಾಟಕೆ ಕೊನೆಯಿಲ್ಲ ಅಗಲಿಕೆಯ ನೋವೇ ದಾವಾನಲವಾಗಿ ಉಸಿರು ಬಿಸುಸುಯ್ಯುತಿದೆ ನೀ ಸಿಹಿಚುಂಬನದಿ ಕಸುವು ತುಂಬುವವರೆಗೂ ಜೀವದ ತಲ್ಲಣಕೆ ಕೊನೆಯಿಲ್ಲ ಪ್ರೀತಿತೊರೆಯ ಬತ್ತಿಸದೇ ಕಾಪಿಡುವೆಯೆಂಬ ಭರವಸೆ ಈಗೆಲ್ಲಿ ? ನೀ ಮೊಗೆಮೊಗೆದು ಉಣಿಸುವವರೆಗೂ ತೀರದ ದಾಹಕೆ ಕೊನೆಯಿಲ್ಲ ನಂಜಾದ ನೆನಪುಗಳು ಮಸಣದ ಹಾದಿಯತ್ತ ಕೊಂಡೊಯ್ಯುತಿವೆ ನೀ ನನ್ನವನಾಗುವವರೆಗೂ ಆಂತರ್ಯದ ತುಡಿತಕೆ ಕೊನೆಯಿಲ್ಲ *******

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ದುರಿತಕಾಲದ ದನಿ ವರ್ತಮಾನದ ಕಷ್ಟಕಾಲದ ಕವಿತೆಗಳು! ಕೃತಿ: ದುರಿತಕಾಲದ ದನಿ ಕವಿ: ಕು.ಸ.ಮಧುಸೂದನ, ರಂಗೇನಹಳ್ಳಿ ಪ್ರಕಾಶನ: ವಿಶ್ವಶಕ್ತಿ ಪ್ರಕಾಶನ ರಾಣೇ ಬೆನ್ನೂರು ಪುಟ: 72 ಬೆಲೆ: 100/-       ಕು.ಸ.ಮಧುಸೂದನ ರಂಗೇನಹಳ್ಳಿ ಯವರ ’ದುರಿತಕಾಲದ ದನಿ’ ಹೆಸರೇ ಹೇಳುವಂತೆ ವರ್ತಮಾನದ ವಾಸ್ತವವನ್ನೆಲ್ಲಾ ಸಾರಾಸಗಟಾಗಿ, ತುಸು ಕಟುವೇ ಎನಿಸುವ ಶೈಲಿಯಲ್ಲಿ ಬರೆಸಿಕೊಂಡ ಕವಿತೆಗಳ ಸಂಕಲನ.    ‘ನನ್ನ ಕವಿತೆ ಕುರಿತಂತೆ’ ಎ಼ಂದು ತಮ್ಮ ಕವಿತೆಗಳ ಬಗ್ಗೆ ತಮ್ಮದೇ ಶೈಲಿಯ ವಿವರಣೆಯೇ ಅದ್ಭುತವಾಗಿದೆ.. ಅವರ ಮಾತುಗಳಲ್ಲೇ ಹೇಳಬೇಕೆಂದರೆ “ಒಂದು ಕಡೆ ಜಾಗತೀಕರಣವು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ನಾಶಪಡಿಸುತ್ತ ನಡೆದಿದ್ದರೆ, ಇನ್ನೊಂದೆಡೆ ಮತೀಯ ಮೂಲಭೂತವಾದ ನಮ್ಮ ಬಹುಸಂಸ್ಕೃತಿಯ ಪರಂಪರೆಯ ಮನೆಯ ಹಂದರವನ್ನು ಕೆಡವಲು ಹೊಂಚು ಹಾಕುತ್ತಿದೆ, ಪ್ರಭುತ್ವ ಧರ್ಮದ ಆಸರೆಯೊಂದಿಗೆ ಅಧಿಕಾರ ಚಲಾಯಿಸುವ ಮಾತಾಡುತ್ತಿದ್ದರೆ ಧರ್ಮವೋ ಸ್ವತಃ ತಾನೇ ಪ್ರಭುತ್ವವಾಗುವ ದಿಸೆಯಲ್ಲಿ ತನ್ನನ್ನು ಅಣಿಗೊಳಿಸಿಕೊಳ್ಳುತ್ತಿದೆ. ಹೀಗೆ ಬಂಡವಾಳ, ಧರ್ಮ, ಪ್ರಭುತ್ವಗಳು ಒಟ್ಟಾಗಿ ಛಿದ್ರಗೊಳಿಸಲು ಹೊರಟಿರುವ ಒಂದು ಸಮಾಜವನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡಲು ಸಾಹಿತ್ಯ ಮತ್ತು ಸೃಜನಶೀಲ ಕಲಾಪ್ರಕಾರಗಳು ಮುಂದಾಗಬೇಕಿದೆ.” ‘ಕಲೆಗಾಗಿ ಕಲೆ’ ಮಾತನ್ನು ಬಿಟ್ಟು ಸಮುದಾಯಕ್ಕಾಗಿ ಸಾಹಿತ್ಯ!’ ಈ ವರ್ತಮಾನದ ವಾಸ್ತವವೇ ದುರಿತಕಾಲದ ದನಿಯಲ್ಲಿ ಕವಿತೆಗಳಾಗಿ ಮೂಡಿಬಂದಿವೆ. ಈ ಕವಿತೆಗಳು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಮಾತ್ರವಲ್ಲದೇ, ನಾವಲ್ಲದ ನಮ್ಮ ಹೊರಪ್ರಪಂಚವನ್ನೂ ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ತೊಡಗಿವೆ. ‘ರಣ ಹಸಿವಿನಿಂದ’ ಕವಿತೆಯಲ್ಲಿ ದೇಶದಲ್ಲಿನ ದ್ವೇಷ ರಾಜಕಾರಣದ ಬಗ್ಗೆ ಹೀಗೆ ಬರೆಯುತ್ತಾರೆ: ಮೊನ್ನೆಮೊನ್ನೆಯವರೆಗೂ ನೆಡೆದ ಅಕಾರಣ ಯುದ್ಧಗಳಿಗೀಗ ಸಕಾರಣಗಳ ಪಟ್ಟಿ ಮಾಡುತ್ತಾ ಕುಳಿತಿದ್ದಾರೆ ತರಿದ ತಲೆಗಳ ಭೋಗಿಸಿದ ಯೋನಿಗಳ ಕಚ್ಚಿದ ಮೊಲೆಗಳ ಕಲಸಿಹಾಕಿದ ಭ್ರೂಣಗಳ ನಿಖರ ಅಂಕಿಅಂಶಗಳಿಗಾಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ ಪ್ರತಿಮನುಷ್ಯನಿಗೂ ಇರಬಹುದಾದ ಮೃಗದ ಮುಖವಾಡವ ಕಳಚಲೆತ್ನಿಸಿದಷ್ಟೂ ಗೊಂದಲವಾಗುವುದು ಖಚಿತ ನೋಡು ಇದ ಬರೆಯುವಾಗಲೂ ಕೆಕ್ಕರಿಸಿ ನೋಡುತಿದೆ ಮೃಗವೊಂದು ರಣಹಸಿವಿನಿಂದ!  ಇನ್ನೊಂದು ಕವಿತೆಯಲ್ಲಿ ಇಂದಿನ ಕಷ್ಟಕಾಲದ ಬಗ್ಗೆ ಹೀಗೆ ಹೇಳುತ್ತಾರೆ. ಖಾಲಿ ಶಿಲುಬೆಗೆ ಹೊಡೆಯುವುದಿಲ್ಲ ಯಾರೂ ಮೊಳೆಗಳ ಕಷ್ಟ ಕಾಲದ ಕವಿತೆಗಳು ಅನ್ನದ ಅಗುಳಾಗುವುದಿಲ್ಲ…. ಬಯಲ ಗಾಳಿಯಲಿ ಹಣತೆ ಉರಿಯುವುದಿಲ್ಲ…. ಕಷ್ಟ ಕಾಲದ ಮಾತುಗಳಿಗೆ ಕೊನೆಯಿರುವುದಿಲ್ಲ…. ‘ಬಾ ಮಗುವೆ ಬಾ ನನ್ನ ಹತ್ತಿರಕೆ’ ಕವಿತೆಯಲ್ಲಿ ನಿಸರ್ಗದಿಂದಲೇ ಪಾಠ ಹೇಳಿಕೊಡುವ, ಯಾವ ಮಕ್ಕಳಿಗೂ ತಂದೆಯಾಗಿಬಿಡುವ ಅಂತಃಕರಣದ ಅಪ್ಪನಾಗಲಾರದ ಅಪ್ಪ ಎಂಬ ಕವಿತೆಯ ಮಾತು ಮನವ ಮೂಕವಾಗಿಸುತ್ತದೆ.. ಪ್ರಭುತ್ವದ ಅಸಹಿಷ್ಣುತೆಯ ಬಗೆಗಿನ ಕವಿತೆಯಲ್ಲಿ ಭಯಗೊಂಡ ಬರಹಗಾರರು ಇದೀಗ ಪುರಾಣ ಪುಣ್ಯ ಕತೆಗಳ ಪುನರ್ ಸೃಷ್ಟಿಸುತ್ತ ದಣಿಗಳ ಪುರಸ್ಕಾರಕ್ಕಾಗಿ ಕಾಯುತ್ತ ಕೂತಿದ್ದಾರೆ! ಮನುಷ್ಯನ ಅಸಹಾಕತೆಯನ್ನು ಕಟ್ಟಿ ಕೊಡುವ ಕವಿತೆ ಹೀಗೆ ಮುಗಿಯುತ್ತದೆ ಛಿದ್ರಗೊಂಡ ಆತ್ಮದ ತುಣುಕುಗಳನ್ನು ಮೂಸಿ ನೋಡಿದ ಬೀದಿ ನಾಯಿ ತಿರುಗಿ ನೋಡಿ ಬೊಗುಳಿ ಓಡಿಹೋಯಿತು ಕೊಳೆತ ಆತ್ಮಗಳ ಕತೆ ಇಷ್ಟೇನೆ!! ಪ್ರಭುತ್ವದ ಸರ್ವಾಧಿಕಾರಿ ಅಟ್ಟಹಾಸದ ಬಗ್ಗೆ ಕವಿತೆಯೊಂದು ಹೀಗೆ ಸಾಗುತ್ತದೆ. ರಾಜರಸ್ತೆಯ ವಿಜಯೋತ್ಸವದ ಘೋಷಗಳ ನಡುವೆ ಕ್ಷೀಣವಾಗಿ ಕೇಳುವ ಹಸಿದವರ ಪ್ರಲಾಪದ ಆಲಾಪಗಳೊಳಗೆ ಸಿಂಹಾಸನಗಳ ಉರುಳಿಸುವ ಶಾಪದ ಬಿಸಿಯಿತ್ತು. ಬರಗಾಲ ತಂದೊಡ್ಡುವ ಹಸಿವಿನ ಬಗ್ಗೆ ಬರೆಸಿಕೊಂಡ ಕವಿತೆಯ ಸಾಲುಗಳು: ಮಾಮೂಲಿನಂತಿಲ್ಲ ಈ ರಾತ್ರಿ ಹಸಿದವರಾರೂ ಮಲಗಿಲ್ಲ ಯಮ ಯಾತನೆಯಲ್ಲಿ ಉಂಡವರೂ ಮಲಗಿಲ್ಲ ಹೊಟ್ಟೆ ಉಬ್ಬರದಲ್ಲಿ ! ನಾಯಕರು ಮತ್ತು ಪಾರಿವಾಳಗಳು, ಬರೆದು ಬಿಸಾಕಿದ ಕಾಗದದ ಚೂರಂತೆ… ದುಸ್ವಪ್ನದಲ್ಲಿನ ಬಂದು ಹೀಗೆ ಹಸಿರಿಗೇಕೆ ಉರಿ ಹಚ್ಚಿದೆ ಅದೇನಂತಹ ದ್ವೇಷಾಗ್ನಿಯಿತ್ತು ನಿನ್ನೊಳಗೆ ??”” ಜಂಗಮ ಸ್ಥಾವರ…. ಹೀಗೆ ಇಲ್ಲಿನ ಇಲ್ಲಿನ ಕವಿತೆಗಳು ಸಮಕಾಲೀನ ಸಮಾಜದ ಎಲ್ಲ ಆಗುಹೋಗುಗಳಿಗೂ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಸಾಗುತ್ತವೆ. ಎಲ್ಲಾ ೫೭ ಕವಿತೆಗಳೂ ನಮ್ಮ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿಗಳೇ.. ರೋಷ ಅಸಹಾಯಕತೆಯ ಶಬ್ಧವಾಗದ ದನಿಗಳು… ಇದನ್ನ ಓದಿದ ಕೆಲವು ಮನಗಳಾದರೂ ಸಶಭ್ಧವಾಗಿ ಪ್ರತಿಭಟನೆಗೆ ನಿಂತರೇ ಅಲ್ಪಸ್ವಲ್ಪ ಬದಲಾವಣೆ ಸಾಧ್ಯವೇನೋ… ಕುರುಡರ ಸಂತೆಯಲ್ಲಿಯೂ ಕನ್ನಡಿ ಮಾರುವ ಧೈರ್ಯ ಮಾಡುವವನೇ ನಿಜವಾದ ಕವಿ! ಎನ್ನುವಲ್ಲಿ ಕವಿಯೊಬ್ಬನ ಎದೆಗಾರಿಕೆ ಕಂಡು ಬರುತ್ತದೆ. ಹೀಗೆ ಇವತ್ತಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಯಾರಾದರೂ ಹೇಳಲೇಬೇಕಾದ್ದನ್ನು ತಮ್ಮಕವಿತೆಗಳ ಮೂಲಕ ಹೇಳುತ್ತ ಒಟ್ಟು ಸಮಾಜದ ದನಿಯಾಗಲು ಕವಿ ಪ್ರಯತ್ನಿಸಿದ್ದಾರೆ ಹೌದು ಇಲ್ಲಿ ಕವಿತೆಗಳು ಮಾತನಾಡುತ್ತವೆ…. ಕವಿತೆಗಳ ಮಾರುಕಟ್ಟೆಯ ಸರಕನ್ನಾಗಿಸಿದ ಪ್ರಕಾಂಡ ಪಂಡಿತರುಗಳ ಮಾತುಗಳನ್ನು ಕವಿತೆಗಳು ಓದುವವರ ದನಿಯಲ್ಲಿ ಧ್ವನಿಸಿ ಸುಳ್ಳಾಗಿಸಲೀ ಲೇಖಕರ ಸಮಾಜ ವ್ಯವಸ್ಥೆ ಸುಧಾರಣೆ ಮಾಡುವ ಕವಿಯ ಆಶಯ ಈಡೇರಲೆಂದು ನಾವು ಆಶಿಸಬಹುದು! ಇಂತಹ ಕವಿತೆಗಳು ಜನರನ್ನು ತಲುಯಪಿದಾಗಲೇ ಕವಿಯ ಪ್ರಯತ್ನಕ್ಕೆ ಸಾರ್ಥಕತೆ ಬರುವುದು. ಕನ್ನಡದ ಓದುಗರು ಈ ಸಂಕಲನವನ್ನು ಕೊಂಡು ಓದಬೇಕಾಗಿದೆ. ಪ್ರಭುತ್ವದ ಅಟ್ಟಹಾಸದ ಬಗ್ಗೆ ಹೇಳು ಕವಿತೆ ಹೀಗಿದೆ. ನಡುವೆ ಎತ್ತಿದ ಎತ್ತರದ ಗೋಡೆಗಳು ಸರಳುಗಳು ಅವರಿಗೊ ನಮಗೊ? ಪ್ರಭುತ್ವದ ನಾಮಪಲಕವೇ ರಾಚುತ್ತಿದೆ ಕಣ್ಣಿಗೆ! ಹೀಗೆ ಪ್ರಾರಂಭವಾಗುವ ಕವಿತೆ ಕೆಳಗಿನ ಸಾಲುಗಳೊಂದಿಗೆ ಮುಗಿಯುತ್ತದೆ ಕೊಳೆತ ಆತ್ಮಗಳನ್ನಿಟ್ಟುಕೊಂಡ ಮನೆ ಮಸಣವಾಗುತ್ತಿದೆ ದಣಿಗಳ ವಿಜಯೋತ್ಸವಗಳ ಸಂಭ್ರಮ ಸಡಗರಗಳ ಗವಜುಗದ್ದಲ ಮಿತಿ ಮೀರುತಿದೆ. ಇಡೀ ಸಂಕಲನದ ಆಶಯವನ್ನು ಕೆಳಗಿನ ಪುಟ್ಟ ಕವಿತೆಯೊಂದೇ ಹೇಳಿಬಿಡುತ್ತದೆ. ಕ್ರಾಂತಿಕಾರಿ ಬರುವುದಿಲ್ಲ ಆಕಾಶದಿಂದ ಹಾರಿ ನಮ್ಮ ಹಾಗೆಯೇ ಅವನೂ ಅರಸುತ್ತಿದ್ದಾನೆ ಕ್ರಾಂತಿಯ ದಾರಿ ಕವಿತೆಯ ಬೆಂಕಿ ಕಡ್ಡಿ ಗೀರಿ! ************** ಪದ್ಮಜಾ ಜೋಯಿಸ್

ನಾನು ಓದಿದ ಪುಸ್ತಕ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಮಹಾವೀರ ಜಯಂತಿ ಕೆ.ಶಿವುಲಕ್ಕಣ್ಣವರ ಈ ಲೇಖನ ಮಹಾವೀರ ಜಯಂತಿಯ ವಿಶೇಷದ‌ ವಿಷಯವಾಗಿದೆ. ಸರ್ವಸಂಘ‌‌ ಪರತ್ಯಾಗಿ ಮತ್ತು ಅಹಿಂಸಾ ಮೂರ್ತಿ ಮಹಾವೀರರು..! ಜಗತ್ತಿನ ಯಾವುದೇ ಧರ್ಮದಲ್ಲಿಯೂ ಹಿಂಸೆಯನ್ನು ಪ್ರೋತ್ಸಾಹಿಸಿಲ್ಲ. ಹಿಂಸೆಯ ಬೋಧನೆ ಸಹ ಕಂಡುಬರುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆ ಹಾಗೂ ಕೊಲೆಗಳಂತಹ ಹೀನಾಯ ಕೃತ್ಯಗಳು ಕೆಲವೆಡೆ ಕಂಡು ಬರುತ್ತಿರುವುದು ವಿಪರ್ಯಾಸ. ರಾಜ್ಯ, ಸಿರಿ, ಸಂಪತ್ತು ಹಾಗೂ ಚಕ್ರವರ್ತಿಯ ಪದವಿಗಾಗಿ ಯುದ್ಧವೇ ಅನಿವಾರ್ಯವೆನ್ನುವ ಪ್ರಸಂಗದಲ್ಲಿಯೂ ಸಹ ಜೀವಹಿಂಸೆ ಮತ್ತು ಆಸ್ತಿ ಪಾಸ್ತಿಗಳ ಹಾನಿಯಾಗದಂತೆ ಅಹಿಂಸಾತ್ಮಕ ಯುದ್ಧವನ್ನು ಮಾಡಬಹುದು ಎಂದು ಜಗತ್ತಿಗೇ ಭರತ, ಬಾಹುಬಲಿಯವರು ತೋರಿಸಿಕೊಟ್ಟಿದ್ದಾರೆ. ಅವರಿಬ್ಬರ ನಡುವೆ ನಡೆದ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧಗಳಲ್ಲಿ ಬಾಹುಬಲಿಯು ಜಯಶಾಲಿಯಾಗಿ ಚಕ್ರೇಶ್ವರ ಪದವಿಯನ್ನು ತನ್ನದಾಗಿಸಿಕೊಂಡರೂ ಸಹ ಭರತನಿಗೆ ಎಲ್ಲವನ್ನೂ ಅರ್ಪಿಸಿ ತಾನು ಸತ್ಯ, ಅಹಿಂಸೆ, ತ್ಯಾಗ ಮತ್ತು ಮೈತ್ರಿಗಾಗಿ ದಿಗಂಬರ ಮುನಿಯಾಗಿ ತಪಸ್ಸಿಗೆ ನಡೆಯುತ್ತಾನೆ. ಜಗದ್ವಂದ್ಯನಾದ ಬಾಹುಬಲಿಯು ಇದೇ ದಿವ್ಯ ಸಂದೇಶವನ್ನು ಸಾರುತ್ತ ಶ್ರವಣಬೆಳಗೊಳದ ವಿಂಧ್ಯಗಿರಿಯ ಮೇಲೆ ನಿಂತಿರುವ ಆ ಮಹಾಮಹಿಮನಿಗೆ ಇತ್ತೀಚೆಗಷ್ಟೇ ಮಹಾಮಜ್ಜನ ಮಹೋತ್ಸವವು ನಡೆದು, ಅವನ ಸಂದೇಶಗಳು ಅಭಿಷೇಕದ ದ್ರವ್ಯಗಳೊಂದಿಗೆ ವಿಂಧ್ಯಗಿರಿಯ ಕಡೆಯಿಂದ ಬೀಸಿ ಬರುತ್ತಿರುವ ಗಾಳಿಯೊಂದಿಗೆ ತೇಲಿ ಬಂದು ನಮ್ಮನ್ನು ಎಚ್ಚರಿಸುತ್ತಿರುವಂತೆ ಈಗಲೂ ಭಾಸವಾಗುತ್ತಿದೆ. ಅವಿನ್ನೂ ನಮ್ಮ ಮನದಿಂದ ಮಾಸುವ ಮುನ್ನವೇ ಈಗ ಜೈನ ಧರ್ಮದ ವರ್ತಮಾನ ಕಾಲದ 24ನೇ ತೀರ್ಥಂಕರ ಮಹಾವೀರರ ಜಯಂತ್ಯುತ್ಸವವು ಬಂದಿದೆ… ಸತ್ಯ, ಅಹಿಂಸೆ, ಅಪರಿಗ್ರಹ, ಅಚೌರ್ಯ ಮತ್ತು ಬ್ರಹ್ಮಚರ್ಯಗಳೆಂಬ ಪಂಚವ್ರತಗಳನ್ನಾಗಿ ಮಹಾವೀರ ಬೋಧಿಸಿದ್ದು ಅಹಿಂಸೆಯೇ ಶ್ರೇಷ್ಠ ಧರ್ಮವೆಂದು ಸಾರಿದ್ದಾರೆ… ಜೈನ ಧರ್ಮದ ತತ್ವಸಿದ್ಧಾಂತಗಳು ಜಗತ್ತಿನ ಎಲ್ಲ ಧರ್ಮಗಳಿಗಿಂತಲೂ ಅತ್ಯಂತ ಕಠಿಣವೆನಿಸುತ್ತಿದ್ದರೂ ಸಹ, ಅವುಗಳನ್ನು ಎರಡು ವಿಧವಾಗಿ ಬೋಧಿಸಿ, ಎಲ್ಲರಿಗೂ ನಿಕಟವಾಗುವಂತೆ ಅಣುವ್ರತಹಾಗೂ ಮಹಾವ್ರತಗಳನ್ನಾಗಿ ತಿಳಿಸಿರುವುದು ಒಂದು ಜೈನ ಧರ್ಮದ ವಿಶೇಷ… ಅಂದರೆ ಶ್ರಾವಕ (ಸಂಸಾರಿ) ಆದವನು ಪಂಚವ್ರತಗಳನ್ನು ಸ್ಥೂಲವಾಗಿ ಆಚರಣೆಯಲ್ಲಿ ತಂದುಕೊಂಡು ಸಾಧನೆಯ ಮೆಟ್ಟಿಲನ್ನು ಏರುತ್ತಾ ಹೋಗಬಹುದು. ಇಲ್ಲಿ ಸಾಧಕನಿಗೆ ಹನ್ನೊಂದು ನೆಲೆಗಳನ್ನು ಬೋಧಿಸಲಾಗಿದ್ದು, ಕೊನೆಯ ಹಂತದಲ್ಲಿ ಉತ್ತಮ ಶ್ರಾವಕ ಸ್ಥಾನಕ್ಕೇರಿ, ತ್ಯಾಗಿ ಧರ್ಮ ಪರಿಪಾಲನೆಯ ಸಾಮರ್ಥ್ಯ ಹೊಂದಿದವನು ಪಂಚವ್ರತಗಳನ್ನು ಮಹಾವ್ರತಗಳನ್ನಾಗಿ ಆಚರಿಸಲಾರಂಭಿಸುತ್ತಾನೆ. ಮಹಾವ್ರತಿಯಾದ ತ್ಯಾಗಿಯ ಆಚರಣೆಗಳು ಇನ್ನೂ ಕಠೋರವಾಗುತ್ತವೆ. ಕರ್ಮಬಂಧನದಿಂದ ಬಿಡುಗಡೆ ಪಡೆದು ಆತ್ಮ ಪರಿಶುದ್ಧತೆಯೊಂದಿಗೆ ಮುಕ್ತಿ ಹೊಂದುವುದು ಪರಮಗುರಿಯಾಗಿದೆ… ಹಾಗೆಯೇ, ಅನೇಕಾಂತವಾದ ಎಂದು ಹೇಳಲಾಗುವ ಸಿದ್ಧಾಂತದ ಪ್ರಕಾರ, ‘ನಾನು ತಿಳಿದುಕೊಂಡಿರುವುದೇ ಸರಿ, ಅದುವೇ ಕೊನೆಯ ಸತ್ಯ, ಮತ್ತು ಅದೇ ಅಂತಿಮ’ ಎನ್ನುವ ಅಹಂಕಾರದ ವಾದಕ್ಕೆ ಇಲ್ಲಿ ಸ್ಥಾನವಿಲ್ಲ. ಅನ್ಯರ ಹಾಗೂ ಅನ್ಯಧರ್ಮೀಯರ ವಿಚಾರ, ದೃಷ್ಟಿದರ್ಶನಗಳಿಗೂ ಗೌರವ ನೀಡಬೇಕು ಎನ್ನುವ ವಿಶಾಲ ಹಾಗೂ ಸಮತಾ ಭಾವ ಅನೇಕಾಂತದಲ್ಲಿದೆ. ಹೀಗೆ ಜೈನ ಸಿದ್ಧಾಂತದಲ್ಲಿ ಇದು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು ಪ್ರೀತಿ, ಪ್ರೇಮ ಹಾಗೂ ಸಹಬಾಳ್ವೆಗೆ ಸ್ಥಾನವಿದೆ… ಜೈನ ಧರ್ಮ ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಅದರ ತತ್ವ ಸಿದ್ಧಾಂತಗಳ ಪ್ರಖರತೆಯು ಬೆಳಗಿದ್ದು ಭಗವಾನ ಮಹಾವೀರರ ಕಾಲದಲ್ಲಿಯೇ ಎಂದು ಹೇಳಬಹುದು. ಕ್ರಿ.ಶ.ಪೂ. 599ರಲ್ಲಿ ಬಿಹಾರದ ಕುಂಡಲಪುರದಲ್ಲಿ ಚಕ್ರವರ್ತಿ ಸಿದ್ಧಾರ್ಥ ಮತ್ತು ಮಹಾರಾಣಿ ತ್ರಿಶಲಾ ಇವರ ಪುತ್ರನಾಗಿ ಮಹಾವೀರರ ಜನನ. ವರ್ಧಮಾನ, ಮಹಾವೀರ, ವೀರನಾಥ, ಸನ್ಮತಿ ಹೀಗೆ ಅನೇಕ ಹೆಸರುಗಳಿಂದ ಪ್ರವರ್ಧಮಾನಕ್ಕೆ ಬಂದ ಮಹಾವೀರರು ಚಿಕ್ಕಂದಿನಲ್ಲಿಯೇ ಅನೇಕ ಲೀಲೆಗಳನ್ನು ತೋರಿಸಿದರು. ಆದರೆ ಬಾಲ್ಯದಿಂದಲೇ ಅಲೌಕಿಕದೆಡೆಗೆ ಒಲುಮೆ ತೋರುತ್ತ, ರಾಜಭೋಗ, ಸೇವಕರ ಸೇವೆ, ಸಿರಿಸಂಪತ್ತು ಹಾಗೂ ಬಾಹ್ಯ ಸುಖದತ್ತ ಆಕರ್ಷಿತರಾಗದೇ ಅವುಗಳಿಂದ ನಿರ್ಲಿಪ್ತರಾಗಿದ್ದರು… ಮಹಾವೀರರು ತಾರುಣ್ಯಾವಸ್ಥೆಗೆ ಬಂದಾಗ, ‘ಸಂಸಾರ ಬಂಧನಕ್ಕೆ ಕಾರಣವಾಗುವ ವಿವಾಹ ನನಗೆ ಬೇಡ. ಅವೆಷ್ಟೋ ಭವಗಳನ್ನು ಕಳೆದ ನಂತರ ಈಗ ನಾನು ಮಾನವ ಜೀವಿಯಾಗಿ ತಮ್ಮ ಪುಣ್ಯ ಗರ್ಭದಲ್ಲಿ ಜನಿಸಿರುತ್ತೇನೆ. ಈಗಲಾದರೂ ನನ್ನ ಮೋಕ್ಷ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಸಮ್ಯಕ್‌ ತತ್ವದಿಂದ ಲೋಕಕಲ್ಯಾಣ ಹಾಗೂ ಆತ್ಯಕಲ್ಯಾಣದ ಗುರಿಯು ನನ್ನ ಮುಂದಿವೆ. ಅದಕ್ಕಾಗಿ ನಾನು ಅಣಿಯಾಗಬೇಕಾಗಿದೆ’ ಎಂದು ಮಹಾವೀರರು ನುಡಿದರು… ಕ್ರಿ.ಶ.ಪೂ. 569ನೆಯ ಮಾರ್ಗಶಿರ ಮಾಸದ ಕೃಷ್ಣಪಕ್ಷದಲ್ಲಿ ದಶಮಿ ತಿಥಿಯ ದಿನದಂದು, ಮಹಾವೀರರು ಸನ್ಯಾಸಿ ದೀಕ್ಷೆ ಪಡೆಯಲು ಕಾಡಿನೆಡೆಗೆ ನಡೆದರು. ಕಾಲಾಂತರದಲ್ಲಿ ಮಹಾವೀರರು ದೇಶದಲ್ಲೆಡೆ ವಿಹಾರಗೈದು ಶ್ರೇಣಿಕ, ಚೇಟಕರಂತಹ ಅನೇಕ ರಾಜ –ಮಹಾರಾಜರನ್ನು ತಮ್ಮ ಶಿಷ್ಯ ಪಡೆಯಲ್ಲಿ ಹೊಂದಿ ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು ಬೋಧಿಸಿದರು… ‘ಆತ್ಮ ಪರಿಶೋಧನೆಯ ಸಾಧನೆಯಿಂದ ಪರಿಶುದ್ಧ ಆತ್ಮ ಪರಮಾತ್ಮನಾಗುತ್ತಾನೆ. ಆದ್ದರಿಂದ ನಿನ್ನೊಳಗಿನ ಆತ್ಮವನ್ನು ಅರಿಯಲು ನೀನು ಸಾಧನೆ ಮಾಡು. ನಾನು ಎಂದುಕೊಂಡಿರುವ ಈ ದೇಹ ನಾನಲ್ಲ, ದೇಹವೇ ಬೇರೆ, ಆತ್ಮವೇ ಬೇರೆ ಎಂದು ಭೇದವಿಜ್ಞಾನ ಬೋಧಿಸಿದರು. ಹೀಗೆ ಅವರ ತತ್ವಸಿದ್ಧಾಂತಗಳು ಜನರ ಮನಸ್ಸಿಗೆ ಹತ್ತಿರವಾಗುತ್ತಿದ್ದಂತೆ ಅವು ಜನರ ಮನದಾಳದಲ್ಲಿ ಬೇರೂರಿದವು. ಮಹಾವೀರರು ಬೋಧನಾಮೃತವನ್ನು ದೇಶದೆಲ್ಲಡೆ ಹರಡಿತು. ತಮ್ಮ 72ನೆಯ ವಯಸ್ಸಿನಲ್ಲಿ ಸಂಪೂರ್ಣ ಅನ್ನಾಹಾರವನ್ನು ತ್ಯಾಗ ಮಾಡಿ ಶುಕ್ಲಧ್ಯಾನದಲ್ಲಿ ತೊಡಗಿದರು. ಅಷ್ಟಕರ್ಮಗಳನ್ನು ದಹಿಸಿದ ಅವರು ಕ್ರಿ.ಶ.ಪೂ. 527ನೆಯ ಕಾರ್ತೀಕ ಮಾಸದ ಕೃಷ್ಣಪಕ್ಷ ಚತುರ್ದಶಿಯ ರಾತ್ರಿಯಲ್ಲಿ ಮೋಕ್ಷ ಪದವಿಯನ್ನು ಪಡೆದರು. ಅಂದಿನ ದಿನವನ್ನು ಜೈನರು ಶ್ರದ್ಧಾಭಕ್ತಿಯಿಂದ ಒಂದು ವಿಶೇಷ ಪರ್ವವನ್ನಾಗಿ ಆಚರಿಸುತ್ತಾರೆ..! **********

ಸ್ವಾತ್ಮಗತ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಪ್ರೇಮ ತಪಸ್ವಿನಿ ಚಿತ್ರಾoಗದೆ. ಎಸ್.ಪಿ.ವಿಜಯಲಕ್ಷ್ಮಿ “”ಪ್ರೇಮ ತಪಸ್ವಿನಿ  ಚಿತ್ರಾoಗದೆ “”–ಲೇಖಕಿ  S P ವಿಜಯಲಕ್ಸ್ಮಿ, ಇವರ ಕೆಲವು ಕವಿತೆ ಓದಿರುವೆ, ಪ್ರವಾಸ ಕಥನದ ಲೇಖನಗಳೂ ನನಗೆ ತುಂಬಾ ಇಷ್ಟವಾದವು, ಇದೀಗ ಹೇಳಹೊರಟದ್ದು ಮನಸೂರೆಗೊಂಡ ಚಿತ್ರಾoಗದೆಯ ಬಗ್ಗೆ….        ನಂಗೆ ಪೌರಾಣಿಕ ಕಥನಗಳೆಂದರೆ ಮೊದಲಿಂದಲೂ ತೀರದ ಆಕರ್ಷಣೆ, ಮತ್ತೆ ಮತ್ತೆ  ಪ್ರತಿ ಬಾರಿಯೂ ಓದಿದಾಗಲೂ ಹೊಸ ಹೊಸ ಆಯಾಮಗಳೂ ಹೊಸಬೆಳಕ ಚೆಲ್ಲುತ್ತಲೇ ಇರುತ್ತವೆ, ಅದರಲ್ಲೂ ಹೆಣ್ಣು ಪಾತ್ರಗಳು ಒಂದೊಂದರ ಮೇಲೂ ನೂರೆಂಟು ರೀತಿಯ ಭಾವಗಳು ಮುಡುತ್ತವೆ, ನಂಗೆ ಈ  ಚಿತ್ರಾ…….  ಪಾತ್ರದ ಬಗ್ಗೆ ಜಾಸ್ತಿಯೇನೂ ತಿಳಿದಿರಲಿಲ್ಲ, ಮಹಾಭಾರತದಲ್ಲಿ ಬರೋ ಅರ್ಜುನ ಗಾಂಧರ್ವ ವಿವಾಹವಾದವಳು,   ಬಬ್ರುವಾಹನನ ಅಮ್ಮ ಅಷ್ಟೇ,  ಅಲ್ದೇ, ರವೀoದ್ರನಾಥ್ ಟ್ಯಾಗೋರ್ ರ ಚಿತ್ರಾ,  ಕುವೆಂಪು ಚಿತ್ರಾ ಅವರವರದೇ ಶೈಲಿಯಲ್ಲಿ ಹೊರಹೊಮ್ಮಿಸಿದ್ದಾರೆ, ಆದರೂ ನಾನೂ ಓದಿರಲಿಲ್ಲ ಹೋದ ವರ್ಷ್ ನಮ್ಮೂರಲ್ಲಿ ಆಳ್ವಾಸ್ ನವರು ನೃತ್ಯ ರೂಪಕ ನೋಡೋವರೆಗೂ, ಅದುವರೆಗೂ ನಂಗೆ ನೃತ್ಯರೂಪಕ ಅಂದ್ರೆ ಅಂತಾ ಆಸಕ್ತಿ ಖಂಡಿತಾ ಇರಲಿಲ್ಲ, ಆತ್ಮೀಯ್ರೊಬ್ಬರ ಆಗ್ರಹಕ್ಕೆ ಮಣಿದು ಅಂದು ಹೋಗಿದ್ದೆ, ಅಂದು ನೋಡಿದ ಚಿತ್ರಾ ಮನದೊಳಗೆ ಅರಳಿದ್ದು ಇಳಿದದ್ದು ಮಾತ್ರಾ Vijaya Sp ಯವರ ಪ್ರೇಮ ತಪಸ್ವಿನಿ ಚಿತ್ರಾಳಾಗಿ,  ಮಣಿಪುರ ರಾಜ್ಯ ತನ್ನ ನಿಸರ್ಗ ರಮಣೀಯತೆ ಹಾಗೂ ಬದುಕಿನ ವೈವಿದ್ಯತೆಯಿಂದಲೇ ವಿಶಿಷ್ಟವಾದುದು, ಇದರಲ್ಲಿ ಬಿಂಬಿತವಾದ ಇನ್ನೊಂದು ಅಂಶ ಗಂಡುಮಕ್ಕಳಿಲ್ಲದ ಕಾರಣ ಮಗಳನ್ನೇ ರಾಜಕುಮಾರನಂತೆ ಬೆಳೆಸುವ  ರಾಜ ಚಿತ್ರಸೇನ, ಪುರುಷತ್ವವನ್ನೇ ಆವಾಹಿಸಿಕೊಂಡು ಬೆಳೆಯುವ ಚಿತ್ರಾ… ಮಗಳ ಹೆಣ್ತನದ ಸೊಗಡು ಸೂಕ್ಷ್ಮತೆಗಾಗಿ ಹಪಹಪಿಸುವ ತಾಯಿ ಕರುಳು….. ಗಂಡಿನಂತೆಯೇ ಬೆಳೆದರೂ ಹೆಣ್ತನವೆನ್ನೋದು ಹೇಗೆ ಅಂತರ್ಗತವಾಗಿರತ್ತನ್ನೋದು ಗಾಂಡೀವಿಯನ್ನ ನೋಡಿ ವಿರಹದಿ ಚಡಪಡಿಸುವ ಚಿತ್ರಾ…. ರಮ್ಯ ರೋಚಕ ಮಹಾಭಾರತದಲ್ಲಿ ಸಣ್ಣ ಅಂಶವಾಗಿರೋ ಚಿತ್ರಾ oಗದೆ ಇಲ್ಲಿ ವಿಸ್ತ್ರುತಗೊಳ್ಳುತ್ತಾ ಕಣ್ಮುಂದೆ ಪ್ರಣಯೋನ್ಮಾದದ ಹೊಸ ರೋಚಕ ಲೋಕವೊಂದು ಅತಿರಮ್ಯವಾಗಿ ಅನಾವರಣಗೊಳ್ಳುತ್ತಾ ಮೈಮನ ಆವರಿಸಿಕೊಳ್ಳುತ್ತಾಳೆ ಕ್ಷಾತ್ರ ತೇಜಸ್ಸಿನ ಹೊಳಪಿನಲ್ಲಿ ಆ ವೀರತೆಯ ಗರ್ವದಲ್ಲಿ ಮಿಂಚುವ ಯುವರಾಣಿ ಎದೆಯೊಳಗೆ ಹೇಗಾದರೂ ಪಾರ್ಥನನ್ನೊಲಿಸಿಕೊಳ್ಳುವ ಹಂಬಲ ಉಕ್ಕಿ ಕಾಮದೇವನನ್ನು ಬೇಡಿಕೊಳ್ಳುವ ಪರಿ ಅದರ ಮೂಲಕ ಅವನನ್ನೊಲಿಸಿಕೊoಡು ಮತ್ತೆ ಗಂಡೆದೆಯ ಚಿತ್ರಳಾಗಿಯೂ ಅವನಲ್ಲುಳಿದು ಹೋಗುವ ಅಂತಿಮ ವಿಜಯ,  ಲೀಲಾ ವಿನೋದ ಕೃಷ್ಣ ಪರಮಾತ್ಮನ ಆಟದಲ್ಲಿ ಮಾಧ್ಯಮ ಪಾಂಡವ ಮೈಮರೆತು ಬಿಡುವ ರೀತಿಯನ್ನು,  ಚಿತ್ರಾ ಮರಳಿ ಪುರಪ್ರವೇಶ ಮಾಡದೇ ಊರಮುಂದಿನ ಗುಡಿಯಲ್ಲಿ ಪತಿಯ ನಿರೀಕ್ಷೆಯಲ್ಲಿ ಪ್ರೇಮತಪಸ್ವಿನಿಯಾಗೇ ಕಾಲಕಳೆಯುವ, ಭಗವಂತನ ಮಾಯದಿಂದ ಅಪ್ಪ ಮಗನ ಮಧ್ಯೆ ನೆಡೆಯುವ ಯುದ್ಧ, ಪತ್ನಿಯನ್ನು ಜಾರಿಣಿಯೆಂದು ನಿಂದಿಸುವ ದುರಹಂಕಾರಿ ಅರ್ಜುನ ಸರ್ವವನ್ನು ಯಾವ ಭಿಡೆಯಿಲ್ಲದೆ ಅತ್ಯುತ್ತಮ ಭಾಷೆಯಲ್ಲಿ ಸೌಜನ್ಯದ ಎಲ್ಲೆ ಮೀರದಂತೆ ಮೂಲಕ್ಕೆ ಕುತ್ತೂ ಬರದೇ ಮೂಲದ ರಸವತ್ತಾದ ವರ್ಣನೆಗೂ ಚ್ಯುತಿ ಬಾರದಂತೆ ಅಕ್ಷರ ಅಕ್ಷರವನ್ನೂ ಮೂಡಿಸಿರುವ ಪರಿ ಮನೋಜ್ಞವಾಗಿದೆ, ಪ್ರೇಮ ಪರಿಣಯ ರಾಸಲೀಲೆ ಯಾವುದೂ ಮಿತಿ ಮೀರದೇ ಓದುತ್ತಿದ್ದಂತೆ ದಿನಗಟ್ಟಲೇ ಆ ಭಾಷೆ, ವರ್ಣನೆ ಆ ರೋಮಾಂಚನದಲ್ಲಿ ಮೈಮರೆಯುವಂತಾಗತ್ತೆ, ನಾನಂತು ನಮ್ಮ ಹಳ್ಳಿಯ ಫಾರಂ ಹೌಸಲ್ಲಿ ಕುಳಿತು ಓದಿ ಕಳೆದೇ ಹೋಗಿದ್ದೆ,  ಹೌದು ಎಸ್. ರಾಮನಾಥ್ ಅವರು ಮುನ್ನುಡಿಯಲ್ಲಿ ಹೇಳಿದಂತೆ ಪೌರಾಣಿಕದ ಬಗ್ಗೆ ಏನೇ ಬರೆಯುವುದೂ ಹೋಳಿಗೆ ಮಾಡಿದಂತೆ,?? !!(ಇದನ್ನ ಓದಿಯೇ ಸವೀಬೇಕು ) ನಿಜಾ ನಾನು ಹೋಳಿಗೆ ಸವಿದ ಆನಂದದಲ್ಲಿದ್ದೆ,  ನಾನಂದ್ಕೊಡಿದ್ದೆ ಈ ವಿಷಯಗಳನ್ನು ಅಂದಿನ ಭಾಷೆಯಲ್ಲಿ ಬರೆಯೋದು ಸುಲಭ ಅಂತಾ ಆದರೆ ಇದನ್ನ  ಓದಿದ ಮೇಲೇ ಅರ್ಥವಾಗಿದ್ದು ನಮ್ಮಿ ನಾಗಾಲೋಟದ ಬದುಕನ್ನ ಅಂದಿನ ಭಾವನೆಗೆ ಭಾಷೆಗೆ ಹೊಂದಿಸುವುದು ಎಷ್ಟು ಕ್ಲಿಷ್ಟ ಅಂತಾ….  ಇದು ಸಂಪ್ರದಾಯಸ್ಥ ಸಾತ್ವಿಕ ಸಹೃದಯಿ ಹಾಗೂ ಅತ್ಯಂತ ಪ್ರೌಢ ಮನಸ್ಕರಿಗೆ, ಮತ್ತು ವಿಷಯದ ಆಳ ಅಗಲ ವಿಸ್ತಾರವನ್ನು ಅರಿತು ನುರಿತವರಿಗೆ  ಮಾತ್ರಾ ಸಾಧ್ಯ, ಮುಖಸ್ತುತಿಯಲ್ಲ ನಾನೇ ಬರೆದರೆ ಹೇಗಿರುತ್ತದೆಂಬುದನ್ನು ಚಿಂತಿಸಿದಾಗಲೇ ಹೊಳೆದ ಸೂಕ್ಷ್ಮವಿದು, ಒಂದು ಸುಸಂಸ್ಕೃತ ಚೌಕಟ್ಟಿನ ಸಾತ್ವಿಕ ಸಹಿಷ್ಣುತೆಯ ಸುರಕ್ಷತೆಯ ಬಾಲ್ಯದಿಂದಲೂ ಅನುಸರಿಸಿದ ಸಂತೃಪ್ತ ಮನಸ್ಥಿತಿಯ ಚಿಂತನೆಗೂ ಇವೆಲ್ಲವನ್ನೂ ಗೊತ್ತಿದ್ದೂ ಪರಿಸ್ಥಿತಿಯ ಅನಿವಾರ್ಯತೆಯಿಂದ ಅಧಿಗಮಿಸಿದ ಬಂಡಾಯ ಅಭಿವ್ಯಕ್ತಿಗಳ ನಡುವೆ ಸಣ್ಣ ತೆರೆಯೊಂದಿರತ್ತೆ ತಿಳಿವಿನ ಶುದ್ಧ ನಿಷ್ಕಲ್ಮಶ ಮನಸ್ಸಿಗೆ ಮಾತ್ರಾ ಅರಿವಿಗೆ ಬರುವಂತಹುದು, ಇವೆಲ್ಲವನ್ನೂ ಕ್ರೋಢಿಕರಿಸಿ ಸಮಗ್ರವಾಗಿ ಅವಲೋಕಿಸಿದರೆ ಇದು ವಿಜಯಾ ಅತ್ಗೆ ಕೈಲಿ ಅರಳಿದಷ್ಟೂ ಸುಮಕೋಮಲವಾಗಿ ನನ್ನಿಂದ ಸಾಧ್ಯವಾಗ್ತಿರಲಿಲ್ಲ, ಈ ಚಿತ್ರಾಳಿಂದಾದ ಇನ್ನೊಂದು ಉಪಕಾರವೆಂದರೆ ಪುರಾಣದ ಹೆಣ್ಣು ಪಾತ್ರಗಳೆಲ್ಲವನ್ನು ಕಲೆ ಹಾಕುವ  ಹುಡುಹುಡುಕಿ ಓದುವ ಅದರಲ್ಲೊಂದು ಹೊಸ ಕಾವ್ಯ ಸೃಷ್ಟಿಸುವ ತುಮುಲವೊಂದು ಹುಟ್ಟಿಕೊಂಡಿದ್ದು, ವಿಜಯಾ ಅತ್ತಿಗೆ ಯಾಕೆ ಮತ್ತಷ್ಟು ಈ ಪುರಾಣ ಪಾತ್ರಗಳ ರಚನೆಗೆ ಮನ ಮಾಡಬಾರದು??  ಯಾರಾದರೂ ಸಹೃದಯರು ಇಂತಹ ಗುಣಮಟ್ಟದ ಲೇಖಕಿಗೆ  ಒತ್ತಾಸೆಯಾದಲ್ಲಿ ಬಹುಷಃ ಅತ್ಯುತ್ತಮ ಪಾತ್ರಗಳು ಒಡಮೂಡಿಯಾವು, ********* ಪದ್ಮಜಾ ಜೋಯಿಸ್

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಶಬರಿ ಬರಗೂರು ರಾಮಚಂದ್ರಪ್ಪ                          ಜಗತ್ತಿನಾದ್ಯಂತ ಕರೋನಾ ತಂದ  ಬೀಕರ  ಆತಂಕ  ,ಸಾವು. ನೋವುಗಳ , ವಿಷಾದ , ಈ  ಭಯಗ್ರಸ್ಥ ಸನ್ನಿವೇಶದಿಂದ ಪಾರಾಗಲು  ದೇಶವಾಸಿಗಳಿಗೆ  ವಿಧಿಸಿದ  ಲಾಕ್ ಡೌನ್  ಎಂಬ ಬಂದ್  ನಿಂದಾಗಿ  ದೊರೆತ ಬಿಡುವಿನ ಸಮಯಕ್ಕೆ  ಜೊತೆಯಾದುದು ” ಶಬರಿ “_ ಎಂಬ  ಕಾದಂಬರಿ.         ಈ   ನಾಡು ಕಂಡ ಹೆಸರಾಂತ ಚಲನಚಿತ್ರ ನಿರ್ದೇಶಕರು , ನಟರೂ , ಸಾಹಿತಿಗಳೂ , ಬರಹಗಾರರೂ ಆಗಿ ಹೆಸರು ಮಾಡಿರುವ  ಹಿರಿಯರೂ ಆಗಿರುವ ಡಾ// ಬರಗೂರ್ ರಾಮಚಂದ್ರ ಪ್ಪನವರದು .     ಬರಗೂರರೆಂಬ , ಮನೋ ಆಲಯದೊಳಗೆ  ಹೆಣೆಯಲ್ಪಟ್ಟ  “ಶಬರಿ”_ ಕಾದಂಬರಿ ನನ್ನೊಳಗೆ ಅಚ್ಚೊತ್ತಿದ ಕೆಲವು ಭಾವನೆಗಳನ್ನು   ನಿಮ್ಮೊಂದಿಗೆ ಹಂಚಿಕೊಳಬಯಸುತ್ತಿದ್ದೇನೆ.    ಸಾಹಿತ್ಯ ಎಂದರೆ ಶಬ್ಧ, ಅರ್ಥ, ಭಾವ , ಬುದ್ಧಿಗಳಿಂದ  ಸಮ್ಮಿಳಿತವಾಗಿದ್ದು  , ಓದುಗನಿಗೆ  ಜ್ಞಾನ , ಆನಂದ , ಬದಲಾವಣೆ. ಮಾರ್ಗದರ್ಶನ ,  ವಿಶ್ವಾಸವನ್ನು. ನೀಡುವಂತದ್ದಾಗಿದೆ . ಮಾನವೀಯ ಮೌಲ್ಯದಾ  , ಮಾರ್ಗದರ್ಶನ ವಿಶ್ವಾಸವನ್ನು ನೀಡುವಂತದ್ದಾಗಿ ಮೌಲ್ಯಗಳ   ಮಹತ್ವವನ್ನು  ,  ಬದಲಾವಣೆಗಳ ಔಚಿತ್ಯ ವನ್ನೂ  ,ಸಮಾಜದ ಓರೆ  ಕೋರೆಗಳನ್ನು , ತಿದ್ದುವ, ಒಡಲೊಳಗಿನ ತುಮುಲಗಳನ್ನು   ಬಿಚ್ಚಿಡುವ   ನೋವುಗಳಿಗೆ , ಸಾಂತ್ವನ ,  ನೀಡುವ ,ಸರಿ ತಪ್ಪುಗಳನ್ನು ವಿವೇಚನೆಗೆ ಹಚ್ಚುವ , ಹೋರಾಟಗಳಿಗೆ ಧೈರ್ಯ ತುಂಬುವ , ಮಹತ್ವದ ಕೆಲಸಗಳನ್ನು ಸಾಹಿತ್ಯ ಮಾಡುತ್ತಾ. ,ಬಂದಿದೆ .    ಮನುಷ್ಯ , ಜಗತ್ತಿನಲ್ಲಿ ನೆಮ್ಮದಿಯಿಂದ. ಬದುಕಲು ಹಣ  ಅಂತಸ್ತು ಆಹಾರ ಸೌಲಭ್ಯಗಳಷ್ಟೇ , ಸಾಲದು , ಎಲ್ಲಕ್ಕಿಂತ ಮಿಗಿಲಾಗಿ ದೌರ್ಜನ್ಯಗಳಿಂದ ಹೊರಬರಲು , ಜಗತ್ತಿನ ಅನ್ಯಾಯಗಳನ್ನು ಬಯಲಿಗೆಳೆಯಲು  ಅಕ್ಷರ ಜ್ಞಾನ ಹಾಗೂ ಆತ್ಮವಿಶ್ವಾಸ ಬಹಳ ಮುಖ್ಯ  ಎಂಬುದನ್ನು “ಶಬರಿ”- ಎಂಬ  ಪಾತ್ರದ ಮುಖೇನ         ಬಹಳ ಅದ್ಭುತ ವಾಗಿ. ತಮ್ಮ ದಿಟ್ಟ ನಿರೂಪಣಾ ಶೈಲಿಯಿಂದ ಹೆಣೆಯುತ್ತಾ ಹೋಗಿರುವ ಪರಿ ಅದ್ವಿತೀಯವಾಗಿದೆ.        ಆ ರಾಮಾಯಣದಲ್ಲೊಬ್ಬ ಶಬರಿ  ಈ. ಕಾದಂಬರಿಯಲ್ಲೊಬ್ಬ  ಶಬರಿ   ಇಬ್ಬರ  ಪಾತ್ರಗಳಲ್ಲೂ ನೇರ ಸಹಜ ದಿಟ್ಟ ನಡೆನುಡಿಗಳು ಸಹಕಾರ  ಸಹಾಯದ ಮನೋಭಾವಗಳು, ವ್ಯವಸ್ಥೆಯನ್ನು ಧಿಕ್ಕರಿಸುವ ದೃಢತೆಗಳು ಇಬ್ಬರಲ್ಲೂ ಸಾಮ್ಯತೆ ಪಡೆದುಕೊಂಡಿವೆ.       “ನನ್ನ ದೃಷ್ಟಿಯಲ್ಲಿ ಶಬರಿ. ಒಂದು ಪಾತ್ರವಲ್ಲಾ , ಇದೊಂದು ರೂಪಕ ಈ ರೂಪಕಕ್ಕೆ ಹಿನ್ನೆಲೆಯಾಗಿ. ಬಂದಿರುವುದು ಒಂದು ಬುಡಕಟ್ಟಿನ ಬವಣೆಯ ಬದುಕು” ಎಂದು ಬರಗೂರರೇ ತಮ್ಮ “ಬರಗೂರರ ಬಯಲೊಳಗೆ”-ಎಂಬಲ್ಲಿ ನುಡಿದಿದ್ದಾರೆ .        ರಾಜಕೀಯ ಅಂತಃಕರಣವನ್ನು ಶೋಧಿಸುತ್ತಾ ಜನಸಂಸ್ಕೃತಿ  ಹಾಗೂ ಮುಗ್ಧತೆಯನ್ನು , ರೂಢಿ , ಆಚರಣೆ ,ದೇವರು ಎಂಬ ಕಲ್ಪನೆಗಳ ಮೂಲಕ ಬೆದರಿಸಿ ಸವಾರಿ ಮಾಡುವ  ವರ್ಗ . ಒಂದೆಡೆಯಾದರೆ, ಅಕ್ಷರಕಲಿಕೆಯಿಂದಾಗಿ  ಮೂಡಿದ  ಜ್ಞಾನ , ವಿಶ್ವಾಸ  , ತನ್ಮೂಲಕ  ಚರ್ಚೆ ,ಅನ್ಯಾಯಗಳ ಪರಾಮರ್ಶೆ ,,ತಮ್ಮ ಬೆವರನ್ನೇ ಹೀರಿ  ಬದುಕನ್ನು , ನರಕವಾಗಿಸ ಹೊರಟಿರುವವರ  ವಿರುದ್ಧ ಧನಿಯೇರಿಸುತ್ತಾ , ಆತ್ಮಸ್ಥೈರ್ಯ  ಪಡೆದು ಸೆಟೆದು ನಿಲ್ಲುವ ಬುಡಕಟ್ಟು ಜನಾಂಗ  ಯತ್ತೊಂದು  ವರ್ಗ . ಇಲ್ಲಿ ರಾಜಕೀಯ ಕೈಮೇಲಾಟ  ಅಮಾಯಕರ  ಹತ್ಯೆ , ಗೆ  ಇಂತಹ ಒಂದು ಗಂಭೀರ ವಿಷಯವನ್ನು  , ಅತ್ಯಂತ ಸರಾಗವಾಗಿ ಹಾಡು,ನರ್ತ ಹಾಸ್ಯ ಶೃಂಗಾರ ಕರುಣ  ಮುಂತಾದ  ನವರಸಗಳನ್ನು ಮಿಳಿತಗೊಳಿಸುತ್ತಾ  , ಎಲ್ಲಿಯೂ ಇದೊಂದು ಚಳುವಳಿಯೆಂಬ ಸುಳಿವೂ  ಮನದಲ್ಲಿ ಮೂಡದ ಹಾಗೆ  ಓದಿಸಿಕೊಂಡು ಹೋಗುವ ಇಲ್ಲಿಯ ಶೈಲಿ,  ಬರಗೂರರ ಅಭಿವ್ಯಕ್ತಿಯ ತೇಜಕ್ಕೆ ಸಾಕ್ಷಿಯಾಗಿ , ಮನಸ್ಸನ್ನು  ಸೆಳೆದಿದೆ . ಜೊತೆಗೆ ಚಲನಚಿತ್ರ ದಂತೆ ನಡುನಡುವೆ  ಸನ್ನಿವೇಶಕ್ಕೆ ತಕ್ಕಂತೆ  ಕವನಗಳು   ಜಾಗೃತಿ ಗೀತೆಗಳ  ದಂಡೇ  ಅತ್ಯಂತ ಪ್ರಬುದ್ಧ ವಾಗಿ ಮೂಡಿಬಂದಿರುವ ಪರಿ ಚಲನ  ಚಿತ್ರದ ಪ್ರಭಾವ ಇಲ್ಲಿಯೂ ಬಿತ್ತರಿಸಿದೆ ಚಿತ್ರನಿರ್ಧೇಶಕರ ನಡಿಗೆಯ ಲಕ್ಷಣವಿರುವುದು ಕಾಣಸಿಗುತ್ತದೆ .        ಹಾಗೆಯೇ ಬರಗೂರು ಬಳಸಿರುವ ಗ್ರಾಮೀಣ ಭಾಷೆಯ ಸೊಗಡು ಅತ್ಯಂತ ಸುಂದರವೂ ಮೊನಚೂ ಆಗಿ ಮೂಡಿಬಂದಿದ್ದು , ಲೇಖಕರು  ಗ್ರಾಮೀಣ ಭಾಷೆಯ ಹಿಡಿತ ಹೊಂದಿದ್ದಾರೆಂಬು ದಕ್ಕೆ  ಸಾಕ್ಷಿಯಾಗಿದೆ. ಹಾಗೂ ಅವರೆದೆಯೊಳಗೆ ಇಷ್ಟೊಂದು ಗ್ರಾಮ್ಯ ಪದಗಳು ಉಳಿದಿದೆಯೇ ಎಂದು ಅಚ್ಚರಿಯೆನಿಸುತ್ತದೆ . ರಿಯೆನಿಸುತ್ತದೆ . ಹಾಗೆ ಬಹಳ ಗಟ್ಟಿಯಾದ ಸುಂದರ ಗ್ರಾಮ್ಯ ಭಾಷೆಯನ್ನು ಮುಂದಿನ ಪೀಳಿಗೆಗೆ ಗೂ ಉಳಿಸುವ ಬೆಳಸುವ ಕಾರ್ಯಮಾಡಿದ್ದಾರೆ  .     ಇನ್ನೂ  -ಶಬರಿ :ತಿಮ್ಮರಾಯಪ್ಪ _,ಗೌರಿ ,:ಪೂಜಾರರಪ್ಪಾ , ಮೂಕ ಸಣ್ಣೀರ , ರಾಮಾಜೋಯಿಸ್ , (ಊರಗೌಡನಿಗೆ  ಸಲಹೆಗಾರ), ನರಸಿಂಹರಾಯಪ್ಪ:ಸಾವಿತ್ರಮ್ಮ (ಊರು ಗೌಡ, ಗೌಡತಿ) , ಚಂದ್ರು ಬುಡಕಟ್ಟು ಜನರ ಸಂಬಂಧಿ  ,ಸೂರ್ಯು , ಮತ್ತು ನವಾಬ್  ಈ ಜನರ ಉದ್ಧಾರಕ್ಕಾಗಿ  ತಮ್ಮನ್ನೇ ಸವೆಸಿ ಕೊಂಡವರು  ಈ ಜನರು ಹಿಂದಿನ ಶಕ್ತಿ ಯಾಗಿ ಧ್ವನಿಯಾಗಿನಿಂತವರು .      ಇಲ್ಲಿ ಪ್ರಧಾನ ವಾಗಿ ಕಂಡುಬರುವ ಪಾತ್ರಗಳೆಂದರೆ      ಶಬರಿ ಚಂದ್ರು  ಸೂರ್ಯ , ಹುಸೇನ್  ಇಲ್ಲಿಯ  ಜನರನ್ನು, ಎಚ್ಚರಿಸಿ ವಿದ್ಯೆ ಕಲಿಸಿ, ಅವರ, ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತು ತಮ್ಮನ್ನೇ ಉರಿಸಿಕೊಂಡು ಬೆಳಕಾಗುತ್ತಾ ಬಂದು ,ಕ್ರಿಯಾರೂಪಕಗಳಾಗಿರವ  ಪಾತ್ರಗಳು , ಹಾಗೂ ಕಥಾ ನಾಯಕ , ನಾಯಕಿಯರಾಗಿದ್ದಾರೆ.          ಶಬರಿ ಕಥೆ ಪ್ರಾರಂಭವಾಗುವುದು ‌ಸಿಂಹಾವಲೋಕನ ಕ್ರಮದಿಂದ ,. ಬುಡಕಟ್ಟು ಸಮುದಾಯದಲ್ಲಿ ಹೆಚ್ಚೆಂದರೆ ಮೂವತ್ತು ಗುಡಿಸಲುಗಳು ,  ಊರಿನ ಹೊರಗೆ ಸ್ವಲ್ಪ ದೂರದಲ್ಲಿವೆ  ,ಆಚಾರ ವಿಚಾರಗಳಲ್ಲಿ ವಿಚಿತ್ರ ಸಂಪ್ರದಾಯ ಅದನ್ನು ಚಾಚೂ ತಪ್ಪದೆ  ಪಾಲಿಸುತ್ತಿದ್ದಾರೆ. ಈ ಆಚರಣೆಗಳಿಗೆ ವಕ್ತಾರರಂತೆ ಪೂಜಾರಪ್ಪಾ ಇದ್ದಾನೆ . ಇವನು ಗೌರಿಯ ತಂದೆ . ಈತನ ಮಾತೇ ವೇದವಾಕ್ಯ , ಇವನನ್ನು ಬಿಟ್ಟರೆ ತಿಮ್ಮರಾಯಪ್ಪ , ಹಟ್ಟಿಯ ಹಿರಿಯ ನಿಯತ್ ಗಾರ , ಹದ್ದು ಮೀರದ ಮಾತು ನಡವಳಿಕೆ . ಇವನ  ಮಗಳೇ ಶಬರಿ  ತಾಯಿಯಿಲ್ಲದ ಇವಳು ತಂದೆಯ ಆಣತಿಯಂತೆ ಬೆಳೆದವಳು . ರಾಮಾಯಣ ದ ಶಬರಿ ಕಥೆಕೇಳಿದ್ದ  ತಿಮ್ಮರಾಯಿ  ಶಬರಿಯಂತೆ ತಾಳ್ಮೆಯಿಂದ , ನೀತಿ ನಿಷ್ಠೆ ಇಟ್ಕೊಂಡು  ಬಾಳಿದ್ರೆ ಒಳ್ಳೇದಾಗ್ತದೆ ಎಂದು  ತನ್ನ  ಜನಗಳಿಗೆ ನಿಯತ್ತಿನ ತಾಳ್ಮೆಯ ಕಥೆ  ಹೇಳುತ್ತಾ , ತಾನೂ ಅದನ್ನೇ ನಂಬಿ , ಪಾಲಿಸ್ತಾ ತನಗಿಷ್ಟವಾದ ಶಬರಿ ಹೆಸ್ರೇ  ಮಗಳಿಗೂ ಕರೆದಾತ  ಸುತ್ತಲೂ ಝೇಂಕರಿಸಿದ  ಮಳೆಮೋಡ ,ಕಾರೆಂಬ ಕತ್ತಲು  ಮಿಂಚು ಫಳಫಳನೆ ಹೊಳೆದು ಮರೆಯಾಗುತ್ತಿದೆ , ಹುಚ್ಚೀರ ಮಳೆ ಬರುವ ಸೂಚನೆಯನ್ನು ಕೈ ಭಾಷೆಯ ಮೂಲಕವೇ ತಿಳಿಸುತ್ತಾ ಒಳ ಕರೆಯುತ್ತಿದ್ದಾರೆ  ಒಳಗೆ ನಡಿಯೆಂದು ಸನ್ನೆ ಯಲಿ ಹೇಳುತ್ತಿದ್ದಾನೆ , ಶಬರಿಯ ಮನೆ ಮನಸು ಎರಡಕ್ಕೂ  ,ಅಮಾವಾಸ್ಯೆ ಕವಿದಿದೆ . ಇಡೀ ಹಟ್ಟಿ ಮೌನವಾಗಿ ಸೂತಕದ ಛಾಯೆ ಆವರಿಸಿದೆ . ” ಅತ್ರೆ ಸತ್ತವ್ರು , ಬತ್ತಾರೇನ  ,ಸ್ಯಬರಿ ನಿಮ್ಮಪ್ಪಾನೇ ಹೇಳ್ತಿರಲಿಲ್ವಾ , ಒಳ್ಳೇ ದಿನಕ್ಕೆ ಕಾಯಬೇಕು ಅಂತಾ “- ಶಬರಿ ಅಂದ್ಮೇಲೆ. ಕಾಯೋದ್  ತಾನೇ . ನೀನೇ ಕಾಯದಿದ್ರೆ  ಹ್ಯಾಂಗೆ ಎಂದು ಹೇಳ್ತಾ ಎಲ್ರೂ  ಗುಡಿಸಲು ಸೇರಿಕೊಂಡ್ರು .    ಅಲ್ಲುಳಿದವರು ಮಾತನಾಡಬಾರದ ಹುಚ್ಚೀರ. ಶಬರಿ  . ಒಡಲೊಳಗಿನ ಮಗು ಮೂವರೇ . ಕತ್ತಲನ್ನು ಸೀಳಿಕೊಂಡು ಬರುವ ಗುಡುಗು ಮಿಂಚು  , ಆ ಮಿಂಚು ಬೆಳಕಂತೆ ಇವಳು ಬಾಳಲ್ಲಿ ಬೆಳದಿಂಗಳಾಗಿ ಬಂದ ಸೂರ್ಯ , ಬರುವನೇ  ದೂರಕ್ಕೆ ದಿಟ್ಟಿಸುವಳು ಆ ಸೂರ್ಯ ಅದೆಷ್ಟು ದಿನಗಳಾಗಿದ್ದವು ಹೋಗಿ , ಇಂದಾರಾ  ಬಂದಾನಾ , ದೂರದಲ್ಲೂ ಯಾರೂ ಬರುವ ಸುಳಿವಿಲ್ಲಾ ಸಪ್ಪಳವೂ ಇಲ್ಲಾ . ‌ಸೂರ್ಯ ಬಂದೇ ಬರುವನು ವಸಿ ಕಾಯಬೇಕು  , ಮಗಾ , ಆ ಶಬರವ್ವನ ತರಾ ಅಪ್ಪನ  ಮಾತುಗಳು , “- ನೆನಪುಗಳು ಬದಕ ನೆಕ್ಕಲಾರಂಬಿಸಿದವು .        ಇಂತದ್ದೇ ಮಳೆಯ ರಾತ್ರಿಯಲೊಮ್ಮೆ ಸೂರ್ಯನೊಂದಿಗೆ  ಏಕಾಂತದ ಮಾತು , ನಮ್ಮ ಮಗುವಿಗೆ ಏನ್ ಹೆಸರಿಡಾನಾ ? ಈಗ್ಲೇ ಯಾಕಾ ಆ ಮಾತು ? ಹಂಗದ್ರೆ ಯೋವಾಗಾದ್ರೂ ಇಡೋದೇ ತಾನೆ , ಈಗ್ಗೆ ಅನ್. ಕಂಡ್ರೆ.  ತಪ್ಪೇನು  ಅಂಬ್ತ ?  ಗಂಡೂ ಹೆಣ್ಣು ಎರಡ್ಕೂ ಹೊಂದಿಕೆ ಆಗೋಹಂಗೇ  ತೇಜ್ ಅಂತಾ ಇಡಾನಾ , ಆಗಬಹುದಾ ಹಂಗಾದ್ರೆ ಏನಾ ? ಇಂತಾ ಎಸ್ರು ನಾ ಕೇಳೇ ಇಲ್ಲಾ ? ‌ಪಳ  ಪಳ  ಅಂತ ಹೊಳೆಯುತ್ತಲ್ಲಾ ಅದು , ತೇಜ   ಸೂರ್ಯನ್ ಬೆಳಕಿದ್ದಂಗೆ  ಹಂಗಾರೆ ಅದೇ ಇರ್ಲಿ ಸೂರ್ಯಂಗೂ ಚಂದಾಗಿ ಹೊಂದಾಣಿಕೆ   ಆಗ್ತದಾ  .ಹೂ ಅದೇ ಇರ್ಲಿ ಆಟೆಯಾ :: ಅದಿರಲಿ ಗಂಡೇ ಹುಟ್ಟಬೇಕಲ್ಲಾ. ನಕ್ಕಿದ್ದ ಸೂರ್ಯ  ಇಂತದ್ದೆ ರಾತ್ರಿಯಲಿನಡೆದ ಮಾತುಕತೆ .         ಈಗ ಎಲ್ಲವೂ ಗೌಜಲಾಗಿದೆ  , ತಿಮ್ಮರಾಯನ  ಅಂತಿಮ ಕಾರ್ಯ ಮುಗಿಸಿ ಬಂದಿದಾಳೆ , ತಾಳಿಕಟ್ಟಿದ  ಚಂದ್ರು ಬುಡಕಟ್ಟಿನವರು  ಪಾಲಿಸಿಕೊಂಡು  ಬಂದ ಸಂಪ್ರದಾಯ ವಾದ , ಮದುವೆಯಾದ ಹೆಣ್ಣು ಮಗಳು ಮೊದಲ ರಾತ್ರಿ ಯನ್ನು , ದೇವಾಲಯ ದಲ್ಲಿ. ದೇವರೊಂದಿಗೆ ಕಳೆಯಬೇಕು , ಈ ಅಲಿಖಿತ ಕಾನೂನು ಚಂದ್ರನೊಳಗೆ ಕೆಂಡದುಡೆಯಾಗಿ  ಪುಟಿದು  , ರಹಸ್ಯ ಭೇದಿಸಲು ತೀರ್ಮಾನಿಸಿದ ಮೊದಲ ರಾತ್ರಿ ದೇವಾಲಯ ಹೊಕ್ಕ ಚಂದ್ರು ,ದೇವಾಲಯದಲ್ಲಿ  ಕೊನೆಯಾದ  . ನಂಬಿಕೆ ಉಲ್ಲಂಘನೆ ರಕ್ತ ಕಾರಿ  ಕೊನೆಯಾದ ನೆಂಬ  ಭಯ  ಬಿತ್ತಲಾಗುತ್ತದೆ . ಮದುವೆ ದಿನವೇ ಶಬರಿ ವಿಧವೆ .       ಚಂದ್ರು ವಿನ ಮದುವೆಯಂದೇ ಬರಬೇಕಿದ್ದಾ ಗೆಳೆಯ ಸೂರ್ಯಾ  ಕಾರಣಾಂತರದಿಂದ ಎರಡು ದಿನ ತಡವಾಗಿ ಬಂದು  ಚಂದ್ರುವಿನ  ಗೆಳಯನೆಂಬುದ ಸಾಕ್ಷೀಕರಿಸಿ ಶಬರಿಯ ಮನೆಯಲ್ಲೇ ಉಳಿದು ಮನೆಯವನೆ ಅಷ್ಟೇ ಏಕೆ  ಹಟ್ಟಿಯವನೇ ಆಗಿ ನಿಂತು ಬದಲಾವಣೆ ಯು ಕನಸಿನೊಂದಿಗೆ   ರಾತ್ರಿ ಶಾಲೆ  ಅಕ್ಷರ ಜ್ಞಾನ ನಂಬಿಕೆ , ವಂಚನೆ , ಹಕ್ಕು ಹಾಡು ಎಲ್ಲಾ ಬದಲಾವಣೆ ತಂದು ವಿಶ್ವಾಸ ಮೂಡಿಸಿ ಹೋರಾಟದ  ಶಕ್ತಿ ತುಂಬಿ . ನಿಂತು ಕಥೆ  ಮುಂದುವರಿಯುವ  ಪರಿಗೆ  ಓದುಗ ಫಿದಾ ಆಗುವಂತೆ ನಿರುಪಿಸಿರುವ ರೀತಿಗೊಂದು ಹ್ಯಾಟ್ಸ್ ಆಫ್ ಹೇಳಲೇಬೇಕು . ಹಾಗೆ ಮುಂದುವರಿದಿದೆ .   ಹಾಗೆಯೇ ಮತ್ತೊಂದು ಮಹತ್ತರ ನಂಬಿಕೆ ಬದಲಾಗುವ ಸನ್ನಿವೇಷವೆಂದರೆ  ಅಂತರ್  ಧರ್ಮೀಯ ವಿವಾಹ   ಅದೂ ಬುಡಕಟ್ಟು ಜನರ ವಕ್ತಾರನಂತೆ ಇದ್ದ ಪೂಜಾರಪ್ಪನ ಮಗಳು ಗೌರಿ  ನವಾಬನನ್ನು ಪ್ರೇಮಿಸಿ ಸಂಪ್ರದಾಯ ದಿಕ್ಕರಿಸಿದಾಗ ವಿಧಿಯಿಲ್ಲದೆ ಒಪ್ಪುವ ಸನ್ನಿವೇಶ  ಮೊದಲ ರಾತ್ರಿ ದೇವರೊಂದಿಗೆ ಇರಬೇಕೆಂಬ ಕಾನೂನು ಮುರಿದು ಜಯಶಾಲಿ ಗಳಾಗಿದ್ದು . ಇದು ಊರಗೌಡನ ಮರ್ಮ ಎಂಬುದನ್ನು , ಚಂದ್ರು, ಸತ್ತದ್ದು  ರಕ್ತಕಾರಿಯಲ್ಲಾ ,ದೇವಾಲಯದಲ್ಲಿ ಇದ್ದ ಊರಗೌಡ ನರಸಿಂಹನಿಂದ  ,ಎಂದು ಹೇಳುತ್ತಾ ,ಎಲ್ಲವನ್ನೂ ಹಾಳೆಯಲ್ಲಿ ಬರೆದು ,  ಎಲ್ಲರ  ಕಣ್ಣು ತೆರೆಸಿ ದ್ದು .  ಕಾದಂಬರಿಗೊಂದು ಹೊಸ ತಿರುವು  ನೀಡುವಂತೆ ಬದಲಾವಣೆ  ಸ್ವೀಕರಿಸುವ  ಸಮುದಾಯ . ಇವರ ಒಗ್ಗಟ್ಟೀಗೆ ಬೆದರಿ ಬೆಪ್ಪಾದ  ಗೌಡ  ಜೋಯಿಸರು .     ಹೀಗೆ ಕಥೇ ಸಾಂಗೋಪ ಸಾಂಗವಾಗಿ ಸಾಗಿದೆ , ಕುತೂಹಲ ಹಿಡಿದಿಡುವಲ್ಲಿ ಯಶಸ್ವಿ ಯಾಗಿ ಓದಿಸಿಕೊಂಡು ಸಾಗಿ ಕೊನೆಯಲ್ಲಿ , ಕರುಳು ಕಿತ್ತಂತೆ ಸಂಕಟದ ಅಂತ್ಯ ಕಂಡಿದೆ .  ನೀವೊಮ್ಮೆ ಓದಿ ಅನುಭವಿಸಿ (ಕಾಡಿಸುತ್ತದೆ) .  ಇಲ್ಲಿ ಬರುವ ಒಂದಷ್ಟು ಪಾತ್ರಗಳು ನಂಟು ಹೇಗೆ ಎಲ್ಲಿಂದ  ಹೇಗೆ ಸೇರಿಕೊಂಡವು , ಇದಾವ ಸಂಘಟನೆ , ಬುಡಕಟ್ಟಿನ ಇವರ ನಡುವಿನ ಸಾಮರಸ್ಯ ಕ್ಕೆ  .ಕಾರಣವೇನು ಎಂಬುದರ

ನಾನು ಓದಿದ ಪುಸ್ತಕ Read Post »

ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಎರಡನೆ ಅದ್ಯಾಯ ಗಜಲ್ ನಡೆದು ಬಂದ ಹಾದಿ ಯಾವುದೇ ಒಂದು ಸಾಹಿತ್ಯದ ಪ್ರಕಾರವೇ ಆಗಲಿ ಅದರ ಗುಣ ಲಕ್ಷಣಗಳನ್ನು ಅರಿಯುವ ಮೊದಲು ಅದು ನಡೆದು ಬಂದ ಹಾದಿ, ಅರ್ಥ ಮತ್ತು ಇತಿಹಾಸವನ್ನು ತಿಳಿದುಕೊಳ್ಳಬೇಕಿರುವುದು ಅತಿ ಅಗತ್ಯವಾದ ಮೊದಲ ಸಂಗತಿಯಾಗಿದೆ. ಗಜಲ್ ಪದದ ಅರ್ಥ ಮೂಲತಃ ಅರಬ್ಬೀ ಶಬ್ದವಾದ ಗಜಲ್, ಆ ಭಾಷೆಯಲ್ಲಿ ಗಜಲ್ ಎಂದರೆ “ನಲ್ಲೆಯೊಂದಿಗಿನ ಸಂವಾದ”. ಆ ಸಂವಾದ ಯಾವುದೇ ತೆರನಾದರೂ ಆಗಿರಬಹುದು. ವಿಶೇಷವೆಂದರೆ ಆಗ ಗಂಡಸರು ಮಾತ್ರ ಗಜಲ್ ಬರೆಯಬೇಕಿತ್ತು. ಆದರೆ ಕಾಲಕ್ರಮೇಣ ಅಲ್ಲಲ್ಲಿ ಮಹಿಳೆಯರು ಬರೆದರೂ ಸಹ ಅದು ಗಂಡಿನ ಭಾವನೆ ಹೊಮ್ಮಿಸುವ ಕಾವ್ಯ ಧ್ವನಿ ಆಗಿರುತ್ತಿತ್ತು ಅದಕ್ಕೆ ಏನೋ ಬರೆಯುವನು ನಲ್ಲನೇ ಆದ್ದರಿಂದ ಇಲ್ಲಿ ನಲ್ಲ ಎನ್ನುವ ಪದ ಯಾವಾಗಲೂ ಮರೆಯಾಗಿ ಇರುತ್ತಿತ್ತು. ಇಲ್ಲಿ ಅತಿ ಹೆಚ್ಚು ಮಹತ್ವ ಪಡೆಯುವುದು ಅವನ ಅನುರಾಗ, ಮೋಹ, ಶೃಂಗಾರ ಪ್ರೇಮ, ವಿರಹದಂತಹ ಸಂಗತಿಗಳು.ಆದ ಕಾರಣ ಇವು ಮೋಹದ ಪದ್ಯಗಳು ಹೌದು, ಪ್ರೇಮಗೀತೆಯೂ ಹೌದು ಜೊತೆಜೊತೆಗೆ ವಿರಹದ ಹಾಡುಗಳು ಸಹ ಹೌದು ಅದೇ ಗಜಲ್ ಎಂದರೆ ಪಾರ್ಸಿ ಭಾಷೆಯಲ್ಲಿ ಜಿಂಕೆ ಎಂದರ್ಥ. ತನ್ನದೇ ಆದ ಜಗತ್ತನ್ನು ಹೊಂದಿರುವ ಮನ ಬಂದಂತೆ ವಿಹರಿಸುವ ಯಾವುದೇ ಅಡೆತಡೆಗಳಿಲ್ಲದೆ ಎಲ್ಲೆಂದರಲ್ಲಿ ನೆಗೆಯುವ ಜಿಂಕೆಯ ಮನಸ್ಸು ಮತ್ತು ಅದು ಕೊನೆಯ ಕ್ಷಣದಲ್ಲಿ ಸಹ ಹೊರಡಿಸುವ ವಿವಿಧ ಸ್ವರಗಳ ಸಾರವೇ ಇಲ್ಲಿ ಗಜಲ್. ಇಲ್ಲಿ ಗಜಲನ್ನು ಜಿಂಕೆಗೆ ಸಮೀಕರಿಸಿ ಹಲವಾರು ವ್ಯಾಖ್ಯಾನಗಳನ್ನು ನೀಡಲಾಗುತ್ತದೆ. ಗಜಲ್ ಎಂದರೆ ಪಾರ್ಸಿ ಭಾಷೆಯ ಇನ್ನೊಂದು ಅರ್ಥದಲ್ಲಿ ಕಸ ಗುಡಿಸುವ, ಪಾತ್ರೆ ಉಜ್ಜುವವರ ಹಾಡು! ನಮ್ಮ ಜನಪದರು ಕೆಲಸ ಮಾಡುವಾಗ ಗೀತೆ ಕಟ್ಟಿ ಹಾಡುತ್ತಿದಂತೆ ಪಾರ್ಸಿಯಲ್ಲಿ ಮನೆ ಕೆಲಸದವರು ಶ್ರೀಮಂತರ, ರಾಜರ ಮನೆಯಲ್ಲಿ ಕೆಲಸ ಮಾಡುವಾಗ ಹಾಡುತ್ತಿದ್ದ ಸಾಮಾನ್ಯ ಹಾಡುಗಳೇ ಅಲ್ಲಿಯ ಅರಸೊತ್ತಿಗೆ ತಲುಪಿ ಬೇರೊಂದು ಆಕಾರ ಪಡೆದವು ಎನ್ನುವುದು ಇದರ ಹಿಂದಿರುವ ವಿಷಯ.. ಗಜಲ್ ಬೆಳೆದ ರೀತಿ ಅರಬ್ಬೀ ಭಾಷೆಯಲ್ಲಿ ತನ್ನ ಮೂಲವನ್ನು ಹೊಂದಿರುವ ಗಜಲನ ಉಗಮವು ಆಸ್ತಾನದ ಸಭಿಕರು ತಮ್ಮ ರಾಜನನ್ನು, ಯುದ್ದೋತ್ಸಾಹಿಗಳನ್ನು, ದಾರ್ಶನಿಕತೆಯನ್ನು ತುಂಬಿ ಹೊಗಳುತ್ತಿದ್ದ ನವರಸಗಳಿಂದಲೇ ಶೃಂಗಾರಗೊಂಡಿದ ಕಸೀದ್ ಎನ್ನುವ ಕಾವ್ಯ ಪ್ರಕಾರದಿಂದ ವಿಕಾಸಗೊಂಡಿತು ಎಂದು ತಿಳಿದು ಬರುತ್ತದೆ. ಕಸೀದನ ತಷಬೀಬ್ ಅಲ್ಲಿ ಇರುವಂತೆ ಪೀಠಿಕೆ, ದ್ವಿಪದಿ, ಶೇರ್, ಮಕ್ತಾ, ಮತ್ಲಾ, ಕಾಫಿಯಾ, ರಧೀಪ್ ಮೊದಲಾದ ಕಾವ್ಯ ಲಕ್ಷಣಗಳನ್ನು ಸಹ ಗಜಲ್ ಒಳಗೊಂಡು ಬೆಳವಣಿಗೆ ಹೊಂದಿದೆ. ಆದರೆ ತದ ನಂತರದ ಯುದ್ಧ ಮತ್ತು ಅರಬ್ಬರ ಗಂಭೀರ ನಡೆಯ ಕಾರಣ ಅರಬ್ಬೀ ಭಾಷೆಯಲ್ಲಿ ಗಜಲ್ ಸಂಕುಚಿತಗೊಂಡರೂ ಅದೇ ಕಾಲಘಟ್ಟದಲ್ಲಿ ಪಾರ್ಸಿ ಭಾಷೆಯಲ್ಲಿ ಮತ್ತಷ್ಟು ಬೆಳೆದು ಬಂತು. ರಾಗ ತಾಳ ಲಯಬದ್ಧವಾಗಿ ಹಾಡುತ್ತಿದ್ದ ಚಾಮ್ ಎನ್ನುವ ಮತ್ತೊಂದು ಕಾವ್ಯ ಪ್ರಕಾರ ಆಗ ಇರಾನ್ ರಾಷ್ಟ್ರದಲ್ಲಿ ಅತ್ಯಂತ ಪ್ರಚಲಿತದಲ್ಲಿ ಇತ್ತು. ಸರಳವಾಗಿ ಸಹಜವಾಗಿ ಗಂಡು ಹೆಣ್ಣು ಎಂಬ ಭೇದ ಭಾವವಿಲ್ಲದೆ ಅಲ್ಲಿನ ಗ್ರಾಮೀಣ ಜನರು ಕಟ್ಟಿ ಹಾಡುತ್ತಿದ್ದ ಈ ಗೀತೆಗಳು ಬಹು ಜನಪ್ರಿಯಗೊಂಡಿದವು. ನಿಜವಾದ ಗಜಲನ ಆರಂಭ ಆಗ ಇರಾನ್ ಇರಾಕ್ ಮೊದಲಾದ ಅರಬ್ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಪರ್ಕವನ್ನು ಹೊಂದಿದ ಭಾರತ ಕೊಡುವ, ತಗೊಳ್ಳುವ ಪದ್ಧತಿಯಿಂದಾಗಿ ವರ್ತಕರು ಗ್ರಾಹಕರ ಸಂಬಂಧದ ಮೂಲಕ ಉರ್ದು ಭಾಷೆಗೆ ಸಹ ಗಜಲ್ ತನ್ನ ಪ್ರಭಾವವನ್ನು ಚಾಚಿಕೊಂಡಿತು. ವಿಶಿಷ್ಟ, ವಿಭಿನ್ನ ಅಂಶಗಳಿಂದಾಗಿ ಭಾರತೀಯರ ಮನಸೂರೆಗೊಂಡ ಗಜಲ್ ಉರ್ದು ಅಲ್ಲಿ ಬೆಳೆದು ಬಂದ ರೀತಿಯೇ ಅಮೋಘ. ಹಿಂದೆಂದೂ ಕಂಡಿರದ ಗಜಲ್ ತನ್ನ ನಿಜವಾದ ಆರಂಭವನ್ನು ಉರ್ದು ಭಾಷೆಯಲ್ಲಿ ಪಡೆದ ಪರಿಣಾಮ ಅದರ ಖದರೇ ಬದಲಾಗಿ ಹೋಯಿತು. ಹಂತಹಂತವಾಗಿ ಕಡಿಮೆ ಸಮಯದಲ್ಲಿಯೇ ಗಜಲ್ ತನ್ನಲ್ಲಿ ಭಾರತೀಯ ನಡೆ, ಸಂಸ್ಕೃತಿ, ರೀತಿ ನೀತಿ ಮೊದಲಾದವುಗಳನ್ನು ತುಂಬಿಕೊಂಡಿತು. ಇದಕ್ಕೆ ಜೊತೆಯಾದ ಉರ್ದು ಭಾಷೆ ತನ್ನ ಮೃದು, ಮಧುರತೆಯಿಂದಾಗಿ ಗಜಲ್ ಅತ್ಯುನ್ನತ ಮಟ್ಟ ತಲುಪಲು ಪೂರಕ ವಾತಾವರಣ ನಿರ್ಮಿಸಿತು. ತದ ನಂತರ ಹಿಂತಿರುಗಿ ನೋಡದ ಗಜಲ್ ಶರವೇಗವನ್ನು ಪಡೆದುಕೊಂಡು ವಿಶ್ವದ ವಿವಿಧ ದೇಶಗಳಿಗೆ ತನ್ನ ಜನಪ್ರಿಯವನ್ನು ಪಸರಿಸಿತು. ಇದರಿಂದ ಆಕರ್ಷಿತರಾದ ಜನ ತಮ್ಮ ದೇಶಿಯ ಭಾಷೆಗಳಲ್ಲಿಯೇ ಗಜಲ್ ಕೃಷಿ ನಡೆಸತೊಡಗಿದರು. ಇಂಗ್ಲಿಷ್, ಪ್ರೆಂಚ್, ಸ್ಪಾನಿಷ್, ಮೊದಲಾದ ಪಾಶ್ಚಿಮಾತ್ಯ ಭಾಷೆಗಳಲ್ಲಿಯೂ ಸಹ ರಚನೆಗೊಂಡ ಗಜಲ್ ಕನ್ನಡ ಸೇರಿದಂತೆ ಮರಾಠಿ, ಹಿಂದಿ, ಭೋಜಪುರಿ, ತೆಲುಗು ಎನ್ನದೇ ಸಾಕಷ್ಟು ಭಾಷೆಗಳಲ್ಲಿ ಹೊಸ ಕಾವ್ಯ ಪ್ರಕಾರವಾಗಿ ಗಜಲ್ ಮೂಡಿ ಬಂದು ಮತ್ತಷ್ಟು ಯಶಸ್ವಿಯಾಗಿ ದಾಪುಗಾಲಿಟ್ಟಿತು. ********** ಬಸವರಾಜ ಕಾಸೆ

ಗಝಲ್ ಲೋಕ Read Post »

You cannot copy content of this page

Scroll to Top