ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಜ್ಞಾನಪೀಠ ವಿಜೇತರು

ಗಿರೀಶ್ ಕಾರ್ನಾಡ್ ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ , ಚಿತ್ರ ನಟ ಮತ್ತು ನಿರ್ದೇಶಕ. ಕನ್ನಡ, ಹಿಂದಿ, ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಮ್ಮ ಅಭಿನಯದಿಂದ ವಿಶಿಷ್ಠ ಮುದ್ರೆ ಒತ್ತಿರುವ ಇವರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳನೇ ಸಾಹಿತಿ. ಪ್ರಗತಿಶೀಲ ಸಮತಾವಾದ ಮತ್ತು ಜಾತ್ಯಾತೀತತೆಯನ್ನು ಪ್ರತಿಪಾದಿಸುವ ಇವರು ಕೆಲವು ಬಾರಿ ತಮ್ಮ ನೇರ ನುಡಿಗಳ ಮೂಲಕ ಹಲವು ವಿವಾದಗಳಲ್ಲಿ ಸಿಲುಕಿದ್ದುಂಟು… 1938 ಮೇ 19 ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಇವರು ಜನಿಸಿದರು. ಇವರ ತಂದೆ ರಘುನಾಥ ಕಾರ್ನಾಡ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಕೃಷ್ಣಾಬಾಯಿ ಬಾಲ್ಯ ವಿವಾಹವಾಗಿ ಒಂದು ಮಗುವಾದ ನಂತರ ವಿಧವೆಯಾಗಿದ್ದರು. ರಘುನಾಥರ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೇ ಸಲ್ಲಿಸುವಾಗ ಪರಿಚಯವಾದ ಇವರನ್ನು ಆಗಿನ ಸಮಾಜಿಕ ಕಟ್ಟುಪಾಡುಗಳ ವಿರುದ್ಧವಾಗಿ ರಘುನಾಥರು ಕೈಹಿಡಿದರು. ನಂತರ ಈ ದಂಪತಿಗಳ ಮೂರನೇ ಮಗನಾಗಿ ಗಿರೀಶ್ ಜನಿಸಿದರು… ಬಾಲ್ಯದಲ್ಲಿ ಕೆಲಕಾಲ ಮರಾಠಿ ಶಿಕ್ಷಣ ಪಡೆದ ನಂತರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಧಾರವಾಡದ ಬಾಸೆಲ್ ಮಿಶನ್‌ನಲ್ಲಿ ಹೈಸ್ಕೂಲಿನಲ್ಲಿ ಓದಿದ ನಂತರ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು ಗಿರೀಶ್ ಕಾರ್ನಾಡ್ ರು. ನಂತರ ರ್ಹೋಡ್ಸ್ ಸ್ಕಾಲರ್‌ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ರಾಜಕೀಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1963 ರಲ್ಲಿ ಚರ್ಚಾಕೂಟದ ವೇದಿಕೆಯಾದ ಆಕ್ಸ್‌ಫರ್ಡ್ ಯುನಿಯನ್ ಆಧ್ಯಕ್ಷರಾದವರು… ಚೆನ್ನೈನಲ್ಲಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‌ನಲ್ಲಿ ಸುಮಾರು 7 ವರ್ಷ ಕೆಲಸ ಮಾಡಿದ ಇವರು ನಂತರ ಅಮೇರಿಕಾದ ಚಿಕಾಗೋ ಯುನಿವರ್ಸಿಟಿಯಲ್ಲಿ ಒಂದು ವರ್ಷ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಇವೆಲ್ಲರ ಮಧ್ಯೆಯೇ ನಾಟಕ ಬರಹದಲ್ಲಿ ತೊಡಗಿದ್ದರು. ಇವರು ಕೆಲಕಾಲ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಮತ್ತು ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ ಗಿರೀಶ್ ಕಾರ್ನಾಡ್ ರು… 1980 ರಲ್ಲಿ ಡಾ.ಸರಸ್ವತಿ ಗಣಪತಿಯವರನ್ನು ಮದುವೆಯಾದರು. ದಂಪತಿಗಳಿಗೆ ಒಬ್ಬ ಪುತ್ರ ಮತ್ತು ಪುತ್ರಿಯರುಂಟು. 2011 ರಲ್ಲಿ ತಮ್ಮ ಆತ್ಮಕಥೆಯಾದ `ಆಡಾಡತ ಆಯುಷ್ಯ’ ವನ್ನು ರಚಿಸಿದರು… ಇವರು ಬರೆದ `ನಾಗಮಂಡಲ’ ಒಂದು ಜನಪದ ಕಥೆಯಾಗಿದ್ದು, ಇವರಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ ದೊರೆಕಿಸಿ ಕೊಟ್ಟಿತು. ಇದು ಮನು‍ಷ್ಯನ ಕಾಮವನ್ನು ಬಹುರೂಪಿ ಸರ್ಪದೊಂದಿಗೆ ಸಮೀಕರಿಸಿ ಬರೆದಂತ ನಾಟಕವಾಗಿತ್ತು. ಇದು ಮುಂದೆ 1997 ರಲ್ಲಿ ಟಿ.ಎಸ್.ನಾಗಭರಣರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿತು… ಮಹಾಭಾರತದ ಪಾತ್ರ ‘ಯಯಾತಿ’ ಮೇಲೆ ಹೊರಬಂದ ನಾಟಕ ಯಯಾತಿ’ ವಿವಾಹಿತ ರಾಜನ ಅತೃಪ್ತ ಕಾಮ ವಾಸನೆ ಮತ್ತು ಅತಿಲೋಲುಪತೆಯ ಮೇಲೆ ಬೆಳುಕು ಚೆಲ್ಲಿತು. ನೆಹುರು ಕಾಲದ ಅತಿಯಾದ ಆದರ್ಶವಾದ ಮತ್ತು ಅದು ಹತಾಶೆಯಲ್ಲಿ ಪರ್ಯವಸಾನಗೊಂಡ ವ್ಯಥೆಯನ್ನು ‘ತುಘಲಕ್’‌ನೊಂದಿಗೆ ಸಮೀಕರಿಸಿ ಐತಿಹಾಸಿಕತುಘಲಕ್’ ನಾಟಕ ರಚಿಸಿದರು… ಕಥಾಸರಿತ್ಸಾಗರದ ಕಥೆಯಧಾರಿತ `ಹಯವದನ’ ಮನುಷ್ಯನ ಅಪೂರ್ಣತೆ , ಪೂರ್ಣತೆಯೆಡಗಿನ ಬಯಕೆಯ ಮೇಲೆ ಬೆಳಕು ಚೆಲ್ಲಿತು… ನಂತರ ಬಂದ ‘ತೆಲೆದಂಡ’ 12 ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಾದಿ ಪ್ರಮಥರ ಮೇಲೇ ನಡೆದಂತ ದಬ್ಬಾಳಿಕೆ, ಕಗ್ಗೋಲೆಗಳನ್ನು ತೆರೆದಿಟ್ಟಿತು. ಇವರ `ಅಂಜು ಮಲ್ಲಿಗೆ’ ನಾಟಕ ಸಹೋದರ- ಸಹೋದರಿಯ ನಡುವೆ ಮೂಡುವ ನಿಷಿದ್ಧ ಪ್ರೇಮದೆಡೆಗೆ ಬೆಳಕು ಚೆಲ್ಲಿತ್ತದೆ. ಹೀಗೆ ಕಾರ್ನಾಡರ ನಾಟಕ ಪ್ರಪಂಚ ಬದುಕಿನ ಮತ್ತು ಮನುಷ್ಯನ ಜೀವನ ಘಟ್ಟದ ಹಲವಾರು ಆಯಾಮಗಳ ಪರಿಚಯ ಮಾಡಿಸಿಕೊಡುತ್ತವೆ… 1970 ರಲ್ಲಿ ತೆರೆಕಂಡ ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತ `ಸಂಸ್ಕಾರ’ ಚಿತ್ರದ ಮೂಲಕ ನಟನೆಗೆ ಇಳಿದರು. ಈ ಚಿತ್ರದಲ್ಲಿನ ಪ್ರಾಣೇಶಾಚಾರ್ಯ ಪಾತ್ರವನ್ನು ತುಂಬಾ ಪ್ರಬುದ್ಧರಾಗಿ ನಿಭಾಯಿಸಿದರು ಗಿರೀಶ್ ಕಾರ್ನಾಡ್. ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕೂಡ ಇವರೇ ಬರೆದಿದ್ದರು… ನಂತರ ಶಂಕರನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್‌’ ಕಿರುತೆರೆ ಧಾರಾವಾಹಿಯಲ್ಲಿ ನಟಸಿದರು. ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ವಂಶವೃಕ್ಷ’ ವನ್ನು ತೆರೆಗೆ ತರುವ ಮೂಲಕ ಚಿತ್ರ ನಿರ್ದೇಶನಕ್ಕೂ ಕಾಲಿಟ್ಟರು. ಈ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಕುವೆಂಪುರವರಕಾನೂರು ಹೆಗ್ಗಡತಿ’ ಕೃತಿಯನ್ನು ಪರದೆಗೆ ತಂದ ಕೀರ್ತಿ ಗಿರೀಶ್ ಕಾರ್ನಾಡರದು. ನಂತರ ಹಲವಾರು ಚಿತ್ರಗಳನ್ನು ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಇವರು. ತಮ್ಮ ನಟನೆಯಿಂದಲೂ ಪ್ರಸಿದ್ಧರಾಗಿರುವ ಇವರು ಹಲವು ಕನ್ನಡ,ತೆಲಗು ಮತ್ತು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ… ಇಂತಹ ಗಿರೀಶ್ ಕಾರ್ನಾಡ್ ಜೂನ್ 10, 2019 ರಂದು ಬೆಂಗಳೂರಿನ ಲ್ಯಾವಲ್ಲೆ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು..! ******************** ಕೆ.ಶಿವು ಲಕ್ಕಣ್ಣವರ

ಜ್ಞಾನಪೀಠ ವಿಜೇತರು Read Post »

ಕಾವ್ಯಯಾನ

ಕಾವ್ಯಯಾನ

ಉರಿಪಾದವ ಊರಿನಿಂತ ಹೆಜ್ಜೆಗೆ ಎಸ್.ಕೆ.ಮಂಜುನಾಥ್ ಇಟ್ಟಿಗೆ ಕಲ್ಲು ಹೊತ್ತು ಕಟ್ಟಿದ ಯಾವ ಮಹಲು ನಮ್ಮದಲ್ಲ ನೆರಳನು ನೀಡುತ್ತಿಲ್ಲ ಕೈಬೀಸಿ ಕರೆದ ನಗರ ಕತ್ತು ಹಿಡಿದು ನೂಕಿತ್ತಲ್ಲ ಹಸಿವೆಂದು ಬಂದೆವು ಹಸಿವಿಗಾಗಿ ದುಡಿದೆವು ಮತ್ತೆ ಮತ್ತೆ ಹಸಿವ ಹೊಟ್ಟೆ ಬೆನ್ನ ಮೇಲೆ ಹೊರೆಯ ಕಟ್ಟೆ ಹಸಿವಿನಿಂದ ಅಳುವ ಮಗು ಬೀದಿಬದಿಯ ಅನ್ನದೊಡೆಯ ಕಾಣದಾದನು ಎಲ್ಲಿಗೋದನು ಕರೆತಂದು ಬಿಟ್ಟ ಯಾವ ಬಸ್ಸು ರೈಲು ಕಾಣುತ್ತಿಲ್ಲ ಈ ಹೆಜ್ಜೆಗೂ ಈ ದಾರಿಗೂ ನಂಟು ಇನ್ನು ಮುಗಿದಿಲ್ಲ ಹಸಿವ ಗಂಟುಮೂಟೆ ಕಟ್ಟಿಕೊಂಡು ತಲೆಯ ಮೇಲೆ ಹೊತ್ತುಕೊಂಡು ತಾವೇ ಮಾಡಿದ ಹೆದ್ದಾರಿಯ ಮೇಲೆ ಮೈಲುಗಲ್ಲು ಎಣಿಸುತ್ತ ಹೆಜ್ಜೆ ಇಟ್ಟುಕೊಂಡು ಭಾರತ ಬರಿಗಾಲಲಿ ನಡೆಯುತ್ತಿದೆ ಬಿಟ್ಟುಬಂದ ಹುಟ್ಟಿದೂರ ದಾರಿ ಹಿಡಿದು ಹೊರಟರು ಯಾರಾದರು ಅಪ್ಪತಪ್ಪಿ ಅಲ್ಲಿ ಕೇಳದಿರಲಿ ಇವರ ಹೆಸರು (ಅಲೆಮಾರಿ ಪಾದಗಳಿಗೆ ಅರ್ಪಿತ) **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ವಿನಿ (ಬೆಂಗಳೂರು) ಮಾಮರದಲಿ ಕುಳಿತ ಕೋಗಿಲೆಯ ದನಿ ಮಧುರವಂತೆ ಗೆಳೆಯಾ ಭೃಂಗವದು ಗೂಯ್ ಎನುವ ಝೇಕಾರ ಸೆಳೆದಂತೆ ಗೆಳೆಯಾ ಭೋರೆನುವ ಜಲಪಾತದ ರಮಣೀಯ ದೃಶ್ಯವದು ಮನಮೋಹಕವಂತೆ ಕಾನನದ ರೌದ್ರ ಮೌನವದು ಎದೆನಡುಗಿಸಿದಂತೆ ಗೆಳೆಯಾ ಬೇಲೂರ ಹಳೇಬೀಡಿನ ಶಿಲ್ಪವದು ಶಿಲ್ಪಿಯ ಅದ್ಭುತ ಕೈಚಳಕವಂತೆ ಒಂದೊಂದು ಮದನಿಕೆಯರು ಸೌಂದರ್ಯದ ಪ್ರತೀಕದಂತೆ ಗೆಳೆಯಾ ಪ್ರಕೃತಿಯ ಮಡಿಲಲಿ ಮೈಮರೆತು ಸಂತಸವನು ಆಸ್ವಾದಿಸಿದಂತೆ ಹುಣ್ಣಿಮೆಯ ಪೂರ್ಣಚಂದಮನು ಸೊಗಸಾಗಿ ಕಣ್ಮನ ಸೆಳೆದಂತೆ ಗೆಳೆಯಾ ಸಪ್ತಸ್ವರಗಳ ನಾದದಲಿ ವಿಜಯಳು ದನಿಗೂಡಿಸಿದಂತೆ ಬಾಳ ಪಲ್ಲವಿಗೆ ನಿನ್ನೊಲವಿನ ಸಾಲುಗಳೆ ಭಾವಗೀತೆಯಂತೆ ಗೆಳೆಯಾ ******************

ಕಾವ್ಯಯಾನ Read Post »

ಇತರೆ

ಕವಿ-ಪರಿಚಯ

ಕಮಲಾದಾಸ್ ಶೀಲ ಮತ್ತು ಅಶ್ಲೀಲ ನಡುವಿನ ಗೋಡೆಯನ್ನು ಕೆಡುವಿದ ವಿವಾದಿತ ಮಲಯಾಳಂ ಮತ್ತು ಇಂಗ್ಲೀಷ್ ಲೇಖಕಿ ಕಮಲಾದಾಸ್..! ಕಮಲಾದಾಸ್ ರೆಂದರೆ ನಮ್ಮ ಕನ್ನಡದ ಲೇಖಕಿ ಕಮಲಾ ಹೆಮ್ಮಿಗೆಯವರಿಗೆ ಅದೆಂತದೋ ಪ್ರೀತಿ. ಈ ಲೇಖಕಿ ಕಮಲಾ ಹೆಮ್ಮಿಗೆಯವರ ಬಹುತೇಕ ಕೃತಿಗಳಲ್ಲಿ ಇದೇ ಕಮಲಾದಾಸ್ ರ ನೆರಳನ್ನು ಕಾಣಬಹುದು ಎಂಬ ಅಭಿಪ್ರಾಯ ನನ್ನದು. ಈ ಕಮಲಾ ಹೆಮ್ಮಿಗೆಯವರ ಪ್ರತಿ ಕೃತಿಗಳಲ್ಲೂ ನಾನು ಇದೇ ಕಮಲಾದಾಸ್ ರ ಛಾಪನ್ನು ಕಂಡಿದ್ದೇನೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗೆ ಹೇಳುತ್ತಲೇ ಈ ಕಮಲಾದಾಸ್ ರ ಜನ್ಮದಿನವಾದ ಮಾರ್ಚ್ 31‌ ರಂದು ಈ ಕಮಲಾದಾಸ್ ರ ಬಗೆಗೆ ಒಂದಿಷ್ಟು ಮಾಹಿತಿ ನೋಡೋಣ… ಕಮಲಾದಾಸ್ ಮಲಯಾಳಂ ಭಾಷೆಯ ಲೇಖಕಿ. ಸಾಹಿತ್ಯವನ್ನು ಬರೆಯಲು ಆರಂಭಿಸಿ ‘ಮಾಧವಿಕುಟ್ಟಿ’ ಎಂಬ ಕಾವ್ಯ ನಾಮದಿಂದ ಕಮಲಾದಾಸ್ ಕತೆಗಳನ್ನು, ಕಾದಂಬರಿಗಳನ್ನು ರಚಿಸಿದರು… ಮಲಯಾಳಂ ಸಾಹಿತ್ಯ ಜಗತ್ತಿನಲ್ಲಿ ಕತೆ, ಕಾದಂಬರಿಗಳ ಕ್ಷೇತ್ರ ಬಹಳ ವಿಶಾಲವಾದುದು. ಅತಿ ಭಾವುಕತೆಯತ್ತ ಕಿರುಗತೆಗಳು ಜಾರುತ್ತಿದ್ದ ಕಾಲದಲ್ಲಿ ಮಾಧವಿಕುಟ್ಟಿ ಎಂಬ ಕಾವ್ಯ ನಾಮದಿಂದ ಕಮಲಾದಾಸ್ ಕತೆಗಳನ್ನು ಕಾದಂಬರಿಗಳನ್ನು ರಚಿಸಿದರು. ವಿವಾದಗಳ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮನ್ನಣೆಯ ಗುರಿಯನ್ನು ತಲುಪುವಷ್ಟರಲ್ಲಿ ಕಮಲಾದಾಸ್ ಸಾಕಷ್ಟು ಮುಳ್ಳುಹಾದಿಗಳನ್ನು ತುಳಿಯಬೇಕಾಯಿತು. ಖ್ಯಾತ ಕತೆಗಾರರಾಗಿದ್ದ ವೈಕ್ಕಂಮಹಮ್ಮದ್ ಬಷೀರ್, ತಗಳಿ ಶಿವಶಂಕರ ಪಿಳ್ಳೈ, ಎಂ.ಟಿ.ವಾಸುದೇವನ್ ನಾಯರ್, ಟಿ. ಪದ್ಮನಾಭನ್ ರವರ ಜೊತೆ ಜೊತೆಗೆ ಕಮಲಾದಾಸ್ ರೂ ಬರೆಯತೊಡಗಿದರು… ಸೋದರಮಾವ, ತಂದೆ, ತಾಯಿ ಮುಂತಾದವರು ಹೇಳಿದ ದಟ್ಟವಾದ ಜೀವನಾನುಭವಗಳಿಗೆ ಅವರು ಅಕ್ಷರ ರೂಪವನ್ನು ಕೊಟ್ಟರು. ಪ್ರಣಯ, ಪ್ರೀತಿ, ಪ್ರೇಮ, ವಾತ್ಸಲ್ಯ ಹಾಗೂ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ಕುರಿತಾದ ಅವರ ರಚನೆಗಳು ಈಗಲೂ ಪ್ರಸ್ತುತ. ಕೇರಳದ ಗ್ರಾಮೀಣ ಬದುಕಿನ ಮುಗ್ಧತೆಗಳನ್ನು ಅವರು ತಮ್ಮ ಕತೆಗಳಲ್ಲಿ ಹಿಡಿದಿಟ್ಟಿದ್ದಾರೆ. ನಗರದ ಸಂಘರ್ಷಯುಕ್ತ ಆತಂಕಕಾರಿ ಬದುಕನ್ನು ಮನುಷ್ಯ ಮನಸ್ಸುಗಳ ಸಂಕೀರ್ಣತೆಗಳನ್ನು ಅವರು ತೆರೆದಿಟ್ಟಿದ್ದಾರೆ… ಬಾಲ್ಯ ಕಾಲವನ್ನು ಕೇರಳ ಮತ್ತು ಕಲ್ಕತ್ತಾದಲ್ಲಿ ಅವರು ಕಳೆದರು. ಮಾತೃಭಾಷೆ ಮಲಯಾಳಂನ್ನು ಮಮೆಯಲ್ಲಿಯೇ ಕಲಿತರು. ಕಲ್ಕತ್ತಾದ ಬದುಕಿನ ಹಿನ್ನೆಲೆಯಲ್ಲಿ ಅವರು ರಚಿಸಿದ `ಸಮ್ಮರ್ ಇನ್ ಕಲ್ಕತ್ತಾ’ ಎಂಬ ಇಂಗ್ಗ್ಲಿಷ್ ಕವನ ಸಂಕಲನದಿಂದ ಅವರು ಜಗತ್ತಿನ ಸಾಹಿತ್ಯಾಸಕ್ತರ ಗಮನ ಸೆಳೆದರು. ಲೈಂಗಿಕತೆಯನ್ನು ಮತ್ತು ಸಲಿಂಗ ಕಾಮವನ್ನು ಹಸಿಹಸಿಯಾಗಿ ಬರೆದ ಆಧುನಿಕ ಲೇಖಕಿಯರಲ್ಲಿ ಕಮಲಾದಾಸ್ ಮೊದಲಿಗರೆಂದು ಸಾಹಿತ್ಯ ತಜ್ಞರ ಅಭಿಪ್ರಾಯವಾಗಿದೆ… ಅವರು ಬರೆದ ‘ಎಂಡೆಕತ’ (ನನ್ನ ಕತೆ) ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ ಕೇರಳದ ಸಾಹಿತ್ಯ ಪ್ರಪಂಚ ಅವರನ್ನು ಕಟು ಮಾತುಗಳಿಂದ ಟೀಕಿಸಿತ್ತು. ಅದು ಇಂಗ್ಲಿಷ್ ನಲ್ಲಿ ಬರೆದಾಗ ಪುನಃ ವಿವಾದಗಳಿಗೆ ಸಿಲುಕಿದ್ದರು. ಇವೆರಡು ಪುಸ್ತಕ ರೂಪದಲ್ಲಿ ಹೊರಬಂದಾಗ ಪ್ರತಿಭಟಿಸಿದ ಮಡಿವಂತರೇ ಅದನ್ನು ಕೊಳ್ಳಲು ಮುಗಿಬಿದ್ದರಂತೆ… ಇವರ ಮೈಸ್ಟೋರಿ’ ಕೃತಿಯು ಹದಿನೈದು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ. ಈ ಕೃತಿ ತನ್ನ ಆತ್ಮ ಕತೆಯೆಂದು ಹೇಳಿ ಕಮಲಾದಾಸ್ ಅದರ ಮಾರಾಟವನ್ನು ಹೆಚ್ಚಿಸಿಕೊಂಡಿದ್ದರು. ಬಹಳ ವರ್ಷಗಳ ನಂತರಮೈಸ್ಟೋರಿ’ ತನ್ನ ಕಲ್ಪನೆಯ ಕೂಸೆಂದೂ, ಹಣಕ್ಕಾಗಿ ಬರೆದೆನೆಂದೂ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದರು‌ ಕಮಲಾದಾಸ್ ರು… ಇಂಗ್ಲಿಷ್ ನಲ್ಲಿ ಕವಿತೆಗಳನ್ನು ಬರೆದು ಹೊಸತೊಂದು ತರಂಗವನ್ನೇ ಜಗತ್ತಿನಾದ್ಯಂತ ಸೃಷ್ಟಿಸಿದ್ದ ಕವಯತ್ರಿ ಕಮಲಾದಾಸ್. `ಕನ್ ಫೆಷನಲ್ ಪೋಯೆಟ್ರಿ’ ಎಂಬ ನವೀನ ಮಾದರಿಯ ಪದ ಸಂಕುಲ, ಶೈಲಿಗಳು, ಹೆಣ್ಣಿನ ಮನಸ್ಸಿನ ಒಳತೋಟಿಯನ್ನು ಅನಾವರಣಗೊಳಿಸಿದೆ.. ಶೀಲ ಮತ್ತು ಅಶ್ಲೀಲಗಳ ನಡುವಿನ ಗೋಡೆಯನ್ನು ಅವರು ತಮ್ಮ ಬರಹಗಳಿಂದ ಕೆಡವಿ ಹಾಕಿದ್ದಾರೆ.`ಕವಿತೆಯೆಂದರೆ ಹಸುಗೂಸಿನಂತೆ’ ಎಂದು ಅವರು ಟಿ ವಿ ಸಂದರ್ಶನದಲ್ಲಿ ಹೇಳಿದ್ದರು… ಕವಿತೆಗಳನ್ನು ಅವರು ಸತ್ಯಕ್ಕೆ ಹೋಲಿಸುತ್ತಿದ್ದರು. ಸತ್ಯವನ್ನು ತಡೆಯುವುದು ಎಂದರೆ ಹೆರಿಗೆ ನೋವಿನಿಂದ ಬಳಲುತ್ತಿರುವ ಹೆಂಗಸಿಗೆ,`ನೀನು ಹಡೆಯಬಾರದು’ಎನ್ನುವಂತಿರುತ್ತದೆ ಎಂಬುದು ಅವರ ನಿಷ್ಟುರ ಅಭಿಪ್ರಾಯವಾಗಿತ್ತು… ೧೯೯೯ರ ಅಂತ್ಯದಲ್ಲಿ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಗುರುವಾಯೂರ್ ಕೃಷ್ಣನ ಪರಮ ಭಕ್ತೆಯಾಗಿದ್ದ ಕಮಲಾದಾಸ್ ರವರು ಮತಾಂತರಗೊಂಡ ಕೂಡಲೆ ಕಮಲಾದಾಸ್ ‘ಸುರೈಯಾ’ (ನಸುಕಿನ್ ನಕ್ಷತ್ರ) ಎಂದು ಹೆಸರನ್ನು ಬದಲಾಯಿಸಿಕೊಂಡರು… ನನ್ನ ಕೃಷ್ಣ ನನ್ನ ಜೊತೆಯಲ್ಲೇ ಬಂದು ಮಹಮ್ಮದನಾಗಿದ್ದಾನೆ. ‘ಗುರುವಾಯೂರಿನಲ್ಲಿ ಈಗ ಕೃಷ್ಣ ಇಲ್ಲ.’ ಎಂದು ಹೇಳಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದರು. ಕೇವಲ ಬರವಣಿಗೆಯಲ್ಲಷ್ಟ್ರೇ ಅಲ್ಲ ಸಾರ್ವಜನಿಕ ಬದುಕಿನಲ್ಲಿಯೂ ಅವರು ಹೊಸ ಹಾದಿಯನ್ನು ಹುಡುಕಿದ್ದರು. ೧೯೮೪ರ ಲೋಕಸಭಾ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು… ಆದರೆ ಅವರ ಸಾಹಿತ್ಯದ ಜನಪ್ರಿಯತೆ ಲೋಕಸಭೆ ಪ್ರವೇಶಿಸುವುದಕ್ಕೆ ಸಹಕಾರಿಯಾಗಲಿಲ್ಲ. ತನ್ನ ಪಾಲಿಗೆ ಬಂದ ಕೌಟುಂಬಿಕ ಆಸ್ತಿಯನ್ನು ಅವರು ಕೇರಳ ಸಾಹಿತ್ಯ ಆಕಾಡೆಮಿಗೆ ಬಳುವಳಿಯಾಗಿ ನೀಡಿದ್ದರು. ದೀನದಲಿತರು, ಅನಾಥ ಮಕ್ಕಳೆಂದರೆ ಅವರಿಗೆ ಅತೀವ ಅಕ್ಕರೆ. ತಮ್ಮ ಮೂವರು ಮಕ್ಕಳ ಜೊತೆಯಲ್ಲಿ ಇಬ್ಬರು ಅನಾಥ ಮಕ್ಕಳನ್ನೂ ದತ್ತು ತೆಗೆದುಕೊಂಡು ಪ್ರೀತಿ, ವಾತ್ಸಲ್ಯಗಳಿಂದ ಬೆಳೆಸಿ ಬದುಕಿನಲ್ಲಿ ಒಳ್ಳೆಯ ಸ್ಥಾನ ದೊರಕಿಸಿಕೊಟ್ಟಿದ್ದರು… ಭಾರತ ಸರಕಾರ ನೋಬೆಲ್ ಪ್ರಶಸ್ತಿಗೆ ಕಮಲಾದಾಸ್ ಹೆಸರನ್ನು ಶಿಫಾರಸು ಮಾಡಿತ್ತು. ಹ್ಜೈಸ್ಕೂಲ್ ಶಿಕ್ಷಣವನ್ನು ಪೂರೈಸುವ ಮೊದಲೆ‌ (೧೫ನೆ ವಯಸ್ಸಿಗೆ) ಅವರಿಗೆ ಮದುವೆ ಮಾಡಲಾಗಿತ್ತು. ಮುಂಬಯಿ, ಕಲ್ಕತ್ತಾ, ದೆಹಲಿಗಳಲ್ಲಿ ಅವರು ಬದುಕು ಕಂಡಿದ್ದರು… ಯಾವುದೇ ವಿಶ್ವವಿದ್ಯಾ ಲಯದ ಪದವಿಯನ್ನು ಪಡೆಯದ ಕಮಲಾದಾಸ್ ರ ಕೃತಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಪುಸ್ತಕಗಳಾಗಿವೆ. ‘ಸಮ್ಮರ್ ಇನ್ ಕಲ್ಕತ್ತಾ’, ಆಲ್ಫಬೆಟ್ ಆಫ್ ಲಸ್ಟ್, `ದಿ ಡಿಸೆಂಡೆನ್ಸ್, ಓಲ್ಡ್ ಪ್ಲೇ ಹೌಸ್’ ಕಲೆಕ್ಟೆದ್ ಪೋಯಮ್ಸ್, ಓನ್ಲಿ ದಿ ಸೋಲ್ ನೋಸ್ ಹೌ ಟು ಸಿಂಗ್, ಮುಂತಾದವುಗಳು ಅವರ ಇಂಗ್ಲಿಷ್ ಕೃತಿಗಳು… ಮಲಯಾಳಂನಲ್ಲಿ ಅವರು ಒಟ್ಟೂ ೨೪೫ ಕತೆಗಳನ್ನೂ,೧೦೩ ಕವಿತೆಗಳನ್ನೂ, ೧೧ ಕಾದಂಬರಿಗಳನ್ನೂ, ೩ ನಾಟಕಗಳನ್ನೂ, ೨ ಆತ್ಮಕತೆಗಳನ್ನೂ, ೨ ಪ್ರವಾಸ ಕತೆಗಳನ್ನೂ, ೧೫೩ ಲೇಖನಗಳನ್ನೂ ಮತ್ತು ಎಂಟು ಟಿಪ್ಪಣಿಗಳನ್ನೂ ಕಮಲಾದಾಸ್ ಬರೆದಿದ್ದಾರೆ. ಅವರ ಅನೇಕ ಕತೆ, ಕಾದಂಬರಿಗಳು ಚಲನಚಿತ್ರಗಳಾಗಿ ಯಶಸ್ವಿ ಕಂಡಿವೆ… ಅವರಿಗೆ ದೊರೆತ ಪ್ರಶಸ್ತಿಗಳು ಅನೇಕ. ೧೯೬೩ರಲ್ಲಿ ಪೆನ್ ಅವಾರ್ಡ್, ೧೯೬೪ರಲ್ಲಿ ಏಷ್ಯನ್ ಪೋಯೆಟ್ರಿ ಪ್ರೈಸ್, ೧೯೬೫ರಲ್ಲಿ ಕೇಂಟ್ ಅವಾರ್ದ್, ೧೯೬೭ರಲ್ಲಿ ಕೇರಳ ಸಾಹಿತ್ಯ ಆಕಾಡೆಮಿ ಅವಾರ್ದ್, ೧೯೮೫ರಲ್ಲಿ ಆಶಾನ್ ವರ್ಲ್ಡ್ ಅವಾರ್ಡ್, ೧೯೮೫ರಲ್ಲಿ ಕೆಂದ್ರ ಸಾಹಿತ್ಯ ಆಕಡೆಮಿ ಅವಾರ್ಡ್, ೧೯೮೭ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ನಿಂದ ಡಾಕ್ಟರೇಟ್, ೨೦೦೧ರಲ್ಲಿ ಕೇರಳ ಆಕಾಡೆಮು ಫೆಲೊಶಿಪ್, ಇತ್ಯಾದಿಗಳು… ಇದರ ಜೊತೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ, ವಯಲಾರ್ ರಾಮವರ್ಮ ಪ್ರಶಸ್ತಿಗಳು ಅವರಿಗೆ ಸಂದಿವೆ… ಕಮಲಾದಾಸ್ ಅವರು ಕೇರಳ ಫೋರೆಸ್ಟ್ ಬೋರ್ಡ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕೇರಳ ಶಿಶು ಸಂರಕ್ಷಣಾ ಸಮೀತಿಯ ಸದಸ್ಯೆ, ಸಾಹಿತ್ಯ ಅಕಾದೆಮಿಯ ಉಪಾಧ್ಯಕ್ಷೆ, ಇಲ್ಲಸ್ತ್ರೇಟೆಡ್ ವೀಕ್ಲಿ ಪತ್ರಿಕೆಯ ಕವನ ವಿಭಾಗದ ಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದರು… ಬದುಕಿನುದ್ದಕ್ಕೂ ವಿವಾದಿತ ಲೇಖಕಿಯಾಗಿದ್ದ ಕಮಲಾದಾಸ್ ಮತಾಂತರಗೊಂಡು ಕೇರಳದಲ್ಲಿ ನೆಲೆಸಿದಾಗ ಬಹಳ ವಿರೋಧವನ್ನು ಎದುರಿಸಬೇಕಾಯಿತು. ಇದರಿಂದ ಬೇಸತ್ತು ಕೇರಳ ತೊರೆದು ತನ್ನ ಕಿರಿಯ ಮಗನೊಂದಿಗೆ ಪೂನಾದಲ್ಲಿ ನೆಲೆಸಿದ್ದರು. ೩೧-೫-೨೦೦೯ರಲ್ಲಿ ಅವರು ನಿಧನರಾದಾಗ ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಕೇರಳದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು… ಇಂತಹ ಮಹತ್ವದ ಲೇಖಕಿಯ ಸಮಗ್ರ ಕತೆಗಳೂ ಮತ್ತು ಸಮಗ್ರ ಕಾದಂಬರಿಗಳೂ ಪುಸ್ತಕ ರೂಪದಲ್ಲಿ ಈಗ ಕನ್ನಡಿಗರಿಗೆ ದೊರೆಯುತ್ತಿದೆ.‌ ಕನ್ನಡಕ್ಕೆ ಅನುವಾದಿಸಿದವರು ಕೆ.ಕೆ.ಗಂಗಾಧರರವರು ಕಮಲಾದಾಸ್ ರ ಸಮಗ್ರ ಕಾದಂಬರಿಗಳನ್ನು ಅನುವಾದಿಸಿದವರು… ಹೀಗಿದೆ ಕಮಲಾದಾಸ್ ರ ಬದುಕು ಮತ್ತು ಬರಹ‌ ಅಂಥ ಹೇಳುತ್ತಲೇ ನನ್ನ ಬರಹವನ್ನು ಮುಗಿಸುತ್ತೇನೆ… *********** ಕೆ.ಶಿವು.ಲಕ್ಕಣ್ಣವರ ‌‌‌‌‌ ‌ ‌‌‌‌ ‌‌‌ —

ಕವಿ-ಪರಿಚಯ Read Post »

ಕಾವ್ಯಯಾನ

ಕಾವ್ಯಯಾನ

ಹಾರು ಗರಿ ಬಿಚ್ಚಿ ಡಾ.ಗೋವಿಂದ ಹೆಗಡೆ ಏನಾದರೂ ಆಗಬೇಕು ಬಾಂಬಿನಂತಹ ಏನೋ ಒಂದು ಸ್ಫೋಟಿಸಿ ಹೊಗೆಯಲ್ಲಿ ಅಥವಾ ಅಗ್ನಿಗೋಲದಲ್ಲಿ ಮರೆಯಾಗಿ ಬೇಡ, ಚಾಚಿದ ಕಾಲಿಗೆ ಅಲ್ಲೆಲ್ಲೋ ಮರಳಲ್ಲಿ ಓಡುವ ಇರುವೆ ಕಚ್ಚಿ ‘ಹ್ಹಾ’ ಎಂದು ಏನಾದರೂ ನಡೆಯಲಿ ಇಲ್ಲಿ ಈ ನಿಷ್ಕ್ರಿಯತೆಯನ್ನು ಹೇಗೆ ಸಹಿಸುವುದು +++ ನಿಷ್ಕ್ರಿಯತೆ ನಿರಾಕರಣೆಯೇ ಅನುಭವವೇ ಆಭಾಸವೇ ಅಲ್ಲೆಲ್ಲೋ ಕೋಗಿಲೆ ಕೂಗಿದೆ ಹಕ್ಕಿ ಜೋಡಿ ಸಂಜೆ ಆಗಸವ ಸೀಳಿ ಹಾರಿವೆ ಎಲೆಯೊಂದು ಟಕ್ಕೆಂದು ತೊಟ್ಟು ಕಳಚಿದೆ ತುಸು ಆಲಿಸಿದರೆ ಕೊಂಬೆಯೊಳಗೆ ಹರಿವ ಜೀವರಸದ ಸದ್ದೂ ಕೇಳಬಹುದು ಆದರೂ ಐಸಿಯು ನಲ್ಲಿರುವ ಬಾಲೆಯ ಸ್ತಬ್ಧ ಕಣ್ಣುಗಳ ಶೂನ್ಯ ನೋಟ ಮಾತ್ರ… +++ ಸೂರ್ಯ ಎಂದಿನಂತೆ ಬೆಳಗುತ್ತ ಈ ಗಿಡ ಮರ ಎಲ್ಲ ಹಸಿರುಟ್ಟು ಬೀಗುತ್ತ ಹೊಂಗೆ ಮತ್ತಾವುದೋ ಗಿಡ ಹೂತೇರು ಕಟ್ಟಿ ನಾನು ನಾಲ್ಕು ಗೋಡೆಗಳ ಒಳಗೆ ಹರಿವ ನೀರಿಗೆ ಬಿಚ್ಚಿ ಹಾರಲಾರೆ ಗುಡ್ಡ ಹತ್ತಲಾರೆ ಮರ ಏರಲಾರೆ ಬಯಲಲ್ಲಿ ಕುಣಿಯಲಾರೆ ಆಜೀವ ಶಿಕ್ಷೆಗೆ ಪಕ್ಕಾದ ಕೈದಿಯಂತೆ ಗೋಡೆ ಬಾಗಿಲುಗಳ ನಿರುಕಿಸುತ್ತ.. +++ ಬೋಳು ರಸ್ತೆಗಳು ಹೆಜ್ಜೆ ಸದ್ದಿಗೆ ತವಕಿಸಿರಬಹುದು ಪುಚ್ಚ ಕುಣಿಸಿ ಹಾರುವ ಹಕ್ಕಿ ಓಡುತ್ತ ಏರುವ ನಡುವೆ ಗಕ್ಕನೆ ನಿಂತ ಅಳಿಲಿಗೆ ಇರಬಹುದು ಅಗತ್ಯ ನನ್ನ ನೋಟವೊಂದರ ಸಾಂಗತ್ಯ ಮತ್ತೆ ಚಕ್ರ ತಿರುಗಿ ರಸ್ತೆ ಕಲಕಲ ಎನ್ನುವಾಗ ಮರೆಯದೆ ಐಸಿಯು ನ ಆ ಬಾಲೆಯ ಕೈಯಲ್ಲಿ ಕೈಯಿಡಬೇಕು ಹೂ ರೆಪ್ಪೆಗಳ ಮೇಲೆ ಹಗೂ‌♪ರ ಬೆರಳಾಡಿಸಿ ಪಿಸುಗುಡಬೇಕು “ಏಳು ಮಗೂ, ಸರಿದಿದೆ ಮೋಡ ಕಾದಿದೆ ಬಾನು ಹೋಗು ಹಾರು ಗರಿ ಬಿಚ್ಚಿ…” **********

ಕಾವ್ಯಯಾನ Read Post »

ಇತರೆ

ಪ್ರಬಂಧ

ಕರೊನ-ನೆಗಡಿ ಜ್ಯೋತಿ ಡಿ.ಬೊಮ್ಮಾ ಈಗ ಎಲ್ಲರೂ ಅಸ್ಪೃಶ್ಯರೆ ,ಒಬ್ಬರಿಂದ ಒಬ್ಬರು ದೂರ ಇರುವ ಅಸಹಾಯಕತೆ ತಂದೊಡ್ಡಿದ ಆ ಒಂದು ಚಿಕ್ಕ ವೈರಾಣುವಿಗೆ ಇಡೀ ಮನುಕುಲವೇ ಅಂಜಿ ನಡುಗುತ್ತಿದೆ. ಆಪ್ತವಾಗಬೇಕಿದ್ದ ಬಾಂಧವ್ಯಗಳು ಸಂಬಂಧಗಳು ಕರಗುತ್ತಿವೆ.ದೈಹಿಕ ಅಂತರ ಮನದಂತರವನ್ನು ದೂರಗೊಳಿಸುತ್ತಿದೆ ಒಬ್ಬರನ್ನೊಬ್ಬರು ಅನುಮಾನದಿಂದ ನೋಡಿಕೊಳ್ಳುತ್ತ ,ತಮ್ಮವರೊಡನೆಯೂ ಆಗಂತುಕರಂತೆ ಬದುಕುವಂತೆ ಮಾಡಿದ ಈ ಸಂದರ್ಭ ಯಾತಾನಾಮಯವಾಗಿದೆ. ಮನೆಯಲ್ಲಿ ಎಲ್ಲರೊಡನೆ ಬೆರೆತು ಊಟ ತಿಂಡಿ ಮಾಡುತಿದ್ದರೂ ಒಳಗೆಲ್ಲ ಎಕಾಂಗಿ ಭಾವ ,ಎನೋ ತಳಮಳ ಹೇಳಿಕೊಳ್ಳಲಾಗದ ಅಸಹಾಯಕತೆ ,ಹಿಂದೆಂದೂ ಕಾಡಿರದ ಅನಿಶ್ಚಿತತೆ ಮನ ಕೊರೆಯುವಂತೆ ಮಾಡುತ್ತಿದೆ. ಇಡೀ ದೇಶವೆ ಒಂದು ಕಾರಾಗೃಹವಾಗಿ ಎಲ್ಲರ ಸ್ವಾತಂತ್ರ್ಯ ಹರಣವಾಗಿ ಈಗ ಅಕ್ಷರಶಃ ಎಲ್ಲರೂ ಕೈದಿಗಳೆ. ಆಪತ್ತು ತಮ್ಮ ಮೇಲೆ ಯಾವಾಗ ಎರಗುವದೋ ಎಂಬ ಭಿತಿಯಲ್ಲಿ ದಿನಗಳನ್ನು ದೂಡುತ್ತ ಮತ್ತೆ ಮೊದಲಿನಂತೆ ಬದುಕು ಬಂಡಿ ಸಾಗಿಸುವ ದಿನಗಳ ಕನಸು ಕಾಣುತ್ತ ,ಕ್ಷಣಕೊಮ್ಮೆ ಬಣ್ಣ ಬದಲಾಯಿಸುವ ಭಾವನೆಗಳೊಂದಿಗೆ ಬೆರೆಯುತ್ತ ಇನ್ನೆಷ್ಟು ದಿನ ಹೀಗೆ ಎಂದು ಉತ್ತರವಿರದ ಪ್ರಶ್ನೆಗಳನ್ನು ಒಬ್ಬರಿಗೊಬ್ಬರು ಕೇಳುತ್ತ ದಿನ ದೂಡುವಂತಾಗಿದೆ.ಹಾಗೆ ನೋಡಿದರೆ ರೋಗ ಯಾರಿಗೂ ಹೊಸದಲ್ಲ .ರೋಗ ಇರದ ಮನುಷ್ಯ ನಿರಲು ಸಾಧ್ಯವೇ ,! ಕೆಮ್ಮು ನೆಗಡಿಯಂತ ಸಾಮಾನ್ಯ ರೋಗವೆ ರೋಕ್ಷವಾಗಿ ಬೆಳೆದು ಕಂಗೆಡುವಂತಾಗಿದೆ. ನನಗೂ ನೆಗಡಿಗೂ ಅವಿನಾಭಾವ ಸಂಬಂಧ.ವರ್ಷದ ಎಲ್ಲಾ ದಿನಗಳು ಅದು ನನಗೆ ಆಪ್ತ.ಇಷ್ಟು ವರ್ಷಗಳ ಸಂಗಾತಿಯಾದ ಅದರ ಮೇಲಿನ ಮುನಿಸು ಮಾಯವಾಗಿ ಅದರ ಉಪದ್ರವ ಸಹಿಸಿಕೊಳ್ಳುವದು ಕಲಿತಿದ್ದೆನೆ.ಹತ್ತು ಹದಿನಾರು ವಸ್ತುಗಳ ಅಲರ್ಜಿ ಇರುವ ನನ್ನ ಶರಿರಕ್ಕೆ ಆ ವಸ್ತುವಿನ ಸಂಪರ್ಕಕ್ಕೆ ಬಂದ ತಕ್ಷಣ ಸೀನುಗಳು ಜ್ಞಾಪಿಸುತ್ತವೆ .ತಕ್ಷಣವೇ ಎಚ್ಚೆತ್ತುಕೊಂಡು ಆ ವಸ್ತುವಿನಿಂದ ದೂರವಿರುತ್ತೆನೆ .ಆದರೂ ನನ್ನ ಸೀನುಗಳು ಮುನಿದು ಆ ಮುನಿಸು ಹೊರಹಾಕದೆ ಬಿಡವು . ಮೊದಮೊದಲು ನನ್ನ ಅಲರ್ಜಿ ಸೀನುಗಳನ್ನು ಗಂಭಿರವಾಗಿ ಪರಿಗಣಿಸುತ್ತಿದ್ದ ಮನೆಯವರು ಈಗೀಗ ಅದೊಂದು ಸಾಮಾನ್ಯ ಪ್ರಕ್ರಿಯೆ ಎಂಬಂತೆ ಕಾಣತೊಡಗಿದ್ದಾರೆ ಹೀಗಾಗಿ ಸೀನುಗಳು ನನ್ನ ಉಸಿರಾಟದಷ್ಟೆ ಸಾಮಾನ್ಯವಾಗಿರುವವು ನನಗೆ. ಆದರೆ ನಮ್ಮೆಜಮಾನರು ಇದಕ್ಕೆ ತದ್ವಿರುದ್ಧ ,ಒಂದೇ ಒಂದು ಸೀನು ಬಂದರು ಆಕಾಶವೆ ತಲೆ ಮೇಲೆ ಬಿದ್ದಂತೆ ಮೈ ಮುಖಕ್ಕೆಲ್ಲ ವಿಕ್ಸ ಬಳಿದುಕೊಂಡು ಮುಸುಕೆಳೆದು ಮಲಗಿಬೀಡೋರು. ಆ ರಂಪಾಟ ಮುಲುಗಾಟ ,ಮಾತ್ರೆಗಳು ಸಿರಪ್ ಗಳು, ಬಂದ ನೆಗಡಿಯನ್ನು ಆದಷ್ಟೂ ಬೇಗ ಓಡಿಸುವ ಧಾವಂತ ಆದರೂ ಜಪ್ಪಯ್ಯ ಎಂದರೂ ಜಗ್ಗದ ನೆಗಡಿ ಬಂದು ನಾಲ್ಕೈದು ದಿನ ಇದ್ದು ಆತಿಥ್ಯ ಸ್ವೀಕರಿಸಿಯೇ ಹೊಗುವದು.ಅದು ಇರುವವರೆಗೂ ಮನೆ ಒಂದು ಜಾತ್ರಯೇ ,ಬಿಸಿ ನೀರು ಕುಡಿಯುವದು ,ವಿಕ್ಸ ಹಾಕಿ ಹಬೆ ತೆಗೆದುಕೊಂಡು ಮುಖವೆಲ್ಲ ಕೆಂಪಗೆ ಮಾಡಿಕೊಂಡು ಹೋಂಕರಿಸುತ್ತ ,ಸೂರು ಹಾರಿಹೋಗುವಂತೆ ಸೀನುತ್ತ ಪರದಾಡುವದು ನೋಡಿದರೆ ನನಗೆ ಬರುವ ಸೀನುಗಳು ನಿರುಪದ್ರವಿಗಳೊ ಅಥವಾ ನಾನೇ ಅವುಗಳಿಗೆ ಒಗ್ಗಿಕೊಂಡಿರುವೆನೊ ತಿಳಿಯದು. ನೆಗಡಿ ಯಾವಾಗಲೂ ಆಪ್ತ ಕಾಯಿಲೆ ,ಒಬ್ಬರಿಗೆ ಬಂದರೆ ಮತ್ತೊಬ್ಬರನ್ನು ಸೆಳೆಯುತ್ತದೆ.ಕಣ್ಣು ಮೂಗಿನಲ್ಲಿ ಸುರಿಯುವ ನೀರನ್ನು ಸೊರ್ ಸಿರ್ ಎಂದೆನಿಸುತ್ತ ಕೆಂಪೇರಿದ ಮುಖವನ್ನು ನೋಡಿದವರು ಅಯ್ಯೊ ಎಂದು ಅನುಕಂಪ ತೊರಿಸಿ ನಮಗಾಗಿ ಮರಗುವರು ,ಅಂತಹ ಸಂದರ್ಭದಲ್ಲಿ ನಮ್ಮ ಕೆಲಸ ಕಾರ್ಯ ಗಳಿಗೂ ವಿನಾಯ್ತಿ ದೊರಕಿಸಿ ಕೊಡುವರು.ಎದುರಿನವರ ಪ್ರೀತಿಯ ಸ್ಪಂದನೆಗೆ ಮುದವಾದ ಮನ ನೆಗಡಿಯನ್ನು ಅಪಾಯ್ಯಮಾನವಾಗಿ ಅಪ್ಪಿಕೊಳ್ಳುವದು. ಕೆಲವರು ನೆಗಡಿ ಬಂದರೆ ಊಟ ತಿಂಡಿ ಬಿಟ್ಟು ಮುಷ್ಕರ ಹೂಡಿದಂತೆ ಇದ್ದು ಬಿಡುವರು.ನನಗೋ ನೆಗಡಿ ಬಂದರೆ ಬೇರೆ ದಿನಗಳಿಗಿಂತ ಹೆಚ್ಚಾಗಿ ತಿನ್ನುವ ಚಪಲವಾಗುತ್ತದೆ.ನೆಗಡಿಯಿಂದ ರುಚಿ ವಾಸನೆ ಕಳೆದುಕೊಂಡ ಗ್ರಂಥಿಗಳ ಚಿಗುರುವಿಕೆಗೆ ಹೊಸ ಬಗೆಯ ಖಾದ್ಯಗಳ ಸಮಾರಾಧನೆಯಾಗಲೆಬೇಕು .ಬೇರೆಲ್ಲಾ ರೋಗಗಳಿಗೆ ಉಟದಲ್ಲಿ ಪಥ್ಯ ಅನುಸರಿಸಿದರೆ ನೆಗಡಿಗೆ ಪಥ್ಯವೆ ಇಲ್ಲ.ಬಾಯಿ ರುಚಿ ಕೆಟ್ಟಿದೆಯೆಂದು ಹೇರಳವಾಗಿ ಉಪ್ಪು ಹುಳಿ ಖಾರದ ಅಡುಗೆಗಳು ಸಿಹಿ ಪದಾರ್ಥಗಳು ಎಗ್ಗಿಲ್ಲದೆ ಸೇವಿಸುತ್ತ ಹಾಗೆ ಸೀನುತ್ತ ,ಎಲ್ಲರಿಗೂ ನೆಗಡಿಯಾಗಿದೆ ಆರಾಮಿಲ್ಲ ಎಂದು ಹೇಳುತ್ತಲೆ ನೆಗಡಿಯನ್ನು ಪ್ರೀತಿಸುವ ಪ್ರತಿಯೊಬ್ಬರು ಇಲ್ಲಿವರೆಗೆ ನೆಗಡಿ ಒಂದು ರೋಗ ಎಂದು ಪರಿಗಣಿಸಿದ್ದೆ ಇಲ್ಲ. ಯಾವಾಗಾ ಈ ಕರೋನ ಮಾರಿ ಕಾಲಿಟ್ಟಿತ್ತೊ ನನ್ನ ಪ್ರೀತಿ ಪಾತ್ರ ನೆಗಡಿ ಎಲ್ಲರ ಕಂಗೆಣ್ಣಿಗೆ ಗುರಿಯಾಯಿತು.ಈಗ ಪ್ರತಿಯೊಬ್ಬರ ಕೆಮ್ಮು ಸೀನುಗಳು ಅನುಮಾನದಿಂದ ನೋಡುವಂತಾಗಿದೆ.ಕೆಲವೊಮ್ಮೆ ಒಗ್ಗರಣೆಯಿಂದ ಬರುವ ಸೀನುಗಳನ್ನು ಪ್ರಯತ್ನ ಪೂರ್ವ ಕವಾಗಿ ತಡೆಹಿಡಿಯುವ ಮನಸ್ಸಾಗುತ್ತಿದೆ. ಯಾರಾದರೂ ಕೇಳಿದರೆ ಅನುಮಾನ ಪಟ್ಟುಕೊಳ್ಳುವರು ಎಂಬ ಭಯದಿಂದ. ಮೊದಲೆಲ್ಲ ನೆಗಡಿಯಾದರೆ ಮನೆಯವರ ಅನುಕಂಪಕ್ಕೆ ಪಾತ್ರಳಾಗುತಿದ್ದ ನಾನು ,ಈಗ ಒಂದೇ ಒಂದು ಸೀನಿದರು ಎದುರಿನವರ ಕಣ್ಣಲ್ಲಿ ನೂರೆಂಟು ಪ್ರಶ್ನೆಗಳು ! ಅಂತಹುದರಲ್ಲಿ ಉಪದೇಶ ಬೇರೆ ,ಜಾಸ್ತಿ ಸೀನಬೇಡ ,ಯಾರಾದರು ಅಕ್ಕ ಪಕ್ಕದವರು ಕಂಪ್ಲೆಂಟ ಮಾಡಿದರೆ ಹೋಂ ಕಾರೈಂಟೈನ ನಲ್ಲಿ ಇರಬೇಕಾಗುತ್ತೆ ಎಂಬ ಅನುಮಾನ ಬೇರೆ.ಜೀವನವೆಲ್ಲ ಮನೆಯಲ್ಲೇ ಕಳೆಯುವ ನಾವು ಗೃಹಿಣಿ ಯರಿಗೆ ಮನೆ ಎಂದೂ ಬಂಧನ ಎನಿಸಿದ್ದೆ ಇಲ್ಲ. ಈಗ ಗೃಹಬಂಧನದಲ್ಲಿರುವ ಪುರುಷರಿಗೆ ಸ್ವಲ್ಪ ವಾದರೂ ಅರ್ಥ ವಾಗಿರಬೇಕು ,ದಿನವೆಲ್ಲ ಮನೆಯಲ್ಲಿ ಏನು ಮಾಡುತ್ತಿ ಎಂಬ ಪ್ರಶ್ನೆಯ ಉತ್ತರ. ಇಲ್ಲಿಯವರೆಗ ನೆಗಡಿ ಕೆಮ್ಮಿಗೆ ಪ್ರತ್ಯಕವಾದ ಔಷಧ ಲಭ್ಯವಿಲ್ಲ.ಅದು ಸರದಿಯಂತೆ ಬರುತ್ತದೆ ನಿರ್ಗಮಿಸುತ್ತದೆ. ಸಭೆ ಸಮಾರಂಭ ಜಾತ್ರಗಳಲ್ಲಿ ಹಿಂಡು ಹಿಂಡಾಗಿ ಓಡಾಡುತ್ತ ಒಬ್ಬರ ಬೆನ್ನಿಂದ ಒಬ್ಬರು ಸೀನುತ್ತ ಸಂಚರಿಸುವ ನಾವು ,ಮತ್ತೊಬ್ಬರು ಸಮೀಪವಾಗಿರುವಾಗಲೂ ದೂರ ನಿಂತು ಸೀನಬೇಕೆಂಬ ಕಲ್ಪನೆಯು ಇರದೆ ಆಕ್ಷಿಇ ..ಎಂದು ಸೀನಿದಾಗಲೂ ಇದೊಂದು ಸಾಮನ್ಯ ಪ್ರಕ್ರಿಯೆ ಎಂಬಂತೆ ನೋಡಿದ ನಮಗೆ ಈಗಿನ ಸಾಮಾಜಿಕ ಅಂತರ ಅರಗಿಸಿಕೊಳ್ಳಲು ಹಿಂಸೆಯಾಗುತ್ತಿದೆ. ಅದರೂ ಈ ಮಹಾಮಾರಿಯನ್ನು ನಿರ್ಮೂಲನೆ ಮಾಡಲು ಇವುಗಳನ್ನು ಅನುಸರಿಸದೆ ಬೇರೆ ದಾರಿಯಿಲ್ಲ. ಮತ್ತೊಬ್ಬರಿಂದ ನಮಗೆ ರೋಗ ಅಂಟಬಾರದು ಎಂದು ತಗೆದುಕೊಳ್ಳುವ ಮುಂಜಾಗ್ರತೆಯೊಂದಿಗೆ ನಮಗೆ ಬಂದಿದ್ದನ್ನು ಮತ್ತೊಬ್ಬರಿಗೆ ಹರಡದಂತೆ ಎಚ್ಚರವಹಿಸುವದು ತುಂಬಾ ಮುಖ್ಯವಾಗಿದೆ. **********************

ಪ್ರಬಂಧ Read Post »

ಕಾವ್ಯಯಾನ

ಕಾವ್ಯಯಾನ

ಕ್ವಾರಂಟೈನ್ ದಿನಗಳಿವು ಶಾಲಿನಿ ಆರ್. ಅಮ್ಮನ ಆ ಮೂರು ದಿನ ಕಾಗೆ ಮುಟ್ಟಿದೆ ಮುಟ್ಟ ಬೇಡ ಎಂದು ದೂರ ಕುಳಿತ ಮುಟ್ಟಿನ ಆ ದಿನ, ಇಂದು ನಾನೆ ಯಾರನ್ನು ಮುಟ್ಟಿಸಿಕೊಳದೆ ದೂರದಿ ನಿಂತು  ದಿನ ದೂಡುತಿರು ಕ್ವಾರಂಟೈನ್ ದಿನ, ತರಕಾರಿ ಕೊಳ್ಳುವಾಗ ಮಾರುವವನಿಗಿಂತ ಮಾರು ದೂರ ನಿಂತು ಕೊಳ್ಳುವ ಕ್ವಾರಂಟೈನ್ ದಿನ, ದಿನಸಿ ಸಾಮಾನಿನ ಖರೀದಿಗೂ ಬಂದಿದೆ ಕೊಡುವ ಕೊಳ್ಳುವವನ ಮಧ್ಯೆ ಲಕ್ಣ್ಮಣರೇಖೆಯ ಕ್ವಾರಂಟೈನ್ ದಿನ ಪ್ರತಿಯೊಬ್ಬರ ಮಧ್ಯೆದಲ್ಲೂ ಸಿಲುಕಿ ನಲುಗುತಿದೆ ಮುಗಿಯಲಾರದೆ ನರಳುತಿದೆ ಕ್ವಾರಂಟೈನ್ ದಿನ, ಹತ್ತಿರದವರನ್ನು ದೂರವಿರಿಸಿ ದೂರ ಇರುವವರನ್ನು ದೂರವೇ ಬಯಸಿ ಮರೆಯಿತಿರುವ ಕ್ವಾರಂಟೈನ್ ದಿನ., ಕಸ ಗುಡಿಸುವಾಗ ನೆಲ ಒರೆಸುವಾಗ ಪಾತ್ರೆಗಳ ತೋಳೆಯುವಾಗೆಲ್ಲ ಕೆಲಸದವಳ  ನೆನಪು ಇದು ಕ್ವಾರಂಟೈನ್ ದಿನ ಎಲ್ಲರ ಮನೆಯ ತಾರಸಿಯ ಮೇಲೆ ನಕ್ಕು ನಲಿಯುತಿದೆ ಮುಟ್ಟಿಯು ಮುಟ್ಟಲಾರದಂತಹ ಕ್ವಾರಂಟೈನ್ ದಿನ, ಮುಟ್ಟಿದ  ಪ್ರತಿ ತಪ್ಪಿಗೂ ಪದೇ ಪದೇ ಸ್ಯಾನಿಟೈಜರ್ ಉಪಯೋಗಿಸಿ ಮತ್ತೆ ಮತ್ತೆ ಕೈ ತೊಳೆವ ಕ್ವಾರಂಟೈನ್ ದಿನ ಮುಗಿಯದ ಮಕ್ಕಳ ಕಲರವ ಮುಳುಗಿದೆ ಮನೆಯು ಇವರ ಆಫೀಸಿನ ತರಹ ಅಡುಗೆ ಮನೆಗೆ ಬಿಡುವಿಲ್ಲವಂತೆ ಇದು ಕ್ವಾರಂಟೈನ್ ದಿನ, ಇದ್ದ ಅಲ್ಪ ಸ್ವಲ್ಪ ನನ್ನ ಗಳಿಗೆಗಳು ಇಲ್ಲವಾದ ದಿನ ಮಳೆಹನಿಗೆ ಕೈಒಡ್ಡದ ಹಸಿರ ಹವೆಗೆ ಮೈತಾಗದ ಇದು ಕ್ವಾರಂಟೈನ್ ದಿನ… ಆದರೂ ನನ್ನ ನಾ ಅರಿವ ನನ್ನವರೆಲ್ಲ ಹಗಲಿರುಳು ಒಂದಾಗಿ , ಒಂದೇ ಸೂರಿನಡಿಯಲಿ ನಕ್ಕು ನಲಿದು, ತುತ್ತು ಉಣಿಸಿ ಮೆರೆಯುತಿರುವ ಅಭಿಮಾನದ ಕ್ವಾರಂಟೈನ್ ದಿನ… ********** ಕಸ ಗುಡಿಸುವಾಗ ನೆಲ ಒರೆಸುವಾಗ ಪಾತ್ರೆಗಳ ತೋಳೆಯುವಾಗೆಲ್ಲ ಕೆಲಸದವಳ  ನೆನಪು ಇದು ಕ್ವಾರಂಟೈನ್ ದಿನ ಎಲ್ಲರ ಮನೆಯ ತಾರಸಿಯ ಮೇಲೆ ನಕ್ಕು ನಲಿಯುತಿದೆ ಮುಟ್ಟಿಯು ಮುಟ್ಟಲಾರದಂತಹ ಕ್ವಾರಂಟೈನ್ ದಿನ, ಮುಟ್ಟಿದ  ಪ್ರತಿ ತಪ್ಪಿಗೂ ಪದೇ ಪದೇ ಸ್ಯಾನಿಟೈಜರ್ ಉಪಯೋಗಿಸಿ ಮತ್ತೆ ಮತ್ತೆ ಕೈ ತೊಳೆವ ಕ್ವಾರಂಟೈನ್ ದಿನ ಮುಗಿಯದ ಮಕ್ಕಳ ಕಲರವ ಮುಳುಗಿದೆ ಮನೆಯು ಇವರ ಆಫೀಸಿನ ತರಹ ಅಡುಗೆ ಮನೆಗೆ ಬಿಡುವಿಲ್ಲವಂತೆ ಇದು ಕ್ವಾರಂಟೈನ್ ದಿನ, ಇದ್ದ ಅಲ್ಪ ಸ್ವಲ್ಪ ನನ್ನ ಗಳಿಗೆಗಳು ಇಲ್ಲವಾದ ದಿನ ಮಳೆಹನಿಗೆ ಕೈಒಡ್ಡದ ಹಸಿರ ಹವೆಗೆ ಮೈತಾಗದ ಇದು ಕ್ವಾರಂಟೈನ್ ದಿನ… ಆದರೂ ನನ್ನ ನಾ ಅರಿವ ನನ್ನವರೆಲ್ಲ ಹಗಲಿರುಳು ಒಂದಾಗಿ , ಒಂದೇ ಸೂರಿನಡಿಯಲಿ ನಕ್ಕು ನಲಿದು, ತುತ್ತು ಉಣಿಸಿ ಮೆರೆಯುತಿರುವ ಅಭಿಮಾನದ ಕ್ವಾರಂಟೈನ್ ದಿನ…

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ನಕ್ಷತ್ರ ಸೂಕ್ತ  ಡಾಕ್ಟರ್ ಅನಸೂಯಾದೇವಿ  ನಕ್ಷತ್ರ ಸೂಕ್ತ  ಲೇಖಕಿ ಡಾಕ್ಟರ್ ಅನಸೂಯಾದೇವಿ  ಪ್ರಕಾಶಕರು ಶ್ರೀ ಅನ್ನಪೂರ್ಣ ಪ್ರಕಾಶನ ಅಗ್ರಹಾರ ದಾಸರಹಳ್ಳಿ ಬೆಂಗಳೂರು ೫೦೦೦೭೯  ಮೊದಲ ಮುದ್ರಣ ೨೦೧೪ ಬೆಲೆ ರೂ.೧೫೦/ ಮೂರು ಪ್ರಬುದ್ಧ ಮುಖ್ಯಪಾತ್ರಗಳ ಸುತ್ತ ತಿರುಗುವ ಕಥೆ .ಅಡಿ ಟಿಪ್ಪಣಿ ಹೇಳುತ್ತದೆ “ನನಗೊಂದು ಮಗು ಬೇಕು” ನಾಯಕಿ ಮಾರ್ದವಿ ಸಂಗೀತಗಾರಳು ವಿದ್ಯಾವಂತೆ ಹಾಗೂ ಸೌಮ್ಯ ಸ್ವಭಾವದ ರೂಪಸಿ .ಅವಳ ಪ್ರತಿ ಮಧುಕರ ಕಾಲೇಜು ಉಪನ್ಯಾಸಕನಾಗಿದ್ದವನು  ಹಾಗೂ ದೇವಾಲಯದ ಅರ್ಚಕ ಸಂಸ್ಕೃತ ವಿದ್ವಾಂಸ ಹಾಗೂ ಪಿ.ಎಚ್.ಡಿ. ಬರೆಯುತ್ತಿರುವ ಭಾಸ್ಕರ ಸೋಮಯಾಜಿ. ಅವರ ಕಥೆಗೆ ಹಿರಿಯರ ಕಾಲದ ಶಾಪದ ವೃತ್ತಾಂತ ಆಸ್ತಿಗಾಗಿ ಅಣ್ಣತಮ್ಮಂದಿರ ದ್ವೇಷ ಕಲಹಗಳ ಹಿನ್ನೆಲೆ ತೆಗೆದುಕೊಂಡು ವಿವರಿಸುತ್ತಾ ಹೋಗುವ ಕಥೆಯ ಎಳೆ. ಇತ್ತೀಚಿನ ದಿನಗಳಲ್ಲಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದ ಕಾದಂಬರಿ ಇದು.  ಬಾಲವಿಧವೆ ರಾಧಜ್ಜಿಯ ಹಕ್ಕಿಗಳೊಡನಿನ ಸಂಭಾಷಣೆ, ಅಣ್ಣನ ಮೋಸಕ್ಕೆ ಬಲಿಯಾದ ಶಾಂತಾರಾಮಜ್ಜ, ಅನ್ಯಾಯಕ್ಕೆ ಈಡಾಗಿ ವಿಷ ಕುಡಿದು ವಂಶಕ್ಕೆ ಶಾಪ ಕೊಟ್ಟ ಶಾಂತಾರಾಮನ ಪತ್ನಿ ಜಯಲಕ್ಷ್ಮಿ ಈ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಪ್ರತಿಯೊಂದು ಮನೆತನದಲ್ಲಿ ಹುಡುಕಿದರೆ ಇಂತಹ ಕಥೆಗಳು ಸಿಗಬಹುದೇನೋ. ಆದರೆ ತಮ್ಮ ಪಾಪದ ಫಲ ಇಂದಿನ ತಮ್ಮ ಅವಸ್ಥೆ ಎಂದರಿಯುವವರು ಮಾತ್ರ ಇರುವುದಿಲ್ಲ.   ಪೂರ್ಣ ಕಥೆಯನ್ನು ವಿವರಿಸಿ ನಿಮ್ಮ ಕುತೂಹಲಕ್ಕೆ ಭಂಗ ತರುವುದಿಲ್ಲ ನಾನು.  ಓದಿಯೇ ತೀರಬೇಕು ಅದರ ಆಸ್ವಾದ ಅರಿಯಲು. ಮುನ್ನುಡಿಯಲ್ಲಿ ಡಾಕ್ಟರ್ ಟಿ ಎ ಬಾಲಕೃಷ್ಣ ಅಡಿಗರು ಹೇಳಿರುವಂತೆ ” ಭಾವ ಬೆಳಕು ಭಾವಲೋಕ, ಭಾವವಲಯ, ಭಾವಸಂಗಾತಿ ಭಾವ ತೇವತೆ ಭಾವ ಜಟಿಲತೆ ಈ ಎಲ್ಲಾ ಪದಗಳನ್ನು ಲೇಖಕಿಯು ಬಳಸುವಲ್ಲಿ ಅವರು ಸೃಷ್ಟಿಸಿರುವ ಭಾವಜಗತ್ತನ್ನು ಅರ್ಥೈಸಿಕೊಳ್ಳುವಲ್ಲಿ ಈ ಕಾದಂಬರಿಯ ಓದುಗನಿಗೂ ಕೂಡ ವಿಶೇಷ ಭಾವ ಸಂಸ್ಕಾರವಿದ್ದರೆ ಒಳಿತು “. ನಿಜ ತಮ್ಮ  ಭಾವ ತೀವ್ರತೆ ಇರುವ ಬರವಣಿಗೆಯಿಂದ ಲೇಖಕಿ ನೇರ ಓದುಗನ ಹೃದಯದಾಳಕ್ಕೆ ಲಗ್ಗೆಯಿಡುತ್ತಾರೆ . ಬಳಸಿರುವ ಭಾಷೆಯ ಮೇಲಿನ ಹಿಡಿತ ಜೊತೆಯಾಗಿರುವ ಸಂಗೀತ ಸಾಹಿತ್ಯ ಉದ್ದರಣೆಗಳು ಕಥೆಯ ಓಘಕ್ಕೆ ಇಂಬು ಕೊಡುತ್ತ ಹೋಗುತ್ತದೆ. ಪ್ರಾಚೀನ ಹಾಗೂ ಅರ್ವಾಚೀನ ಸಂಗತಿಗಳ ನಡುವಣ ಸಾಮರಸ್ಯ ,ಉದಾಹರಣೆಗೆ ನಿಯೋಗ ಪದ್ಧತಿ ಮತ್ತ ಐವಿಎಫ್, ವೇದ ಕಾಲದ ಸೂಕ್ತಗಳು ಹಾಗೂ ಮೊಹೆಂಜದಾರೋ ಮುದ್ರೆಗಳ ನಡುವಣ ಸಾಮ್ಯತೆ ಹಾಗೂ ಅಧ್ಯಯನ ಎಲ್ಲವೂ ಕಥೆಗೆ ಪೂರಕವಾಗುತ್ತಾ ಸಾಗುತ್ತದೆ . ಲೇಖಕಿ ಸ್ವತಃ ಗಾಯಕಿಯೂ ಹೌದು. ಆದ್ದರಿಂದ ನಾಯಕಿಯ ಗಾಯನ ಆಗಿನ ಅವಳ ಮನಃಸ್ಥಿತಿಗಳನ್ನು ಕಣ್ಣಿಗೆ ಕಟ್ಟುವಂತೆ ಮನಕ್ಕೆ ನಾಟುವಂತೆ ಚಿತ್ರಿಸಿದ್ದಾರೆ.  ಹೆಣ್ಣಿನ ಜನ್ಮದ ಸಾಫಲ್ಯ ತಾಯ್ತನ .ಪ್ರತಿ ಹೆಣ್ಮನವೂ “ನನಗೊಂದು ಮಗು ಬೇಕು” ಎಂದು ಹಂಬಲಿಸುತ್ತಲೇ ಇರುತ್ತದೆ.  ಆ ತುಡಿತ ಮಿಡಿತದ ಹಪಾಹಪಿ ಹಾಗೂ ಅದನ್ನು ಪೂರೈಸಿಕೊಳ್ಳುವ ವಿಧಾನ ಇದು ಕಥಾವಸ್ತು. ಆದರೆ ಅದನ್ನು ಹಿಡಿದಿಟ್ಟಿರುವ ಲೇಖಕಿಯ ಅನನ್ಯತೆಗೆ ಶರಣು ಅನ್ನಲೇಬೇಕು. ಚರ್ವಿತ ಚರ್ವಣವಾಗದೆ ಹೀಗೆ ಆಗಬಹುದು ಎಂದು ಊಹಿಸಲಾಗದ, ಹೀಗೂ ಆಗಬಹುದು ಎಂದು ನಿರೂಪಿಸಿರುವ ಶೈಲಿ ತುಂಬಾ ಮನಕ್ಕೆ ಮುಟ್ಟಿತು ಆಪ್ಯಾಯವಾಯಿತು ಆಪ್ತವಾಯಿತು . ಕಾದಂಬರಿಯ ಈ ಸಾಲುಗಳು  ಸ್ತ್ರೀ ಸಮಾನತೆ ಸ್ವಾತಂತ್ರ್ಯ  ಪರವಾದವರಿಗೆ ಸಮಾಧಾನವನ್ನೂ ನೀಡಬಹುದು.  “ಬೀಜವೊಂದನ್ನೇ ವಂಶ ಮೂಲವೆಂದು ಗುರುತಿಸುವುದೇಕೆ?  ಕ್ಷೇತ್ರವನ್ನೇಕೆ ವಂಶ ಪಾರಂಪರಿಕೆಯಾಗಿ ಪರಿಗಣಿಸಬಾರದು? ಕ್ಷೇತ್ರವಿಲ್ಲದೆ ಬೀಜವೊಂದರಿಂದಲೇ ವಂಶ ಬೆಳೆಯುತ್ತದೆಯೇ ?” ಮಾರ್ದವಿ ಬೆಟ್ಟಕ್ಕೆ ತೆರಳುವ ಸಂದರ್ಭದಲ್ಲಿ ಕೋತಿಗಳು ಎದುರಾಗುವ ಸಂದರ್ಭವನ್ನು ತುಂಬಾ ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.  ಹಾಗೆಯೇ ಮಾರ್ದವಿಗೆ ಬೀಳುವ ಕನಸಿನ ವಿವರವೂ ಸಹ . ಮಧ್ಯೆ ಬರುವ ಭಾವ ಗೀತೆಗಳ ಸಾಲುಗಳು ರಾಗಗಳ ವರ್ಣನೆ ಅಬ್ಬಾ ಒಂದು ಸಂಪೂರ್ಣ ಭಾವಮಯ ಭಾವುಕ ಜೀವಿಗಳ ಭಾವ ಬಣ್ಣನೆ! . ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ಸಂಬಂಧಗಳು,ಹೆಚ್ಚುತ್ತಿರುವ ವಿಷಮ ಸಂಸಾರಗಳು ವಿವಾಹೇತರ ಸಂಬಂಧಗಳ ಮಧ್ಯದಲ್ಲಿ ಇಂತಹ ಕಾದಂಬರಿಗಳು ಹೆಚ್ಚು ಮೌಲಿಕವಾಗುತ್ತದೆ. ಸಮಾಜಕ್ಕೆ ಮಹತ್ವದ ಸಂದೇಶವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ ಸಫಲವೂ ಆಗುತ್ತವೆ . ********* ಸುಜಾತಾ ರವೀಶ್

ನಾನು ಓದಿದ ಪುಸ್ತಕ Read Post »

ಕಾವ್ಯಯಾನ

ಕಾವ್ಯಯಾನ

ಮುಗಿಯದ ಹಾಡು ಎನ್.ಶೈಲಜಾ ಹಾಸನ ಇಡುವ ಹೆಜ್ಜೆ ಜೊತೆ ಜೊತೆಹೆಜ್ಜೆ ಕೂಡಿದ ಪಲುಕುಪರಿ ಪರಿಯ ಕುಲುಕುನಾನೆಂತು ಬಣ್ಣಿಸಲಿನೀ ಒಲಿದೆ,ನನ್ನ ಒಲಿಸಿದೆಬೆಸೆದಿದೆ ಬಂಧನಮನವೀಗ ಹೂ ನಂದನ  ಒಲವ ಬಂಧನದಿ ಸುಖವಿದೆಸಿರಿಯಿದೆ,ಮಧುವಿದೆ,ಸವಿಯಿದೆನಡೆದ ಹಾದಿಯಲ್ಲಿಬಣ್ಣಗಳ ಚೆಲುವಿದೆ ಮೌನದ ಹಾಡಲಿನೂರು ಕವಿತೆಕಣ್ಣ ಬೆಳಕಲಿ ಪ್ರೇಮದಣತೆನೋಟದಂಚಿನಲಿಕೋರೈಸುವ ಮಿಂಚುನೋಟದಾಳದಲಿ ನಲ್ಮೆಯ ಜಲಪಾತತುಂಟ ನಗೆಯಲಿಸಾವಿರ ಪುಳಕ ಕನಸುಗಳ ಸಾಕಾರಎದೆಯ ಗೂಡಲಿನಿನ್ನೊಲುಮೆಯಹುಚ್ಚು ನದಿಯಲಿಕೊಚ್ಚಿ ಹೋದವಳುತೇಲಿ ತೇಲಿ ತೇಲುತಲಿಇರುವ ಹುಚ್ಚು ಖೋಡಿಮನಸ್ಸು ನನ್ನದು ಮುಟ್ಟಲಾಗದು,ತಟ್ಟಲಾಗದುಮೆಟ್ಟಲಾಗದುಮುಪ್ಪಾನು ಮುಪ್ಪಿಗೆಒಲುಮೆಯ ಮನಸಿಗೆಗೆಲುವಿನ ಸೊಗಸು ದಾಂಪತ್ಯ ಗೀತೆಗೆಅನುರಾಗದ ಪಲ್ಲವಿಶೃಂಗಾರದ   ಅನುಪಲ್ಲವಿಮುಗಿಯದ ಹಾಡು ಇದು *******

ಕಾವ್ಯಯಾನ Read Post »

You cannot copy content of this page

Scroll to Top